Mukesh Ambani Mobile: ಮುಕೇಶ್ ಅಂಬಾನಿ, ನೀತಾ ಅಂಬಾನಿ ಯಾವ ಮೊಬೈಲ್‌ ಬಳಸುತ್ತಾರೆ? ಅವುಗಳ ವೈಶಿಷ್ಟ್ಯ ಏನೇನು? - Vistara News

ವಾಣಿಜ್ಯ

Mukesh Ambani Mobile: ಮುಕೇಶ್ ಅಂಬಾನಿ, ನೀತಾ ಅಂಬಾನಿ ಯಾವ ಮೊಬೈಲ್‌ ಬಳಸುತ್ತಾರೆ? ಅವುಗಳ ವೈಶಿಷ್ಟ್ಯ ಏನೇನು?

Mukesh Ambani Mobile: ಅಯೋಧ್ಯೆ ರಾಮ ಮಂದಿರದ ಉದ್ಘಾಟನೆ ಸಮಾರಂಭದಲ್ಲಿ ಪತ್ನಿ ನೀತಾ ಅಂಬಾನಿ ಅವರೊಂದಿಗೆ ಆಗಮಿಸಿದ್ದ ರಿಲಯನ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಅವರು ಬಳಸುತ್ತಿರುವ ಫೋನ್ ಎಲ್ಲರ ಗಮನ ಸೆಳೆಯಿತು. ಮುಕೇಶ್ ಅಂಬಾನಿ (Mukesh Ambani) ಬಳಸುತ್ತಿದ್ದ ಈ ಫೋನ್ ಅತ್ಯಂತ ದುಬಾರಿಯಾಗಿದೆ. ಇದಕ್ಕೆ ಕಾರಣವೂ ಇದೆ. ಅದು ಏನು ಎಂಬ ಮಾಹಿತಿ ಇಲ್ಲಿದೆ. ವಿಶೇಷ ಏನೆಂದರೆ, ಮುಕೇಶ್‌ ಅಂಬಾನಿ ಮತ್ತು ನೀತಾ ಅಂಬಾನಿ ಒಂದೇ ಮಾಡೆಲ್‌ನ ಮೊಬೈಲ್‌ ಫೋನ್‌ ಬಳಸುತ್ತಾರೆ.

VISTARANEWS.COM


on

Mukesh Ambani Mobile
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಿಲಾಯನ್ಸ್ ಇಂಡಸ್ಟ್ರೀಸ್ (Reliance Industries) ಮಾಲೀಕ ಮತ್ತು ಭಾರತದ ಶ್ರೀಮಂತ ವ್ಯಕ್ತಿ (India’s richest man) ಮುಕೇಶ್ ಅಂಬಾನಿ (Mukesh Ambani) ಅವರು ಧರಿಸುವ, ಬಳಸುವ ಪ್ರತಿಯೊಂದು ವಸ್ತುವಿನ ಬಗ್ಗೆಯೂ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಪತ್ನಿ ನೀತಾ ಅಂಬಾನಿ (nita ambani) ಅವರೊಂದಿಗೆ ಪಾಲ್ಗೊಂಡಿದ್ದ ಮುಕೇಶ್ ಅಂಬಾನಿ ಅವರ ಕೈಯಲ್ಲಿದ್ದ ಫೋನ್ (Mukesh Ambani Mobile) ಎಲ್ಲರ ಗಮನ ಸೆಳೆದಿತ್ತು.

ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಾಗಿ ಸುಮಾರು ಎಂಟು ತಿಂಗಳಾಗುತ್ತ ಬಂದರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಲೆಬ್ರಿಟಿಗಳು, ವಿಐಪಿಗಳು ಎಲ್ಲರ ಗಮನ ಸೆಳೆದಿರುವುದು ಇನ್ನೂ ಚರ್ಚೆಯಾಗುತ್ತಲೇ ಇದೆ. ಮುಕೇಶ್ ಅಂಬಾನಿ ಕೂಡ ತಮ್ಮ ಕುಟುಂಬದೊಂದಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಎಲ್ಲರ ಗಮನ ಸೆಳೆದಿದ್ದು ಅವರು ಬಳಸುತ್ತಿದ್ದ ಫೋನ್.

ಅದ್ಧೂರಿ ಸಮಾರಂಭದಲ್ಲಿ ಮುಖೇಶ್ ಅಂಬಾನಿ ತಮ್ಮ ಪತ್ನಿ ನೀತಾ ಅಂಬಾನಿ ಅವರೊಂದಿಗೆ ಕಾಣಿಸಿಕೊಂಡರು. ಅವರ ಕೈಯಲ್ಲಿದ್ದ ಸ್ಮಾರ್ಟ್ ಫೋನ್ ಎಲ್ಲರ ಗಮನ ಸೆಳೆಯಲು ಹಲವು ಕಾರಣಗಳಿವೆ. ಮುಕೇಶ್ ಅಂಬಾನಿ ಇತ್ತೀಚಿನ ಆಪಲ್ ಐಫೋನ್ ಅನ್ನು ಬಳಸುತ್ತಿದ್ದಾರೆ. ಐಫೋನ್ 15 ಪ್ರೊ ಮ್ಯಾಕ್ಸ್ ಕೇವಲ ಸಾಮಾನ್ಯ ಐಫೋನ್ ಅಲ್ಲ. ಇದು ಐಫೋನ್ 15 ಸರಣಿಯ ಅತ್ಯಂತ ದುಬಾರಿ ಮಾದರಿಯಾಗಿದೆ. ಈ ಫೋನ್‌ನ 256 GB ಮಾದರಿಯು ಸುಮಾರು 1.50 ಲಕ್ಷ ರೂ. ನದ್ದಾಗಿದೆ. 1 ಟಿಬಿ ಸ್ಟೋರೇಜ್ ರೂಪಾಂತರದ ಬೆಲೆ ಅಂದಾಜು 2 ಲಕ್ಷ ರೂ.

Mukesh Ambani
Mukesh Ambani


ನೀತಾ ಅಂಬಾನಿ ಫೋನ್

ನೀತಾ ಅಂಬಾನಿ ಕೂಡ ಅದೇ ಮಾದರಿಯ ಐಫೋನ್ ಅನ್ನು ಬಳಸುತ್ತಿದ್ದಾರೆ. ಅನೇಕ ಇತರ ಪ್ರಮುಖ ವ್ಯಕ್ತಿಗಳು ಮತ್ತು ಸೆಲೆಬ್ರಿಟಿಗಳು ಈ ಫೋನ್ ಅನ್ನು ಅದರ ಅಸಾಧಾರಣ ವೈಶಿಷ್ಟ್ಯಗಳಿಗಾಗಿ ಆದ್ಯತೆ ನೀಡುತ್ತಾರೆ. ಐಫೋನ್ 15 ಪ್ರೊ ಮ್ಯಾಕ್ಸ್ ಅತ್ಯುತ್ತಮ ಕೆಮರಾ, ನೀರಿನ ಪ್ರತಿರೋಧ ಮತ್ತು ಅತ್ಯಂತ ಗಟ್ಟಿಮುಟ್ಟಾದ ವಿನ್ಯಾಸವನ್ನು ಹೊಂದಿದೆ. ಇದರ ವಿನ್ಯಾಸ ಮತ್ತು ವೈಶಿಷ್ಟ್ಯಗಳು ಉನ್ನತ ದರ್ಜೆಯದ್ದಾಗಿದ್ದು, ಪ್ರೀಮಿಯಂ ನೋಟ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಪ್ರತಿಯೊಂದು ಅಂಶದಲ್ಲೂ ಈ ಫೋನ್ ಮಾರುಕಟ್ಟೆಯಲ್ಲಿನ ಇತರ ಸ್ಮಾರ್ಟ್‌ಫೋನ್‌ಗಳನ್ನು ಮೀರಿಸುತ್ತದೆ.

Mukesh Ambani
Mukesh Ambani


ಐಫೋನ್ 15 ಪ್ರೊ ಮ್ಯಾಕ್ಸ್ ನ ವೈಶಿಷ್ಟ್ಯಗಳು ಏನೇನು?

