CM Siddaramaiah: ಇಂದು ಮೈಸೂರಿನಲ್ಲಿ ಜನಾಂದೋಲನ ಸಮಾವೇಶ: ದೋಸ್ತಿಗಳ ವಿರುದ್ಧ ಅಬ್ಬರಿಸಲಿದೆ ಸಿದ್ದರಾಮಯ್ಯ ಪಡೆ, ʼಸಂಚುʼ ಕೃತಿ ಬಿಡುಗಡೆ - Vistara News

ಪ್ರಮುಖ ಸುದ್ದಿ

CM Siddaramaiah: ಇಂದು ಮೈಸೂರಿನಲ್ಲಿ ಜನಾಂದೋಲನ ಸಮಾವೇಶ: ದೋಸ್ತಿಗಳ ವಿರುದ್ಧ ಅಬ್ಬರಿಸಲಿದೆ ಸಿದ್ದರಾಮಯ್ಯ ಪಡೆ, ʼಸಂಚುʼ ಕೃತಿ ಬಿಡುಗಡೆ

ಸುಮಾರು 4 ಲಕ್ಷಕ್ಕೂ ಅಧಿಕ ಜನರನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ (CM Siddaramaiah) ಕೈ ಪಡೆ ಸೇರಿಸಲು ನಿರ್ಧಾರ ಮಾಡಿದ್ದು, ದೋಸ್ತಿಗಳ ವಿರುದ್ಧ ʼಸಂಚುʼ ಎಂಬ ಹೆಸರಿನ ಪುಸ್ತಕವನ್ನು ಬಿಡುಗಡೆ ಮಾಡಲೂ ಸಿದ್ಧತೆ ಮಾಡಿಕೊಂಡಿದೆ.

VISTARANEWS.COM


on

CM Siddaramaiah
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಿಜೆಪಿ-ಜೆಡಿಎಸ್‌ ನಡೆಸುತ್ತಿರುವ ಪಾದಯಾತ್ರೆಗೆ (BJP-JDS Padayatra) ಟಕ್ಕರ್‌ ನೀಡಲು ಮೈಸೂರಿನಲ್ಲಿ ಇಂದು ಆಯೋಜಿಸಲಾಗಿರುವ ಬೃಹತ್‌ ಜನಾಂದೋಲನ ಸಮಾವೇಶಕ್ಕೆ (Mysore Janandolana Samavesha) ನಗರ ಸಜ್ಜಾಗಿದೆ. ಸುಮಾರು 4 ಲಕ್ಷಕ್ಕೂ ಅಧಿಕ ಜನರನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ (CM Siddaramaiah) ಕೈ ಪಡೆ ಸೇರಿಸಲು ನಿರ್ಧಾರ ಮಾಡಿದ್ದು, ದೋಸ್ತಿಗಳ ವಿರುದ್ಧ ʼಸಂಚುʼ ಎಂಬ ಹೆಸರಿನ ಪುಸ್ತಕವನ್ನು ಬಿಡುಗಡೆ ಮಾಡಲೂ ಸಿದ್ಧತೆ ಮಾಡಿಕೊಂಡಿದೆ.

ಜನಾಂದೋಲನ ಸಮಾವೇಶದ ವೇದಿಕೆ ಮೇಲೆ ಸುಮಾರು 200 ಜನ ಕೂರಲು ವ್ಯವಸ್ಥೆ ಮಾಡಲಾಗಿದೆ. ಎಡ ಮತ್ತು ಬಲ ಭಾಗದಲ್ಲಿ ಮಾಜಿ ಶಾಸಕರು ಹಾಗೂ ಪರಿಷತ್ ಸದಸ್ಯರು ಕೂರಲು ವ್ಯವಸ್ಥೆ ಮಾಡಲಾಗಿದ್ದು, ಮಳೆ ಬಂದರೂ ಕಾರ್ಯಕ್ರಮ ಯಶಸ್ವಿಯಾಗಲು ಜರ್ಮನ್ ಪೆಂಡಾಲ್ ಅಳವಡಿಸಲಾಗಿದೆ. ʼಸಿದ್ದರಾಮೋತ್ಸವʼ ರೀತಿಯಲ್ಲಿಯೇ ಕಾರ್ಯಕ್ರಮ ಮಾಡಲಾಗುತ್ತಿದೆ.

ಜನಾಂದೋಲನ ಸಮಾವೇಶವನ್ನು ಸಿಎಂ ವೈಯಕ್ತಿಕ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಇಂದಿನ ಸಮಾವೇಶದಲ್ಲಿ 2 ಲಕ್ಷಕ್ಕೂ ಅಧಿಕ ಜನ ಸೇರಿಸಲಿದ್ದಾರೆ ಎಂದು ಭಾವಿಸಲಾಗಿದೆ. ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರದಿಂದ ಹೆಚ್ಚು ಜನ ಬರುವ ಸಾಧ್ಯತೆ ಇದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಿಎಂ, ಡಿಸಿಎಂ, ಸಚಿವರು ಶಾಸಕರು, ಎಂಎಲ್ಸಿಗಳು ಭಾಗವಹಿಸಲಿದ್ದಾರೆ.

ಜನಾಂದೋಲನ ಸಮಾವೇಶದ ಅಜೆಂಡಾ

ವಿಪಕ್ಷಗಳ ವಿರುದ್ಧ ದಾಖಲೆ ಸಮೇತ ಮಾತನಾಡುವುದು, ಮುಡಾದಲ್ಲಿ ಮಾಜಿ ಸಿಎಂ ಎಚ್ ಡಿ ದೇವೇಗೌಡ (HD Deve gowda) ಫ್ಯಾಮಿಲಿ ಖರೀದಿಸಿದ ಆಸ್ತಿಗಳ ಬಗ್ಗೆ ಮಾಹಿತಿ ಕೊಡುವುದು, ಎಚ್‌.ಡಿ ಕುಮಾರಸ್ವಾಮಿ (HD Kumaraswamy) ಕಾಲದಲ್ಲಿ ಆದ ನಿವೇಶನ ಹಂಚಿಕೆ, ಕುಮಾರಸ್ವಾಮಿ ವಿರುದ್ಧ ಇರೋ ಪ್ರಕರಣಗಳ ಬಗ್ಗೆ ದಾಖಲೆ ಸಮೇತ ಮಾತನಾಡುವುದು, ಮುಡಾದಲ್ಲಿ ಸಿದ್ದರಾಮಯ್ಯ ಪಾತ್ರ ಇಲ್ಲ ಅನ್ನೋದನ್ನ ಹೇಳುವುದು, ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸುವುದು, ರಾಜ್ಯಪಾಲರು ಈ ಹಿಂದೆ ಯಾವೆಲ್ಲ ಪ್ರಕರಣಗಳಲ್ಲಿ ಮೌನ ವಹಿಸಿದ್ದಾರೆ ಅನ್ನೋದನ್ನ ಹೇಳುವುದು, ವಿರೋಧ ಪಕ್ಷಗಳ ನಾಯಕರ ಹಗರಣಗಳ ಬಗ್ಗೆ ಕಿರು ಹೊತ್ತಿಗೆ ಬಿಡುಗಡೆ ಮಾಡುವುದು ಜನಾಂದೋಲನ ಸಮಾವೇಶದ ಅಜೆಂಡಾ ಆಗಿದೆ.

