Kolkata Doctor murder case: ಟ್ರೈನಿ ವೈದ್ಯೆ ಕೊಲೆ ಪ್ರಕರಣ; ಸ್ವಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್‌ - Vistara News

ದೇಶ

Kolkata Doctor murder case: ಟ್ರೈನಿ ವೈದ್ಯೆ ಕೊಲೆ ಪ್ರಕರಣ; ಸ್ವಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್‌

Kolkata Doctor murder case: ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಸ್ವಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ವಿಚಾರಣೆ ನಡೆಯಲಿದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಇರುವ ನ್ಯಾಯಪೀಠ ಮಂಗಳವಾರ ಈ ಪ್ರಕರಣದ ವಿಚಾರಣೆ ನಡೆಸಲಿದೆ.

VISTARANEWS.COM


on

Kolkata Doctor Murder Case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಕೋಲ್ಕತಾದ ಆರ್‌ ಜಿ ಕರ್‌ ವೈದ್ಯಕೀಯ ಕಾಲೇಜಿನಲ್ಲಿ ನಡೆದಿರುವ ವೈದ್ಯೆಯ ಬರ್ಬರ ಸಾಮೂಹಿಕ ಅತ್ಯಾಚಾರ ಹಾಗು ಕೊಲೆಯ (Kolkata Doctor murder case) ಖಂಡಿಸಿ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಕೆಲವೊಂದು ಕಡೆ ಇದು ರಾಜಕೀಯ ಆಯಾಮವನ್ನೂ ಪಡೆದುಕೊಂಡಿದೆ. ಸಂತ್ರಸ್ತೆ ಸಾವಿಗೆ ನ್ಯಾಯ ಸಿಗಬೇಕೆಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿರುವ ಬೆನ್ನಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌(Supreme Court) ಮಧ್ಯಪ್ರದೇಶ ಮಾಡಲಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಸ್ವಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ವಿಚಾರಣೆ ನಡೆಯಲಿದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಇರುವ ನ್ಯಾಯಪೀಠ ಮಂಗಳವಾರ ಈ ಪ್ರಕರಣದ ವಿಚಾರಣೆ ನಡೆಸಲಿದೆ.

ಪಶ್ಚಿಮ ಬಂಗಾಳದ ಕೋಲ್ಕತಾ ಆರ್‌ಜಿ ಕರ್‌ (RG Kar Medical College and Hospital) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿರುವ ಟ್ರೈನಿ ವೈದ್ಯೆಯ ಅತ್ಯಾಚಾರ ಹಾಗೂ ಬರ್ಬರ ಕೊಲೆ (Kolkata Doctor Murder Case) ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದು, ಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಯುತ್ತಿದೆ. ಈ ಮಧ್ಯೆ ನಿರ್ಭಯಾ ಅವರ ತಾಯಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ವಿರುದ್ಧ ಕಿಡಿ ಕಾರಿದ್ದು, ಪರಿಸ್ಥಿತಿ ನಿಯಂತ್ರಿಸಲು ಅಸಮರ್ಥರಾದ ಕಾರಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ನಿರ್ಭಯಾ 2012ರಲ್ಲಿ ನವದೆಹಲಿಯಲ್ಲಿ ಚಲಿಸುವ ಬಸ್‌ನಲ್ಲೇ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಕ್ರೂರವಾಗಿ ಕೊಲೆಯಾಗಿದ್ದರು.

ʼʼಪಶ್ವಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರತಿಭಟನೆ ನಡೆಸುವ ಮೂಲಕ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಯತ್ನಿಸುತ್ತಿದ್ದಾರೆʼʼ ಎಂದು ನಿರ್ಭಯಾ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಮಮತಾ ಬ್ಯಾನರ್ಜಿ ತಮ್ಮ ಬೆಂಬಲಿಗರೊಂದಿಗೆ ಟ್ರೈನಿ ವೈದ್ಯೆಯ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ʼʼತಮ್ಮ ಅಧಿಕಾರ ಬಳಸಿ ಅಪರಾಧಿಯ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಮಮತಾ ಬ್ಯಾನರ್ಜಿ ಪ್ರತಿಭಟನೆಯ ಹೆಸರಿನಲ್ಲಿ ಜನರ ಗಮನ ಬೇರೆಡೆ ತಿರುಗಿಸಲು ಯತ್ನಿಸುತ್ತಿದ್ದಾರೆʼʼ ಎಂದು ನಿರ್ಭಯಾ ತಾಯಿ ಟೀಕಿಸಿದ್ದಾರೆ.

ಇದನ್ನೂ ಓದಿ: Kolkata Doctor Murder Case: ಜನರಲ್ಲಿ ಗೊಂದಲ ಮೂಡಿಸುವ ಮಮತಾ ಬ್ಯಾನರ್ಜಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಲಿ; ನಿರ್ಭಯಾ ತಾಯಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Champai Soren: ನನ್ನ ಎದುರು ಮೂರು ಆಯ್ಕೆಗಳಿವೆ; ಬಿಜೆಪಿ ಸೇರ್ಪಡೆ ಬಗ್ಗೆ ಚಂಪೈ ಸೊರೆನ್‌ ಹೇಳಿದ್ದೇನು? ಇಲ್ಲಿದೆ ಡಿಟೇಲ್ಸ್‌

