Trainee Doctor: ವೈದ್ಯೆಯ ಕೊಂದ ಆರೋಪಿಯನ್ನು ಹಿಡಿದುಕೊಟ್ಟ ಬ್ಲ್ಯೂಟೂತ್‌ ಹೆಡ್‌ಫೋನ್; ಹೇಗಂತೀರಾ? - Vistara News

ಪ್ರಮುಖ ಸುದ್ದಿ

Trainee Doctor: ವೈದ್ಯೆಯ ಕೊಂದ ಆರೋಪಿಯನ್ನು ಹಿಡಿದುಕೊಟ್ಟ ಬ್ಲ್ಯೂಟೂತ್‌ ಹೆಡ್‌ಫೋನ್; ಹೇಗಂತೀರಾ?

Trainee Doctor: ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಮಹಿಳೆಯು ಅಧ್ಯಾಯನ ಮಾಡುತ್ತಿದ್ದರು. ಇದೇ ವೇಳೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಶುಕ್ರವಾರ ಬೆಳಗ್ಗೆ ಮಹಿಳೆಯ ಶವವು ಪತ್ತೆಯಾಗಿದೆ. ಮರಣೋತ್ತರ ವರದಿ ಬಳಿಕ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಬಯಲಾಗಿದೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಆದರೆ, ಈ ಕೊಲೆಯ ಆರೋಪಿಯನ್ನು ಬಂಧಿಸಲು ಒಂದು ಬ್ಲ್ಯೂಟೂತ್‌ ಹೆಡ್‌ಫೋನ್‌ ಎಂದರೆ ನಂಬಲೇಬೇಕು.

VISTARANEWS.COM


on

Trainee Doctor
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೋಲ್ಕೊತಾ: ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕೊತಾ ಸರ್ಕಾರಿ ಆಸ್ಪತ್ರೆಯಲ್ಲಿ ಟ್ರೈನಿ ಮಹಿಳಾ ವೈದ್ಯೆಯ (Kolkata Trainee Doctor) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಗೆದಷ್ಟೂ ಸ್ಫೋಟಕ ಮಾಹಿತಿ ಲಭ್ಯವಾಗುತ್ತಿದೆ. ಮಹಿಳಾ ವೈದ್ಯೆಯ ಹತ್ಯೆಗೂ ಮುನ್ನವೇ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು ಎಂಬ ಮಾಹಿತಿಯು ಮರಣೋತ್ತರ ಪರೀಕ್ಷೆ ವರದಿಯಲ್ಲಿ (Post Mortem Report) ಬಹಿರಂಗವಾಗಿದೆ. ಇದರ ಬೆನ್ನಲ್ಲೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಈ ಆರೋಪಿಯ ಬಂಧನಕ್ಕೆ ಕಾರಣವಾಗಿದ್ದು ಒಂದು ಬ್ಲ್ಯೂಟೂತ್‌ ಹೆಡ್‌ಸೆಟ್‌ ಎಂಬುದು ಗಮನಾರ್ಹ ಸಂಗತಿಯಾಗಿದೆ.

ದ್ವಿತೀಯ ವರ್ಷದ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದ 31 ವರ್ಷದ ಮಹಿಳೆಯು ಕಳೆದ ಗುರುವಾರ (ಆಗಸ್ಟ್‌ 8) ಆರ್‌ ಕೆ ಕರ್‌ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಅಧ್ಯಯನ ಮಾಡಲು ಹೋಗಿದ್ದ ಹತ್ಯೆಗೀಡಾಗಿದ್ದರು. ಶುಕ್ರವಾರ ಬೆಳಗ್ಗೆ ಮಹಿಳಾ ವೈದ್ಯೆಯ ಶವವು ಅರೆಬೆತ್ತಲೆ ಪತ್ತೆಯಾಗಿದೆ. ಶವ ಪತ್ತೆಯಾದ ಜಾಗದಲ್ಲಿ ಬ್ಲ್ಯೂಟೂತ್‌ ಹೆಡ್‌ಫೋನ್‌ ಒಂದು ಪತ್ತೆಯಾಗಿದ್ದು, ಅದರ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿಯನ್ನು ಬಂಧಿಸಿದ್ದು ಹೇಗೆ?

ಕೊಲೆ ಪ್ರಕರಣ ಬಯಲಾದ ಬಳಿಕ ಪೊಲೀಸರು ಎಲ್ಲ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಕೊಲೆ ನಡೆದ ಸೆಮಿನಾರ್‌ ಹಾಲ್‌ ಬಳಿಯಲ್ಲಿ ಸಂಜಯ್‌ ರಾಯ್‌ ಎಂಬ ಆರೋಪಿಯು ಅದೇ ರಾತ್ರಿ ಸಂಶಯಾಸ್ಪದವಾಗಿ ಓಡಾಡಿದ್ದಾನೆ. ಅಲ್ಲದೆ, ಶುಕ್ರವಾರ ಬೆಳಗಿನ ಜಾವ ಆಸ್ಪತ್ರೆಯಿಂದ ಹೊರಹೋಗಿದ್ದಾರೆ. ಇದಾದ ಬಳಿಕ ಶಂಕಿತ ಆರೋಪಿಗಳ ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೊಬೈಲ್‌ಗಳನ್ನು ವಶಪಡಿಸಿಕೊಂಡು, ಆ ಬ್ಲ್ಯೂಟೂತ್‌ ಹೆಡ್‌ಫೋನ್‌ ಜತೆ ಪೇರ್‌ (Pair) ಮಾಡಿದ್ದಾರೆ. ಆಗ ಸಂಜಯ್‌ ರಾಯ್‌ನ ಮೊಬೈಲ್‌ ಹೆಡ್‌ಫೋನ್‌ಗೆ ಕನೆಕ್ಟ್‌ ಆಗಿದೆ.

“ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಮಹಿಳೆಯು ಅಧ್ಯಾಯನ ಮಾಡುತ್ತಿದ್ದರು. ಇದೇ ವೇಳೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಶುಕ್ರವಾರ ಬೆಳಗ್ಗೆ ಮಹಿಳೆಯ ಶವವು ಪತ್ತೆಯಾಗಿದೆ. ಮರಣೋತ್ತರ ವರದಿ ಬಳಿಕ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಆರೋಪಿ ವಿರುದ್ಧ ಕೊಲೆ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ” ಎಂದು ಕೋಲ್ಕೊತಾ ಪೊಲೀಸ್‌ ಆಯುಕ್ತ ವಿನೀತ್‌ ಕುಮಾರ್‌ ಗೋಯಲ್‌ ಈಗಾಗಲೇ ತಿಳಿಸಿದ್ದಾರೆ.

ಇದನ್ನೂ ಓದಿ: Murder Case : ಬೆಂಗಳೂರಲ್ಲಿ ಗಂಡ-ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯ; ಬಾಳಸಂಗಾತಿ ಈಗ ಕೊಲೆಗಾರ್ತಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Natwar Singh: ವಿದೇಶಾಂಗ ವ್ಯವಹಾರಗಳ ಖಾತೆ ಮಾಜಿ ಸಚಿವ ನಟ್ವರ್‌ ಸಿಂಗ್‌ ನಿಧನ; ಗಣ್ಯರ ಸಂತಾಪ

Natwar Singh: ಸುದೀರ್ಘ ಅವಧಿಯಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ (Medanta Hospital) ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ನಟ್ವರ್‌ ಸಿಂಗ್‌ ಅವರು ಹಲವು ದಿನಗಳಿಂದಲೂ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು.