ಐಫೋನ್ 15 ಪ್ರೊ ಮ್ಯಾಕ್ಸ್ ಅಸಾಧಾರಣವಾದ ಫೋಟೋ ಮತ್ತು ವಿಡಿಯೋ ಗುಣಮಟ್ಟವನ್ನು ನೀಡುವ ಉನ್ನತ ಆಫ್ ಲೈನ್ ಕೆಮೆರಾವನ್ನು ಒಳಗೊಂಡಿದೆ.

ಇದನ್ನೂ ಓದಿ: Indian Currency: 2000 ರೂ. ನೋಟು ತಯಾರಿಸಲು 4 ರೂ. ಖರ್ಚು; 10 ರೂ. ನೋಟು ಮುದ್ರಿಸಲು 96 ಪೈಸೆ ಬೇಕು!

ಈ ಫೋನ್ ಜಲ ನಿರೋಧಕವಾಗಿದೆ (ವಾಟರ್‌ ಪ್ರೂಫ್‌) ಮತ್ತು ಬಲಿಷ್ಠ ಸಾಮಗ್ರಿಗಳಿಂದ ನಿರ್ಮಿಸಲಾಗಿದೆ. ಇದು ಯಾವುದೇ ಕಠಿಣ ಪರಿಸ್ಥಿತಿಗಳನ್ನು ತಡೆದುಕೊಳ್ಳುತ್ತದೆ.

ಐಫೋನ್ 15 ಪ್ರೊ ಮ್ಯಾಕ್ಸ್ ನ ನಯವಾದ ಮತ್ತು ಪ್ರೀಮಿಯಂ ವಿನ್ಯಾಸವು ಅದನ್ನು ಸೊಗಸಾದ ಆಯ್ಕೆಯನ್ನಾಗಿ ಮಾಡುತ್ತದೆ. ಹಲವು ಸುಧಾರಿತ ವೈಶಿಷ್ಟ್ಯಗಳು ಮತ್ತು ಶಕ್ತಿಯುತ ಕಾರ್ಯಕ್ಷಮತೆಯನ್ನು ಒಳಗೊಂಡಿದೆ. 256ಜಿಬಿ ಮತ್ತು 1 ಟಿಬಿ ಸೇರಿದಂತೆ ಮಲ್ಟಿ ಸ್ಟೋರೇಜ್‌ ರೂಪಾಂತರಗಳಲ್ಲಿ ಇದು ಲಭ್ಯವಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: ಆನ್‌ಲೈನ್‌ ಶಾಪಿಂಗ್‌ ವೇಳೆ ಮೋಸ ಹೋಗದಿರಲು ಈ ಟಿಪ್ಸ್‌ ಪಾಲೋ ಮಾಡಿ

Money Guide: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಶಾಪಿಂಗ್‌ ಜನಪ್ರಿಯವಾಗುತ್ತಿದೆ. ಆದರೆ ಕೆಲವೊಮ್ಮೆ ಈ ಹೆಸರಿನಲ್ಲಿ ವಂಚನೆಯೂ ನಡೆಯುತ್ತದೆ. ಆರ್ಡರ್‌ ಮಾಡಿದ ಬೆಲೆ ಬಾಳುವ ವಸ್ತುವಿನ ಬದಲು ಕಲ್ಲು, ಮರದ ತುಂಡು, ಸೋಪು ಅಷ್ಟೇ ಏಕೆ ಹಾವು ಕೂಡ ಪಾರ್ಸೆಲ್‌ ಮೂಲಕ ಬರುತ್ತದೆ! ಕೆಲವೊಂದು ಫೇಕ್‌ ವೆಬ್‌ಸೈಟ್‌ಗಳು ಆರ್ಡರ್‌ ಮಾಡಿದ ಬಳಿಕ ಉತ್ಪನ್ನಗಳನ್ನು ಕಳುಹಿಸದೆ ಮೋಸ ಎಸಗುತ್ತದೆ. ಹೀಗಾಗಿ ಆನ್‌ಲೈನ್‌ ಶಾಪಿಂಗ್‌ ಮಾಡುವ ಮುನ್ನ ಸಾಕಷ್ಟು ಮುನ್ನೆಚ್ಚರಿಕೆ ವಹಿಸದಿದ್ದರೆ ಯಾಮಾರುವುದು ಖಂಡಿತ. ಹೀಗಾಗಿ ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಯಾವೆಲ್ಲ ಅಂಶಗಳನ್ನು ಗಮನಿಸಬೇಕು ಎನ್ನುವ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಶಾಪಿಂಗ್‌ (Online shopping) ಜನಪ್ರಿಯವಾಗುತ್ತಿದೆ. ಒಂದೇ ಕಡೆ ಹಲವು ಆಯ್ಕೆ, ಕಡಿಮೆ ಬೆಲೆ ಮತ್ತು ಸಮಯದ ಉಳಿತಾಯ ಹೀಗೆ ನಾನಾ ಕಾರಣಗಳಿಂದ ಇದು ಗ್ರಾಹಕರ ಮನ ಗೆದ್ದಿದೆ. ಇದಕ್ಕಾಗಿಯೇ ಇರುವ ನಾನಾ ಆ್ಯಪ್‌ಗಳು ವಿಶೇಷ ಸಂದರ್ಭಗಳಲ್ಲಿ ಕೊಡುಗೆ ಪ್ರಕಟಿಸಿ ಇನ್ನಷ್ಟು ಆಕರ್ಷಿಸುತ್ತದೆ. ಇದರ ಜತೆಗೆ ಕೆಲವೊಮ್ಮೆ ವಂಚನೆಯೂ ನಡೆಯುತ್ತದೆ. ಆರ್ಡರ್‌ ಮಾಡಿದ ಬೆಲೆ ಬಾಳುವ ವಸ್ತುವಿನ ಬದಲು ಕಲ್ಲು, ಮರದ ತುಂಡು, ಸೋಪು ಅಷ್ಟೇ ಏಕೆ ಹಾವು ಕೂಡ ಪಾರ್ಸೆಲ್‌ ಮೂಲಕ ಬರುತ್ತದೆ! ಕೆಲವೊಂದು ಫೇಕ್‌ ವೆಬ್‌ಸೈಟ್‌ಗಳು ಆರ್ಡರ್‌ ಮಾಡಿದ ಬಳಿಕ ಉತ್ಪನ್ನಗಳನ್ನು ಕಳುಹಿಸದೆ ಮೋಸ ಎಸಗುತ್ತವೆ. ಹೀಗಾಗಿ ಆನ್‌ಲೈನ್‌ ಶಾಪಿಂಗ್‌ ಮಾಡುವ ಮುನ್ನ ಸಾಕಷ್ಟು ಮುನ್ನೆಚ್ಚರಿಕೆ ವಹಿಸದಿದ್ದರೆ ಯಾಮಾರುವುದು ಖಂಡಿತ. ಇಂದಿನ ಮನಿಗೈಡ್‌ (Money Guide)ನಲ್ಲಿ ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಯಾವೆಲ್ಲ ಅಂಶಗಳನ್ನು ಗಮನಿಸಬೇಕು ಎನ್ನುವುದನ್ನು ನೋಡೋಣ.

