Stock Market: ಷೇರು ಮಾರುಕಟ್ಟೆಗೆ ಶುಭ ಶುಕ್ರವಾರ; ಹೂಡಿಕೆದಾರರಿಗೆ 7 ಲಕ್ಷ ಕೋಟಿ ರೂ. ಭರ್ಜರಿ ಲಾಭ! - Vistara News

ವಾಣಿಜ್ಯ

Stock Market: ಷೇರು ಮಾರುಕಟ್ಟೆಗೆ ಶುಭ ಶುಕ್ರವಾರ; ಹೂಡಿಕೆದಾರರಿಗೆ 7 ಲಕ್ಷ ಕೋಟಿ ರೂ. ಭರ್ಜರಿ ಲಾಭ!

Stock Market: ಬಿಎಸ್‌ಇ ಸೆನ್ಸೆಕ್ಸ್‌ 1,292.92 ಪಾಯಿಂಟ್‌ಗಳ ಏರಿಕೆಯೊಂದಿಗೆ 81,332.72 ಪಾಯಿಂಟ್‌ ತಲುಪಿದರೆ, ಎನ್‌ಎಸ್‌ಇ ನಿಫ್ಟಿಯು 428.75 ಪಾಯಿಂಟ್‌ಗಳ ಏರಿಕೆಯೊಂದಿಗೆ 24,834.85 ಪಾಯಿಂಟ್ಸ್‌ ತಲುಪಿದೆ. ಇದರಿಂದಾಗಿ, ಕಳೆದ ನಾಲ್ಕು ದಿನಗಳಿಂದ ನಷ್ಟ ಅನುಭವಿಸಿದ್ದ ಹೂಡಿಕೆದಾರರು ಶುಕ್ರವಾರ ಲಾಭ ಗಳಿಸಿದರು.

VISTARANEWS.COM


on

Stock Market
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಕೇಂದ್ರ ಬಜೆಟ್‌ (Union Budget 2024) ಮಂಡಿಸಿದ ದಿನವಾದ ಜುಲೈ 23 ಸೇರಿ ನಂತರದ ದಿನಗಳಲ್ಲಿ ಸತತವಾಗಿ ಇಳಿಕೆ ಕಂಡಿದ್ದ ಷೇರು ಮಾರುಕಟ್ಟೆಯು (Stock Market) ಶುಕ್ರವಾರ (ಜುಲೈ 26) ಭಾರಿ ಸುಧಾರಣೆ ಕಂಡಿದೆ. ಷೇರುಪೇಟೆಯಲ್ಲಿ ಶುಕ್ರವಾರ ಬಿಎಸ್‌ಇ ಸೆನ್ಸೆಕ್ಸ್‌ 1,292.92 ಪಾಯಿಂಟ್‌ಗಳ ಏರಿಕೆ ಕಂಡರೆ, ಎನ್‌ಎಸ್‌ಇ ನಿಫ್ಟಿಯು 428.75 ಅಂಕಗಳಷ್ಟು ಏರಿಕೆಯಾಗಿದೆ. ಇದರಿಂದಾಗಿ ಹೂಡಿಕೆದಾರರಿಗೆ ಒಂದೇ ದಿನ 7 ಲಕ್ಷ ಕೋಟಿ ರೂ. ಲಾಭವಾಗಿದೆ.

ಬಿಎಸ್‌ಇ ಸೆನ್ಸೆಕ್ಸ್‌ 1,292.92 ಪಾಯಿಂಟ್‌ಗಳ ಏರಿಕೆಯೊಂದಿಗೆ 81,332.72 ಪಾಯಿಂಟ್‌ ತಲುಪಿದರೆ, ಎನ್‌ಎಸ್‌ಇ ನಿಫ್ಟಿಯು 428.75 ಪಾಯಿಂಟ್‌ಗಳ ಏರಿಕೆಯೊಂದಿಗೆ 24,834.85 ಪಾಯಿಂಟ್ಸ್‌ ತಲುಪಿದೆ. ಇದರಿಂದಾಗಿ, ಕಳೆದ ನಾಲ್ಕು ದಿನಗಳಿಂದ ನಷ್ಟ ಅನುಭವಿಸಿದ್ದ ಹೂಡಿಕೆದಾರರು ಶುಕ್ರವಾರ ಲಾಭ ಗಳಿಸಿದರು.

Share Market
Share Market

ಲಾಭ ಗಳಿಸಿದ ಕಂಪನಿಗಳು

ಭಾರ್ತಿ ಏರ್‌ಟೆಲ್‌ ಕಂಪನಿಯು ಅತಿ ಹೆಚ್ಚು ಲಾಭ ಗಳಿಸಿದ ಕಂಪನಿ ಎನಿಸಿದೆ. ಭಾರ್ತಿ ಏರ್‌ಟೆಲ್‌ ಲಾಭದ ಪ್ರಮಾಣವು ಶೇ.4.51ರಷ್ಟು ಏರಿಕೆಯಾಗಿದೆ. ಇದರ ಜತೆಗೆ ಅದಾನಿ ಪೋರ್ಟ್ಸ್‌, ಸನ್‌ ಫಾರ್ಮಾ, ಟಾಟಾ ಸ್ಟೀಲ್‌, ಎಚ್‌ಸಿಎಲ್‌ ಟೆಕ್ನಾಲಜೀಸ್‌, ಇನ್ಫೋಸಿಸ್‌, ಜೆಎಸ್‌ಡಬ್ಲ್ಯೂ ಸ್ಟೀಲ್‌ ಹಾಗೂ ಮಹೀಂದ್ರಾ & ಮಹೀಂದ್ರಾ ಕಂಪನಿಗಳು ಲಾಭ ಗಳಿಸಿದವು.

ನಷ್ಟ ಅನುಭವಿಸಿದ ಕಂಪನಿಗಳು

ನೆಸ್ಲೆ ಕಂಪನಿಯು ಅತಿ ಹೆಚ್ಚು ನಷ್ಟ ಅನುಭವಿಸಿದ ಕಂಪನಿಯಾಗಿದೆ. ಇದರ ಷೇರುಗಳ ಮೌಲ್ಯವು ಶೇ.0.07ರಷ್ಟು ಕುಸಿದಿದೆ. ಒಎನ್‌ಜಿಸಿ, ಟಾಟಾ ಕನ್ಸುಮರ್‌ ಪ್ರಾಡಕ್ಟ್ಸ್‌ ಲಿಮಿಟೆಡ್‌ ಸೇರಿ ಹಲವು ಕಂಪನಿಗಳು ನಷ್ಟ ಅನುಭವಿಸಿದವು. ಇನ್ನು ಬಜೆಟ್‌ ಹಿಂದಿನ ದಿನ, ಬಜೆಟ್‌ ಹಾಗೂ ಬಜೆಟ್‌ ನಂತರದ ಕೆಲ ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ಏರಿಳಿತ ಸಾಮಾನ್ಯವಾಗಿದೆ. ಇದೇ ಕಾರಣಕ್ಕಾಗಿ ನಾಲ್ಕು ದಿನಗಳಿಂದ ಇಳಿಕೆಯಾಗಿದ್ದ ಷೇರು ಪೇಟೆಯು ಶುಕ್ರವಾರ ಏರಿಕೆ ಕಂಡಿದೆ ಎಂದು ಹೂಡಿಕೆ ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ: Union Budget 2024: ಬಜೆಟ್‌ನಲ್ಲಿ ಕಸ್ಟಮ್ಸ್‌ ಸುಂಕ ಇಳಿಕೆ; ಚಿನ್ನದ ಮೇಲಿನ ಹೂಡಿಕೆಗೆ ಇದು ಸಕಾಲವೇ? ತಜ್ಞರು ಹೇಳೋದಿಷ್ಟು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Vijay Mallya: ವಿಜಯ್‌ ಮಲ್ಯಗೆ ಸೆಬಿ ಶಾಕ್;‌ 3 ವರ್ಷ ಸೆಕ್ಯುರಿಟೀಸ್‌ ಟ್ರೇಡಿಂಗ್‌ನಿಂದ ನಿಷೇಧ

