Wayanad Landslide: ಭೂಕುಸಿತದ ಹಾಟ್‌ಸ್ಪಾಟ್‌ಗಳಲ್ಲಿ ಕಾಮಗಾರಿಗೆ ಅನುಮತಿ ನೀಡಿದ್ದೇಕೆ? ಹಸಿರು ನ್ಯಾಯ ಮಂಡಳಿ ಪ್ರಶ್ನೆ - Vistara News

ದೇಶ

Wayanad Landslide: ಭೂಕುಸಿತದ ಹಾಟ್‌ಸ್ಪಾಟ್‌ಗಳಲ್ಲಿ ಕಾಮಗಾರಿಗೆ ಅನುಮತಿ ನೀಡಿದ್ದೇಕೆ? ಹಸಿರು ನ್ಯಾಯ ಮಂಡಳಿ ಪ್ರಶ್ನೆ

Wayanad Landslide: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತಕ್ಕೆ ಮಾನವ ಹಸ್ತಕ್ಷೇಪವೇ ಕಾರಣ ಎಂದು ತಜ್ಞರು ತಿಳಿಸಿದ್ದು, ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ದಕ್ಷಿಣ ಪೀಠವು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿದೆ. ಪರಿಸರ ಸೂಕ್ಷ್ಮ ಮತ್ತು ಭೂಕುಸಿತದ ಹಾಟ್‌ಸ್ಪಾಟ್‌ಗಳೆಂದು ಕರೆಯಲ್ಪಡುವ ಪಶ್ಚಿಮ ಘಟ್ಟಗಳ ಬೆಟ್ಟದ ಇಳಿಜಾರುಗಳಲ್ಲಿ ಕಾಮಗಾರಿಗಳಿಗೆ ಅವಕಾಶ ನೀಡಿದ್ದಕ್ಕಾಗಿ ಕೇರಳ ಮತ್ತು ತಮಿಳುನಾಡು ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.

VISTARANEWS.COM


on

Wayanad Landslide
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತಿರುವನಂತಪುರಂ: ಧಾರಾಕಾರವಾಗಿ ಸುರಿದ ಮಳೆಗೆ ದೇವರನಾಡು ಕೇರಳ ತತ್ತರಿಸಿದ್ದು, ವಯನಾಡಿನಲ್ಲಿ ಭೀಕರ ಭೂಕುಸಿತ ಸಂಭವಿಸಿ 340ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಅವರ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ (Wayanad Landslide). ಈ ದುರಂತಕ್ಕೆ ಮಾನವ ಹಸ್ತಕ್ಷೇಪವೇ ಕಾರಣ ಎಂದು ತಜ್ಞರು ತಿಳಿಸಿದ್ದು, ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (National Green Tribunal)ಯ ದಕ್ಷಿಣ ಪೀಠವು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿದೆ. ಪರಿಸರ ಸೂಕ್ಷ್ಮ ಮತ್ತು ಭೂಕುಸಿತದ ಹಾಟ್‌ಸ್ಪಾಟ್‌ಗಳೆಂದು ಕರೆಯಲ್ಪಡುವ ಪಶ್ಚಿಮ ಘಟ್ಟಗಳ ಬೆಟ್ಟದ ಇಳಿಜಾರುಗಳಲ್ಲಿ ಕಾಮಗಾರಿಗಳಿಗೆ ಅವಕಾಶ ನೀಡಿದ್ದಕ್ಕಾಗಿ ಕೇರಳ ಮತ್ತು ತಮಿಳುನಾಡು ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.

ಎರಡೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳು, ಕೇರಳದ ವಯನಾಡು ಮತ್ತು ಇಡುಕ್ಕಿ ಹಾಗೂ ತಮಿಳುನಾಡಿನ ನೀಲಗಿರಿ ಮತ್ತು ಕೊಯಮತ್ತೂರು ಜಿಲ್ಲಾಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ.

“ವಯನಾಡು ಭೂಕುಸಿತ ಹೇಗೆ ಸಂಭವಿಸಿತು ಎಂಬ ವಿವರ ಬೇಡ. ಆದರೆ ಇಂತಹ ದುರಂತಗಳು ಮರುಕಳಿಸದಂತೆ ತಡೆಯಲು ಕೈಗೊಂಡ ಕ್ರಮಗಳು ಯಾವುವು ಎಂದು ತಿಳಿಯಲು ನಾವು ಬಯಸುತ್ತೇವೆ” ಎಂದು ನ್ಯಾಯಾಂಗ ಮಂಡಳಿಯ ನ್ಯಾಯಾಧೀಶೆ ಪುಷ್ಪಾ ಸತ್ಯನಾರಾಯಣ ತಿಳಿಸಿದ್ದಾರೆ. ಕೇರಳ ಮತ್ತು ತಮಿಳುನಾಡಿನಲ್ಲಿ ಬೆಟ್ಟದ ಇಳಿಜಾರುಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಹೇಗೆ ಅನುಮತಿ ನೀಡಲಾಗುತ್ತಿದೆ ಎಂದು ನ್ಯಾಯಮಂಡಳಿ ಅಸಮಾಧಾನ ವ್ಯಕ್ತಪಡಿಸಿದೆ.

ಭೂಕುಸಿತದಿಂದ ತೀವ್ರವಾಗಿ ಹಾನಿಗೊಳಗಾದ ವಯನಾಡಿನ ಮೆಪ್ಪಾಡಿ ಪ್ರದೇಶದ ಚುರಲ್‌ಮಲ ಮತ್ತು ಮುಂಡಕೈ ಬಂಡೆಯಂತದ ಗಟ್ಟಿಯಾದ ನೆಲದ ಮೇಲೆ ರೂಪುಗೊಂಡಿಲ್ಲ. ಬದಲಾಗಿ ಮೆದುವಾದ ಮಣ್ಣನ್ನು ಹೊಂದಿದೆ. ಇಲ್ಲಿರುವುದು ಕೆಂಪು ಮಣ್ಣು. ಆದರೂ ಇಲ್ಲಿ ಅಷ್ಟೊಂದು ಕಟ್ಟಡಗಳು ಏಕೆ ಇವೆ? ಇದಕ್ಕೆ ನಮಗೆ ಉತ್ತರ ಬೇಕು ಎಂದು ನ್ಯಾಯಪೀಠ ಹೇಳಿದೆ.

