Wayanad Landslide: ವಯನಾಡು ದುರಂತ: 6 ದಿನಗಳ ಬಳಿಕ ಒಡತಿಯನ್ನು ಕಂಡ ಶ್ವಾನದ ಸಂಭ್ರಮ ಹೇಗಿದೆ ನೋಡಿ - Vistara News

ದೇಶ

Wayanad Landslide: ವಯನಾಡು ದುರಂತ: 6 ದಿನಗಳ ಬಳಿಕ ಒಡತಿಯನ್ನು ಕಂಡ ಶ್ವಾನದ ಸಂಭ್ರಮ ಹೇಗಿದೆ ನೋಡಿ

Wayanad Landslide: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತಕ್ಕೆ 360ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಅವಶೇಷಗಳಡಿ ಸಿಲುಕಿದವರನ್ನು, ನಾಪತ್ತೆಯಾದವರನ್ನು ಹುಡುಕುವ ಕಾರ್ಯ ಭರದಿಂದ ಸಾಗುತ್ತಿದೆ. ಈ ಮಧ್ಯೆ ದುರಂತ ನಡೆದು 6 ದಿನಗಳಿಂದ ಅಲೆದಾಡುತ್ತಿದ್ದ ಸಾಕುನಾಯಿಯೊಂದು ತನ್ನವರನ್ನು ಪತ್ತೆ ಹಚ್ಚಿ ಸಂತಸ ವ್ಯಕ್ತಪಡಿಸಿದ ಹೃದಯಸ್ಪರ್ಶಿ ಘಟನೆಯೂ ನಡೆದಿದೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ವಿಡಿಯೊ ನೀವೂ ನೋಡಿ.

VISTARANEWS.COM


on

Wayanad Landslide
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತಿರುವನಂತಪುರಂ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತಕ್ಕೆ 360ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ನೂರಾರು ಮಂದಿ ನಾಪತ್ತೆಯಾಗಿದ್ದಾರೆ (Wayanad Landslide). ಅವಶೇಷಗಳಡಿ ಸಿಲುಕಿದವರನ್ನು, ನಾಪತ್ತೆಯಾದವರನ್ನು ಹುಡುಕುವ ಕಾರ್ಯ ಭರದಿಂದ ಸಾಗುತ್ತಿದೆ. ಈ ಮಹಾನ್‌ ಕಾರ್ಯಕ್ಕೆ ಸೇನೆಯೂ ಕೈ ಜೋಡಿದೆ. ಜತೆಗೆ ಶ್ವಾನದಳದ ಮೂಲಕವೂ ಕಾರ್ಯಾಚರಣೆ ನಡಯುತ್ತಿದೆ. ಈ ಮಧ್ಯೆ ದುರಂತ ನಡೆದು 6 ದಿನಗಳಿಂದ ಅಲೆದಾಡುತ್ತಿದ್ದ ಸಾಕುನಾಯಿಯೊಂದು ತನ್ನವರನ್ನು ಪತ್ತೆ ಹಚ್ಚಿ ಸಂತಸ ವ್ಯಕ್ತಪಡಿಸಿದ ಹೃದಯಸ್ಪರ್ಶಿ ಘಟನೆಯೂ ನಡೆದಿದೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ (Viral Video).

ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ವಯನಾಡಿನ ಮೆಪ್ಪಾಡಿಯಲ್ಲಿ ಜುಲೈ 30ರ ಮುಂಜಾನೆ ಸುಮಾರು 2 ಗಂಟೆ ಮತ್ತು 4 ಗಂಟೆಗೆ ನಡೆದ ಭೀಕರ ಭೂಕುಸಿತದಿಂದ ಮಣ್ಣಿನ ರಾಶಿ, ಕಲ್ಲು ಬಂಡೆ, ಮರಗಳ ದಿಮ್ಮಿ ತೇಲಿ ಬಂದು ಇಡೀ ಊರನ್ನೇ ಮುಚ್ಚಿ ಹಾಕಿದೆ. ಜತೆಗೆ ನದಿಯೂ ಮೇರೆ ಮೀರಿ, ಪಥ ಬದಲಾಯಿಸಿ ಹರಿದು ಇನ್ನಷ್ಟು ನಾಶ ನಷ್ಟಕ್ಕೆ ಕಾರಣವಾಗಿದೆ.

ಈ ಭೀಕರ ದುರಂತದಿಂದ ಪಾರಾದವರನ್ನು ಸುರಕ್ಷಿತ ಸ್ಥಳದಲ್ಲಿ ತೆರೆಯಲಾದ ನಿರಾಶ್ರಿತರ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಂತಹವರ ಪೈಕಿ ಈ ಶ್ವಾನದ ಮನೆಯವರೂ ಇದ್ದರು. ಇವರ ಮನೆ ಕುಸಿದು ಬಿದ್ದಿತ್ತು. ಹೀಗಾಗಿ ಅವರು ಸುರಕ್ಷಿತ ಜಾಗಕ್ಕೆ ತೆರಳಿದ್ದರು. ಆದರೆ ಆ ವೇಳೆ ಶ್ವಾನ ಇವರೊಂದಿಗೆ ಇರಲಿಲ್ಲ.

ಇತ್ತ ಮನೆಯ ಬಳಿ ಬಂದ ಶ್ವಾನ ತನ್ನವರನ್ನು ಕಾಣದೆ ಕಂಗಾಲಾಗಿತ್ತು. ಮನೆಯವರನ್ನು ಹುಡುಕುತ್ತ ಅಲ್ಲೇ ನೋವಿನಿಂದ ಓಡಾಡಿಕೊಂಡಿತ್ತು. ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಕಾರಣ ಮತ್ತು ಪ್ರತಿಕೂಲ ಹವಾಮಾನ ಇದ್ದುದರಿಂದ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಸ್ವಯಂ ಸೇವಕರಲ್ಲದವರು ಆಗಮಿಸುವಂತಿರಲಿಲ್ಲ. ಹೀಗಾಗಿ ಈ ಶ್ವಾನದ ವಾರಸುದಾರರು ಮನೆ ಇದ್ದ ಜಾಗಕ್ಕೆ ಬಂದಿರಲಿಲ್ಲ. ಇತ್ತ ಸ್ವಯಂ ಸೇವಕರು ಆಹಾರ ನೀಡುತ್ತಿದ್ದರೂ ಮನೆಯವರನ್ನು ಕಾಣದೆ ಶ್ವಾನ ಯಾವುದನ್ನೂ ಮುಟ್ಟುತ್ತಿರಲಿಲ್ಲ. ದಿನ ಅತ್ತ ಇತ್ತ ಓಡಾಡಿ ತನ್ನವರಿಗಾಗಿ ಶೋಧ ಕಾರ್ಯ ನಡೆಸುತ್ತಲೇ ಇತ್ತು.

