Viral Video: ಬೆಂಗಳೂರಲ್ಲಿ ಹಾಡಹಗಲೇ‌‌ ಪುಂಡಾಟ, 15 ಮಂದಿಯಿಂದ ಯುವಕನ ಮೇಲೆ ಹಲ್ಲೆ - Vistara News

ವೈರಲ್ ನ್ಯೂಸ್

Viral Video: ಬೆಂಗಳೂರಲ್ಲಿ ಹಾಡಹಗಲೇ‌‌ ಪುಂಡಾಟ, 15 ಮಂದಿಯಿಂದ ಯುವಕನ ಮೇಲೆ ಹಲ್ಲೆ

Viral video: 15 ಜನ ಪುಂಡರು ಒಬ್ಬ ಯುವಕನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಸಾರ್ವಜನಿಕರು ವಿಡಿಯೋ ಸಮೇತ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಿಸಿಟಿವಿಯಲ್ಲೂ ಯುವಕನ ಮೇಲಿನ ಹಲ್ಲೆಯ ದೃಶ್ಯ ಸೆರೆಯಾಗಿದೆ.

VISTARANEWS.COM


on

assault case viral video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬೆಂಗಳೂರಿನ (Bangalore crime news) ಬೀದಿಯಲ್ಲಿ ಹಾಡಹಗಲೇ ನಡೆದ ರಾಜಾರೋಷ ಹಲ್ಲೆಯೊಂದರ (Assault Case) ದೃಶ್ಯವನ್ನು ಸಾರ್ವಜನಿಕರು ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾಗಳಲ್ಲಿ (Viral Video) ಹಂಚಿಕೊಂಡಿದ್ದಾರೆ. ಸದ್ಯ ಇದು ಮೆಟ್ರೋ ನಗರದ (Metro City) ಮಾನ ತೆಗೆಯುತ್ತಿದೆ. ವಿದ್ಯಾರಣ್ಯಪುರದಲ್ಲಿ (Vidyaranyapura) ಘಟನೆ ನಡೆದಿದೆ.

15 ಜನ ಪುಂಡರು ಒಬ್ಬ ಯುವಕನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಸಾರ್ವಜನಿಕರು ವಿಡಿಯೋ ಸಮೇತ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಿಸಿಟಿವಿಯಲ್ಲೂ ಯುವಕನ ಮೇಲಿನ ಹಲ್ಲೆಯ ದೃಶ್ಯ ಸೆರೆಯಾಗಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ನರಸೀಪುರ ಬಳಿ ನಡೆದ ಘಟನೆಯಿದು. ಹಲ್ಲೆಗೊಳಗಾದವನು ಹಾಗೂ ಹಲ್ಲೆ ಮಾಡಿದವರ ಕುರಿತ ವಿವರಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.

ಹಲ್ಲೆಯಿಂದ‌ ಯುವಕನ‌ ಮುಖ ಮತ್ತು ಮೂಗಿನ‌ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರು ಮತ್ತು ಈಶಾನ್ಯ ಡಿಸಿಪಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಲಾಗಿದೆ. ʼಬಿಎನ್‌ಎಸ್ 109 ಅಂದರೆ ಕೊಲೆ‌ ಯತ್ನ?ʼ ಎಂದು ಉಲ್ಲೇಖಿಸಿ ಪೋಸ್ಟ್‌ ಮಾಡಲಾಗಿದೆ.

ಕಲಬುರಗಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

ಕಲಬುರಗಿ: ಜಮೀನೊಂದರಲ್ಲಿ ಸುಟ್ಟಸ್ಥಿತಿಯಲ್ಲಿ ಮಹಿಳೆಯ ಶವ (Dead Body Foundಪತ್ತೆಯಾಗಿದೆ. ಕಲಬುರಗಿಯ (Kalaburagi News) ಕಮಲಾಪುರ ತಾಲೂಕಿನ ನಾಗೂರ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಮಹಿಳೆ ತಲೆ ಮೇಲೆ ಕಲ್ಲುಎತ್ತಿ ಹಾಕಿ ಕೊಲೆ ಮಾಡಲಾಗಿದ್ದು, ಬಳಿಕ ಗುರುತು ಸಿಗಬಾರದೆಂದು ಸುಟ್ಟು ಹಾಕಿದ್ದಾರೆ.

ಕಲಬುರಗಿ ನಗರದ ಜಗತ್ ಬಡಾವಣೆಯ ನಿವಾಸಿ ಬಸಮ್ಮ (45) ಮೃತ ದುರ್ದೈವಿ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಎಸ್ಪಿ ಬಿಂದುರಾಣಿ, ಎಸ್ಪಿ ಅಡ್ಡೂರು ‌ಶ್ರೀನಿವಾಸಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಾಗಾವ್ ಪೊಲೀಸ್ ಠಾಣಾವ್ಯಾಪ್ತಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಹತ್ಯೆಗೆ ಕಾರಣವೇನು? ಹತ್ಯೆ ಮಾಡಿದ್ದು ಯಾರು ಎಂಬುದು ತಿಳಿದು ಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಕಲಬುರಗಿಯಲ್ಲಿ ನದಿಗೆ ಹಾರಿ ಯುವಕ-ಯುವತಿ ಆತ್ಮಹತ್ಯೆ

ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕುರಿಕೋಟಾ ಸೇತುವೆಯಿಂದ ಬೆಣ್ಣೆತೋರಾ ನದಿಗೆ ಹಾರಿ ಯುವಕ- ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನೀಲ್ ಕುಮಾರ್ ಮೂಲಗೆ (37) ನದಿಗೆ ಹಾರಿ ಮೃತಪಟ್ಟವರು. ಬೆಣ್ಣೆತೋರಾ ನದಿಯಲ್ಲಿ ಅನೀಲ್ ಕುಮಾರ್ ಶವ ಪತ್ತೆಯಾಗಿದೆ. ಅನೀಲ್ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕುಣಿ ಸಂಗಾವಿ ಗ್ರಾಮದ ನಿವಾಸಿಯಾಗಿದ್ದಾರೆ. ಅನೀಲ್ ಜತೆ ನದಿಗೆ ಹಾರಿದ ಯುವತಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಸ್ಥಳಕ್ಕೆ ಮಹಾಗಾಂವ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈಜು ತಜ್ಞರ ಮೂಲಕ ಶವ ಹುಡುಕಾಟ ನಡೆಸುತ್ತಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ.

