Viral News: ಸರ್ಕಾರಿ ಕಚೇರಿಯ ಶೌಚಾಲಯದಲ್ಲಿ ಕ್ಲಾಸ್‌ 1 ಅಧಿಕಾರಿಗಳಿಗೆ ಮೀಸಲು! ಫೋಟೊ ನೋಡಿ - Vistara News

Latest

Viral News: ಸರ್ಕಾರಿ ಕಚೇರಿಯ ಶೌಚಾಲಯದಲ್ಲಿ ಕ್ಲಾಸ್‌ 1 ಅಧಿಕಾರಿಗಳಿಗೆ ಮೀಸಲು! ಫೋಟೊ ನೋಡಿ

Viral News: ಭಾರತದ ಪ್ರತಿಷ್ಠಿತ ಸರ್ಕಾರಿ ಕಚೇರಿಯಲ್ಲಿಯೂ ಕೂಡ ಉದ್ಯೋಗಿಗಳ ನಡುವೆ ತಾರತಮ್ಯ ಮಾಡಲಾಗಿದೆ. ಸರ್ಕಾರಿ ಹುದ್ದೆಗಳಲ್ಲಿ ಎಲ್ಲಾ ಉದ್ಯೋಗಿಗಳು ಸಮಾನರೆಂದು ಘೋಷಿಸಲಾಗುತ್ತದೆ. ಆದರೆ ಅಲ್ಲಿ ಕೆಲವು ಶೌಚಾಲಯ ಸ್ಥಳಗಳನ್ನು ಉನ್ನತ ದರ್ಜೆಯ ಅಧಿಕಾರಿಗಳಿಗೆ ಮಾತ್ರ ಕಾಯ್ದಿರಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ಪೋಟೊ ವೈರಲ್ ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

VISTARANEWS.COM


on

Viral News
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ನವದೆಹಲಿ: ಕೆಲವೊಂದು ಖಾಸಗಿ ಸಂಸ್ಥೆಗಳಲ್ಲಿ ಉನ್ನತ ಹುದ್ದೆಯಲ್ಲಿರುವವರಿಗೆ ಶೌಚಾಲಯದ ವ್ಯವಸ್ಥೆ ಬೇರೆ ಕಡೆ ಮಾಡಲಾಗುತ್ತದೆ. ಉದ್ಯೋಗಿಗಳು ಬಳಸುವಂತಹ ಶೌಚಾಲಯಗಳನ್ನು ಕೆಲವು ಉನ್ನತ ಹುದ್ದೆಯವರು ಬಳಸುವುದಿಲ್ಲ. ಇದು ಎಲ್ಲ ಖಾಸಗಿ ಸಂಸ್ಥೆಗಳಿರುವ ಕಡೆ ಸರ್ವೇಸಾಮಾನ್ಯ. ಆದರೆ ಭಾರತದ ಪ್ರತಿಷ್ಠಿತ ಸರ್ಕಾರಿ ಕಚೇರಿಯಲ್ಲಿಯೂ ಕೂಡ ಉದ್ಯೋಗಿಗಳ ನಡುವೆ ತಾರತಮ್ಯ ಮಾಡಲಾಗಿದೆ. ಸರ್ಕಾರಿ ಹುದ್ದೆಗಳಲ್ಲಿ ಎಲ್ಲಾ ಉದ್ಯೋಗಿಗಳು ಸಮಾನರೆಂದು ಘೋಷಿಸಲಾಗುತ್ತದೆ. ಆದರೆ ಅಲ್ಲಿ ಕೆಲವು ಶೌಚಾಲಯ ಸ್ಥಳಗಳನ್ನು ಉನ್ನತ ದರ್ಜೆಯ ಅಧಿಕಾರಿಗಳಿಗೆ ಮಾತ್ರ ಕಾಯ್ದಿರಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ಪೋಟೊ ವೈರಲ್ (Viral News ) ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಈಗ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ಮತ್ತು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‍ಗಳಲ್ಲಿ ವೈರಲ್ ಆಗುತ್ತಿರುವ ಈ ಪೋಟೊದಲ್ಲಿ ಶೌಚಾಲಯದಲ್ಲಿ ಎರಡನ್ನು ಕ್ಲಾಸ್ -1 ಅಧಿಕಾರಿಗಳಿಗೆ ಕಾಯ್ದಿರಿಸಿದ್ದನ್ನು ತೋರಿಸುತ್ತದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಇದನ್ನು ತಾರತಮ್ಯಕ್ಕೆ ಉದಾಹರಣೆ ಎಂದು ಹಲವರು ಕರೆದಿದ್ದಾರೆ. ಇದು “ಸಂಪೂರ್ಣ ನಾಚಿಕೆಗೇಡು” ಎಂದು ಈ ಪೋಟೊವನ್ನು ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡ ಮುದಿತ್ ಗುಪ್ತಾ ತಿಳಿಸಿದ್ದಾರೆ ಹಾಗೂ ಅವರು ಈ ಬೇಧಭಾವವನ್ನು ಖಂಡಿಸಲು ಚಿತ್ರವನ್ನು ಎಕ್ಸ್‌ನಲ್ಲಿ ಫಾರ್ವರ್ಡ್ ಮಾಡಿದರು. ಈ ಚಿತ್ರವನ್ನು ಮೂಲತಃ ರೆಡ್ಡಿಟ್ ಪುಟದಲ್ಲಿ ಅಪ್ಲೋಡ್ ಮಾಡಲಾಗಿದೆ. ಅಲ್ಲಿಯೂ ಇದು ಭಾರಿ ಆಕ್ರೋಶಕ್ಕೆ ಒಳಗಾಗಿದೆ ಎಂಬುದಾಗಿ ತಿಳಿದುಬಂದಿದೆ.

ವಿಶೇಷವೆಂದರೆ, ಶೌಚಾಲಯದಲ್ಲಿ ಮಾಡಿದ ಅಂತಹ ವಿಭಜನೆ ಮತ್ತು ಮೀಸಲಾತಿಗಳ ಬಗ್ಗೆ ಹೆಚ್ಚಿನ ಜನರು ಆಘಾತಕ್ಕೊಳಗಾಗಲಿಲ್ಲ. ಇದು ಹೊಸತೇನು ಅಲ್ಲ, ಇದು ಸಾಮಾನ್ಯ ಪ್ರಕರಣವಾಗಿದೆ ಎಂದು ಅನೇಕ ಜನರು ಹೇಳಿದ್ದಾರೆ. ಆದರೆ ಇದು ಬದಲಾಗಬೇಕು ಎಂದು ಹಲವರು ತಿಳಿಸಿದ್ದಾರೆ.

ಇದನ್ನೂ ಓದಿ: ಮದುವೆಯಾದ ಮೂರೇ ಮೂರು ನಿಮಿಷದೊಳಗೆ ವಿಚ್ಛೇದನ! ಕಾರಣ ವಿಚಿತ್ರ!

ಈ ಶೌಚಾಲಯದ ವಿಚಾರಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿರುತ್ತದೆ. ಶೌಚಾಲಯ ಸ್ವಚ್ಛಗೊಳಿಸಲು ವಿದ್ಯಾರ್ಥಿಗಳನ್ನು ಬಳಸುವುದನ್ನು ನಿಷೇಧಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ ನಂತರವೂ ಕೆಲವು ಸರ್ಕಾರಿ ಶಾಲೆಯಲ್ಲಿ ಶೌಚಾಲಯವನ್ನು ವಿದ್ಯಾರ್ಥಿಗಳು ಸ್ವಚ್ಛಗೊಳಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು, ಈ ಬಗ್ಗೆ ಶಿಕ್ಷಣ ಇಲಾಖೆ ತನಿಖೆ ನಡೆಸುವಂತೆ ಆದೇಶಿಸಿತ್ತು ಎನ್ನಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Tips For Teenager Parents: ಉತ್ತಮ ಪೋಷಕರಾಗಿ; ಹರೆಯದ ಮಕ್ಕಳನ್ನು ಅರ್ಥ ಮಾಡಿಕೊಳ್ಳಿ!

