Saree draping: ವರಮಹಾಲಕ್ಷ್ಮಿಗೆ ಕಲಾತ್ಮಕವಾಗಿ ಸೀರೆ ಉಡಿಸಿ - Vistara News

ಧಾರ್ಮಿಕ

Saree draping: ವರಮಹಾಲಕ್ಷ್ಮಿಗೆ ಕಲಾತ್ಮಕವಾಗಿ ಸೀರೆ ಉಡಿಸಿ

ವರಮಹಾಲಕ್ಷ್ಮಿ ದೇವಿಗೆ ಸೀರೆ ಉಡಿಸುವುದೂ ಒಂದು ಕಲೆ. ಕಲಾತ್ಮಕವಾಗಿ ಹೇಗೆಲ್ಲಾ ಸೀರೆ ಉಡಿಸಬಹುದು ಎಂಬುದನ್ನು ಸೀರೆ ಡ್ರೆಪಿಂಗ್‌ ಎಕ್ಸ್‌ಫರ್ಟ್ಸ್‌ ಒನ್‌ ಮಿನಿಟ್‌ ಉಮಾ ಅವರು ಸಿಂಪಲ್ಲಾಗಿ ತಿಳಿಸಿದ್ದಾರೆ.

VISTARANEWS.COM

on

Saree draping
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವರಮಹಾಲಕ್ಷ್ಮಿ ಹಬ್ಬದ ಸಡಗರ ಮನೆ ಮನೆಯಲ್ಲೂ ಸಂಭ್ರಮ ಮೂಡಿಸಿದೆ. ಕೆಲವು ಮನೆಗಳಲ್ಲಿ ದೇವಿಯ ವಿಗ್ರಹಕ್ಕೆ ರೆಡಿಮೇಡ್‌ ಸೀರೆ ಉಡಿಸಿ ಸಿಂಗರಿಸುತ್ತಾರೆ. ಇನ್ನು ಕೆಲವು ಮನೆಗಳಲ್ಲಿ ಸಂಪ್ರದಾಯಕ್ಕೆ ತಕ್ಕಂತೆ ಪೂಜಿಸಲ್ಪಡುವ ಬಿಂದಿಗೆಗೆ ಹೊಸದಾಗಿ ತಂದ ರೇಷ್ಮೆ ಸೀರೆಯನ್ನು ಉಡಿಸಿ, ವರಮಹಾಲಕ್ಷ್ಮಿಯನ್ನು ಭಕ್ತಿಪೂರ್ವಕವಾಗಿ ಬರಮಾಡಿಕೊಳ್ಳುತ್ತಾರೆ. ಈ ಹಬ್ಬದಂದು ನಿಮ್ಮ ಮನೆಯ ವರಮಹಾಲಕ್ಷ್ಮಿಗೆ ಹೇಗೆಲ್ಲಾ ಕಲಾತ್ಮಕವಾಗಿ ಸೀರೆ ಉಡಿಸಿ ಸಿಂಗರಿಸಬಹುದು ಎಂಬುದನ್ನು ಸ್ಯಾರಿ ಡ್ರೆಪಿಂಗ್‌ ಎಕ್ಸ್‌ಪರ್ಟ್ ವನ್‌ ಮಿನಟ್‌ ಉಮಾ ಅವರು ತಿಳಿಸಿಕೊಟ್ಟಿದ್ದಾರೆ.

Saree draping

ದೇವಿಗೆ ಸೀರೆ ಉಡಿಸುವ ವಿಧಾನ

ಮೊದಲಿಗೆ ಒಂದು ದೊಡ್ಡ ಬಿಂದಿಗೆ, ಅದರ ಮೇಲೊಂದು ಚಿಕ್ಕ ಕಳಶಕ್ಕೆ ಅಕ್ಕಿ ತುಂಬಿಟ್ಟುಕೊಳ್ಳಿ. ಮೇಲಿನ ಕಳಶಕ್ಕೆ ನಿಮ್ಮ ಪದ್ಧತಿಯಂತೆ ಸಿರಿಧಾನ್ಯ ಹಾಕಿ. ನೀರು ಸಹ ಬಳಸಬಹುದು. ಸೀರೆ ಹಾಳಾಗುವ ಕಾರಣ ಅಕ್ಕಿ ಬಳಸುವುದು ಸೂಕ್ತ. ಒಂದರ ಮೇಲೊಂದರಂತೆ ಬಿಂದಿಗೆಯನ್ನಿಟ್ಟು ಮೇಲಿನ ಕಳಶಕ್ಕೆ ವೀಳ್ಯೆದೆಲೆ ಇಡಿ. ಇದರ ಮೇಲೆ ಅರಿಶಿಣ ಹಚ್ಚಿದ ತೆಂಗಿನಕಾಯಿ ಇರಿಸಿ. ತೆಂಗಿನ ಕಾಯಿಯ ಮುಂಭಾಗಕ್ಕೆ ದೇವಿಯ ಮುಖವಾಡ ಹಾಕಿ. ಬಿಂದಿಗೆಯ ಕೆಳಗೆ ಬಾಳೆ ದಿಂಡು ಅಥವಾ ಒಂದು ತಟ್ಟೆಯಲ್ಲಿ ಅಕ್ಕಿ ತುಂಬಿ ಸಮತಟ್ಟಾಗಿ ಮಾಡಿ. ಅರಿಶಿನ ಕುಂಕುಮದಿಂದ ನಕ್ಷತ್ರ ರೂಪದ ಮಂಡಲವನ್ನು ರಚಿಸಿ. ಆ ಮಂಡಲದ ಮಧ್ಯಭಾಗಕ್ಕೆ ಸರಿಯಾಗಿ ಕಳಶವನ್ನು ಅಲುಗಾಡದಂತೆ ಕೂರಿಸಿ. ಮೇಲಿನ ಕಳಶಕ್ಕೆ ಅಡ್ಡದಾಗಿ ಒಂದು ಬಿದಿರು ಅಥವಾ ಯಾವುದೇ ಅಲ್ಲಾಡದಂತಹ ಕಡ್ಡಿಯನ್ನು ಬಿಗಿಯಾಗಿ ಕಟ್ಟಿ. ಇತ್ತ ಪ್ರತ್ಯೇಕ ಬ್ಲೌಸ್‌ ಪೀಸನ್ನು ಬಿಂದಿಗೆಗೆ ಕಟ್ಟಿ ಪಿನ್‌ ಮಾಡಿ. ದೇವಿಯ ಕೈ ಕಾಲುಗಳ ಪ್ರತಿರೂಪವಿದ್ದಲ್ಲಿ ಅದನ್ನು ಬಿಂದಿಗೆ ಕಟ್ಟಿ, ಕೂರಿಸಿ. ಬಲಭಾಗದ ಕೈ ಮೇಲ್ಮುಖವಾಗಿರಲಿ. ಎಡಗೈ ಕೆಳಮುಖವಾಗಿರಲಿ. ಇನ್ನು ಸೀರೆಯ ಒಂದು ಫಾಲ್‌ ಸೈಡಿನಿಂದ ನೆರಿಗೆ ಮಾಡಿಕೊಳ್ಳಿ. ಸೆರಗಿಗೆ ಬೇಕಾದಷ್ಟು ಬಿಟ್ಟು ನೆರಿಗೆ ಕಟ್ಟಿಡಿ. ಕೆಳಗೆ ಮೇಲೆ ಎರಡಕ್ಕೂ ಕಟ್ಟಿ. ಕಟ್ಟಲು ಆದಷ್ಟೂ ಉಲ್ಲನ್‌ ದಾರ ಬಳಸುವುದರಿಂದ ಸೀರೆ ಹಾಳಾಗುವುದಿಲ್ಲ.

