Wall collapsed: ದೇಗುಲದ ಗೋಡೆ ಕುಸಿದು 9 ಮಕ್ಕಳ ದಾರುಣ ಸಾವು, ಹಲವರ ಸ್ಥಿತಿ ಗಂಭೀರ - Vistara News

ದೇಶ

Wall collapsed: ದೇಗುಲದ ಗೋಡೆ ಕುಸಿದು 9 ಮಕ್ಕಳ ದಾರುಣ ಸಾವು, ಹಲವರ ಸ್ಥಿತಿ ಗಂಭೀರ

Wall collapsed: ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ದೇವಸ್ಥಾನದಲ್ಲಿ ಗೋಡೆ ಕುಸಿದು(Wall collapsed) ಎಂಟು ಮಕ್ಕಳು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಘಟನೆ ಬಳಿಕ ಸ್ಥಳೀಯರ ನೆರವಿನೊಂದಿಗೆ ಪೊಲೀಸರು ರಕ್ಷಣಾ ಕಾರ್ಯ ನಡೆಸಿದರು. ಗೋಡೆಯ ಕುಸಿತದ ನಂತರ ಅವಶೇಷಗಳನ್ನು ತೆಗೆದುಹಾಕಲು ಕೆಲಸ ಮಾಡುತ್ತಿರುವ ಅರ್ಥ್‌ ಮೂವರ್ ಕಾರ್ಯನಿರ್ಹಿಸುತ್ತಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭೋಪಾಲ್‌: ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ದೇವಸ್ಥಾನದಲ್ಲಿ ಗೋಡೆ ಕುಸಿದು(Wall collapsed) 9 ಮಕ್ಕಳು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಶಾಹಪುರದ ಹರ್ದೌಲ್ ಬಾಬಾ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಈ ದಾರುಣ ಘಟನೆ ನಡೆದಿದೆ. ಗಾಯಗೊಂಡ ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಬಳಿಕ ಸ್ಥಳೀಯರ ನೆರವಿನೊಂದಿಗೆ ಪೊಲೀಸರು ರಕ್ಷಣಾ ಕಾರ್ಯ ನಡೆಸಿದರು. ಗೋಡೆಯ ಕುಸಿತದ ನಂತರ ಅವಶೇಷಗಳನ್ನು ತೆಗೆದುಹಾಕಲು ಕೆಲಸ ಮಾಡುತ್ತಿರುವ ತಂಡ ಚುರುಕಿನಿಂದ ಕಾರ್ಯನಿರ್ಹಿಸುತ್ತಿದೆ. ಮೃತ ಮಕ್ಕಳು 10ರಿಂದ 15 ವರ್ಷದವರಾಗಿದ್ದಾರೆ. ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

ಇಂದೋರ್​​ನಲ್ಲಿ ಕೆಲವು ತಿಂಗಳ ಹಿಂದೆ ಇಂತಹದ್ದೇ ಒಂದು ಘಟನೆ ನಡೆದಿತ್ತು. ಶ್ರೀ ಬೆಳೆಶ್ವರ ಮಹಾದೇವ ಜುಲೇಲಾಲ್​ ದೇವಸ್ಥಾನದಲ್ಲಿ ಮೆಟ್ಟಿಲು ಬಾವಿ ಕುಸಿದ ಅವಘಡದಲ್ಲಿ 35 ಜನ ಮೃತಪಟ್ಟಿದ್ದರು, ಈ ದೇವಸ್ಥಾನದ ಒಳಭಾಗದಲ್ಲಿರುವ ಈ ಮೆಟ್ಟಿಲು ಬಾವಿಯನ್ನು ಸಿಮೆಂಟ್ ಸ್ಲ್ಯಾಬ್​​ನಿಂದ ಮುಚ್ಚಿಡಲಾಗಿತ್ತು. ಮಾ.30ರಂದು ಶ್ರೀರಾಮನವಮಿ ಆಚರಣೆ ಪ್ರಯುಕ್ತ ಇದೇ ಸ್ಲ್ಯಾಬ್​​ ಮೇಲೆ ಕುಳಿತು ಹವನ ನಡೆಸಲಾಗುತ್ತಿತ್ತು. ಅದೇ ವೇಳೆ ಆ ಭಾಗ ಕುಸಿದುಬಿದ್ದಿದೆ ಎಂದು ಹೇಳಲಾಗಿದೆ. ಮೆಟ್ಟಿಲು ಬಾವಿ ಕುಸಿದ ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಪ್ರಾರಂಭದಲ್ಲಿ 13 ಮೃತದೇಹಗಳು ಸಿಕ್ಕಿದ್ದವು. ಬಳಿಕ ಈ ಸಾವಿನ ಸಂಖ್ಯೆ 35ಕ್ಕೆ ಏರಿಕೆಯಾಗಿತ್ತು.