ಪರಿಸರ ತಜ್ಞ ಮಾಧವ್ ಗಾಡ್ಗೀಳ್ ನೇತೃತ್ವದ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಯು ಭೂಕುಸಿತ ಸಂಭವಿಸಿದ ವಯನಾಡು ಜಿಲ್ಲೆಯ ವೈತಿರಿ ತಾಲೂಕನ್ನು ಪರಿಸರ ಸೂಕ್ಷ್ಮ ವಲಯ -1 ಎಂದು ಸೂಚಿಸಿದೆ. ಅಂದರೆ ಇಲ್ಲಿ ಭೂಮಿಗೆ ಹಾನಿಯಾಗುವ ಯಾವುದೇ ಚಟುವಟಿಕೆ ನಡೆಯಬಾರದು ಎಂದು ಈ ಹಿಂದೆಯೇ ತಿಳಿಸಿದೆ ಎಂದು ನ್ಯಾಯಪೀಠ ತನ್ನ ನೋಟಿಸ್‌ನಲ್ಲಿ ಉಲ್ಲೇಖಿಸಿದೆ.

ತಮಿಳುನಾಡಿಗೂ ಚಾಟಿ

ಕೇರಳದ ಜತೆಗೆ ತಮಿಳುನಾಡಿಗೂ ಚಾಟಿ ಬೀಸಿದ ನ್ಯಾಯಪೀಠ, ಗಿರಿಧಾಮಗಳಲ್ಲಿ ಕಟ್ಟಡಗಳ ನಿರ್ಮಾಣವನ್ನು ನಿರ್ಬಂಧಿಸುವ ತಮಿಳುನಾಡು ಜಿಲ್ಲಾ ಪುರಸಭೆಗಳ ಕಾಯ್ದೆ, 1920ರ ಚಾಪ್ಟರ್‌ 10 ಎ ಅನ್ನು ತಮಿಳುನಾಡು ಕಟ್ಟುನಿಟ್ಟಾಗಿ ಅನುಸರಿಸುತ್ತಿದೆಯೇ? ಎಂದು ಪ್ರಶ್ನಿಸಿದೆ. “ತಮಿಳುನಾಡಿನಲ್ಲಿ ಚಾಪ್ಟರ್‌ 10 ಎ ಅನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆಯೇ ಮತ್ತು ಕೇರಳದಲ್ಲಿ ಅಂತಹ ಯಾವುದಾದರೂ ನಿಯಮಗಳಿವೆಯೇ ಎಂದು ತಿಳಿಯಲು ಬಯಸುತ್ತೇವೆ. ಆ ವಿವರಗಳನ್ನು ಒದಗಿಸಿ” ಎಂದು ನ್ಯಾಯಪೀಠ ಕೇರಳ ಮತ್ತು ತಮಿಳುನಾಡಿಗೆ ಸೂಚಿಸಿದೆ.

ತಮಿಳುನಾಡಿನ ನೀಲಗಿರಿ ಮತ್ತು ವಾಲ್ಪಾರೈನಲ್ಲಿ ಅಣಬೆಗಳಂತೆ ಬೆಳೆಯುತ್ತಿರುವ ರೆಸಾರ್ಟ್‌ಗಳ ಬಗ್ಗೆ ನ್ಯಾಯ ಮಂಡಳೀ ತೀವ್ರ ಕಳವಳ ವ್ಯಕ್ತಪಡಿಸಿದೆ. ʼʼಖಾಸಗಿಯವರಿಗೆ ರೆಸಾರ್ಟ್ ನಿರ್ಮಿಸಲು ಅವಕಾಶ ನೀಡಿ ಮುಗ್ಧ ಜನರ ಜೀವಕ್ಕೆ ಅಪಾಯವನ್ನುಂಟು ಮಾಡುವ ಚಟುವಟಿಕೆಯನ್ನು ಪ್ರವಾಸೋದ್ಯಮ ಇಲಾಖೆಗೆ ಏಕೆ ನಿಯಂತ್ರಿಸುತ್ತಿಲ್ಲ?ʼʼ ಎಂದು ನ್ಯಾಯಮೂರ್ತಿ ಪುಷ್ಪಾ ಸತ್ಯನಾರಾಯಣ ಪ್ರಶ್ನಿಸಿದರು. ʼʼಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಇನ್ನು ಮುಂದೆ ಯಾವುದೇ ನಿರ್ಮಾಣವನ್ನು ಮಾಡಬಾರದುʼʼ ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

ಇದನ್ನೂ ಓದಿ: Wayanad Landslide: ವಯನಾಡ್‌ನಲ್ಲಿ ಕರ್ತವ್ಯಪರತೆ ಮೆರೆದ ಕನ್ನಡತಿ ಜಿಲ್ಲಾಧಿಕಾರಿ, ಭೂಕುಸಿತ ಸ್ಥಳದಲ್ಲೇ ಮೊಕ್ಕಾಂ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Cloudburst: ಮೇಘಸ್ಫೋಟದಿಂದ ಉತ್ತರ ಭಾರತದಲ್ಲಿ ಅಲ್ಲೋಲ ಕಲ್ಲೋಲ; ಏನಿದು ವಿದ್ಯಾಮಾನ? ಹೇಗೆ ಸಂಭವಿಸುತ್ತದೆ? ಇಲ್ಲಿದೆ ವಿವರ

Cloudburst: ಇತ್ತೀಚೆಗಷ್ಟೇ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮೇಘಸ್ಫೋಟ ಸಂಭವಿಸಿ ಧಾರಾಕಾರ ಮಳೆ ಸುರಿದು ಭಾರಿ ಅನಾಹುತ ಸಂಭವಿಸಿದೆ. ಒಂದು ಗ್ರಾಮವಂತೂ ನಾಮಾವಶೇಷವಾಗಿದೆ. ಹಾಗಾದರೆ ಮೇಘಸ್ಫೋಟ ಎಂದರೇನು? ಇದು ಹೇಗೆ ಸಂಭವಿಸುತ್ತದೆ? ಇದು ಯಾಕೆ ಅಪಾಯಕಾರಿ ಎನ್ನುವುದನ್ನು ನೋಡೋಣ.

