Bangalore Traffic: ಬೆಂಗಳೂರಿನ ಟ್ರಾಫಿಕ್‌ ಸಿಗ್ನಲ್‌ನಲ್ಲಿ 15 ನಿಮಿಷ ನಿಲ್ಲೋ ಪರಿಸ್ಥಿತಿ ಬರಲಿದೆ, ಎಚ್ಚರ! - Vistara News

ಪ್ರಮುಖ ಸುದ್ದಿ

Bangalore Traffic: ಬೆಂಗಳೂರಿನ ಟ್ರಾಫಿಕ್‌ ಸಿಗ್ನಲ್‌ನಲ್ಲಿ 15 ನಿಮಿಷ ನಿಲ್ಲೋ ಪರಿಸ್ಥಿತಿ ಬರಲಿದೆ, ಎಚ್ಚರ!

Bangalore Traffic: ಲೆಕ್ಕಾಚಾರ ಗಮನಿಸಿದರೆ 2025ರಿಂದ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಮಿತಿ ಮೀರಲಿದೆ. ಬೆಂಗಳೂರಿನ 162 ಜಂಕ್ಷನ್‌ಗಳಲ್ಲಿ ಕನಿಷ್ಠ 10-11 ನಿಮಿಷ ಕಾಯುವ ಸಂಕಷ್ಟದ ಸ್ಥಿತಿ ತಲೆದೋರಲಿದೆ. ಕೆ.ಆರ್ ಸರ್ಕಲ್, ಸಿಲ್ಕ್ ಬೋರ್ಡ್, ಓಲ್ಡ್ ಏರ್‌ಪೋರ್ಟ್ ರಸ್ತೆ, ಚಾಲುಕ್ಯ, ಎಲೆಕ್ಟ್ರಾನಿಕ್ ಸಿಟಿ, ಟೌನ್‌ಹಾಲ್ ಸೇರಿದಂತೆ 162 ಜಂಕ್ಷನ್‌ಗಳು ಈ ಕಂಟಕ ಎದುರಿಸಲಿವೆ.

VISTARANEWS.COM


on

bangalore traffic signal
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಜನಗಳನ್ನು ಕಾಡುವ ಟ್ರಾಫಿಕ್ (Bangalore Traffic) ಸಂಕಟ ಈಗಾಗಲೇ ಕುಖ್ಯಾತವಾಗಿದೆ. ಇದು ಇನ್ನು ಮುಂದಿನ ಹಲವು ವರ್ಷಗಳಲ್ಲಿ ಇನ್ನಷ್ಟು ಬಿಗಡಾಯಿಸಲಿದೆಯಂತೆ. ಎಷ್ಟರ ಮಟ್ಟಿಗೆ ಎಂದರೆ, ಪ್ರತಿ ಸಿಗ್ನಲ್‌ನಲ್ಲಿಯೂ (Traffic Signal) 10-12 ನಿಮಿಷ ಕಾಯುವ ಸ್ಥಿತಿ ಶೀಘ್ರದಲ್ಲೇ ಬರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ!

ಬೆಂಗಳೂರಿನಲ್ಲಿ ಟ್ರಾಫಿಕ್ ನಿರ್ವಹಣೆ (Traffic management) ಭಾರೀ ಕಷ್ಟಕರವಾಗಲಿದೆ ಎಂದು ಬಿಬಿಎಂಪಿ (BBMP), ಸಾರಿಗೆ ಇಲಾಖೆ (Transport Department), ಟ್ರಾಫಿಕ್ ಪೊಲೀಸ್ (Traffic Police), ನಗರ ಭೂ ಸಾರಿಗೆ ನಿರ್ದೇಶನಾಲಯದಿಂದ ನಡೆಸಿದ ಸಮೀಕ್ಷೆಯಿಂದ ಕಂಡುಬಂದಿದೆ.

ಹಾಲಿ ಬೆಂಗಳೂರಿನ ರಸ್ತೆಗಳು ಕೇವಲ 50 ಲಕ್ಷ ವಾಹನಗಳ ಓಡಾಟಕ್ಕೆ ಯೋಗ್ಯವಾಗಿವೆ. ಆದರೆ ರಾಜಧಾನಿಯಲ್ಲಿ ವಾಹನಗಳ ಸಂಖ್ಯೆ ಈ ಮಿತಿಯನ್ನು ಎಂದೋ ಮೀರಿದೆ. ಬೆಂಗಳೂರಿನ ರಸ್ತೆಗೆ ಪ್ರತಿ ದಿನ 2000 ಹೊಸ ವಾಹನಗಳು ಇಳಿಯುತ್ತಿವೆ. ಸದ್ಯ ರಾಜಧಾನಿಯಲ್ಲಿ ಸುಮಾರು 1.18 ಕೋಟಿ ವಾಹನಗಳು ಇವೆ.

ಮುಂದಿನ ನಾಲ್ಕು ತಿಂಗಳಲ್ಲಿ 2 ಲಕ್ಷ ಹೊಸ ವಾಹನಗಳು ನಗರಕ್ಕೆ ಸೇರ್ಪಡೆಯಾಗಲಿವೆ. 2024ರ ಅಂತ್ಯಕ್ಕೆ 1 ಕೋಟಿ 21 ಲಕ್ಷ ವಾಹನಗಳು ಬೆಂಗಳೂರಿನಲ್ಲಿ ನೋಂದಣಿಯಾಗಿರಲಿವೆ. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಹೊಸದಾಗಿ ನೋಂದಣಿಯಾಗಿ ಬೆಂಗಳೂರಿಗೆ ಬರುವ ವಾಹನಗಳ ಸಂಖ್ಯೆ ನಿತ್ಯ ಸುಮಾರು 1000. ನಿತ್ಯ ಹೊರ ರಾಜ್ಯದಿಂದ, ಜಿಲ್ಲೆಯಿಂದ ಬೆಂಗಳೂರಿಗೆ ಬಂದು ಹೋಗುವ ವಾಹನಗಳ ಸಂಖ್ಯೆ 1 ಲಕ್ಷ ಮೀರಬಹುದು.

