Murder Case: ಒಂದೇ ಹುಡುಗಿಯನ್ನು ಪ್ರೀತಿಸಿದ ಸಹೋದರರು; ಈ ತ್ರಿಕೋನ ಪ್ರೇಮ ಕಥೆ ಕೊಲೆಯಲ್ಲಿ ಅಂತ್ಯ! - Vistara News

Latest

Murder Case: ಒಂದೇ ಹುಡುಗಿಯನ್ನು ಪ್ರೀತಿಸಿದ ಸಹೋದರರು; ಈ ತ್ರಿಕೋನ ಪ್ರೇಮ ಕಥೆ ಕೊಲೆಯಲ್ಲಿ ಅಂತ್ಯ!

Murder Case: ಸೋದರ ಸಂಬಂಧಿಗಳಾದ ವಿನೋದ್ ಮತ್ತು ಮನೀಶ್ ಒಂದೇ ಹುಡುಗಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು. ವಿನೋದ್ ಐದು ವರ್ಷಗಳಿಂದ ಅವಳೊಂದಿಗೆ ಸಂಬಂಧ ಹೊಂದಿದ್ದ. ಅವರ ಸಂಬಂಧವು ಮದುವೆಯ ಹಂತಕ್ಕೆ ತಲುಪಿತ್ತು. ಆದರೆ, ತಾನು ಪ್ರೀತಿಸುತ್ತಿದ್ದ ಹುಡುಗಿ ಮೇಲೆ ಅನುಮಾನಗೊಂಡಿದ್ದ ವಿನೋದ್ ಅವಳ ಮೊಬೈಲ್ ಚೆಕ್ ಮಾಡಿದಾಗ ಆಕೆಗೆ ತನ್ನ ಸಹೋದರ ಸಂಬಂಧಿ ಮನೀಶ್‍ನೊಂದಿಗೆ ಸಂಬಂಧವಿದೆ ಎಂಬುದು ತಿಳಿದು ಬಂದಿದೆ. ಆಗ ಕೋಪ ಮತ್ತು ಅಸೂಯೆಯಿಂದ ವಿನೋದ್ ಸೇಡು ತೀರಿಸಿಕೊಳ್ಳುವ ನಿರ್ಧಾರ ಮಾಡಿದ. ಮುಂದೇನಾಯ್ತು? ಈ ಸುದ್ದಿ ಓದಿ.

VISTARANEWS.COM


on

Murder Case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಪ್ರೀತಿಯ ವಿಚಾರದಲ್ಲಿ ಮೋಸ, ಕೊಲೆ ಪ್ರಕರಣಗಳು ಆಗಾಗ ನಡೆಯುತ್ತಿರುತ್ತವೆ. ಇದೀಗ ಜಾರ್ಖಂಡ್‍ನಲ್ಲಿ ತ್ರಿಕೋನ ಪ್ರೇಮ ಕಥೆಯೊಂದು ದುರಂತವಾಗಿ ಅಂತ್ಯ ಕಂಡಿದೆ. ಜಾರ್ಖಂಡ್‍ನ ಗೋಮಿಯಾದಲ್ಲಿ ಇಬ್ಬರು ಸಹೋದರರು ಒಂದೇ ಹುಡುಗಿಯನ್ನು ಪ್ರೀತಿಸಿದ ನಂತರ ಈ ತ್ರಿಕೋನ ಪ್ರೇಮ ಕಥೆ ತಿರುವು ಪಡೆದು ಕೊಲೆಗೆ (Murder Case)ಕಾರಣವಾಗಿದೆ ಎಂಬುದಾಗಿ ತಿಳಿದು ಬಂದಿದೆ. ಪ್ರಣಯ ಮತ್ತು ದ್ರೋಹದ ಈ ದುರಂತ ಪ್ರೇಮಕಥೆಯಿಂದ ಅವರ ಕುಟುಂಬ ದುಃಖಕ್ಕೀಡಾಗಿದೆ.

ಕತಾರಾ ಒಪಿ ಪ್ರದೇಶದ ಜಿರ್ಕಿ ಎಂಬ ಸಣ್ಣ ಹಳ್ಳಿಯಲ್ಲಿ, ಸೋದರ ಸಂಬಂಧಿಗಳಾದ ವಿನೋದ್ ಮತ್ತು ಮನೀಶ್ ಒಂದೇ ಹುಡುಗಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು. ವಿನೋದ್ ಐದು ವರ್ಷಗಳಿಂದ ಅವಳೊಂದಿಗೆ ಸಂಬಂಧ ಹೊಂದಿದ್ದ. ಅವರ ಸಂಬಂಧವು ಮದುವೆಯ ಹಂತಕ್ಕೆ ತಲುಪಿತ್ತು. ಆದರೆ, ತಾನು ಪ್ರೀತಿಸುತ್ತಿದ್ದ ಹುಡುಗಿ ಮೇಲೆ ಅನುಮಾನಗೊಂಡಿದ್ದ ವಿನೋದ್ ಅವಳ ಮೊಬೈಲ್ ಚೆಕ್ ಮಾಡಿದಾಗ ಆಕೆಗೆ ತನ್ನ ಸಹೋದರ ಸಂಬಂಧಿ ಮನೀಶ್‍ನೊಂದಿಗೆ ಸಂಬಂಧವಿದೆ ಎಂಬುದು ತಿಳಿದು ಬಂದಿದೆ. ಆಗ ಕೋಪ ಮತ್ತು ಅಸೂಯೆಯಿಂದ ವಿನೋದ್ ಸೇಡು ತೀರಿಸಿಕೊಳ್ಳುವ ನಿರ್ಧಾರ ಮಾಡಿದ.