VISTARANEWS.COM


on

natwar singh
Koo

ಗುರುಗ್ರಾಮ: ಕೇಂದ್ರದ ಮಾಜಿ ವಿದೇಶಾಂಗ ಸಚಿವ, ಕಾಂಗ್ರೆಸ್‌ ಹಿರಿಯ ನಾಯಕ ಕೆ. ನಟ್ವರ್‌ ಸಿಂಗ್‌ (Natwar Singh) (95) ಅವರು ನಿಧನರಾಗಿದ್ದಾರೆ. ಸುದೀರ್ಘ ಅವಧಿಯಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ (Medanta Hospital) ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ನಟ್ವರ್‌ ಸಿಂಗ್‌ ಅವರು ಹಲವು ದಿನಗಳಿಂದಲೂ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಜೀವನದ ಕೊನೆಯ ಕ್ಷಣಗಳಲ್ಲಿ ಪುತ್ರ, ಶಾಸಕರೂ ಆಗಿರುವ ಜಗತ್‌ ಸಿಂಗ್‌ ಸೇರಿ ಹಲವು ಕುಟುಂಬಸ್ಥರು ಇದ್ದರು ಎಂದು ತಿಳಿದುಬಂದಿದೆ.

ಭಾರತೀಯ ವಿದೇಶಾಂಗ ಸೇವೆಗಳ ಅಧಿಕಾರಿಯಾಗಿ ಭಾರತದ ರಾಜತಾಂತ್ರಿಕತೆಗೆ ಅಪಾರ ಕೊಡುಗೆ ನೀಡಿದ ಅವರು ವಿದೇಶಾಂಗ ವ್ಯವಹಾರಗಳ ಸಚಿವರಾಗಿಯೂ ಹೆಚ್ಚಿನ ಸೇವೆ ಸಲ್ಲಿಸಿದ್ದಾರೆ. ನಟ್ವರ್‌ ಸಿಂಗ್‌ ಅವರು ಭಾರತ ಹಾಗೂ ಪಾಕಿಸ್ತಾನದ ನಡುವೆ ಸ್ನೇಹ, ಸಂಬಂಧ ಮೂಡಲು ಎರಡೂ ದೇಶಗಳು ಏಕರೂಪದ ವಿದೇಶಾಂಗ ನೀತಿಯನ್ನು ಹೊಂದಿರಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು. ದೇಶಕ್ಕೆ ಹಲವು ರೀತಿಯಲ್ಲಿ ಸೇವೆ ಸಲ್ಲಿಸಿದ ನಟ್ವರ್‌ ಸಿಂಗ್‌ ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.

ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಜಗ್ಹೀನಾ ಗ್ರಾಮದಲ್ಲಿ 1929ರ ಮೇ 16ರಂದು ಜನಿಸಿದ ಅವರು ಗೋವಿಂಗ್‌ ಸಿಂಗ್‌ ಅವರ ಪ್ರಯಾಗ್‌ ಕೌರ್‌ ದಂಪತಿಯ ನಾಲ್ಕನೇ ಪುತ್ರ. ಅಜ್ಮೇರ್‌ ಹಾಗೂ ಗ್ವಾಲಿಯರ್‌ನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಮುಗಿಸಿದ ಅವರು, ದೆಹಲಿಯ ಸೇಂಟ್‌ ಸ್ಟೀಫನ್ಸ್‌ ಕಾಲೇಜಿನಲ್ಲಿ ಪದವಿ ಪಡೆದರು. ಕೆಂಬ್ರಿಡ್ಜ್‌ ವಿಶ್ವವಿದ್ಯಾಲಯದಲ್ಲಿ ಅವರು ಉನ್ನತ ಶಿಕ್ಷಣ ಪಡೆದರು.

ವಿದೇಶಾಂಗ ಸೇವೆಗಳಲ್ಲಿ ಅತೀವ ಆಸಕ್ತಿ ಹೊಂದಿದ್ದ ಅವರು 1953ರಲ್ಲಿ ಭಾರತೀಯ ವಿದೇಶಾಂಗ ಸೇವೆ (IFS) ಸೇರಿದರು. ಚೀನಾ, ನ್ಯೂಯಾರ್ಕ್‌, ಪೋಲ್ಯಾಂಡ್‌, ಇಂಗ್ಲೆಂಡ್‌, ಪಾಕಿಸ್ತಾನ, ಜಮೈಕಾ ಹಾಗೂ ಜಂಬಿಯಾದಲ್ಲಿ ಅವರು ಭಾರತದ ಪರವಾಗಿ ಹಲವು ರೀತಿಯಲ್ಲಿ ಕಾರ್ಯನಿರ್ವಹಿಸಿದರು. 1984ರಲ್ಲಿ ಐಎಫ್‌ಎಸ್‌ ತೊರೆದ ಅವರು ಕಾಂಗ್ರೆಸ್‌ ಸೇರಿದರು. ಇದೇ ವರ್ಷ ಲೋಕಸಭೆ ಪ್ರವೇಶಿಸಿದ ಅವರು 1986ರಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆ ಸಹಾಯಕ ಸಚಿವರಾದರು.

1991ರಲ್ಲಿ ಕಾಂಗ್ರೆಸ್‌ ತೊರೆದ ಅವರು ಎನ್‌.ಡಿ.ತಿವಾರಿ ಹಾಗೂ ಅರ್ಜುನ್‌ ಸಿಂಗ್‌ ಅವರ ಜತೆಗೂಡಿ ಕಾಂಗ್ರೆಸ್‌ ತೊರೆದು, ಆಲ್‌ ಇಂಡಿಯಾ ಇಂದಿರಾ ಕಾಂಗ್ರೆಸ್‌ ಎಂಬ ಪಕ್ಷ ಸ್ಥಾಪಿಸಿದರು. 1998ರಲ್ಲಿ ಕಾಂಗ್ರೆಸ್‌ಗೆ ಮರಳಿದ ಅವರು 1998ರಲ್ಲಿ ಭರತ್‌ಪುರ ಲೋಕಸಭೆ ಕ್ಷೇತ್ರದಲ್ಲಿ ಗೆದ್ದು ಸಂಸತ್‌ ಪ್ರವೇಶಿಸಿದರು. 2002ರಲ್ಲಿ ರಾಜ್ಯಸಭೆ ಪ್ರವೇಶಿಸಿದ ಅವರು 2004ರಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರಾದರು.