ದೇವಸ್ಥಾನದಲ್ಲಿರುವ ಈ ಕಲ್ಯಾಣಿ ಅಥವಾ ಮೆಟ್ಟಿಲು ಬಾವಿಯನ್ನು ಸಿಮೆಂಟ್​ ಸ್ಲ್ಯಾಬ್​​ನಿಂದ ಮುಚ್ಚಲಾಗಿತ್ತು. ಅದಕ್ಕೆ ಕಬ್ಬಿಣದ ಸರಳುಗಳು, ರಾಡ್​​ಗಳ ಬೆಂಬಲಕೊಟ್ಟು ಭದ್ರ ಮಾಡಲಾಗಿತ್ತು. ಆದರೆ ದೇವಸ್ಥಾನ ಸುಮಾರು 60ವರ್ಷ ಹಳೆಯದ್ದು ಎನ್ನಲಾಗಿದೆ. ಅಷ್ಟಕ್ಕೂ ಈ ಮೆಟ್ಟಿಲ ಬಾವಿಗೆ ಮುಚ್ಚುಗೆ ಮಾಡಿದ್ದು ಯಾವಾಗ ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಶ್ರೀರಾಮನವಮಿ ದಿನ ಅಪಾರಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಇದೇ ಸ್ಲ್ಯಾಬ್​​ ಅನೇಕರು ಕುಳಿತಿದ್ದರು. ಇದರಿಂದ ಭಾರ ತಾಳಲಾರದೆ ಕುಸಿದುಬಿದ್ದಿದೆ. ಬಾವಿಗೆ ಬಿದ್ದವರು ಒಂದಷ್ಟು ಜನರಾದರೆ, ಕೆಲವರು ಆ ಕಬ್ಬಿಣದ ಸರಳು ತಾಗಿ, ಗಾಯಗೊಂಡು ಮೃತಪಟ್ಟಿದ್ದಾಗಿ ವರದಿಯಾಗಿದೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​​ ಅವರು ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದರು. ಈ ಬಾವಿಯಿದ್ದಂತೆ ಅಲ್ಲಿ ದೇವಸ್ಥಾನ ಕಟ್ಟಿದ್ದು ಹೇಗೆ ಎಂದೂ ಪ್ರಶ್ನಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಮತ್ತು ಗಾಯಾಳುಗಳ ಕುಟುಂಬಕ್ಕೆ 50 ಸಾವಿರ ರೂ. ಘೋಷಿಸಿದ್ದರು.

ಇದನ್ನೂ ಓದಿ: Duniya Vijay: ವಿಜಯ್ ನಟಿಸಿ, ನಿರ್ದೇಶಿಸಿರುವ ‘ಭೀಮ ಚಿತ್ರದ  ಟ್ರೈಲರ್‌ ಔಟ್‌; ಕ್ರೇಜ್‌ ಹೆಚ್ಚಿಸಿದ ʻಸಲಗʼ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Cable vs Ott: ಒಟಿಟಿ ಪೈಪೋಟಿ; ಕೇಬಲ್‌ ಟಿವಿ ವೀಕ್ಷಕರ ಸಂಖ್ಯೆ 12 ಕೋಟಿಯಿಂದ 9 ಕೋಟಿಗೆ ಇಳಿಕೆ!

Cable vs Ott: ದೇಶದಲ್ಲಿ ಟಿವಿ ಹೊಂದಿರುವವರ ಸಂಖ್ಯೆ 2018ರಲ್ಲಿ 197 ಮಿಲಿಯನ್‌ ಇತ್ತು. 2022ರಲ್ಲಿ ಈ ಸಂಖ್ಯೆ 210 ಮಿಲಿಯನ್‌ಗೆ (21 ಕೋಟಿ) ಏರಿದೆ ಎಂದು ದೆಹಲಿಯ ಸ್ಥಳೀಯ ಕೇಬಲ್ ಆಪರೇಟರ್ ಅಸೋಸಿಯೇಷನ್ ತಿಳಿಸಿದೆ. ಆದರೆ ಕೇಬಲ್ ಟಿವಿ ಸೇವೆಗಳನ್ನು ಬಳಸುವ ಮನೆಗಳ ಸಂಖ್ಯೆ 2018ರಲ್ಲಿ 120 ಮಿಲಿಯನ್‌ (12 ಕೋಟಿ) ಇದ್ದಿದ್ದು 2020ರಲ್ಲಿ 90 ಮಿಲಿಯನ್‌ಗೆ (9 ಕೋಟಿ) ಇಳಿದಿದೆ ಮತ್ತು ಈ ಸಂಖ್ಯೆಗಳು ಕುಸಿಯುತ್ತಲೇ ಇದೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಜಿಯೋ ಟಿವಿ ಏರ್ ಲೀನಿಯರ್ ಕಂಟೆಂಟ್‌ಗಳು ಗ್ರಾಹಕರು, ವಿಶೇಷವಾಗಿ ಗೃಹಿಣಿಯರು, ವಿದ್ಯಾರ್ಥಿಗಳು ಮತ್ತು ಯುವಕರನ್ನು ಒಟಿಟಿ ಕಡೆಗೆ ಸೆಳೆಯುತ್ತಿದೆ. ಇದು ಕೇಬಲ್ ಟಿವಿ ಉದ್ಯಮವನ್ನು ಕೊಲ್ಲುತ್ತಿದೆ ಎಂದು ಕೇಬಲ್ ಆಪರೇಟರ್‌ಗಳ ಸಂಸ್ಥೆ ದೂರಿದೆ.

VISTARANEWS.COM


on

By

Cable Operators
Koo

ಉದ್ಯಮಿ ಮುಕೇಶ್ ಅಂಬಾನಿ (Businessman Mukesh Ambani) ಒಡೆತನದ ಜಿಯೋ ಟಿವಿ (Jio TV) ಒಟಿಟಿ ಪ್ಲ್ಯಾಟ್ ಫಾರ್ಮ್‌ನಿಂದಾಗಿ (OTT platform) ತಮ್ಮ ವ್ಯವಹಾರದ (Cable vs Ott) ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ. ಹೀಗಾಗಿ ಜಿಯೋ ಟಿವಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿ ಮೂಲದ ಕೇಬಲ್ ಆಪರೇಟರ್‌ಗಳ ಸಂಸ್ಥೆಯು (Cable Operators) ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾಗೆ (TRAI) ಮನವಿ ಸಲ್ಲಿಸಿದೆ.