ಪೊಲೀಸರ ಪ್ರಕಾರ, ಅವನು ಗೋಮಿಯಾದಲ್ಲಿ ಕಮ್ಮಾರನನ್ನು ಭೇಟಿ ಮಾಡಿ ಹರಿತವಾದ ಕೊಡಲಿಯನ್ನು ರೆಡಿ ಮಾಡಿಸಿ ಅದರಿಂದ ತನ್ನ ಸೋದರ ಸಂಬಂಧಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ಕೊಲೆ ನಡೆದ ದಿನ ವಿನೋದ್ ತನ್ನ ತಾಯಿಯೊಂದಿಗೆ ಜಿರ್ಕಿಯಲ್ಲಿರುವ ತನ್ನ ಸೋದರ ಮಾವನ ಮನೆಗೆ ಹೋಗಿದ್ದಾನೆ. ಮನೀಶ್ ಮನೆಯಲ್ಲಿ ಒಬ್ಬಂಟಿಯಾಗಿರುವುದನ್ನು ಕಂಡಿದ್ದಾನೆ. ಈ ಅವಕಾಶವನ್ನು ಬಳಸಿಕೊಂಡ ವಿನೋದ್, ಮನೀಶ್ ಮೇಲೆ ಆಯುಧದಿಂದ ಹಲ್ಲೆ ನಡೆಸಿ, ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ರಸ್ತೆಯಲ್ಲಿ ಚುಡಾಯಿಸಿದ ಪುಂಡನಿಗೆ ಬುದ್ಧಿ ಕಲಿಸಿದ ವಿದ್ಯಾರ್ಥಿನಿ; ವಿಡಿಯೊ ನೋಡಿ

ಮನೀಶ್‍ನ ಕ್ರೂರ ಹತ್ಯೆಯು ಕುಟುಂಬ ಮತ್ತು ಹಳ್ಳಿಯಾದ್ಯಂತ ಆಘಾತವನ್ನುಂಟುಮಾಡಿತು. ನಂತರ, ಗ್ರಾಮಸ್ಥರು ಪ್ರತಿಭಟನೆಗಿಳಿಸು ರಸ್ತೆಗಳಲ್ಲಿ ತಡೆಯೊಡ್ಡಿದರು. ಹಾಗೂ ತ್ವರಿತ ಕ್ರಮ ಮತ್ತು ನ್ಯಾಯಕ್ಕಾಗಿ ಒತ್ತಾಯಿಸಿದ್ದರಿಂದ ಅಲ್ಲಿ ಆಕ್ರೋಶ ಭುಗಿಲೆದ್ದಿತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತ್ವರಿತವಾಗಿ ತಮ್ಮ ತನಿಖೆಯನ್ನು ತೀವ್ರಗೊಳಿಸಿದರು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು ಮತ್ತು ಆರಂಭದಲ್ಲಿ ಅವರನ್ನು ದಾರಿತಪ್ಪಿಸಲು ಪ್ರಯತ್ನಿಸಿದ ವಿನೋದ್‍ನನ್ನು ವಿಚಾರಣೆ ನಡೆಸಿದರು. ಕೊನೆಗೆ, ಒತ್ತಡದಲ್ಲಿ, ವಿನೋದ್ ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡ. ಇದರಿಂದಾಗಿ ಪೊಲೀಸರು ಅವನನ್ನು ಬಂಧಿಸಿದ್ದಾರೆ. ಒಬ್ಬ ಯುವಕ ಜೈಲು ಪಾಲಾಗಿ ಮತ್ತೊಬ್ಬನ್ನು ಕಳೆದುಕೊಂಡ ಕುಟುಂಬ ಈಗ ದುಃಖದಲ್ಲಿ ಮುಳುಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಮೃಗಾಲಯಕ್ಕೆ ನುಗ್ಗಿ ಪ್ರಾಣಿಗಳನ್ನೂ ಹಿಂಸಿಸಿದ ಬಾಂಗ್ಲಾದ ದುಷ್ಟ ಪ್ರತಿಭಟನಾಕಾರರು!

Viral Video: ಬಾಂಗ್ಲಾದೇಶದಲ್ಲಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ ಈ ಪ್ರದೇಶದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಈ ಘಟನೆಯ ನಡುವೆ ಇದೀಗ ಬಾಂಗ್ಲಾದೇಶದ ಮೃಗಾಲಯದಲ್ಲಿ ನಡೆದ ಆಘಾತಕಾರಿ ವಿಡಿಯೊ ಒಂದು ಹೊರಗೆ ಬಂದಿದೆ. ಬಾಂಗ್ಲಾದೇಶದಲ್ಲಿ ಅಶಾಂತಿ ಪರಿಸ್ಥಿತಿಯ ಮಧ್ಯೆ, ಪ್ರತಿಭಟನಾಕಾರರ ಗುಂಪೊಂದು ಢಾಕಾದ ಮೃಗಾಲಯಕ್ಕೆ ನುಗ್ಗಿ ಅಲ್ಲಿ ಗಲಾಟೆ ಮಾಡುತ್ತಿರುವುದನ್ನು ತೋರಿಸುವ ಆತಂಕಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

