DK Shivakumar: ನಮ್ಮ ಸರ್ವನಾಶವೇ ಕುಮಾರಸ್ವಾಮಿ ಅವರ ಆಲೋಚನೆ: ಡಿಸಿಎಂ ಡಿಕೆ ಶಿವಕುಮಾರ್ - Vistara News

ಪ್ರಮುಖ ಸುದ್ದಿ

DK Shivakumar: ನಮ್ಮ ಸರ್ವನಾಶವೇ ಕುಮಾರಸ್ವಾಮಿ ಅವರ ಆಲೋಚನೆ: ಡಿಸಿಎಂ ಡಿಕೆ ಶಿವಕುಮಾರ್

DK Shivakumar: 2028ರ ಒಳಗೆ ನಾವು ಬಂದು ಮತ್ತೆ ರಾಮನಗರ ಎಂದು ಮರುನಾಮಕರಣ ಮಾಡುತ್ತೇವೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅದು ಅವರ ಹಣೆಯಲ್ಲಿ ಬರೆದಿಲ್ಲ. 2028ರಲ್ಲೂ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಬೇಕಿದ್ದರೆ ಈ ಮಾತನ್ನು ಬರೆದಿಟ್ಟುಕೊಳ್ಳಿ” ಎಂದು ಸವಾಲೆಸೆದರು.

VISTARANEWS.COM


on

dk shivakumar hd kumarswamy
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಮ್ಮನ್ನು ಸರ್ವನಾಶ ಮಾಡುವುದೇ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಅವರ ನಿತ್ಯದ ಆಲೋಚನೆಯಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ತಿರುಗೇಟು ನೀಡಿದ್ದಾರೆ. ಬೆಂಗಳೂರಿನ ವಿವಿಧ ಯೋಜನೆಗಳ ಬಗ್ಗೆ ಬೆಂಗಳೂರಿನ ಸರ್ವ ಪಕ್ಷ ಶಾಸಕರುಗಳು ಹಾಗೂ ಜನಪ್ರತಿನಿಧಿಗಳ ಸಭೆ ವಿಧಾನಸೌಧದ (Vidhana Soudha) ಸಮ್ಮೇಳನ ಸಭಾಂಗಣದಲ್ಲಿ ನಡೆದ ಬಳಿಕ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿದರು.

ರಾಮನಗರ ಹೆಸರು ಬದಲಾವಣೆ ಮಾಡಲು ಹೊರಟಿರುವವರು ಸರ್ವನಾಶವಾಗುತ್ತಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಅವರು ಪ್ರತಿಕ್ರಿಯಿಸಿ, “ಕುಮಾರಸ್ವಾಮಿ ನಮ್ಮನ್ನು ಸರ್ವನಾಶ ಮಾಡಲು ಪ್ರತಿನಿತ್ಯ ರಾಜಕಾರಣ ಮಾಡುತ್ತಿದ್ದಾರೆ. ಅವರ ನಡೆ, ಹೆಜ್ಜೆ, ಭಾವನೆ, ಚಿಂತನೆ, ಅವರ ಆಚಾರ, ವಿಚಾರ ಎಲ್ಲವೂ ನಮಗೆ ಗೊತ್ತಿದೆ. ನಾವು ರಾಮನಗರದ ಹೆಸರನ್ನು ಬದಲಿಸುತ್ತಿಲ್ಲ. ಇದು ನಮ್ಮ ಜಿಲ್ಲೆ. ಇವರು ಬಂದು ಅಕ್ರಮವಾಗಿ ಜಿಲ್ಲೆಯ ಗುರುತನ್ನು ಬದಲಿಸಿದ್ದಾರೆ. ರಾಜಕೀಯವಾಗಿ ಇದಕ್ಕೆ ಅವಕಾಶವಿದೆ ಮಾಡಿದ್ದಾರೆ. ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ ತಾಲೂಕಿನ ಜನ ನಮ್ಮವರು, ಬೆಂಗಳೂರಿನವರು” ಎಂದು ವಾಗ್ದಾಳಿ ನಡೆಸಿದರು.

ನಾನು ಬೆಂಗಳೂರು ಜಿಲ್ಲಾ ಪಂಚಾಯ್ತಿ ಸದಸ್ಯನಾಗಿದ್ದೆ. ಕುಮಾರಸ್ವಾಮಿ ಹಾಗೂ ದೇವೇಗೌಡರು ಹಾಸನದಿಂದ ಬಂದಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ ಇಲ್ಲಿಗೆ ಬಂದಾಗ ಇದು ಬೆಂಗಳೂರಾಗಿಯೇ ಇತ್ತು. ಅವರು ಪ್ರಧಾನಮಂತ್ರಿ, ಮುಖ್ಯಮಂತ್ರಿಯಾದಾಗಲೂ ಇದು ಬೆಂಗಳೂರಾಗಿಯೇ ಇತ್ತು. ಇದು ನಮ್ಮ ಜಿಲ್ಲೆ. ನಾವು ಭಾರತೀಯರು ಎಂದು ಹೇಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೋ, ಅದೇ ರೀತಿ ನಾವು ಬೆಂಗಳೂರಿನವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದಾಗ ಜಿಲ್ಲೆಯನ್ನು ಒಡೆದು ಬೇರೆ ಹೆಸರು ಕೊಟ್ಟರು ಎಂದು ತಿಳಿಸಿದರು.

ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧ ಕಟ್ಟಿದ್ದು ಬೆಂಗಳೂರಿನಲ್ಲಿ, ರಾಮಕೃಷ್ಣ ಹೆಗಡೆ ಅವರು ಬಂದು ನಿಂತಿದ್ದು ಬೆಂಗಳೂರಿನಲ್ಲಿ. ಈ ಬೆಂಗಳೂರು ನಾಲ್ಕೈದು ಮುಖ್ಯಮಂತ್ರಿಗಳನ್ನು ಮಾಡಿದೆ. ನಮ್ಮ ಜಿಲ್ಲೆಯನ್ನು ಪ್ರತ್ಯೇಕ ಜಿಲ್ಲೆಯಾಗಿ ಮಾಡುವಾಗ ಬೆಂಗಳೂರು ಹೆಸರು ಉಳಿಸಿಕೊಳ್ಳುವಂತೆ ನಾವು ಸಲಹೆ ನೀಡಿದ್ದೆವು. ಬೆಂಗಳೂರು ಇಂದು ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ. ನಮ್ಮ ಪೂರ್ವಜರು ಕೊಟ್ಟಿರುವ ಈ ಹೆಸರನ್ನು ನಾವು ಯಾಕೆ ಕಳೆದುಕೊಳ್ಳಬೇಕು ಎಂದು ಪ್ರಶ್ನಿಸಿದರು.

ಈ ಜಿಲ್ಲೆಯ ಆಡಳಿತ ಕೇಂದ್ರ ರಾಮನಗರದಲ್ಲೇ ಇರುತ್ತದೆ. ಈ ಜಿಲ್ಲೆಯ ಜನಕ್ಕೆ ಹೊಸ ದಿಕ್ಕನ್ನು ನೀಡಬೇಕು, ಹೊಸ ಆಲೋಚನೆ, ಅಭಿವೃದ್ಧಿ ನೀಡಬೇಕು, ಮುಂದಿನ ಪೀಳಿಗೆ ದೃಷ್ಟಿಯಿಂದ ನಾವು ಆಲೋಚನೆ ಮಾಡಿ ಈ ತೀರ್ಮಾನ ಮಾಡಿದ್ದೇವೆ. ನಮ್ಮ ಈ ತೀರ್ಮಾನಕ್ಕೆ ಪಕ್ಷಾತೀತವಾಗಿ ಜನರು ಸಂತೋಷವಾಗಿದ್ದಾರೆ ಎಂದು ತಿಳಿಸಿದರು.