ಇದೇ ಸಂದರ್ಭದಲ್ಲಿ ಬಿಜೆಪಿ-ಜೆಡಿಎಸ್ ವಿರುದ್ಧ ಕಿರುಹೊತ್ತಿಗೆ ಬಿಡುಗಡೆ ಮಾಡಲಾಗುತ್ತಿದೆ. ಎರಡೂ ಪಕ್ಷಗಳು ಕುಟಿಲ ರಾಜಕಾರಣ ನಡೆಸುತ್ತಿವೆ ಎಂದು ʼಸಂಚು’ ಹೆಸರಿನಲ್ಲಿ ಪುಸ್ತಕ ಬಿಡುಗಡೆ ಮಾಡಲಾಗುತ್ತಿದ್ದು, ಇದು ಮುಡಾ ಪ್ರಕರಣದ ಸಮಗ್ರ ವಿವರ ಮತ್ತು ದಾಖಲೆಗಳನ್ನೊಳಗೊಂಡಿದೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಇಬ್ಬರನ್ನೂ ಒಂದೇ ಕಲ್ಲಲ್ಲಿ ಹೊಡೆಯಲು ಬಿಜೆಪಿ ಕುಟಿಲ ಕಾರಸ್ಥಾನ ನಡೆಸಿದೆ ಎಂದು ʼಸಂಚುʼ ಕೃತಿ ರೂಪಿಸಿರುವ ಸಿಎಂ‌ ಕಾನೂನು ಸಲಹೆಗಾರ ಪೊನ್ನಣ್ಣ ಬರೆದಿದ್ದಾರೆ ಎನ್ನಲಾಗಿದೆ.

ಕಿರುಹೊತ್ತಿಗೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಬೊಮ್ಮಾಯಿ, ಹಾಲಿ ಕೇಂದ್ರ ಸಚಿವ ಹೆಚ್‌ಡಿಕೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್ ಅಶೋಕ್ ವಿರುದ್ಧ ಅಕ್ರಮದ ಆರೋಪಗಳ ಕುರಿತು ಉಲ್ಲೇಖ ಮಾಡಲಾಗಿದೆ ಎನ್ನಲಾಗಿದೆ.

ದೇವೇಗೌಡರ ಕುಟುಂಬವೇ ಟಾರ್ಗೆಟ್‌

ಸಮಾವೇಶದ ಉದ್ದೇಶವೇ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರ ಕುಟುಂಬ ಆಗಿದೆ. ದೇವೇಗೌಡರ ಕುಟುಂಬಸ್ಥರು ಮುಡಾ ಸೈಟ್ ಪಡೆದ ಬಗ್ಗೆ ಕಾಂಗ್ರೆಸಿಗರು ಫ್ಲೆಕ್ಸ್ ಹಾಕಿದ್ದಾರೆ. ನಗರದ ಹಲವು ಭಾಗದ ಸರ್ಕಲ್‌ಗಳಲ್ಲಿ ಫ್ಲೆಕ್ಸ್‌ಗಳ ಅಳವಡಿಕೆ ಮಾಡಲಾಗಿದೆ. 2023ರ ಫೆಬ್ರವರಿ ತಿಂಗಳಿನಲ್ಲಿ ಬಿಜೆಪಿ ನೀಡಿರುವ ಜಾಹೀರಾತನ್ನು ಕಾಂಗ್ರೆಸ್‌ ಬಳಸಿಕೊಂಡಿದೆ. ಕುಮಾರಸ್ವಾಮಿ ಅವರಿಗೆ ಮುಡಾದಿಂದ ಕೊಟ್ಟಿರುವ ಸೈಟ್ ಬಗ್ಗೆ, ಮಾಜಿ ಪ್ರಧಾನಿ ದೇವೇಗೌಡರ 20 ಹೆಸರು ಬರೆದು ಎಷ್ಟು ಅಳತೆಯ ನಿವೇಶನ ಮಂಜೂರಾಗಿದೆ ಎಂಬ ಮಾಹಿತಿ ಫ್ಲೆಕ್ಸ್‌ನಲ್ಲಿದೆ. ಎಚ್‌ಡಿಕೆಯವರೇ ನೀವು ಬೇರೆಯವರ ಬಗ್ಗೆ ಪ್ರಶ್ನಿಸುವ ನೈತಿಕ ಹಕ್ಕು ಉಳಿಸಿಕೊಂಡಿದ್ದೀರಾ ಎಂದು ಫ್ಲೆಕ್ಸ್‌ನಲ್ಲಿ ಪ್ರಶ್ನಿಸಲಾಗಿದೆ.

ಇದನ್ನೂ ಓದಿ: CM Siddaramaiah: ನಾಳೆ ಮೈಸೂರಿನಲ್ಲಿ ಸಿದ್ದರಾಮಯ್ಯ ಅಬ್ಬರ; ʼಜನಾಂದೋಲನ ಸಮಾವೇಶʼ ಮೂಲಕ ದೋಸ್ತಿ ಪಾದಯಾತ್ರೆಗೆ ಟಕ್ಕರ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Waqf Bill: ವಕ್ಫ್‌ ಕಾಯ್ದೆಗೆ ತಿದ್ದುಪಡಿ; 21 ಸದಸ್ಯರ ಸಮಿತಿ ರಚಿಸಿದ ಕೇಂದ್ರ, ಓವೈಸಿ, ತೇಜಸ್ವಿ ಸೂರ್ಯಗೆ ಸ್ಥಾನ

Waqf Bill: Waqf Act: Parliament Session: ವಕ್ಫ್ ಕಾಯ್ದೆ 1995ಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಹಾಗೂ ವಕ್ಫ್ ಕಾಯಿದೆ, 1995 ಅನ್ನು ʼಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯಿದೆ-1995ʼ ಎಂದು ಮರುನಾಮಕರಣ ಮಾಡುವ ಗುರಿಯೊಂದಿಗೆ ಇಂದು ಕೇಂದ್ರ ಸರ್ಕಾರ ಮಸೂದೆ ಮಂಡನೆ ಮಾಡಿದೆ. ಇದರ ಬೆನ್ನಲ್ಲೇ 21 ಸದಸ್ಯರ ಜಂಟಿ ಸಂಸದೀಯ ಸಮಿತಿಯನ್ನೂ ಕೇಂದ್ರ ಸರ್ಕಾರ ರಚಿಸಿದೆ.