VISTARANEWS.COM


on

Viral Video
Koo


ಬಾಂಗ್ಲಾದೇಶದಲ್ಲಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ ಈ ಪ್ರದೇಶದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಈ ಘಟನೆಯ ನಡುವೆ ಇದೀಗ ಬಾಂಗ್ಲಾದೇಶದ ಮೃಗಾಲಯದಲ್ಲಿ ನಡೆದ ಆಘಾತಕಾರಿ ವಿಡಿಯೊ ಒಂದು ಹೊರಗೆ ಬಂದಿದೆ. ಬಾಂಗ್ಲಾದೇಶದಲ್ಲಿ ಅಶಾಂತಿ ಪರಿಸ್ಥಿತಿಯ ಮಧ್ಯೆ, ಪ್ರತಿಭಟನಾಕಾರರ ಗುಂಪೊಂದು ಢಾಕಾದ ಮೃಗಾಲಯಕ್ಕೆ ನುಗ್ಗಿ ಅಲ್ಲಿ ಗಲಾಟೆ ಮಾಡುತ್ತಿರುವುದನ್ನು ತೋರಿಸುವ ಆತಂಕಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಈ ವಿಡಿಯೊದಲ್ಲಿ ಜನರ ಗುಂಪೊಂದು ಹುಚ್ಚುತನದಿಂದ ಓಡುತ್ತಿರುವುದನ್ನು ಮತ್ತು ಆವರಣದಲ್ಲಿದ್ದ ಜಿಂಕೆಯನ್ನು ಬೆನ್ನಟ್ಟುವುದನ್ನು ಇದು ತೋರಿಸುತ್ತದೆ. ಪ್ರಾಣಿಗಳನ್ನು ಹಿಂಸಿಸುವಂತಹ ಈ ಅಮಾನವೀಯ ಕೃತ್ಯದಲ್ಲಿ ಭಾಗಿಯಾಗಿರುವವರು ಯುವ ವಿದ್ಯಾರ್ಥಿಗಳು ಎಂದು ಹೇಳಲಾಗುತ್ತಿದೆ. ಜಿಂಕೆಗಳನ್ನು ಬೆನ್ನಟ್ಟಿದ ಪ್ರತಿಭಟನಾಕಾರರು, ಪ್ರಾಣಿಗಳನ್ನು ಅಪಹರಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಈ ವಿಡಿಯೊ ವಿದ್ಯಾರ್ಥಿಗಳ ಗುಂಪು ಕೋಲುಗಳನ್ನು ಹಿಡಿದು ಜಿಂಕೆಯನ್ನು ಬೆನ್ನಟ್ಟುವ ಮೂಲಕ ಪ್ರಾರಂಭವಾಗುತ್ತದೆ. ಜಿಂಕೆ ಭಯಭೀತಿಯಿಂದ ಓಡಿಹೋಗಲು ಮತ್ತು ದುಷ್ಕರ್ಮಿಗಳ ಕೈಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

ಒಲಿ ಲಂಡನ್ ಎಂದು ಗುರುತಿಸಲ್ಪಟ್ಟ ಸುದ್ದಿ ವರದಿಗಾರರೊಬ್ಬರು ಈ ವೈರಲ್ ವಿಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು “ಬಾಂಗ್ಲಾದೇಶ ರಾಷ್ಟ್ರೀಯ ಮೃಗಾಲಯದೊಳಗೆ ನೂರಾರು ಪ್ರಾಣಿಗಳನ್ನು ಅಪಹರಿಸಲು ಪ್ರಯತ್ನಿಸುತ್ತಿರುವಾಗ ಭಯಭೀತವಾದ ಜಿಂಕೆಯನ್ನು ಜನಸಮೂಹವು ಬೆನ್ನಟ್ಟುತ್ತಿರುವುದನ್ನು ಕಾಣಬಹುದು” ಎಂದು ಬರೆದಿದ್ದಾರೆ. ಅಲ್ಲದೇ “ಬಾಂಗ್ಲಾದೇಶವು ಅರಾಜಕತೆಗೆ ಇಳಿಯುತ್ತಿದ್ದಂತೆ, ನೂರಾರು ಜನರು ಮೃಗಾಲಯಕ್ಕೆ ನುಗ್ಗಿ ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದ್ದಾರೆ” ಎಂದು ಓಲಿ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಬರೆದಿದ್ದಾರೆ.

ಹಲವಾರು ಎಕ್ಸ್ ಬಳಕೆದಾರರು ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜನರು ಮೃಗಾಲಯದ ಪ್ರಾಣಿಗಳನ್ನು ಹಿಂಸಿಸುತ್ತಿದ್ದಾರೆ ಮತ್ತು ಅವುಗಳನ್ನು ಅಪಹರಿಸುತ್ತಿದ್ದಾರೆ ಎಂದು ಈ ವಿಡಿಯೊ ತಿಳಿಸುತ್ತದೆ. ಪ್ರಾಣಿಗಳ ಮೇಲೆ ನಿರ್ದಯವಾಗಿ ದಾಳಿ ಮಾಡಿದ ಬಾಂಗ್ಲಾದೇಶಿಗರನ್ನು ನೆಟ್ಟಿಗರು ಖಂಡಿಸಿದ್ದಾರೆ. “ತುಂಬಾ ದುಃಖವಾಗಿದೆ. ಜನರು ಮಾನವೀಯತೆ ಮತ್ತು ಸಹಾನುಭೂತಿ ಇಲ್ಲದವರಂತೆ ವರ್ತಿಸುತ್ತಿದ್ದಾರೆ” ಎಂದು ಒಬ್ಬರು ಬರೆದರೆ, ಇನ್ನೊಬ್ಬರು “ಅವರನ್ನು ತಡೆಯಲು ಪೊಲೀಸ್ ಪಡೆ ಇಲ್ಲವೆ?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮಾಲ್‍ಗೇಮ್‌ನಲ್ಲಿ ಚಿಪ್ಸ್‌ ಪ್ಯಾಕೆಟ್‌ ಸಂಗ್ರಹಿಸಿದ ಪುಟ್ಟ ಹುಡುಗಿಯ ಬುದ್ಧಿವಂತಿಕೆ ನೋಡಿ!

ಮೃಗಾಲಯದಲ್ಲಿ ಅವರ ಕ್ರೂರ ಕೃತ್ಯವನ್ನು ನೋಡಿದ ಜನರು ಅವರು ವಿದ್ಯಾರ್ಥಿಗಳು ಎಂಬ ಹೇಳಿಕೆಯನ್ನು ಒಪ್ಪಲು ಸಿದ್ಧರಿಲ್ಲ. ಹಾಗಾಗಿ ಅನೇಕರು “ಅವರು ವಿದ್ಯಾರ್ಥಿಗಳೇ???” ಎಂದು ಆಘಾತದಿಂದ ಕೇಳಿದ್ದಾರೆ.

