Kannada Compulsory: ಶಾಲೆಗಳಲ್ಲಿ ಕನ್ನಡ ಕಡ್ಡಾಯ: ಮುಂದಿನ ವರ್ಷದಿಂದ ಹೊಸ ನಿಯಮ - Vistara News

ಪ್ರಮುಖ ಸುದ್ದಿ

Kannada Compulsory: ಶಾಲೆಗಳಲ್ಲಿ ಕನ್ನಡ ಕಡ್ಡಾಯ: ಮುಂದಿನ ವರ್ಷದಿಂದ ಹೊಸ ನಿಯಮ

Kannada Compulsory: ಮುಂದಿನ ಶೈಕ್ಷಣಿಕ ವರ್ಷದಿಂದ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿಸುವುದನ್ನು ಕಡ್ಡಾಯಗೊಳಿಸಿರುವ ಐಸಿಎಸ್ಇ ಮಂಡಳಿ, ಇದರ ಜತೆಯಲ್ಲಿ ಪ್ರತಿಯೊಂದು ಶಾಲೆಯು ಮುಂಬರುವ ವರ್ಷದಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (ಎನ್ಒಸಿ) ಪಡೆಯಬೇಕು ಎಂಬ ನಿಯಮವನ್ನು ಜಾರಿಗೊಳಿಸಿದೆ.

VISTARANEWS.COM


on

kannada compulsory
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮುಂದಿನ ವರ್ಷದಿಂದ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (Central Board of Secondary Education) ಅಥವಾ ಐಸಿಎಸ್ಇ (ICSE) ಅಡಿಯಲ್ಲಿ ಪ್ರಾರಂಭವಾಗುವ ಎಲ್ಲಾ ಶಾಲೆಗಳಿಗೆ ಕನ್ನಡ ಕಲಿಕೆಯ ಕಡ್ಡಾಯ (Kannada Compulsory) ಹೊಸ ನಿಯಮ (New rule) ಅನ್ವಯವಾಗಲಿದೆ. ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಹೊಸ ಶಾಲೆಗಳ (new school) ಸ್ಥಾಪನೆಗೆ ಅನುಮೋದನೆ ಕೋರಿರುವ ಎಲ್ಲಾ ಅರ್ಜಿಗಳಿಗೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಅನುಮೋದನೆ ನೀಡಿದ್ದು, ಈ ಶಾಲೆಗಳಲ್ಲಿಯೂ ಸಹ ಹೊಸ ನಿಯಮ ಜಾರಿಯಾಗಲಿದೆ.

ಮುಂದಿನ ಶೈಕ್ಷಣಿಕ ವರ್ಷದಿಂದ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿಸುವುದನ್ನು ಕಡ್ಡಾಯಗೊಳಿಸಿರುವ ಐಸಿಎಸ್ಇ ಮಂಡಳಿ, ಇದರ ಜತೆಯಲ್ಲಿ ಪ್ರತಿಯೊಂದು ಶಾಲೆಯು ಮುಂಬರುವ ವರ್ಷದಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (ಎನ್ಒಸಿ) ಪಡೆಯಬೇಕು ಎಂಬ ನಿಯಮವನ್ನು ಜಾರಿಗೊಳಿಸಿದೆ.

ಶಿಕ್ಷಣ ಇಲಾಖೆಯಲ್ಲಿ 2024-25ರ ಶೈಕ್ಷಣಿಕ ವರ್ಷದಲ್ಲಿ 164 ಹೊಸ ಶಾಲೆಗಳನ್ನು ಸ್ಥಾಪಿಸಲು ಅನುಮೋದನೆ ದೊರೆತಿದೆ. ಅದರಲ್ಲಿ ಸುಮಾರು 50 ಶಾಲೆಗಳು ಬೇರೆ ಮಂಡಳಿಗಳಿಗೆ ಸೇರಿದ್ದಾಗಿವೆ. ಇವುಗಳಿಗೆ ಅನುಮೋದನೆ ನೀಡಿದ್ದು, ಇವು ಮುಂದಿನ ವರ್ಷದಿಂದ ಆರಂಭವಾಗಲಿವೆ. ಈ ಹಿಂದೆ ಅಂದರೆ 2015ರಲ್ಲಿ ಶಾಲೆಗಳಲ್ಲಿ ಕನ್ನಡ ಕಡ್ಡಾಯವಾಗಿ ಕಲಿಸುವ ಕಾನೂನನ್ನು ಪೋಷಕರು ನ್ಯಾ ಯಾಲಯದಲ್ಲಿ ಪ್ರಶ್ನಿಸಿದ್ದರು. ಹಾಗೆಯೇ ಎನ್ಒಸಿ ನೀಡುವುದಕ್ಕೆ ಸರ್ಕಾರ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಾಗಿತ್ತು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಅಂಶವೂ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

2023ರಲ್ಲಿ ಸುಮಾರು 25ಕ್ಕೂ ಹೆಚ್ಚು ಪೋಷಕರು ನ್ಯಾಯಾಲಯಕ್ಕೆ ಮೊರೆಹೋಗಿದ್ದು, ಕಾನೂನು ಪಾಲನೆಯಿಂದ ತಮ್ಮ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಮನವಿ ಮಾಡಿದ್ದರು. ಹೀಗಾಗಿ ರಾಜ್ಯ ಸರ್ಕಾರ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸುವುದಕ್ಕೆ ಎನ್ಒಸಿ ನೀಡುವ ಸಂದರ್ಭದಲ್ಲಿ ಸರ್ಕಾರ ಮಾನದಂಡವನ್ನಾಗಿ ಮಾಡಿದೆ. ಈ ಸಂಬಂಧ ನಿಯಮಗಳಿಗೆ ಸೂಕ್ತ ರೀತಿಯಲ್ಲಿ ತಿದ್ದುಪಡಿ ತರಲಾಗಿದ್ದು, ಈ ಸಂಬಂಧ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಎನ್ಒಸಿ ಕಡ್ಡಾಯ