ಹದಿಹರೆಯದವರು ಗೌರವಿಸಲು, ಕೇಳಲು, ಮೌಲ್ಯಯುತ ಮತ್ತು ಮೆಚ್ಚುಗೆ ಪಡೆಯಲು ಬಯಸುತ್ತಾರೆ. ಒಳ್ಳೆಯ ಪೋಷಕರಾಗಬೇಕು (Tips For Teenager Parents) ಎಂದು ಬಯಸುವವರು ಹರೆಯದ ಮಕ್ಕಳನ್ನು ಪೋಷಿಸಲು ಪಾಲನೆಯ ಶೈಲಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬದಲಾವಣೆಗಳನ್ನು ಮಾಡಲು ಸಿದ್ಧರಾಗಿರಬೇಕು. ಹದಿಹರೆಯದವರಿಗೆ ಮಕ್ಕಳಿಗೆ ಒಳ್ಳೆಯ ಪೋಷಕರಾಗಲು ಸಹಾಯ ಮಾಡುವ ಕೆಲವು ಅಂಶಗಳು ಇಲ್ಲಿವೆ.

VISTARANEWS.COM


on

By

Tips For Teenager Parents
Koo

ಪುಟ್ಟ ಮಕ್ಕಳನ್ನು (small kids) ಪಾಲನೆ ಮಾಡುವುದು ಪೋಷಕರಿಗೆ (Tips For Teenager Parents) ಎಷ್ಟು ಕಷ್ಟವೋ ಹದಿಹರೆಯದ ಮಕ್ಕಳನ್ನು (Teenager) ಸಂಭಾಳಿಸುವುದೂ ಅಷ್ಟೇ ಕಠಿಣವಾಗಿರುತ್ತದೆ. ಸಮಯಕ್ಕೆ ಸರಿಯಾಗಿ ಸರಿಯಾದ ಮಾರ್ಗದರ್ಶನ ದೊರೆಯದೇ ಇದ್ದರೆ ಹರೆಯದ ಮಕ್ಕಳು ಹಾದಿ ತಪ್ಪುವ ಅಪಾಯ ಹೆಚ್ಚಾಗಿರುತ್ತದೆ. ಹೀಗಾಗಿ ಹರೆಯದ ವಯಸ್ಸಿನ ಮಕ್ಕಳನ್ನು ಹೇಗೆ ತಿದ್ದುವುದು, ಅವರಿಗೆ ಹೇಗೆ ಸರಿಯಾದ ಮಾರ್ಗದರ್ಶನ ಮಾಡುವುದು ಎಂಬುದನ್ನು ತಿಳಿದುಕೊಳ್ಳುವುದು ಬಹು ಮುಖ್ಯ.

ಹರೆಯದ ಮಕ್ಕಳಿಗೆ ಹೆಚ್ಚು ಶಿಸ್ತು ಬಂಧನ ಎಂದೆನಿಸಿದರೆ, ಹೆಚ್ಚು ಸ್ವಾತಂತ್ರ್ಯ ಅಪಾಯ ತೊಂದೊಡ್ಡುವ ಆತಂಕವಿರುತ್ತದೆ. ಹೀಗಾಗಿ ಹರೆಯದ ಮಕ್ಕಳೊಡನೆ ಪೋಷಕರು ಹೇಗಿರಬೇಕು ಎಂಬುದು ಅರಿತುಕೊಳ್ಳಬೇಕು.

ಹದಿಹರೆಯದವರನ್ನು ಬೆಳೆಸುವುದು ಸಾಕಷ್ಟು ಸವಾಲಿನ ಕಾರ್ಯವಾಗಿರುತ್ತದೆ. ಹೆಚ್ಚಿನ ಪೋಷಕರು ತಮ್ಮ ಹದಿಹರೆಯದ ಮಕ್ಕಳೊಂದಿಗೆ ಉತ್ತಮ ಮತ್ತು ಆರೋಗ್ಯಕರ ಬಾಂಧವ್ಯವನ್ನು ಹಂಚಿಕೊಳ್ಳುವುದು ಅವರು ಸಂತೋಷದಿಂದ ಸಹಬಾಳ್ವೆ ನಡೆಸಲು ಉತ್ತಮ ಮಾರ್ಗವಾಗಿದೆ ಎಂದು ಅರಿತುಕೊಳ್ಳುತ್ತಾರೆ. ಇಲ್ಲಿ ಇಬ್ಬರೂ ಪರಸ್ಪರ ಅಭಿಪ್ರಾಯಗಳನ್ನು ಹೇರದೇ ಇರಲು ಪ್ರಯತ್ನಿಸುತ್ತಾರೆ.

ಹರೆಯದವರಿಗೆ ಒಳ್ಳೆಯ ತಾಯಿಯಾಗಲು ಬಯಸಿದರೆ ಅವರು ನಿಮ್ಮನ್ನು ಮತ್ತೆ ಇಷ್ಟಪಡಬೇಕೆಂದು ಬಯಸಿದರೆ ನೀವು ಅವರ ಆಯ್ಕೆಗಳನ್ನು ಗೌರವಿಸಲು ಕಲಿಯಬೇಕು. ಅವರ ಬಗ್ಗೆ ಸಂಪೂರ್ಣ ನಿರ್ಧಾರವನ್ನು ನೀವು ತೆಗೆದುಕೊಳ್ಳಬಾರದು.

ಹದಿಹರೆಯದವರು ಗೌರವಿಸಲು, ಕೇಳಲು, ಮೌಲ್ಯಯುತ ಮತ್ತು ಮೆಚ್ಚುಗೆ ಪಡೆಯಲು ಬಯಸುತ್ತಾರೆ.ಒಳ್ಳೆಯ ಪೋಷಕರಾಗಬೇಕು ಎಂದು ಬಯಸುವವರು ಹರೆಯದ ಮಕ್ಕಳನ್ನು ಪೋಷಿಸಲು ಪಾಲನೆಯ ಶೈಲಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬದಲಾವಣೆಗಳನ್ನು ಮಾಡಲು ಸಿದ್ಧರಾಗಿರಬೇಕು. ಹದಿಹರೆಯದವರಿಗೆ ಮಕ್ಕಳಿಗೆ ಒಳ್ಳೆಯ ಪೋಷಕರಾಗಲು ಸಹಾಯ ಮಾಡುವ ಕೆಲವು ಅಂಶಗಳು ಇಲ್ಲಿವೆ.

Tips For Teenager Parents
Tips For Teenager Parent


ಗೌಪ್ಯತೆಯನ್ನು ಕಾಪಾಡಿ

ಹದಿಹರೆಯದ ಮಕ್ಕಳು ತಮ್ಮ ಬಿಡುವಿನ ವೇಳೆಯಲ್ಲಿ ಏನು ಮಾಡಲು ಬಯಸುತ್ತಾರೆ ಎಂಬುದನ್ನು ಗೌಪ್ಯವಾಗಿ ಇಡಲು ಬಯಸುತ್ತಾರೆ. ಬಹಳಷ್ಟು ಪೋಷಕರು ಇದನ್ನು ವಿರೋಧಿಸುತ್ತಾರೆ. ಆದರೆ ಹದಿಹರೆಯದವರೊಂದಿಗೆ ಆರೋಗ್ಯಕರ ಬಾಂಧವ್ಯವನ್ನು ಹಂಚಿಕೊಳ್ಳಲು ಬಯಸಿದರೆ ಅವರ ಆಯ್ಕೆಗಳು ಮತ್ತು ಗಡಿಗಳನ್ನು ಗೌರವಿಸಬೇಕು ಮತ್ತು ಅವರಿಗೆ ಗೌಪ್ಯತೆಗೆ ಅವಕಾಶ ಕೊಡಬೇಕು. ಇದನ್ನು ಅವರು ಖಂಡಿತವಾಗಿ ಇಷ್ಟಪಡುತ್ತಾರೆ.

