GT World Mall: ಪಂಚೆ ಧರಿಸಿದ ರೈತರಿಗೆ ಅವಮಾನ ಮಾಡಿದ ಜಿಟಿ ಮಾಲ್‌ ವಿರುದ್ಧ ದೂರು ದಾಖಲು - Vistara News

ಪ್ರಮುಖ ಸುದ್ದಿ

GT World Mall: ಪಂಚೆ ಧರಿಸಿದ ರೈತರಿಗೆ ಅವಮಾನ ಮಾಡಿದ ಜಿಟಿ ಮಾಲ್‌ ವಿರುದ್ಧ ದೂರು ದಾಖಲು

GT World Mall: ಇದನ್ನು ಕನ್ನಡ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಕೈಗೆತ್ತಿಕೊಂಡಿದ್ದವು. ಮಾಲ್‌ ಮುಂದೆ ತೀವ್ರ ಹೋರಾಟ ಹಾಗೂ ಪ್ರತಿಭಟನೆ ನಡೆದಿತ್ತು. ʼವಿಸ್ತಾರ ನ್ಯೂಸ್‌ʼ ಈ ಬಗ್ಗೆ ಕಾರ್ಯಕ್ರಮ ಮಾಡಿದ್ದಲ್ಲದೆ, ಅದೇ ರೈತರನ್ನು ಕರೆದೊಯ್ದು ಮಾಲ್‌ಗೆ ಪ್ರವೇಶ ಕೊಡಿಸಿತ್ತು. ಈ ಸಂದರ್ಭದಲ್ಲಿ ಮಾಲ್‌ನ ಮುಖ್ಯಸ್ಥರು ಸ್ಥಳದಲ್ಲಿ ಹಾಜರಿದ್ದು, ತಮ್ಮ ಸಿಬ್ಬಂದಿಯಿಂದ ಆದ ಅವಮಾನಕ್ಕೆ ಕ್ಷಮೆ ಕೇಳಿದ್ದರು.

VISTARANEWS.COM


on

gt world mall haveri farmer
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪಂಚೆ ಧರಿಸಿ ಬಂದದ್ದಕ್ಕೆ (Wearing Dhoti) ಹಾವೇರಿಯ ರೈತರೊಬ್ಬರಿಗೆ (Haveri Farmer) ಮಾಲ್‌ನೊಳಗೆ ಪ್ರವೇಶ ನಿರಾಕರಿಸಿದ ಬೆಂಗಳೂರಿನ (bangalore mall) ಜಿಟಿ ವರ್ಲ್ಡ್‌ ಮಾಲ್‌ (GT World Mall) ವಿರುದ್ಧ ದೂರು (FIR) ದಾಖಲಾಗಿದೆ.

ಮಂಗಳವಾರ ಸಂಜೆ ಘಟನೆ ನಡೆದಿತ್ತು. ಹಾವೇರಿಯ ರೈತ ಫಕೀರಪ್ಪ ಅವರು ಪಂಚೆ ಧರಿಸಿ, ಮಗನ ಸಮೇತ ಸಿನಿಮಾ ನೋಡಲು ಬಂದಿದ್ದರು. ʼಪಂಚೆ ಧರಿಸಿ ಮಾಲ್ ಒಳಗೆ ಬರುವಂತಿಲ್ಲʼ ಎಂದು ಸೆಕ್ಯುರಿಟಿ ತಡೆದಿದ್ದರು. ಇದನ್ನು ರೈತರ ಮಗ ಪ್ರಶ್ನಿಸಿದ್ದರು. ನಂತರ ʼವಿಸ್ತಾರ ನ್ಯೂಸ್‌ʼ ಈ ವಿಚಾರವನ್ನು ಎತ್ತಿಕೊಂಡು ನಿನ್ನೆ ಇಡೀ ದಿನ ಕವರೇಜ್‌ ಮಾಡಿತ್ತು. ಪಂಚೆಯ ಹೆಸರಿನಲ್ಲಿ ರೈತರಿಗೆ ಆಗುತ್ತಿರುವ ಅವಮಾನದ ವಿರುದ್ಧ ಸಿಡಿದೆದ್ದು ಪ್ರಶ್ನೆ ಮಾಡಿತ್ತು.

ಬಳಿಕ ಇದನ್ನು ಕನ್ನಡ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಕೈಗೆತ್ತಿಕೊಂಡಿದ್ದವು. ಮಾಲ್‌ ಮುಂದೆ ತೀವ್ರ ಹೋರಾಟ ಹಾಗೂ ಪ್ರತಿಭಟನೆ ನಡೆದಿತ್ತು. ʼವಿಸ್ತಾರ ನ್ಯೂಸ್‌ʼ ಈ ಬಗ್ಗೆ ಕಾರ್ಯಕ್ರಮ ಮಾಡಿದ್ದಲ್ಲದೆ, ಅದೇ ರೈತರನ್ನು ಕರೆದೊಯ್ದು ಮಾಲ್‌ಗೆ ಪ್ರವೇಶ ಕೊಡಿಸಿತ್ತು. ಈ ಸಂದರ್ಭದಲ್ಲಿ ಮಾಲ್‌ನ ಮುಖ್ಯಸ್ಥರು ಸ್ಥಳದಲ್ಲಿ ಹಾಜರಿದ್ದು, ತಮ್ಮ ಸಿಬ್ಬಂದಿಯಿಂದ ಆದ ಅವಮಾನಕ್ಕೆ ಕ್ಷಮೆ ಕೇಳಿದ್ದರು. ರೈತ ಫಕೀರಪ್ಪಗೆ ಹಾರ ಹಾಕಿ ಸನ್ಮಾನ ಮಾಡಿದ್ದರು. ರೈತ- ಕನ್ನಡ ಸಂಘಟನೆಗಳ ಕಾರ್ಯಕರ್ತರು ಪಂಚೆ ಧರಿಸಿ ಮಾಲ್‌ಗೆ ಪ್ರವೇಶಿಸಿದ್ದರು.

ಇದೀಗ ಜಿಟಿ ಮಾಲ್ ಮಾಲ್ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ರೈತ ಫಕೀರಪ್ಪ ಅವರಿಗೆ ಅವಮಾನ ಮಾಡಿದ ಜಿಟಿ ಮಾಲ್‌ ಅಡಳಿತ ಮಂಡಳಿ ಹಾಗೂ ಸಿಬ್ಬಂದಿ ಅರುಣ್ ವಿರುದ್ಧ ಕ್ರಮ ಜರಗಿಸುವಂತೆ ಎಫ್ಐಆರ್ ದಾಖಲಾಗಿದೆ.