ಹೊಸ ನಿಯಮದ ಪ್ರಕಾರ ಶಾಲಾ ಆಡಳಿತ ಮಂಡಳಿಯು ಹೊಸ ಶಾಲೆಯನ್ನು ಸ್ಥಾಪಿಸುವಾಗ ಎನ್ಒಸಿ ಕಡ್ಡಾಯವಾಗಿ ಪಡೆಯಲೇ ಬೇಕು ಎಂದು ನಿಯಮಗಳನ್ನು ಮಾರ್ಪಾಡು ಮಾಡಲಾಗಿತ್ತು. ಮುಂದಿನ ವರ್ಷದಿಂದ ಶಾಲೆಗಳ ಆಡಳಿತ ಮಂಡಳಿಯು ಎನ್ಒಸಿ ಅರ್ಜಿ ನಮೂನೆಯಲ್ಲಿ ಕನ್ನಡ ಶಿಕ್ಷಣಕ್ಕೆ ಆದ್ಯತೆ ನೀಡುತ್ತೇವೆ ಎನ್ನುವುದನ್ನು ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಸಬೇಕು, ಇಲ್ಲದಿದ್ದರೆ ಅರ್ಜಿಯನ್ನು ತಿರಸ್ಕರಿಸಲಾಗುವುದು ಎಂದು ತಿಳಿಸಿತ್ತು. ಒಂದು ವೇಳೆ ಅರ್ಜಿಯಲ್ಲಿ ಶಾಲೆಯು ಕನ್ನಡವನ್ನು ಕಲಿಸುವ ಉದ್ದೇಶದ ಬಗ್ಗೆ ಸುಳ್ಳು ಹೇಳಿಕೆಗಳನ್ನು ನಮೂದಿಸಿದರೆ ಅವರ ಅರ್ಜಿಯನ್ನು ತಿರಸ್ಕರಿಸಲಾಗುವುದು ಎಂದು ತಿಳಿಸಿತ್ತು.

ಕರ್ನಾಟಕ ರಾಜ್ಯ ಶಿಕ್ಷಣ ಮಂಡಳಿಯಲ್ಲಿ ನೋಂದಣಿಯಾಗಿರುವ ಶಾಲೆಗಳಿಗೆ ಹೊಸ ನಿಯಮದಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪ್ರಾಥಮಿಕ ಮತ್ತು ಫ್ರೌಢ ಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ ಹೇಳಿಕೆ ನೀಡಿದೆ. ಆದರೆ ಇತರ ಮಂಡಳಿಗಳೊಂದಿಗೆ ನೋಂದಣಿಯಾಗಿರುವ ಶಾಲೆಗಳಿಗೆ ಇದು ಒಂದು ಸವಾಲಾಗಿದೆ. ಈ ಮಂಡಳಿಯ ಅಧಿಕಾರಿಗಳು ಸಮಸ್ಯೆಯನ್ನು ಅರಿತು ಶಿಕ್ಷಣ ಇಲಾಖೆಯೊಂದಿಗೆ ಚರ್ಚಿಸಿ ಮಂದಿನ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದೆ.

ಇದನ್ನೂ ಓದಿ: Cabinet Meeting: ನಾಮಫಲಕಗಳಲ್ಲಿ ಶೇ.60 ಕನ್ನಡ ಕಡ್ಡಾಯಕ್ಕೆ ಸಚಿವ ಸಂಪುಟ ಒಪ್ಪಿಗೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Karnataka Assembly Live: ಸದನದಲ್ಲಿ ಇಂದು ಕಿಡಿಯೆಬ್ಬಿಸಲಿರುವ ವಾಲ್ಮೀಕಿ ಹಗರಣ; ಉತ್ತರ ನೀಡಲು ಸಿಎಂ ಸಜ್ಜು; ಇಲ್ಲಿದೆ ಕ್ಷಣಕ್ಷಣದ ಲೈವ್‌

Karnataka Assembly Live: ಇಂದು ಸಹ ಬಿಜೆಪಿ ಹಾಗೂ ಜೆಡಿಎಸ್ ಶಾಸಕರಿಂದ ಈ ಚರ್ಚೆ ಮುಂದುವರಿಯಲಿದೆ. ಬಿಜೆಪಿಯ ಸಿಟಿ ರವಿ, ಸುನೀಲ್‌ ಕುಮಾರ್‌, ಯತ್ನಾಳ್ ಮುಂತಾದವರು ಈ ಚರ್ಚೆಯನ್ನು ಮುನ್ನಡೆಸಲಿದ್ದಾರೆ. ಬಳಿಕ ಸಿಎಂ ಸಿದ್ದರಾಮಯ್ಯ ಅವರು ಉತ್ತರ ನೀಡುವ ನಿರೀಕ್ಷೆ ಇದೆ. ನಿನ್ನೆ ಆಶೋಕ್ ಮಾತನಾಡುವಾಗಲೇ ಈ ಬಗ್ಗೆ ಸಿದ್ದರಾಮಯ್ಯ ಸುಳಿವು ನೀಡಿದ್ದರು.

VISTARANEWS.COM


on

karnataka assembly live
Koo

ಬೆಂಗಳೂರು: ವಿಧಾನ ಮಂಡಲ ಮಳೆಗಾಲದ ಅಧಿವೇಶನ (Karnataka Assembly Live, Karnataka Assembly monsoon session) ಇಂದು ಇನ್ನಷ್ಟು ರಂಗೇರಲಿದೆ. ವಾಲ್ಮೀಕಿ ನಿಗಮದ ಅವ್ಯವಹಾರ (Valmiki corporation Scam) ಪ್ರಕರಣದ ಕುರಿತು ನಿನ್ನೆ ವಿಧಾನಸಭೆ ಕಲಾಪದಲ್ಲಿ ಸುದೀರ್ಘ ಚರ್ಚೆ ನಡೆದಿದ್ದು, ವಿಪಕ್ಷ ನಾಯಕ ಆರ್. ಆಶೋಕ್ (R Ashok) ಅವರು ಈ ಚರ್ಚೆಯನ್ನು ಮುನ್ನಡೆಸಿದ್ದರು. ಇಂದು ಅದು ಮುಂದುವರಿಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಕೂಡ ಇದಕ್ಕೆ ಉತ್ತರ ನೀಡಲಿದ್ದಾರೆ.