kalaburagi news

ಹಾಸನದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ಮಗುವಿನ ಅನಾರೋಗ್ಯದಿಂದ ಮನನೊಂದ ತಂದೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಾಸನದ ಹಿಮ್ಸ್ ಆಸ್ಪತ್ರೆಯ ಕಟ್ಟಡದ ಮೇಲೇರಿದ ಬಸವರಾಯನಪುರ ಗ್ರಾಮದ ಗಂಗಸ್ವಾಮಿಯಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಳೆಬೀಡು ಸಮೀಪದ ಗ್ರಾಮದಲ್ಲಿ ಘಟನೆ ನಡೆದಿದೆ. ಗಂಗಸ್ವಾಮಿ ತನ್ನ ಎರಡು ತಿಂಗಳ ಮಗುವಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಹಿಮ್ಸ್‌ಗೆ ದಾಖಲು ಮಾಡಿದ್ದರು. ಆದರೆ ಮಗುವಿನ ಅರೋಗ್ಯ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಮುಂದಾಗಿದ್ದರು. ಇತ್ತ ಆಸ್ಪತ್ರೆ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಅನಾಹುತವೊಂದು ತಪ್ಪಿದೆ. ಗಂಗಸ್ವಾಮಿಯನ್ನು ಮನವೊಲಿಸಿ‌ ಕೆಳಗಿಳಿಸಿ ಬಳಿಕ ಪೊಲೀಸ್ ಠಾಣೆಗೆ ಕರೆದೊಯ್ದಲಾಗಿದೆ.

ಇದನ್ನೂ ಓದಿ: Rain News: ಮಳೆಯ ಅಬ್ಬರಕ್ಕೆ ಧಡಾರ್‌ ಎಂದು ನೆಲಕಚ್ಚಿದ ಕೊಟ್ಟಿಗೆಹಾರ ಬಸ್‌ ನಿಲ್ದಾಣ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Rohit Sharma: ‘ಎಲಾ ಉನ್ನಾರು?’; ತೆಲುಗಿನಲ್ಲಿ ಮಾತನಾಡಿದ ರೋಹಿತ್ ಶರ್ಮ; ವಿಡಿಯೊ ವೈರಲ್​

Rohit Sharma: ಮುಂಬೈಕರ್​​ ಅಂತಲೇ ಫೇಮಸ್​ ಆಗಿರುವ ರೋಹಿತ್​ ಶರ್ಮ ಅವರಿಗೆ ಹೈದರಾಬಾದ್​ ನಂಟು ಕೂಡ ಇದೆ. ಅಚ್ಚರಿ ಎಂದರೆ ಅವರ ಮಾತೃ ಭಾಷೆ ಕೂಡ ತೆಲುಗು. ಹೌದು, ರೋಹಿತ್​ ಮೂಲತಃ ಆಂಧ್ರ ಪ್ರದೇಶದವರು.

VISTARANEWS.COM


on

Rohit Sharma
Koo

ಹೈದರಾಬಾದ್​: ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(Rohit Sharma) ಅವರು ವೇದಿಕೆಯೊಂದರಲ್ಲಿ ತೆಲುಗು ಮಾತನಾಡಿದ ವಿಡಿಯೊ ವೈರಲ್​ ಆಗಿದೆ. ಅಭಿಮಾನಿಗಳಿಗೆ ರೋಹಿತ್​, ಎಲಾ ಉನ್ನಾರು?(ಹೇಗಿದ್ದೀರಾ) ಎಂದು ಕೇಳಿದ್ದಾರೆ. ರೋಹಿತ್​ ತೆಲುಗು ಮಾತನಾಡುತ್ತಿದ್ದಂತೆ ನೆರದಿದ್ದ ಅಭಿಮಾನಿಗಳು ಖಷಿಯಿಂದ ಜೋರಾಗಿ ಕಿರುಚಾಡಿದರು.

ಮುಂಬೈಕರ್​​ ಅಂತಲೇ ಫೇಮಸ್​ ಆಗಿರುವ ರೋಹಿತ್​ ಶರ್ಮ ಅವರಿಗೆ ಹೈದರಾಬಾದ್​ ನಂಟು ಕೂಡ ಇದೆ. ಅಚ್ಚರಿ ಎಂದರೆ ಅವರ ಮಾತೃ ಭಾಷೆ ಕೂಡ ತೆಲುಗು. ಹೌದು, ರೋಹಿತ್​ ಮೂಲತಃ ಆಂಧ್ರ ಪ್ರದೇಶದವರು. ಈ ವಿಚಾರವನ್ನು ಅವರು ಹಿಂದೊಮ್ಮೆ ಸಂದರ್ಶನದಲ್ಲಿಯೂ ಹೇಳಿದ್ದರು. ತಾಯಿಯ ಜತೆ ಮನೆಯಲ್ಲಿ ತೆಲುಗು ಭಾಷೆಯನ್ನೇ ಮಾತನಾಡುತ್ತೇನೆ ಎಂದಿದ್ದರು. ರೋಹಿತ್​ ತಾಯಿ ವೈಜಾಗ್​ನವರು.

ಹೈದರಾಬಾದ್​ನಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ರೋಹಿತ್​ ನೆರದಿದ್ದ ಅಭಿಮಾನಿಗಳ ಬಳಿ ಎಲಾ ಉನ್ನಾರು?(ಹೇಗಿದ್ದೀರಾ), ಬನ್ನಿ ಉಪ್ಪಳ(ಹೈದರಾಬಾದ್​) ಸ್ಟ್ರೇಡಿಯಂಗೆ ಹೋಗೋಣ ಎಂದು ತೆಲುಗಿನಲ್ಲೇ ಹೇಳಿದ್ದಾರೆ. ಸದ್ಯ ಈ ವಿಡಿಯೊವನ್ನು ಹೈದರಾಬಾದ್​ನ ರೋಹಿತ್​ ಅಭಿಮಾನಿಗಳು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಶೇರ್ ಮಾಡುತ್ತಿದ್ದಾರೆ.

