Viral Video: ನೋಡ ನೋಡ್ತಿದ್ದಂತೆ ಮೂರನೇ ಮಹಡಿಯಿಂದ ಬಿದ್ದ ಮಹಿಳೆ; ಶಾಕಿಂಗ್‌ ವಿಡಿಯೋ ವೈರಲ್‌ - Vistara News

ವೈರಲ್ ನ್ಯೂಸ್

Viral Video: ನೋಡ ನೋಡ್ತಿದ್ದಂತೆ ಮೂರನೇ ಮಹಡಿಯಿಂದ ಬಿದ್ದ ಮಹಿಳೆ; ಶಾಕಿಂಗ್‌ ವಿಡಿಯೋ ವೈರಲ್‌

Viral Video: ವಿಕಾಸ್‌ ನಾಕಾ ಪ್ರದೇಶದಲ್ಲಿರುವ ಗ್ಲೋಬ್‌ ಸ್ಟೇಟ್‌ ಎಂಬ ಕಟ್ಟಡದಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ಕಟ್ಟಡದಲ್ಲಿರುವ ಆಫೀಸ್‌ವೊಂದರಲ್ಲಿ ಕ್ಲೀನರ್‌ ಆಗಿ ಕೆಲಸ ಮಾಡುವ ಗುಡಿಯಾ ದೇವಿ, ಮೂರನೇ ಮಹಡಿಯಲ್ಲಿ ಬಾಲ್ಕನಿಯ ಬಡಿಯಲ್ಲಿ ತನ್ನ ಸ್ನೇಹಿತರೊಂದಿಗೆ ಕುಳಿತಿದ್ದಳು. ಆಗ ಅಲ್ಲಿಗೆ ಬಂದ ಆಕೆ ಸಹೋದ್ಯೋಗಿ ಬಂಟಿ ಆಕೆಯ ಜೊತೆ ಮಸ್ತಿ ಮಾಡುತ್ತಿದ್ದ. ತಕ್ಷಣ ಆತ ತನ್ನ ತೋಳನ್ನು ಆಕೆಯ ಭುಜದ ಮೇಲೆ ಇಟ್ಟಿದ್ದಾನೆ. ಇದರಿಂದ ಆಯ ತಪ್ಪಿದ ಗುಡಿಯಾ ಮೇಲಿನಿಂದ ಬಿದ್ದಿದ್ದಾಳೆ. ಇದೇ ವೇಳೆ ಬಂಟಿ ಕೂಡ ಬ್ಯಾಲೆನ್ಸ್‌ ತಪ್ಪಿ ಕೆಳಗೆ ಬೀಳುತ್ತಿದ್ದ. ಆದರೆ ಅದೃಷ್ಟವಶಾತ್‌ ಆತ ಪಾರಾಗಿದ್ದಾನೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಸ್ನೇಹಿತರೊಂದಿಗೆ ಮೋಜಿನಲ್ಲಿ ತೊಡಗಿದ್ದ ಮಹಿಳೆಯೊಬ್ಬಳು ಅಚಾನಕ್ಕಾಗಿ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರ(Maharashtra)ದಲ್ಲಿ ನಡೆದಿದೆ. ಮುಂಬೈಯ ದೋಂಬಿವಿಲ್‌ನ ವಿಕಾಸ್‌ ನಾಕಾ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೃತ ದುರ್ದೈವಿಯನ್ನು ಗುಡಿಯಾ ದೇವಿ ಎಂದು ಗುರುತಿಸಲಾಗಿದೆ. ಆಕೆಯ ಜೊತೆಗಿದ್ದ ವ್ಯಕ್ತಿಯೂ ಬೀಳಲಿದ್ದ. ಆದರೆ ಸ್ವಲ್ಪದರಲ್ಲೇ ಪಾರಾಗಿದ್ದಾನೆ. ಇನ್ನು ಘಟನೆಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗುತ್ತಿದೆ.

ವಿಕಾಸ್‌ ನಾಕಾ ಪ್ರದೇಶದಲ್ಲಿರುವ ಗ್ಲೋಬ್‌ ಸ್ಟೇಟ್‌ ಎಂಬ ಕಟ್ಟಡದಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ಕಟ್ಟಡದಲ್ಲಿರುವ ಆಫೀಸ್‌ವೊಂದರಲ್ಲಿ ಕ್ಲೀನರ್‌ ಆಗಿ ಕೆಲಸ ಮಾಡುವ ಗುಡಿಯಾ ದೇವಿ, ಮೂರನೇ ಮಹಡಿಯಲ್ಲಿ ಬಾಲ್ಕನಿಯ ಬಡಿಯಲ್ಲಿ ತನ್ನ ಸ್ನೇಹಿತರೊಂದಿಗೆ ಕುಳಿತಿದ್ದಳು. ಆಗ ಅಲ್ಲಿಗೆ ಬಂದ ಆಕೆ ಸಹೋದ್ಯೋಗಿ ಬಂಟಿ ಆಕೆಯ ಜೊತೆ ಮಸ್ತಿ ಮಾಡುತ್ತಿದ್ದ. ತಕ್ಷಣ ಆತ ತನ್ನ ತೋಳನ್ನು ಆಕೆಯ ಭುಜದ ಮೇಲೆ ಇಟ್ಟಿದ್ದಾನೆ. ಇದರಿಂದ ಆಯ ತಪ್ಪಿದ ಗುಡಿಯಾ ಮೇಲಿನಿಂದ ಬಿದ್ದಿದ್ದಾಳೆ. ಇದೇ ವೇಳೆ ಬಂಟಿ ಕೂಡ ಬ್ಯಾಲೆನ್ಸ್‌ ತಪ್ಪಿ ಕೆಳಗೆ ಬೀಳುತ್ತಿದ್ದ. ಆದರೆ ಅದೃಷ್ಟವಶಾತ್‌ ಆತ ಪಾರಾಗಿದ್ದಾನೆ.