VISTARANEWS.COM


on

Waqf Bill
Koo

ನವದೆಹಲಿ: ವಕ್ಫ್‌ ಮಂಡಳಿಯ ಪರಮಾಧಿಕಾರವನ್ನು ರದ್ದುಗೊಳಿಸುವುದು ಸೇರಿ ಹಲವು ತಿದ್ದುಪಡಿಗಳಿಗಾಗಿ ಕೇಂದ್ರ ಸರ್ಕಾರವು ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರುವ ವಿಧೇಯಕವನ್ನು (Waqf Bill) ಲೋಕಸಭೆಯಲ್ಲಿ ಮಂಡಿಸಿದೆ. ಇದರ ಬೆನ್ನಲ್ಲೇ, ವಿಧೇಯಕದ ಪರಿಶೀಲನೆಗಾಗಿ ಕೇಂದ್ರ ಸರ್ಕಾರವು (Central Government) 21 ಸದಸ್ಯರ ಜಂಟಿ ಸಂಸದೀಯ ಸಮಿತಿಯನ್ನು (Joint Parliamentary Panel) ರಚಿಸಿದೆ. ಸಮಿತಿಯಲ್ಲಿ ಕರ್ನಾಟಕದ ಸಂಸದ ತೇಜಸ್ವಿ ಸೂರ್ಯ, ಎಐಎಂಐಎಂ ಸಂಸದ ಅಸಾದುದ್ದೀನ್‌ ಓವೈಸಿ ಸೇರಿ ಹಲವರು ಇದ್ದಾರೆ.

ಮಸೂದೆ ಕುರಿತು ಚರ್ಚೆ, ಮಾಡಬೇಕಾದ ಬದಲಾವಣೆಗಳು ಸೇರಿ ಹಲವು ರೀತಿಯಲ್ಲಿ ಪರಿಶೀಲನೆ ನಡೆಸಲು 21 ಸದಸ್ಯರ ಜಂಟಿ ಸಂಸದೀಯ ಸಮಿತಿ ರಚಿಸಲಾಗಿದೆ. ಜಗದಾಂಬಿಕಾ ಪಾಲ್‌, ನಿಶಿಕಾಂತ್‌ ದುಬೆ, ತೇಜಸ್ವಿ ಸೂರ್ಯ, ಅಪರಾಜಿತ ಸಾರಂಗಿ, ಸಂಜಯ್‌ ಜೈಸ್ವಾಲ್‌, ದಿಲೀಪ್‌ ಸೈಕಿಯಾ, ಗೌರವ್‌ ಗೊಗೊಯ್‌, ಇಮ್ರಾನ್‌ ಮಸೂದ್‌, ಮೊಹಮ್ಮದ್‌ ಜಾವೇದ್‌, ಕಲ್ಯಾಣ್‌ ಬ್ಯಾನರ್ಜಿ, ಎ ರಾಜಾ, ಅರವಿಂದ್‌ ಸಾವಂತ್‌, ಸುರೇಶ್‌ ಗೋಪಿನಾಥ್‌, ಅಸಾದುದ್ದೀನ್‌ ಓವೈಸಿ ಸೇರಿ ಪ್ರತಿಪಕ್ಷಗಳು, ಆಡಳಿತ ಪಕ್ಷಗಳ 21 ಸದಸ್ಯರಿದ್ದಾರೆ.

ಏನೆಲ್ಲ ಬದಲಾವಣೆ?

ದೇಶದ ಯಾವುದೇ ಆಸ್ತಿಯನ್ನು ವಕ್ಫ್‌ ಮಂಡಳಿ ಆಸ್ತಿ ಎಂಬುದಾಗಿ ಘೋಷಿಸವ, ಅದನ್ನು ಯಾರೂ ಕೋರ್ಟ್‌ನಲ್ಲೂ ಪ್ರಶ್ನಿಸಲು ಸಾಧ್ಯವಾಗದಂತಹ ಪರಮಾಧಿಕಾರವನ್ನು ವಕ್ಫ್‌ ಕಾಯ್ದೆಯು ನೀಡಿದೆ. ಆದರೆ, ಈ ಪರಮಾಧಿಕಾರವನ್ನು ರದ್ದುಗೊಳಿಸುವುದು ಪ್ರಮುಖ ಬದಲಾವಣೆಯಾಗಿದೆ. ಇನ್ನು, ಆಯಾ ರಾಜ್ಯಗಳ ವಕ್ಫ್‌ ಮಂಡಳಿಗಳಲ್ಲಿ ಇಬ್ಬರು ಹೆಣ್ಣುಮಕ್ಕಳು ಕಡ್ಡಾಯವಾಗಿ ಇರುವುದು, ವಕ್ಫ್‌ ಮಂಡಳಿ ಆಸ್ತಿ ಕುರಿತು ಜಿಲ್ಲಾಧಿಕಾರಿ ತೀರ್ಮಾನ ತೆಗೆದುಕೊಳ್ಳುವುದು ಸೇರಿ ಹಲವು ಬದಲಾವಣೆ ಮಾಡಲಾಗುತ್ತದೆ.

ಅಷ್ಟೇ ಅಲ್ಲ, ಸಮಿತಿಯಲ್ಲಿ ಒಬ್ಬ ಕೇಂದ್ರ ಸಚಿವ, ಮೂವರು ಸಂಸದರು, ಮೂರು ಮುಸ್ಲಿಂ ಸಂಘಟನೆಗಳ ಮುಖಂಡರು ಹಾಗೂ ಮೂವರು ಮುಸ್ಲಿಂ ಕಾನೂನು ತಜ್ಞರು ಇರಲಿದ್ದಾರೆ. ಸುಪ್ರೀಂ ಕೋರ್ಟ್‌ ಅಥವಾ ಹೈಕೋರ್ಟ್‌ನ ಇಬ್ಬರು ಜಡ್ಜ್‌ಗಳು ಸಮಿತಿಯ ಸದಸ್ಯರಾಗಿರುತ್ತಾರೆ. ಯಾವುದೇ ಆಸ್ತಿಯನ್ನು ವಕ್ಫ್‌ ಆಸ್ತಿ ಎಂಬುದಾಗಿ ಘೋಷಿಸುವ ಮೊದಲು ನೋಟಿಸ್‌ ನೀಡಬೇಕು. ಆ ಕುರಿತು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ವಕ್ಫ್‌ ಆಸ್ತಿಗಳ ಸರ್ವೇಯನ್ನು ಜಿಲ್ಲಾಧಿಕಾರಿ ಎದುರು ಮಾಡಬೇಕು. ಮಂಡಳಿಯ ನಿರ್ಧಾರ ಪ್ರಶ್ನಿಸಿ 90 ದಿನಗಳಲ್ಲಿ ಆಸ್ತಿಯ ಮಾಲೀಕರು ಅಥವಾ ಸಂಬಂಧಪಟ್ಟವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ಅಧಿಕಾರ ನೀಡಲಾಗಿದೆ.

ಆಸ್ತಿಯ ಬದಲು ಹಣಕಾಸು ನೆರವು ಬಂದರೆ, ಆ ಹಣವನ್ನು ಕೇಂದ್ರ ಸರ್ಕಾರ ಸಲಹೆಯಂತೆ ವಿಧವೆಯರು, ವಿಚ್ಛೇದನ ಪಡೆದವರು ಹಾಗೂ ಅನಾಥರ ಕಲ್ಯಾಣಕ್ಕೆ ವಿನಿಯೋಗಿಸಬೇಕು. ವಕ್ಫ್‌ ಮಂಡಳಿಯನ್ನು ವಿರೋಧಿಸುತ್ತಿರುವ ಬೋಹ್ರಾ ಹಾಗೂ ಆಗಾಖಾನಿ ಸಮುದಾಯದವರಿಗೆ ಪ್ರತ್ಯೇಕ ಮಂಡಳಿಸಲು ಪ್ರಸ್ತಾಪಿಸಲಾಗಿದೆ.

