Nita Ambani : ನೀತಾ ಅಂಬಾನಿ ಪ್ರಸ್ತುತಪಡಿಸಿದ್ದಾರೆ ವಿಷ್ಣುವಿನ 'ದಶಾವತಾರ'ದ ಚಿತ್ರಣ; ವಿಡಿಯೊ ನೋಡಿ - Vistara News

Latest

Nita Ambani : ನೀತಾ ಅಂಬಾನಿ ಪ್ರಸ್ತುತಪಡಿಸಿದ್ದಾರೆ ವಿಷ್ಣುವಿನ ‘ದಶಾವತಾರ’ದ ಚಿತ್ರಣ; ವಿಡಿಯೊ ನೋಡಿ

Nita Ambani: ಬನಾರಸ್ ಹಿನ್ನೆಲೆಯನ್ನು ಹೊಂದಿರುವ ‘ದಶಾವತಾರ’ ಹಿಂದೂ ಸಂಪ್ರದಾಯದ ಆಳವಾದ ಅನ್ವೇಷಣೆಯನ್ನು ನೀಡುತ್ತದೆ. ಇದನ್ನು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅನಂತ್ ಮತ್ತು ರಾಧಿಕಾ ಅಂಬಾನಿ ಅವರ ವಿವಾಹ ಆಚರಣೆ ಹಿನ್ನೆಲೆಯಲ್ಲಿ ವಿಶೇಷವಾಗಿ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದೆ. ಕಲೆ ಮತ್ತು ಕಲಾವಿದರ ತವರೂರಾದ ಎನ್ಎಂಎಸಿಸಿ ಈ ಸಾಂಸ್ಕೃತಿಕ ವೈಭವವನ್ನು ಸಾರ್ವಜನಿಕ ವೀಕ್ಷಣೆಗೆ ತೆರೆದಿಡುವ ಮೂಲಕ ಈ ಬದ್ಧತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ.

VISTARANEWS.COM


on

Nita Ambani
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಮುಂಬೈ : ಅಂಬಾನಿ ಕುಟುಂಬದವರು ದೇವರ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದಾರೆ. ಈ ವಿಚಾರ ಈ ಹಿಂದೆ ಅನಂತ್ ಅಂಬಾನಿಯವರ ಮದುವೆ ಆಮಂತ್ರಣ ಪತ್ರಿಕೆಯನ್ನು ನೋಡಿದಾಗ ತಿಳಿಯುತ್ತದೆ. ಇದೀಗ ಸಾಂಸ್ಕೃತಿಕ ಕೇಂದ್ರ ಎನ್ಎಂಎಸಿಸಿಯ ಸ್ಥಾಪಕಿ ಮತ್ತು ಅಧ್ಯಕ್ಷೆಯಾದ ನೀತಾ ಅಂಬಾನಿ (Nita Ambani )ಅವರು ವಿಷ್ಣುವಿನ ಹತ್ತು ಅವತಾರಗಳನ್ನು ಪ್ರದರ್ಶಿಸುವ ‘ದಶಾವತಾರ’ ಎಂಬ ಅದ್ಭುತ ಆಡಿಯೊ-ವಿಶುವಲ್ ಅನುಭವವನ್ನು ಪ್ರಸ್ತುತಪಡಿಸಲಿದ್ದಾರೆ.

ಬನಾರಸ್ ಹಿನ್ನೆಲೆಯನ್ನು ಹೊಂದಿರುವ ‘ದಶಾವತಾರ’ ಹಿಂದೂ ಸಂಪ್ರದಾಯದ ಆಳವಾದ ಅನ್ವೇಷಣೆಯನ್ನು ನೀಡುತ್ತದೆ. ಇದನ್ನು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅನಂತ್ ಮತ್ತು ರಾಧಿಕಾ ಅಂಬಾನಿ ಅವರ ವಿವಾಹ ಆಚರಣೆಗಾಗಿ ವಿಶೇಷವಾಗಿ ಆಯೋಜಿಸಲಾಗಿದೆ. ಇದನ್ನು ಈಗ ಸಾರ್ವಜನಿಕರು ನೋಡಬಹುದಾಗಿದೆ. ಕಲೆ ಮತ್ತು ಕಲಾವಿದರ ತವರೂರಾದ ಎನ್ಎಂಎಸಿಸಿ ಈ ಸಾಂಸ್ಕೃತಿಕ ವೈಭವವನ್ನು ಸಾರ್ವಜನಿಕ ವೀಕ್ಷಣೆಗೆ ತೆರೆದಿಡುವ ಮೂಲಕ ಈ ಬದ್ಧತೆಯನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ದಿದೆ.

‘ದಶಾವತಾರ’ ಹಿಂದೂ ಸಂಸ್ಕೃತಿಯ ಶ್ರೀಮಂತಿಕೆಯನ್ನು ಸುಂದರವಾಗಿ ಸಾಕಾರಗೊಳಿಸುತ್ತದೆ ಮತ್ತು ಅದರ ಭವ್ಯತೆಗೆ ಸಾಕ್ಷಿಯಾಗಲು ಎಲ್ಲರಿಗೂ ಆಹ್ವಾನವನ್ನು ನೀಡಲಾಗುತ್ತಿದೆ. ಹಾಗಾಗಿ ಪವಿತ್ರ ನಗರವಾದ ಕಾಶಿಯಿಂದ ಸ್ಫೂರ್ತಿ ಪಡೆದ ದೃಶ್ಯಗಳು ಮತ್ತು ಶಬ್ದಗಳ ಈ ಅದ್ಭುತ ಪ್ರದರ್ಶನವನ್ನು ವೀಕ್ಷಿಸಲು ತಯಾರಾಗಿ.

ನೀತಾ ಮುಖೇಶ್ ಅಂಬಾನಿ ಅವರ ಸಾಂಸ್ಕೃತಿಕ ಕೇಂದ್ರ (ಎನ್ಎಂಎಸಿಸಿ) ಕಲೆಗಳಿಗೆ ಮೀಸಲಾಗಿರುವ ಅದ್ಭುತ, ಬಹು-ಶಿಸ್ತಿನ ಸಾಂಸ್ಕೃತಿಕ ಕೇಂದ್ರವಾಗಿದೆ. ವೈವಿಧ್ಯಮಯ ಕಲಾತ್ಮಕ ಅಭಿವ್ಯಕ್ತಿಗಳ ಮೂಲಕ ಭಾರತದ ಶ್ರೀಮಂತ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸುವುದು ಮತ್ತು ಉತ್ತೇಜಿಸುವುದು ನೀತಾ ಅಂಬಾನಿ ಅವರ ಉದ್ದೇಶವಾಗಿದೆ. ‘ದಶಾವತಾರ’ ಗ್ರೌಂಡ್ ಲೆವೆಲ್ ಎನ್ಎಂಎಸಿಸಿಯಲ್ಲಿ ಇಂಗ್ಲಿಷ್ ಮತ್ತು ಹಿಂದಿ ಎರಡರಲ್ಲೂ ಲಭ್ಯವಿರುತ್ತದೆ.