ಇದನ್ನೂ ಓದಿ: Varamahalakshmi Festival 2024: ಹಬ್ಬಕ್ಕೆ ಸೀರೆಯನ್ನು ದಾವಣಿಯಂತೆ ಉಡುವುದು ಹೇಗೆ? ಇಲ್ಲಿದೆ ಸಿಂಪಲ್‌ ಐಡಿಯಾ

ನಿಮಗೆ ಎಷ್ಟು ಎತ್ತರಕ್ಕೆ ಬೇಕೋ ಅಷ್ಟು ಎತ್ತರಕ್ಕೆ ಫೋಲ್ಡ್‌ ಮಾಡಿ ನೆರಿಗೆ ಎರಡು ಸ್ಟೆಪ್‌ ಕೂರುವಂತೆ ನೋಡಿಕೊಂಡು ಬಿಂದಿಗೆಗೆ ಕಟ್ಟಿ. ನಂತರ ಕಟ್ಟಿರುವ ನೆರಿಗೆಯನ್ನು ನೀಟಾಗಿ ಹರಡಿ. ಬಿದಿರು ಅಥವಾ ಕಡ್ಡಿಯ ಅಳತೆಗೆ ಸೆರಗು ಹಾಕಿ ಎರಡ್ಮೂರು ಕಡೆ ಬಿಚ್ಚಿ ಹೋಗದಂತೆ ಪಿನ್‌ ಮಾಡಿ. ಇತ್ತ ಬಿಂದಿಗೆಯ ಎಡಭಾಗದಿಂದ ಒಂದು ಸುತ್ತು ಸೆರಗನ್ನು ತೆಗೆದುಕೊಳ್ಳಿ. ಇದರಿಂದ ಸೀರೆ ಉಡಿಸುವುದು ಸುಲಭವಾಗುತ್ತದೆ. ಸೆರಗನ್ನು ಮುಂದೆಯಾದರೂ ಹರಡಬಹುದು ಅಥವಾ ಹಿಂದೆಯಾದರೂ ಪಿನ್‌ ಮಾಡಬಹುದು. ನಿಮಗೆ ಬೇಕಾದ ಶೈಲಿಯಲ್ಲಿ ಸೆರಗು ಹಾಕಿ ಡಿಸೈನ್‌ ಮಾಡಿ. ನಂತರ ಸೊಂಟದ ಪಟ್ಟಿ ಹಾಕಿ. ಹಂತಹಂತವಾಗಿ ಒಡವೆ ಹೂಗಳನ್ನು ಹಾಕಿ, ಅಲಂಕರಿಸಿ. ನೋಡಲು ಆಕರ್ಷಕವಾಗಿ ಕಾಣುವುದು. ಅಲಂಕಾರಕ್ಕೆ ಫಾಲ್ಸ್‌ ಅಥವಾ ಜಿಗ್‌ಜಾಗ್ಸ್‌ ಮಾಡಿರದ ಸೀರೆ ಆಯ್ಕೆ ಮಾಡಿಕೊಳ್ಳುವುದು ಉತ್ತಮ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Mahabharat Story: ಕೌರವರೊಂದಿಗೆ ಸಂಧಾನಕ್ಕೆ ಹೋದ ಶ್ರೀ ಕೃಷ್ಣ ಪಾಂಡವರಿಗಾಗಿ ಕೇಳಿದ 5 ಗ್ರಾಮಗಳು ಈಗ ಎಲ್ಲಿವೆ ಗೊತ್ತೆ?

ಮಹಾಕಾವ್ಯವಾದ ಮಹಾಭಾರತದಲ್ಲಿ (Mahabharat Story) ಶ್ರೀಕೃಷ್ಣ ಕೌರವರ ಬಳಿ ಸಂಧಾನಕ್ಕೆ ಹೋಗುವ ಸನ್ನಿವೇಶ ಅತ್ಯಂತ ಮಹತ್ವಪೂರ್ಣವಾಗಿದೆ. ಇದು ಮುಂದೆ ಮಹಾಯುದ್ಧಕ್ಕೆ ಸ್ಪಷ್ಟ ರೂಪದಲ್ಲಿ ಪ್ರೇರಣೆ ನೀಡಿತ್ತು. ಕೌರವರ ಬಳಿ ಸಂಧಾನಕ್ಕೆ ಹೋದ ಶ್ರೀ ಕೃಷ್ಣನು ಪಾಂಡವರ ಪರವಾಗಿ ಐದು ಹಳ್ಳಿಗಳನ್ನು ನೀಡುವಂತೆ ವಿನಂತಿ ಮಾಡಿದ. ಆದರೆ ದುರ್ಯೋಧನ ಇದನ್ನು ತಿರಸ್ಕರಿಸುತ್ತಾನೆ. ಈ ಐದು ಹಳ್ಳಿಗಳು ಯಾವುದು, ಈಗ ಅವುಗಳು ಎಲ್ಲಿವೆ ಎಂಬ ಮಾಹಿತಿ ಇಲ್ಲಿದೆ.

VISTARANEWS.COM

on

By

Mahabharat Story
Koo

ಮಹಾಭಾರತ (Mahabharat Story) ಯುದ್ಧವಾಗುವುದನ್ನು ತಡೆಯಲು ಕೌರವರ ಬಳಿಗೆ ಪಾಂಡವರ (kauravas and pandavas) ಪರವಾಗಿ ಸಂಧಾನಕ್ಕೆ ಹೋಗುವ ಶ್ರೀಕೃಷ್ಣ (Srikrishna) ಐದು ಗ್ರಾಮಗಳನ್ನು (five villages) ಪಾಂಡವರಿಗೆ ನೀಡುವಂತೆ ವಿನಂತಿ ಮಾಡುತ್ತಾನೆ. ಪಾಂಡವರು ಮತ್ತು ಕೌರವರ ನಡುವಿನ ವಿನಾಶಕಾರಿ ಯುದ್ಧವನ್ನು ತಡೆಯುವ ಗುರಿಯನ್ನು ಹೊಂದಿರುವ ಈ ವಿನಂತಿಯು ಮಹಾಭಾರತ ಕಥೆಯಲ್ಲಿ ನಿರ್ಣಾಯಕ ಕ್ಷಣವಾಗಿತ್ತು. ಈ ವಿನಂತಿಯ ವಿವರವಾದ ನೋಟ ಮತ್ತು ಐದು ಗ್ರಾಮಗಳು ಇಂದು ಎಲ್ಲಿವೆ ಎಂಬ ಮಾಹಿತಿ ಇಲ್ಲಿದೆ.

ಪಾಂಡವರು ಮತ್ತು ಕೌರವರ ನಡುವೆ ಉದ್ವಿಗ್ನತೆ ಹೆಚ್ಚಾದಾಗ ಶ್ರೀ ಕೃಷ್ಣನು ಶಾಂತಿದೂತನಾಗಿ ದುರ್ಯೋಧನನೊಂದಿಗೆ ಮಾತುಕತೆ ನಡೆಸಲು ಹಸ್ತಿನಾಪುರಕ್ಕೆ ತೆರಳುತ್ತಾನೆ. ಪಾಂಡವರಿಗೆ ಬದುಕುಳಿಯಲು ಮತ್ತು ಶಾಂತಿಯನ್ನು ಕಾಪಾಡಲು ಐದು ಗ್ರಾಮಗಳನ್ನು ನೀಡಬೇಕು ಎನ್ನುವ ಪ್ರಸ್ತಾಪವನ್ನು ಇಡುತ್ತಾನೆ. ಕೃಷ್ಣನ ಈ ಪ್ರಸ್ತಾಪವು ಪೂರ್ಣ ಪ್ರಮಾಣದ ಯುದ್ಧವನ್ನು ತಪ್ಪಿಸುವ ಪ್ರಯತ್ನವಾಗಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ದುರ್ಯೋಧನ ಹಗೆತನದಿಂದ ಈ ಪ್ರಸ್ತಾಪವನ್ನು ತಿರಸ್ಕರಿಸಿದ. ಪಾಂಡವರಿಗೆ ಒಂದು ಸೂಜಿಯಷ್ಟು ಭೂಮಿಯನ್ನೂ ಕೊಡುವುದಿಲ್ಲ ಎಂದು ಘೋಷಿಸಿದ. ರಾಜಿ ಮಾಡಿಕೊಳ್ಳುವುದಕ್ಕಿಂತ ಯುದ್ಧದ ಮೂಲಕ ವಿವಾದವನ್ನು ಬಗೆಹರಿಸಲು ಆದ್ಯತೆ ನೀಡಿದ. ಈ ಮೊಂಡುತನದ ನಿರಾಕರಣೆಯು ಕುರುಕ್ಷೇತ್ರದ ಮಹಾಕಾವ್ಯದ ಯುದ್ಧಕ್ಕೆ ವೇದಿಕೆಯಾಯಿತು. ಇದು ಅಪಾರ ನಷ್ಟ ಮತ್ತು ವಿನಾಶಕ್ಕೆ ಕಾರಣವಾಯಿತು.

ಕೃಷ್ಣ ಕೇಳಿರುವ ಐದು ಗ್ರಾಮಗಳು

ಇಂದ್ರಪ್ರಸ್ಥ

ಇಂದ್ರಪ್ರಸ್ಥವನ್ನು ಮಹಾಭಾರತದಲ್ಲಿ ಶ್ರೀ ಪಾಟ್ ಎಂದು ಕರೆಯಲಾಗಿದೆ. ಇದು ಪಾಂಡವರು ತಮ್ಮ ಮೂಲ ಸಾಮ್ರಾಜ್ಯವಾದ ಹಸ್ತಿನಾಪುರವನ್ನು ನಾಶಪಡಿಸಿದ ಅನಂತರ ನಿರ್ಮಿಸಿದ ರಾಜ್ಯದ ರಾಜಧಾನಿಯಾಗಿದೆ. ಇದು ಪ್ರಾಚೀನ ಭಾರತದಲ್ಲಿ ಮಹತ್ವದ ಕೇಂದ್ರವಾಗಿತ್ತು.