ಇದೆಲ್ಲ ಲೆಕ್ಕಾಚಾರ ಗಮನಿಸಿದರೆ 2025ರಿಂದ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಮಿತಿ ಮೀರಲಿದೆ. ಬೆಂಗಳೂರಿನ 162 ಜಂಕ್ಷನ್‌ಗಳಲ್ಲಿ ಕನಿಷ್ಠ 10-11 ನಿಮಿಷ ಕಾಯುವ ಸಂಕಷ್ಟದ ಸ್ಥಿತಿ ತಲೆದೋರಲಿದೆ. ಕೆ.ಆರ್ ಸರ್ಕಲ್, ಸಿಲ್ಕ್ ಬೋರ್ಡ್, ಓಲ್ಡ್ ಏರ್‌ಪೋರ್ಟ್ ರಸ್ತೆ, ಚಾಲುಕ್ಯ, ಎಲೆಕ್ಟ್ರಾನಿಕ್ ಸಿಟಿ, ಟೌನ್‌ಹಾಲ್ ಸೇರಿದಂತೆ 162 ಜಂಕ್ಷನ್‌ಗಳು ಈ ಕಂಟಕ ಎದುರಿಸಲಿವೆ. ಒಂದು ಜಂಕ್ಷನ್ ದಾಟಲು ಕನಿಷ್ಠ 10 ನಿಮಿಷವಾದರೂ ತೆಗೆದುಕೊಳ್ಳಬಹುದು. ಸಿಲ್ಕ್ ಬೋರ್ಡ್ ಸಿಗ್ನಲ್‌ನಲ್ಲಿ ಈಗಾಗಲೇ ಐದರಿಂದ ಎಂಟು ನಿಮಿಷ ಕಾಯಬೇಕಾಗಿ ಬರುತ್ತಿದೆ.

ನಗರ ಭೂ ಸಾರಿಗೆ ನಿರ್ದೇಶನಾಲಯದ ಸರ್ವೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಆದರೆ ರಸ್ತೆ ಅಗಲೀಕರಣದ ಮೂಲಕ ವಾಹನ ಓಡಾಟಕ್ಕೆ ಅವಕಾಶ ಮಾಡಿಕೊಡೋಣ ಅಂದರೆ, ಅದಕ್ಕೆ ಅವಕಾಶವೇ ಇಲ್ಲದ ಸ್ಥಿತಿ ಇದೆ. ಬಿಬಿಎಂಪಿಯಿಂದ ರಸ್ತೆ ಅಗಲೀಕರಣದ ಬಗ್ಗೆ ಸರ್ವೆ ನಡೆಯುತ್ತಿದೆ. ಆದರೆ ಇದು ದೊಡ್ಡ ಮಟ್ಟದಲ್ಲಿ ಕಾನೂನಾತ್ಮಕ ಸಮರಕ್ಕೆ ಹಾದಿ ಮಾಡಿಕೊಡಲಿದೆ. ಇದಕ್ಕಾಗಿ ಸರ್ಕಾರ ಸುರಂಗ ಮಾರ್ಗ, ಫ್ಲೈಓವರ್‌, ಅಂಡರ್‌ಪಾಸ್‌, ಮ್ಯಾಜಿಕ್‌ ಬಾಕ್ಸ್ ಇತ್ಯಾದಿಗಳ ಮೊರೆ ಹೋಗುತ್ತಿದೆ.

ಇದರೊಂದಿಗೆ ಪಾರ್ಕಿಂಗ್‌ ಕೂಡ ದೊಡ್ಡ ಸಮಸ್ಯೆಯಾಗಿ ಕಾಡಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಕಿಂಗ್‌ ಈಗಾಗಲೇ ಇಕ್ಕಟ್ಟಿನ ಪ್ರಶ್ನೆಯಾಗಿದೆ. ಸಾಕಷ್ಟು ಸಾರ್ವಜನಿಕ ಪಾರ್ಕಿಂಗ್‌ ತಾಣಗಳಿಲ್ಲ. ಮನೆಗಳನ್ನು ಕಟ್ಟುತ್ತಿರುವವರು ಕೂಡ ಮನೆಯೊಳಗೆ ಪಾರ್ಕಿಂಗ್‌ ಸ್ಪೇಸ್‌ ಬಿಡುತ್ತಿಲ್ಲ. ಹೀಗಾಗಿ ರಸ್ತೆಯ ಪಕ್ಕದಲ್ಲೇ ವಾಹನಗಳನ್ನು ಪಾರ್ಕ್‌ ಮಾಡುತ್ತಿರುವುದರಿಂದ ರಸ್ತೆಗಳು ಕೂಡ ವಾಹನಗಳ ಓಡಾಟಕ್ಕೆ ಇಕ್ಕಟ್ಟಾಗುತ್ತಿವೆ. ಬಿಬಿಎಂಪಿ ಇದನ್ನು ಬಗೆಹರಿಸಲು ಕಠಿಣ ಎಚ್ಚರಿಕೆಗಳನ್ನು ನೀಡುತ್ತಿದ್ದರೂ ಅದು ಫಲ ನೀಡಿಲ್ಲ.

ಇದನ್ನೂ ಓದಿ: Bangalore Traffic: ಬೆಂಗಳೂರಿಗೆ ಪ್ರತಿ ತಿಂಗಳು 50 ಸಾವಿರ ಹೊಸ ವಾಹನ ಸೇರ್ಪಡೆ; ಟ್ರಾಫಿಕ್‌ ನರಕ ಆಗೋದು ಗ್ಯಾರಂಟಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Narendra Modi: ಮೋದಿ ಪ್ರೊಫೈಲ್‌ ಫೋಟೊ ಈಗ ತಿರಂಗಾ; ಹರ್‌ ಘರ್‌ ತಿರಂಗಾ ಅಭಿಯಾನಕ್ಕೆ ಜನರಿಗೆ ಕರೆ

Narendra Modi: “ಸ್ವಾತಂತ್ರ್ಯ ದಿನಾಚರಣೆಯನ್ನು ಸ್ಮರಣೀಯವಾಗಿಸಲು ಸತತ ಮೂರನೇ ಆವೃತ್ತಿಯ ಹರ್‌ ಘರ್‌ ತಿರಂಗಾ ಅಭಿಯಾನವನ್ನು ಆಗಸ್ಟ್‌ 9ರಿಂದ 15ರವರೆಗೆ ಆಚರಿಸಲಾಗುತ್ತದೆ” ಎಂಬುದಾಗಿ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರು ಮಾಹಿತಿ ನೀಡಿದ್ದಾರೆ. ಮೋದಿ ಅವರೂ ಅಭಿಯಾನದ ಯಶಸ್ಸಿಗೆ ಕರೆ ನೀಡಿದ್ದಾರೆ.