ಮನಸ್ಸನ್ನು ಅರ್ಥ ಮಾಡಿಕೊಳ್ಳಿ

ಹರೆಯದವರ ಪ್ರತಿಯೊಂದು ಕೆಲಸವನ್ನು ಪ್ರಶ್ನಿಸುವುದು, ಮೇಲ್ವಿಚಾರಣೆ ಮಾಡುವುದು ಅವರಿಗೆ ನಿಮ್ಮಿಂದ ಎಲ್ಲವನ್ನು ಮುಚ್ಚಿಡುವಂತೆ ಮಾಡಬಹುದು. ಹದಿಹರೆಯದ ಮಕ್ಕಳನ್ನು ಕೇಳಿ, ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಅನಗತ್ಯವೆಂದು ನಿಮಗನಿಸುವ ವಿಚಾರಗಳನ್ನು ತಿಳಿಸಿ. ಆದರೆ ಅದನ್ನು ಅವರ ಮೇಲೆ ಹೇರಲು ಹೋಗಬೇಡಿ. ಹದಿಹರೆಯದವರಿಗೆ ಕೊಂಚ ಸ್ವಾತಂತ್ರ್ಯ ನೀಡಿ.

ಹರೆಯದವರನ್ನು ಗೌರವಿಸಿ

ಹದಿಹರೆಯದವರು ತಮ್ಮೊಂದಿಗೆ ಯಾವ ರೀತಿಯ ಸಂಬಂಧವನ್ನು ಹಂಚಿಕೊಳ್ಳಲು ಬಯಸುತ್ತಾರೆ ಎಂಬುದನ್ನು ಪೋಷಕರು ಗುರುತಿಸುವುದು ಮುಖ್ಯವಾಗಿದೆ. ಹದಿಹರೆಯದವರು ನಿಮ್ಮೊಂದಿಗೆ ಸ್ನೇಹಿತರಾಗಲು ಬಯಸಬಹುದು, ಆದರೆ ಅವರು ತಮ್ಮ ಶಾಲೆ ಮತ್ತು ಇತರ ಸ್ನೇಹಿತರ ಬಗ್ಗೆ ಎಲ್ಲವನ್ನೂ ಹೇಳಲು ಬಯಸುವುದಿಲ್ಲ. ಪೋಷಕರಾಗಿ ನೀವು ಅವರೊಂದಿಗೆ ಸರಿಯಾಗಿ ವರ್ತಿಸಬೇಕು. ಹದಿಹರೆಯದವರ ಆಯ್ಕೆಗಳನ್ನು ಗೌರವಿಸಿ. ಅವರೊಂದಿಗೆ ಆರಾಮವಾಗಿ ಚರ್ಚಿಸಿ. ಇದು ನಿಮ್ಮ ಮತ್ತು ಅವರ ಸಂಬಂಧವನ್ನು ಆರೋಗ್ಯಕರಗೊಳಿಸುತ್ತದೆ.

ಸಂಭಾಷಣೆಗಳನ್ನು ನಡೆಸಿ

ಪೋಷಕರೊಂದಿಗೆ ಹರೆಯದ ಮಕ್ಕಳ ಭಿನ್ನಾಭಿಪ್ರಾಯ ಬರುವುದು ಸಹಜ. ಕೆಲವು ವಿಷಯಗಳ ಬಗ್ಗೆ ಸಮಯ, ಸಂದರ್ಭ ನೋಡಿ ಅವರೊಂದಿಗೆ ಸಂಭಾಷಣೆಗಳನ್ನು ನಡೆಸಿ. ಹದಿಹರೆಯದ ಮಗುವನ್ನು ಬೆಳೆಸುವುದು ಎಂದರೆ ಅವರೊಂದಿಗೆ ಹೆಚ್ಚು ಮುಕ್ತ ಮತ್ತು ಪ್ರಾಮಾಣಿಕವಾಗಿರಬೇಕು. ಹರೆಯದ ಮಕ್ಕಳೊಂದಿಗೆ ಮಾತನಾಡುವಾಗ ಮುಕ್ತ ಮನಸ್ಸಿನವರಾಗಿರಬೇಕು.

Tips For Teenager Parent
Tips For Teenager Parent


ಹೊಸ ವಿಷಯಗಳನ್ನು ಕಲಿಯಿರಿ

ಪೋಷಕರು ಮಾತ್ರ ತಮ್ಮ ಹರೆಯದ ಮಕ್ಕಳೊಂದಿಗೆ ತಮ್ಮ ಕಲಿಕೆಯನ್ನು ಹಂಚಿಕೊಳ್ಳಬಹುದು ಎಂಬುದು ಎಲ್ಲ ಕಾಲಕ್ಕೂ ಪ್ರಸ್ತುತವಲ್ಲ. ಈಗ ಮಕ್ಕಳ ಆಲೋಚನೆಗಳು ನಮಗಿಂತ ವೇಗವಾಗಿದೆ ಎಂಬುದನ್ನು ತಿಳಿದುಕೊಳ್ಳಿ. ತಮ್ಮ ಮಗುವಿನಿಂದ ಹೊಸ ವಿಷಯಗಳನ್ನು ಕಲಿಯಲು ನೀವು ಆಸಕ್ತರಾಗಿರಬೇಕು. ಹದಿಹರೆಯದವರು ವಿಭಿನ್ನ ಅಭಿರುಚಿಯನ್ನು ಹೊಂದಿರಬಹುದು. ಹೀಗಾಗಿ ಅವರೊಂದಿಗೆ ಮುಕ್ತ ಸಂಭಾಷಣೆಗಳನ್ನು ನಡೆಸಿ. ಅಲ್ಲಿ ಪರಸ್ಪರ ಹೊಸ ಆಲೋಚನೆಗಳು ಹುಟ್ಟಿಕೊಳ್ಳಬಹುದು. ಇದು ನಿಮ್ಮ ಹದಿಹರೆಯದ ಮಕ್ಕಳೊಂದಿಗೆ ನಿಮ್ಮ ಬಾಂಧವ್ಯವನ್ನು ಬಲಪಡಿಸುವುದಲ್ಲದೆ ಇತರ ವಿಷಯಗಳ ಜೊತೆಗೆ ಅವರ ವ್ಯಕ್ತಿತ್ವ, ಜೀವನ, ನಡವಳಿಕೆಯ ಒಳನೋಟವನ್ನು ನಿಮಗೆ ಒದಗಿಸುತ್ತದೆ.

ಇದನ್ನೂ ಓದಿ: Allergies During Monsoon: ಮಳೆಗಾಲದಲ್ಲಿ ಅಲರ್ಜಿ ಸಮಸ್ಯೆಯಿಂದ ಪಾರಾಗುವುದು ಹೇಗೆ?

ಆಲಿಸಿ, ಬೋಧಿಸಬೇಡಿ

ಹದಿಹರೆಯದವರನ್ನು ಬೆಳೆಸಲು ಸಾಕಷ್ಟು ತಾಳ್ಮೆ ಬೇಕಾಗಬಹುದು. ಅವರು ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ನಿಮ್ಮ ಬಳಿಗೆ ಬಂದಾಗ ಅವರು ನಿಮ್ಮಿಂದ ಬಯಸುವುದು ತಾಳ್ಮೆಯ ವಿಚಾರಣೆಯನ್ನು. ಹೀಗಾಗಿ ಹದಿಹರೆಯದವರನ್ನು ಬೆಳೆಸುವಾಗ ಪೋಷಕರು ತಿಳಿದಿರಬೇಕಾದ ಅತ್ಯಂತ ನಿರ್ಣಾಯಕ ಅಂಶವೆಂದರೆ ನಿಮ್ಮ ಮಗುವಿಗೆ ಏನು ತೊಂದರೆಯಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅವರ ಮಾತನ್ನು ಆಲಿಸಿ, ಆದರೆ ಅವರಿಗೆ ಯಾವುದೇ ಬೋಧನೆ ಮಾಡಬೇಡಿ. ಅವರೊಂದಿಗೆ ಮುಕ್ತ ಮನಸ್ಸಿನಿಂದ ಮಾತನಾಡಿ.

