Wayanad Landslide: ಎಲ್ಲೆಂದರಲ್ಲಿ ಹೆಣಗಳ ರಾಶಿ; ಕೊಚ್ಚಿ ಹೋದ ಬದುಕು: ಸ್ಮಶಾನದಂತಾದ ಭೂಲೋಕದ ಸ್ವರ್ಗ ವಯನಾಡು - Vistara News

ದೇಶ

Wayanad Landslide: ಎಲ್ಲೆಂದರಲ್ಲಿ ಹೆಣಗಳ ರಾಶಿ; ಕೊಚ್ಚಿ ಹೋದ ಬದುಕು: ಸ್ಮಶಾನದಂತಾದ ಭೂಲೋಕದ ಸ್ವರ್ಗ ವಯನಾಡು

Wayanad Landslide: ಕೇರಳದ ವಯನಾಡಿನಲ್ಲಿ ಮಂಗಳನ ಸಂಭವಿಸಿದ ಭೀಕರ ಭೂಕುಸಿತ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಭೂಕುಸಿತ ಬಾಧಿತ ಚುರಲ್‌ಮಲ ಗ್ರಾಮದಲ್ಲಿ ಅಂಗಡಿ, ಮನೆಗಳು ಮಣ್ಣಿನಡಿಯಲ್ಲಿ ಹುದುಗಿದ್ದರೆ ವಾಹನಗಳು ನೆರೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಸದ್ಯ ಈ ಗ್ರಾಮದ ಚಿತ್ರಣ ಗುರುತೇ ಸಿಗದಂತೆ ಬದಲಾಗಿದೆ. ಕೆಲವು ಕಿಲೋಮೀಟರ್ ದೂರದಲ್ಲಿರುವ ಮುಂಡಕೈನಲ್ಲಿ ಉಂಟಾದ ಭೂಕುಸಿತದ ಪರಿಣಾಮವನ್ನು ಚುರಲ್‌ಮಲ ಗ್ರಾಮ ಎದುರಿಸುತ್ತಿದ್ದು, ಮಣ್ಣು ಮತ್ತು ಅವಶೇಷಗಳ ರಾಶಿಯೇ ಇಲ್ಲಿ ಕಂಡು ಬಂದಿದೆ.

VISTARANEWS.COM


on

Wayanad Landslide
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತಿರುವನಂತಪುರಂ: ಕೇರಳ-ಹೆಸರು ಕೇಳುತ್ತಿದ್ದರೆ ಸಾಕು ಹಚ್ಚ ಹಸಿರಿನ ಗುಡ್ಡ-ಬೆಟ್ಟ, ನದಿಯ ನಿನಾದ, ಪ್ರಕೃತಿ ಸೌಂದರ್ಯದಿಂದ ಕೂಡಿದ ಬಯಲು ಈ ಚಿತ್ರವೇ ಕಣ್ಣ ಮುಂದೆ ಬರುತ್ತದೆ. ಅದರಲ್ಲಿಯೂ ವಯನಾಡು ಎಂದರೆ ಪ್ರವಾಸಿಗರ ಪಾಲಿಗೆ ಸ್ವರ್ಗ ಎನಿಸಿಕೊಂಡಿದೆ. ಆದರೆ ಇದೀಗ ಇಲ್ಲಿನ ಚಿತ್ರಣವೇ ಬದಲಾಗಿದೆ. ಮಂಗಳವಾರ ಬೆಳಗ್ಗೆ ವಯನಾಡು ಜಿಲ್ಲೆಯ ಮೆಪ್ಪಾಡಿ ಗ್ರಾಮ ಪಂಚಾಯತ್‌ ಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಭೂಕುಸಿತ ಸಂಭವಿಸಿ ಊರನ್ನೇ ಅಪೋಶನ ತೆಗೆದುಕೊಂಡಿದ್ದು, ಇದೀಗ ಎಲ್ಲಡೆ ಆಕ್ರಂದನದ ಕೂಗು ಕೇಳಿ ಬರುತ್ತಿದೆ. ಸ್ವರ್ಗದಂತಿದ್ದ ಭೂಮಿ ಸ್ಮಶಾನದಂತಾಗಿದೆ (Wayanad Landslide).

ಭೂಕುಸಿತ ಬಾಧಿತ ಚುರಲ್‌ಮಲ ಗ್ರಾಮದಲ್ಲಿ ಅಂಗಡಿ, ಮನೆಗಳು ಮಣ್ಣಿನಡಿಯಲ್ಲಿ ಹುದುಗಿದ್ದರೆ ವಾಹನಗಳು ನೆರೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಸದ್ಯ ಈ ಗ್ರಾಮದ ಚಿತ್ರಣ ಗುರುತೇ ಸಿಗದಂತೆ ಬದಲಾಗಿದೆ. ಕೆಲವು ಕಿಲೋಮೀಟರ್ ದೂರದಲ್ಲಿರುವ ಮುಂಡಕೈನಲ್ಲಿ ಉಂಟಾದ ಭೂಕುಸಿತದ ಪರಿಣಾಮವನ್ನು ಚುರಲ್‌ಮಲ ಗ್ರಾಮ ಎದುರಿಸುತ್ತಿದ್ದು, ಮಣ್ಣು ಮತ್ತು ಅವಶೇಷಗಳ ರಾಶಿಯೇ ಇಲ್ಲಿ ಕಂಡು ಬಂದಿದೆ. ಅಲ್ಲದೆ ಎರುವಾಝಂಜಿ ನದಿಯು ತನ್ನ ಪಥವನ್ನು ಬದಲಾಯಿಸಿ ಗ್ರಾಮದ ಮಧ್ಯದ ಮೂಲಕ ಹರಿಯುತ್ತಿದೆ. ಇದರಿಂದ ರಸ್ತೆಗಳೂ ಕೊಚ್ಚಿಕೊಂಡು ಹೋಗಿ ಕಾರ್ಯಾಚರಣೆಗೆ ಇನ್ನಷ್ಟು ತೊಡುಕುಂಟು ಮಾಡಿದೆ.

