Bangladesh Unrest: ಶೇಖ್‌ ಹಸೀನಾ ಅವರ ಪಕ್ಷದ ಮುಖಂಡರು, ಕಾರ್ಯಕರ್ತರೇ ಟಾರ್ಗೆಟ್‌; ಒಂದೇ ದಿನ 29 ಜನ ಬಲಿ - Vistara News

ವಿದೇಶ

Bangladesh Unrest: ಶೇಖ್‌ ಹಸೀನಾ ಅವರ ಪಕ್ಷದ ಮುಖಂಡರು, ಕಾರ್ಯಕರ್ತರೇ ಟಾರ್ಗೆಟ್‌; ಒಂದೇ ದಿನ 29 ಜನ ಬಲಿ

Bangladesh Unrest: ಢಾಕಾದಲ್ಲಿ, ಗುಲಿಸ್ತಾನ್ ಪ್ರದೇಶದಲ್ಲಿನ ಅವಾಮಿ ಲೀಗ್‌ನ ಕೇಂದ್ರ ಕಚೇರಿಯ ಭಾಗಗಳಿಗೆ ಪದೇ ಪದೇ ಬೆಂಕಿ ಹಚ್ಚಲಾಯಿತು, ನೂರಾರು ಜನರು ಉರಿಯುತ್ತಿರುವ ಕಟ್ಟಡದಿಂದ ಪೀಠೋಪಕರಣಗಳು, ಟೈಲ್ಸ್, ರಾಡ್‌ಗಳು ಮತ್ತು ಇತರ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಹಸೀನಾ ರಾಜೀನಾಮೆ ನೀಡಿದ ಸ್ವಲ್ಪ ಸಮಯದ ನಂತರ ಕಚೇರಿಗೆ ಬೆಂಕಿ ಹಚ್ಚಲಾಯಿತು ಮತ್ತು ಮಂಗಳವಾರ ಮಧ್ಯಾಹ್ನ 12.30 ರ ಸುಮಾರಿಗೆ ಮತ್ತೆ ದಾಳಿ ನಡೆಸಲಾಯಿತು.

VISTARANEWS.COM


on

Bangladesh Unrest
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಢಾಕಾ: ಬಾಂಗ್ಲಾದೇಶ(Bangladesh Unrest)ದಲ್ಲಿ ಭುಗಿಲೆದ್ದಿರುವ ಹಿಂಸಾಚಾರಕ್ಕೆ ನಿರ್ಗಮಿತ ಪ್ರಧಾನಿ ಶೇಖ್‌ ಹಸೀನಾ(Sheikh Hasina) ಅವರ ಅವಾಮಿ ಲೀಗ್‌ ಪಕ್ಷದ 20 ಮುಖಂಡರು ಸೇರಿದಂತೆ ಬರೋಬ್ಬರಿ 29 ಜನರ ಮೃತದೇಹ ದೇಶಾದ್ಯಂತ ಬುಧವಾರ ಪತ್ತೆಯಾಗಿದೆ. ಶೇಖ್‌ ಹಸೀನಾ ಪ್ರಧಾನಿ ಪಟ್ಟದಿಂದ ಕೆಳಗಿಳಿದಿರುವ ಬೆನ್ನಲ್ಲೇ ದೇಶಾದ್ಯಂತ ಈ ಮಾರಣಹೋಮ ನಡೆದಿದೆ.

ಸತ್ಖೀರದಲ್ಲಿ 10 ಜನ ಮತ್ತು ಕೊಮಿಲ್ಲಾ ಪ್ರದೇಶದಲ್ಲಿ 11ಕ್ಕೂ ಅಧಿಕ ಗುಂಪು ಘರ್ಷಣೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರದೇಶಗಳಲ್ಲಿ ಅವಾಮಿ ಲೀಗ್‌ನ ಮುಖಂಡರು ಮತ್ತು ಕಾರ್ಯಕರ್ತರ ಮನೆ, ವ್ಯಾಪಾರ ಮಳಿಗೆಗಳನ್ನು ಗುರಿಯಾಗಿಸಿ ಭೀಕರ ದಾಳಿ ನಡೆಯುತ್ತಿದೆ. ಪ್ರತ್ಯಕ್ಷದರ್ಶಿಯೊಬ್ಬರು ಹೇಳುವ ಪ್ರಕಾರ ಅಶೋಕ್ತಾಲಾದಲ್ಲಿ ಮಾಜಿ ಕೌನ್ಸಿಲರ್ ಎಂಡಿ ಶಾ ಆಲಂ ಅವರ ಮನೆಯ ಮೇಲೆ ದಾಳಿ ನಡೆದಿದ್ದು, ಉದ್ರಿಕ್ತ ಗುಂಪೊಂದು ಬೆಂಕಿ ಹಚ್ಚಿದೆ. ಪರಿಣಾಮವಗಿ ಐವರು ಯುವಕರು ಸೇರಿದಂತೆ ಆರು ಮಂದಿ ಬೆಂಕಿಗೆ ಬಲಿಯಾಗಿದ್ದು, ಸೋಮವಾರ ರಾತ್ರಿ ಮತ್ತು ಮಂಗಳವಾರ ಬೆಳಗ್ಗೆ ಅವರ ಮೃತದೇಹಗಳು ಪತ್ತೆಯಾಗಿವೆ.

ಅದೇ ರೀತಿ ನಾಟೋರ್-2 (ಸದರ್ ಮತ್ತು ನಲ್ದಂಗ) ಕ್ಷೇತ್ರದ ಸಂಸದ ಶಫೀಕುಲ್ ಇಸ್ಲಾಂ ಶಿಮುಲ್ ಅವರ ಮನೆಗೆ ಗುಂಪೊಂದು ಬೆಂಕಿ ಹಚ್ಚಿದಾಗ ನಾಲ್ವರು ಸಾವನ್ನಪ್ಪಿದ್ದಾರೆ. ನಂತರ ಅವರ ಶವಗಳು ಮನೆಯ ವಿವಿಧ ಕೊಠಡಿಗಳು ಮತ್ತು ಬಾಲ್ಕನಿಗಳಲ್ಲಿ ಪತ್ತೆಯಾಗಿವೆ.