Continue Reading

ಕರ್ನಾಟಕ

R Ashok: ಹಗರಣಕೋರರಿಗೆ ಶಿಕ್ಷೆಯಾಗುವವರೆಗೂ ಅಹೋರಾತ್ರಿ ಧರಣಿ; ಆರ್. ಅಶೋಕ್‌ ಘೋಷಣೆ

R Ashok: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಹಾಗೂ ಮುಡಾ ಹಗರಣದ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಅಹೋರಾತ್ರಿ ಧರಣಿ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್‌ ಘೋಷಿಸಿದ್ದಾರೆ. ದಲಿತರ ಹಣ ವಾಪಸ್ ಬರಬೇಕು, ದಲಿತರಿಗೆ ನ್ಯಾಯ ದೊರೆಯಬೇಕು. ಅಲ್ಲಿಯವರೆಗೂ ಹೋರಾಟ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

VISTARANEWS.COM


on

ahoratri dharani until the guilts are punished says Opposition party Leader R Ashok
Koo

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಹಾಗೂ ಮುಡಾ ಹಗರಣದ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಅಹೋರಾತ್ರಿ ಧರಣಿ ಮಾಡಲಾಗುವುದು. ದಲಿತರ ಹಣ ವಾಪಸ್ ಬರಬೇಕು, ದಲಿತರಿಗೆ ನ್ಯಾಯ ದೊರೆಯಬೇಕು. ಅಲ್ಲಿಯವರೆಗೂ ಹೋರಾಟ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್‌ (R Ashok) ತಿಳಿಸಿದರು.

ಸದನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೂಟಿಯಾದ ಹಣ ಮರಳಿ ಸರ್ಕಾರದ ಖಜಾನೆಗೆ ಬರಬೇಕು. ಇದಕ್ಕಾಗಿ ಹಗಲು ರಾತ್ರಿ ಧರಣಿ ಮಾಡಿ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡುತ್ತೇವೆ. ರಾತ್ರಿ ಧರಣಿ ಮಾಡುವವರಿಗೆ ಊಟ ಬೇಕಾ ಎಂದು ಸ್ಪೀಕರ್ ಕೇಳಿದ್ದಾರೆ. ಮಾತನಾಡಲು ಅವಕಾಶ ನೀಡದವರ ಊಟ, ದಲಿತರ ಹಣ ಕೊಳ್ಳೆ ಹೊಡೆದವರ ಊಟ ಬೇಡ ಎಂದು ತಿರಸ್ಕಾರ ಮಾಡಿದ್ದೇವೆ. ರಾತ್ರಿ ಪೂರ್ತಿ ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲಿ ಧರಣಿ ಮಾಡುತ್ತೇವೆ. ನಾಳೆ ಕೂಡ ಧರಣಿ ಮುಂದುವರಿಯಲಿದೆ. ಎರಡೂ ಹಗರಣಗಳಲ್ಲಿ ಭಾಗಿಯಾದ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಧರಣಿ ಮಾಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: Paris Olympics: ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲಿದ್ದಾರೆ ಭಾರತದ 24 ಸೈನಿಕರು

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡು ದೊಡ್ಡ ಹಗರಣ ನಡೆದಿದೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುಟುಂಬ 14 ಸೈಟು ಹಾಗೂ ಅವರ ಬೆಂಬಲಿಗರು ನೂರಾರು ಸೈಟು ಕೊಳ್ಳೆ ಹೊಡೆದಿದ್ದಾರೆ. ಮುಡಾದಲ್ಲಿ 1 ಲಕ್ಷಕ್ಕೂ ಅಧಿಕ ಚದರಡಿಯ ಹಾಗೂ 3-4 ಸಾವಿರ ಕೋಟಿ ರೂ. ಬೆಲೆಯ ಪ್ರಮುಖ ನಿವೇಶನಗಳನ್ನು ಲೂಟಿ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಕಾಯಲಿ ಎಂದು ಜನರು ಅಧಿಕಾರ ಕೊಟ್ಟರೆ ಆ ವ್ಯಕ್ತಿ ಸ್ವಜನಪಕ್ಷಪಾತದಿಂದ ನಿವೇಶನಗಳನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣ ಕೂಡ ಮುಖ್ಯಮಂತ್ರಿಯ ಹೆಗಲಿಗೆ ಬರುವ ಲಕ್ಷಣ ಕಂಡುಬಂದಿದೆ. ಮುಡಾದಲ್ಲಿ ದಲಿತರ ಜಮೀನು ಲೂಟಿ ಮಾಡಿದರೆ, ನಿಗಮದಲ್ಲಿ ದಲಿತರ ಹಣ ಲೂಟಿಯಾಗಿದೆ. ಜತೆಗೆ ದಲಿತರ ಹಣವನ್ನು ಬೇರೆ ಯೋಜನೆಗಳಿಗೆ ವರ್ಗಾಯಿಸಲಾಗಿದೆ. ತಾವೇನೂ ಅಕ್ರಮ ಮಾಡಿಲ್ಲವೆಂದರೆ ಅಧಿವೇಶನದಲ್ಲಿ ಚರ್ಚಿಸಲು ಭಯ ಏಕೆ? ಇಡೀ ಕಾಂಗ್ರೆಸ್ ತಂಡ ಸದನದಲ್ಲಿ ಉತ್ತರಿಸಲು ಸಾಧ್ಯವಾಗದೆ ಓಡುತ್ತಿದ್ದಾರೆ ಎಂದು ದೂರಿದರು.

ಇದನ್ನೂ ಓದಿ: Health Tips Kannada: ನಿಂತ ಮಳೆ ನೀರಿನಿಂದ ಈ 7 ರೋಗಗಳು ಬರುತ್ತವೆ ಎನ್ನುವುದು ನಿಮಗೆ ಗೊತ್ತೆ?

ಹಗರಣದ ತನಿಖೆಗೆ ನ್ಯಾಯಮೂರ್ತಿಗಳ ನೇತೃತ್ವದ ತಂಡ ರಚಿಸಲಾಗಿದೆ. ಆದರೆ ಮುಖ್ಯಮಂತ್ರಿಯೇ ತನಿಖೆಗೆ ಆದೇಶ ಮಾಡಿದರೆ ನ್ಯಾಯ ಹೇಗೆ ಸಿಗಲಿದೆ? ಸ್ಪೀಕರ್ ಕೂಡ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಭೋವಿ ನಿಗಮದ ಹಗರಣ ಚರ್ಚಿಸಲು ಅವಕಾಶ ನೀಡುತ್ತಾರೆ, ಆದರೆ ವಾಲ್ಮೀಕಿ ನಿಗಮದ ಹಗರಣ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಸ್ಪೀಕರ್ ನಡೆ ಕೂಡ ಪ್ರಶ್ನಾರ್ಹವಾಗಿದೆ ಎಂದು ಆರೋಪಿಸಿದರು.

Continue Reading

ಬೆಂಗಳೂರು

Greater Bengaluru Governance Bill 2024: ಗ್ರೇಟರ್ ಬೆಂಗಳೂರಿನಲ್ಲಿ ಯಾವ್ಯಾವ ಏರಿಯಾಗಳು ಸೇರಬಹುದು? ಇದರ ಉದ್ದೇಶ ಏನು?

ಮಳೆಗಾಲದ ಅಧಿವೇಶನ ಮುಗಿಯುವ ಮೊದಲು ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ 2024 (Greater Bengaluru Governance Bill 2024) ಅನ್ನು ಮಂಡಿಸುವ ಸಾಧ್ಯತೆ ಇದೆ. ಇದು ಜಾರಿಯಾದರೆ ಏನೆಲ್ಲಾ ಬದಲಾವಣೆಗಳು ಆಗುತ್ತವೆ, ಕರಡು ವಿಧೇಯಕದಲ್ಲಿ ಯಾವೆಲ್ಲ ಅಂಶಗಳಿವೆ, ಈ ಮಸೂದೆ ಕುರಿತು ತಜ್ಞರು ಏನು ಹೇಳಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Greater Bengaluru Governance Bill 2024
Koo

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ವಿಧೇಯಕವು ತೀವ್ರ ಚರ್ಚೆಯನ್ನು ಸೃಷ್ಟಿಸಿದ ಬೆನ್ನಲ್ಲೇ ಇದೀಗ ಮತ್ತೊಂದು ವಿಧೇಯಕ ಚರ್ಚೆಗೆ ಗ್ರಾಸವಾಗಿದೆ. ಮಳೆಗಾಲದ ಅಧಿವೇಶನ (monsoon session) ಮುಗಿಯುವ ಮೊದಲು ಮಂಡಿಸುವ ಸಾಧ್ಯತೆ ಇರುವ ಗ್ರೇಟರ್ ಬೆಂಗಳೂರು (Greater Bengaluru) ಆಡಳಿತ ವಿಧೇಯಕ 2024 (Greater Bengaluru Governance Bill 2024) ಕುರಿತು ಈಗ ಚರ್ಚೆ ಆರಂಭವಾಗಿದೆ.

ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ 2024ರ ಕರಡು ವಿಧೇಯಕ ವರ್ಧಿತ ಯೋಜನೆ ಮತ್ತು ಆರ್ಥಿಕ ಅಧಿಕಾರಗಳೊಂದಿಗೆ ಹೊಸ ರಚನೆಯೊಂದಿಗೆ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಅನ್ನು ರಚಿಸಲು ಪ್ರಸ್ತಾಪಿಸಿದೆ. ಇದರ ಅಡಿಯಲ್ಲಿ 5ರಿಂದ 10 ಕಾರ್ಪೋರೇಷನ್‌ಗಳನ್ನು ಸ್ಥಾಪಿಸುವ ಪ್ರಸ್ತಾಪ ಇದೆ.

ಗ್ರೇಟರ್ ಬೆಂಗಳೂರು ಅಥಾರಿಟಿಯು ಮೂರು ಹಂತದ ಆಡಳಿತ ರಚನೆಯ ಕಲ್ಪನೆ ಹೊಂದಿದೆ. ಮೇಲಿನ ಸ್ತರದಲ್ಲಿ ಮುಖ್ಯಮಂತ್ರಿ, ಅನಂತರ ಪುರಸಭೆಗಳು ಮತ್ತು ವಾರ್ಡ್ ಸಮಿತಿಗಳು ಇರಲಿವೆ. ಗ್ರೇಟರ್ ಬೆಂಗಳೂರು ಅಥಾರಿಟಿಗೆ ಬೆಂಗಳೂರು ಅಭಿವೃದ್ಧಿ ಸಚಿವರು, ಇತರ ನಾಲ್ವರು ಸಚಿವರು, ನಗರದ ಎಲ್ಲಾ ಶಾಸಕರು ಮತ್ತು ಬಿಡಿಎ, ಬಿಡಬ್ಲ್ಯೂಎಸ್‌ಎಸ್‌ಬಿ, ಬೆಸ್ಕಾಂ, ಬಿಎಂಆರ್‌ಸಿಎಲ್ ಮತ್ತು ಬಿಎಂಟಿಸಿಯಂತಹ ಪ್ರಮುಖ ನಗರ ಸಂಸ್ಥೆಗಳ ಮುಖ್ಯಸ್ಥರು ಸಹ ಅಧ್ಯಕ್ಷರಾಗಿರುತ್ತಾರೆ.

ಮಳೆಗಾಲದ ಅಧಿವೇಶನ ಮುಗಿಯುವ ಮೊದಲು ಈ ವಿಧೇಯಕವನ್ನು ಮಂಡಿಸಬಹುದು. ಆದರೆ ಚರ್ಚೆಯನ್ನು ಮುಂದೂಡಬಹುದು ಎನ್ನಲಾಗುತ್ತಿದೆ. ವಿಧೇಯಕ ಮಂಡನೆಯಾಗದಿದ್ದರೆ ಕರ್ನಾಟಕ ಸರ್ಕಾರವು ಅಕ್ಟೋಬರ್‌ನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯನ್ನು ಇತರ ರಾಜ್ಯಗಳ ಚುನಾವಣೆಗಳೊಂದಿಗೆ ನಡೆಸಬೇಕಾಗುತ್ತದೆ. ಹಾಗಾಗಿ ಈ ವಿಧೇಯಕವನ್ನು ಮಂಡಿಸುವುದರಿಂದ ಜಿಬಿಎಯನ್ನು ಜಾರಿಗೆ ತರಲು ಕಾಂಗ್ರೆಸ್‌ ಸರ್ಕಾರಕ್ಕೆ ಹೆಚ್ಚಿನ ಕಾಲಾವಕಾಶ ಸಿಗಲಿದೆ.

Greater Bengaluru Governance Bill 2024
Greater Bengaluru Governance Bill 2024

ಜಿಬಿಎ ವ್ಯಾಪ್ತಿಗೆ ಸೇರುವ ಪ್ರದೇಶಗಳು

ಬೆಂಗಳೂರಿನ ಮೆಟ್ರೋ ಮಾರ್ಗಗಳನ್ನು ಈಗಾಗಲೇ ಬಿಬಿಎಂಪಿ ಗಡಿಯನ್ನು ಮೀರಿ ವಿಸ್ತರಿಸಲಾಗಿದೆ. ಜಿಬಿಎ ಯೋಜನೆಯಲ್ಲಿ ಇದನ್ನು ಪರಿಗಣಿಸಲಾಗುತ್ತದೆ. ಬೆಳವಣಿಗೆ ಮತ್ತು ಅಭಿವೃದ್ಧಿಯು ದಕ್ಷಿಣ ಕಾರಿಡಾರ್ ಮೇಲೆ ವಿಶೇಷವಾಗಿ ವಿಮಾನ ನಿಲ್ದಾಣದ ಕಡೆಗೆ ಕೇಂದ್ರೀಕರಿಸುತ್ತದೆ. ಅಭಿವೃದ್ಧಿಯು ವಿಮಾನ ನಿಲ್ದಾಣದ ರಸ್ತೆ ಮತ್ತು ಯಲಹಂಕದವರೆಗೂ ವಿಸ್ತರಿಸಬಹುದು. ಜಿಗಣಿ ಮತ್ತು ಬೊಮ್ಮಸಂದ್ರದಂತಹ ಪ್ರದೇಶಗಳಿಗೂ ವಿಸ್ತರಿಸುವ ನಿರೀಕ್ಷೆಯಿದೆ. ಬೆಂಗಳೂರಿನ ಪೂರ್ವ ಭಾಗವು ಸೀಮಿತ ವಿಸ್ತರಣೆ ಸಾಮರ್ಥ್ಯವನ್ನು ಹೊಂದಿದೆ. ಪಶ್ಚಿಮಕ್ಕೆ, ತುಮಕೂರು ರಸ್ತೆ ಮತ್ತು ಹತ್ತಿರದ ಪ್ರದೇಶಗಳು, ಮೆಟ್ರೋ ಮಾರ್ಗದಿಂದ ಸಂಪರ್ಕ ಹೊಂದಿದ ಪ್ರದೇಶಗಳು ನೆಲಮಂಗಲವನ್ನು ತಲುಪಿವೆ. ಇದು ಬಿಬಿಎಂಪಿ ವ್ಯಾಪ್ತಿಯಿಂದ ಹೊರಗಿದೆ. ಆದರೆ ಗ್ರೇಟರ್‌ ಬೆಂಗಳೂರು ಅಸ್ತಿತ್ವಕ್ಕೆ ಬಂದರೆ ಈ ಎಲ್ಲ ಪ್ರದೇಶಗಳು ಇದರ ವ್ಯಾಪ್ತಿಗೆ ಬರಲಿವೆ. ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ (ELCITA) ಕೂಡ ಜಿಬಿಎ ಭಾಗವಾಗಲಿದೆ ಎನ್ನುತ್ತಾರೆ ಅಧಿಕಾರಿಯೊಬ್ಬರು.