ಇಂದ್ರಪ್ರಸ್ಥವು ಈಗ ದೆಹಲಿಯಲ್ಲಿದೆ. ಹಲವಾರು ಐತಿಹಾಸಿಕ ಸ್ಥಳಗಳನ್ನು ಒಳಗೊಂಡಿರುವ ದೆಹಲಿ ನಗರವನ್ನು ಪ್ರಾಚೀನ ಇಂದ್ರಪ್ರಸ್ಥದ ಆಧುನಿಕ ಸಾಕಾರವೆಂದು ಪರಿಗಣಿಸಲಾಗಿದೆ.

ಬಾಗ್ಪತ್

ಪ್ರಾಚೀನ ಕಾಲದಲ್ಲಿ ಬಾಗ್ಪತ್ ಅನ್ನು ವ್ಯಾಘ್ರಪ್ರಸ್ಥ ಎಂದು ಕರೆಯಲಾಗುತ್ತಿತ್ತು. ಅಂದರೆ ‘ಹುಲಿಗಳ ಸ್ಥಳ’. ಇದು ಐತಿಹಾಸಿಕ ದಾಖಲೆಗಳಲ್ಲಿ ದಟ್ಟವಾದ ಹುಲಿ ಸಂಖ್ಯೆಗೆ ಹೆಸರುವಾಸಿಯಾಗಿದೆ.

ಬಾಗ್ಪತ್ ಭಾರತದ ಉತ್ತರ ಪ್ರದೇಶದ ಜಿಲ್ಲೆಯಾಗಿದೆ. ಇದು 50,000ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಪ್ರಮುಖ ಪ್ರದೇಶವಾಗಿದೆ ಮತ್ತು ಮಹಾಭಾರತ ಯುಗಕ್ಕೆ ಸಂಬಂಧಿಸಿದ ಐತಿಹಾಸಿಕ ಮಹತ್ವವನ್ನು ಹೊಂದಿದೆ.

ಪಾಣಿಪತ್

ಮಹಾಭಾರತದಲ್ಲಿ ಪಾಂಡುಪ್ರಸ್ಥ ಎಂದು ಕರೆಯಲ್ಪಡುವ ಪಾಣಿಪತ್ ಮಹಾಕಾವ್ಯದಲ್ಲಿ ಪ್ರಮುಖ ಸ್ಥಳವಾಗಿತ್ತು. ಇದು ಭಾರತೀಯ ಇತಿಹಾಸದಲ್ಲಿ ಮೂರು ಪ್ರಮುಖ ಯುದ್ಧಗಳನ್ನು ಒಳಗೊಂಡಂತೆ ಮಹತ್ವದ ಐತಿಹಾಸಿಕ ಘಟನೆಗಳೊಂದಿಗೆ ಸಂಬಂಧಿಸಿದೆ.

ಪಾಣಿಪತ್ ಭಾರತದ ಹರಿಯಾಣದಲ್ಲಿದೆ. ದೆಹಲಿಯಿಂದ ಸರಿಸುಮಾರು 90 ಕಿಲೋ ಮೀಟರ್ ದೂರದಲ್ಲಿದೆ. ಇದು ಐತಿಹಾಸಿಕ ಯುದ್ಧಗಳಿಗೆ ಹೆಸರುವಾಸಿಯಾಗಿದೆ ಮತ್ತು ಆಧುನಿಕ ಕಾಲದಲ್ಲಿ ಪ್ರಮುಖ ನಗರವಾಗಿ ಮುಂದುವರೆದಿದೆ.

ತಿಲ್‌‌ಪತ್

ತಿಲ್‌‌ಪತ್ ಅನ್ನು ಹಿಂದೆ ತಿಲಪ್ರಸ್ಥ ಎಂದು ಕರೆಯಲಾಗುತ್ತಿತ್ತು. ಇದು ಯಮುನಾ ನದಿಯ ದಡದ ಸಮೀಪವಿರುವ ಒಂದು ವಸಾಹತುವಾಗಿತ್ತು. ಮಹಾಭಾರತದಲ್ಲಿ ವಿವರಿಸಿದ ಪ್ರಾಚೀನ ಭೂಗೋಳದಲ್ಲಿ ಇದು ಒಂದು ಪಾತ್ರವನ್ನು ವಹಿಸಿದೆ.

ತಿಲ್ಪತ್ ಈಗ ಹರಿಯಾಣದ ಫರಿದಾಬಾದ್ ಜಿಲ್ಲೆಯ ಒಂದು ಪಟ್ಟಣವಾಗಿದೆ. ಸುಮಾರು 40,000 ಜನಸಂಖ್ಯೆ ಇರುವ ಇದು ಗಮನಾರ್ಹ ಪ್ರದೇಶವಾಗಿದೆ.

ಸೋನಿಪತ್

ಸೋನಿಪತ್ ಅನ್ನು ಸ್ವರ್ಣಪ್ರಸ್ಥ ಎಂದು ಕರೆಯಲಾಗುತ್ತಿತ್ತು. ಇದನ್ನು ಚಿನ್ನದ ಸ್ಥಳ ಎಂದು ಕರೆಯಲಾಗುತ್ತದೆ. ಇದು ಕೃಷ್ಣ ಪಾಂಡವರಿಗೆ ವಿನಂತಿಸಿದ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ.

ಸೋನಿಪತ್ ಭಾರತದ ಹರಿಯಾಣದಲ್ಲಿರುವ ಒಂದು ಜಿಲ್ಲೆ. ಇದು ತನ್ನ ಐತಿಹಾಸಿಕ ಹೆಸರನ್ನು ಮಾರ್ಪಡಿಸದೆ ಹಾಗೆ ಉಳಿದುಕೊಂಡಿದೆ ಮತ್ತು ರಾಜ್ಯದ ಪ್ರಮುಖ ಜಿಲ್ಲೆಯಾಗಿದೆ.

ಇದನ್ನೂ ಓದಿ: Varamahalakshmi Festival 2024: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಏನು? ಹೆಚ್ಚಿನ ಫಲ ಪಡೆಯಲು ಪೂಜೆ ಹೇಗೆ ಮಾಡಬೇಕು?

ಈ ಐದು ಗ್ರಾಮಗಳಿಗೆ ಮಹಾಭಾರತದಲ್ಲಿ ಮಹತ್ವದ ಸ್ಥಾನವಿದೆ. ದುರ್ಯೋಧನನ ನಿರಾಕರಣೆಯು ಕುರುಕ್ಷೇತ್ರದ ದುರಂತ ಯುದ್ಧಕ್ಕೆ ಕಾರಣವಾದರೆ, ಕೃಷ್ಣನ ಪ್ರಸ್ತಾಪದಲ್ಲಿ ಉಲ್ಲೇಖಿಸಲಾದ ಐತಿಹಾಸಿಕ ಸ್ಥಳಗಳು ಅಸ್ತಿತ್ವದಲ್ಲಿವೆ ಮತ್ತು ಇಂದಿಗೂ ಪ್ರಾಮುಖ್ಯತೆಯನ್ನು ಹೊಂದಿವೆ. ದೆಹಲಿಯಿಂದ ಸೋನಿಪತ್ ವರೆಗೆ ಈ ಪ್ರದೇಶಗಳು ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನು ಪಡೆದ ಕೇಂದ್ರವಾಗಿ ಉಳಿದಿವೆ.

Continue Reading

ಪ್ರಮುಖ ಸುದ್ದಿ

Varamahalakshmi Festival 2024 : ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಏನು? ಹೆಚ್ಚಿನ ಫಲ ಪಡೆಯಲು ಪೂಜೆ ಹೇಗೆ ಮಾಡಬೇಕು?

VISTARANEWS.COM

on

Varamahalakshmi Festival 2024
Koo

ವಿವಾಹಿತ ಮಹಿಳೆಯರು ವಿಶೇಷವಾಗಿ ಮಾಡುವ ವರಮಹಾಲಕ್ಷ್ಮಿ ಹಬ್ಬವನ್ನು (Varamahalakshmi Festival 2024) ಆಗಸ್ಟ್ 16ರಂದು ಶುಕ್ರವಾರ ಆಚರಿಸಲಾಗುತ್ತಿದೆ. ವರಲಕ್ಷ್ಮಿ ವ್ರತವು (varalakshmi vrata) ಮಹಿಳೆಯರೆಲ್ಲ ಸೇರಿ ಭಕ್ತಿ ಮತ್ತು ಸಂತೋಷದಿಂದ ಆಚರಿಸುತ್ತಾರೆ. ಈ ದಿನ ಮಹಿಳೆಯರು ಉಪವಾಸ (fasting) ವ್ರತ ಮಾಡಿ ಲಕ್ಷ್ಮಿ ದೇವಿಯನ್ನು ಪೂಜಿಸಿ ತಮ್ಮ ಪತಿ, ಮಕ್ಕಳು ಮತ್ತು ಇಡೀ ಕುಟುಂಬಕ್ಕೆ ಆಶೀರ್ವಾದವನ್ನು ಕೋರುತ್ತಾರೆ.