ಇದನ್ನೂ ಓದಿ: ಅನಂತ್‌-ರಾಧಿಕಾಗೆ ಗುಜರಾತ್‌ ಜನತೆಯಿಂದ ಅದ್ಧೂರಿ ಸ್ವಾಗತ; ವಿಡಿಯೊ ನೋಡಿ

ಮುಂಬೈ ನಿವಾಸಿಗಳು ಈಗ nmacc.com ಮತ್ತು bookmyshow.com ನಲ್ಲಿ ತಮ್ಮ ಟಿಕೆಟ್‍ಗಳನ್ನು ಬುಕಿಂಗ್‍ ಮಾಡಬಹುದು. ಮುಂಬಯಿಯ ಬಾಂದ್ರಾದ ಕುರ್ಲಾದಲ್ಲಿರುವ ಜಿಯೊ ವರ್ಲ್ಡ್‌ ಸೆಂಟರ್‌ನಲ್ಲಿ ಈ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜುಲೈ 20ರಿಂದ 28ರವರೆಗೆ ಈ ಪ್ರದರ್ಶನ ಲಭ್ಯ. ಇದರ ಅವಧಿ 10 ನಿಮಿಷ ಮಾತ್ರ. ಟಿಕೆಟ್‌ ದರ 199 ರೂಪಾಯಿ. ಬೆಳಗ್ಗೆ 11ರಿಂದ ರಾತ್ರಿ 7.40ರವರೆಗೆ ಹಲವು ಶೋಗಳು ಇರುತ್ತವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಗರ್ಭಗುಡಿಗೆ ನುಗ್ಗಿ ದೇವರ ಕಿರೀಟಕ್ಕೇ ಕನ್ನ ಹಾಕಿದ ಕಳ್ಳ! ಪರಾರಿಯಾಗುವಾಗ ಮಾಡಿದ್ದೇನು? ವಿಡಿಯೊ ನೋಡಿ!

Viral Video: ವ್ಯಕ್ತಿಯೊಬ್ಬ ಭಕ್ತನಂತೆ ಸೋಗು ಹಾಕಿಕೊಂಡು ದೇವಾಲಯಕ್ಕೆ ಪ್ರವೇಶಿಸಿ ದೇವರ ತಲೆಯಲ್ಲಿರುವ ಬೆಳ್ಳಿಯ ಕಿರೀಟಕ್ಕೆ ಕನ್ನ ಹಾಕಿದ್ದಾನೆ. ಕದ್ದು ಓಡಿಹೋಗುವ ಮೊದಲು ಅದನ್ನು ಚೀಲದಲ್ಲಿ ಇರಿಸಿ, ದೇವರ ವಿಗ್ರಹಕ್ಕೆ ಕೈಮುಗಿದು ಪ್ರಾರ್ಥಿಸುತ್ತಾ ಕ್ಷಮೆಯಾಚಿಸುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಶಂಕಿತನನ್ನು ಪತ್ತೆಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

VISTARANEWS.COM


on

Viral Video
Koo

ಮುಂಬೈ: ಸಾಮಾನ್ಯವಾಗಿ ಕಳ್ಳರು ಕಳ್ಳತನ ಮಾಡಲು ಮನೆ, ಅಂಗಡಿಗಳನ್ನು ಆರಿಸಿಕೊಳ್ಳುತ್ತಾರೆ. ಆದರೆ ದೇವಸ್ಥಾನದಲ್ಲಿ ಕಳ್ಳತನ ಮಾಡಲು ಕೆಲವು ಕಳ್ಳರು ಹೆದರುತ್ತಾರೆ. ಯಾಕೆಂದರೆ ಇದರಿಂದ ದೇವರ ಶಾಪಕ್ಕೆ ಗುರಿಯಾಗಿ ಆಪತ್ತಾಗಬಹುದೆಂಬ ಭಯವಿರುತ್ತದೆ. ಆದರೆ ಇಲ್ಲೊಬ್ಬ ಕಳ್ಳ ಕಳ್ಳತನ ಮಾಡಲು ದೇವಸ್ಥಾನಕ್ಕೆ ನುಗ್ಗಿದಲ್ಲದೇ ಸೀದಾ ದೇವರ ಬೆಳ್ಳಿ ಕಿರೀಟಕ್ಕೆ ಕೈ ಹಾಕಿದ್ದಾನೆ. ಆತನ ಕಳ್ಳತನದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಮುಂಬೈನ ಬೋರಿವಲಿಯ ದತ್ತಪ್ಡಾ ಪ್ರದೇಶದ ವಿಠ್ಠಲ ದೇವಸ್ಥಾನದಲ್ಲಿ ಈ ಕಳ್ಳತನದ ಘಟನೆ ನಡೆದಿದ್ದು, ದೇವಸ್ಥಾನದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಭಕ್ತನಾಗಿ ದೇವಾಲಯಕ್ಕೆ ಪ್ರವೇಶಿಸಿ ದೇವರ ತಲೆಯಲ್ಲಿರುವ ಬೆಳ್ಳಿಯ ಕಿರೀಟಕ್ಕೆ ಕನ್ನ ಹಾಕಿದ್ದಾನೆ. ಕದ್ದು ಓಡಿಹೋಗುವ ಮೊದಲು ಅದನ್ನು ಚೀಲದಲ್ಲಿ ಇರಿಸಿ, ದೇವರ ವಿಗ್ರಹಕ್ಕೆ ಕೈಮುಗಿದು ಪ್ರಾರ್ಥಿಸುತ್ತಾ ಕ್ಷಮೆಯಾಚಿಸುವುದು ಕಂಡು ಬಂದಿದೆ. ವೈರಲ್ ಆಗಿರುವ ಸಿಸಿಟಿವಿ ವಿಡಿಯೊದಲ್ಲಿ, ಜುಲೈ 17ರ ಬುಧವಾರ ಬೆಳಗ್ಗೆ 10:07ರ ಸುಮಾರಿಗೆ ವ್ಯಕ್ತಿ ದೇವಾಲಯವನ್ನು ಪ್ರವೇಶಿಸುವುದನ್ನು ಕಾಣಬಹುದು. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಶಂಕಿತನನ್ನು ಪತ್ತೆಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