ಇದೀಗ ಮಳೆ ಕಡಿಮೆಯಾಗಿದೆ. ಶೋಧ ಕಾರ್ಯವೂ ಬಹುತೇಕ ಪೂರ್ಣಗೊಂಡಿದೆ. ಹೀಗಾಗಿ ಸ್ಥಳೀಯರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಅದರಂತೆ ಭಾನುವಾರ ಈ ಶ್ವಾನದ ಮಾಲಕರು ತಮ್ಮ ಮನೆ ಇರುವ ಜಾಗಕ್ಕೆ ಬಂದಿದ್ದಾರೆ. ಈ ವೇಳೆ ಇವರನ್ನು ನೋಡಿ ಶ್ವಾನದ ಖುಷಿಗೆ ಪಾರವೇ ಇಲ್ಲ. ತನ್ನ ಒಡತಿಯನ್ನು ಕಂಡಾಗ ಓಡೋಡಿ ಬಂದು ತಬ್ಬಿಕೊಂಡಿದೆ. ಅವರ ಮೈಮೇಲೆ ಹತ್ತಿ ಬಾಲ ಅಲ್ಲಾಡಿಸಿ ಖುಷಿಯನ್ನು ವ್ಯಕ್ತಪಡಿಸಿದೆ. ಮಾಲಕಿಯೂ ಅಳಬೇಡ ಎಂದು ಹೇಳಿ ಅದನ್ನು ಸಂತೈಸಿದ್ದಾರೆ. ಶ್ವಾನದ ಪ್ರೀತಿ ಕಂಡು ಅಲ್ಲಿದ್ದವರು ಒಂದು ಕ್ಷಣ ಮೂಕರಾಗಿದ್ದಾರೆ.

ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಶ್ವಾನದ ಮಮತೆಗೆ ಹಲವರು ಭಾವುಕರಾಗಿದ್ದಾರೆ. ಸಾವಿರಾರು ಮಂದಿ ಲೈಕ್‌ ಬಟನ್‌ ಒತ್ತಿದ್ದಾರೆ.

ಇದನ್ನೂ ಓದಿ: Wayanad landslide: ವಯನಾಡ್‌ ಭೂಕುಸಿತ ಸಂತ್ರಸ್ತರಿಗೆ 100 ಮನೆ ನಿರ್ಮಾಣ: ಕೇರಳ ಸಿಎಂಗೆ ಸಿದ್ದರಾಮಯ್ಯ ಭರವಸೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

AAP VS Delhi LG: ಆಪ್‌ಗೆ ಹಿನ್ನಡೆ; ದಿಲ್ಲಿ ನಗರಸಭೆಗೆ ಸದಸ್ಯರನ್ನು ನೇಮಿಸುವ ಎಲ್‌ಜಿ ಅಧಿಕಾರ ಎತ್ತಿಹಿಡಿದ ಸುಪ್ರೀಂ ಕೋರ್ಟ್

AAP VS Delhi LG: ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್, ನ್ಯಾ. ಜೆಬಿ ಪರ್ದಿವಾಲಾ, ನ್ಯಾ. ಪಿ.ಎಸ್ ನರಸಿಂಹ ಅವರಿದ್ದ ಪೀಠ ತೀರ್ಪು ಪ್ರಕಟಿಸಿದೆ. ಈ ವಿಷಯದಲ್ಲಿ ರಾಜ್ಯ ಸಚಿವ ಸಂಪುಟದ ನೆರವು ಮತ್ತು ಸಲಹೆಗೆ ಎಲ್‌ಜಿ ಬದ್ಧರಾಗಿರಬೇಕಿಲ್ಲ. ಎಲ್‌ಜಿ ಅವರ “ಕಾನೂನುಬದ್ಧ ಕರ್ತವ್ಯ”ದ ಪ್ರಕಾರ ಆಲ್ಡರ್‌ಮೆನ್‌ಗಳ ನೇಮಕವಾಗಿದೆ ಎಂದು ನ್ಯಾಯಪೀಠ ಹೇಳಿದೆ.

VISTARANEWS.COM


on

Koo

ಬೆಂಗಳೂರು: ರಾಜ್ಯ ಸಚಿವ ಸಂಪುಟವನ್ನು (Cabinet) ಸಮಾಲೋಚಿಸದೆ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (Delhi Municipal Corporation- ಎಂಸಿಡಿ)ಗೆ ಹತ್ತು ಆಲ್ಡರ್‌ಮನ್‌ಗಳನ್ನು (ನಗರಸಭೆ ಸದಸ್ಯ) ನೇಮಿಸಿರುವ ಲೆಫ್ಟಿನೆಂಟ್ ಗವರ್ನರ್ (Leftinant Governor) ಕ್ರಮವನ್ನು ಸುಪ್ರೀಂ ಕೋರ್ಟ್ (Supreme Court) ಎತ್ತಿಹಿಡಿದಿದೆ. ಹೀಗಾಗಿ, ಎಲ್‌ಜಿ (LG) ನಡೆಯನ್ನು ಪ್ರಶ್ನಿಸಿದ್ದ ಆಮ್ ಆದ್ಮಿ ಪಕ್ಷ (Aam Admi Party- ಎಎಪಿ) ನೇತೃತ್ವದ ದೆಹಲಿ ಸರ್ಕಾರಕ್ಕೆ (AAP VS Delhi LG) ಹಿನ್ನಡೆಯಾಗಿದೆ.

ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್, ನ್ಯಾ. ಜೆಬಿ ಪರ್ದಿವಾಲಾ, ನ್ಯಾ. ಪಿ.ಎಸ್ ನರಸಿಂಹ ಅವರಿದ್ದ ಪೀಠ ತೀರ್ಪು ಪ್ರಕಟಿಸಿದೆ. ಈ ವಿಷಯದಲ್ಲಿ ರಾಜ್ಯ ಸಚಿವ ಸಂಪುಟದ ನೆರವು ಮತ್ತು ಸಲಹೆಗೆ ಎಲ್‌ಜಿ ಬದ್ಧರಾಗಿರಬೇಕಿಲ್ಲ. ಎಲ್‌ಜಿ ಅವರ “ಕಾನೂನುಬದ್ಧ ಕರ್ತವ್ಯ”ದ ಪ್ರಕಾರ ಆಲ್ಡರ್‌ಮೆನ್‌ಗಳ ನೇಮಕವಾಗಿದೆ ಎಂದು ನ್ಯಾಯಪೀಠ ಹೇಳಿದೆ.