VISTARANEWS.COM


on

Cloudburst
Koo

ಬೆಂಗಳೂರು: ಇತ್ತೀಚೆಗಷ್ಟೇ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮೇಘಸ್ಫೋಟ (Cloudburst) ಸಂಭವಿಸಿ ಧಾರಾಕಾರ ಮಳೆ ಸುರಿದು ಭಾರಿ ಅನಾಹುತ ಸಂಭವಿಸಿದೆ. ನದಿ ಅಪಾಯ ಮಟ್ಟ ಮೇರೆ ಮೀರಿ ಹರಿಯುತ್ತಿದ್ದು, ಕೆಲವರ ಸಾವಿಗೂ ಕಾರಣವಾಗಿದೆ. ಒಂದು ಗ್ರಾಮವಂತೂ ನಾಮಾವಶೇಷವಾಗಿದೆ. ಮೇಘಸ್ಫೋಟ ಇತ್ತೀಚಿನ ವರ್ಷಗಳಲ್ಲಿ ನಾವು ಪದೇ ಪದೆ ಕೇಳುವ ಶಬ್ದ. ಮೇಘಸ್ಫೋಟದಿಂದ ವ್ಯಾಪಕ ನಷ್ಟ ಎನ್ನುವ ಸುದ್ದಿ ಸಾಮಾನ್ಯ ಎಂಬಂತಾಗಿದೆ. ಹಾಗಾದರೆ ಮೇಘಸ್ಫೋಟ ಎಂದರೇನು? ಇದು ಹೇಗೆ ಸಂಭವಿಸುತ್ತದೆ? ಇದು ಯಾಕೆ ಅಪಾಯಕಾರಿ ? ಎನ್ನುವುದನ್ನು ನೋಡೋಣ.

ವ್ಯಾಪಕ ಮಳೆ

ಮೇಘಸ್ಫೋಟ ಎಂದರೆ ಇದು ಮಳೆಯೇ. ಆದರೆ ಸಾಮಾನ್ಯ ಮಳೆಗಿಂತ ಭಿನ್ನವಾಗಿರುತ್ತದೆ ಮತ್ತು ಶಕ್ತಿಶಾಲಿಯಾಗಿರುತ್ತದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, 20ರಿಂದ 30 ಸ್ಕ್ವೈರ್‌ ಕಿ.ಮೀ.ಯಲ್ಲಿ ಒಂದು ಗಂಟೆಯ ಅವಧಿಯಲ್ಲಿ 100 ಮಿ.ಲೀ. ಅಥವಾ ಅದಕ್ಕಿಂತ ಅಧಿಕ ಮಳೆ ಸುರಿದರೆ ಅದನ್ನು ಮೇಘಸ್ಫೋಟ ಎಂದು ಕರೆಯಲಾಗುತ್ತದೆ. ಅಂದರೆ ಒಂದು ಚಿಕ್ಕ ಪ್ರದೇಶದಲ್ಲಿ ಸ್ವಲ್ಪ ಹೊತ್ತಿನಲ್ಲಿ ಅಧಿಕ ಮಳೆ ಸುರಿಯುವ ವಿದ್ಯಾಮಾನ ಇದಾಗಿದೆ. ಹೀಗಾಗಿ ಇದು ಸುರಿದಾಗ ನಾಶ-ನಷ್ಟ ಅಧಿಕವಾಗಿರುತ್ತದೆ. ಇದು ಹೇಗೆ ಸಂಭವಿಸುತ್ತದೆ ಎನ್ನುವುದನ್ನು ನೋಡುವ ಮುನ್ನ ಮಳೆ ಸುರಿಯುವ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳಬೇಕು.

ಮಳೆಯಲ್ಲಿ ಎರಡು ವಿಧ

ಭೂಮಿಯಲ್ಲಿನ ನೀರು ಉಷ್ಣತೆಯಿಂದ ನೀರು ಆವಿಯಾಗಿ ಮೇಲೇರುತ್ತದೆ. ಭೂಮಿಯ ಮೇಲ್ಮೈಗೆ ಹೋಗುತ್ತಿದ್ದ ಹಾಗೆ ತಂಪು ಹೆಚ್ಚಾಗುತ್ತ ಹೋಗುತ್ತದೆ. ನೀರಾವಿ ಮೇಲೆ ಹೋಗುತ್ತ ಮೋಡವಾಗಿ ಬದಲಾಗುತ್ತದೆ. ಇದು ಬಳಿಕ ಮಳೆಯಾಗಿ ಸುರಿಯುತ್ತದೆ. ಇದು ಮೊದಲ ವಿಧ.

ಇನ್ನು ಎರಡನೇ ವಿಧದ ಮಳೆ ಬೆಟ್ಟಗಳ ಸಹಾಯದಿಂದ ಸುರಿಯುತ್ತದೆ. ಅದು ಹೇಗೆಂದರೆ, ನೀರಾವಿ ಚಲಿಸುತ್ತಿರುವಾಗ ಬೆಟ್ಟ ಅಡ್ಡ ಬಂದರೆ ಅದು ನೇರ ಮೇಲಕ್ಕೆ ಸಾಗುತ್ತದೆ. ಹೀಗೆ ಮೇಲೇರಿ ಬಳಿಕ ಭೂಮಿಗೆ ಮಳೆಯ ರೂಪದಲ್ಲಿ ಸುರಿಯುತ್ತದೆ. ಸಾಮಾನ್ಯವಾಗಿ ಇಂತಹ ಮಳೆ ಮೇಘಸ್ಫೋಟವಾಗಿ ಬದಲಾಗುತ್ತದೆ (ಅಪರೂಪಕ್ಕೆ ಸಮತಲ ಭೂ ಭಾಗದಲ್ಲಿ ಮೇಘಸ್ಫೋಟ ನಡೆದರೂ ಹೆಚ್ಚಿನ ಹಾನಿ ಸಂಭವಿಸುವುದಿಲ್ಲ).

ಹೇಗೆ ಉಂಟಾಗುತ್ತದೆ?