ಪಥ ಬದಲಿಸಿ ಹರಿದ ನದಿ ಕಾರ್ಮಿಕರ ವಸತಿಗೃಹ ಸೇರಿದಂತೆ ತನ್ನ ಹೊಸ ಹಾದಿಯಲ್ಲಿ ಸಿಕ್ಕ ಎಲ್ಲವನ್ನೂ ಸೆಳೆದುಕೊಂಡು ಹೋಗಿದೆ. ಇದು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಗೂ ಹಾನಿಯುಂಟು ಮಾಡಿದ್ದು, 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

“ವಿದ್ಯಾರ್ಥಿಗಳ ಬಗ್ಗೆ ವಿಚಾರಿಸಲು ನಾನು ಪೋಷಕರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ” ಎಂದು ಪ್ರಾಂಶುಪಾಲರು ಹೇಳಿದ್ದಾರೆ. ಭೂಕುಸಿತದಲ್ಲಿ ಮುಂಡಕೈಗೆ ಸಂಪರ್ಕ ಕಲ್ಪಿಸುವ ಸೇತುವೆ ನಾಶವಾಗಿದ್ದರಿಂದ ಹಲವರು ಚುರಲ್‌ಮಲದಲ್ಲಿ ಗಂಟೆಗಳ ಕಾಲ ಸಿಲುಕಿಕೊಂಡಿದ್ದರು. ಬಳಿಕ ಸೇನಾ ಸಿಬ್ಬಂದಿ ತಾತ್ಕಾಲಿಕ ಸೇತುವೆ ನಿರ್ಮಿಸಿ ಅವರನ್ನು ರಕ್ಷಿಸಿದ್ದಾರೆ.

ಸ್ಥಳೀಯರು ಹೇಳೋದೇನು?

ಈ ಭೂಕುಸಿತದ ಶಾಕ್‌ನಿಂದ ಇನ್ನೂ ಹಲವರು ಹೊರ ಬಂದಿಲ್ಲ. ಸ್ಥಳೀಯರೊಬ್ಬರು ಈ ಬಗ್ಗೆ ಮಾತನಾಡಿ, ʼʼನಾನು ಈ ರೀತಿಯ ದುರಂತವನ್ನು ನಿರೀಕ್ಷಿಸಿರಲೇ ಇಲ್ಲ. ಇದು ಭೂಕುಸಿತ ಪೀಡಿತ ಪ್ರದೇಶವಲ್ಲವಾಗಿದ್ದರಿಂದ ಯಾರಿಗೂ ದುರಂತದ ಬಗ್ಗೆ ಮುನ್ಸೂಚನೆಯೇ ಇರಲಿಲ್ಲ. ಗ್ರಾಮದ ಹಲವು ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಕೆಲವರ ಮೃತದೇಹ ಹಲವು ಕಿ.ಮೀ. ದೂರದ ಮಲಪ್ಪುರಂ ಜಿಲ್ಲೆಯ ನಿಲಂಬೂರ್‌ನಲ್ಲಿ ಪತ್ತೆಯಾಗಿದೆʼʼ ಎಂದು ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ.

ಮಂಗಳವಾರದ ಭೀಕರ ಭೂಕುಸಿತಕ್ಕೆ ಮೊದಲು ಭಾನುವಾರ ಮುಂಡಕೈ ಬೆಟ್ಟದ ಮೇಲೆ ಸಣ್ಣ ಭೂಕುಸಿತ ಉಂಟಾಗಿತ್ತು. ಹೀಗಾಗಿ ಸ್ಥಳಾಂತರಗೊಂಡ ಜನರಿಗಾಗಿ ಚುರಲ್‌ಮಲ ಶಾಲೆಯಲ್ಲಿ ಪರಿಹಾರ ಶಿಬಿರವನ್ನು ತೆರೆಯಲಾಗಿತ್ತು. ಸೋಮವಾರದವರೆಗೂ ಮಳೆ ಮುಂದುವರಿದಿದ್ದರಿಂದ ಬಳಿಕ ಅವರನ್ನು ಬೇರೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ಇದರಿಂದಾಗಿ ಅವರು ಮಂಗಳವಾರ ಮುಂಜಾನೆ ಸಂಭವಿಸಿದ ದುರಂತದಿಂದ ಪಾರಾಗಿದ್ದಾರೆ.

ಹೀಗೆ ಪಾರಾದವರ ಪೈಕಿ ಒಬ್ಬರಾದ ಡಾಲಿ ಎನ್ನುವ ಮಹಿಳೆ ಈ ಬಗ್ಗೆ ಮಾತನಾಡಿ ಮುಂಡಕೈಯಲ್ಲಿದ್ದ ತಮ್ಮ ಐವರು ಸಂಬಂಧಿಕರು ಜೀವ ಕಳೆದುಕೊಂಡಿದ್ದಾರೆ. ಅಧಿಕಾರಿಗಳು ಮೊದಲೇ ಮುಂಡಕೈಯಿಂದ ಹಲವರನ್ನು ಸ್ಥಳಾಂತರಿಸಿದ್ದರೆ ಸಾವಿನ ಪ್ರಮಾಣ ತಗ್ಗಿಸಬಹುದಿತ್ತು ಎಂದಿದ್ದಾರೆ. ಸದ್ಯ ವಿವಿಧೆಡೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಇನ್ನು ಮುಂಡಕೈ ಗ್ರಾಮದಲ್ಲಿ ಪರಿಸ್ಥಿತಿ ಇನ್ನೂ ಭೀಕರವಾಗಿದ್ದು ಇಲ್ಲಿದ್ದ ಬಹುತೇಕ ಮನೆಗಳು ನಾಶವಾಗಿವೆ. ಸುಮಾರು 400 ಮನೆಗಳ ಪೈಕಿ 30 ಮಾತ್ರ ಉಳಿದಿದೆ. ಉಳಿದವೆಲ್ಲ ಕುಸಿದಿವೆ ಎಂದು ಗ್ರಾಮ ಪಂಚಾಯತ್‌ ಅದಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Wayanad Landslide Explainer: ಪ್ರಕೃತಿ ಮೇಲೆ ಮಾನವನ ವಿಕೃತಿ; ವಯನಾಡು ಭೂಕುಸಿತಕ್ಕೆ ಇಲ್ಲಿದೆ ಕಾರಣಗಳ ಪಟ್ಟಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉದ್ಯೋಗ