ಕುಮಾರಸ್ವಾಮಿ ಹಣೆಯಲ್ಲಿ ಬರೆದಿಲ್ಲ

2028ರ ಒಳಗೆ ನಾವು ಬಂದು ಮತ್ತೆ ರಾಮನಗರ ಎಂದು ಮರುನಾಮಕರಣ ಮಾಡುತ್ತೇವೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅದು ಅವರ ಹಣೆಯಲ್ಲಿ ಬರೆದಿಲ್ಲ. 2028ರಲ್ಲೂ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಬೇಕಿದ್ದರೆ ಈ ಮಾತನ್ನು ಬರೆದಿಟ್ಟುಕೊಳ್ಳಿ” ಎಂದು ಸವಾಲೆಸೆದರು.

ಬೃಂದಾವನ ಮೇಲ್ದರ್ಜೆಗೆ ಏರಿಕೆ

ಕೆಆರ್‌ಎಸ್ ಬೃಂದಾವನ ಉದ್ಯಾನವನಕ್ಕೆ ಹೊಸ ರೂಪ ನೀಡಲು ಮುಂದಾಗಿರುವ ಯೋಜನೆಯಿಂದ ಸರ್ಕಾರದ ಹಣ ವ್ಯರ್ಥವಾಗಲಿದೆ ಎಂಬ ವಿಪಕ್ಷ ಟೀಕೆಯ ಬಗ್ಗೆ ಅವರು ಪ್ರತಿಕ್ರಿಯಿಸಿದರು. ಅವರ ಆರೋಪ ಬೋಗಸ್ ಆಗಿದೆ. ಇದು ಸಿದ್ದರಾಮಯ್ಯ ಅವರ ಈ ಹಿಂದಿನ ಸರ್ಕಾರದಲ್ಲಿ ಪ್ರಸ್ತಾವನೆಯಾದ ಯೋಜನೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದಾಗ, ನಾನು ನೀರಾವರಿ ಸಚಿವನಾಗಿದ್ದಾಗ ಈ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಈಗ ಬೃಂದಾವನ ಉದ್ಯಾನವನವನ್ನು ವಿಶ್ವದರ್ಜೆ ಮಟ್ಟಕ್ಕೆ ಹೆಚ್ಚಿಸಲು ಮುಂದಾಗಿದ್ದೇವೆ. ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಈ ಯೋಜನೆ ಕೈಗೊಳ್ಳಲಾಗಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ. ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಮಾಡುತ್ತಿದ್ದು, ಪ್ರವಾಸೋದ್ಯಮ ಉದ್ದೇಶದಿಂದ ಈ ಯೋಜನೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಗ್ರೇಟರ್ ಬೆಂಗಳೂರು

ಗ್ರೇಟರ್ ಬೆಂಗಳೂರು ವಿಧೇಯಕದ ಬಗ್ಗೆ, ಎಲ್ಲಾ ಪಕ್ಷದ ಶಾಸಕರು ಈ ವಿಚಾರವಾಗಿ ವಿಸ್ತೃತ ಚರ್ಚೆಯಾಗಬೇಕು ಎಂದು ತಿಳಿಸಿದರು. ಇದಕ್ಕೆ ನಾನು ಮುಕ್ತವಾಗಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರ ಅಭಿಪ್ರಾಯವನ್ನು ಕೇಳಬೇಕು. ಇದರಲ್ಲಿ ಯಾವುದೇ ತಪ್ಪು ಆಗಬಾರದು. ಸಂವಿಧಾನದ 73 ಹಾಗೂ 74ನೇ ತಿದ್ದುಪಡಿ ಗಮನದಲ್ಲಿಟ್ಟುಕೊಂಡು ಇದನ್ನು ಮಾಡಬೇಕು. ಬೆಂಗಳೂರಿಗೆ ಪರಿಣಾಮಕಾರಿ ಆಡಳಿತ ನೀಡಬೇಕು. ಇದಕ್ಕೆ ಸಂಬಂಧಿಸಿದಂತೆ ಇಂದು ಎಲ್ಲಾ ಪಕ್ಷಗಳ ಶಾಸಕರ ಸಭೆ ಕರೆಯಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸದನ ಸಮಿತಿಯನ್ನು ಸಧ್ಯದಲ್ಲೇ ರಚಿಸಲಾಗುವುದು. ವಿರೋಧ ಪಕ್ಷಗಳ ಸಲಹೆ, ಅಭಿಪ್ರಾಯಗಳನ್ನು ನಾವು ಸ್ವೀಕರಿಸುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: DK Shivakumar: `ಲೋಕಾಯುಕ್ತಕ್ಕೆ ಕೊಟ್ಟ ಮೇಲೆ ಸಿಬಿಐಗೇನು ಕೆಲಸ?’ ಅಕ್ರಮ ಆಸ್ತಿ ಕೇಸ್‌ ಬಗ್ಗೆ ಡಿಕೆ ಶಿವಕುಮಾರ್‌ ಪ್ರಶ್ನೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Rishabh Pant : ಧೋನಿಯಂತೆ ಭರ್ಜರಿ ಹೆಲಿಕಾಪ್ಟರ್​ ಶಾಟ್​​ ಮೂಲಕ ಸಿಕ್ಸರ್ ಬಾರಿಸಿದ ರಿಷಭ್ ಪಂತ್​

Rishabh Pant : ಸೂರ್ಯಕುಮಾರ್ ಯಾದವ್ ಪೆವಿಲಿಯನ್​ಗೆ ಮರಳಿದ ನಂತರ, ರಿಷಭ್ ಪಂತ್ ರನ್​ ಗಳಿಸುವ ಜವಾಬ್ದಾರಿಯನ್ನು ತಮ್ಮ ಮೇಲೆ ತೆಗೆದುಕೊಂಡು ತಮ್ಮ ತಂಡವನ್ನು ದೊಡ್ಡ ಮೊತ್ತಕ್ಕೆ ಕೊಂಡೊಯ್ದರು. ಕೀಪರ್-ಬ್ಯಾಟ್ಸ್ಮನ್ ಒಂದು ಹಂತದಲ್ಲಿ 20 (20) ರನ್ ಗಳಿಸಿದ್ದರು. ನಂತರ, ಅವರು ಬ್ಯಾಟ್​ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದರು.

VISTARANEWS.COM


on

Rishabh Pant
Koo

ಬೆಂಗಳೂರು: ಶ್ರೀಲಂಕಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟರ್​ ರಿಷಭ್ ಪಂತ್ (Rishabh Pant) ಬ್ಯಾಟಿಂಗ್​ನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಉಭಯ ತಂಡಗಳ ನಡುವಿನ ಸರಣಿಯ ಮೊದಲ ಪಂದ್ಯವು ಪಲ್ಲೆಕೆಲೆಯ ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ರಿಷಭ್ ಪಂತ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದರು. ಅವರು ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಉತ್ತಮ ಸಾಥ್ ಕೊಟ್ಟರು.