ದೇವಸ್ಥಾನದಲ್ಲಿ ಕಳ್ಳತನ ಪ್ರಕರಣ ಇದೇ ಮೊದಲಲ್ಲ. ಇದಕ್ಕೂ ಮೊದಲು ಹಲವು ಕಡೆ ದೇವಸ್ಥಾನದಲ್ಲಿ ಕಳ್ಳರು ದರೋಡೆ ಮಾಡಿದ್ದಾರೆ. ನವಿ ಮುಂಬೈನ ಐರೋಲಿ ಪ್ರದೇಶದ ದತ್ ಮಂದಿರದಲ್ಲಿ ಫೆಬ್ರವರಿ 21 ಮತ್ತು ಫೆಬ್ರವರಿ 22 ರ ಮಧ್ಯರಾತ್ರಿ ಕಳ್ಳರು ದೇವಾಲಯಕ್ಕೆ ನುಗ್ಗಿ ಆವರಣದಲ್ಲಿರುವ ದೇಣಿಗೆ ಪೆಟ್ಟಿಗೆಯಿಂದ 20,000 ರೂ.ಗಳನ್ನು ಕದ್ದ ನಂತರ ನವೀ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: 8 ವರ್ಷದ ಮಗನ ತಲೆ ನೆಲಕ್ಕೆ ಅಪ್ಪಳಿಸಿ, ಮೈಕೈಯೆಲ್ಲ ಕಚ್ಚಿದ ತಾಯಿ; ವಿಡಿಯೊ ನೋಡಿ ಜನಾಕ್ರೋಶ

ಅಲ್ಲದೇ ಜೂನ್ 20ರಂದು ಗರ್ಲದಿನ್ನೆ ಮಂಡಲದ ಕೋಟಂಕ ಗ್ರಾಮದ ಬಳಿಯ ಗುಂಟಿ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಳ್ಳರು ದೇವಾಲಯದ ಬೀಗಗಳನ್ನು ಮುರಿದು 16 ಕೆಜಿ ಬೆಳ್ಳಿ ಆಭರಣಗಳು, 8 ತೊಲ ಚಿನ್ನದ ಆಭರಣಗಳು ಮತ್ತು 13 ಲಕ್ಷ ರೂ.ಮೌಲ್ಯದ ಎರಡು ಹುಂಡಿಗಳನ್ನು ಮುರಿದು 15,000 ರೂ. ನಗದು ದೋಚಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಅಂತರರಾಜ್ಯ ಕಳ್ಳರ ಗುಂಪನ್ನು ಪೊಲೀಸರು ಬಂಧಿಸಿದ್ದರು.

Continue Reading

Latest

Dog Attacks: ಬಡಪಾಯಿ ಡೆಲಿವರಿ ಮ್ಯಾನ್‌ನನ್ನು ಭೀಕರವಾಗಿ ಕಚ್ಚಿದ ಶ್ರೀಮಂತರ ಮನೆಯ ನಾಯಿಗಳು; ವಿಡಿಯೊ ಇದೆ

Dog Attacks: ವೈದ್ಯರೊಬ್ಬರ ಮನೆಗೆ ಡೆಲಿವರಿ ಮಾಡಲು ಬಂದ ವ್ಯಕ್ತಿಯ ಮೇಲೆ ಅವರ ಮನೆಯಲ್ಲಿ ಸಾಕಿದ ಎರಡು ಪಿಟ್‌ಬುಲ್‌ ನಾಯಿಗಳು ಭೀಕರವಾಗಿ ದಾಳಿ ಮಾಡಿವೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಂಧ್ಯಾ ರಾವ್ ಎಂಬ ವೈದ್ಯರ ಮನೆಗೆ ಡೆಲಿವರಿ ನೀಡಲು ಡೆಲಿವರಿ ಮ್ಯಾನ್‌ ಆಟೋದಲ್ಲಿ ಬಂದಿದ್ದಾಗ ಈ ಘಟನೆ ನಡೆದಿದೆ.

VISTARANEWS.COM


on

Dog Attacks
Koo

ವೈದ್ಯರೊಬ್ಬರ ಮನೆಗೆ ಫುಡ್ ಡೆಲಿವರಿ ಮಾಡಲು ಬಂದ ಡೆಲಿವರಿ ಮ್ಯಾನ್ ಮೇಲೆ ಅವರ ಮನೆಯಲ್ಲಿ ಸಾಕಿದ ಎರಡು ಪಿಟ್‌ ಬುಲ್‌ ನಾಯಿಗಳು ದಾಳಿ ಮಾಡಿದ ಘಟನೆ ಛತ್ತೀಸ್‌ಗಢದ ರಾಯ್ಪುರದ ಖಮರ್ದಿಹ್ ಪೊಲೀಸ್ ಠಾಣೆ ವ್ಯಾಪ್ತಿಯ ಅನುಪಮ್ ನಗರದಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Dog Attacks) ಆಗಿದೆ. ಇಷ್ಟಾಗಿಯೂ ಆ ನಾಯಿಗಳ ಮಾಲಕಿ, ಡೆಲಿವರ್‌ ಮ್ಯಾನ್‌ನದ್ದೇ ತಪ್ಪು ಎಂದು ಆರೋಪಿಸಿದ್ದಾಳೆ. ಇದು ಜನಾಕ್ರೋಶಕ್ಕೆ ಕಾರಣವಾಗಿದೆ.