VISTARANEWS.COM


on

Narendra Modi
Koo

ನವದೆಹಲಿ: ದೇಶದ ಸ್ವಾತಂತ್ರ್ಯ ದಿನಾಚರಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ದೇಶಕ್ಕೆ ದೇಶವೇ ಸ್ವಾತಂತ್ರ್ಯದ ಸಂಭ್ರಮ ಆಚರಿಸಲು ಸಿದ್ಧವಾಗಿದೆ. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ ಸಾಮಾಜಿಕ ಜಾಲತಾಣದ (X Social Media) ಪ್ರೊಫೈಲ್‌ ಪಿಕ್ಚರ್‌ ಬದಲಾಯಿಸಿದ್ದಾರೆ. ತಿರಂಗಾವನ್ನೇ ಡಿಪಿಯನ್ನಾಗಿ ಮಾಡಿರುವ ನರೇಂದ್ರ ಮೋದಿ (Narendra Modi) ಅವರು ದೇಶದ ಜನತೆಗೂ ಹರ್‌ ಘರ್‌ ತಿರಂಗಾ (Har Ghar Tiranga) ಅಭಿಮಾನಕ್ಕೆ ಕರೆ ನೀಡಿದ್ದಾರೆ.

“ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಎಲ್ಲರೂ ಹರ್‌ ಘರ್‌ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸೋಣ, ಸ್ಮರಣೀಯಗೊಳಿಸೋಣ. ನಾನು ನನ್ನ ಖಾತೆಯ ಪ್ರೊಫೈಲ್‌ ಫೋಟೊವನ್ನು ಬದಲಾಯಿಸಿದ್ದೇನೆ. ನೀವು ಕೂಡ ನಿಮ್ಮ ಪ್ರೊಫೈಲ್‌ ಫೋಟೊವನ್ನು ತಿರಂಗಾವನ್ನೇ ಸೆಟ್‌ ಮಾಡಿಕೊಳ್ಳುವ ಮೂಲಕ ಅಭಿಯಾನಕ್ಕೆ ಅಭೂತಪೂರ್ವ ಯಶಸ್ಸು ತರೋಣ” ಎಂದು ಪ್ರೊಫೈಲ್‌ ಫೋಟೊ ಬದಲಾಯಿಸಿದ ಬಳಿಕ ನರೇಂದ್ರ ಮೋದಿ ಅವರು ಪೋಸ್ಟ್‌ ಮಾಡಿದ್ದಾರೆ.

“ಸ್ವಾತಂತ್ರ್ಯ ದಿನಾಚರಣೆಯನ್ನು ಸ್ಮರಣೀಯವಾಗಿಸಲು ಸತತ ಮೂರನೇ ಆವೃತ್ತಿಯ ಹರ್‌ ಘರ್‌ ತಿರಂಗಾ ಅಭಿಯಾನವನ್ನು ಆಗಸ್ಟ್‌ 9ರಿಂದ 15ರವರೆಗೆ ಆಚರಿಸಲಾಗುತ್ತದೆ” ಎಂಬುದಾಗಿ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರು ಮಾಹಿತಿ ನೀಡಿದ್ದಾರೆ. ಹಾಗೆಯೇ, ಪ್ರತಿಯೊಬ್ಬರೂ ತಮ್ಮ ಮನೆಯ ಮೇಲೆ ತಿರಂಗಾ ಹಾರಿಸಿ, ಆ ತಿರಂಗಾ ಜತೆ ಇರುವ ಫೋಟೊವನ್ನು ಹರ್‌ ಘರ್‌ ತಿರಂಗಾ ವೆಬ್‌ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಿ ಎಂದು ತಿಳಿಸಿದರು.

ಈ ಬಾರಿಯ ಅಭಿಯಾನದ ಭಾಗವಾಗಿ ಸಂಸತ್‌ ಸದಸ್ಯರು ತಿರಂಗಾ ಬೈಕ್‌ ರ‍್ಯಾಲಿಯನ್ನೂ ಕೈಗೊಳ್ಳಲಿದ್ದಾರೆ. ಆಗಸ್ಟ್‌ 13ರಂದು ಭಾರತ ಮಂಟಪಂನ ಪ್ರಗತಿ ಮೈದಾನದಿಂದ ಮೇಜರ್‌ ಧ್ಯಾನ್‌ ಚಂದ್‌ ಸ್ಟೇಡಿಯಂವರೆಗೆ ತಿರಂಗಾ ಬೈಕ್‌ ರ‍್ಯಾಲಿಯನ್ನು ಕೈಗೊಳ್ಳಲಾಗುತ್ತಿದೆ. ಸಂಸದರು ಬೈಕ್‌ಗೆ ತಿರಂಗಾ ಕಟ್ಟಿಕೊಂಡು ಇಂಡಿಯಾ ಗೇಟ್‌ ಮೂಲಕ ಸ್ಟೇಡಿಯಂಗೆ ತಲುಪಲಿದ್ದಾರೆ. ಇದಕ್ಕೂ ಮೊದಲಿನ ಅಭಿಯಾನಗಳಿಗೂ ದೇಶದ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು.