Indian Navy Recruitment: ಭಾರತೀಯ ನೌಕಾ ಪಡೆಯಲ್ಲಿದೆ ಉದ್ಯೋಗಾವಕಾಶ; ಅಪ್ಲೈ ಮಾಡಲು ಆ. 2 ಕೊನೆಯ ದಿನ

Indian Navy Recruitment: ಭಾರತೀಯ ನೌಕಾ ಪಡೆ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಚಾರ್ಜ್‌ಮ್ಯಾನ್‌, ಟ್ರೇಡ್ಸ್‌ಮ್ಯಾನ್‌, ಕುಕ್‌, ಫೈರ್‌ ಮ್ಯಾನ್‌ ಸೇರಿದಂತೆ ಒಟ್ಟು 741 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, 10, 12ನೇ ತರಗತಿ, ಡಿಪ್ಲೋಮಾ ತೇರ್ಗಡೆಯಾದವರು ಅರ್ಜಿ ಸಲ್ಲಿಸಲು ಅರ್ಹರು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಕೊನೆಯ ದಿನ ಆಗಸ್ಟ್‌ 2.

VISTARANEWS.COM


on

Indian Navy Recruitment
Koo

ನವದೆಹಲಿ: ಭಾರತೀಯ ನೌಕಾ ಪಡೆ (Indian Navy)ಯಲ್ಲಿ ಉದ್ಯೋಗ ನಿರ್ವಹಿಸಬೇಕು ಎನ್ನುವ ಕನಸು ಯಾರಿಗೆ ಇಲ್ಲ ಹೇಳಿ? ಇಂತಹ ಕನಸು ಕಾಣುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌. ಭಾರತೀಯ ನೌಕಾ ಪಡೆ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (Indian Navy Recruitment). ಚಾರ್ಜ್‌ಮ್ಯಾನ್‌, ಟ್ರೇಡ್ಸ್‌ಮ್ಯಾನ್‌, ಕುಕ್‌, ಫೈರ್‌ ಮ್ಯಾನ್‌ ಸೇರಿದಂತೆ ಒಟ್ಟು 741 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, 10, 12ನೇ ತರಗತಿ, ಡಿಪ್ಲೋಮಾ ತೇರ್ಗಡೆಯಾದವರು ಅರ್ಜಿ ಸಲ್ಲಿಸಲು ಅರ್ಹರು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಕೊನೆಯ ದಿನ ಆಗಸ್ಟ್‌ 2 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಚಾರ್ಜ್‌ಮ್ಯಾನ್‌ (ಮದ್ದುಗುಂಡು ಕಾರ್ಯಾಗಾರ) 1 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ, ಬಿ.ಎಸ್‌ಸಿ
ಚಾರ್ಜ್‌ಮ್ಯಾನ್‌ (ಫ್ಯಾಕ್ಟರಿ) 10 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ, ಬಿ.ಎಸ್‌ಸಿ
ಟ್ರೇಡ್ಸ್‌ಮ್ಯಾನ್‌ ಮೇಟ್ 161 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ
ಕೀಟ ನಿಯಂತ್ರಣ ಕಾರ್ಯಕರ್ತ (Pest Control Worker) 18 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ
ಕುಕ್ 9 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ
ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) (ಮಿನಿಸ್ಟ್ರಿಯಲ್) 16 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ
ಚಾರ್ಜ್‌ಮ್ಯಾನ್‌ (ಮೆಕ್ಯಾನಿಕ್) 18 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ
ಸೈಂಟಿಫಿಕ್ ಅಸಿಸ್ಟೆಂಟ್ 4 ಹುದ್ದೆ, ವಿದ್ಯಾರ್ಹತೆ: ಬಿ.ಎಸ್‌ಸಿ
ಡ್ರಾಟ್ಸ್‌ಮ್ಯಾನ್‌ (Draughtsman) (ಕನ್ಟ್ರಕ್ಷನ್‌) 2 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ
ಫೈರ್ ಮ್ಯಾನ್ 444 ಹುದ್ದೆ, ವಿದ್ಯಾರ್ಹತೆ: 12ನೇ ತರಗತಿ
ಅಗ್ನಿಶಾಮಕ ಎಂಜಿನ್ ಚಾಲಕ 58 ಹುದ್ದೆ, ವಿದ್ಯಾರ್ಹತೆ: 12ನೇ ತರಗತಿ

ವಯೋಮಿತಿ ಮತ್ತು ಅರ್ಜಿ ಸುಲ್ಕ

ವಿವಿಧ ಹುದ್ದೆಗಳಿಗೆ ಅನುಗುಣವಾಗಿ 18ರಿಂದ 30 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ. ಎಸ್‌ಸಿ / ಎಸ್‌ಟಿ / ಮಾಜಿ ಯೋಧರು / ಪಿಡಬ್ಲ್ಯುಬಿಡಿ / ಮಹಿಳಾ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಇತರ ವಿಭಾಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 295 ರೂ. ಅನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು.

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ, ದಾಖಲಾತಿ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

Indian Navy Recruitment ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (joinindiannavy.gov.in).
  • ಹೆಸರು ನಮೂದಿಸಿ.
  • ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಿ.
  • ಅಪ್ಲೀಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ.
  • ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ).
  • ಮತ್ತೊಮ್ಮೆ ವಿವರಗಳನ್ನು ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಅಪ್ಲಿಕೇಷನ್‌ ನಂಬರ್‌ ಅಥವಾ ರಿಕ್ವೆಸ್ಟ್‌ ನಂಬರ್‌ ನೋಟ್‌ ಮಾಡಿಟ್ಟುಕೊಳ್ಳಿ.

