Konkan Railway: ಕಾರವಾರ - ಬೆಂಗಳೂರು ನಡುವಿನ ಎಲ್ಲಾ ರೈಲುಗಳ ಸಂಚಾರ ಆ. 8ರವರೆಗೆ ರದ್ದು - Vistara News

Latest

Konkan Railway: ಕಾರವಾರ – ಬೆಂಗಳೂರು ನಡುವಿನ ಎಲ್ಲಾ ರೈಲುಗಳ ಸಂಚಾರ ಆ. 8ರವರೆಗೆ ರದ್ದು

Konkan Railway: ಪಶ್ಚಿಮ ಘಟ್ಟ ಭಾಗದ ಎಡಕುಮೇರಿ – ಕಡಗರವಳ್ಳಿ ರೈಲು ಮಾರ್ಗದಲ್ಲಿ ಭೂಕುಸಿತ ಉಂಟಾಗಿದ್ದರಿಂದ ರೈಲು ಹಳಿಗಳ ಮೇಲೆ ಮಣ್ಣು ಕುಸಿದ ಕಾರಣ ರೈಲು ಸಂಚಾರಕ್ಕೆ ತಡೆಯಾಗಿದೆ. ಹಾಗಾಗಿ ಇಲ್ಲಿ ದುರಸ್ತಿ ಕಾರ್ಯಗಳು ನಡೆಯುತ್ತಿದ್ದ ಹಿನ್ನಲೆಯಲ್ಲಿ ಕೊಂಕಣ ರೈಲು ಮಾರ್ಗದಲ್ಲಿ ಕಾರವಾರ ಹಾಗೂ ಬೆಂಗಳೂರು ನಡುವಿನ ಎಲ್ಲಾ ರೈಲುಗಳ ಸಂಚಾರವನ್ನು ಆಗಸ್ಟ್ 8ರವರೆಗೆ ರದ್ದುಪಡಿಸಲಾಗಿದೆ

VISTARANEWS.COM


on

Karnataka Trains
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ರಾಜ್ಯದೆಲ್ಲೆಡೆ ಭಾರೀ ಮಳೆ ಸುರಿಯುತ್ತಿರುವ ಕಾರಣ ಹಲವೆಡೆ ಜನ ಜೀವನ ಅಸ್ತವ್ಯಸ್ಥವಾಗಿದೆ. ಅಲ್ಲದೇ ಕೆಲವು ಕಡೆಗಳಲ್ಲಿ ಭೂಕುಸಿತ ಉಂಟಾದ ಕಾರಣ ಬಸ್ ಹಾಗೂ ರೈಲ್ವೆ ಸಂಚಾರದಲ್ಲಿ ಸಮಸ್ಯೆ ಎದುರಾಗಿದೆ. ಪಶ್ಚಿಮ ಘಟ್ಟ ಭಾಗದ ಎಡಕುಮೇರಿ – ಕಡಗರವಳ್ಳಿ ರೈಲು ಮಾರ್ಗದಲ್ಲಿ ಭೂಕುಸಿತ ಉಂಟಾಗಿದ್ದರಿಂದ ರೈಲು ಹಳಿಗಳ ಮೇಲೆ ಮಣ್ಣು ಕುಸಿದ ಕಾರಣ ರೈಲು ಸಂಚಾರಕ್ಕೆ ತಡೆಯಾಗಿದೆ. ಹಾಗಾಗಿ ಇಲ್ಲಿ ದುರಸ್ತಿ ಕಾರ್ಯಗಳು ನಡೆಯುತ್ತಿದ್ದ ಹಿನ್ನಲೆಯಲ್ಲಿ ಕೊಂಕಣ ರೈಲು (Konkan Railway) ಮಾರ್ಗದಲ್ಲಿ ಕಾರವಾರ ಹಾಗೂ ಬೆಂಗಳೂರು ನಡುವಿನ ಎಲ್ಲಾ ರೈಲುಗಳ ಸಂಚಾರವನ್ನು ಆಗಸ್ಟ್ 8ರವರೆಗೆ ರದ್ದುಪಡಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ರದ್ದಾದ ರೈಲುಗಳ ವಿವರ ಹೀಗಿದೆ:

  • ರೈಲು ನಂ.16595 ಕೆಎಸ್ಆರ್ ಬೆಂಗಳೂರು- ಕಾರವಾರ ಎಕ್ಸ್‌ಪ್ರೆಸ್‌ ರೈಲಿನ ಸಂಚಾರ ಆಗಸ್ಟ್ 7ರವರೆಗೆ ಸಂಪೂರ್ಣ ರದ್ದು.
  • ರೈಲು ನಂ.16596 ಕಾರವಾರ- ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲಿನ ಸಂಚಾರ ಆ.8ರವರೆಗೆ ಸಂಪೂರ್ಣ ರದ್ದು.
  • ರೈಲು ನಂ.01595 ಕಾರವಾರ- ಮಡಗಾಂವ್ ಹಾಗೂ ರೈಲು ನಂ. 01596 ಮಡಗಾಂವ್-ಕಾರವಾರ ವಿಶೇಷ ರೈಲಿನ ಸಂಚಾರ ಆ.8ರವರೆಗೆ ಸಂಪೂರ್ಣ ರದ್ದು.
  • ರೈಲು ನಂ.16585 ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು- ಮುರ್ಡೇಶ್ವರ ಎಕ್ಸ್‌ಪ್ರೆಸ್‌ ರೈಲಿನ ಸಂಚಾರ ಆ.7ರವರೆಗೆ ಸಂಪೂರ್ಣ ರದ್ದು.
  • ರೈಲು ನಂ.16586 ಮುರ್ಡೇಶ್ವರ- ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲಿನ ಸಂಚಾರ ಆ.8ರವರೆಗೆ ಸಂಪೂರ್ಣ ರದ್ದು.
  • ರೈಲು ನಂ.16515 ಕೆಎಸ್ಆರ್ ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್‌ ರೈಲಿನ ಆ.7ರವರೆಗಿನ ಸಂಚಾರ ಸಂಪೂರ್ಣ ರದ್ದು.
  • ರೈಲು ನಂ.16516 ಕಾರವಾರ- ಕೆಎಸ್ಆರ್ ಯಶವಂತಪುರ ಎಕ್ಸ್‌ಪ್ರೆಸ್‌ ರೈಲಿನ ಆ.8ರವರೆಗಿನ ಸಂಚಾರವನ್ನು ಸಂಪೂರ್ಣವಾಗಿ ರದ್ದು ಪಡಿಸಲಾಗಿದೆ.