ಇನ್ನು ನೆಲಕ್ಕೆ ಬೀಳುತ್ತಿದ್ದಂತೆ ಗುಡಿಯಾ ತಲೆಗೆ ಗಂಭೀರವಾದ ಏಟು ಬಿದ್ದಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಸ್ಥಳಕ್ಕೆ ಮನ್ಪದಾ ಪೊಲೀಸರು ದೌಡಾಯಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಇಂತಹದ್ದೇ ಒಂದು ಘಟನೆ ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿತ್ತು. ಮನೆಯೊಳಗಿದ್ದ ಕಿಟಕಿಯನ್ನು ಕ್ಲೀನ್‌ ಮಾಡುವಾಗ ಮಹಿಳೆಯೊಬ್ಬರ ಕಾಲು ಜಾರಿದ್ದು ಆಯತಪ್ಪಿ 5ನೇ ಮಹಡಿಯಿಂದ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಖುಷ್ಬು ಅಶೀಷ್ ತ್ರಿವೇದಿ (31) ಎಂಬಾಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾಡುಗೋಡಿ ಸಮೀಪದ ದೊಡ್ಡಬನಹಳ್ಳಿಯ ಬಿಡಿಎ ವಿಂಧ್ಯಗಿರಿ ಅಪಾರ್ಟ್‌ಮೆಂಟ್‌ನಲ್ಲಿ ಈ ದುರ್ಘಟನೆ ಸಂಭವಿಸಿತ್ತು.

ಖುಷ್ಬು ಅವರು ಮನೆಯೊಳಗಿದ್ದ ಟೇಬಲ್‌ ಮೇಲೆ ನಿಂತು ಕಿಟಕಿ ಬಳಿಯಿದ್ದ ಧೂಳನ್ನು ಸ್ವಚ್ಛಗೊಳಿಸುತ್ತಿದ್ದರು. ಈ ಸಂದರ್ಭದಲ್ಲಿ ಒಮ್ಮೆ ಕಾಲು ಜಾರಿದೆ ಅಷ್ಟೇ ಅದೇ ಕಿಟಕಿಯಿಂದ ಕೆಳಗೆ ಬಿದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ, ಆದರೆ ಆದಾಗಲೇ ಖಷ್ಬು ಮೃತಪಟ್ಟಿದ್ದಾರೆ. ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಘಟನೆಗೆ ಕಿಟಕಿಗೆ ಗ್ರಿಲ್ ಅಳವಡಿಸದೇ ಇರುವುದೇ ಕಾರಣ ಎಂದು ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇನ್ನು ಈ ಸಂಬಂಧ ಸಾಮಾಜಿಕ ಹೋರಾಟಗಾರ ಸುಭಾಷ್‌ ಎಂಬುವವರು ದೂರು ದಾಖಲಿಸಿದ್ದಾರೆ. ಕಾಡುಗೋಡಿ ದೊಡ್ಡಬನಹಳ್ಳಿ ರಸ್ತೆಯಲ್ಲಿರುವ ಬಿ.ಡಿ.ಎ ವಿಧ್ಯಾಗಿರಿ ವಸತಿ ಸಮುಚ್ಚಯದಲ್ಲಿ 18 ಮಹಡಿಗಳಲ್ಲಿ ಸುಮಾರು 750 ಪ್ಲಾಟ್‌ಗಳನ್ನು ಹೊಂದಿದೆ. ಆದರೆ ಈ ಅಪಾರ್ಟ್‌ಮೆಂಟ್‌ನಲ್ಲಿ ತುರ್ತು ನಿರ್ಗಮನ, ಪ್ರಥಮ ಚಿಕಿತ್ಸೆ, ಫೈರ್ ಸೇಫ್ಟಿ, ಸೇಫ್ಟಿ ಮೇಸ್ ಇತ್ಯಾದಿ ಯಾವುದೇ ಸುರಕ್ಷತಾ ಕ್ರಮಗಳು ಇಲ್ಲದೇ ಇದ್ದರೂ, ಸಾರ್ವಜನಿಕರಿಗೆ ವಾಸ ಮಾಡಲು ಹಂಚಿಕೆ ಮಾಡಿದ್ದಾರೆ.

ಇತ್ತೀಚೆಗೆ ನವ ವಿವಾಹಿತೆ ಖುಷ್ಬು ಎಂಬುವವರು 5 ನೇ ಮಹಡಿಯಿಂದ ಬಿದ್ದು ಮೃತ ಪಟ್ಟಿದ್ದಾರೆ. ಇದಕ್ಕೆಲ್ಲಾ ವಿಧ್ಯಾಗಿರಿ ವಸತಿ ಸಮುಚ್ಚಯದ ಅಸೋಶಿಯೇಟ್ ನಾರಾಯಣಸ್ವಾಮಿ, ಅಧಿಕಾರಿಗಳಾದ ಎ.ಇ.ಇ ಉದಯ ಕುಮಾರ್, ಇ.ಇಮೋಹನ್, ಎ.ಇ ಸುನೀಲ್‌ ನೇರ ಹೊಣೆ ಆಗಿದ್ದಾರೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಿ ಎಂದು ದೂರು ನೀಡಿದ್ದಾರೆ.

ಇದನ್ನೂ ಓದಿ:Urfi Javed: ಮತ್ತೆ ಕುಡಿದು ತೇಲಾಡಿದ ಉರ್ಫಿ ಜಾವೇದ್; ವಿಡಿಯೊ ವೈರಲ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ಡಿಸಿ ಆಫೀಸ್‌ನಲ್ಲಿ ಗೋಳಾಡುತ್ತಾ ನೆಲದಲ್ಲಿ ಹೊರಳಾಡಿದ ರೈತ; ವೈರಲಾಗ್ತಿದೆ ಈ ವಿಡಿಯೋ

Viral Video: ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ ಶಂಕರಲಾಲ್, ”ಭೂಮಾಫಿಯಾದಿಂದ ನನಗೆ ತೊಂದರೆಯಾಗಿದೆ, ತಹಸೀಲ್ದಾರ್ ತಪ್ಪು ಮಾಡುತ್ತಾರೆ, ರೈತರು ಅನುಭವಿಸುತ್ತಾರೆ, ಅವರು ತಪ್ಪು ಮಾಡುತ್ತಾರೆ, ಅದರ ಪರಿಣಾಮವನ್ನು ನಾನು ಅನುಭವಿಸುತ್ತೇನೆ, ನನಗೆ ಸರ್ಕಾರ ಮತ್ತು ಆಡಳಿತದ ಬಗ್ಗೆ ಅಸಮಾಧಾನವಿದೆ. ಇಲ್ಲಿ ನಾವು ಭ್ರಷ್ಟರಾಗಿದ್ದೇವೆ… ರೈತರಿಗೆ ವಂಚನೆಯಾಗುತ್ತಿದೆ ಎಂದು ಕೈ ಮುಗಿದು ನೆಲದಲ್ಲಿ ಹೊರಳಾಡಿದ್ದಾನೆ.