ಏನಿದು ವಕ್ಫ್‌ ಕಾಯ್ದೆ?

ಮುಸ್ಲಿಂ ವ್ಯಕ್ತಿಯೊಬ್ಬ ಧಾರ್ಮಿಕ ಕಾರಣಕ್ಕಾಗಿ ದಾನವಾಗಿ ನೀಡಿದ ಭೂಮಿಯನ್ನು ನಿಯಂತ್ರಿಸುವ ದಿಸೆಯಲ್ಲಿ 1995ರಲ್ಲಿ ವಕ್ಫ್‌ ಕಾಯ್ದೆಯನ್ನು ಜಾರಿಗೆ ತರಲಾಯಿತು. ಇದಕ್ಕೆ ಮುಸ್ಲಿಂ ಕಾನೂನನ್ನು ಕೂಡ ಅನ್ವಯ ಮಾಡಲಾಗಿದೆ. ಧಾರ್ಮಿಕ ಕಾರಣಕ್ಕಾಗಿ ನೀಡಿದ ಆಸ್ತಿಯು ವಕ್ಫ್‌ ಮಂಡಳಿ ವ್ಯಾಪ್ತಿಗೆ ಬರುತ್ತದೆ. ಅಷ್ಟೇ ಅಲ್ಲ, ಯಾವುದೇ ಆಸ್ತಿಯನ್ನು ವಕ್ಫ್‌ ಮಂಡಳಿಯು ತನ್ನ ಆಸ್ತಿಯನ್ನು ಘೋಷಿಸುವ ಜತೆಗೆ ಅದನ್ನು ವಶಕ್ಕೆ ಪಡೆಯುವ ಪರಮಾಧಿಕಾರ ಹೊಂದಿದೆ. ಇದು ಜನರ ಅಸಮಾಧಾನಕ್ಕೂ ಕಾರಣವಾಗಿದೆ.

ಇದನ್ನೂ ಓದಿ: Waqf Act: ಪುರಸಭೆ ಕಚೇರಿಯನ್ನೇ ನುಂಗಿದ ವಕ್ಫ್‌ ಮಂಡಳಿ; ಆಸ್ತಿ ಕಬಳಿಕೆ ಬಣ್ಣ ಬಯಲು ಮಾಡಿದ ಕೇಂದ್ರ ಸಚಿವ!

Continue Reading

ಕ್ರೀಡೆ

Neeraj Chopra : ವಿನೇಶ್ ಪೋಗಟ್​​ಗೆ ಅನರ್ಹತೆ ಬಗ್ಗೆ ಮಾತನಾಡಿದ ನೀರಜ್ ಚೋಪ್ರಾ; ಏನಂದ್ರು ಅವರು?

Neeraj Chopra : ಯುಯಿ ಸುಸಾಕಿಯನ್ನು ಸೋಲಿಸುವುದು ವಿನೇಶ್ ಗೆ ದೊಡ್ಡ ವಿಷಯ. ಅವಳು ಚಿನ್ನದ ಪದಕ ಪಡೆಯುವ ಹಾದಿಯಲ್ಲಿದ್ದರು. ಸುಸಾಕಿಯನ್ನು ಸೋಲಿಸುವುದು ದೊಡ್ಡ ವಿಷಯ. ಕುಸ್ತಿಯ ನಿಯಮಗಳು ನನಗೆ ಚೆನ್ನಾಗಿ ಅರ್ಥವಾಗುವುದಿಲ್ಲ. ಆದರೆ, ಅವರು ಆತ್ಮವಿಶ್ವಾಸದಿಂದ ಚಿನ್ನದ ಕಡೆಗೆ ಸಾಗುತ್ತಿದ್ದರು. ಬಳಿಕ ಅನರ್ಹತೆ) ಸಂಭವಿಸಿತು. ನನಗೆ ನಿಜವಾಗಿಯೂ ದುಃಖವಾಯಿತು, “ಎಂದು ನೀರಜ್ ಹೇಳಿದ್ದಾರೆ.

VISTARANEWS.COM


on

Neeraj Chopra
Koo

ನವದೆಹಲಿ: ಭಾರತದ ಜಾವೆಲಿನ್ ತಾರೆ ಮತ್ತು ಪ್ಯಾರಿಸ್ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ನೀರಜ್ ಚೋಪ್ರಾ (Neeraj Chopra) ಅವರು ಆಗಸ್ಟ್ 8 ರಂದು ನಡೆದ ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಗೆದ್ದ ಬಳಿಕ ವಿನೇಶ್ ಫೋಗಟ್ (Vinesh Phogat) ಅನರ್ಹ ಘಟನೆ ಬಗ್ಗೆ ಮಾತನಾಡಿದ್ದಾರೆ. ಕುಸ್ತಿಪಟುವನ್ನು ಅವರನ್ನು ಅನರ್ಹಗೊಳಿಸಲಾಗಿದೆ ಎಂಬ ಸುದ್ದಿ ಕೇಳಿ ಬೇಸರವಾಯಿತು ಎಂದು ಹೇಳಿದ್ದಾರೆ. ಮಹಿಳೆಯರ 50 ಕೆ.ಜಿ ಕುಸ್ತಿ ಸ್ಪರ್ಧೆಯ ಫೈನಲ್​ಗೆ ಮುಂಚಿತವಾಗಿ ವಿನೇಶ್ 100 ಗ್ರಾಂ ಅಧಿಕ ತೂಕ ಹೊಂದಿದ್ದರಿಂದ ಅನರ್ಹಗೊಂಡಿದ್ದರು.

ಯುಯಿ ಸುಸಾಕಿಯನ್ನು ಸೋಲಿಸುವುದು ವಿನೇಶ್ ಗೆ ದೊಡ್ಡ ವಿಷಯ. ಅವಳು ಚಿನ್ನದ ಪದಕ ಪಡೆಯುವ ಹಾದಿಯಲ್ಲಿದ್ದರು. ಸುಸಾಕಿಯನ್ನು ಸೋಲಿಸುವುದು ದೊಡ್ಡ ವಿಷಯ. ಕುಸ್ತಿಯ ನಿಯಮಗಳು ನನಗೆ ಚೆನ್ನಾಗಿ ಅರ್ಥವಾಗುವುದಿಲ್ಲ. ಆದರೆ, ಅವರು ಆತ್ಮವಿಶ್ವಾಸದಿಂದ ಚಿನ್ನದ ಕಡೆಗೆ ಸಾಗುತ್ತಿದ್ದರು. ಬಳಿಕ ಅನರ್ಹತೆ) ಸಂಭವಿಸಿತು. ನನಗೆ ನಿಜವಾಗಿಯೂ ದುಃಖವಾಯಿತು, “ಎಂದು ನೀರಜ್ ಹೇಳಿದ್ದಾರೆ.