ನಗರದ ಬೆಳವಣಿಗೆಗೆ ತುಮಕೂರು, ಚಿಕ್ಕಬಳ್ಳಾಪುರ ಅಥವಾ ರಾಮನಗರದಂತಹ ಪ್ರದೇಶಗಳನ್ನು ಸೇರಿಸಲು ಹಿರಿಯ ಕಾಂಗ್ರೆಸ್ ನಾಯಕರಾದ ಡಾ. ಜಿ. ಪರಮೇಶ್ವರ ಮತ್ತು ಶರತ್ ಬಚ್ಚೇಗೌಡ ಅವರು ಬೇಡಿಕೆ ಇಟ್ಟಿದ್ದಾರೆ. ಆದರೆ ಈ ಪ್ರದೇಶಗಳಿಗೆ ವಿಸ್ತರಿಸುವ ಯಾವುದೇ ಪ್ರಸ್ತಾವನೆ ಸದ್ಯಕ್ಕೆ ಇಲ್ಲ ಎನ್ನಲಾಗುತ್ತಿದೆ. ಈ ಬೇಡಿಕೆಗಳು ರಾಜಕೀಯ ಪ್ರೇರಿತ ಮತ್ತು ಆಡಳಿತಾತ್ಮಕವಾಗಿ ಸರಿಯಲ್ಲ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ತುಮಕೂರು ಅಥವಾ ರಾಮನಗರದ 3,000ರಿಂದ 4,000 ಚದರ ಕಿಲೋ ಮೀಟರ್‌ಗಳನ್ನು ಒಳಗೊಂಡಿದ್ದೇ ಆದಲ್ಲ ಜಿಬಿಎಯ ಉದ್ದೇಶ ವಿಫಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಸರ್ಕಾರದ ಸಲಹೆ ಏನು?

ಜಿಬಿಎ ಪ್ರಸ್ತುತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಅಧಿಕಾರ ವ್ಯಾಪ್ತಿಯನ್ನು ನಿರ್ದಿಷ್ಟವಾಗಿ ಮೆಟ್ರೋ ಮಾರ್ಗಗಳಲ್ಲಿ ಸ್ವಲ್ಪಮಟ್ಟಿಗೆ ಪ್ರದೇಶಗಳನ್ನು ಸೇರಿಸಲು ಯೋಜನೆ ರೂಪಿಸಲಾಗಿದೆ. ಸರಿಸುಮಾರು 975 ಚದರ ಕಿಲೋಮೀಟರ್‌ಗಳಷ್ಟು ವಿಸ್ತರಿಸಬೇಕು ಎನ್ನುವುದು ಸರ್ಕಾರದ ಸಲಹೆ.

ಹಿಂದಿನ ಬಿಜೆಪಿ ಸರ್ಕಾರ ಹೊಸಕೋಟೆಯನ್ನು ಬೆಂಗಳೂರಿನ ಭಾಗವಾಗಿಸಲು ಮುಂದಾಗಿತ್ತು. ಅದೇ ರೀತಿ ಕರ್ನಾಟಕದ ಗೃಹ ಸಚಿವ ಪರಮೇಶ್ವರ್ ಅವರು ಏಷ್ಯಾದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿರುವ ಬೆಂಗಳೂರನ್ನು ತುಮಕೂರಿನಂತಹ ಪ್ರದೇಶಗಳನ್ನು ಒಳಗೊಂಡಂತೆ ಅದರ ಪ್ರಸ್ತುತ ಮಿತಿಗಳನ್ನು ಮೀರಿ ವಿಸ್ತರಿಸಬೇಕಾಗಿದೆ ಎಂದು ವಾದಿಸುತ್ತಿದ್ದಾರೆ. ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಅವರು ಗ್ರೇಟರ್ ಬೆಂಗಳೂರು ಬಗ್ಗೆ ಪ್ರಸ್ತಾಪಿಸಿ, ಹರಿಯಾಣದ ಗುರುಗ್ರಾಮವನ್ನು ಹೋಲುವ ಉಪ ನಗರವನ್ನು ರಚಿಸಿ, ಅದನ್ನು ಗ್ರೇಟರ್‌ ಬೆಂಗಳೂರಿಗೆ ಲಗತ್ತಿಸುವ ಪ್ರಸ್ತಾಪ ಮುಂದಿಟ್ಟಿದ್ದಾರೆ.

Greater Bengaluru Governance Bill 2024
Greater Bengaluru Governance Bill 2024


ಕರಡು ವಿಧೇಯಕದಲ್ಲಿ ಏನಿದೆ?

ಜಿಬಿಎ ಕರಡು ವಿಧೇಯಕವು ಸುಮಾರು 1,400 ಚದರ ಕಿಲೋಮೀಟರ್‌ಗಳಷ್ಟು ಪ್ರದೇಶವನ್ನು ಪ್ರಸ್ತುತ ಬಿಡಿಎ ವ್ಯಾಪ್ತಿಗೆ ಸೇರಿಸುವ ಪ್ರಸ್ತಾಪ ಹೊಂದಿದೆ. ಬಿಬಿಎಂಪಿಯು ಪ್ರಸ್ತುತ 709 ಚದರ ಕಿ.ಮೀ ವ್ಯಾಪಿಸಿದೆ. ಈ ವಿಧೇಯಕವು ವಾರ್ಡ್‌ಗಳ ಸಂಖ್ಯೆಯನ್ನು 225ರಿಂದ 400ಕ್ಕೆ ಹೆಚ್ಚಿಸುವಂತೆ ಸೂಚಿಸಿದೆ.

ಈ ವಿಧೇಯಕವು ಅಧಿಕಾರ ವಿಕೇಂದ್ರೀಕರಣಕ್ಕೆ ಒತ್ತು ನೀಡಿದೆ. ಹಣಕಾಸಿನ ನೆರವು ಸೇರಿದಂತೆ ಸ್ಥಳೀಯ ವಾರ್ಡ್ ಸಮಿತಿಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡುತ್ತದೆ. ಸರ್ಕಾರವು ಕಾರ್ಪೋರೇಷನ್‌ಗಳ ಸಂಖ್ಯೆಯನ್ನು ನಿರ್ಧರಿಸುತ್ತದೆ. ವಿಧೇಯಕದ ವ್ಯಾಪ್ತಿಯನ್ನು ಅಧಿಸೂಚನೆಯ ಮೂಲಕ ವ್ಯಾಖ್ಯಾನಿಸಲಾಗುತ್ತದೆ. ಜಿಬಿಎ ರಾಜ್ಯ ಅನುದಾನಗಳ ಮೂಲಕ ಆಸ್ತಿ ತೆರಿಗೆ ಆದಾಯದ ನ್ಯಾಯಯುತ ವಿತರಣೆಯನ್ನು ಖಚಿತಪಡಿಸುತ್ತದೆ.

ಇದನ್ನೂ ಓದಿ: Karnataka Assembly Session: ಮೂಡಾ ಹಗರಣದ ಚರ್ಚೆಗೆ ವಿಧಾನಸಭೆಯಲ್ಲಿ ಬಿಜೆಪಿ ಆಗ್ರಹ; Live ಇಲ್ಲಿ ನೋಡಿ

ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್. ಪಾಟೀಲ್ ನೇತೃತ್ವದ ಸಮಿತಿಯು 2018ರಲ್ಲಿ ಕರಡು ವಿಧೇಯಕವನ್ನು ಸರ್ಕಾರಕ್ಕೆ ಮೊದಲು ಸಲ್ಲಿಸಿತು. ಕಾಂಗ್ರೆಸ್ ಸರ್ಕಾರವು ಬಿಬಿಎಂಪಿಯನ್ನು ಜಿಬಿಎ ಅಡಿಯಲ್ಲಿ ಸಣ್ಣ ಸಣ್ಣ ಕಾರ್ಪೋರೇಷನ್‌ಗಳಾಗಿ ವಿಭಜಿಸುವ ತನ್ನ ಪ್ರಸ್ತಾವನೆಯನ್ನು ಮುಂದುವರಿಸಿದ್ದರಿಂದ ಜೂನ್ 2023ರಲ್ಲಿ ಅದನ್ನು ಮತ್ತೆ ತಿದ್ದುಪಡಿ ಮಾಡಲಾಯಿತು.