ಇದನ್ನೂ ಓದಿ: Yamini Krishnamurthy: ಪದ್ಮವಿಭೂಷಣ ಪುರಸ್ಕೃತ ಭರತನಾಟ್ಯ ಕಲಾವಿದೆ ಯಾಮಿನಿ ಕೃಷ್ಣಮೂರ್ತಿ ಇನ್ನಿಲ್ಲ

Continue Reading

ಪ್ರಮುಖ ಸುದ್ದಿ

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾರತದ ಸ್ಪರ್ಧಿಗಳ ಹೋರಾಟ ಮುಕ್ತಾಯ; ಈ ಬಾರಿ ಆರು ಪದಕಗಳು ಮಾತ್ರ

Paris Olympics 2024: ಈ ಬಾರಿ ಶೂಟಿಂಗ್​ನಲ್ಲಿ ಮನು ಭಾಕರ್ 2 ಕಂಚು ಗೆದ್ದರೆ ಅವರ ಜತೆಗೆ ಸರಬ್ಜೋತ್​ ಸಿಂಗ್​ ಕೂಡ ಕಂಚಿನ ಹಾರ ಹಾಕಿಸಿಕೊಂಡಿದ್ದರು. ನಂತರದ ಸ್ವಪ್ನಿಲ್ ಕುಸಾಳೆ ಶೂಟಿಂಗ್​ನಲ್ಲಿ ಪದಕವೊಂದರನ್ನು ತಂದಿದ್ದರು. ಹೀಗಾಗಿ ಶೂಟಿಂಗ್​ಗೆ 3 ಪದಕ ಲಭಿಸಿತ್ತು. ಹಾಕಿ ತಂಡ ಕಂಚಿನ ಪದಕ ಗೆದ್ದಿದ್ದರೆ ಕುಸ್ತಿಯಲ್ಲಿ ಅಮನ್ ಸೆಹ್ರಾವತ್​ ಕಂಚು ಗೆದ್ದುಕೊಂಡಿದ್ದರು. ನೀರಜ್ ಚೋಪ್ರಾ ಜಾವೆಲಿನ್​ನಲ್ಲಿ ಒಂದು ಬೆಳ್ಳಿ ತಂದುಕೊಟ್ಟಿದ್ದಾರೆ.

VISTARANEWS.COM


on

Paris Olympics 2024
Koo

ಬೆಂಗಳೂರು: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ (Paris Olympics 2024) ಶನಿವಾರ ರಾತ್ರಿಯ ವೇಳೆಗೆ ಭಾರತದ ಸ್ಪರ್ಧಿಗಳ ಹೋರಾಟಗಳು ಅಂತ್ಯಗೊಂಡಿದೆ. ಭಾರತದ ಅದಿತಿ ಅಶೋಕ್ ಮತ್ತು ದೀಕ್ಷಾ ದಾಗರ್ ಮಹಿಳಾ ಗಾಲ್ಫ್ ಸ್ಪರ್ಧೆಯಲ್ಲಿ ಕ್ರಮವಾಗಿ ಟಿ 29 ಮತ್ತು ಟಿ 49 ಅನ್ನು ಮುಗಿಸುವ ಮೂಲಕ ಭಾರತದ ಅಭಿಯಾನ ಕೊನೆಗೊಂಡಿತು. ಭಾರತವು ಪ್ಯಾರಿಸ್ 2024 ರಲ್ಲಿ ಗಾಲ್ಫ್​​ನಲ್ಲಿ ಪದಕ ಪಡೆಯದೆ ಮಗಿಸಿತು. ಹಿಂದಿನ ವಾರ ಪುರುಷರ ವಿಭಾಗದಲ್ಲಿ ಶುಭಂಕರ್ ಶರ್ಮಾ ಮತ್ತು ಗಗನ್ಜೀತ್ ಭುಲ್ಲರ್ ಕ್ರಮವಾಗಿ ಟಿ 40 ಮತ್ತು ಟಿ 45 ಸ್ಥಾನಗಳನ್ನು ಪಡೆದಿದ್ದರು. ಶನಿವಾರ ಮಧ್ಯಾಹ್ನ ನಡೆದ 78 ಕೆ.ಜಿ ವಿಭಾಗದಲ್ಲಿ ಮಹಿಳೆಯ ಕುಸ್ತಿಯಲ್ಲಿ ರಿತಿಕಾ ಹೂಡಾ ಕ್ವಾರ್ಟರ್​ಫೈನಲ್​ನಲ್ಲಿ ಸೋತಿದ್ದರು. ಆದಾಗ್ಯೂ ಅವರಿಗೆ ರೆಪೆಚೇಜ್ ಅವಕಾಶವೊಂದಿತ್ತು. ಆದರೆ ಅವರನ್ನು ಸೋಲಿಸಿದ ಕಿರ್ಗಿಸ್ತಾನದ ಪ್ರತಿಸ್ಪರ್ಧಿ ಸೆಮಿ ಫೈನಲ್​ನಲ್ಲಿ ಸೋತಿದ್ದಾರೆ. (ಒಂದು ವೇಳೆ ಅವರು ಫೈನಲ್​ಗೇರಿ ಚಿನ್ನ ಗೆದ್ದಿದ್ದರೆ ರಿತಿಕಾಗೆ ಕಂಚಿನ ಪದಕದ ಹೊರಾಟಕ್ಕೆ ಅವಕಾಶವಿತ್ತು). ರೀತಿಕಾ ಸೋತ ನಂತರ, ಭಾರತದ ಪ್ಯಾರಿಸ್ ಒಲಿಂಪಿಕ್ಸ್ ಅಭಿಯಾನವು ಇಲ್ಲಿಯವರೆಗೆ 6 ಪದಕಗಳೊಂದಿಗೆ ಕೊನೆಗೊಂಡಿದೆ.

ಹಿಂದಿನ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಭಾರತ 7 ಪದಕ ಗೆದ್ದುಕೊಂಡಿತ್ತು. ಈ ಬಾರಿ ಶೂಟಿಂಗ್​ನಲ್ಲಿ ಮನು ಭಾಕರ್ 2 ಕಂಚು ಗೆದ್ದರೆ ಅವರ ಜತೆಗೆ ಸರಬ್ಜೋತ್​ ಸಿಂಗ್​ ಕೂಡ ಕಂಚಿನ ಹಾರ ಹಾಕಿಸಿಕೊಂಡಿದ್ದರು. ನಂತರದ ಸ್ವಪ್ನಿಲ್ ಕುಸಾಳೆ ಶೂಟಿಂಗ್​ನಲ್ಲಿ ಪದಕವೊಂದರನ್ನು ತಂದಿದ್ದರು. ಹೀಗಾಗಿ ಶೂಟಿಂಗ್​ಗೆ 3 ಪದಕ ಲಭಿಸಿತ್ತು. ಹಾಕಿ ತಂಡ ಕಂಚಿನ ಪದಕ ಗೆದ್ದಿದ್ದರೆ ಕುಸ್ತಿಯಲ್ಲಿ ಅಮನ್ ಸೆಹ್ರಾವತ್​ ಕಂಚು ಗೆದ್ದುಕೊಂಡಿದ್ದರು. ನೀರಜ್ ಚೋಪ್ರಾ ಜಾವೆಲಿನ್​ನಲ್ಲಿ ಒಂದು ಬೆಳ್ಳಿ ತಂದುಕೊಟ್ಟಿದ್ದಾರೆ. ಹಿಂದಿನ ಬಾರಿ ನೀರಜ್​ ಚಿನ್ನ ಗೆದ್ದಿದ್ದ ಕಾರಣ ಸಂಭ್ರಮ ಹೆಚ್ಚಿತ್ತು. ಈ ಬಾರಿ ಭಾರತಕ್ಕೆ ಸಂಭ್ರಮಿಸಲು ಹೆಚ್ಚು ಅವಕಾಶಗಳು ಇಲ್ಲ. ಅದೇ ರೀತಿ 70ನೇ ಸ್ಥಾನ ಪಡೆಯುವ ಮೂಲಕ ಕಳೆದ ಬಾರಿಗಿಂತ ಹಿನ್ನಡೆ ಅನುಭವಿಸಿದೆ. ಆ ಬಾರಿ 64ನೇ ಸ್ಥಾನ ಪಡೆದುಕೊಂಡಿತ್ತು.