1993ರಲ್ಲಿ ತಿದ್ದುಪಡಿ ಮಾಡಲಾದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಡಿಎಂಸಿ) ಕಾಯಿದೆಯ ಸೆಕ್ಷನ್ 3(3)(ಬಿ)(ಐ) ಪ್ರಕಾರ ಎಲ್‌ಜಿಗೆ ಆಲ್ಡರ್‌ಮೆನ್‌ಗಳನ್ನು ನೇಮಿಸಲು ಅಧಿಕಾರ ಇರುತ್ತದೆ ಎಂದು ಪೀಠ ಸ್ಪಷ್ಟಪಡಿಸಿದೆ. ಗವರ್ನರ್‌ಗೆ ನೀಡಲಾದ ಈ ಅಧಿಕಾರ ಸಾಂವಿಧಾನಿಕ ಅಧಿಕಾರದ ಅತಿಕ್ರಮಣವಲ್ಲ ಎಂದಿದೆ.

ಕಳೆದ ವರ್ಷ ಮೇ 17ರಂದು ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಆಲ್ಡರ್‌ಮೆನ್‌ಗಳನ್ನು ನಾಮನಿರ್ದೇಶನ ಮಾಡಲು ಎಲ್‌ಜಿ ಅಧಿಕಾರವನ್ನು ನೀಡುವುದು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಎಂಸಿಡಿಯನ್ನು ಅಸ್ಥಿರಗೊಳಿಸಬಹುದು ಎಂದು ಅದು ಹಿಂದೆ ಎಚ್ಚರಿಸಿತ್ತು. ಎಂಸಿಡಿ 250 ಚುನಾಯಿತ ಮತ್ತು 10 ನಾಮನಿರ್ದೇಶಿತ ಸದಸ್ಯರನ್ನು ಹೊಂದಿದೆ.

“ಎಂಸಿಡಿಯಲ್ಲಿ ವಿಶೇಷ ವ್ಯಕ್ತಿಗಳ ನಾಮನಿರ್ದೇಶನದ ಅಧಿಕಾರವನ್ನು ಎಲ್‌ಜಿಗೆ ನೀಡುವುದು ಎಂದರೆ ಅವರು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಮುನ್ಸಿಪಲ್ ಸಮಿತಿಗಳನ್ನು ಅಸ್ಥಿರಗೊಳಿಸಿದಂತಾಗಬಹುದು. ಏಕೆಂದರೆ ಆಲ್ಡರ್‌ಮೆನ್ ಸಹ ಮತದಾನದ ಅಧಿಕಾರವನ್ನು ಹೊಂದಿರುತ್ತಾರೆ” ಎಂದು ಉನ್ನತ ನ್ಯಾಯಾಲಯ ಹಿಂದೆ ಹೇಳಿತ್ತು.

ಡಿಸೆಂಬರ್ 2022ರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) 134 ವಾರ್ಡ್‌ಗಳನ್ನು ಪೌರ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಿತ್ತು. ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೋಲಿಸಿತ್ತು. ಎಂಸಿಡಿ ಮೇಲಿನ ಬಿಜೆಪಿಯ 15 ವರ್ಷಗಳ ನಿಯಂತ್ರಣವನ್ನು ಕೊನೆಗೊಳಿಸಿತು. ಬಿಜೆಪಿ 104 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಕಾಂಗ್ರೆಸ್ 9 ಸ್ಥಾನಗಳನ್ನು ಗಳಿಸಿದೆ.

ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರು, ನಾಮನಿರ್ದೇಶನ ಮಾಡುವವರು ನಗರಾಡಳಿತದ ಸಹಾಯ ಮತ್ತು ಸಲಹೆಯನ್ನು ಅನುಸರಿಸಬೇಕು, ಅದು 30 ವರ್ಷಗಳ ರೂಢಿ ಎಂದರು. ಆದರೆ ದೀರ್ಘಕಾಲದ ರೂಢಿ ಇದ್ದ ಮಾತ್ರಕ್ಕೆ ಅದು ಸರಿ ಎಂದಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಪ್ರತಿಪಾದಿಸಿದರು.

ಇದನ್ನೂ ಓದಿ: Arvind Kejriwal: ಅರವಿಂದ್‌ ಕೇಜ್ರಿವಾಲ್‌ಗೆ ಮತ್ತೊಂದು ಸಂಕಷ್ಟ; ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸಿದ ಸಿಬಿಐ

Continue Reading

ರಾಜಕೀಯ

Parliament Session: ವಕ್ಫ್ ಕಾಯ್ದೆ 1995ರ ತಿದ್ದುಪಡಿ ಮಸೂದೆ ಇಂದು ಮಂಡನೆ ಸಾಧ್ಯತೆ; ಅಧಿವೇಶನದ Live ಇಲ್ಲಿ ನೋಡಿ

Parliament Session: ಸಂಸತ್‌ನಲ್ಲಿ ನಡೆಯುತ್ತಿರುವ ಬಜೆಟ್‌ ಅಧಿವೇಶನ ಎರಡು ದಿನಗಳ ಬಿಡುವಿನ ಬಳಿಕ ಇಂದು ಪುನರಾರಂಭವಾಗಲಿದೆ. ಕೇಂದ್ರ ಸರ್ಕಾರವು ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದು, ಇಂದು ಸಂಸತ್‌ನಲ್ಲಿ ವಿಧೇಯಕ ಮಂಡಿಸುವ ಸಾಧ್ಯತೆ ಇದೆ. ಈಗಾಗಲೇ ಇದಕ್ಕೆ ವಿರೋಧ ವ್ಯಕ್ತವಾಗಿದ್ದು, ಸಂಸತ್‌ನಲ್ಲಿ ಕೋಲಾಹಲ ನಡೆಯಲಿದೆ.