VISTARANEWS.COM


on

Viral Video
Koo

ಭೋಪಾಲ್‌: ಹರಿದ ಧೋತಿ ತೊಟ್ಟು, ದಯಮಾಡಿ ಪರಿಹಾರ ನೀಡಿ ಎಂದು ಬೇಡುತ್ತಾ ವೃದ್ಧನೋರ್ವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉರುಳಾಡುತ್ತಾ ಗೋಳಾಡುತ್ತಿರುವ ದೃಶ್ಯ ಎಂಥವರ ಮನಸ್ಸು ಕರಗುವಂತೆ ಮಾಡಿತ್ತು. ಈ ದೃಶ್ಯ ಕಂಡು ಬಂದಿದ್ದು ಮಧ್ಯಪ್ರದೇಶ(Madhya Pradesh)ದ ಮಂಡ್‌ಸೌರ್‌ನಲ್ಲಿ. ಸ್ಥಳೀಯ ಭೂ ಮಾಫಿಯಾಗೆ ಬಳಿಯಾಗಿ ಭೂಮಿ ಕಳೆದುಕೊಂಡು ರೈತ ಗೋಳಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ(Viral Video).

ಈ ಕುರಿತು ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ರೈತ ಶಂಕರಲಾಲ್‌ ಜಿಲ್ಲಾಧಿಕಾರಿ ಕಚೇರಿ ಸಭಾಂಗಣಕ್ಕೆ ತೆರಳಿ ಗಮನ ಸೆಳೆದರು. ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ ಶಂಕರಲಾಲ್, ”ಭೂಮಾಫಿಯಾದಿಂದ ನನಗೆ ತೊಂದರೆಯಾಗಿದೆ, ತಹಸೀಲ್ದಾರ್ ತಪ್ಪು ಮಾಡುತ್ತಾರೆ, ರೈತರು ಅನುಭವಿಸುತ್ತಾರೆ, ಅವರು ತಪ್ಪು ಮಾಡುತ್ತಾರೆ, ಅದರ ಪರಿಣಾಮವನ್ನು ನಾನು ಅನುಭವಿಸುತ್ತೇನೆ, ನನಗೆ ಸರ್ಕಾರ ಮತ್ತು ಆಡಳಿತದ ಬಗ್ಗೆ ಅಸಮಾಧಾನವಿದೆ. ಇಲ್ಲಿ ನಾವು ಭ್ರಷ್ಟರಾಗಿದ್ದೇವೆ… ರೈತರಿಗೆ ವಂಚನೆಯಾಗುತ್ತಿದೆ ಎಂದು ಕೈ ಮುಗಿದು ನೆಲದಲ್ಲಿ ಹೊರಳಾಡಿದ್ದಾನೆ.

ಘಟನೆ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ದಿಲೀಪ್ ಯಾದವ್, ‘ಸಾರ್ವಜನಿಕ ವಿಚಾರಣೆಯಲ್ಲಿ ಬರುವ ಎಲ್ಲಾ ಪ್ರಕರಣಗಳನ್ನು ತಕ್ಷಣವೇ ಪರಿಹರಿಸಲಾಗುತ್ತದೆ. ಮಂಗಳವಾರ ನಡೆದ ವಿಚಾರಣೆಗೆ ಹಲವು ಮಂದಿ ಹಾಜರಾಗಿದ್ದು, ಅವರ ಸಮಸ್ಯೆಗಳನ್ನು ಆಲಿಸಿ ಸಾಧ್ಯವಾದಷ್ಟು ಪರಿಹರಿಸಲಾಗಿದೆ ಎಂದ ಅವರು, ಹಿಂದಿನ ಸಾರ್ವಜನಿಕ ವಿಚಾರಣೆಗಳ ಪ್ರಕರಣಗಳನ್ನೂ ಪರಿಶೀಲಿಸಲಾಗಿದೆ ಎಂದರು.

ದೂರುದಾರರು ವಿವಾದಿತ ಭೂಮಿಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ ಎಂದು ಸ್ಥಳೀಯ ಆಡಳಿತ ಸ್ಪಷ್ಟಪಡಿಸಿದೆ. ಸದ್ಯ ಶಂಕರ್ ಮತ್ತು ಅವರ ಕುಟುಂಬದವರು ಜಮೀನು ಹೊಂದಿದ್ದಾರೆ. ಈ ಹಿಂದೆ ಷೇರುದಾರರು ಮಾರಾಟ ಮಾಡಿದ ಅರ್ಧದಷ್ಟು ಭೂಮಿಯನ್ನು ಖರೀದಿದಾರರು ಸ್ವಾಧೀನಪಡಿಸಿಕೊಂಡಿಲ್ಲ. ಸ್ಥಳೀಯ ಆಡಳಿತ ನೀಡಿದ ದಾಖಲೆಗಳ ಆಧಾರದ ಮೇಲೆ ತಹಸೀಲ್ದಾರ್ ಸಲ್ಲಿಸಿದ ತನಿಖಾ ವರದಿ ಪ್ರಕಾರ, ಸುಖದ್ ಗ್ರಾಮದಲ್ಲಿ ವಿಸ್ತೀರ್ಣ ಸಂಖ್ಯೆ 604 ರಲ್ಲಿ 2.5 ಹೆಕ್ಟೇರ್ ಜಮೀನು ಇದ್ದು, ಸರ್ವೆ ಸಂಖ್ಯೆ 625 ರಲ್ಲಿ 1.01 ಹೆಕ್ಟೇರ್ ಇದೆ.

2010 ರ ಡಿಸೆಂಬರ್ 31 ರಂದು ಮಾರಾಟ ಪತ್ರದ ಪ್ರಕಾರ ಈ ಭೂಮಿಯನ್ನು ಮಂದಸೌರ್ ನಿವಾಸಿ ನಾರಾಯಣ ರಾವ್ ಅವರ ಮಗ ಅಶ್ವಿನ್ ಎಂಬುವವರಿಗೆ ಮಾರಾಟ ಮಾಡಲಾಗಿದೆ. ಈ ಭೂಮಿಯನ್ನು ಹಸ್ತಾಂತರಿಸಲು ಅಂದಿನ ತಹಸೀಲ್ದಾರ್ ಸೀತಾಮೌ ಅವರು 2010 ರಲ್ಲಿ ಅನುಮೋದನೆ ನೀಡಿದರು. ಆದಾಗ್ಯೂ, ಮಾರಾಟವಾದ ಭೂಮಿ ಕರು ಲಾಲ್, ರಾಮಲಾಲ್, ಪ್ರಭು ಲಾಲ್, ಮಂಗಿ ಬಾಯಿ ಮತ್ತು ಪಾರ್ವತಿ ಬಾಯಿ ಅವರ ಸ್ವಾಧೀನದಲ್ಲಿ ಉಳಿದಿದೆ, ಅವರು ಅದನ್ನು ಅಶ್ವಿನ್‌ಗೆ ಹಸ್ತಾಂತರಿಸಲು ಸಿದ್ಧರಿಲ್ಲ.

