Ranbir Kapoor: ಮೋದಿಯದ್ದು 'ಆಯಸ್ಕಾಂತದಂಥ ವ್ಯಕ್ತಿತ್ವ' ಎಂದ ರಣಬೀರ್‌ ಕಪೂರ್;‌ ಕನ್ನಡಿಗನಿಗೆ ನಟ ಹೇಳಿದ ಕತೆ ಏನು? - Vistara News

ದೇಶ

Ranbir Kapoor: ಮೋದಿಯದ್ದು ‘ಆಯಸ್ಕಾಂತದಂಥ ವ್ಯಕ್ತಿತ್ವ’ ಎಂದ ರಣಬೀರ್‌ ಕಪೂರ್;‌ ಕನ್ನಡಿಗನಿಗೆ ನಟ ಹೇಳಿದ ಕತೆ ಏನು?

Ranbir Kapoor: ರಾಜಕೀಯದ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ನಿಖಿಲ್‌ ಕಾಮತ್‌ ಕೇಳಿದ ಪ್ರಶ್ನೆಗೆ ರಣಬೀರ್‌ ಕಪೂರ್‌ ಉತ್ತರಿಸಿದರು. ರಣಬೀರ್‌ ಕಪೂರ್‌ ಸೇರಿ ಹಲವು ನಟರು, ನಿರ್ದೇಶಕರು ಮೋದಿ ಅವರನ್ನು ಭೇಟಿಯಾಗಲು ಹೋದಾಗ ಮೋದಿ ಅವರು ಹೇಗೆ ಪ್ರತಿಕ್ರಿಯಿಸಿದರು ಎಂಬುದು ಸೇರಿ ಹಲವು ವಿಷಯಗಳ ಕುರಿತು ರಣಬೀರ್‌ ಕಪೂರ್‌ ಪ್ರಸ್ತಾಪಿಸಿದರು.

VISTARANEWS.COM


on

Ranbir Kapoor
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಭಾರತ ಸೇರಿ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯದ ಹೊರತಾಗಿಯೂ ಮೋದಿ ಅವರ ಶ್ರಮ, ವ್ಯಕ್ತಿತ್ವವನ್ನು ಮೆಚ್ಚುವವರಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ನರೇಂದ್ರ ಮೋದಿ ಅವರ ಕುರಿತು ಬಾಲಿವುಡ್‌ ನಟ ರಣಬೀರ್‌ ಕಪೂರ್‌ (Ranbir Kapoor) ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಜೆರೋದಾ ಸಂಸ್ಥಾಪಕ, ಕನ್ನಡಿಗ ನಿಖಿಲ್‌ ಕಾಮತ್‌ (Nikhil Kamath) ಅವರೊಂದಿಗಿನ ಪಾಡ್‌ಕಾಸ್ಟ್‌ ವೇಳೆ ರಣಬೀರ್‌ ಕಪೂರ್‌ ಅವರು ಮೋದಿ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ರಾಜಕೀಯದ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ನಿಖಿಲ್‌ ಕಾಮತ್‌ ಕೇಳಿದ ಪ್ರಶ್ನೆಗೆ ರಣಬೀರ್‌ ಕಪೂರ್‌ ಉತ್ತರಿಸಿದರು. “ನಾನು ರಾಜಕೀಯದ ಬಗ್ಗೆ ಜಾಸ್ತಿ ಯೋಚಿಸುವುದಿಲ್ಲ. ಆದರೆ, 4-5 ವರ್ಷಗಳ ಹಿಂದೆ ನಾನು ಸೇರಿ ಹಲವು ನಟರು ಹಾಗೂ ನಿರ್ದೇಶಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಹೋಗಿದ್ದೆವು. ನೀವು ಮೋದಿ ಅವರು ಹೇಗೆ ಮಾತನಾಡುತ್ತಾರೆ ಎಂಬುದನ್ನು ಟಿ.ವಿಯಲ್ಲಿ ನೋಡಿರುತ್ತೀರಿ. ನಮಗೂ ಕೂಡ ಅವರ ಆಯಸ್ಕಾಂತದಂತಹ ವ್ಯಕ್ತಿತ್ವದ ಅರಿವಾಯಿತು” ಎಂಬುದಾಗಿ ರಣಬೀರ್‌ ಕಪೂರ್‌ ಹೇಳಿದರು.

“ನಾವು ಅವರನ್ನು ಭೇಟಿಯಾಗಲು ಹೋಗಿದ್ದೆವು. ನಾವು ಕುಳಿತಿದ್ದಾಗ ಅವರು ಬಂದು ನಮ್ಮ ಜತೆ ಕುಳಿತರು. ಅವರು ಪ್ರತಿಯೊಬ್ಬರ ಜತೆಗೂ ಮಾತನಾಡಿದರು. ಪ್ರತಿಯೊಬ್ಬರ ವೈಯಕ್ತಿಕ ವಿಚಾರಗಳ ಬಗ್ಗೆ ಕೇಳಿದರು. ಆಗ ನನ್ನ ತಂದೆಯು ಚಿಕಿತ್ಸೆ ಪಡೆಯುತ್ತಿದ್ದರು. ಅದರ ಬಗ್ಗೆಯೂ ಮೋದಿ ಅವರು ಕೇಳಿದರು. ವಿಕ್ಕಿ ಕೌಶಲ್‌, ಕಿರಣ್‌ ಜೋಹರ್‌ ಸೇರಿ ಹಲವರ ವೈಯಕ್ತಿಕ ವಿಚಾರಗಳ ಕುರಿತು ಕೂಡ ಮೋದಿ ಮಾತನಾಡಿದರು. ಅದ್ಭುತ ವ್ಯಕ್ತಿಗಳು, ಸಾಧಕರು ಮಾತ್ರ ಇಷ್ಟೊಂದು ಶ್ರಮ ವಹಿಸಲು ಸಾಧ್ಯ. ಶಾರುಖ್‌ ಖಾನ್‌ ಸೇರಿ ಹಲವು ಸಾಧಕರು ಇಷ್ಟು ಶ್ರಮ ಹಾಕಲು ಸಾಧ್ಯ” ಎಂಬುದಾಗಿ ರಣಬೀರ್‌ ಕಪೂರ್‌ ಅವರು ಮೋದಿ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ನಿಖಿಲ್‌ ಕಾಮತ್‌ ಕೂಡ ಬಣ್ಣನೆ