ಇದನ್ನೂ ಓದಿ: Veterinary Officer Recruitment: 400 ಪಶು ವೈದ್ಯಾಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ; ಶುಲ್ಕ, ಅರ್ಹತೆಯ ಮಾಹಿತಿ ಇಲ್ಲಿದೆ

Continue Reading

ದೇಶ

Puja Khedkar: ನಕಲಿ ದಾಖಲೆ ಸೃಷ್ಟಿ; ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ನೇಮಕ ರದ್ದು, ಪರೀಕ್ಷೆಯಿಂದಲೇ ಯುಪಿಎಸ್‌ಸಿ ಬ್ಯಾನ್!

Puja Khedkar: ನಕಲಿ ದಾಖಲೆ ಸೃಷ್ಟಿ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಕೇಡರ್‌ನ ಟ್ರೈನಿ ಐಎಎಸ್‌ ಅಧಿಕಾರಿಯಾಗಿದ್ದ ಪೂಜಾ ಖೇಡ್ಕರ್‌ ಅವರನ್ನು ಹುದ್ದೆಯಿಂದ ವಜಾಗೊಳಿಸಿದೆ. ಹಾಗೆಯೇ, ಭವಿಷ್ಯದಲ್ಲಿ ಯಾವುದೇ ಪರೀಕ್ಷೆಯನ್ನು ಬರೆಯುವುದರಿಂದ ಅವರನ್ನು ನಿಷೇಧಿಸಿ ಕೇಂದ್ರ ಲೋಕಸೇವಾ ಆಯೋಗವು ಆದೇಶ ಹೊರಡಿಸಿದೆ.

VISTARANEWS.COM


on

Pooja Khedkar
Koo

ನವದೆಹಲಿ: ಮಹಾರಾಷ್ಟ್ರ ಕೇಡರ್‌ನ ಐಎಎಸ್‌ ಅಧಿಕಾರಿ, ಅತಿಯಾದ ದರ್ಪ, ನಕಲಿ ದಾಖಲೆ ಸೃಷ್ಟಿಯಿಂದಲೇ ದೇಶಾದ್ಯಂತ ಗಮನ ಸೆಳೆದಿರುವ ಟ್ರೈನಿ ಅಧಿಕಾರಿ (Trainee IAS Officer) ಪೂಜಾ ಖೇಡ್ಕರ್‌ (Pooja Khedkar) ಅವರ ಒಂದೊಂದೇ ಕಳ್ಳಾಟಗಳು ಬಯಲಾದ ಬೆನ್ನಲ್ಲೇ ಪೂಜಾ ಖೇಡ್ಕರ್‌ ವಿರುದ್ಧ ಕೇಂದ್ರ ಲೋಕಸೇವಾ ಆಯೋಗವು (UPSC) ಕಠಿಣ ಕ್ರಮ ತೆಗೆದುಕೊಂಡಿದೆ. ನಕಲಿ ದಾಖಲೆ ಸೃಷ್ಟಿಸಿದ ಹಿನ್ನೆಲೆಯಲ್ಲಿ ಪೂಜಾ ಖೇಡ್ಕರ್‌ ಅವರನ್ನು ಟ್ರೈನಿ ಐಎಎಸ್‌ ಅಧಿಕಾರಿ ಹುದ್ದೆಯಿಂದ ಯುಪಿಎಸ್‌ಸಿ ವಜಾಗೊಳಿಸಿದ್ದು, ಭವಿಷ್ಯದಲ್ಲಿ ಯುಪಿಎಸ್‌ಸಿ ಕೈಗೊಳ್ಳುವ ಯಾವುದೇ ಪರೀಕ್ಷೆಯಿಂದ ಶಾಶ್ವತವಾಗಿ ನಿಷೇಧಿಸಿದೆ.

ಪೂಜಾ ಖೇಡ್ಕರ್‌ ವಿರುದ್ಧ ಹಲವು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ತನಿಖೆಗಾಗಿ ಯುಪಿಎಸ್‌ಸಿಯು ಆಯೋಗ ಒಂದನ್ನು ರಚಿಸಿತ್ತು. ಆಯೋಗದ ವರದಿಯಲ್ಲಿ ಪೂಜಾ ಖೇಡ್ಕರ್‌ ತಪ್ಪೆಸಗಿದ್ದು, ನಕಲಿ ದಾಖಲೆ ಸೃಷ್ಟಿಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಅವರ ವಿರುದ್ಧ ಯುಪಿಎಸ್‌ಸಿ ಕಠಿಣ ಕ್ರಮ ತೆಗೆದುಕೊಂಡಿದೆ. ಆ ಮೂಲಕ ಪರೀಕ್ಷೆಯಲ್ಲಿ ಅಕ್ರಮ ಎಸಗುವವರಿಗೆ ಕಠಿಣ ಸಂದೇಶ ರವಾನಿಸಿದೆ.

ತಮ್ಮ ಖಾಸಗಿ ಕಾರಿಗೆ ‘ಕೆಂಪು ಗೂಟ’ ಅಳವಡಿಸಿದ್ದು ಸೇರಿ ಹಲವು ರೀತಿಯಲ್ಲಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು, ವರ್ಗಾವಣೆಯ ಶಿಕ್ಷೆ ಅನುಭವಿಸುತ್ತಿರುವ ಪೂಜಾ ಖೇಡ್ಕರ್‌ ಅವರು ನಕಲಿ ಜಾತಿ ಪ್ರಮಾಣಪತ್ರ, ವಿಶೇಷ ಚೇತನ ಎಂದು ಸುಳ್ಳು ದಾಖಲೆ ಸೃಷ್ಟಿ, ವಯಸ್ಸಿನ ಕುರಿತು ಕೂಡ ಫೇಕ್‌ ಡಾಕ್ಯುಮೆಂಟ್‌ ತಯಾರಿಸಿದ ಆರೋಪಗಳನ್ನೂ ಎದುರಿಸಿದ್ದರು. ಈಗ ಅವರ ವಿರುದ್ಧದ ಆರೋಪಗಲು ಸಾಬೀತಾದ ಹಿನ್ನೆಲೆಯಲ್ಲಿ ಯುಪಿಎಸ್‌ಸಿಯು ಮಹತ್ವದ ಕ್ರಮ ತೆಗೆದುಕೊಂಡಿದೆ.