ಮಾರಾಟಗಾರರ ಹಿನ್ನಲೆ

ಆನ್‌ಲೈನ್‌ನಲ್ಲಿ ಯಾವುದೇ ವಸ್ತು ಖರೀದಿಸುವ ಮುನ್ನ ಮಾರಾಟಗಾರರ ಹಿನ್ನಲೆ ಪರಿಶೀಲಿಸಿ. ಕೆಲವೊಮ್ಮೆ ಸೋಷಿಯಲ್‌ ಮೀಡಿಯಾಗಳಲ್ಲಿ ಆಕರ್ಷಕ ಕೊಡುಗೆ ಪ್ರಕಟಿಸಿ ಫೇಕ್‌ ವೆಬ್‌ಸೈಟ್‌ಗಳು ನಿಮ್ಮ ಗಮನ ಸೆಳೆಯುತ್ತವೆ. ಇವರು ಕ್ಯಾಷ್‌ ಆನ್‌ ಡೆಲಿವರಿ ಆಯ್ಕೆಯನ್ನು ಹೊಂದಿರುವುದಿಲ್ಲ. ನೀವು ಆರ್ಡರ್‌ ಮಾಡುವಾಗಲೇ ಹಣ ಪಾವತಿಸಬೇಕಾಗುತ್ತದೆ. ಒಮ್ಮೆ ನೀವು ಹಣ ಪಾವತಿಸಿದರೆ ಬಳಿಕ ಸಂಪರ್ಕಕ್ಕೇ ಸಿಗುವುದಿಲ್ಲ. ಜತೆಗೆ ನೀವು ಆರ್ಡರ್‌ ಮಾಡಿದ ಉತ್ಪನ್ನವೂ ನಿಮ್ಮನ್ನು ತಲುಪುವುದಿಲ್ಲ. ಇನ್ನು ಕೆಲವೊಮ್ಮೆ ಇಂತಹ ಅನಧಿಕೃತ ವೆಬ್‌ಸೈಟ್‌ಗಳು ಕಳಪೆ ಉತ್ಪನ್ನಗಳನ್ನು ಕಳುಹಿಸುತ್ತವೆ. ಆಕರ್ಷಕ ಫೋಟೊ ತೋರಿಸಿ ಹಾಳಾದ ಉತ್ಪನ್ನ ಅಥವಾ ಬೇರೆಯದೇ ಪ್ರಾಡಕ್ಟ್‌ ಕಳುಹಿಸುತ್ತವೆ. ಹೀಗಾಗಿ ವೆಬ್‌ಸೈಟ್‌ ಅಧಿಕೃತವೇ ಎನ್ನುವುದನ್ನು ಮೊದಲೇ ದೃಢಪಡಿಸಿಕೊಳ್ಳಿ. ವೆಬ್‌ಸೈಟ್‌ ಸುರಕ್ಷಿತ ಪಾವತಿ ವಿಧಾನ, ಸೂಕ್ತ ರಿಟರ್ನ್ ಪಾಲಿಸಿಗಳು ಹೊಂದಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಜತೆಗೆ ಗ್ರಾಹಕ ರಿವ್ಯೂ ಕೂಡ ಗಮನಿಸಿ.

ಉತ್ಪನ್ನದ ರಿವ್ಯೂ ಗಮನಿಸಿ

ರಿಯಾಯಿತಿ ಇದೆ ಎನ್ನುವ ಕಾರಣಕ್ಕೆ ಕಣ್ಣು ಮುಚ್ಚಿ ಯಾವುದೇ ಉತ್ಪನ್ನಗಳನ್ನು ಕೊಂಡುಕೊಳ್ಳಬೇಡಿ. ಖರೀದಿಸುವ ಮುನ್ನ ಆ ಉತ್ಪನ್ನಕ್ಕೆ ಗ್ರಾಹಕರು ಕೊಟ್ಟಿರುವ ರಿವ್ಯೂ ಪರಿಶೀಲಿಸಿ. ಜಾಹೀರಾತು, ಮಾರಾಟಗಾರರ ಮಾತನ್ನು ಪೂರ್ಣವಾಗಿ ನಂಬಬೇಡಿ. ಗ್ರಾಹಕ ರಿವ್ಯೂ ಗಮನಿಸಿ ಅಲ್ಲಿ ಸಕಾರಾತ್ಮಕ ಪ್ರಕ್ರಿಯೆಗಿಂತ ನಕಾರಾತ್ಮಕ ಅಭಿಮತವೇ ಹೆಚ್ಚಿದ್ದರೆ ಖರೀದಿಸಬೇಡಿ.

ಶಿಪ್ಪಿಂಗ್‌ ಚಾರ್ಜ್‌ ಮತ್ತು ಸಮಯ

ನೀವು ಖರೀದಿಸಲು ಬಯಸುವ ಉತ್ಪನ್ನಕ್ಕೆ ವಿಧಿಸುವ ಶಿಪ್ಪಿಂಗ್‌ ಜಾರ್ಜ್‌ ಅನ್ನು ಗಮನಿಸಿ. ಜತೆಗೆ ಅದು ಯಾವಾಗ ತಲುಪುತ್ತದೆ ಎನ್ನುವುದನ್ನೂ ಪರಿಶೀಲಿಸಿ. ಕೆಲವೊಂದು ಆನ್‌ಲೈನ್‌ ಅಪ್ಲಿಕೇಷನ್‌ಗಳು ಶಿಪ್ಪಿಂಗ್‌ ಜಾರ್ಜ್‌ ಇಲ್ಲದೆ ಡೆಲಿವರಿ ಮಾಡುತ್ತವೆ. ಆದರೆ ಉತ್ಪನ್ನ ತಲುಪಲು ಹೆಚ್ಚಿನ ಸಮಯ ತಗಲುತ್ತದೆ. ಹೀಗಾಗಿ ಈ ಅಂಶದ ಬಗ್ಗೆ ಗಮನ ಹರಿಸಿ. ಜತೆಗೆ ಶಿಪ್ಪಿಂಗ್‌ ಜಾರ್ಜ್‌ ಮತ್ತು ಪ್ರಾಡಕ್ಟ್‌ ನಿಮ್ಮ ಕೈ ಸೇರಲಿರುವ ದಿನಗಳನ್ನು ಬೇರೆ ಆ್ಯಪ್‌ಗಳೊಂದಿಗೆ ಹೋಲಿಸಿ ನೋಡಿ. ವಿದೇಶಗಳಿಂದ ನೀವು ಉತ್ಪನ್ನ ಖರೀದಿಸುತ್ತಿದ್ದರೆ ಇದರ ಮೇಲೆ ವಿಧಿಸುವ ತೆರಿಗೆಯೂ ನಿಮ್ಮ ಗಮನದಲ್ಲಿರಲಿ.

ರಿಟರ್ನ್‌ ಪಾಲಿಸಿ ಅರ್ಥ ಮಾಡಿಕೊಳ್ಳಿ

ಆನ್‌ಲೈನ್‌ ಮೂಲಕ ಯಾವುದೇ ವಸ್ತುವನ್ನು ಖರೀದಿಸುವ ಮುನ್ನ ಮೊದಲು ಅರ್ಥ ಮಾಡಿಕೊಳ್ಳಬೇಕಾದುದು ಅದರ ರಿಟರ್ನ್‌ ಪಾಲಿಸಿಯನ್ನು. ಹೆಚ್ಚಿನ ಅಪ್ಲಿಕೇಷನ್‌ಗಳು ಉತ್ಪನ್ನಗಳನ್ನು ಹಿಂದಿರುಗಿಸಲು 20-30 ದಿನಗಳ ಕಾಲಾವಕಾಶ ನೀಡುತ್ತವೆ. ಕೆಲವೊಮ್ಮೆ ಉತ್ಪನ್ನ, ಮಾರಾಟಗಾರರನ್ನು ಹೊಂದಿಕೊಂಡು ಈ ನಿಯಮದಲ್ಲಿ ವ್ಯತ್ಯಾಸಗಳಿರುತ್ತವೆ. ಜತೆಗೆ ರಿಟರ್ನ್‌ ಮಾಡುವಾಗ ಶಿಪ್ಪಿಂಗ್‌ ಚಾರ್ಜ್‌ ಇದೆಯೇ ಎನ್ನುವುದನ್ನು ಪರಿಶೀಲಿಸುವುದನ್ನು ಮರೆಯಬೇಡಿ. ಸಮರ್ಪಕ ರಿಟರ್ನ್‌ ಪಾಲಿಸಿಯಿಂದ ನಿಮ್ಮ ಹಣ ವ್ಯರ್ಥವಾಗುವುದನ್ನು ತಡೆಯಬಹುದು.