ನರೇಂದ್ರ ಮೋದಿ ಅವರ ಜತೆಗೆ ಸಮಯ ಕಳೆದ ಅನುಭವದ ಕುರಿತು ನೀವು ಹೇಳಿ ಎಂಬುದಾಗಿ ರಣಬೀರ್‌ ಕಪೂರ್‌ ಅವರು ಕೇಳಿದಾಗ ನಿಖಿಲ್‌ ಕಾಮತ್‌ ಕೂಡ ಮೋದಿ ಬಗ್ಗೆ ಮೆಚ್ಚಗೆಯ ಮಾತುಗಳನ್ನಾಡಿದ್ದರು. “ನರೇಂದ್ರ ಮೋದಿ ಅವರ ಜತೆ ಎರಡು ಕಾರ್ಯಕ್ರಮಗಳಲ್ಲಿ ಭಾಗಿಯಾದೆ. ನಾವು ಅಮೆರಿಕದಲ್ಲಿದ್ದಾಗ ಮೋದಿ ಅವರು ನಿರಂತರವಾಗಿ ಕಾರ್ಯಕ್ರಮಗಳಲ್ಲಿ ಭೇಟಿಯಾಗುತ್ತಿದ್ದರು. ಅವರು ಬೆಳಗ್ಗೆಯಿಂದ ರಾತ್ರಿವರೆಗೆ ಒಂದಲ್ಲ ಒಂದು ಕಾರ್ಯಕ್ರಮ, ಚಟುವಟಿಕೆಯಲ್ಲಿ ತೊಡಗಿರುತ್ತಿದ್ದರು. ಅವರ ವಯಸ್ಸಿನಲ್ಲಿ, ಅವರಷ್ಟು ಶ್ರಮ ವಹಿಸುವುದು ನನಗೆ ಅಚ್ಚರಿಯಾಯಿತು. ಅವರು ಕೂಡ ನನಗೆ ಸ್ಫೂರ್ತಿ” ಎಂದು ನಿಖಿಲ್‌ ಕಾಮತ್‌ ತಿಳಿಸಿದ್ದಾರೆ.

ಇದನ್ನೂ ಓದಿ: Manu Bhaker : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಮನು ಭಾಕರ್ ಗೆ ಪ್ರಧಾನಿ ಮೋದಿ ಅಭಿನಂದನೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Viral News: ಕಾಲಿಗೆ ಕಬ್ಬಿಣದ ಸರಪಳಿ.. ಕೈಯಲ್ಲಿ ಅಮೆರಿಕ ಪಾಸ್‌ಪೋರ್ಟ್‌..ದಟ್ಟ ಕಾಡಿನಲ್ಲಿ ಮಹಿಳೆ ಪತ್ತೆ-ವಿಡಿಯೋ ವೈರಲ್‌

Viral News:ಮುಂಬೈನಿಂದ ಸುಮಾರು 450 ಕಿಲೋಮೀಟರ್ ದೂರದಲ್ಲಿರುವ ಸೋನುರ್ಲಿ ಗ್ರಾಮದಲ್ಲಿ ಶನಿವಾರ ಸಂಜೆ ಕುರಿಗಾಹಿಯೊಬ್ಬರು ಆಕೆಯ ಅಳಲು ಕೇಳಿದ್ದು, ಸರಪಳಿಯಲ್ಲಿ ಸಿಲುಕಿರುವ ಮತ್ತು ಸಂಕಷ್ಟದಲ್ಲಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಆಕೆಯನ್ನು ರಕ್ಷಿಸಿ ನಂತರ ಸಿಂಧುದುರ್ಗದ ಓರೋಸ್‌ನ ಆಸ್ಪತ್ರೆಗೆ ಕರೆದೊಯ್ಯಲಾಯಿತು

VISTARANEWS.COM


on

Viral News
Koo

ಮುಂಬೈ: ಮರಕ್ಕೆ ಕಬ್ಬಿಣದ ಸರಪಳಿಯಲ್ಲಿ ಕಟ್ಟಿಹಾಕಿದ ಸ್ಥಿತಿಯಲ್ಲಿ ಮಹಿಳೆಯೊಬ್ಬಳು ಮಹಾರಾಷ್ಟ್ರದ ಸಿಂಧುದುರ್ಗ ದಟ್ಟ ಅರಣ್ಯದಲ್ಲಿ ಪತ್ತೆಯಾಗಿರುವ ಶಾಕಿಂಗ್‌ ಘಟನೆ ವರದಿಯಾಗಿದೆ. ಸುಮಾರು 50 ವರ್ಷದ ಮಹಿಳೆಯನ್ನು ಕಬ್ಬಿಣದ ಸರಪಳಿಯಿಂದ ಮರಕ್ಕೆ ಕಟ್ಟಿಹಾಕಲಾಗಿದ್ದು, ಆಕೆಯ ಬಳಿ ಅಮೆರಿಕದ ಪಾಸ್‌ಪೋರ್ಟ್‌ನ ಜೆರಾಕ್ಸ್‌ ಮತ್ತು ತಮಿಳುನಾಡು ವಿಳಾಸವಿರುವ ಆಧಾರ್‌ ಕಾರ್ಡ್‌ ಪತ್ತೆಯಾಗಿದೆ(Viral News).