ಕೇಬಲ್ ಟಿವಿ ಉದ್ಯಮದಲ್ಲಿ ಉಂಟಾದ ಉದ್ಯೋಗ ಕಡಿತ ಮತ್ತು ಭಾರೀ ಆರ್ಥಿಕ ನಷ್ಟಕ್ಕೆ ಇದೂ ಕಾರಣ ಎಂದು ಹೇಳಿರುವ ಕೇಬಲ್ ಆಪರೇಟರ್‌ಗಳ ಸಂಸ್ಥೆಯು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಜಿಯೋ ಟಿವಿ ತನ್ನ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಲೈವ್ ಮತ್ತು ಇತರ ವಿಷಯವನ್ನು ಪ್ರಸಾರ ಮಾಡುವ ಮೂಲಕ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ದೆಹಲಿಯ ಎಲ್ಲಾ ಸ್ಥಳೀಯ ಕೇಬಲ್ ಆಪರೇಟರ್ ಅಸೋಸಿಯೇಷನ್ ​​(ALCOA) ಆರೋಪಿಸಿದೆ.

1995ರ ಕೇಬಲ್ ಕಾಯಿದೆಯನ್ನು ಉಲ್ಲೇಖಿಸಿರುವ ದೆಹಲಿಯ ಎಲ್ಲಾ ಸ್ಥಳೀಯ ಕೇಬಲ್ ಆಪರೇಟರ್ ಅಸೋಸಿಯೇಷನ್, ಕೇವಲ ಮಲ್ಟಿ-ಸಿಸ್ಟಮ್ ಆಪರೇಟರ್‌ಗಳು (MSOs), ಹೆಡೆಂಡ್ ಇನ್ ದಿ ಸ್ಕೈ (HITS) ಆಪರೇಟರ್‌ಗಳು, ಡೈರೆಕ್ಟ್- ಟು- ಹೋಮ್ (DTH) ಪ್ಲೇಯರ್‌ಗಳು ಮತ್ತು ಐಪಿಟಿವಿ ಪೂರೈಕೆದಾರರಿಗೆ ಮಾತ್ರ ಲೈವ್ ವಿಷಯವನ್ನು ಪ್ರಸಾರ ಮಾಡಲು ಅನುಮತಿಸಬೇಕು. ಆದರೆ ಜಿಯೋ ಲೈವ್ ವಿಷಯವನ್ನು ಸ್ಟ್ರೀಮಿಂಗ್ ಮಾಡುವ ಮೂಲಕ ಟಿವಿ ನಿಯಮಗಳನ್ನು ಉಲ್ಲಂಘಿಸುತ್ತಿದೆ.

Cable Operators
Cable Operators


ಟಿವಿ ಹೊಂದಿರುವವರ ಸಂಖ್ಯೆ 2018ರಲ್ಲಿ 197 ಮಿಲಿಯನ್‌ ಇತ್ತು. 2022ರಲ್ಲಿ ಈ ಸಂಖ್ಯೆ 210 ಮಿಲಿಯನ್‌ಗೆ (21 ಕೋಟಿ) ಏರಿದೆ ಎಂದು ದೆಹಲಿಯ ಸ್ಥಳೀಯ ಕೇಬಲ್ ಆಪರೇಟರ್ ಅಸೋಸಿಯೇಷನ್ ತಿಳಿಸಿದೆ. ಆದರೆ ಕೇಬಲ್ ಟಿವಿ ಸೇವೆಗಳನ್ನು ಬಳಸುವ ಮನೆಗಳ ಸಂಖ್ಯೆ 2018ರಲ್ಲಿ 120 ಮಿಲಿಯನ್‌ (12 ಕೋಟಿ) ಇದ್ದಿದ್ದು 2020ರಲ್ಲಿ 90 ಮಿಲಿಯನ್‌ಗೆ (9 ಕೋಟಿ) ಇಳಿದಿದೆ ಮತ್ತು ಈ ಸಂಖ್ಯೆಗಳು ಕುಸಿಯುತ್ತಲೇ ಇದೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಜಿಯೋ ಟಿವಿ ಏರ್ ಲೀನಿಯರ್ ಕಂಟೆಂಟ್‌ಗಳು ಗ್ರಾಹಕರು, ವಿಶೇಷವಾಗಿ ಗೃಹಿಣಿಯರು, ವಿದ್ಯಾರ್ಥಿಗಳು ಮತ್ತು ಯುವಕರನ್ನು ಒಟಿಟಿ ಕಡೆಗೆ ಸೆಳೆಯುತ್ತಿದೆ. ಇದು ಕೇಬಲ್ ಟಿವಿ ಉದ್ಯಮವನ್ನು ಕೊಲ್ಲುತ್ತಿದೆ ಎಂದು ಕೇಬಲ್ ಆಪರೇಟರ್‌ಗಳ ಸಂಸ್ಥೆ ದೂರಿದೆ.

ಜಿಯೋ ಟಿವಿ ತನ್ನ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾ ಕ್ರಿಕೆಟ್ ಪಂದ್ಯಗಳನ್ನು ಉಚಿತವಾಗಿ ಸ್ಟ್ರೀಮ್ ಮಾಡುವುದರಿಂದ ಕೇಬಲ್ ಆಪರೇಟರ್‌ಗಳಿಗೆ ಸಮಸ್ಯೆಯಾಗಿದೆ. ಕೇಬಲ್ ಟಿವಿ ಉದ್ಯಮವು ಟೆನ್ ಸ್ಪೋರ್ಟ್ಸ್ ಲೈವ್ ಕಂಟೆಂಟ್‌ಗೆ 19 ರೂ. ಜೊತೆಗೆ ಜಿಎಸ್‌ಟಿಯನ್ನು ಪಾವತಿಸುತ್ತಿದೆ. ಜಿಯೋ ಟಿವಿ ಒಟಿಟಿ ಇದನ್ನು ಗ್ರಾಹಕರಿಗೆ ಉಚಿತವಾಗಿ ನೀಡುತ್ತಿದೆ ಎಂದು ಕೇಬಲ್ ಆಪರೇಟರ್‌ಗಳು ತಿಳಿಸಿದ್ದಾರೆ.

