News Rules: ಗೂಗಲ್‌ ಮ್ಯಾಪ್‌ ಶುಲ್ಕದಿಂದ LPG ದರದವರೆಗೆ; ಆ.1ರಿಂದ ಏನೇನು ಬದಲಾವಣೆ? - Vistara News

ದೇಶ

News Rules: ಗೂಗಲ್‌ ಮ್ಯಾಪ್‌ ಶುಲ್ಕದಿಂದ LPG ದರದವರೆಗೆ; ಆ.1ರಿಂದ ಏನೇನು ಬದಲಾವಣೆ?

News Rules:ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರಗಳನ್ನು ಪ್ರತಿ ತಿಂಗಳ ಮೊದಲ ದಿನದಂದು ನಿಗದಿಪಡಿಸಲಾಗುತ್ತದೆ. ಸರ್ಕಾರ ಕಳೆದ ತಿಂಗಳು 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಿದೆ. ಈ ಬಾರಿಯೂ ಸಿಲಿಂಡರ್ ಬೆಲೆಯನ್ನು ಸರ್ಕಾರ ಕಡಿಮೆ ಮಾಡುತ್ತದೆ ಎಂದು ಊಹಿಸಲಾಗಿದೆ.

VISTARANEWS.COM


on

News Rules
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: ಆ.1ರಿಂದ ಕೆಲವು ಹೊಸ ನಿಯಮಗಳು(News Rules) ಜಾರಿಗೆ ಬರಲಿವೆ. ಹೊಸ ತಿಂಗಳು ಬಂದಾಗಲೆಲ್ಲಾ ಕೆಲವು ಹೊಸ ನಿಯಮಗಳು ಜಾರಿಗೆ ಬರುತ್ತವೆ. ಪ್ರತಿ ತಿಂಗಳು ಯಾವುದಾದರೂ ಹಣಕಾಸು ನಿಯಮಗಳು ಬದಲಾಗುತ್ತಿರುತ್ತವೆ. ಅವು ನೇರವಾಗಿ ಜನಸಾಮಾನ್ಯರ ಮೇಲೆ ಪರಿಣಾಮ ಬೀರುತ್ತವೆ. ಮುಂದಿನ ತಿಂಗಳು, ದೇಶದ ಅತಿದೊಡ್ಡ ಖಾಸಗಿ ವಲಯದ ಸಾಲದಾತ ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ನಿಯಮಗಳನ್ನು ಮಾರ್ಪಡಿಸುತ್ತದೆ ಮತ್ತು ಗೂಗಲ್ ಭಾರತದಲ್ಲಿ ಗೂಗಲ್ ನಕ್ಷೆ(Google Map)ಗಳ ಶುಲ್ಕವನ್ನು ಸಹ ಬದಲಾಯಿಸುತ್ತದೆ. ಈ ಹೊಸ ನಿಯಮಗಳು 1 ಆಗಸ್ಟ್ 2024 ರಂದು ಜಾರಿಗೆ ಬರುತ್ತವೆ. ಮುಂದಿನ ತಿಂಗಳು ಬದಲಾಗುವ ವಿಷಯಗಳನ್ನು ಕೆಳಗೆ ನೀಡಲಾಗಿದೆ.

ಎಲ್‌ಪಿಜಿ ದರ

ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರಗಳನ್ನು ಪ್ರತಿ ತಿಂಗಳ ಮೊದಲ ದಿನದಂದು ನಿಗದಿಪಡಿಸಲಾಗುತ್ತದೆ. ಸರ್ಕಾರ ಕಳೆದ ತಿಂಗಳು 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಿದೆ. ಈ ಬಾರಿಯೂ ಸಿಲಿಂಡರ್ ಬೆಲೆಯನ್ನು ಸರ್ಕಾರ ಕಡಿಮೆ ಮಾಡುತ್ತದೆ ಎಂದು ಊಹಿಸಲಾಗಿದೆ. ಸಿಲಿಂಡರ್‌ ದರದಲ್ಲಿ ಗಣನೀಯ ಬದಲಾವಣೆಯಾಗುವ ಸಾಧ್ಯತೆ ಇದೆ.

ಗೂಗಲ್‌ ಮ್ಯಾಪ್‌ ಶುಲ್ಕ ಏರಿಕೆ

Google Maps ಭಾರತದಲ್ಲಿನ ತನ್ನ ನಿಯಮಗಳಿಗೆ ಗಮನಾರ್ಹ ಬದಲಾವಣೆಗಳನ್ನು ಮಾಡಿದೆ, ಇದು ಆಗಸ್ಟ್ 1, 2024 ರಿಂದ ದೇಶಾದ್ಯಂತ ಅನ್ವಯಿಸುತ್ತದೆ. ಕಂಪನಿಯು ಭಾರತದಲ್ಲಿ ತನ್ನ ಸೇವೆಗಳ ಶುಲ್ಕವನ್ನು 70% ವರೆಗೆ ಕಡಿಮೆ ಮಾಡಿದೆ. ಹೆಚ್ಚುವರಿಯಾಗಿ, ಗೂಗಲ್ ನಕ್ಷೆಗಳು ಈಗ ತನ್ನ ಸೇವೆಗಳಿಗೆ ಡಾಲರ್‌ಗಳಿಗಿಂತ ಭಾರತೀಯ ರೂಪಾಯಿಗಳಲ್ಲಿ ಶುಲ್ಕ ವಿಧಿಸುತ್ತವೆ. ಆದಾಗ್ಯೂ, ಈ ಬದಲಾವಣೆಯು ಸಾಮಾನ್ಯ ಬಳಕೆದಾರರ ಮೇಲೆ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸದ ಕಾರಣ ಅವರ ಮೇಲೆ ಪರಿಣಾಮ ಬೀರುವುದಿಲ್ಲ.

HDFC ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ನಿಯಮ

ಬಾಡಿಗೆ ಪಾವತಿಸಲು CRED, Cheq, MobiKwik, ಫ್ರೀಚಾರ್ಜ್ ಮತ್ತು ಇತರ ರೀತಿಯ ಸೇವೆಗಳನ್ನು ಬಳಸುವ ಗ್ರಾಹಕರಿಗೆ ವಹಿವಾಟಿನ ಮೊತ್ತದ 1% ಶುಲ್ಕ ವಿಧಿಸಲಾಗುತ್ತದೆ, ಇದನ್ನು ಪ್ರತಿ ವಹಿವಾಟಿಗೆ 3,000 ರೂ.ಗಳಿಗೆ ನಿರ್ಬಂಧಿಸಲಾಗುತ್ತದೆ.