ನಿಯಮಿತ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಪುಣೆಯಿಂದ (ಅಸಿಸ್ಟಂಟ್‌ ಕಲೆಕ್ಟರ್)‌ ವಾಶಿಂಗೆ ವರ್ಗಾವಣೆಗೊಂಡಿದ್ದ 34 ವರ್ಷದ ಅಧಿಕಾರಿಯು, ಒಬಿಸಿ ಜಾತಿ ಪ್ರಮಾಣಪತ್ರ ಲಗತ್ತಿಸಿ ಯುಪಿಎಸ್‌ಸಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ್ದರು. ಆದರೆ, ಅವರು ಒಬಿಸಿ ಜಾತಿ ಪ್ರಮಾಣಪತ್ರದ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಇನ್ನು ವಿಶೇಷ ಚೇತನ ಎಂಬುದಾಗಿಯೂ ಫೇಕ್‌ ಡಾಕ್ಯುಮೆಂಟ್‌ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಮೆಡಿಕಲ್‌ ಟೆಸ್ಟ್‌ ಪ್ರಕಾರ ಪೂಜಾ ಖೇಡ್ಕರ್‌ ಅವರು ಫಿಟ್‌ ಇದ್ದಾರೆ ಎಂದು ಹೇಳಲಾಗುತ್ತಿದೆ.‌ 2007ರಲ್ಲಿ ಅವರು ಎಂಬಿಬಿಎಸ್‌ಗೆ ಅರ್ಜಿ ಸಲ್ಲಿಸಿದಾಗ ದೈಹಿಕವಾಗಿ ಫಿಟ್‌ ಇರುವುದಾಗಿ ದಾಖಲೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು.

ವಯಸ್ಸಿನ ಕುರಿತೂ ಸುಳ್ಳು ದಾಖಲೆ

ಜಾತಿ, ವಿಶೇಷ ಚೇತನ ಪ್ರಮಾಣಪತ್ರದ ಜತೆಗೆ ಪೂಜಾ ಖೇಡ್ಕರ್‌ ಅವರು ವಯಸ್ಸಿನ ಕುರಿತು ಕೂಡ ಸುಳ್ಳು ದಾಖಲೆ ಸಲ್ಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 2020ರಿಂದ 2023ರ ಅವಧಿಯಲ್ಲಿ ಅವರು ಸಲ್ಲಿಸಿದ ದಾಖಲೆಗಳ ಪ್ರಕಾರ, ಮೂರು ವರ್ಷದಲ್ಲಿ ಅವರ ವಯಸ್ಸು ದಾಖಲೆಯಲ್ಲಿ ಒಂದೇ ವರ್ಷ ಹೆಚ್ಚಾಗಿದೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ವಯಸ್ಸಿನ ಮಿತಿ ಇರುವ ಕಾರಣ ಅವರು ವಯಸ್ಸಿನ ಕುರಿತು ಕೂಡ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ತಿಳಿದುಬಂದಿತ್ತು. ಇದು ಈಗ ಭಾರಿ ಚರ್ಚೆಗೂ ಗ್ರಾಸವಾಗಿತ್ತು.

ಇದನ್ನೂ ಓದಿ: Pooja Khedkar: IAS ಟ್ರೈನಿ ಅಧಿಕಾರಿ ಪೂಜಾ ಖೇಡ್ಕರ್‌ ವಿರುದ್ಧ FIR ದಾಖಲಿಸಿದ UPSC

Continue Reading

ದೇಶ

Anurag Thakur: ಅನುರಾಗ್‌ ಠಾಕೂರ್‌ ‘ಜಾತಿ’ ಅಸ್ತ್ರಕ್ಕೆ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಹಕ್ಕುಚ್ಯುತಿ ಪ್ರತ್ಯಸ್ತ್ರ!

Anurag Thakur: ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌ ಅವರು ರಾಹುಲ್‌ ಗಾಂಧಿ ವಿರುದ್ಧ ಜಾತಿ ಅಸ್ತ್ರ ಪ್ರಯೋಗಿಸಿದ್ದಾರೆ. ಅವರ ಭಾಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ, ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ಹಕ್ಕುಚ್ಯುತಿ ಮಂಡಿಸಿದೆ.

VISTARANEWS.COM


on

Anurag Thakur
Koo

ನವದೆಹಲಿ: ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌ (Anurag Thakur) ಅವರು ರಾಹುಲ್‌ ಗಾಂಧಿ (Rahul Gandhi) ಅವರಿಗೆ ತಮ್ಮ ಜಾತಿ ಎಂಬುದೇ ಗೊತ್ತಿಲ್ಲ ಎಂಬುದಾಗಿ ಲೋಕಸಭೆಯಲ್ಲಿ ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಅನುರಾಗ್‌ ಠಾಕೂರ್‌ ವಿರುದ್ಧ ಪ್ರತಿಪಕ್ಷಗಳ ನಾಯಕರು ಮುಗಿಬಿದ್ದಿದ್ದಾರೆ. ಇದರ ಬೆನ್ನಲ್ಲೇ, ಕಾಂಗ್ರೆಸ್‌ ಸಂಸದ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿರುದ್ಧ ಹಕ್ಕುಚ್ಯುತಿ (Privilege Motion) ಮಂಡಿಸಿದ್ದಾರೆ. ಸದನದಲ್ಲಿ ಕಾಂಗ್ರೆಸ್‌ ಸಂಸದರೂ ಆಗಿರುವ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಗೆ ಅವಮಾನ ಮಾಡಲಾಗಿದೆ ಎಂದು ಚರಣ್‌ಜಿತ್‌ ಸಿಂಗ್‌ ಚನ್ನಿ ಅವರು ಹಕ್ಕುಚ್ಯುತಿ ಮಂಡಿಸಿದ್ದಾರೆ.