Continue Reading

ಕರ್ನಾಟಕ

CM Siddaramaiah: ಮೋದಿ ಸರ್ಕಾರದ ವಕ್ಫ್ ಬೋರ್ಡ್ ಕಾನೂನು ತಿದ್ದುಪಡಿಗೆ ಸಿದ್ದರಾಮಯ್ಯ ವಿರೋಧ

CM Siddaramaiah: ವಕ್ಫ್ ಬೋರ್ಡ್ ಕಾನೂನು ಆ ಸಮುದಾಯದ ವೈಯಕ್ತಿಕ ಕಾನೂನಾಗಿದ್ದು, ಅದರಲ್ಲಿ ಮಧ್ಯಪ್ರವೇಶಿಸುವುದು ಸಂವಿಧಾನಬಾಹಿರ. ಸಂವಿಧಾನದ ತತ್ವಗಳಲ್ಲಿ ನಂಬಿಕೆಯಿರಿಸಿರುವ ಕಾಂಗ್ರೆಸ್ ಹಾಗೂ ಇಂಡಿ ಒಕ್ಕೂಟವು ಕೇಂದ್ರದ ಈ ನಿಲುವನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಬಿಜೆಪಿ ಹಾಗೂ ಎನ್‌ಡಿಎಯವರಿಗೆ ಅಲ್ಪಸಂಖ್ಯಾತರ ಮೇಲೆ ಕೋಪವಿರುವಂತಿದೆ. ಬಿಜೆಪಿಯವರು ಎಂದಿಗೂ ಜಾತ್ಯತೀತತೆ, ಸಾಮಾಜಿಕ ನ್ಯಾಯದ ಪರವಾಗಿ ನಿಂತವರಲ್ಲ. ಬಿಜೆಪಿ ಮೊದಲಿನಿಂದಲೂ ಕೋಮುವಾದಿ ಪಕ್ಷವಾಗಿಯೇ ಗುರುತಿಸಿಕೊಂಡಿದ್ದು, ಜಾತ್ಯತೀತ ತತ್ವವನ್ನು ನಂಬುವುದಿಲ್ಲ ಎಂದರು.

VISTARANEWS.COM


on

CM Siddaramaiah
Koo

ಮೈಸೂರು: ವಕ್ಫ್ ಬೋರ್ಡ್ ಕಾನೂನು ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರದ ಕ್ರಮವನ್ನು ಸಂವಿಧಾನದ ತತ್ವಗಳಲ್ಲಿ ನಂಬಿಕೆಯಿರಿಸಿರುವ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ವಿರೋಧಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

ಮೈಸೂರಿನ ವಿಮಾನ ನಿಲ್ದಾಣದಲ್ಲಿ ಗುರುವಾರ ಕೇಂದ್ರ ಸರ್ಕಾರ ವಕ್ಫ್ ಬೋರ್ಡ್ ತಿದ್ದುಪಡಿ ಬಿಲ್ ತರುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಇದನ್ನೂ ಓದಿ: Lalbagh Flower Show: ಎಲ್ಲ ವರ್ಗದ ಜನರಿಗೂ ಸಮಾನ ಅವಕಾಶ ದೊರೆಯಬೇಕು; ಸಿದ್ದರಾಮಯ್ಯ

ಬಿಜೆಪಿ ಹಾಗೂ ಎನ್‌ಡಿಎಯವರಿಗೆ ಅಲ್ಪಸಂಖ್ಯಾತರ ಮೇಲೆ ಕೋಪವಿರುವಂತಿದೆ. ಬಿಜೆಪಿಯವರು ಎಂದಿಗೂ ಜಾತ್ಯತೀತತೆ, ಸಾಮಾಜಿಕ ನ್ಯಾಯದ ಪರವಾಗಿ ನಿಂತವರಲ್ಲ. ಬಿಜೆಪಿ ಮೊದಲಿನಿಂದಲೂ ಕೋಮುವಾದಿ ಪಕ್ಷವಾಗಿಯೇ ಗುರುತಿಸಿಕೊಂಡಿದ್ದು, ಜಾತ್ಯತೀತ ತತ್ವವನ್ನು ನಂಬುವುದಿಲ್ಲ. ಮತಾಂತರ ನಿಷೇಧ ಕಾನೂನು, ಗೋಹತ್ಯೆ ತಿದ್ದುಪಡಿಗಳನ್ನು ಜಾರಿಗೆ ತಂದ ಬಿಜೆಪಿಯವರು ಇಂದು ವಕ್ಫ್‌ ಬೋರ್ಡ್ ತಿದ್ದುಪಡಿ ಪ್ರಯತ್ನಕ್ಕೂ ಕೈಹಾಕಿದ್ದಾರೆ. ವಕ್ಫ್ ಬೋರ್ಡ್ ಕಾನೂನು ಆ ಸಮುದಾಯದ ವೈಯಕ್ತಿಕ ಕಾನೂನಾಗಿದ್ದು, ಅದರಲ್ಲಿ ಮಧ್ಯಪ್ರವೇಶಿಸುವುದು ಸಂವಿಧಾನ ಬಾಹಿರ. ಸಂವಿಧಾನದ ತತ್ವಗಳಲ್ಲಿ ನಂಬಿಕೆಯಿರಿಸಿರುವ ಕಾಂಗ್ರೆಸ್ ಹಾಗೂ ಇಂಡಿ ಒಕ್ಕೂಟ, ಕೇಂದ್ರದ ಈ ನಿಲುವನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ ಎಂದರು.

ಇದನ್ನೂ ಓದಿ: Thangalaan Movie: ಬಹುನಿರೀಕ್ಷಿತ ʼತಂಗಲಾನ್‍ʼ ಚಿತ್ರಕ್ಕೆ ʼಕಾಂತಾರʼ ಸ್ಫೂರ್ತಿ ಎಂದ ಚಿಯಾನ್‌ ವಿಕ್ರಮ್‌!

ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಆರ್‌ಟಿಐ ಕಾರ್ಯಕರ್ತರು ಮುಖ್ಯಮಂತ್ರಿಗಳ ವಿರುದ್ದ ದೂರು ದಾಖಲಿಸಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಸುಳ್ಳು ಕೇಸುಗಳನ್ನು ದಾಖಲಿಸಿದರೆ, ಅವು ಕಾನೂನಿನ ದೃಷ್ಟಿಯಲ್ಲಿ ಮಾನ್ಯವಾಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Continue Reading

Latest

Baby Death: ಪ್ರಣಯಕ್ಕೆ ಡಿಸ್ಟರ್ಬ್‌ ಆಯಿತೆಂದು ಕೋಪಗೊಂಡ ಪ್ರಿಯತಮ ಮಹಿಳೆಯ ಮಗುವನ್ನು ನೆಲಕ್ಕೆ ಬಡಿದು ಕೊಂದ!

Baby Death: ಮಧ್ಯರಾತ್ರಿಯಲ್ಲಿ ಮಗು ಅಳುವುದನ್ನು ನಿಲ್ಲಿಸಲಿಲ್ಲ ಎಂದು ತಾಯಿಯ ಪ್ರಿಯಕರ ಮೊದಲು ಮಗುವಿನ ಕಾಲುಗಳನ್ನು ಹಿಡಿದು ನೆಲಕ್ಕೆ ಬಡಿದಿದ್ದಾನೆ. ನಂತರ ಉಸಿರಾಟವನ್ನು ನಿಲ್ಲಿಸಲು ಬಾಯಿಯನ್ನು ಮುಚ್ಚಿದ್ದಾನೆ. ಇದರಿಂದ ಮಗು ಸಾವನಪ್ಪಿದೆ. ತಾಯಿ ತನ್ನ ಮಗಳ ನಿರ್ಜೀವ ದೇಹವನ್ನು ಹಿಡಿದುಕೊಂಡು ಇಡೀ ರಾತ್ರಿ ಅಳುತ್ತಾ ಕಳೆದರೆ, ಪ್ರೇಮಿ ಹತ್ತಿರದಲ್ಲೇ ನಿಶ್ಚಿಂತೆಯಿಂದ ಮಲಗಿದ್ದ. ಮರುದಿನ ಬೆಳಗ್ಗೆ ಅವನು ಸ್ಥಳದಿಂದ ಓಡಿಹೋಗಿದ್ದಾನೆ. ನಂತರ ತಾಯಿ ಈ ಕೃತ್ಯವನ್ನು ಪೊಲೀಸರ ಗಮನಕ್ಕೆ ತಂದಿದ್ದಾಳೆ.

VISTARANEWS.COM


on

Baby Death
Koo


ತಾಯಿ-ಮಗುವಿನ ಬಾಂಧ್ಯವ್ಯ ತುಂಬಾ ಅನ್ಯೋನ್ಯವಾದದ್ದು. ಮಗು ಎಷ್ಟೇ ಅತ್ತರೂ, ಹಠ ಹಿಡಿದರೂ ಕೂಡ ತಾಯಿ ಬೇಸರ ಮಾಡಿಕೊಳ್ಳದೆ ಅದನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಾಳೆ. ಒಂದು ವೇಳೆ ಸಿಟ್ಟಲ್ಲಿ ಹೊಡೆದರೂ ಸ್ವಲ್ಪ ಹೊತ್ತಿನಲ್ಲೇ ಮಗುವನ್ನು ಮುದ್ದಾಡುತ್ತಾಳೆ. ಹಾಗೇ ಬೇರೆ ಯಾರಾದರೂ ತನ್ನ ಮಗುವಿಗೆ ಹಾನಿ ಮಾಡಲು ಬಂದರೆ ತನ್ನ ಪ್ರಾಣವನ್ನು ಲೆಕ್ಕಿಸದೆ ಮಗುವನ್ನು ಕಾಪಾಡುತ್ತಾಳೆ. ಆದರೆ ಮಧ್ಯಪ್ರದೇಶದಲ್ಲಿ ಅಳುವುದನ್ನು ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಒಂದು ವರ್ಷದ ಮಗಳನ್ನು ಆಕೆಯ ತಾಯಿಯ ಎದುರೇ ಪ್ರಿಯಕರನ ಅಮಾನುಷವಾಗಿ ಕೊಲೆ (Baby Death) ಮಾಡಿದ್ದಾನೆ. ಮಧ್ಯಪ್ರದೇಶದ ಶಿವಪುರಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ಈ ಮಹಿಳೆ ಪ್ರಿಯಕರನ ಜತೆ ಮಲಗಿದ್ದಳು. ಮಧ್ಯರಾತ್ರಿಯಲ್ಲಿ ಮಗು ಅಳಲು ಶುರು ಮಾಡಿದೆ. ಅಳುವುದನ್ನು ನಿಲ್ಲಿಸಲಿಲ್ಲ, ತನ್ನ ಪ್ರಣಯಕ್ಕೆ ತೊಂದರೆ ಆಯಿತು ಎಂದು ಸಿಟ್ಟುಗೊಂಡ ಪ್ರಿಯಕರ ಮೊದಲು ಮಗುವಿನ ಕಾಲುಗಳನ್ನು ಹಿಡಿದು ನೆಲಕ್ಕೆ ಬಡಿದಿದ್ದಾನೆ. ನಂತರ ಉಸಿರಾಟವನ್ನು ನಿಲ್ಲಿಸಲು ಬಾಯಿಯನ್ನು ಮುಚ್ಚಿದ್ದಾನೆ. ಇದರಿಂದ ಮಗು ಸಾವನಪ್ಪಿದೆ. ತಾಯಿ ತನ್ನ ಮಗಳ ನಿರ್ಜೀವ ದೇಹವನ್ನು ಹಿಡಿದುಕೊಂಡು ಇಡೀ ರಾತ್ರಿ ಅಳುತ್ತಾ ಕಳೆದರೆ, ಪ್ರೇಮಿ ಹತ್ತಿರದಲ್ಲೇ ನಿದ್ದೆ ಮಾಡುತ್ತಿದ್ದ! ಮರುದಿನ ಬೆಳಗ್ಗೆ ಅವನು ಸ್ಥಳದಿಂದ ಓಡಿಹೋಗಿದ್ದಾನೆ. ನಂತರ ತಾಯಿ ಈ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದಾಳೆ.