​ಇದೇ ಕಾರ್ಯಕ್ರಮದಲ್ಲಿ ರೋಹಿತ್(rohit sharma retirement)​ ತಮ್ಮ ನಿವೃತ್ತಿಯ ವಿಚಾರದಲ್ಲಿ ಹರಿದಾಡುತ್ತಿದ್ದ ಎಲ್ಲ ಉಹಾಪೋಹಕ್ಕೆ ಸ್ಪಷ್ಟನೆ ನೀಡಿದ್ದರು.  “ನಾನು ನಿವೃತ್ತಿಯ ಬಗ್ಗೆ ಈಗಲೇ ಏನೂ ಯೋಚನೆ ಮಾಡಿಲ್ಲ. ಜೀವನವು ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಪ್ರಸ್ತುತ ನಾನು ಚೆನ್ನಾಗಿ ಆಡುತ್ತಿದ್ದು, ಮುಂದಿನ ಕೆಲ ವರ್ಷಗಳ ಕಾಲ ಭಾರತ ಪರ ಟೆಸ್ಟ್​ ಮತ್ತು ಏಕದಿನ ಆಡುವ ಯೋಜನೆಯಲ್ಲಿದ್ದೇನೆ ಎಂದು ಹೇಳುವ ತಮ್ಮ ನಿವೃತ್ತಿ ಕುರಿತ ಊಹಾಪೋಹಕ್ಕೆ ತೆರೆ ಎಳೆದಿದ್ದರು.

ಇದನ್ನೂ ಓದಿ Rohit Sharma: ಕ್ರಿಕೆಟ್​ ನಿವೃತ್ತಿ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ರೋಹಿತ್​ ಶರ್ಮ

ಸದ್ಯ ರೋಹಿತ್​ ವಿಶ್ರಾಂತಿಯಲ್ಲಿದ್ದು ಶ್ರೀಲಂಕಾ ವಿರುದ್ಧದ ಸರಣಿಗೂ ಗೈರಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ರೋಹಿತ್ ನಾಯಕತ್ವದಲ್ಲಿ, ಜೂನ್​ 29ರಂದು ಬಾರ್ಬಡೋಸ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳ ಜಯದೊಂದಿಗೆ 11 ವರ್ಷಗಳ ಐಸಿಸಿ ಪ್ರಶಸ್ತಿ ಬರವನ್ನು ಕೊನೆಗೊಳಿಸಿತ್ತು. 2007 ರ ಉದ್ಘಾಟನಾ ಆವೃತ್ತಿಯ ನಂತರ ಇದು ಭಾರತಕ್ಕೆ ಒಲಿದ ಎರಡನೇ ಟಿ20 ವಿಶ್ವಕಪ್ ಪ್ರಶಸ್ತಿಯಾಗಿತ್ತು. ಮೆನ್ ಇನ್ ಬ್ಲೂ ಈ ಹಿಂದೆ ರೋಹಿತ್ ಅವರ ನಾಯಕತ್ವದಲ್ಲಿ ಎರಡು ಫೈನಲ್‌ಗಳನ್ನು ಆಡಿತ್ತು. ಏಕದಿನ ವಿಶ್ವಕಪ್ ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್. ಇಲ್ಲಿ ರನ್ನರ್-ಅಪ್ ಸ್ಥಾನ ಗಳಿಸಿತ್ತು.

ಏಕದಿನ ಮತ್ತು ಟೆಸ್ಟ್ ಮಾದರಿಗಳಲ್ಲಿ ರೋಹಿತ್ ಶರ್ಮ(Rohit Sharma) ಭಾರತ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ(BCCI secretary Jay Shah) ಈಗಾಗಲೇ ಹೇಳಿಕೆ ನೀಡಿದ್ದಾರೆ. ಜತೆಗೆ ಮುಂದಿನ ವರ್ಷ ಪಾಕಿಸ್ತಾನ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್​ ಟ್ರೋಫಿ(Champions Trophy) ಟೂರ್ನಿಯಲ್ಲಿಯೂ ರೋಹಿತ್​ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

Continue Reading

Latest

Viral Video: ಕಾಮುಕರ ಹಾವಳಿ ಮಿತಿ‌ ಮೀರಿದೆ; ಬೀದಿ ನಾಯಿಯನ್ನೂ ಇವರು ಬಿಡುತ್ತಿಲ್ಲ! ಆಘಾತಕಾರಿ ವಿಡಿಯೊ

Viral Video : ವೃದ್ಧನೊಬ್ಬ ಬೀದಿಯಲ್ಲಿ ಮಲಗಿದ್ದ ಗಂಡು ನಾಯಿಯ ಖಾಸಗಿ ಭಾಗಗಳನ್ನು ಪದೇ ಪದೇ ಸ್ಪರ್ಶಿಸುವ ಮೂಲಕ ಕಿರುಕುಳ ನೀಡಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಮುಂಬೈನ ಸ್ಟ್ರೀಟ್ ಅನಿಮಲ್ಸ್ ಎಂಬ ಇನ್ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೊದಲ್ಲಿ ಕೆಲವು ಅಸಹ್ಯವಾದ ತುಣುಕುಗಳನ್ನು ಸೆನ್ಸಾರ್ ಮಾಡಲಾಗಿದ್ದು, ಅಲ್ಲಿ ವೃದ್ಧ ವ್ಯಕ್ತಿ ಬೀದಿ ನಾಯಿಯನ್ನು ತನ್ನ ಕಡೆಗೆ ಸೆಳೆಯುವುದು ಮತ್ತು ಅನುಚಿತವಾಗಿ ಸ್ಪರ್ಶಿಸುವುದು ಕಂಡುಬಂದಿದೆ. ನಾಗರಿಕ ಸಮಾಜ ತಲೆತಗ್ಗಿಸುವ ವಿಡಿಯೊ ಈಗ ಬಹಿರಂಗವಾಗಿದೆ.