ಮುಂಬೈನಿಂದ ಸುಮಾರು 450 ಕಿಲೋಮೀಟರ್ ದೂರದಲ್ಲಿರುವ ಸೋನುರ್ಲಿ ಗ್ರಾಮದಲ್ಲಿ ಶನಿವಾರ ಸಂಜೆ ಕುರಿಗಾಹಿಯೊಬ್ಬರು ಆಕೆಯ ಅಳಲು ಕೇಳಿದ್ದು, ಸರಪಳಿಯಲ್ಲಿ ಸಿಲುಕಿರುವ ಮತ್ತು ಸಂಕಷ್ಟದಲ್ಲಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಆಕೆಯನ್ನು ರಕ್ಷಿಸಿ ನಂತರ ಸಿಂಧುದುರ್ಗದ ಓರೋಸ್‌ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಯನ್ನು ಲಲಿತಾ ಕಯಿ ಎಂದು ಗುರುತಿಸಲಾಗಿದ್ದು, ಆಕೆಯ ಮಾನಸಿಕ ಮತ್ತು ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ, ಅವರಿಗೆ ಉನ್ನತ ಚಿಕಿತ್ಸೆಗಾಗಿ ಗೋವಾ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು.

ಸದ್ಯ ಆಕೆ ಅಪಾಯದಿಂದ ಪಾರಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಆಕೆ ಮನೋ ಖಾಯಿಲೆಯಿಂದ ಬಳಲುತ್ತಿದ್ದಾಳೆ. ಅದಕ್ಕೆ ಬೇಕಾದ ಸೂಕ್ತ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ನಾವು ಆಕೆಯ ತಮಿಳುನಾಡು ವಿಳಾಸ ಆಧಾರ್ ಕಾರ್ಡ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಪಾಸ್‌ಪೋರ್ಟ್‌ನ ಜೆರಾಕ್ಸ್‌ ಆಕೆಯ ಬಳಿ ಇತ್ತು. ಆಕೆಯ ವೀಸಾ ಅವಧಿ ಮುಗಿದಿದೆ.

ಇನ್ನು ಆಕೆ ಯಾವರ ದೇಶಕ್ಕೆ ಸೇರಿದವಳು ಎಂಬ ಬಗ್ಗೆ ನಾವು ಈ ಎಲ್ಲ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ. ನಮ್ಮ ಪೊಲೀಸರು ವಿದೇಶಿಯರ ಪ್ರಾದೇಶಿಕ ನೋಂದಣಿ ಕಛೇರಿಯೊಂದಿಗೆ ಸಂಪರ್ಕದಲ್ಲಿದೆ” ಎಂದು ಅವರು ಹೇಳಿದರು.
ಪೊಲೀಸರು ಪಡೆದ ಪ್ರಾಥಮಿಕ ಮಾಹಿತಿಯಂತೆ ಮಹಿಳೆ ಕಳೆದ 10 ವರ್ಷಗಳಿಂದ ಭಾರತದಲ್ಲಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸದ್ಯ ಮಹಿಳೆ ಯಾವುದೇ ರೀತಿಯ ಹೇಳಿಕೆ ನೀಡುವ ಪರಿಸ್ಥಿತಿಯಲ್ಲಿಲ್ಲ. ಆಕೆ ತೀರ ಕ್ಷೀಣಿಸಿದ್ದಾಳೆ. ಆಕೆಯನ್ನು ಎಷ್ಟು ದಿನಗಳಿಂದ ಅಲ್ಲಿ ಕಟ್ಟಿ ಹಾಕಲಾಗಿತ್ತು? ಯಾರು ಕಟ್ಟಿ ಹಾಕಿದ್ದಾರೆ ಎಂಬ ಬಗ್ಗೆ ತನಿಖೆ ಮುಂದುವರೆದಿದೆ. ಮೇಲ್ನೋಟಕ್ಕೆ ಆಕೆಯ ಪತಿಯೇ ಆಕೆಯನ್ನು ಕಟ್ಟಿ ಹಾಕಿ ಪರಾರಿಯಾಗಿರುವ ಸಾಧ್ಯತೆ ಇದೆ ಆಧಾರ್‌ ಕಾರ್ಡ್‌ನಲ್ಲಿರುವ ಆಕೆಯ ವಿಳಾಸ ಆಧರಿಸಿ ಸಂಬಂಧಿಕರನ್ನು ವಿಚಾರಣೆಗೊಳಪಡಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ: Areca Nut Illegal Import: ಭಾರತದೊಳಗೆ 3 ತಿಂಗಳಲ್ಲಿ 3009 ಟನ್‌ ವಿದೇಶಿ ಅಡಿಕೆ ಅಕ್ರಮ ಆಮದು; ಬೆಳೆಗಾರರಿಗೆ ಕಾದಿದೆ ಆಪತ್ತು!

Continue Reading

ರಾಜಕೀಯ

Rajya Sabha: ಸತ್ನಾಮ್‌ ಸಿಂಗ್‌ ಸಂಧು ಬಿಜೆಪಿ ಸೇರ್ಪಡೆ; ರಾಜ್ಯಸಭೆಯಲ್ಲಿ ಕೇಸರಿ ಪಕ್ಷದ ಬಲ 87ಕ್ಕೆ ಏರಿಕೆ

Rajya Sabha: ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯ ಸತ್ನಾಮ್‌ ಸಿಂಗ್‌ ಸಂಧು ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ಮೂಲಕ ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರ ಬಲ 87ಕ್ಕೆ ಏರಿಕೆಯಾಗಿದೆ. 2024ರ ಜನವರಿ 31ರಂದು ಪ್ರಮಾಣವಚನ ಸ್ವೀಕರಿಸಿದ್ದ ಸಂಧು 6 ತಿಂಗಳ ಗಡುವು ಮುಗಿಯುವ ಮುನ್ನವೇ ಬಿಜೆಪಿ ಸೇರ್ಪಡೆಯಾಗುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಅವರನ್ನು ಬಿಜೆಪಿ ಸದಸ್ಯ ಎಂದು ಪರಿಗಣಿಸಲಾಗುತ್ತದೆ ಎಂದು ರಾಜ್ಯಸಭೆ ಪ್ರಕಟಣೆಯಲ್ಲಿ ತಿಳಿಸಿದೆ.