ಇದನ್ನೂ ಓದಿ: Muharram 2024: ಏಕತೆಯ ಸಂದೇಶ ಸಾರುವ ಮುಹರ್ರಮ್ ಆಚರಣೆ

Continue Reading

ವೈರಲ್ ನ್ಯೂಸ್

Viral Video: 300 ಮೊಸಳೆಗಳಿರುವ ಕೆರೆಯಲ್ಲಿ ಬೈಕ್‌, ಕಾರು ಸ್ಟಂಟ್‌; ಹುಚ್ಚಾಟ ಮೆರೆದ ಯುವಕರಿಗೆ ಆಗಿದ್ದೇನು ಗೊತ್ತಾ?

Viral Video: ರೀಲ್ಸ್‌ಗಾಗಿ ಅನೇಕ ಯುವಕರು ನೀರಿನಲ್ಲಿ ಬೈಕ್‌ ಮತ್ತು ಕಾರು ಚಲಾಯಿಸಿದ್ದಾರೆ. ಅಲ್ಲದದೇ ಕೆರೆಯ ಬದಿಯಲ್ಲಿ ಮೊಸಳೆಗಳು ಓಡಾಡುತ್ತಿರುವುದನ್ನೂ ವಿಡಿಯೋದಲ್ಲೀ ಕಾಣಬಹುದಾಗಿದೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಕಾರು ಮತ್ತು ಏಳು ಬೈಕ್‌ ಸೇರಿ ಯುವಕರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

VISTARANEWS.COM


on

Viral Video
Koo

ಜೈಪುರ: ಇತ್ತೀಚೆಗೆ ಯುವಕರ ರೀಲ್ಸ್‌(Reels) ಹುಚ್ಚು ಎಂತೆಂಥಾ ಅಪಾಯವನ್ನು ತಂದೊಡ್ಡುತ್ತದೆ ಎಂದರೆ ಅದನ್ನು ಊಹಿಸಲೂ ಸಾಧ್ಯವಿಲ್ಲ. ಪ್ರಾಣವನ್ನೂ ಲೆಕ್ಕಿಸದೇ ರೀಲ್ಸ್‌ಗಾಗಿ ಸಾರ್ವಜನಿಕ ಸ್ಥಳದಲ್ಲಿ ಹುಚ್ಚಾಟ ಮೆರೆಯುತ್ತಿರುತ್ತಾರೆ. ಅಂತಹದ್ದೇ ಒಂದು ಘಟನೆ ರಾಜಸ್ಥಾನದಲ್ಲಿ ವರದಿಯಾಗಿದೆ. ಬರೋಬ್ಬರಿ 300 ಮೊಸಳೆಗಳ ಅಭಯಾರಣ್ಯದ(Crocodile Lake) ಕೆರೆಯಲ್ಲಿ ಅಪಾಯಕಾರಿ ಬೈಕ್‌, ಕಾರು ಸ್ಟಂಟ್‌ ಮಾಡುವ ಮೂಲಕ ಯುವಕರು ಹುಚ್ಚಾಟ ಮೆರೆದಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್‌ (Viral Video) ಆಗಿದ್ದು, ಪೊಲೀಸರು 20 ಮಂದಿ ಯುವಕರನ್ನು ಅರೆಸ್ಟ್‌ ಮಾಡಿದ್ದಾರೆ. ರಾಜಸ್ಥಾನದ ಆಲ್ವಾರ್‌ ಜಿಲ್ಲೆಯಲ್ಲಿರುವ ಸಿಲಿಸೆಹ್ರ್‌ ಮೊಸಳೆ ಪಾರ್ಕ್‌ನಲ್ಲಿ ಯುವಕರು ಹುಚ್ಚಾಟ ಮೆರೆದಿದ್ದಾರೆ.

ರೀಲ್ಸ್‌ಗಾಗಿ ಅನೇಕ ಯುವಕರು ನೀರಿನಲ್ಲಿ ಬೈಕ್‌ ಮತ್ತು ಕಾರು ಚಲಾಯಿಸಿದ್ದಾರೆ. ಅಲ್ಲದದೇ ಕೆರೆಯ ಬದಿಯಲ್ಲಿ ಮೊಸಳೆಗಳು ಓಡಾಡುತ್ತಿರುವುದನ್ನೂ ವಿಡಿಯೋದಲ್ಲೀ ಕಾಣಬಹುದಾಗಿದೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಕಾರು ಮತ್ತು ಏಳು ಬೈಕ್‌ ಸೇರಿ ಯುವಕರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಗುರುಮೇಲ್ ಸಿಂಗ್ (28), ಯೋಗೇಶ್ (23), ಕೃಷ್ಣ (23), ಪುನೀತ್ (19), ಸಚಿನ್ (27), ಶಿವಚರಣ್ (29), ಎಲ್ಲರೂ ಸೊರ್ಖಾ ಕಾಲಾ ಗ್ರಾಮದ ನಿವಾಸಿಗಳು ಮತ್ತು ಉದಯ್ (18) ಬರೋಡಾದಿಂದ ಏಳು ವ್ಯಕ್ತಿಗಳನ್ನು ಅರೆಸ್ಟ್‌ ಮಾಡಲಾಗಿತ್ತು. ಮರುದಿನ 13 ಇತರರನ್ನು ಬಂಧಿಸಲಾಯಿತು.

ಅಲ್ವಾರ್ ಪೊಲೀಸ್ ಅಧೀಕ್ಷಕ ಆನಂದ್ ಶರ್ಮಾ ಅವರು, ಸಿಲಿಸೆರ್ಹ್ ಸರೋವರ ಮತ್ತು ನಟ್ನಿ ಕಾ ಬಾರಾದಂತಹ ಪ್ರವಾಸಿ ಸ್ಥಳಗಳ ಬಳಿ ಇಂತಹ ಸಾಹಸಗಳನ್ನು ಮಾಡುವ ಮೂಲಕ ಯಾರಾದರೂ ತಮ್ಮನ್ನು ಅಥವಾ ವನ್ಯಜೀವಿಗಳಿಗೆ ಅಪಾಯವನ್ನುಂಟುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ಅಜಾಗರೂಕ ಕೃತ್ಯಗಳು ಭಾಗಿಯಾಗಿರುವವರ ಜೀವಕ್ಕೆ ಅಪಾಯವನ್ನುಂಟುಮಾಡುವುದು ಮಾತ್ರವಲ್ಲದೆ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ತೊಂದರೆಯಾಗುತ್ತದೆ ಎಂದು ಅವರು ಒತ್ತಿ ಹೇಳಿದರು.