ರೈತರಿಗೆ ಅವಮಾನಕ್ಕೆ ಸಚಿವರು ಗರಂ

ಪಂಚೆ ಧರಿಸಿದ್ದಾರೆ ಎಂಬ ಕಾರಣದಿಂದ ಮಾಲ್‌ ಒಳಗೆ ಬಿಡದೆ ಕಾಯಿಸಿ ಹಾವೇರಿಯ ರೈತರನ್ನು (Haveri Farmer) ಅವಮಾನ ಮಾಡಿದ ಬೆಂಗಳೂರಿನ ಮಾಗಡಿ ರಸ್ತೆಯ ಜಿಟಿ ಮಾಲ್‌ನ (GT World Mall) ಸಿಬ್ಬಂದಿಯ ವರ್ತನೆಗೆ ರಾಜ್ಯದ ಸಚಿವರುಗಳು (State ministers) ಗರಂ ಆಗಿದ್ದಾರೆ. ಈ ಬಗ್ಗೆ ಪೊಲೀಸ್‌ ನೋಟೀಸ್‌ ನೀಡುವ ಸೂಚನೆ ನೀಡಿದ್ದಾರೆ.

ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಈ ಕುರಿತು ಗರಂ ಆಗಿದ್ದು, ʼಪಂಚೆ ಧರಿಸಿಕೊಂಡೇ ಏಳು ವರ್ಷಗಳ ಕಾಲ ಸಿಎಂ ಆಗಿ ಸಿದ್ದರಾಮಯ್ಯ ರಾಜ್ಯದ ಆಡಳಿತ ಮಾಡುತ್ತಿದ್ದಾರೆ. ಇದರಿಂದ ಅವರು ಪಾಠ ಕಲಿಯಬೇಕುʼ ಎಂದು ಟೀಕಿಸಿದ್ದಾರೆ. ʼಆ ಮಾಲ್ ನಡೆಸುತ್ತಿರುವವರಿಗೆ ಬುದ್ಧಿ ಕಡಿಮೆ ಇರಬೇಕು. ನಮ್ಮ ಇಲಾಖೆ ಇಲ್ಲವೇ ಪೊಲೀಸ್ ಇಲಾಖೆಯಿಂದ ಈ ಬಗ್ಗೆ ಪತ್ರ ಬರೆಯುತ್ತೇವೆʼ ಎಂದು ಅವರು ಹೇಳಿದ್ದಾರೆ.‌

ಸರ್ಕಾರದಿಂದ ನಿಯಮ ತರುತ್ತೇವೆ: ಚಲುವರಾಯ ಸ್ವಾಮಿ

ರೈತರಿಗೆ ಪ್ರವೇಶ ನಿರಾಕರಣೆ ಮಾಡಿದ ಜಿ‌ಟಿ ಮಾಲ್ ಕ್ರಮವನ್ನು ಕೃಷಿ ಸಚಿವ ಚೆಲುವರಾಯಸ್ವಾಮಿ ಖಂಡಿಸಿದ್ದು, ಈ ವಿಚಾರದಲ್ಲಿ ಸೂಕ್ತ ನಿಯಮ ರೂಪಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದು ಹೇಳಿದ್ದಾರೆ. ʼನಾವು ಇದನ್ನ ಖಂಡಿಸುತ್ತೇವೆ. ಕೆಲ ವರ್ಷಗಳ ಹಿಂದೆ ಪಂಚೆ ಕಟ್ಟಿಕೊಂಡು ಹೋದರೆ ಕ್ಲಬ್‌ಗಳಲ್ಲಿ ಬಿಡುತ್ತಿರಲಿಲ್ಲ. ಶೂ ಇಲ್ಲದೇ ಪಂಚೆ ಹಾಕಿಕೊಂಡು ಕ್ಲಬ್‌ಗೆ ಹೋಗಬಹುದು ಅಂತ ನಮ್ಮ ಸರ್ಕಾರ ನಿರ್ಧಾರ ಮಾಡಿತ್ತು. ಇದನ್ನು ನಾವು ಅಂದು ಅಧಿವೇಶನದಲ್ಲಿ ಚರ್ಚೆ ಮಾಡಿದ್ದೆವು. ಈಗಲೂ ಇದಕ್ಕೆ ಸರ್ಕಾರ ನಿಯಮ ತರಬೇಕುʼ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: GT World Mall: ರೈತರಿಗೆ ಅವಮಾನ ಮಾಡಿದ ಜಿಟಿ ಮಾಲ್‌ ವಿರುದ್ಧ ಸಚಿವರು ಗರಂ; ʼಪಂಚೆ ಧರಿಸಿಯೇ ಸಿದ್ದರಾಮಯ್ಯ 7 ವರ್ಷ ರಾಜ್ಯ ಆಳ್ಲಿಲ್ವಾ?ʼ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Viral Video: ಇನ್‌ಸ್ಟಾಗ್ರಾಂನಲ್ಲಿಯೇ ಗಂಡನಿಗೆ ಡಿವೋರ್ಸ್‌‌ ನೀಡಿದ ದುಬೈ ರಾಜಕುಮಾರಿ! ಏನು ಬರೆದಿದ್ದಾಳೆ ನೋಡಿ!

Viral Video: ಮದುವೆ ಅನ್ನುವ ಮೂರು ಅಕ್ಷರಕ್ಕೆ ಈಗ ಬೆಲೆಯೇ ಇಲ್ಲದ ಹಾಗೇ ಆಗಿದೆ. ಇನ್ಸ್ಟಾಗ್ರಾಂನಲ್ಲಿ ರೀಲ್ಸ್, ಫೋಟೊ ಅಪ್ಲೋಡ್ ಆಗುತ್ತಿತ್ತು. ಈಗ ಡಿವೋರ್ಸ್ ಕೂಡ ಇನ್ಸ್ಟಾಗ್ರಾಂನಲ್ಲಿಯೇ ನೀಡುವಂತಹ ಪರಿಸ್ಥಿತಿ ಬಂದಿದೆ. ದುಬೈ ರಾಜಕುಮಾರಿ ಶೇಖಾ ಮಹ್ರಾ ಕಳೆದ ವರ್ಷ ಮೇ ತಿಂಗಳಲ್ಲಿ ಶೇಖ್ ಮಾನಾ ಅವರನ್ನು ವಿವಾಹವಾದರು. ಇದೀಗ ರಾಜಕುಮಾರಿ ಶೇಖಾ ಮಹ್ರಾ ಇನ್ಸ್ಟಾಗ್ರಾಂನಲ್ಲಿ ಆಘಾತಕಾರಿ ಪೋಸ್ಟ್ ಹಾಕಿದ್ದು, ಅದರಲ್ಲಿ ತಮ್ಮ ಪತಿಗೆ ಡಿವೋರ್ಸ್ ನೀಡುವುದಾಗಿ ಘೋಷಿಸಿದ್ದಾರೆ. ಶೇಖಾ ಮಹ್ರಾ ಮತ್ತು ಅವರ ಪತಿ ಈ ವರ್ಷದ ಮೇ ತಿಂಗಳಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ ಎರಡು ತಿಂಗಳ ನಂತರ ಪತಿಯಿಂದ ಡಿವೋರ್ಸ್ ಕೇಳಿದ್ದು, ಅವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.