ನಿನ್ನೆ ಮಾತನಾಡಿದ ಆರ್.‌ ಅಶೋಕ್‌, ಸರ್ಕಾರದ ತಪ್ಪು ನಡೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದರು. ಹೈಕಮಾಂಡ್‌ಗೆ ಕಪ್ಪಕಾಣಿಕೆ ಸಲ್ಲಿಸಲು ನಿಗಮದ ಹಣವನ್ನು ದುರುಪಯೋಗ ಮಾಡಲಾಗಿದೆ ಎಂದಿದ್ದ ಅಶೋಕ್‌, 187 ಕೋಟಿ ರೂಪಾಯಿ ಅವ್ಯವಹಾರದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದರು. ಈ ಹಣ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಹೇಗೆ ವಿನಿಯೋಗವಾಗಬೇಕಿತ್ತು, ಹೇಗೆ ಅಕ್ರಮವಾಗಿದೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದರು. ಆ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.

ಇಂದು ಸಹ ಬಿಜೆಪಿ ಹಾಗೂ ಜೆಡಿಎಸ್ ಶಾಸಕರಿಂದ ಈ ಚರ್ಚೆ ಮುಂದುವರಿಯಲಿದೆ. ಬಿಜೆಪಿಯ ಸಿಟಿ ರವಿ, ಸುನೀಲ್‌ ಕುಮಾರ್‌, ಯತ್ನಾಳ್ ಮುಂತಾದವರು ಈ ಚರ್ಚೆಯನ್ನು ಮುನ್ನಡೆಸಲಿದ್ದಾರೆ. ಬಳಿಕ ಸಿಎಂ ಸಿದ್ದರಾಮಯ್ಯ ಅವರು ಉತ್ತರ ನೀಡುವ ನಿರೀಕ್ಷೆ ಇದೆ. ನಿನ್ನೆ ಆಶೋಕ್ ಮಾತನಾಡುವಾಗಲೇ ಈ ಬಗ್ಗೆ ಸಿದ್ದರಾಮಯ್ಯ ಸುಳಿವು ನೀಡಿದ್ದರು. ʼನಿಮ್ಮ ವಾದವನ್ನ ಸಮಾಧಾನವಾಗಿ ಕೇಳ್ತೀನಿ. ನಾನು ಉತ್ತರ ಕೊಡುವಾಗಲೂ ಅಷ್ಟೇ ಸಮಾಧಾನದಿಂದ ಕೇಳಬೇಕುʼ ಎಂದಿದ್ದರು.

ʼ187 ಕೋಟಿ ಅಲ್ಲ ಅದು ಬರೀ 87 ಕೋಟಿ ಮಾತ್ರ ವರ್ಗಾವಣೆ ಆಗಿರುವುದು. ಹಣ ಎಲ್ಲಿಯವರೆಗೂ ಸರ್ಕಾರದ ಸುಪರ್ದಿಯಲ್ಲಿರುತ್ತೆ, ಬಳಿಕ ಆ ಹಣ ಯಾರಿಗೆ ಹೋಗುತ್ತೆ ಈ ಬಗ್ಗೆ ಸಂಪೂರ್ಣ ಮಾಹಿತಿ ಕೊಡ್ತೀನಿ. ಇದರಲ್ಲಿ ಯಾರ ಪಾತ್ರ ಎಷ್ಟಿದೆ. ಈ ಹಿಂದೆ ಹೇಗೆ ವ್ಯವಹಾರ ನಡೆದಿದೆ ಅದೆಲ್ಲವನ್ನ ಸಂಪೂರ್ಣವಾಗಿ ಕೊಡ್ತೀನಿʼ ಎಂದು ಹೇಳಿದ್ದರು. ಎಂದರೆ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಪ್ರಕರಣಗಳನ್ನೂ ಸಿಎಂ ಪ್ರಸ್ತಾವಿಸುವುದು ಖಚಿತವಾಗಿದೆ.

ಇದರಿಂದ ಸದನದಲ್ಲಿ ಇಂದು ಏಟು ಎದಿರೇಟು ಖಚಿತವಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಆಡಳಿತ ಪಕ್ಷ ಸದದ್ಯರು ಸಾಥ್‌ ನೀಡಲಿದ್ದು, ವಿಪಕ್ಷ ಶಾಸಕರು ಕೆರಳಿ ಪ್ರತಿಭಟನೆ ನಡೆಸುವುದೂ ಬಹುತೇಕ ಖಚಿತವಾಗಿದೆ. ಸ್ಪೀಕರ್‌ ಯು.ಟಿ ಖಾದರ್‌ ಅವರು ಶಾಂತಚಿತ್ತರಾಗಿಯೇ ಸದನದ ಕಲಾಪವನ್ನು ನಿರ್ವಹಿಸುತ್ತಿದ್ದರೂ, ಹಲವು ಬಾರಿ ಶಾಸಕರ ವರ್ತನೆ ಅವರಿಗೂ ಸವಾಲಾಗುತ್ತಿದೆ.

ನಿನ್ನೆ ಅಧಿವೇಶನ ಆರಂಭಕ್ಕೂ ಮುನ್ನ ವಿಧಾನಸೌಧದ ನೂತನ ದ್ವಾರವನ್ನು ಸಿಎಂ ಉದ್ಘಾಟಿಸಿದ್ದರು. ವಿಧಾನಸಭೆಯ ಸಭಾಂಗಣವನ್ನು ಇನ್ನಷ್ಟು ಸುಂದರವಾಗಿ ವಿನ್ಯಾಸಗೊಳಿಸಲಾಗಿದ್ದು, ಇದಕ್ಕೆ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಲಾಪ ಆರಂಭದಲ್ಲಿ ಸಂವಿಧಾನದ ಪೀಠಿಕೆಯನ್ನು ಓದಲಾಯಿತು. ನಂತರ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಮಂಡಿಸಲಾಯಿತು.