Vijay Mallya: ಸೆಬಿಗೆ ನೋಂದಣಿ ಮಾಡಿದ ಕಂಪನಿಗಳು ವಿಜಯ್‌ ಮಲ್ಯ ಜತೆ ವಹಿವಾಟು ಮಾಡದಂತೆ ಸೂಚನೆ ನೀಡಲಾಗಿದೆ. ಅಷ್ಟೇ ಅಲ್ಲ, ಮುಂದಿನ ಮೂರು ವರ್ಷಗಳವರೆಗೆ ವಿಜಯ್‌ ಮಲ್ಯ ಅವರ ಎಲ್ಲ ಸೆಕ್ಯುರಿಟಿ ಹೋಲ್ಡಿಂಗ್‌ಗಳು, ಮ್ಯುಚುವಲ್‌ ಫಂಡ್‌ ಯುನಿಟ್‌ಗಳನ್ನು ತಡೆಹಿಡಿಯುವಂತೆಯೂ ಸೆಬಿ ಸೂಚನೆ ನೀಡಿದೆ.

VISTARANEWS.COM


on

Vijay Mallya
Koo

ನವದೆಹಲಿ: ಭಾರತದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿ ವಿಜಯ್‌ ಮಲ್ಯ (Vijay Mallya) ಅವರಿಗೆ ಭಾರತದ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿಯು (SEBI) ಶಾಕ್‌ ನೀಡಿದೆ. ಭಾರತದ ಸೆಕ್ಯುರಿಟೀಸ್‌ ಮಾರುಕಟ್ಟೆಯಿಂದ ವಿಜಯ್‌ ಮಲ್ಯ ಅವರನ್ನು ಸೆಬಿ ನಿರ್ಬಂಧಿಸಿದೆ. ಇದರಿಂದಾಗಿ ಭಾರತದ ಸೆಕ್ಯುರಿಟೀಸ್‌ ಮಾರುಕಟ್ಟೆಯಲ್ಲಿ ವಿಜಯ್‌ ಮಲ್ಯ ಯಾವುದೇ ವಹಿವಾಟು ಮಾಡದಂತೆ ತಡೆಹಿಡಿಯಲಾಗಿದೆ.

ಸೆಬಿಗೆ ನೋಂದಣಿ ಮಾಡಿದ ಕಂಪನಿಗಳು ವಿಜಯ್‌ ಮಲ್ಯ ಜತೆ ವಹಿವಾಟು ಮಾಡದಂತೆ ಸೂಚನೆ ನೀಡಲಾಗಿದೆ. ಅಷ್ಟೇ ಅಲ್ಲ, ಮುಂದಿನ ಮೂರು ವರ್ಷಗಳವರೆಗೆ ವಿಜಯ್‌ ಮಲ್ಯ ಅವರ ಎಲ್ಲ ಸೆಕ್ಯುರಿಟಿ ಹೋಲ್ಡಿಂಗ್‌ಗಳು, ಮ್ಯುಚುವಲ್‌ ಫಂಡ್‌ ಯುನಿಟ್‌ಗಳನ್ನು ತಡೆಹಿಡಿಯುವಂತೆಯೂ ಸೆಬಿ ಸೂಚನೆ ನೀಡಿದೆ. ವಿಜಯ್‌ ಮಲ್ಯ ಅವರು ಇದುವರೆಗೆ ಫಾರಿನ್‌ ಇನ್‌ಸ್ಟಿಟ್ಯೂಷನಲ್‌ ಇನ್ವೆಸ್ಟರ್‌ (FII) ವ್ಯವಸ್ಥೆ ಮೂಲಕ ಭಾರತದ ಸೆಕ್ಯುರಿಟೀಸ್‌ ಮಾರುಕಟ್ಟೆಯಲ್ಲಿ ಹಣ ಹೂಡಿಕೆ, ಸ್ಟಾಕ್‌ಗಳ ಮಾರಾಟ ಸೇರಿ ಹಲವು ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು.

ಏನಿದು ಸೆಕ್ಯುರಿಟೀಸ್‌ ಮಾರುಕಟ್ಟೆ?

ಸೆಕ್ಯುರಿಟೀಸ್‌ ಮಾರುಕಟ್ಟೆಯು ವ್ಯಕ್ತಿಗಳು ಅಥವಾ ಕಂಪನಿಗಳು ಷೇರುಗಳು, ಬಾಂಡ್‌ಗಳು ಮತ್ತು ಉತ್ಪನ್ನಗಳಂತಹ ಸೆಕ್ಯುರಿಟೀಸ್‌ಅನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಹಣಕಾಸು ಮಾರುಕಟ್ಟೆಯಾಗಿದೆ. ಸ್ಟಾಕ್‌ಗಳು, ಬಾಂಡ್‌ಗಳು, ಮ್ಯೂಚುವಲ್‌ ಫಂಡ್‌ಗಳು, ಎಕ್ಸ್‌ಚೇಂಜ್‌-ಟ್ರೇಡೆಡ್‌ ಫಂಡ್‌ಗಳ ಖರೀದಿ ಹಾಗೂ ಮಾರಾಟ ಮಾಡುವ ಮಾರುಕಟ್ಟೆಯಾಗಿದೆ.