VISTARANEWS.COM


on

Viral Video
Koo

ದುಬೈ : ಸೋಶಿಯಲ್ ಮೀಡಿಯಾಗಳನ್ನು ನಾವು ಹೆಚ್ಚಾಗಿ ಮನೋರಂಜನೆಗಾಗಿ, ಪ್ರತಿದಿನ ನಡೆಯುವ ಸುದ್ದಿಗಳನ್ನು ತಿಳಿದುಕೊಳ್ಳಲು ಬಳಸುತ್ತೇವೆ. ಪ್ರಪಂಚದ ಹಲವೆಡೆ ನಡೆಯುವಂತಹ ಘಟನೆಗಳನ್ನು ನಾವು ಸೋಶಿಯಲ್ ಮೀಡಿಯಾಗಳ ಸಹಾಯದಿಂದ ಮನೆಯಲ್ಲೇ ಕುಳಿತು ತಿಳಿಯಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳನ್ನು ಪತಿ ಪತ್ನಿಯರು ಡಿವೋರ್ಸ್ ನೀಡಲು ಬಳಸುತ್ತಿದ್ದಾರೆ ಎಂದು ಕೇಳಿದರೆ ಎಲ್ಲರಿಗೂ ಆಶ್ವರ್ಯವಾಗುವುದಂತು ಖಂಡಿತ. ಅಂತಹದೊಂದು ಘಟನೆ ಇದೀಗ ದುಬೈನಲ್ಲಿ ನಡೆದಿದೆ. ದುಬೈ ರಾಜಕುಮಾರಿ ಶೇಖಾ ಮಹ್ರಾ ಅವರು ತಮ್ಮ ಪತಿಗೆ ಇನ್‍ಸ್ಟಾಗ್ರಾಂನಲ್ಲಿ ಡಿವೋರ್ಸ್ ನೀಡಿದ್ದು, ಇದು ಸಖತ್ ವೈರಲ್ (Viral Video) ಆಗಿದೆ.

ದುಬೈ ಆಡಳಿತಗಾರನ ಮಗಳಾದ ದುಬೈ ರಾಜಕುಮಾರಿ ಶೇಖಾ ಮಹ್ರಾ ಕಳೆದ ವರ್ಷ ಮೇ ತಿಂಗಳಲ್ಲಿ ಶೇಖ್ ಮಾನಾ ಅವರನ್ನು ವಿವಾಹವಾದರು. ಇದೀಗ ರಾಜಕುಮಾರಿ ಶೇಖಾ ಮಹ್ರಾ ಇನ್‍ಸ್ಟಾಗ್ರಾಂನಲ್ಲಿ ಆಘಾತಕಾರಿ ಪೋಸ್ಟ್ ಹಾಕಿದ್ದು, ಅದರಲ್ಲಿ ತಮ್ಮ ಪತಿಗೆ ಡಿವೋರ್ಸ್ ನೀಡುವುದಾಗಿ ಘೋಷಿಸಿದ್ದಾರೆ. ಶೇಖಾ ಮಹ್ರಾ ಮತ್ತು ಅವರ ಪತಿ ಈ ವರ್ಷದ ಮೇ ತಿಂಗಳಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ ಎರಡು ತಿಂಗಳ ನಂತರ ಪತಿಯಿಂದ ಡಿವೋರ್ಸ್ ಕೇಳಿದ್ದು, ಅವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.

ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ, ತಮ್ಮ ಪತಿ ಬೇರೆ ಸಂಗಾತಿಯೊಂದಿಗೆ ಸಂಬಂಧ ಹೊಂದಿರುವ ಕಾರಣ ಪತಿಗೆ ಡಿವೋರ್ಸ್ ನೀಡುತ್ತಿರುವುದಾಗಿ ತಿಳಿಸಿ “ನಾನು ನಿಮಗೆ ವಿಚ್ಛೇದನ ನೀಡುತ್ತೇನೆ” ಎಂದು ಮೂರು ಬಾರಿ ಬರೆದು ಮಂಗಳವಾರ ಪೋಸ್ಟ್ ಮಾಡಿದ್ದಾರೆ. ಹಾಗೇ ಅವರು ತಮ್ಮ ಪತಿಯೊಂದಿಗಿನ ಫೋಟೋಗಳನ್ನು ಇನ್‍ಸ್ಟಾಗ್ರಾಂನಿಂದ ಡಿಲೀಟ್ ಮಾಡಿದ್ದಾರೆ.

ಶೇಖಾ ಮಹ್ರಾ ಕಳೆದ ವರ್ಷ ಮೇ ತಿಂಗಳಲ್ಲಿ ಎಮಿರೇಟ್ಸ್ ಉದ್ಯಮಿ ಶೇಖ್ ಮನ ಬಿನ್ ಮೊಹಮ್ಮದ್ ಬಿನ್ ರಶೀದ್ ಬಿನ್ ಮಾನಾ ಅಲ್ ಮಕ್ತೌಮ್ ಅವರನ್ನು ವಿವಾಹವಾದರು. ಒಂದು ವರ್ಷದ ನಂತರ, ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. 20ರ ಹರೆಯದ ಶೇಖ್ ಮಾನಾ ಅನೇಕ ಬ್ಯುಸಿನೆಸ್‍ಗಳನ್ನು ಹೊಂದಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ, ದುಬೈ ರಾಜಕುಮಾರಿ ಹೆರಿಗೆಯಾದ ಕೆಲವೇ ಕ್ಷಣಗಳಲ್ಲಿ ಆಸ್ಪತ್ರೆಯಿಂದ ಫೋಟೋಗಳನ್ನು ಬಿಡುಗಡೆ ಮಾಡಿದ್ದರು. ತಮ್ಮ ಮಗಳನ್ನು ಜಗತ್ತಿಗೆ ಕರೆತಂದ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದರು.

ಹಾಗೇ ತನ್ನ ಪತಿ ಹಾಗೂ ಮಗಳ ಜೊತೆಗಿನ ಪೋಟೊವನ್ನು ಪೋಸ್ಟ್ ಮಾಡಿದ್ದರು. ಈ ಹಿಂದೆ ಅವರು ಗರ್ಭಿಣಿಯಾಗಿದ್ದಾಗ “ನಾವು ಮೂವರು” ಎಂದು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು. ಆದರೆ ಜೂನ್‍ನಲ್ಲಿ ಅವರು ಇನ್‍ಸ್ಟಾಗ್ರಾಂ ಪೋಸ್ಟ್‌ನಲ್ಲಿ ಪತಿಯಿಲ್ಲದೆ ತಮ್ಮ ಮಗುವಿನೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದಕ್ಕೆ “ನಾವಿಬ್ಬರೇ” ಎಂದು ಶೇಖಾ ಮಹ್ರಾ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಕಿಮೋಥೆರಪಿ ಅನುಭವ ಹಂಚಿಕೊಂಡಿದ್ದಾರೆ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಖ್ಯಾತ ಬಾಲಿವುಡ್‌ ನಟಿ

ಶೇಖಾ ಮಹ್ರಾ ಅವರ ತಂದೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಯುಎಇಯ ಉಪಾಧ್ಯಕ್ಷ, ಪ್ರಧಾನಿ ಮತ್ತು ರಕ್ಷಣಾ ಸಚಿವರಾಗಿದ್ದಾರೆ. ಇವರಿಗೆ 26 ಮಂದಿ ಮಕ್ಕಳಿದ್ದು, ಅವರಲ್ಲಿ ಶೇಖಾ ಮಹ್ರಾ ಕೂಡ ಒಬ್ಬರು. ಆಕೆಯ ತಾಯಿ ಜೊಯಿ ಗ್ರಿಗೊರಾಕೋಸ್ ಗ್ರೀಸ್ ಮೂಲದವರಾಗಿದ್ದಾರೆ. ಆದರೆ ಶೇಖಾ ಮಹ್ರಾ ತಂದೆ, ಆಕೆಯ ತಾಯಿಗೆ ವಿಚ್ಛೇದನ ನೀಡಿದ್ದರು..