ಅವಾಮಿ ಲೀಗ್ ಕಚೇರಿ ಮೇಲೆ ದಾಳಿ

ಢಾಕಾದಲ್ಲಿ, ಗುಲಿಸ್ತಾನ್ ಪ್ರದೇಶದಲ್ಲಿನ ಅವಾಮಿ ಲೀಗ್‌ನ ಕೇಂದ್ರ ಕಚೇರಿಯ ಭಾಗಗಳಿಗೆ ಪದೇ ಪದೇ ಬೆಂಕಿ ಹಚ್ಚಲಾಯಿತು, ನೂರಾರು ಜನರು ಉರಿಯುತ್ತಿರುವ ಕಟ್ಟಡದಿಂದ ಪೀಠೋಪಕರಣಗಳು, ಟೈಲ್ಸ್, ರಾಡ್‌ಗಳು ಮತ್ತು ಇತರ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಹಸೀನಾ ರಾಜೀನಾಮೆ ನೀಡಿದ ಸ್ವಲ್ಪ ಸಮಯದ ನಂತರ ಕಚೇರಿಗೆ ಬೆಂಕಿ ಹಚ್ಚಲಾಯಿತು ಮತ್ತು ಮಂಗಳವಾರ ಮಧ್ಯಾಹ್ನ 12.30 ರ ಸುಮಾರಿಗೆ ಮತ್ತೆ ದಾಳಿ ನಡೆಸಲಾಯಿತು.

ನಿರಂತರ ಪ್ರತಿಭಟನೆ, ಗಲಭೆಗಳ (Bangladesh Unrest) ಬಳಿಕ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಬಾಂಗ್ಲಾದೇಶವನ್ನು (Bangladesh) ತೊರೆದು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲಿರುವ ತಮ್ಮ ನಿವಾಸಿಗಳ ಸುರಕ್ಷತೆ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಈ ಮಧ್ಯೆ ಏರ್ ಇಂಡಿಯಾ, ವಿಸ್ತಾರ ಮತ್ತು ಇಂಡಿಗೋ ವಿಮಾನಗಳು ಬುಧವಾರ (ಆಗಸ್ಟ್‌ 7) ದಿಲ್ಲಿಯಿಂದ ಬಾಂಗ್ಲಾದೇಶದ ರಾಜಧಾನಿ ಢಾಕಾಗೆ ನಿಗದಿಯಂತೆ ಹಾರಾಟ ನಡೆಸಲು ತೀರ್ಮಾನಿಸಿವೆ. ಜತೆಗೆ ಏರ್ ಇಂಡಿಯಾ ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ಭಾರತೀಯರನ್ನು ಮರಳಿ ಕರೆತರಲು ವಿಶೇಷ ವಿಮಾನ ಸೇವೆಯನ್ನೂ ಒದಗಿಸಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Bangladesh Unrest: ಬಾಂಗ್ಲಾದೇಶಕ್ಕೆ ಎಂದಿನಂತೆ ವಿಮಾನ ಹಾರಾಟ; ಢಾಕಾದಿಂದ ದಿಲ್ಲಿಗೆ ಬಂದಿಳಿದ 205 ಭಾರತೀಯರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Helicopter crashed: ನೇಪಾಳದಲ್ಲಿ ಹೆಲಿಕಾಪ್ಟರ್‌ ಪತನ; ನಾಲ್ವರ ದುರ್ಮರಣ

Helicopter crashed: ಹೆಲಿಕಾಪ್ಟರ್ ಟೇಕಾಫ್ ಆಗುವಾಗ ಅದರಲ್ಲಿ ನಾಲ್ವರು ಚೀನಾದ ಪ್ರಜೆಗಳು ಮತ್ತು ಪೈಲಟ್ ಸೇರಿದಂತೆ ಒಟ್ಟು ಐದು ಮಂದಿ ಇದ್ದರು. ಚೀನಾದ ಪ್ರಜೆಗಳು ರಾಸುವಾಗೆ ತೆರಳುತ್ತಿದ್ದರು. ಈ ವೇಳೆ ಕಠ್ಮಂಡುವಿನ ಹೊರವಲಯದಲ್ಲಿರುವ ಅರಣ್ಯ ಪ್ರದೇಶದಲ್ಲಿ ಸಂಪರ್ಕ ಕಳೆದುಕೊಂಡು ನೆಲಕ್ಕಪ್ಪಳಿಸಿದೆ ಎನ್ನಲಾಗಿದೆ.

VISTARANEWS.COM


on

Helicopter crashed
Koo

ಕಠ್ಮಂಡು: ನೇಪಾಳ(Nepal)ದ ನುವಾಕೋಟ್ ಜಿಲ್ಲೆಯ ಶಿವಪುರಿ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಏರ್ ಡೈನಾಸ್ಟಿ ಹೆಲಿಕಾಪ್ಟರ್ ಪತನ(Helicopter crashed)ಗೊಂಡಿದೆ. ಘಟನೆಯಲ್ಲಿ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ. ಹೆಲಿಕಾಪ್ಟರ್ ಕಠ್ಮಂಡುವಿನಿಂದ ಹೊರಟು ಸೈಫ್ರುಬೆನ್ಸಿಗೆ ತೆರಳುತ್ತಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಹೆಲಿಕಾಪ್ಟರ್ ಅನ್ನು ಹಿರಿಯ ಕ್ಯಾಪ್ಟನ್ ಅರುಣ್ ಮಲ್ಲಾ ಅವರು ಚಲಾಯಿಸಿದ್ದು, ಟೇಕ್ ಆಫ್ ಆದ ಕೇವಲ ಮೂರು ನಿಮಿಷಗಳ ನಂತರ ಹೆಲಿಕಾಪ್ಟರ್‌ ಸಂಪೂರ್ಣವಾಗಿ ಸಂಪರ್ಕ ಕಳೆದುಕೊಂಡಿತ್ತು ಎನ್ನಲಾಗಿದೆ.

ಹೆಲಿಕಾಪ್ಟರ್ ಟೇಕಾಫ್ ಆಗುವಾಗ ಅದರಲ್ಲಿ ನಾಲ್ವರು ಚೀನಾದ ಪ್ರಜೆಗಳು ಮತ್ತು ಪೈಲಟ್ ಸೇರಿದಂತೆ ಒಟ್ಟು ಐದು ಮಂದಿ ಇದ್ದರು. ಚೀನಾದ ಪ್ರಜೆಗಳು ರಾಸುವಾಗೆ ತೆರಳುತ್ತಿದ್ದರು. ಈ ವೇಳೆ ಕಠ್ಮಂಡುವಿನ ಹೊರವಲಯದಲ್ಲಿರುವ ಅರಣ್ಯ ಪ್ರದೇಶದಲ್ಲಿ ಸಂಪರ್ಕ ಕಳೆದುಕೊಂಡು ನೆಲಕ್ಕಪ್ಪಳಿಸಿದೆ ಎನ್ನಲಾಗಿದೆ. ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (Tribhuvan International Airport) ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮವು ಬುಧವಾರ ಮಧ್ಯಾಹ್ನ 1:54 ಕ್ಕೆ ಹೆಲಿಕಾಪ್ಟರ್ ಕಠ್ಮಂಡುವಿನಿಂದ ಹೊರಟಿತ್ತು ಎಂದು ಹೇಳಿದೆ. ಸೂರ್ಯ ಚೌರ್ ತಲುಪಿದ ನಂತರ 1:57 ರ ಸುಮಾರಿಗೆ ಹೆಲಿಕಾಪ್ಟರ್ ಅಧಿಕಾರಿಗಳೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತು.