ಭಾರತದ ಬ್ಯಾಂಕ್‌ಗಳಿಗೆ ಸುಮಾರು 9 ಸಾವಿರ ಕೋಟಿ ರೂ. ವಂಚನೆ ಪ್ರಕರಣದಲ್ಲಿ ವಿಜಯ್‌ ಮಲ್ಯ ಲಂಡನ್‌ಗೆ ಹಾರಿದ್ದಾರೆ. ಇವರನ್ನು 2019ರಲ್ಲಿ ದೇಶ ಭ್ರಷ್ಟ ಆರ್ಥಿಕ ಅರಪಾಧಿ ಎಂದು ಘೋಷಿಸಲಾಗಿದೆ. 2016ರ ಮಾರ್ಚ್‌ನಲ್ಲಿ ವಿಜಯ್‌ ಮಲ್ಯ ಭಾರತದಿಂದ ಪರಾರಿಯಾಗಿದ್ದು, ಈಗ ಬ್ರಿಟನ್‌ನಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ, ವಿಜಯ್‌ ಮಲ್ಯ ಪುತ್ರ ಸಿದ್ಧಾರ್ಥ್‌ ಮಲ್ಯ ಅವರ ಮದುವೆಯು ಅದ್ಧೂರಿಯಾಗಿ ನೆರವೇರಿತ್ತು. ವಿಜಯ್‌ ಮಲ್ಯ ಅವರನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಪ್ರಯತ್ನ ಮಾಡುತ್ತಿದ್ದು, ಪ್ರಕರಣವು ಕೋರ್ಟ್‌ನಲ್ಲಿದೆ.

ವಿಜಯ್‌ ಮಲ್ಯ ಈಗಲೂ ಕಿಂಗ್‌ಫಿಶರ್‌ ಬಿಯರ್‌ ಉತ್ಪಾದನೆ ಮಾಡುವ ಯುನೈಟ್‌ ಬ್ರೆವರೀಸ್‌ನಲ್ಲಿ ಶೇ.8.1ರಷ್ಟು ಷೇರುಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ, ಸ್ಮಿರ್ನಾಫ್‌ ವೋಡ್ಕಾ ತಯಾರಿಯಾ ಸಂಸ್ಥೆಯಾದ ಯುನೈಟೆಡ್‌ ಸ್ಪರಿಟ್ಸ್‌ನಲ್ಲಿ 0.01ರಷ್ಟು ಷೇರುಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ: RCB: ಆರ್​ಸಿಬಿಯ ನಂಟು ಬಿಡದ ವಿಜಯ್​ ಮಲ್ಯ; ಟ್ವೀಟ್​ ಮೂಲಕ ಅಭಿನಂದನೆ

Continue Reading

ಕರ್ನಾಟಕ

GPF Cap: ಸರ್ಕಾರಿ ನೌಕರರಿಗೆ ಬ್ಯಾಡ್‌ ನ್ಯೂಸ್;‌ ಜಿಪಿಎಫ್‌ಗೆ 5 ಲಕ್ಷ ರೂ. ಮಿತಿ ಹೇರಿದ ಕರ್ನಾಟಕ ಸರ್ಕಾರ!

GPF Cap: ಸಾಮಾನ್ಯ ಭವಿಷ್ಯ ನಿಧಿ ಚಂದಾದಾರರು ಒಂದು ವರ್ಷಕ್ಕೆ ಪಾವತಿಸಬಹುದಾದ ವಂತಿಗೆಯನ್ನು 5 ಲಕ್ಷ ರೂ.ಗೆ ಮಿತಿಗೊಳಿಸಲಾಗಿದೆ. ಈ ಅಂಶವನ್ನು ರಾಜ್ಯ ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಅಖಿಲ ಭಾರತ ಸೇವಾ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರಿ ಅಧಿಕಾರಿ ಮತ್ತು ನೌಕರರು ಇನ್ನು ಮುಂದೆ ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯ ಸರ್ಕಾರವು ಆದೇಶದಲ್ಲಿ ತಿಳಿಸಿದೆ.

VISTARANEWS.COM


on

GPF Cap
Koo

ಬೆಂಗಳೂರು: ಏಳನೇ ವೇತನ ಆಯೋಗದ (7th Pay Commission) ಜಾರಿಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು (Karnataka Government) ತೀರ್ಮಾನ ಮಾಡಿದ ಬಳಿಕ ಶೇ.27.5ರಷ್ಟು ಸಂಬಳ ಹೆಚ್ಚಳದ ಸಂಭ್ರಮದಲ್ಲಿದ್ದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಕಹಿ ಸುದ್ದಿ ನೀಡಿದೆ. ಸರ್ಕಾರಿ ನೌಕರರು (Government Employees) ವಾರ್ಷಿಕವಾಗಿ ಸಾಮಾನ್ಯ ಭವಿಷ್ಯ ನಿಧಿಗೆ (GPF) ಜಮೆ ಮಾಡುವ ಮೊತ್ತವನ್ನು 5 ಲಕ್ಷ ರೂಪಾಯಿಗೆ ಮಿತಿಗೊಳಿಸಿ (GPF Cap) ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.

ಜಿಪಿಎಫ್‌ ಮೊತ್ತದ ಮಿತಿ ನಿಗದಿಗೊಳಿಸಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. “ಉಲ್ಲೇಖ(1)ರ ಕೇಂದ್ರ ಸರ್ಕಾರದ ಅಧಿಸೂಚನೆ ಮತ್ತು ಅಧಿಕೃತ ಜ್ಞಾಪನಗಳಲ್ಲಿ ಅಖಿಲ ಭಾರತ ಸೇವಾ ಅಧಿಕಾರಿಗಳಿಗೆ ಮತ್ತು ಉಲ್ಲೇಖ(2)ರ ರಾಜ್ಯ ಸರ್ಕಾರದ ಆದೇಶದಲ್ಲಿ ಸಾಮಾನ್ಯ ಭವಿಷ್ಯ ನಿಧಿ ಚಂದಾದಾರರು ಒಂದು ವರ್ಷಕ್ಕೆ ಪಾವತಿಸಬಹುದಾದ ವಂತಿಗೆಯನ್ನು 5 ಲಕ್ಷ ರೂ.ಗೆ ಮಿತಿಗೊಳಿಸಲಾಗಿದೆ. ಈ ಅಂಶವನ್ನು ರಾಜ್ಯ ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಅಖಿಲ ಭಾರತ ಸೇವಾ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರಿ ಅಧಿಕಾರಿ ಮತ್ತು ನೌಕರರು ಇನ್ನು ಮುಂದೆ ಕಟ್ಟುನಿಟ್ಟಾಗಿ ಪಾಲಿಸುವಂತೆ ಈ ಮೂಲಕ ಸೂಚಿಸಿದೆ” ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ನೌಕರರಿಗೆ ಹೇಗೆ ಅನನುಕೂಲ?

ರಾಜ್ಯ ಸರ್ಕಾರದ ನಿರ್ಧಾರದಿಂದ ಸರ್ಕಾರಿ ನೌಕರರು ತೆರಿಗೆ ಉಳಿಸಲು ಕಷ್ಟವಾಗುತ್ತದೆ. ಹೆಚ್ಚು ಸಂಬಳ ಪಡೆಯುವ ನೌಕರರು ಜಿಪಿಎಫ್‌ಗೆ ವಾರ್ಷಿಕವಾಗಿ ಅತಿ ಹೆಚ್ಚಿನ ಹಣವನ್ನು ಜಮೆ ಮಾಡುವ ಮೂಲಕ ತೆರಿಗೆ ಉಳಿಸುತ್ತಿದ್ದರು. ಉಳಿತಾಯದ ದೃಷ್ಟಿಯಿಂದಲೂ ನೌಕರರಿಗೆ ಅನುಕೂಲವಾಗುತ್ತಿತ್ತು. ಆದರೆ, ಈಗ ವಾರ್ಷಿಕ ಮಿತಿಯನ್ನು 5 ಲಕ್ಷ ರೂ.ಗೆ ನಿಗದಿಪಡಿಸಿದ ಕಾರಣ ಲಕ್ಷಾಂತರ ನೌಕರರು ತೆರಿಗೆ ಉಳಿಸಲು, ಹೆಚ್ಚಿನ ಹಣವನ್ನು ಉಳಿತಾಯ ಮಾಡಲು ಕಷ್ಟವಾಗುತ್ತದೆ ಎಂದು ತಿಳಿದುಬಂದಿದೆ.