ಇದನ್ನೂ ಓದಿ: Railway Rules: ರೈಲು ಪ್ರಯಾಣಿಕರು ತಿಳಿದುಕೊಳ್ಳಲೇಬೇಕಾದ ನಿಯಮಗಳು

ಈ ಕುರಿತು ಕೊಂಕಣ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯವರ ಪ್ರಕಟಣೆ ತಿಳಿಸಿದೆ. ಈ ಮೂಲಕ ರೈಲ್ವೆ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಕಹಿ ಸುದ್ದಿಯನ್ನು ನೀಡಿದೆ. ದುರಸ್ತಿ ಕಾರ್ಯ ನಡೆಯುತ್ತಿರುವ ಸ್ಥಳ ಹಾಗೂ ಆಸುಪಾಸಿನಲ್ಲಿ ಗೂಡ್ಸ್ ರೈಲು ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಪ್ರಯಾಣಿಕರ ರೈಲು ಸಂಚಾರಕ್ಕೆ ಇನ್ನೂ ಅವಕಾಶ ನೀಡಿಲ್ಲ. ಆದರೆ ಸದ್ಯದಲ್ಲೇ ದುರಸ್ಥಿ ಕಾರ್ಯ ಸಂಪೂರ್ಣವಾಗಲಿದ್ದು, ನಂತರ ರೈಲು ಸಂಚಾರ ಮುಂದುವರಿಯಲಿದೆ. ಅಲ್ಲಿಯವರೆಗೆ ರೈಲು ಪ್ರಯಾಣಿಕರು ಸಹಕರಿಸುವಂತೆ ವಿನಂತಿಸಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಪಿಕ್‌ನಿಕ್‌ಗೆಂದು ಬಂದವನು ರೀಲ್ಸ್‌ ಮಾಡಲು ಹೋದ; ಜಲಪಾತದಿಂದ ಬಿದ್ದು ಸತ್ತ

Viral Video: ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ರೀಲ್ಸ್ ಮಾಡಲು ಹೋಗಿ ರಾಜಸ್ಥಾನದ ಭಿಲ್ವಾರಾದ ಜಲಪಾತದಲ್ಲಿ ಯುವಕನೊಬ್ಬ 150 ಅಡಿ ಎತ್ತರದಿಂದ ಬಿದ್ದು ಸಾವನ್ನಪ್ಪಿದ್ದಾನೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನದಿಯ ಬಲವಾದ ಪ್ರವಾಹಗಳ ನಡುವೆ ಯುವಕರು ಹಗ್ಗವನ್ನು ಗಟ್ಟಿಯಾಗಿ ಹಿಡಿದು ಅದರ ತುದಿಯಲ್ಲಿ ಹರಿಯುವ ಪ್ರವಾಹದಲ್ಲಿ ಸಿಲುಕಿದ್ದ ತಮ್ಮ ಸ್ನೇಹಿತನನ್ನು ಎಳೆಯುತ್ತಿದ್ದಾರೆ. ಆದರೂ, ಆತ ನೀರಿನ ರಭಸಕ್ಕೆ ಹಿಡಿತ ಕಳೆದುಕೊಂಡು ಅವನ ಸ್ನೇಹಿತರ ಕಣ್ಮುಂದೆಯೇ ಬಲವಾದ ಪ್ರವಾಹಗಳ ಜೊತೆಗೆ ಕೊಚ್ಚಿಹೋಗಿದ್ದಾನೆ.