VISTARANEWS.COM


on

Viral Video
Koo


ಮುಂಬೈ : ಕಾಮುಕರು ತಮ್ಮ ಕಾಮದಾಟಕ್ಕೆ ಮನುಷ್ಯರನ್ನು ಮಾತ್ರವಲ್ಲ ಪ್ರಾಣಿಗಳನ್ನು ಕೂಡ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಲೈಂಗಿಕ ಬಯಕೆಯನ್ನು ತೀರಿಸಿಕೊಳ್ಳಲು ಮೂಕ ಪ್ರಾಣಿಗಳ ಮೇಲೂ ದೌರ್ಜನ್ಯ ಎಸಗುತ್ತಿದ್ದಾರೆ. ಇದೀಗ ಅಂತಹದೊಂದು ಘಟನೆ ಬೆಳಕಿಗೆ ಬಂದಿದ್ದು, ವಿಕೃತ ಕಾಮುಕನೊಬ್ಬ ಬೀದಿ ನಾಯಿಗೆ ಪದೇ ಪದೇ ಲೈಂಗಿಕ ಕಿರುಕುಳ ನೀಡಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಗುರ್ಗಾಂವ್‍ನ ಸೆಕ್ಟರ್ 48ರಲ್ಲಿ ವೃದ್ಧನೊಬ್ಬ ಬೀದಿಯಲ್ಲಿ ಮಲಗಿದ್ದ ಗಂಡು ನಾಯಿಯ ಖಾಸಗಿ ಭಾಗಗಳನ್ನು ಪದೇ ಪದೇ ಸ್ಪರ್ಶಿಸುವ ಮೂಲಕ ಬಹಿರಂಗವಾಗಿ ಕಿರುಕುಳ ನೀಡಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಮುಂಬೈನ ಸ್ಟ್ರೀಟ್ ಅನಿಮಲ್ಸ್ ಎಂಬ ಇನ್ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೊದಲ್ಲಿ ಕೆಲವು ಅಸಹ್ಯವಾದ ತುಣುಕುಗಳನ್ನು ಸೆನ್ಸಾರ್ ಮಾಡಲಾಗಿದ್ದು, ಅಲ್ಲಿ ವೃದ್ಧ ವ್ಯಕ್ತಿ ಬೀದಿ ನಾಯಿಯನ್ನು ತನ್ನ ಕಡೆಗೆ ಸೆಳೆಯುವುದು ಮತ್ತು ಅನುಚಿತವಾಗಿ ಸ್ಪರ್ಶಿಸುವುದು ಕಂಡುಬಂದಿದೆ.

ಇದರಲ್ಲಿ ಮೊದಲು ವ್ಯಕ್ತಿಯು ನಾಯಿಯನ್ನು ನೆಲದ ಮೇಲೆ ಮಲಗುವಂತೆ ಒತ್ತಾಯಿಸುವುದನ್ನು ತೋರಿಸುತ್ತದೆ. ಆತ ತನ್ನ ಕೈಗಳಿಂದ ನಾಯಿಯ ಮೈಯನ್ನು ಸವರುತ್ತಿದ್ದಾನೆ. ನಾಯಿ ಎಚ್ಚರಗೊಂಡು ನೇರವಾಗಿ ನಿಲ್ಲಲು ಪ್ರಯತ್ನಿಸಿದಾಗ, ಆತ ಪದೇ ಪದೇ ಪ್ರಾಣಿಯನ್ನು ವಿಶ್ರಾಂತಿ ಪಡೆಯುವಂತೆ ಮಾಡಿದ. ನಂತರ ಅವನು ಅದರ ಖಾಸಗಿ ಭಾಗಗಳನ್ನು ಸ್ಪರ್ಶಿಸುವುದನ್ನು ಮುಂದುವರಿಸಿದ.

ಮತ್ತೊಂದು ಘಟನೆಯಲ್ಲಿ, ಅದೇ ವ್ಯಕ್ತಿ ಮತ್ತೊಮ್ಮೆ ತಮ್ಮ ನಿವಾಸದ ಹೊರಗೆ ಬೀದಿ ನಾಯಿಗೆ ಕಿರುಕುಳ ನೀಡುತ್ತಿರುವುದು ಕಂಡುಬಂದಿದೆ. ಅವನು ನಾಯಿಯ ಜನನಾಂಗಗಳನ್ನು ಕಂಡುಹಿಡಿಯಲು ಮತ್ತು ಅವುಗಳನ್ನು ಮಟ್ಟಲು ಪ್ರಯತ್ನಿಸುತ್ತಿದ್ದ. ಇದಲ್ಲದೆ, ವ್ಯಕ್ತಿಯು ಕುರ್ಚಿಯ ಮೇಲೆ ಕುಳಿತು ತನ್ನ ಬರಿಗೈಯಿಂದ ನಾಯಿಯನ್ನು ಅನುಚಿತವಾಗಿ ಸ್ಪರ್ಶಿಸುವುದನ್ನು ವೀಡಿಯೊ ತೋರಿಸುತ್ತದೆ. ಆದರೆ ವ್ಯಕ್ತಿಯ ಈ ಅನುಚಿತ ವರ್ತನೆಯ ಬಗ್ಗೆ ಕ್ರಮ ಕೈಗೊಳ್ಳಲು ಸ್ಥಳೀಯ ಯುವತಿಯೊಬ್ಬಳು ಪೊಲೀಸರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಆತನ ವಿರುದ್ಧ ಯಾವುದೇ ಪೊಲೀಸ್ ಕ್ರಮ ದಾಖಲಾಗಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಮೊಬೈಲ್‌ನಲ್ಲಿ ಮಾತನಾಡುತ್ತ ರಸ್ತೆ ದಾಟಿದರೆ ಏನಾಗುತ್ತದೆ ನೋಡಿ; ಬೆಚ್ಚಿ ಬೀಳಿಸುವ ವಿಡಿಯೊ