ನಾಯಿಗಳ ದಾಳಿಗೆ ಒಳಗಾದ ಡೆಲಿವರಿ ಮ್ಯಾನ್ ಸಲ್ಮಾನ್ ಎಂಬುದಾಗಿ ತಿಳಿದು ಬಂದಿದೆ. ವಿಡಿಯೊದಲ್ಲಿ ಸಲ್ಮಾನ್‌ ಅನ್ನು ನಾಯಿಗಳು ಕಚ್ಚುತ್ತಿರುವುದು ಕಂಡುಬಂದಿದೆ. ಈ ವೇಳೆ ಅವನು ನೋವಿನಿಂದ ನರಳುತ್ತಿದ್ದು, ಹಾಗೂ ನಾಯಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ದುರದೃಷ್ಟವಶಾತ್, ಅಲ್ಲಿ ಯಾರೂ ಕೂಡ ಸಲ್ಮಾನ್‌ ಸಹಾಯಕ್ಕೆ ಬರಲಿಲ್ಲ. ಕೊನೆಗೆ ಬೇರೆ ದಾರಿ ಕಾಣದೇ ಹೊರಗೆ ಓಡಿ ನಾಯಿಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಅಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಹತ್ತಿ ಕುಳಿತು ಜೀವ ಉಳಿಸಿಕೊಂಡಿದ್ದಾನೆ. ನಾಯಿಗಳು ಹೊರಟುಹೋದ ನಂತರ, ಯಾರೋ ಒಬ್ಬ ವ್ಯಕ್ತಿ ಸಲ್ಮಾನ್‌ಗೆ ಕುಡಿಯಲು ನೀರಿನ ಬಾಟಲಿಯನ್ನು ನೀಡಿದ್ದಾರೆ. ಹಾಗೂ ನಂತರ ಸಲ್ಮಾನ್ ಅವರ ಕೈ ಮತ್ತು ಕಾಲುಗಳು ರಕ್ತಸಿಕ್ತವಾಗಿದ್ದು, ಅವರಿಗೆ ರಕ್ತವನ್ನು ಒರೆಸಿಕೊಳ್ಳುವಂತೆ ಮಹಿಳೆಯೊಬ್ಬರು ಬಟ್ಟೆ ತಂದು ಕೊಟ್ಟಿದ್ದಾರೆ.

ಈ ವಿಡಿಯೊ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಹಲವರು ಕಾಮೆಂಟ್ ಮಾಡಿದ್ದಾರೆ. ನಾಯಿಯ ಮಾಲೀಕನನ್ನು ಜೈಲಿಗೆ ಕಳುಹಿಸಿಬೇಕೆಂದು ಒಬ್ಬರು ಹೇಳಿದ್ದಾರೆ. ಹಾಗೇ ಮತ್ತೊಬ್ಬರು ಅವರು ವೈದ್ಯಕೀಯ ಶುಲ್ಕಗಳನ್ನು ಡೆಲಿವರಿ ಮ್ಯಾನ್‌ಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ವರದಿ ಪ್ರಕಾರ, ಸಂಧ್ಯಾ ರಾವ್ ಎಂಬ ಮಹಿಳೆ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಡಾ. ಸಂಧ್ಯಾ ರಾವ್ ಅವರು ತಮ್ಮ ಮನೆಯಲ್ಲಿ 3 ನಾಯಿಗಳನ್ನು ಸಾಕಿದ್ದಾರೆ. ಮೂರು ನಾಯಿಗಳಲ್ಲಿ ಎರಡು ಅಪಾಯಕಾರಿ ಪಿಟ್‌ ಬುಲ್‌ ತಳಿಯಾಗಿವೆ. ಶುಕ್ರವಾರ ಡೆಲಿವರಿ ಮ್ಯಾನ್ ಸಂಧ್ಯಾ ರಾವ್ ಅವರ ಮನೆಗೆ ಆಟೋದಲ್ಲಿ ಬಂದಿದ್ದಾಗ ಅವರು ಮನೆಯೊಳಗೆ ಹೋಗಲು ಬಾಗಿಲನ್ನು ತಲುಪಿದ ಕೂಡಲೇ 2 ಪಿಟ್ಬುಲ್ ನಾಯಿಗಳು ಸಲ್ಮಾನ್‌ ಮೇಲೆ ದಾಳಿ ಮಾಡಿದವು. ನಾಯಿಗಳು ಆತನ ಕೈ ಮತ್ತು ಕಾಲುಗಳನ್ನು ತೀವ್ರವಾಗಿ ಕಚ್ಚಿವೆ.

Dog Attacks

ಇದನ್ನೂ ಓದಿ: 8 ವರ್ಷದ ಮಗನ ತಲೆ ನೆಲಕ್ಕೆ ಅಪ್ಪಳಿಸಿ, ಮೈಕೈಯೆಲ್ಲ ಕಚ್ಚಿದ ತಾಯಿ; ವಿಡಿಯೊ ನೋಡಿ ಜನಾಕ್ರೋಶ

ದಾಳಿಯ ನಂತರ ನೆರೆಹೊರೆಯವರು ಸಲ್ಮಾನ್ ಅನ್ನು ಆಸ್ಪತ್ರೆಗೆ ಕರೆದೊಯ್ದರು ಎಂದು ವರದಿಗಳು ತಿಳಿಸಿವೆ. ಅಲ್ಲದೇ ನಾಯಿ ಮಾಲೀಕರು ತಮ್ಮನ್ನು ಕರೆಯದೇ ಒಳಗೆ ಬಂದಿದ್ದಕ್ಕೆ ಹೀಗೆ ಆಗಿರುವುದಾಗಿ ಸಲ್ಮಾನ್‌ ಅನ್ನೇ ದೂಷಿಸಿದ್ದಾರೆ! ಸಲ್ಮಾನ್ ಅವರ ದೂರಿನ ನಂತರ ಸೋಮವಾರ ಬೆಳಗ್ಗೆ ಮುನ್ಸಿಪಲ್ ಕಾರ್ಪೊರೇಷನ್ ತಂಡವು ವೈದ್ಯರ ಮನೆಗೆ ನಾಯಿಗಳನ್ನು ಹಿಡಿಯಲು ಬಂದಿದ್ದರು. ಆದರೆ ಬರಿಗೈಯಲ್ಲಿ ವಾಪಸ್‌ ಹೋಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

Continue Reading

ವಿದೇಶ

Mashco Piro Tribe: ಮೊದಲ ಬಾರಿ ಹೊರ ಜಗತ್ತಿಗೆ ಕಾಣಿಸಿಕೊಂಡ ಮಾಶ್ಕೊ ಪಿರೋ ಬುಡಕಟ್ಟು ಸಮುದಾಯ!

ಪ್ರಪಂಚದ ಅತೀ ದೊಡ್ಡ ಬುಡಕಟ್ಟು ಸಮುದಾಯವೊಂದು (World’s Largest Tribe) ಪೆರುವಿಯನ್ ಅಮೆಜಾನ್‌ನ ನದಿ ದಡದಲ್ಲಿ ಕಾಣಿಸಿಕೊಂಡಿದೆ. ಹೊರ ಜಗತ್ತಿನ ಸಮರ್ಕವಿಲ್ಲದ ಇವರ ಅಪರೂಪದ ಫೋಟೋ, ವಿಡಿಯೋಗಳನ್ನು ʼಸರ್ವೈವಲ್ ಇಂಟರ್‌ನ್ಯಾಷನಲ್ʼ ಬಿಡುಗಡೆ ಮಾಡಿದೆ. ಮಾಶ್ಕೊ ಪಿರೋ ಬುಡಕಟ್ಟು ಸಮುದಾಯ ಎದುರಿಸುತ್ತಿರುವ ಅಪಾಯದ ಬಗ್ಗೆ ಕಳವಳ ವ್ಯಕ್ತವಾಗುತ್ತಿರುವುದರ ಬೆನ್ನಲ್ಲೇ ಈ ವಿಡಿಯೊ ಹೊರ ಬಂದಿದೆ.