VISTARANEWS.COM


on

Viral Video
Koo


ದೇಶಾದ್ಯಂತ ಭಾರೀ ಮಳೆಯಾಗಿದ್ದ ಹಿನ್ನೆಲೆಯಲ್ಲಿ ನೀರಿನ ರಭಸ ಹೆಚ್ಚಾಗಿ ಅನೇಕ ಜಲಪಾತಗಳು ಉಕ್ಕಿ ಹರಿಯುತ್ತಿದೆ. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ರೀಲ್ಸ್ ಮಾಡಲು ಹೋಗಿ ರಾಜಸ್ಥಾನದ ಭಿಲ್ವಾರಾದ ಜಲಪಾತದಲ್ಲಿ ಯುವಕನೊಬ್ಬ 150 ಅಡಿ ಎತ್ತರದಿಂದ ಬಿದ್ದು ಸಾವನ್ನಪ್ಪಿದ್ದಾನೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ಈ ವೈರಲ್ ವಿಡಿಯೊದಲ್ಲಿ ನದಿಯ ಬಲವಾದ ಪ್ರವಾಹಗಳ ನಡುವೆ ಯುವಕರು ಹಗ್ಗವನ್ನು ಗಟ್ಟಿಯಾಗಿ ಹಿಡಿದು ಅದರ ತುದಿಯಲ್ಲಿ ಹರಿಯುವ ಪ್ರವಾಹದಲ್ಲಿ ಸಿಲುಕಿದ್ದ ತಮ್ಮ ಸ್ನೇಹಿತನನ್ನು ಎಳೆಯುತ್ತಿದ್ದಾರೆ. ಆದರೂ, ಆತ ನೀರಿನ ರಭಸಕ್ಕೆ ಹಿಡಿತ ಕಳೆದುಕೊಂಡು ಅವನ ಸ್ನೇಹಿತರ ಕಣ್ಮುಂದೆಯೇ ಬಲವಾದ ಪ್ರವಾಹಗಳ ಜೊತೆಗೆ ಕೊಚ್ಚಿಹೋಗಿದ್ದಾನೆ. ಈ ಘಟನೆಯಲ್ಲಿ ಯುವಕ ಮೃತಪಟ್ಟಿದ್ದಾನೆ ಎಂಬುದಾಗಿ ತಿಳಿದುಬಂದಿದೆ.

ಮೃತ ಯುವಕ ಭಿಲ್ವಾರಾ ಜಿಲ್ಲೆಯ ಭವಾನಿ ನಗರದ ನಿವಾಸಿ ಕನ್ಹಯ್ಯಾಲಾಲ್ ಬೈರ್ವಾ (26) ಎಂಬುದಾಗಿ ತಿಳಿದುಬಂದಿದೆ. ಈತ ಸೋಮವಾರ ವಿಶ್ವಪ್ರಸಿದ್ಧ ಮೇನಾಲ್ ಜಲಪಾತಕ್ಕೆ ತನ್ನ ಸ್ನೇಹಿತರ ಜೊತೆಗೆ ಪಿಕ್‍ನಿಕ್‌ಗೆ ಬಂದಿದ್ದಾನೆ. ಎಲ್ಲರೂ ಬಂಡೆಗಳ ಮೇಲೆ ಕುಳಿತು ಸ್ನಾನ ಮಾಡಿದ್ದಾರೆ. ಆ ವೇಳೆ ಅವರು ಸೆಲ್ಫಿ ತೆಗೆದುಕೊಳ್ಳುವುದರ ಜೊತೆಗೆ ರೀಲ್ ಮಾಡಲು ಮುಂದಾಗಿದ್ದಾರೆ. ಆ ವೇಳೆ ಕನ್ಹಯ್ಯಾಲಾಲ್ ಕಾಲು ಜಾರಿ ಬಲವಾದ ಪ್ರವಾಹಕ್ಕೆ ಸಿಲುಕಿದ್ದಾನೆ. ಆಗ ಆತ ಜಲಪಾತಕ್ಕೆ ಜೋಡಿಸಲಾದ ಸುರಕ್ಷತಾ ಸರಪಳಿಯನ್ನು ಹಿಡಿದಿದ್ದಾನೆ. ಹಾಗಾಗಿ ಅವರ ಸ್ನೇಹಿತರು ಮತ್ತು ಸ್ಥಳೀಯರು ಅವನನ್ನು ರಕ್ಷಿಸಲು ಪ್ರಯತ್ನಿಸಿದರು.

ಅಂತಿಮವಾಗಿ ಅವನ ಕೈ ಸರಪಳಿಯಿಂದ ಜಾರಿ ಜಲಪಾತದಿಂದ 150 ಅಡಿ ಕೆಳಗೆ ಬಿದ್ದನು. ಮಾಹಿತಿ ಬಂದ ಕೂಡಲೇ ಪೊಲೀಸರು ಮತ್ತು ಆಡಳಿತಾಧಿಕಾರಿಗಳ ತಂಡ ಸ್ಥಳಕ್ಕೆ ಬಂದಿದ್ದಾರೆ. ಸ್ಥಳೀಯರು ಹಾಗೂ ರಕ್ಷಣಾ ತಂಡ ಕನ್ಹಯ್ಯಾಲಾಲ್ ಶವಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಇದನ್ನೂ ಓದಿ: ರೀಲ್ಸ್‌ ಮಾಡುವಾಗ ಕುತ್ತಿಗೆಗೆ ದಾರ ಬಿಗಿದು ಬಾಲಕ ಸಾವು; ವಿಡಿಯೊ ಇದೆ

ಇತ್ತೀಚಿನ ದಿನಗಳಲ್ಲಿ ರೀಲ್ ಮಾಡಲು ಹೋಗಿ ಸಾವಿಗೀಡಾಗುವವರ ವೇಗವಾಗಿ ಹೆಚ್ಚುತ್ತಿದೆ. ಇದು ಒಂದೇ ಘಟನೆಯಲ್ಲ. ಸೋಶಿಯಲ್ ಮೀಡಿಯಾದಲ್ಲಿ ಲೈಕ್ , ಶೇರ್‌ ಮತ್ತು ಫಾಲೋವರ್ಸ್‍ಗಳನ್ನು ಪಡೆಯಲು ಜನರು ತಮ್ಮ ಪ್ರಾಣವನ್ನು ಪಣಕ್ಕಿಡುತ್ತಿದ್ದಾರೆ. ಇದಕ್ಕೂ ಮುಂಚೆಯೇ, ಸೋಶಿಯಲ್ ಮೀಡಿಯಾದಲ್ಲಿ ರೀಲ್ ಮಾಡಲು ಹೋಗಿ ಅನೇಕ ಯುವಕರು ಮತ್ತು ಯುವತಿಯರು ಸಾವನ್ನಪ್ಪಿದ್ದಾರೆ.