Champai Soren: ನನಗೆ ಮೂರು ಆಯ್ಕೆಗಳಿವೆ, ಮೊದಲನೆಯದಾಗಿ, ರಾಜಕೀಯದಿಂದ ನಿವೃತ್ತಿ, ಎರಡನೆಯದು, ನನ್ನದೇ ಆದ ಪ್ರತ್ಯೇಕ ಸಂಘಟನೆಯನ್ನು ಸ್ಥಾಪನೆ ಮತ್ತು ಮೂರನೆಯದಾಗಿ, ನಾನು ಈ ಹಾದಿಯಲ್ಲಿ ಮತ್ತೊಬ್ಬ ಜೊತೆಗಾರನನ್ನು ಹುಡುಕಿಕೊಳ್ಳುವುದು(ಪರೋಕ್ಷವಾಗಿ ಬಿಜೆಪಿ ಸೇರ್ಪಡೆ) ಆ ದಿನದಿಂದ ಇಂದಿನವರೆಗೆ ಮತ್ತು ಮುಂಬರುವ ಜಾರ್ಖಂಡ್ ಅಸೆಂಬ್ಲಿ ಚುನಾವಣೆಯವರೆಗೆ, ಈ ಪ್ರಯಾಣದಲ್ಲಿ ನನಗೆ ಎಲ್ಲಾ ಆಯ್ಕೆಗಳು ಮುಕ್ತವಾಗಿವೆ ಎಂದು ಪೋಸ್ಟ್‌ ಮಾಡಿದ್ದಾರೆ.

VISTARANEWS.COM


on

Champai Soren
Koo

ನವದೆಹಲಿ: ಜಾರ್ಖಂಡ್‌ ರಾಜಕೀಯದಲ್ಲಿ (Jharkhand Politics) ಮತ್ತೊಂದು ಮಹತ್ವದ ಬೆಳವಣಿಗೆ ಸಂಭವಿಸಿದ್ದು, ಸ್ವಪಕ್ಷದ ಬಗ್ಗೆ ತೀವ್ರ ಬೇಸರಗೊಂಡು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಮಾತುಗಳು ಬಲವಾಗಿ ಕೇಳುತ್ತಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ, ಜಾರ್ಖಂಡ್‌ ಮುಕ್ತಿ ಮೋರ್ಚಾ (Jharkhand Mukti Morcha-JMM)ದ ಹಿರಿಯ ನಾಯಕ ಚಂಪೈ ಸೊರೆನ್ (Champai Soren) ತಮ್ಮ ಮುಂದಿನ ನಡೆ ಬಗ್ಗೆ ಮಹತ್ವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಎಕ್ಸ್‌ನಲ್ಲಿ ಸುದೀರ್ಘ ಪೋಸ್ಟ್‌ವೊಂದನ್ನು ಮಾಡಿರುವ ಚಂಪೈ, ತಮ್ಮ ಮುಂದೆ ಮೂರು ಆಯ್ಕೆಗಳಿವೆ ಎಂದಿದ್ದಾರೆ.

ಭಾರವಾದ ಹೃದಯದಿಂದ, ನಾನು ಅದೇ ಶಾಸಕಾಂಗ ಪಕ್ಷದ ಸಭೆಯಲ್ಲಿ “ಇಂದಿನಿಂದ ನನ್ನ ಜೀವನದ ಹೊಸ ಅಧ್ಯಾಯ ಪ್ರಾರಂಭವಾಗಲಿದೆ ಎಂದು ಹೇಳಿದ್ದೆ. ಇದರಲ್ಲಿ ನನಗೆ ಮೂರು ಆಯ್ಕೆಗಳಿವೆ, ಮೊದಲನೆಯದಾಗಿ, ರಾಜಕೀಯದಿಂದ ನಿವೃತ್ತಿ, ಎರಡನೆಯದು, ನನ್ನದೇ ಆದ ಪ್ರತ್ಯೇಕ ಸಂಘಟನೆಯನ್ನು ಸ್ಥಾಪನೆ ಮತ್ತು ಮೂರನೆಯದಾಗಿ, ನಾನು ಈ ಹಾದಿಯಲ್ಲಿ ಮತ್ತೊಬ್ಬ ಜೊತೆಗಾರನನ್ನು ಹುಡುಕಿಕೊಳ್ಳುವುದು(ಪರೋಕ್ಷವಾಗಿ ಬಿಜೆಪಿ ಸೇರ್ಪಡೆ) ಆ ದಿನದಿಂದ ಇಂದಿನವರೆಗೆ ಮತ್ತು ಮುಂಬರುವ ಜಾರ್ಖಂಡ್ ಅಸೆಂಬ್ಲಿ ಚುನಾವಣೆಯವರೆಗೆ, ಈ ಪ್ರಯಾಣದಲ್ಲಿ ನನಗೆ ಎಲ್ಲಾ ಆಯ್ಕೆಗಳು ಮುಕ್ತವಾಗಿವೆ ಎಂದು ಪೋಸ್ಟ್‌ ಮಾಡಿದ್ದಾರೆ.