ಯುಟಿಲಿಟಿ ಶುಲ್ಕ

ಯುಟಿಲಿಟಿ ಮತ್ತು ಬಾಡಿಗೆ ವಹಿವಾಟುಗಳ ಮೇಲೆ ಆಗಸ್ಟ್ 1, 2024 ರಿಂದ ಜಾರಿಗೆ ಬರುವಂತೆ ಈ ಕೆಳಗಿನ ಶುಲ್ಕಗಳನ್ನು ವಿಧಿಸಲು ನಿರ್ಧರಿಸಲಾಗಿದೆ: ಇದು ₹ 50,000 ಕ್ಕಿಂತ ಹೆಚ್ಚಿನ ಯುಟಿಲಿಟಿ ಪಾವತಿಗಳ ಮೇಲೆ 1% ಅನ್ನು ವಿಧಿಸುತ್ತದೆ, ಗರಿಷ್ಠ ₹ 3,000 ಕ್ಕೆ ಒಳಪಟ್ಟಿರುತ್ತದೆ. ವಿಮೆ ಮತ್ತು ನೇರ ಶಾಲಾ/ಕಾಲೇಜು ಪಾವತಿಗಳು ಈ ವ್ಯಾಪ್ತಿಯಿಂದ ಹೊರಗಿದೆ. ಬ್ಯಾಂಕ್ ವಿಳಂಬ ಪಾವತಿ ಶುಲ್ಕಗಳು ಮತ್ತು ಸುಲಭ-EMI ಶುಲ್ಕಗಳನ್ನು ಕೂಡ ಹೆಚ್ಚಿಸುತ್ತದೆ.

ಇದನ್ನೂ ಓದಿ: Income Tax Return: ಹಳೆಯ ತೆರಿಗೆ ಪದ್ದತಿ ಕೊನೆಯಾಗುತ್ತಾ? CBDT ಅಧ್ಯಕ್ಷ ಹೇಳೋದೇನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Kargil Vijay Diwas 2024: ಕಾರ್ಗಿಲ್ ಯುದ್ಧದಲ್ಲಿ ನಿರ್ಣಾಯಕವಾಗಿದ್ದ ಟೈಗರ್ ಹಿಲ್; 19 ವರ್ಷದ ಯೋಧನ ರೋಚಕ ಸಾಹಸ!

ಕಾರ್ಗಿಲ್ ಯುದ್ಧದಲ್ಲಿ (kargil Vijay diwas 2024) ನಿರ್ಣಾಯಕ ಪ್ರದೇಶಗಳಲ್ಲಿ ಒಂದಾದ ಟೈಗರ್ ಹಿಲ್ ಅನ್ನು ಸಾಕಷ್ಟು ಹೋರಾಟದ ಬಳಿಕ ಭಾರತೀಯ ಸೇನೆ ಮರಳಿ ವಶಕ್ಕೆ ಪಡೆದುಕೊಂಡಿತು. ಈ ಹೋರಾಟದಲ್ಲಿ ಹಲವಾರು ಸೈನಿಕರು ಸಾವನ್ನಪ್ಪಿದ್ದರು. ಕಾರ್ಗಿಲ್ ಯುದ್ಧದಲ್ಲಿ ಟೈಗರ್ ಹಿಲ್ ಪ್ರಮುಖ ಭಾಗವಾಗಲು ಹಲವು ಕಾರಣಗಳಿವೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

Kargil Vijay Diwas 2024
Koo

ಕಾರ್ಗಿಲ್ ಯುದ್ಧದಲ್ಲಿ (kargil war) ಹಲವು ನಿರ್ಣಾಯಕ ಪ್ರದೇಶಗಳಲ್ಲಿ, ನೆಲೆಗಳಲ್ಲಿ ಭಾರತೀಯ ಸೇನೆ (Indian army) ಪಾಕಿಸ್ತಾನದ (pakistan army) ವಿರುದ್ಧ ಗೆಲುವು ಸಾಧಿಸಿತ್ತು. ಅಂತಹ ಒಂದು ಮಹತ್ವದ ಪ್ರದೇಶ ಟೈಗರ್ ಹಿಲ್ (tiger hill war) . ಇದು ಭಾರತದ ವಿಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು. ಪಾಕಿಸ್ತಾನದ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಭಾರತದ ವಿಜಯದ ನೆನಪಿಗಾಗಿ ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ್ (Kargil Vijay Diwas 2024) ಆಚರಿಸಲಾಗುತ್ತದೆ.

ಟೈಗರ್ ಹಿಲ್ ಯಾಕೆ ನಿರ್ಣಾಯಕ?

ಟೈಗರ್ ಹಿಲ್ ಅಥವಾ ಪಾಯಿಂಟ್ 5062 ಕಾರ್ಗಿಲ್ ಯುದ್ಧದ ಇತಿಹಾಸದಲ್ಲಿ ಅತ್ಯಂತ ನಿರ್ಣಾಯಕ ಸ್ಥಳವಾಗಿದೆ. ಟೈಗರ್ ಹಿಲ್ ಲಡಾಖ್‌ನ ದ್ರಾಸ್-ಕಾರ್ಗಿಲ್ ಪ್ರದೇಶದಲ್ಲಿನ ಒಂದು ಪರ್ವತವಾಗಿದೆ. ಇದು ಈ ಪ್ರದೇಶದ ಅತಿ ಎತ್ತರದ ಶಿಖರಗಳಲ್ಲಿ ಒಂದಾಗಿದೆ. 1999ರ ಭಾರತ- ಪಾಕಿಸ್ತಾನದ ನಡುವೆ ನಡೆದ ಕಾರ್ಗಿಲ್ ಯುದ್ಧದ ಅತ್ಯಂತ ವಿಶಿಷ್ಟವಾದ ಯುದ್ಧ ವಲಯವಾಗಿತ್ತು.

Kargil Vijay Diwas 2024
Kargil Vijay Diwas 2024


ಟೈಗರ್ ಹಿಲ್‌ನ ಮಹತ್ವವೇನು?