Continue Reading

ವೈರಲ್ ನ್ಯೂಸ್

Viral Video: ಪ್ರಿಯಕರನಿಗೆ ಜಾಮೀನು ಕೊಡಿಸಿಲ್ಲವೆಂದು ನ್ಯಾಯಾಧೀಶರಿಗೇ ಬಾರಿಸಿದ ವಕೀಲೆ!

ಮಹಾರಾಷ್ಟ್ರದ ನ್ಯಾಯಾಲಯದಲ್ಲಿ ಭಾವಿ ಪತಿಗೆ ಜಾಮೀನು ನೀಡಲು ನಿರಾಕರಿಸಿದ ನ್ಯಾಯಾಧೀಶರ ಮೇಲೆ ವಕೀಲರೊಬ್ಬರು ಹಲ್ಲೆ ನಡೆಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಇಬ್ಬರೂ ಮಹಿಳೆಯರು ಹೊಡೆದಾಡಿಕೊಂಡಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

VISTARANEWS.COM


on

By

Viral video
Koo

ತನ್ನ ಪ್ರಿಯಕರನಿಗೆ ಜಾಮೀನು ಕೊಡಿಸಿಲ್ಲ ಎಂದು ವಕೀಲರೊಬ್ಬರು ನ್ಯಾಯಾಧೀಶರ (fight between lawyer and judge) ಮೇಲೆ ಹಲ್ಲೆ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral Video) ಆಗುತ್ತಿದೆ. ನ್ಯಾಯಾಲಯದಲ್ಲಿ ನ್ಯಾಯಾಧೀಶರು ಮತ್ತು ಮಹಿಳಾ ವಕೀಲರ ನಡುವಿನ ವ್ಯಾಪಕ ವಾಗ್ವಾದದ ಬಳಿಕ ಈ ಘಟನೆ ನಡೆದಿದೆ ಎನ್ನಲಾಗಿದೆ.

ಈ ವಿಡಿಯೋದಲ್ಲಿ ನ್ಯಾಯಾಧೀಶರೊಂದಿಗೆ ಮಹಿಳಾ ವಕೀಲರು ಜಗಳವಾಡುವುದನ್ನು ಕಾಣಬಹುದು. ಇದು ಸಾಮಾಜಿಕ ಜಾಲತಾಣ ಬಳಕೆದಾರರ ಗಮನವನ್ನು ಸೆಳೆಯುತ್ತಿದ್ದು ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ.
ಇದು 2022ರ ವಿಡಿಯೋ ಕ್ಲಿಪ್ ಎನ್ನಲಾಗುತ್ತಿದೆ. ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ ಮಾಯಾಂಕ್ ಬರ್ಮಿ ಎಂಬವರು ಹಂಚಿಕೊಂಡಿದ್ದು, ತಕ್ಷಣವೇ ಭಾರೀ ವೈರಲ್ ಆಗಿದೆ.

ಮಹಾರಾಷ್ಟ್ರದ ನ್ಯಾಯಾಲಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವಕೀಲರ ಭಾವಿ ಪತಿಗೆ ಜಾಮೀನು ನೀಡಲು ನ್ಯಾಯಾಧೀಶರು ನಿರಾಕರಿಸಿದಾಗ ಜಗಳ ಆರಂಭವಾಗಿದೆ ಎಂದು ಶೀರ್ಷಿಕೆಯಲ್ಲಿ ಹೇಳಲಾಗಿದೆ.

ಈ ವಿಡಿಯೋದಲ್ಲಿ ಇಬ್ಬರೂ ತಮ್ಮ ಹುದ್ದೆಯ ಗೌರವಾರ್ಥವಾಗಿರುವ ಕಪ್ಪು ಬಟ್ಟೆಗಳನ್ನು ಧರಿಸಿದ್ದರು. ಇಬ್ಬರ ನಡುವೆಯೂ ತೀವ್ರ ಜಗಳವಾಗಿದೆ. ಸುತ್ತಮುತ್ತ ಸಾಕಷ್ಟು ಮಂದಿ ನೆರೆದಿದ್ದರು. ಕೆಲವರು ಇವರ ಜಗಳದ ವಿಡಿಯೋವನ್ನು ಕೂಡ ಮಾಡುತ್ತಿದ್ದರು. ಪರಸ್ಪರರ ಕೂದಲನ್ನು ಎಳೆದುಕೊಂಡು, ಹೊಡೆದಾಡಿಕೊಂಡ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿತ್ತು. ಕೊನೆಗೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಮಧ್ಯೆ ಬಂದು ಪರಿಸ್ಥಿತಿಯನ್ನು ನಿಯಂತ್ರಿಸಿದರು.