ಮಾಹಿತಿಯ ಪ್ರಕಾರ, ಮೃತ ಮಗುವನ್ನು ಛಾಯಾ ಎಂದು ಗುರುತಿಸಲಾಗಿದೆ. ಆರೋಪಿ ಪ್ರೇಮಿ ಭೈಯಾಲಾಲ್ ಆದಿವಾಸಿ ಒಂದು ವರ್ಷದಿಂದ ಬೆಂಗಳೂರಿನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಈ ಅವಧಿಯಲ್ಲಿ, ಅವನು ಜಯಂತಿ ಆದಿವಾಸಿ (35) ಅವಳನ್ನು ಭೇಟಿಯಾಗಿದ್ದಾನೆ. ಜಯಂತಿ ತನ್ನ ಪತಿ ಪರಮಾನಂದ್ ಮತ್ತು ಮೂವರು ಮಕ್ಕಳೊಂದಿಗೆ ಅಲ್ಲಿ ಕೆಲಸ ಮಾಡುತ್ತಿದ್ದಳು. ಸುಮಾರು 20 ದಿನಗಳ ಹಿಂದೆ ಜಯಂತಿ ತನ್ನ ಪತಿ ಮತ್ತು ಇಬ್ಬರು ಹಿರಿಯ ಮಕ್ಕಳಾದ ದಾಮಿನಿ (9) ಮತ್ತು ದೇವ್ (8) ಅವರನ್ನು ಬಿಟ್ಟು ತನ್ನ ಒಂದು ವರ್ಷದ ಮಗಳು ಛಾಯಾಳನ್ನು ಕರೆದುಕೊಂಡು ಪ್ರಿಯಕರ ಭೈಯಾಲಾಲ್ ಅವನೊಂದಿಗೆ ಶಿವಪುರಿಯಲ್ಲಿ ವಾಸವಾಗಿದ್ದಳು.

ಮಂಗಳವಾರ ರಾತ್ರಿ ಅವರು ಊಟ ಮಾಡಿ ಮಲಗಿದ ನಂತರ ಮಧ್ಯರಾತ್ರಿಯ ಸುಮಾರಿಗೆ, ಛಾಯಾ ಅಳಲು ಪ್ರಾರಂಭಿಸಿದಳು, ಭೈಯಾಲಾಲ್‌ನನ್ನು ಎಬ್ಬಿಸಿದಳು. ಇದರಿಂದ ಕೋಪಗೊಂಡ ಅವನು ಮಗುವನ್ನು ಹೊಡೆದನು, ಇದರಿಂದ ಮಗು ಜೋರಾಗಿ ಅತ್ತಿದೆ. ನಂತರ ಅವನು ಛಾಯಾಳ ಕಾಲುಗಳನ್ನು ಹಿಡಿದು ನೆಲಕ್ಕೆ ಹೊಡೆದ. ಇದರಿಂದಾಗಿ ಅವಳ ಬಾಯಿ ಮತ್ತು ತಲೆಯಿಂದ ತೀವ್ರ ರಕ್ತಸ್ರಾವವಾಯಿತು. ನಂತರ ಅವನು ಅವಳ ಬಾಯಿಯನ್ನು ಮುಚ್ಚಿ ಉಸಿರುಗಟ್ಟಿಸಿ ಕೊಂದನು. ಮರುದಿನ ಬೆಳಗ್ಗೆ ಭೈಯಾಲಾಲ್ ಗುಡಿಸಲಿನಿಂದ ಹೊರಟು ಹೋದಾಗ ಜಯಂತಿ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾಳೆ.

ಇದನ್ನೂ ಓದಿ:  ʼಊರ ಹಬ್ಬʼದಲ್ಲಿ ʼನಗ್ನ ಉಡುಗೆʼ ಧರಿಸಿ ಸಂಚಲನ ಮೂಡಿಸಿದ ರಿಹಾನ್ನಾ!

ಭೈಯಾಲಾಲ್ ಆದಿವಾಸಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಬಮೋರ್ ಕಲಾನ್ ಪೊಲೀಸ್ ಠಾಣೆಯ ಉಸ್ತುವಾರಿ ನೀತು ಸಿಂಗ್ ಹೇಳಿದ್ದಾರೆ. ಜಯಂತಿಯ ಅತ್ತೆಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಪತಿ ಪರಮಾನಂದ್ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

Continue Reading

Latest

Viral Video: ಒಂಟೆಯ ಮುಂದಿನ ಕಾಲು ಕಟ್ಟಿ ಚೂರಿಯಿಂದ ಇರಿದ; ಒಂಟೆ ಜಾಡಿಸಿ ಒದ್ದ ಹೊಡೆತಕ್ಕೆ ಸತ್ತೇ ಹೋದ!

Viral Video: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಒಂಟೆಯನ್ನು ಕಟ್ಟಿ ನಂತರ ಚಾಕುವಿನಿಂದ ಅದರ ಕುತ್ತಿಗೆಗೆ ಚುಚ್ಚಿದ್ದಾನೆ. ನಂತರ ಮತ್ತೊಬ್ಬ ವ್ಯಕ್ತಿ ಅದೇ ಚಾಕುವನ್ನು ತೆಗೆದುಕೊಂಡು ಮತ್ತೆ ಅದರ ಕುತ್ತಿಗೆ ಚುಚ್ಚಿದ್ದಾನೆ. ಆಗ ನೋವಿನಿಂದ ಒಂಟೆ ತನ್ನ ಕಟ್ಟಿದ ಕಾಲಿನಿಂದ ಆ ವ್ಯಕ್ತಿಗೆ ಒದ್ದು ಕೆಳಗೆ ಬೀಳಿಸಿದೆ. ಒಂಟೆ ಈ ರೀತಿ ಪ್ರತೀಕಾರ ತೀರಿಸಿಕೊಂಡಿದೆ. ಈ ವಿಡಿಯೊ ಸಖತ್ ವೈರಲ್ ಆಗಿದೆ.