VISTARANEWS.COM


on

By

World's Largest Tribe
Koo

ಪ್ರಪಂಚದ ಅತೀ ದೊಡ್ಡ ಬುಡಕಟ್ಟು ಸಮುದಾಯವೊಂದು (World’s Largest Tribe) ಪೆರುವಿಯನ್ ಅಮೆಜಾನ್ ನಲ್ಲಿ (Peruvian Amazon) ಇದೆ. ಆದರೆ ಇವರದು ಹೊರ ಜಗತ್ತಿನ ಸಂಪರ್ಕವಿಲ್ಲದ ಬುಡಕಟ್ಟು ಸಮುದಾಯ. ಇದೇ ಮೊದಲ ಬಾರಿಗೆ ಮಾಶ್ಕೊ ಪಿರೋ (Mashco Piro) ಸಮುದಾಯದ ಜನರ ಚಲನವಲನದ ಅಪರೂಪದ ದೃಶ್ಯಗಳನ್ನು ʼಸರ್ವೈವಲ್ ಇಂಟರ್ನ್ಯಾಷನಲ್ʼ ಬಿಡುಗಡೆ ಮಾಡಿದೆ.

ಮಾಶ್ಕೊ ಪಿರೋ ಬುಡಕಟ್ಟು ಸಮುದಾಯದ ಯೋಗಕ್ಷೇಮದ ಕಾಳಜಿ ಹೆಚ್ಚಾಗುತ್ತಿರುವ ಮಧ್ಯೆಯೇ ಈ ವಿಡಿಯೋ ತುಣುಕು ಬಿಡುಗಡೆಯಾಗಿದೆ. ಇದರಲ್ಲಿ ಮಾಶ್ಕೊ ಪಿರೋ ಬುಡಕಟ್ಟು ಸಮುದಾಯದ ಹಲವಾರು ಸದಸ್ಯರು ನದಿಯ ದಡದಲ್ಲಿ ವಿಶ್ರಾಂತಿ ಪಡೆಯುತ್ತಿರುವುದನ್ನು ಈ ದೃಶ್ಯದಲ್ಲಿ ತೋರಿಸಲಾಗಿದೆ.

ಈ ಪ್ರದೇಶದಲ್ಲಿ ಮರಗಳನ್ನು ಕಡಿಯುವುದು ಹೆಚ್ಚಾಗಿರುವುದರಿಂದ ಇಲ್ಲಿರುವ ಮಾಶ್ಕೊ ಪಿರೋ ಬುಡಕಟ್ಟು ಜನಾಂಗಕ್ಕೆ ಅಪಾಯ ಎದುರಾಗಿದೆ. ಅವರ ಸಾಂಪ್ರದಾಯಿಕ ಭೂಮಿಯಿಂದ ಅವರು ಹೊರಗೆ ತಳ್ಳಲ್ಪಡುತ್ತಿದ್ದಾರೆ. ಮಾಶ್ಕೊ ಪಿರೋ ಜನಾಂಗದವರು ಆಹಾರ ಮತ್ತು ಸುರಕ್ಷಿತ ಆಶ್ರಯಕ್ಕಾಗಿ ಹುಡುಕಾಡುತ್ತ ವಲಸೆ ಹೋಗುತ್ತಿರಬಹುದು ಎನ್ನಲಾಗಿದೆ.

ಬ್ರೆಜಿಲ್‌ನ ಗಡಿಯಲ್ಲಿರುವ ಆಗ್ನೇಯ ಪೆರುವಿಯನ್ ಪ್ರಾಂತ್ಯದ ಮ್ಯಾಡ್ರೆ ಡಿ ಡಿಯೋಸ್‌ನ ನದಿಯ ದಡದ ಬಳಿ ಜೂನ್ ಅಂತ್ಯದಲ್ಲಿ ಈ ವಿಡಿಯೋಗಳನ್ನು ತಗೆದಿರುವುದಾಗಿ ʼಸರ್ವೈವಲ್ ಇಂಟರ್‌ನ್ಯಾಷನಲ್ʼ ವರದಿ ಮಾಡಿದೆ.

ಮರಗಳನ್ನು ಕಡಿಯುವ ಕಾರ್ಯಾಚರಣೆ ಪ್ರಾರಂಭಿಸಿರುವ ಸ್ಥಳದಿಂದ ಕೆಲವು ಕಿಲೋಮೀಟರ್ ದೂರದಲ್ಲಿ ಹೆಚ್ಚಿನ ಸಂಖ್ಯೆಯ ಮ್ಯಾಶ್ಕೊ ಪಿರೋಗಳು ವಾಸಿಸುತ್ತಿದ್ದಾರೆ ಎಂದು ಸರ್ವೈವಲ್ ಇಂಟರ್ನ್ಯಾಷನಲ್ ನಿರ್ದೇಶಕಿ ಕ್ಯಾರೋಲಿನ್ ಪಿಯರ್ಸ್ ಹೇಳಿದ್ದಾರೆ.

ಮಾಂಟೆ ಸಾಲ್ವಾಡೊ ಎಂಬ ಯಿನ್ ಜನರ ಹಳ್ಳಿಯ ಬಳಿ ಇತ್ತೀಚಿಗೆ 50ಕ್ಕೂ ಹೆಚ್ಚು ಮ್ಯಾಶ್ಕೊ ಪಿರೋ ಜನರು ಕಾಣಿಸಿಕೊಂಡರು. 17 ಜನರ ಮತ್ತೊಂದು ಗುಂಪು ಪೋರ್ಟೊ ನ್ಯೂವೊ ಎಂಬ ಹಳ್ಳಿಯಲ್ಲಿ ಕಾಣಿಸಿಕೊಂಡಿದೆ ಎಂದು ಸ್ಥಳೀಯ ಹಕ್ಕುಗಳನ್ನು ರಕ್ಷಿಸುವ ಎನ್‌ಜಿಒ ಒಂದು ಹೇಳಿದೆ.