VISTARANEWS.COM


on

Parliament Session
Koo

ನವದೆಹಲಿ: ಸಂಸತ್‌ನಲ್ಲಿ ನಡೆಯುತ್ತಿರುವ ಬಜೆಟ್‌ ಅಧಿವೇಶನ (Parliament Session) ಎರಡು ದಿನಗಳ ಬಿಡುವಿನ ಬಳಿಕ ಇಂದು ಪುನರಾರಂಭವಾಗಲಿದ್ದು, ಕಾವೇರಿದ ಚರ್ಚೆಗೆ ಉಭಯ ಸದನಗಳು ಸಾಕ್ಷಿಯಾಗಲಿವೆ. ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರವು ವಕ್ಫ್‌ ಕಾಯ್ದೆಗೆ (Waqf Act) ತಿದ್ದುಪಡಿ ತರಲು ಮುಂದಾಗಿದ್ದು, ಇಂದು ಸಂಸತ್‌ನಲ್ಲಿ ವಿಧೇಯಕ ಮಂಡಿಸುವ ಸಾಧ್ಯತೆ ಇದೆ. ಈಗಾಗಲೇ ಇದಕ್ಕೆ ವಿರೋಧ ವ್ಯಕ್ತವಾಗಿದ್ದು, ಸಂಸತ್‌ನಲ್ಲಿ ಕೋಲಾಹಲ ನಡೆಯಲಿದೆ.

ಜತೆಗೆ ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಧನವಿನಿಯೋಗ ಮಸೂದೆ ಮತ್ತು ಹಣಕಾಸು ಮಸೂದೆಯನ್ನು ಮಂಡಿಸಲಿದ್ದಾರೆ. ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಗೋವಾ ವಿಧಾನಸಭೆಯಲ್ಲಿ ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಮೀಸಲಾತಿ ನೀಡುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಪ್ರಸ್ತುತ ಗೋವಾ ವಿಧಾನಸಭೆಯಲ್ಲಿ ಎಸ್‌ಟಿ ಸಮುದಾಯಕ್ಕೆ ಯಾವುದೇ ಸ್ಥಾನಗಳನ್ನು ಕಾಯ್ದಿರಿಸಲಾಗಿಲ್ಲ.

ರಾಜ್ಯಸಭೆಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ತೈಲ ಕ್ಷೇತ್ರಗಳು (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಮಸೂದೆಯನ್ನು ಪರಿಚಯಿಸಲಿದ್ದಾರೆ.

ಚರ್ಚೆ ಹುಟ್ಟು ಹಾಕಿದ ವಕ್ಫ್‌ ಕಾಯ್ದೆ ತಿದ್ದುಪಡಿ ಪ್ರಸ್ತಾವ

ಸದ್ಯ ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರಲು ಮುಂದಾದ ಕೇಂದ್ರ ಸರ್ಕಾರದ ನಿರ್ಧಾರ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ. ʼʼಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ತರಲು ಕಾನೂನನ್ನು ತಿದ್ದುಪಡಿ ಮಾಡಬೇಕೆಂದು ಮುಸ್ಲಿಂ ಸಮುದಾಯದಿಂದ ಬೇಡಿಕೆಗಳು ಬಂದಿವೆ. ಪ್ರಸ್ತುತ ವಕ್ಫ್ ಮಂಡಳಿಗಳು ತೆಗೆದುಕೊಂಡ ನಿರ್ಧಾರವನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ ಎನ್ನುವ ನಿಯಮವಿದೆ. ಈಗ ತಿದ್ದುಪಡಿ ಮಸೂದೆಯು ಅದನ್ನು ಸರಿಪಡಿಸಲು ಪ್ರಯತ್ನಿಸುತ್ತದೆ” ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಕಾಯ್ದೆಗೆ ಏನೆಲ್ಲ ತಿದ್ದುಪಡಿ?

ಯಾವುದಾದರೂ ಒಂದು ಆಸ್ತಿಯನ್ನು ವಕ್ಫ್‌ ಮಂಡಳಿಗೆ ಸೇರಿಸಲು ಪಾರದರ್ಶಕ ನಿಯಮಗಳ ಪಾಲನೆಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅದರಲ್ಲೂ, ಯಾವುದಾದರೂ ಒಂದು ಆಸ್ತಿಯನ್ನು ವಕ್ಫ್‌ ಆಸ್ತಿ ಎಂದು ಘೋಷಿಸುವ ಪರಮಾಧಿಕಾರ ತೆಗೆಯಲಿದೆ. ಇನ್ನು, ವಕ್ಫ್‌ ಆಸ್ತಿಗಳ ಮೇಲೆ ನಿಗಾ ಇರಿಸುವ ಅಧಿಕಾರವನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಇದುವರೆಗೆ ವಕ್ಫ್‌ ಮಂಡಳಿಯಲ್ಲಿ ಹೆಣ್ಣುಮಕ್ಕಳ ಸಹಭಾಗಿತ್ವವೇ ಇರಲಿಲ್ಲ. ಹಾಗಾಗಿ, ಪ್ರತಿಯೊಂದು ರಾಜ್ಯಗಳ ವಕ್ಫ್‌ ಮಂಡಳಿಗಳಲ್ಲಿ ಹೆಣ್ಣುಮಕ್ಕಳಿಗೂ ಸ್ಥಾನ ನೀಡುವುದು. ರಾಜ್ಯಗಳ ಮಂಡಳಿಗಳಲ್ಲಿ ಕನಿಷ್ಠ ಇಬ್ಬರು ಮಹಿಳೆಯರಿಗೆ ಸ್ಥಾನ ನೀಡುವುದು. ಕೇಂದ್ರ ಸಮಿತಿಗಳಲ್ಲೂ ಇಬ್ಬರೂ ಹೆಣ್ಣುಮಕ್ಕಳು ಇರಬೇಕು ಎಂಬ ನಿಯಮ ಜಾರಿಗೆ ತರುವುದು. ಮುಸ್ಲಿಮರು ಕೂಡ ವಕ್ಫ್‌ ಆಸ್ತಿಯನ್ನು ಸೃಷ್ಟಿಸಬಹುದು ಎಂಬ ನಿಯಮ ಜಾರಿಗೊಳಿಸುವುದು ಸೇರಿ ಹಲವು ತಿದ್ದುಪಡಿಗಳಿಗೆ ಪ್ರಸ್ತಾವನೆ ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಾರ್ವಜನಿಕ ಲೆಕ್ಕಪತ್ರ ಸಮಿತಿ ರಚನೆ