VISTARANEWS.COM


on

Viral Video
Koo


ಮನುಷ್ಯರಲ್ಲಿ ಮಾನವೀಯತೆ ಸಾಯುತ್ತಿದೆ. ಪ್ರಪಂಚದಲ್ಲಿ ನಮ್ಮಂತೆಯೇ ಬದುಕಲು ಬಯಸುವ ಪ್ರಾಣಿಗಳನ್ನು ಕಟ್ಟಿ ಹಾಕಿ ಹಿಂಸೆ ನೀಡುತ್ತಿದ್ದಾರೆ. ಆದರೆ ಕರ್ಮ ಯಾರನ್ನೂ ಬಿಡುವುದಿಲ್ಲ ಎಂದು ಹೇಳುತ್ತಾರೆ. ನೀವು ಈಗ ಮಾಡಿದ ಕರ್ಮಕ್ಕೆ ಕೂಡಲೇ ಶಿಕ್ಷೆ ಅನುಭವಿಸುತ್ತೀರಿ ಎಂದು ಹೇಳುತ್ತಾರೆ. ಅದು ಈ ಘಟನೆಯನ್ನು ನೋಡಿದರೆ ನಿಜ ಎಂಬುದು ತಿಳಿಯುತ್ತದೆ. ಒಂಟೆಯನ್ನು ಕಟ್ಟಿ ಹಾಕಿದ ಒಬ್ಬ ವ್ಯಕ್ತಿ ಅದಕ್ಕೆ ಹಿಂಸೆ ನೀಡಿದ್ದಾನೆ. ಚೂರಿಯಿಂದ ಅದರ ಕುತ್ತಿಗೆಗೆ ಇರಿದಿದ್ದಾನೆ. ಆಗ ಒಂಟೆ ಅವನ ಮೇಲೆ ಪ್ರತೀಕಾರ ತೀರಿಸಿಕೊಂಡಿದ್ದನ್ನು ಪ್ರಸ್ತುತ ವಿಡಿಯೊದಲ್ಲಿ ಕಾಣುತ್ತಿದೆ. ಈ ವಿಡಿಯೊ ಸಖತ್ ವೈರಲ್ (Viral Video)ಆಗಿ ಜನರ ಆಕ್ರೋಶಕ್ಕೆ ಗುರಿಯಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಒಂಟೆಯನ್ನು ಕಟ್ಟಿ ನಂತರ ಚಾಕುವಿನಿಂದ ಅದರ ಕುತ್ತಿಗೆಗೆ ಚುಚ್ಚುತ್ತಿದ್ದಾನೆ. ನಂತರ ಮತ್ತೊಬ್ಬ ವ್ಯಕ್ತಿ ಅದೇ ಚಾಕುವನ್ನು ತೆಗೆದುಕೊಂಡು ಮತ್ತೆ ಅದರ ಕುತ್ತಿಗೆ ಚುಚ್ಚಿದ್ದಾನೆ. ಆಗ ನೋವಿನಿಂದ ಒಂಟೆ ತನ್ನ ಕಟ್ಟಿದ ಕಾಲಿನಿಂದ ಆ ವ್ಯಕ್ತಿಗೆ ಒದ್ದು ಕೆಳಗೆ ಬೀಳಿಸಿದೆ. ಆದರೆ ಮೂಕ ಪ್ರಾಣಿಗೆ ನೀಡಿದ ಈ ಚಿತ್ರಹಿಂಸೆಯನ್ನು ನೋಡಲು ಸಾಧ್ಯವಾಗುತ್ತಿಲ್ಲ. ಮನುಷ್ಯ ಕುಲ ಇಷ್ಟು ನೀಚ ಮಟ್ಟಕ್ಕೆ ಇಳಿದಿದೆ ಎಂಬುದು ಇದರಿಂದ ತಿಳಿಯುತ್ತದೆ.

ಈ ವಿಡಿಯೊವನ್ನು @Deadlykalesh ಎಕ್ಸ್ ಚಾನೆಲ್‍ನಲ್ಲಿ ಹಂಚಿಕೊಳ್ಳಲಾಗಿದೆ. ಮನುಷ್ಯನು ತಾನು ಮಾಡಿದ ನೀಚ ಕೃತ್ಯಗಳಿಗೆ ಗಂಭೀರವಾದ ಪರಿಣಾಮವನ್ನು ಎದುರಿಸುತ್ತಾನೆ ಎಂಬ ಅಂಶವನ್ನು ಈ ವಿಡಿಯೊ ಎತ್ತಿ ತೋರಿಸುತ್ತದೆ. ಒಂಟೆ ಈ ರೀತಿ ಪ್ರತೀಕಾರ ತೀರಿಸಿಕೊಂಡಿದ್ದು, ಪ್ರಾಣಿಯನ್ನು ಈ ರೀತಿಯಾಗಿ ಹಿಂಸಿಸುವ ತಪ್ಪನ್ನು ಮಾಡುವವರಿಗೆ ಒಂದು ಸೂಕ್ತ ಉದಾಹರಣೆಯಾಗಿದೆ. ಈ ವಿಡಿಯೊ 29,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು ಈ ವಿಡಿಯೊ ನೋಡಿದವರು ಆಘಾತಗೊಂಡಿದ್ದಾರೆ. ಕಾಮೆಂಟ್ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. “ಓ ಮೈ ಗಾಡ್” ಎಂದು ಒಬ್ಬ ಬಳಕೆದಾರರು ಉದ್ಗರಿಸುತ್ತಾರೆ. ಇತರರು “ಪರ್ಫೆಕ್ಟ್ ಶಾಟ್” ಮತ್ತು “ನೈಸ್ ಕಿಕ್” ಎಂದು ಒಂಟೆಯ ಪ್ರತಿಕ್ರಿಯೆಯನ್ನು ಹೊಗಳಿದ್ದಾರೆ.

