Kailash Vijayvargiya: 30 ವರ್ಷದಲ್ಲಿ ದೇಶದೊಳಗೆ ಅಂತರ್ಯುದ್ಧ, ಹಿಂದೂಗಳು ಬದುಕುವುದೇ ಕಷ್ಟ: ಕೈಲಾಶ್‌ ವಿಜಯ್‌ವರ್ಗೀಯ - Vistara News

ಪ್ರಮುಖ ಸುದ್ದಿ

Kailash Vijayvargiya: 30 ವರ್ಷದಲ್ಲಿ ದೇಶದೊಳಗೆ ಅಂತರ್ಯುದ್ಧ, ಹಿಂದೂಗಳು ಬದುಕುವುದೇ ಕಷ್ಟ: ಕೈಲಾಶ್‌ ವಿಜಯ್‌ವರ್ಗೀಯ

ಹಿಂದೂ ಪದವನ್ನು ಬಲಪಡಿಸುವ ಕೆಲಸ ಮಾಡಬೇಕು. ಬ್ರಿಟಿಷರ ಒಡೆದು ಆಳುವ ನೀತಿಯಂತೆ ಕೆಲವರು ಹಿಂದೂ ಸಮಾಜವನ್ನು ಜಾತಿ ಆಧಾರದ ಮೇಲೆ ವಿಭಜಿಸಲು ಬಯಸುತ್ತಿದ್ದಾರೆ ಎಂದು ಕೈಲಾಶ್‌ ವಿಜಯ್‌ವರ್ಗೀಯ (Kailash Vijayvargiya) ಹೇಳಿದ್ದಾರೆ.

VISTARANEWS.COM


on

Kailash Vijayvargiya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದೋರ್: 30 ವರ್ಷಗಳ ನಂತರ ದೇಶದಲ್ಲಿ ಅಂತರ್ಯುದ್ಧ (Civil War) ಪ್ರಾರಂಭವಾಗಲಿದೆ. 30 ವರ್ಷಗಳ ನಂತರ ಹಿಂದೂಗಳು (Hindus) ಈ ರೀತಿ ಬದುಕಲು ಸಾಧ್ಯವಿಲ್ಲ ಎಂದು ಮಧ್ಯಪ್ರದೇಶದ ಬಿಜೆಪಿ ಸಚಿವ (Madhya Pradesh BJP minister) ಕೈಲಾಶ್‌ ವಿಜಯ್‌ವರ್ಗೀಯ (Kailash Vijayvargiya) ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ.

ಇಂದಿನ ಕಾಲದಲ್ಲಿ ಸಾಮಾಜಿಕ ಸಾಮರಸ್ಯ ಅತಿಮುಖ್ಯವಾಗಿದೆ. ನಿನ್ನೆ ನಾನು ನಿವೃತ್ತ ಸೇನಾ ಅಧಿಕಾರಿಯೊಬ್ಬರನ್ನು ಭೇಟಿಯಾಗಿದ್ದೆ. ಅವರು ಸಾಮಾಜಿಕ ಕಾರ್ಯಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. 30 ವರ್ಷಗಳ ನಂತರ ದೇಶದಲ್ಲಿ ಅಂತರ್ಯುದ್ಧ ಪ್ರಾರಂಭವಾಗಲಿದೆ. 30 ವರ್ಷಗಳ ನಂತರ ಹಿಂದೂಗಳು ಈ ರೀತಿ ಬದುಕಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ನಾವು ಈ ವಿಷಯದ ಬಗ್ಗೆ ಚಿಂತನ ಮನನ ಮಾಡಬೇಕು ಎಂದು ವಿಜಯ್‌ವರ್ಗೀಯ ಹೇಳಿದರು.

ಹಿಂದೂ ಪದವನ್ನು ಬಲಪಡಿಸುವ ಕೆಲಸ ಮಾಡಬೇಕು ಎಂದವರು ನುಡಿದರು. ʼಸಾಮಾಜಿಕ ಸಾಮರಸ್ಯ ರಕ್ಷಾಬಂಧನ ಉತ್ಸವ’ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಬ್ರಿಟಿಷರ ಒಡೆದು ಆಳುವ ನೀತಿಯಂತೆ ಕೆಲವರು ಹಿಂದೂ ಸಮಾಜವನ್ನು ಜಾತಿ ಆಧಾರದ ಮೇಲೆ ವಿಭಜಿಸಲು ಬಯಸುತ್ತಿದ್ದಾರೆ ಎಂದು ಹೇಳಿದರು.