ವಿನೇಶ್ ಏನು ಮಾಡಿದರೂ ಅದು ಅದ್ಭುತ ಸಾಧನೆ

ಗಾಯಗಳು ಮತ್ತು ವೈಯಕ್ತಿಕ ಹಿನ್ನಡೆಯೊಂದಿಗೆ 2016 ರ ಒಲಿಂಪಿಕ್ಸ್ ನಂತರ ವಿನೇಶ್ ಅವರ ಕುಸ್ತಿ ಪ್ರಯಾಣ ಕಠಿಣವಾಗಿತ್ತು ಎಂಬುದನ್ನು ನೀರಜ್ ನೆನಪಿಸಿಕೊಂಡರು. ಪ್ಯಾರಿಸ್​​ನಲ್ಲಿ ಎಲ್ಲವೂ ಉತ್ತಮವಾಗಿ ನಡೆಯುತ್ತಿದೆ ಎಂದು ತಿಳಿದು ಖುಷಿಯಾಗಿತ್ತು. ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ವಿನೇಶ್ ಮಾಡಿದ ಸಾಧನೆ ಅದ್ಭುತ ಎಂದು ಜಾವೆಲಿನ್ ತಾರೆ ಅಭಿಪ್ರಾಯಪಟ್ಟರು.

2016 ರಲ್ಲಿ (ರಿಯೋ ಒಲಿಂಪಿಕ್ಸ್), ಅಂತಹ ಅಪಾಯಕಾರಿ ಗಾಯದಿಂದ ಹೊರಬರಲು ಮತ್ತು ನಂತರ 2020ರಲ್ಲಿ ಮತ್ತಷ್ಟು ಗಾಯಗಳನ್ನು ಮಾಡಿಕೊಂಡರು. ಅದೇ ರೀತಿ ಅವರು ಅನೇಕ ವೈಯಕ್ತಿಕ ಹಿನ್ನಡೆಗಳನ್ನು ಅನುಭವಿಸಿದ್ದಾರೆ” ಎಂದು ನೀರಜ್ ಚೋಪ್ರಾ ಹೇಳಿದ್ದಾರೆ.

ಅವಳು ಗಾಯಗಳಿಂದ ಸುಧಾರಿಸಿಕೊಳ್ಳಲು. ಅದರಿಂದ ಚೇತರಿಸಿಕೊಳ್ಳಲು ಮತ್ತು ಸ್ಥಾನಕ್ಕೆ ಬರಲು ಮತ್ತು ಮಾನಸಿಕವಾಗಿ ಬಲಶಾಲಿಯಾಗಲು ಸಾಕಷ್ಟು ಯತ್ನಿಸಿದ್ದರು. ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. ಬಹುಶಃ ದೇವರು ಅವರಿಗೆ ಬೇರೆ ಏನನ್ನಾದರೂ ಬಯಸಿರಬಹುದು. ಆದರೆ ಅವಳು ಏನು ಮಾಡಿದರೂ ಅದು ಅದ್ಭುತವಾಗಿದೆ ಎಂದು ನಮಗೆ ತಿಳಿದಿದೆ ಎಂದು ನೀರಜ್ ಹೇಳಿದ್ದಾರೆ.

ಗಾಯದ ಸಮಸ್ಯೆಯಿಂದ ಬಳಲುತ್ತಲೇ ಒಲಿಂಪಿಕ್ಸ್​ ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ!

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ(Paris Olympics 2024) ಬೆಳ್ಳಿ ಪದಕ ಗೆದ್ದ ನಂತರ ನೀರಜ್ ಚೋಪ್ರಾ (Neeraj Chopra) ತಮ್ಮ ಗಾಯದ ಸಮಸ್ಯೆಗಳ ಕುರಿತು ಮಾತನಾಡಿದ್ದಾರೆ. ತಾನು ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಬಹುದು ಎಂದು 26 ವರ್ಷದ ಆಟಗಾರ ಬಹಿರಂಗಪಡಿಸಿದ್ದಾರೆ. ಗಾಯದ ಸಮಸ್ಯೆ ಉಲ್ಬಣಗೊಳ್ಳಬಹುದು ಎಂಬ ನಿರಂತರ ಭಯದಿಂದ ಸ್ಪರ್ಧಿಸಿದೆ ಎಂಬುದಾಗಿ ಅವರು ಹೇಳಿದ್ದಾರೆ. ಬೆಳ್ಳಿ ಪದಕ ವಿಜೇತ ಜಾವೆಲಿನ್ ಎಸೆತಗಾರ ಪ್ಯಾರಿಸ್ ಕ್ರೀಡಾಕೂಟಕ್ಕೆ ಮುಂಚಿತವಾಗಿ ತೊಡೆಯ ಸ್ನಾಯುವಿಗೆ ಸಂಬಂಧಿಸಿದ ಗಾಯದಿಂದ ಬಳಲುತ್ತಿದ್ದರು. ಆದಾಗ್ಯೂ, ಅವರು ತಮ್ಮ ಋತುವಿನ ಅತ್ಯುತ್ತಮ ಎಸೆತವಾದ 89.45 ಮೀಟರ್ ಎಸೆದು ಬೆಳ್ಳಿ ಪದಕ ಗಳಿಸಿದ್ದಾರೆ.

ಸ್ಪರ್ಧೆಗೆ ಹೋದಾಗ ನನ್ನ ಮನಸ್ಸಿನಲ್ಲಿ ಬಹಳಷ್ಟು ವಿಷಯಗಳಿರುತ್ತವೆ. ನಾನು ಭರ್ಜಿ ಎಸೆಯುವಾಗ ನನ್ನ ಶೇಕಡಾ 60-70 ರಷ್ಟು ಗಮನ ಗಾಯದ ಮೇಲೆ ಇರುತ್ತಿತ್ತು. ನಾನು ಮತ್ತೆ ಗಾಯಗೊಳ್ಳಲು ಬಯಸುವುದಿಲ್ಲ. ನಾನು ಎಸೆತಕ್ಕೆ ಹೋದಾಗಲೆಲ್ಲಾ, ನನ್ನ ವೇಗ ಕಡಿಮೆ ಇತ್ತು. ಹೀಗಾಗಿ ಸ್ಪರ್ಧೆ ಕಠಿಣವಾಯಿತು ಎಂದು ನೀರಜ್ ಪಿಟಿಐಗೆ ತಿಳಿಸಿದರು. ನೀರಜ್​ ಉತ್ತಮ ಸ್ನೇಹಿತ ಅರ್ಷದ್ ನದೀಮ್ ಅವರನ್ನು ಒಲಿಂಪಿಕ್ ಚಾಂಪಿಯನ್ ಸ್ಥಾನದಿಂದ ಕೆಳಗಿಳಿಸಿ ಪಾಕಿಸ್ತಾನಕ್ಕೆ ಮೊದಲ ಚಿನ್ನ ಗೆದ್ದಾರೆ.

ಇದನ್ನೂ ಓದಿ: PR Sreejesh : ಕಂಚು ಗೆದ್ದ ತಕ್ಷಣ ಗೋಲ್​ ಕೀಪಿಂಗ್​ ಗ್ಲವ್ಸ್​ಗೆ ದೀರ್ಘದಂಡ ನಮಸ್ಕಾರ ಹಾಕಿದ ಶ್ರೀಜೇಶ್​​​

ಕಳೆದ ವರ್ಷ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ನೀರಜ್ ಪಾತ್ರರಾಗಿದ್ದರು. ಅವರು ಶಸ್ತ್ರಚಿಕಿತ್ಸೆಗೆ ಒಳಗಾಗುವ ಅಪಾಯಕ್ಕೆ ಒಳಗಾಗಿದ್ದರು. ಆದರೆ, ಅವರು ಹೋಗಿರಲಿಲ್ಲ. ಇದು ಪ್ಯಾರಿಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅಡ್ಡಿಯಾಗುತ್ತಿತ್ತು.