ಟೈಗರ್ ಹಿಲ್ ಇಡೀ ಪ್ರದೇಶದಲ್ಲಿ ಅತಿ ಎತ್ತರದ ಬೆಟ್ಟವಾಗಿದೆ. ಇದು ರಾಷ್ಟ್ರೀಯ ಹೆದ್ದಾರಿ 1ಡಿ ಆಗಿದ್ದು, ಶ್ರೀನಗರದಿಂದ ಕಾರ್ಗಿಲ್ ಅನ್ನು ಸಂಪರ್ಕಿಸುತ್ತದೆ. ಕಾರ್ಗಿಲ್ ವಲಯದ ಪ್ರಮುಖ ಸರಬರಾಜು ಮಾರ್ಗವಾಗಿ ಗುರುತಿಸಿಕೊಂಡಿದೆ. ಟೈಗರ್ ಹಿಲ್‌ನ ತುದಿಯಲ್ಲಿರುವ ಯಾವುದೇ ಶತ್ರು ಭಾರತೀಯ ಸೇನೆಯ ಚಲನವಲನ ಮತ್ತು ಶಸ್ತ್ರಾಸ್ತ್ರ ಪೂರೈಕೆಯ ಮೇಲೆ ನೇರ ದೃಷ್ಟಿಯನ್ನು ಇಡಲು ಸಾಧ್ಯವಾಗುತ್ತದೆ.

ಯೋಗೇಂದ್ರ ಯಾದವ್

ಟೈಗರ್ ಹಿಲ್ ವಶಕ್ಕಾಗಿ ನಡೆದ ಹೋರಾಟ ಹೇಗಿತ್ತು?

ಪಾಕಿಸ್ತಾನಿ ಸೇನೆಯು ಜಮ್ಮು ಮತ್ತು ಕಾಶ್ಮೀರದ ಭಾರತದ ಪ್ರದೇಶದೊಳಗೆ ಅಕ್ರಮವಾಗಿ ನುಸುಳಿತ್ತು. ಆಯಕಟ್ಟಿನ ಪ್ರದೇಶವಾದ ಟೈಗರ್ ಹಿಲ್ ಅನ್ನು ವಶಪಡಿಸಿಕೊಂಡಿತ್ತು. ಎತ್ತರದ ಸ್ಥಳದಲ್ಲಿ ಪಾಕ್‌ ಸೈನಿಕರು ಬಂಕರ್‌ ಸ್ಥಾಪಿಸಿಕೊಂಡು ಬೀಡು ಬಿಟ್ಟಿದ್ದರು. ಅಲ್ಲಿಂದ ಅವರನ್ನು ಓಡಿಸುವುದು ಭಾರತೀಯ ಸೇನೆಗೆ ಭಾರಿ ಸವಾಲಾಗಿತ್ತು. ಭಾರತೀಯ ಸೇನೆಯ ಸಿಖ್ ರೆಜಿಮೆಂಟ್‌ಗೆ ಈ ಪ್ರದೇಶವನ್ನು ಮರಳಿ ವಶ ಪಡಿಸಿಕೊಳ್ಳುವ ಟಾಸ್ಕ್‌ ನೀಡಲಾಯಿತು. ದೊಡ್ಡ ಹೋರಾಟ ನಡೆಸಿದ ಬಳಿಕವೂ ಮೊದಲ ಹಂತದಲ್ಲಿ ಸಿಖ್‌ ರೆಜಿಮೆಂಟ್‌ ವಿಫಲವಾಯಿತು. ಆದರೆ ಪಟ್ಟು ಬಿಡದ ಭಾರತೀಯ ಸೇನೆ ಭೂಪ್ರದೇಶವನ್ನು ಮರಳಿ ಪಡೆಯಲು ಸತತ ಪ್ರಯತ್ನಗಳನ್ನು ನಡೆಸಿತು.

ಕಾರ್ಗಿಲ್- ದ್ರಾಸ್ ಪ್ರಾಂತ್ಯದಲ್ಲಿ ಟೈಗರ್ ಹಿಲ್ ಪ್ರಮುಖವಾಗಿತ್ತು. ಇದನ್ನು ಏರಿ ಕುಳಿತಿದ್ದ ಪಾಕಿಗಳನ್ನು ಹಿಮ್ಮೆಟ್ಟಿಸದೆ ವಿಜಯ ಪೂರ್ಣವಾಗಲು ಸಾಧ್ಯವಿರಲಿಲ್ಲ. ಇದು ಭಾರತದ ಕಡೆಯಿಂದ ಏರಲು ತುಂಬಾ ಕಠಿಣವಾದ ಮೈ ಹೊಂದಿದೆ. ಎತ್ತರದಲ್ಲಿ ಪಾಕ್ ಸೈನಿಕರು ಕುಳಿತಿದ್ದು, ಕೆಳಗಿನಿಂದ ಬರುತ್ತಿದ್ದ ಭಾರತೀಯ ಸೈನಿಕರನ್ನು ಸುಲಭವಾಗಿ ಸಾಯಿಸುತ್ತಿದ್ದರು. ಇಲ್ಲಿಂದ ಅವರಿಗೆ ಭಾರತದ ಹೆದ್ದಾರಿ ಎನ್‌ಎಚ್1ಎ ಕಾಣಿಸುತ್ತಿತ್ತು. ಅಲ್ಲಿಂದಲೇ ಹೆದ್ದಾರಿಯ ಮೇಲೆ ಬಾಂಬ್ ಸುರಿಮಳೆಯನ್ನೂ ಸುರಿಸಿ, ಭಾರತೀಯ ಸೇನೆಯ ವಾಹನಗಳು ಓಡಾಡಲಾಗದಂತೆ ಮಾಡಿಬಿಟ್ಟಿದ್ದರು. ಇದನ್ನು ವಶಪಡಿಸಿಕೊಳ್ಳುವುದು ಮುಖ್ಯವಾಗಿತ್ತು. ಜುಲೈ 1ರ ಹೊತ್ತಿಗೆ ಟೈಗರ್ ಹಿಲ್‌ನ ಅಕ್ಕಪಕ್ಕದ ಬೆಟ್ಟಗಳನ್ನು 8 ಸಿಖ್ ರೆಜಿಮೆಂಟ್ ವಶಪಡಿಸಿಕೊಂಡಿತ್ತು. ಟೈಗರ್ ಹಿಲ್ ಅನ್ನು ಕೆಳಗಿನಿಂದ ಏರಲು 18 ಗ್ರೆನೆಡಿಯರ‍್ಸ್ ಪಡೆ ಸಜ್ಜಾಯಿತು. ಡಿ ಕಂಪನಿ ಮತ್ತು ಘಾತಕ್ ಪ್ಲಟೂನ್‌ಗಳ ಕ್ಯಾಪ್ಟನ್ ಸಚಿನ್ ನಿಂಬಾಳ್ಕರ್ ಮತ್ತು ಲೆ.ಬಲವಾನ್ ಸಿಂಗ್ ಅವರು ವೈರಿಗಳಿಗೆ ಆಶ್ಚರ್ಯವಾಗುವಂತೆ, ಕಡಿದಾದ ಶಿಖರದ ಕಡೆಯಿಂದ ಏರಿ, ಗುಂಡಿನ ದಾಳಿ ಆರಂಭಿಸಿದರು.