VISTARANEWS.COM


on

Rajya Sabha
Koo

ನವದೆಹಲಿ: ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯ ಸತ್ನಾಮ್‌ ಸಿಂಗ್‌ ಸಂಧು (Satnam Singh Sandhu) ಅವರು ಬಿಜೆಪಿ (BJP) ಸೇರ್ಪಡೆಯಾಗಿದ್ದಾರೆ. ಈ ಮೂಲಕ ರಾಜ್ಯಸಭೆ (Rajya Sabha)ಯಲ್ಲಿ ಬಿಜೆಪಿ ಸದಸ್ಯರ ಬಲ 87ಕ್ಕೆ ಏರಿಕೆಯಾಗಿದೆ. ನಾಮನಿರ್ದೇಶಿತ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದವರು ಆರು ತಿಂಗಳೊಳಗಾಗಿ ಯಾವುದಾದರೂ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆಯೇ ಎನ್ನುವುದನ್ನು ಸಂಸತ್ತಿಗೆ ತಿಳಿಸಬೇಕು. ಅದರಂತೆ ಜುಲೈ 31ರೊಳಗೆ ಸತ್ನಾಮ್‌ ಸಿಂಗ್‌ ಸಂಧು ತಮ್ಮ ನಿರ್ಧಾರ ತಿಳಿಸಬೇಕಿತ್ತು. ಹೀಗಾಗಿ ಅವರು ಬಿಜೆಪಿಗೆ ಸೇಪರ್ಡೆಯಾಗುತ್ತಿರುವುದಾಗಿ ಹೇಳಿದ್ದಾರೆ.

2024ರ ಜನವರಿ 31ರಂದು ಪ್ರಮಾಣವಚನ ಸ್ವೀಕರಿಸಿದ್ದ ಸಂಧು 6 ತಿಂಗಳ ಗಡುವು ಮುಗಿಯುವ ಮುನ್ನವೇ ಬಿಜೆಪಿ ಸೇರ್ಪಡೆಯಾಗುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಅವರನ್ನು ಬಿಜೆಪಿ ಸದಸ್ಯ ಎಂದು ಪರಿಗಣಿಸಲಾಗುತ್ತದೆ ಎಂದು ರಾಜ್ಯಸಭೆ ಪ್ರಕಟಣೆಯಲ್ಲಿ ತಿಳಿಸಿದೆ. ಇತ್ತೀಚೆಗೆ ನಾಮನಿರ್ದೇಶನಗೊಂಡಿದ್ದ ನಾಲ್ವರು ಸದಸ್ಯರ ಅವಧಿ ಮುಗಿದ ಹಿನ್ನೆಲೆಯಲ್ಲಿ ಮೇಲ್ಮನೆಯಲ್ಲಿ ಬಿಜೆಪಿ ಬಲವು 86ಕ್ಕೆ ಇಳಿಕೆಯಾಗಿತ್ತು.

8 ಮಂದಿ ನಾಮನಿರ್ದೇಶಿತ ಸಂಸದರ ಪೈಕಿ, ಸತ್ನಾಮ್ ಸಿಂಗ್‌ ಸಂಧು ಹಾಗೂ ಜಮ್ಮು ಮತ್ತು ಕಾಶ್ಮೀರದ ಗುಲಾಂ ಅಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದು, ನ್ಯಾಯಮೂರ್ತಿ ರಂಜನ್ ಗೊಗೋಯಿ, ಡಿ. ವಿರೇಂದ್ರ ಹೆಗ್ಗಡೆ, ಇಳಯರಾಜ, ಸುಧಾಮೂರ್ತಿ, ವಿಜಯೇಂದ್ರ ಪ್ರಸಾದ್ ಹಾಗೂ ಪಿ.ಟಿ. ಉಷಾ ಇನ್ನೂ ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ.

ಯಾರು ಈ ಸತ್ನಾಮ್ ಸಿಂಗ್‌ ಸಂಧು?

ಸತ್ನಾಮ್ ಸಿಂಗ್ ಸಂಧು ಭಾರತದ ಪ್ರಮುಖ ಶಿಕ್ಷಣ ತಜ್ಞರಲ್ಲಿ ಒಬ್ಬರು. ಅವರು ಕೃಷಿಕರೂ ಹೌದು. ಸತ್ನಾಮ್ ಸಿಂಗ್ ಸಂಧು 2001ರಲ್ಲಿ ಮೊಹಾಲಿಯ ಲ್ಯಾಂಡ್ರಾನ್‌ನಲ್ಲಿ ಚಂಡೀಗಢ ಗ್ರೂಪ್ ಆಫ್ ಕಾಲೇಜ್ಸ್‌ (ಸಿಜಿಸಿ) ಮತ್ತು 2012ರಲ್ಲಿ ಚಂಡೀಗಢ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದಾರೆ. ಅವರ ಆರಂಭಿಕ ಜೀವನವು ಕಷ್ಟಗಳಿಂದ ಕೂಡಿತ್ತು. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಡೆಯಲೂ ಹೆಣಗಾಡಿದ್ದರು. ಇದೀಗ ಅವರು ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನೂ ನೀಡುತ್ತಾರೆ. ಜನಸಾಮಾನ್ಯರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸುವ ಪ್ರಯತ್ನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ದೇಶದಲ್ಲಿ ಕೋಮು ಸೌಹಾರ್ದತೆಯನ್ನು ಹೆಚ್ಚಿಸಲು ಅವರು ಇಂಡಿಯನ್ ಮೈನಾರಿಟೀಸ್ ಫೌಂಡೇಶನ್ ಮತ್ತು ನ್ಯೂ ಇಂಡಿಯಾ ಡೆವಲಪ್‌ಮೆಂಟ್‌ ಫೌಂಡೇಶನ್ (Indian Minorities Foundation and New India Development) Foundation) ಎಂಬ ಎರಡು ಎನ್‌ಜಿಒ ನಡೆಸುತ್ತಿದ್ದಾರೆ.