ಗಾಲ್ಫ್​​ನಲ್ಲಿ ಏನಾಯಿತು?

ಭಾರತದ ಅಗ್ರ ಶ್ರೇಯಾಂಕಿತ ಮಹಿಳಾ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಗುರುವಾರ ಎರಡನೇ ಸುತ್ತಿನ ನಂತರ ಟಿ 14 ನೇ ಸ್ಥಾನ ಪಡೆದರು. ಆದಾಗ್ಯೂ, ಸವಾಲಿನ ಮೂರನೇ ಸುತ್ತಿನಲ್ಲಿ ಅವರು ಟಿ 40 ಗೆ 26 ಸ್ಥಾನಗಳನ್ನು ಕಳೆದುಕೊಂಡರು. ಅವರು ಶನಿವಾರ 4-ಅಂಡರ್ 68 ನೊಂದಿಗೆ ಬಲವಾದ ಪುನರಾಗಮನ ಮಾಡಿದರು, ತಮ್ಮ ಅಂತಿಮ ಸ್ಥಾನವನ್ನು 11 ಸ್ಥಾನಗಳಿಂದ ಸುಧಾರಿಸಿದರು, ಒಟ್ಟು 2 ಓವರ್ 290 ಅಂಕಗಳೊಂದಿಗೆ ಮುಕ್ತಾಯಗೊಳಿಸಿದರು. ಗಾಲ್ಫ್ ನ್ಯಾಷನಲ್ಸ್​ನಲ್ಲಿ ಸ್ಪರ್ಧಿಸಿದ್ದ ಅದಿತಿ ಅಂತಿಮ ದಿನದಂದು ಏಳು ಬರ್ಡಿಗಳು ಮತ್ತು ಮೂರು ಬೋಗಿಗಳನ್ನು ದಾಖಲಿಸಿದರು.

ದೀಕ್ಷಾ ದಾಗರ್ ಶನಿವಾರ 6 ರಲ್ಲಿ 78 ರನ್ ಗಳಿಸುವ ಮೂಲಕ ಟಿ 49ಕ್ಕೆ ಅಂದರೆ ಏಳು ಸ್ಥಾನಗಳನ್ನು ಕಳೆದುಕೊಂಡರು. 2021 ರ ಕಿವುಡರ ಚಾಂಪಿಯನ್ ಮೊದಲ ದಿನದ ನಂತರ ಟಿ 7 ಆಗಿ ಪ್ರಬಲವಾಗಿ ಪ್ರಾರಂಭಿಸಿದರು. ಆದರೆ ನಂತರದ ಸುತ್ತುಗಳಲ್ಲಿ ಅವರ ಪ್ರದರ್ಶನವು ಕುಸಿಯಿತು.

ಅದಿತಿ ಮತ್ತು ದೀಕ್ಷಾ ಇಬ್ಬರೂ ಟೋಕಿಯೊ 2020 ಒಲಿಂಪಿಕ್ಸ್​ನಲ್ಲಿ ಭಾರತದ ತಂಡದ ಭಾಗವಾಗಿದ್ದರು. ಒಲಿಂಪಿಕ್ ಗಾಲ್ಫ್​ನಲ್ಲಿ ಭಾರತದ ಅತ್ಯುತ್ತಮ ಫಲಿತಾಂಶವನ್ನು ಸೂಚಿಸುವ ಮೂಲಕ ಅದಿತಿ ನಾಲ್ಕನೇ ಸ್ಥಾನವನ್ನು ಗಳಿಸುವ ಮೂಲಕ ಪದಕವನ್ನು ಕಳೆದುಕೊಂಡಿದ್ದರೆ, ದೀಕ್ಷಾ ಟಿ 50 ನಲ್ಲಿ ಸ್ಥಾನ ಪಡೆದರು. ಪ್ಯಾರಿಸ್ 2024 ರಲ್ಲಿ ನಡೆದ ಮಹಿಳಾ ಗಾಲ್ಫ್ ಸ್ಪರ್ಧೆಯಲ್ಲಿ 60 ಸ್ಪರ್ಧಿಗಳು ಭಾಗವಹಿಸಿದ್ದರು. ಅವರು ನಾಲ್ಕು ದಿನಗಳಲ್ಲಿ ನಾಲ್ಕು ಸುತ್ತುಗಳನ್ನು ಆಡಿದರು, ಪ್ರತಿ ಸುತ್ತು 18 ಹೋಲ್​ಗಳನ್ನು ಒಳಗೊಂಡಿದೆ.

ಇದನ್ನೂ ಓದಿ: Narendra Modi Stadium : ಗುಜರಾತ್​ಗೆ ಸಡ್ಡು; ತಮಿಳುನಾಡಿನಲ್ಲಿ ನಿರ್ಮಾಣವಾಗಲಿದೆ ನರೇಂದ್ರ ಮೋದಿ ಸ್ಟೇಡಿಯಮ್​​ಗಿಂತ ದೊಡ್ಡ ಕ್ರಿಕೆಟ್​ ಸೌಲಭ್ಯ

ಈ ಹಿಂದೆ ರಿಯೋ 2016 ರಲ್ಲಿ ಬೆಳ್ಳಿ ಮತ್ತು ಟೋಕಿಯೊ 2020 ರಲ್ಲಿ ಕಂಚು ಗೆದ್ದಿದ್ದ ನ್ಯೂಜಿಲೆಂಡ್​​ನ ಲಿಡಿಯಾ ಕೋ, ಪ್ಯಾರಿಸ್ 2024 ರಲ್ಲಿ 278 ಅಂಕಗಳೊಂದಿಗೆ ಚಿನ್ನದ ಪದಕವನ್ನು ಗೆದ್ದರು. ಜರ್ಮನಿಯ ಎಸ್ತರ್ ಹೆನ್ಸೆಲಿಟ್ ಬೆಳ್ಳಿ ಗೆದ್ದರೆ, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಕ್ಸಿಯು ಲಿನ್ 281 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದರು.

