Police Firing: ಕೈ ಕಟ್‌ ಮಾಡಿದ ರೌಡಿಗಳ ಕಾಲಿಗೆ ಪೊಲೀಸರ ಗುಂಡೇಟು - Vistara News

ಕ್ರೈಂ

Police Firing: ಕೈ ಕಟ್‌ ಮಾಡಿದ ರೌಡಿಗಳ ಕಾಲಿಗೆ ಪೊಲೀಸರ ಗುಂಡೇಟು

Police Firing: ಕಳೆದ ವಾರ ಕನಕಪುರದ ಮಾಳಗಾಳು ಬಡಾವಣೆಯಲ್ಲಿ ಗಲಾಟೆ ನಡೆದಿತ್ತು. ಗಲಾಟೆ ವೇಳೆ ಒಬ್ಬ ವ್ಯಕ್ತಿ ಮೇಲೆ ಹಲ್ಲೆ ಮಾಡಿ ಕೈ ಕಟ್ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದರು. ಆರೋಪಿಗಳನ್ನು ಬಂಧಿಸುವಂತೆ ದಲಿತ‌‌ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

VISTARANEWS.COM


on

rowdysheeters police firing
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಮನಗರ: ಬೆಳ್ಳಂಬೆಳಿಗ್ಗೆ ರೌಡಿಶೀಟರ್‌ಗಳ (Rowdysheeters) ಮೇಲೆ ಕನಕಪುರ ನಗರ ಪೊಲೀಸರು (Kanakapura Police) ಗುಂಡು ಹಾರಿಸಿ (Police Firing) ಬಂಧಿಸಿದ್ದಾರೆ. ವ್ಯಕ್ತಿಯೊಬ್ಬನ ಕೈ ಕತ್ತರಿಸಿ (Assault Case) ಪರಾರಿಯಾಗಿದ್ದ ರೌಡಿಗಳನ್ನು ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.

ಕನಕಪುರ ಟೌನ್ ಸಿಪಿಐ ಮಿಥುನ್ ಶಿಲ್ಪಿ ಹಾಗೂ ಪಿಎಸ್ಐ ಮನೋಹರ್ ಅವರಿಂದ ಫೈರಿಂಗ್ ನಡೆದಿದೆ. ಹರ್ಷ ಅಲಿಯಾಸ್ ಕೈಮ, ಕರುಣೇಶ್ ಅಲಿಯಾಸ್ ಕಣ್ಣ ಗಾಯಗೊಂಡ ರೌಡಿಶೀಟರ್‌ಗಳು. ಕಗ್ಗಲೀಪುರದ ವ್ಯಾಲಿ ಸ್ಕೂಲ್ ರೋಡ್ ಬಳಿ ಪೊಲೀಸರಿಂದ ಫೈರಿಂಗ್ ನಡೆದಿದೆ.

ಕಳೆದ ವಾರ ಕನಕಪುರದ ಮಾಳಗಾಳು ಬಡಾವಣೆಯಲ್ಲಿ ಗಲಾಟೆ ನಡೆದಿತ್ತು. ಗಲಾಟೆ ವೇಳೆ ಒಬ್ಬ ವ್ಯಕ್ತಿ ಮೇಲೆ ಹಲ್ಲೆ ಮಾಡಿ ಕೈ ಕಟ್ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದರು. ಆರೋಪಿಗಳನ್ನು ಬಂಧಿಸುವಂತೆ ದಲಿತ‌‌ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇಂದು ಮುಂಜಾನೆ ಆರೋಪಿಗಳನ್ನು ಬಂಧಿಸಲು ಪೊಲೀಸರು ಹೋಗಿದ್ದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಈ ರೌಡಿಗಳು ಮುಂದಾಗಿದ್ದಾರೆ.

ಈ ಸಂದರ್ಭದಲ್ಲಿ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹೊಡೆದು ಅವರನ್ನು ಬಂಧಿಸಿದ್ದಾರೆ. ಹಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ ರಾಜಶೇಖರ್, ಶಿವಕುಮಾರ್ ಎಂಬವರಿಗೂ ಗಾಯಗಳಾಗಿವೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ.

ವಿಚ್ಛೇದಿತ ನರ್ಸ್‌ ಜೊತೆ ಲವ್ವಿ ಡವ್ವಿ; ಪೊಲೀಸಪ್ಪನಿಗೇ ಕಾನೂನು ರುಚಿ ತೋರಿಸಿದ ಪತ್ನಿ

ರಾಯಚೂರು: ವಿಚ್ಛೇದಿತ ನರ್ಸ್‌ ಒಬ್ಬಾಕೆಯೊಂದಿಗೆ ಲವ್ವಿ ಡವ್ವಿ (Illicit Relationship) ಹೊಂದಿದ್ದ ಪೊಲೀಸ್‌ ಕಾನ್‌ಸ್ಟೇಬಲ್‌ (Police constable) ಒಬ್ಬಾತನಿಗೆ ಆತನ ಪತ್ನಿ ಕಾನೂನು ಅಸ್ತ್ರದ ಮೂಲಕ ಪಾಠ ಕಲಿಸಲು ಮುಂದಾಗಿದ್ದಾರೆ. ಘಟನೆ ರಾಯಚೂರಿನ ದೇವದುರ್ಗದಲ್ಲಿ ನಡೆದಿದೆ.

ಸಿರವಾರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ರಾಜ್ ಮಹಮ್ಮದ್ ಎಂಬಾತನ ಮೇಲೆ ಆತನ ಪತ್ನಿಯಿಂದ ಕೇಸು ಬಿದ್ದಿದೆ. ದೇವದುರ್ಗ ಪೊಲೀಸ್‌ ಠಾಣೆಯಲ್ಲಿ ಮಹಿಳಾ ಪೇದೆ ಆಗಿರುವ ಪ್ಯಾರಿ ಬೇಗಂ ಎಂಬಾಕೆ ಈತನ ಪತ್ನಿ ಹಾಗೂ ದೂರು ಸಲ್ಲಿಸಿದವರು. ರಾಜ್ ಮಹಮ್ಮದ್ ಮತ್ತು ಪ್ಯಾರಿ‌ ಬೇಗಂ ಪ್ರೀತಿಸಿ ಮದುವೆಯಾದವರು. ಆದರೆ ಇತ್ತೀಚೆಗೆ ರಾಜ್‌ ಮಹಮ್ಮದ್‌ ಇನ್ನೊಬ್ಬ ಮಹಿಳೆ ಜೊತೆಗೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದ.