ಇದನ್ನೂ ಓದಿ: Sudha Murthy: ʼಹೆಣ್ಣುಮಕ್ಕಳಿಗೆ ಇದೊಂದು ಕೊಟ್ಟುಬಿಡಿ, ಪ್ಲೀಸ್‌ʼ ಎಂದ ಸುಧಾ ಮೂರ್ತಿ; ರಾಜ್ಯಸಭೆಯಲ್ಲಿ ಭಾಷಣಕ್ಕೆ ಮೋದಿ ಮೆಚ್ಚುಗೆ

ಕಾಂಗ್ರೆಸ್‌ ಬಲಾಬಲ ಹೇಗಿದೆ?

ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟವು 87 ಸದಸ್ಯರನ್ನು ಹೊಂದಿದೆ. ಇವರಲ್ಲಿ ಕಾಂಗ್ರೆಸ್‌ 26, ತೃಣಮೂಲ ಕಾಂಗ್ರೆಸ್‌ 13, ಆಮ್‌ ಆದ್ಮಿ ಪಕ್ಷ, ಡಿಎಂಕೆ ತಲಾ 10 ಸದಸ್ಯರನ್ನು ಹೊಂದಿವೆ. ಉಳಿದ ಸ್ಥಾನಗಳು ತೆಲಂಗಾಣದ ಬಿಆರ್‌ಎಸ್‌, ನಾಮನಿರ್ದೇಶಿತ ಸದಸ್ಯರು ಹಾಗೂ ಸ್ವತಂತ್ರ ಸದಸ್ಯರಾಗಿದ್ದಾರೆ. ಆದಾಗ್ಯೂ ಬಿಜೆಪಿಯು ಪ್ರಸಕ್ತ ವರ್ಷ ನಾಲ್ವರು ಸದಸ್ಯರನ್ನು ನಾಮನಿರ್ದೇಶನ ಮಾಡಬಹುದಾಗಿದೆ. ಹಾಗೆಯೇ 11 ಸ್ಥಾನಗಳಿಗೆ ಚುನಾವಣೆಯೂ ನಡೆಯಲಿದೆ. ಹಾಗಾಗಿ ಶೀಘ್ರದಲ್ಲೇ ಬಿಜೆಪಿಯು ಮೇಲ್ಮನೆಯಲ್ಲಿ ಬಹುಮತ ಸಾಧಿಸಲಿದೆ ಎಂದೇ ತಜ್ಞರು ವಿಶ್ಲೇಷಿಸಿದ್ದಾರೆ.

Continue Reading

ದೇಶ

Rahul Gandhi: ಮೋದಿ ಸೇರಿ 6 ಜನರಿಂದ ಭಾರತೀಯರಿಗೆ ಚಕ್ರವ್ಯೂಹ ರಚನೆ ಎಂದ ರಾಹುಲ್‌ ಗಾಂಧಿ; 6 ಜನ ಯಾರ‍್ಯಾರು?

Rahul Gandhi: ಸಂಸತ್‌ನಲ್ಲಿ ರಾಹುಲ್‌ ಗಾಂಧಿ ಅವರು ಮಹಾಭಾರತದ ಚಕ್ರವ್ಯೂಹವನ್ನು ಉದಾಹರಿಸಿ ಬಿಜೆಪಿಗೆ ಕುಟುಕಿದ್ದಾರೆ. ಮಹಾಭಾರತದ ಚಕ್ರವ್ಯೂಹದಂತೆ ಈಗಲೂ ಒಂದು ಚಕ್ರವ್ಯೂಹ ರಚಿಸಲಾಗಿದೆ. ದೇಶದ ಜನರು ಆ ಚಕ್ರವ್ಯೂಹಕ್ಕೆ ಸಿಲುಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿ 6 ಮಂದಿಯು ಈ ಚಕ್ರವ್ಯೂಹವನ್ನು ನಿಯಂತ್ರಿಸುತ್ತಿದ್ದಾರೆ

VISTARANEWS.COM


on

Rahul Gandhi
Koo

ನವದೆಹಲಿ: ಕಾಂಗ್ರೆಸ್‌ ನಾಯಕ, ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅದರಲ್ಲೂ, ಮಹಾಭಾರತದ ಚಕ್ರವ್ಯೂಹವನ್ನು ಉಲ್ಲೇಖಿಸಿದ ರಾಹುಲ್‌ ಗಾಂಧಿ ಅವರು ನರೇಂದ್ರ ಮೋದಿ (Narendra Modi) ಹಾಗೂ ಬಿಜೆಪಿ ವಿರುದ್ಧ ವಾಗ್ಬಾಣ ಪ್ರಯೋಗಿಸಿದ್ದಾರೆ. “ಮಹಾಭಾರತದ ಚಕ್ರವ್ಯೂಹದಂತೆ (Chakravyuh) ಈಗಲೂ ಒಂದು ಚಕ್ರವ್ಯೂಹ ರಚಿಸಲಾಗಿದೆ. ದೇಶದ ಜನರು ಆ ಚಕ್ರವ್ಯೂಹಕ್ಕೆ ಸಿಲುಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿ 6 ಮಂದಿಯು ಈ ಚಕ್ರವ್ಯೂಹವನ್ನು ನಿಯಂತ್ರಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.

“ಸಾವಿರಾರು ವರ್ಷಗಳ ಹಿಂದೆ, ಹರಿಯಾಣದಲ್ಲಿ ಕುರುಕ್ಷೇತ್ರ ನಡೆಯುವಾಗ 6 ಜನ ಸೇರಿ ಚಕ್ರವ್ಯೂಹವನ್ನು ರಚಿಸಿದ್ದರು. ಆರು ಜನ ಸೇರಿ ಆ ಚಕ್ರವ್ಯೂಹದಲ್ಲಿ ಅಭಿಮನ್ಯುವಿನನ್ನು ಸಿಲುಕಿಸಿ ಕೊಲೆ ಮಾಡಿದರು. ನಾನು ಚಕ್ರವ್ಯೂಹದ ಕುರಿತು ಸಣ್ಣದೊಂದು ಸಂಶೋಧನೆ ಮಾಡಿದ್ದೇನೆ. ಚಕ್ರವ್ಯೂಹವನ್ನು ಪದ್ಮವ್ಯೂಹ ಎಂದೂ ಕರೆಯಲಾಗುತ್ತದೆ. ಪದ್ಮವ್ಯೂಹ ಎಂದರೆ ಕಮಲದ ರಚನೆಯಾಗಿದೆ. ಚಕ್ರವ್ಯೂಹ ಕೂಡ ಕಮಲದ ಆಕಾರದಲ್ಲಿದೆ” ಎಂಬುದಾಗಿ ಬಿಜೆಪಿಯನ್ನು ಕುಟುಕಿದರು.