ಏಕಕಾಲಕ್ಕೆ ನಿರಂತರವಾಗಿ ನೀರಾವಿ ಬೆಟ್ಟಕ್ಕೆ ಡಿಕ್ಕಿ ಹೊಡೆದು ಮೇಲೇರಿ ಮೋಡಗಳ ಸಮೂಹ ರೂಪುಗೊಳ್ಳುತ್ತದೆ. ಈ ಸಂದರ್ಭದಲ್ಲಿ ಕೆಳಗಿನಿಂದ ಬಿಸಿ ಗಾಳಿ ಮೇಲಕ್ಕೆ ಚಲಿಸಿ ಮೋಡಗಳಿಂದ ಉದುರುವ ನೀರ ಹನಿಗಳನ್ನು ಪುನಃ ಮೇಲಕ್ಕೇ ತಳ್ಳುತ್ತದೆ. ಹೀಗೆ ಮತ್ತೆ ಮೇಲಕ್ಕೆ ಮರಳುವ ನೀರ ಹನಿ ಉಳಿದವುಗಳ ಜೊತೆ ಸೇರಿ ದೊಡ್ಡದಾಗುತ್ತ ಹೋಗುತ್ತದೆ. ಕೆಲವು ಸಮಯಗಳ ಬಳಿಕ ಈ ಬಿಸಿ ಗಾಳಿ ಬೀಸುವುದು ನಿಲ್ಲುತ್ತದೆ. ಆಗ ಅದುವರೆಗೆ ಸಂಗ್ರಹವಾಗಿದ್ದ ನೀರ ಹನಿಗಳು ಮೇಲಕ್ಕೆ ತಳ್ಳುವ ಒತ್ತಡ ಇಲ್ಲದ ಕಾರಣ ಒಮ್ಮೆಲೆ ಕೆಳಗೆ ಸುರಿಯುತ್ತವೆ. ಅಧಿಕ ಸಾಂದ್ರತೆಯುಳ್ಳ, ಭಾರವುಳ್ಳ ನೀರ ಹನಿಗಳು ಒಮ್ಮೆಲೆ ಸುರಿಯುವುದರಿಂದ ಆ ಪ್ರತ್ಯೇಕ ಪ್ರದೇಶದಲ್ಲಿ ಸ್ವಲ್ಪ ಹೊತ್ತಿನಲ್ಲೇ ಅಧಿಕ ಮಳೆ ಸುರಿದಂತಾಗುತ್ತದೆ.

ಇನ್ನೊಂದು ವಿಧ

ಮೇಘಸ್ಫೋಟ ಇನ್ನೊಂದು ವಿಧದಲ್ಲೂ ಸಂಭವಿಸುವ ಸಾಧ್ಯತೆ ಇದೆ. ಅತ್ಯಧಿಕ ಉಷ್ಣತೆ, ನೀರಿನಾಂಶ ಹೊಂದಿರುವ ವಾಯು ಮತ್ತು ಕಡಿಮೆ ಉಷ್ಣತೆ ಹೊಂದಿರುವ ವಾಯು ಪರಸ್ಪರ ಡಿಕ್ಕಿ ಹೊಡೆದು ಮೋಡ ರೂಪುಗೊಂಡು ಮೇಘಸ್ಫೋಟ ಸಂಭವಿಸುತ್ತದೆ. ಇದು ಅಪರೂಪಕ್ಕೆ ನಡೆಯುವ ವಿದ್ಯಾಮಾನ ಎನ್ನುತ್ತಾರೆ ತಜ್ಞರು.

ಯಾಕಾಗಿ ಅಪಾಯಕಾರಿ?

ಮೇಘಸ್ಫೋಟದಿಂದ ಇದ್ದಕ್ಕಿದ್ದ ಹಾಗೆ ಲಕ್ಷಗಟ್ಟಲೆ ಲೀಟರ್‌ ನೀರು ಹರಿದು ಪ್ರವಾಹ ಉಂಟಾಗುತ್ತದೆ. ಅನಿರೀಕ್ಷಿತವಾಗಿ ಇದು ಉಂಟಾಗುವುದರಿಂದ ರಕ್ಷಣಾ ಕಾರ್ಯ ನಡೆಸಲೂ ಸಾಧ್ಯವಾಗದೆ ಅಪಾಯ ಅಂಭವಿಸುತ್ತದೆ. ಅದರಲ್ಲೂ ಸೂಕ್ಷ್ಮ ಭೂ ಪ್ರದೇಶಗಳಲ್ಲಿ ಗುಡ್ಡ ಕುಸಿತದಂತಹ ಅವಘಡ ಸಂಭವಿಸುತ್ತದೆ.

ನಿಯಂತ್ರಣ ಸಾಧ್ಯವೆ?

ಮೇಘಸ್ಫೋಟ ಎನ್ನುವುದು ನಿಸರ್ಗದ ಸಾಮಾನ್ಯ ಪ್ರಕ್ರಿಯೆಯಾದರೂ ಇತ್ತೀಚೆಗೆ ಹೆಚ್ಚಾಗಲು ನಮ್ಮ ಅತಿಯಾದ ಚಟುವಟಿಕೆಗಳೇ ಕಾರಣ ಎನ್ನುವುದನ್ನು ಗಮನಿಸಬೇಕು. ಪ್ರಕೃತಿಯಲ್ಲಿನ ಬದಲಾವಣೆ ಇದು ಹೆಚ್ಚಾಗುವಂತೆ ಮಾಡಿದೆ. ವಾತಾವರಣದ ಉಷ್ಣಾಂಶ ಹೆಚ್ಚಾಗಿ ನೀರಾವಿ ಪ್ರಮಾಣ ವೃದ್ಧಿಸಿದೆ. ಇದು ಅಧಿಕ ಪ್ರಮಾಣದ ಮೇಘಸ್ಫೋಟಕ್ಕೆ ಕಾರಣವಾಗಿದೆ ಎನ್ನುತ್ತಾರೆ ಹವಾಮಾನ ತಜ್ಞರು.

ಇದನ್ನೂ ಓದಿ: Wayanad Landslide: ಭೂಕುಸಿತದ ಹಾಟ್‌ಸ್ಪಾಟ್‌ಗಳಲ್ಲಿ ಕಾಮಗಾರಿಗೆ ಅನುಮತಿ ನೀಡಿದ್ದೇಕೆ? ಹಸಿರು ನ್ಯಾಯ ಮಂಡಳಿ ಪ್ರಶ್ನೆ

Continue Reading

ದೇಶ

Wayanad Landslide: ವಯನಾಡು ಭೂಕುಸಿತಕ್ಕೆ ಗೋಹತ್ಯೆಯೇ ಕಾರಣ ಎಂದ ಬಿಜೆಪಿ ನಾಯಕ; ಅವರ ವಿವರಣೆ ಹೀಗಿದೆ!