ನಾನು ಒಳಗೊಳಗೇ ಒಡೆದು ಚೂರಾಗಿದ್ದೇನೆ. ಏನು ಮಾಡಬೇಕೆಂದು ನನಗೆ ಅರ್ಥವಾಗಲಿಲ್ಲ. ಎರಡು ದಿನಗಳ ಕಾಲ ನಾನು ಶಾಂತವಾಗಿ ಕುಳಿತು ಆತ್ಮಾವಲೋಕನ ಮಾಡಿಕೊಂಡೆ, ಇಡೀ ಘಟನೆಯಲ್ಲಿ ನನ್ನ ತಪ್ಪನ್ನು ಹುಡುಕುತ್ತಲೇ ಇದ್ದೆ. ನನಗೆ ಅಧಿಕಾರದ ದುರಾಸೆ ಸ್ವಲ್ಪವೂ ಇರಲಿಲ್ಲ, ಆದರೆ ನನ್ನ ಸ್ವಾಭಿಮಾನಕ್ಕೆ ಈ ಹೊಡೆತ ಬಿದ್ದಿದೆ. ನನ್ನ ಸ್ವಂತ ಜನರು ಉಂಟುಮಾಡಿದ ನೋವನ್ನು ನಾನು ಎಲ್ಲಿ ವ್ಯಕ್ತಪಡಿಸಬಹುದು?” ಎಂದು ಚಂಪೈ ಸೊರೆನ್ ಪೋಸ್ಟ್‌ನಲ್ಲಿ ಸೇರಿಸಿದ್ದಾರೆ.

ಮುಖ್ಯಮಂತ್ರಿ ಜೈಲಿನಿಂದ ಹೊರಬಂದ ನಂತರ ಶಾಸಕರು ಮತ್ತು ಇತರ ಭಾರತ ಬ್ಲಾಕ್ ನಾಯಕರ ಸಭೆಯ ಕಾರ್ಯಸೂಚಿಯ ಬಗ್ಗೆ ನನಗೆ ತಿಳಿದಿಲ್ಲ ಎಂದು ಅವರು ಹೇಳಿದರು. ಶಾಸಕರ ಸಭೆ ಕರೆಯುವ ಹಕ್ಕು ಮುಖ್ಯಮಂತ್ರಿಗೆ ಇದ್ದರೂ ಸಭೆಯ ಅಜೆಂಡಾವನ್ನೂ ಹೇಳಿಲ್ಲ, ಸಭೆಯ ವೇಳೆ ರಾಜೀನಾಮೆ ನೀಡುವಂತೆ ಹೇಳಿದ್ದು ಅಚ್ಚರಿ ತಂದಿದೆ, ಆದರೆ ದುರಾಸೆ ಇರಲಿಲ್ಲ. ಬೇರೆಯವರ ಅಧಿಕಾರದ ಆಸೆಗಾಗಿ, ನಾನು ತಕ್ಷಣ ರಾಜೀನಾಮೆ ನೀಡಿದ್ದೇನೆ, ಆದರೆ ಇದು ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಚಂಪೈ ಸೊರೆನ್ ಹೇಳಿದ್ದಾರೆ.

ಇದನ್ನೂ ಓದಿ: Champai Soren: ಜಾರ್ಖಂಡ್‌ ರಾಜಕೀಯಲ್ಲಿ ಸಂಚಲನ; ಮಾಜಿ ಸಿಎಂ ಚಂಪೈ ಸೊರೆನ್ ಬಿಜೆಪಿ ಸೇರ್ಪಡೆ?

Continue Reading

ದೇಶ

CAA Act: CAA ಕಾಯ್ದೆಯಡಿಯಲ್ಲಿ 188 ಪಾಕಿಸ್ತಾನಿ ನಿರಾಶ್ರಿತರಿಗೆ ಭಾರತೀಯ ಪೌರತ್ವ ಭಾಗ್ಯ

CAA Act: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಲಕ್ಷಾಂತರ ನಿರಾಶ್ರಿತರಿಗೆ ಹಕ್ಕು ಮತ್ತು ನ್ಯಾಯವನ್ನು ನೀಡುತ್ತಿದೆ. ಸಿಎಎಯಲ್ಲಿ ಯಾರ ಪೌರತ್ವವನ್ನು ಕಸಿದುಕೊಳ್ಳಲು ಯಾವುದೇ ಅವಕಾಶವಿಲ್ಲ ಎಂದು ಅವರು ಮುಸ್ಲಿಮರಿಗೆ ಭರವಸೆ ನೀಡಿದರು. ಸಿಎಎ ಜಾರಿಗೆ ತಂದಿರುವುದು ನೆರೆಯ ರಾಷ್ಟ್ರಗಳಿಂದ ಬಂದು ಇಲ್ಲಿ ನೆಲೆಸಿರುವ ಅಲ್ಲಿನ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಉದ್ದೇಶದಿಂದಾಗಿಯೇ ಹೊರತು ಯಾರ ಪೌರತ್ವವನ್ನು ಕಸಿದುಕೊಳ್ಳಲು ಅಲ್ಲ ಎಂದು ಪುನರುಚ್ಚರಿಸಿದರು.