ಅದೇ ರೀತಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ (Public Accounts Committee) ಸೇರಿದಂತೆ ಪ್ರಮುಖ ಸಂಸದೀಯ ಸಮಿತಿಗಳು ರಚಿಸಲಾಗುತ್ತಿದೆ. ಕಾಂಗ್ರೆಸ್‌ನ ಹಿರಿಯ ನಾಯಕ ಕೆ.ಸಿ.ವೇಣುಗೋಪಾಲ್, ಡಿಎಂಕೆ ನಾಯಕ ಟಿ.ಆರ್.ಬಾಲು, ಬಿಜೆಪಿ ಮುಖಂಡರಾದ ಅನುರಾಗ್ ಠಾಕೂರ್, ರವಿಶಂಕರ್ ಪ್ರಸಾದ್, ತೇಜಸ್ವಿ ಸೂರ್ಯ, ಟಿಎಂಸಿ ನಾಯಕ ಸೌಗತ ರೇ ಮತ್ತು ಎಸ್‌ಪಿ ಮುಖಂಡ ಧರ್ಮೇಂದ್ರ ಯಾದವ್ ಪಿಎಸಿಯ ಸದಸ್ಯರಾಗಿದ್ದಾರೆ.

ಪಿಎಸಿ ಹೊರತುಪಡಿಸಿ ಸಾರ್ವಜನಿಕ ಉದ್ಯಮಗಳ ಸಮಿತಿ, ಅಂದಾಜುಗಳ ಸಮಿತಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿ, ಲಾಭದಾಯಕ ಹುದ್ದೆಯ ಜಂಟಿ ಸಮಿತಿ ಮತ್ತು ಇತರ ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿಯನ್ನು ಚುನಾವಣೆ ಇಲ್ಲದೆ ರಚಿಸಲಾಗಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಶೀಘ್ರದಲ್ಲೇ ಸಮಿತಿಗಳ ಅಧ್ಯಕ್ಷರನ್ನು ನಾಮನಿರ್ದೇಶನ ಮಾಡುವ ನಿರೀಕ್ಷೆಯಿದೆ.

ಇದನ್ನೂ ಓದಿ: Waqf Act: ವಕ್ಫ್‌ ಮಂಡಳಿ ಪರಮಾಧಿಕಾರಕ್ಕೆ ಮೋದಿ ಮೂಗುದಾರ; ಏನೆಲ್ಲ ತಿದ್ದುಪಡಿ? 9.4 ಲಕ್ಷ ಎಕರೆ ಯಾರ ಪಾಲು?

Continue Reading

ದೇಶ

Electrocution: ಡಿಜೆ ವಾಹನಕ್ಕೆ ಹೈಟೆನ್ಷನ್‌ ವಿದ್ಯುತ್‌ ತಂತಿ ತಗುಲಿ ಆಘಾತ; 8 ಮಂದಿ ಭಕ್ತರ ಸಾವು

Electrocution: ಬಿಹಾರದ ಹಾಜಿಪುರ ಜಿಲ್ಲೆಯ ಸುಲ್ತಾನ್‌ಪುರ ಗ್ರಾಮದಲ್ಲಿ ಸೋಮವಾರ ಮುಂಜಾನೆ ಡಿಜೆ ವಾಹನಕ್ಕೆ ವಿದ್ಯುತ್‌ ತಂತಿ ತಗುಲಿ ವಿದ್ಯುದಾಘಾತದಿಂದ ಸುಮಾರು 8 ಮಂದಿ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಹರಿಹರನಾಥ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರ ಮೆರವಣಿಗೆ ಸಂದರ್ಭದಲ್ಲಿ ಈ ಅವಘಡ ನಡೆದಿದೆ.

VISTARANEWS.COM


on

Electrocution
Koo

ಪಾಟ್ನಾ: ಬಿಹಾರದ ಹಾಜಿಪುರ ಜಿಲ್ಲೆಯ ಸುಲ್ತಾನ್‌ಪುರ ಗ್ರಾಮದಲ್ಲಿ ಸೋಮವಾರ ಮುಂಜಾನೆ ಡಿಜೆ ವಾಹನಕ್ಕೆ ವಿದ್ಯುತ್‌ ತಂತಿ ತಗುಲಿ ವಿದ್ಯುದಾಘಾತದಿಂದ (Electrocution) ಸುಮಾರು 8 ಮಂದಿ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಹರಿಹರನಾಥ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರ ಮೆರವಣಿಗೆ ಸಂದರ್ಭದಲ್ಲಿ ಈ ಅವಘಡ ನಡೆದಿದೆ. ಮೃತರನ್ನು ಕನ್ವರ್‌ ಯಾತ್ರಾರ್ಥಿಗಳು ಎಂದು ಗುರುತಿಸಲಾಗಿದೆ.

ಮೃತರು ಹಾಜಿಪುರದ ಕೈಗಾರಿಕಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬರುವ ಸುಲ್ತಾನ್‌ಪುರದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಹೇಗಾಯ್ತು ದುರಂತ?

ಶ್ರಾವಣ ಮಾಸದ ಹಿನ್ನಲೆಯಲ್ಲಿ ಈ ಗ್ರಾಮದ ಯುವಕರು ಪ್ರತಿ ಸೋಮವಾರ ಹರಿಹರನಾಥ ದೇವಸ್ಥಾನಕ್ಕೆ ಜಲಾಭಿಷೇಕ ಮಾಡಲು ಮೆರವಣಿಗೆ ಮೂಲಕ ತೆರಳುವುದು ವಾಡಿಕೆ. ಅದರಂತೆ ಆಗಸ್ಟ್‌ 5ರಂದೂ (ಇಂದು) ಈ ಯುವಕರ ತಂಡ ಟ್ರ್ಯಾಕ್ಟರ್‌ ಟ್ರಾಲಿಗೆ ದೊಡ್ಡ ದೊಡ್ಡ ಸೌಂಡ್‌ ಬಾಕ್ಸ್‌ ಅಳವಡಿಸಿ ಡಿಜೆ ವ್ಯವಸ್ಥೆ ಮಾಡಿದ್ದರು. ಈ ಟ್ರ್ಯಾಕ್ಟರ್‌ ಚಲಿಸುವಾಗ ರಸ್ತೆಯಲ್ಲಿದ್ದ ಹೈಟೆನ್ಷನ್‌ ತಂತಿಗೆ ತಗುಲಿ ಅಪಘಡ ಸಂಭವಿಸಿದೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ʼʼವೈಶಾಲಿ ಜಿಲ್ಲೆಯ ಹಾಜಿಪುರ-ಜಂಡಾಹಾ ರಸ್ತೆಯ ನೈಪರ್ ಗೇಟ್ ಬಳಿಯ ಚೌಹರ್ಮಲ್ ಸ್ಥಳದಲ್ಲಿ ಈ ಅಪಘಾತ ಸಂಭವಿಸಿದೆ. ಮಾಹಿತಿ ಪಡೆದ ಪೊಲೀಸರು ಗಾಯಾಳುಗಳನ್ನು ಹಾಜಿಪುರ ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆʼʼ ಎಂದು ಮೂಲಗಳು ತಿಳಿಸಿವೆ. ಹಾಜಿಪುರದ ಪಹೇಲಾಜಾ ಘಾಟ್‌ನಿಂದ ಜಲಾಭಿಷೇಕಕ್ಕೆ ಅಗತ್ಯವಾದ ನೀರು ಸಂಗ್ರಹಿಸಿ ಬಾಬಾ ಹರಿಹರನಾಥ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