ನರೇಂದ್ರ ಮೋದಿ ಅವರು ಅನುರಾಗ್‌ ಠಾಕೂರ್‌ ಅವರು ಸಂಸತ್‌ನಲ್ಲಿ ಮಾಡಿದ ಭಾಷಣಕ್ಕೆ ಮೆಚ್ಚುಗೆ ಸೂಚಿಸಿದ್ದರು. ಇಂಡಿಯಾ ಒಕ್ಕೂಟದ ಮುಖವಾಡವನ್ನು ಅನುರಾಗ್‌ ಠಾಕೂರ್‌ ಅವರು ಹೇಗೆ ಬಯಲಿಗೆಳೆದಿದ್ದಾರೆ ನೋಡಿ ಎಂದು ಕರೆ ನೀಡಿದ್ದ ಮೋದಿ, ಅನುರಾಗ್‌ ಠಾಕೂರ್‌ ಅವರ ಭಾಷಣದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾಗಾಗಿ, ಪ್ರಧಾನಿ ವಿರುದ್ಧ ಕಾಂಗ್ರೆಸ್‌ ಹಕ್ಕುಚ್ಯುತಿ ಮಂಡಿಸಿದೆ.

ಹಕ್ಕುಚ್ಯುತಿ ಎಂದರೇನು?

ದೇಶದ ಸಂಸದರು, ರಾಜ್ಯಸಭೆ ಸದಸ್ಯರು, ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರ ಹಕ್ಕುಗಳಿಗೆ ಧಕ್ಕೆಯುಂಟಾದಾಗ ಮಂಡಿಸುವ ವಿಶೇಷ ಅಧಿಕಾರವೇ ಹಕ್ಕುಚ್ಯುತಿಯಾಗಿದೆ. ಇದನ್ನು ವೈಯಕ್ತಿಕವಾಗಿ ಅಥವಾ ಸಾಮೂಹಿಕವಾಗಿ ಬಳಸಬಹುದಾಗಿದೆ. ಹಕ್ಕುಚ್ಯುತಿ ಮಂಡಿಸಿದ ಬಳಿಕ ಅದು ಸಾಬೀತಾದರೆ ಸಂಸತ್ತು ಹಾಗೂ ಶಾಸನಸಭೆಯ ಕಾನೂನಿನ ಅನ್ವಯ ಕ್ರಮ ತೆಗೆದುಕೊಳ್ಳುವ ಅವಕಾಶವಿದೆ.

ಅನುರಾಗ್‌ ಠಾಕೂರ್‌ ಹೇಳಿದ್ದೇನು?

ಸಂಸತ್‌ನಲ್ಲಿ ಮಾತನಾಡಿದ ಅನುರಾಗ್‌ ಠಾಕೂರ್‌, “ದೇಶದಲ್ಲಿ ಜಾತಿಗಣತಿ ಬಗ್ಗೆ ತುಂಬ ಮಾತನಾಡುತ್ತಾರೆ. ಜಾತಿಗಣತಿಯನ್ನು ಲೋಕಸಭೆಯಲ್ಲಿ ಮಂಡಿಸುತ್ತೇವೆ ಎನ್ನುತ್ತಾರೆ. ಆದರೆ, ಜಾತಿಗಣತಿ ಬಗ್ಗೆ ಮಾತನಾಡುವವರಿಗೇ ತಮ್ಮ ಜಾತಿ ಯಾವುದು ಎಂದು ಗೊತ್ತಿಲ್ಲ” ಎಂಬುದಾಗಿ ಅನುರಾಗ್‌ ಠಾಕೂರ್‌ ಟೀಕಿಸಿದ್ದರು. ಇದಕ್ಕೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಅವರು ತಿರುಗೇಟು ನೀಡಿದ್ದರು. “ಬೇರೆಯವರ ಜಾತಿಯನ್ನು ಕೇಳುವುದು ಎಷ್ಟು ಸರಿ” ಎಂದು ಹೇಳಿದ್ದರು.

ಅನುರಾಗ್‌ ಠಾಕೂರ್‌ ಹೇಳಿಕೆಗೆ ರಾಹುಲ್‌ ಗಾಂಧಿ ಪ್ರತ್ಯುತ್ತರ ನೀಡಿದರು. “ನೀವು ನನ್ನನ್ನು ಎಷ್ಟು ಅವಮಾನಿಸುತ್ತೀರೋ ಅವಮಾನಿಸಿ. ಆದರೆ, ನಾವು ಸಂಸತ್‌ನಲ್ಲಿ ಜಾತಿಗಣತಿ ವಿಧೇಯಕ ಮಂಡಿಸುತ್ತೇವೆ ಎಂಬುದನ್ನು ನೀವು ಮರೆಯದಿರಿ” ಎಂದರು. “ಅನುರಾಗ್‌ ಠಾಕೂರ್‌ ಅವರು ನನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ನನ್ನನ್ನು ಅವಮಾನಿಸಿದ್ದಾರೆ. ಆದರೆ, ನಾನು ಅವರು ಕ್ಷಮೆ ಕೇಳಿ ಎಂಬುದಾಗಿ ಆಗ್ರಹಿಸುವುದಿಲ್ಲ. ಎಷ್ಟು ಬೇಕಾದರೂ ಅವಮಾನ ಮಾಡಲಿ” ಎಂದ್ದಿದ್ದರು.

ಸಂಸತ್‌ನಲ್ಲಿ ಸೋಮವಾರ (ಜುಲೈ 29) ರಾಹುಲ್‌ ಗಾಂಧಿ ಅವರು ಕೇಂದ್ರದ ವಿರುದ್ಧ ಹರಿಹಾಯ್ದಿದ್ದರು. ದೇಶದ ಜನರ ಸುತ್ತ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೆಣೆದ ಚಕ್ರವ್ಯೂಹವನ್ನು ನಾವು ಭೇದಿಸುತ್ತೇವೆ. ಚಕ್ರವ್ಯೂಹವನ್ನು ನಮಗೆ ಭೇದಿಸುವುದು ಗೊತ್ತಿದೆ. ಯಾವ ಜಾತಿಗಣತಿ ಎಂದರೆ ನೀವು (ಬಿಜೆಪಿ) ಹೆದರುತ್ತೀರೋ, ಅದೇ ಜಾತಿಗಣತಿಯನ್ನು ಇದೇ ಸದನದಲ್ಲಿ ನಾವು ಮಂಡಿಸುತ್ತೇವೆ. ನಿಮಗೆ ಇಷ್ಟ ಇದೆಯೋ ಇಲ್ಲವೋ, ನಾವು ಇದೇ ಸದನದಲ್ಲಿ ಜಾತಿಗಣತಿಯನ್ನು ಮಂಡಿಸುತ್ತೇವೆ. ದೇಶದ ಜನ ಅರ್ಜುನನ ರೀತಿ ಚಕ್ರವ್ಯೂಹವನ್ನು ಭೇದಿಸಲಿದ್ದಾರೆ ಎಂದು ರಾಹುಲ್‌ ಗಾಂಧಿ ಹೇಳಿದರು.