Continue Reading

ವಾಣಿಜ್ಯ

Hindenburg: ಅದಾನಿ ವಿದೇಶಿ ಕಂಪನಿಯಲ್ಲಿ ಸೆಬಿ ಅಧ್ಯಕ್ಷೆಯದ್ದೂ ಪಾಲು; ಹಿಂಡನ್‌ಬರ್ಗ್‌ ಮತ್ತೊಂದು ಸ್ಫೋಟಕ ವರದಿ

Hindenburg: ಅಮೆರಿಕದ ಹಿಂಡನ್‌ಬರ್ಗ್‌ ಸಂಸ್ಥೆಯು 2023ರ ಜನವರಿಯಲ್ಲಿ ಗೌತಮ್‌ ಅದಾನಿ ನೇತೃತ್ವದ ಅದಾನಿ ಗ್ರೂಪ್‌ ಅಕ್ರಮ ಎಸಗಿದೆ ಎಂದು ವರದಿ ಪ್ರಕಟಿಸಿ ಸಂಚಲನ ಸೃಷಿಸಿದ ಬಳಿಕ ಮತ್ತೊಂದು ಸ್ಫೋಟಕ ವರದಿ ಬಹಿರಂಗಪಡಿಸಿದೆ. ಗೌತಮ್‌ ಅದಾನಿ ಕಂಪನಿ ಹಗರಣದಲ್ಲಿ ಸೆಬಿ ಮುಖ್ಯಸ್ಥೆಯೇ ಬಾಗಿಯಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

VISTARANEWS.COM


on

Hindenburg
Koo

ನವದೆಹಲಿ: ಗೌತಮ್‌ ಅದಾನಿ (Gautam Adani)  ನೇತೃತ್ವದ ಅದಾನಿ ಗ್ರೂಪ್‌ ಅಕ್ರಮ ಎಸಗಿದೆ ಎಂದು ಅಮೆರಿಕದ ಹಿಂಡನ್‌ಬರ್ಗ್‌ (Hindenburg) ಸಂಸ್ಥೆಯು 2023ರ ಜನವರಿಯಲ್ಲಿ ವರದಿ ಪ್ರಕಟಿಸಿದ ದೇಶಾದ್ಯಂತ ಸಂಚಲ ಮೂಡಿಸಿದ ಬೆನ್ನಲ್ಲೇ ಹಿಂಡನ್‌ಬರ್ಗ್‌ ಮತ್ತೊಂದು ಸ್ಫೋಟಕ ವರದಿ ಬಹಿರಂಗಪಡಿಸಿದೆ. ವಿದೇಶದಲ್ಲಿ ಗೌತಮ್‌ ಅದಾನಿ ಹೊಂದಿರುವ ಕಂಪನಿಗಳಲ್ಲಿ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ (SEBI) ಮುಖ್ಯಸ್ಥೆ ಮಾಧಬಿ ಪುರಿ ಬುಚ್‌ ಅವರ ಪಾಲಿದೆ ಎಂದು ಸ್ಫೋಟಕ ವರದಿ ಬಹಿರಂಗಪಡಿಸಿದೆ.

ಅದಾನಿ ಗ್ರೂಪ್‌ ವಿದೇಶದಲ್ಲಿ ಹೊಂದಿರುವ ಕಂಪನಿಗಳ ಹಗರಣಗಳಲ್ಲಿ ಸೆಬಿ ಅಧ್ಯಕ್ಷೆಯಾಗಿರುವ ಮಾಧಬಿ ಪುರಿ ಬುಚ್‌ ಹಾಗೂ ಅವರ ಪತಿ ಧವಳ್‌ ಬುಚ್‌ ಅವರ ಪಾಲೂ ಇದೆ. ಕಂಪನಿಗಳಲ್ಲೂ ಇವರು ಷೇರುಗಳನ್ನು ಹೊಂದಿದ್ದಾರೆ. ವಿದೇಶದಲ್ಲಿ ಕಂಪನಿಗಳಿಂದ ಅಕ್ರಮವಾಗಿ ಪಡೆದುಕೊಂಡ ಹಣದಲ್ಲಿ ಇವರದ್ದೂ ಪಾಲಿದೆ. ಬರ್ಮುಡಾ ಹಾಗೂ ಮಾರಿಷಸ್‌ ಫಂಡ್‌ಗಳಲ್ಲಿ ಮಾಧಬಿ ಪುರಿ ಬುಚ್‌ ಹಾಗೂ ಧವಳ್‌ ಬುಚ್‌ ಅವರ ಪಾಲು ಇದೆ ಎಂಬುದಾಗಿ ಹಿಂಡನ್‌ಬರ್ಗ್‌ ಸಂಸ್ಥೆಯು ಸ್ಫೋಟಕ ವರದಿ ಬಯಲು ಮಾಡಿದೆ.

ಸೆಬಿ ಮುಖ್ಯಸ್ಥೆಯಾಗಿರುವ ಮಾಧಬಿ ಪುರಿ ಬುಚ್‌ ಅವರು 2015ರಿಂದಲೂ ಗೌತಮ್‌ ಅದಾನಿ ಕಂಪನಿಗಳಲ್ಲಿ ತಮ್ಮ ವೈಯಕ್ತಿಕ ಹಣವನ್ನು ಹೂಡಿಕೆ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಗೌತಮ್‌ ಅದಾನಿ ಸಹೋದರ ವಿನೋದ್‌ ಅದಾನಿ ಅವರು ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ವಿದೇಶಿ ಕಂಪನಿಗಳಿಂದ ಸೈಫೊನಿಂಗ್‌ (ಕಂಪನಿಗಳಿಂದ ಅಕ್ರಮವಾಗಿ ಹಣ ಪಡೆಯುವುದು) ಮೂಲಕ ಹಣ ಪಡೆದಿದ್ದಾರೆ. ಇದರಲ್ಲಿ ಮಾಧಬಿ ಪುರಿ ಬುಚ್‌ ಅವರ ಪಾಲೂ ಇದೆ ಎಂದು ವರದಿ ಉಲ್ಲೇಖಿಸಿದೆ.

2023ರ ಹಿಂಡನ್‌ಬರ್ಗ್‌ ವರದಿಯಲ್ಲಿ ಏನಿತ್ತು?

ಗೌತಮ್‌ ಅದಾನಿ ನೇತೃತ್ವದ ಅದಾನಿ ಗ್ರೂಪ್‌ ಅಕ್ರಮ ಎಸಗಿದೆ ಎಂದು ಅಮೆರಿಕದ ಹಿಂಡನ್‌ಬರ್ಗ್‌ ಸಂಸ್ಥೆಯು 2023ರ ಜನವರಿಯಲ್ಲಿ ಪ್ರಕಟಿಸಿದ ವರದಿಯು ದೇಶದಲ್ಲಿ ವ್ಯಾಪಕ ಚರ್ಚೆ ಹುಟ್ಟು ಹಾಕಿತ್ತು. “ಹೂಡಿಕೆದಾರರಿಗೆ ಅದಾನಿ ಗ್ರೂಪ್‌ ವಂಚನೆ ಮಾಡದೆ. ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್‌ ಷೇರು ಮೌಲ್ಯಗಳನ್ನು ಹೆಚ್ಚು ತೋರಿಸಿರುವುದು ವಂಚನೆಯಾಗಿದೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದಾದ ಬಳಿಕ ಅದಾನಿ ಗ್ರೂಪ್‌ ಷೇರು ಮೌಲ್ಯವು ದಿಢೀರನೆ ಕುಸಿದು ಭಾರಿ ನಷ್ಟವಾಗಿತ್ತು. ಅಲ್ಲದೆ ಅದಾನಿ ಗ್ರೂಪ್‌ ದಿವಾಳಿಯಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು.