“ಭಕ್ತರು ಬಾಬಾ ಧಾಮ್‌ಗೆ ತೆರಳುತ್ತಿದ್ದ ಡಿಜೆ ಟ್ರಾಲಿ 11,000 ವೋಲ್ಟ್ ತಂತಿಯ ಸಂಪರ್ಕಕ್ಕೆ ಬಂದ ಕಾರಣ ಶಾಕ್‌ ಹೊಡೆದು ಎಂಟು ಜನರು ಸಾವನ್ನಪ್ಪಿದ್ದಾರೆ” ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸ್ಥಳೀಯರು ವಿದ್ಯುತ್‌ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿಸದ್ದಾರೆ. ಇಷ್ಟು ದೊಡ್ಡ ಆಘಾತ ನಡೆದರೂ ತಕ್ಷಣ ಸ್ಪಂದಿಸಲಿಲ್ಲ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಆಗಸ್ಟ್ 1ರಂದು ಜಾರ್ಖಂಡ್‌ನಲ್ಲಿಯೂ ಇದೇ ರೀತಿಯ ದುರಂತ ಸಂಭವಿಸಿತ್ತು. ಲತೇಹರ್ ಜಿಲ್ಲೆಯಲ್ಲಿ ವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಐದು ಮಂದಿ ಕನ್ವರ್‌ ಯಾತ್ರಾರ್ಥಿಗಳು ಮೃತಪಟ್ಟಿದ್ದರು. ಮುಂಜಾನೆ 3 ಗಂಟೆ ಸುಮಾರಿಗೆ ಬಾಲುಮಠ್ ಪೊಲೀಸ್ ಠಾಣೆ ಪ್ರದೇಶದ ತಾಮ್ ತಾಮ್ ತೋಲಾ ಬಳಿ ಈ ಘಟನೆ ನಡೆದಿದ್ದು, ದಿಯೋಘರ್‌ನ ಬಾಬಾ ಬೈದ್ಯನಾಥ ದೇವಸ್ಥಾನದಿಂದ ಹಿಂದಿರುಗುತ್ತಿದ್ದಾಗ ಭಕ್ತರಿದ್ದ ವಾಹನವು ಕಂಬಕ್ಕೆ ಡಿಕ್ಕಿ ಹೊಡೆದಿತ್ತು.

ದೇಗುಲದ ಗೋಡೆ ಕುಸಿದು 9 ಮಕ್ಕಳ ದಾರುಣ ಸಾವು

ಭೋಪಾಲ್‌: ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ ದೇವಸ್ಥಾನದಲ್ಲಿ ಗೋಡೆ ಕುಸಿದು 9 ಮಕ್ಕಳು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಶಾಹಪುರದ ಹರ್ದೌಲ್ ಬಾಬಾ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಈ ದಾರುಣ ಘಟನೆ ನಡೆದಿತ್ತು.

ಇದನ್ನೂ ಓದಿ: Waqf Board: ಜಾಮಾ ಮಸೀದಿ ಸೇರಿ ವಕ್ಫ್‌ ಬೋರ್ಡ್‌ಗೆ ಕಾಂಗ್ರೆಸ್‌ ನೀಡಿದ 123 ಆಸ್ತಿ ಸ್ವಾಧೀನಕ್ಕೆ ಕೇಂದ್ರ ಸರ್ಕಾರ ನಿರ್ಧಾರ!

Continue Reading

ಪ್ರಮುಖ ಸುದ್ದಿ

Court Verdict: 31 ವರ್ಷ ಲೈಂಗಿಕ ಸಂಬಂಧ, ನಂತರ ಪುರುಷನ ಮೇಲೆ ರೇಪ್ ಕೇಸ್! ನ್ಯಾಯಾಲಯ ಹೇಳಿದ್ದೇನು ನೋಡಿ

Court Verdict: 31 ವರ್ಷಗಳಿಂದ ಪುರುಷನೊಂದಿಗೆ ಒಪ್ಪಿತ ದೈಹಿಕ ಸಂಬಂಧದಲ್ಲಿದ್ದು, ನಂತರ ಆತನ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿದ ಮಹಿಳೆಯ ದೂರನ್ನು ಬಾಂಬೇ ಹೈಕೋರ್ಟ್‌ ರದ್ದುಗೊಳಿಸಿದೆ.

VISTARANEWS.COM


on

court verdict
Koo

ಮುಂಬಯಿ: 31 ವರ್ಷಗಳಿಂದ ಪುರುಷನೊಂದಿಗೆ ಲೈಂಗಿಕ ಸಂಬಂಧ (Physical relationship) ಹೊಂದಿದ್ದು ನಂತರ ಆತನ ವಿರುದ್ಧ ರೇಪ್‌ ಕೇಸ್‌ (Physical abuse) ದಾಖಲಿಸಿದ ಮಹಿಳೆಯ ದೂರನ್ನು ಬಾಂಬೆ ಹೈಕೋರ್ಟ್ (Bombay High Court Verdict) ರದ್ದುಗೊಳಿಸಿದೆ. 73 ವರ್ಷದ ಪುರುಷನ ಈಕೆ ದೂರು ದಾಖಲಿಸಿದ್ದು, 1987ರಿಂದ 2017ರವರೆಗೆ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಳು.