ಎರಡು ವಾರಗಳ ಹಿಂದೆಯೂ ಇದೇ ರೀತಿ ವಿಮಾನವೊಂದು ಅಪಘಾತಕ್ಕೀಡಾಗಿತ್ತು. 19 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ಪತನಗೊಂಡಿರುವ ಘಟನೆ ವರದಿಯಾಗಿತ್ತು. ರಾಷ್ಟ್ರ ರಾಜಧಾನಿ ಕಾಠ್ಮಂಡುವಿನಲ್ಲಿರುವ ತ್ರಿಭುವನ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್‌ ಆಫ್‌ ಆದ ಶೌರ್ಯ ವಿಮಾನಯಾನ ಸಂಸ್ಥೆ ವಿಮಾನ ಪತನ(Plane Crash)ಗೊಂಡಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಟೇಕ್‌ ಆಫ್‌ ಆಗುತ್ತಿದ್ದಂತೆ ಇದ್ದಕ್ಕಿದ್ದಂತೆ ವಿಮಾನದಲ್ಲಿ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿತ್ತು. ಇದಾದ ಕೆಲವೇ ಹೊತ್ತಿನಲ್ಲಿ ವಿಮಾನ ಪತನಗೊಂಡಿತ್ತು. ಶೌರ್ಯ ಏರ್‌ಲೈನ್ಸ್‌ ವಿಮಾನ ಹಿಮಾಲಯ ಪ್ರಸಿದ್ಧ ಪ್ರವಾಸಿ ತಾಣವಾಗಿ ರುವ ಪೋಖರಾಕ್ಕೆ ಪ್ರಯಾಣ ಬೆಳೆಸಿತ್ತು. ಈ ವೇಳೆ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: Plane Crash: ನೇಪಾಳದಲ್ಲಿ 19 ಪ್ರಯಾಣಿಕರಿದ್ದ ವಿಮಾನ ಪತನ; ವಿಡಿಯೋ ಇದೆ

Continue Reading

ವಿದೇಶ

Bangladesh Unrest: ಖ್ಯಾತ ಹಿಂದೂ ಗಾಯಕನ ಮನೆಯೂ ಧ್ವಂಸ; 3000 ಸಂಗೀತೋಪಕರಣಗಳು ಬೆಂಕಿಗಾಹುತಿ

Bangladesh Unrest: ಬಾಂಗ್ಲಾದೇಶದ ಖ್ಯಾತ ಗಾಯಕ ರಾಹುಲ್ ಆನಂದ್(Rahul Anand) ಅವರ ಧಾಕಾದ ಧನ್ಮೋಂಡಿಯಲ್ಲಿದ್ದಂತಹ ಮನೆಯನ್ನು ಲೂಟಿ ಮಾಡಿ ಅದಕ್ಕೆ ಬೆಂಕಿ ಹಚ್ಚಲಾಗಿದೆ. ಸೋಮವಾರದಂದು ಈ ಘಟನೆ ನಡೆದಿದ್ದು ಇದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆಗಿವೆ.

VISTARANEWS.COM


on

Bangladesh unrest
Koo

ಢಾಕಾ: ನೆರೆಯ ರಾಷ್ಟ್ರ ಬಾಂಗ್ಲಾದಲ್ಲಿ ಭುಗಿಲೆದ್ದಿರುವ ದಂಗೆ(Bangladesh Unrest) ಯಲ್ಲಿ ಅಲ್ಪಸಂಖ್ಯಾತ ಹಿಂದೂ ದಿನೇ ದಿನೇ ನರಕಯಾತನೆ ಅನುಭವಿಸುವಂತಾಗಿದೆ. ಕಂಡ ಕಂಡಲ್ಲಿ ಹಿಂದೂಗಳನ್ನು, ಅವರಿಗೆ ಸಂಬಂಧಿಸಿದ ಮನೆ ಅಂಗಡಿಗಳನ್ನು ಮತ್ತು ದೇಗುಲಗಳನ್ನು ಕಿಡಿಗೇಡಿಗಳು ಪುಡಿಗಟ್ಟಿದ್ದಾರೆ. ಕೈಗೆ ಸಿಕ್ಕವಸ್ತುಗಳನ್ನು ದೋಚುತ್ತಿದ್ದಾರೆ. ಇದೀಗ ಬಾಂಗ್ಲಾದೇಶದ ಖ್ಯಾತ ಗಾಯಕ(Bangladesh Singer)ನ ಮನೆಗೆ ಪ್ರತಿಭಟನಾಕಾರರು(Protester) ಬೆಂಕಿ ಇಟ್ಟಿರುವುದು ವರದಿಯಾಗಿದೆ.

ಬಾಂಗ್ಲಾದೇಶದ ಖ್ಯಾತ ಗಾಯಕ ರಾಹುಲ್ ಆನಂದ್(Rahul Anand) ಅವರ ಧಾಕಾದ ಧನ್ಮೋಂಡಿಯಲ್ಲಿದ್ದಂತಹ ಮನೆಯನ್ನು ಲೂಟಿ ಮಾಡಿ ಅದಕ್ಕೆ ಬೆಂಕಿ ಹಚ್ಚಲಾಗಿದೆ. ಸೋಮವಾರದಂದು ಈ ಘಟನೆ ನಡೆದಿದ್ದು ಇದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆಗಿವೆ. ಗಾಯಕನ ಆಪ್ತ ಕುಟುಂಬಸ್ಥರು ಬಾಂಗ್ಲಾದೇಶದ ಪತ್ರಿಕೆಗೆ ಈ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಪ್ರತಿಭಟನಾಕಾರರು ಗೇಟ್ ಮುರಿದು ನಂತರ ಮನೆಯಲ್ಲಿದ್ದ ವಸ್ತುಗಳನ್ನು ಒಡೆದು ಹಾಕಲಾರಂಭಿಸಿದ್ದರು.