ಇದನ್ನೂ ಓದಿ: Assembly Session: ಅಧಿವೇಶನದಲ್ಲಿ ಹಗರಣಗಳ ಸದ್ದು; ಮೊದಲ ದಿನವೇ ಮುಗಿಬಿದ್ದ ವಿಪಕ್ಷ ನಾಯಕರು, ಹೆದರಲ್ಲ ಎಂದ ಸಿಎಂ!

Continue Reading

ಕರ್ನಾಟಕ

Kannada In Madrasa: ರಾಜ್ಯದ ಮದರಸಾಗಳಲ್ಲಿ ಇನ್ನು ಕನ್ನಡ ಕಲಿಕೆ ಕಡ್ಡಾಯ; ಶೀಘ್ರವೇ ಆದೇಶ!

Kannada In Madrasa: ವಾರದಲ್ಲಿ ಕನಿಷ್ಠ 2-3 ಗಂಟೆ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿಯೇ ಬೋಧನೆ ಮಾಡಬೇಕು. ಆ ಮೂಲಕ ಮಕ್ಕಳು ಕನ್ನಡ ಕಲಿಯುವಂತಾಗಬೇಕು ಎಂಬ ದೃಷ್ಟಿಯಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಯೋಜನೆ ರೂಪಿಸಿದೆ. ಹಾಗೊಂದು ವೇಳೆ, ಪ್ರಾಧಿಕಾರವು ಆದೇಶ ಹೊರಡಿಸಿದರೆ, ಮುಸ್ಲಿಂ ಮಕ್ಕಳು ಮದರಸಾಗಳಲ್ಲಿ ಕನ್ನಡ ಕಲಿಯಲಿದ್ದಾರೆ.

VISTARANEWS.COM


on

Kannada In Madrasa
Koo

ಬೆಂಗಳೂರು: ಕರ್ನಾಟಕದ ಮದರಸಾಗಳಲ್ಲಿ ಉರ್ದುವಿನಲ್ಲೇ ಬೋಧನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಕನ್ನಡ ಕಲಿಕೆಗೂ (Kannada In Madrasa) ರಾಜ್ಯ ಸರ್ಕಾರವು (Karnataka Government) ಪ್ರಾಮುಖ್ಯತೆ ನೀಡಲು ಮುಂದಾಗಿದೆ. ಇನ್ನುಮುಂದೆ ರಾಜ್ಯದ ಮದರಸಾಗಳಲ್ಲಿ (Madrasas In Karnataka) ಕಡ್ಡಾಯವಾಗಿ ಕನ್ನಡದಲ್ಲೇ ಬೋಧನೆ ಮಾಡಬೇಕು ಎಂಬ ದಿಸೆಯಲ್ಲಿ ಆದೇಶ ಹೊರಡಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಹೊಸ ಯೋಜನೆ ರೂಪಿಸಿದೆ. ಈ ಕುರಿತಂತೆ ಕನ್ನಡ ಕಡ್ಡಾಯಗೊಳಿಸಿ ಶೀಘ್ರದಲ್ಲೇ ಆದೇಶ ಹೊರಡಿಸಲಾಗುತ್ತದೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಸಾವಿರಾರು ಮದರಸಾಗಳಿದ್ದು, ಮುಸ್ಲಿಂ ವಿದ್ಯಾರ್ಥಿಗಳಿಗೆ ಬೋಧಕರು ಕನ್ನಡದಲ್ಲಿ ಪಾಠ ಮಾಡಲು, ಕನ್ನಡ ಕಲಿಸಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕಾಗಿಯೇ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಹೊಸ ಯೋಜನೆ ರೂಪಿಸಿದೆ. ಕನ್ನಡದಲ್ಲೇ ಪಾಠ ಮಾಡಬೇಕು. ವಾರದಲ್ಲಿ ಕನಿಷ್ಠ 2-3 ಗಂಟೆ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿಯೇ ಬೋಧನೆ ಮಾಡಬೇಕು. ಆ ಮೂಲಕ ಮಕ್ಕಳು ಕನ್ನಡ ಕಲಿಯುವಂತಾಗಬೇಕು ಎಂಬ ದೃಷ್ಟಿಯಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಯೋಜನೆ ರೂಪಿಸಿದೆ. ಹಾಗೊಂದು ವೇಳೆ, ಪ್ರಾಧಿಕಾರವು ಆದೇಶ ಹೊರಡಿಸಿದರೆ, ಮುಸ್ಲಿಂ ಮಕ್ಕಳು ಮದರಸಾಗಳಲ್ಲಿ ಕನ್ನಡ ಕಲಿಯಲಿದ್ದಾರೆ.

ಮದರಸಾಗಳಲ್ಲಿ ರಾಮನ ಕುರಿತು ಅಧ್ಯಯನ

ಉತ್ತರಾಖಂಡದ ಮದರಸಾಗಳಲ್ಲೂ ಶ್ರೀರಾಮನ ಕುರಿತು ಅಧ್ಯಯನ ನಡೆಯಬೇಕು ಎಂದು ಹೊಸ ಪಠ್ಯವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಆ ಮೂಲಕ ಇನ್ನು ಮುಸ್ಲಿಂ ವಿದ್ಯಾರ್ಥಿಗಳು ಕೂಡ ರಾಮನ ಕುರಿತು ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಇದು ಧಾರ್ಮಿಕ ಸೌಹಾರ್ದತೆಯ ಸಂಕೇತವೂ ಆಗಿದೆ ಎನ್ನಲಾಗುತ್ತಿದೆ.