ಇದನ್ನೂ ಓದಿ:11 ವರ್ಷಗಳ ಹಿಂದೆ ಸತ್ತಿದ್ದ ಗಂಡ ಕನಸಲ್ಲಿ ಬಂದು ʼಸೇರಿದʼ; ಹಾಗಾಗಿ ಮಗು ಹುಟ್ಟಿತು ಅಂತಿದ್ದಾಳೆ ಈ ಹೆಂಗಸು!

ಯಾವುದೇ ಜೀವಿ ಅಥವಾ ಪ್ರಾಣಿಗೆ ದಯೆ ಮತ್ತು ಗೌರವವನ್ನು ತೋರಿಸುವುದು ಅವಶ್ಯಕ ಎಂಬ ಪಾಠವನ್ನು ಎಲ್ಲರಿಗೂ ಕಲಿಸಲು ಈ ವಿಡಿಯೊ ವೈರಲ್ ಆಗಿದೆ ಎನ್ನಲಾಗಿದೆ. ಯಾವುದೇ ಜೀವಿಗೆ ಕಿರುಕುಳ ನೀಡುವುದು ಭೀಕರ ಪರಿಣಾಮಗಳಿಗೆ ಕಾರಣವಾಗಬಹುದು ಎಂಬ ಪಾಠವನ್ನೂ ಇದು ತಿಳಿಸುತ್ತದೆ. ಅಲ್ಲದೇ ಒಂಟೆ ಈ ಮನುಷ್ಯನಿಗೆ ಕಲಿಸಿದ್ದು ನಮಗೆ ಬಹಳ ಅಮೂಲ್ಯವಾದ ಜೀವನದ ಪಾಠವನ್ನು ಕಲಿಸುತ್ತದೆ.

Continue Reading
Advertisement
Waqf Act
ದೇಶ19 mins ago

Waqf Act: ಪುರಸಭೆ ಕಚೇರಿಯನ್ನೇ ನುಂಗಿದ ವಕ್ಫ್‌ ಮಂಡಳಿ; ಆಸ್ತಿ ಕಬಳಿಕೆ ಬಣ್ಣ ಬಯಲು ಮಾಡಿದ ಕೇಂದ್ರ ಸಚಿವ!

ಪ್ರಮುಖ ಸುದ್ದಿ33 mins ago

Paris Olympics 2024 : ಭಾರತ ಹಾಕಿ ತಂಡಕ್ಕೆ ಕಂಚಿನ ಪದಕ, ಸ್ಪೇನ್ ವಿರುದ್ಧ 2-1 ಗೋಲ್​ಗಳ ಗೆಲುವು

Viral Video
Latest56 mins ago

Viral Video: ಮೃಗಾಲಯಕ್ಕೆ ನುಗ್ಗಿ ಪ್ರಾಣಿಗಳನ್ನೂ ಹಿಂಸಿಸಿದ ಬಾಂಗ್ಲಾದ ದುಷ್ಟ ಪ್ರತಿಭಟನಾಕಾರರು!

CM Siddaramaiah
ಕರ್ನಾಟಕ1 hour ago

CM Siddaramaiah: ಮೋದಿ ಸರ್ಕಾರದ ವಕ್ಫ್ ಬೋರ್ಡ್ ಕಾನೂನು ತಿದ್ದುಪಡಿಗೆ ಸಿದ್ದರಾಮಯ್ಯ ವಿರೋಧ

KPSC Exam
ನೋಟಿಸ್ ಬೋರ್ಡ್1 hour ago

KPSC Exam: ಆ.25ರಂದು 384 ಗೆಜೆಟೆಡ್‌ ಹುದ್ದೆಗಳ ನೇಮಕಾತಿಗಾಗಿ ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆ

Baby Death
Latest1 hour ago

Baby Death: ಪ್ರಣಯಕ್ಕೆ ಡಿಸ್ಟರ್ಬ್‌ ಆಯಿತೆಂದು ಕೋಪಗೊಂಡ ಪ್ರಿಯತಮ ಮಹಿಳೆಯ ಮಗುವನ್ನು ನೆಲಕ್ಕೆ ಬಡಿದು ಕೊಂದ!

Wayanad Landslide
ದೇಶ1 hour ago

Wayanad Landslide: ವಯನಾಡಿನಲ್ಲಿ ಸೈನಿಕರ ಕಾರ್ಯಾಚರಣೆ ಮುಕ್ತಾಯ; ಸೆಲ್ಯೂಟ್‌ ಹೊಡೆದು ಬೀಳ್ಕೊಟ್ಟ ಜನ, Video ಇದೆ

Manu Bhaker
ಪ್ರಮುಖ ಸುದ್ದಿ1 hour ago

Paris Olympics 2024 : ಅಥ್ಲೀಟ್​ಗಳಿಗೆ ಒಲಿಂಪಿಕ್ಸ್​ ಮಸ್ಕಾಟ್​ ಚಿತ್ರ ಇರುವ ಕಾಂಡೋಮ್ ಹಂಚಿದ ಆಯೋಜಕರು!

Viral Video
Latest2 hours ago

Viral Video: ಒಂಟೆಯ ಮುಂದಿನ ಕಾಲು ಕಟ್ಟಿ ಚೂರಿಯಿಂದ ಇರಿದ; ಒಂಟೆ ಜಾಡಿಸಿ ಒದ್ದ ಹೊಡೆತಕ್ಕೆ ಸತ್ತೇ ಹೋದ!

Bengaluru Power Cut
ಕರ್ನಾಟಕ2 hours ago

Bengaluru Power Cut: ಆ.10ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 hours ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 hours ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ5 hours ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ5 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