Continue Reading

ಪ್ರಮುಖ ಸುದ್ದಿ

Muda Scam: ಸಿಎಂ ವಿರುದ್ಧದ ಖಾಸಗಿ ದೂರಿನ ಅರ್ಜಿ ವಿಚಾರಣೆ; ಆ.13ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್‌

Muda Scam: ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ಮುಡಾದಿಂದ 14 ನಿವೇಶನಗಳನ್ನು ಪಡೆದಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಸಿದ್ದರಾಮಯ್ಯ ಸೇರಿ ಐವರ ವಿರುದ್ಧ ಸಿಬಿಐ ಅಥವಾ ಬೇರಾವುದೇ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಲು ಆದೇಶಿಸಬೇಕು ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು ನೀಡಿದ್ದರು.

VISTARANEWS.COM


on

Muda Scam
Koo

ಬೆಂಗಳೂರು: ಮುಡಾ ಹಗರಣಕ್ಕೆ (Muda Scam) ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ದಾಖಲಾಗಿದ್ದ ಖಾಸಗಿ ದೂರಿನ ಅರ್ಜಿ ವಿಚಾರಣೆ, ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಶುಕ್ರವಾರ ನಡೆಯಿತು. ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಖಾಸಗಿ ದೂರಿನ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌, ಆಗಸ್ಟ್ 13ಕ್ಕೆ ಆದೇಶ ಕಾಯ್ದಿರಿಸಿದೆ.

ದೂರುದಾರರ ಪರ ವಕೀಲೆ ಲಕ್ಷ್ಮೀ ಅಯ್ಯಂಗಾರ್ ವಾದ ಮಂಡಿಸಿದರು. ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನಡೆದ ದೇವನೂರು ಹಾಗೂ ಮೈಸೂರಿನ ವಿಜಯನಗರ ವ್ಯಾಪ್ತಿಯ ಭೂಮಿ ಡಿನೋಟಿಫಿಕೇಷನ್ ಉಲ್ಲೇಖಿಸಿ ವಾದ ಮಂಡಿಸಿದರು. 1996 ರಿಂದ 1999 ರ ಅವಧಿಯಲ್ಲಿ ಡಿನೋಟಿಫಿಕೇಷನ್ ಮಾಡಲಾಗಿದೆ. ನಂತರ ದೇವರಾಜು ಎಂಬುವರಿಂದ ಮಲ್ಲಿಕಾರ್ಜುನ ಎಂಬುವರಿಗೆ ಸೇಲ್ ಡೀಡ್ ಮಾಡಲಾಗಿದೆ.
2010 ರಲ್ಲಿ ಸಿಎಂ ಪತ್ನಿಯವರ ಹೆಸರಿಗೆ 3 ಎಕರೆ ಗಿಫ್ಟ್ ಡೀಡ್ ಮಾಡಲಾಗಿದೆ. ಅಷ್ಟರಲ್ಲಿ ಲೇಔಟ್ ಅಭಿವೃದ್ಧಿ ಪಡಿಸಲಾಗಿತ್ತು ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಮುಡಾ ಆಯುಕ್ತರ ಮೇಲೆ ಪ್ರಭಾವ ಬೀರಿ ಅಕ್ರಮ ಎಸಗಿದ್ದಾರೆ ಎಂದು ಹೇಳಿದರು. ಮುಡಾ ಯಾವುದಾದರೂ ರೆಸಲ್ಯೂಷನ್ ಮಾಡಿದಿಯೇ ಎಂದು ಜಡ್ಜ್ ಪ್ರಶ್ನೆ ಮಾಡಿದರು.

ವಕೀಲೆ ವಾದ ಮುಂದುವರಿಸುತ್ತಾ, ಪ್ರಾಸಿಕ್ಯೂಷನ್ ಇಲ್ಲದೆ ತನಿಖೆ ಮಾಡುವಂತಿಲ್ಲ ಎಂದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17 ಬಗ್ಗೆ ಹೈಕೋರ್ಟ್ ಆದೇಶವಿದೆ. ಆದರೆ ಈ ಪ್ರಕರಣದಲ್ಲಿ ಕಾಯ್ದೆಯ ಸೆಕ್ಷನ್ 19 ಸಂಬಂಧಿಸಿದ್ದಾಗಿದೆ. ಈ ಹಂತದಲ್ಲಿ ಅನುಮತಿ ಅವಶ್ಯಕತೆ ಇರಲ್ಲ. ಪ್ರಕರಣದಲ್ಲಿ ಸಿಸಿ ಆಗುವಾಗ ಅನುಮತಿ ಅವಶ್ಯಕತೆ ಇರುತ್ತೆ. ಇದರ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ಇದೆ, ವಿವಿಧ ಪ್ರಕರಣಗಳ ತೀರ್ಪುಗಳ ಉಲ್ಲೇಖಿಸಿ ಪಿಸಿಆರ್ ದಾಖಲಿಸಲು ಮನವಿ ಮಾಡಿದರು.

ಮುಡಾದಲ್ಲಿ ಅಭಿವೃದ್ಧಿ ಪಡಿಸಿರೋ ಲೇಔಟ್‌ನಲ್ಲಿ 400ಕ್ಕೂ ಹೆಚ್ಚು ಸೈಟ್‌ಗಳು ಇವೆ. ಕಾನೂನು ಪ್ರಕಾರ ಸಿಎಂ ಪತ್ನಿ ಪಾರ್ವತಿ ಅವರು 14 ನಿವೇಶನ ಪಡೆಯುವ ಹಕ್ಕು ಹೊಂದಿರಲಿಲ್ಲ. ಹೆಚ್ಚೆಂದರೆ 4,800 ಚದರ ಅಡಿ ಜಾಗವನ್ನು ಪಡೆಯುವ ಹಕ್ಕಿದೆ. ಅದು ಸ್ವಾಧೀನ ಆಗಿರುವ ಅದೇ ಜಾಗದಲ್ಲಿ ಪಡೆಯಬಹುದಾಗಿತ್ತು. ಆದರೆ, ಇಲ್ಲಿ 50:50 ಅನುಪಾತ ಅನ್ವಯಿಸಲಾಗಿದೆ. ಇದು ಕಾನೂನುಬಾಹಿರ ಕ್ರಮವಾಗಿದೆ ಎಂದು ಲಕ್ಷ್ಮಿ ಅಯ್ಯಂಗಾರ್ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್‌, ಆಗಸ್ಟ್ 13ಕ್ಕೆ ಆದೇಶ ಕಾಯ್ದಿರಿಸಿದೆ.