ಇದನ್ನೂ ಓದಿ: Vinesh Phogat: ಪ್ರಕಾಶ್‌ ರೈ ವಿರುದ್ಧ ಅಹಿಂಸಾ ಚೇತನ್‌ ಕಿಡಿ; ಮೋದಿ ಪರ ಬ್ಯಾಟಿಂಗ್ ಮಾಡಿ ʼರೈ ಅಜ್ಞಾನಿʼ ಎಂದ ನಟ

Continue Reading

ಪ್ರಮುಖ ಸುದ್ದಿ

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಆಗಸ್ಟ್​​ 10ರಂದು ಭಾರತಕ್ಕೆ ಯಾವ್ಯಾವ ಸ್ಪರ್ಧೆಗಳಿವೆ? ಇಲ್ಲಿದೆ ವಿವರ

Paris Olympics 2024 : ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು 4×400 ಮೀಟರ್ ರಿಲೇಯ ಫೈನಲ್​​ಗೆ ಅರ್ಹತೆ ಪಡೆಯಲು ವಿಫಲವಾಗಿವೆ. ಜ್ಯೋತಿಕಾ ಶ್ರೀ ದಂಡಿ, ಶುಭಾ ವೆಂಕಟೇಶನ್, ವಿಥ್ಯಾ ರಾಮರಾಜ್, ಎಂ.ಆರ್.ಪೂವಮ್ಮ ಮತ್ತು ಪ್ರಾಚಿ ಅವರನ್ನೊಳಗೊಂಡ ಮಹಿಳಾ ತಂಡ 16 ತಂಡಗಳ ಪೈಕಿ 3:32:51 ಸಮಯದೊಂದಿಗೆ 15ನೇ ಸ್ಥಾನ ಪಡೆಯಿತು.

VISTARANEWS.COM


on

Paris Olympics 2024
Koo

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​ (Paris Olympics 2024) ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಶನಿವಾರ 10ನೇ ದಿನ ಸ್ಪರ್ಧೆಗಳು ನಡೆಯಲಿವೆ. ಆ ದಿನ ಭಾರತಕ್ಕೆ ಹೆಚ್ಚಿನ ಸ್ಪರ್ಧೆಗಳು ಇಲ್ಲ. ಗಾಲ್ಫ್​ ಹಾಗೂ ಫ್ರೀಸ್ಟೈಲ್​ ಕುಸ್ತಿ ಬಿಟ್ಟರೆ ಬೇರೆ ಯಾವುದೇ ಸ್ಪರ್ಧೆಯಲ್ಲಿ ಭಾರತೀಯರು ಇಲ್ಲ. 14ನೇ ದಿನವಾದ ಶುಕ್ರವಾರ ಸಂಜೆಯ ತನಕವೂ ಭಾರತಕ್ಕೆ ಹೆಚ್ಚಿನ ಲಾಭವೇನೂ ಆಗಿಲ್ಲ. ಆದರೆ, ಜಾವೆಲಿನ್ ಎಸೆತದಲ್ಲಿ ಬೆಳ್ಳಿಯ ಪದಕ ಗೆದ್ದಿರುವ ನೀರಜ್ ಚೋಪ್ರಾ ಅವರ ಬಗ್ಗೆಯೇ ದಿನವಿಡೀ ಚರ್ಚೆಗಳು ನಡೆದಿವೆ.

ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು 4×400 ಮೀಟರ್ ರಿಲೇಯ ಫೈನಲ್​​ಗೆ ಅರ್ಹತೆ ಪಡೆಯಲು ವಿಫಲವಾಗಿವೆ. ಜ್ಯೋತಿಕಾ ಶ್ರೀ ದಂಡಿ, ಶುಭಾ ವೆಂಕಟೇಶನ್, ವಿಥ್ಯಾ ರಾಮರಾಜ್, ಎಂ.ಆರ್.ಪೂವಮ್ಮ ಮತ್ತು ಪ್ರಾಚಿ ಅವರನ್ನೊಳಗೊಂಡ ಮಹಿಳಾ ತಂಡ 16 ತಂಡಗಳ ಪೈಕಿ 3:32:51 ಸಮಯದೊಂದಿಗೆ 15ನೇ ಸ್ಥಾನ ಪಡೆಯಿತು.

ಕ್ಯೂಬಾ ಮಾತ್ರ 3:33:99 ಸಮಯದೊಂದಿಗೆ ಅವರಿಗಿಂತ ಕೆಳಗಿತ್ತು. ಭಾರತವು ಆರಂಭದಿಂದಲೂ ಹಿಂದೆ ಬಿದ್ದಿತು, ನಂತರ ಅವರು ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಯುನೈಟೆಡ್ ಸ್ಟೇಟ್ಸ್ 3: 21:44 ಸಮಯದೊಂದಿಗೆ ಅಗ್ರಸ್ಥಾನವನ್ನು ಗಳಿಸಿತು, ಇದು ಅವರ ಋತುವಿನ ಅತ್ಯುತ್ತಮ ಸಮಯವಾಗಿದೆ. ಗ್ರೇಟ್ ಬ್ರಿಟನ್ ಕೂಡ 3:24:72 ಸಮಯದೊಂದಿಗೆ ತಮ್ಮ ಋತುವಿನ ಅತ್ಯುತ್ತಮ ಪ್ರದರ್ಶನವನ್ನು ನೀಡಿತು.

ಫ್ರಾನ್ಸ್ (3:24:73), ಜಮೈಕಾ (3:24:92), ಬೆಲ್ಜಿಯಂ (3:24:92), ನೆದರ್ಲ್ಯಾಂಡ್ಸ್ (3:25:03), ಐರ್ಲೆಂಡ್ (3:25:05) ಮತ್ತು ಕೆನಡಾ (3:25:77) ಮಹಿಳಾ ರಿಲೇ ಸ್ಪರ್ಧೆಯ ಫೈನಲ್​ಗೆ ಪ್ರವೇಶಿಸಿದ ಇತರ ತಂಡಗಳು.

ಇದನ್ನೂ ಓದಿ: Neeraj Chopra : ವಿನೇಶ್ ಪೋಗಟ್​​ಗೆ ಅನರ್ಹತೆ ಬಗ್ಗೆ ಮಾತನಾಡಿದ ನೀರಜ್ ಚೋಪ್ರಾ; ಏನಂದ್ರು ಅವರು?