ಅಲ್ವಾರ್ ಪೊಲೀಸರು ಈ ಪ್ರದೇಶಗಳಲ್ಲಿ ಗಸ್ತು ತೀವ್ರಗೊಳಿಸಿದ್ದಾರೆ ಮತ್ತು ಪ್ರವಾಸಿಗರು ಮತ್ತು ವನ್ಯಜೀವಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಿಬ್ಬಂದಿಯನ್ನು ನಿಯೋಜಿಸುತ್ತಿದ್ದಾರೆ. ಕೆರೆಗೆ ಹೋಗುವ ಅನಧಿಕೃತ ರಸ್ತೆಗಳನ್ನೂ ಅಧಿಕಾರಿಗಳು ಮುಚ್ಚಿದ್ದಾರೆ. ಸಾಮಾಜಿಕ ಮಾಧ್ಯಮದ ಜನಪ್ರಿಯತೆಗಾಗಿ ಯುವಕರು ಇಂತಹ ಅಪಾಯಕಾರಿ ನಡವಳಿಕೆಯಿಂದ ದೂರವಿರಬೇಕು ಎಂದು ಪೊಲೀಸರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Viral Video: ಸಫಾರಿಯಲ್ಲಿ ಪ್ರವಾಸಿಗರ ಎದುರೇ ಸಿಂಹಗಳ ಕಾಮಕೇಳಿ!

Continue Reading

ವೈರಲ್ ನ್ಯೂಸ್

Viral Video: ಸಫಾರಿಯಲ್ಲಿ ಪ್ರವಾಸಿಗರ ಎದುರೇ ಸಿಂಹಗಳ ಕಾಮಕೇಳಿ!

Viral Video: ಸಿಂಹಗಳ ಖಾಸಗಿ ಕ್ಷಣ ವಿಡಿಯೊದಲ್ಲಿ ವೈರಲ್‌ ಆಗಿದೆ. ಸಿಂಹದ ಜೋಡಿಯೊಂದು ಕಾಮಕೇಳಿಯಲ್ಲಿ ತೊಡಗಿಸಿಕೊಂಡಿರುವ ವಿಡಿಯೊ ಇದಾಗಿದ್ದು, ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹರಿದಾಡುತ್ತಿದೆ. ಈ ವಿಡಿಯೊದಲ್ಲಿ ನಡುರಸ್ತೆಯಲ್ಲೇ, ಹಲವು ವಾಹನ, ಪ್ರವಾಸಿಗರ ಎದುರೇ ಕಾಡಿನ ರಾಜ ತನ್ನ ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿರುವುದು ಕಂಡು ಬಂದಿದೆ. ಈ ವೇಳೆ ಪ್ರವಾಸಿಗರು ಈ ಅಪರೂಪದ ಕ್ಷಣಗಳನ್ನು ತಮ್ಮ ಮೊಬೈಲ್‌, ಕ್ರಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

VISTARANEWS.COM


on

Viral Video
Koo

ನವದೆಹಲಿ: ಕಾಡು ಪ್ರಾಣಿಗಳನ್ನು ಹತ್ತಿರದಿಂದ ನೋಡಲು, ಅವುಗಳು ಮುಕ್ತವಾಗಿ ಓಡಾಡಿಕೊಂಡುವುದನ್ನು ಗಮನಿಸಲು ಹಲವರು ಸಫಾರಿ (Safari) ಹೋಗುವುದನ್ನು ಇಷ್ಟಪಡುತ್ತಾರೆ. ಮೃಗಾಲಯಗಳು, ರಾಷ್ಟ್ರೀಯ ಉದ್ಯಾನವನಗಳು, ಹುಲಿ ಸಂರಕ್ಷಿತ ಪ್ರದೇಶಗಳು, ವನ್ಯಜೀವಿ ಅಭಯಾರಣ್ಯಗಳು ಪ್ರವಾಸಿಗರಿಗೆ ಸಫಾರಿ ಸೌಲಭ್ಯಗಳನ್ನು ಒದಗಿಸುತ್ತವೆ. ತೆರೆದ ವಾಹನದಲ್ಲಿ ಪ್ರಯಾಣಿಸುತ್ತ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಂಡು, ಕಾಡು ಪ್ರಾಣಿಗಳನ್ನು ಸಮೀಪದಲ್ಲೇ ನೋಡುವುದು ರೋಮಾಂಚನಕಾರಿ ಅನುಭವ ನೀಡುತ್ತದೆ. ಈ ಅನುಭವ ನಿಮಗೂ ಆಗಿರಬಹುದು. ಇದೀಗ ಅಂತಹ ಸಫಾರಿಯ ವಿಡಿಯೊವೊಂದು ವೈರಲ್‌ ಆಗುತ್ತಿದೆ. ಸಿಂಹಗಳ ಖಾಸಗಿ ಕ್ಷಣ ಈ ವಿಡಿಯೊದಲ್ಲಿ ಸೆರೆಯಾಗಿದೆ (Viral Video).

ಸಿಂಹದ ಜೋಡಿಯೊಂದು ಕಾಮಕೇಳಿಯಲ್ಲಿ ತೊಡಗಿಸಿಕೊಂಡಿರುವ ವಿಡಿಯೊ ಇದಾಗಿದ್ದು, ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹರಿದಾಡುತ್ತಿದೆ. ಈ ವಿಡಿಯೊವನ್ನು ಎಲ್ಲಿ ಸೆರೆ ಹಿಡಿಯಲಾಗಿದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ವಿಡಿಯೊವನ್ನು ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.