ಇದನ್ನೂ ಓದಿ: Jio Games: ಜಿಯೋಗೇಮ್ಸ್‌ನಲ್ಲಿ ಗೂಗಲ್‌ನ ಗೇಮ್‌ಸ್ನ್ಯಾಕ್ಸ್‌ ಗೇಮ್ಸ್‌ ಲಭ್ಯ

ಇದು ಅನ್ಯಾಯದ ಸ್ಪರ್ಧೆಯಾಗಿದೆ. ಇದು ಭಾರತೀಯ ಕೇಬಲ್ ಟಿವಿ ಉದ್ಯಮವನ್ನು ನಾಶಪಡಿಸುತ್ತದೆ. ಬ್ರಾಡ್‌ಕಾಸ್ಟರ್ ಲೈವ್ ಭಾರತ ವಿರುದ್ಧ ಶ್ರೀಲಂಕಾ ಸರಣಿ ವಿಷಯವನ್ನು ಜಿಯೋ ಟಿವಿಗೆ ಹೇಗೆ ಒದಗಿಸುತ್ತಿದೆ ಎಂದು ಕೇಬಲ್‌ ಒಕ್ಕೂಟದವರು ಪ್ರಶ್ನಿಸಿದ್ದಾರೆ.

Continue Reading

ದೇಶ

Rahul Gandhi: ರಾಹುಲ್‌ ಗಾಂಧಿಯನ್ನು ಬಂಧಿಸಿದರೆ ಬಿಜೆಪಿ ಶವಪೆಟ್ಟಿಗೆ ಸೇರೋದು ಖಚಿತ; ಸಿಂಘ್ವಿ ಎಚ್ಚರಿಕೆ

Rahul Gandhi: ರಾಹುಲ್‌ ಗಾಂಧಿ ಅವರನ್ನು ಇ.ಡಿ ಬಂಧಿಸುವುದು ಬಿಡಿ, ಬಂಧಿಸುವ ಕುರಿತು ಯೋಚನೆ ಮಾಡಿದರೂ ದೇಶದ ಜನ ಬಿಜೆಪಿಯ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯಲಿದ್ದಾರೆ ಎಂದು ಅಭಿಷೇಕ್‌ ಮನು ಸಿಂಘ್ವಿ ಹೇಳಿದ್ದಾರೆ. ನನ್ನನ್ನು ಬಂಧಿಸಲು ಇ.ಡಿ ಸಿದ್ಧತೆ ನಡೆಸಿದೆ ಎಂದು ರಾಹುಲ್‌ ಗಾಂಧಿ ಅವರು ಆಗಸ್ಟ್‌ 2ರಂದು ಕಳವಳ ವ್ಯಕ್ತಪಡಿಸಿದ್ದರು.

VISTARANEWS.COM


on

Rahul Gandhi
Koo

ನವದೆಹಲಿ: ‘ನನ್ನನ್ನು ಬಂಧಿಸಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ED) ಸಜ್ಜಾಗಿ ನಿಂತಿದ್ದಾರೆ’ ಎಂಬುದಾಗಿ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಆತಂಕ ವ್ಯಕ್ತಪಡಿಸಿದ್ದಾರೆ. ಸಂಸತ್‌ನಲ್ಲಿ ಮಾಡಿದ ಚಕ್ರವ್ಯೂಹದ ಹೇಳಿಕೆಯ ಬಳಿಕ ನನ್ನನ್ನು ಬಂಧಿಸಲು ಸಿದ್ಧತೆ ನಡೆಸಿದೆ ಎಂಬುದಾಗಿ ರಾಹುಲ್‌ ಗಾಂಧಿ ಪೋಸ್ಟ್ ಮಾಡಿದ್ದರು. ಇದಕ್ಕೆ ಕಾಂಗ್ರೆಸ್‌ ಹಿರಿಯ ನಾಯಕ ಅಭಿಷೇಕ್‌ ಮನು ಸಿಂಘ್ವಿ (Abhishek Manu Singhvi) ಪ್ರತಿಕ್ರಿಯಿಸಿದ್ದು, “ರಾಹುಲ್‌ ಗಾಂಧಿ ಅವರನ್ನು ಬಂಧಿಸಿದರೆ ಬಿಜೆಪಿಯು ಶವಪೆಟ್ಟಿಗೆ ಸೇರುತ್ತದೆ” ಎಂದು ಪೋಸ್ಟ್‌ ಮಾಡಿದ್ದಾರೆ.

“ರಾಹುಲ್‌ ಗಾಂಧಿ ಅವರನ್ನು ಇ.ಡಿ ಬಂಧಿಸುವುದು ಬಿಡಿ, ಬಂಧಿಸುವ ಕುರಿತು ಯೋಚನೆ ಮಾಡಿದರೂ ದೇಶದ ಜನ ಬಿಜೆಪಿಯ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯಲಿದ್ದಾರೆ. ರಾಹುಲ್‌ ಗಾಂಧಿ ಅವರನ್ನು ಬಂಧಿಸುವ ಕುರಿತು ಯೋಚನೆಯನ್ನೂ ಮಾಡದಿರಿ. ಎಂದಿಗೂ ಯೋಚನೆ ಮಾಡದಿರಿ” ಎಂದು ಅಭಿಷೇಕ್‌ ಮನು ಸಿಂಘ್ವಿ ಎಚ್ಚರಿಸಿದ್ದಾರೆ. “ನಾನು ಸಂಸತ್‌ನಲ್ಲಿ ಚಕ್ರವ್ಯೂಹದ ಕುರಿತು ಭಾಷಣ ಮಾಡಿದ ಬಳಿಕ ಇ.ಡಿ ನನ್ನನ್ನು ಬಂಧಿಸಲು ಸಿದ್ಧತೆ ನಡೆಸುತ್ತಿದೆ. ಇ.ಡಿಯ ಮೂಲಗಳೇ ಇದರ ಕುರಿತು ಮಾಹಿತಿ ನೀಡಿವೆ” ಎಂದು ರಾಹುಲ್‌ ಗಾಂಧಿ ಪೋಸ್ಟ್‌ ಮಾಡಿದ್ದರು.