ಸೂರ್ಯಕುಮಾರ್ ಯಾದವ್ ಪೆವಿಲಿಯನ್​ಗೆ ಮರಳಿದ ನಂತರ, ರಿಷಭ್ ಪಂತ್ ರನ್​ ಗಳಿಸುವ ಜವಾಬ್ದಾರಿಯನ್ನು ತಮ್ಮ ಮೇಲೆ ತೆಗೆದುಕೊಂಡು ತಮ್ಮ ತಂಡವನ್ನು ದೊಡ್ಡ ಮೊತ್ತಕ್ಕೆ ಕೊಂಡೊಯ್ದರು. ಕೀಪರ್-ಬ್ಯಾಟ್ಸ್ಮನ್ ಒಂದು ಹಂತದಲ್ಲಿ 20 (20) ರನ್ ಗಳಿಸಿದ್ದರು. ನಂತರ, ಅವರು ಬ್ಯಾಟ್​ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದರು.

ರಿಷಭ್ ಪಂತ್ ತಮ್ಮ ಇನ್ನಿಂಗ್ಸ್​ನಲ್ಲಿ ಅದ್ಭುತ ಶಾಟ್​ಗಳನ್ನು ಆಡಿದರು. ಆದರೆ ಗಮನ ಸೆಳೆದದ್ದು ಅಸಿತಾ ಫರ್ನಾಂಡೊ ವಿರುದ್ಧ ಆಡಿದ ಹೆಲಿಕಾಪ್ಟರ್ ಶಾಟ್. ಕೀಪರ್-ಬ್ಯಾಟರ್​ ಎಂಎಸ್ ಧೋನಿ ಅವರ ಸಿಗ್ನೇಚರ್ ಶಾಟ್ ಅನ್ನು ಪರಿಪೂರ್ಣವಾಗಿ ಪುನರಾವರ್ತಿಸಿ ಅದ್ಭುತ ಸಿಕ್ಸರ್ ಬಾರಿಸಿದರು.

16ನೇ ಓವರ್​ನ 4ನೇ ಎಸೆತದಲ್ಲಿ ಅಸಿತಾ ಫರ್ನಾಂಡೊ ಯಾರ್ಕರ್ ಎಸೆದರು. ರಿಷಭ್ ಪಂತ್ ತಮ್ಮ ಮಣಿಕಟ್ಟುಗಳನ್ನು ಬಳಸಿ ಆಡಿದರು. ನಂತರ ಹೆಲಿಕಾಪ್ಟರ್ ಶಾಟ್ ಅನ್ನು ಪರಿಪೂರ್ಣವಾಗಿ ಪೂರ್ತಿಗೊಳಿಸಿದರು. ಚೆಂಡು ಮಿಡ್​ ವಿಕೆಟ್​ ಮೂಲಕ ಆಕಾಶಕ್ಕೆ ಹಾರಿ ಬಿತ್ತು.

ಇದನ್ನೂ ಓದಿ: IND vs SL : ಅಪರೂಪದ ದೃಶ್ಯ; ಎರಡೂ ಕೈಯಲ್ಲಿ ಬೌಲಿಂಗ್ ಮಾಡಿದ ಲಂಕಾದ ಬೌಲರ್​ ಕಮಿಂಡು ಮೆಂಡಿಸ್​!

ರಿಷಭ್ ಪಂತ್ ತಮ್ಮ ಇನಿಂಗ್ಸ್​​ನಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತ ಕ್ರಿಕೆಟ್ ತಂಡವು ಮಧ್ಯದಲ್ಲಿ ಕೆಲವು ತ್ವರಿತವಾಗಿ ವಿಕೆಟ್​ಗಲ್ನು ಕಳೆದುಕೊಂಡ ನಂತರ ನಿರ್ಣಾಯಕ ಸಮಯದಲ್ಲಿ ಅವರ ಶತಕ ಬಂತು. ಅವರು ಬಲವಾಗಿ ಬ್ಯಾಟಿಂಗ್ ಮಾಡುವ ಮೂಲಕ ತಮ್ಮ ತಂಡಕ್ಕೆ ಇನ್ನಿಂಗ್ಸ್ ಅನ್ನು ಉನ್ನತ ಮಟ್ಟದಲ್ಲಿ ಮುಗಿಸಲು ಸಹಾಯ ಮಾಡಿದರು.

ರಿಷಭ್ ಪಂತ್ 33 ಎಸೆತಗಳಲ್ಲಿ 49 ರನ್ ಸಿಡಿಸಿ ಔಟಾದರು. ಅವರು ಸುಮಾರು 130 ಸ್ಟ್ರೈಕ್​ರೇಟ್​ನೊಂದಿಗೆ ಆಡಿದರು ಮತ್ತು ಅವರ ಇನ್ನಿಂಗ್ಸ್​ನಲ್ಲಿ 6 ಬೌಂಡರಿಗಳು ಮತ್ತು 1 ಸಿಕ್ಸರ್ ಸೇರಿಕೋಂಡಿತ್ತು. ಅವರ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ ಭಾರತವು 213 ರನ್​ಗಳನ್ನು ಬಾರಿಸಿತು.

ನಾಯಕನಾಗಿ ಸೂರ್ಯಕುಮಾರ್ ಯಾದವ್ ಭರ್ಜರಿ ಆಟ

ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ತಂಡದ ಪೂರ್ಣಾವಧಿ ನಾಯಕನಾಗಿ ನೇಮಕಗೊಂಡ ನಂತರ ತಮ್ಮ ಮೊದಲ ಪಂದ್ಯದಲ್ಲಿ ಮಿಂಚಿದರು. ಬಲಗೈ ಬ್ಯಾಟರ್​ 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಹೋದರು. ಬೌಳರ್​ಗಳನ್ನು ಬಲವಾಗಿ ಹಿಮ್ಮೆಟ್ಟಿಸಿದರು.

ಸೂರ್ಯಕುಮಾರ್ ಯಾದವ್ ತಮ್ಮ ಇನ್ನಿಂಗ್ಸ್​​ನಲ್ಲಿ ಕೆಲವು ಅಬ್ಬರದ ಶಾಟ್​ಗಳನ್ನು ಆಡಿದರು ಮತ್ತು ಅವರು ಎದುರಾಳಿ ತಂಡದ ಬೌಲರ್​​ಗಳ ನೈತಿಕತೆ ಕುಸಿಯುವಂತೆ ಮಾಡಿದರು. ಆರಂಭಿಕ ಆಟಗಾರರಾದ ಶುಭ್ಮನ್ ಗಿಲ್ (34) ಮತ್ತು ಯಶಸ್ವಿ ಜೈಸ್ವಾಲ್ (40) ನೀಡಿದ ಆರಂಭವನ್ನು ಬಲಗೈ ಬ್ಯಾಟರ್​ ಸದುಪಯೋಗಪಡಿಸಿಕೊಂಡರು.

Continue Reading

ಕರ್ನಾಟಕ

Puneeth Kerehalli: ಪುನೀತ್‌ ಕೆರೆಹಳ್ಳಿಗೆ ನ್ಯಾಯಾಂಗ ಬಂಧನ; 14 ದಿನ ಪರಪ್ಪನ ಅಗ್ರಹಾರವೇ ಗತಿ!

