Independence day 2024: ಕೆಂಪು ಕೋಟೆ ಮೇಲೆ ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವದ ಭಾಷಣದ Live ಇಲ್ಲಿ ವೀಕ್ಷಿಸಿ - Vistara News

ದೇಶ

Independence day 2024: ಕೆಂಪು ಕೋಟೆ ಮೇಲೆ ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವದ ಭಾಷಣದ Live ಇಲ್ಲಿ ವೀಕ್ಷಿಸಿ

Independence day 2024:ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ನೇರ ಪ್ರಸಾರ ಕಾರ್ಯಕ್ರಮವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲಾಗುತ್ತದೆ. ವಿಸ್ತಾರ ನ್ಯೂಸ್‌ ಟಿವಿ ಮತ್ತು ವಿಸ್ತಾರ ನ್ಯೂಸ್‌ ಯುಟ್ಯೂಬ್‌ ಚಾನೆಲ್‌ ಮೂಲಕವೂ ಮೋದಿಯವರ ಭಾಷಣ ನೇರ ಪ್ರಸಾರ ನೋಡಬಹುದು. ಅಲ್ಲದೇ ಕಾರ್ಯಕ್ರಮವನ್ನು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಯೂಟ್ಯೂಬ್ ಚಾನೆಲ್‌ ಜೊತೆಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಎಕ್ಸ್‌ನಲ್ಲಿ @PIB_India ಮತ್ತು PMO ಟ್ವಿಟರ್ ಹ್ಯಾಂಡಲ್ ಮೂಲಕವೂ ಪ್ರಸಾರ ಮಾಡಲಾಗುತ್ತದೆ

VISTARANEWS.COM


on

Independence day 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಇಂದು ಬೆಳಗ್ಗೆ 7.30ಕ್ಕೆ ದಿಲ್ಲಿಯ ಕೆಂಪುಕೋಟೆಯ (Red Fort) ಮೇಲೆ 78ನೇ ಸ್ವಾತಂತ್ರ್ಯೋತ್ಸವದ ಭಾಷಣ (Independence day 2024) ಮಾಡಲಿದ್ದಾರೆ. ಧ್ವಜಾರೋಹಣದ ಬಳಿಕ ಸತತ 11ನೇ ಬಾರಿ ಭಾಷಣ ಮಾಡುವ ಮೂಲಕ ಮಾಜಿ ಪ್ರಧಾನಿಗಳಾದ ಜವಾಹರಲಾಲ್‌ ನೆಹರೂ ಮತ್ತು ಇಂದಿರಾ ಗಾಂಧಿ ಅವರ ದಾಖಲೆಯನ್ನು ಪ್ರಧಾನಿ ಮೋದಿ ಸರಿಗಟ್ಟಲಿದ್ದಾರೆ. ಮತ್ತು ಮನಮೋಹನ್‌ ಸಿಂಗ್‌ ಅವರ ದಾಖಲೆ ಮುರಿಯಲಿದ್ದಾರೆ.

ಸ್ವಾತಂತ್ರ್ಯ ದಿನದ ನೇರ ಪ್ರಸಾರ ಎಲ್ಲಿ?

ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ನೇರ ಪ್ರಸಾರ ಕಾರ್ಯಕ್ರಮವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲಾಗುತ್ತದೆ. ವಿಸ್ತಾರ ನ್ಯೂಸ್‌ ಟಿವಿ ಮತ್ತು ವಿಸ್ತಾರ ನ್ಯೂಸ್‌ ಯುಟ್ಯೂಬ್‌ ಚಾನೆಲ್‌ ಮೂಲಕವೂ ಮೋದಿಯವರ ಭಾಷಣ ನೇರ ಪ್ರಸಾರ ನೋಡಬಹುದು.

ಅಲ್ಲದೇ ಕಾರ್ಯಕ್ರಮವನ್ನು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಯೂಟ್ಯೂಬ್ ಚಾನೆಲ್‌ ಜೊತೆಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಎಕ್ಸ್‌ನಲ್ಲಿ @PIB_India ಮತ್ತು PMO ಟ್ವಿಟರ್ ಹ್ಯಾಂಡಲ್ ಮೂಲಕವೂ ಪ್ರಸಾರ ಮಾಡಲಾಗುತ್ತದೆ

2014ರಲ್ಲಿ ಮೊದಲ ಬಾರಿಗೆ ದಿಲ್ಲಿಯ ಕೆಂಪುಕೋಟೆಯಲ್ಲಿ ಆಗಸ್ಟ್ 15ರಂದು ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ್ ಮತ್ತು ಜನ್ ಧನ್ ಬ್ಯಾಂಕ್ ಖಾತೆಗಳ ಕುರಿತು ಹೇಳಿದ್ದರು. ಅಲ್ಲಿಂದ ಇಲ್ಲಿಯ ತನಕವು ಪ್ರತಿ ವರ್ಷವೂ ಅವರು ಹೊಸ ಹೊಸ ಅಭಿಯಾನಗಳ ಬಗ್ಗೆ ಮಾತನಾಡುತ್ತಾರೆ. ಈ ವರ್ಷವೂ ಯಾವ ಹೊಸ ವಿಚಾರದ ಬಗ್ಗೆ ಪ್ರಧಾನಿ ಮೋದಿ ಮಾತನಾಡುತ್ತಾರೆ ಎಂಬ ಬಗ್ಗೆ ಬಹಳ ಕುತೂಹಲ ಇದೆ.

ಸತತ ಮೂರನೇ ಬಾರಿ ಪ್ರಧಾನಿಯಾಗಿ ಗದ್ದುಗೆ ಏರಿರುವ ಮೋದಿ ತಮ್ಮ ನಾಳೆಯ ಭಾಷಣದ ವೇಳೆ ತಮ್ಮ ಸರ್ಕಾರದ ಸಾಧನೆಗಳು, ಕಾರ್ಯಕ್ರಮಗಳು ಮತ್ತು ದೇಶದ ಪ್ರಗತಿಗೆ ತಮ್ಮ ದೂರದೃಷ್ಟಿಯ ಸಂಗತಿಗಳ ಬಗ್ಗೆ ಬೆಳಕು ಚೆಲ್ಲುವ ಸಾಧ್ಯತೆಗಳಿವೆ. ಹೀಗಾಗಿ ಅವರ ಭಾಷಣವನ್ನು ಕೇಳಲು ದೇಶದ ಮೂಲೆಮೂಲೆಯಲ್ಲೂ ಜನರು ಕಾತರರಾಗಿರುತ್ತಾರೆ.

ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ದಾಖಲೆ ಬರೆದಿರುವ ಅವರು, ಈ ಅವಧಿಯ ಮೊದಲ ಸ್ವಾತಂತ್ರ್ಯ ದಿನದ ಭಾಷಣವಾಗಿದೆ. ಈ ಭಾಷಣದೊಂದಿಗೆ ಪ್ರಧಾನಿ ಮೋದಿ ಅವರು ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿಯವರ ಅನಂತರ ಕೆಂಪು ಕೋಟೆಯಲ್ಲಿ ಸತತ 11 ಸ್ವಾತಂತ್ರ್ಯ ದಿನದ ಭಾಷಣ ಮಾಡುವ ಮೂರನೇ ಭಾರತೀಯ ಪ್ರಧಾನಿಯಾಗಲಿದ್ದಾರೆ.

ಇನ್ನು ಪ್ರಧಾನಿಯವರ ಸ್ವಾತಂತ್ರ್ಯ ದಿನದ ಭಾಷಣದ ಅವಧಿಗೆ ಹೋಲಿಸಿದರೆ ಮೋದಿಯವರೇ ಅತಿ ಉದ್ದದ ಭಾಷಣ ಮಾಡಿರುವ ಪ್ರಧಾನಿಯಾಗಿದ್ದರೆ. ಪ್ರಧಾನಿ ಮೋದಿಯವರು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರತಿ ಭಾಷಣವನ್ನೂ ಸರಾಸರಿ 82 ನಿಮಿಷಗಳ ಕಾಲ ನಡೆಸಿದ್ದಾರೆ. ಇದು ಭಾರತದ ಇತಿಹಾಸದಲ್ಲೇ ಪ್ರಧಾನಿಯವರ ಅತಿ ಉದ್ದದ ಭಾಷಣವಾಗಿದೆ.

ಈ ಬಾರಿಯ ಥೀಮ್ ಏನು?

ಈ ಬಾರಿ ಸ್ವಾತಂತ್ರ್ಯ ದಿನದ ಥೀಮ್ “ವಿಕಸಿತ ಭಾರತ”. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತಿಸುವ ಸರ್ಕಾರದ ದೃಷ್ಟಿಕೋನವನ್ನು ಇದು ಸಾರುತ್ತದೆ. ಈ ವಿಷಯವು ಶಿಕ್ಷಣ, ಆರೋಗ್ಯ ರಕ್ಷಣೆ, ಮೂಲಸೌಕರ್ಯ ಮತ್ತು ತಂತ್ರಜ್ಞಾನದಲ್ಲಿ ಸಮಗ್ರ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುತ್ತದೆ. ಆರ್ಥಿಕ ಬೆಳವಣಿಗೆ, ಸಾಮಾಜಿಕ ಪ್ರಗತಿ ಮತ್ತು ಸುಸ್ಥಿರ ಅಭಿವೃದ್ಧಿಯ ಮೂಲಕ ಭಾರತದ ಜಾಗತಿಕ ಸ್ಥಾನಮಾನವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: Droupadi Murmu: ಹೊಸ ಕ್ರಿಮಿನಲ್‌ ಕಾನೂನು ಸ್ವಾತಂತ್ರ್ಯ ಹೋರಾಟಗಾರರಿಗೆ ಸಂದ ಗೌರವ; ರಾಷ್ಟ್ರಪತಿ ಮುರ್ಮು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Independence Day 2024: ಜಾತ್ಯಾತೀತ ನಾಗರಿಕ ಸಂಹಿತೆ ಜಾರಿಯಾದರೆ ಮಾತ್ರ ತಾರತಮ್ಯದಿಂದ ಮುಕ್ತಿ; ಪ್ರಧಾನಿ ಮೋದಿ

Independence Day 2024: ಏಕರೂಪ ನಾಗರಿಕ ಸಂಹಿತೆ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಸುಪ್ರೀಂ ಕೋರ್ಟ್ ಮತ್ತೆ ಮತ್ತೆ ಚರ್ಚೆ ನಡೆಸಿದೆ, ಹಲವು ಬಾರಿ ಆದೇಶಗಳನ್ನು ನೀಡಿದೆ. ದೇಶದ ಬಹುಪಾಲು ವರ್ಗವು ಇದರ ಬಗ್ಗೆ ಅತೀವ ನಂಬಿಕೆ ಹೊಂದಿದೆ. ಇಲ್ಲಿವರೆಗೆ ಇದ್ದ ಕೋಮು ನಾಗರಿಕ ಸಂಹಿತೆಯಿಂದ ಮುಕ್ತವಾಗಿ ದೇಶದಲ್ಲಿ ಸೆಕ್ಯುಲರ್ ಸಿವಿಲ್ ಕೋಡ್ ಜಾರಿಯಾಗುವುದು ಅಗತ್ಯವಿದೆ. ಆಗ ಮಾತ್ರ ನಾವು ಧರ್ಮದ ಆಧಾರದ ತಾರತಮ್ಯದಿಂದ ಮುಕ್ತರಾಗುತ್ತೇವೆ ಎಂದರು.

VISTARANEWS.COM


on

Independence Day 2024
Koo

ನವದೆಹಲಿ: ದೇಶದಲ್ಲಿ ಅಸಮಾನತೆಯನ್ನು ತೊಡೆದುಹಾಕಲು ಜಾತ್ಯಾತೀತ ನಾಗರಿಕ ಕಾನೂನು(Secular civil code) ಜಾರಿಯಾಗಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಅವರು ಇಂದು ದೆಹಲಿಯ ಕೆಂಪುಕೋಟೆಯಲ್ಲಿ ಧ್ಜಜಾರೋಹಣ(Independence Day 2024) ನೆರವೇರಿಸಿದ ಬಳಿಕ ದೇಶದ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ.

ಏಕರೂಪ ನಾಗರಿಕ ಸಂಹಿತೆ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಸುಪ್ರೀಂ ಕೋರ್ಟ್ ಮತ್ತೆ ಮತ್ತೆ ಚರ್ಚೆ ನಡೆಸಿದೆ, ಹಲವು ಬಾರಿ ಆದೇಶಗಳನ್ನು ನೀಡಿದೆ. ದೇಶದ ಬಹುಪಾಲು ವರ್ಗವು ಇದರ ಬಗ್ಗೆ ಅತೀವ ನಂಬಿಕೆ ಹೊಂದಿದೆ. ಇಲ್ಲಿವರೆಗೆ ಇದ್ದ ಕೋಮು ನಾಗರಿಕ ಸಂಹಿತೆಯಿಂದ ಮುಕ್ತವಾಗಿ ದೇಶದಲ್ಲಿ ಸೆಕ್ಯುಲರ್ ಸಿವಿಲ್ ಕೋಡ್ ಜಾರಿಯಾಗುವುದು ಅಗತ್ಯವಿದೆ. ಆಗ ಮಾತ್ರ ನಾವು ಧರ್ಮದ ಆಧಾರದ ತಾರತಮ್ಯದಿಂದ ಮುಕ್ತರಾಗುತ್ತೇವೆ ಎಂದರು.