ಮಹಿಳೆ 2018ರವರೆಗೆ ಯಾವುದೇ ಪ್ರಕರಣವನ್ನು ಪುರುಷನ ವಿರುದ್ಧ ದಾಖಲಿಸಿಲ್ಲ. ಆದ್ದರಿಂದ ಇದು ಒಪ್ಪಿತ ಸಂಬಂಧವಾಗಿದ್ದು, ಇಬ್ಬರ ನಡುವಿನ ಸಂಬಂಧ ಹಳಸಿದಾಗ ದೂರು ದಾಖಲಿಸುವಂತಹ ಪ್ರಕರಣ ಇದಾಗಿದೆ ಎಂದು ನ್ಯಾಯಾಲಯ ಹೇಳಿದೆ. ವರದಿಗಳ ಪ್ರಕಾರ ಮಹಿಳೆ 1987ರಿಂದ ಪುರುಷನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆ ಸಮಯದಲ್ಲಿ, ಪುರುಷನು ಬಲವಂತವಾಗಿ ಲೈಂಗಿಕ ಸಂಬಂಧ ಹೊಂದುವುದಾಗಿ ಮಹಿಳೆಗೆ ಒತ್ತಡ ಹಾಕಿದ್ದ ಎನ್ನಲಾಗಿದೆ.

ಎಫ್‌ಐಆರ್‌ನ ಪ್ರಕಾರ, 1987ರಿಂದ 2017 ರವರೆಗೆ ಕಲ್ಯಾಣ್, ಭಿವಂಡಿ ಮತ್ತು ಇತರ ಸ್ಥಳಗಳ ವಿವಿಧ ಹೋಟೆಲ್‌ಗಳಲ್ಲಿ 31 ವರ್ಷಗಳ ಕಾಲ ಪುರುಷ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈಗಾಗಲೇ ಮದುವೆಯಾಗಿದ್ದ ಪುರುಷ, ಮಹಿಳೆಯನ್ನು ತನ್ನ ಎರಡನೇ ಹೆಂಡತಿ ಎಂದು ಘೋಷಣೆ ಮಾಡಿ ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದನಂತೆ. 1993 ರಲ್ಲಿ ಅವಳ ಕುತ್ತಿಗೆಗೆ ಮಂಗಳಸೂತ್ರ ಕಟ್ಟಿದ್ದನಂತೆ. ಈ ಭರವಸೆಗಳೊಂದಿಗೆ ಆತ ಮಹಿಳೆಯನ್ನು ಬೇರೆಯವರೊಂದಿಗೆ ಮದುವೆಯಾಗದಂತೆ ತಡೆದಿದ್ದನಂತೆ.

1996 ರಲ್ಲಿ ಪುರುಷನಿಗೆ ಹೃದಯಾಘಾತವಾದ ನಂತರ ಮಹಿಳೆ ಆತನ ಕಂಪನಿಯನ್ನು ನೋಡಿಕೊಳ್ಳಲು ಪ್ರಾರಂಭಿಸಿದಳು. ಆದರೆ ನಂತರ ಸೆಪ್ಟೆಂಬರ್ 2017 ರಲ್ಲಿ ಮಹಿಳೆಯ ತಾಯಿಗೆ ಕ್ಯಾನ್ಸರ್ ಪತ್ತೆಯಾಗಿದ್ದರಿಂದ ಮಹಿಳೆ ತನ್ನ ಕೆಲಸಕ್ಕೆ ರಜೆ ಹಾಕಿದಳು. ಕಂಪನಿಗೆ ವಾಪಸ್ ಬಂದಾಗ ಕಂಪನಿ ಸೇರಿದಂತೆ ಕಚೇರಿ ಬಂದ್ ಆಗಿದ್ದನ್ನ ತಿಳಿದುಕೊಂಡಳಂತೆ. ಈ ವೇಳೆ ಆಕೆ ಕಂಪನಿ ಮಾಲೀಕನನ್ನು ಸಂಪರ್ಕಿಸಿದಾಗ ಆತ ಅವಳನ್ನು ಮದುವೆಯಾಗಲು ಮತ್ತು ಭೇಟಿಯಾಗಲು ನಿರಾಕರಿಸಿದನಂತೆ. ಜೊತೆಗೆ ಬ್ಯಾಂಕಿಂಗ್, ಆದಾಯ ತೆರಿಗೆ, ಕಂಪನಿಗೆ ಸಂಬಂಧಿಸಿದ ಒಪ್ಪಂದ ಮತ್ತು ಚಿನ್ನದ ಮಂಗಳಸೂತ್ರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಂಚಿಕೊಳ್ಳಲು ನಿರಾಕರಿಸಿದನಂತೆ.

ಮಹಿಳೆಯ ಆರೋಪಗಳನ್ನು ಕೇಳಿದ ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ನೀಲಾ ಗೋಖಲೆ ನೇತೃತ್ವದ ನ್ಯಾಯಾಲಯವು ವ್ಯಕ್ತಿಯನ್ನು ಅಪರಾಧಿ ಎಂದು ಪರಿಗಣಿಸಲು ನಿರಾಕರಿಸಿತು. ಪ್ರಕರಣವು ಒಮ್ಮತದ ಸಂಬಂಧವನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಕಕ್ಷಿದಾರರು 31 ವರ್ಷಗಳಿಂದ ಲೈಂಗಿಕ ಸಂಬಂಧದಲ್ಲಿ ತೊಡಗಿದ್ದರು. ಆದರೂ 31 ವರ್ಷದ ನಡುವೆ ಈ ಸಂಬಂಧಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಒಂದು ಮಾತನ್ನೂ ಹೇಳಲಿಲ್ಲ. ಇದೀಗ ಕಕ್ಷಿದಾರರ ನಡುವಿನ ಸಂಬಂಧವು ಹಳಸಿದ್ದು ಇದೇ ಕಾರಣದಿಂದ ಪೊಲೀಸ್ ದೂರು ದಾಖಲಿಸಿರುವಂತಹ ಪ್ರಕರಣ ಇದಾಗಿದೆ ಎಂದು ಹೇಳಿದರು.