ಸಾಮಾನ್ಯವಾಗಿ ಸಿಂಹಗಳು ಸಂಕೋಚದ ಪ್ರಾಣಿಗಳು. ದಟ್ಟ ಕಾಡುಗಳಲ್ಲಿ ವಾಸಿಸುವ ಅವು ಜನವಸತಿ ಪ್ರದೇಶಗಳಿಗೆ ಆಗಮಿಸುವುದು ಅಪರೂಪ. ಆದರೆ ಈ ವಿಡಿಯೊದಲ್ಲಿ ನಡುರಸ್ತೆಯಲ್ಲೇ, ಹಲವು ವಾಹನ, ಪ್ರವಾಸಿಗರ ಎದುರೇ ಕಾಡಿನ ರಾಜ ತನ್ನ ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿರುವುದು ಕಂಡು ಬಂದಿದೆ. ಈ ವೇಳೆ ಪ್ರವಾಸಿಗರು ಈ ಅಪರೂಪದ ಕ್ಷಣಗಳನ್ನು ತಮ್ಮ ಮೊಬೈಲ್‌, ಕ್ರಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. 18 ಸೆಕೆಂಡ್‌ನ ಈ ವಿಡಿಯೊವನ್ನು ಈಗಾಗಲೇ 35 ಲಕ್ಷಕ್ಕೂ ಅದಿಕ ಮಂದಿ ವೀಕ್ಷಿಸಿದ್ದಾರೆ.

ನೆಟ್ಟಿಗರು ಏನಂದ್ರು?

ಇನ್ನು ವಿಡಿಯೊ ನೋಡಿದ ನೆಟ್ಟಿಗರ ಮಜವಾದ ಕಮೆಂಟ್‌ ಪಾಸ್‌ ಮಾಡುತ್ತಿದ್ದಾರೆ. ಜತೆಗೆ ಎಲ್ಲವನ್ನೂ ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಪ್ರವೃತ್ತಿಗೆ ಛೀಮಾರಿ ಹಾಕಿದ್ದಾರೆ. ಪ್ರಾಣಿಗಳಿಗೆ ಅವುಗಳದ್ದೇ ಆದ ಖಾಸಗಿ ಕ್ಷಣಗಳಿರುತ್ತವೆ. ಅದನ್ನು ಗೌರವಿಸಿ ಹಲವರು ಹೇಳಿದ್ದಾರೆ.

ವಾಹನದ ಮೇಲೆಯೇ ಕಾಮಕೇಳಿ ಆರಂಭಿಸಿದ ಸಿಂಹಗಳು

ಕೆಲವು ದಿನಗಳ ಹಿಂದೆ ಪ್ರವಾಸಿಗರ ಸಫಾರಿ ಟ್ರಕ್‌ ಮೇಲೇರಿದ್ದ ಸಿಂಹಗಳ ಜೋಡಿ ಕಾಮಕೇಳಿಯಲ್ಲಿ ತೊಡಗಿಸಿಕೊಂಡಿದ್ದ ವಿಡಿಯೊ ವೈರಲ್‌ ಆಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ಈ ಘಟನೆ ನಡೆದಿತ್ತು. ಪ್ರವಾಸಿಗರು ಆಗಮಿಸಿದ್ದ ಟ್ರಕ್‌ ಅನ್ನೇ ಬೆಡ್‌ ಆಗಿಸಿಕೊಂಡ ಸಿಂಹಗಳು ತಮ್ಮ ಖಾಸಗಿ ಕ್ಷಣಗಳನ್ನು ಆನಂದಿಸುತ್ತಿರುವ ವಿಡಿಯೊ ಕ್ಯಾಮೆರಾದಲ್ಲಿ ಸೆರೆಯಾಗಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು.

ಸಿಂಹವು ಕಿರುಚುತ್ತಾ ಸಂಭೋಗಿಸಲು ಪ್ರಾರಂಭಿಸಿದಾಗ, ಪ್ರವಾಸಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು. ಆ ಪೈಕಿ ಕೆಲವರು ನಾಚಿಕೆಯಿಂದ ಕಣ್ಣುಗಳನ್ನು ಮುಚ್ಚಿಕೊಂಡರೆ, ಹಲವರು ತಮ್ಮ ಕ್ಯಾಮೆರಾ, ಫೋನ್‌ಗಳಿಂದ ಅಪರೂಪದ ಘಟನೆಯನ್ನು ಸೆರೆ ಹಿಡಿಯತೊಡಗಿದ್ದರು. ಸಿಂಹಗಳ ಚಲನವಲನಗಳಿಂದ ಟ್ರಕ್‌ ಅಲುಗಾಡುತ್ತಿತ್ತು. ಆದರೂ ಪ್ರವಾಸಿಗರು ಕಿರುಚದೆ, ಸಿಂಹದ ಆನಂದದ ಕ್ಷಣಕ್ಕೆ ಭಂಗ ತರದೆ ಸಹಕರಿಸಿದ್ದರು. ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದ್ದ ಈ ವಿಡಿಯೊವನ್ನೂ ಲಕ್ಷಾಂತರ ಮಂದಿ ನೋಡಿದ್ದಾರೆ. ಒಟ್ಟಿನಲ್ಲಿ ಕಾಡು ಪ್ರಾಣಿಗಳ ರಸ ನಿಮಿಷ, ಅಪರೂಪದ ಕ್ಷಣಗಳು ಹಲವರಲ್ಲಿ ಕುತೂಹಲ ಹುಟ್ಟಿಸುವುದಂತು ಸತ್ಯ.

ಇದನ್ನೂ ಓದಿ: Viral Video: 600 ಲೋಡರ್‌ ಹುದ್ದೆಗಳಿಗೆ 25,000ಕ್ಕೂ ಹೆಚ್ಚು ಅಭ್ಯರ್ಥಿಗಳು! ಕಾಲ್ತುಳಿತದ ಸನ್ನಿವೇಶ

Continue Reading

ಪ್ರಮುಖ ಸುದ್ದಿ

Viral News : ಕುವೈಟ್​ನಲ್ಲಿ ಈ ಚಪ್ಪಲಿಗೆ 1 ಲಕ್ಷ ರೂಪಾಯಿಯಂತೆ; ನಮ್ಮಲ್ಲಿ ಇದು ಬಾತ್​ರೂಮ್​ಗೆ ಹೋಗುವ ಚಪ್ಪಲಿ ಎಂದ ನೆಟ್ಟಿಗರು!