ಸಂಸತ್‌ನಲ್ಲಿ ರಾಹುಲ್‌ ಗಾಂಧಿ ಏನು ಹೇಳಿದ್ದರು.

ಸಂಸತ್‌ನಲ್ಲಿ ಜುಲೈ 29ರಂದು ರಾಹುಲ್‌ ಗಾಂಧಿ ಅವರು ಕೇಂದ್ರದ ವಿರುದ್ಧ ಹರಿಹಾಯ್ದಿದ್ದರು. ದೇಶದ ಜನರ ಸುತ್ತ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೆಣೆದ ಚಕ್ರವ್ಯೂಹವನ್ನು ನಾವು ಭೇದಿಸುತ್ತೇವೆ. ಚಕ್ರವ್ಯೂಹವನ್ನು ನಮಗೆ ಭೇದಿಸುವುದು ಗೊತ್ತಿದೆ. ಯಾವ ಜಾತಿಗಣತಿ ಎಂದರೆ ನೀವು (ಬಿಜೆಪಿ) ಹೆದರುತ್ತೀರೋ, ಅದೇ ಜಾತಿಗಣತಿಯನ್ನು ಇದೇ ಸದನದಲ್ಲಿ ನಾವು ಮಂಡಿಸುತ್ತೇವೆ. ನಿಮಗೆ ಇಷ್ಟ ಇದೆಯೋ ಇಲ್ಲವೋ, ನಾವು ಇದೇ ಸದನದಲ್ಲಿ ಜಾತಿಗಣತಿಯನ್ನು ಮಂಡಿಸುತ್ತೇವೆ. ದೇಶದ ಜನ ಅರ್ಜುನನ ರೀತಿ ಚಕ್ರವ್ಯೂಹವನ್ನು ಭೇದಿಸಲಿದ್ದಾರೆ ಎಂದು ರಾಹುಲ್‌ ಗಾಂಧಿ ಹೇಳಿದ್ದರು.

“21ನೇ ಶತಮಾನದಲ್ಲೂ ಚಕ್ರವ್ಯೂಹವನ್ನು ರಚಿಸಲಾಗಿದೆ ಹಾಗೂ ಅದು ಕಮಲದ ಆಕಾರದಲ್ಲಿದೆ. ಆ ಚಕ್ರವ್ಯೂಹದ ಚಿಹ್ನೆಯನ್ನು ನರೇಂದ್ರ ಮೋದಿ ಅವರು ಎದೆಯ ಮೇಲೆ ಧರಿಸಿಕೊಂಡು ತಿರುಗಾಡುತ್ತಿದ್ದಾರೆ. ಅಭಿಮನ್ಯುವಿಗೆ ಏನಾಯಿತೋ, ಅದರಂತೆ ಭಾರತದ ಜನರನ್ನು ಆ ಚಕ್ರವ್ಯೂಹದಲ್ಲಿ ಸಿಲುಕಿಸಲಾಗಿದೆ. ಯುವಕರು, ರೈತರು, ಮಹಿಳೆಯರು, ಸಣ್ಣ ಹಾಗೂ ಮಧ್ಯಮ ಶ್ರೇಣಿ ಉದ್ಯಮಿಗಳು ಈಗ ಆ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ” ಎಂದು ರಾಹುಲ್‌ ಗಾಂಧಿ ಕುಹಕವಾಡಿದ್ದರು.

ಇದನ್ನೂ ಓದಿ: Wayanad Landslide: ಇಲ್ಲಿಗೇಕೆ ಬಂದ್ರಿ? ಕಾರ್ಯಾಚರಣೆಗೆ ಅಡ್ಡಿ ಮಾಡೋಕಾ?- ರಾಹುಲ್‌ ಗಾಂಧಿ ಮೇಲೆ ಕೂಗಾಡಿದ ವ್ಯಕ್ತಿ-ವಿಡಿಯೋ ಇದೆ

Continue Reading

ವೈರಲ್ ನ್ಯೂಸ್

Viral Video: ಉ.ಪ್ರ ಪೊಲೀಸರ ʼಟ್ರೀಟ್‌‌ಮೆಂಟ್ʼ ಹೇಗಿತ್ತು ನೋಡಿ! ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಿದ್ದ ಪುಂಡರು

ಕೋಚಿಂಗ್ ಸೆಂಟರ್ ಹೊರಗೆ ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಿದ್ದ ಮೂವರು ದುಷ್ಕರ್ಮಿಗಳಿಗೆ ಉತ್ತರ ಪ್ರದೇಶದ ಪೊಲೀಸರು ಸರಿಯಾಗಿ ಬುದ್ಧಿ ಕಳಿಸಿದ ಘಟನೆ ನಡೆದಿದೆ. ಕೋಚಿಂಗ್ ಸೆಂಟರ್ ನ ಹೊರಗೆ ಮೂವರು ದುಷ್ಕರ್ಮಿಗಳು ಹುಡುಗಿಯರಿಗೆ ಕಿರುಕುಳ ನೀಡುತ್ತಿರುವುದು, ಪೋಲೀಸರ ಟ್ರೀಟ್ ಮೆಂಟ್ ಬಳಿಕ ಆರೋಪಿಗಳಿಗೆ ನಡೆದಾಡಲೂ ಆಗುತ್ತಿಲ್ಲ ಎನ್ನುವ ದೃಶ್ಯವಾಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