ಹೌದು, ಈ ಕುರಿತು ಉತ್ತರಾಖಂಡ ವಕ್ಫ್‌ ಬೋರ್ಡ್‌ ಚೇರ್ಮನ್‌ ಆಗಿರುವ ಶಾದಾಬ್‌ ಶಾಮ್ಸ್‌ ಅವರೇ ಕೆಲ ತಿಂಗಳ ಹಿಂದೆ ಮಾಹಿತಿ ನೀಡಿದ್ದರು. “ಮದರಸಾ ಆಧುನೀಕರಣ ಯೋಜನೆಯ ಭಾಗವಾಗಿ ಇನ್ನು ಮುಂದೆ ಉತ್ತರಾಖಂಡದ ಮದರಸಾಗಳಲ್ಲೂ ಶ್ರೀರಾಮನ ಕುರಿತ ಪಠ್ಯಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಮುಸ್ಲಿಂ ವಿದ್ಯಾರ್ಥಿಗಳು ಪ್ರವಾದಿ ಮೊಹಮ್ಮದರ ಜತೆಗೆ ಶ್ರೀರಾಮನ ಕುರಿತು ಕೂಡ ಅಧ್ಯಯನ ಮಾಡಲಿದ್ದಾರೆ” ಎಂದು ತಿಳಿಸಿದ್ದರು.

ಶಾದಾಬ್‌ ಶಾಮ್ಸ್‌ ಅವರು ಬಿಜೆಪಿ ಮುಖಂಡರೂ ಆಗಿದ್ದು, ಅವರು ಮದರಸಾಗಳಲ್ಲಿ ಬೋಧನೆ ಮಾಡುವ ಮೌಲ್ವಿಗಳನ್ನೂ ಒಪ್ಪಿಸಿದ್ದಾರೆ. ಧರ್ಮ, ಜಾತಿಯ ಸಂಕೋಲೆಗಳು ಇಲ್ಲದೆಯೇ ರಾಮನನ್ನು ಆರಾಧಿಸಬಹುದು. ಆತನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಎಂಬ ಮನೋಭಾವದಿಂದ ಶಾದಾಬ್‌ ಶಾಮ್ಸ್‌ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಉತ್ತರಾಖಂಡದ ವಕ್ಫ್‌ ಬೋರ್ಡ್‌ ವ್ಯಾಪ್ತಿಗೆ ಸುಮಾರು 117 ಮದರಸಾಗಳು ಬರುತ್ತವೆ. ಡೆಹ್ರಾಡೂನ್, ಹರಿದ್ವಾರ, ಉಧಾಮ್‌ ಸಿಂಗ್‌ ನಗರ ಹಾಗೂ ನೈನಿತಾಲ್‌ ಜಿಲ್ಲೆ ಸೇರಿ ಹಲವೆಡೆ ವಕ್ಫ್‌ ಬೋರ್ಡ್‌ ವ್ಯಾಪ್ತಿಯ ಮದರಸಾಗಳಲ್ಲಿ ರಾಮನ ಕುರಿತ ಅಧ್ಯಾಯಗಳನ್ನು ಸೇರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Madrasa: ಉತ್ತರ ಪ್ರದೇಶದಲ್ಲಿ ಮದರಸಾ ಶಿಕ್ಷಣ ರದ್ದುಪಡಿಸುವ ಅಲಹಾಬಾದ್‌ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ

Continue Reading

ಪ್ರಮುಖ ಸುದ್ದಿ

Valmiki Corporation Scam: ವಾಲ್ಮೀಕಿ ನಿಗಮ ಹಗರಣದಲ್ಲಿ ಮತ್ತೊಬ್ಬನ ಬಂಧನ; ಛತ್ತೀಸ್‌ಗಢದಲ್ಲೂ ವಂಚಿಸಿದ್ದ!

Valmiki Corporation Scam: ಪ್ರಮುಖ ಆರೋಪಿ ಸತ್ಯನಾರಾಯಣ ವರ್ಮಾ ಜೊತೆ ಸತತ ಸಂಪರ್ಕದಲ್ಲಿದ್ದ ಈ ಆರೋಪಿ ವಾಲ್ಮೀಕಿ ನಿಗಮದ ಹಣ ಅಕ್ರಮವಾಗಿ ವರ್ಗಾವಣೆ ಮಾಡಲು ಸಹಕಾರ ನೀಡಿದ್ದ. ಇದೇ ರೀತಿ ಈ ಹಿಂದೆಯೂ ಈ ಆರೋಪಿಗಳು ಕೃತ್ಯ ಎಸಗಿದ್ದರು.

VISTARANEWS.COM


on

valmiki corporation scam culprits
ಬಂಧಿತ ಆರೋಪಿಗಳು
Koo

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಕೇಸ್‌ಗೆ (Valmiki Corporation Scam) ಸಂಬಂಧಿಸಿ ಮತ್ತೊಬ್ಬನನ್ನು ಎಸ್ಐಟಿ (SIT) ಬಂಧಿಸಿದೆ. ಆಂಧ್ರ ಮೂಲದ ಶ್ರೀನಿವಾಸ್ ರಾವ್ ಬಂಧಿತ ಆರೋಪಿ. ಈತ ಹಗರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎನ್ನಲಾಗಿದೆ.

ಪ್ರಮುಖ ಆರೋಪಿ ಸತ್ಯನಾರಾಯಣ ವರ್ಮಾ ಜೊತೆ ಸತತ ಸಂಪರ್ಕದಲ್ಲಿದ್ದ ಈ ಆರೋಪಿ ವಾಲ್ಮೀಕಿ ನಿಗಮದ ಹಣ ಅಕ್ರಮವಾಗಿ ವರ್ಗಾವಣೆ ಮಾಡಲು ಸಹಕಾರ ನೀಡಿದ್ದ. ಇದೇ ರೀತಿ ಈ ಹಿಂದೆಯೂ ಈ ಆರೋಪಿಗಳು ಕೃತ್ಯ ಎಸಗಿದ್ದರು. ಛತ್ತೀಸ್‌ಗಢದಲ್ಲಿ ಸತ್ಯನಾರಾಯಣ ವರ್ಮಾ ಹಾಗೂ ಶ್ರೀನಿವಾಸ ರಾವ್ ಸೇರಿ ಇಂಥದೇ ಕೃತ್ಯ ಎಸಗಿದ್ದಾರೆ. ಅದೇ ರೀತಿ ನಿಗಮದ ಅಕೌಂಟ್‌ನಿಂದ ಹಣ ಅಕ್ರಮ ವರ್ಗಾವಣೆ ಮಾಡಿದ್ದರು.

ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಶ್ರೀನಿವಾಸ ರಾವ್ ಎಸ್ಕೇಪ್ ಆಗಿದ್ದ. ಇದೀಗ ಎಸ್‌ಐಟಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದೆ. ಸದ್ಯ ಆರೋಪಿಯನ್ನು ಒಂಬತ್ತು ದಿನ ಕಸ್ಟಡಿಗೆ ಪಡೆದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಈಗಾಗಲೇ ಮಹತ್ವದ ಬೆಳವಣಿಗೆಗಳು ನಡೆದಿವೆ. ಮೂವರನ್ನು ಬಂಧಿಸಲಾಗಿದೆ. ಇವರಲ್ಲಿ ವಾಲ್ಮೀಕಿ ನಿಗಮದ ಎಂಡಿ ಪದ್ಮನಾಭ, ಲೆಕ್ಕ ಪರಿಶೋಧಕ ಪರಶುರಾಮ್‌ ಸೇರಿದ್ದಾರೆ. ಪ್ರಕರಣದಲ್ಲಿ ಇಡಿ ಸಹ ತನಿಖೆಗೆ ಇಳಿದಿದೆ. ಒಂದು ವಾರದ ಹಿಂದೆ ಮಾಜಿ ಸಚಿವ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ಬಿ. ನಾಗೇಂದ್ರ ಮನೆ ಹಾಗೂ ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿದ್ದು, ಅವರನ್ನು ಬಂಧಿಸಿ ತನಿಖೆ ನಡೆಸುತ್ತಿದೆ. ಹಗರಣದಲ್ಲಿ ಪಾಲ್ಗೊಂಡಿರುವ ಯೂನಿಯನ್‌ ಬ್ಯಾಂಕ್‌ ಸಿಬ್ಬಂದಿಗಳಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಇನ್ನೂ ಆರು ಮಂದಿ ನಾಪತ್ತೆಯಾಗಿದ್ದಾರೆ.

ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್‌ ಮನೆ ಹಾಗೂ ಕಚೇರಿಗಳ ಮೇಲೂ ಇಡಿ ದಾಳಿ ನಡೆಸಿತ್ತು. ಬೀಸುವ ದೊಣ್ಣೆಯಿಂದ ಪಾರಾಗಲು ಮೂರು ದಿನ ಕಣ್ಮರೆಯಾಗಿದ್ದ ದದ್ದಲ್‌, ಇದೀಗ ವಿಧಾನಸಭೆ ಕಲಾಪಕ್ಕೆ ಹಾಜರಾಗಿ ಬಂಧನ ಭೀತಿಯಿಂದ ತಪ್ಪಿಸಿಕೊಂಡಿದ್ದಾರೆ. ಅಧಿವೇಶನ ಮುಗಿಯುವವರೆಗೂ ಅವರಿಗೆ ಬಂಧನದ ಆತಂಕವಿಲ್ಲ.

ವಾಲ್ಮೀಕಿ ನಿಗಮ ಅಕ್ರಮದಲ್ಲಿ ನನ್ನ ಪಾತ್ರ ಇಲ್ಲ; ಸಿಎಂ ಮುಂದೆ ಶಾಸಕ ದದ್ದಲ್ ಕಣ್ಣೀರು

ಬೆಂಗಳೂರು: ವಾಲ್ಮೀಕಿ ನಿಗಮ ಪ್ರಕರಣ (Valmiki Corp scam) ಸಂಬಂಧ ಎಸ್‌ಐಟಿ ವಿಚಾರಣೆಗೆ ಹಾಜರಾದ ಬಳಿಕ ಮೂರು ದಿನಗಳಿಂದ ಎಲ್ಲೂ ಕಾಣಿಸಿಕೊಳ್ಳದ ಶಾಸಕ ಹಾಗೂ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರು ಸೋಮವಾರ ವಿಧಾನ ಮಂಡಲ ಅಧಿವೇಶನಕ್ಕೆ ಹಾಜರಾಗಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವ ಶಾಸಕ ದದ್ದಲ್‌(Basanagouda Daddal), ವಾಲ್ಮೀಕಿ ನಿಗಮ ಅಕ್ರಮ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ, ಈ ಘಟನೆಯಿಂದ ನಮ್ಮ ಕುಟುಂಬದ ಸದಸ್ಯರು ಹೆದರಿಕೊಂಡಿದ್ದಾರೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.

ವಿಧಾನಸೌಧದ ಸಿಎಂ ಕೊಠಡಿಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ದದ್ದಲ್, ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ. ದದ್ದಲ್ ನಾಪತ್ತೆ ಅಂತ ಬಿಜೆಪಿ‌ಯವರು ಸುಮ್ಮನೇ ಪೋಸ್ಟರ್ ವೈರಲ್ ಮಾಡುತ್ತಿದ್ದಾರೆ. ಯಾವ ಇಡಿಯವರೂ ನನ್ನ ಬೆನ್ನತ್ತಿಲ್ಲ. ಬಿಜೆಪಿ ನಾಯಕರು ಬೇಕು ಅಂತಲೇ ಸುದ್ದಿ ಹಬ್ಬಿಸುತ್ತಿದ್ದಾರೆ. ನಾನು ನಾಪತ್ತೆಯಾಗಿಲ್ಲ. ಈ ಘಟನೆಯಿಂದ ನಮ್ಮ ಕುಟುಂಬದ ಸದಸ್ಯರು ಹೆದರಿಕೊಂಡಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ ಅಂತ ಸಿಎಂ ಮುಂದೆ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: Wakf Board Scam: ವಾಲ್ಮೀಕಿ ನಿಗಮದ ಬಳಿಕ ವಕ್ಫ್ ಬೋರ್ಡ್‌ನಲ್ಲಿ ಹಗರಣ ಬೆಳಕಿಗೆ; ಮಾಜಿ ಸಿಇಒ ವಿರುದ್ಧ ಎಫ್‌ಐಆರ್!