ಇದನ್ನೂ ಓದಿ: Anurag Thakur: ಇಂಡಿಯಾ ಕೂಟದ ಕೊಳಕು ರಾಜಕಾರಣ ತೆರೆದಿಟ್ಟ ಅನುರಾಗ್ ಠಾಕೂರ್; ಈ ವಿಡಿಯೊ ತಪ್ಪದೇ ನೋಡಿ ಎಂದ ಮೋದಿ!

Continue Reading

ದೇಶ

Wayanad Landslide: ಭೂಕುಸಿತದ ಬಗ್ಗೆ ಒಂದು ವಾರ ಮೊದಲೇ ನೀಡಲಾಗಿತ್ತಾ ಎಚ್ಚರಿಕೆ? ಕೇಂದ್ರದ ಸೂಚನೆ ನಿರ್ಲಕ್ಷಿಸಿತ್ತಾ ಕೇರಳ ಸರ್ಕಾರ?

Wayanad Landslide: ಜುಲೈ 23 ರಂದು, ನನ್ನ ನಿರ್ದೇಶನದ ಮೇರೆಗೆ, ಭೂಕುಸಿತಗಳು ಸಂಭವಿಸಬಹುದು ಎಂದು ಪರಿಗಣಿಸಿ 9 NDRF ತಂಡಗಳನ್ನು ಕೇರಳಕ್ಕೆ ಕಳುಹಿಸಲಾಯಿತು… ಕೇರಳ ಸರ್ಕಾರ ಏನು ಮಾಡಿದೆ? ಜನರನ್ನು ಸ್ಥಳಾಂತರಿಸಲಾಗಿದೆಯೇ? ಮತ್ತು ಅವರು ಸ್ಥಳಾಂತರಗೊಂಡರೆ ಅವರು ಹೇಗೆ ಸತ್ತರು ಎಂದು ಅಮಿತ್‌ ಶಾ ಪ್ರಶ್ನಿಸಿದ್ದಾರೆ.

VISTARANEWS.COM


on

Wayanad Landslide
Koo

ನವದೆಹಲಿ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ(Wayanad Landslide) ವಿಚಾರ ಸಂಸತ್‌ನಲ್ಲೂ ಪ್ರತಿಧ್ವನಿಸಿದೆ. ಭೀಕರ ದುರ್ಘಟನೆ ಬಗ್ಗೆ ಸಂತಾಪ ಸೂಚಿಸಿದ ಕೇಂದ್ರ ಗೃಹಸಚಿವ ಅಮಿತ್‌ ಶಾ(Amit Shah) ಈ ವಿಚಾರದಲ್ಲಿ ರಾಜಕೀಯ ಬೇಡ ಎಂದು ಮನವಿ ಮಾಡಿದ್ದಾರೆ.

ರಾಜ್ಯಸಭೆಯಲ್ಲಿ ಮಾತನಾಡಿದ ಶಾ, ಗುಡ್ಡಗಾಡು ಜಿಲ್ಲೆಗೆ ಭೂಕುಸಿತ ಸಂಭವಿಸುವ ಒಂದು ವಾರದ ಮೊದಲು ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರಕ್ಕೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿತ್ತು ಎಂದು ಹೇಳಿದರು, ಭಾರೀ ಮಳೆಯಾಗುವ ಮುನ್ಸೂಚನೆಯ ನಂತರ ಕೇಂದ್ರವು ಒಂಬತ್ತು ಎನ್‌ಡಿಆರ್‌ಎಫ್ ತಂಡಗಳನ್ನು ಕೇರಳಕ್ಕೆ ಕಳುಹಿಸಿದೆ ಎಂದು ಹೇಳಿದರು.

ಜುಲೈ 23 ರಂದು, ಭಾರತ ಸರ್ಕಾರವು ಕೇರಳ ಸರ್ಕಾರಕ್ಕೆ ಮುನ್ನೆಚ್ಚರಿಕೆಯನ್ನು ನೀಡಿತು ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ, ಜುಲೈ 24 ಮತ್ತು 25 ರಂದು ಮತ್ತೆ ಮುನ್ನೆಚ್ಚರಿಕೆ ನೀಡಲಾಯಿತು. ಜುಲೈ 26ರಂದು 20 ಸೆಂ.ಮೀ.ಗೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ಭೂಕುಸಿತ ಸಂಭವಿಸಿ ಜನ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿತ್ತು. ಇದೀಗ ಕೇಂದ್ರ ಸರ್ಕಾರದ ಮುನ್ನೆಚ್ಚರಿಕಾ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಸರ್ಕಾರವು ಈಗಾಗಲೇ 2000ಕೋಟಿ ರೂ ಮೀಸಲಿಟ್ಟಿದೆ ಎಂದು ಹೇಳಿದ್ದಾರೆ.