ಕವಿತಾ ಆಸ್ಪತ್ರೆ ನರ್ಸ್ ಸರಳ ಎಂಬಾಕೆಯ ಜೊತೆ ಸುಮಾರು 4-5 ವರ್ಷಗಳಿಂದ ವಿವಾಹೇತರ ಸಂಬಂಧ ನಡೆಸಿದ್ದ. ಇವರಿಬ್ಬರನ್ನೂ ಮನೆಯೊಂದರಲ್ಲಿ ರೆಡ್ ಹ್ಯಾಂಡ್ ಆಗಿ ಪ್ಯಾರಿ ಬೇಗಂ ಹಿಡಿದಿದ್ದರು. ಬಳಿಕ ಪೊಲೀಸರಿಗೆ ಒಪ್ಪಿಸಿ ಪತಿ ವಿರುದ್ಧವೇ ಎಸ್ಪಿಗೆ ದೂರು ನೀಡಿದ್ದಾರೆ. ಎಸ್‌ಪಿಯನ್ನು ಭೇಟಿ ಮಾಡಿ, ‌ಬಳಿಕ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ರಾಜ್ ಮಹಮ್ಮದ್, ರಿಜಿಯಾ ಬೇಗಂ, ಮೈಬೂಬ್ ಮತ್ತು ಸ್ಟಾಫ್ ನರ್ಸ್ ಸರಳ ವಿರುದ್ಧ ರಾಯಚೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗರ್ಭಪಾತ, ವರದಕ್ಷಿಣೆ ಕಿರುಕುಳ (Dowry harassment), ಕೊಲೆ ಯತ್ನ (Murder attempt) ಸೇರಿದಂತೆ ಹಲವು ಆರೋಪಗಳನ್ನು ಗಂಡನ ವಿರುದ್ಧ ಪ್ಯಾರಿ ಬೇಗಂ ನೀಡಿದ್ದಾರೆ.

ಇದನ್ನೂ ಓದಿ: Atal Setu: ಅಟಲ್‌ ಸೇತು ಮೇಲೆ ಕಾರಿನಲ್ಲಿ ಬಂದು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ; ಏನಾಗಿತ್ತು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Actor Darshan: ರೇಣುಕಾಸ್ವಾಮಿ ಕುಟುಂಬಕ್ಕೆ ಹಣ ಸಹಾಯ ಮಾಡಿ, ದರ್ಶನ್‌ ಪರವಾಗಿ ವಾದ ಮಾಡಿದ ನಟ ಗಣೇಶ್ ರಾವ್!

Actor Darshan: ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ರಾಜಕಾರಣಿ ಶಂಕರೇಗೌಡ ಪಾತ್ರದಲ್ಲಿ ನಟ ಗಣೇಶ್ ರಾವ್ ರೇಣುಕಾಸ್ವಾಮಿ ಅವರ ಮನೆಗೆ ಭೇಟಿ ನೀಡಿ ದರ್ಶನ್ ಪರವಾಗಿ ಮಾತನಾಡಿದರು. ಜತೆಗೆ ರೇಣುಕಾಸ್ವಾಮಿ ಕುಟುಂಬಕ್ಕೆ ಗಣೇಶ್ ರಾವ್ ಹಣ ಸಹಾಯ ಮಾಡಿದರು.ಮೃತ ರೇಣುಕಾಸ್ವಾಮಿ ಅವರ ಮನೆಗೆ ನಟ ಗಣೇಶ್ ರಾವ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ರೇಣುಕಾಸ್ವಾಮಿ ಅವರ ಮನೆಗೆ ಭೇಟಿ ನೀಡಿದ ನಟ ಗಣೇಶ್ ರಾವ್‌, ರೇಣುಕಾಸ್ವಾಮಿ ಅವರ ಕುಟುಂಬಸ್ಥರ ಮುಂದೆಯೇ ದರ್ಶನ್ ಪರವಾಗಿ ಮಾತನಾಡಿದರು.

VISTARANEWS.COM


on

Actor Darshan Ganesh Rao Visits Renukaswamy Family and spport In Chitradurga
Koo

ಬೆಂಗಳೂರುಚಾಲೆಂಜಿಂಗ್ ಸ್ಟಾರ್‌ ದರ್ಶನ್ (Actor Darshan) ಜೈಲು ಸೇರಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ದರ್ಶನ್‌ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇನ್ನು ಹಲವು ನಾಯಕರು, ಸೆಲೆಬ್ರಿಟಿಗಳು ರೇಣುಕಾ ಸ್ವಾಮಿ ಕುಟುಂಬಕ್ಕೆ ಸಹಾಯವನ್ನು ಮಾಡಿದ್ದಾರೆ. ನಿನ್ನೆಯಷ್ಟೇ ವಿನೋದ್‌ ರಾಜ್‌ ಅವರು ಚಿತ್ರದುರ್ಗಕ್ಕೆ ಹೋಗಿ ಸಂತ್ರಸ್ತ ರೇಣುಕಾ ಸ್ವಾಮಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ಹೇಳುವ ಜತೆಗೆ 1 ಲಕ್ಷ ರೂಪಾಯಿ ಹಣ ಸಹಾಯವನ್ನು ಸಹ ಮಾಡಿದ್ದರು. ಇದೀಗ   ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ರಾಜಕಾರಣಿ ಶಂಕರೇಗೌಡ ಪಾತ್ರದಲ್ಲಿ ನಟ ಗಣೇಶ್ ರಾವ್ (Ganesh Rao) ರೇಣುಕಾಸ್ವಾಮಿ ಅವರ ಮನೆಗೆ ಭೇಟಿ ನೀಡಿ ದರ್ಶನ್ ಪರವಾಗಿ ಮಾತನಾಡಿದರು. ಜತೆಗೆ ರೇಣುಕಾಸ್ವಾಮಿ ಕುಟುಂಬಕ್ಕೆ ಗಣೇಶ್ ರಾವ್ ಹಣ ಸಹಾಯ ಮಾಡಿದರು.

ಮೃತ ರೇಣುಕಾಸ್ವಾಮಿ ಅವರ ಮನೆಗೆ ನಟ ಗಣೇಶ್ ರಾವ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ರೇಣುಕಾಸ್ವಾಮಿ ಅವರ ಮನೆಗೆ ಭೇಟಿ ನೀಡಿದ ನಟ ಗಣೇಶ್ ರಾವ್‌, ರೇಣುಕಾಸ್ವಾಮಿ ಅವರ ಕುಟುಂಬಸ್ಥರ ಮುಂದೆಯೇ ದರ್ಶನ್ ಪರವಾಗಿ ಮಾತನಾಡಿದರು.