Puneeth Kerehalli: ಬೆಂಗಳೂರಿಗೆ ಕುರಿ ಮಾಂಸದ ನೆಪದಲ್ಲಿ ನಾಯಿ ಮಾಂಸ ಬೇರೆ ರಾಜ್ಯದಿಂದ ತರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಪುನೀತ್‌ ಕೆರೆಹಳ್ಳಿ ಆರೋಪಿಸಿ, ಮೆಜೆಸ್ಟಿಕ್‌ಗೆ ಬರುತ್ತಿದ್ದ ಮಾಂಸದ ವಾಹನಗಳನ್ನು ತಡೆದಿದ್ದರು. ಇದೇ ವೇಳೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಅವರನ್ನು ಬಂಧಿಸಿದ್ದ ಕಾಟನ್‌ಪೇಟೆ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

VISTARANEWS.COM


on

Puneeth Kerehalli
Koo

ಬೆಂಗಳೂರು: ನಾಯಿ ಮಾಂಸ (Dog Meat) ಸಾಗಣೆಯ ವಾಹನವನ್ನು ತಡೆದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬಂಧಿತರಾಗಿರುವ ಪುನೀತ್‌ ಕೆರೆಹಳ್ಳಿ (Puneeth Kerehalli) ಅವರನ್ನು ನ್ಯಾಯಾಲಯವು 14 ದಿನ ನ್ಯಾಯಾಂಗ ಬಂಧನಕ್ಕೆ ವಹಿಸಿದೆ. ಹಾಗಾಗಿ, ಇನ್ನೂ 14 ದಿನ ದಿನ ಪುನೀತ್‌ ಕೆರೆಹಳ್ಳಿಯು ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಕಳೆಯಲಿದ್ದಾರೆ. ಬೆಂಗಳೂರಿನ 5ನೇ ಎಸಿಎಂಎಂ ನ್ಯಾಯಾಲಯದ ಜಡ್ಜ್‌ ವಿಜಯ್‌ ಕುಮಾರ್‌ ಅವರು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದ್ದಾರೆ.

ಬೆಂಗಳೂರಿಗೆ ಕುರಿ ಮಾಂಸದ ನೆಪದಲ್ಲಿ ನಾಯಿ ಮಾಂಸ ಬೇರೆ ರಾಜ್ಯದಿಂದ ತರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಪುನೀತ್‌ ಕೆರೆಹಳ್ಳಿ ಆರೋಪಿಸಿ, ಮೆಜೆಸ್ಟಿಕ್‌ಗೆ ಬರುತ್ತಿದ್ದ ಮಾಂಸದ ವಾಹನಗಳನ್ನು ತಡೆದಿದ್ದರು. ಪೊಲೀಸರು ಮಧ್ಯಪ್ರವೇಶಿಸಿದ್ದು, ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಭದ್ರತೆಯಲ್ಲಿ ಕೋಲ್ಡ್ ಸ್ಟೋರೇಜ್‌ಗೆ ಮಾಂಸ ತುಂಬಿದ ನಾಲ್ಕು ವಾಹನಗಳು ರವಾನೆಯಾಗಿವೆ.

puneeth kerehalli
puneeth kerehalli

ಇದೇ ಸಂದರ್ಭದಲ್ಲಿ, ಬಿಎನ್ಎಸ್ 132 ಆ್ಯಕ್ಟ್ (ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿ) ಹಾಗೂ 351 (2) ಸೆಕ್ಷನ್‌ ಆರೋಪದಡಿ ಕಾಟನ್ ಪೇಟೆ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದರು. ಠಾಣೆಯಲ್ಲಿ ಸುಸ್ತಾಗಿ ಮಲಗಿದ್ದ ಪುನೀತ್‌ನನ್ನು ಸಿಬ್ಬಂದಿಗಳು ಕೆಸಿ ಜನರಲ್‌ ಆಸ್ಪತ್ರೆಗೆ ವ್ಹೀಲ್‌ಚೇರ್‌ನಲ್ಲಿ ಕರೆದೊಯ್ದಿದ್ದು, ಈ ವೇಳೆ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ಬೆಳಗಿನ ಜಾವ 4.45ಕ್ಕೆ ತೀವ್ರವಾಗಿ ಅಸ್ವಸ್ಥಗೊಂಡ ಆರೋಪಿಯನ್ನು ಆತುರಾತುರದಲ್ಲಿ ಆಸ್ಪತ್ರೆಗೆ ಕರೆತಂದಿದ್ದರು. ಇದಾದ ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಜಾಮೀನು ಅರ್ಜಿ ಸಲ್ಲಿಕೆ

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬಂಧಿತನಾಗಿರುವ ಪುನೀತ್‌ ಕೆರೆಹಳ್ಳಿ ಅವರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. “ಜಾಮೀನು ಅರ್ಜಿ ಸಲ್ಲಿಕೆಯಾಗಿದೆ. ಸೋಮವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ” ಎಂಬುದಾಗಿ ಪುನೀತ್‌ ಕೆರೆಹಳ್ಳಿ ಪರ ವಕೀಲ ಉಮಾಶಂಕರ್‌ ಮಾಹಿತಿ ನೀಡಿದ್ದಾರೆ.

ನಾಯಿ ಮಾಂಸ ಸಾಗಾಟ ಆರೋಪದ ಹಿನ್ನೆಲೆಯಲ್ಲಿ ವ್ಯಾಪಾರಿ ಅಬ್ದುಲ್ ರಜಾಕ್‌ ಅವರಿಗೂ ಸಂಕಷ್ಟ ಎದುರಾಗಿದೆ. ಪ್ರಕರಣದ ಕುರಿತು ಮಾತನಾಡಿರುವ ಅಬ್ದುಲ್‌ ರಜಾಕ್‌, ಎರಡು ದಿನಕ್ಕೆ ಒಮ್ಮೆ ಜೈಪುರದಿಂದ ಬೆಂಗಳೂರಿಗೆ ಕುರಿ ಮಾಂಸ ಬರುತ್ತದೆ. ಇವತ್ತು ಎರಡು ಸಾವಿರ ಕೆಜಿ ಮಾಂಸ ಬಂದಿದೆ. ಹನ್ನೆರಡು ವರ್ಷದಿಂದ ಈ ವ್ಯವಹಾರ ನಡೀತಿದೆ. ಯಾವುದೇ ಆಹಾರ ಇಲಾಖೆ ಬಂದು ಚೆಕ್ ಮಾಡಲಿ. ರಾಜಸ್ಥಾನದ ಕುರಿಗಳಿಗೆ ಬಾಲ ಇದೇ ರೀತಿ ಇರುತ್ತೆ. ಪುನೀತ್ ಕೆರೆಹಳ್ಳಿ ಅದನ್ನು ನಾಯಿ ಅಂತಿದ್ದಾರೆ. ಹಣ ವಸೂಲಿ ಮಾಡೋಕೆ ಈ ರೀತಿ ಮಾಡ್ತಾ ಇದಾರೆ. ನಾಳೆ ಈ ಬಗ್ಗೆ ಸುದ್ದಿಗೋಷ್ಠಿ ಮಾಡುತ್ತೇವೆ. ಈ ಬಗ್ಗೆ ಪುನೀತ್ ಕೆರೆಹಳ್ಳಿ ವಿರುದ್ಧ ದೂರು ಕೊಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Dog Meat: 15 ವರ್ಷದಿಂದ ಅಬ್ದುಲ್ ರಜಾಕ್ ನಾಯಿ ಮಾಂಸ ತಿನ್ನಿಸುತ್ತಿದ್ದಾರೆ: ಪ್ರಮೋದ್‌ ಮುತಾಲಿಕ್‌ ಶಾಕಿಂಗ್‌ ಹೇಳಿಕೆ

Continue Reading

ದೇಶ

ಬಾರೆ ಸಖಿ ಎಂದು 20 ವರ್ಷದ ಯುವತಿಯನ್ನು ಕರೆದುಕೊಂಡು ಹೋದ, ಕೊಂದು ಪೊದೆಯಲ್ಲಿ ಬಿಸಾಡಿದ; ಕೃತ್ಯಕ್ಕೆ ಕಾರಣವೇನು?

ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯಶಶ್ರೀ ಶಿಂಧೆ ಎಂಬ 20 ವರ್ಷದ ಯುವತಿಯ ಶವವು ನವಿ ಮುಂಬೈ ರೈಲು ನಿಲ್ದಾಣದ ಬಳಿಯ ಪೊದೆಯಲ್ಲಿ ಪತ್ತೆಯಾಗಿದೆ. ಆಕೆಯ ಬಾಯ್‌ಫ್ರೆಂಡ್‌ನೇ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಬಳಿಕ ಯುವಕನು ನಾಪತ್ತೆಯಾಗಿದ್ದು, ಆತನನ್ನು ಬಂಧಿಸಲು ಐದು ತಂಡಗಳನ್ನು ರಚಿಸಲಾಗಿದೆ.

VISTARANEWS.COM


on

Mumbai Girl
Koo

ಮುಂಬೈ: ಬದಲಾದ ಕಾಲಘಟ್ಟದಲ್ಲಿ ನಿಜವಾದ ಪ್ರೀತಿ-ಪ್ರೇಮ ಎಂಬುದರ ಅರ್ಥವೇ ಕ್ಷೀಣಿಸುತ್ತಿದೆ. ಕಾಲೇಜು ಓದುವಾಗಲೇ ಪ್ರೀತಿಸುವುದು, ಜಗಳ ಆಡಿ ಒಂದೆರಡು ವರ್ಷದಲ್ಲಿ ದೂರ ಆಗುವುದು, ಬ್ರೇಕಪ್‌ (Love Breakup) ಬಳಿಕ ಮತ್ತೊಂದು ಲವ್‌ ಹಿಂದೆ ಓಡುವುದು ಸಾಮಾನ್ಯ ಎಂಬಂತಾಗಿದೆ. ಇನ್ನೂ, ಒಂದು ಹೆಜ್ಜೆ ಮುಂದೆ ಹೋಗಿರುವ ಪ್ರೇಮಿಗಳು, ತಾವು ಇಷ್ಟಪಟ್ಟವರು ಬ್ರೇಕಪ್‌ ಎಂದರೆ ಅಥವಾ ಇನ್ನೊಂದು ಅಫೇರ್‌ನ ಅನುಮಾನ ಮೂಡಿ ಕೊಲೆಯಂತಹ ಪ್ರಕರಣಗಳು ನಡೆಯುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಮುಂಬೈನಲ್ಲಿ (Mumbai) ಯುವಕನೊಬ್ಬ ತಾನು ಪ್ರೀತಿಸುತ್ತಿದ್ದ 20 ವರ್ಷದ ಯುವತಿಯನ್ನು ಭೀಕರವಾಗಿ ಕೊಲೆ ಮಾಡಿ, ಶವವನ್ನು ಪೊದೆಯಲ್ಲಿ ಎಸೆದಿರುವ ಪ್ರಕರಣ ಬಯಲಾಗಿದೆ.

ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯಶಶ್ರೀ ಶಿಂಧೆ ಎಂಬ 20 ವರ್ಷದ ಯುವತಿಯ ಶವವು ನವಿ ಮುಂಬೈ ರೈಲು ನಿಲ್ದಾಣದ ಬಳಿಯ ಪೊದೆಯಲ್ಲಿ ಪತ್ತೆಯಾಗಿದೆ. ಆಕೆಯ ಬಾಯ್‌ಫ್ರೆಂಡ್‌ನೇ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. “ತಡರಾತ್ರಿ 2 ಗಂಟೆ ಸುಮಾರಿಗೆ ಉರಾನ್‌ ರೈಲು ನಿಲ್ದಾಣದ ಬಳಿಯ ಪೊದೆಯಲ್ಲಿ ಯುವತಿಯ ಶವ ಬಿದ್ದಿದೆ ಎಂಬುದಾಗಿ ಕರೆ ಬಂದಿತು. ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಯುವತಿ ಮೈಮೇಲೆ ಭೀಕರ ಗಾಯಗಳಾಗಿವೆ. ಆಕೆಯನ್ನು ಇರಿದು ಕೊಲೆ ಮಾಡಲಾಗಿದೆ” ಎಂದು ನವಿ ಮುಂಬೈ ಡಿಸಿಪಿ ವಿವೇಕ್‌ ಪನ್ಸಾರೆ ತಿಳಿಸಿದ್ದಾರೆ.

“ಪ್ರಾಥಮಿಕ ತನಿಖೆಯ ಪ್ರಕಾರ, ಯುವಕ ಹಾಗೂ ಯುವತಿಯು ಪ್ರೀತಿಸುತ್ತಿದ್ದರು. ಇತ್ತೀಚೆಗೆ ಇಬ್ಬರ ಮಧ್ಯೆ ಮನಸ್ತಾಪ ಮೂಡಿತ್ತು. ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವತಿಯ ಶವ ಪತ್ತೆಯಾದ ಬಳಿಕ ಯುವಕನ ಮೇಲೆ ಶಂಕೆ ವ್ಯಕ್ತವಾಗಿದೆ. ಯುವಕನು ಈಗ ಪ್ರಾಥಮಿಕ ಆರೋಪಿಯಾಗಿದ್ದಾನೆ. ಕೊಲೆ ಬಳಿಕ ಯುವಕನು ಕೂಡ ನಾಪತ್ತೆಯಾಗಿದ್ದಾನೆ. ಆತನನ್ನು ಪತ್ತೆಹಚ್ಚಲು ಐದು ಪೊಲೀಸ್‌ ತಂಡಗಳನ್ನು ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುತ್ತದೆ” ಎಂಬುದಾಗಿ ಡಿಸಿಪಿ ತಿಳಿಸಿದ್ದಾರೆ.

ಯುವತಿಯು ಉರಾನ್‌ ಪ್ರದೇಶದ ನಿವಾಸಿಯಾಗಿದ್ದು, ಅಲ್ಲಿಂದ ಸುಮಾರು 25 ಕಿಲೋಮೀಟರ್‌ ದೂರದಲ್ಲಿರುವ ಬೇಲಾಪುರದಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಇದೇ ವೇಳೆ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಆದರೆ, ಇತ್ತೀಚೆಗೆ ಇಬ್ಬರ ಮಧ್ಯೆ ಮನಸ್ತಾಪಗಳು, ಜಗಳಗಳು ಜಾಸ್ತಿಯಾಗಿದ್ದವು ಎಂದು ತಿಳಿದುಬಂದಿದೆ. ಆದಾಗ್ಯೂ, ಯುವತಿಯನ್ನು ಕೊಲೆ ಮಾಡಲು ನಿಖರ ಕಾರಣ ಏನು ಎಂಬುದು ಇದುವರೆಗೆ ಗೊತ್ತಾಗಿಲ್ಲ.