ಇನ್ನೊಂದು ಕಡೆಯಿಂದ 8 ಸಿಖ್ ರೆಜಿಮೆಂಟ್ ಗುಂಡಿನ ದಾಳಿ ನಡೆಸಿತು. ಬೆಟ್ಟದ ಕಡಿದಾದ ಮೈಯಿಂದ ಹವಿಲ್ದಾರ್ ಮದನ್‌ಲಾಲ್ ಎಂಬ ಧೀರಯೋಧ ತನ್ನ ಪರ್ವತಾರೋಹಿ ಕೌಶಲ್ಯವನ್ನೆಲ್ಲ ಬಳಸಿ ಕಣ್ಣುಕುಕ್ಕುವ ಕಗ್ಗತ್ತಲಿನಲ್ಲಿ ರಾತ್ರಿಯಿಡೀ ಬೆಟ್ಟವೇರಿದ. ಮುಂಜಾನೆ ಶತ್ರುಗಳ ಮೇಲೆ ಇದಕ್ಕಿದ್ದಂತೆ ಎರಗಿದ. ದಿಕ್ಕು ತೋಚದಂತಾದ ವೈರಿಗಳು ಭಯಭೀತರಾಗಿ ಕಾಲಿಗೆ ಬುದ್ಧಿ ಹೇಳಿದರು; ಇಲ್ಲವೇ ಭಾರತೀಯ ಸೈನಿಕರ ಕೈಯಲ್ಲಿ ಹತರಾದರು. ಈ ಯುದ್ಧದಲ್ಲಿ ಗಾಯಗೊಂಡ ಮದನ್‌ಲಾಲ್ ಹುತಾತ್ಮನಾದ. ಯೋಧ ಯೋಗೇಂದ್ರ ಯಾದವ್ ಏಕಾಂಗಿಯಾಗಿ ಹೋರಾಡುತ್ತಾ ಹತ್ತಾರು ಪಾಕ್‌ ಯೋಧರನ್ನು ಕೊಂದರು. 18 ಗ್ರೆನೆಡಿಯರ್ಸ್‌ ನಿರಂತರವಾಗಿ ಶೆಲ್ ದಾಳಿಗಳನ್ನು ನಡೆಸುತ್ತ ವೈರಿಗಳ ದಿಕ್ಕೆಡಿಸಿದರು. ಟೈಗರ್ ಹಿಲ್ ವಿಜಯ ನಿರ್ಣಾಯಕವಾಗಿತ್ತು. ಈ ಎತ್ತರದ ಬೆಟ್ಟವನ್ನು ಗೆದ್ದ ಬಳಿಕ ಉಳಿದ ಬೆಟ್ಟಗಳನ್ನು ಗೆಲ್ಲಲು ಸುಲಭವಾಯಿತು.

Kargil Vijay Diwas 2024
Kargil Vijay Diwas 2024


ಅಂತಿಮವಾಗಿ 1999ರ ಜುಲೈ 3ರಂದು ಸಂಜೆ 5.15ಕ್ಕೆ ಟೈಗರ್ ಹಿಲ್ ಅನ್ನು ಪುನಃ ವಶಪಡಿಸಿಕೊಳ್ಳುವ ಅಂತಿಮ ಪ್ರಯತ್ನ ಪ್ರಾರಂಭವಾಯಿತು. ಈ ಯುದ್ಧ ಹಲವಾರು ದಿನಗಳವರೆಗೆ ನಡೆಯಿತು. ಸಿಖ್ ರೆಜಿಮೆಂಟ್, ನಾಗಾ ರೆಜಿಮೆಂಟ್ ಗ್ರೆನೇಡಿಯರ್ಸ್ ಮತ್ತು ಘಾತಕ್ ಪ್ಲಟೂನ್‌ನೊಂದಿಗೆ ಒಟ್ಟುಗೂಡಿ ಇಡೀ ಬೆಟ್ಟವನ್ನು ಸುತ್ತುವರಿಯಲಾಯಿತು. ಬೆಟ್ಟದ 1000 ಅಡಿ ಎತ್ತರವನ್ನು ಏರಿ ಬೆಟ್ಟದ ತುದಿಯಲ್ಲಿದ್ದ ಶತ್ರುಗಳ ಮೇಲೆ ಭಾರೀ ಫಿರಂಗಿ ದಾಳಿ ನಡೆಸಲಾಯಿತು. ಹಲವಾರು ದಿನಗಳ ಹೋರಾಟದ ಬಳಿಕ ಭಾರತೀಯ ಸೇನೆಯು ಟೈಗರ್ ಹಿಲ್ ಅನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿತು.

ಇದನ್ನೂ ಓದಿ : Kargil Vijay Diwas 2024: ಗುಂಡುಗಳು ದೇಹ ತೂರಿದ್ದರೂ ಹಿಂದೆ ಸರಿಯದೆ ಶತ್ರುಗಳನ್ನು ಹಿಮ್ಮೆಟ್ಟಿಸಿದರು!

ಕಾರ್ಗಿಲ್ ಯುದ್ಧದ ಸಮಯದಲ್ಲಿ ಟೈಗರ್ ಹಿಲ್ ಅನ್ನು ಪುನಃ ವಶಪಡಿಸಿಕೊಳ್ಳಲು ಪ್ರಮುಖ ಕಾರಣರಾದ ಗ್ರೇನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ ಅವರಿಗೆ ಪರಮವೀರ ಚಕ್ರವನ್ನು ನೀಡಿ ಗೌರವಿಸಲಾಯಿತು. 19ನೇ ವಯಸ್ಸಿನಲ್ಲಿ ಈ ಗೌರವವನ್ನು ಪಡೆದ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದಾರೆ ಯೋಗೇಂದ್ರ ಸಿಂಗ್. ಮಹತ್ವದ ಸಂಗತಿ ಎಂದರೆ ಯೋಗೇಂದ್ರ ಯಾದವ್‌ಗೆ ಈ ಹೋರಾಟದಲ್ಲಿ 18 ಗುಂಡುಗಳು ಬಿದ್ದಿದ್ದವು! ಅವರು ಬದುಕುಳಿದಿದ್ದೇ ಪವಾಡ!