ಭಾರತದ ಪುರುಷರಿಗೂ ಹಿನ್ನಡೆ

ಅಮೋಲ್ ಜಾಕೋಬ್, ರಾಜೇಶ್ ರಮೇಶ್, ಸಂತೋಷ್ ಕುಮಾರ್, ಮುಹಮ್ಮದ್ ಅಜ್ಮಲ್ ಮತ್ತು ಮುಹಮ್ಮದ್ ಅನಾಸ್ ಅವರನ್ನೊಳಗೊಂಡ ಪುರುಷರ ತಂಡವು ಕಠಿಣ ಹೋರಾಟ ನಡೆಸಿತು. ಆದರೆ 3: 00.58 ಸಮಯದೊಂದಿಗೆ 10 ನೇ ಸ್ಥಾನ ಪಡೆದ ನಂತರ ಸ್ಪರ್ಧೆಯಿಂದ ಹೊರಬಿದ್ದಿತು. ಅರ್ಹತಾ ಸುತ್ತಿನಲ್ಲಿ ಬೋಟ್ಸಾನಾ 2:57:76 ಸೆಕೆಂಡುಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಪಡೆಯಿತು.

ಪುರುಷರ 4*400 ಮೀಟರ್ ರಿಲೇ ಫೈನಲ್ನಲ್ಲಿ ಗ್ರೇಟ್ ಬ್ರಿಟನ್ (2:58:88), ಯುನೈಟೆಡ್ ಸ್ಟೇಟ್ಸ್ (2:59:15), ಜಪಾನ್ (2:59:48), ಫ್ರಾನ್ಸ್ (2:59:53), ಬೆಲ್ಜಿಯಂ (2:59:84), ಜಾಂಬಿಯಾ (3:00:08) ಮತ್ತು ಇಟಲಿ (3:00:26) ತಂಡಗಳು ಫೈನಲ್​ಗೇರಿವೆ.

ಆಗಸ್ಟ್​​ 10ರಂದು ಭಾರತದ ಸ್ಪರ್ಧೆಗಳು ಈ ರೀತಿ ಇವೆ

ಗಾಲ್ಫ್ 12:30ಕ್ಕೆ: ಮಹಿಳಾ ರೌಂಡ್ 4 (ಪದಕದ ಸ್ಪರ್ಧೆ)

ಕುಸ್ತಿ 03:00: ಮಹಿಳಾ ಫ್ರೀಸ್ಟೈಲ್ 76 ಕೆಜಿ 1/8 ಫೈನಲ್. ರೀತಿಕಾ ಹೂಡಾ

Continue Reading

ದೇಶ

Lending Rate: ಬ್ಯಾಂಕ್‌ ಆಫ್‌ ಬರೋಡಾ ಬಡ್ಡಿದರ ಹೆಚ್ಚಳ; ಸಾಲಗಾರರಿಗೆ ಇಎಂಐ ಇನ್ನಷ್ಟು ಭಾರ

Lending Rate: ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷೆಯಂತೆ ರೆಪೋ ದರವನ್ನು ಶೇ. 6.5ರಲ್ಲಿ ಮುಂದುವರಿಸಲು ನಿರ್ಧರಿಸಿದೆ. ಹಣದುಬ್ಬರ ಇನ್ನೂ ಅಧಿಕ ಮಟ್ಟದಲ್ಲಿ ಇರುವುದರಿಂದ ರೆಪೋ ದರ ಇಳಿಕೆ ಸದ್ಯಕ್ಕೆ ಬೇಡ ಎಂಬುದು ಮಾನಿಟರಿ ಪಾಲಿಸಿ ಕಮಿಟಿಯ ಹೆಚ್ಚಿನ ಸದಸ್ಯರ ಅಭಿಮತದ ಹಿನ್ನಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಇದರಿಂದ ರಿಯಲ್ ಎಸ್ಟೇಟ್ ಅಥವಾ ಗೃಹ ಸಾಲದ ಇಎಂಐಗಳ ಮೇಲೆ ಯಾವುದೇ ಬದಲಾವಣೆ ಆಗುವುದಿಲ್ಲ ಎಂದೇ ಹೇಳಲಾಗುತ್ತಿತ್ತು. ಆದರೆ, ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಸಾಲ ಪಡೆದವರಿಗೆ ಈಗ ಇಎಂಐ ಹೊರೆಯಾಗಲಿದೆ.

VISTARANEWS.COM


on

Lending Rate
Koo

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರೀಕ್ಷೆಯಂತೆಯೇ ರೆಪೋ ದರ (Repo Rate) ಅಥವಾ ಬಡ್ಡಿದರವನ್ನು ಶೇ. 6.5ರಲ್ಲಿ ಮುಂದುವರಿಸಲು ನಿರ್ಧರಿಸಿದೆ. ಹಣದುಬ್ಬರ ಇನ್ನೂ ಅಧಿಕ ಮಟ್ಟದಲ್ಲಿ ಇರುವುದರಿಂದ ರೆಪೋ ದರ ಇಳಿಕೆ ಸದ್ಯಕ್ಕೆ ಬೇಡ ಎಂಬುದು ಮಾನಿಟರಿ ಪಾಲಿಸಿ ಕಮಿಟಿ (Monetary Policy Committee)ಯ ಹೆಚ್ಚಿನ ಸದಸ್ಯರ ಅಭಿಮತದ ಹಿನ್ನೆಲೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಹಾಗಾಗಿ, ಸಾಲಗಾರರಿಗೆ ಇಎಂಐ ಹೊರೆಯಾಗುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ, ಬ್ಯಾಂಕ್‌ ಆಫ್ ಬರೋಡಾ (‌Bank Of Baroda) ಈಗ ಬಡ್ಡಿದರ (Lending Rate) ಏರಿಕೆ ಮಾಡಿದ್ದು, ಆ ಬ್ಯಾಂಕ್‌ನಲ್ಲಿ ಸಾಲ ಪಡೆದವರಿಗೆ ಇಎಂಐ ಹೊರೆಯಾಗುವುದು ನಿಶ್ಚಿತವಾಗಿದೆ.