Continue Reading

ಪ್ರಮುಖ ಸುದ್ದಿ

Karnataka Assembly Live: ವಾಲ್ಮೀಕಿ ಹಗರಣದ ಆರೋಪಗಳಿಗೆ ಇಂದು ಸಿಎಂ ಉತ್ತರ; ವಿಧಾನಮಂಡಲ ಕಲಾಪ ಲೈವ್‌ ಇಲ್ಲಿದೆ

Karnataka Assembly Live: ವಾಲ್ಮೀಕಿ ನಿಗಮ ಹಗರಣ (Valmiki Corporation Live) ಕುರಿತು ಪ್ರತಿಪಕ್ಷದ ಆರೋಪಗಳಿಗೆ ಇಂದು ಸಿಎಂ ಸಿದ್ದರಾಮಯ್ಯ (CM Siddaramaiah) ಉತ್ತರ ನೀಡಲಿದ್ದಾರೆ. ಇದರ ಜೊತೆಗೆ, ಕನ್ನಡಿಗರಿಗೆ ಖಾಸಗಿ ಉದ್ಯಮದಲ್ಲಿ ಮೀಸಲು ವಿಧೇಯಕದ (Karnataka jobs reservation) ಕುರಿತು ಸರ್ಕಾರ ನಿಲುವು ಹಾಗೂ ನಡೆ ಚರ್ಚೆಗೆ ಗ್ರಾಸವಾಗಲಿದೆ.

VISTARANEWS.COM


on

vidhana sabha karnataka assembly live
Koo

ಬೆಂಗಳೂರು: ಸೋಮವಾರ ಆರಂಭವಾಗಿದ್ದ ವಿಧಾನಮಂಡಲ ಅಧಿವೇಶನ (Karnataka Assembly Live) ಇಂದು ಮತ್ತೆ ಮುಂದುವರಿಯಲಿದೆ. ಬುಧವಾರ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್‌ ಕಲಾಪಗಳಿಗೆ (Assembly Session) ವಿರಾಮ ನೀಡಲಾಗಿತ್ತು. ಇಂದು ಬೆಳಗ್ಗೆ ಅಧಿವೇಶನ ಮತ್ತೆ ಆರಂಭವಾಗಲಿದ್ದು, ವಾಲ್ಮೀಕಿ ನಿಗಮ ಹಗರಣ (Valmiki Corporation Live) ಕುರಿತು ಪ್ರತಿಪಕ್ಷದ ಆರೋಪಗಳಿಗೆ ಇಂದು ಸಿಎಂ ಸಿದ್ದರಾಮಯ್ಯ (CM Siddaramaiah) ಉತ್ತರ ನೀಡಲಿದ್ದಾರೆ. ಇದರ ಜೊತೆಗೆ, ಕನ್ನಡಿಗರಿಗೆ ಖಾಸಗಿ ಉದ್ಯಮದಲ್ಲಿ ಮೀಸಲು ವಿಧೇಯಕದ (Karnataka jobs reservation) ಕುರಿತು ಸರ್ಕಾರ ನಿಲುವು ಹಾಗೂ ನಡೆ ಚರ್ಚೆಗೆ ಗ್ರಾಸವಾಗಲಿದೆ.

ಸೋಮವಾರ ಸಂವಿಧಾನದ ಪೀಠಿಕೆ ಓದು ಹಾಗೂ ಈ ನಡುವೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆಯೊಂದಿಗೆ ಕಲಾಪ ಆರಂಭವಾಗಿತ್ತು. ನಂತರ ಪ್ರತಿಪಕ್ಷಗಳ ಬೇಡಿಕೆಯಂತೆ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ಕುರಿತು ಚರ್ಚೆಗೆ ಸ್ಪೀಕರ್‌ ಅವಕಾಶ ನೀಡಿದ್ದರು. ಇದರ ನಂತರ ಸೋಮವಾರ ಹಾಗೂ ಮಂಗಳವಾರ ವಿಧಾನಸಭೆ ಕಲಾಪ ಗದ್ದಲದ ಗೂಡಾಗಿತ್ತು. ವಿಪಕ್ಷ ನಾಯಕ ಆರ್.‌ ಅಶೋಕ್‌ ಅವರು ಈ ಬಗ್ಗೆ ಸುದೀರ್ಘವಾಗಿ ಮಾತನಾಡಿ ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಈ ಸಂದರ್ಭದಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ಸದಸ್ಯರ ನಡುವೆ ಜೋರಾದ ಮಾತಿನ ಚಕಮಕಿ ನಡೆದಿತ್ತು. ಸ್ಪೀಕರ್‌ ಹಲವು ಬಾರಿ ಕಲಾಪವನ್ನು ಮುಂದೂಡಿದ್ದರು. ʼಮುಖ್ಯಮಂತ್ರಿಗಳು ನೈತಿಕ ಹೊನೆ ಹೊತ್ತು ರಾಜೀನಾಮೆ ನೀಡಬೇಕುʼ ಎಂದು ಅಶೋಕ್‌ ಆಗ್ರಹಿಸಿದ್ದರು. ಡಿಸಿಎಂ ಡಿಕೆ ಶಿವಕುಮಾರ್‌, ಎಂಬಿ ಪಾಟೀಲ್‌ ಮುಂತಾದವರು ಸಿಎಂ ಸಿದ್ದರಾಮಯ್ಯ ಪರ ಬ್ಯಾಟಿಂಗ್‌ ಮಾಡಿದ್ದರು. ಅಶೋಕ್‌ ಅವರ ಮಾತು ಹಾಗೂ ಚಕಮಕಿಯ ಬಳಿಕ ಕಲಾಪದ ಅವಧಿ ಮುಗಿದದ್ದರಿಂದ ಸಿಎಂ ಇಂದು ಸದನದಲ್ಲಿ ಉತ್ತರ ನೀಡಬೇಕಾಗಿದೆ.