ಗಣೇಶ್ ರಾವ್ ಮಾತನಾಡಿ ʻʻನಾವು ಯಾರನ್ನೂ ಸಮರ್ಥಿಸಿಕೊಳ್ಳುತ್ತಿಲ್ಲ. ದರ್ಶನ್‌ ಜತೆ ನಾವು 13 ಸಿನಿಮಾಗಳನ್ನು ಮಾಡಿದ್ದೇವೆ. ಆ ಮನುಷ್ಯ ಅಷ್ಟು ಕ್ರೂರಿ ಅಲ್ಲ. ಸೆಲೆಬ್ರಿಟಿ ಆದ ಕಾರಣ ಹೆಸರು ಮುನ್ನಲೆಗೆ ಬರುತ್ತಿದೆ. ನನಗೆ ಆತ್ಮ ಸಾಕ್ಷಿ ಹೇಳುತ್ತ ಇದೆ. ದರ್ಶನ್‌ ಅವರು ಆ ಮಟ್ಟಕ್ಕೆ ಇಳಿಯಲು ಸಾಧ್ಯವಿಲ್ಲ. ಅವರ ಜತೆ ಇದ್ದ ಸಂಗಡಿಗರು ಹೀಗೆ ಮಾಡಿದ್ದರಿಂದ ಅಪವಾಧ ಅವರ ಮೇಲೆ ಹೀಗೆ ಬಂದಿದೆ. ಇಲ್ಲಿ ಬಿಂಬಿಸುತ್ತಿರುವುದು ದರ್ಶನ್‌ ಅವರನ್ನು. ನ್ಯಾಯಾಲಕ್ಕೆ ಮುಂಚೆನೆ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಬಿಟ್ಟಿದ್ದಾರೆ. ತಪ್ಪು ಮಾಡಿದರೆ ಶಿಕ್ಷೆ ಅನುಭವಿಸಲಿ. ಆದರೆ ತಪ್ಪು ಮಾಡದೇನೇ ಅಪವಾಧ ಹೊರಿಸುವುದು ಸರಿಯಲ್ಲ. ಕೆಲವರು ಅವರೇ ಕಣ್ಣಾರೆ ನೋಡಿರೋ ತರ ಮಾತನಾಡುತ್ತಾರೆ. ಈ ದುರ್ಘಟನೆ ನಡೆಯಬಾರದಿತ್ತು. ರೇಣುಕಾಸ್ವಾಮಿ ಮನೆಯವರು ನೋವು ಅನುಭವಿಸುತ್ತಿದ್ದಾರೆ. ಅವರಿಗೆ ದುಃಖ ಭರಿಸುವ ಶಕ್ತಿಯನ್ನ ದೇವರು ಕೊಡಲಿ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ. ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಮಾನವೀಯತೆ ದೃಷ್ಟಿಯಿಂದ ನೊಂದಿರುವ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ವಿʼʼ ಎಂದರು.

ಇದನ್ನೂ ಓದಿ: Ghuspaithiya Hindi Movie: ರಮೇಶ್ ರೆಡ್ಡಿ ನಿರ್ಮಾಣದ ʼಘುಸ್ಪೈಥಿಯಾʼ ಹಿಂದಿ ಸಿನಿಮಾ ಆ. 9ರಂದು ತೆರೆಗೆ

ಇದಕ್ಕೂ ಮುಂಚೆ ಮುಂಚೆ ಚಿತ್ರದುರ್ಗಕ್ಕೆ ತೆರಳಿದ ನಟ ವಿನೋದ್ ರಾಜ್ ಮಾತನಾಡಿ, ‘ಮನೆಗೆ ಆಧಾರ ಸ್ತಂಭವಾದ ಮಗನನ್ನು ಕಳೆದುಕೊಂಡಿದ್ದಾರೆ. ಕುಟುಂಬ ಪರಿತಪಿಸುತ್ತಿರುವ ಸ್ಥಿತಿ ಕಂಡು ಕರಳುಕಿತ್ತು ಬರುತ್ತಿದೆ. ಜೀವನದಲ್ಲಿ ಮನುಷ್ಯ ಹೇಗೆ ಬಾಳಬೇಕು, ಹೇಗೆ ನಡೆದುಕೊಳ್ಳಬೇಕು, ಯಾವ ದಿಕ್ಕಿನಲ್ಲಿ ಮಾನವೀಯತೆ, ಮನುಷತ್ವ ಸಾಗುತ್ತಿದೆ, ಮನುಷ್ಯತ್ವ ಇದೆಯಾ ಎನ್ನುವುದು ನಮ್ಮನ್ನೇ ಮುಟ್ಟಿಕೊಂಡು ನೋಡುವಂತಹ ಕಾಲ ಬಂದಿದೆ. ಜೀವನ ಇಡೀ ಸಂಪದಾನೆ, ಹೆಸರು ಮಾಡುವುದು ಅಲ್ಲವೇ ಅಲ್ಲ. ಜೀವನ ಇಡಿ ಜೀವಗಳ ಬಗ್ಗೆ ಕಾಳಜಿ ತೆಗೆದುಕೊಂಡು ಬದುಕಬೇಕು. ಪ್ರತಿಯೊಬ್ಬರ ಜೀವನದಲ್ಲೂ ಜೀವಗಳಿವೆ. ಜೀವರಾಶಿಗಳನ್ನ ಭಗವಂತ ತಂದೆ ತಾಯಿ ರೂಪದಲ್ಲಿ ಸೃಷ್ಟಿ ಮಾಡಿರುತ್ತಾನೆ. ಅವರೂ ಕೂಡ ಚೆನ್ನಾಗಿ ಇರಬೇಕು ಎಂದು ಬೆಳೆಸುತ್ತಾರೆ. ಎಲ್ಲೋ ಒಂದು ಅತಾಚುರ್ಯ, ಕೆಟ್ಟದ್ದು ನಡೆಯುತ್ತೆ. ಕೆಟ್ಟದ್ದು ಜಾಸ್ತಿ ಆದಾಗ ಇಂತಹ ಪರಿಸ್ಥಿತಿ ಬರುತ್ತದೆ. ಆದರೆ ಇದು ಹೆಚ್ಚಾಗಬಾರದು. ಸಮಾಜದಲ್ಲಿ ಉನ್ನತವಾದ ಸ್ಥಾನ ಎತ್ತರದ ಮಟ್ಟದಲ್ಲಿರುವವರು ವಿವೇಕ ಮರೆಯಬಾರದು, ಅಚಾತುರ್ಯ‌ ನಡೆಯುತ್ತವೆ, ಮುಂದಿನ ತಲೆಮಾರುಗಳು ಹೀಗೆ ಆಗದಂತೆ ಎಚ್ಚರವಹಿಸಬೇಕು, ಮಾಧ್ಯಮ ತಿದ್ದಿಬುದ್ದಿ ಹೇಳಿದಂತೆ ಅನುಸರಿಸಿಕೊಂಡು ಸಾಗಬೇಕು’ ಎಂದು ವಿನೋದ್ ರಾಜ್​ಕುಮಾರ್ ಹೇಳಿದ್ದರು. .