ಹೌದು, ಬ್ಯಾಂಕ್‌ ಆಫ್‌ ಬರೋಡಾ ಈಗ ಬಡ್ಡಿದರವನ್ನು 5 ಮೂಲಾಂಕ (Basic Points) ಏರಿಕೆ ಮಾಡಿದೆ. ಆಗಸ್ಟ್‌ 12ರಿಂದಲೇ ನೂತನ ಬಡ್ಡಿದರವು ಜಾರಿಗೆ ಬರಲಿದೆ ಎಂದು ಬ್ಯಾಂಕ್‌ ಆಫ್‌ ಬರೋಡಾ ತಿಳಿಸಿದೆ. 3 ತಿಂಗಳು, 6 ತಿಂಗಳು ಹಾಗೂ ಒಂದು ವರ್ಷದವರೆಗೆ ಸಾಲ ತೆಗೆದುಕೊಂಡವರಿಗೆ ಬಡ್ಡಿದರ ಏರಿಕೆ ಮಾಡಿರುವುದರಿಂದ ಅವರಿಗೆ ಮಾಸಿಕ ಇಎಂಐ ಜಾಸ್ತಿಯಾಗಲಿದೆ.

ಮೂರು ತಿಂಗಳ ಅವಧಿಯ ಸಾಲದ ಮೇಲಿನ ಬಡ್ಡಿಯನ್ನು ಶೇ.8.45ರಿಂದ ಶೇ.8.50ಗೆ ಏರಿಕೆ ಮಾಡಿದೆ. ಹಾಗೆಯೇ, 6 ತಿಂಗಳ ಅವಧಿಯ ಸಾಲದ ಮೇಲಿನ ಬಡ್ಡಿಯನ್ನು ಶೇ.8.70ರಿಂದ ಶೇ.8.75ಕ್ಕೆ, 1 ವರ್ಷದ ಅವಧಿಯ ಸಾಲದ ಮೇಲಿನ ಬಡ್ಡಿಯನ್ನು ಶೇ.8.90ರಿಂದ ಶೇ.8.95ಕ್ಕೆ ಏರಿಕೆ ಮಾಡಲಾಗಿದೆ. ಇದು ಸಹಜವಾಗಿಯೇ ಗ್ರಾಹಕರಿಗೆ ಹೊರೆಯಾಗಲಿದೆ ಎಂಬುದಾಗಿ ತಿಳಿದುಬಂದಿದೆ.

ಸಾಮಾನ್ಯವಾಗಿ, ರೆಪೋ ರೇಟ್‌ ಆಧಾರದ ಮೇಲೆ ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿಯನ್ನು ಹೆಚ್ಚಿಸುತ್ತವೆ. ಆರ್‌ಬಿಐ ರೆಪೋ ರೇಟ್‌ ಹೆಚ್ಚಳ ಮಾಡಿದಾಗ ಮಾತ್ರ ಬ್ಯಾಂಕ್‌ಗಳು ಇಂತಹ ಕ್ರಮ ತೆಗೆದುಕೊಳ್ಳುತ್ತವೆ. ಆದರೆ, ಆರ್‌ಬಿಐ ಕೊನೆಯ ಬಾರಿಗೆ 2023ರ ಫೆಬ್ರವರಿಯಲ್ಲಿ ರೆಪೋ ದರವನ್ನು ಶೇ. 6.25ರಿಂದ ಶೇ. 6.50ಕ್ಕೆ ಏರಿಕೆ ಮಾಡಿದೆ. ಅಲ್ಲಿಂದ ಇಲ್ಲಿಯವರೆಗೆ ಆರ್‌ಬಿಐ ರೆಪೋ ದರವನ್ನು ಯಥಾಸ್ಥಿತಿ ಉಳಿಸಿಕೊಂಡು ಬಂದಿದೆ. ಇಷ್ಟಾದರೂ, ಬ್ಯಾಂಕ್‌ ಆಫ್‌ ಬರೋಡಾ ಏಕೆ ಬಡ್ಡಿದರ ಏರಿಕೆ ಮಾಡಿದೆ ಎಂಬುದು ಗ್ರಾಹಕರ ಪ್ರಶ್ನೆಯಾಗಿದೆ.

ಆರ್‌ಬಿಐ ರೆಪೋ ದರ ಯಥಾಸ್ಥಿಯಲ್ಲಿರುವುದರಿಂದ ರಿಯಲ್ ಎಸ್ಟೇಟ್ ಅಥವಾ ಗೃಹ ಸಾಲದ ಇಎಂಐಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರೆಪೋ ದರವು ಬದಲಾಗದೆ ಉಳಿದಿರುವುದರಿಂದ ಬ್ಯಾಂಕ್‌ಗಳು ಶೀಘ್ರದಲ್ಲೇ ತಮ್ಮ ಸಾಲದ ದರಗಳನ್ನು ಬದಲಾಯಿಸುವ ಸಾಧ್ಯತೆಯಿಲ್ಲ. ಅಂದರೆ ನಿಮ್ಮ ಇಎಂಐ ಸದ್ಯ ಏರಿಕೆ ಅಥವಾ ಇಳಿಕೆಯಾಗುವುದಿಲ್ಲ.

ಇದನ್ನೂ ಓದಿ: PF Interest: ನೌಕರರಿಗೆ ಗುಡ್‌ ನ್ಯೂಸ್;‌ ಪಿಎಫ್‌ ಬಡ್ಡಿದರ ಘೋಷಿಸಿದ ಕೇಂದ್ರ ಸರ್ಕಾರ, ಎಷ್ಟಿದೆ ನೋಡಿ

Continue Reading

ಪ್ರಮುಖ ಸುದ್ದಿ

Hijab Ban: ಕಾಲೇಜಿನಲ್ಲಿ ಹಿಜಾಬ್‌ ನಿಷೇಧಿಸಿದ್ದಕ್ಕೆ ಸುಪ್ರೀಂ ಕೋರ್ಟ್‌ ತರಾಟೆ; ತಿಲಕಕ್ಕೆ ವಿನಾಯಿತಿ ಏಕೆ ಎಂದು ಪ್ರಶ್ನೆ!