Viral Video

ಪ್ರಾಣಿಗಳ ಮೇಲಿನ ಲೈಂಗಿಕ ದೌರ್ಜನ್ಯ ಭಾರತದಲ್ಲಿ ಮಾತ್ರವಲ್ಲ ಎಲ್ಲಾ ಕಡೆ ನಡೆಯುತ್ತಿದೆ. ಇದೀಗ ಬರೋಬ್ಬರಿ 60ಕ್ಕೂ ಹೆಚ್ಚು ನಾಯಿಗಳನ್ನು ಅತ್ಯಾಚಾರ ಮಾಡಿ, ಕೊಂದ ಪ್ರಕರಣದಲ್ಲಿ ಖ್ಯಾತ ಪ್ರಾಣಿಶಾಸ್ತ್ರಜ್ಞ ಆಡಂ ಬ್ರಿಟನ್‌ಗೆ 249 ವರ್ಷಗಳ ಜೈಲು ಶಿಕ್ಷೆಯಾಗಿದೆ. ಆತ ನಾಯಿಗಳನ್ನು ಕೋಣೆಗಳಲ್ಲಿ ಕೂಡಿ ಹಾಕಿ ವಿಚಿತ್ರವಾಗಿ ಹಿಂಸಿಸುತ್ತಿದ್ದನು. ಅತ್ಯಾಚಾರವೆಸಗಿ ಬರ್ಬರವಾಗಿ ಕೊಂದಿದ್ದನು ಎನ್ನಲಾಗಿತ್ತು. ವಿಚಾರಣೆಯ ವೇಳೆ ಈತನೂ ತನ್ನ ತಪ್ಪನ್ನು ಒಪ್ಪಿದ್ದನು. ಹೀಗಾಗಿ ಆತನಿಗೆ ಕೋರ್ಟ್ ಈಗ ಶಿಕ್ಷೆ ವಿಧಿಸಿದೆ.

Continue Reading

ಕ್ರೀಡೆ

Hardik Pandya: ರೋಡ್​ ಶೋದಲ್ಲಿ ಚಕ್ ದೇ! ಇಂಡಿಯಾ ಹಾಡಿದ ಹಾರ್ದಿಕ್​ ಪಾಂಡ್ಯ; ವಿಡಿಯೊ ವೈರಲ್​

Hardik Pandya: ಹಾರ್ದಿಕ್​ ಅವರು ವಿಶ್ವಕಪ್​ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್​ ಮತ್ತು ಬೌಲಿಂಗ್​ ಪ್ರದರ್ಶನ ತೋರುವ ಮೂಲಕ ಭಾರತ ತಂಡ ವಿಶ್ವಕಪ್​ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.  ಒಟ್ಟು 144 ರನ್​ ಮತ್ತು 11 ವಿಕೆಟ್​ ಕಿತ್ತ ಸಾಧನೆ ಮಾಡಿದ್ದರು.

VISTARANEWS.COM


on

Hardik Pandya
Koo

ಅಹಮದಾಬಾದ್​: ಟಿ20 ವಿಶ್ವಕಪ್​ ಗೆದ್ದ ಭಾರತ ತಂಡದ ಭಾಗವಾಗಿದ್ದ, ಉಪನಾಯಕ ಹಾರ್ದಿಕ್​ ಪಾಂಡ್ಯಗೆ(Hardik Pandya) ಅವರ ತವರಾದ ವಡೋದರದಲ್ಲಿ(Vadodara) ಭರ್ಜರಿಯಾಗಿ ರೋಡ್​ ಶೋ ಮೂಲಕ ಅಭಿನಂದಿಸಲಾಯಿತು. ಕಿಕ್ಕಿರಿದು ಸೇರಿದ ಅಭಿಮಾನಿಗಳ ಮುಂದೆ ಪಾಂಡ್ಯ ಚಕ್ ದೇ! ಇಂಡಿಯಾ(Chak De India) ಹಾಡನ್ನು(Hardik Pandya singing) ಜೋರಾಗಿ ಹಾಡಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ವಿಶ್ವಕಪ್​ ಮುಗಿದು ಭಾರತಕ್ಕೆ ಬಂದಿದ್ದ ಹಾರ್ದಿಕ್​ ಪಾಂಡ್ಯ ಮುಂಬೈಯಲ್ಲಿ ಕೆಲ ದಿನಗಳ ಕಾಲ ನೆಲೆಸಿದ್ದರು. ಇದೀಗ ತವರಾದ ವಡೋದರಕ್ಕೆ ಬಂದಿದ್ದಾರೆ. ಇಲ್ಲಿ ತವರಿನ ಅಭಿಮಾನಿಗಳು ಅವರಿಗೆ ಭರ್ಜರಿ ಅಭಿನಂದನಾ ಕಾರ್ಯಕ್ರಮ ನಡೆಸಿದ್ದಾರೆ. ತೆರೆದ ವಾಹನದಲ್ಲಿ ರೋಡ್​ ಶೋ ಮಾಡಿ ಪಾಂಡ್ಯಗೆ ಸ್ವಾಗತ ಕೋರಲಾಯಿತು. ಬಹು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಹಾರ್ದಿಕ್​ ಸಹೋದರ ಕೃಣಾಲ್​ ಪಾಂಡ್ಯ ಕೂಡ ರೋಡ್​ ಶೋದಲ್ಲಿ ಭಾಗಿಯಾಗಿದ್ದರು.