“21ನೇ ಶತಮಾನದಲ್ಲೂ ಚಕ್ರವ್ಯೂಹವನ್ನು ರಚಿಸಲಾಗಿದೆ ಹಾಗೂ ಅದು ಕಮಲದ ಆಕಾರದಲ್ಲಿದೆ. ಆ ಚಕ್ರವ್ಯೂಹದ ಚಿಹ್ನೆಯನ್ನು ನರೇಂದ್ರ ಮೋದಿ ಅವರು ಎದೆಯ ಮೇಲೆ ಧರಿಸಿಕೊಂಡು ತಿರುಗಾಡುತ್ತಿದ್ದಾರೆ. ಅಭಿಮನ್ಯುವಿಗೆ ಏನಾಯಿತೋ, ಅದರಂತೆ ಭಾರತದ ಜನರನ್ನು ಆ ಚಕ್ರವ್ಯೂಹದಲ್ಲಿ ಸಿಲುಕಿಸಲಾಗಿದೆ. ಯುವಕರು, ರೈತರು, ಮಹಿಳೆಯರು, ಸಣ್ಣ ಹಾಗೂ ಮಧ್ಯಮ ಶ್ರೇಣಿ ಉದ್ಯಮಿಗಳು ಈಗ ಆ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ” ಎಂದು ರಾಹುಲ್‌ ಗಾಂಧಿ ಕುಹಕವಾಡಿದರು.

ಚಕ್ರವ್ಯೂಹದಲ್ಲಿರುವ 6 ಜನ ಯಾರು?

“ಚಕ್ರವ್ಯೂಹದಲ್ಲಿ ತುಂಬ ಜನ ಇರುತ್ತಾರೆ. ಆದರೆ, ಚಕ್ರವ್ಯೂಹದ ಮಧ್ಯದಲ್ಲಿ 6 ಜನ ಇರುತ್ತಾರೆ ಹಾಗೂ ಅವರು ಇಡೀ ಚಕ್ರವ್ಯೂಹವನ್ನು ನಿಯಂತ್ರಿಸುತ್ತಾರೆ. ಆಧುನಿಕ ಕಾಲದ ಚಕ್ರವ್ಯೂಹವನ್ನು ಕೂಡ ಆರು ಜನ ನಿಯಂತ್ರಿಸುತ್ತಿದ್ದಾರೆ. ನರೇಂದ್ರ ಮೋದಿ, ಅಮಿತ್‌ ಶಾ, ಮೋಹನ್‌ ಭಾಗವತ್‌, ಅಜಿತ್‌ ದೋವಲ್‌, ಮುಕೇಶ್‌ ಅಂಬಾನಿ ಹಾಗೂ ಗೌತಮ್‌ ಅದಾನಿಯೇ ಈಗ ಕಮಲದ ಆಕಾರದ ಚಕ್ರವ್ಯೂಹವನ್ನು ನಿಯಂತ್ರಿಸುತ್ತಿದ್ದಾರೆ” ಎಂದು ರಾಹುಲ್‌ ಗಾಂಧಿ ಆರೋಪಿಸಿದರು.

ಚಕ್ರವ್ಯೂಹ ಭೇದಿಸುತ್ತೇವೆ ಎಂದ ರಾಹುಲ್‌ ಗಾಂಧಿ

ದೇಶದ ಜನರ ಸುತ್ತ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೆಣೆದ ಚಕ್ರವ್ಯೂಹವನ್ನು ನಾವು ಭೇದಿಸುತ್ತೇವೆ. ಚಕ್ರವ್ಯೂಹವನ್ನು ನಮಗೆ ಭೇದಿಸುವುದು ಗೊತ್ತಿದೆ. ಯಾವ ಜಾತಿಗಣತಿ ಎಂದರೆ ನೀವು (ಬಿಜೆಪಿ) ಹೆದರುತ್ತೀರೋ, ಅದೇ ಜಾತಿಗಣತಿಯನ್ನು ಇದೇ ಸದನದಲ್ಲಿ ನಾವು ಮಂಡಿಸುತ್ತೇವೆ. ನಿಮಗೆ ಇಷ್ಟ ಇದೆಯೋ ಇಲ್ಲವೋ, ನಾವು ಇದೇ ಸದನದಲ್ಲಿ ಜಾತಿಗಣತಿಯನ್ನು ಮಂಡಿಸುತ್ತೇವೆ. ದೇಶದ ಜನ ಅರ್ಜುನನ ರೀತಿ ಚಕ್ರವ್ಯೂಹವನ್ನು ಭೇದಿಸಲಿದ್ದಾರೆ ಎಂದು ರಾಹುಲ್‌ ಗಾಂಧಿ ಹೇಳಿದರು.

ಇದನ್ನೂ ಓದಿ: Rahul Gandhi: ನೀಟ್‌ನಲ್ಲಿ ‘ಎಷ್ಟು ವೋಟ್‌’ ಪಡೆದಿರಿ ಎಂದು ವಿದ್ಯಾರ್ಥಿಗಳಿಗೆ ಕೇಳಿದ ರಾಹುಲ್‌ ಗಾಂಧಿ; Video ವೈರಲ್

Continue Reading

ದೇಶ

Rajendra Nagar Tragedy: 3 IAS ಆಕಾಂಕ್ಷಿಗಳ ಸಾವು ಪ್ರಕರಣ; ಸ್ಥಳದಲ್ಲಿ ಬುಲ್ಡೋಜರ್‌ಗಳ ಗರ್ಜನೆ!