Continue Reading

ವೈರಲ್ ನ್ಯೂಸ್

Viral News: ರೈಲ್ವೇ ಪೊಲೀಸ್‌ ಸಿಬ್ಬಂದಿಯ ಹೊಡೆತಕ್ಕೆ ಯುವಕನ ಕರುಳೇ ಹೊರಬಂತು! ಶಾಕಿಂಗ್‌ Video ಇಲ್ಲಿದೆ

Viral News: ಬಿಹಾರದ ಸೀತಮರ್ಹಿ ಜಿಲ್ಲೆಯ ಪುಪ್ರಿ ಪ್ರದೇಶದ ಜನಕ್‌ಪುರ ರೋಡ್ ರೈಲ್ವೆ ನಿಲ್ದಾಣದಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಕರ್ಮಭೂಮಿ ರೈಲಿನಲ್ಲಿದ್ದ ಯುವಕನ ಮೇಲೆ ಜಿಆರ್‌ಪಿ ಸಿಬ್ಬಂದಿ ಹಲ್ಲೆ ನಡೆಸಿದ್ದು, ಕರುಳು ಕಿತ್ತು ಬಂದಿದೆ. ಗಾಯಗೊಂಡ ವ್ಯಕ್ತಿಯನ್ನು ಗಧಾ ಗ್ರಾಮದ ಮೊಹಮ್ಮದ್ ಗುಲಾಬ್ ಅವರ ಪುತ್ರ 25 ವರ್ಷದ ಮೊಹಮ್ಮದ್ ಫುರ್ಕಾನ್ ಎಂದು ಗುರುತಿಸಲಾಗಿದೆ. ಘಟನೆಯ ನಂತರ ಮೊಹಮ್ಮದ್ ಫುರ್ಕಾನ್‌ನನ್ನು ಪುಪ್ರಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

VISTARANEWS.COM


on

Viral News
Koo

ಪಾಟ್ನಾ: ಬಿಹಾರದ ಸೀತಮರ್ಹಿ ಜಿಲ್ಲೆಯ ಪುಪ್ರಿ ಪ್ರದೇಶದ ಜನಕ್‌ಪುರ ರೋಡ್ ರೈಲ್ವೆ ನಿಲ್ದಾಣ (Janakpur Road railway station)ದಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಕರ್ಮಭೂಮಿ ರೈಲಿನಲ್ಲಿದ್ದ ಯುವಕನ ಮೇಲೆ ಜಿಆರ್‌ಪಿ (Government Railway Police) ಸಿಬ್ಬಂದಿ ಹಲ್ಲೆ ನಡೆಸಿದ್ದು, ಕರುಳು ಕಿತ್ತು ಬಂದಿದೆ. ಗಂಭೀರವಾಗಿ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ಸಾಗಿಸುವ ವಿಡಿಯೊ ಸದ್ಯ ವೈರಲ್‌ ಆಗಿದ್ದು, ಜಿಆರ್‌ಪಿ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ (Viral News).

ಗಾಯಗೊಂಡ ವ್ಯಕ್ತಿಯನ್ನು ಗಧಾ ಗ್ರಾಮದ ಮೊಹಮ್ಮದ್ ಗುಲಾಬ್ ಅವರ ಪುತ್ರ 25 ವರ್ಷದ ಮೊಹಮ್ಮದ್ ಫುರ್ಕಾನ್ ಎಂದು ಗುರುತಿಸಲಾಗಿದೆ. ಘಟನೆಯ ನಂತರ ಮೊಹಮ್ಮದ್ ಫುರ್ಕಾನ್‌ನನ್ನು ಪುಪ್ರಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ವಿಡಿಯೊದಲ್ಲಿ ಏನಿದೆ?

ಇಬ್ಬರು ವ್ಯಕ್ತಿಗಳು ಗಂಭೀರ ಗಾಯಗೊಂಡ ಫುರ್ಕಾನ್ ಅನ್ನು ಹೊತ್ತೊಯ್ಯುತ್ತಿರುವುದು ಮತ್ತು ಜನರ ಗುಂಪು ಅವರನ್ನು ಹಿಂಬಾಲಿಸುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಜತೆಗೆ “ಪೊಲೀಸರು ಅವನನ್ನು ಎಷ್ಟು ಕೆಟ್ಟದಾಗಿ ಥಳಿಸಿದ್ದಾರೆ ಎನ್ನುವುದನ್ನು ನೋಡಿ” ಎಂದು ವ್ಯಕ್ತಿಯೊಬ್ಬರು ಹೇಳುತ್ತಿರುವುದು ಕೇಳಬಹುದು. ಮೊಹಮ್ಮದ್ ಫುರ್ಕಾನ್‌ ಕರ್ಮಭೂಮಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮುಂಬೈಗೆ ಹೋಗುತ್ತಿದ್ದ ತನ್ನ ಚಿಕ್ಕಮ್ಮನನ್ನು ಬೀಳ್ಕೊಡಲು ಆಗಮಿಸಿದ್ದ ವೇಳೆ ಹಲ್ಲೆ ನಡೆದಿದೆ ಎನ್ನಲಾಗಿದೆ.

ಘಟನೆ ವಿವರ

ಶಸ್ತ್ರಚಿಕಿತ್ಸೆಗೆ ಒಳಗಾದ ಮೊಹಮ್ಮದ್ ಫುರ್ಕಾನ್‌ನ ಹೊಟ್ಟೆಯ ಮೇಲೆ ಜಿಆರ್‌ಪಿ ಸಿಬ್ಬಂದಿ ಕೋಲಿನಿಂದ ಹಲವು ಬಾರಿ ಹೊಡೆದಿದ್ದಾನೆ. ಇದರಿಂದಾಗಿ ಹೊಟ್ಟೆ ಒಡೆದು ಕರುಳು ಹೊರಗೆ ಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ʼʼನನ್ನ ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆ ನಡೆದಿದೆ. ನೋವಾಗುತ್ತಿದೆ ಎಂದು ಪದೇ ಪದೆ ಹೇಳುತ್ತಿದ್ದರೂ ಜಿಆರ್‌ಪಿ ಸಿಬ್ಬಂದಿ ಕೋಲಿನಿಂದ ಹೊಡೆಯುತ್ತಲೇ ಇದ್ದರುʼʼ ಎಂದು ಮೊಹಮ್ಮದ್ ಫುರ್ಕಾನ್‌ ತಿಳಿಸಿದ್ದಾನೆ.

ಹೊರಬಂದ ಕರುಳು

ಫುರ್ಕಾನ್‌ ಸುಮಾರು ಎರಡು ವರ್ಷಗಳ ಹಿಂದೆ ಕರುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ. ಶಸ್ತ್ರಚಿಕಿತ್ಸೆಗೊಳಗಾದ ಭಾಗದ ಮೇಲೆ ಹಲ್ಲೆ ನಡೆಸಿದ ಪರಿಣಾಮ ಆತನ ಹೊಟ್ಟೆ ಎಡಭಾಗ ತೆರೆದುಕೊಂಡಿತು ಮತ್ತು ಅದರಿಂದ ಕರುಳು ಹೊರಬಂದಿದೆ ಎಂದು ಮೂಲಗಳು ತಿಳಿಸಿವೆ.