ಬಾಂಗ್ಲಾ ಹಿಂಸಾಚಾರದ ಬಗ್ಗೆಯೂ ಪ್ರಸ್ತಾಪ

ಇದೇ ವೇಳೆ ಅವರು ಕಳೆದ ಕೆಲವು ತಿಂಗಳಿಂದ ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರದ ಬಗ್ಗೆ ಪ್ರಸ್ತಾಪಿಸಿದರು. ಬಾಂಗ್ಲಾದೇಶದ ಶೀಘ್ರದಲ್ಲೇ ಸಹಜ ಸ್ಥಿತಿ ಬರುತ್ತದೆ ಎಂಬ ಭರವಸೆ ಇದೆ. ಅದಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ಭಾರತ ನೀಡಲಿದೆ ಎಂದು ಹೇಳಿದರು.

ಇನ್ನು ಇದೇ ವೇಳೆ ಒಲಿಂಪಿಕ್ಸ್‌ ಕ್ರೀಟಾಪಟುಗಳಿಗೆ ಅಭಿನಂದನೆ ಸಲ್ಲಿಸಿದ ಅವರು, ಒಲಿಂಪಿಕ್ಸ್‌ನಲ್ಲಿ ಭಾರತದ ಧ್ವಜವನ್ನು ಎತ್ತರಕ್ಕೆ ಹಾರುವಂತೆ ಮಾಡಿದ ಯುವಕರೂ ನಮ್ಮೊಂದಿಗಿದ್ದಾರೆ. 140 ಕೋಟಿ ದೇಶವಾಸಿಗಳ ಪರವಾಗಿ ನಾನು ನಮ್ಮ ಎಲ್ಲಾ ಕ್ರೀಡಾಪಟುಗಳು ಮತ್ತು ಆಟಗಾರರನ್ನು ಅಭಿನಂದಿಸುತ್ತೇನೆ ಎಂದರು.

ಪ್ರಧಾನಿ ಮೋದಿ ತಮ್ಮ ಭಾಷಣದ ವೇಳೆ ಕೋಲ್ಕತ್ತಾದಲ್ಲಿ ನಡೆದಿರುವ ಟ್ರೈನಿ ವೈದ್ಯೆ ಅತ್ಯಾಚಾರ ಕೊಲೆ ಪ್ರಕರಣದ ಬಗ್ಗೆ ಪ್ರಸ್ತಾಪಿಸಿ ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಮಾತೆ ಸಹೋದರಿಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಪಾಪಿಗಳನ್ನು ಗಲ್ಲಿಗೇರಿಸಬೇಕು. ಆಗ ಮಾತ್ರ ಜನರಲ್ಲಿ ಅಪರಾಧಗಳ ಬಗ್ಗೆ ಭಯ ಮೂಡಲು ಸಾಧ್ಯ. ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಬಹಳ ಉಗ್ರವಾಗಿ ಧ್ವನಿ ಎತ್ತಬೇಕಿದೆ. ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ತನಿಖೆ ನಡೆಸಿ ತಪ್ಪಿತಸ್ಥರನ್ನು ವಿಳಂಬ ಮಾಡದೆ ಶಿಕ್ಷಿಸಬೇಕು ಎಂದರು.

ಇದನ್ನೂ ಓದಿ: Independence day 2024: ವಿಕಸಿತ ಭಾರತ @2047 ಎಂಬುದು ಕೇವಲ ಪದಗಳಲ್ಲ..140 ಕೋಟಿ ಜನರ ಸಂಕಲ್ಪ-ಪ್ರಧಾನಿ ಮೋದಿ

Continue Reading

ಪ್ರಮುಖ ಸುದ್ದಿ

Independence day 2024: ವಿಕಸಿತ ಭಾರತ @2047 ಎಂಬುದು ಕೇವಲ ಪದಗಳಲ್ಲ..140 ಕೋಟಿ ಜನರ ಸಂಕಲ್ಪ-ಪ್ರಧಾನಿ ಮೋದಿ

Independence day 2024: ಪ್ರಕೃತಿ ವಿಕೋಪದಿಂದ ಹಲವಾರು ಮಂದಿ ತಮ್ಮ ಕುಟುಂಬ, ಆಸ್ತಿಯನ್ನು ಕಳೆದುಕೊಂಡಿದ್ದಾರೆ. ಹೊರ ರಾಷ್ಟ್ರವೂ ನಷ್ಟ ಅನುಭವಿಸಿದೆ. ಇಂದು, ನಾನು ಅವರೆಲ್ಲರಿಗೂ ನನ್ನ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ ಮತ್ತು ಈ ಬಿಕ್ಕಟ್ಟಿನ ಸಮಯದಲ್ಲಿ ಈ ರಾಷ್ಟ್ರವು ಅವರೊಂದಿಗೆ ನಿಲ್ಲುತ್ತದೆ ಎಂದು ನಾನು ಅವರಿಗೆ ಭರವಸೆ ನೀಡುತ್ತೇನೆ ಎಂದರು.

VISTARANEWS.COM


on

Independence Day 2024
Koo

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಇಂದು ದಿಲ್ಲಿಯ ಕೆಂಪುಕೋಟೆಯ (Red Fort) ಮೇಲೆ 78ನೇ ಸ್ವಾತಂತ್ರ್ಯೋತ್ಸವದ(Independence day 2024)ದ ಧ್ವಜಾರೋಹಣ ನೆರವೇರಿಸಿದ್ದಾರೆ. ಧ್ವಜಾರೋಹಣದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಅಸಂಖ್ಯಾತ ಸ್ವಾತಂತ್ರ್ಯ ಪ್ರೇಮಿಗಳ ಬಲಿದಾನಕ್ಕೊಂದು ದೊಡ್ಡ ಪ್ರಣಾಮ. ವಿಕಸಿತ ಭಾರತ @ 2047 ಕೇವಲ ಪದಗಳಲ್ಲ. 140 ಕೋಟಿ ಜನರ ಸಂಕಲ್ಪ ಎಂದು ಹೇಳಿದರು.