3000 ಸಂಗೀತೋಪಕರಣಗಳು ಬೆಂಕಿಗಾಹುತಿ

ಇನ್ನು ದುಷ್ಕರ್ಮಿಗಳ ಹಚ್ಚಿದ ಬೆಂಕಿಗೆ ರಾಹುಲ್‌ ಆನಂದ್‌ ಅವರ ಮನೆಯಲ್ಲಿದ್ದ 3000ಕ್ಕೂ ಅಧಿಕ ಸಂಗೀತೋಪಕರಣಗಳು ಬೆಂಕಿಗಾಹುತಿಯಾಗಿವೆ. ಇನ್ನು ಕಿಡಿಗೇಡಿಗಳು ರಾಹುಲ್‌ ಆನಂದ್‌ ಮನೆಯಲ್ಲಿದ್ದ ಪೀಠೋಪಕರಣಗಳು, ಕನ್ನಡಿಗಳು ಸೇರಿದಂತೆ ಮನೆಯಲ್ಲಿದ್ದಂತಹ ದುಬಾರಿ ವಸ್ತುಗಳನ್ನೆಲ್ಲ ಕೊಂಡೊಯ್ದಿದ್ದಾರೆ. ಈ ಮನೆಯು ಸುಮಾರು 140 ವರ್ಷ ಹಳೆಯದ್ದಾಗಿತ್ತು. ರಾಹುಲ್ ಆನಂದ್ ಅವರು ಜಾನಪದ ಬ್ಯಾಂಡ್ ನಡೆಸುತ್ತಿದ್ದು ಇದಕ್ಕೆ ಜೋಲರ್ ಗಾನ್ ಎಂದು ಹೆಸರಿಟ್ಟಿದ್ದರು. ಇದೀಗ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಇಡೀ ಪರಂಪರೆಯೇ ನಾಶವಾಗಿದೆ.

ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಶೇಖ್‌ ಹಸೀನಾ(Sheikh Hasina) ದೇಶದಿಂದ ಪಲಾಯಣ ಮಾಡಿರುವ ಬೆನ್ನಲ್ಲೇ ಹಿಂದೂಗಳನ್ನು ಗುರಿಯಾಗಿ ಎಗ್ಗಿಲ್ಲದೇ ದಾಳಿ ನಡೆಯುತ್ತಿದೆ. ಸಾಲದೆನ್ನುವಂತೆ ಉದ್ರಿಕ್ತ ಪ್ರತಿಭಟನಾಕಾರರು ಹಿಂದೂ ದೇಗುಲಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿವೆ.

ಬಾಂಗ್ಲಾದೇಶದ ಪತ್ರಿಕೆಗಳ ವರದಿ ಪ್ರಕಾರ 27 ಜಿಲ್ಲೆಗಳಲ್ಲಿ ಹಿಂದೂಗಳ ವ್ಯಾಪಾರ ಮಳಿಗೆ ಮತ್ತು ಮನೆಗಳ ಮೇಲೆ ದಾಳಿ ನಡೆದಿದೆ. ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬೆಲೆ ಬಾಳುವ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಇನ್ನು ಜಮಾತ್‌-ಎ- ಇಸ್ಲಾಮಿ ಹಿಂದೂ ದೇಗುಲಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತಿರುವುದನ್ನು ಒಪ್ಪಿಕೊಂಡಿದೆ.

ಇದನ್ನೂ ಓದಿ: Shehzad Poonawalla: ಬಾಂಗ್ಲಾದಂತೆ ಭಾರತದಲ್ಲಿಯೂ ಹಿಂಸಾಚಾರ; ಕಾಂಗ್ರೆಸ್‌ ನಾಯಕ ಸಲ್ಮಾನ್ ಖುರ್ಷಿದ್ ಹೇಳಿಕೆಗೆ ಬಿಜೆಪಿ ಕಿಡಿ

Continue Reading

ವಿದೇಶ

Muhammad Yunus: ಬಾಂಗ್ಲಾ ಮಧ್ಯಂತರ ಸರ್ಕಾರಕ್ಕೆ ಮಹಮ್ಮದ್ ಯೂನಸ್‌ರನ್ನು ಮುಖ್ಯಸ್ಥರಾಗಿ ಮಾಡಿದ್ದೇಕೆ? ಏನಿವರ ಹಿನ್ನೆಲೆ?

Muhammad Yunus: ಬಾಂಗ್ಲಾದಲ್ಲಿ ಹೊಸದಾಗಿ ಚುನಾವಣೆ ಆಯೋಜಿಸುವವರೆಗೆ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. 83 ವರ್ಷದ ಮುಹಮ್ಮದ್ ಯೂನಸ್ ಅವರು ಶೇಖ್‌ ಹಸೀನಾ ಅವರ ಪ್ರಮುಖ ಟೀಕಾಕಾರರು ಮತ್ತು ರಾಜಕೀಯ ವಿರೋಧಿಯೂ ಆಗಿದ್ದಾರೆ. ಅರ್ಥಶಾಸ್ತ್ರಜ್ಞರು ಆಗಿರುವ ಯೂನಸ್ 2006ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಯೂನಸ್‌ ಅವರ ಕುರಿತ ಮತ್ತಷ್ಟು ವಿವರಕ್ಕೆ ಈ ಲೇಖನ ಓದಿ.

VISTARANEWS.COM


on

By

Muhammad Yunus
Koo

ಪ್ರಧಾನಮಂತ್ರಿ ಶೇಖ್ ಹಸೀನಾ (PM  Sheikh Hasina) ಅವರು ರಾಜೀನಾಮೆ ಕೊಟ್ಟು ದೇಶ ಬಿಟ್ಟು ಪಲಾಯನ ಮಾಡಿರುವುದರಿಂದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವನ್ನು ( Bangladesh interim govt) ಮುನ್ನಡೆಸಲು ಬಡ ಸಮುದಾಯಗಳೊಂದಿಗಿನ ಕೆಲಸಕ್ಕೆ ಹೆಸರುವಾಸಿಯಾಗಿರುವ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ (Nobel Peace Prize winner) ಮುಹಮ್ಮದ್ ಯೂನಸ್ (Muhammad Yunus) ಅವರನ್ನು ನೇಮಕಗೊಳಿಸಲಾಗಿದೆ.