ಗ್ರೇಟರ್‌ ಬೆಂಗಳೂರಿನ ಹೈಲೈಟ್ಸ್‌ ಹೀಗಿದೆ:

  • – ಬೆಂಗಳೂರು ಆಡಳಿತಾತ್ಮಕವಾಗಿ ಕನಿಷ್ಠ 5 ಭಾಗಗಳಾಗಿ ವಿಭಜನೆ.
  • – 5ರಿಂದ 10 ಪಾಲಿಕೆಗಳ ರಚನೆ
  • – ಬೆಂಗಳೂರು ಮಹಾ ನಗರ ಪಾಲಿಕೆ, ಹೊಸಕೋಟೆ, ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರ, ಬಿಡದಿ, ಆನೇಕಲ್‌, ಬೊಮ್ಮಸಂದ್ರ ಸೇರಿದಂತೆ ಸುತ್ತಮುತ್ತಲಿನ ಎಲ್ಲ ಕಾರ್ಪೋರೇಷನ್‌ಗಳನ್ನು ಸೇರಿಸಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆ.
  • – ಕನಿಷ್ಠ 10 ಲಕ್ಷ ಜನಸಂಖ್ಯೆಗೆ ಕಡಿಮೆ ಇಲ್ಲದಂತೆ ಒಂದೊಂದು ನಗರ ಪಾಲಿಕೆ ರಚನೆ.
  • – ಗ್ರೇಟರ್‌ ಬೆಂಗಳೂರು, ನಗರ ಪಾಲಿಕೆ ಮತ್ತು ವಾರ್ಡ್‌ ಸಮಿತಿಗಳು ಸೇರಿದಂತೆ ಮೂರು ಹಂತದ ಆಡಳಿತ.
  • – ಬೃಹತ್‌ ಮೂಲಸೌಕರ್ಯ ಕಾಮಗಾರಿಗಳ ನಿರ್ವಹಣೆ.
  • – ಮುಖ್ಯಮಂತ್ರಿ ಪ್ರಾಧಿಕಾರದ ಅಧ್ಯಕ್ಷರಾಗಿರುತ್ತಾರೆ. ನಗರಾಭಿವೃದ್ಧಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಮೇಯರ್‌ ಸೇರಿದಂತೆ ನಾನಾ ಆಡಳಿತ ಸಂಸ್ಥೆಗಳ ಮುಖ್ಯಸ್ಥರು ಇದರ ಸದಸ್ಯರಾಗಿರುತ್ತಾರೆ.
  • – ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿಯೇ ಬಿಬಿಎಂಪಿ, ಜಲ ಮಂಡಳಿ, ಬಿಡಿಎ, ಬೆಸ್ಕಾಂ, ಮೆಟ್ರೊ, ಸಾರಿಗೆ ಇಲಾಖೆಗಳು ಕಾರ್ಯ ನಿರ್ವಹಿಸಬೇಕಾಗುತ್ತದೆ.
  • – ಬೆಳೆಯುತ್ತಿರುವ ಬೆಂಗಳೂರನ್ನು ವಿಸ್ತರಿಸುವುದು ಮತ್ತು ಮೂಲ ಸೌಕರ್ಯಗಳನ್ನು ಹೆಚ್ಚಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

Continue Reading

Latest

Viral Video: ದೆಹಲಿ ಬೀದಿಯಲ್ಲಿ ಈ ಹುಡುಗಿಯ ಪರೋಟಾ ತಿನ್ನಲು ಕ್ಯೂ! ವಿಡಿಯೊ ನೋಡಿ

Viral Video: ಥೈಲ್ಯಾಂಡ್ ಮೂಲದ ಪುಯ್ ಎಂಬ ಹುಡುಗಿ ಪರೋಟ ತಯಾರಿಯಲ್ಲಿ ತಮ್ಮ ನವೀನ ವಿಧಾನದಿಂದ ಸಾವಿರಾರು ಜನರ ಗಮನ ಸೆಳೆದಿದ್ದಾರೆ. ಸಹೋದರಿಯ ಸಹಾಯದೊಂದಿಗೆ ಅವರು ದೆಹಲಿಯ ಬೀದಿಯಲ್ಲಿ ಗಾಡಿಯನ್ನು ನಡೆಸುತ್ತಿದ್ದಾರೆ. ಅಲ್ಲಿ ಅವರು ಬಾಳೆ ಹಣ್ಣಿನ ಪರೋಟ, ಮೊಟ್ಟೆ ಪರೋಟ, ಜ್ಯೂಸ್ ಸೇರಿದಂತೆ ಹಲವು ಬಗೆಯ ರುಚಿ ರುಚಿಯಾದ ಬಾಯಲ್ಲಿ ನೀರೂರಿಸುವಂತಹ ಭಕ್ಷ್ಯಗಳನ್ನು ತಯಾರಿಸುತ್ತಾರೆ. ಇನ್ಸ್ಟಾಗ್ರಾಂನಲ್ಲಿ ‘ಪುಯ್ ರೊಟ್ಟಿ ಲೇಡಿ’ ಹ್ಯಾಂಡಲ್ ಅಡಿಯಲ್ಲಿ ಹಂಚಿಕೊಳ್ಳಲಾದ ಪುಯ್ ಅವರ ಪರೋಟ ತಯಾರಿಕೆಯ ವಿಡಿಯೊಗಳು ಹೆಚ್ಚು ವೈರಲ್ ಆಗುತ್ತಿವೆ.

VISTARANEWS.COM


on

Viral Video
Koo


ನವದೆಹಲಿ: ದೆಹಲಿಯ ಗದ್ದಲದ ಬೀದಿಗಳಲ್ಲಿ ಇದೀಗ ದೆಹಲಿಯ ‘ಪರೋಟಾ ಗರ್ಲ್’ ಎಂದು ಪ್ರಸಿದ್ಧರಾಗಿರುವ ಮೀಟ್ ಪುಯ್ ಅವರು ಹೊಸ ಸಂಚಲನ ಮೂಡಿಸಿದ್ದಾರೆ. ಆಕೆ ತಯಾರಿಸಿದ ರುಚಿಕರವಾದ ಪರೋಟಾ ತಿನ್ನಲು ಗ್ರಾಹಕರು ಉದ್ದನೆಯ ಸರತಿ ಸಾಲುಗಳಲ್ಲಿ ಬರುತ್ತಿದ್ದಾರೆ. ದೆಹಲಿಯ ‘ಪರೋಟಾ ಗರ್ಲ್’ ಪಾಕಶಾಲೆಯ ಕೌಶಲ್ಯವು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ (Viral Video) ಆಗುತ್ತಿದೆ.

ಮೂಲತಃ ಥೈಲ್ಯಾಂಡ್ ಮೂಲದ ಪುಯ್, ಪರೋಟ ತಯಾರಿಕೆಯಲ್ಲಿ ತಮ್ಮ ನವೀನ ವಿಧಾನದಿಂದ ಸಾವಿರಾರು ಜನರ ಗಮನ ಸೆಳೆದಿದ್ದಾರೆ. ತಮ್ಮ ಸಹೋದರಿಯ ಸಹಾಯದೊಂದಿಗೆ, ಅವರು ದೆಹಲಿಯ ಬೀದಿಯಲ್ಲಿ ಆಹಾರದ ಗಾಡಿಯನ್ನು ನಿಭಾಯಿಸುತ್ತಿದ್ದಾರೆ. ಅಲ್ಲಿ ಅವರು ಬಾಳೆಹಣ್ಣಿನ ಪರೋಟ, ಮೊಟ್ಟೆ ಪರೋಟ, ಜ್ಯೂಸ್ ಸೇರಿದಂತೆ ಹಲವು ಬಗೆಯ ರುಚಿ ರುಚಿಯಾದ ಬಾಯಲ್ಲಿ ನೀರೂರಿಸುವಂತಹ ಭಕ್ಷ್ಯಗಳನ್ನು ತಯಾರಿಸುತ್ತಾರೆ.