VISTARANEWS.COM


on

CAA Act
Koo

ಅಹಮದಾಬಾದ್: ಕೇಂದ್ರ ಗೃಹಸಚಿವ ಅಮಿತ್‌ ಶಾ(Amith Shah) ಅವರು ಗುಜರಾತ್‌ನಲ್ಲಿರುವ 188 ಪಾಕಿಸ್ತಾನಿ ನಿರಾಶ್ರಿತ ಹಿಂದೂಗಳಿಗೆ ಪೌರತ್ವ ತಿದ್ದುಪಡಿ ಕಾಯ್ದೆಯ (CAA Act) ಅಡಿಯಲ್ಲಿ ಪೌರತ್ವ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ಕಳೆದ ಹಲವು ದಶಕಗಳಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಓಲೈಕೆಯ ರಾಜಕಾರಣ ನೀತಿಯಿಂದಾಗಿ ನಿರಾಶ್ರಿತರಿಗೆ ಪೌರತ್ವ ನೀಡಲು ಹಿಂದೇಟು ಹಾಕಿತ್ತು ಎಂದು ಕಿಡಿಕಾರಿದರು.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಲಕ್ಷಾಂತರ ನಿರಾಶ್ರಿತರಿಗೆ ಹಕ್ಕು ಮತ್ತು ನ್ಯಾಯವನ್ನು ನೀಡುತ್ತಿದೆ. ಸಿಎಎಯಲ್ಲಿ ಯಾರ ಪೌರತ್ವವನ್ನು ಕಸಿದುಕೊಳ್ಳಲು ಯಾವುದೇ ಅವಕಾಶವಿಲ್ಲ ಎಂದು ಅವರು ಮುಸ್ಲಿಮರಿಗೆ ಭರವಸೆ ನೀಡಿದರು. ಸಿಎಎ ಜಾರಿಗೆ ತಂದಿರುವುದು ನೆರೆಯ ರಾಷ್ಟ್ರಗಳಿಂದ ಬಂದು ಇಲ್ಲಿ ನೆಲೆಸಿರುವ ಅಲ್ಲಿನ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಉದ್ದೇಶದಿಂದಾಗಿಯೇ ಹೊರತು ಯಾರ ಪೌರತ್ವವನ್ನು ಕಸಿದುಕೊಳ್ಳಲು ಅಲ್ಲ ಎಂದು ಪುನರುಚ್ಚರಿಸಿದರು.

ಬಾಂಗ್ಲಾದೇಶ ವಿಭಜನೆಯಾದಾಗ ಅಲ್ಲಿ ಶೇಕಡಾ 27 ರಷ್ಟು ಹಿಂದೂಗಳಿದ್ದರು, ಇಂದು ಶೇಕಡಾ 9 ರಷ್ಟು ಇದ್ದಾರೆ. ಇಷ್ಟು ಹಿಂದೂಗಳು ಎಲ್ಲಿಗೆ ಹೋಗಿದ್ದಾರೆ. ಅವರನ್ನು ನೆರೆಯ ದೇಶದಿಂದ ಹಿಂದೂಗಳು ಎಂದು ಕರೆಯಲಾಯಿತು. ನಾವು 2019 ರಲ್ಲಿ ಸಿಎಎ ತಂದಿದ್ದೇವೆ. ಸಿಎಎ ಕಾನೂನಿಂದಾಗಿ ಕೋಟ್ಯಂತರ ಹಿಂದೂಗಳು, ಜೈನರು ಮತ್ತು ಸಿಖ್ ಧರ್ಮದ ಜನರು ಭಾರತೀಯ ಪೌರತ್ವವನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಕೆಲವು ರಾಜಕೀಯ ಪಕ್ಷಗಳು ಸಿಎಎ ವಿಚಾರವನ್ನು ಇಟ್ಟುಕೊಂಡು ಮುಸ್ಲಿಮರನ್ನು ಹಿಂಸೆಗೆ ಪ್ರಚೋದಿಸುತ್ತಿದೆ. ಕೆಲವು ರಾಜ್ಯ ಸರ್ಕಾರಗಳು ಕೂಡ ಇದೇ ವಿಚಾರವಾಗಿ ಜನರನ್ನು ದಾರಿ ತಪ್ಪಿಸುತ್ತಿವೆ. ಭಾರತ ಒಕ್ಕೂಟ ಮತ್ತು ಕಾಂಗ್ರೆಸ್ ಸಿಎಎಗೆ ಸಂಬಂಧಿಸಿದಂತೆ ನಿರಾಶ್ರಿತರನ್ನು ದಾರಿ ತಪ್ಪಿಸುತ್ತಿವೆ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರವು ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನದ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಕಾಯ್ದೆಯ (CAA) ನಿಯಮಗಳನ್ನು ಬದಲಿಸಿದೆ. ಭಾರತದ ಪೌರತ್ವ ಪಡೆಯಲು ನಿರಾಶ್ರಿತ ಅಲ್ಪಸಂಖ್ಯಾತರು ಇನ್ನು ಮುಂದೆ ಸುಲಭವಾಗಿ ಪೌರತ್ವ ಪಡೆಯುವ ರೀತಿಯಲ್ಲಿ ಸಿಎಎ ಕಾಯ್ದೆಯ ಪರಿಚ್ಛೇದ 1 ಎ ನಿಯಮಗಳನ್ನು ಕೇಂದ್ರ ಸರ್ಕಾರ ಬದಲಿಸಿದೆ.

ಅದರಂತೆ, ನಿರಾಶ್ರಿತರು ಕೇಂದ್ರ ಸರ್ಕಾರ, ಯಾವುದೇ ರಾಜ್ಯ ಸರ್ಕಾರ ಅಥವಾ ನ್ಯಾಯಾಂಗ ನೀಡುವ ದಾಖಲೆ, ಭೂಮಿಯ ದಾಖಲೆ ನೀಡಿದರೂ ಸಾಕು, ಭಾರತದ ಪೌರತ್ವವನ್ನು ಪಡೆಯಬಹುದಾಗಿದೆ. ಇದರ ಜತೆಗೆ ನಿರಾಶ್ರಿತರ ಅಜ್ಜ-ಅಜ್ಜಿ, ಮುತ್ತಜ್ಜ-ಮುತ್ತಜ್ಜಿಯು ಬಾಂಗ್ಲಾ, ಪಾಕ್‌ ಹಾಗೂ ಅಫಘಾನಿಸ್ತಾನದ ನಿವಾಸಿಗಳು ಎಂಬುದರ ಯಾವುದೇ ದಾಖಲೆ ನೀಡಿದರೂ ಭಾರತದ ಪೌರತ್ವ ಪಡೆಯಬಹುದಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ಎಂದರೇನು?