ರಾಜ್ಯ ಸರ್ಕಾರದ ನಿರ್ಧಾರದಿಂದ ರಾಜ್ಯ ಸರ್ಕಾರಿ ನೌಕರರಿಗೆ ಮಾತ್ರವಲ್ಲ, ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಎಎಸ್‌ ಅಧಿಕಾರಿಗಳಿಗೂ ಹೊಸ ನಿಯಮವು ಅನ್ವಯಿಸಲಿದೆ. ಕೆಲ ತಿಂಗಳ ಹಿಂದೆ ಪಂಜಾಬ್‌ನಲ್ಲೂ ಅಲ್ಲಿನ ರಾಜ್ಯ ಸರ್ಕಾರವು ನೌಕರರ ಜಿಪಿಎಫ್‌ ವಾರ್ಷಿಕ ಮಿತಿಯನ್ನು 5 ಲಕ್ಷ ರೂ.ಗೆ ನಿಗದಿಪಡಿಸಿತ್ತು. ಆದಾಗ್ಯೂ, ಕರ್ನಾಟಕ ಸರ್ಕಾರದ ಆದೇಶದ ಕುರಿತು ಇದುವರೆಗೆ ರಾಜ್ಯ ಸರ್ಕಾರಿ ನೌಕರರ ಸಂಘವು ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: 7th Pay Commission: ಸರ್ಕಾರಿ ನೌಕರರ ವೇತನ, ಪಿಂಚಣಿ 58% ಹೆಚ್ಚಳ; ಸಂಪೂರ್ಣ ಲೆಕ್ಕ ಕೊಟ್ಟ ಸಿದ್ದರಾಮಯ್ಯ

Continue Reading

ವಾಣಿಜ್ಯ

Jio Air Fiber: ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಘೋಷಿಸಿದ ಜಿಯೊ! ಎಲ್ಲಿಯವರೆಗೆ ಈ ಆಫರ್‌?

Jio Air Fiber: ಜಿಯೋದಿಂದ ಏರ್ ಫೈಬರ್ ಹೊಸ ಗ್ರಾಹಕರಿಗೆ “ಫ್ರೀಡಂ ಆಫರ್” ಶೇಕಡಾ 30ರಷ್ಟು ರಿಯಾಯಿತಿ ಘೋಷಣೆ ಮಾಡಲಾಗಿದೆ. ಅಂದ ಹಾಗೆ ಜಿಯೋಫೈಬರ್ ಅಥವಾ ಏರ್ ಫೈಬರ್ ಎಂಬುದು ದೇಶದಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ಮತ್ತು ಅತಿ ದೊಡ್ಡದಾದ ಗೃಹ ಬ್ರಾಡ್ ಬ್ಯಾಂಡ್ ಹಾಗೂ ಮನರಂಜನಾ ಸೇವೆಯನ್ನು ಒದಗಿಸುತ್ತಿರುವ ಸಂಸ್ಥೆಯಾಗಿದೆ. ಏನು ಈ ಕೊಡುಗೆ ಎಂಬ ವಿವರ ಇಲ್ಲಿದೆ.

VISTARANEWS.COM


on

Jio announced 30 Percent discount on Freedom Offer for Air Fiber new customers
Koo

ಮುಂಬೈ: ಜಿಯೋದಿಂದ ಏರ್ ಫೈಬರ್ ಹೊಸ ಗ್ರಾಹಕರಿಗೆ “ಫ್ರೀಡಂ ಆಫರ್” ಶೇಕಡಾ 30ರಷ್ಟು ರಿಯಾಯಿತಿ ಘೋಷಣೆ ಮಾಡಲಾಗಿದೆ. ಅಂದ ಹಾಗೆ ಜಿಯೋ ಫೈಬರ್ ಅಥವಾ ಏರ್ ಫೈಬರ್ ಎಂಬುದು ದೇಶದಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ಮತ್ತು ಅತಿ ದೊಡ್ಡದಾದ ಗೃಹ ಬ್ರಾಡ್ ಬ್ಯಾಂಡ್ ಹಾಗೂ ಮನರಂಜನಾ ಸೇವೆಯನ್ನು ಒದಗಿಸುತ್ತಿರುವ (Jio Air Fiber) ಸಂಸ್ಥೆಯಾಗಿದೆ.

1.2 ಕೋಟಿ ಮನೆಗಳೊಂದಿಗೆ ಜಿಯೋಫೈಬರ್ ಅಥವಾ ಏರ್ ಫೈಬರ್ ಎಂಬುದು ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಭಾರತೀಯರ ಮನೆಗಳನ್ನು ಇನ್ನಷ್ಟು ವೇಗವಾಗಿ ಡಿಜಿಟೈಸ್ ಮಾಡುವ ಉದ್ದೇಶದಿಂದ ಮತ್ತು ಭಾರತವನ್ನು ಡಿಜಿಟಲ್ ಸಮುದಾಯವಾಗಿ ಮಾರ್ಪಡಿಸುವ ಉದ್ದೇಶದಿಂದ ಜಿಯೋದಿಂದ ಈ ಭರವಸೆಯ ಕೊಡುಗೆಯನ್ನು ಘೋಷಣೆ ಮಾಡಲಾಗಿದೆ. ಇದರಿಂದಾಗಿ ಇನ್ನಷ್ಟು ಮನೆಗಳಲ್ಲಿ ಈ ಸಂಪರ್ಕ ಪಡೆಯುವುದಕ್ಕೆ ಉತ್ತೇಜನ ದೊರೆಯುತ್ತದೆ. ಈಗಾಗಲೇ ಕೈಗೆಟುಕುವ ಬೆಲೆಯಲ್ಲಿ ಇರುವ ಜಿಯೋಏರ್ ಫೈಬರ್ ಪ್ಲಾನ್‌ಗಳ ಜತೆಗೆ ಶೇಕಡಾ 30ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದು ಕಂಪನಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Paris Olympics India schedule: ಒಲಿಂಪಿಕ್ಸ್​ನಲ್ಲಿ ನಾಳೆ ಭಾರತ ಯಾವೆಲ್ಲ ವಿಭಾಗದಲ್ಲಿ ಸ್ಪರ್ಧಿಸಲಿದೆ?; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಈ ಫ್ರೀಡಂ ಆಫರ್ ಜತೆಗೆ ಹೊಸ ಜಿಯೋಏರ್ ಫೈಬರ್ ಬಳಕೆದಾರರು ಶೇ 30ರಷ್ಟು ರಿಯಾಯಿತಿಯನ್ನು ಹೊಸ ಸಂಪರ್ಕವನ್ನು 1000 ರೂಪಾಯಿಯ ಇನ್‌ಸ್ಟಲೇಷನ್ ಶುಲ್ಕದ ಮನ್ನಾದ ಮೂಲಕ ಪಡೆಯುತ್ತಾರೆ. ಇದು ಸೀಮಿತ ಅವಧಿಯ ಕೊಡುಗೆ ಆಗಿದ್ದು, ಜುಲೈ 26ರಿಂದ ಆಗಸ್ಟ್ 15ನೇ ತಾರೀಕಿನ ಮಧ್ಯೆ ಇರುತ್ತದೆ.