Continue Reading

ವಾಣಿಜ್ಯ

Stock Market: ಷೇರು ಮಾರುಕಟ್ಟೆಗೆ ಶುಭ ಶುಕ್ರವಾರ; ಹೂಡಿಕೆದಾರರಿಗೆ 7 ಲಕ್ಷ ಕೋಟಿ ರೂ. ಭರ್ಜರಿ ಲಾಭ!

Stock Market: ಬಿಎಸ್‌ಇ ಸೆನ್ಸೆಕ್ಸ್‌ 1,292.92 ಪಾಯಿಂಟ್‌ಗಳ ಏರಿಕೆಯೊಂದಿಗೆ 81,332.72 ಪಾಯಿಂಟ್‌ ತಲುಪಿದರೆ, ಎನ್‌ಎಸ್‌ಇ ನಿಫ್ಟಿಯು 428.75 ಪಾಯಿಂಟ್‌ಗಳ ಏರಿಕೆಯೊಂದಿಗೆ 24,834.85 ಪಾಯಿಂಟ್ಸ್‌ ತಲುಪಿದೆ. ಇದರಿಂದಾಗಿ, ಕಳೆದ ನಾಲ್ಕು ದಿನಗಳಿಂದ ನಷ್ಟ ಅನುಭವಿಸಿದ್ದ ಹೂಡಿಕೆದಾರರು ಶುಕ್ರವಾರ ಲಾಭ ಗಳಿಸಿದರು.

VISTARANEWS.COM


on

Stock Market
Koo

ಮುಂಬೈ: ಕೇಂದ್ರ ಬಜೆಟ್‌ (Union Budget 2024) ಮಂಡಿಸಿದ ದಿನವಾದ ಜುಲೈ 23 ಸೇರಿ ನಂತರದ ದಿನಗಳಲ್ಲಿ ಸತತವಾಗಿ ಇಳಿಕೆ ಕಂಡಿದ್ದ ಷೇರು ಮಾರುಕಟ್ಟೆಯು (Stock Market) ಶುಕ್ರವಾರ (ಜುಲೈ 26) ಭಾರಿ ಸುಧಾರಣೆ ಕಂಡಿದೆ. ಷೇರುಪೇಟೆಯಲ್ಲಿ ಶುಕ್ರವಾರ ಬಿಎಸ್‌ಇ ಸೆನ್ಸೆಕ್ಸ್‌ 1,292.92 ಪಾಯಿಂಟ್‌ಗಳ ಏರಿಕೆ ಕಂಡರೆ, ಎನ್‌ಎಸ್‌ಇ ನಿಫ್ಟಿಯು 428.75 ಅಂಕಗಳಷ್ಟು ಏರಿಕೆಯಾಗಿದೆ. ಇದರಿಂದಾಗಿ ಹೂಡಿಕೆದಾರರಿಗೆ ಒಂದೇ ದಿನ 7 ಲಕ್ಷ ಕೋಟಿ ರೂ. ಲಾಭವಾಗಿದೆ.

ಬಿಎಸ್‌ಇ ಸೆನ್ಸೆಕ್ಸ್‌ 1,292.92 ಪಾಯಿಂಟ್‌ಗಳ ಏರಿಕೆಯೊಂದಿಗೆ 81,332.72 ಪಾಯಿಂಟ್‌ ತಲುಪಿದರೆ, ಎನ್‌ಎಸ್‌ಇ ನಿಫ್ಟಿಯು 428.75 ಪಾಯಿಂಟ್‌ಗಳ ಏರಿಕೆಯೊಂದಿಗೆ 24,834.85 ಪಾಯಿಂಟ್ಸ್‌ ತಲುಪಿದೆ. ಇದರಿಂದಾಗಿ, ಕಳೆದ ನಾಲ್ಕು ದಿನಗಳಿಂದ ನಷ್ಟ ಅನುಭವಿಸಿದ್ದ ಹೂಡಿಕೆದಾರರು ಶುಕ್ರವಾರ ಲಾಭ ಗಳಿಸಿದರು.

Share Market
Share Market

ಲಾಭ ಗಳಿಸಿದ ಕಂಪನಿಗಳು

ಭಾರ್ತಿ ಏರ್‌ಟೆಲ್‌ ಕಂಪನಿಯು ಅತಿ ಹೆಚ್ಚು ಲಾಭ ಗಳಿಸಿದ ಕಂಪನಿ ಎನಿಸಿದೆ. ಭಾರ್ತಿ ಏರ್‌ಟೆಲ್‌ ಲಾಭದ ಪ್ರಮಾಣವು ಶೇ.4.51ರಷ್ಟು ಏರಿಕೆಯಾಗಿದೆ. ಇದರ ಜತೆಗೆ ಅದಾನಿ ಪೋರ್ಟ್ಸ್‌, ಸನ್‌ ಫಾರ್ಮಾ, ಟಾಟಾ ಸ್ಟೀಲ್‌, ಎಚ್‌ಸಿಎಲ್‌ ಟೆಕ್ನಾಲಜೀಸ್‌, ಇನ್ಫೋಸಿಸ್‌, ಜೆಎಸ್‌ಡಬ್ಲ್ಯೂ ಸ್ಟೀಲ್‌ ಹಾಗೂ ಮಹೀಂದ್ರಾ & ಮಹೀಂದ್ರಾ ಕಂಪನಿಗಳು ಲಾಭ ಗಳಿಸಿದವು.

ನಷ್ಟ ಅನುಭವಿಸಿದ ಕಂಪನಿಗಳು

ನೆಸ್ಲೆ ಕಂಪನಿಯು ಅತಿ ಹೆಚ್ಚು ನಷ್ಟ ಅನುಭವಿಸಿದ ಕಂಪನಿಯಾಗಿದೆ. ಇದರ ಷೇರುಗಳ ಮೌಲ್ಯವು ಶೇ.0.07ರಷ್ಟು ಕುಸಿದಿದೆ. ಒಎನ್‌ಜಿಸಿ, ಟಾಟಾ ಕನ್ಸುಮರ್‌ ಪ್ರಾಡಕ್ಟ್ಸ್‌ ಲಿಮಿಟೆಡ್‌ ಸೇರಿ ಹಲವು ಕಂಪನಿಗಳು ನಷ್ಟ ಅನುಭವಿಸಿದವು. ಇನ್ನು ಬಜೆಟ್‌ ಹಿಂದಿನ ದಿನ, ಬಜೆಟ್‌ ಹಾಗೂ ಬಜೆಟ್‌ ನಂತರದ ಕೆಲ ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ಏರಿಳಿತ ಸಾಮಾನ್ಯವಾಗಿದೆ. ಇದೇ ಕಾರಣಕ್ಕಾಗಿ ನಾಲ್ಕು ದಿನಗಳಿಂದ ಇಳಿಕೆಯಾಗಿದ್ದ ಷೇರು ಪೇಟೆಯು ಶುಕ್ರವಾರ ಏರಿಕೆ ಕಂಡಿದೆ ಎಂದು ಹೂಡಿಕೆ ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ: Union Budget 2024: ಬಜೆಟ್‌ನಲ್ಲಿ ಕಸ್ಟಮ್ಸ್‌ ಸುಂಕ ಇಳಿಕೆ; ಚಿನ್ನದ ಮೇಲಿನ ಹೂಡಿಕೆಗೆ ಇದು ಸಕಾಲವೇ? ತಜ್ಞರು ಹೇಳೋದಿಷ್ಟು