ಮಹಿಳೆ ವಿದ್ಯಾವಂತಳಾಗಿದ್ದು, ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಎರಡನೇ ಮದುವೆ ಕಾನೂನುಬಾಹಿರವಾಗಿದ್ದರೂ ಎರಡನೇ ಮದುವೆಯ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾರೆ. ವಿಚ್ಛೇದನ ಅಂಗೀಕಾರವಾಗುವವರೆಗೆ ಎರಡನೇ ಮದುವೆಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಿಳಿದಿದ್ದರೂ ಮಹಿಳೆ ಎರಡನೇ ಮದುವೆಯ ಭರವಸೆಯನ್ನು ಒಪ್ಪಿಕೊಂಡಿದ್ದಾಳೆ ಎಂದು ಎಫ್‌ಐಆರ್ ಸೂಚಿಸುತ್ತದೆ ಎಂದು ನ್ಯಾಯಾಧೀಶರು ಹೇಳಿದರು.

ಅಲ್ಲದೇ ಪುರುಷ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡಿ ನಿನ್ನನ್ನು ಮದುವೆಯಾಗುತ್ತೇನೆಂದು ಮಹಿಳೆಗೆ ಭರವಸೆ ನೀಡಿದ್ದನೆಂಬ ಬಗ್ಗೆಯೂ ದೂರಿನಲ್ಲಿ ಉಲ್ಲೇಖವಾಗಿಲ್ಲ. 31 ವರ್ಷದಲ್ಲಿ ಮಹಿಳೆ ಪುರುಷನ ಸಂಬಂಧದಿಂದ ಹಿಂದೆ ಸರಿಯುವ ಅಥವಾ ದೂರು ನೀಡುವ ಅವಕಾಶವಿದ್ದರೂ ಆಕೆ ಅಂತಹ ಕೆಲಸ ಮಾಡಿಲ್ಲ ಎಂದು ಹೇಳಿದ ನ್ಯಾಯಾಲಯವು ಪ್ರಕರಣವನ್ನು ರದ್ದುಗೊಳಿಸಿತು.

ಇದನ್ನೂ ಓದಿ: ಕೋರ್ಟ್‌ನಲ್ಲೇ ಅಳಿಯನನ್ನು ಗುಂಡಿಕ್ಕಿ ಕೊಂದ ಮಾಜಿ ಪೊಲೀಸ್‌ ಅಧಿಕಾರಿ; ಕೃತ್ಯಕ್ಕೆ ಕಾರಣವೇನು?

Continue Reading
Advertisement
Stock Market
ವಾಣಿಜ್ಯ8 mins ago

Stock Market: ಷೇರುಪೇಟೆಯಲ್ಲಿ ಮಹಾ ಪತನ; ಸೆನ್ಸೆಕ್ಸ್‌ 2,000 ಅಂಕಗಳಷ್ಟು ಕುಸಿತ

murder case
ಹಾಸನ14 mins ago

Murder Case : ಅಪರಿಚಿತ ವ್ಯಕ್ತಿಯ ಬರ್ಬರ ಹತ್ಯೆ; ಕೈ-ಕಾಲು ಬಿಗಿದು, ಕಲ್ಲು ಕಟ್ಟಿ ಕೆರೆಗೆ ಎಸೆದ ಹಂತಕರು

ಪ್ರಮುಖ ಸುದ್ದಿ33 mins ago

AAP VS Delhi LG: ಆಪ್‌ಗೆ ಹಿನ್ನಡೆ; ದಿಲ್ಲಿ ನಗರಸಭೆಗೆ ಸದಸ್ಯರನ್ನು ನೇಮಿಸುವ ಎಲ್‌ಜಿ ಅಧಿಕಾರ ಎತ್ತಿಹಿಡಿದ ಸುಪ್ರೀಂ ಕೋರ್ಟ್

Drowned in water
ಚಿಕ್ಕೋಡಿ46 mins ago

Drowned in water : ಆಟವಾಡುತ್ತಾ ಕಾಲುವೆಗೆ ಕಾಲು ಜಾರಿ ಬಿದ್ದು 4 ವರ್ಷದ ಬಾಲಕ ಸಾವು

Gold Rate Today
ಚಿನ್ನದ ದರ59 mins ago

Gold Rate Today: ಸತತ ಎರಡನೆ ದಿನವೂ ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ

Actor Darshan wife Vijayalakshmi darshan temple run
ಸ್ಯಾಂಡಲ್ ವುಡ್59 mins ago

Actor Darshan: ದರ್ಶನ್‌ ಬಿಡುಗಡೆಗಾಗಿ ವಿಜಯಲಕ್ಷ್ಮಿ ಹಾಗೂ ಅಳಿಯ ಟೆಂಪಲ್ ರನ್‌

Road Accident
ಬೆಂಗಳೂರು1 hour ago

Road Accident: ಲಾರಿಯ ಹಿಂಬದಿ ಚಕ್ರಕ್ಕೆ ಸಿಲುಕಿ ಕ್ಲೀನರ್ ಸಾವು; ಬೈಕ್‌ ಅಪಘಾತದಲ್ಲಿ ಸವಾರರಿಬ್ಬರು ಮೃತ್ಯು

Rahul Gandhi
ವೈರಲ್ ನ್ಯೂಸ್1 hour ago

Rahul Gandhi: ರಾಹುಲ್ ಗಾಂಧಿ ಅಲ್ಲ, ರಾಹುಲ್ ಖಾನ್! ಪಾಕಿಸ್ತಾನದ ಟಿವಿಯಲ್ಲಿ ಬಿಸಿಬಿಸಿ ಚರ್ಚೆ!

police inspector death thimmegowda
ಬೆಂಗಳೂರು2 hours ago

Inspector Death: ಮತ್ತೊಬ್ಬ ಪೊಲೀಸ್‌ ಇನ್‌ಸ್ಪೆಕ್ಟರ್‌ ಆತ್ಮಹತ್ಯೆ, ಎರಡು ತಿಂಗಳ ಹಿಂದೆ ಟ್ರಾನ್ಸ್‌ಫರ್‌ ಆಗಿದ್ದ ಸಿಸಿಬಿ ಎಸ್‌ಐ

Road Accident
ತುಮಕೂರು2 hours ago

Road Accident : ಬಲ ತಿರುವು ಪಡೆಯುವಾಗ ಬೈಕ್‌ ಸವಾರನ ಮೇಲೆ ಹರಿದ ಕೆಎಸ್‌ಆರ್‌ಟಿಸಿ ಬಸ್‌; ಸಿಸಿ ಕ್ಯಾಮೆರಾದಲ್ಲಿ ಅಪಘಾತ ಸೆರೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ23 hours ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ4 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ4 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ4 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ6 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ6 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ7 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ7 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