ಶೇಖ್ ಹಸೀನಾ ಅವರ ಆಡಳಿತದ ವಿರುದ್ಧ ವ್ಯಾಪಕ ವಿರೋಧ, ದೇಶಾದ್ಯಂತ ಹಿಂಸಾತ್ಮಕ ಹೋರಾಟ ಆರಂಭವಾದ ಬಳಿಕ ಅವರು ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ ಬಳಿಕ ಈ ಬೆಳವಣಿಗೆ ನಡೆದಿದೆ. ದೇಶದಲ್ಲಿ ಹೊಸ ಚುನಾವಣೆಗಳನ್ನು ಆಯೋಜಿಸುವವರೆಗೆ ಯೂನಸ್ ಹಂಗಾಮಿ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಮಂಗಳವಾರ ರಾತ್ರಿ ನಡೆದ ಸಭೆಯಲ್ಲಿ ಈ ನೇಮಕಾತಿಯನ್ನು ನಿರ್ಧರಿಸಲಾಯಿತು.

ಹಸೀನಾ ಅವರ ನಿರ್ಗಮನವು ಬಾಂಗ್ಲಾದೇಶವನ್ನು ರಾಜಕೀಯ ಬಿಕ್ಕಟ್ಟಿಗೆ ತಳ್ಳಿದೆ. ಮಿಲಿಟರಿಯು ತಾತ್ಕಾಲಿಕವಾಗಿ ಆಡಳಿತದ ನಿಯಂತ್ರಣವನ್ನು ಪಡೆದುಕೊಂಡಿದೆ.


ಮುಹಮ್ಮದ್ ಯೂನಸ್‌ ಎಲ್ಲಿದ್ದಾರೆ?

ಪ್ರಸ್ತುತ ಪ್ಯಾರಿಸ್‌ನಲ್ಲಿ ಒಲಿಂಪಿಕ್ ಸಂಘಟಕರಿಗೆ ಸಲಹೆ ನೀಡುತ್ತಿರುವ ಮುಹಮ್ಮದ್ ಯೂನಸ್‌ ಅವರಿಗೆ ಮಧ್ಯಂತರ ಸರ್ಕಾರವನ್ನು ಮುನ್ನಡೆಸುವಂತೆ ಪ್ರತಿಭಟನೆಯ ಹಿಂದಿರುವ ವಿದ್ಯಾರ್ಥಿ ಮುಖಂಡರು ಕರೆ ಕಳುಹಿಸಿದ್ದಾರೆ. ಶೇಖ್ ಹಸೀನಾ ಅವರ ರಾಜಿನಾಮೆಯನ್ನು ದೇಶದ ಎರಡನೇ ವಿಮೋಚನಾ ದಿನ ಎಂದು ಕರೆದಿರುವ ಯೂನಸ್ ಅವರನ್ನು ಶೇಖ್ ಹಸೀನಾ ಹಿಂದೊಮ್ಮೆ ʼರಕ್ತ ಹೀರುವ ಪ್ರಾಣಿʼ ಎಂದು ಕರೆದಿದ್ದರು.

ಮಹಮ್ಮದ್ ಯೂನಸ್ ಹಿನ್ನೆಲೆ ಏನು?

83 ವರ್ಷದ ಮುಹಮ್ಮದ್ ಯೂನಸ್ ಅವರು ಶೇಖ್‌ ಹಸೀನಾ ಅವರ ಪ್ರಮುಖ ಟೀಕಾಕಾರರು ಮತ್ತು ರಾಜಕೀಯ ವಿರೋಧಿಯೂ ಆಗಿದ್ದಾರೆ. ಅರ್ಥಶಾಸ್ತ್ರಜ್ಞರು ಆಗಿರುವ ಯೂನಸ್ 2006ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಬಡ ವ್ಯಕ್ತಿಗಳಿಗೆ, ವಿಶೇಷವಾಗಿ ಮಹಿಳೆಯರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿರುವ ಮೈಕ್ರೋಕ್ರೆಡಿಟ್‌ನೊಂದಿಗೆ ಅವರ ಅದ್ಭುತ ಕೆಲಸಕ್ಕಾಗಿ ನೊಬೆಲ್ ಸಮಿತಿಯು ಯೂನಸ್ ಮತ್ತು ಅವರ ಗ್ರಾಮೀಣ ಬ್ಯಾಂಕ್ ಅನ್ನು ಗುರುತಿಸಿದೆ. ತಳಮಟ್ಟದಿಂದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಅವರ ಕಾರ್ಯವನ್ನು ಗೌರವಿಸುವ ಸಲುವಾಗಿ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.


ಸಾಂಪ್ರದಾಯಿಕ ಸಾಲಕ್ಕೆ ಸಾಮಾನ್ಯವಾಗಿ ಅನರ್ಹರಾಗಿರುವ ಉದ್ಯಮಿಗಳಿಗೆ ಕಿರು ಸಾಲಗಳನ್ನು ನೀಡಲು ಯೂನಸ್ 1983ರಲ್ಲಿ ಗ್ರಾಮೀಣ ಬ್ಯಾಂಕ್ ಅನ್ನು ಸ್ಥಾಪಿಸಿದರು. ಬಡತನವನ್ನು ನಿವಾರಿಸುವಲ್ಲಿ ಬ್ಯಾಂಕಿನ ಯಶಸ್ಸು ಜಾಗತಿಕವಾಗಿ ಇದೇ ರೀತಿಯ ಕಿರುಬಂಡವಾಳ ಉಪಕ್ರಮಗಳನ್ನು ಪ್ರೇರೇಪಿಸಿತು.


ಹಸೀನಾ ಅವರೊಂದಿಗೆ ವಿರೋಧ ಯಾಕೆ?

2008ರಲ್ಲಿ ಶೇಖ್ ಹಸೀನಾ ಅವರ ಸರ್ಕಾರವು ಯುನಸ್ ಅವರ ವಹಿವಾಟಿನ ಬಗ್ಗೆ ತನಿಖೆ ಪ್ರಾರಂಭಿಸಿತು. ಆಗ ಹಸೀನಾ ಅವರೊಂದಿಗೆ ಯೂನಸ್ ಅವರ ಸಂಬಂಧವು ಹದಗೆಟ್ಟಿತು. 2007ರಲ್ಲಿ ಯೂನಸ್ ರಾಜಕೀಯ ಪಕ್ಷವನ್ನು ರಚಿಸುವ ಯೋಜನೆಯನ್ನು ಘೋಷಿಸಿದ ಅನಂತರ ಇದು ಮತ್ತಷ್ಟು ಉದ್ವಿಗ್ನವಾಯಿತು.