ಜಿಆರ್‌ಪಿ ಸಿಬ್ಬಂದಿ ವಿರುದ್ಧ ಆಕ್ರೋಶ

ಘಟನೆ ಬೆಳಕಿಗೆ ಬಂದ ಬಳಿಕ ಜಿಆರ್‌ಪಿ ಸಿಬ್ಬಂದಿಯ ಅನಾಗರಿಕ ವರ್ತನೆಯಿಂದ ಕೋಪಗೊಂಡ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಜನಕ್‌ಪುರ ರಸ್ತೆ ನಿಲ್ದಾಣವನ್ನು ಧ್ವಂಸಗೊಳಿಸಿದ್ದಾರೆ. ಉದ್ರಿಕ್ತ ಗುಂಪು ಸ್ಟೇಷನ್‌ ಸೂಪರಿಟೆಂಡೆಂಟ್‌ ಕಚೇರಿಯ ಮುಖ್ಯ ದ್ವಾರದ ಕಬ್ಬಿಣದ ಗ್ರಿಲ್ ಮತ್ತು ಗಾಜಿನ ಗೇಟ್ ಮುರಿದು ಒಳಗೆ ಪ್ರವೇಶಿಸಿ ಗಲಾಟೆ ಮಾಡಿದೆ. ಜಿಆರ್‌ಪಿ ಸಿಬ್ಬಂದಿ ಹಲ್ಲೆ ನಡೆಸಿದ್ದು ಯಾಕೆ ಎನ್ನುವುದು ತಿಳಿದು ಬಂದಿಲ್ಲ. ಸೀಟುಗಳಿಗಾಗಿ ಪ್ರಯಾಣಿಕರ ನಡುವೆ ಜಗಳ ಕಂಡು ಬಂದ ಹಿನ್ನೆಲೆಯಲ್ಲಿ ಈ ಹಲ್ಲೆ ನಡೆಸಲಾಗಿದೆ ಎಂದು ಕೆಲವು ಮೂಲಗಳು ತಿಳಿಸಿವೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯ ಆರೋಪಿಗಳೆಂದು ಗುರುತಿಸಲಾದ ಪ್ರಣಿ ದಯಾನಂದ್ ಪಾಸ್ವಾನ್ ಮತ್ತು ಗೋರೆಲಾಲ್ ಚೌಕಿ ಎಂದಿಬ್ಬರನ್ನು ಅಮಾನತುಗೊಳಿಸಲಾಗಿದ್ದು, ಜಗಳದಲ್ಲಿ ಭಾಗಿಯಾಗಿದ್ದ ಹಲವು ಶಂಕಿತರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Continue Reading

ಕ್ರೈಂ

Mysuru News : ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಆಟೋ ಡ್ರೈವರ್ ಶವವಾಗಿ ಪತ್ತೆ

Mysuru News : ಐದು ದಿನಗಳ ಹಿಂದೆ ಸಾಲಗಾರರ ಕಾಟಕ್ಕೆ ಹೆದರಿ ಡೆತ್‌ನೋಟ್‌ (Death Note) ಬರೆದಿಟ್ಟು ನಾಪತ್ತೆಯಾಗಿದ್ದ (Missing Case) ಆಟೋ ಡ್ರೈವರ್‌ (Auto Driver)ಶವವಾಗಿ (Dead Body Found) ಪತ್ತೆಯಾಗಿದ್ದಾರೆ.

VISTARANEWS.COM


on

By

Mysuru News
Koo

ಮೈಸೂರು: ಸಾಲಗಾರರ ಕಿರುಕುಳಕ್ಕೆ ಬೇಸತ್ತು ಡೆತ್‌ನೋಟ್ (Death note) ಬರೆದು ನಾಪತ್ತೆಯಾಗಿದ್ದ ಆಟೋ ಡ್ರೈವರ್ ಶವವಾಗಿ ಪತ್ತೆಯಾಗಿದ್ದಾರೆ. ಮೈಸೂರಿನ (Mysuru News) ಹುಣಸೂರು ತಾಲೂಕಿನ ಕುಟ್ಟುವಾಡಿ ಗ್ರಾಮದಲ್ಲಿ ಘಟನೆ ನಡೆದಿತ್ತು. ಆಟೋ ಡ್ರೈವರ್ ಪ್ರಸಾದ್ (40) ನಾಪತ್ತೆಯಾಗಿದ್ದವರು.

ಕಳೆದ ಜುಲೈ 20 ರಂದು ಕಟ್ಟುವಾಡಿಯಿಂದ ಪ್ರಸಾದ್‌ ಕಾಣೆಯಾಗಿದ್ದರು. ಎಚ್.ಡಿ.ಕೋಟೆಯ ಸರಗೂರಿನ ಕಪಿಲಾ ನದಿ ದಂಡೆ ಸೋಮೇಶ್ವರ ದೇವಸ್ಥಾನದ ಬಳಿ ನೀರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಪ್ರಸಾದ್ ಡೆತ್‌ನೋಟ್ ಆಟೋದಲ್ಲಿ ಇಟ್ಟು ನಾಪತ್ತೆಯಾಗಿದ್ದರು. ಪ್ರಸಾದ್ ನಾಪತ್ತೆಯಿಂದಾಗಿ ಕುಟುಂಬಸ್ಥರು ಕಂಗಾಲಾಗಿದ್ದರು. ಈ ಸಂಬಂಧ ಬಿಳಿಕೆರೆ ಪೊಲೀಸರು ಮಿಸ್ಸಿಂಗ್‌ ಕೇಸ್‌ ದಾಖಲಾಗಿದ್ದು, ಪ್ರಸಾದ್‌ಗಾಗಿ ಶೋಧ ನಡೆಸುತ್ತಿದ್ದರು. ಡೆತ್‌ನೋಟ್‌ನಲ್ಲಿ ನನ್ನ ಸಾವಿಗೆ ಫೈನಾನ್ಸ್ ಮಧು, ಟೆಂಪೋ ಕಿರಣ್ ಕಾರಣ ಎಂದು ಉಲ್ಲೇಖಿಸಿದ್ದರು.

ಫೈನಾನ್ಸ್ ಮಧು ಬಳಿ ಕಿರಣ್ ಜಾಮೀನು ನೀಡಿ ಹಣ ಸಾಲ ಕೊಡಿಸಿದ್ದ.ನಿಗದಿತ ಸಮಯಕ್ಕೆ ಹಣ ಹಿಂದಿರುಗಿಸಿಲ್ಲ. ಹೀಗಾಗಿ ಕಿರಣ್ ಆಗಾಗ್ಗೆ ಮನೆಗೆ ಬಂದು ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಪ್ರಸಾದ್ ಡೆತ್ ನೋಟ್ ಬರೆದು ನಾಪತ್ತೆಯಾಗಿದ್ದ.

ಎಚ್.ಡಿ.ಕೋಟೆ ಸರಗೂರಿನಲ್ಲಿ ಪ್ರಸಾದ್ ಮೃತದೇಹ ದೊರೆತಿದೆ. ಸರಗೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: Dog Meat: ಅಬ್ದುಲ್‌ ರಜಾಕ್‌ ತರಿಸುವ ಮಾಂಸದ ಮೇಲೆ ಹೆಚ್ಚುತ್ತಿದೆ ಅನುಮಾನ! ಹಲವು ಹೋಟೆಲ್‌ ಮಾಲಿಕರಿಗೆ ನೋಟೀಸ್‌

ಕೈ ಕಟ್‌ ಮಾಡಿದ ರೌಡಿಗಳ ಕಾಲಿಗೆ ಪೊಲೀಸರ ಗುಂಡೇಟು

ರಾಮನಗರ: ಬೆಳ್ಳಂಬೆಳಿಗ್ಗೆ ರೌಡಿಶೀಟರ್‌ಗಳ (Rowdysheeters) ಮೇಲೆ ಕನಕಪುರ ನಗರ ಪೊಲೀಸರು (Kanakapura Police) ಗುಂಡು ಹಾರಿಸಿ (Police Firing) ಬಂಧಿಸಿದ್ದಾರೆ. ವ್ಯಕ್ತಿಯೊಬ್ಬನ ಕೈ ಕತ್ತರಿಸಿ (Assault Case) ಪರಾರಿಯಾಗಿದ್ದ ರೌಡಿಗಳನ್ನು ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.