Hijab Ban: ಮುಂಬೈನಲ್ಲಿರುವ ಚೆಂಬುರ್‌ ಟ್ರೋಂಬೆ ಎಜುಕೇಷನ್‌ ಸೊಸೈಟಿಯ ಎನ್‌.ಜಿ.ಆಚಾರ್ಯ ಹಾಗೂ ಕೆ.ಕೆ. ಮರಾಠೆ ಕಾಲೇಜಿನಲ್ಲಿ ಇತ್ತೀಚೆಗೆ ವಸ್ತ್ರಸಂಹಿತೆ ಜಾರಿಗೆ ತರಲಾಗಿದ್ದು, ಕಾಲೇಜು ಆವರಣದಲ್ಲಿ ಹಿಜಾಬ್‌, ನಕಾಬ್‌, ಬುರ್ಖಾ, ಶಾಲು, ಟೋಪಿ, ಬ್ಯಾಡ್ಜ್‌ಗಳನ್ನು ಧರಿಸಿಕೊಂಡು ಬರುವಂತಿಲ್ಲ ಎಂದು ಆದೇಶ ಹೊರಡಿಸಿತ್ತು. ಇದಕ್ಕೆ ಸುಪ್ರೀಂ ಕೋರ್ಟ್‌ ಈಗ ತಡೆಯಾಜ್ಞೆ ನೀಡಿದೆ.

VISTARANEWS.COM


on

Hijab Ban
Koo

ನವದೆಹಲಿ: ಕರ್ನಾಟಕದಂತೆ ಮಹಾರಾಷ್ಟ್ರದ ಮುಂಬೈನಲ್ಲೂ ಶಿಕ್ಷಣ ಸಂಸ್ಥೆಗಳಲ್ಲಿ (Hijab Ban) ಹಿಜಾಬ್‌ ಧರಿಸುವುದನ್ನು ನಿಷೇಧಿಸಿದ ಆದೇಶವು ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ, ಹಿಜಾಬ್‌ ಧರಿಸುವುದನ್ನು ನಿಷೇಧಿಸಿದ ಮುಂಬೈನ (Mumbai College) ಚೆಂಬುರ್‌ ಟ್ರೋಂಬೆ ಎಜುಕೇಷನ್‌ ಸೊಸೈಟಿಯ ಎನ್‌.ಜಿ.ಆಚಾರ್ಯ ಹಾಗೂ ಕೆ.ಕೆ. ಮರಾಠೆ ಕಾಲೇಜಿನ ಆದೇಶಕ್ಕೆ ಸುಪ್ರೀಂ ಕೋರ್ಟ್‌ (Supreme Court) ತಡೆಯಾಜ್ಞೆ ನೀಡಿದೆ. ಇದರಿಂದ ಸುಪ್ರೀಂ ಕೋರ್ಟ್‌ನಲ್ಲಿ ಕಾಲೇಜುಗಳಿಗೆ ಹಿನ್ನಡೆಯಾದಂತಾಗಿದೆ.

ಕಾಲೇಜು ಆಡಳಿತ ಮಂಡಳಿ ಆದೇಶ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ಸಂಜಯ್‌ ಕುಮಾರ್‌ ನೇತೃತ್ವದ ನ್ಯಾಯಪೀಠವು, “ಕಾಲೇಜು ಆಡಳಿತ ಮಂಡಳಿ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ. ಆದರೆ, ತರಗತಿಯಲ್ಲಿ ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ಕೂರುವಂತಿಲ್ಲ. ಯಾವುದೇ ಧಾರ್ಮಿಕ ಚಟುವಟಿಕೆಗಳಿಗೆ ಕ್ಯಾಂಪಸ್‌ನಲ್ಲಿ ಕೈಗೊಳ್ಳುವಂತಿಲ್ಲ. ಇನ್ನು, ಕಾಲೇಜು ಆಡಳಿತ ಮಂಡಳಿಯು ಬುರ್ಖಾ, ನಿಕಾಬ್‌, ಹಿಜಾಬ್‌ ನಿಷೇಧಿಸಿದ್ದು, ಬಿಂದಿ, ತಿಲಕಕ್ಕೆ ಏಕೆ ಅವಕಾಶ ಕೊಟ್ಟಿದೆ” ಎಂದೂ ಪ್ರಶ್ನಿಸಿತು.

ಕಾಲೇಜಿನ ಆದೇಶ ಏನಾಗಿತ್ತು?

ಮುಂಬೈನಲ್ಲಿರುವ ಚೆಂಬುರ್‌ ಟ್ರೋಂಬೆ ಎಜುಕೇಷನ್‌ ಸೊಸೈಟಿಯ ಎನ್‌.ಜಿ.ಆಚಾರ್ಯ ಹಾಗೂ ಕೆ.ಕೆ. ಮರಾಠೆ ಕಾಲೇಜಿನಲ್ಲಿ ಇತ್ತೀಚೆಗೆ ವಸ್ತ್ರಸಂಹಿತೆ ಜಾರಿಗೆ ತರಲಾಗಿದ್ದು, ಕಾಲೇಜು ಆವರಣದಲ್ಲಿ ಹಿಜಾಬ್‌, ನಕಾಬ್‌, ಬುರ್ಖಾ, ಶಾಲು, ಟೋಪಿ, ಬ್ಯಾಡ್ಜ್‌ಗಳನ್ನು ಧರಿಸಿಕೊಂಡು ಬರುವಂತಿಲ್ಲ ಎಂದು ಆದೇಶ ಹೊರಡಿಸಿತ್ತು. ಆದರೆ, ಕಾಲೇಜಿನಲ್ಲಿ ಪದವಿಯ ದ್ವಿತೀಯ ಹಾಗೂ ಅಂತಿಮ ವರ್ಷದ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ 9 ವಿದ್ಯಾರ್ಥಿನಿಯರು ಕಾಲೇಜಿನ ಆದೇಶ ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದರು. ಇದನ್ನು ಬಾಂಬೆ ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಆದರೀಗ, ಸುಪ್ರೀಂ ಕೋರ್ಟ್‌, ಕಾಲೇಜಿನ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.