2014 ರ ಡಿಸೆಂಬರ್ 31 ಕ್ಕಿಂತ ಮೊದಲು ನೆರೆಯ ಮುಸ್ಲಿಂ ಬಹುಸಂಖ್ಯಾತ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಭಾರತೀಯ ಪೌರತ್ವಕ್ಕೆ ಮಾರ್ಗವನ್ನು ಒದಗಿಸಲು ಸಿಎಎ 1955 ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ.

ಇದನ್ನೂ ಓದಿ:CAA Rules: ಪಾಕ್‌, ಬಾಂಗ್ಲಾ, ಆಘ್ಘನ್‌ ನಿರಾಶ್ರಿತರಿಗೆ ಸಿಹಿ ಸುದ್ದಿ; ಸಿಎಎ ನಿಯಮ ಸಡಿಲಿಸಿದ ಕೇಂದ್ರ ಸರ್ಕಾರ!

Continue Reading

ದೇಶ

Food Poisoning: ಶಾಲೆಯಲ್ಲಿ ಕೊಟ್ಟ ಬಿಸ್ಕೇಟ್‌ ಸೇವಿಸಿ ಬರೋಬ್ಬರಿ 80 ವಿದ್ಯಾರ್ಥಿಗಳು ಅಸ್ವಸ್ಥ

Food Poisoning: ಕೇಕೇಟ್ ಜಲಗಾಂವ್ ಗ್ರಾಮದ ಶಾಲೆಯಲ್ಲಿ ಶನಿವಾರ ಬೆಳಿಗ್ಗೆ 8:30 ರ ಸುಮಾರಿಗೆ ಬಿಸ್ಕೆಟ್ ಸೇವಿಸಿದ ನಂತರ ಮಕ್ಕಳಲ್ಲಿ ವಾಕರಿಕೆ ಮತ್ತು ವಾಂತಿ ಕಾಣಿಸಿಕೊಂಡಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವಿಷಯ ತಿಳಿದ ಗ್ರಾಮದ ಮುಖಂಡರು ಹಾಗೂ ಅಧಿಕಾರಿಗಳು ಕೂಡಲೇ ಶಾಲೆಗೆ ಆಗಮಿಸಿ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಿದರು. ವಿದ್ಯಾರ್ಥಿಗಳನ್ನು ಗ್ರಾಮಾಂತರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವಿವರಿಸಲಾಗಿದೆ.

VISTARANEWS.COM


on

Food Poisoning
Koo

ಮುಂಬೈ: ಶಾಲೆಯಲ್ಲಿ ನೀಡಲಾದ ಬಿಸ್ಕೇಟ್‌ ಸೇವಿಸಿ ಬರೋಬ್ಬರಿ 80 ವಿದ್ಯಾರ್ಥಿಗಳು ಅಸ್ವಸ್ಥ(Students hospitalized)ಗೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ(Food Poisoning). ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಜಿಲ್ಲಾ ಕೌನ್ಸಿಲ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಸುಮಾರು 80 ವಿದ್ಯಾರ್ಥಿಗಳು ಪೌಷ್ಠಿಕ ಆಹಾರ ಕಾರ್ಯಕ್ರಮದ ಭಾಗವಾಗಿ ನೀಡಲಾದ ಬಿಸ್ಕತ್ತುಗಳನ್ನು ಸೇವಿಸಿದ ನಂತರ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಕೇಟ್ ಜಲಗಾಂವ್ ಗ್ರಾಮದ ಶಾಲೆಯಲ್ಲಿ ಶನಿವಾರ ಬೆಳಿಗ್ಗೆ 8:30 ರ ಸುಮಾರಿಗೆ ಬಿಸ್ಕೆಟ್ ಸೇವಿಸಿದ ನಂತರ ಮಕ್ಕಳಲ್ಲಿ ವಾಕರಿಕೆ ಮತ್ತು ವಾಂತಿ ಕಾಣಿಸಿಕೊಂಡಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವಿಷಯ ತಿಳಿದ ಗ್ರಾಮದ ಮುಖಂಡರು ಹಾಗೂ ಅಧಿಕಾರಿಗಳು ಕೂಡಲೇ ಶಾಲೆಗೆ ಆಗಮಿಸಿ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಿದರು. ವಿದ್ಯಾರ್ಥಿಗಳನ್ನು ಗ್ರಾಮಾಂತರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವಿವರಿಸಲಾಗಿದೆ.

ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಬಾಬಾಸಾಹೇಬ್ ಘುಘೆ ಮಾತನಾಡಿ, “ಶನಿವಾರ ಬೆಳಗ್ಗೆ 8.30ರ ಸುಮಾರಿಗೆ ಬಿಸ್ಕೆಟ್ ಸೇವಿಸಿದ 257 ವಿದ್ಯಾರ್ಥಿಗಳು ಆಹಾರ ವಿಷದ ಲಕ್ಷಣಗಳನ್ನು ವರದಿ ಮಾಡಿದ್ದಾರೆ. ಅವರಲ್ಲಿ 153 ಮಂದಿಯನ್ನು ಆಸ್ಪತ್ರೆಗೆ ಕರೆತರಲಾಗಿದ್ದು, ಕೆಲವರಿಗೆ ಚಿಕಿತ್ಸೆ ನೀಡಲಾಗಿದೆ. ಮತ್ತು ಮನೆಗೆ ಕಳುಹಿಸಲಾಗಿದೆ. ಆದಾಗ್ಯೂ, ತೀವ್ರ ರೋಗಲಕ್ಷಣಗಳನ್ನು ಹೊಂದಿರುವ ಏಳು ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಛತ್ರಪತಿ ಸಂಭಾಜಿನಗರ ಸಿವಿಲ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ಘುಘೆ ಹೇಳಿದ್ದಾರೆ.