ಜಿಯೋಏರ್ ಫೈಬರ್ ಸಂಪರ್ಕ ಪಡೆಯುವುದು ಹೇಗೆ?

ಇನ್ನು ಜಿಯೋಏರ್ ಫೈಬರ್ ಸಂಪರ್ಕ ಪಡೆಯುವುದು ಹೇಗೆ ಎಂಬ ಪ್ರಶ್ನೆ ಇದೆಯಾ? ಅದು ಬಹಳ ಸರಳ. Jio.com ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಿಮಗಿರುವ ಆಸಕ್ತಿಯನ್ನು ತಿಳಿಸಿ ಅಥವಾ 60008-60008 ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ. ಜಿಯೋದಿಂದ ಸ್ಥಿರ ನಿಸ್ತಂತು (ವೈರ್ಲೆಸ್) ಕೊಡುಗೆ ಏರ್ ಫೈಬರ್ ಅನ್ನು ಕಳೆದ ವರ್ಷ ಗಣೇಶ ಚತುರ್ಥಿಗೆ ಪರಿಚಯಿಸಲಾಯಿತು.

ಜಿಯೋದಿಂದ 5ಜಿ ಸ್ಟ್ಯಾಂಡ್ ಅಲೋನ್ ಸಂಪರ್ಕ ಸೇವೆಗಳನ್ನು ನಿಯೋಜಿಸಲಾಗಿದೆ. 5ಜಿ ಸ್ಥಿರ ನಿಸ್ತಂತು ಸಂಪರ್ಕವನ್ನು ಒದಗಿಸುವುದಕ್ಕೆ ಮೀಸಲಿಟ್ಟ ನೆಟ್‌ವರ್ಕ್ ಬಳಕೆ ಮಾಡುತ್ತಿದೆ. ನೆಟ್‌ವರ್ಕ್ ಇಕ್ಕಟ್ಟಾಗುವುದನ್ನು ನಿರ್ವಹಿಸುವುದಕ್ಕೆ ಇದರಿಂದ ಸಹಾಯ ಆಗುತ್ತದೆ. ಆದರೂ ಏರ್‌ಫೈಬರ್‌ನ ಸರಾಸರಿ ಬಳಕೆದಾರರು ಒಂದು ತಿಂಗಳಿಗೆ 400 ಜಿಬಿ ಡೇಟಾ ಬಳಸುತ್ತಾರೆ.

ಏನಿದು ಜಿಯೋ ಏರ್ ಫೈಬರ್?

ಯಾವುದೇ ತಂತಿ ಇಲ್ಲದೆ ಫೈಬರ್ ರೀತಿ ವೇಗವನ್ನು ಗಾಳಿಯ ಮೂಲಕವೇ ಒದಗಿಸುತ್ತದೆ ಏರ್ ಫೈಬರ್. ಬಳಕೆದಾರರು ಪ್ಲಗ್ ಹಾಕಿ, ಆನ್ ಮಾಡಿದರೆ ಆಯಿತು. ಇಷ್ಟು ಮಾಡಿದಲ್ಲಿ ತಮ್ಮ ಮನೆಯಲ್ಲಿ ವೈಯಕ್ತಿಕವಾಗಿ ಹಾಟ್‌ಸ್ಪಾಟ್ ಅನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡಂತಾಗುತ್ತದೆ.

ಇದನ್ನೂ ಓದಿ: Rain in Karnataka: ಬೆಳಗಾವಿಯಲ್ಲಿ ನಗರದೊಳಗೆ ಬಂದ ನದಿಗಳು, ಮನೆ ಖಾಲಿ ಮಾಡಿದ ಜನ

ಜಿಯೋಫೈಬರ್ ಸ್ಥಿರ ನಿಸ್ತಂತು ಸಂಪರ್ಕ ಪರಿಹಾರವಾಗಿದ್ದು, ಇದರಿಂದ ಯಾವುದೇ ಅಡೆತಡೆಯಿಲ್ಲದೆ 1 ಜಿಬಿಪಿಎಸ್ ತನಕದ ಹೈ- ಸ್ಪೀಡ್ ಸಂಪರ್ಕ ಮನೆ ಮತ್ತು ಕಚೇರಿಗಳಿಗೆ ದೊರೆಯುತ್ತದೆ. ಏಕಕಾಲಕ್ಕೆ ಹಲವು ಸಾಧನಗಳನ್ನು ಬಳಸಬಹುದು. ಸ್ಮಾರ್ಟ್‌ ಫೋನ್, ಪರ್ಸನಲ್ ಕಂಪ್ಯೂಟರ್‌ಗಳು, ಟ್ಯಾಬ್ಲೆಟ್, ಸ್ಮಾರ್ಟ್ ಟಿವಿಗಳು, ಮತ್ತು ಇದರ ಜತೆಗೆ ಸೆಟ್ ಟಾಪ್ ಬಾಕ್ಸ್‌ಗಳನ್ನು ಸಹ ಏಕಕಾಲಕ್ಕೆ ಸಂಪರ್ಕ ಕೊಡಬಹುದು, ಅದು ಕೂಡ ಇಂಟರ್‌ನೆಟ್ ವೇಗದಲ್ಲಿ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲದಂತೆ ಸಾಧ್ಯವಾಗುತ್ತದೆ.

Continue Reading

ಕರ್ನಾಟಕ

Samsung AC: ಹೊಸ ಶ್ರೇಣಿಯ ಎಸಿಗಳನ್ನು ಬಿಡುಗಡೆ ಮಾಡಿದ ಸ್ಯಾಮ್‌ಸಂಗ್; ಇದರ ವಿಶೇಷತೆ ಏನೇನು?