ವಿರೋಧ ಪಕ್ಷದವರ ಎಂಟತ್ತು ಗಂಟೆಗಳ ಆರೋಪ, ದಾಳಿ, ಆಕ್ರೋಶದ ನುಡಿಗಳನ್ನು ಬಹುತೇಕ ಎಲ್ಲವನ್ನೂ ಅಡ್ಡಿ ಪಡಿಸದೆ ಮುಖ್ಯಮಂತ್ರಿಗಳು ಮತ್ತು ಆಡಳಿತ ಪಕ್ಷದ ಸದಸ್ಯರು ಆಲಿಸಿದರು. ವಾಲ್ಮೀಕಿ ನಿಗಮ ಪ್ರಕರಣದ ವಿರೋಧ ಪಕ್ಷದವರ ಎಲ್ಲಾ ಆರೋಪ ಮತ್ತು ಮಾತುಗಳಿಗೆ ಮುಖ್ಯಮಂತ್ರಿಗಳು ಗುರುವಾರ ಉತ್ತರ ನೀಡಲಿದ್ದಾರೆ.

ಈ ನಡುವೆ, ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಮೀಸಲು ಒಸಗಿಸುವ ಬಗ್ಗೆ ವಿಧೇಯಕ ರೂಪಿಸಲು ಸರ್ಕಾರ ಮುಂದಾಗಿತ್ತು. ಶೇ. 100 ಉದ್ಯೋಗ ಮೀಸಲು ಇಡಬೇಕು ಎಂದು ಕ್ಯಾಬಿನೆಟ್‌ನಲ್ಲಿ ನಿರ್ಣಯವಾಗಿದೆ ಎಂದು ಸಿಎಂ ಟ್ವೀಟ್‌ ಮಾಡಿದ್ದರು. ಇದಕ್ಕೆ ಖಾಸಗಿ ಉದ್ಯಮಿಗಳಿಂದ ಭಾರಿ ಪ್ರತಿರೋಧ ವ್ಯಕ್ತವಾಗಿತ್ತು. ನಂತರ ಟ್ವೀಟ್‌ ಡಿಲೀಟ್‌ ಮಾಡಿದ್ದ ಸಿಎಂ, ಬಳಿಕ ʼಶೇ.75 ಉದ್ಯೋಗ ಮೀಸಲುʼ ಎಂದಿದ್ದರು. ಇದಕ್ಕೂ ವಿರೋಧ ಬಂದಿತ್ತು. ಇದಾದ ಬಳಿಕ ʼಸದ್ಯ ಈ ವಿಧೇಯಕವನ್ನು ತಡೆಹಿಡಿಯಲಾಗಿದೆʼ ಎಂದು ಸರಕಾರ ಹೇಳಿದೆ.

ಸರಕಾರದ ಈ ಯುಟರ್ನ್‌ ಅನ್ನು ವಿಪಕ್ಷ ತನ್ನ ಅನುಕೂಲಕ್ಕೆ ಬಳಸಿಕೊಳ್ಳಲಿದೆ. ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಈ ಬಗ್ಗೆ ಟ್ವೀಟ್‌ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ʼವಾಲ್ಮೀಕಿ ಹಗರಣ ವಿಚಾರದಲ್ಲಿ ಸರಕಾರಕ್ಕೆ ಆಗುತ್ತಿರುವ ಮುಖಭಂಗ ತಪ್ಪಿಸಲು, ಗಮನವನ್ನು ಬೇರೆಡೆಗೆ ಸೆಳೆಯಲು ಇದನ್ನು ಮಾಡಲಾಗಿದೆ. ಆದರೆ ಸಿಎಂ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲʼ ಎಂದು ವಿಪಕ್ಷ ನಾಯಕ ಅಶೋಕ್‌ ಗುಡುಗಿದ್ದಾರೆ. ಹೀಗಾಗಿ, ಕಲಾಪದಲ್ಲಿ ಈ ವಿಚಾರವನ್ನು ಬಿಜೆಪಿ ಎತ್ತಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆಯಾ ಎಂಬ ಪ್ರಶ್ನೆಯೂ ಮೂಡಿದೆ.

ಇದನ್ನೂ ಓದಿ: Karnataka Assembly Live: ವಾಲ್ಮೀಕಿ ಹಗರಣ ಚರ್ಚೆಯ ನಡುವೆ ಗದ್ದಲ ಸೃಷ್ಟಿಸಿದ ರೇವಣ್ಣ ಪ್ರಕರಣ; ರೊಚ್ಚಿಗೆದ್ದ ರೇವಣ್ಣ

Continue Reading

ಪ್ರಮುಖ ಸುದ್ದಿ

Valmiki Corporation Scam: ನಾಗೇಂದ್ರ ಕಸ್ಟಡಿ ಅಂತ್ಯ, ಇಂದು ಕೋರ್ಟ್‌ಗೆ ಹಾಜರು; ಪತ್ನಿಯೂ ಇಡಿ ವಶದಲ್ಲಿ

Valmiki Corporation Scam:
ನಾಗೇಂದ್ರರವರ ಇಬ್ಬರು ಪಿಎಗಳು, ನಾಗೇಂದ್ರರ ಪತ್ನಿ ಎಲ್ಲರ ಹೇಳಿಕೆಯನ್ನು ಪಡೆದಿರುವ ಇಡಿ, ಇನ್ನಷ್ಟು ವಿಚಾರಗಳನ್ನು ಹೊರತೆಗೆಯುವ ಅಗತ್ಯದಲ್ಲಿ ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆ ಹೆಚ್ಚಿದೆ. ಅಕೌಂಟ್ಸ್ ವ್ಯವಹಾರ, ಹಣ ಎಲ್ಲೆಲ್ಲಿ ವ್ಯವಹಾರವಾಗಿದೆ, ಇನ್ನೂ ಯಾರು ಯಾರು ಇದ್ದಾರೆ ಹೀಗೆ ಅನೇಕ ಮಾಹಿತಿಗಳು ಇಡಿಗೆ ಬೇಕಾಗಿವೆ.

VISTARANEWS.COM


on

b nagendra valmiki corporation scam
Koo

ಬೆಂಗಳೂರು: ವಾಲ್ಮಿಕಿ ಅಭಿವೃದ್ಧಿ ನಿಗಮ ಬಹುಕೋಟಿ ಹಗರಣ (Valmiki Corporation Scam) ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (Enforcement Directorate) ಧಿತರಾಗಿರುವ ಮಾಜಿ ಸಚಿವ ಬಿ. ನಾಗೇಂದ್ರ (Ex minister B Nagendra) ಕಸ್ಟಡಿ ಇಂದು ಅಂತ್ಯವಾಗುತ್ತಿದ್ದು, ಅವರನ್ನು ಮತ್ತೆ ಕೋರ್ಟ್ ಮುಂದೆ ಇಡಿ ಹಾಜರ್ (ED Raid) ಪಡಿಸಲಿದೆ. ತನಿಖೆ ಇನ್ನಷ್ಟು ನಡೆಯಬೇಕಿರುವುದರಿಂದ ಮತ್ತೆ ಕಸ್ಟಡಿಗೆ ಕೇಳಲಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಇಂದು ಮಧ್ಯಾಹ್ನ 2 ಗಂಟೆಗೆ ನಾಗೇಂದ್ರ ಅವರನ್ನು ಇಡಿ ಹಾಜರು ಪಡಿಸಲಿದೆ. ಮತ್ತೆ ಮೂರರಿಂದ ನಾಲ್ಕು ದಿನಗಳ ಕಾಲ ಕಸ್ಟಡಿಗೆ‌ ಕೇಳುವ ಸಾಧ್ಯತೆ ಇದೆ. ನಾಗೇಂದ್ರರವರ ಇಬ್ಬರು ಪಿಎಗಳು, ನಾಗೇಂದ್ರರ ಪತ್ನಿ ಎಲ್ಲರ ಹೇಳಿಕೆಯನ್ನು ಪಡೆದಿರುವ ಇಡಿ, ಇನ್ನಷ್ಟು ವಿಚಾರಗಳನ್ನು ಹೊರತೆಗೆಯುವ ಅಗತ್ಯದಲ್ಲಿ ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆ ಹೆಚ್ಚಿದೆ. ಅಕೌಂಟ್ಸ್ ವ್ಯವಹಾರ, ಹಣ ಎಲ್ಲೆಲ್ಲಿ ವ್ಯವಹಾರವಾಗಿದೆ, ಇನ್ನೂ ಯಾರು ಯಾರು ಇದ್ದಾರೆ ಹೀಗೆ ಅನೇಕ ಮಾಹಿತಿಗಳು ಇಡಿಗೆ ಬೇಕಾಗಿವೆ.