ಶಾಲೆಯಲ್ಲಿ 296 ವಿದ್ಯಾರ್ಥಿಗಳಿದ್ದು, ಈ ಘಟನೆಗೆ ಕಾರಣ ಏನೆಂಬುದರ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ.

ಮೊಹರಂ ಆಚರಣೆ ವೇಳೆ ಕಳೆದ ತಿಂಗಳು ರಾಜಸ್ತಾನದಲ್ಲಿ ದುರಂತವೊಂದು ಸಂಭವಿಸಿದ್ದು, ಮೆರವಣಿಗೆ ವೇಳೆ ಷರಬತ್ತು ಸೇವಿಸಿದ ಸುಮಾರು 400 ಮಂದಿ ಅಸ್ವಸ್ಥರಾಗಿದ್ದಾರೆ. ರಾಜಸ್ತಾನದ ಬನ್ಸ್ವಾರಾದಲ್ಲಿ ಈ ಘಟನೆ ನಡೆದಿದ್ದು, ವಾಂತಿ ಮತ್ತು ಅತಿಸಾರ ಕಾಣಿಕೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಧ್ಯರಾತ್ರಿ ಮುಹರ್ರಮ್‌ ಮೆರವಣಿಗೆಯಲ್ಲಿ ಭಾಗವಹಿಸಿದ ಹಲವು ಮಂದಿ ಅಸ್ವಸ್ಥರಾದ ಕೂಡಲೇ ರಸ್ತೆ ಬದಿಯಲ್ಲಿದ್ದ ಮೆಡಿಕಲ್‌ಗಳಿಗೆ ನುಗ್ಗಿ ಬೀಗ ಒಡೆದು ಔಷಧ ಮತ್ತು ಒಆರ್‌ಎಸ್‌ ತೆಗೆದುಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬಳಿಕ ಮೂವರು ವೈದ್ಯರು ಧಾವಿಸಿ ಬಂದು ಸುಮಾರು ಅಸ್ವಸ್ಥರಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಆರಂಭಿಸಿದರು. ಏಕಕಾಲಕ್ಕೆ 400ಕ್ಕೂ ಹೆಚ್ಚು ಮಂದಿ ಸ್ಥಳೀಯ ಮಹಾತ್ಮ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದು, ಸುಮಾರು 100 ಜನರು ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆ ವೈದ್ಯ ಹೀರಾಲಾಲ್ ತಬಿಯಾತ್ ತಿಳಿಸಿದ್ದಾರೆ. ಮಾಹಿತಿ ತಿಳಿದ ಕೂಡಲೇ ಹಲವು ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದ್ದಾರೆ.

ಇದನ್ನೂ ಓದಿ: Food Poisoning: ವಿಷ ಬೆರೆತ ಮಟನ್‌ ಸೇವಿಸಿ ಒಂದೇ ಕುಟುಂಬದ ನಾಲ್ವರ ಘೋರ ಸಾವು; ಆತ್ಮಹತ್ಯೆ ಶಂಕೆ

Continue Reading

ಉದ್ಯೋಗ

Job Alert: ಗ್ಯಾಸ್‌ ಅಥಾರಟಿ ಆಫ್‌ ಇಂಡಿಯಾ ಲಿಮಿಟೆಡ್‌ನಲ್ಲಿದೆ ಉದ್ಯೋಗಾವಕಾಶ; 391 ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

Job Alert: ಗ್ಯಾಸ್‌ ಅಥಾರಟಿ ಆಫ್‌ ಇಂಡಿಯಾ ಲಿಮಿಟೆಡ್‌ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಜೂನಿಯರ್‌ ಎಂಜಿನಿಯರ್‌, ಫಾರ್‌ಮ್ಯಾನ್‌, ಜೂನಿಯರ್‌ ಸೂಪರಿಟೆಂಡೆಂಟ್‌ ಸೇರಿ ಒಟ್ಟು 391 ಹುದ್ದೆಗಳಿವೆ. ದ್ವಿತೀಯ ಪಿಯುಸಿ, ಡಿಪ್ಲೊಮಾ, ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಲು ಅರ್ಹರು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಸೆಪ್ಟೆಂಬರ್‌ 7.

VISTARANEWS.COM


on

Gas Authority of India Limited
Koo

ಬೆಂಗಳೂರು: ಗ್ಯಾಸ್‌ ಅಥಾರಟಿ ಆಫ್‌ ಇಂಡಿಯಾ ಲಿಮಿಟೆಡ್‌ (Gas Authority of India Limited) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಜೂನಿಯರ್‌ ಎಂಜಿನಿಯರ್‌, ಫಾರ್‌ಮ್ಯಾನ್‌, ಜೂನಿಯರ್‌ ಸೂಪರಿಟೆಂಡೆಂಟ್‌ ಸೇರಿ ಒಟ್ಟು 391 ಹುದ್ದೆಗಳಿವೆ (GAIL Recruitment 2024). ದ್ವಿತೀಯ ಪಿಯುಸಿ, ಡಿಪ್ಲೊಮಾ, ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಲು ಅರ್ಹರು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಸೆಪ್ಟೆಂಬರ್‌ 7 (Job Alert).