ಇದನ್ನೂ ಓದಿ: Murder in PG: ಪಿಜಿಯಲ್ಲಿ ಯುವತಿ ಕೊಲೆ ಮಾಡಿದ ಪಾತಕಿ ಮಧ್ಯಪ್ರದೇಶದಲ್ಲಿ ಸೆರೆ

Continue Reading

ಪರಿಸರ

Arecanut Research Centre: ಹೊಸ ಅಡಿಕೆ ಸಂಶೋಧನಾ ಕೇಂದ್ರ ಮತ್ತೊಂದು ಮದುವೆ ಛತ್ರ ಆಗದಿರಲಿ!

Arecanut Research Centre: ಇರುವ ಅಡಿಕೆ ಸಂಶೋಧನಾ ಕೇಂದ್ರಗಳಲ್ಲಿ ಅಡಿಕೆ ರೋಗಗಳ ವಿಚಾರದಲ್ಲಿ ಯಾವುದೇ ಮಹತ್ತರ ಸಂಶೋಧನೆ, ಅಧ್ಯಯನಗಳು ನೆಡೆಯದೆ ಇರುವಾಗ, ಮತ್ತೊಂದು ಅಡಿಕೆ ಸಂಶೋಧನಾ ಕೇಂದ್ರ ಕರ್ನಾಟಕಕ್ಕೆ ಬೇಕಾ ಎನ್ನುವುದು ಅಡಿಕೆ ಬೆಳೆಗಾರರ ಮುಂದಿರುವ ಪ್ರಶ್ನೆ.

VISTARANEWS.COM


on

Koo

-ಅರವಿಂದ ಸಿಗದಾಳ್, ಮೇಲುಕೊಪ್ಪ
ನಿಯಮ 377ರ ಅಡಿಯಲ್ಲಿ ಹಳದಿ ರೋಗದ (Arecanut Research Centre) ಹರಡುವಿಕೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರು ಅನುಭವಿಸುತ್ತಿರುವ ನಷ್ಟದ ಕುರಿತು ಲೋಕಸಭೆಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ವಿಷಯ ಪ್ರಸ್ತಾಪಿಸಿ ಗಮನ ಸೆಳೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಹಳದಿ ಎಲೆ ರೋಗ ಸಮಸ್ಯೆ ಬಗ್ಗೆ ಒಂದೇ ಹಂತದಲ್ಲಿ ಪರಿಹಾರ ನೀಡುವ ಮೂಲಕ ಬಿಕ್ಕಟ್ಟನ್ನು ಬಗೆಹರಿಸಲು ಮುಂದಾಗಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಯಿತು. ಈ ರೋಗ ತಡೆಗೆ ಸಂಬಂಧಿಸಿ, ದಕ್ಷಿಣ ಕನ್ನಡದಲ್ಲಿ ಅಡಿಕೆ ಸಂಶೋಧನಾ ಸಂಸ್ಥೆ ಸ್ಥಾಪಿಸಲು ಹಣಕಾಸು ನೆರವನ್ನು ನೀಡಬೇಕು ಎಂದು ಲೋಕಸಭೆಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಮನವಿ ಮಾಡಿದ್ದಾರೆ.

arecanut price
Arecanut Price

ಇನ್ನೊಂದು ಅಡಿಕೆ ಸಂಶೋಧನಾ ಕೇಂದ್ರ ಬೇಕಾ?

ಇರುವ ಅಡಿಕೆ ಸಂಶೋಧನಾ ಕೇಂದ್ರಗಳಲ್ಲಿ ಅಡಿಕೆ ರೋಗಗಳ ವಿಚಾರದಲ್ಲಿ ಯಾವುದೇ ಮಹತ್ತರ ಸಂಶೋಧನೆ, ಅಧ್ಯಯನಗಳು ನೆಡೆಯದೆ ಇರುವಾಗ, ಮತ್ತೊಂದು ಅಡಿಕೆ ಸಂಶೋಧನಾ ಕೇಂದ್ರ ಕರ್ನಾಟಕಕ್ಕೆ ಬೇಕಾ ಎನ್ನುವುದು ಅಡಿಕೆ ಬೆಳೆಗಾರರ ಮುಂದಿರುವ ಪ್ರಶ್ನೆ.
ತೀರ್ಥಹಳ್ಳಿ ಮತ್ತು ಶೃಂಗೇರಿಗಳಲ್ಲಿ ಈಗಾಗಲೇ ಸಂಶೋಧನಾ ಕೇಂದ್ರಗಳಿದ್ದು, ಅಲ್ಲಿ ಅಡಿಕೆಗೆ ಸಂಬಂಧಿಸಿದ ಯಾವ ಮಹತ್ತರವಾದ ಸಂಶೋಧನೆಗಳೂ ನೆಡೆಯುತ್ತಿರುವ ವರದಿಗಳಿಲ್ಲ. ಅದರಲ್ಲೂ ಶೃಂಗೇರಿ ಸಂಶೋಧನಾ ಕೇಂದ್ರದ ಸುತ್ತಮುತ್ತಲಿನ ಅಡಿಕೆ ತೋಟಗಳಿಗೆ ಹಳದಿ ರೋಗ ಬಂದು, ದಶಕಗಳೇ ಕಳೆದು, ಈಗ ಎಲೆ ಚುಕ್ಕಿ ರೋಗವೂ ಜೊತೆಗೂಡಿ ತೋಟಗಳೇ ನಾಶವಾಗಿವೆ. ಶೃಂಗೇರಿ ಕ್ಷೇತ್ರದ ಸುತ್ತಮುತ್ತಲಿನ ಅಡಿಕೆ ಬೆಳೆಗಾರರು ಪರ್ಯಾಯ ಬೆಳೆಯ ದಾರಿ ಹುಡುಕುತ್ತಿದ್ದಾರೆ. ಹಳದಿರೋಗ, ಎಲೆಚುಕ್ಕಿ ರೋಗದ ಬಾಧೆ ತಾಳಲಾರದೆ ಪರ್ಯಾಯ ಕ್ಷೇತ್ರಗಳಲ್ಲಿ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ವಿಜ್ಞಾನಿಗಳೆಲ್ಲಿ?