ಇದನ್ನೂ ಓದಿ: Shocker News : ಯುಪಿ ಸಿಎಂ ಯೋಗಿ ಅಧಿಕೃತ ನಿವಾಸದ ಹೊರಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಪರಿಸ್ಥಿತಿ ತುಂಬಾ ಗಂಭೀರವಾಗಿದ್ದರೂ ಆನ್‌ಲೈನ್‌ನಲ್ಲಿ ಮಾತ್ರ ಇದು ಎಲ್ಲರ ಮನೋರಂಜನೆಗೆ ಕಾರಣವಾಗಿದೆ. ಅನೇಕರು ಇದು ಭಾರತದಲ್ಲಿ ಮಾತ್ರ ಸಂಭವಿಸಲು ಸಾಧ್ಯ ಎಂದು ಹೇಳಿದ್ದಾರೆ. ಆಗಸ್ಟ್ 4ರಂದು ಹಂಚಿಕೊಂಡಿರುವ ಈ ವಿಡಿಯೋವನ್ನು ಈಗಾಗಲೇ ಐದು ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದಾರೆ. ವೃತ್ತಿಪರ ಗಡಿಯನ್ನು ಮರೆತು ವೈಯಕ್ತಿಕ ಭಾವನೆಯಿಂದ ಈ ರೀತಿ ನ್ಯಾಯಾಧೀಶರು ಮತ್ತು ವಕೀಲರು ಘರ್ಷಣೆಗೆ ಇಳಿದಿರುವುದಕ್ಕೆ ಕೆಲವರು ತೀಕ್ಷ್ಣವಾಗಿಯೂ ಪ್ರತಿಕ್ರಿಯಿಸಿದ್ದಾರೆ.

Continue Reading

Latest

Viral Video: ಇದ್ದಕ್ಕಿದ್ದಂತೆ ಚಲಿಸಿದ ಟ್ರಕ್; ಯುವತಿಯ ಸಾಹಸ ಹೇಗಿತ್ತು ನೋಡಿ!

Viral Video: ಟ್ರಕ್‌ವೊಂದು ಇದ್ದಕ್ಕಿದ್ದಂತೆ ಚಲಿಸಿದಾಗ ಯುವತಿಯೊಬ್ಬಳು ತಕ್ಷಣ ಓಡಿ ಹೋಗಿ ಟ್ರಕ್ ಏರಿ ಹ್ಯಾಂಡ್ ಬ್ರೇಕ್ ಹಾಕಿ ನಡೆಯಬೇಕಾಗಿದ್ದ ಭಾರಿ ಆಪತ್ತು ತಡೆದಿದ್ದಾಳೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ಯುವತಿಯನ್ನು ಎಲ್ಲರೂ ರಿಯಲ್ ಹೀರೋ ಎಂದು ಶ್ಲಾಘಿಸಿದ್ದಾರೆ. ಮಹಿಳೆ ಟ್ರಕ್ ಪಕ್ಕದಲ್ಲಿ ಹಾದುಹೋಗುವಾಗ ಟ್ರಕ್ ಇದ್ದಕ್ಕಿದ್ದಂತೆ ಮುಂದೆ ಚಲಿಸಿದೆ. ಹಿಂದೆ ಇಬ್ಬರು ಪುರುಷರು ಟ್ರಕ್ ಅನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಆಗ ಇದನ್ನು ನೋಡಿದ ಮಹಿಳೆ ಧೃತಿಗೆಡದೆ ತಕ್ಷಣ ಓಡಿಹೋಗಿ ಟ್ರಕ್ ಏರಿ ಹ್ಯಾಂಡ್ ಬ್ರೇಕ್ ಹಾಕಿ ಟ್ರಕ್ ಅನ್ನು ನಿಲ್ಲಿಸಿದ್ದಾಳೆ.

VISTARANEWS.COM


on

Viral Video
Koo


ಕೆಲವೊಮ್ಮೆ ಚಾಲಕನ ಬೇಜವಾಬ್ದಾರಿತನದಿಂದ ವಾಹನಗಳು ಇದ್ದಕ್ಕಿದ್ದಂತೆ ಚಲಿಸಿ ಅಪಘಾತಕ್ಕೆ ಕಾರಣವಾಗುತ್ತವೆ. ಇಂತಹ ಘಟನೆಯಿಂದ ಅನೇಕ ಜನರು ಆಪತ್ತಿಗೆ ಸಿಲುಕಿದ್ದಾರೆ. ಇದೀಗ ಅಂತಹದೊಂದು ಘಟನೆ ನಡೆದಿದ್ದು, ನಿಂತಿದ್ದ ಟ್ರಕ್‌ವೊಂದು ಇದ್ದಕ್ಕಿದ್ದಂತೆ ಚಲಿಸಿದೆ. ಇದನ್ನು ನೋಡಿದ ಮಹಿಳೆಯೊಬ್ಬಳು ತಕ್ಷಣ ಟ್ರಕ್ ಏರಿ ಹ್ಯಾಂಡ್ ಬ್ರೇಕ್ ಹಾಕಿ ನಡೆಯಬೇಕಾಗಿದ್ದ ಆಪತ್ತು ತಡೆದಿದ್ದಾಳೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ. ಆ ಮಹಿಳೆಯನ್ನು ಎಲ್ಲರೂ ರಿಯಲ್ ಹೀರೋ ಎಂದು ಕರೆದಿದ್ದಾರೆ.

ಈ ಘಟನೆ ಅಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಹಿಡಿಯಾಗಿದೆ. ವಿಡಿಯೊದಲ್ಲಿ ಮಹಿಳೆ ಟ್ರಕ್ ಮುಂದೆ ಹಾದುಹೋಗುವಾಗ ಟ್ರಕ್ ಇದ್ದಕ್ಕಿದ್ದಂತೆ ಮುಂದೆ ಚಲಿಸಿದೆ. ಹಿಂದೆ ಇಬ್ಬರು ಪುರುಷರು ಟ್ರಕ್ ಅನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಆಗ ಇದನ್ನು ನೋಡಿದ ಮಹಿಳೆ ಧೃತಿಗೆಡದೆ ತಕ್ಷಣ ಓಡಿಹೋಗಿ ಟ್ರಕ್ ಏರಿ ಹ್ಯಾಂಡ್ ಬ್ರೇಕ್ ಹಾಕಿ ಟ್ರಕ್ ಅನ್ನು ನಿಲ್ಲಿಸಿದ್ದಾಳೆ.