Wayanad Landslide: ಕೇರಳದ ವಯನಾಡು ಭೂಕುಸಿತಕ್ಕೆ ಅಕ್ರಮವಾಗಿ ರೆಸಾರ್ಟ್‌ಗಳನ್ನು ನಿರ್ಮಿಸಿರುವುದು, ಸೂಕ್ಷ್ಮ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳುವುದು, ಅರಣ್ಯ ನಾಶಪಡಿಸುವುದು ಸೇರಿ ಹಲವು ಕಾರಣಗಳನ್ನು ನೀಡಲಾಗುತ್ತಿದೆ. ಆದರೆ, ಬಿಜೆಪಿ ನಾಯಕ ಜ್ಞಾನದೇವ್‌ ಅಹುಜಾ ಅವರು ಭೂಕುಸಿತಕ್ಕೆ ಬೇರೆಯದ್ದೇ ಕಾರಣ ನೀಡಿದ್ದಾರೆ. ಮುಂದೆ ಓದಿ…

VISTARANEWS.COM


on

Wayanad Landslide
Koo

ತಿರುವನಂತಪುರಂ/ಜೈಪುರ: ಕೇರಳದ ವಯನಾಡು ಈಗ ಅಕ್ಷರಶಃ ಮಸಣದಂತಾಗಿದೆ. ಭಾರಿ ಮಳೆ, ಭೀಕರ ಭೂಕುಸಿತದಿಂದಾಗಿ (Wayanad Landslide) 350ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇನ್ನೂ 300 ಜನ ನಾಪತ್ತೆಯಾಗಿದ್ದಾರೆ. ಎಲ್ಲೆಂದರಲ್ಲಿ ಶವಗಳು ಸಿಗುತ್ತಿವೆ. ಸಾವಿರಾರು ಎಕರೆ ಕೃಷಿ ಭೂಮಿ ಹಾಳಾಗಿದೆ. ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಈಗಲೂ ಹಗಲು-ರಾತ್ರಿ ಕಾರ್ಯಾಚರಣೆ ನಡೆಯುತ್ತಿದೆ. ಇನ್ನು, ಭೂಕುಸಿತಕ್ಕೆ ಅರಣ್ಯ ನಾಶ, ರೆಸಾರ್ಟ್‌ಗಳ ನಿರ್ಮಾಣ ಸೇರಿ ಹಲವು ಕಾರಣಗಳನ್ನು ಗುರುತಿಸಲಾಗುತ್ತಿದೆ. ಇದರ ಬೆನ್ನಲ್ಲೇ, “ಕೇರಳದಲ್ಲಿ ಭೂಕುಸಿತ ಉಂಟಾಗಲು ಗೋವುಗಳ ಹತ್ಯೆಯೇ ಕಾರಣ” ಎಂಬುದಾಗಿ ಬಿಜೆಪಿ ನಾಯಕ ಜ್ಞಾನದೇವ್‌ ಅಹುಜಾ ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ರಾಜಸ್ಥಾನದ ಬಿಜೆಪಿ ನಾಯಕ, ಮಾಜಿ ಶಾಸಕ ಜ್ಞಾನದೇವ್‌ ಅಹುಜಾ ಹೇಳಿಕೆ ಈಗ ಭಾರಿ ಚರ್ಚೆಗೂ ಗ್ರಾಸವಾಗಿದೆ. “ವಯನಾಡಿನಲ್ಲಿ ಭೂಕಂಪ ಸಂಭವಿಸಿರುವುದು ಗೋಹತ್ಯೆಯ ಪರಿಣಾಮವಾಗಿದೆ. ಕೇರಳದಲ್ಲಿ ಗೋಹತ್ಯೆಯನ್ನು ನಿಲ್ಲಿಸದಿದ್ದದರೆ ಇಂತಹ ಹಲವು ದುರಂತಗಳು ಸಂಭವಿಸುತ್ತಲೇ ಇರುತ್ತವೆ. 2018ರಿಂದಲೂ ನಾನು ಇದನ್ನು ಗಮನಿಸುತ್ತಿದ್ದೇನೆ. ಎಲ್ಲೆಲ್ಲಿ ಗೋವುಗಳ ಹತ್ಯೆಯು ಜಾಸ್ತಿಯಾಗಿರುತ್ತದೆಯೋ, ಅಲ್ಲೆಲ್ಲ ಭೂಕುಸಿತ ಸಂಭವಿಸುತ್ತಿರುತ್ತವೆ. ಕೇರಳದ ವಯನಾಡು ಇದಕ್ಕೆ ನಿದರ್ಶನ” ಎಂದು ಮಾಧ್ಯಮವೊಂದರ ಜತೆ ಮಾತನಾಡುವಾಗ ಅಹುಜಾ ಹೇಳಿದ್ದಾರೆ. ಆದರೆ, ಗೋವುಗಳ ಹತ್ಯೆಗೂ, ಭೂಕುಸಿತಕ್ಕೂ ಹೇಗೆ ನಂಟಿದೆ ಎಂಬುದನ್ನು ಅವರು ವಿವರಿಸಿಲ್ಲ.

ಸಹಾಯಹಸ್ತ ಚಾಚಿದ ಕರ್ನಾಟಕ

ವಯನಾಡು ಭೂಕುಸಿತದಿಂದ ಸಾವಿರಾರು ಜನ ನಿರಾಶ್ರಿತರಾಗಿದ್ದು, ಅವರ ನೆರವಿಗೆ ಕರ್ನಾಟಕ ಸರ್ಕಾರ ಧಾವಿಸಿದೆ. “ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ತತ್ತರಿಸಿರುವ ಕೇರಳದ ಜೊತೆ ರಾಜ್ಯ ಸರ್ಕಾರ ನಿಂತಿದೆ. ಭೂಕುಸಿತದಿಂದ ಸೂರು ಕಳೆದುಕೊಂಡ 100 ಕುಟುಂಬಗಳಿಗೆ ನಮ್ಮ ಸರ್ಕಾರ ಮಾನವೀಯ ನೆಲೆಯಲ್ಲಿ ಮತ್ತೆ ಮನೆ ನಿರ್ಮಿಸಿಕೊಡಲಿದೆ ಎಂಬ ಭರವಸೆಯನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ನೀಡಿದ್ದೇನೆ. ಸಂಕಷ್ಟದ ಕಾಲದಲ್ಲಿ ಜೊತೆ ನಿಂತು ಭರವಸೆಯನ್ನು ಮರಳಿ ಕಟ್ಟೋಣ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪೋಸ್ಟ್‌ ಮಾಡಿದ್ದಾರೆ.

ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟ ಕನ್ನಡಿಗರಿಗೆ ತಲಾ ರೂ.5 ಲಕ್ಷ ಪರಿಹಾರ ಘೋಷಣೆ ಮಾಡಿದ್ದರು. ಭೂಕುಸಿತದಿಂದ ಸಂಕಷ್ಟದಲ್ಲಿರುವ ಕನ್ನಡಿಗರ ನೆರವಿಗೆ ಧಾವಿಸಲು ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಗಡಿ ಜಿಲ್ಲೆ ಚಾಮರಾಜನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿತ್ತು. ಹೆಚ್.ಡಿ ಕೋಟೆಯಲ್ಲಿ ಗಾಯಾಳುಗಳನ್ನು ಕರೆತಂದು ಅಗತ್ಯ ಚಿಕಿತ್ಸೆ ಕೊಡಿಸಲು ಬಸ್‌ಗಳನ್ನು ಏರ್ಪಡಿಸಲಾಗಿತ್ತು. ಅಗತ್ಯ ಸಲಕರಣೆಗಳನ್ನು ಹೊತ್ತ ಬೆಂಗಳೂರಿನ ಎನ್.ಡಿ.ಆರ್.ಎಫ್ ಹಾಗೂ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಸೇನಾಪಡೆಯ ತಂಡಗಳು ವಯನಾಡು ತಲುಪಿದ್ದವು.

ಇದನ್ನೂ ಓದಿ: Wayanad Landslide: ವಯನಾಡು ಭೂಕುಸಿತ: ದುರಂತದ ಮಧ್ಯೆಯೂ ಭರವಸೆಯ ಕಿರಣ; ಸಂತ್ರಸ್ತರ ರಕ್ಷಣೆಯೇ ರೋಚಕ

Continue Reading

ದೇಶ

Western Ghats: ಪಶ್ಚಿಮ ಘಟ್ಟದ 57 ಸಾವಿರಕ್ಕೂ ಹೆಚ್ಚು ಚ.ಕಿಮೀ. ಪರಿಸರ ಸೂಕ್ಷ್ಮ ಪ್ರದೇಶ; ಕೇಂದ್ರದಿಂದ ಕರಡು ಅಧಿಸೂಚನೆ

Western Ghats:ಕೇಂದ್ರ ಸರ್ಕಾರ ಜುಲೈ 31 ರಂದು ಪ್ರಕಟಿಸಿದ 6ನೇ ಕರಡು ಅಧಿಸೂಚನೆಯಲ್ಲಿ ಕರ್ನಾಟಕ, ಕೇರಳ ಸೇರಿ 6 ರಾಜ್ಯಗಳಲ್ಲಿ ಹರಡಿಕೊಂಡಿರುವ ಪಶ್ಚಿಮ ಘಟ್ಟದ 56,800ಕ್ಕೂ ಹೆಚ್ಚು ಚದರ ಕಿಲೋ ಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಎಂದು ಘೋಷಿಸುವ ನಿಟ್ಟಿನಲ್ಲಿ ಸಾರ್ವಜನಿಕರು, ಪರಿಣತರಿಂದ ಸಲಹೆ ಮತ್ತು ವಿರೋಧಗಳಿದ್ದರೆ ತಿಳಿಸಬೇಕು ಎಂದು ಸೂಚಿಸಲಾಗಿದೆ. ಇದಕ್ಕಾಗಿ 60 ದಿನಗಳ ಕಾಲಾವಕಾಶವನ್ನೂ ಸರ್ಕಾರ ನೀಡಿದೆ.

VISTARANEWS.COM


on

Western Ghats
Koo

ನವದೆಹಲಿ:ಕೆಟ್ಟ ಮೇಲೆ ಬುದ್ಧಿ ಬಂತು, ಅಟ್ಟ ಮೇಲೆ ಒಲೆ ಉರಿಯಿತು ಎಂಬ ಮಾತಿದೆ. ಅದರಂತೆಯೇ ಕೇರಳ ವಯನಾಡಿನಲ್ಲಿ ಈ ಬಾರಿ ಮಳೆಗೆ ಸಂಭವಿಸಿದ ಭೀಕರ ಭೂಕುಸಿತ(Wayanad Landslide)ದ ನಂತರ ಇದೀಗ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ(Central Government) ಪಶ್ಚಿಮ ಘಟ್ಟ(Western Ghats)ದ 56 ಸಾವಿರಕ್ಕೂ ಹೆಚ್ಚು ಚದರ ಕಿಮೀ. ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲು ಮುಂದಾಗಿದೆ. ಈಗಾಗಲೇ ಈ ಸಂಬಂಧ ಐದನೇ ಕರಡು ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಕೇಂದ್ರ ಸರ್ಕಾರ ಜುಲೈ 31 ರಂದು ಪ್ರಕಟಿಸಿದ 6ನೇ ಕರಡು ಅಧಿಸೂಚನೆಯಲ್ಲಿ ಕರ್ನಾಟಕ, ಕೇರಳ ಸೇರಿ 6 ರಾಜ್ಯಗಳಲ್ಲಿ ಹರಡಿಕೊಂಡಿರುವ ಪಶ್ಚಿಮ ಘಟ್ಟದ 56,800ಕ್ಕೂ ಹೆಚ್ಚು ಚದರ ಕಿಲೋ ಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಎಂದು ಘೋಷಿಸುವ ನಿಟ್ಟಿನಲ್ಲಿ ಸಾರ್ವಜನಿಕರು, ಪರಿಣತರಿಂದ ಸಲಹೆ ಮತ್ತು ವಿರೋಧಗಳಿದ್ದರೆ ತಿಳಿಸಬೇಕು ಎಂದು ಸೂಚಿಸಲಾಗಿದೆ. ಇದಕ್ಕಾಗಿ 60 ದಿನಗಳ ಕಾಲಾವಕಾಶವನ್ನೂ ಸರ್ಕಾರ ನೀಡಿದೆ.