ನಿನ್ನೆ ನಾಗೇಂದ್ರ ಅವರ ಪತ್ನಿ ಮಂಜುಳಾ ಅವರನ್ನು ವಶಕ್ಕೆ ತೆಗೆದುಕೊಂಡು ಇಡಿ ವಿಚಾರಣೆ ಮಾಡಿತ್ತು. ಅಧಿಕಾರಿಗಳು 7ರಿಂದ 8 ಗಂಟೆಗಳ ಕಾಲ ಸುದೀರ್ಘ ವಿಚಾರಣೆ ಮಾಡಿದ್ದರು. ಸಾಕಷ್ಟು ವಿಚಾರಗಳನ್ನು ಹೊರ ತೆಗೆದಿದ್ದಾರೆ. ಪತಿ ಪತ್ನಿಯನ್ನು ಮುಖಾಮುಖಿ ಕೂರಿಸಿ ಪ್ರಶ್ನೆ ಮಾಡಲಾಗಿದೆ. ಮಂಜುಳಾ ಅವರ ಹೆಸರಲ್ಲಿ ಹಣದ ವಹಿವಾಟು ನಡೆದಿರುವ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಅವ್ಯವಹಾರ ನಡೆದ ಸಮಯದಲ್ಲಿ ಮಂಜುಳಾ ಅವರ ಬ್ಯಾಂಕ್ ಖಾತೆಗಳಿಗೂ ಹಣ ಬಂದಿರುವ ಹಿನ್ನಲೆಯಲ್ಲಿ ಇಡಿ ಅಧಿಕಾರಿಗಳು ಇದರ ಮೂಲವನ್ನು ಪ್ರಶ್ನಿಸಲಿದ್ದಾರೆ.

ಜುಲೈ 13ರಂದು ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಬಳಿಕ ಯಲಹಂಕದಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು 5 ದಿನಗಳ ಕಾಲ ಕಸ್ಟಡಿಗೆ ನೀಡಿದ್ದರು. 18ನೇ ತಾರೀಖಿನಂದು ಬೆಳಿಗ್ಗೆ 11ಕ್ಕೆ ಮತ್ತೆ ಹಾಜರುಪಡಿಸುವಂತೆ ಸೂಚನೆ ನೀಡಿದ್ದರು.

ಅವರ ಮನೆ ಸೇರಿ 23 ಕಡೆಗಳಲ್ಲಿ ಇಡಿ ಏಕಕಾಲಕ್ಕೆ ದಾಳಿ ಮಾಡಿತ್ತು. 6 ದಿನಗಳ ಕಾಲದ ಇಡಿ ವಿಚಾರಣೆ ವಿಚಾರಣೆಯಲ್ಲಿ ನಾಗೇಂದ್ರ ಸಮರ್ಪಕವಾಗಿ ಉತ್ತರ ನೀಡಿಲ್ಲ. ವಾಲ್ಮೀಕಿ ನಿಗಮದ ಅಧ್ಯಕ್ಷರಾಗಿರುವ ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್‌ ಕೂಡ ಪ್ರಕರಣದಲ್ಲಿ ವಿಚಾರಣೆಗಾಗಿ ಇಡಿಗೆ ಬೇಕಾಗಿದ್ದಾರೆ. ಈಗಾಗಲೇ ಬಂದಿತ ಆರೋಪಿಗಳನ್ನು ಪ್ರಶ್ನಿಸಿದಾಗ ದದ್ದಲ್‌ ಪಿಎಯ ಕೈವಾಡ ಕೂಡ ಇದರಲ್ಲಿ ಕಂಡುಬಂದಿದೆ.

ಆದರೆ ಮನೆಗೆ ಇಡಿ ದಾಳಿಯ ಬಳಿಕ ಇಡಿ ಬಂಧನ ತಪ್ಪಿಸಿಕೊಳ್ಳಲು ದದ್ದಲ್‌ ಎಸ್‌ಐಟಿ ಮುಂದೆ ಹಾಜರಾಗ ಇಡೀ ದಿನ ಕೂತಿದ್ದರು. ನಂತರ ಅಲ್ಲಿಂದ ಹೊರಬಿದ್ದು ಮೂರು ದಿವಸ ಕಣ್ಮರೆಯಾಗಿದ್ದ ದದ್ದಲ್‌, ನಾಲ್ಕನೇ ದಿವಸ ವಿಧಾನಮಂಡಲ ಅಧಿವೇಶನ ಶುರುವಾದಾಗ ವಿಧಾನಸಭೆಯಲ್ಲಿ ಕಾಣಿಸಿಕೊಂಡಿದ್ದರು. ವಿಚಾರಣೆಗೆ ಬರುವಂತೆ ದದ್ದಲ್‌ ಅವರಿಗೆ ಇಡಿ ನೋಟೀಸ್‌ ನೀಡಿದೆ ಎನ್ನಲಾಗಿದೆ. ಆದರೆ ನನಗೆ ಯಾವುದೇ ನೋಟೀಸ್‌ ಬಂದಿಲ್ಲ ಎಂದಿದ್ದಾರೆ ದದ್ದಲ್.‌ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವಾಗ ಸ್ಪೀಕರ್‌ ಅನುಮತಿ ಇಲ್ಲದೆ ಶಾಸಕರನ್ನು ಇಡಿ ಬಂಧಿಸುವಂತಿಲ್ಲ.

ಇದನ್ನೂ ಓದಿ: Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಮಾಜಿ ಸಚಿವ ನಾಗೇಂದ್ರ ಪತ್ನಿಯನ್ನು ವಶಕ್ಕೆ ಪಡೆದ ಇಡಿ

Continue Reading

ಪ್ರಮುಖ ಸುದ್ದಿ

Lalbagh Flower Show: ಈ ಬಾರಿಯ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಅರಳಲಿದೆ ಡಾ. ಅಂಬೇಡ್ಕರ್‌ ಜೀವನಗಾಥೆ!