ಹಾರ್ದಿಕ್​ ಅವರು ವಿಶ್ವಕಪ್​ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್​ ಮತ್ತು ಬೌಲಿಂಗ್​ ಪ್ರದರ್ಶನ ತೋರುವ ಮೂಲಕ ಭಾರತ ತಂಡ ವಿಶ್ವಕಪ್​ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಒಟ್ಟು 144 ರನ್​ ಮತ್ತು 11 ವಿಕೆಟ್​ ಕಿತ್ತ ಸಾಧನೆ ಮಾಡಿದ್ದರು. ಅದರಲ್ಲೂ ಫೈನಲ್​ನಲ್ಲಿ ಸೋಲಿನ ಭೀತಿಯಲ್ಲಿದ್ದ ಭಾರತಕ್ಕೆ ಅಪಾಯಕಾರಿ ಕ್ಲಾಸೆನ್​ ಮತ್ತು ಮಿಲ್ಲರ್​ ವಿಕೆಟ್​ ಭೇಟೆಯಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇದನ್ನೂ ಓದಿ Hardik Pandya : ಪತ್ನಿ ಜತೆ ವಿಚ್ಛೇದನ ಸುದ್ದಿ ನಡುವೆ ರಷ್ಯನ್ ಮಾಡೆಲ್​ ಜತೆ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ; ಯಾರವರು?

ಹಾರ್ದಿಕ್ ಪಾಂಡ್ಯ(Hardik Pandya) ಅವರು ಪತ್ನಿ, ಸರ್ಬಿಯಾದ ನಟಿ ನತಾಶಾ ಸ್ಟಾನ್‌ಕೋವಿಕ್‌(Natasa Stankovic) ಅವರಿಗೆ ವಿಚ್ಛೇದನ ನೀಡಲಿದ್ದಾರೆ, ಜತೆಗೆ ವಿಚ್ಛೇದನ(Hardik Pandya and Natasa Stankovic divorce) ಪ್ರಕ್ರಿಯೆಯ ಭಾಗವಾಗಿ, ತಮ್ಮ ಆಸ್ತಿಯಲ್ಲಿ ಶೇ. 70 ರಷ್ಟು ಭಾಗವನ್ನು ನತಾಶಾಗೆ ವರ್ಗಾಯಿಸಬೇಕಿದೆ ಎನ್ನಲಾಗಿತ್ತು. ಈ ಎಲ್ಲ ಮಾತುಗಳ ಮಧ್ಯೆಯೂ ಪಾಂಡ್ಯ ದೇಶದ ಕರ್ತವ್ಯಕ್ಕೆ ಹಾಜರಾಗಿ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಕೆಲ ದಿನಗಳ ಹಿಂದೆ ನತಾಶಾ ಸ್ಟಾನ್‌ಕೋವಿಕ್‌(Nataša Stanković)ಗೆ ಪಾಂಡ್ಯ ವಿಚ್ಛೇದನ ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೇ ಹಾರ್ದಿಕ್​ ಪಾಂಡ್ಯ ಅವರು ಸುಂದರ ಹುಡುಗಿಯ ಜತೆಗಿರುವ ಫೋಟೊ ಮತ್ತು ವಿಡಿಯೊ ವೈರಲ್​ ಆಗಿತ್ತು.

ಹಾರ್ದಿಕ್​ ಪಾಂಡ್ಯ ಜತೆ ಕಾಣಿಸಿಕೊಂಡಿದ್ದ ಈ ಹುಡುಗಿಯ ಹೆಸರು ಪ್ರಾಚಿ ಸೋಲಂಕಿ(Prachi Solanki). ಈಕೆ ಪ್ರಸಿದ್ಧ ಮೇಕಪ್ ಆರ್ಟಿಸ್ಟ್​, ಹಾಗೂ ಸೋಷಿಯಲ್ ಮೀಡಿಯಾ ಇನ್ಫುಲೆನ್ಸರ್ ಆಗಿದ್ದಾಳೆ. ಹಾರ್ದಿಕ್​ ಜತೆಗಿರುವ ಹಲವು ಸುಂದರ ಕ್ಷಣದ ಫೋಟೊ ಮತ್ತು ವಿಡಿಯೊವನ್ನು ತನ್ನ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಸೋಲಂಕಿ, ವಿಶ್ವಕಪ್​ ಹೀರೋ ಅವರನ್ನು ಭೇಟಿ ಮಾಡಿದೆ ಎಂದು ಬರೆದುಕೊಂಡು ಲವ್​ ಎಮೊಜಿಯನ್ನು ಹಾಕಿದ್ದಾರೆ. ವಿಡಿಯೊದಲ್ಲಿ ಪಾಂಡ್ಯ ಜತೆ ಸೋಲಂಕಿ ಅತ್ಯಂತ ಆತ್ಮೀಯವಾಗಿ ಕಂಡುಬಂದಿದ್ದಳು.

ಸೋಲಂಕಿ ಅವರು ಹಾರ್ದಿಕ್​ ಮನೆಗೆ ಬಂದು ಭೇಟಿಯಾಗಿರುವುದು ನೆಟ್ಟಿಗರಿಗೆ ಹಲವು ಅನುಮಾನ ಮೂಡುವಂತೆ ಮಾಡಿದೆ. ಪಾಂಡ್ಯ ಕುಟುಂಬದ ಸದ್ಯರೊಂದಿಗೂ ಸೋಲಂಕಿ ಆತ್ಮೀಯವಾಗಿರುವ ಫೋಟೊವನ್ನು ಕೂಡ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಇದೊಂದು ಆತ್ಮೀಯ ಭೇಟಿಯಂತೆ ತೋರುತ್ತಿದ್ದರೂ ಕೂಡ ನೆಟ್ಟಿಗರು ಮಾತ್ರ ಶೀಘ್ರದಲ್ಲೇ ಪಾಂಡ್ಯ ಸೋಲಂಕಿಯನ್ನು ವಿವಾಹವಾಗಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸಲು ಆರಂಭಿಸಿದ್ದಾರೆ.