VISTARANEWS.COM


on

By

Viral Video
Koo

ಮುಜಾಫರ್‌ನಗರ: ಕೋಚಿಂಗ್ ಸೆಂಟರ್‌ನ (coaching institute) ಹೊರಗೆ ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಿದ್ದ ದುಷ್ಕರ್ಮಿಗಳಿಗೆ ಪೊಲೀಸರು ಸರಿಯಾಗಿ ಬುದ್ಧಿ ಕಳಿಸಿದ ಘಟನೆ ಉತ್ತರ ಪ್ರದೇಶದ (uttarpradesh) ಮುಜಾಫರ್‌ನಗರದಲ್ಲಿ (Muzaffarnagar) ನಡೆದಿದೆ. ಕೋಚಿಂಗ್ ಸೆಂಟರ್ ನ ಹೊರಗೆ ಮೂವರು ದುಷ್ಕರ್ಮಿಗಳು ಹುಡುಗಿಯರಿಗೆ ಕಿರುಕುಳ ನೀಡುತ್ತಿರುವುದು ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದ್ದು, ಇದರ ವಿಡಿಯೋ (Viral Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಮುಜಾಫರ್‌ನಗರದ ಗಾಂಧಿ ಕಾಲೋನಿಯಲ್ಲಿ ಕೋಚಿಂಗ್ ಸೆಂಟರ್‌ಗಳ ಸಂಖ್ಯೆ ಹೆಚ್ಚಾಗಿದೆ. ಇದು ಶಿಕ್ಷಣ ಕೇಂದ್ರವಾಗಿ ಮಾರ್ಪಟ್ಟಿದೆ. ಈ ಪ್ರದೇಶದಲ್ಲಿ ಇಂತಹ ಘಟನೆಗಳನ್ನು ತಪ್ಪಿಸಲು ಪೊಲೀಸರು ಸುತ್ತುಮುತ್ತ ಗಸ್ತು ತಿರುಗುತ್ತಾರೆ. ಕಳೆದ ಕೆಲ ದಿನಗಳಿಂದ ಕನ್ವರ್ ಯಾತ್ರೆಯಲ್ಲಿ ಪೊಲೀಸರು ನಿರತರಾಗಿದ್ದರು. ಈ ಪರಿಸ್ಥಿತಿಯ ಲಾಭ ಪಡೆದ ಕೆಲವು ದುಷ್ಕರ್ಮಿಗಳು ಕೋಚಿಂಗ್ ಸೆಂಟರ್ ಹೊರಗೆ ಯುವತಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಮೂರನೇ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಗಾಂಧಿ ಕಾಲೋನಿಯಲ್ಲಿ ಮೂವರು ಮುಸುಕುಧಾರಿಗಳು ಬೈಕ್‌ನಲ್ಲಿ ಆಗಮಿಸಿ ಮೋಹನ್ ಭಾಟಿಯಾ ಎಂಬವರ ಕೋಚಿಂಗ್ ಸೆಂಟರ್‌ನ ಹೊರಗೆ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ್ದರು. ದುಷ್ಕರ್ಮಿಯೊಬ್ಬನನ್ನು ವಿದ್ಯಾರ್ಥಿನಿ ಅವಮಾನಿಸಿದ್ದಾಳೆ ಎಂದು ಆರೋಪಿಸಿ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಲೇ ಇದ್ದರು. ಅವರನ್ನು ಅವಮಾನಿಸುವಂಥ ಯಾವುದೇ ಕೆಲಸ ಮಾಡಿಲ್ಲ ಎಂದು ವಿದ್ಯಾರ್ಥಿನಿ ಮತ್ತೆ ಮತ್ತೆ ಹೇಳಿದ್ದಳು.

ಕ್ಷಮೆ ಕೇಳದಿದ್ದರೆ ಗುಂಡು ಹಾರಿಸುವುದಾಗಿಯೂ ಪುಂಡರು ಬೆದರಿಕೆ ಹಾಕಿದ್ದರು. ಈ ದಾರಿಯಲ್ಲಿ ಸಾಕಷ್ಟು ಮಂದಿ ಹಾದುಹೋಗುತ್ತಿದ್ದರೂ ಯಾರೂ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ ದುಷ್ಕರ್ಮಿಗಳನ್ನು ತಡೆಯಲಿಲ್ಲ. ಕೊನೆಗೆ ವಿದ್ಯಾರ್ಥಿನಿ ಕ್ಷಮೆ ಕೇಳಿದ್ದರಿಂದ ದುಷ್ಕರ್ಮಿಗಳು ಸ್ಥಳದಿಂದ ಹೋಗಿದ್ದರು. ಇಡೀ ಘಟನೆ ಕೋಚಿಂಗ್ ಸೆಂಟರ್‌ನ ಹೊರಗೆ ಅಳವಡಿಸಲಾಗಿದ್ದ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿತ್ತು. ವಿದ್ಯಾರ್ಥಿನಿ ತನ್ನ ತಂದೆ ಮತ್ತು ಸಹೋದರನನ್ನು ಕರೆಸಿ ಘಟನೆಯ ಬಗ್ಗೆ ಸಂಪೂರ್ಣವಾಗಿ ತಿಳಿಸಿದ್ದಳು.


ಇದನ್ನೂ ಓದಿ: Abu Salem: ಮುಂಬೈ ಸ್ಫೋಟದ ಪ್ರಮುಖ ಆರೋಪಿ, ಭೂಗತ ಪಾತಕಿ ಅಬು ಸಲೇಂನನ್ನು ಮನ್ಮಾಡ್‌ಗೆ ರೈಲಿನಲ್ಲಿ ಕರೆತಂದ ಪೊಲೀಸರು