ಅಡಿಕೆ ಎಲೆಚುಕ್ಕಿ, ಹಳದಿ ರೋಗಗಳ ಬಗ್ಗೆ ಎರಡು ವರ್ಷಗಳ ಹಿಂದೆ ಸ್ಥಳೀಯ ಅಡಿಕೆ ಬೆಳೆಗಾರರ ತೀವ್ರ ಒತ್ತಡ ತಂದಾಗ, ಆಗಿನ ರಾಜ್ಯ ಸರಕಾರದ ತೋಟಗಾರಿಕೆ ಸಚಿವರು “ಅಗತ್ಯ ಬಿದ್ದರೆ ಇಸ್ರೇಲ್‌ನಿಂದ ವಿಜ್ಞಾನಿಗಳನ್ನು ಕರೆಸೋಣ. ಅತಿ ಶೀಘ್ರದಲ್ಲಿ ವಿಜ್ಞಾನಿಗಳನ್ನು ಕರೆಸಿ ಎರಡೂ ರೋಗಗಳ ಬಗ್ಗೆ ತ್ವರಿತಗತಿಯಲ್ಲಿ ಅಧ್ಯಯನ, ಸಂಶೋದನೆಗೆ ಒತ್ತು ಕೊಟ್ಟು ಅಡಿಕೆ ರೋಗಗಳಿಗೆ ಪರಿಹಾರ ಕೊಡಿಸುತ್ತೇನೆ” ಎಂದಿದ್ದರು. ಅಡಿಕೆ ಹಳದಿ ರೋಗ, ಎಲೆ ಚುಕ್ಕಿರೋಗಗಳಿಂದ ಶೃಂಗೇರಿ ಪ್ರಾಂತ್ಯದ ಅಡಿಕೆ ತೋಟಗಳು ‘ಕುರುಕ್ಷೇತ್ರದ’ ಬಣ್ಣಕ್ಕೆ ತಿರುಗಿದ್ದ ಕಾಲ ಅದು!
ನುಡಿದಂತೆ ನಡೆದ ಸಚಿವರು ಮೂರು ವಿಜ್ಞಾನಿಗಳನ್ನು ಶೃಂಗೇರಿಯಲ್ಲಿರುವ ಅಡಿಕೆ ಸಂಶೋಧನಾ ಕೇಂದ್ರಕ್ಕೆ ಡೆಪ್ಯೂಟ್ ಮಾಡಿದರು! ಆದರೆ, ಡೆಪ್ಯೂಟ್ ಡ್ರಾಮಾ ಎಷ್ಟು ತಮಾಷೆಯಾಗಿತ್ತು ಅಂದರೆ, ಡೆಪ್ಯೂಟ್ ಆದ ಮೇಲೆ, ಆ ಮೂರು ಜನ ವಿಜ್ಞಾನಿಗಳೊಂದಿಗೆ ರೈತ ಸಂವಾದ ಕಾರ್ಯಕ್ರಮ ನೆಡೆಸಿದಾಗ ತಿಳಿದಿದ್ದು ಮೂವರೂ ವಿಜ್ಞಾನಿಗಳು ಅಡಿಕೆ ತೋಟದ ವಿಚಾರದಲ್ಲಿ ಪ್ರೀ ನರ್ಸರಿ ಮಾಹಿತಿಯೂ ಇಲ್ಲದವರು ಎಂದು! ಮೂವರು ವಿಜ್ಞಾನಿಗಳೂ ಹೊಸಬರು. ಅಡಿಕೆ ವಿಚಾರದ ವೃತ್ತಿ ಅನುಭವ ಇಲ್ಲದವರು. ಕನಿಷ್ಠ ಪಕ್ಷ ಅಡಿಕೆ ತೋಟದ ಕಪ್ಪು ದಾಟಿದ ಅನುಭವವೂ ಇಲ್ಲದವರು! ಇಸ್ರೇಲ್ ಬೇಡ ಭಾರತದಲ್ಲೇ, ಅದರಲ್ಲೂ ಕರ್ನಾಟಕದಲ್ಲೇ ನುರಿತ ಅನುಭವಿ ತಜ್ಞ ವಿಜ್ಞಾನಿಗಳು ಇರಲಿಲ್ವಾ?
ಕೆಲವು ತಿಂಗಳು ಕಳೆಯುವುದರೊಳಗೆ ಬಂದ ಅಧಿಕೃತ ಸುದ್ದಿ ‘ಆ ಮೂವರು ‘ಹೊಸ’ ವಿಜ್ಞಾನಿಗಳನ್ನು ಬೇರೆಡೆಗೆ ವರ್ಗಾಯಿಸಲಾಗಿದೆ’ ಎಂದು. ಅಲ್ಲಿಗೆ ಹಳದಿ, ಎಳೆ ಚುಕ್ಕಿ ಸಂಶೋಧನೆಗಳು, ರೋಗ ಅಧ್ಯಯನಗಳು ಶೃಂಗೇರಿ ಆಶ್ಲೇಷಾ ಮಳೆಯ ನೆರೆಯಲ್ಲಿ ಹುಣಸೇಹಣ್ಣು ಕರಗಿದಂತೆ ಕರಗಿ ತೇಲಿ ಹೋಯಿತು!

Arecanut Price
Arecanut Price

ನರಳುತ್ತಿದೆ ಸಂಶೋಧನೆ

ಲ್ಯಾಬ್ ಇಲ್ಲದ, ವಿಜ್ಞಾನಿಗಳಿಲ್ಲದ, ಸಿಬ್ಬಂದಿ ಇಲ್ಲದ, ಸಂಶೋಧನೆಗೆ ಅನುದಾನವೂ ಇಲ್ಲದೆ ನರಳುತ್ತಿರುವ ತೀರ್ಥಹಳ್ಳಿ ಮತ್ತು ಶೃಂಗೇರಿಯ ಎರಡೂ ಸಂಶೋಧನಾ ಕೇಂದ್ರಗಳನ್ನು ಕರಿ ಕಸ ಗುಡಿಸಿ ಮದುವೆ, ಮುಂಜಿಗಳಗೆ ಬಾಡಿಗೆಗೆ ಕೊಟ್ಟರೆ ಸರ್ಕಾರಕ್ಕೆ ಒಂದಿಷ್ಟು ಆದಾಯ ಬರಬಹುದು ಅಂತ ಅಡಿಕೆ ಬೆಳೆಗಾರರು ಮಾತಾಡಿಕೊಳ್ತಾ ಇದ್ದಾರೆ.
ಈಗಲೂ ಆ ಸಂಶೋಧನಾ ಛತ್ರಗಳಲ್ಲಿ ವರ್ಷಕ್ಕೊಂದೆರಡು ಕೃಷಿ ಸಮಾಲೋಚನೆ, ಮಾಹಿತಿ ಶಿಬಿರಗಳನ್ನು ನೆಡೆಸಿ ರೈತರಿಗೆ ಒಂದು ಪಲಾವ್ ಊಟ ಹಾಕಿಸಲಾಗುತ್ತದೆ! ಮಣ್ಣು ಪರೀಕ್ಷೆಗೆ ಕೊಟ್ಟರೆ, ಹದಿನೆಂಟು ಪ್ಯಾರಾಮೀಟರ್‌ಗಳಲ್ಲಿ ಮೂರು ಪ್ಯಾರಾಮೀಟರ್ ಚಕ್ ಮಾಡುವ ಉಪಕರಣಗಳೂ ಅಲ್ಲಿಲ್ಲ, ಸಿಬ್ಬಂದಿಯೂ ಇಲ್ಲ. ಅನುದಾನ ಬಂದಿದ್ದರಲ್ಲಿ ಖುರ್ಚಿ, ಪೋಡಿಯಂ, ಡೆಸ್ಕ್, ಟೇಬಲ್‌ಗಳನ್ನು ವಾಸ್ತು ಪ್ರಕಾರ ಹಾಕಿ ಮೆಯಿನ್ಟೆಯಿನ್ ಮಾಡಲಾಗುತ್ತಿದೆ!

ಇದನ್ನೂ ಓದಿ: ವಿಸ್ತಾರ ಗ್ರಾಮ ದನಿ: ಅಡಿಕೆ ಬೆಳೆಗಾರರೂ ‘ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ʼ ಸಲ್ಲಿಸಬೇಕಾ? ಸಲ್ಲಿಸದಿದ್ದರೆ ಏನಾಗುತ್ತದೆ?