ಪಾರ್ವತಿ ದೇವಿಯು ಶಿವನಲ್ಲಿ ಒಮ್ಮೆ ಭೂಮಿಯಲ್ಲಿ ಮಹಿಳೆಯರ ಕಷ್ಟಗಳನ್ನು ದೂರ ಮಾಡಬಹುದಾದ ವ್ರತ ಯಾವುದು ಎಂಬುದಾಗಿ ಪ್ರಶ್ನಿಸುತ್ತಾಳೆ. ಅದಕ್ಕೆ ಶಿವನು ಒಂದು ಕಥೆ ಹೇಳುತ್ತಾನೆ. ಅದರ ಪ್ರಕಾರ ಕುಂಡಿನಿ ಎಂಬ ಪಟ್ಟಣದಲ್ಲಿ ಚಾರುಮತಿ ಎಂಬ ಬ್ರಾಹ್ಮಣ ಪತಿವ್ರತಾ ಸ್ತ್ರೀ ನಿರ್ಮಲ ಮನಸ್ಸಿನವಳಾಗಿದ್ದಳು. ಒಂದು ದಿನ ಲಕ್ಷ್ಮಿ ದೇವಿಯು ಆಕೆಯ ಕನಸಿನಲ್ಲಿ ಬಂದು ವರಲಕ್ಷ್ಮಿ ವ್ರತ ಮಾಡಿದರೆ ನಿನ್ನ ಇಷ್ಟಾರ್ಥವನ್ನು ನೆರವೇರಿಸುವುದಾಗಿ ಹೇಳುತ್ತಾಳೆ. ಬಳಿಕ ಆಕೆ ನೆರೆಹೊರೆಯ ಮಹಿಳೆಯರನ್ನು ಸೇರಿಸಿ ವರಮಹಾಲಕ್ಷ್ಮಿ ವ್ರತವನ್ನು ಮಾಡಿ, ಲಕ್ಷ್ಮಿ ದೇವಿಗೆ ಪೂಜೆಯನ್ನು ಸಲ್ಲಿಸುತ್ತಾಳೆ. ಬಳಿಕ ಅವಳ ಕಷ್ಟಗಳಲ್ಲೇ ಒಂದೊಂದಾಗಿ ಪರಿಹಾರವಾಗುತ್ತದೆ. ಆ ಬಳಿಕ ವರಮಹಾಲಕ್ಷ್ಮಿ ವ್ರತವು ಮಹಿಳೆಯರು ಮಾಡಬಹುದಾದ ಶ್ರೇಷ್ಠ ವ್ರತವಾಯಿತು ಎಂದು ಶಿವ ಪಾರ್ವತಿಗೆ ಹೇಳಿದನು ಎಂಬುದು ಈ ವ್ರತದ ಐತಿಹ್ಯ.

ವರಲಕ್ಷ್ಮಿ ವ್ರತವನ್ನು ಮಾಡುವ ಸಿದ್ಧತೆಯಲ್ಲಿ ಇರುವವರು ಈ ಬಾರಿ ಪೂಜೆಯ ಮನೆ, ದೇವಿಯ ಅಲಂಕಾರದಲ್ಲಿ ವಿಶೇಷತೆಯನ್ನು ತೋರಬಹುದು. ಈ ಮೂಲಕ ಹಬ್ಬವನ್ನು ಅರ್ಥಪೂರ್ಣಗೊಳಿಸಬಹುದು. ಅಲಂಕಾರದಲ್ಲಿ ಕುಟುಂಬದ ಸಂಪ್ರದಾಯ ಮತ್ತು ಶೈಲಿಯನ್ನು ಪ್ರತಿಬಿಂಬಿಸುವ ಅಂಶಗಳನ್ನು ಸೇರಿಸಲು ಮರೆಯದಿರಿ. ಕರಕುಶಲ ವಸ್ತುಗಳು, ಗೃಹೋಪಯೋಗಿ ವಸ್ತುಗಳನ್ನು ಅಲಂಕಾರಕ್ಕೆ ಬಳಸಿ.

ವರಮಹಾಲಕ್ಷ್ಮಿ ಪೂಜೆಯ ಅಲಂಕಾರಕ್ಕೆ ಬೇಕಾಗುವ ಸಾಮಗ್ರಿಗಳ ವಿವರ ಇಂತಿದೆ.

1. ಕುಂಕುಮ

ಹಣೆಯ ಮೇಲಿನ ಪವಿತ್ರ ಗುರುತಾಗಿ ಮತ್ತು ಪೂಜಾ ವಿಧಿಗಳಲ್ಲಿ ಕುಂಕುಮವನ್ನು ಬಳಸಿ. ಪೂಜಾ ಜಾಗಕ್ಕೆ ಸಾಂಪ್ರದಾಯಿಕ ಕೆಂಪು ಬಣ್ಣದ ಸ್ಪರ್ಶವನ್ನು ನೀಡಿ.

2. ಅರಶಿನ

ಹಬ್ಬದ ಆಚರಣೆ ಮತ್ತು ಅಲಂಕಾರಗಳಲ್ಲಿ ಅರಶಿನ ಅತ್ಯಗತ್ಯ. ಇದನ್ನು ಮಂಗಳಕರ ಮತ್ತು ಶುದ್ಧೀಕರಿಸುವ ಗುಣಗಳಿಗಾಗಿ ಬಳಸಲಾಗುತ್ತದೆ.

3. ಕಲಶ

ನೀರು, ತೆಂಗಿನಕಾಯಿ ಮತ್ತು ಮಾವಿನ ಎಲೆಗಳಿಂದ ತುಂಬಿದ ಕಲಶವನ್ನು ಅಲಂಕರಿಸಿ. ಇದು ಸಮೃದ್ಧಿಯನ್ನು ಸಂಕೇತಿಸುತ್ತದೆ ಮತ್ತು ಪೂಜಾದಲ್ಲಿ ಇದು ಕೇಂದ್ರ ಭಾಗವಾಗಿದೆ.

4. ಮಾವಿನ ಎಲೆಗಳು

ತಾಜಾ ಮಾವಿನ ಎಲೆಗಳನ್ನು ಪ್ರವೇಶದ್ವಾರದಲ್ಲಿ ಮತ್ತು ಪೂಜಾ ಪ್ರದೇಶದ ಸುತ್ತಲೂ ನೇತುಹಾಕಿ. ಅವರು ಶುದ್ಧತೆಯನ್ನು ಸೂಚಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ಹೊರಹಾಕುತ್ತದೆ.

5. ಬಾಳೆಹಣ್ಣು

ಪೂಜೆಯಲ್ಲಿ ಬಾಳೆ ಹಣ್ಣು ಅತ್ಯಂತ ಪ್ರಮುಖ ವಸ್ತು. ಇದನ್ನು ದೇವರಿಗೆ ನೈವೇದ್ಯವಾಗಿ ಸಮರ್ಪಿಸಲು, ಉಪವಾಸ ಮಾಡುತ್ತಿರುವ ಬಂದ ಅತಿಥಿಗಳಿಗೆ ನೀಡಲು ಬಳಸಬಹುದು.

Varamahalakshmi Festival 2024
Varamahalakshmi Festival 2024

6. ಲಕ್ಷ್ಮಿ ಮುಖ ಅಲಂಕಾರ

ಲಕ್ಷ್ಮಿ ದೇವಿಯ ಉಪಸ್ಥಿತಿ ಮತ್ತು ಆಶೀರ್ವಾದವನ್ನು ಸಂಕೇತಿಸಲು ಪೂಜಾ ಪ್ರದೇಶದ ಮಧ್ಯದಲ್ಲಿ ಲಕ್ಷ್ಮಿ ದೇವಿಯನ್ನು ಸುಂದರವಾಗಿ ಅಲಂಕರಿಸಿದ ಮುಖವನ್ನು ಇರಿಸಿ.

7. ಹೂವುಗಳು

ಚೆಂಡು ಹೂವು, ಸೇವಂತಿಗೆ, ಗುಲಾಬಿ ಮತ್ತು ಮಲ್ಲಿಗೆಯಂತಹ ಹೂವುಗಳನ್ನು ಪೂಜಾ ಸ್ಥಳವನ್ನು ಅಲಂಕರಿಸಲು ಬಳಸಬಹುದು. ಇದು ಪರಿಮಳಯುಕ್ತ ಮತ್ತು ವರ್ಣರಂಜಿತ ವಾತಾವರಣವನ್ನು ಸೃಷ್ಟಿಸುತ್ತದೆ.