ಬೆಲೆ ಹೋಲಿಕೆ ಮಾಡಿ

ನಾವು ಅಂಗಡಿಗೆ ತೆರಳಿ ಶಾಪಿಂಗ್‌ ಮಾಡುವಾಗ ವಿವಿಧ ಕಡೆಗಳ ಬೆಲೆ ಹೋಲಿಸಿ ನೋಡುವಂತೆ ವಿವಿಧ ಅಪ್ಲಿಕೇಷನ್‌, ವೆಬ್‌ಸೈಟ್‌ಗಳಲ್ಲಿನ ಬೆಲೆಯನ್ನು ಪರಿಶೀಲಿಸಿ. ಇದರಿಂದ ಸಾಕಷ್ಟು ಹಣವನ್ನು ಉಳಿಸಬಹುದು. ಜತೆಗೆ ಹಲವು ಆ್ಯಪ್‌ಗಳು ವಿಶೇಷ ಸಂದರ್ಭಗಳಲ್ಲಿ ಪ್ರಕಟಿಸುವ ವಿಶೇಷ ಕೊಡುಗೆ, ರಿಯಾಯಿತಿಗಳ ಪ್ರಯೋಜನ ಪಡೆದುಕೊಳ್ಳಿ. ಕೆಲವೊಮ್ಮೆ ಕೂಪನ್‌ಗಳೂ ಲಭ್ಯ. ಇದರ ಲಾಭ ಪಡೆಯಿರಿ.

ಪಾವತಿ ವಿಧಾನ ಚೆಕ್‌ ಮಾಡಿ

ಹಲವು ಆನ್‌ಲೈನ್‌ ಸ್ಟೋರ್‌ಗಳು ಪಾವತಿಗಾಗಿ ವಿವಿಧ ಆಯ್ಕೆಗಳನ್ನು ನೀಡುತ್ತವೆ. ಕೆಲವೊಮ್ಮೆ ಎಲ್ಲ ರೀತಿಯ ಪಾವತಿಗಳನ್ನು ಸ್ವೀಕರಿಸುವುದಿಲ್ಲ. ಹೀಗಾಗಿ ಆರ್ಡರ್‌ ಮಾಡುವ ಮುನ್ನ ನಿಮಗೆ ಅನುಕೂಲವಾಗುವ ಪಾವತಿ ವಿಧಾನ ಇದೆಯೇ ಎನ್ನುವುದನ್ನು ಚೆಕ್‌ ಮಾಡಿ. ನಿಮ್ಮ ಪಾವತಿಯ ಸುರಕ್ಷತೆಯನ್ನು ಗಮನಿಸಲು ಮರೆಯಬೇಡಿ. ಜತೆಗೆ ನಿಮ್ಮ ವೈಯಕ್ತಿಕ ಮಾಹಿತಿ ಎಲ್ಲಿಯೂ ಸೋರಿಕೆಯಾಗುತ್ತಿಲ್ಲ ಎನ್ನುವುದನ್ನೂ ಖಚಿತಪಡಿಸಿ.

ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವ ಮುನ್ನ

ಲ್ಯಾಪ್‌ಟಾಪ್‌, ಟಿವಿ, ಮೊಬೈಲ್‌ ಫೋನ್‌ ಮೊದಲಾದ ಬೆಲೆಬಾಳುವ ವಸ್ತುಗಳನ್ನು ಖರೀದಿಸುವಾಗ ಆದಷ್ಟು ಕ್ಯಾಷ್‌ ಆನ್‌ ಡೆಲಿವರಿ (Cash on delivery)ಯನ್ನೇ ಆಯ್ಕೆ ಮಾಡಿ. ಜತೆಗೆ ಉತ್ಪನ್ನ ಬಂದಾಗ ಡೆಲಿವರಿ ಬಾಯ್‌ ಎದುರಿನಲ್ಲೇ ಓಪನ್‌ ಮಾಡಿ. ಒಂದು ವೇಳೆ ಇದೂ ಆಗಿಲ್ಲ ಎಂದಾದರೆ ಪಾರ್ಸೆಲ್‌ ತೆರೆಯುವ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೊ ಮಾಡಿಟ್ಟುಕೊಳ್ಳಿ.

ಇದನ್ನೂ ಓದಿ: National Pension System: ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆಗಾಗಿ ಎನ್‌ಪಿಎಸ್ ಯೋಜನೆ ಸೂಕ್ತ

Continue Reading

ವಾಣಿಜ್ಯ

Stock Market: ಮಹಾ ಕುಸಿತದಿಂದ ಚೇತರಿಕೆಯ ಹಾದಿಯಲ್ಲಿ ಷೇರುಪೇಟೆ; ಸೆನ್ಸೆಕ್ಸ್‌ 921, ನಿಫ್ಟಿ 285 ಪಾಯಿಂಟ್‌ ಜಿಗಿತ

Stock Market: ಸೋಮವಾರದ ಮಹಾಕುಸಿತದಿಂದ ಭಾರತೀಯ ಷೇರುಪೇಟೆ ಚೇತರಿಸಿಕೊಳ್ಳುತ್ತಿದೆ. ಮಂಗಳವಾರ ಬಿಎಸ್ಇ ಸೆನ್ಸೆಕ್ಸ್ (Sensex) 921 ಪಾಯಿಂಟ್ಸ್ ಅಥವಾ ಶೇ. 1.23ರಷ್ಟು ಏರಿಕೆ ಕಂಡು 79,680ಕ್ಕೆ ತಲುಪಿದರೆ ನಿಫ್ಟಿ 50 (Nifty) ಶೇ. 1.09ರಷ್ಟು ಅಥವಾ 262 ಪಾಯಿಂಟ್ಸ್ ಏರಿಕೆ ಕಂಡು 24,318 ಅಂಕಗಳ ಗಡಿ ದಾಟಿದೆ.

VISTARANEWS.COM


on

Stock Market
Koo

ಮುಂಬೈ: ಅಮೆರಿಕದ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ಸೋಮವಾರ (ಆಗಸ್ಟ್‌ 5) ಪಾತಾಳಕ್ಕೆ ಕುಸಿದಿದ್ದ ಭಾರತೀಯ ಷೇರುಪೇಟೆ (Stock Market) ಇಂದು (ಆಗಸ್ಟ್‌ 6) ಚೇತರಿಸಿಕೊಂಡಿದ್ದು ಮತ್ತೆ ಏರುಗತಿಯಲ್ಲಿದೆ. ಜಾಗತಿಕ ಮಾರುಕಟ್ಟೆಗಳ ಒತ್ತಡದಿಂದ ಕುಸಿದಿದ್ದ ಷೇರು ಮಾರುಕಟ್ಟೆಯಲ್ಲಿ ಲವಲವಿಕೆ ಕಂಡು ಬಂದಿದೆ. ಮಂಗಳವಾರ ಬಿಎಸ್ಇ ಸೆನ್ಸೆಕ್ಸ್ (Sensex) 921 ಪಾಯಿಂಟ್ಸ್ ಅಥವಾ ಶೇ. 1.23ರಷ್ಟು ಏರಿಕೆ ಕಂಡು 79,680ಕ್ಕೆ ತಲುಪಿದರೆ ನಿಫ್ಟಿ 50 (Nifty) ಶೇ. 1.09ರಷ್ಟು ಅಥವಾ 262 ಪಾಯಿಂಟ್ಸ್ ಏರಿಕೆ ಕಂಡು 24,318 ಅಂಕಗಳ ಗಡಿ ದಾಟಿದೆ.

ಎನ್ಎಸ್ಇ (NSE)ಯಲ್ಲಿ ಟಾಟಾ ಮೋಟಾರ್ಸ್, ಲಾರ್ಸೆನ್ ಮತ್ತು ಟೂಬ್ರೊ (L&T) ಹಾಗೂ ಒಎನ್‌ಜಿಸಿ ಲಾಭ ಗಳಿಸಿದರೆ, ಎಸ್‌ಬಿಐ ಲೈಫ್, ಅಪೊಲೊ ಆಸ್ಪತ್ರೆ ಮತ್ತು ನೆಸ್ಲೆ ಇಂಡಿಯಾ ನಷ್ಟದತ್ತ ಮುಖ ಮಾಡಿದವು. ಬಿಎಸ್ಇ (BSE)ಯಲ್ಲಿ ಟಾಟಾ ಮೋಟಾರ್ಸ್, ಅದಾನಿ ಪೋರ್ಟ್ಸ್ ಮತ್ತು ಎಲ್ & ಟಿ ಶೇ. 3ರಷ್ಟು ಏರಿಕೆ ಕಂಡರೆ, ಮಾರುತಿ, ಟಾಟಾ ಸ್ಟೀಲ್ ಮತ್ತು ಜೆಎಸ್‌ಡಬ್ಲ್ಯು ಸ್ಟೀಲ್ ಮೌಲ್ಯ ತಲಾ ಶೇ. 2ರಷ್ಟು ಏರಿಕೆಯಾಗಿದೆ.