World's Largest Tribe


ಮಡ್ರೆ ಡಿ ಡಿಯೋಸ್‌ನ ಕಾಡಿನಲ್ಲಿ ಎರಡು ಪ್ರದೇಶದಲ್ಲಿ ವಾಸಿಸುವ ಮಾಶ್ಕೊ ಪಿರೋ ನಿಯಮದಂತೆ ವಿರಳವಾಗಿ ಕಾಣಿಸಿಕೊಂಡಿದ್ದಾರೆ. ಅವರು ಯಾರೊಂದಿಗೂ ಹೆಚ್ಚು ಸಂವಹನ ನಡೆಸುವುದಿಲ್ಲ. ಹಲವಾರು ಕಂಪೆನಿಗಳು ಮ್ಯಾಶ್ಕೊ ಪಿರೋ ವಾಸಿಸುವ ಪ್ರದೇಶದೊಳಗೆ ಮರವನ್ನು ಕಡಿಯಲು ಅನುಮತಿ ಹೊಂದಿವೆ. ಒಂದು ಕಂಪನಿ ಮರಗಳನ್ನು ಸಾಗಿಸಲು ಟ್ರಕ್‌ಗಳಿಗಾಗಿ 200 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರ ರಸ್ತೆಗಳನ್ನು ನಿರ್ಮಿಸಿದೆ ಎಂದು ಸರ್ವೈವಲ್ ಇಂಟರ್ನ್ಯಾಷನಲ್ ತಿಳಿಸಿದೆ.

ಈ ಬಗ್ಗೆ ಲಿಮಾದಲ್ಲಿನ ಕ್ಯಾನಲ್ಸ್ ತಹುಮಾನು ಪ್ರತಿನಿಧಿಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಂಪೆನಿಯು ಫಾರೆಸ್ಟ್ ಸ್ಟೀವರ್ಡ್‌ಶಿಪ್ ಕೌನ್ಸಿಲ್‌ನಿಂದ ಪ್ರಮಾಣೀಕರಿಸಲ್ಪಟ್ಟಿದೆ. ಅದರ ಪ್ರಕಾರ ಇದು ಕಾಡಿನ ನಿರ್ದಿಷ್ಟ ಸಂಪನ್ಮೂಲಗಳನ್ನು ಹೊರತೆಗೆಯಲು ಮ್ಯಾಡ್ರೆ ಡಿ ಡಿಯೋಸ್‌ನಲ್ಲಿ 53,000 ಹೆಕ್ಟೇರ್ ಕಾಡುಗಳನ್ನು ಹೊಂದಿದೆ ಎನ್ನಲಾಗಿದೆ.


ಈ ಕುರಿತು ಪ್ರತಿಕ್ರಿಯಿಸಿರುವ ಪೆರುವಿಯನ್ ಸರ್ಕಾರವು ಜೂನ್ 28ರಂದು ಮಡ್ರೆ ಡಿ ಡಿಯೋಸ್‌ನ ರಾಜಧಾನಿ ಪೋರ್ಟೊ ಮಾಲ್ಡೊನಾಡೊ ನಗರದಿಂದ 150 ಕಿಲೋಮೀಟರ್ ದೂರದಲ್ಲಿರುವ ಲಾಸ್ ಪೀಡ್ರಾಸ್ ನದಿಯ ದಡದಲ್ಲಿ ಮಾಶ್ಕೊ ಪಿರೊವನ್ನು ನೋಡಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ವರದಿ ಮಾಡಿದ್ದಾರೆ ಎಂದು ತಿಳಿಸಿದೆ. ಬ್ರೆಜಿಲ್‌ನ ಗಡಿಯುದ್ದಕ್ಕೂ ಮ್ಯಾಶ್ಕೊ ಪಿರೋ ಕಾಣಿಸಿಕೊಂಡಿದೆ ಎಂದು ಬ್ರೆಜಿಲಿಯನ್ ಕ್ಯಾಥೊಲಿಕ್ ಬಿಷಪ್‌ಗಳ ಸ್ಥಳೀಯ ಮಿಷನರಿ ಕೌನ್ಸಿಲ್‌ನಲ್ಲಿ ರೋಸಾ ಪಡಿಲ್ಹಾ ಹೇಳಿದ್ದಾರೆ.

ಇದನ್ನೂ ಓದಿ: United Nations: ಗಾಜಾದಲ್ಲಿ ಸಂಪೂರ್ಣ ಕದನ ವಿರಾಮ ಘೋಷಿಸಿ; ವಿಶ್ವಸಂಸ್ಥೆಯಲ್ಲಿ ಪುನರುಚ್ಚರಿಸಿದ ಭಾರತ

ಅವರು ಪೆರುವಿಯನ್ ಭಾಗದಲ್ಲಿ ಲಾಗರ್ಸ್‌ನಿಂದ ವಲಸೆ ಹೋಗುತ್ತಿದ್ದಾರೆ. ಈ ಸಮಯದಲ್ಲಿ ಅವರು ಟ್ರಾಕಾಜಾ ಅಂದರೆ ಅಮೆಜಾನ್ ಆಮೆಗಳ ಮೊಟ್ಟೆಗಳನ್ನು ತೆಗೆದುಕೊಳ್ಳಲು ಕಡಲತೀರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ಯಾವ ಕ್ಷಣ ಏನು ಮಾಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಶಾಂತಿಯ ವರ್ತನೆ ತೋರುವುದಿಲ್ಲ. ದಾಳಿಗೆ ಮುಂದಾಗುತ್ತಾರೆ. ಜನರನ್ನು ಕಂಡಾಕ್ಷಣ ಓಡಿ ಹೋಗುತ್ತಾರೆ ಎಂದು ಪಡಿಲ್ಹಾ ತಿಳಿಸಿದ್ದಾರೆ.

Continue Reading

Latest

Bajaj Freedom 125 CNG Bike: ಬಜಾಜ್ ಸಿಎನ್‌ಜಿ ಬೈಕ್ ಬುಕ್‌ ಮಾಡಿದರೆ 3 ತಿಂಗಳು ಕಾಯಬೇಕು!