Continue Reading

ದೇಶ

Kanwar Yatra: ಕನ್ವರ್‌ ಯಾತ್ರೆ ವೇಳೆ ನಾಮ ಫಲಕ ಕಡ್ಡಾಯ; ಸುಪ್ರೀಂಕೋರ್ಟ್‌ನಿಂದ ಮತ್ತೊಂದು ಮಹತ್ವದ ಆದೇಶ

Kanwar Yatra:ನಾಮ ಫಲಕ ಕಡ್ಡಾಯಗೊಳಿಸಿ ಹೊರಡಿಸಿರುವ ಆದೇಶ ಪ್ರಶ್ನಿಸಿ ನಾಗರಿಕ ಹಕ್ಕುಗಳ ರಕ್ಷಣಾ ಸಂಘಟನೆಯ ಎನ್‌ಜಿಒವೊಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ನ್ಯಾಯಮೂರ್ತಿಗಳಾದ ಹೃಷಿಕೇಶ್‌ ರಾಯ್‌ ಮತ್ತು ಎಸ್‌ವಿಎನ್‌ ಭಟ್ಟಿ ಇರುವ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿ ಜು.22ರಂದು ಮಧ್ಯಂತರ ತಡೆ ನೀಡಿ, ಇಂದಿಗೆ ವಿಚಾರಣೆಯನ್ನು ಮುಂದೂಡಿತ್ತು.

VISTARANEWS.COM


on

Kanwar Yatra
Koo

ನವದೆಹಲಿ: ಕನ್ವರ್ ಯಾತ್ರೆ (Kanwar Yatra) ಸಾಗುವ ಮಾರ್ಗದಲ್ಲಿನ ಹೋಟೆಲ್‌, ರೆಸ್ಟೋರೆಂಟ್‌ ಮತ್ತು ತಿನಿಸು ಮಾರಾಟಗಾರರು ತಮ್ಮ ಮಾಲೀಕರ ಹೆಸರನ್ನು ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳು ಹೊರಡಿಸಿದ ಆದೇಶಕ್ಕೆ ವಿಧಿಸಿರುವ ಮಧ್ಯಂತರ ತಡೆಯಾಜ್ಞೆ(Stay Order)ಯನ್ನು ಸುಪ್ರೀಂ ಕೋರ್ಟ್‌(Supreme Court) ಮತ್ತೆ ವಿಸ್ತರಿಸಿದೆ.

ನಾಮ ಫಲಕ ಕಡ್ಡಾಯಗೊಳಿಸಿ ಹೊರಡಿಸಿರುವ ಆದೇಶ ಪ್ರಶ್ನಿಸಿ ನಾಗರಿಕ ಹಕ್ಕುಗಳ ರಕ್ಷಣಾ ಸಂಘಟನೆಯ ಎನ್‌ಜಿಒವೊಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ನ್ಯಾಯಮೂರ್ತಿಗಳಾದ ಹೃಷಿಕೇಶ್‌ ರಾಯ್‌ ಮತ್ತು ಎಸ್‌ವಿಎನ್‌ ಭಟ್ಟಿ ಇರುವ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿ ಜು.22ರಂದು ಮಧ್ಯಂತರ ತಡೆ ನೀಡಿ, ಇಂದಿಗೆ ವಿಚಾರಣೆಯನ್ನು ಮುಂದೂಡಿತ್ತು. ಇಂದು ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠ ಈ ಹಿಂದೆ ಹೇಳಿದಂತೆ ವ್ಯಾಪಾರಿಗಳನ್ನು ಒತ್ತಾಯ ಮಾಡುವಂತಿಲ್ಲ ಎಂದು ಹೇಳಿದೆ. ಅಲ್ಲದೇ ಮಧ್ಯಂತರ ತಡೆಯನ್ನು ಮತ್ತೆ ವಿಸ್ತರಿಸಿದೆ.

ಇನ್ನು ಇದೇ ವೇಳೆ ಪವಿತ್ರ ಯಾತ್ರೆಯಾಗಿರುವ ಕನ್ವರ್‌ ಯಾತ್ರೆ ಸುಗಮವಾಗಿ, ಪಾರದರ್ಶಕವಾಗಿ ಮತ್ತು ಶಾಂತಿಯುತವಾಗಿ ಸಾಗಲಿ ಎಂಬ ದೃಷ್ಟಿಯಿಂದ ಈ ನಿಯಮ ಜಾರಿಗೊಳಿಸಲಾಗಿದೆ ಎಂದು ಸರ್ಕಾರ ಕೋರ್ಟ್‌ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿತು. ಆದರೆ ಕೋರ್ಟ್‌, ವ್ಯಾಪಾರಿಗಳ ಮೇಲೆ ಒತ್ತಡ ಹೇರಲು, ಒತ್ತಾಯಿಸಲು ಸಾಧ್ಯವಿಲ್ಲ. ಅವರು ಬಯಸಿದ್ದಲ್ಲಿ ಯಾವ ತರಹದ ಆಹಾರ ಅವರ ಅಂಗಡಿಗಳಲ್ಲಿ ಸಿಗುತ್ತದೆ ಎಂಬುದನ್ನು ಬೋರ್ಡ್‌ನಲ್ಲಿ ಪ್ರಕಟಿಸಬಹುದು ಎಂದಿದೆ.