ಪಶ್ಚಿಮಘಟ್ಟದ ಶೇ. 36ರಷ್ಟು ಪ್ರದೇಶ ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಿದೆ. ಕರ್ನಾಟಕದ 20 ಸಾವಿರಕ್ಕೂ ಹೆಚ್ಚು ಚದರ ಕಿಮೀ ಪ್ರದೇಶವೂ ಸೇರಿ ಪಶ್ಚಿಮ ಘಟ್ಟದ 56 ಸಾವಿರಕ್ಕೂ ಹೆಚ್ಚು ಚದರ ಕಿಮೀ. ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾಗಿದೆ. ಭೂ ಕುಸಿತ ಸಂಭವಿಸಿರುವ ಕೇರಳದ ವಯನಾಡು ಜಿಲ್ಲೆಯ 13 ಹಳ್ಳಿಗಳನ್ನು ಒಳಗೊಂಡಂತೆ ರಾಜ್ಯ ವ್ಯಾಪ್ತಿಯ 10 ಸಾವಿರ ಚದರ ಕಿಮೀ ಪಶ್ಚಿಮಘಟ್ಟ ಪ್ರದೇಶ ಪರಿಸರ ಸೂಕ್ಷ್ಮ ವಲಯದಲ್ಲಿದೆ ಎಂದು ಕರಡು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಭೂಕುಸಿತ ಸಂಭವಿಸಿರುವ ವಯನಾಡು ಜಿಲ್ಲೆಯ ಮೆಪ್ಪಾಡಿ ಹಾಗೂ ಚೂರಲ್‌ಮಲ ಪ್ರದೇಶಗಳ 13 ಗ್ರಾಮಗಳು ಸೇರಿ ಕೇರಳದ 9,993.7 ಚ.ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಎಂದು ಘೋಷಿಸುವ ವಿಚಾರವನ್ನು ಕರಡು ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾಗಿದೆ. ಇನ್ನು ಗುಜರಾತ್‌ನಲ್ಲಿ 449 ಚ.ಕಿ.ಮೀ, ಮಹಾರಾಷ್ಟ್ರದಲ್ಲಿ 17,340 ಚ.ಕಿ.ಮೀ, ಗೋವಾದಲ್ಲಿ 1,461 ಚ.ಕಿ.ಮೀ, ಕರ್ನಾಟಕದಲ್ಲಿ 20,668 ಚ.ಕಿ.ಮೀ, ತಮಿಳುನಾಡಿನಲ್ಲಿ 6,914 ಚ.ಕಿ.ಮೀ ಮತ್ತು ಕೇರಳದಲ್ಲಿ 9,993.7 ಚ.ಕಿ.ಮೀ ಪ್ರಸ್ತಾವಿತ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋ‍ಷಿಸಲು ಸರ್ಕಾರ ಮುಂದಾಗಿದೆ.

ಇನ್ನು ಗಣಿಗಾರಿಕೆ, ಕಲ್ಲುಗಣಿಗಾರಿಕೆ ಮತ್ತು ಮರಳು ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕರಡು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ. ಐದು ವರ್ಷಗಳಲ್ಲಿ ಅಸ್ತಿತ್ವದಲ್ಲಿರುವ ಗಣಿಗಳನ್ನು ಹಂತ ಹಂತವಾಗಿ ತೆಗೆದುಹಾಕಲು ಅಧಿಸೂಚನೆಯು ಪ್ರಸ್ತಾಪಿಸಿದೆ.

ಇದನ್ನೂ ಓದಿ: Wayanad Landslide: ಇಲ್ಲಿಗೇಕೆ ಬಂದ್ರಿ? ಕಾರ್ಯಾಚರಣೆಗೆ ಅಡ್ಡಿ ಮಾಡೋಕಾ?- ರಾಹುಲ್‌ ಗಾಂಧಿ ಮೇಲೆ ಕೂಗಾಡಿದ ವ್ಯಕ್ತಿ-ವಿಡಿಯೋ ಇದೆ

Continue Reading

ಉದ್ಯೋಗ

Post Office GDS Recruitment 2024: ಪೋಸ್ಟ್‌ ಆಫೀಸ್‌ನ 44,228 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆ. 5 ಕೊನೆಯ ದಿನ

Post Office GDS Recruitment 2024: ದೇಶಾದ್ಯಂತ ಖಾಲಿ ಇರುವ ಬರೋಬ್ಬರಿ 44,228 ಹುದ್ದೆಗಳ ಭರ್ತಿಗೆ ಭಾರತೀಯ ಅಂಚೆ ಇಲಾಖೆ ಅಧಿಸೂಚನೆ ಹೊರಡಿಸಿದೆ. ಗ್ರಾಮೀಣ ಡಾಕ್ ಸೇವಕ್‌, ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌ ಮತ್ತು ಅಸಿಸ್ಟಂಟ್‌ ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌ ಹುದ್ದೆ ಇದಾಗಿದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನ ಆಗಸ್ಟ್‌ 5.

VISTARANEWS.COM


on

Post Office GDS Recruitment 2024
Koo

ನವದೆಹಲಿ: ಒಂದೊಳ್ಳೆ ಉದ್ಯೋಗ ಹುಡುಕುತ್ತಿರುವವರಿಗೆ ಭಾರತೀಯ ಅಂಚೆ ಇಲಾಖೆ (India Post Office) ಗುಡ್‌ನ್ಯೂಸ್‌ ನೀಡಿದೆ. ದೇಶಾದ್ಯಂತ ಖಾಲಿ ಇರುವ ಬರೋಬ್ಬರಿ 44,228 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ (Post GDS Recruitment 2024). ಗ್ರಾಮೀಣ ಡಾಕ್ ಸೇವಕ್‌, ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌ ಮತ್ತು ಅಸಿಸ್ಟಂಟ್‌ ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌ ಹುದ್ದೆ ಇದಾಗಿದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನ ಆಗಸ್ಟ್‌ 5. ಇನ್ನು ಎರಡೇ ದಿನ ಬಾಕಿ ಉಳಿದಿದ್ದು ಕೂಡಲೇ ಅಪ್ಲೈ ಮಾಡಿ (Job Alert).

ವಿದ್ಯಾರ್ಹತೆ ಮತ್ತು ವಯೋಮಿತಿ

ಭಾರತದ ಯಾವುದೇ ಶಿಕ್ಷಣ ಮಂಡಳಿ ನಡೆಸುವ 10ನೇ ತರಗತಿ ಪರೀಕ್ಷೆಯಲ್ಲಿ (ಇಂಗ್ಲಿಷ್‌ ಮತ್ತು ಗಣಿತ ವಿಷಯ ಒಳಗೊಂಡಿರುವುದು ಕಡ್ಡಾಯ) ಪಾಸಾದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 40 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ಕರ್ನಾಟಕದಲ್ಲಿಯೂ ಇದೆ ಹುದ್ದೆ

ಕರ್ನಾಟಕದಲ್ಲಿ 1,940 ಹುದ್ದೆಗಳಿವೆ. ಜತೆಗೆ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ದೆಹಲಿ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ಜಾರ್ಖಂಡ್, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಈಶಾನ್ಯ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಈ ನೇಮಕಾತಿ ನಡೆಯಲಿದೆ.