ತನಿಖೆಯ ಸಮಯದಲ್ಲಿ ಶೇಖ್ ಹಸೀನಾ ಅವರು ಗ್ರಾಮೀಣ ಬ್ಯಾಂಕ್‌ನ ಚುಕ್ಕಾಣಿ ಹಿಡಿದಿರುವಾಗ ಬಡ ಗ್ರಾಮೀಣ ಮಹಿಳೆಯರಿಂದ ಸಾಲ ವಸೂಲಿ ಮಾಡಲು ಮುಹಮ್ಮದ್ ಯೂನಸ್ ಬಲವಂತ ಮತ್ತು ಇತರ ವಿಧಾನಗಳನ್ನು ಬಳಸುತ್ತಿದ್ದರು ಎಂದು ಆರೋಪಿಸಿದ್ದರು. ಯೂನಸ್ ಇದನ್ನು ನಿರಾಕರಿಸಿದ್ದರು.

2011ರಲ್ಲಿ ಹಸೀನಾ ಅವರ ಸರ್ಕಾರವು ಬ್ಯಾಂಕಿನ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಲು ಪ್ರಾರಂಭಿಸಿತು. ಇದು ನಿವೃತ್ತಿ ನಿಯಮಗಳನ್ನು ಉಲ್ಲಂಘಿಸಿದ ಆಧಾರದ ಮೇಲೆ ವ್ಯವಸ್ಥಾಪಕ ನಿರ್ದೇಶಕರಾಗಿರುವ ಯೂನಸ್ ಅವರನ್ನು ವಜಾಗೊಳಿಸಲು ಕಾರಣವಾಯಿತು. 2013ರಲ್ಲಿ ಯೂನಸ್ ಅವರ ನೊಬೆಲ್ ಪ್ರಶಸ್ತಿ ಮತ್ತು ಪುಸ್ತಕದಿಂದ ರಾಯಧನ ಸೇರಿದಂತೆ ಸರ್ಕಾರದ ಅನುಮೋದನೆಯಿಲ್ಲದೆ ಹಣವನ್ನು ಸ್ವೀಕರಿಸಿದ ಆರೋಪದ ಮೇಲೆ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು.

ಬಾಂಗ್ಲಾದೇಶದ ಅತಿದೊಡ್ಡ ಮೊಬೈಲ್ ನೆಟ್‌ವರ್ಕ್‌ನ ಭಾಗವಾಗಿರುವ ಗ್ರಾಮೀಣ ಟೆಲಿಕಾಂ, ನಾರ್ವೇಜಿಯನ್ ಟೆಲಿಕಾಂ ದೈತ್ಯ ಟೆಲಿನಾರ್‌ನ ಅಂಗಸಂಸ್ಥೆಯಾದ ಗ್ರಾಮೀಣ್‌ಫೋನ್‌ ಸೇರಿದಂತೆ ಇತರ ಉದ್ಯಮಗಳಿಗೆ ಸಂಬಂಧಿಸಿದ ಆರೋಪಗಳಿಂದ ಯೂನಸ್‌ ಮತ್ತಷ್ಟು ತೊಂದರೆಗಳನ್ನು ಎದುರಿಸಿದರು. ಯೂನಸ್ ಅವರ ವಿರುದ್ಧ 2023ರಲ್ಲಿ ಉದ್ಯೋಗದ ಪ್ರಯೋಜನಗಳನ್ನು ದುರುಪಯೋಗಪಡಿಸಿಕೊಂಡ ಬಗ್ಗೆ ಮೊಕದ್ದಮೆ ಹೂಡಲಾಯಿತು. ಆದರೆ ಇದನ್ನೂ ಯೂನಸ್ ಅವರು ಇದನ್ನು ನಿರಾಕರಿಸಿದರು.


ಈ ವರ್ಷದ ಆರಂಭದಲ್ಲಿ ಯೂನಸ್ ಮತ್ತು ಇತರ 13 ಮಂದಿಯ ವಿರುದ್ಧ ಬಾಂಗ್ಲಾದೇಶದ ವಿಶೇಷ ನ್ಯಾಯಾಲಯವು 2 ಮಿಲಿಯನ್ ಡಾಲರ್ ದುರುಪಯೋಗ ಪ್ರಕರಣ ಆರೋಪದ ಮೇಲೆ ದೋಷಾರೋಪಣೆ ಮಾಡಿತ್ತು. ಇದನ್ನು ಯೂನಸ್ ನಿರಾಕರಿಸಿದ್ದು, ಸದ್ಯ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ. ಶೇಖ್ ಹಸೀನಾ ಅವರೊಂದಿಗಿನ ಹಳಸಿದ ಸಂಬಂಧದಿಂದಾಗಿ ಮುಹಮ್ಮದ್ ಯೂನಸ್ ಅವರನ್ನು ಗುರಿಯಾಗಿಸಲಾಗಿದೆ ಎಂದು ಅವರ ಬೆಂಬಲಿಗರು ವಾದಿಸುತ್ತಾರೆ.

ಇದನ್ನೂ ಓದಿ: Bangladesh Unrest: ಬಾಂಗ್ಲಾದಲ್ಲಿ ಹಿಂದೂಗಳ ಬರ್ಬರ ಹತ್ಯೆ, ದೇಗುಲಗಳಿಗೆ ಬೆಂಕಿ, ಮಹಿಳೆಯರ ಮೇಲೂ ದೌರ್ಜನ್ಯ; ಇಲ್ಲಿವೆ ವಿಡಿಯೊಗಳು


1940ರಲ್ಲಿ ಬಾಂಗ್ಲಾದೇಶದ ಬಂದರು ನಗರವಾದ ಚಿತ್ತಗಾಂಗ್‌ನಲ್ಲಿ ಜನಿಸಿದ ಯೂನಸ್ ಅವರು ಅಮೆರಿಕದ ವಂಡೆರ್‌ಬಿಲ್ಟ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಗಳಿಸಿದ್ದಾರೆ. ಅನಂತರ ಅವರು ಬಾಂಗ್ಲಾದೇಶಕ್ಕೆ ಮರಳಿದರು. ಬಿದಿರಿನ ಕುರ್ಚಿ ನೇಯುತ್ತಿದ್ದ ಬಡ ಮಹಿಳೆಯೊಬ್ಬರು ಪಡೆದ ಸಾಲವನ್ನು ಮರುಪಾವತಿಸಲು ಹೆಣಗಾಡುತ್ತಿದ್ದುದು ಯುನಸ್‌ ಅವರ ಗಮನ ಸೆಳೆದು ಅದು ಅವರಿಗೆ ಕಿರು ಸಾಲ ಯೋಜನೆ ರೂಪಿಸಲು ಪ್ರೇರೇಪಿಸಿತು. ಮುಂದೆ ಇದು ಗ್ರಾಮೀಣ ಬ್ಯಾಂಕ್ ಸ್ಥಾಪಿಸಬೇಕು ಎನ್ನುವ ಚಿಂತನೆ ಮೂಡಿಸಿತು ಎಂದು ಯೂನಸ್ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

Continue Reading

Latest

Rihanna Crop Over: ʼಊರ ಹಬ್ಬʼದಲ್ಲಿ ʼನಗ್ನ ಉಡುಗೆʼ ಧರಿಸಿ ಸಂಚಲನ ಮೂಡಿಸಿದ ರಿಹಾನ್ನಾ!