Viral News ಕೆಲವರು ಉಡುಪಿಗೆ ತಕ್ಕ ಹಾಗೇ ಚಪ್ಪಲಿ ಹಾಕುತ್ತಾರೆ. ಇನ್ನು ಕೆಲವರು ತಮ್ಮ ಇಡೀ ಜೀವಮಾನವನ್ನು ಹರಿದ ಚಪ್ಪಲಿಯಲ್ಲಿಯೇ ಕಳೆಯುತ್ತಾರೆ.ಆದರೆ ಕುವೈಟ್‌ನ ಸ್ಟೋರ್‌ ಒಂದರಲ್ಲಿ ಸುಮಾರು 4,500 ರಿಯಾಲ್ (1 ಲಕ್ಷ ರೂ.) ಗೆ ಚಪ್ಪಲಿಗಳನ್ನು ಮಾರಾಟ ಮಾಡುತ್ತಿರುವ ಸುದ್ದಿಯೊಂದು ವೈರಲ್ ಆಗಿದೆ.”4500 ರಿಯಾಲ್ ಬೆಲೆಗೆ ಇತ್ತೀಚಿನ ಫ್ಯಾಷನ್ ಜನೌಬಾ” ಎಂದು ಶೀರ್ಷಿಕೆ ನೀಡಲಾಗಿದೆ. ಜನರು ಸೋಶಿಯಲ್ ಮೀಡಿಯಾದಲ್ಲಿ ಇದರ ಬೆಲೆಯ ಬಗ್ಗೆ ಟೀಕಿಸಿದ್ದಾರೆ.

VISTARANEWS.COM


on

Viral News
Koo

ಕುವೈಟ್ : ದಿನ ಬಳಕೆಯ ವಸ್ತುಗಳ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಇದರಿಂದ ಇಂದಿನ ಕಾಲದಲ್ಲಿ ಬಡವರು ಮತ್ತು ಮಧ್ಯಮ ವರ್ಗದವರಿಗೆ ಜೀವನ ನಡೆಸುವುದೇ ಒಂದು ಸವಾಲಿನ ಕೆಲಸವಾಗಿದೆ. ಕೆಲವರು ವರ್ಷಗಳ ಹಿಂದೆ 100 ರೂಪಾಯಿ ಇದ್ದ ಸಾಮಾನ್ಯವಾಗಿ ಚಪ್ಪಲೆಯ ಬೆಲೆಯೂ 300ರಿಂದ400 ಇರುತ್ತದೆ. ಇನ್ನು ಫಂಕ್ಷನ್‌ಗಳಿಗೆ ಬಳಸುವಂತಹ ಚಪ್ಪಲಿಗಳ ಬೆಲೆ ಕೇಳುವ ಹಾಗಿಲ್ಲ. ಅದೇನೇ ಇದ್ದರೂ ಒಂದು ಚಪ್ಪಲಿಯ ಬೆಲೆ ಒಂದು ಲಕ್ಷ ರೂಪಾಯಿ ಇರಲು ಸಾಧ್ಯವೇ. ಅದೂ ದಶಕಗಳ ಹಿಂದೆ ಜನರು ಧರಿಸುತ್ತಿದ್ದ ಹವಾಯಿ ರೀತಿಯ ಚಪ್ಪಲಿಗೆ ಒಂದು ಲಕ್ಷ ರೂಪಾಯಿ ಇರಬಹುದೇ? ಖಂಡಿತಾ ಇದೆ. ಆದರೆ ಅದು ನಮ್ಮ ದೇಶದಲ್ಲಿ ಅಲ್ಲ. ಕುವೈಟ್‌ನಲ್ಲಿ. ಆದರೆ, ಚಪ್ಪಲಿಯ ಬೆಲೆ ವೈರಲ್ (Viral News) ಆಗುತ್ತಿದ್ದಂತೆ ಅದರ ಕುರಿತು ಬಗೆಬಗೆಯ ಕಾಮೆಂಟ್​ಗಳೂ ಶೇರ್ ಆಗುತ್ತಿವೆ. ಬಾತ್​ರೂಮ್​ಗೆ ಹಾಕುವಂಥ ಚಪ್ಪಲಿಗೆ ಇಷ್ಟೊಂದು ರೇಟಾ ಎಂಬುದೇ ಜನರ ಮೊದಲ ಪ್ರಶ್ನೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪೋಸ್ಟ್‌ನಲ್ಲಿ ಕುವೈಟ್‌ನ ಸ್ಟೋರ್ ಒಂದರಲ್ಲಿ ಸುಮಾರು 4,500 ರಿಯಾಲ್ (1 ಲಕ್ಷ ರೂ.) ಗೆ ಚಪ್ಪಲಿಗಳನ್ನು ಮಾರಾಟಕ್ಕೆ ಇಡಲಾಗಿದೆ. ಹಾಗೇ ಇದಕ್ಕೆ “4500 ರಿಯಾಲ್ ಬೆಲೆಗೆ ಇತ್ತೀಚಿನ ಫ್ಯಾಷನ್ ಜನೌಬಾ” ಎಂದು ಶೀರ್ಷಿಕೆ ನೀಡಲಾಗಿದೆ. ಇದು ಎಲ್ಲರಿಗೂ ಆಶ್ಚರ್ಯವನ್ನುಂಟುಮಾಡಿದೆ. ಹಾಗಾಗಿ ಜನರು ಸೋಶಿಯಲ್‌ ಮೀಡಿಯಾದಲ್ಲಿ ಇದರ ಬೆಲೆಯ ಬಗ್ಗೆ ಬಗೆಬಗೆಯ ಕಾಮೆಂಟ್​ಗಳನ್ನು ಹಾಕಿದ್ದಾರೆ.

ಒಬ್ಬರು ಇದು ಶ್ರೀಮಂತರಿಗಾಗಿ ಮಾತ್ರ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರೆ, ಇನ್ನೊಬ್ಬರು “4500 ರಿಯಾಲ್ ಚಪ್ಪಲಿಗಳನ್ನು ಒಮ್ಮೆ ಖರೀದಿಸಿದರೆ ಇಡೀ ಜೀವನದುದ್ದಕ್ಕೂ ಶೌಚಾಲಯಕ್ಕೆ ಹೋಗಲು ಅದನ್ನೇ ಬಳಸಬೇಕಾಗುತ್ತದೆ ಎಂದು ಬರೆದಿದ್ದಾರೆ. ಹಾಗೇ ಮತ್ತೊಬ್ಬರು “ಇದು ನಮ್ಮ ಕುಟುಂಬದಲ್ಲಿ ಬಾತ್‍ರೂಮ್‍ಗೆ ಹೋಗಲು ಬಳಸುವ ಚಪ್ಪಲಿಗಳು” ಎಂದು ಬರೆದಿದ್ದಾರೆ. ಭಾರತದಲ್ಲಿ ನಿಮಗೆ ಈ ಚಪ್ಪಲಿಗಳು 60 ರೂಪಾಯಿಗೆ ಸಿಗುತ್ತದೆ ” ಎಂದು ನಾಲ್ಕನೇ ಬಳಕೆದಾರರು ತಿಳಿಸಿದ್ದಾರೆ.