ಹೂಡಿಕೆದಾರರ ಸಂಪತ್ತು 7 ಲಕ್ಷ ಕೋಟಿ ರೂ. ಹೆಚ್ಚಳ

ಮುಂಬೈ ಷೇರುಪೇಟೆ ಬಿಎಸ್‌ಇ ಸೆನ್ಸೆಕ್ಸ್ ಮಾರುಕಟ್ಟೆ ಕ್ಯಾಪ್ ಬರೋಬ್ಬರಿ 449 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಈ ಮೂಲಕ ಹೂಡಿಕೆದಾರರು ಅರ್ಧ ಗಂಟೆಯಲ್ಲಿ 7 ಲಕ್ಷ ಕೋಟಿ ರೂ. ಸಂಪಾದಿಸಿದ್ದಾರೆ. ಕಳೆದ ವಹಿವಾಟಿನಲ್ಲಿ ಇದರ ಮೌಲ್ಯ 442 ಲಕ್ಷ ಕೋಟಿ ರೂಪಾಯಿ ಆಗಿತ್ತು. ಈ ಮಧ್ಯೆ ಇಂದು ರೂಪಾಯಿಯ ಮೌಲ್ಯ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದು, ಡಾಲರ್‌ ವಿರುದ್ಧ 83.8950ಕ್ಕೆ ತಲುಪಿದೆ.

ಏಷ್ಯಾ-ಪೆಸಿಫಿಕ್ ಮಾರುಕಟ್ಟೆಯಲ್ಲಿಯೂ ಚೇತರಿಕೆ

ಇತ್ತ ಏಷ್ಯಾ-ಪೆಸಿಫಿಕ್ ಮಾರುಕಟ್ಟೆಗಳಲ್ಲಿಯೂ ಚೇತರಿಕೆ ಕಂಡು ಬಂತು. ಜಪಾನ್‌ನ ಮಾರುಕಟ್ಟೆಗಳು ಅತಿ ಹೆಚ್ಚಿನ ಪ್ರಗತಿ ಸಾಧಿಸಿವೆ. ನಿಕ್ಕಿ 225 (Nikkei 225) ಶೇ. 9.87ರಷ್ಟು ಮತ್ತು ಬ್ರಾಡ್ ಬೇಸ್ಡ್ ಟೋಪಿಕ್ಸ್ (Topix) ಶೇ. 9.95ರಷ್ಟು ಏರಿಕೆಯಾಗಿದೆ. ಹಿಂದಿನ ವಹಿವಾಟಿನಲ್ಲಿ ನಿಕ್ಕಿ 225 ಮತ್ತು ಟೋಪಿಕ್ಸ್ ಶೇ. 12ಕ್ಕಿಂತ ಹೆಚ್ಚು ಕುಸಿದಿದ್ದವು. ಇಂದು ಭರ್ಜರಿಯಾಗಿ ಕಂಬ್ಯಾಕ್‌ ಮಾಡಿದ ಜಪಾನ್ ಷೇರುಗಳು ತೀವ್ರವಾಗಿ ಚೇತರಿಸಿಕೊಂಡವು. ಇತ್ತ ಅಮೆರಿಕಾದ ಸ್ಟಾಕ್ ಫ್ಯೂಚರ್ಸ್‌ ಶೇ. 1ರಷ್ಟು ಏರಿಕೆಗೊಂಡಿದೆ.

ಇದನ್ನೂ ಓದಿ: Indian Currency: 2000 ರೂ. ನೋಟು ತಯಾರಿಸಲು 4 ರೂ. ಖರ್ಚು; 10 ರೂ. ನೋಟು ಮುದ್ರಿಸಲು 96 ಪೈಸೆ ಬೇಕು!

ಸೋಮವಾರದ ಮಹಾ ಕುಸಿತದಿಂದ ಚೇತರಿಕೆ

ಸೋಮವಾರ ಬಿಎಸ್‌ಇ ಸೆನ್ಸೆಕ್ಸ್ 2,393 ಪಾಯಿಂಟ್ಸ್ ಕುಸಿದು 78,588ಕ್ಕೆ ತಲುಪಿದರೆ, ನಿಫ್ಟಿ 50 ಸೂಚ್ಯಂಕವು ಆರಂಭಿಕ ವ್ಯವಹಾರಗಳಲ್ಲಿ 405 ಪಾಯಿಂಟ್ಸ್ ಕುಸಿದು 24,302 ಮಟ್ಟಕ್ಕೆ ಬಂದು ಮುಟ್ಟಿತ್ತು. ಕೆಲವೇ ಗಂಟೆಗಳಲ್ಲಿ ಹೂಡಿಕೆದಾರರಿಗೆ 17 ಲಕ್ಷ ಕೋಟಿ ರೂ. ನಷ್ಟವಾಗಿತ್ತು. ಸದ್ಯ ಈ ಮಹಾಕುಸಿತದಿಂದ ದೇಶಿಯ ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದ್ದು ಹೂಡಿಕೆದಾರರು ನಿರಾಳರಾಗಿದ್ದಾರೆ. ಭಾರತ ಮಾತ್ರವಲ್ಲ ಏಷ್ಯನ್ ಮಾರುಕಟ್ಟೆಯಲ್ಲಿಯೂ ಸೋಮವಾರ ಕುಸಿತ ಕಂಡುಬಂದಿತ್ತು. ಜಪಾನ್‌ನ ನಿಕ್ಕಿ ಶೇ. 4.63 ಮತ್ತು ಹಾಂಗ್‌ಕಾಂಗ್‌ನ ಹ್ಯಾಂಗ್ ಸೆಂಗ್ ಶೇ. 0.58ರಷ್ಟು ಕುಸಿದಿತ್ತು. ಚೀನಾದ ಶಾಂಘೈ ಕಾಂಪೋಸಿಟ್ ಕೂಡ ಶೇ. 0.22ರಷ್ಟು ಇಳಿಕೆ ಕಂಡಿತ್ತು.

Continue Reading

ಚಿನ್ನದ ದರ

Gold Rate Today: ಕೊನೆಗೂ ಇಳಿಯಿತು ಬಂಗಾರದ ದರ; ಇಂದು ಚಿನ್ನ ಇಷ್ಟು ಅಗ್ಗ

Gold Rate Today: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಆಗಸ್ಟ್‌ 6) ಚಿನ್ನದ ದರ ಇಳಿಕೆಯಾಗಿದೆ. ಬುಧವಾರದಿಂದ ಸತತವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಶನಿವಾರ ಇಳಿಕೆಯಾಗಿತ್ತು. ಭಾನುವಾರ ಮತ್ತು ಸೋಮವಾರ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 80 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 87 ಕಡಿಮೆಯಾಗಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,390 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 6,971 ಇದೆ.

VISTARANEWS.COM


on

Gold Rate Today
Koo

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಆಗಸ್ಟ್‌ 6) ಚಿನ್ನದ ದರ ಇಳಿಕೆಯಾಗಿದೆ (Gold Rate Today). ಬುಧವಾರದಿಂದ ಸತತವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಶನಿವಾರ ಇಳಿಕೆಯಾಗಿತ್ತು. ಭಾನುವಾರ ಮತ್ತು ಸೋಮವಾರ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 80 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 87 ಕಡಿಮೆಯಾಗಿದೆ.

ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,390 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 6,971 ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ ₹ 51,120 ಇದೆ. ಇನ್ನು 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 63,900 ಮತ್ತು ₹ 6,39,000 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ ₹ 55,768 ಇದೆ. 10 ಗ್ರಾಂ ಮತ್ತು 100 ಗ್ರಾಂನ 24 ಕ್ಯಾರಟ್‌ ಚಿನ್ನದ ಬೆಲೆ ₹ 69,710 ಮತ್ತು ₹ 6,97,100 ತಲುಪಿದೆ.

ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
ದಿಲ್ಲಿ₹ 6,405 ₹ 6,986
ಮುಂಬೈ₹ 6,390 ₹ 6,971
ಬೆಂಗಳೂರು₹ 6,390 ₹ 6,971
ಚೆನ್ನೈ₹ 6,400 ₹ 6,982

ಬೆಳ್ಳಿ ಧಾರಣೆ

ಇತ್ತ ಬೆಳ್ಳಿಯ ಬೆಲೆಯಲ್ಲಿಯೂ ಕೊಂಚ ಇಳಿಕೆಯಾಗಿದೆ. ಬೆಳ್ಳಿ 1 ಗ್ರಾಂಗೆ ₹ 83.50 ಹಾಗೂ 8 ಗ್ರಾಂಗೆ ₹ 668 ಇದೆ. 10 ಗ್ರಾಂ ₹ 835 ಹಾಗೂ 1 ಕಿಲೋಗ್ರಾಂ ₹ 83,500 ಬೆಲೆ ಬಾಳುತ್ತದೆ.

ಚಿನ್ನದ ಕ್ಯಾರಟ್‌ ಎಂದರೇನು?

ಚಿನ್ನದ ಕ್ಯಾರಟ್‌ ಎಂಬುದು ಚಿನ್ನದ ಶುದ್ಧತೆಯನ್ನು ಅಳೆಯಲು ಬಳಸುವ ಪದ. ಚಿನ್ನದ ಶುದ್ಧತೆಯನ್ನು ಅಳೆಯಲು ಕ್ಯಾರಟ್ ಅನ್ನು ಒಂದು ಘಟಕವಾಗಿ ಬಳಸಲಾಗುತ್ತದೆ. ಕ್ಯಾರಟೇಜ್ ಹೆಚ್ಚು‌ ಇದ್ದಷ್ಟೂ ಚಿನ್ನವು ಶುದ್ಧವಾಗಿರುತ್ತದೆ. ಇತರ ಲೋಹಗಳೊಂದಿಗೆ ಮಿಶ್ರಿತ ಚಿನ್ನದ ಶುದ್ಧತೆಯ ಮಾಪನವೇ ‘ಕ್ಯಾರಟೇಜ್’. ಕ್ಯಾರಟ್‌ನ ಚಿಹ್ನೆಯು “K”.

24 ಕ್ಯಾರಟ್ ಎಂಬುದು ಬೇರೆ ಯಾವುದೇ ಲೋಹಗಳ ಮಿಶ್ರವಿಲ್ಲದ ಶುದ್ಧ ಚಿನ್ನವಾಗಿದೆ. 24 ಕ್ಯಾರಟ್ ಚಿನ್ನವನ್ನು ಶುದ್ಧ ಚಿನ್ನ ಅಥವಾ 100 ಪ್ರತಿಶತ ಚಿನ್ನ ಎಂದೂ ಕರೆಯಲಾಗುತ್ತದೆ. ಚಿನ್ನದ ಎಲ್ಲ 24 ಭಾಗಗಳು ಯಾವುದೇ ಲೋಹವನ್ನು ಸೇರಿಸಿರುವುದಿಲ್ಲ. ಇದು 99.9 ಪ್ರತಿಶತ ಶುದ್ಧವಾಗಿರುತ್ತದೆ. ಇದು ಒಂದು ವಿಶಿಷ್ಟವಾದ ಪ್ರಕಾಶಮಾನವಾದ ಹಳದಿ ಬಣ್ಣವನ್ನು ಹೊಂದಿರುತ್ತದೆ. ನಾಣ್ಯಗಳು ಮತ್ತು ಬಾರ್‌ಗಳನ್ನು ಹೆಚ್ಚಾಗಿ 24 ಕ್ಯಾರೆಟ್ ಚಿನ್ನದಿಂದ ಖರೀದಿಸಲಾಗುತ್ತದೆ.

24 ಕ್ಯಾರಟ್ ಚಿನ್ನ ಮೃದುವಾಗಿರುತ್ತದೆ, ಕಡಿಮೆ ಸಾಂದ್ರತೆಯದಾಗಿರುತ್ತದೆ. ಆದ್ದರಿಂದ ಆಭರಣಗಳನ್ನು ಮಾಡಲು ಇದು ಸೂಕ್ತವಲ್ಲ. ಕಿವಿ ಸೋಂಕಿನಿಂದ ಬಳಲುತ್ತಿರುವ ಮಕ್ಕಳಿಗೆ ಬಳಸುವಂತಹ ಎಲೆಕ್ಟ್ರಾನಿಕ್ಸ್ ಮತ್ತು ವೈದ್ಯಕೀಯ ಸಾಧನಗಳಲ್ಲಿ 24k ಚಿನ್ನವನ್ನು ಬಳಸಲಾಗುತ್ತದೆ.

22 ಕ್ಯಾರೆಟ್ ಚಿನ್ನ ಇದರಲ್ಲಿ 22 ಭಾಗಗಳಲ್ಲಿ ಚಿನ್ನ ಹಾಗೂ ಉಳಿದ ಎರಡು ಭಾಗಗಳಲ್ಲಿ ಕೆಲವು ಇತರ ಲೋಹಗಳಿರುತ್ತವೆ. ಆಭರಣಗಳ ತಯಾರಿಕೆಯಲ್ಲಿ ಇದನ್ನು ಹೆಚ್ಚು ವ್ಯಾಪಕವಾಗಿ ಬಳಸಲಾಗುತ್ತದೆ. ಬೆಳ್ಳಿ, ಸತು, ನಿಕಲ್ ಮತ್ತು ಇತರ ಮಿಶ್ರಲೋಹಗಳಂತಹ ಇತರ ಲೋಹಗಳನ್ನು ಸೇರ್ಪಡೆ ಮಾಡಲಾಗುತ್ತದೆ. ಇದು ಚಿನ್ನದ ವಿನ್ಯಾಸವನ್ನು ಗಟ್ಟಿಗೊಳಿಸುತ್ತದೆ ಮತ್ತು ಆಭರಣವನ್ನು ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ. 22 ಕ್ಯಾರಟ್ ಚಿನ್ನವು 91.67 ಪ್ರತಿಶತ ಚಿನ್ನವನ್ನು ಹೊಂದಿದ್ದು, ಉಳಿದ 8.33 ಪ್ರತಿಶತ ಬೇರೆ ಲೋಹಗಳಿಂದ ಮಾಡಲ್ಪಟ್ಟಿರುತ್ತದೆ.

18 ಕ್ಯಾರಟ್ ಚಿನ್ನವು 75 ಪ್ರತಿಶತ ಚಿನ್ನವನ್ನು ಒಳಗೊಂಡಿರುತ್ತದೆ. ಉಳಿದ ತಾಮ್ರ ಅಥವಾ ಬೆಳ್ಳಿಯಂತಹ ಇತರ ಲೋಹಗಳ 25 ಪ್ರತಿಶತದೊಂದಿಗೆ ಮಿಶ್ರಣವಾಗಿರುತ್ತದೆ. ಸ್ಟಡೆಡ್ ಆಭರಣಗಳು ಮತ್ತು ವಜ್ರದ ಆಭರಣಗಳನ್ನು 18 ಕ್ಯಾರಟ್ ಚಿನ್ನವನ್ನು ಬಳಸಿ ತಯಾರಿಸಲಾಗುತ್ತದೆ.

ಇದನ್ನೂ ಓದಿ: Stock Market: ಷೇರುಪೇಟೆ ಮಹಾ ಪತನ; ಸೆನ್ಸೆಕ್ಸ್‌ 2,000 ಅಂಕ ಕುಸಿತ; 17 ಲಕ್ಷ ಕೋಟಿ ರೂ. ಲಾಸ್‌!

Continue Reading

ಪ್ರಮುಖ ಸುದ್ದಿ

Stock Market News: ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ, ರೂ.17.03 ಲಕ್ಷ ಕೋಟಿ ನಷ್ಟ

Stock Market News: ಷೇರು ಮಾರುಕಟ್ಟೆ ಮೌಲ್ಯ ಹಿಂದಿನ ದಾಖಲಾತಿ ರೂ.457.16 ಲಕ್ಷ ಕೋಟಿಯ ಮೌಲ್ಯದಿಂದ ರೂ.440.13 ಲಕ್ಷ ಕೋಟಿಗೆ ಒಟ್ಟಾರೆ ಮೌಲ್ಯ ಕುಸಿಯಿತು. ಸೆನ್ಸೆಕ್ಸ್ 2,037 ಅಂಕಗಳನ್ನು ಕಳೆದುಕೊಂಡು 78,944ಕ್ಕೆ ಮತ್ತು ನಿಫ್ಟಿ 661 ಅಂಕಗಳನ್ನು ಕಳೆದುಕೊಂಡು 24,056ಕ್ಕೆ ತಲುಪಿತು.