ಪ್ರಕೃತಿ ವಿಕೋಪದಿಂದ ಹಲವಾರು ಮಂದಿ ತಮ್ಮ ಕುಟುಂಬ, ಆಸ್ತಿಯನ್ನು ಕಳೆದುಕೊಂಡಿದ್ದಾರೆ. ಹೊರ ರಾಷ್ಟ್ರವೂ ನಷ್ಟ ಅನುಭವಿಸಿದೆ. ಇಂದು, ನಾನು ಅವರೆಲ್ಲರಿಗೂ ನನ್ನ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ ಮತ್ತು ಈ ಬಿಕ್ಕಟ್ಟಿನ ಸಮಯದಲ್ಲಿ ಈ ರಾಷ್ಟ್ರವು ಅವರೊಂದಿಗೆ ನಿಲ್ಲುತ್ತದೆ ಎಂದು ನಾನು ಅವರಿಗೆ ಭರವಸೆ ನೀಡುತ್ತೇನೆ. ಇಂದು ನಾವು 140 ಕೋಟಿ ಜನರಿದ್ದೇವೆ, ನಾವು ಸಂಕಲ್ಪ ಮಾಡಿ ಒಂದು ದಿಕ್ಕಿನಲ್ಲಿ ಒಟ್ಟಾಗಿ ಸಾಗಿದರೆ, 2047 ರ ವೇಳೆಗೆ ನಾವು ಎಲ್ಲಾ ಅಡೆತಡೆಗಳನ್ನು ನಿವಾರಿಸಿ ‘ವಿಕಸಿತ ಭಾರತ್’ ಕನಸು ನನಸಾಗುವುದರಲ್ಲಿ ಸಂಶಯವಿಲ್ಲ ಎಂದರು.

ಕೋಲ್ಕತಾ ವೈದ್ಯೆ ಕೊಲೆ ಬಗ್ಗೆ ಪ್ರಸ್ತಾಪ

ಪ್ರಧಾನಿ ಮೋದಿ ತಮ್ಮ ಭಾಷಣದ ವೇಳೆ ಕೋಲ್ಕತ್ತಾದಲ್ಲಿ ನಡೆದಿರುವ ಟ್ರೈನಿ ವೈದ್ಯೆ ಅತ್ಯಾಚಾರ ಕೊಲೆ ಪ್ರಕರಣದ ಬಗ್ಗೆ ಪ್ರಸ್ತಾಪಿಸಿ ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಮಾತೆ ಸಹೋದರಿಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಪಾಪಿಗಳನ್ನು ಗಲ್ಲಿಗೇರಿಸಬೇಕು. ಆಗ ಮಾತ್ರ ಜನರಲ್ಲಿ ಅಪರಾಧಗಳ ಬಗ್ಗೆ ಭಯ ಮೂಡಲು ಸಾಧ್ಯ. ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಬಹಳ ಉಗ್ರವಾಗಿ ಧ್ವನಿ ಎತ್ತಬೇಕಿದೆ. ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ತನಿಖೆ ನಡೆಸಿ ತಪ್ಪಿತಸ್ಥರನ್ನು ವಿಳಂಬ ಮಾಡದೆ ಶಿಕ್ಷಿಸಬೇಕು ಎಂದರು.