ಹುದ್ದೆಗಳ ವಿವರ

ಜೂನಿಯರ್ ಎಂಜಿನಿಯರ್ (ಕೆಮಿಕಲ್)- 2 ಹುದ್ದೆ, ವಿದ್ಯಾರ್ಹತೆ: ಕೆಮಿಕಲ್ / ಪೆಟ್ರೋಕೆಮಿಕಲ್/ ಕೆಮಿಕಲ್ ಟೆಕ್ನಾಲಜಿ/ ಪೆಟ್ರೋಕೆಮಿಕಲ್ ಟೆಕ್ನಾಲಜಿ ಎಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ
ಜೂನಿಯರ್ ಇಂಜಿನಿಯರ್ (ಮೆಕ್ಯಾನಿಕಲ್)- 1 ಹುದ್ದೆ, ವಿದ್ಯಾರ್ಹತೆ: ಮೆಕ್ಯಾನಿಕಲ್/ ಪ್ರೊಡಕ್ಷನ್/ ಪ್ರೊಡಕ್ಷನ್ & ಇಂಡಸ್ಟ್ರಿಯಲ್/ ಮ್ಯಾನುಫ್ಯಾಕ್ಚರಿಂಗ್/ ಮೆಕ್ಯಾನಿಕಲ್ ಮತ್ತು ಆಟೋಮೊಬೈಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ
ಫಾರ್‌ಮ್ಯಾನ್‌ (ಎಲೆಕ್ಟ್ರಿಕಲ್) 1 ಹುದ್ದೆ, ವಿದ್ಯಾರ್ಹತೆ: ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ
ಫಾರ್‌ಮ್ಯಾನ್‌ (ಇನ್‌ಸ್ಟ್ರುಮೆಂಟೇಶನ್) 14 ಹುದ್ದೆ, ವಿದ್ಯಾರ್ಹತೆ: ಇನ್‌ಸ್ಟ್ರುಮೆಂಟೇಶನ್ / ಇನ್‌ಸ್ಟ್ರುಮೆಂಟೇಶನ್ & ಕಂಟ್ರೋಲ್/ ಎಲೆಕ್ಟ್ರಾನಿಕ್ಸ್ & ಇನ್‌ಸ್ಟ್ರುಮೆಂಟೇಶನ್/ ಎಲೆಕ್ಟ್ರಿಕಲ್ & ಇನ್‌ಸ್ಟ್ರುಮೆಂಟೇಶನ್/ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ
ಫಾರ್‌ಮ್ಯಾನ್‌ (ಸಿವಿಲ್) 6 ಹುದ್ದೆ, ವಿದ್ಯಾರ್ಹತೆ: ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ
ಜೂನಿಯರ್‌ ಸೂಪರಿಟೆಂಡೆಂಟ್‌ 5 ಹುದ್ದೆ, ವಿದ್ಯಾರ್ಹತೆ: ಪದವಿ
ಜೂನಿಯರ್ ಕೆಮಿಸ್ಟ್ 8 ಹುದ್ದೆ, ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ, ಎಂ.ಎಸ್‌ಸಿ
ಜೂನಿಯರ್ ಅಕೌಂಟೆಂಟ್ 14 ಹುದ್ದೆ, ವಿದ್ಯಾರ್ಹತೆ: ಸಿಎ ಅಥವಾ ಐಸಿಡಬ್ಲ್ಯುಎ (ಇಂಟರ್), ಸ್ನಾತಕೋತ್ತರ ಪದವಿ, ಎಂ.ಕಾಂ
ಟೆಕ್ನಿಕಲ್ ಅಸಿಸ್ಟೆಂಟ್ (ಲ್ಯಾಬೊರೇಟರಿ) 3 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಎಸ್‌ಸಿ
ಆಪರೇಟರ್ (ಕೆಮಿಕಲ್) 73 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಎಸ್‌ಸಿ
ಟೆಕ್ನಿಷಿಯನ್ (ಎಲೆಕ್ಟ್ರಿಕಲ್) 44 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಟೆಕ್ನಿಷಿಯನ್ (ಇನ್‌ಸ್ಟ್ರುಮೆಂಟೇಶನ್) 45 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಟೆಕ್ನಿಷಿಯನ್ (ಮೆಕ್ಯಾನಿಕಲ್) 39 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಟೆಕ್ನಿಷಿಯನ್ (ಟೆಲಿಕಾಂ ಮತ್ತು ಟೆಲಿಮೆಟ್ರಿ) 11 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಆಪರೇಟರ್ (ಫೈರ್) 39 ಹುದ್ದೆ, ವಿದ್ಯಾರ್ಹತೆ: 12ನೇ ತರಗತಿ
ಆಪರೇಟರ್ (ಬಾಯ್ಲರ್) 8 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಅಕೌಂಟ್ಸ್ ಅಸಿಸ್ಟೆಂಟ್ 13 ಹುದ್ದೆ, ವಿದ್ಯಾರ್ಹತೆ: ಕಾಮರ್ಸ್‌ನಲ್ಲಿ ಪದವಿ, ಬಿ.ಕಾಂ
ಬಿಸಿನೆಸ್ ಅಸಿಸ್ಟೆಂಟ್ 65 ಹುದ್ದೆ, ವಿದ್ಯಾರ್ಹತೆ: ಬಿಬಿಎ, ಬಿಬಿಎಸ್, ಬಿಬಿಎಂ, ಪದವಿ