Samsung AC: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್, ಚಿಲ್ಡ್ ವಾಟರ್ ಇಂಡೋರ್ ವಿಭಾಗದಲ್ಲಿ ತನ್ನ ಹೊಸ ಉತ್ಪನ್ನವಾದ ವಿಂಡ್‌ಫ್ರೀ ಏರ್ ಕಂಡಿಷನರ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಏಸಿ ಶ್ರೇಣಿಯು ಚಿಲ್ಡ್ ವಾಟರ್ ಬೇಸ್ಡ್ ಕ್ಯಾಸೆಟ್ ಯುನಿಟ್‌ಗಳಲ್ಲಿ ವಿಂಡ್-ಫ್ರೀ ಮತ್ತು 360° ಬ್ಲೇಡ್‌ಲೆಸ್ ತಂತ್ರಜ್ಞಾನವನ್ನು ಹೊಂದಿದ್ದು, ಈ ಶ್ರೇಣಿಯು ಬಳಕೆದಾರರು ಯಾವುದೇ ಕಿರಿಕಿರಿ ಇಲ್ಲದೆ ಉತ್ತಮ ಕೂಲಿಂಗ್ ಅನುಭವ ಪಡೆಯುವಂತೆ ವಿನ್ಯಾಸಗೊಳಿಸಲಾಗಿದೆ.

VISTARANEWS.COM


on

Samsung has launched a new range of ACs in chilled water based cassette units
Koo

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್, ಚಿಲ್ಡ್ ವಾಟರ್ ಇಂಡೋರ್ ವಿಭಾಗದಲ್ಲಿ ತನ್ನ ಹೊಸ ಉತ್ಪನ್ನವಾದ ವಿಂಡ್‌ಫ್ರೀ ಏರ್ ಕಂಡಿಷನರ್ ಅನ್ನು ಬಿಡುಗಡೆ (Samsung AC) ಮಾಡಿದೆ. ಈ ಹೊಸ ಏಸಿ ಶ್ರೇಣಿಯು ಚಿಲ್ಡ್ ವಾಟರ್ ಬೇಸ್ಡ್ ಕ್ಯಾಸೆಟ್ ಯುನಿಟ್‌ಗಳಲ್ಲಿ ವಿಂಡ್-ಫ್ರೀ ಮತ್ತು 360° ಬ್ಲೇಡ್‌ಲೆಸ್ ತಂತ್ರಜ್ಞಾನವನ್ನು ಹೊಂದಿದ್ದು, ಈ ಶ್ರೇಣಿಯು ಬಳಕೆದಾರರು ಯಾವುದೇ ಕಿರಿಕಿರಿ ಇಲ್ಲದೆ ಉತ್ತಮ ಕೂಲಿಂಗ್ ಅನುಭವ ಪಡೆಯುವಂತೆ ವಿನ್ಯಾಸಗೊಳಿಸಲಾಗಿದೆ.

ಚಿಲ್ಡ್ ವಾಟರ್ ಬೇಸ್ಡ್ ಕ್ಯಾಸೆಟ್ ಯುನಿಟ್‌ಗಳು ಬಳಕೆದಾರರಿಗೆ ಬೇಕಾದ ತಾಪಮಾನವನ್ನು ಸೆಟ್ ಮಾಡಲು ಅನುವು ಮಾಡಿಕೊಡುತ್ತದೆ. ಜತೆಗೆ ವಿಂಡ್‌ಫ್ರೀ™ ಕೂಲಿಂಗ್ ತಂತ್ರಜ್ಞಾನವು 0.15 ಎಂ/ಸೆಕೆಂಡ್ ನಷ್ಟು ಗಾಳಿಯ ವೇಗದಲ್ಲಿ 15,000 ಮೈಕ್ರೋ-ಏರ್ ರಂಧ್ರಗಳಲ್ಲಿ ನಿಧಾನವಾಗಿ ತಂಪಾದ ಗಾಳಿಯನ್ನು ಬಿಡುಗಡೆ ಮಾಡುವಂತೆ ನೋಡಿಕೊಳ್ಳುತ್ತದೆ.

ಇದರ ಜತೆಗೆ ಸುಧಾರಿತ ಏರ್ ಫ್ಲೋ ವ್ಯವಸ್ಥೆಯು ಕೋಣೆಗಳನ್ನು ಶಾಂತವಾಗಿ, ವೇಗವಾಗಿ ತಂಪಾಗಿಸುತ್ತದೆ. ಕಡಿಮೆ ಮಟ್ಟದ ಅಂದರೆ ಕೇವಲ 24 dB(A) ಸೌಂಡ್ ಅನ್ನು ಮಾತ್ರ ಈ ಉತ್ಪನ್ನವು ಹೊರಹಾಕುತ್ತದೆ. ಈ ಸದ್ದನ್ನು ಒಂಥರಾ ಪಿಸುಮಾತುಗಳಿಗೆ ಹೋಲಿಸಬಹುದಾಗಿದೆ. ಹಾಗಾಗಿ ಈ ಉತ್ಪನ್ನವು ಮಲಗುವ ಕೋಣೆಗಳು, ಅಧ್ಯಯನ ಕೊಠಡಿಗಳು ಮತ್ತು ಮಗುವಿನ ಕೋಣೆಗಳಿಗೆ ಬಳಸಲು ಸೂಕ್ತವಾಗಿದೆ.

ಇದನ್ನೂ ಓದಿ: Samsung Galaxy: ಎಐ ಆಧರಿತ ಗ್ಯಾಲಕ್ಸಿ ಝಡ್ ಫೋಲ್ಡ್ 6, ಝಡ್ ಫ್ಲಿಪ್6 ಹೇಗಿದೆ? ದರ ಎಷ್ಟು?

ಹೊಸ ಫ್ಯಾನ್ ಕಾಯಿಲ್ ಯೂನಿಟ್ ವಿಂಡ್‌ಫ್ರೀ ಎಸಿಗಳು ನೀರಿನ ಪೈಪ್‌ಗಳು ಮತ್ತು ಸಂಬಂಧಿತ ವಾಲ್ವ್‌ಗಳನ್ನು ಬಳಸಿಕೊಂಡು ಸೆಂಟ್ರಲ್ ಚಿಲ್ಡ್ ವಾಟರ್ ಸಿಸ್ಟಮ್‌ಗೆ ಕನೆಕ್ಟ್ ಆಗಿವೆ. ಈ ಹೈಡ್ರಾನಿಕ್ ಫ್ಯಾನ್ ಕಾಯಿಲ್ ಯುನಿಟ್‌ಗಳು ಬಿಸಿಮಾಡಲು ಅಥವಾ ದೊಡ್ಡ ಜಾಗಗಳನ್ನು ತಂಪಾಗಿಸಲು ಬಿಸಿ ಅಥವಾ ತಣ್ಣನೆಯ ನೀರನ್ನು ಕಾಯಿಲ್‌ಗಳ ಮೂಲಕ ಪ್ರಸರಣ ಮಾಡುತ್ತವೆ. ಈ ಯುನಿಟ್‌ಗಳನ್ನು ಸ್ಯಾಮ್‌ಸಂಗ್ ಏರ್-ಕೂಲ್ಡ್ ಚಿಲ್ಲರ್‌ಗಳು ಅಥವಾ ಯಾವುದೇ ಥರ್ಡ್ ಪಾರ್ಟಿ ಏರ್-ಕೂಲ್ಡ್ ಮತ್ತು ವಾಟರ್-ಕೂಲ್ಡ್ ಚಿಲ್ಲರ್‌ಗಳೊಂದಿಗೂ ಬಳಸಬಹುದು.