ಕನಕಪುರ ಟೌನ್ ಸಿಪಿಐ ಮಿಥುನ್ ಶಿಲ್ಪಿ ಹಾಗೂ ಪಿಎಸ್ಐ ಮನೋಹರ್ ಅವರಿಂದ ಫೈರಿಂಗ್ ನಡೆದಿದೆ. ಹರ್ಷ ಅಲಿಯಾಸ್ ಕೈಮ, ಕರುಣೇಶ್ ಅಲಿಯಾಸ್ ಕಣ್ಣ ಗಾಯಗೊಂಡ ರೌಡಿಶೀಟರ್‌ಗಳು. ಕಗ್ಗಲೀಪುರದ ವ್ಯಾಲಿ ಸ್ಕೂಲ್ ರೋಡ್ ಬಳಿ ಪೊಲೀಸರಿಂದ ಫೈರಿಂಗ್ ನಡೆದಿದೆ.

ಕಳೆದ ವಾರ ಕನಕಪುರದ ಮಾಳಗಾಳು ಬಡಾವಣೆಯಲ್ಲಿ ಗಲಾಟೆ ನಡೆದಿತ್ತು. ಗಲಾಟೆ ವೇಳೆ ಒಬ್ಬ ವ್ಯಕ್ತಿ ಮೇಲೆ ಹಲ್ಲೆ ಮಾಡಿ ಕೈ ಕಟ್ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದರು. ಆರೋಪಿಗಳನ್ನು ಬಂಧಿಸುವಂತೆ ದಲಿತ‌‌ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇಂದು ಮುಂಜಾನೆ ಆರೋಪಿಗಳನ್ನು ಬಂಧಿಸಲು ಪೊಲೀಸರು ಹೋಗಿದ್ದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಈ ರೌಡಿಗಳು ಮುಂದಾಗಿದ್ದಾರೆ.

ಈ ಸಂದರ್ಭದಲ್ಲಿ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹೊಡೆದು ಅವರನ್ನು ಬಂಧಿಸಿದ್ದಾರೆ. ಹಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ ರಾಜಶೇಖರ್, ಶಿವಕುಮಾರ್ ಎಂಬವರಿಗೂ ಗಾಯಗಳಾಗಿವೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸ್ಯಾಂಡಲ್ ವುಡ್

Actor Darshan: ದರ್ಶನ್​ ಭೇಟಿ ಮಾಡಿ, ಯೋಗ, ಧ್ಯಾನ ಹೇಳಿಕೊಟ್ಟೆ ಎಂದ ಸಿದ್ಧಾರೂಢನಿಗೆ ಸಂಕಷ್ಟ! ನೋಟಿಸ್‌ ಕೊಟ್ಟ ಪೊಲೀಸರು!

Actor Darshan: ಪರಪ್ಪನ ಅಗ್ರಹಾರ ಜೈಲಿನ ಸಿಬ್ಬಂದಿ ಇದನ್ನು ಅಲ್ಲಗಳೆದಿದ್ದು, ದರ್ಶನ್ ಅನ್ನು ಸಿದ್ಧಾರೂಡ ಭೇಟಿ ಆಗಿಲ್ಲ ಎಂದಿದ್ದಾರೆ. ಇದೀಗ ಪೊಲೀಸ್ ಇಲಾಖೆಯು ಸಿದ್ಧಾರೂಢಗೆ ನೋಟಿಸ್‌ ಜಾರಿ ಮಾಡಿದೆ.ಜೈಲು ಅಧಿಕಾರಿಗಳು, ದರ್ಶನ್ ಭೇಟಿಗೆ ಯಾವುದೇ ಬೇರೆ ಕೈದಿಗಳಿಗೆ ವಿಶೇಷವಾಗಿ ಜೈಲು ಸೆಲ್​ನೊಳಗೆ ಹೋಗಲು ಅವಕಾಶ ಕೊಟ್ಟಿಲ್ಲವೆಂದು ಉತ್ತರಿಸಿದ್ದಾರೆ. ಹಾಗಾಗಿ ಮಾಧ್ಯಮಗಳ ಮುಂದೆ ಸುಳ್ಳು ಹೇಳಿರುವ ಸಿದ್ಧಾರೂಢನಿಗೆ ಪೊಲೀಸ್ ಇಲಾಖೆ ನೊಟೀಸ್ ನೀಡಿದ್ದು, ವಿಚಾರಣೆಗೆ ಕರೆದಿದೆ.

VISTARANEWS.COM


on

Actor Darshan case Police Serve Notice To Siddarudha Who Claimed To Met Darshan
Koo

ಬೆಂಗಳೂರು: ಕೊಲೆಯಾದ ರೇಣುಕಾಸ್ವಾಮಿ (Renuka Swamy Murder case) ಕೂಡಾ ನಟ ದರ್ಶನ್ (Actor Darshan) ಅಭಿಮಾನಿಯಾಗಿದ್ದವನು. ಆದರೆ ಅದೇ ಅಭಿಮಾನಿಯ ಕೊಲೆ ಆರೋಪದಲ್ಲಿ ದರ್ಶನ್ ಜೈಲು ಸೇರುವಂತಾಯಿತು. ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್‌ನನ್ನು ಸಿದ್ಧಾರೂಢ ಎಂಬ ಮಾಜಿ ಕೈದಿ ಭೇಟಿಯಾಗಿದ್ದಾಗಿ ಹೇಳಿಕೊಂಡಿದ್ದ, ಈತನಿಗೆ ಈಗ ಪೊಲೀಸ್ ಇಲಾಖೆ ನೋಟಿಸ್‌ ನೀಡಿದೆ.