Continue Reading

ದೇಶ

Formers MPs: ಚುನಾವಣೆಯಲ್ಲಿ ಸೋತರೂ ಸರ್ಕಾರಿ ಬಂಗಲೆ ಬಿಡದ 200 ಮಾಜಿ ಸಂಸದರು; ನೋಟಿಸ್‌ ಜಾರಿ

Formers MPs: ನಿಯಮಗಳ ಪ್ರಕಾರ, ಯಾವುದೇ ಲೋಕಸಭೆ ಸದಸ್ಯರು, ತಮ್ಮ ಸ್ಥಾನ ಕಳೆದುಕೊಂಡ ನಂತರದ ಒಂದು ತಿಂಗಳೊಳಗೆ ಸರ್ಕಾರದ ಬಂಗಲೆಯನ್ನು ತೊರೆಯಬೇಕು ಎಂಬ ನಿಯಮವಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋತವರು, ಚುನಾವಣೆ ವೇಳೆ ಟಿಕೆಟ್‌ ಸಿಗದವರು ಈಗ ಮಾಜಿಗಳಾಗಿದ್ದಾರೆ. ಆದರೂ ಅವರು ಬಂಗಲೆಗಳನ್ನು ಖಾಲಿ ಮಾಡದ ಕಾರಣ ನೋಟಿಸ್‌ ಜಾರಿಗೊಳಿಸಲಾಗಿದೆ.

VISTARANEWS.COM


on

Former MPs
Koo

ನವದೆಹಲಿ: ಕಳೆದ ಲೋಕಸಭೆ ಚುನಾವಣೆ (Lok Sabha Election 2024) ಸೋಲು ಸೇರಿ ಹಲವು ಕಾರಣಗಳಿಂದಾಗಿ ಮಾಜಿಗಳಾಗಿರುವ ಸಂಸದರಿಗೆ (Formers MPs) ಸರ್ಕಾರಿ ಬಂಗಲೆಗಳನ್ನು ತೊರೆಯಲು ಮನಸ್ಸೇ ಬರುತ್ತಿಲ್ಲ. ಹೌದು, ಲುಟಿಯೆನ್ಸ್‌ ದೆಹಲಿಯಲ್ಲಿರುವ (Lutyens’ Delhi) ಬಂಗಲೆಗಳನ್ನು ತೊರೆಯುವಂತೆ ಸುಮಾರು 200ಕ್ಕೂ ಅಧಿಕ ಲೋಕಸಭೆ ಮಾಜಿ ಸಂಸದರಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ. ಶೀಘ್ರದಲ್ಲೇ ಬಂಗಲೆಗಳನ್ನು ತೊರೆಯಬೇಕು ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ.

“ಮಾಜಿ ಸಂಸದರಾದರೂ ಇದುವರೆಗೆ ಬಂಗಲೆಗಳನ್ನು ಖಾಲಿ ಮಾಡಿಲ್ಲ. ಹಾಗಾಗಿ, ಇದುವರೆಗೆ 200ಕ್ಕೂ ಅಧಿಕ ಮಾಜಿ ಸಂಸದರಿಗೆ ಎವಿಕ್ಷನ್‌ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ. ಹಾಗೆಯೇ, ಇನ್ನೂ ಹೆಚ್ಚಿನ ಸಂಸದರು ಬಂಗಲೆಗಳನ್ನು ಖಾಲಿ ಮಾಡಿಲ್ಲ. ಅವರಿಗೂ ನೋಟಿಸ್‌ಗಳನ್ನು ಕಳುಹಿಸಲು ಸಿದ್ಧತೆ ನಡೆಸಲಾಗುತ್ತಿದೆ” ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಮೂಲಗಳು ತಿಳಿಸಿವೆ. ಮಾಜಿ ಸಂಸದರು ಬಂಗಲೆಗಳನ್ನು ಖಾಲಿ ಮಾಡದ ಕಾರಣ ನೂತನ ಸಂಸದರಿಗೆ ವಸತಿ ವ್ಯವಸ್ಥೆ ಮಾಡಲು ಕಷ್ಟವಾಗುತ್ತಿದೆ ಎಂದು ತಿಳಿದುಬಂದಿದೆ.

ಬಲವಂತದ ತೆರವಿಗೂ ಸಜ್ಜು

ಬಂಗಲೆ ತೊರೆಯುವಂತೆ ನೋಟಿಸ್‌ ಜಾರಿಗೊಳಿಸಿದರೂ ಮಾಜಿ ಸಂಸದರು ಮನೆಗಳನ್ನು ಖಾಲಿ ಮಾಡದಿದ್ದರೆ, ಬಲವಂತವಾಗಿ ಅಲ್ಲಿಂದ ತೆರವುಗೊಳಿಸಲು ಕೂಡ ಸಚಿವಾಲಯವು ಸಿದ್ಧತೆ ನಡೆಸಿದೆ ಎಂದು ಹೇಳಲಾಗುತ್ತಿದೆ. ನೂತನ ಸಂಸದರಿಗೆ ಮನೆಗಳನ್ನು ಹಂಚಿಕೆ ಮಾಡಲು ಆಗದ ಕಾರಣ, ಮಾಜಿ ಸಂಸದರು ಬಂಗಲೆಗಳನ್ನು ಖಾಲಿ ಮಾಡದಿದ್ದರೆ, ಅಧಿಕಾರಿಗಳನ್ನು ಕಳುಹಿಸಿ, ಬಂಗಲೆಗಳಲ್ಲಿರುವ ಪೀಠೋಪಕರಣಗಳನ್ನು ಹೊರಗೆ ಹಾಕಿ, ಬಲವಂತವಾಗಿ ಮಾಜಿ ಸಂಸದರನ್ನು ತೆರವುಗೊಳಿಸಲು ಚಿಂತನೆ ನಡೆದಿದೆ ಎಂದು ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ.