ಈ ಕುರಿತು ಸ್ಯಾಮ್‌ಸಂಗ್ ಇಂಡಿಯಾದ ಎಸ್ಎಸಿ ಬಿಸಿನೆಸ್‌ನ ಹಿರಿಯ ನಿರ್ದೇಶಕ ವಿಪಿನ್ ಅಗರವಾಲ್ ಮಾತನಾಡಿ, “ನಮ್ಮ ಅತ್ಯಾಧುನಿಕ ಉತ್ಪನ್ನಗಳನ್ನು ನೀಡುವ ಮೂಲಕ ಬಳಕೆದಾರರಿಗೆ ಅನುಕೂಲತೆ ಮತ್ತು ಬಾಳಿಕೆ ಬರುವ ಉತ್ಪನ್ನ ಒದಗಿಸುವುದು ಸ್ಯಾಮ್‌ಸಂಗ್‌ನ ಉದ್ದೇಶವಾಗಿದೆ. ಚಿಲ್ಡ್ ವಾಟರ್ ಫ್ಯಾನ್ ಕಾಯಿಲ್ ಯುನಿಟ್‌ಗಳು ಶಾಂತವಾಗಿ ಕಾರ್ಯನಿರ್ವಹಿಸುತ್ತಲೇ ವೇಗವಾಗಿ ಉನ್ನತ ಮಟ್ಟದ ಕೂಲಿಂಗ್ ಸೌಲಭ್ಯವನ್ನು ಒದಗಿಸುತ್ತವೆ. ಕೂಲಿಂಗ್ ಯೂನಿಟ್‌ಗಳು ವಿಶಾಲವಾದ ಸ್ಥಳಗಳಿಗೆ ಹೆಚ್ಚು ಸೂಕ್ತವಾಗಿವೆ. ಏರ್ ಫ್ಲೋ ವ್ಯವಸ್ಥೆ ಅಂದರೆ ಗಾಳಿಯ ಹರಿವಿನ ವ್ಯವಸ್ಥೆಯನ್ನು ಹೆಚ್ಚು ಸುಧಾರಿತಗೊಳಿಸುವ, ಹಿತವಾಗಿಸುವ ಮತ್ತು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಪ್ರಯತ್ನದಲ್ಲಿ ನಾವಿದ್ದೇವೆ” ಎಂದು ತಿಳಿಸಿದ್ದಾರೆ.

ಸ್ಯಾಮ್‌ಸಂಗ್ ಚಿಲ್ಡ್ ವಾಟರ್ ಫ್ಯಾನ್ ಕಾಯಿಲ್ ಯುನಿಟ್‌ಗಳು 3 ವೇರಿಯಂಟ್‌ಗಳಲ್ಲಿ ಲಭ್ಯ

1ವೇ ಕ್ಯಾಸೆಟ್ (2.6KW~ 4.2KW)

ಅಟೋ ಸ್ವಿಂಗ್ ಫೀಚರ್ ಹೊಂದಿರುವ ಈ ಯುನಿಟ್ ಅನ್ನು ವಿಶಾಲವಾದ ಪ್ರದೇಶಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ತಂಪಾಗಿಸಲು ವಿನ್ಯಾಸಗೊಳಿಸಲಾಗಿದೆ. ಅದರ ದೊಡ್ಡ ಬ್ಲೇಡ್ ಹೆಚ್ಚು ದೊಡ್ಡದಾದ ಮತ್ತು ವಿಶಾಲವಾದ ಪ್ರದೇಶದಲ್ಲಿ ಗಾಳಿಯನ್ನು ಹರಡುತ್ತದೆ. ಅಟೋ ಸ್ವಿಂಗ್ ಫೀಚರ್ ಪ್ರತೀ ದಿಕ್ಕಿಗೂ ಗಾಳಿಯನ್ನು ವಿತರಿಸುತ್ತದೆ. 1ವೇ ಕ್ಯಾಸೆಟ್‌ಗಳು ಅತ್ಯಂತ ತೆಳ್ಳಗಿನ ವಿನ್ಯಾಸವನ್ನು ಹೊಂದಿದ್ದು, ಆಕರ್ಷಕ ಸೌಂದರ್ಯವನ್ನು ಹೊಂದಿದೆ. ಇದು ಕೇವಲ 135 ಮಿಮೀ ಎತ್ತರವನ್ನು ಹೊಂದಿದೆ ಮತ್ತು ಕೇವಲ 155 ಮಿ.ಮೀನಷ್ಟು ಸಣ್ಣದಾದ ಸೀಲಿಂಗ್ ಜಾಗದಲ್ಲಿಯೂ ಹೊಂದಿಕೊಳ್ಳುತ್ತದೆ. ಆದ್ದರಿಂದ, ಸೀಮಿತ ಸ್ಥಳಾವಕಾಶ ಇರುವ, ಆದರೆ ವಿಶಾಲವಾದ ಸ್ಥಳವನ್ನು ತಂಪಾಗಿಸುವ ಮತ್ತು ಬಿಸಿಮಾಡುವ ಅಗತ್ಯ ಇರುವವರಿಗೆ, ಇದು ಸೂಕ್ತವಾದ ಮತ್ತು ಪರಿಣಾಮಕಾರಿ ಉತ್ಪನ್ನವಾಗಿದೆ. ಇದರ ಜತೆಗೆ, ಅದರ ಸೊಗಸಾದ ಮತ್ತು ಕಾಂಪ್ಯಾಕ್ಟ್ ವಿನ್ಯಾಸವು ಎಲ್ಲಾ ರೀತಿಯ ಮತ್ತು ಶೈಲಿಗಳ ಇಂಟೀರಿಯರ್ ಜತೆಗೆ ಸೂಕ್ತ ರೀತಿಯಲ್ಲಿ ಹೊಂದಿಕೊಳ್ಳುತ್ತದೆ.

4ವೇ ಕ್ಯಾಸೆಟ್ (6.0KW~10.0KW)

ದೊಡ್ಡ ಬ್ಲೇಡ್ ವಿನ್ಯಾಸ ಹೊಂದಿರುವ ಈ ಯುನಿಟ್ ಉತ್ತಮ ಕೂಲಿಂಗ್ ಕಾರ್ಯಕ್ಷಮತೆ ಒದಗಿಸುತ್ತದೆ. ಇದು ನೀವು ಸೂಚಿಸಿದ ಸ್ಥಳಗಳಿಗೆ ಮಾತ್ರ ಗಾಳಿಯನ್ನು ಪ್ರಸಾರ ಮಾಡುತ್ತದೆ. ಅನಗತ್ಯವಾಗಿ ಗಾಳಿಯನ್ನು ಎಲ್ಲಾ ಕಡೆಗೆ ಹರಡುವ ಕೆಲಸ ಮಾಡುವುದಿಲ್ಲ.