VISTARANEWS.COM


on

Indian stock market
Koo

ಮುಂಬಯಿ: ಷೇರು ಮಾರುಕಟ್ಟೆಯಲ್ಲಿ (Stock Market News) ಇಂದು ಸಂಭವಿಸಿದ ಭಾರೀ ಕುಸಿತದ ಪರಿಣಾಮ, ಹೂಡಿಕೆದಾರರ (Investors) ) ಸಂಪತ್ತು ರೂ.17.03 ಲಕ್ಷ ಕೋಟಿಯಷ್ಟು ನಷ್ಟ ಕಂಡಿತು. ಷೇರು ಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ (Sensex) ಮತ್ತು ನಿಫ್ಟಿ (Nifty) ಇಂದು ಎರಡು ಸಲ ಭಾರಿ ಕುಸಿತ ದಾಖಲಿಸಿದವು. ಅಮೆರಿಕದ ಆರ್ಥಿಕತೆಯ (US Economy recession) ಹಿಂಜರಿತದ ಭೀತಿಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಭಾರಿ ಪಲ್ಲಟ ಆಗಿದೆ.

ಷೇರು ಮಾರುಕಟ್ಟೆ ಮೌಲ್ಯ ಹಿಂದಿನ ದಾಖಲಾತಿ ರೂ.457.16 ಲಕ್ಷ ಕೋಟಿಯ ಮೌಲ್ಯದಿಂದ ರೂ.440.13 ಲಕ್ಷ ಕೋಟಿಗೆ ಒಟ್ಟಾರೆ ಮೌಲ್ಯ ಕುಸಿಯಿತು. ಸೆನ್ಸೆಕ್ಸ್ 2,037 ಅಂಕಗಳನ್ನು ಕಳೆದುಕೊಂಡು 78,944ಕ್ಕೆ ಮತ್ತು ನಿಫ್ಟಿ 661 ಅಂಕಗಳನ್ನು ಕಳೆದುಕೊಂಡು 24,056ಕ್ಕೆ ತಲುಪಿತು. ಟಾಟಾ ಮೋಟಾರ್ಸ್, ಅದಾನಿ ಪೋರ್ಟ್ಸ್, ಎಂ & ಎಂ, ಎಸ್‌ಬಿಐ, ಜೆಎಸ್‌ಡಬ್ಲ್ಯೂ ಸ್ಟೀಲ್ ಮತ್ತು ಟೈಟಾನ್‌ನಂತಹ ಷೇರುಗಳು ಸೆನ್ಸೆಕ್ಸ್ 5.04% ವರೆಗೆ ಕುಸಿದವು. ಸೆನ್ಸೆಕ್ಸ್‌ನ 30 ಷೇರುಗಳಲ್ಲಿ 28 ಷೇರುಗಳು ರೆಡ್‌ನಲ್ಲಿ ವಹಿವಾಟಾಗುತ್ತಿವೆ.

ನಿಫ್ಟಿ ಷೇರುಗಳು ಕುಸಿದವು. 46 ನಿಫ್ಟಿ ಶೇರುಗಳು ರೆಡ್‌ನಲ್ಲಿ ವಹಿವಾಟಾಗುತ್ತಿವೆ. ಟಾಟಾ ಮೋಟಾರ್ಸ್, ಹಿಂಡಾಲ್ಕೊ, ಒಎನ್‌ಜಿಸಿ, ಶ್ರೀರಾಮ್ ಫೈನಾನ್ಸ್ ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ ನಿಫ್ಟಿಯಲ್ಲಿ ಟಾಪ್ ಲೂಸರ್ ಆಗಿದ್ದು, ಆರಂಭಿಕ ವ್ಯವಹಾರಗಳಲ್ಲಿ 4.37% ವರೆಗೆ ಕುಸಿದಿದೆ.

ಇಂದು 88 ಷೇರುಗಳು ತಮ್ಮ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿವೆ. ಮತ್ತೊಂದೆಡೆ, ಸೋಮವಾರದ ಆರಂಭಿಕ ವ್ಯವಹಾರಗಳಲ್ಲಿ 42 ಷೇರುಗಳು ಬಿಎಸ್‌ಇಯಲ್ಲಿ ತಮ್ಮ 52 ವಾರಗಳ ಕನಿಷ್ಠ ಮಟ್ಟವನ್ನು ತಲುಪಿದವು. 3,421 ಷೇರುಗಳಲ್ಲಿ 394 ಷೇರುಗಳು ಹಸಿರು ಬಣ್ಣದಲ್ಲಿ ವಹಿವಾಟಾಗಿವೆ. ಸುಮಾರು 2891 ಷೇರುಗಳು ಕೆಂಪು ಬಣ್ಣದಲ್ಲಿ ವಹಿವಾಟು ನಡೆಸುತ್ತಿದ್ದರೆ 136 ಷೇರುಗಳು ಬದಲಾಗದೆ ಉಳಿದಿವೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರ ನಿವ್ವಳ ಆಧಾರದ ಮೇಲೆ ರೂ. 3,310 ಕೋಟಿ ಮೌಲ್ಯದ ಈಕ್ವಿಟಿಗಳನ್ನು ಮಾರಾಟ ಮಾಡಿದರು. ಆದರೆ ದೇಶೀಯ ಹೂಡಿಕೆದಾರರು ರೂ. 2,965.94 ಕೋಟಿ ಷೇರುಗಳನ್ನು ಖರೀದಿಸಿದ್ದಾರೆ. ಇದು ತಾತ್ಕಾಲಿಕ ಎನ್‌ಎಸ್‌ಇ ಡೇಟಾ.

ಶುಕ್ರವಾರದ ವಹಿವಾಟಿನಲ್ಲಿ ನಿಫ್ಟಿ 293 ಪಾಯಿಂಟ್‌ಗಳ ಕುಸಿತದೊಂದಿಗೆ 24,717 ಕ್ಕೆ ಕೊನೆಗೊಂಡಿತು ಮತ್ತು ಸೆನ್ಸೆಕ್ಸ್ 886 ಪಾಯಿಂಟ್‌ಗಳನ್ನು ಕಳೆದುಕೊಂಡು 80,982 ಕ್ಕೆ ತಲುಪಿದೆ.

ಅಮೆರಿಕದ ಮಾರುಕಟ್ಟೆಗಳು

ಯುಎಸ್ ಆರ್ಥಿಕತೆಯು ಆರ್ಥಿಕ ಹಿಂಜರಿತದ ಕಡೆಗೆ ಹೋಗಬಹುದು ಎಂದು ಆರ್ಥಿಕ ಮಾಹಿತಿ ತೋರಿಸಿದೆ. ಕಳೆದ ವಾರ ಬಿಡುಗಡೆಯಾದ ದುರ್ಬಲ US ಉದ್ಯೋಗಗಳ ಮಾಹಿತಿಯು ಶುಕ್ರವಾರ US ಮಾರುಕಟ್ಟೆಗಳಲ್ಲಿ ಕುಸಿತಕ್ಕೆ ಕಾರಣವಾಯಿತು. NASDAQ ಸಂಯೋಜಿತ ಸೂಚ್ಯಂಕವು 417 ಅಂಕಗಳು ಅಥವಾ 2.43% ರಷ್ಟು ಕುಸಿದು 16,776 ಕ್ಕೆ ತಲುಪಿದರೆ, S&P 500 ಸೂಚ್ಯಂಕ 1.84% ಅಥವಾ 100 ಪಾಯಿಂಟ್‌ಗಳು ಕಡಿಮೆಯಾಗಿ 5,346 ಕ್ಕೆ ತಲುಪಿದೆ. ಡೌ ಜೋನ್ಸ್ ಇಂಡಸ್ಟ್ರಿಯಲ್ ಸರಾಸರಿ 1.51% ಅಥವಾ 610 ಪಾಯಿಂಟ್‌ಗಳು ಶುಕ್ರವಾರ 39,737 ಕ್ಕೆ ಕುಸಿದವು.