ರೋಗ ಯಾವುದು? ಪರಿಹಾರ ಏನು?

ಸಂಶೋಧನೆ, ಅಧ್ಯಯನಗಳು ಮೊದಲು ಆಗಬೇಕಾಗಿದ್ದು ಹಳದಿ ರೋಗ, ಎಲೆ ಚುಕ್ಕಿ ರೋಗಗಳಿಗಲ್ಲ. ಮೊದಲು ಸಂಶೋಧನೆ ಆಗಬೇಕಾಗಿರುವುದು ಅಡಿಕೆ ಸಂಶೋಧನಾ ಕೇಂದ್ರಗಳಿಗೆ ಬಂದಿರುವ ರೋಗ ಯಾವುದು? ಪರಿಹಾರ ಏನು ಎಂದು ನೋಡುವುದಕ್ಕೆ! ಇರುವ ಎರಡು ಅಡಿಕೆ ಸಂಶೋಧನಾ ಕೇಂದ್ರಗಳಿಗೆ ಕೊರೋನಾ, ಡೆಂಗ್ಯು ಬಂದು ನರಳುತ್ತಿರುವಾಗ, ಈಗ ಇನ್ನೊಂದು ಸಂಶೋಧನಾ ಕೇಂದ್ರವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೆರೆಯಲು ಮುಂದಾಗುವುದು, ಅದಕ್ಕೆ ಸ್ಥಳಿಯ ಸಂಸದರು ಒತ್ತಾಯಿಸುವುದು ಸುಮ್ಮನೆ ಹಣ ವ್ಯರ್ಥ ಅನಿಸುತ್ತದೆ. ದಕ್ಷಿಣ ಕನ್ನಡದಲ್ಲಿ ಸಾಕಷ್ಟು ಛತ್ರಗಳಿರುವುದರಿಂದ, ಮತ್ತೊಂದು ಛತ್ರದ ಕಟ್ಟಡ ನಿರ್ಮಾಣ ಬೇಡ ಅನಿಸುತ್ತದೆ! ಬೇಕೇ ಬೇಕು ಅನ್ನುವುದಾದಲ್ಲಿ ಘಟ್ಟದ ಮೇಲಿನ ಸಂಶೋಧನಾ ಛತ್ರಗಳ ಕಾರ್ಯಕ್ಷಮತೆಯನ್ನು ಒಮ್ಮೆ ಸಂಶೋಧನೆ ಮಾಡಿ ತೀರ್ಮಾನ ಮಾಡುವುದು ಒಳ್ಳೆಯದು. ಹೊಸ ಸಂಶೋಧನಾ ಕೇಂದ್ರದ ಹಣದಲ್ಲಿ, ಇರುವ ಸಂಶೋಧನಾ ಕೇಂದ್ರಗಳನ್ನು ಬಲ ಪಡಿಸಿ, ಅಡಿಕೆ ರೋಗಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬಹುದು.

Continue Reading
Advertisement
Rishabh Pant
ಪ್ರಮುಖ ಸುದ್ದಿ7 mins ago

Rishabh Pant : ಧೋನಿಯಂತೆ ಭರ್ಜರಿ ಹೆಲಿಕಾಪ್ಟರ್​ ಶಾಟ್​​ ಮೂಲಕ ಸಿಕ್ಸರ್ ಬಾರಿಸಿದ ರಿಷಭ್ ಪಂತ್​

Puneeth Kerehalli
ಕರ್ನಾಟಕ15 mins ago

Puneeth Kerehalli: ಪುನೀತ್‌ ಕೆರೆಹಳ್ಳಿಗೆ ನ್ಯಾಯಾಂಗ ಬಂಧನ; 14 ದಿನ ಪರಪ್ಪನ ಅಗ್ರಹಾರವೇ ಗತಿ!

Mumbai Girl
ದೇಶ45 mins ago

ಬಾರೆ ಸಖಿ ಎಂದು 20 ವರ್ಷದ ಯುವತಿಯನ್ನು ಕರೆದುಕೊಂಡು ಹೋದ, ಕೊಂದು ಪೊದೆಯಲ್ಲಿ ಬಿಸಾಡಿದ; ಕೃತ್ಯಕ್ಕೆ ಕಾರಣವೇನು?

ಪರಿಸರ52 mins ago

Arecanut Research Centre: ಹೊಸ ಅಡಿಕೆ ಸಂಶೋಧನಾ ಕೇಂದ್ರ ಮತ್ತೊಂದು ಮದುವೆ ಛತ್ರ ಆಗದಿರಲಿ!

ind vs sl
ಪ್ರಮುಖ ಸುದ್ದಿ1 hour ago

IND vs SL : ಅಪರೂಪದ ದೃಶ್ಯ; ಎರಡೂ ಕೈಯಲ್ಲಿ ಬೌಲಿಂಗ್ ಮಾಡಿದ ಲಂಕಾದ ಬೌಲರ್​ ಕಮಿಂಡು ಮೆಂಡಿಸ್​!

Opposition MLAs agree to Skydeck near Nice Road will discuss in Cabinet meeting says DCM DK Shivakumar
ಕರ್ನಾಟಕ1 hour ago

DK Shivakumar: ಬೆಂಗಳೂರಿನ ನೈಸ್‌ ರಸ್ತೆ ಬಳಿ ದೇಶದ ಅತಿ ಎತ್ತರದ ಸ್ಕೈಡೆಕ್!

Team India Coach
ಪ್ರಮುಖ ಸುದ್ದಿ2 hours ago

Team India Coach : ಕೋಚ್​​ ಗೌತಮ್ ಗಂಭೀರ್ ವೈಭವೀಕರಣ; ಮಾಜಿ ಆಟಗಾರನ ಆಕ್ಷೇಪ

Infiltration
ದೇಶ2 hours ago

Infiltration: ಭಾರತಕ್ಕೆ ನುಗ್ಗುವುದು ಹೇಗೆ ಎಂದು ವಿಡಿಯೊ ಮಾಡಿದ ಬಾಂಗ್ಲಾ ವ್ಯಕ್ತಿ; ದೀದಿ ಆಹ್ವಾನದ ಬೆನ್ನಲ್ಲೇ ವಿಡಿಯೊ ವೈರಲ್‌

ICW 2024
ಫ್ಯಾಷನ್2 hours ago

ICW 2024: ಮುಂಬರುವ ವೆಡ್ಡಿಂಗ್‌ ಸೀಸನ್‌ ಮೆನ್ಸ್ ವೇರ್‌ ಅನಾವರಣಗೊಳಿಸಿದ ಇಂಡಿಯಾ ಕೌಚರ್‌ ವೀಕ್‌ 2024

Indian Army
ದೇಶ3 hours ago

ಪಾಕ್‌ಗೆ ಮೋದಿ ಎಚ್ಚರಿಕೆ ಬೆನ್ನಲ್ಲೇ ಗಡಿಯಲ್ಲಿ 2 ಸಾವಿರ ಹೆಚ್ಚುವರಿ ಸೈನಿಕರ ನಿಯೋಜಿಸಿದ ಕೇಂದ್ರ; ಏನಿದರ ಮರ್ಮ?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ4 hours ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ9 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ10 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ1 day ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ1 day ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ1 day ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ1 day ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

ಟ್ರೆಂಡಿಂಗ್‌