ಅಷ್ಟೇ ಅಲ್ಲ, ವಿದ್ಯಾರ್ಥಿಗಳು ಔಪಚಾರಿಕ ಮತ್ತು ಯೋಗ್ಯವಾದ ಉಡುಗೆಯನ್ನು ಧರಿಸಬೇಕು. ಅವರು ಶರ್ಟ್‌-ಪ್ಯಾಂಟ್‌ ಧರಿಸಬಹುದು. ಹುಡುಗಿಯರು ಭಾರತೀಯ ಹಾಗೂ ಮಾರ್ಡನ್‌ ಡ್ರೆಸ್‌ ಧರಿಸಬಹುದು. ಆದರೆ ಆದರೆ ಒಂದು ಧರ್ಮ, ಜಾತಿಯನ್ನು ಪ್ರತಿನಿಧಿಸುವಂತಹ ಬಟ್ಟೆಯನ್ನು ಧರಿಸುವಂತಿಲ್ಲ. ಜೀನ್ಸ್‌, ಟಿ ಶರ್ಟ್‌, ಅಸಭ್ಯ ರೀತಿಯ ಉಡುಗೆಗಳನ್ನು ಧರಿಸಲು ಅವಕಾಶ ಇಲ್ಲ. ಹಿಜಾಬ್‌, ಬುರ್ಖಾ, ನಖಾಬ್, ಶಾಲು, ಟೋಪಿಗಳನ್ನು ತೆಗೆದೇ ಕ್ಯಾಂಪಸ್‌ ಒಳಗೆ ಬರಬೇಕು ಎಂದು ಪ್ರಕಟಣೆ ತಿಳಿಸಿತ್ತು.

ಇದನ್ನೂ ಓದಿ: Bikini vs : Hijab : ಸ್ಪೇನ್​, ಈಜಿಪ್ಟ್​ ನಡುವಿನ ಬೀಚ್ ವಾಲಿಬಾಲ್ ಪಂದ್ಯದ ವೇಳೆ ಕಿಡಿ ಹಚ್ಚಿದ ಬಿಕಿನಿ ವರ್ಸಸ್ ಹಿಜಾಬ್​ ಚರ್ಚೆ

Continue Reading
Advertisement
Narendra Modi
ದೇಶ1 min ago

Narendra Modi: ಮೋದಿ ಪ್ರೊಫೈಲ್‌ ಫೋಟೊ ಈಗ ತಿರಂಗಾ; ಹರ್‌ ಘರ್‌ ತಿರಂಗಾ ಅಭಿಯಾನಕ್ಕೆ ಜನರಿಗೆ ಕರೆ

ವಾಣಿಜ್ಯ12 mins ago

Richest Indian Family: ಭಾರತದ ಜಿಡಿಪಿಯ ಶೇ. 10ರಷ್ಟು ಸಂಪತ್ತು ಹೊಂದಿರುವ ಅಂಬಾನಿ ಕುಟುಂಬ! ಇತರ ಶ್ರೀಮಂತ ಕುಟುಂಬಗಳು ಯಾವವು?

Viral news
ವೈರಲ್ ನ್ಯೂಸ್22 mins ago

Viral News: ಮಾಂಸದೂಟಕ್ಕಾಗಿ ಜಗಳ: ಮೆದುಳು ಹೊರಬರುವಂತೆ ಬಡಿದು ಪತಿಯನ್ನೇ ಕೊಂದ ಮಹಿಳೆ

CM Siddaramaiah
ಕರ್ನಾಟಕ25 mins ago

CM Siddaramaiah: 4 ದಶಕದಿಂದ ರಾಜಕೀಯದಲ್ಲಿರುವ ನನ್ನ ಬದುಕು ತೆರೆದ ಪುಸ್ತಕ: ಸಿಎಂ ಸಿದ್ದರಾಮಯ್ಯ

Paris Olympics 2024
ಪ್ರಮುಖ ಸುದ್ದಿ35 mins ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಆಗಸ್ಟ್​​ 10ರಂದು ಭಾರತಕ್ಕೆ ಯಾವ್ಯಾವ ಸ್ಪರ್ಧೆಗಳಿವೆ? ಇಲ್ಲಿದೆ ವಿವರ

Viral News
ವಿದೇಶ49 mins ago

Viral News: ಇಸ್ರೇಲ್ ಮಹಿಳಾ ಸೈನಿಕರಿಂದ ನಿರಂತರ ಅತ್ಯಾಚಾರ; ಕ್ರೂರ ಅನುಭವ ಬಿಚ್ಚಿಟ್ಟ ಪ್ಯಾಲೇಸ್ಟಿನಿಯನ್ ಬಂಧಿತ

Lending Rate
ದೇಶ1 hour ago

Lending Rate: ಬ್ಯಾಂಕ್‌ ಆಫ್‌ ಬರೋಡಾ ಬಡ್ಡಿದರ ಹೆಚ್ಚಳ; ಸಾಲಗಾರರಿಗೆ ಇಎಂಐ ಇನ್ನಷ್ಟು ಭಾರ

Vinesh Phogat
ಕ್ರೀಡೆ1 hour ago

Vinesh Phogat: ಕುಸ್ತಿಯಲ್ಲಿ ಅರಳಿದ ಪ್ರೀತಿ, ಒಂದು ರೂಪಾಯಿ ಖರ್ಚಿನಲ್ಲಿ ಮದುವೆ; ಇದುವೇ ವಿನೇಶ್​ ಫೋಗಟ್​ – ಸೋಮ್​ವೀರ್​ ಪ್ರೇಮದ ಕತೆ

Hijab Ban
ಪ್ರಮುಖ ಸುದ್ದಿ2 hours ago

Hijab Ban: ಕಾಲೇಜಿನಲ್ಲಿ ಹಿಜಾಬ್‌ ನಿಷೇಧಿಸಿದ್ದಕ್ಕೆ ಸುಪ್ರೀಂ ಕೋರ್ಟ್‌ ತರಾಟೆ; ತಿಲಕಕ್ಕೆ ವಿನಾಯಿತಿ ಏಕೆ ಎಂದು ಪ್ರಶ್ನೆ!

Vinesh Phogat
ಪ್ರಮುಖ ಸುದ್ದಿ2 hours ago

Vinesh Phogat : ವಿನೇಶ್​ ಪೋಗಟ್​ಗೆ ಬೆಳ್ಳಿ ಪದಕ ಕೊಡಿ; ಕುಸ್ತಿಪಟುವಿನ ಬೆಂಬಲಕ್ಕೆ ನಿಂತ ಸಚಿನ್ ತೆಂಡೂಲ್ಕರ್​

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 day ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 day ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 day ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ5 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ6 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