8. ಹಣ್ಣುಗಳು

ಪೂಜಾ ಸ್ಥಳದ ಸುತ್ತಲೂ ತಾಜಾ ಹಣ್ಣುಗಳನ್ನು ನೈವೇದ್ಯವಾಗಿ ಜೋಡಿಸಿ. ಇದರಿಂದ ಪೂಜೆ ಸ್ಥಳದಲ್ಲಿ ನೈಸರ್ಗಿಕ ಸೌಂದರ್ಯದ ಅಲಂಕಾರ ಮಾಡಿದಂತಾಗುತ್ತದೆ. ಇದು ಸಮೃದ್ಧಿಯನ್ನು ಸೂಚಿಸುತ್ತದೆ.

9. ಚಂದನ

ಪವಿತ್ರ ಗುಣಲಕ್ಷಣ ಇರುವ ಶ್ರೀಗಂಧವನ್ನು ಪೇಸ್ಟ್ ಮಾಡಿ ಪೂಜಾ ಸ್ಥಳದಲ್ಲಿ ಇರಿಸಿ. ಇದನ್ನು ಪೂಜೆಯಲ್ಲಿ ಭಾಗವಹಿಸುವವರ ಹಣೆಗೆ ಹಚ್ಚಿ.

10. ಡ್ರೈ ಫ್ರೂಟ್ಸ್ ಮತ್ತು ಗಿಫ್ಟ್ ಹ್ಯಾಂಪರ್ಸ್

ಬಂದ ಅತಿಥಿಗಳಿಗೆ ನೀಡಲು ಒಣ ಹಣ್ಣು, ಉಡುಗೊರೆ ಹ್ಯಾಂಪರ್‌ಗಳನ್ನು ಮೊದಲೇ ಸಿದ್ದಪಡಿಸಿ ಅಲಂಕಾರದ ರೂಪದಲ್ಲಿ ಜೋಡಿಸಿ.

11. ಲಕ್ಷ್ಮಿ ದೇವಿಯ ವಿಗ್ರಹ

ಪೂಜಾ ಪ್ರದೇಶದ ಮಧ್ಯದಲ್ಲಿ ಸುಂದರವಾಗಿ ಅಲಂಕರಿಸಿದ ಲಕ್ಷ್ಮಿ ದೇವಿಯ ವಿಗ್ರಹವನ್ನು ಇರಿಸಿ. ಸುತ್ತಲೂ ಹೂವು ಮತ್ತು ಅಗತ್ಯ ವಸ್ತುಗಳನ್ನು ಜೋಡಿಸಿ.

12. ಧೂಪದ್ರವ್ಯದ ತುಂಡು

ಗಾಳಿಯನ್ನು ಶುದ್ಧೀಕರಿಸಲು ಮತ್ತು ಪೂಜಾ ಸ್ಥಳದ ಆಧ್ಯಾತ್ಮಿಕ ವಾತಾವರಣವನ್ನು ಹೆಚ್ಚಿಸಲು ಅಲಂಕಾರಿಕ ಸ್ಟ್ಯಾಂಡ್‌ನಲ್ಲಿ ಧೂಪದ್ರವ್ಯವನ್ನು ಬೆಳಗಿಸಿ.

ಇದನ್ನೂ ಓದಿ: Varamahalakshmi Festival 2024 : ವರಮಹಾಲಕ್ಷ್ಮಿ ಹಬ್ಬದ ದಿನ ಸುಲಭವಾಗಿ ಮಾಡಬಹುದಾದ ರುಚಿಕರ ಖಾದ್ಯಗಳಿವು; ವಿಡಿಯೊಗಳಿವೆ

13. ಲಕ್ಷ್ಮೀ ಪೂಜಾ ತಾಳಿ

ಕುಂಕುಮ, ಅರಶಿನ, ಅಕ್ಕಿ, ವೀಳ್ಯದೆಲೆ ಮತ್ತು ಅಡಿಕೆಯಂತಹ ಎಲ್ಲಾ ಅಗತ್ಯ ವಸ್ತುಗಳೊಂದಿಗೆ ಅಲಂಕರಿಸಿದ ಲಕ್ಷ್ಮಿ ಪೂಜಾ ತಾಳಿಯನ್ನು ಸಿದ್ಧಪಡಿಸಿ.

14. ಹೊಸ ರವಿಕೆ ಕಣ

ಪೂಜೆಯ ಭಾಗವಾಗಿ ಹೊಸ ರವಿಕೆ ತುಂಡುಗಳನ್ನು ದೇವರಿಗೆ ಅರ್ಪಿಸಿ. ಇದು ಗೌರವ ಮತ್ತು ಕೃತಜ್ಞತೆಯನ್ನು ಸಂಕೇತಿಸುವ ಸಾಂಪ್ರದಾಯಿಕ ಕೊಡುಗೆಯಾಗಿದೆ. ಇದನ್ನು ಬಂದಿರುವ ಮಹಿಳೆಯರಿಗೆ ನೀಡಿ.

Continue Reading

ಧಾರ್ಮಿಕ

Vastu Tips: ಮನಸ್ಸಿಗೆ ನೆಮ್ಮದಿ, ಮನೆಯಲ್ಲಿ ಸಮೃದ್ಧಿಗಾಗಿ ಇಲ್ಲಿದೆ ಸರಳ ವಾಸ್ತು ಸೂತ್ರ

ಮನೆಯಲ್ಲಿ ಕೆಲವೊಂದು ಸಸ್ಯಗಳನ್ನು ಇಡುವುದು, ದೂಪ ದ್ರವ್ಯಗಳನ್ನು ಸುಡುವುದು ವಾಸ್ತು ಶಾಸ್ತ್ರದ (Vastu Tips) ಪ್ರಕಾರ ಮನೆಗೆ ಹಣ, ಸಂತೋಷ, ಸಮೃದ್ಧಿಯನ್ನು ಆಕರ್ಷಿಸುತ್ತದೆ. ಮನೆಯಲ್ಲಿ ಯಾವ ಸಸ್ಯಗಳನ್ನು ಇಡಬಹುದು, ಧೂಪದ್ರವ್ಯಗಳನ್ನು ಸುಡುವುದರಿಂದ ಏನು ಪ್ರಯೋಜನ, ಮನೆಯ ಸಮೃದ್ಧಿಗಾಗಿ ಏನು ಮಾಡಬಹುದು ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM

on

By

Vastu Tips
Koo

ಮನೆಯಲ್ಲಿ (vastu for home) ಸುಖ, ಶಾಂತಿ, ನೆಮ್ಮದಿ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಇದಕ್ಕಾಗಿ ವಾಸ್ತು ಶಾಸ್ತ್ರದಲ್ಲಿ (Vastu Tips) ಕೆಲವು ಸಲಹೆಗಳನ್ನೂ ನೀಡಲಾಗಿದೆ. ಮನೆಯಲ್ಲಿ ಕೆಲವೊಂದು ಸಸ್ಯಗಳನ್ನು (tree) ಇಡುವುದು, ಧೂಪ ದ್ರವ್ಯಗಳನ್ನು (Incense stick) ಸುಡುವುದು ವಾಸ್ತು ಶಾಸ್ತ್ರದ ಪ್ರಕಾರ ಮನೆಗೆ ಹಣ, ಸಂತೋಷ, ಸಮೃದ್ಧಿಯನ್ನು ಆಕರ್ಷಿಸುತ್ತದೆ. ಹೀಗಾಗಿ ಮನೆಯಲ್ಲಿ ಯಾವ ಸಸ್ಯಗಳನ್ನು ಇಡಬಹುದು, ಧೂಪದ್ರವ್ಯಗಳನ್ನು ಸುಡುವುದರಿಂದ ಏನು ಪ್ರಯೋಜನ, ಮನೆಯ ಸಮೃದ್ಧಿಗಾಗಿ ಏನು ಮಾಡಬಹುದು ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಸಸ್ಯಗಳು

ಹೆಸರೇ ಹೇಳುವಂತೆ ಮನಿ ಪ್ಲಾಂಟ್‌ ಮನೆಯಲ್ಲಿ ಲಕ್ಷ್ಮಿ ನೆಲೆಸಲು ಕಾರಣವಾಗುತ್ತವೆ ಎನ್ನುವ ನಂಬಿಕೆ ಇದೆ. ಬೇಗ ಶ್ರೀಮಂತರಾಗಲು ಇದು ಸಹಾಯ ಮಾಡುತ್ತದೆ ಎನ್ನಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಮನಿಪ್ಲಾಂಟ್‌ಗೆ ವಿಶೇಷವಾದ ಸ್ಥಾನಮಾನವಿದೆ. ಮನೆಯಲ್ಲಿ ಮನಿ ಪ್ಲಾಂಟ್‌ಗಳನ್ನು ಇಟ್ಟುಕೊಳ್ಳುವುದು ಹಣ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ. ಮನಿ ಪ್ಲಾಂಟ್, ಬಿದಿರಿನ ಸಸ್ಯ ಮತ್ತು ರಬ್ಬರ್ ಸಸ್ಯಗಳಂತಹ ಸಸ್ಯಗಳು ಜೀವನದಲ್ಲಿ ಸಂತೋಷವನ್ನು ಆಕರ್ಷಿಸಲು ಸಹಾಯಕವಾಗಿವೆ.