ಅರ್ಜಿ ಶುಲ್ಕ

ಅರ್ಜಿ ಶುಲ್ಕವಾಗಿ ಸಾಮಾನ್ಯ / ಒಬಿಸಿ ವಿಭಾಗದ ಅಭ್ಯರ್ಥಿಗಳು 100 ರೂ. ಪಾವತಿಸಬೇಕು. ಎಸ್‌ಸಿ / ಎಸ್‌ಟಿ / ಅಂಗವಿಕಲ ವಿಭಾಗದ ಮತ್ತು ಎಲ್ಲ ವರ್ಗದ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ.

ಆಯ್ಕೆ ವಿಧಾನ

10ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ 10,000 ರೂ. – 29,380 ರೂ. ಮಾಸಿಕ ವೇತನವಿದೆ ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

India Post GDS Recruitment 2024 ಅಧಿಕೃತ ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://indiapostgdsonline.gov.in/Reg_validation.aspx)
  • ಇಮೇಲ್‌ ಐಡಿ, ಫೋನ್‌ ನಂಬರ್‌ ನೀಡಿ ಹೆಸರು ನಮೂದಿಸಿ.
  • ರಚಿಸಲಾದ ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಿ.
  • ಈಗ ಅಪ್ಲಿಕೇಷನ್‌ ಫಾರಂನಲ್ಲಿ ಕಂಡುಬರುತ್ತದೆ.
  • ಅಗತ್ಯ ಮಾಹಿತಿ ನೀಡಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ).
  • ನಿಮ್ಮ ಇತ್ತೀಚಿನ ಫೋಟೊ ಮತ್ತು ಸಹಿಯನ್ನು ಸೂಕ್ತ ಅಳತೆಯಲ್ಲಿ ಅಪ್‌ಲೋಡ್‌ ಮಾಡಿ.
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.

ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್‌ ವಿಳಾಸ: https://indiapostgdsonline.gov.in/ಕ್ಕೆ ಭೇಟಿ ನೀಡಿ.

ಇದನ್ನೂ ಓದಿ: RRB ALP Recruitment: ರೈಲ್ವೆ ಲೋಕೋ ಪೈಲಟ್ ಹುದ್ದೆಗಳ ಪರೀಕ್ಷೆ ಕನ್ನಡದಲ್ಲೂ ಬರೆಯಲು ಅವಕಾಶ

Continue Reading
Advertisement
Paris Olympics 2024
ಪ್ರಮುಖ ಸುದ್ದಿ1 min ago

Paris Olympics 2024 : ಚಿನ್ನ ಪದಕ ಗೆದ್ದ ಖುಷಿಗೆ ಸಹ ಆಟಗಾರ್ತಿಗೆ ಮದುವೆ ಪ್ರಪೋಸ್ ಮಾಡಿದ ಚೀನಾದ ಷಟ್ಲರ್​!

Cloudburst
ದೇಶ15 mins ago

Cloudburst: ಮೇಘಸ್ಫೋಟದಿಂದ ಉತ್ತರ ಭಾರತದಲ್ಲಿ ಅಲ್ಲೋಲ ಕಲ್ಲೋಲ; ಏನಿದು ವಿದ್ಯಾಮಾನ? ಹೇಗೆ ಸಂಭವಿಸುತ್ತದೆ? ಇಲ್ಲಿದೆ ವಿವರ

Union Minister Pralhad Joshi latest statement in Bengaluru
ಕರ್ನಾಟಕ24 mins ago

Pralhad Joshi: ವಯನಾಡ್ ದುರಂತದ ವಿಚಾರದಲ್ಲಿ ಕಾಂಗ್ರೆಸ್‌‌ನಿಂದ ರಾಜಕೀಯ; ಪ್ರಲ್ಹಾದ್‌ ಜೋಶಿ

Kannada New Movie Kann Kann Talking Kai Kai Touching Gopilola
ಸ್ಯಾಂಡಲ್ ವುಡ್28 mins ago

Kannada New Movie: ʻಗೋಪಿಲೋಲ’ನ ಜೊತೆ ಹೆಜ್ಜೆ ಹಾಕಿದ ಜಾಹ್ನವಿ!

ginger
ಆರೋಗ್ಯ45 mins ago

Ginger Benefits: ಮಳೆಗಾಲದ ಸೋಂಕುಗಳಿಗೆ ಬೇಕು ಶುಂಠಿಯೆಂಬ ಮದ್ದು!

Wayanad Landslide
ದೇಶ50 mins ago

Wayanad Landslide: ವಯನಾಡು ಭೂಕುಸಿತಕ್ಕೆ ಗೋಹತ್ಯೆಯೇ ಕಾರಣ ಎಂದ ಬಿಜೆಪಿ ನಾಯಕ; ಅವರ ವಿವರಣೆ ಹೀಗಿದೆ!

Western Ghats
ದೇಶ55 mins ago

Western Ghats: ಪಶ್ಚಿಮ ಘಟ್ಟದ 57 ಸಾವಿರಕ್ಕೂ ಹೆಚ್ಚು ಚ.ಕಿಮೀ. ಪರಿಸರ ಸೂಕ್ಷ್ಮ ಪ್ರದೇಶ; ಕೇಂದ್ರದಿಂದ ಕರಡು ಅಧಿಸೂಚನೆ

MS Dhoni
ಕ್ರೀಡೆ55 mins ago

MS Dhoni : 2007 ವಿಶ್ವ ಕಪ್ ಹೀರೋ ಜೋಗಿಂದರ್​ ಶರ್ಮಾ ಭೇಟಿಯಾದ ಎಂ. ಎಸ್​ ಧೋನಿ

KAS Recruitment 2024
ಕರ್ನಾಟಕ56 mins ago

KAS Recruitment 2024: ಆ.25ರಂದೇ ನಡೆಯಲಿದೆ ಕೆಎಎಸ್‌ ಪೂರ್ವ ಭಾವಿ ಪರೀಕ್ಷೆ: ಕೆಪಿಎಸ್‌ಸಿ ಸ್ಪಷ್ಟನೆ

Wild Animals
ದಾವಣಗೆರೆ59 mins ago

Wild Animals : ರಸ್ತೆಗೆ ಅಡ್ಡಲಾಗಿ ಮಲಗಿಕೊಂಡ ಚಿರತೆ; ಕಾಡಿನಿಂದ ಹಸು ಜತೆಗೆ ಓಡೋಡಿ ಬಂದ ಜಿಂಕೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka rain
ಮಳೆ4 hours ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ4 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ4 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ5 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ5 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ5 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

ಟ್ರೆಂಡಿಂಗ್‌