ವಯೋಮಿತಿ

ವಿವಿಧ ಹುದ್ದೆಗಳಿಗೆ ಅನುಗುಣವಾಗಿ 26ರಿಂದ 45 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ಸಾಮಾನ್ಯ, ಇಡಬ್ಲ್ಯುಎಸ್‌ ಮತ್ತು ಒಬಿಸಿ ವಿಭಾಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 50 ರೂ. ಪಾವತಿಸಬೇಕು. ಉಳಿದ ವಿಭಾಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಲಿಖಿತ ಪರೀಕ್ಷೆ, ಕಂಪ್ಯೂಟರ್‌ ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://gailonline.com/CRApplyingGail.html)
  • ಹೆಸರು ನೋಂದಾಯಿಸಿ.
  • ಹೊಸ ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಿ.
  • ಅಗತ್ಯ ಮಾಹಿತಿ ನೀಡಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ದಾಖಲೆ, ಫೋಟೊ ಸೂಕ್ತ ಅಳತೆಯಲ್ಲಿ ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ).
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ನಂಬರ್‌ ಅಥವಾ ರಿಕ್ವೆಸ್ಟ್‌ ನಂಬರ್‌ ನೋಟ್‌ ಮಾಡಿಟ್ಟುಕೊಳ್ಳಿ.

ಇದನ್ನೂ ಓದಿ: RRB Recruitment 2024: ರೈಲ್ವೇ ಇಲಾಖೆಯಿಂದ 7,951 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಹೀಗೆ ಅಪ್ಲೈ ಮಾಡಿ

Continue Reading
Advertisement
Kundapura Kannada Habba 2024
ಕರ್ನಾಟಕ11 mins ago

Kundapura Kannada Habba 2024: ಕುಂದಾಪ್ರ ಕನ್ನಡ ಅಧ್ಯಯನ ಪೀಠಕ್ಕೆ ಸದ್ಯದಲ್ಲೇ ಸಮಿತಿ ರಚನೆ: ಜಯಪ್ರಕಾಶ ಹೆಗ್ಡೆ

Physical Abuse
ಕರ್ನಾಟಕ30 mins ago

Physical Abuse: ಕಿಡ್ನ್ಯಾಪ್ ಮಾಡಿ ಮಹಿಳೆ ಮೇಲೆ ಅತ್ಯಾಚಾರ, ಮಗನ ಮೇಲೂ ಹಲ್ಲೆ; 9 ಆರೋಪಿಗಳ ಅರೆಸ್ಟ್‌

Champai Soren
ದೇಶ51 mins ago

Champai Soren: ನನ್ನ ಎದುರು ಮೂರು ಆಯ್ಕೆಗಳಿವೆ; ಬಿಜೆಪಿ ಸೇರ್ಪಡೆ ಬಗ್ಗೆ ಚಂಪೈ ಸೊರೆನ್‌ ಹೇಳಿದ್ದೇನು? ಇಲ್ಲಿದೆ ಡಿಟೇಲ್ಸ್‌

Zika Virus Case
ಕರ್ನಾಟಕ2 hours ago

Zika Virus: ಡೆಂಗ್ಯೂ ಮಧ್ಯೆ ಝಿಕಾ ವೈರಸ್‌ ಆತಂಕ; ಸೋಂಕು ತಡೆಗೆ ಮಾರ್ಗಸೂಚಿ ಪ್ರಕಟ

CAA Act
ದೇಶ2 hours ago

CAA Act: CAA ಕಾಯ್ದೆಯಡಿಯಲ್ಲಿ 188 ಪಾಕಿಸ್ತಾನಿ ನಿರಾಶ್ರಿತರಿಗೆ ಭಾರತೀಯ ಪೌರತ್ವ ಭಾಗ್ಯ

CM Siddaramaiah
ಕರ್ನಾಟಕ3 hours ago

CM Siddaramaiah: ಆ.23ಕ್ಕೆ ಸಿಎಂ ಸಿದ್ದರಾಮಯ್ಯ ದೆಹಲಿಗೆ; ಕಾನೂನು ಹೋರಾಟಕ್ಕೆ ಹೈ ‌ಕಮಾಂಡ್ ಬೆಂಬಲ ಕೋರಲು ಭೇಟಿ

zika Virus
ಬೆಂಗಳೂರು ಗ್ರಾಮಾಂತರ3 hours ago

Zika Virus : ಆನೇಕಲ್‌ನಲ್ಲಿ ಆರು ಮಂದಿಗೆ ಝಿಕಾ ವೈರಸ್ ಪತ್ತೆ; 3 ಕಿ.ಮೀ ರೇಡಿಯಸ್ ಕಂಟೋನ್ಮೆಂಟ್ ಜೋನ್‌

Food Poisoning
ದೇಶ3 hours ago

Food Poisoning: ಶಾಲೆಯಲ್ಲಿ ಕೊಟ್ಟ ಬಿಸ್ಕೇಟ್‌ ಸೇವಿಸಿ ಬರೋಬ್ಬರಿ 80 ವಿದ್ಯಾರ್ಥಿಗಳು ಅಸ್ವಸ್ಥ

Govt Employees
ಕರ್ನಾಟಕ4 hours ago

Govt Employees: ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ; ಕ್ರೀಡಾ ಮನೋಭಾವದಿಂದ ಭಾಗವಹಿಸಲು ಸಿ.ಎಸ್. ಷಡಾಕ್ಷರಿ ಮನವಿ

Kolkata Doctor Murder Case
ದೇಶ4 hours ago

Kolkata Doctor murder case: ಟ್ರೈನಿ ವೈದ್ಯೆ ಕೊಲೆ ಪ್ರಕರಣ; ಸ್ವಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್‌

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