ಧೂಪದ್ರವ್ಯ

ಧೂಪದ್ರವ್ಯದ ತುಂಡುಗಳು ಜೀವನದಲ್ಲಿ ಸಕಾರಾತ್ಮಕತೆ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತವೆ. ಮನೆಯಲ್ಲಿ ಅಗರಬತ್ತಿಯನ್ನು ಸುಡುವುದು ವಾಸ್ತು ಪ್ರಕಾರ ಒಳ್ಳೆಯ ಅಭ್ಯಾಸ. ಧೂಪದ್ರವ್ಯದ ತುಂಡುಗಳಿಂದ ಹೊರ ಬರುವ ಹೊಗೆ ಮತ್ತು ಹೋಮ ಹವನದ ಹೊಗೆ ಪರಿಸರವನ್ನು ಶುದ್ಧೀಕರಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಪವಿತ್ರ ವಾತಾವರಣವನ್ನು ಸೃಷ್ಟಿಸುತ್ತದೆ. ಧೂಪದ್ರವ್ಯದ ಪರಿಮಳಯುಕ್ತ ಹೊಗೆಯು ಗಾಳಿಯನ್ನು ಶುದ್ಧೀಕರಿಸುತ್ತದೆ, ಮನಸ್ಸನ್ನು ಶಾಂತಗೊಳಿಸುತ್ತದೆ.

ಸ್ವಚ್ಛವಾದ ಪ್ರವೇಶ ದ್ವಾರ

ಮನೆಯಲ್ಲಿ ಸಕಾರಾತ್ಮಕತೆ ಮತ್ತು ಕ್ಷೇಮವನ್ನು ಆಕರ್ಷಿಸಲು ಉತ್ತಮವಾದ ಮತ್ತು ಸ್ವಚ್ಛವಾದ ಪ್ರವೇಶದ್ವಾರವು ಮುಖ್ಯವಾಗಿದೆ. ವಾಸ್ತು ಪ್ರಕಾರ, ನಿಮ್ಮ ಪ್ರವೇಶ ದ್ವಾರವು ಮನಸ್ಸನ್ನು ಹರ್ಷಗೊಳ್ಳುವಂತೆ ಮಾಡಬೇಕು. ಇದಕ್ಕಾಗಿ ನಿತ್ಯವೂ ಮನೆಯ ಪ್ರವೇಶ ದ್ವಾರವನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕುವುದು, ಹೂವುಗಳಿಂದ ದ್ವಾರವನ್ನು ಅಲಂಕರಿಸುವುದು ಒಳ್ಳೆಯದು.

ನೀರಿನ ಸೋರಿಕೆ

ವಾಸ್ತು ಪ್ರಕಾರ ಮನೆಯೊಳಗೇ ನೀರು ಸೋರಿಕೆಯಾಗುತ್ತಿದ್ದರೆ ಕೂಡಲೇ ಅದನ್ನು ಸರಿಪಡಿಸಬೇಕು. ಮನೆಯ ಸುತ್ತಲೂ ನೀರಿನ ಸೋರಿಕೆ ಇದ್ದರೆ ಅದನ್ನು ಸರಿಪಡಿಸಿ. ಯಾಕೆಂದರೆ ನೀರು ಸೋರಿಕೆಯು ಮನೆಮಂದಿಯ ಜೀವನದ ಬೆಳವಣಿಗೆಗೆ ಅಡ್ಡಿಯಾಗಬಹುದು ಮತ್ತು ಹಣದ ಹರಿವಿಗೆ ತೊಂದರೆ ಉಂಟು ಮಾಡಬಹುದು.

ಇದನ್ನೂ ಓದಿ: Vastu Tips: ಈ ವಸ್ತುಗಳನ್ನು ಮನೆಯಲ್ಲಿಟ್ಟರೆ ಸಂತೋಷ, ಸಮೃದ್ಧಿ, ನೆಮ್ಮದಿ ಸಿಗುತ್ತವೆ!

ತಾಮ್ರ ಸ್ವಸ್ತಿಕ

ಮನೆಯಲ್ಲಿ ತಾಮ್ರದ ಸ್ವಸ್ತಿಕವು ವಾಸ್ತು ಪ್ರಕಾರ ಜೀವನದಲ್ಲಿ ಹಣ, ಸಂತೋಷ ಮತ್ತು ಸಮೃದ್ಧಿಯನ್ನು ಆಕರ್ಷಿಸಲು ಉತ್ತಮ ಮಾರ್ಗವಾಗಿದೆ. ಮನೆಯ ಪ್ರವೇಶ ದ್ವಾರದಲ್ಲಿ ಅಥವಾ ಪೂಜಾ ಸ್ಥಳದಲ್ಲಿ ಇವನ್ನು ಇರಿಸುವುದು ಶುಭ ಎಂದು ಪರಿಗಣಿಸಲಾಗಿದೆ. ಸ್ವಸ್ತಿಕವು ಶಕ್ತಿ ಮತ್ತು ಶಾಂತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಮನೆಯ ಮುಖ್ಯ ಬಾಗಿಲ ಬಳಿ ತಾಮ್ರದ ಸ್ವಸ್ತಿಕ ಇಟ್ಟರೆ ದಾರಿದ್ರ್ಯವೂ ಶಾಶ್ವತವಾಗಿ ದೂರವಾಗುತ್ತದೆ ಎನ್ನಲಾಗುತ್ತದೆ.

Continue Reading

ಧಾರ್ಮಿಕ

Varamahalakshmi Festival 2024: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಏನು? ಹೆಚ್ಚಿನ ಫಲ ಪಡೆಯಲು ಪೂಜೆ ಹೇಗೆ ಮಾಡಬೇಕು?

ವರಲಕ್ಷ್ಮಿ ವ್ರತ ಪೂಜೆಗೆ (Varamahalakshmi Festival 2024) ಸುಂದರವಾದ ಮತ್ತು ಪ್ರಶಾಂತ ವಾತಾವರಣವನ್ನು ಸೃಷ್ಟಿಸಲು ಮನೆ, ಪೂಜಾ ಸ್ಥಳದ ಅಲಂಕಾರದಲ್ಲಿ ಸಾಂಪ್ರದಾಯಿಕ ಸ್ಪರ್ಶ ನೀಡಿ. ಇದರಿಂದ ಹಬ್ಬವನ್ನು ಸ್ಮರಣೀಯವಾಗಿ ಮಾಡಬಹುದು. ಹೆಚ್ಚು ಸಂತೋಷ ಮತ್ತು ಭಕ್ತಿಯಿಂದ ಆಚರಿಸಬಹುದು. ವರಲಕ್ಷ್ಮಿ ವ್ರತವನ್ನು ಹೇಗೆ ಆಚರಿಸಬೇಕು? ಅಲಂಕಾರ ಹೇಗಿರಬೇಕು ಇತ್ಯಾದಿ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM

on

By

Koo

ವಿವಾಹಿತ ಮಹಿಳೆಯರು ವಿಶೇಷವಾಗಿ ಮಾಡುವ ವರಮಹಾಲಕ್ಷ್ಮಿ ಹಬ್ಬವನ್ನು (Varamahalakshmi Festival 2024) ಆಗಸ್ಟ್ 16ರಂದು ಶುಕ್ರವಾರ ಆಚರಿಸಲಾಗುತ್ತಿದೆ. ವರಲಕ್ಷ್ಮಿ ವ್ರತವು (varalakshmi vrata) ಮಹಿಳೆಯರೆಲ್ಲ ಸೇರಿ ಭಕ್ತಿ ಮತ್ತು ಸಂತೋಷದಿಂದ ಆಚರಿಸುತ್ತಾರೆ. ಈ ದಿನ ಮಹಿಳೆಯರು ಉಪವಾಸ (fasting) ವ್ರತ ಮಾಡಿ ಲಕ್ಷ್ಮಿ ದೇವಿಯನ್ನು ಪೂಜಿಸಿ ತಮ್ಮ ಪತಿ, ಮಕ್ಕಳು ಮತ್ತು ಇಡೀ ಕುಟುಂಬಕ್ಕೆ ಆಶೀರ್ವಾದವನ್ನು ಕೋರುತ್ತಾರೆ.