Continue Reading

Latest

Monkey Attack: ಹುಡುಗಿಯ ಮೇಲೆ ಏಕಾಏಕಿ ದಾಳಿ ಮಾಡಿದ ಕೋತಿ; ವಿಡಿಯೊ ಇದೆ

Monkey Attack: ನೆಲಮಾಳಿಗೆಯಲ್ಲಿ ನಡೆದು ಬರುತ್ತಿದ್ದ ಹುಡುಗಿಯ ಮೇಲೆ ಹಿಂದಿನಿಂದ ಬಂದ ಕೋತಿಯೊಂದು ದಾಳಿ ನಡೆಸಿದೆ. ಈ ಘಟನೆ ಜುಲೈ 11ರಂದು ನಡೆದಿದೆ. ಆದರೆ ಸ್ಥಳದ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಈ ಆಘಾತಕಾರಿ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದು ಈಗ ವೈರಲ್ ಆಗಿದೆ. ಹುಡುಗಿಗೆ ಯಾವುದೇ ಗಂಭೀರ ಹಾನಿಯಾಗಲಿಲ್ಲ, ಆದರೂ ಅವಳು ಕೋತಿಗೆ ಹೆದರಿ ನಡಗುತ್ತಿರುವುದು ಕಂಡುಬಂದಿದೆ.

VISTARANEWS.COM


on

Monkey Attack
Koo

ಇತ್ತೀಚಿನ ದಿನಗಳಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದೆ. ಈ ಕೋತಿಗಳು ಎಲ್ಲೆಂದರಲ್ಲಿ ಜನರ ಮೇಲೆ ದಾಳಿ ಮಾಡುತ್ತಿವೆ. ಇತ್ತೀಚೆಗಷ್ಟೇ ಮಥುರಾದಲ್ಲಿ 5 ವರ್ಷದ ಬಾಲಕನ ಮೇಲೆ ಕೋತಿಗಳು ದಾಳಿ ನಡೆಸಿದ್ದು, ಆ ವಿಡಿಯೊ ವೈರಲ್ ಆಗಿದೆ. ಅದೇ ರೀತಿ ಇದೀಗ ಕೋತಿಯೊಂದು ಹುಡುಗಿಯೊಬ್ಬಳ ಮೇಲೆ ದಾಳಿ ನಡೆಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Monkey Attack) ಆಗಿದೆ. ಇದು ಜನರ ಕಳವಳಕ್ಕೆ ಕಾರಣವಾಗಿದೆ.

ನೆಲಮಾಳಿಗೆಯಲ್ಲಿ ನಡೆದು ಬರುತ್ತಿದ್ದ ಹುಡುಗಿಯ ಮೇಲೆ ಹಿಂದಿನಿಂದ ಬಂದ ಕೋತಿಯೊಂದು ದಾಳಿ ನಡೆಸಿದೆ. ಈ ಘಟನೆ ಜುಲೈ 11ರಂದು ನಡೆದಿದೆ. ಆದರೆ ಸ್ಥಳದ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಈ ಆಘಾತಕಾರಿ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದು ಈಗ ವೈರಲ್ ಆಗಿದೆ.

ವಿಡಿಯೊದಲ್ಲಿ, ನೆಲಮಾಳಿಗೆಯಲ್ಲಿ ನಡೆದು ಬರುತ್ತಿದ್ದ ಹುಡುಗಿಯ ಬಳಿ ಬಂದ ಕೋತಿಯೊಂದು ಇದ್ದಕ್ಕಿದ್ದಂತೆ ಅವಳ ಮೇಲೆ ದಾಳಿ ಮಾಡಿದೆ. ಹುಡುಗಿಗೆ ತುಂಬಾ ಭಯವಾಗಿದೆ. ಅದೃಷ್ಟವಶಾತ್, ಹುಡುಗಿಗೆ ಯಾವುದೇ ಗಂಭೀರ ಹಾನಿಯಾಗಲಿಲ್ಲ, ಆದರೂ ಅವಳು ಕೋತಿಗೆ ಹೆದರಿ ನಡಗುತ್ತಿರುವುದು ಕಂಡುಬಂದಿದೆ. ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‍ಫಾರ್ಮ್‍ನಲ್ಲಿ (ಈ ಹಿಂದೆ ಟ್ವಿಟರ್) ‘ಘರ್ ಕೆ ಕಾಲೇಶ್’ ಹ್ಯಾಂಡಲ್‍ನಲ್ಲಿ ಹಂಚಿಕೊಳ್ಳಲಾಗಿದೆ. “ನೆಲಮಾಳಿಗೆಯ ಪ್ರದೇಶದಲ್ಲಿ ದೊಡ್ಡ ಕೋತಿ ಹುಡುಗಿಯ ಮೇಲೆ ದಾಳಿ ಮಾಡಿದೆ” ಎಂದು ಶೀರ್ಷಿಕೆ ನೀಡಲಾಗಿದೆ. ಈ ವೀಡಿಯೊ 89 ಸಾವಿರ ವೀಕ್ಷಣೆಗಳನ್ನು ಗಳಿಸಿದೆ.

ಸ್ಥಳೀಯ ಅಧಿಕಾರಿಗಳು ಈ ಘಟನೆಗೆ ಪ್ರತಿಕ್ರಿಯಿಸಿದ್ದು, ರಸ್ತೆಯಲ್ಲಿರುವ ಪ್ರಾಣಿಗಳ ಬಗ್ಗೆ ಜನರು ಜಾಗರೂಕರಾಗಿರುವಂತೆ ಸೂಚಿಸಿದ್ದಾರೆ. ಕೋತಿಗಳು, ಹೆಚ್ಚಾಗಿ ತಮಾಷೆಯಾಗಿ ಕಂಡರೂ, ಆಕ್ರಮಣ ಮಾಡಬಹುದು. ಒಂದು ವೇಳೆ ಅವುಗಳಿಗೆ ಹೆದರಿಸಿದೆ ಅಥವಾ ಅವುಗಳಿಗೆ ಹಸಿವಾದರೆ ಆಹಾರಕ್ಕಾಗಿ ಈ ರೀತಿ ದಾಳಿ ನಡೆಸಬಹುದು ಎಂದು ತಿಳಿಸಿದ್ದಾರೆ.