ಮಹಿಳೆಯ ತ್ವರಿತ ಚಿಂತನೆ ಮತ್ತು ನಿರ್ಣಾಯಕ ಕ್ರಮವು ಅಂತಿಮವಾಗಿ ಸಂಭವಿಸಬಹುದಾದ ದುರಂತ ಅಪಘಾತವನ್ನು ತಪ್ಪಿಸಿತು. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ಅವಳ ಧೈರ್ಯ ಮತ್ತು ಒಳ್ಳೆ ಮನಸ್ಸನ್ನು ಕಂಡು ಹೊಗಳಿದ್ದಾರೆ. ಮತ್ತು ಟ್ರಕ್ ಅನ್ನು ಹಿಂದಕ್ಕೆ ಎಳೆಯುವ ಸಾಹಸ ಮಾಡಿದ ಇಬ್ಬರು ಪುರುಷರನ್ನು ಅನೇಕರು ಟೀಕಿಸಿದ್ದಾರೆ.

“ಎಲ್ಲಾ ಶ್ರೇಯಸ್ಸು ಆ ಧೈರ್ಯಶಾಲಿ ಹುಡುಗಿಗೆ ಸಲ್ಲುತ್ತದೆ. ಅವಳು ತನ್ನ ಸಮಯ ಪ್ರಜ್ಞೆಯನ್ನು ಸರಿಯಾದ ಸಮಯದಲ್ಲಿ ಬಳಸಿದಳು. ಟ್ರಕ್ ಅನ್ನು ಹಿಂದಕ್ಕೆ ಎಳೆಯುವ ಮೂಲಕ ನಿಲ್ಲಿಸಲು ಪ್ರಯತ್ನಿಸಿದ ಆ ಇಬ್ಬರು ಪುರುಷರಿಗೆ ಯಾವುದೇ ಕ್ರೆಡಿಟ್ ಇಲ್ಲ” ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. “ಎಳೆಯುವ ಮೂಲಕ ಟ್ರಕ್ ಅನ್ನು ನಿಲ್ಲಿಸಬಹುದು ಎಂದು ಇಬ್ಬರು ಹುಡುಗರು ಹೇಗೆ ಯೋಚಿಸಿದರು?” ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. “ಅವಳ ಧೈರ್ಯವನ್ನು ಮೆಚ್ಚುತ್ತೇನೆ. ಲೆಗ್ ಬ್ರೇಕ್ ಬದಲು ಹ್ಯಾಂಡ್ ಬ್ರೇಕ್ ಬಳಸುವುದು ಉತ್ತಮ ” ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.

ಇದನ್ನೂ ಓದಿ: ಪತಿ ಬೈದಿದ್ದಕ್ಕೆ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ; ಬೆಚ್ಚಿ ಬೀಳಿಸುವ ವಿಡಿಯೊ

ಈ ವಿಡಿಯೊ ಘರ್ ಕೆ ಕಲೇಶ್ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಪೋಸ್ಟ್ ಆಗಿದ್ದು, ಇದಕ್ಕೆ 936.8ಕೆ ವೀವ್ಸ್, 7831 ಲೈಕ್ಸ್ ಬಂದಿದೆ. ಈ ಘಟನೆಯಲ್ಲಿದ್ದ ಮಹಿಳೆ, ಘಟನೆಯ ನಿರ್ದಿಷ್ಟ ಸ್ಥಳ ಮತ್ತು ದಿನಾಂಕವನ್ನು ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

Continue Reading

ಪ್ರಮುಖ ಸುದ್ದಿ

Viral News: ಸರ್ಕಾರಿ ಶಾಲಾ ಮಕ್ಕಳಿಗೆ ಸಾಂಬಾರ್‌ ಇಲ್ಲವೆಂದು ಅನ್ನದ ಜತೆ ಮೆಣಸಿನ ಪುಡಿ ಕೊಟ್ಟರು!

Viral News: ತೆಲಂಗಾಣದ ಕೊಥಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಊಟವಾಗಿ ವಿದ್ಯಾರ್ಥಿಗಳಿಗೆ ಅನ್ನದ ಜೊತೆ ಸಾರನ್ನು ನೀಡುವ ಬದಲು ಮೆಣಸಿನ ಪುಡಿ ನೀಡಿದ ಘಟನೆ ವ್ಯಾಪಕ ಟೀಕೆಗೆ ಕಾರಣವಾಗಿದೆ. ಈ ಘಟನೆಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. “ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರವನ್ನು ಒದಗಿಸುವ ಸಿಎಂ ಉಪಾಹಾರ ಯೋಜನೆಯನ್ನು ರದ್ದುಗೊಳಿಸಿದ ಸರ್ಕಾರವು ಈಗ ಮಧ್ಯಾಹ್ನದ ಊಟವನ್ನು ಒದಗಿಸುವಲ್ಲಿ ವಿಫಲವಾಗಿದೆ. ಇದು ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿಯಾಗಿದೆʼʼ ಎಂದು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಮುಖಂಡ ಹರೀಶ್ ರಾವ್ ಕಿಡಿಕಾರಿದ್ದಾರೆ.