Rihanna Crop Over: ಬಾರ್ಬಾಡಿಯನ್ ಗಾಯಕಿ ರಿಹಾನ್ನಾ ತನ್ನ ತಾಯ್ನಾಡಿನ ಉತ್ಸವವಾದ ಕ್ರಾಪ್ ಓವರ್ ಫೆಸ್ಟಿವಲ್‌ನಲ್ಲಿ ಬಹಳ ವಿಭಿನ್ನವಾಗಿ ಕಾಣಿಸಿಕೊಂಡು ಜನರ ಗಮನ ಸೆಳೆದಿದ್ದಾರೆ. ರಿಹಾನ್ನಾ ತನ್ನ ಚರ್ಮದ ಹೊಳಪನ್ನು ತೋರಿಸಲು ನಗ್ನ ಬಾಡಿ ಸೂಟ್ ಅನ್ನು ಆರಿಸಿಕೊಂಡಿದ್ದಾರೆ. ರಿಹಾನ್ನಾ ಚರ್ಮದ ಹೊಳಪು ನೋಡಿದವರಿಗೆ ಅಸೂಯೆ ಮೂಡುವುದು ಖಂಡಿತ! ಇನ್ನು ಅವರು ಧರಿಸಿದ ಈ ವಿಶಿಷ್ಟ ಬಾಡಿ ಸೂಟ್ ಅಂತೂ ನೋಡುಗರ ಕಣ್ಣು ಕುಕ್ಕುವಂತೆ ಇದೆ.

VISTARANEWS.COM


on

Crop Over Festival
Koo


ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕಿ ರಿಹಾನ್ನಾ ತನ್ನ ತಾಯ್ನಾಡಿನ ಉತ್ಸವವಾದ ಕ್ರಾಪ್ ಓವರ್ ಫೆಸ್ಟಿವಲ್‍ (Crop Over Festival)ನಲ್ಲಿ ಅನೇಕ ಬಾರಿ ವಿಶೇಷ ಶೈಲಿಯಲ್ಲಿ ಕಾಣಿಸಿಕೊಂಡಿದ್ದರೂ, ಈ ವರ್ಷ ಮಾತ್ರ ಅವರು ಬಹಳ ವಿಭಿನ್ನವಾಗಿ ಕಾಣಿಸಿಕೊಂಡು ಜನರ ಗಮನ ಸೆಳೆದಿದ್ದಾರೆ. ಅವರು ಕ್ರಾಪ್ ಆಫ್ ಫೆಸ್ಟಿವಲ್‍ಗಾಗಿ ಬೆಜೆಲ್ಡ್ ಕಾಸ್ಟ್ಯೂಮ್ ಬಾಡಿ ಸೂಟ್‍ನಲ್ಲಿ ನಗ್ನವಾಗಿ ಕಾಣಿಸಿಕೊಂಡಿದ್ದಾರೆ. ಈ ಉಡುಗೆಯಲ್ಲಿ ಮಿಂಚಿದ ರಿಹಾನ್ನಾ ಕೆರಿಬಿಯನ್ ದೇವತೆಯಂತೆ ಕಾಣಿಸಿದ್ದಾರೆ. ಅವರ ಈ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರಿಹಾನ್ನಾ ತನ್ನ ಚರ್ಮದ ಹೊಳಪನ್ನು ತೋರಿಸಲು ನಗ್ನ ಬಾಡಿ ಸೂಟ್ ಅನ್ನು ಆರಿಸಿಕೊಂಡಿದ್ದಾರೆ. ರಿಹಾನ್ನಾ ಚರ್ಮದ ಹೊಳಪು ನೋಡಿದವರಿಗೆ ಅಸೂಯೆ ಮೂಡುವುದು ಖಂಡಿತ. ಇನ್ನು ಅವರು ಧರಿಸಿದ ಈ ವಿಶಿಷ್ಟ ಬಾಡಿ ಸೂಟ್ ಅನ್ನು ಕೆಂಪು, ಹಳದಿ ಮತ್ತು ಬಿಳಿ ಬಣ್ಣವನ್ನು ಒಳಗೊಂಡ ವಿವಿಧ ಬಣ್ಣಗಳಲ್ಲಿ ಅಲಂಕರಿಸಿದ ಸ್ಟೋನ್ ವರ್ಕ್‍ನಿಂದ ಅಲಂಕರಿಸಲಾಗಿದೆ.

Crop Over Festival
Crop Over Festival

ಹಾಗೇ ಅಧರಿಸಿದ ಆಭರಣಗಳು ಮತ್ತು ಕಿರೀಟವನ್ನು ಸಹ ಅದೇ ಬಣ್ಣದ ಸ್ಟೋನ್‍ಗಳಿಂದ ರೆಡಿ ಮಾಡಲಾಗಿದೆ. ಹಾಗೇ ನಿಯಾನ್, ಕಿತ್ತಳೆ ಮತ್ತು ಫುಶಿಯಾ ಬಣ್ಣಗಳನ್ನು ಹೊಂದಿರುವ ಚಿನ್ನದ ಹೊಳಪಿನ ಚಪ್ಪಲಿಗಳು ಮತ್ತು ತನ್ನ ಬೆನ್ನಿಗೆ ಬಣ್ಣ ಬಣ್ಣದ ಗರಿಗಳಿಂದ ತಯಾರಿಸಿದ ರೆಕ್ಕೆಗಳನ್ನು ಧರಿಸಿ ಅವರು ತನ್ನ ನೋಟವನ್ನು ಹೆಚ್ಚು ಆಕರ್ಷಕವಾಗಿ ಮಾಡಿದ್ದಾರೆ.