Lalbagh Flower Show: ಆಂಥೋರಿಯಂ, ಲಿಲ್ಲಿ, ಆರ್ಕಿಡ್, ಜರ್‌ಬೆರಾ, ಸೇವಂತಿಗೆ, ನಂದಿ ಗಿರಿಧಾಮದ ಇಂಪೇಷನ್ಸ್‌ ಹೂಗಳು, ರೆಡ್‌ಹಾಟ್‌ ಪೋಕರ್‌, ಆಲ್‌ಸ್ಟೋಮೇರಿಯನ್‌ ಲಿಲ್ಲಿ, ಪೂಷಿಯಾ, ಅಗಪಾಂಥಸ್‌, ಸೈಕ್ಲೋಮನ್‌, ಕ್ಯಾಲಾಲಿಲ್ಲಿ, ಸುಗಂಧ ರಾಜ ಮುಂತಾದ ಹೂಗಳಿಂದ ಅಂಬೇಡ್ಕರ್ ಅರಳಲಿದ್ದಾರೆ. 10-12 ದೇಶಗಳಿಂದ ಹೂಗಳನ್ನು ತರಿಸಿಕೊಳ್ಳಲಾಗುತ್ತದೆ.

VISTARANEWS.COM


on

Lalbagh Flower Show 2024
Koo

ಬೆಂಗಳೂರು: ಈ ಬಾರಿ ರಾಜಧಾನಿಯ ಲಾಲ್‌ಬಾಗ್‌ನಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವ (Independence Day) ಫಲಪುಷ್ಪ ಪ್ರದರ್ಶನ (Lalbagh Flower Show) ಹಲವು ವಿಶೇಷತೆಗಳನ್ನು ಹೊಂದಿದೆ. ಮುಖ್ಯವಾಗಿ ಈ ಬಾರಿಯ ಥೀಮ್‌ ಹಾಗೂ ವಿಶೇಷ ಆಕರ್ಷಣೆ, ಸಂವಿಧಾನ ಶಿಲ್ಪಿ ಡಾ. ಬಿಆರ್‌ ಅಂಬೇಡ್ಕರ್‌ (Dr BR Ambedkar) ಅವರ ಜೀವನಗಾಥೆ ನೋಡುಗರನ್ನು ರಂಜಿಸಲಿದೆ. ಆಗಸ್ಟ್ 8ರಿಂದ 19 ರವರೆಗೆ ಫಲಪುಷ್ಪ ಪ್ರದರ್ಶನ ಜನರನ್ನು ಸೆಳೆಯಲಿದೆ.

ಬೆಂಗಳೂರಿನ ಲಾಲ್‌ಬಾಗ್​​ನಲ್ಲಿ ಆಗಸ್ಟ್‌ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನ (Lalbagh Flower Show) ವೀಕ್ಷಿಸಲು ಜನ ಕಾತರದಿಂದ ಕಾಯುತ್ತಾರೆ. ಪ್ರತಿ ವರ್ಷ ವಿಭಿನ್ನ ಥೀಮ್​​ನಲ್ಲಿ ಫ್ಲವರ್ ಶೋ ಆಯೋಜಿಸುವ ಮೂಲಕ ಲಾಲ್‌ಬಾಗ್‌ಗೆ ಅಸಂಖ್ಯಾತ ಜನರನ್ನು ಆಕರ್ಷಿಸಲಾಗುತ್ತದೆ. ಈ ವರ್ಷ ಕೂಡ ಸ್ವಾತಂತ್ರ್ಯ ದಿನಾಚರಣೆಯ ಸಲುವಾಗಿ ಲಾಲ್‌ಬಾಗ್​​ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಜೀವನ ಗಾಥೆಯನ್ನು ಬಿಂಬಿಸುವ ಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿದ್ದು, ವಿದೇಶಿ ಹಾಗೂ ಸ್ವದೇಶಿ ಹೂಗಳಿಂದ ಈ ಬಾರಿಯ ಫ್ಲವರ್ ಶೋ ಕಂಗೊಳಿಸಲಿದೆ.

ಈ ಸಲ ಲಾಲ್‌ಬಾಗ್‌ನಲ್ಲಿ ನಡೆಯಲಿರುವ ಫ್ಲವರ್‌ ಶೋಗೆ (Lalbagh Flower Show) ಸುಮಾರು 3 ಕೋಟಿ ರೂಪಾಯಿ ವೆಚ್ಚವಾಗಲಿದೆ. ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದ್ದು, ಹೂಗಳ ಆಯ್ಕೆ ನಡೆಯುತ್ತಿದೆ. ಎಂದಿನಂತೆ ಆಂಥೋರಿಯಂ, ಲಿಲ್ಲಿ, ಆರ್ಕಿಡ್, ಜರ್‌ಬೆರಾ, ಸೇವಂತಿಗೆ, ನಂದಿ ಗಿರಿಧಾಮದ ಇಂಪೇಷನ್ಸ್‌ ಹೂಗಳು, ರೆಡ್‌ಹಾಟ್‌ ಪೋಕರ್‌, ಆಲ್‌ಸ್ಟೋಮೇರಿಯನ್‌ ಲಿಲ್ಲಿ, ಪೂಷಿಯಾ, ಅಗಪಾಂಥಸ್‌, ಸೈಕ್ಲೋಮನ್‌, ಕ್ಯಾಲಾಲಿಲ್ಲಿ, ಸುಗಂಧ ರಾಜ ಮುಂತಾದ ಹೂಗಳಿಂದ ಅಂಬೇಡ್ಕರ್ ಅರಳಲಿದ್ದಾರೆ. 10-12 ದೇಶಗಳಿಂದ ಹೂಗಳನ್ನು ತರಿಸಿಕೊಳ್ಳಲಾಗುತ್ತದೆ. ಕೊಲಂಬಿಯಾ, ನೆದರ್ ಲ್ಯಾಂಡ್ಸ್, ಬೆಲ್ಜಿಯಂ, ಕೀನ್ಯಾ, ಆಸ್ಟ್ರೇಲಿಯಾದಿಂದ ಹೂಗಳು ಲಾಲ್‌ಬಾಗ್‌ಗೆ ಆಗಮಿಸಲಿವೆ. ಫ್ಲವರ್ ಶೋನಲ್ಲಿ 60ಕ್ಕೂ ಹೆಚ್ಚು ಜಾತಿಯ ಹೂಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಒಟ್ಟು 15 ಲಕ್ಷದಷ್ಟು ಹೂಗಳನ್ನು ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಸದ್ಯ ಲಾಲ್ ಬಾಗ್ ಗಾರ್ಡನ್​ನಲ್ಲಿ 4 ಸಾವಿರಕ್ಕೂ ಹೆಚ್ಚು ವಿವಿಧ ಬಗೆಯ ಹೂಗಳನ್ನು ಸಿದ್ಧಮಾಡಿಕೊಳ್ಳಲಾಗುತ್ತಿದೆ.