ಇದನ್ನೂ ಓದಿ | Congress Meeting: ನನ್ನದು ಹೋರಾಟದ ಬದುಕು, ಬಿಜೆಪಿ-ಜೆಡಿಎಸ್‌ ಎಷ್ಟೇ ಪಾದಯಾತ್ರೆ ಮಾಡಿದ್ರೂ ಜಗ್ಗಲ್ಲ ಎಂದ ಸಿಎಂ

ಏನಿದು ಪ್ರಕರಣ?

ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ಮುಡಾದಿಂದ 14 ನಿವೇಶನಗಳನ್ನು ಪಡೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಸೇರಿ ಐವರ ವಿರುದ್ಧ ಸಿಬಿಐ ಅಥವಾ ಬೇರಾವುದೇ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಲು ಆದೇಶಿಸಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವವರು 82ನೇ ಸಿಸಿಎಚ್ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಆ.8ರಂದು ಖಾಸಗಿ ದೂರು ಸಲ್ಲಿಸಿದ್ದರು.

ಸಿಎಂ ಸಿದ್ದರಾಮಯ್ಯನವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಸ್ವಜನಪಕ್ಷಪಾತ ತೋರಿ, ಮುಡಾ ವಿಚಾರದಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಪತ್ನಿ ಹೆಸರಿಗೆ, ದೇವರಾಜು ಎನ್ನುವವರ ಹೆಸರಿಗೆ ಸುಳ್ಳು ದಾಖಲೆ ಸೃಷ್ಟಿ ಮಾಡಿ ನಿವೇಶನ ಪಡೆದುಕೊಂಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.

ಇದನ್ನೂ ಓದಿ | Congress Meeting: ಮೈಸೂರಲ್ಲಿ ಸಿಎಂ ಶಕ್ತಿ ಪ್ರದರ್ಶನ; ಈ ಬಂಡೆ ಸಿದ್ದರಾಮಯ್ಯ ಜತೆ ಇದೆ ಎಂದ ಡಿಕೆಶಿ

ಈ ಹಿಂದೆ ರಾಜ್ಯಪಾಲರು, ಕೆಲವು ಅಧಿಕಾರಿಗಳಿಗೆ ದೂರು ಅರ್ಜಿ ನೀಡಿದ್ದೆ, ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ 15 ಪುಟಗಳ ದೂರು, 300ಕ್ಕೂ ಹೆಚ್ಚು ದಾಖಲಾತಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದೇನೆ. ಸಿದ್ದರಾಮಯ್ಯನವರನ್ನು ಮೊದಲನೇ ಆರೋಪಿ, ಅವರ ಪತ್ನಿ ಎರಡನೇ ಆರೋಪಿ, ಸಂಬಂಧಿಕ ಮಲ್ಲಿಕಾರ್ಜುನ 3ನೇ ಮತ್ತು ದೇವರಾಜ್ ಎಂಬುವವರನ್ನು 4ನೇ ಆರೋಪಿಯನ್ನಾಗಿ ಮಾಡಲು ದೂರು ನೀಡಿದ್ದೇನೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದ್ದರು.

Continue Reading

ಕ್ರೀಡೆ

Paris Olympics 2024: ಒಲಿಂಪಿಕ್ಸ್​ ಸಮಾರೋಪದಲ್ಲಿ ಮನು ಭಾಕರ್‌, ಶ್ರೀಜೇಶ್​ ತ್ರಿವರ್ಣ ಧ್ವಜಧಾರಿಗಳು

Paris Olympics 2024: ಮನು ಭಾಕರ್‌ ಮತ್ತು ಶ್ರೀಜೇಶ್​ ಪ್ಯಾರಿಸ್‌ ಒಲಿಂಪಿಕ್ಸ್‌ ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಲಿದ್ದಾರೆ. ಉಭಯ ಕ್ರೀಡಾಪಟುಗಳು ಈ ಕೂಟದಲ್ಲಿ ಶ್ರೇಷ್ಠ ಸಾಧನೆಗೈದಿದ್ದು, ಈ ಗೌರವಕ್ಕೆ ಅರ್ಹ ಹಾಗೂ ಅತ್ಯಂತ ಸೂಕ್ತವಾಗಿದ್ದಾರೆ ಎಂಬುದಾಗಿ ಐಒಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ

VISTARANEWS.COM


on

Paris Olympics 2024
Koo

ನವದೆಹಲಿ: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ(Paris Olympics 2024) ಪದಕ ಗೆದ್ದ ಹಾಕಿ ಆಟಗಾರ ಪಿ.ಆರ್ ಶ್ರೀಜೇಶ್(PR Sreejesh)​ ಮತ್ತು ಅವಳಿ ಕಂಚಿನ ಪದಕ ವಿಜೇತೆ ಶೂಟರ್​ ಮನು ಭಾಕರ್​(Manu Bhaker) ಭಾರದ ಧ್ವಜಧಾರಿಗಳಾಗಿ( India’s Co-Flag Bearer) ಆಯ್ಕೆಯಾಗಿದ್ದಾರೆ. ಸಮಾರೋಪ ಸಮಾರಂಭ(Paris Olympics 2024 Closing Ceremony) ಭಾನುವಾರ ರಾತ್ರಿ ನಡೆಯಲಿದೆ.

ಮಹಿಳಾ ಧ್ವಜಧಾರಿಯಾಗಿ ಮನು ಭಾಕರ್​ ಅವರನ್ನು ಕಳೆದ ವಾರವೇ ಆಯ್ಕೆ ಮಾಡಲಾಗಿತ್ತು. ಆದರೆ, ಭಾರತದ ಪುರುಷ ಧ್ವಜಧಾರಿ ಕ್ರೀಡಾಳು ಆಯ್ಕೆಯಾಗಿರಲಿಲ್ಲ. ಇದೀಗ ಹಾಕಿಗೆ ವಿದಾಯ ಹೇಳಿರುವ ದಿಗ್ಗಜ ಗೋಲ್​ ಕೀಪರ್​ ಶ್ರೀಜೇಶ್​ ಅವರನ್ನು ಆಯ್ಕೆ ಮಾಡಲಾಗಿದೆ. ಉಭಯ ಕ್ರೀಡಾಪಟುಗಳು ಧ್ವಜಧಾರಿಯಾಗಿ ಸಮಾರೋಪ ಸಮಾರಂಭದಲ್ಲಿ ತ್ರಿವರ್ಣ ಧ್ವಜವನ್ನು ಹೊತ್ತು ಸಾಗಲಿದ್ದಾರೆ. ಉದ್ಘಾಟನ ಸಮಾರಂಭದಲ್ಲಿ ಪಿ.ವಿ ಸಿಂಧು ಮತ್ತು ಟೆಬಲ್​ ಟೆನಿಸ್​ ಆಟಗಾರ ಶರತ್‌ ಕಮಲ್‌ ಭಾರತದ ಧ್ವಜಧಾರಿಗಳಾಗಿದ್ದರು.