ಬಜಾಜ್ ಫ್ರೀಡಂ 125 ಸಿಎನ್ ಜಿ ಬೈಕ್ (Bajaj Freedom 125 CNG Bike) ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಸಿಎನ್ ಜಿ ಮತ್ತು ಪೆಟ್ರೋಲ್ ಬದಲಾವಣೆ ನಡೆಸಬಹುದಾದ ಆಯ್ಕೆಯನ್ನು ನೀಡುತ್ತದೆ. ಅತ್ಯಾಧುನಿಕ ವಿನ್ಯಾಸ, ನವೀನ ತಂತ್ರಜ್ಞಾನದೊಂದಿಗೆ ಟೆಕ್ ಪ್ಯಾಕಿಂಗ್ ಮತ್ತು ಆರಾಮದಾಯಕ ಸವಾರಿಗಾಗಿ ವಿಸ್ತೃತ ಆಸನವನ್ನು ಒಳಗೊಂಡಿರುವ ಈಗಾಗಲೇ ಇದಕ್ಕೆ ಬುಕ್ಕಿಂಗ್ ಪ್ರಾರಂಭವಾಗಿದೆ.

VISTARANEWS.COM


on

By

Bajaj Freedom 125 CNG Bike
Koo

ಸಿಎನ್‌ಜಿ (CNG) ಮತ್ತು ಪೆಟ್ರೋಲ್ (petrol) ಬದಲಾವಣೆ ನಡೆಸಬಹುದಾದ ಆಯ್ಕೆಯನ್ನು ನೀಡುವ ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್ (Bajaj Freedom 125 CNG Bike) ಈಗಾಗಲೇ ಬಿಡುಗಡೆಯಾಗಿದೆ. ಅತ್ಯಾಧುನಿಕ ವಿನ್ಯಾಸ, ನವೀನ ತಂತ್ರಜ್ಞಾನದೊಂದಿಗೆ ಟೆಕ್ ಪ್ಯಾಕಿಂಗ್ ಮತ್ತು ಆರಾಮದಾಯಕ ಸವಾರಿಗಾಗಿ ವಿಸ್ತೃತ ಆಸನವನ್ನು ಇದು ಒಳಗೊಂಡಿದ್ದು, ಸವಾರರ ಗಮನ ಸೆಳೆದಿದೆ. 125 ಸಿಎನ್‌ಜಿ ಮೋಟಾರ್‌ ಸೈಕಲ್ ವಿಶ್ವದ ಮೊದಲ ಸಿಎನ್‌ಜಿ ಬೈಕ್ ಆಗಿದೆ. ಈಗಾಗಲೇ ಇದಕ್ಕೆ ಬುಕ್ಕಿಂಗ್ ಪ್ರಾರಂಭವಾಗಿದ್ದು, ಬಜಾಜ್‌ನ ಹೊಸ ಸಿಎನ್‌ಜಿ ಬೈಕ್‌ ಪಡೆಯಲು ಕಾಯುವ ಅವಧಿಯನ್ನು ಈಗ ಮೂರು ತಿಂಗಳಿಗೆ ವಿಸ್ತರಿಸಲಾಗಿದೆ.

Bajaj Freedom 125 CNG Bike


ಬೆಲೆ ಎಷ್ಟು?

ಬಜಾಜ್ ಫ್ರೀಡಂ 125 ಮೂರು ಆವೃತ್ತಿಗಳಲ್ಲಿ ಬಂದಿದೆ. ಫ್ರೀಡಮ್ 125 ಎನ್ ಜಿ04 ಡಿಸ್ಕ್ ಎಲ್ ಇಡಿ, ಫ್ರೀಡಮ್ 125 ಎನ್ ಜಿ04 ಡ್ರಮ್ ಎಲ್ ಇಡಿ ಮತ್ತು ಫ್ರೀಡಮ್ 125 ಎನ್ ಜಿ04 ಡ್ರಮ್.

ಬಜಾಜ್ ದ್ವಿ-ಇಂಧನ ಬೈಕ್‌ನ ಆರಂಭಿಕ ಬೆಲೆ 95,000 ರೂ.ನಿಂದ ಪರಿಚಯಿಸಲಾಗಿದೆ. ಹ್ಯಾಲೊಜೆನ್ ದೀಪಗಳನ್ನು ಒಳಗೊಂಡಿರುವ ಎನ್ ಜಿ 04 ಡ್ರಮ್ ರೂಪಾಂತರ, ಫ್ರೀಡಂ 125 ಎನ್ ಜಿ 04 ಡ್ರಮ್ ಎಲ್ ಇಡಿ ರೂಪಾಂತರ 1.05 ಮತ್ತು 1.10 ಲಕ್ಷ ರೂ. ಆರಂಭಿಕ ಬೆಲೆಯನ್ನು ಹೊಂದಿದೆ.

ಕಾಯುವ ಅವಧಿ ಎಷ್ಟು?

ಬಜಾಜ್ ಸಿಎನ್‌ಜಿ ಬೈಕ್ ಬುಕ್ಕಿಂಗ್ ಮುಂಬಯಿ, ಪುಣೆ ಮತ್ತು ಗುಜರಾತ್‌ನ ಆಯ್ದ ನಗರಗಳಲ್ಲಿ ಪ್ರಾರಂಭಿಸಲಾಗಿದೆ. 1,000 ರೂ. ಟೋಕನ್ ಮೊತ್ತ ನೀಡಿ ಬೈಕ್ ಬುಕ್ಕಿಂಗ್ ನಡೆಸಬಹುದು. ಬೇಡಿಕೆ ಹೆಚ್ಚಾದರೆ ಪ್ರತಿ ಪ್ರದೇಶದ ಕಾಯುವ ಅವಧಿಯು ಬದಲಾಗುತ್ತದೆ ಎನ್ನಲಾಗಿದೆ.

ಆಟೋ ಎಕ್ಸ್ ನೀಡಿರುವ ಮಾಹಿತಿ ಪ್ರಕಾರ ಮುಂಬಯಿನಲ್ಲಿ ಬಜಾಜ್ ಫ್ರೀಡಂ ಸಿಎನ್‌ಜಿ ಮೋಟಾರ್‌ ಸೈಕಲ್ 20- 30 ದಿನಗಳ ಕಾಯುವ ಅವಧಿಯನ್ನು ಹೊಂದಿತ್ತು. ಪುಣೆಯಲ್ಲಿ ಕಾಯುವ ಅವಧಿಯು ಸುಮಾರು 30- 45 ದಿನಗಳಾಗಿದ್ದು, ಗುಜರಾತ್‌ನಲ್ಲಿ ಬಜಾಜ್ ಸಿಎನ್‌ಜಿ ಬೈಕ್‌ನ ಕಾಯುವ ಅವಧಿಯು ಕನಿಷ್ಠ 45 ದಿನಗಳಿಗೆ ವಿಸ್ತರಿಸಲಾಗಿದೆ. ಒಟ್ಟಿನಲ್ಲಿ ಗರಿಷ್ಠ ಮೂರು ತಿಂಗಳ ಕಾಯುವ ಅವಧಿಯನ್ನು ನೀಡಲಾಗಿದೆ.