Rajendra Nagar Tragedy:ಇನ್ನು ಘಟನೆ ಬೆನ್ನಲ್ಲೇ ಕಾರ್ಯಪ್ರವೃತವಾಗಿರುವ ದಿಲ್ಲಿ ನಗರ ಪಾಲಿಗೆ(MCD) ಬುಲ್ಡೋಜರ್‌ಗಳ ಸಹಾಯದಿಂದ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದು, ಚರಂಡಿಗಳನ್ನು ಸ್ವಚ್ಛಗೊಳಿಸಿ ಸಲೀಸಾಗಿ ನೀರು ಹರಿದು ಹೋಗುವಂತೆ ಮಾಡಿದೆ. ಬುಲ್ಡೋಜರ್‌ಗಳು ಕಾರ್ಯಾಚರಣೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇನ್ನು ಇದಕ್ಕೂ ಮುನ್ನ ಅಕ್ರಮವಾಗಿ ನಿರ್ಮಿಸಿರುವ 13 ಕೋಚಿಂಗ್‌ ಸೆಂಟರ್‌ಗಳಿಗೆ MCD ಬೀಗ ಜಡಿದಿದೆ.

VISTARANEWS.COM


on

Rajendra Nagara tragedy
Koo

ನವದೆಹಲಿ: ಮೂವರು ಐಎಎಸ್‌ ಆಕಾಂಕ್ಷಿ ವಿದ್ಯಾರ್ಥಿಗಳನ್ನು ಬಲಿ ಪಡೆದ ದೆಹಲಿಯ(Delhi Flood) ರಾಜೇಂದ್ರ ನಗರ ದುರಂತ(Rajendra Nagar Tragedy). ಪ್ರಕರಣದ ಘಟನಾ ಸ್ಥಳದಲ್ಲಿ ಇಂದು ಬುಲ್ಡೋಜರ್‌ಗಳು ಗರ್ಜಿಸಿವೆ. ಬೆಳ್ಳಂ ಬೆಳಗ್ಗೆ ಸ್ಥಳದಲ್ಲಿ ಬೀಡು ಬಿಟ್ಟಿರುವ ಬುಲ್ಡೋಜರ್‌ಗಳು ಚರಂಡಿ ಒತ್ತೂವರಿ ತೆರವು ಕಾರ್ಯಾಚರಣೆ ನಡೆಸಿವೆ. ಚರಂಡಿಗಳಿಗೆ ತಡೆಯಾಗಿದ್ದ ಸಿಮೆಂಟ್‌ ಇಟ್ಟಿಗೆಗಳನ್ನು ತೆರವುಗೊಳಿಸಿ ನೀರು ಹರಿಯಲು ಸುಗಮವಾಗುವಂತೆ ಮಾಡಿದೆ.

ಇನ್ನು ಘಟನೆ ಬೆನ್ನಲ್ಲೇ ಕಾರ್ಯಪ್ರವೃತವಾಗಿರುವ ದಿಲ್ಲಿ ನಗರ ಪಾಲಿಕೆ(MCD) ಬುಲ್ಡೋಜರ್‌ಗಳ ಸಹಾಯದಿಂದ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದು, ಚರಂಡಿಗಳನ್ನು ಸ್ವಚ್ಛಗೊಳಿಸಿ ಸಲೀಸಾಗಿ ನೀರು ಹರಿದು ಹೋಗುವಂತೆ ಮಾಡಿದೆ. ಬುಲ್ಡೋಜರ್‌ಗಳು ಕಾರ್ಯಾಚರಣೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇನ್ನು ಇದಕ್ಕೂ ಮುನ್ನ ಅಕ್ರಮವಾಗಿ ನಿರ್ಮಿಸಿರುವ 13 ಕೋಚಿಂಗ್‌ ಸೆಂಟರ್‌ಗಳಿಗೆ MCD ಬೀಗ ಜಡಿದಿದೆ.

ದೆಹಲಿಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಐಎಎಸ್‌ ಕೋಚಿಂಗ್‌ ಸೆಂಟರ್‌ಗೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದರು. ರಾಜೇಂದ್ರ ನಗರದಲ್ಲಿರುವ ರಾವ್‌ ಐಎಎಸ್‌ ಕೋಚಿಂಗ್‌ ಸೆಂಟರ್‌ (Rau’s IAS Coaching Institute)ನಲ್ಲಿ ಈ ದುರಂತ ಸಂಭವಿಸಿದೆ. ಶನಿವಾರ ಸಂಜೆ ಏಕಾಏಕಿ ನೀರು ನುಗ್ಗಿದ ಕಾರಣ ನೆಲಮಹಡಿಯಲ್ಲಿದ್ದ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಮೃತರನ್ನು ಐಎಎಎಸ್‌ ಆಕಾಂಕ್ಷಿಗಳಾದ ತೆಲಂಗಾಣ, ಉತ್ತರ ಪ್ರದೇಶ ಮತ್ತು ಕೇರಳ ಮೂಲದ ತಾನಿಯಾ ಸೋನಿ (25), ಶ್ರೇಯಾ ಯಾದವ್ (25) ಮತ್ತು ನವೀನ್ ಡೆಲ್ವಿನ್ (28) ಎಂದು ಗುರುತಿಸಲಾಗಿದೆ.