ಮನು ಭಾಕರ್‌ ಮತ್ತು ಶ್ರೀಜೇಶ್​ ಪ್ಯಾರಿಸ್‌ ಒಲಿಂಪಿಕ್ಸ್‌ ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಲಿದ್ದಾರೆ. ಉಭಯ ಕ್ರೀಡಾಪಟುಗಳು ಈ ಕೂಟದಲ್ಲಿ ಶ್ರೇಷ್ಠ ಸಾಧನೆಗೈದಿದ್ದು, ಈ ಗೌರವಕ್ಕೆ ಅರ್ಹ ಹಾಗೂ ಅತ್ಯಂತ ಸೂಕ್ತವಾಗಿದ್ದಾರೆ ಎಂಬುದಾಗಿ ಐಒಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬುಧವಾರದಂದು ತವರಿಗೆ ಮರಳಿದ್ದ ಮನು ಭಾಕರ್​ ಶನಿವಾರ ಮತ್ತೆ ಪ್ಯಾರಿಸ್​ಗೆ ಮರಳಲಿದ್ದಾರೆ. 10 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಕಂಚು ಗೆಲ್ಲುವ ಮೂಲಕ ಮನು ಭಾಕರ್‌ ಭಾರತದ ಪದಕ ಖಾತೆ ತೆರೆದಿದ್ದರು. ಬಳಿಕ ಸರಬ್ಜೋತ್‌ ಸಿಂಗ್‌ ಜತೆಗೂಡಿ 10 ಮೀ. ಏರ್‌ ಪಿಸ್ತೂಲ್‌ ಮಿಶ್ರ ಡಬಲ್ಸ್‌ನಲ್ಲೂ ಕಂಚಿಗೆ ಗುರಿ ಇರಿಸಿದ್ದರು.

ಇದನ್ನೂ ಓದಿ Paris Olympics: ಚೊಚ್ಚಲ ಪ್ರಯತ್ನದಲ್ಲೇ ಒಲಿಂಪಿಕ್ಸ್​ ಪದಕ ಗೆಲ್ಲಲು ಸಜ್ಜಾದ ಅಮನ್‌ ಸೆಹ್ರಾವತ್‌

36 ವಷದ ಕೇರಳದ ಶ್ರೀಜೇಶ್‌ ಭಾರತ ಪರ 336 ಪಂದ್ಯಗಳನ್ನು ಆಡಿದ್ದಾರೆ. 2 ಒಲಿಂಪಿಕ್ಸ್‌ ಕಂಚಿನ ಪದಕ, ಏಷ್ಯನ್‌ ಗೇಮ್ಸ್‌ನಲ್ಲಿ 2 ಚಿನ್ನ, 1 ಕಂಚು, ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ 2 ಬೆಳ್ಳಿ, ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ 2 ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. 2006ರಲ್ಲಿ ಭಾರತೀಯ ಹಾಕಿ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಕಳೆದ ಟೊಕಿಯೋ ಒಲಿಂಪಿಕ್ಸ್​ನಲ್ಲಿ ಭಾರತ ಕಂಚಿನ ಪದಕ ಗೆದ್ದುಕೊಂಡಿತ್ತು. ಭಾರತ ತಂಡದ ಈ ಪದಕ ಗೆಲುವಿನಲ್ಲಿ ಶ್ರೀಜೇಶ್ ಪ್ರಮುಖ ಪಾತ್ರವಹಿಸಿದ್ದರು. ವಿಶ್ವದ ಅತ್ಯುತ್ತಮ ಗೋಲ್ ಕೀಪರ್ ಎಂಬ ಪುರಸ್ಕಾರವೂ ಸಂದಿತ್ತು. ಈ ಬಾರಿಯೂ ಶ್ರೀಜೇಶ್​ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಭಾರತದ ಪದಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಭಾರತೀಯ ಹಾಕಿಗೆ ಶ್ರೀಜೇಶ್​ ನೀಡಿದ ಅಪಾರ ಸೇವೆಯನ್ನು ಪರಿಗಣಿಸಿ ಹಾಕಿ ಇಂಡಿಯಾ(Hockey India) ಶ್ರೀಜೇಶ್​ ಅವರನ್ನು ಭಾರತ ಜೂನಿಯರ್ ಪುರುಷರ ತಂಡದ ಹೊಸ ಮುಖ್ಯ ಕೋಚ್ ಆಗಿ ನೇಮಿಸಿದೆ.

Continue Reading
Advertisement
Oats or Quinoa
ಆರೋಗ್ಯ29 mins ago

Oats or Quinoa: ಓಟ್ಸ್‌, ಕಿನೊವಾ- ಇವೆರೆಡರಲ್ಲಿ ಯಾವುದು ಬೆಸ್ಟ್?

Waqf Bill
ದೇಶ51 mins ago

Waqf Bill: ವಕ್ಫ್‌ ಕಾಯ್ದೆಗೆ ತಿದ್ದುಪಡಿ; 21 ಸದಸ್ಯರ ಸಮಿತಿ ರಚಿಸಿದ ಕೇಂದ್ರ, ಓವೈಸಿ, ತೇಜಸ್ವಿ ಸೂರ್ಯಗೆ ಸ್ಥಾನ

Neeraj Chopra
ಕ್ರೀಡೆ51 mins ago

Neeraj Chopra : ವಿನೇಶ್ ಪೋಗಟ್​​ಗೆ ಅನರ್ಹತೆ ಬಗ್ಗೆ ಮಾತನಾಡಿದ ನೀರಜ್ ಚೋಪ್ರಾ; ಏನಂದ್ರು ಅವರು?

LOve case
ಬಾಗಲಕೋಟೆ56 mins ago

Love Case : ಮದುವೆಗೆ ಪೋಷಕರ ವಿರೋಧ; ಮರಕ್ಕೆ ನೇಣು ಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆ

Muda Scam
ಪ್ರಮುಖ ಸುದ್ದಿ1 hour ago

Muda Scam: ಸಿಎಂ ವಿರುದ್ಧದ ಖಾಸಗಿ ದೂರಿನ ಅರ್ಜಿ ವಿಚಾರಣೆ; ಆ.13ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್‌

Israel-Hamas War
ವಿದೇಶ1 hour ago

Israel-Hamas War: ಪುತ್ರರ ವೀರ್ಯವನ್ನು ಸಂಗ್ರಹಿಸಿಡುತ್ತಿರುವ ಇಸ್ರೇಲ್ ಪೋಷಕರು! ಯಾಕೆ ಹೀಗೆ?

Karnataka Nataka Akademi Award
ಉತ್ತರ ಕನ್ನಡ1 hour ago

Karnataka Nataka Akademi Award: ಉ.ಕ ಜಿಲ್ಲೆಯ ಮೂವರು ಕಲಾವಿದರಿಗೆ ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ

Duniya Vijay bheema movie review
ಸ್ಯಾಂಡಲ್ ವುಡ್1 hour ago

Duniya Vijay: ಹೇಗಿದೆ ‘ಭೀಮ’ ಸಿನಿಮಾ? ಪ್ರೇಕ್ಷಕರು ಹೇಳೋದೇನು?

Bengaluru power cut
ಬೆಂಗಳೂರು2 hours ago

Bengaluru Power Cut: ಆ.11ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

Kannada New Movie
ಬೆಂಗಳೂರು2 hours ago

Kannada New Movie: ‘ಕೇದಾರ್ ನಾಥ್ ಕುರಿಫಾರಂ’ ಚಿತ್ರದ ಟ್ರೇಲರ್, ಹಾಡುಗಳು ರಿಲೀಸ್‌

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 day ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 day ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 day ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ5 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ6 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