ಹಿಂಡನ್‌ಬರ್ಗ್‌ ವರದಿ ಕುರಿತು ತನಿಖೆಯಾಗಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಹಲವರು ಮೊರೆ ಹೋಗಿದ್ದರು. ಅಲ್ಲದೆ ಅದಾನಿ ಗ್ರೂಪ್‌ ಅಕ್ರಮ ಪತ್ತೆಹಚ್ಚುವಲ್ಲಿ ಸೆಬಿ ವಿಫಲವಾಗಿದೆ. ಹಾಗಾಗಿ ತನಿಖೆಗೆ ಎಸ್‌ಐಟಿ ರಚಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಹಾಗಾಗಿ ಸರ್ವೋಚ್ಚ ನ್ಯಾಯಾಲಯವು 2023ರ ಮಾರ್ಚ್‌ನಲ್ಲಿ ಸೆಬಿ ತನಿಖೆ ಮೇಲೆ ನಿಗಾ ಇರಿಸಲು, ತನಿಖೆಯಲ್ಲಿ ದೋಷ ಪತ್ತೆಹಚ್ಚಲು ಆರು ಸದಸ್ಯರ ತನಿಖಾ ಸಮಿತಿ ರಚಿಸಿತ್ತು. ಇದಾದ ಎರಡು ತಿಂಗಳ ಬಳಿಕ ಸೆಬಿಯು ಸುಪ್ರೀಂ ಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಿತ್ತು. “ಅದಾನಿ ಗ್ರೂಪ್‌ ವಂಚನೆ ಮಾಡಿದೆ ಎಂಬುದನ್ನು ಸಾಬೀತುಪಡಿಸಲು ಈ ಹಂತದಲ್ಲಿ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ” ಎಂದು ಉಲ್ಲೇಖಿಸಿತ್ತು.

ಅದಾನಿ ಗ್ರೂಪ್‌, ವಿದೇಶಗಳಲ್ಲಿ ನಕಲಿ ಕಂಪನಿಗಳ ಮೂಲಕ ತನ್ನ ಕಂಪನಿಗಳ ಷೇರು ದರವನ್ನು ಕೃತಕವಾಗಿ ಏರಿಸಿದೆ ಎಂದು ಅಮೆರಿಕ ಮೂಲದ ಶಾರ್ಟ್‌ ಸೆಲ್ಲರ್ ಹಿಂಡೆನ್‌ ಬರ್ಗ್‌ ತನ್ನ ವರದಿಯಲ್ಲಿ ಆರೋಪಿಸಿತ್ತು. ಆದರೆ ಅದಾನಿ ಗ್ರೂಪ್‌ ಮಾರುಕಟ್ಟೆ ನಿಯಮಗಳನ್ನು ಉಲ್ಲಂಘಿಸಿರುವುದು ಹಾಗೂ ಮಾರುಕಟ್ಟೆ ನಿಯಂತ್ರಜ ಸೆಬಿ ಅದನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿಲ್ಲ ಎಂದು ಸಮಿತಿಯ ವರದಿ ತಿಳಿಸಿದೆ.

ಗೌತಮ್‌ ಅದಾನಿ-ಹಿಂಡನ್‌ಬರ್ಗ್‌ ವರದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಬಿ ನಡೆಸುತ್ತಿರುವ ತನಿಖೆಯ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿತ್ತು. “ಸೆಬಿಯು ತನಿಖೆ ಹಾಗೂ ನಿಯಂತ್ರಕ ಸಂಸ್ಥೆಯಾಗಿರುವುದರಿಂದ ಅದರ ತನಿಖೆಯಲ್ಲಿ ಸುಪ್ರೀಂ ಕೋರ್ಟ್‌ ಹಸ್ತಕ್ಷೇಪ ಮಾಡಲು ಆಗುವುದಿಲ್ಲ” ಎಂದು ಸುಪ್ರೀಂ ಕೋರ್ಟ್‌ ತಿಳಿಸಿತ್ತು. ಇದರಿಂದಾಗಿ ಗೌತಮ್‌ ಅದಾನಿ ನೇತೃತ್ವದ ಗ್ರೂಪ್‌ಗೆ ರಿಲೀಫ್‌ ಸಿಕ್ಕಿತ್ತು.

ಇದನ್ನೂ ಓದಿ: Gautam Adani: ಅಧಿಕಾರ ತೊರೆದು ನಿವೃತ್ತರಾಗಲಿದ್ದಾರಾ ಗೌತಮ್ ಅದಾನಿ? ಈ ಬಗ್ಗೆ ಅವರು ಹೇಳಿದ್ದೇನು?

Continue Reading

ಪ್ರಮುಖ ಸುದ್ದಿ

Narendra Modi Stadium : ಗುಜರಾತ್​ಗೆ ಸಡ್ಡು; ತಮಿಳುನಾಡಿನಲ್ಲಿ ನಿರ್ಮಾಣವಾಗಲಿದೆ ನರೇಂದ್ರ ಮೋದಿ ಸ್ಟೇಡಿಯಮ್​​ಗಿಂತ ದೊಡ್ಡ ಕ್ರಿಕೆಟ್​ ಸೌಲಭ್ಯ

Narendra Modi Stadium : ಸ್ಟೇಡಿಯಮ್ ನಿರ್ಮಾಣಕ್ಕೆ ಮೂರು ಅಂತಿಗೊಳಿಸಲಾಗಿದೆ. ಸಚಿವರು ಖುದ್ದಾಗಿ ಪರಿಶೀಲನೆ ನಡೆಸಿದ್ದಾರೆ. ಕೊಯಮತ್ತೂರಿನ ಒಂಡಿಪುದೂರ್ ಪ್ರದೇಶವನ್ನು ಈಗ ಹೊಸ ಕ್ರಿಕೆಟ್ ಕ್ರೀಡಾಂಗಣಕ್ಕೆ ಆಯ್ಕೆ ಮಾಡಲಾಗಿದೆ. ಅಂತರರಾಷ್ಟ್ರೀಯ ಸ್ಥಳದ ನಿರ್ಮಾಣಕ್ಕಾಗಿ ವಿವರವಾದ ಯೋಜನಾ ವರದಿ ತಯಾರಿಸಲು ತಮಿಳುನಾಡು ಸರ್ಕಾರ ಟೆಂಡರ್ ನೀಡಿದೆ.