ಇದಲ್ಲದೇ ವಿವಿಧ ಬಗೆಯ ಆಕರ್ಷಕ ಬೋನ್ಸಾಯ್, ಇಕೆಬಾನ ಹಾಗೂ ತರಕಾರಿ ಕೆತ್ತನೆ ಪ್ರದರ್ಶನ, ತೋಟಗಳ ಸ್ಪರ್ಧೆ ಮತ್ತು ನಾನಾ ಹೂವಿನ ಜೋಡಣೆ ಕಲೆಗಳ ಪ್ರದರ್ಶನವೂ ಇರಲಿದೆ. ಸಧ್ಯ ಒಂದೊಂದೇ ವಿದೇಶಿ ಹೂಗಳನ್ನು ತರಿಸಿಕೊಳ್ಳಲಾಗುತ್ತಿದೆ ಎಂದು ‌ಲಾಲ್‌ಬಾಗ್ ನಿರ್ದೇಶಕ ರಮೇಶ್ ತಿಳಿಸಿದ್ದಾರೆ. ಈ ವರ್ಷ ಸುಮಾರು 50 ಮಾದರಿಯ ಪ್ರದರ್ಶನಕ್ಕೆ ಸಲಹೆಗಳು ಬಂದಿದ್ದು ಅಂತಿಮವಾಗಿ ಅಂಬೇಡ್ಕರ್ ಅವರ ಥೀಮ್ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಹಿಂದೆ ಭಕ್ತಿ ಭಂಡಾರಿ ಬಸವಣ್ಣ ಮತ್ತು ಹೆಮ್ಮೆಯ ನಟ ಪುನೀತ್ ರಾಜ್ ಕುಮಾರ್ ಅವರ ಫಲಪುಷ್ಪ ಪ್ರದರ್ಶನ ನಡೆದಿತ್ತು.

ಟಿಕೆಟ್ ದರ ಎಷ್ಟು?

ಫ್ಲವರ್ ಶೋ ವೀಕ್ಷಿಸಲು ವಯಸ್ಕರಿಗೆ 80 ರೂ. ಪ್ರವೇಶ ದರ ನಿಗದಿಯಾಗಿದ್ದು, ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಇದು 214ನೇ ಫಲಪುಷ್ಪ ಪ್ರದರ್ಶನವಾಗಿರಲಿದ್ದು, ಹಲವು ವಿಶೇಷತೆಗಳನ್ನು ಒಳಗೊಂಡಿರುತ್ತದೆ. ಪ್ರದರ್ಶನ ಆಗಸ್ಟ್ 8ರಿಂದ 19 ರವರೆಗೆ ನಡೆಯಲಿದೆ.

ಇದನ್ನೂ ಓದಿ: Weather Report : ಬೆಂಗಳೂರಲ್ಲಿ ಗುಡುಗು, ಮಳೆ; ಫ್ಲವರ್‌ ಶೋಗೆ ವರುಣ ಅಡ್ಡಿ?

Continue Reading
Advertisement
Maoists Attack
ದೇಶ11 mins ago

Maoists Attack: ಛತ್ತೀಸ್‌ಗಢದಲ್ಲಿ ಮತ್ತೆ ಮಾವೋವಾದಿಗಳ ಅಟ್ಟಹಾಸ; ಇಬ್ಬರು ಪೊಲೀಸರು ಹುತಾತ್ಮ

Viral Video
ಪ್ರಮುಖ ಸುದ್ದಿ15 mins ago

Viral Video: ಇನ್‌ಸ್ಟಾಗ್ರಾಂನಲ್ಲಿಯೇ ಗಂಡನಿಗೆ ಡಿವೋರ್ಸ್‌‌ ನೀಡಿದ ದುಬೈ ರಾಜಕುಮಾರಿ! ಏನು ಬರೆದಿದ್ದಾಳೆ ನೋಡಿ!

Hardik Pandya
ಕ್ರೀಡೆ31 mins ago

Hardik Pandya: ಫಿಟ್ನೆಸ್‌ ಬಗ್ಗೆ ಪ್ರಶ್ನೆ ಮಾಡಿದವರಿಗೆ ಸಿಕ್ಸ್​ ಪ್ಯಾಕ್​ ಮೂಲಕ ತಿರುಗೇಟು ಕೊಟ್ಟ ಹಾರ್ದಿಕ್​ ಪಾಂಡ್ಯ

vidhana sabha karnataka assembly live
ಪ್ರಮುಖ ಸುದ್ದಿ58 mins ago

Karnataka Assembly Live: ವಾಲ್ಮೀಕಿ ಹಗರಣದ ಆರೋಪಗಳಿಗೆ ಇಂದು ಸಿಎಂ ಉತ್ತರ; ವಿಧಾನಮಂಡಲ ಕಲಾಪ ಲೈವ್‌ ಇಲ್ಲಿದೆ

Joe Biden
ವಿದೇಶ1 hour ago

Joe Biden: ಅಮೆರಿಕ ಅಧ್ಯಕ್ಷ ಜೋ ಬೈಡನ್​ಗೆ ಕೊರೊನಾ ಸೋಂಕು; ಪ್ರಚಾರಕ್ಕೆ ಬ್ರೇಕ್‌

Actor Darshan Judicial Custody Ends Today May Extend Again
ಸ್ಯಾಂಡಲ್ ವುಡ್1 hour ago

Actor Darshan: ಇಂದು ಜಡ್ಜ್​ ಮುಂದೆ ದರ್ಶನ್ & ಟೀಂ ಹಾಜರು; ಜೈಲುವಾಸ ಮುಕ್ತಾಯವಾಗುತ್ತಾ?

ಕ್ರಿಕೆಟ್1 hour ago

BCCI: ಕೋಚಿಂಗ್​ ಹುದ್ದೆಗೆ ಗಂಭೀರ್ ಸೂಚಿಸಿದ್ದ ಐವರ ಹೆಸರನ್ನು ತಿರಸ್ಕರಿಸಿದ ಬಿಸಿಸಿಐ

SL vs IND
ಕ್ರಿಕೆಟ್2 hours ago

SL vs IND: ಇಂದು ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ; ಯಾರಿಗೆ ಒಲಿಯಲಿದೆ ನಾಯಕತ್ವ?

Narendra Modi
ರಾಜಕೀಯ2 hours ago

Narendra Modi: ಇಂದು ಮೋದಿ ನೇತೃತ್ವದಲ್ಲಿ ಬಿಜೆಪಿ ಸಭೆ: ಮಹತ್ವದ ತೀರ್ಮಾನ ಸಾಧ್ಯತೆ; ಏನೆಲ್ಲ ಚರ್ಚೆಯಾಗಲಿದೆ?

Vijay Sethupathi 'Viduthalai 2' first look out now
ಕಾಲಿವುಡ್2 hours ago

Vijay Sethupathi: ವಿಜಯ್​ ಸೇತುಪತಿ ನಟನೆಯ’ʻವಿಡುತಲೈ 2ʼ ಫಸ್ಟ್‌ ಲುಕ್‌ ಔಟ್‌!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ2 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ3 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ3 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ3 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ4 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ4 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ4 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ5 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