ಅಮೆರಿಕದ ಕಾರ್ಮಿಕ ಮಾರುಕಟ್ಟೆಯಲ್ಲಿ 249,000 ಉದ್ಯೋಗ ಕುಸಿತ ಆಗಬಹುದು ಎಂದು ವರದಿಗಳು ಸೂಚಿಸಿವೆ. ಅಲ್ಲದೆ, USನಲ್ಲಿ ಜುಲೈನಲ್ಲಿ ISM ಉತ್ಪಾದನೆಯು ಕುಸಿದಿದೆ ಎಂದು ಡೇಟಾ ತೋರಿಸಿದೆ. ISM ಉತ್ಪಾದನಾ ಸೂಚ್ಯಂಕವು ಜೂನ್‌ನಲ್ಲಿ 48.5% ರಿಂದ ಜುಲೈನಲ್ಲಿ 46.8% ಕ್ಕೆ ಕುಸಿಯಿತು. ಇದು ಎಂಟು ತಿಂಗಳ ಕನಿಷ್ಠ. US ಕಾರ್ಖಾನೆಗಳು ಇನ್ನೂ ಕುಸಿಯುತ್ತಿವೆ.

ಏಷ್ಯ, ಯುರೋಪ್‌ ಮಾರುಕಟ್ಟೆಯಲ್ಲಿ ಕುಸಿತ

ಯುಎಸ್ ಮಾರುಕಟ್ಟೆಯಲ್ಲಿನ ದುರ್ಬಲತೆಯ ಭಾವನೆ ಏಷ್ಯನ್ ಮತ್ತು ಯುರೋಪಿಯನ್ ಮಾರುಕಟ್ಟೆಗಳ ಮೇಲೂ ಪರಿಣಾಮ ಬೀರಿದೆ. ಜಪಾನ್‌ನ ನಿಕ್ಕಿ ಇಂದು 2747 ಅಂಕಗಳಿಂದ 33,162 ಅಂಕಗಳಿಗೆ ಕುಸಿದಿದೆ ಮತ್ತು ಹ್ಯಾಂಗ್ ಸೆಂಗ್ 36 ಅಂಕಗಳಿಂದ 16,908ಕ್ಕೆ ಕುಸಿದಿದೆ. ತೈವಾನ್ ಸೂಚ್ಯಂಕವು 1584 ಅಂಕಗಳನ್ನು ಕಳೆದುಕೊಂಡು 20,044 ಕ್ಕೆ ತಲುಪಿದೆ. ಕೊಸ್ಪಿ ಸೋಮವಾರ 182 ಅಂಕಗಳ ಕುಸಿತ ಕಂಡು 2,494 ಅಂಕಗಳಿಗೆ ತಲುಪಿತ್ತು.

FTSE ಶುಕ್ರವಾರ 108 ಅಂಕಗಳೊಂದಿಗೆ 8174ಕ್ಕೆ ಕುಸಿದಿದೆ. ಫ್ರಾನ್ಸ್‌ನ CAC 119 ಅಂಕಗಳನ್ನು ಕಳೆದುಕೊಂಡು 7251 ಕ್ಕೆ ತಲುಪಿತು ಮತ್ತು DAX 421 ಅಂಕಗಳು ಕಡಿಮೆಯಾಗಿ 17,661 ಕ್ಕೆ ಕೊನೆಗೊಂಡಿತು.

ಇದನ್ನೂ ಓದಿ: Stock Market: ಷೇರುಪೇಟೆ ಮಹಾ ಪತನ; ಸೆನ್ಸೆಕ್ಸ್‌ 2,000 ಅಂಕ ಕುಸಿತ; 17 ಲಕ್ಷ ಕೋಟಿ ರೂ. ಲಾಸ್‌!

Continue Reading
Advertisement
ಕ್ರೀಡೆ2 hours ago

Paris Olympics 2024 : ಸೆಮಿಫೈನಲ್​​​​ನಲ್ಲಿ ಭಾರತ ಹಾಕಿ ತಂಡಕ್ಕೆ ಆಘಾತಕಾರಿ ಸೋಲು, ಇನ್ನೂ ಇದೆ ಪದಕ ಗೆಲ್ಲುವ ಅವಕಾಶ

Shira News
ತುಮಕೂರು3 hours ago

Shira News: ವರ್ಗಾವಣೆಗೊಂಡ ಶಿರಾ ತಾ.ಪಂ ಇಓ ಅನಂತ್‌ರಾಜ್‌ಗೆ ಬೀಳ್ಕೊಡುಗೆ

Rekha Sharma
ದೇಶ3 hours ago

Rekha Sharma: ರಾಷ್ಟ್ರೀಯ ಮಹಿಳಾ ಆಯೋಗ ಅಧ್ಯಕ್ಷೆ ರೇಖಾ ಶರ್ಮಾ ಅಧಿಕಾರಾವಧಿ ಪೂರ್ಣ

Bangladesh unrest
ದೇಶ3 hours ago

Bangladesh Unrest: ಶೇಖ್ ಹಸೀನಾ ಬೆಂಬಲಿಗನ ಫೈವ್‌ ಸ್ಟಾರ್‌ ಹೊಟೇಲ್‌ಗೆ ಬೆಂಕಿ; 24 ಜನ ಸಜೀವ ದಹನ

Paris Olympics
ಕ್ರೀಡೆ4 hours ago

Paris Olympics: ಫೈನಲ್​ ಪ್ರವೇಶಿಸಿ ಐತಿಹಾಸಿಕ ಪದಕ ಖಾತ್ರಿಪಡಿಸಿದ ಕುಸ್ತಿಪಟು ವಿನೇಶ್ ಫೋಗಟ್

Bangladesh unrest
ದೇಶ4 hours ago

Bangladesh Unrest: ಶೇಖ್‌ ಹಸೀನಾಗೆ 8 ತಿಂಗಳ ಹಿಂದೆಯೇ ಎಚ್ಚರಿಕೆ ನೀಡಿದ್ದ ಭಾರತದ ಜ್ಯೋತಿಷಿ; ಆತನ ಭವಿಷ್ಯವಾಣಿ ಏನು?

Pralhad Joshi
ದೇಶ4 hours ago

Pralhad Joshi: 2030ರಲ್ಲೂ ನಾವಿಲ್ಲೇ ಇರುತ್ತೇವೆ, ನೀವಲ್ಲೇ ಇರುತ್ತೀರಿ; ಸಂಸತ್‌ನಲ್ಲಿ ಪ್ರತಿಪಕ್ಷಗಳಿಗೆ ಜೋಶಿ ಟಾಂಗ್

Bangladesh Protest
ವಿದೇಶ4 hours ago

Bangladesh Chronology: 1971ರ ದೇಶ ಉದಯದಿಂದ ಹಿಡಿದು 2024ರ ದಂಗೆಯವರೆಗೆ; ಇಲ್ಲಿದೆ ಬಾಂಗ್ಲಾದೇಶದ ಸಂಪೂರ್ಣ ರಕ್ತ ಚರಿತ್ರೆ!

Reliance Foundation
ಕರ್ನಾಟಕ4 hours ago

Reliance Foundation: ವಯನಾಡಿನ ಭೂಕುಸಿತ ಸಂತ್ರಸ್ತರಿಗೆ ರಿಲಯನ್ಸ್ ಫೌಂಡೇಷನ್ ನೆರವು

B.Ed Exam Scam
ಕರ್ನಾಟಕ4 hours ago

B.Ed Exam Scam: ಬಿ.ಇಡಿ ಪರೀಕ್ಷೆ ಅಕ್ರಮ; ಗುಲ್ಬರ್ಗಾ ವಿವಿ ಕುಲಸಚಿವೆ ಸೇರಿ ಐವರ ವಿರುದ್ಧ ಎಫ್‌ಐಆರ್‌

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Wild Animals Attack
ಚಿಕ್ಕಮಗಳೂರು9 hours ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ10 hours ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ4 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ6 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ6 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ6 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ1 week ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

ಟ್ರೆಂಡಿಂಗ್‌