ಅಲ್ಲದೇ ವೈರಲ್ ಆದ ವಿಡಿಯೊದ ಬಗ್ಗೆ ಪ್ರಾಣಿಗಳಿಂದ ಸುರಕ್ಷಿತವಾಗಿರಲು ಮತ್ತು ಅಂತರ ಕಾಯ್ದುಕೊಳ್ಳುವ ಬಗ್ಗೆ ಆನ್‍ಲೈನ್‍ನಲ್ಲಿ ಚರ್ಚೆ ನಡೆಯುತ್ತಿದೆ. ಪ್ರಾಣಿಗಳು ದಾಳಿ ಮಾಡುವುದನ್ನು ತಪ್ಪಿಸಲು ಅವುಗಳಿಗೆ ಆಹಾರ ನೀಡುವುದು ಅಥವಾ ಅವುಗಳು ಹತ್ತಿರ ಬರುವುದನ್ನು ತಪ್ಪಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಕೋತಿಯ ದಾಳಿಗೆ ಒಳಗಾದ ಹುಡುಗಿ ಚೇತರಿಸಿಕೊಳ್ಳುತ್ತಿದ್ದಾಳೆ ಮತ್ತು ಅವಳಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಅವಳ ಕುಟುಂಬವು ತಿಳಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಆಸ್ತಿಗಾಗಿ ಅಕ್ಕನಿಗೆ ಕೊಡಲಿಯಿಂದ ಕೊಚ್ಚಿದ ತಮ್ಮ; ಭಯಾನಕ ವಿಡಿಯೊ

ಕೋತಿಗಳು ದಾಳಿ ನಡೆಸಿದ್ದು ಇದೇ ಮೊದಲಲ್ಲಾ. ಈ ಹಿಂದೆ ಮಥುರಾದ ವೃಂದಾವನದಲ್ಲಿ ಶುಕ್ರವಾರ ಜುಲೈ 12ರಂದು ಕಿಶನ್ ಎಂಬ 5 ವರ್ಷದ ಬಾಲಕ ಕೋತಿಗಳ ದಾಳಿಗೆ ಒಳಗಾಗಿದ್ದಾನೆ. ಮನೆಯಿಂದ ಹೊರಗೆ ಬಂದ ಬಾಲಕನ ಮೇಲೆ ಕೋತಿಗಳು ಒಟ್ಟಿಗೆ ಸೇರಿಕೊಂಡು ದಾಳಿ ಮಾಡಿ ಎಳೆದಾಡಿದ್ದವು. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

Continue Reading
Advertisement
Rohit Sharma
ಕ್ರೀಡೆ55 seconds ago

Rohit Sharma: ‘ಎಲಾ ಉನ್ನಾರು?’; ತೆಲುಗಿನಲ್ಲಿ ಮಾತನಾಡಿದ ರೋಹಿತ್ ಶರ್ಮ; ವಿಡಿಯೊ ವೈರಲ್​

karnataka rain
ಮಳೆ16 mins ago

Karnataka Rain : ಚಿಕ್ಕಮಗಳೂರು, ಹಾಸನದಲ್ಲಿ ಭಾರಿ ಮಳೆಗೆ ಮನೆಗಳು ನೆಲಸಮ

ಪ್ರಮುಖ ಸುದ್ದಿ24 mins ago

Karnataka Assembly Live: ಡಿಸಿಎಂ ಡಿಕೆ ಶಿವಕುಮಾರ್-‌ ಅಶ್ವಥ್‌ ನಾರಾಯಣ್‌ ವಾಗ್ಯುದ್ಧ; ಗದ್ದಲ

Alcohol Delivery
ದೇಶ27 mins ago

Alcohol Delivery: ಎಣ್ಣೆ ಪ್ರಿಯರಿಗೆ ಗುಡ್‌ ನ್ಯೂಸ್;‌ ಇನ್ನು ಸ್ವಿಗ್ಗಿಯಲ್ಲಿ ಮನೆ ಬಾಗಿಲಿಗೆ ಬರಲಿದೆ ಆಲ್ಕೋಹಾಲ್!

Doda Encounter
ದೇಶ29 mins ago

Doda Encounter: ಜಮ್ಮು- ಕಾಶ್ಮೀರದಲ್ಲಿ ಉಗ್ರರ ದಾಳಿ; ಬಿಜೆಪಿಯ ತಪ್ಪು ನೀತಿಯೇ ಕಾರಣ ಎಂದ ರಾಹುಲ್‌ ಗಾಂಧಿ

7th Pay Commission
ಕರ್ನಾಟಕ53 mins ago

7th Pay Commission: ರಜೆ, ಪಿಂಚಣಿ, ಬಡ್ತಿ; 7ನೇ ವೇತನ ಆಯೋಗದ ಜಾರಿ ಬಳಿಕ ಸಂಬಳದ ಜತೆ ಏನೆಲ್ಲ ಸೌಲಭ್ಯ ಸಿಗಲಿವೆ? ಇಲ್ಲಿದೆ ಮಾಹಿತಿ

IND vs SL
ಕ್ರಿಕೆಟ್54 mins ago

IND vs SL: ಶ್ರೀಲಂಕಾ ಪ್ರವಾಸಕ್ಕೆ ಇಂದು ಭಾರತ ತಂಡ ಪ್ರಕಟ ಸಾಧ್ಯತೆ: ಯಾರಿಗೆಲ್ಲ ಸಿಗಲಿದೆ ಅವಕಾಶ?

Gauri Lankesh murder
ಕ್ರೈಂ1 hour ago

Gauri Lankesh Murder: ಗೌರಿ ಲಂಕೇಶ್‌ ಹತ್ಯೆ ಪ್ರಕರಣದ 3 ಆರೋಪಿಗಳಿಗೆ ಜಾಮೀನು

karnataka Rain
ಮಳೆ1 hour ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

Road Accident
ದೇಶ1 hour ago

Road Accident: ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ವೇಯಲ್ಲಿ ಭೀಕರ ಅಪಘಾತ; ಪಂಢರಪುರಕ್ಕೆ ತೆರಳುತ್ತಿದ್ದ ಐವರು ಭಕ್ತರ ಸಾವು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 hour ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ19 hours ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 day ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ1 day ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

ಟ್ರೆಂಡಿಂಗ್‌