ಜುಲೈ 23 ರಂದು, ನನ್ನ ನಿರ್ದೇಶನದ ಮೇರೆಗೆ, ಭೂಕುಸಿತಗಳು ಸಂಭವಿಸಬಹುದು ಎಂದು ಪರಿಗಣಿಸಿ 9 NDRF ತಂಡಗಳನ್ನು ಕೇರಳಕ್ಕೆ ಕಳುಹಿಸಲಾಯಿತು… ಕೇರಳ ಸರ್ಕಾರ ಏನು ಮಾಡಿದೆ? ಜನರನ್ನು ಸ್ಥಳಾಂತರಿಸಲಾಗಿದೆಯೇ? ಮತ್ತು ಅವರು ಸ್ಥಳಾಂತರಗೊಂಡರೆ ಅವರು ಹೇಗೆ ಸತ್ತರು?… ಪೂರ್ವ ಎಚ್ಚರಿಕೆಯ ಯೋಜನೆಯು 2016 ರಲ್ಲಿ ಪ್ರಾರಂಭವಾಯಿತು ಮತ್ತು 2023 ರ ಹೊತ್ತಿಗೆ, ಭಾರತವು ಅತ್ಯಾಧುನಿಕ ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಹೊಂದಿತ್ತು. ಇದೀಗ ಪ್ರಕೃತಿ ವಿಕೋಪಗಳನ್ನು 7 ದಿನಗಳ ಮುಂಚಿತವಾಗಿ ಊಹಿಸಲು ಸಾಮರ್ಥ್ಯವಿರುವ ಕೇವಲ 4 ದೇಶಗಳಲ್ಲಿ ಭಾರತವು ಒಂದು ಎಂದು ಅವರು ಹೇಳಿದರು.

ಮಂಗಳವಾರ ಮುಂಜಾನೆ ಕೇರಳದ ವಯನಾಡ್ ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಭೂಕುಸಿತಗಳು ಸಂಭವಿಸಿದ್ದು, ಕನಿಷ್ಠ 158 ಮಂದಿ ಸಾವನ್ನಪ್ಪಿದ್ದಾರೆ ಮತ್ತು ನೂರಾರು ಮಂದಿ ಗಾಯಗೊಂಡಿದ್ದಾರೆ. ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಸೇನೆಯು ಎನ್‌ಡಿಆರ್‌ಎಫ್ ಮತ್ತು ಇತರ ಏಜೆನ್ಸಿಗಳೊಂದಿಗೆ ನಿಕಟ ಸಮನ್ವಯದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ: Wayanad Landslide: ವಯನಾಡು ಭೂಕುಸಿತ; ಮೃತ ಕನ್ನಡಿಗರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

Continue Reading
Advertisement
Indian Navy Recruitment
ಉದ್ಯೋಗ2 mins ago

Indian Navy Recruitment: ಭಾರತೀಯ ನೌಕಾ ಪಡೆಯಲ್ಲಿದೆ ಉದ್ಯೋಗಾವಕಾಶ; ಅಪ್ಲೈ ಮಾಡಲು ಆ. 2 ಕೊನೆಯ ದಿನ

Pooja Khedkar
ದೇಶ8 mins ago

Puja Khedkar: ನಕಲಿ ದಾಖಲೆ ಸೃಷ್ಟಿ; ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ನೇಮಕ ರದ್ದು, ಪರೀಕ್ಷೆಯಿಂದಲೇ ಯುಪಿಎಸ್‌ಸಿ ಬ್ಯಾನ್!

krishna byre gowda
ಪ್ರಮುಖ ಸುದ್ದಿ19 mins ago

Krishna Byre Gowda: ರಾಜ್ಯಪಾಲರ ಅಧಿಕಾರ ದುರುಪಯೋಗಪಡಿಸಿಕೊಂಡರೆ ಕೋರ್ಟ್‌ಗೆ ಹೋಗುತ್ತೇವೆ: ಕೃಷ್ಣಭೈರೇಗೌಡ

Money Guide
ಮನಿ-ಗೈಡ್24 mins ago

Money Guide: PPF v/s NPS Vatsalya ನಿಮ್ಮ ಮಕ್ಕಳಿಗೆ ಯಾವುದು ಉತ್ತಮ ಯೋಜನೆ? ಇಲ್ಲಿದೆ ವಿವರ

Vinay Guruji met by master anand brother
ಸ್ಯಾಂಡಲ್ ವುಡ್26 mins ago

Vinay Guruji: ಬೈಕೊಂಡು ವಿನಯ್ ಗುರೂಜಿ ಆಶ್ರಮಕ್ಕೆ ಹೋಗಿದ್ದೆ ಆದರೆ ನನ್ನ ಅಷ್ಟೂ ಜಾತಕ ಬಿಚ್ಚಿಟ್ರು ಎಂದ ಮಾಸ್ಟರ್ ಆನಂದ್ ಸಹೋದರ!

Anurag Thakur
ದೇಶ31 mins ago

Anurag Thakur: ಅನುರಾಗ್‌ ಠಾಕೂರ್‌ ‘ಜಾತಿ’ ಅಸ್ತ್ರಕ್ಕೆ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಹಕ್ಕುಚ್ಯುತಿ ಪ್ರತ್ಯಸ್ತ್ರ!

Viral Video
Latest32 mins ago

Viral Video: ಮಹಿಳೆಯ ಎದೆ, ಕುತ್ತಿಗೆಗೆ ಭೀಕರವಾಗಿ ತಿವಿದ ಬೀದಿ ಹಸು; ಮೈ ನಡುಗಿಸುವ ವಿಡಿಯೊ

Paris Olympic
ಕ್ರೀಡೆ33 mins ago

Paris Olympic: ಪ್ರೀ ಕ್ವಾರ್ಟರ್​ಗೆ ಲಗ್ಗೆಯಿಟ್ಟ ಲಕ್ಷ್ಯ ಸೇನ್; ಜೊನಾಥನ್​ ಕ್ರಿಸ್ಟಿಗೆ ಆಘಾತಕಾರಿ ಸೋಲು

Wayanad Landslide
ದೇಶ36 mins ago

Wayanad Landslide: ಭೂಕುಸಿತದ ಬಗ್ಗೆ ಒಂದು ವಾರ ಮೊದಲೇ ನೀಡಲಾಗಿತ್ತಾ ಎಚ್ಚರಿಕೆ? ಕೇಂದ್ರದ ಸೂಚನೆ ನಿರ್ಲಕ್ಷಿಸಿತ್ತಾ ಕೇರಳ ಸರ್ಕಾರ?

DK Shivakumar
ಕರ್ನಾಟಕ41 mins ago

DK Shivakumar: ಪ್ರಧಾನಿ ಮೋದಿ ಭೇಟಿಯಾದ ಡಿಕೆಶಿ; ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲು ಬೇಡಿಕೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ22 hours ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 day ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ2 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ2 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ2 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ3 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ3 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ3 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ3 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