ಪಾರ್ವತಿ ದೇವಿಯು ಶಿವನಲ್ಲಿ ಒಮ್ಮೆ ಭೂಮಿಯಲ್ಲಿ ಮಹಿಳೆಯರ ಕಷ್ಟಗಳನ್ನು ದೂರ ಮಾಡಬಹುದಾದ ವ್ರತ ಯಾವುದು ಎಂಬುದಾಗಿ ಪ್ರಶ್ನಿಸುತ್ತಾಳೆ. ಅದಕ್ಕೆ ಶಿವನು ಒಂದು ಕಥೆ ಹೇಳುತ್ತಾನೆ. ಅದರ ಪ್ರಕಾರ ಕುಂಡಿನಿ ಎಂಬ ಪಟ್ಟಣದಲ್ಲಿ ಚಾರುಮತಿ ಎಂಬ ಬ್ರಾಹ್ಮಣ ಪತಿವ್ರತಾ ಸ್ತ್ರೀ ನಿರ್ಮಲ ಮನಸ್ಸಿನವಳಾಗಿದ್ದಳು. ಒಂದು ದಿನ ಲಕ್ಷ್ಮಿ ದೇವಿಯು ಆಕೆಯ ಕನಸಿನಲ್ಲಿ ಬಂದು ವರಲಕ್ಷ್ಮಿ ವ್ರತ ಮಾಡಿದರೆ ನಿನ್ನ ಇಷ್ಟಾರ್ಥವನ್ನು ನೆರವೇರಿಸುವುದಾಗಿ ಹೇಳುತ್ತಾಳೆ. ಬಳಿಕ ಆಕೆ ನೆರೆಹೊರೆಯ ಮಹಿಳೆಯರನ್ನು ಸೇರಿಸಿ ವರಮಹಾಲಕ್ಷ್ಮಿ ವ್ರತವನ್ನು ಮಾಡಿ, ಲಕ್ಷ್ಮಿ ದೇವಿಗೆ ಪೂಜೆಯನ್ನು ಸಲ್ಲಿಸುತ್ತಾಳೆ. ಬಳಿಕ ಅವಳ ಕಷ್ಟಗಳಲ್ಲೇ ಒಂದೊಂದಾಗಿ ಪರಿಹಾರವಾಗುತ್ತದೆ. ಆ ಬಳಿಕ ವರಮಹಾಲಕ್ಷ್ಮಿ ವ್ರತವು ಮಹಿಳೆಯರು ಮಾಡಬಹುದಾದ ಶ್ರೇಷ್ಠ ವ್ರತವಾಯಿತು ಎಂದು ಶಿವ ಪಾರ್ವತಿಗೆ ಹೇಳಿದನು ಎಂಬುದು ಈ ವ್ರತದ ಐತಿಹ್ಯ.

ವರಲಕ್ಷ್ಮಿ ವ್ರತವನ್ನು ಮಾಡುವ ಸಿದ್ಧತೆಯಲ್ಲಿ ಇರುವವರು ಈ ಬಾರಿ ಪೂಜೆಯ ಮನೆ, ದೇವಿಯ ಅಲಂಕಾರದಲ್ಲಿ ವಿಶೇಷತೆಯನ್ನು ತೋರಬಹುದು. ಈ ಮೂಲಕ ಹಬ್ಬವನ್ನು ಅರ್ಥಪೂರ್ಣಗೊಳಿಸಬಹುದು. ಅಲಂಕಾರದಲ್ಲಿ ಕುಟುಂಬದ ಸಂಪ್ರದಾಯ ಮತ್ತು ಶೈಲಿಯನ್ನು ಪ್ರತಿಬಿಂಬಿಸುವ ಅಂಶಗಳನ್ನು ಸೇರಿಸಲು ಮರೆಯದಿರಿ. ಕರಕುಶಲ ವಸ್ತುಗಳು, ಗೃಹೋಪಯೋಗಿ ವಸ್ತುಗಳನ್ನು ಅಲಂಕಾರಕ್ಕೆ ಬಳಸಿ.

ವರಮಹಾಲಕ್ಷ್ಮಿ ಪೂಜೆಯ ಅಲಂಕಾರಕ್ಕೆ ಬೇಕಾಗುವ ಸಾಮಗ್ರಿಗಳ ವಿವರ ಇಂತಿದೆ.

1. ಕುಂಕುಮ

ಹಣೆಯ ಮೇಲಿನ ಪವಿತ್ರ ಗುರುತಾಗಿ ಮತ್ತು ಪೂಜಾ ವಿಧಿಗಳಲ್ಲಿ ಕುಂಕುಮವನ್ನು ಬಳಸಿ. ಪೂಜಾ ಜಾಗಕ್ಕೆ ಸಾಂಪ್ರದಾಯಿಕ ಕೆಂಪು ಬಣ್ಣದ ಸ್ಪರ್ಶವನ್ನು ನೀಡಿ.

2. ಅರಶಿನ

ಹಬ್ಬದ ಆಚರಣೆ ಮತ್ತು ಅಲಂಕಾರಗಳಲ್ಲಿ ಅರಶಿನ ಅತ್ಯಗತ್ಯ. ಇದನ್ನು ಮಂಗಳಕರ ಮತ್ತು ಶುದ್ಧೀಕರಿಸುವ ಗುಣಗಳಿಗಾಗಿ ಬಳಸಲಾಗುತ್ತದೆ.

3. ಕಲಶ

ನೀರು, ತೆಂಗಿನಕಾಯಿ ಮತ್ತು ಮಾವಿನ ಎಲೆಗಳಿಂದ ತುಂಬಿದ ಕಲಶವನ್ನು ಅಲಂಕರಿಸಿ. ಇದು ಸಮೃದ್ಧಿಯನ್ನು ಸಂಕೇತಿಸುತ್ತದೆ ಮತ್ತು ಪೂಜಾದಲ್ಲಿ ಇದು ಕೇಂದ್ರ ಭಾಗವಾಗಿದೆ.

4. ಮಾವಿನ ಎಲೆಗಳು

ತಾಜಾ ಮಾವಿನ ಎಲೆಗಳನ್ನು ಪ್ರವೇಶದ್ವಾರದಲ್ಲಿ ಮತ್ತು ಪೂಜಾ ಪ್ರದೇಶದ ಸುತ್ತಲೂ ನೇತುಹಾಕಿ. ಅವರು ಶುದ್ಧತೆಯನ್ನು ಸೂಚಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ಹೊರಹಾಕುತ್ತದೆ.

5. ಬಾಳೆಹಣ್ಣು

ಪೂಜೆಯಲ್ಲಿ ಬಾಳೆ ಹಣ್ಣು ಅತ್ಯಂತ ಪ್ರಮುಖ ವಸ್ತು. ಇದನ್ನು ದೇವರಿಗೆ ನೈವೇದ್ಯವಾಗಿ ಸಮರ್ಪಿಸಲು, ಉಪವಾಸ ಮಾಡುತ್ತಿರುವ ಬಂದ ಅತಿಥಿಗಳಿಗೆ ನೀಡಲು ಬಳಸಬಹುದು.

Varamahalakshmi Festival 2024
Varamahalakshmi Festival 2024

6. ಲಕ್ಷ್ಮಿ ಮುಖ ಅಲಂಕಾರ

ಲಕ್ಷ್ಮಿ ದೇವಿಯ ಉಪಸ್ಥಿತಿ ಮತ್ತು ಆಶೀರ್ವಾದವನ್ನು ಸಂಕೇತಿಸಲು ಪೂಜಾ ಪ್ರದೇಶದ ಮಧ್ಯದಲ್ಲಿ ಲಕ್ಷ್ಮಿ ದೇವಿಯನ್ನು ಸುಂದರವಾಗಿ ಅಲಂಕರಿಸಿದ ಮುಖವನ್ನು ಇರಿಸಿ.

7. ಹೂವುಗಳು

ಚೆಂಡು ಹೂವು, ಸೇವಂತಿಗೆ, ಗುಲಾಬಿ ಮತ್ತು ಮಲ್ಲಿಗೆಯಂತಹ ಹೂವುಗಳನ್ನು ಪೂಜಾ ಸ್ಥಳವನ್ನು ಅಲಂಕರಿಸಲು ಬಳಸಬಹುದು. ಇದು ಪರಿಮಳಯುಕ್ತ ಮತ್ತು ವರ್ಣರಂಜಿತ ವಾತಾವರಣವನ್ನು ಸೃಷ್ಟಿಸುತ್ತದೆ.