ದುರಂತಕ್ಕೆ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವೇ ಕಾರಣ ಎಂಬ ಕೂಗು ಎಲ್ಲೆಡೆ ಕೇಳಿ ಬಂದಿದೆ. ಈ ಮಧ್ಯೆ ದುರಂತದಿಂದ ಪಾರಾದ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಹೃದೇಶ್ ಚೌಹಾಣ್ ಘಟನೆ ಯಾವಾಗ ನಡೆಯಿತು ಎಂಬುದರ ಆಘಾತಕಾರಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ನೆಲಮಹಡಿಗೆ ನೆರೆ ನುಗ್ಗಿದ ನಂತರ ಅಲ್ಲಿನ ಪರಿಸ್ಥಿತಿ ಹೇಗಿತ್ತು ಎನ್ನುವುದನ್ನು ಈ ವೈರಲ್ ವಿಡಿಯೊ ತೋರಿಸುತ್ತದೆ. ಹಲವು ವಿದ್ಯಾರ್ಥಿಗಳು ದುರಂತದಿಂದ ಪಾರಾಗುವುದನ್ನು ಕಾಣಬಹುದು. ಜತೆಗೆ ನೆರೆಯಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬರಿಗೆ ವಿದ್ಯಾರ್ಥಿಗಳ ಗುಂಪು ಸಹಾಯಹಸ್ತ ಚಾಚಿ ನೆರವಾಗುತ್ತಿರುವುದೂ ಕಂಡು ಬಂದಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ವಿಡಿಯೊ ಹಂಚಿಕೊಂಡಿರುವ ಹೃದೇಶ್‌ ಚೌಹಾಣ್‌, ನೆಲಮಹಡಿಯು ಹತ್ತು ನಿಮಿಷಗಳಲ್ಲಿ ಪ್ರವಾಹದಿಂದ ತುಂಬಿಕೊಂಡಿತ್ತು ಎಂದು ಬರೆದುಕೊಂಡಿದ್ದಾರೆ. ಸಂಜೆ 6.40ಕ್ಕೆ ಈ ಘಟನೆ ನಡೆದಿದ್ದು, ಪೊಲೀಸರು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (National Disaster Management Authority)ಕ್ಕೆ ತಕ್ಷಣ ಮಾಹಿತಿ ನೀಡಲಾಯಿತು. ಆದರೆ ಅವರು ರಾತ್ರಿ 9ರ ನಂತರವೇ ತಲುಪಿದರು. ಇದು ಮೂವರು ಐಎಎಎಸ್‌ ಆಕಾಂಕ್ಷಿಗಳ ಸಾವಿಗೆ ಕಾರಣವಾಯಿತು ಎಂದಿದ್ದಾರೆ.

ಇದನ್ನೂ ಓದಿ: Karnataka Weather : ಒಳನಾಡಿನಲ್ಲಿ ಬ್ರೇಕ್‌ ಕೊಟ್ಟು, ಕರಾವಳಿ- ಮಲೆನಾಡಿನಲ್ಲಿ ಮುಂದುವರಿಯಲಿದೆ ಮಳೆ

Continue Reading
Advertisement
Kabini Dam
ಕರ್ನಾಟಕ57 seconds ago

Kabini Dam: ಕಬಿನಿ ಡ್ಯಾಂಗೆ ಬಾಗಿನ ಅರ್ಪಿಸಿದ ಸಿಎಂ; ರಾಜ್ಯದ ಜಲಾಶಯಗಳು ತುಂಬಿದ್ದಕ್ಕೆ ಸಂತಸ

Paris Olympics 2024
ಪ್ರಮುಖ ಸುದ್ದಿ40 mins ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ ಹೋದ ಇಸ್ರೇಲ್ ಅಥ್ಲೀಟ್​ಗಳಿಗೆ ಜೀವ ಬೆದರಿಕೆ!

Viral News
ದೇಶ48 mins ago

Viral News: ಕಾಲಿಗೆ ಕಬ್ಬಿಣದ ಸರಪಳಿ.. ಕೈಯಲ್ಲಿ ಅಮೆರಿಕ ಪಾಸ್‌ಪೋರ್ಟ್‌..ದಟ್ಟ ಕಾಡಿನಲ್ಲಿ ಮಹಿಳೆ ಪತ್ತೆ-ವಿಡಿಯೋ ವೈರಲ್‌

Kannada New Movie Audio rights of Niveditha Shivarajkumar produced movie sold for huge amount
ಸ್ಯಾಂಡಲ್ ವುಡ್51 mins ago

Kannada New Movie: ಭಾರಿ ಮೊತ್ತಕ್ಕೆ ಮಾರಾಟವಾಯ್ತು ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಸಿನಿಮಾ ಆಡಿಯೊ ಹಕ್ಕು

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ53 mins ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

KRS Dam
ಪ್ರಮುಖ ಸುದ್ದಿ53 mins ago

KRS Dam: ಸಂಪ್ರದಾಯಕ್ಕೆ ಎಳ್ಳು ನೀರು; ಕಾವೇರಿಗೆ ಬಾಗಿನ ಕಾರ್ಯಕ್ರಮದಲ್ಲಿ ಬಾಡೂಟ!

Rajya Sabha
ರಾಜಕೀಯ1 hour ago

Rajya Sabha: ಸತ್ನಾಮ್‌ ಸಿಂಗ್‌ ಸಂಧು ಬಿಜೆಪಿ ಸೇರ್ಪಡೆ; ರಾಜ್ಯಸಭೆಯಲ್ಲಿ ಕೇಸರಿ ಪಕ್ಷದ ಬಲ 87ಕ್ಕೆ ಏರಿಕೆ

Paris Olympics 2024
ಪ್ರಮುಖ ಸುದ್ದಿ1 hour ago

Paris Olympics 2024 : ಕ್ರಿಕೆಟ್ ಕೆಲಸದಿಂದ ನಿರಾಳ; ಒಲಿಂಪಿಕ್ಸ್​​ವೀಕ್ಷಿಸಲು ತೆರಳಿದ ರಾಹುಲ್ ದ್ರಾವಿಡ್​

‌Actor Darshan
ಕರ್ನಾಟಕ1 hour ago

‌Actor Darshan: ನಟ ದರ್ಶನ್‌ಗೆ ಸದ್ಯಕ್ಕಿಲ್ಲ ಮನೆಯೂಟದ ಭಾಗ್ಯ; ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಾಪಸ್!

Arjun Sarja Vidaamuyarchi Heats Up Character Poster
ಕಾಲಿವುಡ್2 hours ago

Arjun Sarja: ಸ್ಟೈಲಿಶ್ ಅವತಾರದಲ್ಲಿ ಅರ್ಜುನ್ ಸರ್ಜಾ: ‘ವಿಡಮುಯಾರ್ಚಿ’ಲುಕ್‌ ಔಟ್‌!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ53 mins ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ4 hours ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ24 hours ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ1 day ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ1 day ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ1 day ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ2 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ2 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ2 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ3 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

ಟ್ರೆಂಡಿಂಗ್‌