ಇದನ್ನೂ ಓದಿ: ಚಾಕೋಲೇಟ್ ತಿನ್ನುವ ಆಸೆಯಾಗಿ ಅಂಗಡಿಗೆ ಹೋಗಿದ್ದ ಬಾಲಕ ಶವವಾಗಿ ಮನೆಗೆ ಬಂದ; ಆಗಿದ್ದೇನು? ವಿಡಿಯೊ ನೋಡಿ

ಇನ್ನೊಬ್ಬರು “ಭಾರತದಲ್ಲಿ ನಾವು ಇದನ್ನು ಹೆಚ್ಚಾಗಿ ಶೌಚಾಲಯಕ್ಕೆ ಹೋಗಲು ಬಳಸುತ್ತೇವೆ” ಎಂದು ಬರೆದಿದ್ದಾರೆ. ಮತ್ತೊಬ್ಬ ವ್ಯಕ್ತಿ “ಇದು ನಿಜವಾಗಿಯೂ ತಾಯಂದಿರ ದಿನದ ಅತ್ಯುತ್ತಮ ಉಡುಗೊರೆಯಾಗಿದೆ. ಯಾಕೆಂದರೆ ಎಲ್ಲಾ ತಾಯಂದಿರಿಗೆ ಚಪ್ಪಲಿ ಅತ್ಯುತ್ತಮ ಆಯುಧ” ಎಂದ ಬರೆದುಕೊಂಡಿದ್ದಾರೆ “ಭಾರತದ ಕೆಲವು ಸ್ಥಳಗಳಲ್ಲಿ ಈ ಚಪ್ಪಲಿಗಳು ಕೇವಲ ₹ 30 ಕ್ಕೆ ಪಡೆಯಬಹುದು” ಎಂದು ಒಬ್ಬರು ಹೇಳಿದರೆ, ಈ ಚಪ್ಪಲಿಗಳಿಗೆ ಹವಾಯಿ ಚಪ್ಪಲಿಗಳೆಂದು ಕರೆಯುತ್ತಾರೆ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

Continue Reading
Advertisement
Viral Video
ವೈರಲ್ ನ್ಯೂಸ್34 mins ago

Viral Video: ಡಿಸಿ ಆಫೀಸ್‌ನಲ್ಲಿ ಗೋಳಾಡುತ್ತಾ ನೆಲದಲ್ಲಿ ಹೊರಳಾಡಿದ ರೈತ; ವೈರಲಾಗ್ತಿದೆ ಈ ವಿಡಿಯೋ

Yezdi Roadster
ಆಟೋಮೊಬೈಲ್1 hour ago

Yezdi Roadster : ಯೆಜ್ಡಿ ರೋಡ್‌ಸ್ಟರ್ ಜತೆಗೆ ಈ ಹಲವು ಆ್ಯಕ್ಸೆಸರಿಗಳಿರುವ ಟ್ರಯಲ್ ಪ್ಯಾಕ್ ಉಚಿತ

Viral Video
ವೈರಲ್ ನ್ಯೂಸ್2 hours ago

Viral Video: 300 ಮೊಸಳೆಗಳಿರುವ ಕೆರೆಯಲ್ಲಿ ಬೈಕ್‌, ಕಾರು ಸ್ಟಂಟ್‌; ಹುಚ್ಚಾಟ ಮೆರೆದ ಯುವಕರಿಗೆ ಆಗಿದ್ದೇನು ಗೊತ್ತಾ?

ಪ್ರಮುಖ ಸುದ್ದಿ2 hours ago

Karnataka Rain: ವರುಣಾರ್ಭಟಕ್ಕೆ ರಾಜ್ಯದ ಹಲವೆಡೆ ನದಿಗಳು ಉಕ್ಕಿ ಹರಿದು ನೆರೆ ಸೃಷ್ಟಿ; ಕುಸಿದ ಸೇತುವೆಗಳು!

Paris Olympics 2024
ಪ್ರಮುಖ ಸುದ್ದಿ2 hours ago

Paris Olympics 2024 : 8 ಚಿನ್ನ, 1 ಬೆಳ್ಳಿ, 3 ಕಂಚು: ಒಲಿಂಪಿಕ್ಸ್ ಹಾಕಿ ಸ್ಪರ್ಧೆಯಲ್ಲಿ ಭಾರತ ತಂಡದ ಸಾಧನೆಗಳ ವಿವರ ಇಲ್ಲಿದೆ

Viral Video
ವೈರಲ್ ನ್ಯೂಸ್2 hours ago

Viral Video: ಸಫಾರಿಯಲ್ಲಿ ಪ್ರವಾಸಿಗರ ಎದುರೇ ಸಿಂಹಗಳ ಕಾಮಕೇಳಿ!

Olympic Games History
ಕ್ರೀಡೆ2 hours ago

Olympic Games History: ಒಲಿಂಪಿಕ್ಸ್​ನಲ್ಲಿ ಗ್ರೀಸ್​ ದೇಶಕ್ಕೆ ವಿಶೇಷ ಮಾನ್ಯತೆ ನೀಡುವುದೇಕೆ?

Amitabh Bachchan holds umbrella for Jaya Bachchan
ಬಾಲಿವುಡ್2 hours ago

Amitabh Bachchan: ಅಮಿತಾಭ್ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದರೂ ಮುಖ ಊದಿಸಿಕೊಂಡೇ ಇದ್ದ ಜಯಾ ಬಚ್ಚನ್!

Viral Video
ವೈರಲ್ ನ್ಯೂಸ್3 hours ago

Viral Video: ನೋಡ ನೋಡ್ತಿದ್ದಂತೆ ಮೂರನೇ ಮಹಡಿಯಿಂದ ಬಿದ್ದ ಮಹಿಳೆ; ಶಾಕಿಂಗ್‌ ವಿಡಿಯೋ ವೈರಲ್‌

Tauba Tauba
Latest3 hours ago

Tauba Tauba : ಲಂಡನ್‌ ಬೀದಿಯಲ್ಲಿ ‘ತೌಬಾ ತೌಬಾ’ ಹಾಡಿಗೆ ಸಖತ್‌ ಆಗಿ ಸ್ಟೆಪ್ಸ್‌ ಹಾಕಿದ ಬೆಡಗಿಯರು; ವಿಡಿಯೊ ವೈರಲ್

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ2 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ2 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ3 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ3 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ3 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ3 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ4 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