ಅವರು ದುಷ್ಕರ್ಮಿಗಳನ್ನು ಹುಡುಕಲು ಪ್ರಾರಂಭಿಸಿದರು ಮತ್ತು ಗಾಂಧಿ ಕಾಲೋನಿಯಲ್ಲಿ ಪತ್ತೆ ಹಚ್ಚಿ ಅವರನ್ನು ಹಿಡಿಯಲು ಹೋದಾಗ ಅವರು ಬೈಕ್‌ ಬಿಟ್ಟು ಪರಾರಿಯಾಗಿದ್ದರು. ಬಳಿಕ ಅವರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬೈಕ್ ವಶಪಡಿಸಿಕೊಂಡು ಬೈಕ್ ವಿವರ ಹಾಗೂ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಶೋಭಿತ್ ಶರ್ಮಾ ಮತ್ತು ಉಜ್ವಲ್ ಕುಮಾರ್ ಎಂದು ಗುರುತಿಸಲಾಗಿದೆ. ಮೂರನೇ ಆರೋಪಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಇಬ್ಬರು ಆರೋಪಿಗಳಿಗೆ ಪೊಲೀಸರು ಸ್ಟೇಷನ್‌ನಲ್ಲಿ ಸಖತ್‌ ʼಉಪಚಾರʼ ಮಾಡಿದ್ದಾರೆ. ಪೊಲೀಸ್‌ ಟ್ರೀಟ್‌ಮೆಂಟ್‌ಗೆ ಒಳಗಾಗಿರುವ ಆರೋಪಿಗಳು ಈಗ ನಡೆಯಲಾರದ ಸ್ಥಿತಿಯಲ್ಲಿ ಗೋಳಿಡುತ್ತಿದ್ದಾರೆ!

Continue Reading

ದೇಶ

Amit Shah: 2029ರ ಚುನಾವಣೆಯಲ್ಲೂ ಬಿಜೆಪಿಗೆ ಗೆಲುವು, ಕಾಂಗ್ರೆಸ್‌ ಪ್ರತಿಪಕ್ಷದಲ್ಲೇ; ಅಮಿತ್‌ ಶಾ ಭವಿಷ್ಯ

Amit Shah: ಎನ್‌ಡಿಎ ಸರ್ಕಾರವು ಅಧಿಕಾರ ಪೂರ್ಣಗೊಳಿಸುವುದಿಲ್ಲ, ಅಸ್ಥಿರತೆ ಇದೆ ಎಂಬುದಾಗಿ ಪದೇಪದೆ ಹೇಳುತ್ತಿದ್ದಾರೆ. ಆದರೆ, ಅಂತಹ ವಂದತಿ ಹಬ್ಬಿಸುವವರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ಈ ಸರ್ಕಾರ ಅಧಿಕಾರ ಪೂರ್ಣಗೊಳಿಸುವ ಜತೆಗೆ ಮುಂದಿನ ಲೋಕಸಭೆ ಚುನಾವಣೆಯಲ್ಲೂ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದು ಅಮಿತ್‌ ಶಾ ವಿಶ್ವಾಸ ವ್ಯಕ್ತಪಡಿಸಿದರು.

VISTARANEWS.COM


on

Amith Shah
Koo

ನವದೆಹಲಿ: ಕೆಲ ತಿಂಗಳ ಹಿಂದಷ್ಟೇ ಲೋಕಸಭೆ ಚುನಾವಣೆ (Lok Sabha Election 2024) ಮುಗಿದಿದೆ. ಬಿಜೆಪಿಯು 240 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಎನ್‌ಡಿಎ ಒಕ್ಕೂಟದ ಮಿತ್ರಪಕ್ಷಗಳ ಬಲದೊಂದಿಗೆ ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ. ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರು 2029ರ ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಭವಿಷ್ಯ ನುಡಿದಿದ್ದಾರೆ. “2029ರಲ್ಲೂ ಬಿಜೆಪಿಯೇ ಗೆಲುವು ಸಾಧಿಸಲಿದೆ. ಕಾಂಗ್ರೆಸ್‌ ಪ್ರತಿಪಕ್ಷದಲ್ಲೇ ಉಳಿಯಲಿದೆ” ಎಂದು ಅವರು ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಪ್ರತಿಪಕ್ಷಗಳು ಏನು ಮಾಡುತ್ತಾರೋ, ಏನು ಮಾಡಬೇಕು ಎಂದಿದ್ದಾರೋ ಮಾಡಲಿ. ಆದರೆ, ನಾನು ನಿಮಗೊಂದು ಭರವಸೆ ನೀಡುತ್ತೇನೆ. 2029ರ ಲೋಕಸಭೆ ಚುನಾವಣೆಯಲ್ಲೂ ಎನ್‌ಡಿಎ ಅಧಿಕಾರಕ್ಕೆ ಬರಲಿದ್ದಾರೆ, ಮೋದಿ ಅವರೇ ಪ್ರಧಾನಿಯಾಗಲಿದ್ದಾರೆ. ಕಳೆದ ಮೂರು ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆದ್ದಿದ್ದಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಈ ಬಾರಿಯ ಒಂದೇ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ” ಎಂಬುದಾಗಿ ಹೇಳಿದರು.

“ಎನ್‌ಡಿಎ ಸರ್ಕಾರವು ಅಧಿಕಾರ ಪೂರ್ಣಗೊಳಿಸುವುದಿಲ್ಲ, ಅಸ್ಥಿರತೆ ಇದೆ ಎಂಬುದಾಗಿ ಪದೇಪದೆ ಹೇಳುತ್ತಿದ್ದಾರೆ. ಆದರೆ, ಅಂತಹ ವಂದತಿ ಹಬ್ಬಿಸುವವರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ಈ ಸರ್ಕಾರ ಅಧಿಕಾರ ಪೂರ್ಣಗೊಳಿಸುವ ಜತೆಗೆ ಮುಂದಿನ ಲೋಕಸಭೆ ಚುನಾವಣೆಯಲ್ಲೂ ಎನ್‌ಡಿಎ ಅಧಿಕಾರಕ್ಕೆ ಬರಲಿದೆ. ಹಾಗಾಗಿ, ಈಗಿರುವ ಪ್ರತಿಪಕ್ಷಗಳು ಮುಂದೆಯೂ ಪ್ರತಿಪಕ್ಷದಲ್ಲಿಯೇ ಕೂರಲಿವೆ” ಎಂದು ತಿಳಿಸಿದರು.