ಅಲ್ಲದೇ ಮೇಕಪ್‍ಗಾಗಿ, ಅವರು ಗಾಢ ಬಣ್ಣದ ಲಿಪ್ ಲೈನರ್ ಜೊತೆಗೆ ತಿಳಿ ಬಣ್ಣದ ಲಿಪ್ ಶೇಡ್, ಹೈಲೈಟರ್ ಬದಲಿಗೆ ಗ್ಲಿಟರ್ಸ್ , ಐಲೈನರ್ ನೊಂದಿಗೆ ಬೂದು ಬಣ್ಣದ ಐಶಾಡೋವನ್ನು ಹಚ್ಚಿದ್ದಾರೆ. ಹಾಗೇ ಅವರು ತನ್ನ ಸಂಪೂರ್ಣ ನೋಟವನ್ನು ಪ್ರದರ್ಶಿಸಲು ತನ್ನ ಗುಂಗುರು ಕೂದಲನ್ನು ಬಿಟ್ಟಿದ್ದಾರೆ.

ಕ್ರಾಪ್ ಓವರ್ ಫೆಸ್ಟಿವಲ್
ಕ್ರಾಪ್ ಓವರ್ ಫೆಸ್ಟಿವಲ್ ಒಂದು ಬಾರ್ಬಾಡಿಯನ್‍ನಲ್ಲಿ ನಡೆಯುವ ಒಂದು ಸಾಂಪ್ರದಾಯಿಕ ಆಚರಣೆಯಾಗಿದ್ದು, ಇದು 1940 ರ ದಶಕದಲ್ಲಿ ಪ್ರಾರಂಭವಾಗಿದೆ. ಈ ರೋಮಾಂಚಕ ಆಚರಣೆಯಲ್ಲಿ ಮಾಸ್ಕ್ವಾರೆಡ್ ಬ್ಯಾಂಡ್ ಗಳು(Masquerade Bands) ಸಕ್ವಿನ್ (sequin )ಧರಿಸಿದ ಉತ್ಸಾಹಿಗಳು, ವರ್ಣರಂಜಿತ ಗರಿಗಳು, ಪ್ರಕಾಶಮಾನವಾದ ಉಚ್ಚಾರಣೆಗಳು, ಆ ವರ್ಷದ ಕೊನೆಯಲ್ಲಿ ಬೆಳೆದ ಬೆಳೆಗಳನ್ನು ಮೆರವಣಿಗೆಯ ಮೂಲಕ ಪ್ರದರ್ಶಿಸುತ್ತಾರೆ.

Continue Reading
Advertisement
National Handloom day 2024
ಫ್ಯಾಷನ್38 mins ago

National Handloom day 2024: ಕರ್ನಾಟಕದ ಹೆಮ್ಮೆಯ ವಿಶ್ವ ಪ್ರಸಿದ್ಧ ಹ್ಯಾಂಡ್‌ ಲೂಮ್‌ ಸೀರೆಗಳಿವು

Viral Video
Latest49 mins ago

Viral Video: 11 ವರ್ಷಗಳ ಹಿಂದೆ ಸತ್ತಿದ್ದ ಗಂಡ ಕನಸಲ್ಲಿ ಬಂದು ʼಸೇರಿದʼ; ಹಾಗಾಗಿ ಮಗು ಹುಟ್ಟಿತು ಅಂತಿದ್ದಾಳೆ ಈ ಹೆಂಗಸು!

Vinesh Phogat
ಕ್ರೀಡೆ1 hour ago

Vinesh Phogat: ವಿನೇಶ್‌ ಫೋಗಟ್‌ ಅನರ್ಹ; ದಿಢೀರ್ 2-3 ಕೆ.ಜಿ ತೂಕ ಇಳಿಸಲು ಮುಂದಾದರೆ ದೇಹಕ್ಕೆ ಏನಾಗುತ್ತದೆ?

Lalbagh Flower Show
ಕರ್ನಾಟಕ1 hour ago

Lalbagh Flower Show: ಲಾಲ್‌ಬಾಗ್ ಫ್ಲವರ್‌ ಶೋ; ನಾಳೆಯಿಂದ ಬೆಂಗಳೂರಿನ ಈ ರಸ್ತೆಗಳಲ್ಲಿ ಪಾರ್ಕಿಂಗ್‌ ನಿಷೇಧ

Viral Video
Latest1 hour ago

Viral Video: ರೀಲ್ಸ್‌ಗಾಗಿ ಬೆಡ್‌ರೂಮ್‌ನಲ್ಲಿ ಅರೆನಗ್ನ ಗೆಳತಿ ಕೈಗೆ ಪಿಸ್ತೂಲ್ ಕೊಟ್ಟ ಪೊಲೀಸ್ ಅಧಿಕಾರಿ!

Viral News
Latest2 hours ago

Viral News: ಚಹಾ ಮಾರಾಟದಿಂದ ಇವರಿಗೆ ಪ್ರತಿ ತಿಂಗಳು 2 ಲಕ್ಷ ರೂ. ಆದಾಯ!

Viral video
ವೈರಲ್ ನ್ಯೂಸ್2 hours ago

Viral Video: ಐದನೇ ಮಹಡಿಯಿಂದ ಬಾಲಕಿ ಮೇಲೆ ಬಿದ್ದ ಶ್ವಾನ; ಆಮೇಲೆ ಆಗಿದ್ದೇನು? ವಿಡಿಯೋ ಇದೆ

OTT Releases
ಸಿನಿಮಾ2 hours ago

OTT Releases: ಇಂಡಿಯನ್ 2, ಟರ್ಬೊ ಸೇರಿದಂತೆ ಹಲವು ಹೊಸ ಚಿತ್ರಗಳು ಈ ವಾರ ಒಟಿಟಿಯಲ್ಲಿ!

Gowri Movie Saanya Iyer Samar Lankesh eating dosa with together
ಸಿನಿಮಾ2 hours ago

Gowri Movie: ಸಮರ್ಜಿತ್‌ಗೆ ನಾಚಿಕೆಯಿಂದ ದೋಸೆ ತಿನ್ನಿಸಿದ ಸಾನ್ಯಾ ಅಯ್ಯರ್; ಇದೇನು ಡೇಟಿಂಗಾ ಎಂದು ಪ್ರಶ್ನೆ ಇಟ್ಟ ಫ್ಯಾನ್ಸ್!

Self Harming
ಕರ್ನಾಟಕ2 hours ago

Self Harming: ಇನ್‍ಸ್ಟಾಗ್ರಾಂ ಪ್ರೇಯಸಿ ಕೈಕೊಟ್ಟಿದ್ದಕ್ಕೆ ನೇಣಿಗೆ ಶರಣಾದ ಯುವಕ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Wild Animals Attack
ಚಿಕ್ಕಮಗಳೂರು1 day ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 day ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ4 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ6 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ6 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ6 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ1 week ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

ಟ್ರೆಂಡಿಂಗ್‌