VISTARANEWS.COM


on

Narendra Modi Stadium
Koo

ಬೆಂಗಳೂರು: ಇತ್ತೀಚಿನ ಬೆಳವಣಿಗೆಯೊಂದರ ಪ್ರಕಾರ ತಮಿಳುನಾಡು ರಾಜ್ಯ ಸರ್ಕಾರವು ಕೊಯಮತ್ತೂರಿನಲ್ಲಿ ಅಂತಾರಾಷ್ಟ್ರೀಯ ಸೌಲಭ್ಯಗಳೊಂದಿಗೆ ಹೊಸ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸಲು ಯೋಜನೆ ರೂಪಿಸಿದೆ. . ಇತ್ತೀಚಿನ ಸುದ್ದಿ ವರದಿಗಳ ಪ್ರಕಾರ, ತಮಿಳುನಾಡು ರಾಜ್ಯ ಸರ್ಕಾರವು ದೇಶದ ಅತಿ ಹೆಚ್ಚು ಆಸನಗಳು ಇರುವ ಕ್ರೀಡಾಂಗಣವನ್ನು ನಿರ್ಮಿಸಲು ಯೋಜಿಸುತ್ತಿದೆ. ಇದು ಗುಜರಾತ್​ನ ಅಹಮದಾಬಾದ್ ನಗರದಲ್ಲಿರುವ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸೌಲಭ್ಯವಾಗಿರುವ ನರೇಂದ್ರ ಮೋದಿ ಸ್ಟೇಡಿಯಮ್​ಗಿಂತಲೂ (Narendra Modi Stadium) ದೊಡ್ಡದಾಗಿರಲಿದೆ. ಈ ಮೂಲಕ ಗುಜರಾತ್​ಗೆ ಕ್ರಿಕೆಟ್​ನಲ್ಲಿ ಸಡ್ಡು ಹೊಡೆಯಲು ದಕ್ಷಿಣದ ರಾಜ್ಯ ತಮಿಳುನಾಡು ಮುಂದಾಗಿದೆ.

ಸಂಸತ್ತಿನ ಚುನಾವಣೆಯ ಸಮಯದಲ್ಲಿ ಕೊಯಮತ್ತೂರಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸುವುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಭರವಸೆ ನೀಡಿದ್ದರು ಎಂದು ರಾಜ್ಯ ಕೈಗಾರಿಕಾ ಸಚಿವ ಟಿಆರ್​ಬಿ ರಾಜಾ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ ನಲ್ಲಿ ಮಾಹಿತಿ ನೀಡಿದ್ದರು. ಈ ಪ್ರದೇಶದಲ್ಲಿ ಕ್ರಿಕೆಟ್ ಮೂಲಸೌಕರ್ಯ ಹೆಚ್ಚಿಸಲು ಸರ್ಕಾರ ಬಯಸಿದೆ ಎಂದು ಅವರು ಹೇಳಿದ್ದರು.

ಉದಯನಿಧಿ ಸ್ಟಾಲಿನ್ ಭರವಸೆ

ರಾಜ್ಯ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಅವರು ಹೊಸ ಕ್ರಿಕೆಟ್ ಕ್ರೀಡಾಂಗಣಕ್ಕೆ ಸೂಕ್ತ ಸ್ಥಳವನ್ನು ಕಂಡುಹಿಡಿಯುವಂತೆ ಅಧಿಕಾರಿಗಳಿಗೆ ಹೇಳಿದ್ದಾರೆ. ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದ ನಂತರ ಈ ಕ್ರೀಡಾಂಗಣವು ತಮಿಳುನಾಡಿನ ಎರಡನೇ ಅಂತರರಾಷ್ಟ್ರೀಯ ಗುಣಮಟ್ಟದ ಸ್ಥಳವಾಗಲಿದೆ ಎಂದು ಉದಯನಿಧಿ ಹೇಳಿದ್ದಾರೆ.

ಕ್ರೀಡಾ ಪ್ರೇಮಿಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಕೊಯಮತ್ತೂರಿನಲ್ಲಿ ಅತ್ಯಾಧುನಿಕ ಕ್ರಿಕೆಟ್ ಕ್ರೀಡಾಂಗಣವನ್ನು ಸ್ಥಾಪಿಸಲು ನಾವು ಮುಂದಾಗಿದ್ದೇವೆ. ನಮ್ಮ ಸಚಿವ ಟಿಆರ್​ಬಿ ರಾಜಾ ಅವರು ಹೇಳಿದಂತೆ ಈ ಕ್ರೀಡಾಂಗಣವು ಚೆನ್ನೈನ ಅಪ್ರತಿಮ ಎಂಎಸಿ ಕ್ರೀಡಾಂಗಣದ ನಂತರ ತಮಿಳುನಾಡಿನ ಎರಡನೇ ಅತಿ ದೊಡ್ಡ ಅಂತರರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ತಾಣವಾಗಲಿದೆ. ನಮ್ಮ ಸರ್ಕಾರ ತಮಿಳುನಾಡಿನಲ್ಲಿ ಕ್ರೀಡಾ ಮೂಲಸೌಕರ್ಯಗಳನ್ನು ಹೆಚ್ಚಿಸಲು ಬದ್ಧರಾಗಿದೆ ” ಎಂದು ಬರೆದುಕೊಂಡಿದ್ದಾರೆ.

ಸ್ಟೇಡಿಯಮ್ ನಿರ್ಮಾಣಕ್ಕೆ ಮೂರು ಅಂತಿಗೊಳಿಸಲಾಗಿದೆ. ಸಚಿವರು ಖುದ್ದಾಗಿ ಪರಿಶೀಲನೆ ನಡೆಸಿದ್ದಾರೆ. ಕೊಯಮತ್ತೂರಿನ ಒಂಡಿಪುದೂರ್ ಪ್ರದೇಶವನ್ನು ಈಗ ಹೊಸ ಕ್ರಿಕೆಟ್ ಕ್ರೀಡಾಂಗಣಕ್ಕೆ ಆಯ್ಕೆ ಮಾಡಲಾಗಿದೆ. ಅಂತರರಾಷ್ಟ್ರೀಯ ಸ್ಥಳದ ನಿರ್ಮಾಣಕ್ಕಾಗಿ ವಿವರವಾದ ಯೋಜನಾ ವರದಿ ತಯಾರಿಸಲು ತಮಿಳುನಾಡು ಸರ್ಕಾರ ಟೆಂಡರ್ ನೀಡಿದೆ.

ವಿಶ್ವದಲ್ಲೇ ಅತಿ ಹೆಚ್ಚು ಆಸನ ಸಾಮರ್ಥ್ಯದ ಕ್ರೀಡಾಂಗಣ

ಹೊಸ ಕ್ರಿಕೆಟ್ ಕ್ರೀಡಾಂಗಣವನ್ನು ಕೊಯಮತ್ತೂರು ನಗರದಿಂದ 16 ಕಿ.ಮೀ ದೂರದಲ್ಲಿ ನಿರ್ಮಾಣಗೊಳ್ಳಲಿದೆ. ವಿಐಪಿ ಮತ್ತು ಕಾರ್ಪೊರೇಟ್ ಸೌಲಭ್ಯಗಳು, ಆಟಗಾರರ ಲಾಂಜ್, ಮಾಧ್ಯಮ ಕೇಂದ್ರ, ಸಾರ್ವಜನಿಕ ಕೆಫೆಟೇರಿಯಾಗಳು ಮತ್ತು ರೆಸ್ಟೋರೆಂಟ್​ಗಳು, ವೀಕ್ಷಣಾ ಗ್ಯಾಲರಿಗಳು ಮತ್ತು ಕ್ರಿಕೆಟ್ ವಸ್ತುಸಂಗ್ರಹಾಲಯದಂತಹ ಉನ್ನತ ಶ್ರೇಣಿಯ ಸೌಲಭ್ಯಗಳನ್ನು ಒಳಗೊಂಡಿರಲಿದೆ.