ಇದನ್ನೂ ಓದಿ: Bajaj CNG Bike: ಬಜಾಜ್‌‌ನ ವಿಶ್ವದ ಮೊದಲ ಸಿಎನ್‌‌ಜಿ ಬೈಕ್ ಬೆಲೆ ‌ಕಡಿತ ಸಾಧ್ಯತೆ; ನಿತೀನ್ ಗಡ್ಕರಿ ಸೂಚನೆ

Bajaj Freedom 125 CNG Bike

ವಿಶೇಷತೆಗಳು ಏನೇನು?

ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್ 125 ಸಿಸಿ ಸಿಂಗಲ್- ಸಿಲಿಂಡರ್ ಏರ್ ಕೂಲ್ಡ್ ಎಂಜಿನ್, 2- ಲೀಟರ್ ಟ್ಯಾಂಕ್ ಮತ್ತು 2- ಕೆಜಿ ಸಿಎನ್‌ಜಿ ಸಿಲಿಂಡರ್‌ನೊಂದಿಗೆ ವಿಶ್ವದ ಮೊದಲ ಸಿಎನ್ ಜಿ ಬೈಕ್ ಇದಾಗಿದೆ.
9.4ಬಿಹೆಚ್ ಪಿ ಪವರ್ ಮತ್ತು 9.7ಎನ್ ಪಿ ಗರಿಷ್ಠ ಟಾರ್ಕ್ ಅನ್ನು ಒದಗಿಸುತ್ತದೆ. ಎಂಜಿನ್ ಮತ್ತು ಸಿಎನ್‌ಜಿ ಸಾಮರ್ಥ್ಯವನ್ನು ಇದು ಹೊಂದಿದೆ. ಫ್ರೀಡಂ 125 ಸಿಎನ್‌ಜಿ ಬೈಕ್ 300 ಕಿ.ಮೀ. ಹಾಗೂ ಪೆಟ್ರೋಲ್ ಮೇಲೆ ಪ್ರತಿ ಲೀಟರ್‌ಗೆ 65 ಕಿ.ಮೀ. ಮೈಲೇಜ್ ನೀಡುತ್ತದೆ.

Continue Reading
Advertisement
kiccha sudeep‌ Fans
ಸಿನಿಮಾ9 mins ago

Kiccha Sudeep: ಸೆಲ್ಫಿಗಾಗಿ 2 ಗಂಟೆ ಕಾದ ಅಭಿಮಾನಿಗೆ ಕಿಚ್ಚ ಸುದೀಪ್ ಅವಮಾನ! ವಿಡಿಯೊ ನೋಡಿ

Ratna Bhandar
ದೇಶ16 mins ago

Ratna Bhandar: ಒಂದೇ ವಾರದಲ್ಲಿ ಎರಡನೇ ಬಾರಿ ತೆರೆದ ಪುರಿ ಜಗನ್ನಾಥನ ʼರತ್ನ ಭಂಡಾರʼ

GT World Mall
ಪ್ರಮುಖ ಸುದ್ದಿ25 mins ago

GT World Mall : ಜಿಟಿ ಮಾಲ್​ ಏಳು ದಿನಗಳ ಕಾಲ ಬಂದ್​, ಮಾಲೀಕರಿಂದಲೇ ಸ್ವಯಂಪ್ರೇರಿತ ಕ್ರಮ

Viral Video
Latest28 mins ago

Viral Video: ಗರ್ಭಗುಡಿಗೆ ನುಗ್ಗಿ ದೇವರ ಕಿರೀಟಕ್ಕೇ ಕನ್ನ ಹಾಕಿದ ಕಳ್ಳ! ಪರಾರಿಯಾಗುವಾಗ ಮಾಡಿದ್ದೇನು? ವಿಡಿಯೊ ನೋಡಿ!

Dog Attacks
Latest41 mins ago

Dog Attacks: ಬಡಪಾಯಿ ಡೆಲಿವರಿ ಮ್ಯಾನ್‌ನನ್ನು ಭೀಕರವಾಗಿ ಕಚ್ಚಿದ ಶ್ರೀಮಂತರ ಮನೆಯ ನಾಯಿಗಳು; ವಿಡಿಯೊ ಇದೆ

Kashmir Encounter
ದೇಶ48 mins ago

Kashmir Encounter: ಕಾಶ್ಮೀರದಲ್ಲಿ ಮತ್ತೆ ಎನ್‌ಕೌಂಟರ್‌; ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

Monsoon star fashion Actress Mokshita Pai
ಫ್ಯಾಷನ್55 mins ago

Monsoon star fashion: ಮಾನ್ಸೂನ್‌ ಟ್ರಾವೆಲ್‌ ಫ್ಯಾಷನ್‌ಗೆ ಸೈ ಎಂದ ನಟಿ ಮೋಕ್ಷಿತಾ ಪೈ

KL Rahul
ಪ್ರಮುಖ ಸುದ್ದಿ59 mins ago

KL Rahul : ಕೊರಗಜ್ಜನ ಆದಿ ಸ್ಥಾನಕ್ಕೆಭೇಟಿ ನೀಡಿದ ಕೆ. ಎಲ್​ ರಾಹುಲ್​, ಅಥಿಯಾ ಶೆಟ್ಟಿ ದಂಪತಿ, ವಿಡಿಯೊ ವೈರಲ್

CT Ravi
ಪ್ರಮುಖ ಸುದ್ದಿ1 hour ago

Karnataka Job Reservation : ಹಗರಣಗಳನ್ನು ಮುಚ್ಚಿಡಲು ಕನ್ನಡಿಗರಿಗೆ ಮೀಸಲು ವಿಚಾರ ಮುನ್ನೆಲೆಗೆ ತಂದ ಸರ್ಕಾರ; ಸಿಟಿ ರವಿ ಆರೋಪ

World's Largest Tribe
ವಿದೇಶ1 hour ago

Mashco Piro Tribe: ಮೊದಲ ಬಾರಿ ಹೊರ ಜಗತ್ತಿಗೆ ಕಾಣಿಸಿಕೊಂಡ ಮಾಶ್ಕೊ ಪಿರೋ ಬುಡಕಟ್ಟು ಸಮುದಾಯ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ2 hours ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ4 hours ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ2 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ3 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ3 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ4 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ4 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ4 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ4 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

ಟ್ರೆಂಡಿಂಗ್‌