360° ಚಿಲ್ಡ್ ಕ್ಯಾಸೆಟ್ (6.0KW~10.0KW)

ವೃತ್ತಾಕಾರದ ಸಂರಚನೆ ಹೊಂದಿದೆ. ಆಧುನಿಕ ಶೈಲಿಯ ಆರ್ಕಿಟೆಕ್ಚರಲ್ ಇಂಟೀರಿಯರ್‌ಗಳಿಗೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ಕೋಲ್ಡ್ ಡ್ರಾಫ್ಟ್‌ಗಳಿಲ್ಲದೆ ಎಲ್ಲಾ ದಿಕ್ಕುಗಳಿಗೂ ಏಕರೂಪವಾಗಿ ಗಾಳಿಯನ್ನು ಪ್ರಸಾರ ಮಾಡುತ್ತದೆ. ಗಾಳಿಯ ಹರಿವನ್ನು ನಿರ್ಬಂಧಿಸಲು ಯಾವುದೇ ಬ್ಲೇಡ್‌ಗಳಿಲ್ಲದಿರುವುದರಿಂದ ಇದು 25 ಪ್ರತಿಶತದಷ್ಟು ಹೆಚ್ಚಿನ ಗಾಳಿಯನ್ನು ಬಿಡುಗಡೆ ಮಾಡುತ್ತದೆ ಮತ್ತು ಅದನ್ನು ಮತ್ತಷ್ಟು ವೇಗವಾಗಿ ಪ್ರಸರಣ ಮಾಡುತ್ತದೆ.

ಇದನ್ನೂ ಓದಿ: Media Connect: ಚೆಸ್‌ ಹಬ್ಬದಲ್ಲಿ ಮೀಡಿಯಾ ಕನೆಕ್ಟ್‌ ಸಂಸ್ಥಾಪಕಿ ಡಾ. ದಿವ್ಯಾ ರಂಗೇನಹಳ್ಳಿಗೆ ಸನ್ಮಾನ

ಇದರ ದರ ಎಷ್ಟು?

ಸ್ಯಾಮ್‌ಸಂಗ್ ಚಿಲ್ಡ್ ವಾಟರ್ ಫ್ಯಾನ್ ಕಾಯಿಲ್ ಯೂನಿಟ್‌ಗಳ 3 ವೇರಿಯಂಟ್‌ಗಳು ಭಾರತದಾದ್ಯಂತ ಇರುವ ಸ್ಯಾಮ್‌ಸಂಗ್‌ನ ನೋಂದಾಯಿತ ಆಫ್‌ಲೈನ್ ಪಾಲುದಾರರ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಿದೆ. ಕಡಿಮೆ ಸಾಮರ್ಥ್ಯ ಹೊಂದಿರುವ ಯುನಿಟ್ ಬೆಲೆ ರೂ. 35000ರಿಂದ ಪ್ರಾರಂಭವಾಗುತ್ತದೆ ಎಂದು ಕಂಪನಿ ತಿಳಿಸಿದೆ.

Continue Reading
Advertisement
Mumbai Spa
ಪ್ರಮುಖ ಸುದ್ದಿ17 mins ago

ಕೊಲೆಯಾದ ರೌಡಿಯ ಮೈಮೇಲಿದ್ದ ಟ್ಯಾಟೂ ನೆರವಿನಿಂದ ಆರೋಪಿಗಳ ಬಂಧನ; ಹೇಗಂತೀರಾ? ಇಲ್ಲಿದೆ ರೋಚಕ ಕತೆ

Paris Olympics 2024
ಪ್ರಮುಖ ಸುದ್ದಿ46 mins ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾಗಿಯಾಗಿರುವ ಭಾರತದ ಅಥ್ಲೀಟ್​ಗಳಿಗೆ ಶುಭ ಕೋರಿದ ಪ್ರಧಾನಿ ಮೋದಿ

Vijay Mallya
ದೇಶ59 mins ago

Vijay Mallya: ವಿಜಯ್‌ ಮಲ್ಯಗೆ ಸೆಬಿ ಶಾಕ್;‌ 3 ವರ್ಷ ಸೆಕ್ಯುರಿಟೀಸ್‌ ಟ್ರೇಡಿಂಗ್‌ನಿಂದ ನಿಷೇಧ

Pakistan Cricket Board
ಪ್ರಮುಖ ಸುದ್ದಿ2 hours ago

ICC Champions Trophy : ಪಾಕಿಸ್ತಾನದ ಕ್ರಿಕೆಟ್​ ಮಂಡಳಿಯ ಮಾಧ್ಯಮ ಹಕ್ಕುಗಳನ್ನು ಕೇಳುವವರೇ ಇಲ್ಲ!

assistance from Ramchandrapur Matha for Shiruru landslide victims
ಉತ್ತರ ಕನ್ನಡ2 hours ago

Uttara Kannada News: ಶಿರೂರು ಗುಡ್ಡಕುಸಿತ ಸಂತ್ರಸ್ತರಿಗೆ ರಾಮಚಂದ್ರಾಪುರ ಮಠದ ಸಹಾಯಹಸ್ತ

Inauguration of Kannada learning classes for Malayali speakers
ಕರ್ನಾಟಕ2 hours ago

Bengaluru News: ಕನ್ನಡ-ಮಲೆಯಾಳಿ ಸಾಹಿತ್ಯ ಸಮ್ಮೇಳನ ಆಯೋಜಿಸಿ: ಸ್ಪೀಕರ್‌ ಯು.ಟಿ.ಖಾದರ್‌ ಸೂಚನೆ

Viral News
ಪ್ರಮುಖ ಸುದ್ದಿ3 hours ago

Viral News: ಜೈಲಿಂದ ಹೊರಬಂದ ಖುಷಿಗೆ ರೌಡಿಯ ಬೃಹತ್ ಮೆರವಣಿಗೆ; ಮತ್ತೆ ಜೈಲಿಗೇ ಕಳುಹಿಸಿದ ಪೊಲೀಸರು!

Viral Video
Latest3 hours ago

Viral Video: ಕೈದಿಗೆ ಕೈಕೋಳ ಹಾಕಿ ತಾಜ್ ಮಹಲ್‌ ತೋರಿಸಲು ಹೋಗಿದ್ದ ಪೊಲೀಸರು! ವಿಡಿಯೊ ನೋಡಿ

Dog meat
ಕರ್ನಾಟಕ3 hours ago

Dog Meat: ಬೆಂಗಳೂರಿಗೆ ಬಂತು ಟನ್‌ಗಟ್ಟಲೇ ನಾಯಿ ಮಾಂಸ; ಅಬ್ದುಲ್ ರಜಾಕ್ ವಿರುದ್ಧ ಆರೋಪ!

Teacher Suspended
Latest3 hours ago

Teacher Suspended: ಮಹಿಳೆಯರು ಸಿಂಧೂರ, ಮಂಗಳಸೂತ್ರ ಧರಿಸಬಾರದು ಎಂದ ಶಿಕ್ಷಕಿ ಅಮಾನತು!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ6 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ7 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ8 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ9 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ1 day ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್1 day ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ1 day ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ3 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