ತಮಿಳುನಾಡು ಚೆನ್ನೈನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಹೊಂದಿದೆ. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ನ ತವರು ಸ್ಥಳವಾದ ಚೆಪಾಕ್ ಭಾರತದ ಎರಡನೇ ಹಳೆಯ ಕ್ರೀಡಾಂಗಣವಾಗಿದೆ. ಅಹ್ಮದಾಬಾದ್​​ನ ನರೇಂದ್ರ ಮೋದಿ ಕ್ರೀಡಾಂಗಣವು ವಿಶ್ವದ ಅತಿದೊಡ್ಡ ಸಾಮರ್ಥ್ಯವಾಗಿದ್ದರೆ, ಮೆಲ್ಬೋರ್ನ್ ಕ್ರಿಕೆಟ್ ಮೈದಾನ (ಎಂಸಿಜಿ) ಆಯಾಮಗಳ ದೃಷ್ಟಿಯಿಂದ ದೊಡ್ಡದಾಗಿದೆ.

ಇದನ್ನೂ ಓದಿ:Paris Olympics 2024 : ವಿನೇಶ್ ಫೋಗಟ್​ ಬೆಳ್ಳಿ ಪದಕದ ಮನವಿ ತೀರ್ಪು ಭಾನುವಾರಕ್ಕೆ ಮುಂದೂಡಿಕೆ

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣ ಮತ್ತು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣವನ್ನು ಹೊಸ ಕ್ರೀಡಾಂಗಣಕ್ಕೆ ಮಾದರಿಗಳಾಗಿ ಇಲಾಖೆ ಶಿಫಾರಸು ಮಾಡಿದೆ. ಆಟಗಾರರು ಮತ್ತು ತರಬೇತುದಾರರಿಗೆ ಸಂಶೋಧನೆ ಮತ್ತು ಪುನರ್ವಸತಿ ಸೌಲಭ್ಯಗಳು, ಉತ್ತಮ ಗುಣಮಟ್ಟದ ಮಾಧ್ಯಮ, ಆಡಳಿತಾತ್ಮಕ ಮತ್ತು ಸಾರ್ವಜನಿಕ ಸೌಲಭ್ಯಗಳು ಸೇರಿದಂತೆ ಸುಧಾರಿತ ವಿನ್ಯಾಸ ಪರಿಕಲ್ಪನೆಗಳನ್ನು ಸಂಯೋಜಿಸುವ ಕೆಲಸವನ್ನು ಬಿಡ್​​ದಾರರಿಗೆ ವಹಿಸಲಾಗಿದೆ.

Continue Reading
Advertisement
natwar singh
ದೇಶ2 hours ago

Natwar Singh: ವಿದೇಶಾಂಗ ವ್ಯವಹಾರಗಳ ಖಾತೆ ಮಾಜಿ ಸಚಿವ ನಟ್ವರ್‌ ಸಿಂಗ್‌ ನಿಧನ; ಗಣ್ಯರ ಸಂತಾಪ

Paris Olympics 2024
ಪ್ರಮುಖ ಸುದ್ದಿ3 hours ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾರತದ ಸ್ಪರ್ಧಿಗಳ ಹೋರಾಟ ಮುಕ್ತಾಯ; ಈ ಬಾರಿ ಆರು ಪದಕಗಳು ಮಾತ್ರ

Hindenburg
ವಾಣಿಜ್ಯ3 hours ago

Hindenburg: ಅದಾನಿ ವಿದೇಶಿ ಕಂಪನಿಯಲ್ಲಿ ಸೆಬಿ ಅಧ್ಯಕ್ಷೆಯದ್ದೂ ಪಾಲು; ಹಿಂಡನ್‌ಬರ್ಗ್‌ ಮತ್ತೊಂದು ಸ್ಫೋಟಕ ವರದಿ

Narendra Modi Stadium
ಪ್ರಮುಖ ಸುದ್ದಿ4 hours ago

Narendra Modi Stadium : ಗುಜರಾತ್​ಗೆ ಸಡ್ಡು; ತಮಿಳುನಾಡಿನಲ್ಲಿ ನಿರ್ಮಾಣವಾಗಲಿದೆ ನರೇಂದ್ರ ಮೋದಿ ಸ್ಟೇಡಿಯಮ್​​ಗಿಂತ ದೊಡ್ಡ ಕ್ರಿಕೆಟ್​ ಸೌಲಭ್ಯ

Tharun Sudhir
ಸಿನಿಮಾ4 hours ago

Tharun Sudhir: ತರುಣ್‌-ಸೋನಲ್‌ಗೆ ಬಿಎಸ್‌ವೈ, ರಮೇಶ್‌ ಅರವಿಂದ್‌ ಸೇರಿ ಗಣ್ಯರಿಂದ ಶುಭಾಶಯ; Video, Photos ಇಲ್ಲಿವೆ

Paris Olympics 2024
ಪ್ರಮುಖ ಸುದ್ದಿ4 hours ago

Paris Olympics 2024 : ವಿನೇಶ್ ಫೋಗಟ್​ ಬೆಳ್ಳಿ ಪದಕದ ಮನವಿ ತೀರ್ಪು ಭಾನುವಾರಕ್ಕೆ ಮುಂದೂಡಿಕೆ

BJP-JDS Padayatra
ಕರ್ನಾಟಕ5 hours ago

BJP-JDS Padayatra: ಪರಿಶಿಷ್ಟ, ಒಬಿಸಿಯವರಿಗೆ ಕಾಂಗ್ರೆಸ್‌ನಿಂದ ಸದಾ ಅಪಮಾನ; ಪ್ರಲ್ಹಾದ್‌ ಜೋಶಿ

Independence Day 2024
ದೇಶ5 hours ago

Independence day 2024: ಮೊದಲ ಸ್ವಾತಂತ್ರ್ಯೋತ್ಸವದಲ್ಲಿ ಗಾಂಧೀಜಿಯೇ ಭಾಗವಹಿಸಲಿಲ್ಲ! ಇಲ್ಲಿವೆ ಸ್ವಾತಂತ್ರ್ಯ ದಿನಾಚರಣೆಯ ಕುತೂಹಲಕರ ಸಂಗತಿಗಳು

Shira News
ತುಮಕೂರು5 hours ago

Shira News: ಶ್ರಾವಣದ ಮೊದಲ ಶನಿವಾರ; ಶಿರಾ ತಾಲೂಕಿನಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ

Jitesh Sharma
ಕ್ರೀಡೆ5 hours ago

Jitesh Sharma : ಟೆಕಿ ಜತೆ ಎಂಗೇಜ್ಮೆಂಟ್​ ಮಾಡಿಕೊಂಡ ಜಿತೇಶ್ ಶರ್ಮಾ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ7 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