ಪ್ರಧಾನಿ ಭಾಷಣದ ಪ್ರಮುಖಾಂಶಗಳು

  • ಹೊಸ ಕ್ರಿಮಿನಲ್ ಕಾನೂನು, ಭಾರತೀಯ ನ್ಯಾಯ ಸಂಹಿತಾ 2023, ಕಾನೂನು ವ್ಯವಸ್ಥೆಯನ್ನು ಸುಧಾರಿಸಿದೆ. ನಾವು ಹೊಸ ಕ್ರಿಮಿನಲ್ ಕಾನೂನುಗಳಲ್ಲಿ ಶಿಕ್ಷೆಗಿಂತ ನ್ಯಾಯಕ್ಕೆ ಆದ್ಯತೆ ನೀಡಿದ್ದೇವೆ
  • ಭಾರತವು ಯಾವುದೇ ವಿಳಂಬವಿಲ್ಲದೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಬೇಕು
  • 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿಪಡಿಸಲು ಜನರು ಅನೇಕ ಸಲಹೆಗಳನ್ನು ನೀಡಿದ್ದಾರೆ. ವಿಕ್ಷಿತ್ ಭಾರತ್‌ಗಾಗಿ ಆಡಳಿತ ಸುಧಾರಣೆಗಳು, ತ್ವರಿತ ನ್ಯಾಯ ವಿತರಣಾ ವ್ಯವಸ್ಥೆ, ಸಾಂಪ್ರದಾಯಿಕ ಔಷಧಗಳನ್ನು ಉತ್ತೇಜಿಸುವುದು ಸೇರಿ ಅನೇಕ ಸಲಹೆಗಳು ಜನರಿಂದ ಬಂದಿವೆ.
  • ಜಲ ಜೀವನ್ ಮಿಷನ್ 15 ಕೋಟಿ ಫಲಾನುಭವಿಗಳನ್ನು ತಲುಪಿದೆ
  • ಸುಧಾರಣೆಗಳ ಕಡೆಗೆ ನಮ್ಮ ಸಮರ್ಪಣೆ ಕೇವಲ ಕಾಗದಗಳಿಗೆ ಸೀಮಿತವಾಗಿಲ್ಲ, ನಾವು ಅದನ್ನು ಸಾಕಾರ ಮಾಡಿ ತೋರಿಸಿದ್ದೇವೆ.
  • ವೋಕಲ್‌ ಫಾರ್‌ ಲೋಕಲ್‌(ಸ್ಥಳೀಯರಿಗಾಗಿ ಧ್ವನಿ) ಎಂಬ ಪರಿಕಲ್ಪನೆ ಆರ್ಥಿಕ ವ್ಯವಸ್ಥೆಗೆ ಹೊಸ ಮಂತ್ರವಾಗಿದೆ
  • ಇತ್ತೀಚಿನ ದಿನಗಳಲ್ಲಿ ಅನಿಯಮಿತ ಉದ್ಯೋಗಾವಕಾಶಗಳಿವೆ. ಇದು ನಮ್ಮ ಸುವರ್ಣ ಯುಗ
  • ಸಶಸ್ತ್ರ ಪಡೆಗಳು ಸರ್ಜಿಕಲ್ ಮತ್ತು ವೈಮಾನಿಕ ದಾಳಿಗಳನ್ನು ನಡೆಸಿದಾಗ, ಪ್ರತಿಯೊಬ್ಬ ಭಾರತೀಯನು ಹೆಮ್ಮೆಯಿಂದ ಬೀಗಿದ್ದ.
  • ಬಾಹ್ಯಾಕಾಶ ಕ್ಷೇತ್ರವು ಅಸಂಖ್ಯಾತ ಸುಧಾರಣೆಗಳನ್ನು ಕಂಡಿದೆ
  • ಕಳೆದ 10 ವರ್ಷಗಳಲ್ಲಿ 10 ಕೋಟಿ ಮಹಿಳೆಯರು ಮಹಿಳಾ ಸ್ವಸಹಾಯ ಸಂಘಗಳಿಗೆ ಸೇರ್ಪಡೆಯಾಗಿದ್ದಾರೆ. 10 ಕೋಟಿ ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗುತ್ತಿದ್ದಾರೆ.
  • ಬಡವರು, ಮಧ್ಯಮ ವರ್ಗದವರು, ವಂಚಿತರು… ನಮ್ಮ ಯುವಕರ ಆಕಾಂಕ್ಷೆಗಳಿಗಾಗಿ, ಅವರ ಜೀವನದಲ್ಲಿ ಸುಧಾರಣೆಗಳನ್ನು ತರಲು ನಾವು ಸುಧಾರಣಾ ಮಾರ್ಗವನ್ನು ಕೈಗೆತ್ತಿಕೊಂಡಿದ್ದೇವೆ.
  • ಪ್ರವಾಸೋದ್ಯಮ, ಎಂಎಸ್‌ಎಂಇ, ಶಿಕ್ಷಣ, ಆರೋಗ್ಯ, ಸಾರಿಗೆ, ಕೃಷಿ ಅಥವಾ ಇತರ ಯಾವುದೇ ಕ್ಷೇತ್ರವಾಗಿರಲಿ, ಎಲ್ಲಾ ಕ್ಷೇತ್ರಗಳಲ್ಲಿ ಸುಧಾರಿತ ತಂತ್ರಜ್ಞಾನ ವ್ಯವಸ್ಥೆ ಇದೆ.
  • ಬಾಹ್ಯಾಕಾಶ ಕ್ಷೇತ್ರದಲ್ಲಿ ನೂರಾರು ಸ್ಟಾರ್ಟ್‌ಅಪ್‌ಗಳು ಬಂದಿವೆ. “ಖಾಸಗಿ ಉಪಗ್ರಹಗಳು ಮತ್ತು ರಾಕೆಟ್‌ಗಳನ್ನು ಉಡಾವಣೆ ಮಾಡಲಾಗುತ್ತಿದೆ
  • ಜಾಗತಿಕ ಸಂಸ್ಥೆಗಳಿಗೆ ಭಾರತದ ಮೇಲೆ ಅತೀವ ಭರವಸೆ ಇದೆ, ರಫ್ತು, ವಿದೇಶಿ ವಿನಿಮಯ ಪ್ರಮಾಣ ಹೆಚ್ಚಾಗಿದೆ.
  • ಮೆಡಿಕಲ್‌ ಸೀಟ್‌ಗಳ ಸಂಖ್ಯೆಯನ್ನು 1ಲಕ್ಷಕ್ಕೆ ಏರಿಕೆ ಮಾಡಲಾಗಿದೆ.
  • ರಕ್ಷಣೆ ವಿಚಾರದಲ್ಲಿ ಭಾರತ ಆತ್ಮ ನಿರ್ಭರವಾಗಿದೆ.

ಕಾರ್ಯಕ್ರಮದಲ್ಲಿ ಬುಡಕಟ್ಟು ಸಮುದಾಯಗಳು, ರೈತರು, ಮಹಿಳೆಯರು, ಆಶಾ ಕಾರ್ಯಕರ್ತರು, ನರ್ಸ್ ಶುಶ್ರೂಷಕಿಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಒಲಿಂಪಿಕ್‌ ಕ್ರೀಡಾಪಟುಗಳು ಸೇರಿ ಬರೋಬ್ಬರಿ 6,000 ವಿಶೇಷ ಅತಿಥಿಗಳು ಭಾಗವಹಿಸಿದ್ದಾರೆ. ಇನ್ನು ಧ್ವಜಾರೋಹಣದ ಬಳಿಕ ಸತತ 11ನೇ ಬಾರಿ ಭಾಷಣ ಮಾಡುವ ಮೂಲಕ ಮಾಜಿ ಪ್ರಧಾನಿಗಳಾದ ಜವಾಹರಲಾಲ್‌ ನೆಹರೂ ಮತ್ತು ಇಂದಿರಾ ಗಾಂಧಿ ಅವರ ದಾಖಲೆಯನ್ನು ಪ್ರಧಾನಿ ಮೋದಿ ಸರಿಗಟ್ಟಿದ್ದಾರೆ.

ಇದನ್ನೂ ಓದಿ: PM Narendra Modi: ಕೆಂಪುಕೋಟೆಯ ಕಾರ್ಯಕ್ರಮಕ್ಕೆ ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ

Continue Reading

ದೇಶ

Kolkata Doctor Murder Case: ಟ್ರೈನಿ ವೈದ್ಯೆಯ ಹತ್ಯೆ-ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ; ಭಾರೀ ಲಾಠಿಚಾರ್ಜ್‌

Kolkata Doctor Murder Case: ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಹತ್ಯೆಯ ಖಂಡಿಸಿ ಕಿರಿಯ ವೈದ್ಯರು ಅಹೋರಾತ್ರಿ ಪ್ರತಿಭಟನೆ ನಡುವೆ ದುಷ್ಕರ್ಮಿಗಳು ಮಧ್ಯರಾತ್ರಿ 12.40 ರ ಸುಮಾರಿಗೆ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ನುಗ್ಗಿ ಆಸ್ಪತ್ರೆಯ ಆಸ್ತಿ-ಪಾಸ್ತಿ ನಾಶಪಡಿಸಿದ್ದಾರೆ. ಅಲ್ಲದೇ ಆಸ್ಪತ್ರೆ ಮೇಲೆ ಕಲ್ಲು ತೂರಾಟವನ್ನು ನಡೆಸಿದ್ದಾರೆ.