ನಿಯಮಗಳ ಪ್ರಕಾರ, ಯಾವುದೇ ಲೋಕಸಭೆ ಸದಸ್ಯರು, ತಮ್ಮ ಸ್ಥಾನ ಕಳೆದುಕೊಂಡ ನಂತರದ ಒಂದು ತಿಂಗಳೊಳಗೆ ಸರ್ಕಾರದ ಬಂಗಲೆಯನ್ನು ತೊರೆಯಬೇಕು ಎಂಬ ನಿಯಮವಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋತವರು, ಚುನಾವಣೆ ವೇಳೆ ಟಿಕೆಟ್‌ ಸಿಗದವರು ಈಗ ಮಾಜಿಗಳಾಗಿದ್ದಾರೆ. ಲೋಕಸಭೆ ಸಚಿವಾಲಯವು ಸಂಸದರಿಗೆ ಬಂಗಲೆಗಳನ್ನು ವಿನಿಯೋಗ ಮಾಡುತ್ತದೆ. ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ಕೇಂದ್ರ ಸಚಿವರಿಗೆ ಲುಟಿಯೆನ್ಸ್‌ ದೆಹಲಿಯಲ್ಲಿ ಬಂಗಲೆಗಳನ್ನು ಹಂಚಿಕೆ ಮಾಡುತ್ತದೆ.

ಇದನ್ನೂ ಓದಿ: Amitabh Bachchan: ಹರಾಜಿಗಿದೆ ಅಮಿತಾಭ್ ಭವ್ಯ ಬಂಗಲೆ; ದರ ಎಷ್ಟು ನೋಡಿ!

Continue Reading
Advertisement
karnataka assembly live
ಪ್ರಮುಖ ಸುದ್ದಿ10 mins ago

Karnataka Assembly Live: ಸದನದಲ್ಲಿ ಇಂದು ಕಿಡಿಯೆಬ್ಬಿಸಲಿರುವ ವಾಲ್ಮೀಕಿ ಹಗರಣ; ಉತ್ತರ ನೀಡಲು ಸಿಎಂ ಸಜ್ಜು; ಇಲ್ಲಿದೆ ಕ್ಷಣಕ್ಷಣದ ಲೈವ್‌

David Warner
ಕ್ರೀಡೆ13 mins ago

David Warner: ​ಚಾಂಪಿಯನ್ಸ್ ಟ್ರೋಫಿಗೆ ವಾರ್ನರ್​ ಆಯ್ಕೆ ಇಲ್ಲ ಎಂದ ಜಾರ್ಜ್​ ಬೈಲಿ

Kannada New Movie
ಸ್ಯಾಂಡಲ್ ವುಡ್17 mins ago

Kannada New Movie: ಸೆಟ್ಟೇರಿತು ‘ಆಕಾಶ್’, ‘ಅರಸು’ ಚಿತ್ರಗಳ ಡೈರೆಕ್ಟರ್ ಹೊಸ ಸಿನಿಮಾ; ಕಿರುತೆರೆಯ ಈ ಪ್ರತಿಭೆ ನಾಯಕ

Kannada In Madrasa
ಕರ್ನಾಟಕ31 mins ago

Kannada In Madrasa: ರಾಜ್ಯದ ಮದರಸಾಗಳಲ್ಲಿ ಇನ್ನು ಕನ್ನಡ ಕಲಿಕೆ ಕಡ್ಡಾಯ; ಶೀಘ್ರವೇ ಆದೇಶ!

murder case set fire bagalakote
ಕ್ರೈಂ41 mins ago

Horrible Murder Case: ಶೆಡ್‌ ಹೊರಗಿನಿಂದ ಲಾಕ್‌ ಮಾಡಿ ಬೆಂಕಿ ಇಟ್ಟ ದುಷ್ಟರು; ಇಬ್ಬರು ಸಜೀವ ದಹನ

Iti Acharya
ಸಿನಿಮಾ51 mins ago

Iti Acharya: ಬಾಲಿವುಡ್‌ಗೆ ಕಾಲಿಟ್ಟ ಮತ್ತೊಬ್ಬ ಕನ್ನಡತಿ; ದಕ್ಷಿಣ ಭಾರತದ ಚಿತ್ರಗಳ ಬಳಿಕ ಹಿಂದಿಯಲ್ಲೂ ಅಭಿನಯ

Karnataka Assembly
ಕ್ರೀಡೆ52 mins ago

Karnataka Assembly: ಬಿಜೆಪಿಯಿಂದಲೇ ರಾಹುಲ್​ಗೆ ಶ್ಲಾಘನೆ; ಸದನದಲ್ಲಿ ಅಭಿನಂದನೆಗೆ ನಿರ್ಣಯ

Anant Radhika Wedding
ವಾಣಿಜ್ಯ54 mins ago

Anant Radhika Wedding: ನಮ್ಮಿಂದ ಏನಾದರು ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ; ನೀತಾ ಅಂಬಾನಿ ವಿನಮ್ರ ಮನವಿ!

valmiki corporation scam culprits
ಪ್ರಮುಖ ಸುದ್ದಿ1 hour ago

Valmiki Corporation Scam: ವಾಲ್ಮೀಕಿ ನಿಗಮ ಹಗರಣದಲ್ಲಿ ಮತ್ತೊಬ್ಬನ ಬಂಧನ; ಛತ್ತೀಸ್‌ಗಢದಲ್ಲೂ ವಂಚಿಸಿದ್ದ!

Anant Ambani Wedding
ದೇಶ1 hour ago

Anant Ambani Wedding: ಮಗನ ಮದುವೆಯಲ್ಲಿ ರಿಲಯನ್ಸ್ ಉದ್ಯೋಗಿಗಳಿಗೂ ಭರ್ಜರಿ ಔತಣ ನೀಡಿದ ಮುಖೇಶ್ ಅಂಬಾನಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ17 hours ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ23 hours ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ1 day ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ3 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

ಟ್ರೆಂಡಿಂಗ್‌