ಕನ್ವರ್ ಯಾತ್ರೆ ಶ್ರಾವಣ ಮಾಸದಲ್ಲಿ ನಡೆಯುತ್ತದೆ. ಜು.22 ಪ್ರಾರಂಭವಾಗುವ ಈ ಯಾತ್ರೆ ಆಗಸ್ಟ್ 2ರವರೆಗೆ ನಡೆಯಲಿದೆ. ಈ ಯಾತ್ರೆಯ ಮೂಲಕ ಶಿವಭಕ್ತರು ಹರಿದ್ವಾರದಿಂದ ಪುಣ್ಯ ತೀರ್ಥ ತಂದು ಉತ್ತರ ಪ್ರದೇಶದ ಮುಜಾಫರ್‌ನಗರದ ಮಾರ್ಗವಾಗಿ ತೆರಳುತ್ತಾರೆ. ಕನ್ವರ್ ಯಾತ್ರೆ ಸಾಗುವ ಮಾರ್ಗದಲ್ಲಿರುವ ಹೋಟೆಲ್, ಢಾಬಾಗಳು ಮತ್ತು ಇತರ ವ್ಯಾಪಾರಿಗಳು ಮಾಲೀಕರು ಮತ್ತು ಸಿಬ್ಬಂದಿಯ ಹೆಸರನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಪೊಲೀಸರು ಹೊರಡಿಸಿದ್ದ ಆದೇಶಕ್ಕೆ ಪ್ರತಿಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.

ಇದನ್ನೂ ಓದಿ: Kanwar Yatra: ಕನ್ವರ್‌ ಯಾತ್ರೆ ವೇಳೆ ಅಂಗಡಿಗಳಿಗೆ ನಾಮ ಫಲಕ ಕಡ್ಡಾಯ ಆದೇಶಕ್ಕೆ ಸುಪ್ರೀಂ ತಡೆ

Continue Reading

ದೇಶ

Kargil Vijay Diwas 2024: ಕಾರ್ಗಿಲ್‌ ಯುದ್ಧಭೂಮಿಗೆ ಅಂದೇ ಕಾಲಿಟ್ಟಿದ್ರು ಮೋದಿ- ಹಳೆಯ ಫೊಟೋ ವೈರಲ್‌

Kargil Vijay Diwas 2024: 1999 ರ ಯುದ್ಧದ ಸಮಯದಲ್ಲಿ, ಆಗ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮೋದಿ ಅವರು ಸೈನಿಕರಿಗೆ ಅಗತ್ಯ ವಸ್ತುಗಳನ್ನು ಸಾಗಿಸುತ್ತಿದ್ದರು. ಒಮ್ಮೆ, ಅವರು ಅಗತ್ಯ ಸಾಮಗ್ರಿಗಳೊಂದಿಗೆ Mi-17 ಹೆಲಿಕಾಪ್ಟರ್ ಅನ್ನು ಹತ್ತಿ ಯುದ್ಧಭೂಮಿಯನ್ನು ತಲುಪಿದ್ದರು.

VISTARANEWS.COM


on

Kargil Vijay Diwas 2024
Koo

ಲಡಾಖ್‌: ಕಾರ್ಗಿಲ್‌ ವಿಜಯ ದಿವಸ(Kargil Vijay Diwas 2024)ಕ್ಕೆ ಇಂದಿಗೆ 25ವರ್ಷ ಸಂದಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಡ್ರಾಸ್‌ನಲ್ಲಿರುವ ಕಾರ್ಗಿಲ್‌ ಯುದ್ಧ ಸ್ಮಾರಕ(Kargil War Memorial)ಕ್ಕೆ ಭೇಟಿ ಕೊಟ್ಟು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿಯ ಹಳೆಯ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮೋದಿ ಆರ್ಕೈವ್‌ ಎಂಬ ಎಕ್ಸ್‌ ಖಾತೆ ʼಎ ಪಿಲಿಗ್ರಿಮೇಜ್‌ ಲೈಫ್‌ಟೈಂʼ ಎಂಬ ಶೀರ್ಷಿಕೆಯಲ್ಲಿ ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿಯ ಫೋಟೋ, ವಿಡಿಯೋ ಮತ್ತು ಆಡಿಯೋ ರೆಕಾರ್ಡಿಂಗ್‌ಗಳನ್ನು ಹಂಚಿಕೊಳ್ಳಲಾಗಿದೆ. 1999 ರ ಯುದ್ಧದ ಸಮಯದಲ್ಲಿ, ಆಗ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮೋದಿ ಅವರು ಸೈನಿಕರಿಗೆ ಅಗತ್ಯ ವಸ್ತುಗಳನ್ನು ಸಾಗಿಸುತ್ತಿದ್ದರು. ಒಮ್ಮೆ, ಅವರು ಅಗತ್ಯ ಸಾಮಗ್ರಿಗಳೊಂದಿಗೆ Mi-17 ಹೆಲಿಕಾಪ್ಟರ್ ಅನ್ನು ಹತ್ತಿ ಯುದ್ಧಭೂಮಿಯನ್ನು ತಲುಪಿದ್ದರು.

ಸೈನಿಕರನ್ನುದ್ದೇಶಿಸಿ ಮಾತನಾಡುವಾಗ ಸೈನಿಕರು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಬಲಿಷ್ಠ ನಾಯಕತ್ವದ ಮನ್ನಣೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಅವರಿಗೆ, ಇದು ಎಷ್ಟು ಪ್ರಬಲವಾದ ರಾಜಕೀಯ ಇಚ್ಛಾಶಕ್ತಿ ಮತ್ತು ನಾಯಕತ್ವವು ಸೈನಿಕರನ್ನು ಧೈರ್ಯಶಾಲಿಗಳಾಗಿರಲು ಮತ್ತು ದೊಡ್ಡ ತ್ಯಾಗಗಳನ್ನು ಮಾಡಲು ಪ್ರೇರೇಪಿಸುತ್ತದೆ ಎಂಬುದನ್ನು ತೋರಿಸಿದೆ. ನಂತರ ಅವರು ಯುದ್ಧದಲ್ಲಿ ಗಾಯಗೊಂಡ ಸೈನಿಕರನ್ನು ಭೇಟಿಯಾದರು, ಅದು ಸೈನಿಕರ ಆತ್ಮವಿಶ್ವಾಸ ಕುಗ್ಗದಂತೆ ಕಾಪಾಡಿತು. ಅದರ ಪರಿಣಾಮವಾಗಿ ಟೈಗರ್ ಹಿಲ್ ವಿಜಯೋತ್ಸವವನ್ನು ಆಚರಿಸಿತು.