ಸನ್ನಡತೆ ಆಧಾರದಲ್ಲಿ ಇನ್ನೇನು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಬೇಕಿದ್ದ ಸಿದ್ಧಾರೂಢ ಅವರು ದರ್ಶನ್‌ನ ಭೇಟಿ ಮಾಡಲೇಬೇಕು ಎನ್ನುವ ಆಸೆ ಹೊಂದಿದ್ದರು. ಅದಕ್ಕಾಗಿ ಅವರು ಜೈಲಾಧಿಕಾರಿಗಳ ಬಳಿ ಮನವಿ ಮಾಡಿದ್ದರು ಎನ್ನಲಾಗಿತ್ತು. ಇದಕ್ಕೆ ಜೈಲು ಅಧಿಕಾರಿ ಕೂಡ ಒಪ್ಪಿಕೊಂಡಿದ್ದರು ಎನ್ನಲಾಗಿತ್ತು. ಆದರೆ ಸಿದ್ಧರೂಢರನ್ನು ಭೇಟಿಯಾಗೋದಿಕ್ಕೆ ದರ್ಶನ್‌ ಒಪ್ಪುತ್ತಾರಾ? ಅವರಿಗೆ ಮನಸಿದ್ಯಾ ಅಂತ ಅಧಿಕಾರಿಗಳು ದರ್ಶನ್‌ನ ಕೇಳಿದ್ದರು. ಆದರೆ ದರ್ಶನ್‌ ಹಿಂದೂ ಮುಂದೂ ನೋಡಲೇ ಇಲ್ಲ. ಒಂಚೂರು ಯೋಚನೆ ಮಾಡದೇ ತನ್ನನ್ನು ಭೇಟಿಯಾಗಲು ಬಯಸುತ್ತಿರುವ ಅಭಿಮಾನಿಯ ಭೇಟಿಗೆ ಒಪ್ಪಿಕೊಂಡಿದ್ದರು. ಸಿದ್ಧಾರೂಢ ಅವರನ್ನು ಒಳ ಕಳುಹಿಸುವಂತೆ ಮನವಿ ಮಾಡಿದ್ದರು. ಎನ್ನಲಾಗಿತ್ತು. ಸಿದ್ಧಾರೂಢ, ತಾವು ದರ್ಶನ್ ಅನ್ನು ಜೈಲಿನಲ್ಲಿ ಭೇಟಿಯಾಗಿದ್ದು, ದರ್ಶನ್​ಗೆ ಯೋಗ ಹೇಳಿಕೊಟ್ಟೆ, ಧ್ಯಾನ ಹೇಳಿಕೊಟ್ಟೆ, ದರ್ಶನ್ ಜೊತೆಗೆ ಹಲವು ಸಮಯ ಮಾತನಾಡಿದೆ ಎಂದೆಲ್ಲ ಹೇಳಿಕೊಂಡಿದ್ದರು. ಆದರೆ ಪರಪ್ಪನ ಅಗ್ರಹಾರ ಜೈಲಿನ ಸಿಬ್ಬಂದಿ ಇದನ್ನು ಅಲ್ಲಗಳೆದಿದ್ದು, ದರ್ಶನ್ ಅನ್ನು ಸಿದ್ಧಾರೂಡ ಭೇಟಿ ಆಗಿಲ್ಲ ಎಂದಿದ್ದಾರೆ. ಇದೀಗ ಪೊಲೀಸ್ ಇಲಾಖೆಯು ಸಿದ್ಧಾರೂಢಗೆ ನೋಟಿಸ್‌ ಜಾರಿ ಮಾಡಿದೆ.

ದರ್ಶನ್ ಸೆಲ್ ಒಳಕ್ಕೆ ಯಾರನ್ನೂ ಸಹ ಬಿಟ್ಟಿಲ್ಲ ಎಂದು ಜೈಲು ಅಧಿಕಾರಿಗಳು

ಜೈಲಲ್ಲಿ ನಟ ದರ್ಶನ್ ಭೇಟಿಯಾಗದೆ‌ ಸಿದ್ದರೂಢ ಸುಳ್ಳು ಕಥೆ ಕಟ್ಟಿದ್ದಾರೆ ಎನ್ನಲಾಗಿದೆ. ದರ್ಶನ್ ಭೇಟಿ ಮಾಡಿಸಲೇ ಇಲ್ಲವೆಂದು ಕಾರಾಗೃಹ ಇಲಾಖೆಗೆ ಜೈಲಾಧಿಕಾರಿಗಳು ರಿಪೋರ್ಟ್ ಕೊಟ್ಟಿದ್ದಾರೆ. ಸನ್ನಡತೆ ಮೇಲೆ ರಿಲೀಸ್ ಆಗಿರುವ ಸಿದ್ದರೂಢ ಮಾಧ್ಯಮ ಹೇಳಿಕೆ ಬಗ್ಗೆ ಜೈಲಾಧಿಕಾರಿಗಳು ಚರ್ಚೆ ಮಾಡಿದ್ದಾರೆ.  ಜೈಲು ಅಧಿಕಾರಿಗಳು, ದರ್ಶನ್ ಭೇಟಿಗೆ ಯಾವುದೇ ಬೇರೆ ಕೈದಿಗಳಿಗೆ ವಿಶೇಷವಾಗಿ ಜೈಲು ಸೆಲ್​ನೊಳಗೆ ಹೋಗಲು ಅವಕಾಶ ಕೊಟ್ಟಿಲ್ಲವೆಂದು ಉತ್ತರಿಸಿದ್ದಾರೆ. ಹಾಗಾಗಿ ಮಾಧ್ಯಮಗಳ ಮುಂದೆ ಸುಳ್ಳು ಹೇಳಿರುವ ಸಿದ್ಧಾರೂಢನಿಗೆ ಪೊಲೀಸ್ ಇಲಾಖೆ ನೊಟೀಸ್ ನೀಡಿದ್ದು, ವಿಚಾರಣೆಗೆ ಕರೆದಿದೆ.

ಇದನ್ನೂ ಓದಿ: Actor Darshan: ದರ್ಶನ್ ದೈವ ಭಕ್ತ, ಜೈಲಿಗೆ ಸೇರಿದ್ದಾಗಿನಿಂದ ವಿಜಯಲಕ್ಷ್ಮಿ ಅತ್ತಿಗೆ ಹೋರಾಟ ಜಾಸ್ತಿ ಆಗಿದೆ ಎಂದ ಲತಾ ಜೈಪ್ರಕಾಶ್!

ಇದೇ ತಿಂಗಳ ಎಂಟನೇ ತಾರೀಖು ಬಳ್ಳಾರಿ ಜೈಲಿನಿಂದ ಪರಪ್ಪನ ಅಗ್ರಹಾರ ಜೈಲಿಗೆ ಸಿದ್ಧಾರೂಢ ಬಂದಿದ್ದ. ಆತನನ್ನು ಒಂಬತ್ತನೇ ತಾರೀಖು ಬಿಡುಗಡೆ ಮಾಡಿದ್ದೆವು. ಆತ ಇಲ್ಲಿ ದರ್ಶನ್ ಅನ್ನು ಭೇಟಿ ಆಗಿಲ್ಲ. ದರ್ಶನ್ ಸೆಲ್ ಒಳಕ್ಕೆ ಯಾರನ್ನೂ ಸಹ ಬಿಟ್ಟಿಲ್ಲ ಎಂದು ಜೈಲಧಿಕಾರಿಗಳು ಹೇಳಿದ್ದಾರೆ.

ಸಿದ್ಧಾರೂಢ ಮಾಧ್ಯಮದ ಮುಂದೆ ಹೇಳಿದ್ದೇನು?