VISTARANEWS.COM


on

Viral News
Koo


ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟದ ಯೋಜನೆ ಜಾರಿ ಮಾಡಿದ ಸರ್ಕಾರ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಸರಿಯಾಗಿ ಪೂರೈಸುತ್ತಿಲ್ಲ. ಇದರಿಂದ ಶಾಲಾ ಮಕ್ಕಳು ಸಂಕಷ್ಟಕ್ಕೀಡಾಗಿದ್ದಾರೆ. ಸರಿಯಾಗಿ ಊಟ ಸಿಗದೆ ಪರದಾಡುವಂತಾಗಿದೆ. ದೇಶದ ಹಲವು ಕಡೆಯಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಇದೇ ಕಥೆಯಾಗಿದೆ. ಇದೀಗ ಅಂತದೊಂದು ಘಟನೆ ತೆಲಂಗಾಣದ ಕೊಥಪಲ್ಲಿ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದ್ದು, ಈ ಸರ್ಕಾರಿ ಶಾಲೆಯ ಅವ್ಯವಸ್ಥೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿ ಬಯಲಿಗೆ ಬಂದ ಹಿನ್ನಲೆಯಲ್ಲಿ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ದಾರೆ.

ತೆಲಂಗಾಣದ ಕೊಥಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಊಟವಾಗಿ ವಿದ್ಯಾರ್ಥಿಗಳಿಗೆ ಅನ್ನದ ಜೊತೆ ಸಾರನ್ನು ನೀಡುವ ಬದಲು ಮೆಣಸಿನ ಪುಡಿ ಮತ್ತು ಎಣ್ಣೆಯನ್ನು ನೀಡಿದ ಘಟನೆಯ ನಡೆದಿದೆ. ಆಗಸ್ಟ್ 3 ರ ಶನಿವಾರದಂದು ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ವಿವಾದಕ್ಕೆ ಕಾರಣವಾಗಿತ್ತು. ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಮುಖಂಡ ಹರೀಶ್ ರಾವ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದರು. “ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರವನ್ನು ಒದಗಿಸುವ ಸಿಎಂ ಉಪಾಹಾರ ಯೋಜನೆಯನ್ನು ರದ್ದುಗೊಳಿಸಿದ ಸರ್ಕಾರವು ಈಗ ಮಧ್ಯಾಹ್ನದ ಊಟವನ್ನು ಒದಗಿಸುವಲ್ಲಿ ವಿಫಲವಾಗಿದೆ.

ಇದು ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿಯಾಗಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಸಂಬಂಧಿಸಿದ ಅಡುಗೆ ಸಹಾಯಕರ ವೇತನ ಬಾಕಿ ಇರುವುದರಿಂದ ವಿದ್ಯಾರ್ಥಿಗಳಿಗೆ ಸರಿಯಾದ ಊಟ ಸಿಗುತ್ತಿಲ್ಲ. ಹಾಗಾಗಿ ಉಪ ಮುಖ್ಯಮಂತ್ರಿ ಕೂಡಲೇ ಸ್ಪಂದಿಸಿ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಬಾಕಿ ಬಿಲ್ ಪಾವತಿಸಿ, ಕಾರ್ಮಿಕರ ವೇತನ ಪಾವತಿಸಿ, ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಹೊಟ್ಟೆ ತುಂಬಿಸಿ ಎಂದು ಮನವಿ ಮಾಡುತ್ತೇನೆ “ ಎಂದು ಟ್ವೀಟ್ ಮಾಡಿದ್ದಾರೆ.

ಇದರಿಂದಾಗಿ ಸರ್ವ ಶಿಕ್ಷಣ ಅಕಾಡೆಮಿಕ್ ಮಾನಿಟರಿಂಗ್ ಸೆಲ್ ಅಧಿಕಾರಿಗಳು ಸೋಮವಾರ ಶಾಲೆಗೆ ಭೇಟಿ ನೀಡಿದ್ದಾರೆ. ಈ ಘಟನೆಗೆ ಪ್ರತಿಕ್ರಿಯಿಸಿದ, ಜಿಲ್ಲಾ ಅಧಿಕಾರಿಗಳು ಮಂಡಲ ಶಿಕ್ಷಣ ಅಧಿಕಾರಿಗಳು (ಎಂಇಒಗಳು), ಮುಖ್ಯ ಶಿಕ್ಷಕರು (ಎಚ್ಎಂ) ಮತ್ತು ಶಿಕ್ಷಕರನ್ನು ಎಚ್ಚರಿಸಿ, ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಸರಿಯಾಗಿ ನೋಡಿಕೊಳ್ಳುವಂತೆ ಕೇಳಿಕೊಂಡರು.‌

ಇದನ್ನೂ ಓದಿ:Mid Day Meal: ಮಕ್ಕಳ ಬಿಸಿಯೂಟದಲ್ಲೂ ಕಳ್ಳಾಟ, ವಿದ್ಯಾರ್ಥಿಗಳಿಗೆ ಸಿಗೋದು ಬರೀ ಅನ್ನ-ಅರಿಶಿಣ; Video ಇದೆ