8. ಹಣ್ಣುಗಳು

ಪೂಜಾ ಸ್ಥಳದ ಸುತ್ತಲೂ ತಾಜಾ ಹಣ್ಣುಗಳನ್ನು ನೈವೇದ್ಯವಾಗಿ ಜೋಡಿಸಿ. ಇದರಿಂದ ಪೂಜೆ ಸ್ಥಳದಲ್ಲಿ ನೈಸರ್ಗಿಕ ಸೌಂದರ್ಯದ ಅಲಂಕಾರ ಮಾಡಿದಂತಾಗುತ್ತದೆ. ಇದು ಸಮೃದ್ಧಿಯನ್ನು ಸೂಚಿಸುತ್ತದೆ.

9. ಚಂದನ

ಪವಿತ್ರ ಗುಣಲಕ್ಷಣ ಇರುವ ಶ್ರೀಗಂಧವನ್ನು ಪೇಸ್ಟ್ ಮಾಡಿ ಪೂಜಾ ಸ್ಥಳದಲ್ಲಿ ಇರಿಸಿ. ಇದನ್ನು ಪೂಜೆಯಲ್ಲಿ ಭಾಗವಹಿಸುವವರ ಹಣೆಗೆ ಹಚ್ಚಿ.

10. ಡ್ರೈ ಫ್ರೂಟ್ಸ್ ಮತ್ತು ಗಿಫ್ಟ್ ಹ್ಯಾಂಪರ್ಸ್

ಬಂದ ಅತಿಥಿಗಳಿಗೆ ನೀಡಲು ಒಣ ಹಣ್ಣು, ಉಡುಗೊರೆ ಹ್ಯಾಂಪರ್‌ಗಳನ್ನು ಮೊದಲೇ ಸಿದ್ದಪಡಿಸಿ ಅಲಂಕಾರದ ರೂಪದಲ್ಲಿ ಜೋಡಿಸಿ.

11. ಲಕ್ಷ್ಮಿ ದೇವಿಯ ವಿಗ್ರಹ

ಪೂಜಾ ಪ್ರದೇಶದ ಮಧ್ಯದಲ್ಲಿ ಸುಂದರವಾಗಿ ಅಲಂಕರಿಸಿದ ಲಕ್ಷ್ಮಿ ದೇವಿಯ ವಿಗ್ರಹವನ್ನು ಇರಿಸಿ. ಸುತ್ತಲೂ ಹೂವು ಮತ್ತು ಅಗತ್ಯ ವಸ್ತುಗಳನ್ನು ಜೋಡಿಸಿ.

12. ಧೂಪದ್ರವ್ಯದ ತುಂಡು

ಗಾಳಿಯನ್ನು ಶುದ್ಧೀಕರಿಸಲು ಮತ್ತು ಪೂಜಾ ಸ್ಥಳದ ಆಧ್ಯಾತ್ಮಿಕ ವಾತಾವರಣವನ್ನು ಹೆಚ್ಚಿಸಲು ಅಲಂಕಾರಿಕ ಸ್ಟ್ಯಾಂಡ್‌ನಲ್ಲಿ ಧೂಪದ್ರವ್ಯವನ್ನು ಬೆಳಗಿಸಿ.

ಇದನ್ನೂ ಓದಿ: Varamahalakshmi Festival 2024 : ವರಮಹಾಲಕ್ಷ್ಮಿ ಹಬ್ಬದ ದಿನ ಸುಲಭವಾಗಿ ಮಾಡಬಹುದಾದ ರುಚಿಕರ ಖಾದ್ಯಗಳಿವು; ವಿಡಿಯೊಗಳಿವೆ

13. ಲಕ್ಷ್ಮೀ ಪೂಜಾ ತಾಳಿ

ಕುಂಕುಮ, ಅರಶಿನ, ಅಕ್ಕಿ, ವೀಳ್ಯದೆಲೆ ಮತ್ತು ಅಡಿಕೆಯಂತಹ ಎಲ್ಲಾ ಅಗತ್ಯ ವಸ್ತುಗಳೊಂದಿಗೆ ಅಲಂಕರಿಸಿದ ಲಕ್ಷ್ಮಿ ಪೂಜಾ ತಾಳಿಯನ್ನು ಸಿದ್ಧಪಡಿಸಿ.

14. ಹೊಸ ರವಿಕೆ ಕಣ

ಪೂಜೆಯ ಭಾಗವಾಗಿ ಹೊಸ ರವಿಕೆ ತುಂಡುಗಳನ್ನು ದೇವರಿಗೆ ಅರ್ಪಿಸಿ. ಇದು ಗೌರವ ಮತ್ತು ಕೃತಜ್ಞತೆಯನ್ನು ಸಂಕೇತಿಸುವ ಸಾಂಪ್ರದಾಯಿಕ ಕೊಡುಗೆಯಾಗಿದೆ. ಇದನ್ನು ಬಂದಿರುವ ಮಹಿಳೆಯರಿಗೆ ನೀಡಿ.

Continue Reading
Advertisement
Viral News
ಕ್ರೀಡೆ18 mins ago

Viral News: ಮಾವ ಎಮ್ಮೆ ಬದಲು ಆ ಗಿಫ್ಟ್​ ಕೊಡುತ್ತಿದ್ದರೆ ಸಂತಸವಾಗುತ್ತಿತ್ತು ಎಂದ ಒಲಿಂಪಿಕ್ಸ್ ಚಿನ್ನ​ ವಿಜೇತ ಅರ್ಷದ್​ ನದೀಮ್

Kolkata Doctor Murder Case
ದೇಶ32 mins ago

Kolkata Doctor murder case: ವೈದ್ಯೆ ಕೊಲೆ ಕೇಸ್‌; ಪ್ರತಿಭಟನಾಕಾರರ ಮೇಲೆ ವಾಹನ ಹರಿಸಲು ಪೊಲೀಸ್‌ ಯತ್ನ?

Bangalore Rain
ಮಳೆ48 mins ago

Bangalore Rain: ರಾಜಧಾನಿಯ ಹಲವೆಡೆ ಅಬ್ಬರಿಸಿದ ವರುಣ; ಆಟೋ ಮೇಲೆ ಮರ ಬಿದ್ದು ಚಾಲಕ ಸೇರಿ ಮೂವರಿಗೆ ಗಾಯ

MS Dhoni Fans
ಕ್ರಿಕೆಟ್1 hour ago

MS Dhoni Fans: ಧೋನಿ ಅಭಿಮಾನಿಗಳಿಗೆ ಗುಡ್ ನ್ಯೂಸ್; ಹಳೆಯ ಐಪಿಎಲ್​ ನಿಯಮ ಜಾರಿಗೆ ಮುಂದಾದ ಬಿಸಿಸಿಐ

Government Employees Sports
ಬೆಂಗಳೂರು2 hours ago

Government Employees Sports: ಆ.17ರಂದು ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

Government Employees
ಕರ್ನಾಟಕ2 hours ago

Government Employees: 7ನೇ ವೇತನ ಆಯೋಗ; ಸರ್ಕಾರಿ ನೌಕರರ ಸಂಘದಿಂದ ಆ.17ರಂದು ಸಿಎಂ, ಡಿಸಿಎಂಗೆ ಸನ್ಮಾನ

Saarthi AI
ವಿದೇಶ2 hours ago

Saarthi AI: ಕೆಲ್ಸ ಕಳ್ಕೊಂಡ ಕೋಪಕ್ಕೆ ಬಾಸ್‌ನ ಪಾಸ್‌ಪೋರ್ಟ್‌, ವೀಸಾಕ್ಕೆ ಕನ್ನ- ಉದ್ಯೋಗಿಯ ಕಿತಾಪತಿಗೆ ಬೆಂಗಳೂರು ಸಿಇಒ ಹೈರಾಣ

Paralympics 2024
ಕ್ರೀಡೆ2 hours ago

Paralympics 2024: ಪ್ಯಾರಾಲಿಂಪಿಕ್ಸ್​ನಲ್ಲಿ ಭಾಗ್ಯಶ್ರೀ, ಸುಮಿತ್ ತ್ರಿವರ್ಣ ಧ್ವಜಧಾರಿಗಳು

Crop Damage
ಕರ್ನಾಟಕ3 hours ago

Crop Damage: ಮಳೆಯಿಂದ 81,589 ಹೆಕ್ಟೇರ್‌ನಲ್ಲಿ ಬೆಳೆಹಾನಿ; ಅಂತಿಮ ವರದಿ ಬಂದ ಕೂಡಲೇ ಪರಿಹಾರ ವಿತರಣೆ ಎಂದ ಸಿಎಂ

Yogi Adityanath
ದೇಶ3 hours ago

Yogi Adityanath: ಹೊಸ ಮೈಲಿಗಲ್ಲು ಸಾಧಿಸಿದ ಯೋಗಿ- ಉತ್ತರ ಪ್ರದೇಶದ ಸುದೀರ್ಘ ಅವಧಿಯ ಸಿಎಂ ಎಂಬ ಖ್ಯಾತಿ

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