ʻʻನಿನ್ನನ್ನ ಕಾನೂನು ಕ್ಷಮಿಸಿ ಒಂದು ಅವಕಾಶವನ್ನು ಕೊಟ್ಟಿದೆ. ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೋ, ಹೆಂಡತಿ ಮಕ್ಕಳ ಜತೆ ಪ್ರೀತಿಯಿಂದ ಬದುಕು ಅಂತ ಸಲಹೆಯನ್ನು ಕೊಟ್ಟಿದ್ದರಂತೆ. ದರ್ಶನ್ ಆಡಿರುವ ಈ ಮಾತುಗಳನ್ನು ಕೇಳಿದರೆ ನಿಜಕ್ಕೂ ಅವರಿಗೆ ಪಾಪಪ್ರಜ್ಞೆ ಕಾಡುತ್ತಿದೆ. ತಾನು ಮಾಡಿರುವ ತಪ್ಪಿನ ಅರಿವು ಆದಂತಿದೆʼʼ ಎಂದು ಸಿದ್ಧಾರೂಢ ತಿಳಿಸಿದ್ದರು.

ಜುಲೈ 8ರಂದು ಜೈಲಾಧಿಕಾರಿಗಳ ಅನುಮತಿ ಪಡೆದು ನಟ ದರ್ಶನ್‌ರನ್ನು ಭೇಟಿಯಾದ ಸಿದ್ಧರೂಢ, ಪಿರಮಿಡ್‌ ಧ್ಯಾನವನ್ನು ಹೇಳಿಕೊಟ್ಟಿದ್ದರಂತೆ. ನಾನು ನಿಮ್ಮ ಅಭಿಮಾನಿ ಎಂದಾಗ ಸಿದ್ಧರೂಢರನ್ನು ದರ್ಶನ್‌ ತಬ್ಬಿಕೊಂಡರಂತೆ. ಹತ್ತು ನಿಮಿಷ ಧ್ಯಾನ ಮಾಡಿದ ದರ್ಶನ್‌ ಇದು ಚೆನ್ನಾಗಿದೆ, ನಾನು ಇನ್ಮೆಲೆ ಇದನ್ನೂ ಮಾಡ್ತಿಲಿ ಎಂದು ಜೈಲಿನಿಂದ ಬಿಡುಗಡೆಗೊಂಡ ಕೈದಿ ಸಿದ್ಧಾರೂಢ ಹೇಳಿದ್ದಾರೆ. ದರ್ಶನ್‌ ಅವರನ್ನು ನೋಡಿದಾಗ ಬೇಸರ ಆಯಿತು. ಆದರೆ ಅವರು ನೀನು ನಾನ್‌ ಸೆಲೆಬ್ರಿಟಿ, ನಾನು ನಿನ್ನ ಸೆಲೆಬ್ರಿಟಿ ಎಂದು ಆಟೋಗ್ರಾಫ್‌ ಕೊಟ್ಟರು ಅಂತ ದರ್ಶನ್‌ ಕುರಿತು ಸಿದ್ಧರೂಢ ವಿವರಿಸಿದ್ದರು.

Continue Reading
Advertisement
Actor Darshan Ganesh Rao Visits Renukaswamy Family and spport In Chitradurga
ಸ್ಯಾಂಡಲ್ ವುಡ್5 mins ago

Actor Darshan: ರೇಣುಕಾಸ್ವಾಮಿ ಕುಟುಂಬಕ್ಕೆ ಹಣ ಸಹಾಯ ಮಾಡಿ, ದರ್ಶನ್‌ ಪರವಾಗಿ ವಾದ ಮಾಡಿದ ನಟ ಗಣೇಶ್ ರಾವ್!

karnataka Rain
ಮಳೆ12 mins ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Paris Olympics 2024 Day 2
ಕ್ರೀಡೆ25 mins ago

Paris Olympics 2024 Day 2: ನೀಗಲಿ 36 ವರ್ಷಗಳ ಪದಕ ಬರ; ಚಿನ್ನಕ್ಕೆ ಗುರಿ ಇರಿಸಲಿ ಭಾರತೀಯ ಮಹಿಳಾ ಆರ್ಚರಿ ತಂಡ

Disha Patani Slips Into a Bikini For a Dip in the Ocean
ಬಾಲಿವುಡ್30 mins ago

Disha Patani: ಕಡಲಲ್ಲಿ ಮಿಂದೆದ್ದ ದಿಶಾ ಪಟಾನಿ; ಬಿಕಿನಿಯಲ್ಲಿ ಬಿಸಿ ಹೆಚ್ಚಿಸಿದ ಹಾಟ್‌ ಬೆಡಗಿ!

Viral News
ವೈರಲ್ ನ್ಯೂಸ್34 mins ago

Viral News: ರೈಲ್ವೇ ಪೊಲೀಸ್‌ ಸಿಬ್ಬಂದಿಯ ಹೊಡೆತಕ್ಕೆ ಯುವಕನ ಕರುಳೇ ಹೊರಬಂತು! ಶಾಕಿಂಗ್‌ Video ಇಲ್ಲಿದೆ

sunil bose savitha viral news
ವೈರಲ್ ನ್ಯೂಸ್58 mins ago

Viral News: ಮದುವೆಯೇ ಆಗಿಲ್ಲ ಎಂದ ಚಾಮರಾಜನಗರ ಸಂಸದ ನಿರ್ದೇಶಕಿ ಹಣೆಗೆ ಕುಂಕುಮ ಇಟ್ಟರು!

Geyser Blast
ತಂತ್ರಜ್ಞಾನ1 hour ago

Geyser Blast: ಬಾಂಬ್‌‌ನಂತೆ ಬ್ಲಾಸ್ಟ್ ಆಗಬಹುದು ಗೀಸರ್! ಮಳೆಗಾಲದಲ್ಲಿ ಈ ಮುನ್ನೆಚ್ಚರಿಕೆ ಇರಲಿ

Mysuru News
ಕ್ರೈಂ1 hour ago

Mysuru News : ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಆಟೋ ಡ್ರೈವರ್ ಶವವಾಗಿ ಪತ್ತೆ

Actor Darshan case Police Serve Notice To Siddarudha Who Claimed To Met Darshan
ಸ್ಯಾಂಡಲ್ ವುಡ್1 hour ago

Actor Darshan: ದರ್ಶನ್​ ಭೇಟಿ ಮಾಡಿ, ಯೋಗ, ಧ್ಯಾನ ಹೇಳಿಕೊಟ್ಟೆ ಎಂದ ಸಿದ್ಧಾರೂಢನಿಗೆ ಸಂಕಷ್ಟ! ನೋಟಿಸ್‌ ಕೊಟ್ಟ ಪೊಲೀಸರು!

hd kumaraswamy nanjanagudu
ಪ್ರಮುಖ ಸುದ್ದಿ1 hour ago

HD Kumaraswamy: ಎಚ್‌ಡಿ ಕುಮಾರಸ್ವಾಮಿ ಬಂದರೂ ತೆಗೆಯದ ಪ್ರವಾಸಿ ಮಂದಿರ ಬೀಗ, ಕೇಂದ್ರ ಸಚಿವರಿಗೆ ಅವಮಾನ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ12 mins ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ18 hours ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ23 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ24 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ2 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ2 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ2 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ2 days ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ3 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್3 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

ಟ್ರೆಂಡಿಂಗ್‌