ಇನ್ಸ್ಟಾಗ್ರಾಂನಲ್ಲಿ ‘ಪುಯ್ ರೊಟ್ಟಿ ಲೇಡಿ’ ಹ್ಯಾಂಡಲ್ ಅಡಿಯಲ್ಲಿ ಹಂಚಿಕೊಳ್ಳಲಾದ ಪುಯ್ ಅವರ ಪರೋಟ ತಯಾರಿಕೆಯ ವಿಡಿಯೊಗಳು ಹೆಚ್ಚು ವೈರಲ್ ಆಗುತ್ತಿವೆ. ಅವರು ಈ ವಿಡಿಯೊ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ಇದನ್ನು ನೋಡಿದವರು ನಾನಾ ಬಗೆಯಲ್ಲಿ ಕಾಮೆಂಟ್‍ಗಳನ್ನು ಮಾಡುತ್ತಿದ್ದಾರೆ. ಆಕೆಗೆ ಹಲವರು ಪ್ರಶಂಸೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ವಿಡಿಯೊದಲ್ಲಿ, ಪುಯ್ ಹಿಟ್ಟಿನಿಂದ ಕಾಗದದಷ್ಟು ತೆಳುವಾದ ಪರೋಟವನ್ನು ತಯಾರಿಸುತ್ತಿದ್ದಾರೆ. ಅದನ್ನು ಎಣ್ಣೆಯಲ್ಲಿ ಹುರಿಯುತ್ತಾರೆ, ನಂತರ ಮೊಟ್ಟೆಗಳು ಅಥವಾ ಬಾಳೆಹಣ್ಣುಗಳನ್ನು ಸೇರಿಸುತ್ತಾರೆ. ನಂತರ ಅದನ್ನು ಮಡಚಿ ಅದಕ್ಕೆ ಕ್ರೀಂ ಮತ್ತು ಉಪ್ಪನ್ನು ಸೇರಿಸಿ ಕಾಗದದಲ್ಲಿ ಸುತ್ತಿ ಗ್ರಾಹಕರಿಗೆ ನೀಡುತ್ತಾರೆ.

ವೈರಲ್ ವಿಡಿಯೊಗೆ ಅನೇಕರು ಕಾಮೆಂಟ್ ಮಾಡಿದ್ದು, ಅನೇಕರು ಕ್ವೀನ್ ಆಫ್ ಕುಕ್ ಬಿರುದು ನೀಡಬೇಕು ಎಂದು ಆಗ್ರಹಿಸಿದ್ದಾರೆ. ಕೆಲವರು ಅವರ ವ್ಯವಹಾರ ಚಾತುರ್ಯವನ್ನು ಹಾಡಿ ಹೊಗಳಿದ್ದಾರೆ. ಮೆಚ್ಚುಗೆಯ ನಡುವೆ, ಅವರ ಅಡುಗೆ ಕೌಶಲ್ಯಗಳ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: 5 ಲಕ್ಷ ರೂ. ಮೌಲ್ಯದ ವಜ್ರದ ಹಾರ ಕಸದ ರಾಶಿ ಸೇರಿದರೂ ವಾಪಸ್‌ ಸಿಕ್ಕಿತು!

ಈ ಹಿಂದೆ ದೆಹಲಿಯ ‘ವಡಾ ಪಾವ್ ಗರ್ಲ್’ ಎಂದು ಕರೆಯುತ್ತಿದ್ದ ಚಂದ್ರಿಕಾ ಗೇರ್ ದೀಕ್ಷಿತ್ ಅವರು ಭಾರೀ ಸಂಚಲನ ಮೂಡಿಸಿದ್ದರು. ಅವರು ಮುಂಬೈನ ನೆಚ್ಚಿನ ತಿಂಡಿ ವಡಾ ಪಾವ್ ಅನ್ನು ರಾಜಧಾನಿಯ ಬೀದಿಗಳಲ್ಲಿ ಮಾರಾಟ ಮಾಡುವ ಮೂಲಕ ಖ್ಯಾತಿಯನ್ನು ಗಳಿಸಿದರು. ಇದೀಗ ‘ಪರೋಟಾ ಗರ್ಲ್’ ಎಂದು ಪ್ರಸಿದ್ಧರಾಗಿರುವ ಮೀಟ್ ಪುಯ್ ಅವರು ಗ್ರಾಹಕರ ಮೆಚ್ಚುಗೆ ಗಳಿಸುತ್ತಿದ್ದಾರೆ.

Continue Reading
Advertisement
Karnataka Weather
ಕರ್ನಾಟಕ4 mins ago

Karnataka Weather: ಇಂದು ಕರಾವಳಿ, ಬೆಳಗಾವಿ, ವಿಜಯಪುರ ಸೇರಿ ರಾಜ್ಯದ ವಿವಿಧೆಡೆ ಬಿರುಗಾಳಿ ಸಹಿತ ಭಾರಿ ಮಳೆ!

Tips For Teenager Parents
ಆರೋಗ್ಯ19 mins ago

Tips For Teenager Parents: ಉತ್ತಮ ಪೋಷಕರಾಗಿ; ಹರೆಯದ ಮಕ್ಕಳನ್ನು ಅರ್ಥ ಮಾಡಿಕೊಳ್ಳಿ!

Contact Lens
ಆರೋಗ್ಯ34 mins ago

Contact Lens: ಕಾಂಟ್ಯಾಕ್ಟ್‌ ಲೆನ್ಸ್‌ ಬಳಸುತ್ತೀರಾ? ಈ ವಿಷಯಗಳು ತಿಳಿದಿರಲಿ!

Dina Bhavishya
ಪ್ರಮುಖ ಸುದ್ದಿ2 hours ago

Dina Bhavishya: ಈ ರಾಶಿಯವರು ಅತ್ಯುತ್ಸಾಹದಲ್ಲಿ ಅತಿರೇಕದ ಮಾತುಗಳನ್ನು ಆಡುವುದು ಬೇಡ!

BJP Protest
ಕರ್ನಾಟಕ6 hours ago

BJP Protest: ಸದನದಲ್ಲಿ ಬಿಜೆಪಿ, ಜೆಡಿಎಸ್ ಅಹೋರಾತ್ರಿ ಧರಣಿ: ಅಲ್ಲೇ ಭಜನೆ, ಊಟ, ನಿದ್ದೆ; ಫೋಟೊ, ವಿಡಿಯೊ ಇಲ್ಲಿವೆ

Nitish Kumar
ದೇಶ7 hours ago

Nitish Kumar: ನೀನೂ ಹೆಣ್ಣು; ವಿಧಾನಸಭೆಯಲ್ಲೇ ಆರ್‌ಜೆಡಿ ಶಾಸಕಿಗೆ ನಿತೀಶ್‌ ಕುಮಾರ್‌ ಗದರಿದ್ದೇಕೆ?

Paris Olympics
ಕ್ರೀಡೆ7 hours ago

Paris Olympics: ಕೊಕೊ ಗಾಫ್ ಅಮೆರಿಕದ ಧ್ವಜಧಾರಿ; ಈ ಗೌರವ ಪಡೆದ ಅತಿ ಕಿರಿಯ ಕ್ರೀಡಾಪಟು

Anekal
ಕ್ರೈಂ8 hours ago

ಆನೇಕಲ್‌ನಲ್ಲಿ ಪುರಸಭೆ ಸದಸ್ಯನ ಬರ್ಬರ ಹತ್ಯೆ; ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ

Hardik Pandya
ಕ್ರೀಡೆ9 hours ago

Hardik Pandya: ವಿಚ್ಛೇದನ ನೀಡಿ ಒಂದು ವಾರ ಕಳೆಯುವ ಮುನ್ನವೇ ಮಾಜಿ ಪತ್ನಿಯ ಪೋಸ್ಟ್​ಗೆ ಲೈಕ್ಸ್​, ಕಮೆಂಟ್​ ಮಾಡಿದ ಹಾರ್ದಿಕ್​ ಪಾಂಡ್ಯ

King Chopper
ದೇಶ9 hours ago

Sea King Chopper: ಸಾವಿನ ದವಡೆಯಲ್ಲಿದ್ದ ಚೀನಾ ನಾವಿಕನನ್ನು ರಕ್ಷಿಸಿದ ಭಾರತೀಯ ನೌಕಾಪಡೆ; ಮಾನವೀಯತೆಗೆ ಮೆಚ್ಚುಗೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ1 day ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ2 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ2 days ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ2 days ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ5 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ6 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ6 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ7 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ7 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

ಟ್ರೆಂಡಿಂಗ್‌