ಮಧ್ಯಾಹ್ನದ ಊಟವನ್ನು ಪೂರೈಸುವ ಏಜೆನ್ಸಿಯು ವಿದ್ಯಾರ್ಥಿಗಳಿಗೆ ಅನ್ನದೊಂದಿಗೆ ದಾಲ್ ಮತ್ತು ತರಕಾರಿಗಳನ್ನು ಮಾತ್ರ ನೀಡುತ್ತದೆ. ಆದರೆ ಮೊಟ್ಟೆಗಳನ್ನು ನೀಡುತ್ತಿಲ್ಲ. ಇದಕ್ಕೆ ಕಾರಣ ಮೊಟ್ಟೆಗಳ ಪೂರೈಕೆಯಲ್ಲಿನ ಕೊರತೆ ಎನ್ನಲಾಗಿದೆ. ಹಾಗಾಗಿ ಮಧ್ಯಾಹ್ನದ ಊಟದ ಬಜೆಟ್ ಅನ್ನು ಹೆಚ್ಚಿಸಬೇಕು ಎಂದು ಏಜೆನ್ಸಿ ಒತ್ತಾಯಿಸಿದೆ. ಪ್ರಾಥಮಿಕ ತರಗತಿ ಮಕ್ಕಳಿಗೆ 5 ರೂ., ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 8 ರೂ. ಮೊತ್ತವನ್ನು ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದರು ಮತ್ತು ನಿಗದಿಪಡಿಸಿದ ಸ್ಥಳದಲ್ಲಿ ಸಮಸ್ಯೆ ಇರುವುದರಿಂದ ಮೊಟ್ಟೆಗಳನ್ನು ಪೂರೈಸಲು ಮತ್ತು ಅಡುಗೆಮನೆಯನ್ನು ನಿರ್ಮಿಸಿಕೊಡಬೇಕೆಂದು ಇಲಾಖೆಗೆ ವಿನಂತಿಸಿದರು ಎಂಬುದಾಗಿ ತಿಳಿದುಬಂದಿದೆ.

Continue Reading
Advertisement
Wild Animals Attack
ಚಿಕ್ಕಮಗಳೂರು48 seconds ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Fortis Hospital
ಬೆಂಗಳೂರು6 mins ago

Fortis Hospital: ಅಪಘಾತದಲ್ಲಿ ತಲೆಗೆ ತೀವ್ರ ಏಟು; ಕ್ಲಿಷ್ಟ ಶಸ್ತ್ರಚಿಕಿತ್ಸೆಯಿಂದ ಯುವಕನಿಗೆ ಜೀವ ದಾನ

Viral Video
Latest10 mins ago

Viral Video: ಪಿಕ್‌ನಿಕ್‌ಗೆಂದು ಬಂದವನು ರೀಲ್ಸ್‌ ಮಾಡಲು ಹೋದ; ಜಲಪಾತದಿಂದ ಬಿದ್ದು ಸತ್ತ

Komari Janaiah Naidu
ಸಿನಿಮಾ13 mins ago

Komari Janaiah Naidu: ಟಾಲಿವುಡ್‌ ನಿರ್ದೇಶಕ ಕೊಮರಿ ಜನಯ್ಯ ನಾಯ್ಡು ಆತ್ಮಹತ್ಯೆ

Viral video
ವೈರಲ್ ನ್ಯೂಸ್17 mins ago

Viral Video: ಪ್ರಿಯಕರನಿಗೆ ಜಾಮೀನು ಕೊಡಿಸಿಲ್ಲವೆಂದು ನ್ಯಾಯಾಧೀಶರಿಗೇ ಬಾರಿಸಿದ ವಕೀಲೆ!

Viral Video
Latest24 mins ago

Viral Video: ಇದ್ದಕ್ಕಿದ್ದಂತೆ ಚಲಿಸಿದ ಟ್ರಕ್; ಯುವತಿಯ ಸಾಹಸ ಹೇಗಿತ್ತು ನೋಡಿ!

MUDA scam
ಕರ್ನಾಟಕ27 mins ago

Muda Scam: ರಾಜ್ಯಪಾಲರನ್ನು ಭೇಟಿಯಾದ ಟಿ.ಜೆ.ಅಬ್ರಹಾಂ; ಸಿಎಂ ವಿರುದ್ಧ ತನಿಖೆಗೆ ಮತ್ತಷ್ಟು ದಾಖಲೆ

ಕ್ರೀಡೆ30 mins ago

Rohit Sharma: ಕ್ರಿಸ್​ ಗೇಲ್​ ಸಿಕ್ಸರ್​ ದಾಖಲೆ ಮೇಲೆ ಕಣ್ಣಿಟ್ಟ ಹಿಟ್​ಮ್ಯಾನ್​ ರೋಹಿತ್​

Viral News
ಪ್ರಮುಖ ಸುದ್ದಿ30 mins ago

Viral News: ಸರ್ಕಾರಿ ಶಾಲಾ ಮಕ್ಕಳಿಗೆ ಸಾಂಬಾರ್‌ ಇಲ್ಲವೆಂದು ಅನ್ನದ ಜತೆ ಮೆಣಸಿನ ಪುಡಿ ಕೊಟ್ಟರು!

Janopakari Doddanna Shetty
ಕರ್ನಾಟಕ38 mins ago

Janopakari Doddanna Shetty: ಗಾಣಿಗ ಸಮುದಾಯ ಶ್ರಮದಿಂದ ಬದುಕು ಕಟ್ಟಿಕೊಂಡಿದೆ; ಡಿ.ಕೆ. ಶಿವಕುಮಾರ್ ಶ್ಲಾಘನೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Karnataka Weather Forecast
ಮಳೆ51 mins ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ5 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ5 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ5 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ1 week ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ1 week ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

ಟ್ರೆಂಡಿಂಗ್‌