VISTARANEWS.COM


on

Kolkata Doctor Murder Case
Koo

ಕೋಲ್ಕತ್ತಾ: ಪಶ್ಚಿಮ ಬಂಗಾಳ(West Bengal)ದ ಕೋಲ್ಕತ್ತಾ(Kolkata)ದಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ(Kolkata Doctor Murder Case) ಪ್ರಕರಣ ಖಂಡಿಸಿ ಘಟನೆ ನಡೆದ ಆರ್‌ಜಿ ಕರ್‌(RG Kar Hospital) ಆಸ್ಪತ್ರೆ ಎದುರು ನಡೆಯುತ್ತಿದ್ದ ಅಹೋರಾತ್ರಿ ಧರಣಿ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನೆ ನಡೆವೆ ಜನ ದುಷ್ಕರ್ಮಿಗಳ ಗುಂಪೊಂದು ಆಸ್ಪತ್ರೆಗೆ ನುಗ್ಗಿ ಧ್ವಂಸ ಮಾಡಿದೆ.

ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಹತ್ಯೆಯ ಖಂಡಿಸಿ ಕಿರಿಯ ವೈದ್ಯರು ಅಹೋರಾತ್ರಿ ಪ್ರತಿಭಟನೆ ನಡುವೆ ದುಷ್ಕರ್ಮಿಗಳು ಮಧ್ಯರಾತ್ರಿ 12.40 ರ ಸುಮಾರಿಗೆ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ನುಗ್ಗಿ ಆಸ್ಪತ್ರೆಯ ಆಸ್ತಿ-ಪಾಸ್ತಿ ನಾಶಪಡಿಸಿದ್ದಾರೆ. ಅಲ್ಲದೇ ಆಸ್ಪತ್ರೆ ಮೇಲೆ ಕಲ್ಲು ತೂರಾಟವನ್ನು ನಡೆಸಿದ್ದಾರೆ. ಇನ್ನು ಇದು ಹೊರಗಿನಿಂದ ಬಂದಿರುವ ತಂಡದಿಂದ ನಡೆದಿರುವ ಕೃತ್ಯ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಇನ್ನು ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದು, ಲಾಠಿಚಾರ್ಜ್‌ ನಡೆಸಿದ್ದಾರೆ.

ಪಶ್ಚಿಮ ಬಂಗಾಳ(West Bengal)ದ ಕೋಲ್ಕತ್ತಾ(Kolkata)ದಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ(Kolkata Doctor Murder Case) ಪ್ರಕರಣವನ್ನು ಹೈಕೋರ್ಟ್‌ ಸಿಬಿಐ(CBI Probe) ತನಿಖೆಗೆ ಆದೇಶಿಸಿರುವ ಬೆನ್ನಲ್ಲೇ ಸಿಬಿಐ ಆರೋಪಿಯನ್ನು ತನ್ನ ವಶಕ್ಕೆ ಪಡೆದಿದೆ. ಮತ್ತೊಂದೆಡೆ ಘಟನೆಯನ್ನು ಖಂಡಿಸಿ ಇಂದು ರಾತ್ರಿ ರಾಜಕೀಯ ನಾಯಕರು, ಸೆಲೆಬ್ರಿಟಿಗಳು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಜನ ಪ್ರತಿಭಟನೆ ನಡೆಸಿದ್ದಾರೆ.

ಬುಧವಾರ ಮಧ್ಯಾಹ್ನ, ಮಣಿಪಾಲ, ಮೆಡಿಕಾ, ಪೀರ್‌ಲೆಸ್ ಮತ್ತು ಆರ್‌ಎನ್ ಟ್ಯಾಗೋರ್ ಸೇರಿದಂತೆ ಕೋಲ್ಕತ್ತಾದ ಪೂರ್ವ ಮೆಟ್ರೋಪಾಲಿಟನ್ ಬೈಪಾಸ್‌ನ ಎಲ್ಲಾ ಖಾಸಗಿ ಆಸ್ಪತ್ರೆಗಳ ವೈದ್ಯರು, ದಾದಿಯರು ಮತ್ತು ಇತರ ಸಿಬ್ಬಂದಿಗಳು ಮುಕುಂದಪುರದಿಂದ ಬೃಹತ್‌ ಮೆರವಣಿಗೆ ಕೈಗೊಂಡರು.

ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಪುರಸ್ಕರಿಸಿದ ಕೋಲ್ಕತಾ ಹೈಕೋರ್ಟ್ ಮಂಗಳವಾರ ಮಹತ್ವದ ಆದೇಶ ನೀಡಿದೆ. ಆರಂಭದಲ್ಲಿಯೇ ಕೊಲೆ ಪ್ರಕರಣವನ್ನು ಏಕೆ ದಾಖಲಿಸಲಿಲ್ಲ ಎಂದು ಪ್ರಶ್ನಿಸಿದ ಕೋರ್ಟ್‌, ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಗಿನ ಪ್ರಾಂಶುಪಾಲರಾದ ಡಾ ಸಂದೀಪ್ ಘೋಷ್ ಅವರನ್ನು ಮೊದಲು ವಿಚಾರಣೆಗೆ ಒಳಪಡಿಸಬೇಕಿತ್ತು ಎಂದು ಅಭಿಪ್ರಾಯ ಪಟ್ಟಿದೆ. ಅಲ್ಲದೇ ಘೋಷ್ ಅವರು ರಾಜೀನಾಮೆ ನೀಡಿದ ಗಂಟೆಗಳ ನಂತರ ಮತ್ತೊಂದು ಕಾಲೇಜಿನ ಪ್ರಾಂಶುಪಾಲರಾಗಿ ಏಕೆ ನೇಮಕಗೊಂಡರು ಎಂದು ಪೀಠವು ರಾಜ್ಯ ಸರ್ಕಾರದ ವಕೀಲರನ್ನು ಪ್ರಶ್ನಿಸಿತು.

ಏನಿದು ಘಟನೆ?

ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಶುಕ್ರವಾರ ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಗುರುವಾರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಶುಕ್ರವಾರ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು.
ಆಸ್ಪತ್ರೆಯ ವೈದ್ಯರೊಬ್ಬರು ಮಾಹಿತಿ ನೀಡಿ, ʼʼಸಂತ್ರಸ್ತೆ ಶುಕ್ರವಾರ ಮುಂಜಾನೆ 2 ಗಂಟೆ ಸುಮಾರಿಗೆ ತಮ್ಮ ಸಹೋದ್ಯೋಗಿಗಳೊಂದಿಗೆ ಊಟ ಮಾಡಿದ್ದಾರೆ. ಬಳಿಕ ಸೆಮಿನಾರ್ ಹಾಲ್‌ಗೆ ತೆರಳಿದ್ದರು. ನಂತರ ಸೆಮಿನಾರ್‌ ಹಾಲ್‌ನಲ್ಲಿ ಅವರ ಶವ ಪತ್ತೆಯಾಗಿತ್ತುʼʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Kolkata Doctor Murder Case: ದೇಹದಲ್ಲಿ 150 ಮಿಲಿ ಗ್ರಾಂ ವೀರ್ಯ ಪತ್ತೆ- ಟ್ರೈನಿ ವೈದ್ಯೆಯ ಮೇಲೆ ಗ್ಯಾಂಗ್‌ರೇಪ್‌ ಆಗಿತ್ತಾ?