ಇದಲ್ಲದೆ, ಪಾಕಿಸ್ತಾನದ ಬಗ್ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಮೌನವನ್ನು ಮೋದಿ ಹೇಗೆ ವಿಶೇಷವಾಗಿ ಪ್ರಶ್ನಿಸಿದ್ದಾರೆ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ರಾಜಕೀಯಗೊಳಿಸಲು ಪ್ರತಿಪಕ್ಷಗಳು ಹೇಗೆ ಹಿಂಜರಿಯುವುದಿಲ್ಲ ಎಂಬುದನ್ನೂ ಎಕ್ಸ್‌ನ ಪೋಸ್ಟ್‌ನಲ್ಲಿ ವಿವರಿಸಲಾಗಿದೆ.

1999 ರಲ್ಲಿ ಸಾಧನಾ ಮ್ಯಾಗಜೀನ್‌ಗೆ ಪ್ರಧಾನಿ ಮೋದಿ ನೀಡಿದ ಸಂದರ್ಶನದಲ್ಲಿ, ಅಂತಹ ನಿರ್ಣಾಯಕ ಸಮಯದಲ್ಲಿ ರಾಜಕೀಯ ಹಿತಾಸಕ್ತಿಗಳನ್ನು ಅನುಸರಿಸುವುದು ಎಷ್ಟು ದುರದೃಷ್ಟಕರ ಎಂದು ಅವರು ಸೂಚಿಸಿದರು. 1971 ರ ಯುದ್ಧದ ಸಮಯದಲ್ಲಿ ಅಟಲ್ ಜಿ ಅವರು ವಿರೋಧ ಪಕ್ಷದಲ್ಲಿದ್ದರೂ, ಇಂದಿರಾ ಗಾಂಧಿಯನ್ನು ಹೇಗೆ ಸಂಪೂರ್ಣವಾಗಿ ಬೆಂಬಲಿಸಿದರು, ನಿಜವಾದ ರಾಷ್ಟ್ರೀಯ ಏಕತೆಯನ್ನು ತೋರಿಸಿದರು ಎಂಬುದನ್ನು ಅವರು ಎಲ್ಲರಿಗೂ ನೆನಪಿಸಿದರು.

ಇದನ್ನೂ ಓದಿ: Kargil Vijay Diwas 2024: “ಪಾಕಿಸ್ತಾನ ತಪ್ಪುಗಳಿಂದ ಪಾಠ ಕಲಿತಿಲ್ಲ”; ಪ್ರಧಾನಿ ಮೋದಿ ಟಾಂಗ್‌

Continue Reading
Advertisement
india tour of sri lanka 2024
ಪ್ರಮುಖ ಸುದ್ದಿ7 mins ago

India Tour of Sri Lanka 2024 : ಶ್ರೀಲಂಕಾ ತಂಡಕ್ಕೆ 3ನೇ ಹೊಡೆತ; ಭಾರತ ವಿರುದ್ಧದ ಟಿ20 ಸರಣಿಗೆ ಬಿನುರಾ ಫರ್ನಾಂಡೊ ಅಲಭ್ಯ

Martin Movie
ಕರ್ನಾಟಕ10 mins ago

Martin Movie: ವಿಎಫ್‌ಎಕ್ಸ್‌ಗೆ 50 ಲಕ್ಷ ಕಮಿಷನ್‌ ಆರೋಪ; ʻಮಾರ್ಟಿನ್‌ʼ ನಿರ್ದೇಶಕ ಎ.ಪಿ. ಅರ್ಜುನ್‌ಗೆ ಸಂಕಷ್ಟ!

Bengaluru Power Cut July 27th 28th 30th power outage in many parts of bengaluru
ಕರ್ನಾಟಕ10 mins ago

Bengaluru Power Cut: ಜು.27, 28, 30ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

Ankola landslide
ಉತ್ತರ ಕನ್ನಡ14 mins ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

Jennifer Lopez
ಫ್ಯಾಷನ್20 mins ago

Jennifer Lopez: ಮನೀಶ್‌ ಮಲ್ಹೋತ್ರಾ ಗೌನ್‌ ನಲ್ಲಿ ಬರ್ತ್‌ ಡೇ ಪಾರ್ಟಿ ಸೆಲೆಬ್ರೇಟ್‌ ಮಾಡಿದ ಹಾಲಿವುಡ್‌ ಪಾಪ್‌ ಸ್ಟಾರ್‌ ಜೆನ್ನಿಫರ್‌ ಲೋಪೆಜ್‌!

GPF Cap
ಕರ್ನಾಟಕ29 mins ago

GPF Cap: ಸರ್ಕಾರಿ ನೌಕರರಿಗೆ ಬ್ಯಾಡ್‌ ನ್ಯೂಸ್;‌ ಜಿಪಿಎಫ್‌ಗೆ 5 ಲಕ್ಷ ರೂ. ಮಿತಿ ಹೇರಿದ ಕರ್ನಾಟಕ ಸರ್ಕಾರ!

Koppala News Snake Puttu showed humanity by treating and caring for an injured vulture
ಕರ್ನಾಟಕ39 mins ago

Koppala News: ಗಾಯಗೊಂಡ ರಣಹದ್ದಿಗೆ ಆರೈಕೆ ಮೂಲಕ ಮಾನವೀಯತೆ ತೋರಿದ ಸ್ನೇಕ್ ಪುಟ್ಟು

Kargil Vijay Diwas 2024
ದೇಶ1 hour ago

Kargil Vijay Diwas 2024: ಕಾರ್ಗಿಲ್ ಯುದ್ಧದಲ್ಲಿ ನಿರ್ಣಾಯಕವಾಗಿದ್ದ ಟೈಗರ್ ಹಿಲ್; 19 ವರ್ಷದ ಯೋಧನ ರೋಚಕ ಸಾಹಸ!

Apple iPhones
ಗ್ಯಾಜೆಟ್ಸ್1 hour ago

Apple iPhones: ಆ್ಯಪಲ್‌ ಬ್ರ್ಯಾಂಡ್‌ ಪ್ರಿಯರಿಗೆ ಗುಡ್‌ನ್ಯೂಸ್;‌ ಐಫೋನ್‌ಗಳ ಬೆಲೆಯಲ್ಲಿ ಗಣನೀಯ ಇಳಿಕೆ

ಕರ್ನಾಟಕ1 hour ago

PU Lecturer Recruitment: ಪ್ರೌಢಶಾಲಾ ಶಿಕ್ಷಕರು ಪಿಯು ಕಾಲೇಜಿಗೆ ಬಡ್ತಿ ಪಡೆಯಲು ಅರ್ಹತಾ ಅಂಕ ಶೇ.50ಕ್ಕೆ ಇಳಿಕೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ14 mins ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ1 hour ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ2 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ3 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ1 day ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್1 day ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ1 day ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ1 day ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ3 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