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 303 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಕ್ಷೇತ್ರಗಳು 240ಕ್ಕೆ ಇಳಿಕೆಯಾದವು. ಆದರೂ, ಬಿಜೆಪಿಯು ಟಿಡಿಪಿ ಹಾಗೂ ಜೆಡಿಯು ಬೆಂಬಲದಿಂದ ಅಧಿಕಾರ ಹಿಡಿದಿದೆ. ಕಾಂಗ್ರೆಸ್‌ ಈ ಬಾರಿ ತನ್ನ ಕ್ಷೇತ್ರಗಳನ್ನು 99ಕ್ಕೆ ಏರಿಕೆ ಮಾಡಿಕೊಂಡಿದೆ. ಇದರಿಂದಾಗಿ ಇಂಡಿಯಾ ಒಕ್ಕೂಟದ ಬಲ ಹೆಚ್ಚಾಗಲಿದೆ.

ಇದನ್ನೂ ಓದಿ: Amit Shah: ಕಾಶ್ಮೀರದಲ್ಲಿ ಒಬ್ಬನೇ ಒಬ್ಬ ಉಗ್ರ ಉಳಿಯಬಾರದು; ಖಡಕ್‌ ಆದೇಶ ಕೊಟ್ಟ ಅಮಿತ್‌ ಶಾ

Continue Reading
Advertisement
Kiran Raj Ronny releasing on August 30th
ಸ್ಯಾಂಡಲ್ ವುಡ್1 min ago

Actor Kiran Raj: ಕಿರಣ್‌ರಾಜ್‌ `ರಾನಿ’ ಸಿನಿಮಾಗೆ ಯು/ಎ ಸರ್ಟಿಫಿಕೇಟ್; ತೆರೆಗೆ ಯಾವಾಗ?

Paris Olympics 2024
ಪ್ರಮುಖ ಸುದ್ದಿ2 mins ago

Bikini vs : Hijab : ಸ್ಪೇನ್​, ಈಜಿಪ್ಟ್​ ನಡುವಿನ ಬೀಚ್ ವಾಲಿಬಾಲ್ ಪಂದ್ಯದ ವೇಳೆ ಕಿಡಿ ಹಚ್ಚಿದ ಬಿಕಿನಿ ವರ್ಸಸ್ ಹಿಜಾಬ್​ ಚರ್ಚೆ

Cable Operators
ಸಿನಿಮಾ2 mins ago

Cable vs Ott: ಒಟಿಟಿ ಪೈಪೋಟಿ; ಕೇಬಲ್‌ ಟಿವಿ ವೀಕ್ಷಕರ ಸಂಖ್ಯೆ 12 ಕೋಟಿಯಿಂದ 9 ಕೋಟಿಗೆ ಇಳಿಕೆ!

Paris Olympics: Lakshya Sen lost in the semi-final
ಕ್ರೀಡೆ25 mins ago

Paris Olympics: ಸೆಮಿ ಫೈನಲ್​ನಲ್ಲಿ ಸೋಲು ಕಂಡ ಲಕ್ಷ್ಯ ಸೇನ್‌; ಕಂಚಿಗೆ ಸ್ಪರ್ಧೆ

Road Accident
ಬೆಂಗಳೂರು35 mins ago

Road Accident : ಚಲಿಸುತ್ತಿದ್ದ ಬೈಕ್‌ಗೆ ಲಾರಿ ಡಿಕ್ಕಿ; ಪತಿ ಸಾವು, ಪತ್ನಿ ಕಾಲುಗಳು ಕಟ್‌, ಮಗು ಪಾರು

Ranveer Singh mimics Orry funny interactions
ಬಾಲಿವುಡ್36 mins ago

Ranveer Singh: ಓರಿಯಂತೆ ನಟನೆ ಮಾಡಿದ ರಣವೀರ್‌ ಸಿಂಗ್‌; ವಿಡಿಯೊ ವೈರಲ್‌!

Paris Olympic 2024
ಪ್ರಮುಖ ಸುದ್ದಿ42 mins ago

Paris Olympics 2024 : ಪೋಲ್ ವಾಲ್ಟ್ ‌ಪಟುವಿಗೆ ಮರ್ಮಾಘಾತ! ಪದಕ ತಪ್ಪಿಸಿದ ಮರ್ಮಾಂಗ! ವಿಡಿಯೊ ನೋಡಿ

Zameer Ahmed Khan
ಕರ್ನಾಟಕ43 mins ago

Zameer Ahmed Khan: ಎಚ್‌ಡಿಕೆ ಪ್ಯಾಂಟ್‌ನಲ್ಲಿ ಖಾಕಿ ಚೆಡ್ಡಿ ಇದೆ, ಅವರ ಆಸ್ತಿಯಿಂದ 3 ಬಜೆಟ್‌ ಮಾಡಬಹುದು ಎಂದ ಜಮೀರ್‌

Rahul Gandhi
ದೇಶ47 mins ago

Rahul Gandhi: ರಾಹುಲ್‌ ಗಾಂಧಿಯನ್ನು ಬಂಧಿಸಿದರೆ ಬಿಜೆಪಿ ಶವಪೆಟ್ಟಿಗೆ ಸೇರೋದು ಖಚಿತ; ಸಿಂಘ್ವಿ ಎಚ್ಚರಿಕೆ

Viral Video
ವೈರಲ್ ನ್ಯೂಸ್59 mins ago

Viral Video: ಉ.ಪ್ರ ಪೊಲೀಸರ ʼಟ್ರೀಟ್‌‌ಮೆಂಟ್ʼ ಹೇಗಿತ್ತು ನೋಡಿ! ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಿದ್ದ ಪುಂಡರು

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ3 hours ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 day ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ5 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ5 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ6 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ6 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