Continue Reading

ಪ್ರಮುಖ ಸುದ್ದಿ

Gallantry Awards: 103 ಶೌರ್ಯ ಪ್ರಶಸ್ತಿ ಪಟ್ಟಿ ಪ್ರಕಟ; ಪಟ್ಟಿಯಲ್ಲಿವೆ 4 ಕೀರ್ತಿ ಚಕ್ರಗಳು

Gallantry Awards: ಮೂರು ಕೀರ್ತಿ ಚಕ್ರಗಳು ಮತ್ತು ನಾಲ್ಕು ಶೌರ್ಯ ಚಕ್ರಗಳನ್ನು ಮರಣೋತ್ತರವಾಗಿ ನೀಡಲಾಗುವುದು ಎಂದು ರಕ್ಷಣಾ ಸಚಿವಾಲಯ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ. 19 ರಾಷ್ಟ್ರೀಯ ರೈಫಲ್ಸ್ (RR) ನ ಕರ್ನಲ್ ಮನ್‌ಪ್ರೀತ್ ಸಿಂಗ್, 63 RR ನ ರೈಫಲ್‌ಮ್ಯಾನ್ ರವಿಕುಮಾರ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ಉಪ ಅಧೀಕ್ಷಕ ಹುಮಾಯುನ್ ಮುಜಮ್ಮಿಲ್ ಭಟ್ ಮರಣೋತ್ತರ ಕೀರ್ತಿ ಚಕ್ರ ಪ್ರಶಸ್ತಿ ಪುರಸ್ಕೃತರು. ಪ್ರಸ್ತುತ ಸೇವೆಯಲ್ಲಿರುವ ಮೇಜರ್ ಮಲ್ಲಾ ರಾಮ್ ಗೋಪಾಲ್ ನಾಯ್ಡು ಮಾತ್ರ ಕೂಡ ನಾಳೆ ಕೀರ್ತಿ ಚಕ್ರ ಸ್ವೀಕರಿಸಲಿದ್ದಾರೆ.

VISTARANEWS.COM


on

Gallantry awards
Koo

ನವದೆಹಲಿ: 78ನೇ ಸ್ವಾತಂತ್ರ್ಯ ದಿನಾಚರಣೆ(Independence Day 2024)ಯ ಮುನ್ನದಿನವಾದ ಇಂದು, ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಅವರು ಸಶಸ್ತ್ರ ಪಡೆಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿಗೆ 103 ಶೌರ್ಯ ಪ್ರಶಸ್ತಿ(Gallantry awards)ಗಳನ್ನು ಅನುಮೋದಿಸಿದರು, ನಾಲ್ಕು ಕೀರ್ತಿ ಚಕ್ರಗಳು ಮತ್ತು 18 ಶೌರ್ಯ ಚಕ್ರಗಳು ಸೇರಿದಂತೆ ದೇಶದ ಅತ್ಯುನ್ನತ ಪ್ರಶಸ್ತಿಗಳನ್ನು ನಾಳೆ ಪ್ರದಾನ ಮಾಡಲಾಗುತ್ತದೆ.

ಮೂರು ಕೀರ್ತಿ ಚಕ್ರಗಳು ಮತ್ತು ನಾಲ್ಕು ಶೌರ್ಯ ಚಕ್ರಗಳನ್ನು ಮರಣೋತ್ತರವಾಗಿ ನೀಡಲಾಗುವುದು ಎಂದು ರಕ್ಷಣಾ ಸಚಿವಾಲಯ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ. 19 ರಾಷ್ಟ್ರೀಯ ರೈಫಲ್ಸ್ (RR) ನ ಕರ್ನಲ್ ಮನ್‌ಪ್ರೀತ್ ಸಿಂಗ್, 63 RR ನ ರೈಫಲ್‌ಮ್ಯಾನ್ ರವಿಕುಮಾರ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ಉಪ ಅಧೀಕ್ಷಕ ಹುಮಾಯುನ್ ಮುಜಮ್ಮಿಲ್ ಭಟ್ ಮರಣೋತ್ತರ ಕೀರ್ತಿ ಚಕ್ರ ಪ್ರಶಸ್ತಿ ಪುರಸ್ಕೃತರು. ಪ್ರಸ್ತುತ ಸೇವೆಯಲ್ಲಿರುವ ಮೇಜರ್ ಮಲ್ಲಾ ರಾಮ್ ಗೋಪಾಲ್ ನಾಯ್ಡು ಮಾತ್ರ ಕೂಡ ನಾಳೆ ಕೀರ್ತಿ ಚಕ್ರ ಸ್ವೀಕರಿಸಲಿದ್ದಾರೆ.

19 ಆರ್‌ಆರ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ಮನ್‌ಪ್ರೀತ್ ಸಿಂಗ್ ಕಳೆದ ವರ್ಷ ಅನಂತನಾಗ್‌ನಲ್ಲಿ ನಡೆದ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಹತಾತ್ಮರಾಗಿದ್ದರು. 17 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ್ದ ಸಿಂಗ್ ಅವರು ಪತ್ನಿ, ಏಳು ವರ್ಷದ ಮಗ, ಮೂರು ವರ್ಷದ ಮಗಳು ಮತ್ತು ತಾಯಿಯನ್ನು ಅಗಲಿದ್ದರು. ಇದೇ ಕಾರ್ಯಾಚರಣೆಯಲ್ಲಿ 34 ವರ್ಷದ ಭಟ್ ಕೂಡ ಸಾವನ್ನಪ್ಪಿದ್ದರು. ಅವರ ತಂದೆ ಗುಲಾಮ್ ಹಸನ್ ಭಟ್ ಅವರು ಕಾಶ್ಮೀರದಲ್ಲಿ ಪೊಲೀಸ್ ಮಹಾನಿರೀಕ್ಷಕರಾಗಿ ನಿವೃತ್ತರಾಗಿದ್ದರು. 2022 ರಲ್ಲಿ ವಿವಾಹವಾಗಿದ್ದ, ಭಟ್ ಪತ್ನಿ ಫಾತಿಮಾ, ಕೇವಲ ಒಂದು ತಿಂಗಳ ವಯಸ್ಸಿನ ಮಗಳು, ಅವರ ತಂದೆ, ತಾಯಿ ಮತ್ತು ಸಹೋದರಿಯನ್ನು ಅಗಲಿದ್ದರು.

ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತರಲ್ಲಿ 666 ಆರ್ಮಿ ಏವಿಯೇಷನ್ ​​ಸ್ಕ್ವಾಡ್ರನ್‌ನ ಕರ್ನಲ್ ಪವನ್ ಸಿಂಗ್ (ವಿಚಕ್ಷಣ ಮತ್ತು ವೀಕ್ಷಣೆ), 21 ಪ್ಯಾರಾ (ವಿಶೇಷ ಪಡೆಗಳ ಮೇಜರ್ ಸಿವಿಎಸ್ ನಿಖಿಲ್), 19 ಆರ್‌ಆರ್‌ನ ಮೇಜರ್ ಆಶಿಶ್ ಧೋಂಚಕ್ (ಮರಣೋತ್ತರ), ಮೇಜರ್ ತ್ರಿಪತ್‌ಪ್ರೀತ್ ಸಿಂಗ್, 34 ರ ಆರ್‌ಆರ್‌ಧಾ ಸಿಂಗ್ 34 ಆರ್‌ಆರ್‌ನ, 5 ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ನ ಸುಬೇದಾರ್ ಸಂಜೀವ್ ಸಿಂಗ್ ಜಸ್ರೋಟಿಯಾ, 56 ಆರ್‌ಆರ್‌ನ ನೈಬ್ ಸುಬೇದಾರ್ ಪಿ ಪಬಿನ್ ಸಿಂಘಾ, ಮತ್ತು 19 ಆರ್‌ಆರ್‌ನ ಸಿಪಾಯಿ ಪರ್ದೀಪ್ ಸಿಂಗ್ (ಮರಣೋತ್ತರ) ಸೇರಿದ್ದಾರೆ.

ಇದನ್ನೂ ಓದಿ: Independence Day 2024: ಒಂದೇ ದಿನ ಸ್ವಾತಂತ್ರ್ಯ ಪಡೆದಿದ್ದರೂ ಪಾಕಿಸ್ತಾನದಲ್ಲೇಕೆ ಭಾರತಕ್ಕಿಂತ ಮೊದಲು ಸ್ವಾತಂತ್ರ್ಯ ದಿನಾಚರಣೆ?

Continue Reading
Advertisement
Independence Day 2024
ಕರ್ನಾಟಕ42 seconds ago

ಜನರ ಕಲ್ಯಾಣಕ್ಕಾಗಿ ಜಾರಿಗೆ ತಂದ ಗ್ಯಾರಂಟಿ ಯೋಜನೆ ಮುಂದುವರಿಯಲಿದೆ; ಧ್ವಜಾರೋಹಣ ನೆರವೇರಿಸಿ ಸಿಎಂ ಸಿದ್ದರಾಮಯ್ಯ

Independence Day 2024
ದೇಶ10 mins ago

Independence Day 2024: ಜಾತ್ಯಾತೀತ ನಾಗರಿಕ ಸಂಹಿತೆ ಜಾರಿಯಾದರೆ ಮಾತ್ರ ತಾರತಮ್ಯದಿಂದ ಮುಕ್ತಿ; ಪ್ರಧಾನಿ ಮೋದಿ

Golden Star Ganesh Krishnam Pranaya Sakhi review
ಸ್ಯಾಂಡಲ್ ವುಡ್19 mins ago

Golden Star Ganesh: ಹೇಗಿದೆ “ಕೃಷ್ಣಂ ಪ್ರಣಯ ಸಖಿ” ಸಿನಿಮಾ? ಫ್ಯಾನ್ಸ್‌ ಹೇಳೋದೇನು?

Independence Day 2024
ಬೆಂಗಳೂರು58 mins ago

Independence Day 2024: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ; ಡಿಕೆಶಿ ಭರವಸೆ

Independence Day 2024
ಪ್ರಮುಖ ಸುದ್ದಿ1 hour ago

Independence day 2024: ವಿಕಸಿತ ಭಾರತ @2047 ಎಂಬುದು ಕೇವಲ ಪದಗಳಲ್ಲ..140 ಕೋಟಿ ಜನರ ಸಂಕಲ್ಪ-ಪ್ರಧಾನಿ ಮೋದಿ

Kannada New Movie Naane Krishna Naane Shaam Video Song Sanjith Hegde
ಸ್ಯಾಂಡಲ್ ವುಡ್1 hour ago

Kannada New Movie: ದಿನಕರ್ ತೂಗುದೀಪ್ ನಿರ್ದೇಶನದ ʻರಾಯಲ್ʼ ಸಿನಿಮಾ ಮೊದಲ ಹಾಡು ರಿಲೀಸ್!

Health Tips
ಆಹಾರ/ಅಡುಗೆ1 hour ago

Health Tips: ಮತ್ತೆ ಮತ್ತೆ ಬಿಸಿ ಮಾಡಿ ಸೇವಿಸುವುದರಿಂದ ಇವು ದೇಹಕ್ಕೆ ವಿಷವಾಗಬಹುದು ಎಚ್ಚರ!

Kangana Ranaut Emergency trailer PM Indira Gandhi as a Shakespearean tragedy
ಸಿನಿಮಾ1 hour ago

Kangana Ranaut: ʻಎಮರ್ಜೆನ್ಸಿʼ ಟ್ರೈಲರ್‌ ಔಟ್‌; ಕಂಗನಾ ರಣಾವತ್‌ಗೆ ರಾಷ್ಟ್ರ ಪ್ರಶಸ್ತಿ ಫಿಕ್ಸ್‌ ಅಂದ್ರು ಫ್ಯಾನ್ಸ್‌!

ಕರ್ನಾಟಕ2 hours ago

Independence Day 2024: ಮಾಣೆಕ್‌ ಷಾ ಪರೇಡ್ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ; Live ಇಲ್ಲಿ ವೀಕ್ಷಿಸಿ

Kolkata Doctor Murder Case
ದೇಶ2 hours ago

Kolkata Doctor Murder Case: ಟ್ರೈನಿ ವೈದ್ಯೆಯ ಹತ್ಯೆ-ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ; ಭಾರೀ ಲಾಠಿಚಾರ್ಜ್‌

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ7 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ7 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ7 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