ವಿಜಯವರ್ಗೀಯ ಅವರ ಹೇಳಿಕೆ ಬೇಜವಾಬ್ದಾರಿತನದ್ದಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಮಧ್ಯಪ್ರದೇಶ ಕಾಂಗ್ರೆಸ್ ವಕ್ತಾರ ನೀಲಭ್ ಶುಕ್ಲಾ ಅವರು ವಿಜಯವರ್ಗೀಯ ಅವರ ಹೇಳಿಕೆ ಸಂಪೂರ್ಣ ಬೇಜವಾಬ್ದಾರಿಯಿಂದ ಕೂಡಿದೆ ಎಂದು ಟೀಕಿಸಿದ್ದಾರೆ. ಈ ಹೇಳಿಕೆಯು ದೇಶದಲ್ಲಿ ಅಸ್ಥಿರತೆ ಮತ್ತು ಭಯದ ವಾತಾವರಣವನ್ನು ಸೃಷ್ಟಿಸುತ್ತದೆ. ಶಾಂತಿ ಮತ್ತು ಸಹೋದರತ್ವದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇದಕ್ಕೆ ವಿಜಯವರ್ಗೀಯ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. 30 ವರ್ಷಗಳ ನಂತರ ದೇಶದಲ್ಲಿ ಅಂತರ್ಯುದ್ಧದ ಭೀತಿಯನ್ನು ಯಾವ ನಿವೃತ್ತ ಸೇನಾಧಿಕಾರಿ ವ್ಯಕ್ತಪಡಿಸಿದ್ದಾರೆ ಮತ್ತು ಅದಕ್ಕೆ ಆಧಾರವೇನು ಎಂಬುದನ್ನು ವಿಜಯವರ್ಗೀಯ ಅವರು ಸ್ಪಷ್ಟಪಡಿಸಬೇಕು ಎಂದು ಅವರು ಹೇಳಿದರು.

ಒತ್ತಡಕ್ಕೆ ಒಳಗಾಗಬೇಡಿ; ಭಾರತದ ಕ್ರೀಡಾಳುಗಳಿಗೆ ಪ್ರಧಾನಿ ಮೋದಿ ಸಲಹೆ

ನವದೆಹಲಿ: ಇದೇ ತಿಂಗಳು ಆಗಸ್ಟ್​ 28ರಿಂದ ಪ್ಯಾರಿಸ್​ನಲ್ಲಿ(Paralympic 2024) ಆರಂಭಗೊಳ್ಳಲಿರುವ ಪ್ಯಾರಾಲಿಂಪಿಕ್ಸ್(Paris Paralympics)​ ಕ್ರೀಡಾಕೂಟದಲ್ಲಿ ಈ ಬಾರಿ ಭಾರತದಿಂದ ದಾಖಲೆಯ 84 ಮಂದಿ ಪ್ಯಾರಾ ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಕಳೆದ ಶುಕ್ರವಾರ ಭಾರತ ಪ್ಯಾರಾಲಿಂಪಿಕ್‌ ಸಮಿತಿ (ಪಿಸಿಐ) ಮತ್ತು ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಎಲ್ಲ ಕ್ರೀಡಾಪಟುಗಳಿಗೆ ಅದ್ಧೂರಿ ಬೀಳ್ಕೊಡುಗೆ ನೀಡಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ(PM Modi) ಅವರು ಭಾರತದ ಕ್ರೀಡಾಪಟುಗಳಿಗೆ ಶುಭ ಹಾರೈಸಿದ್ದಾರೆ. ಜತೆಗೆ ಆತ್ಮ ವಿಶ್ವಾಸ ತುಂಬಿದ್ದಾರೆ.

ಸೋಮವಾರ ರಾತ್ರಿ ನಡೆದಿದ್ದ ವರ್ಚುವಲ್‌ ಸಂವಾದದಲ್ಲಿ ಮೋದಿ ಅವರು ಅಥ್ಲೀಟ್​ಗಳ ಜತೆ ಸಂವಾದ ನಡೆಸಿದ್ದರು. ಇದೇ ವೇಳೆ ಹಲವು ಕ್ರೀಡಾಪಟುಗಳು ತಮ್ಮ ತಯಾರಿಯ ಬಗ್ಗೆ ಮತ್ತು ಈ ಬಾರಿ ಪದಕ ಗೆಲ್ಲುವ ವಿಶ್ವಾಸವನ್ನು ಮೋದಿ ಜತೆ ಹಂಚಿಕೊಂಡರು. ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಜಾವೆಲಿನ್‌ ತ್ರೋವರ್‌ ಸುಮಿತ್‌ ಅಂಟಿಲ್‌ ಈ ಬಾರಿಯೂ ಚಿನ್ನ ಗೆಲ್ಲುವುದಾಗಿ ಮೋದಿಗೆ ಭರವಸೆ ನೀಡಿದರು. ಸುಮಿತ್‌ ಅಂಟಿಲ್‌ ಪ್ಯಾರಾಲಿಂಪಿಕ್ಸ್‌ ಉದ್ಘಾಟನ ಸಮಾರಂಭದಲ್ಲಿ ಶಾಟ್‌ಪುಟರ್‌ ಭಾಗ್ಯಶ್ರೀ ಜಾಧವ್‌ ಅವರೊಂದಿಗೆ ಭಾರತದ ಧ್ವಜಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: PM Narendra Modi : ಆಗಸ್ಟ್​ 23ರಂದು ಉಕ್ರೇನ್​ ಪ್ರವಾಸಕ್ಕೆ ತೆರಳಲಿದ್ದಾರೆ ಪ್ರಧಾನಿ ಮೋದಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

ATP Cincinnati Open: ಚೊಚ್ಚಲ ಪ್ರಶಸ್ತಿ ಗೆದ್ದ ಜಾನಿಕ್‌ ಸಿನ್ನರ್‌, ಅರಿನಾ ಸಬಲೆಂಕಾ

ATP Cincinnati Open: ಮಹಿಳಾ ಸಿಂಗಲ್ಸ್​ ಫೈನಲ್​ನಲ್ಲಿ ಸಬಲೆಂಕಾ 6-3, 7-5 ನೇರ ಸೆಟ್​ಗಳ ಅಂತರದಿಂದ ಅಮೆರಿಕದ ಜೆಸ್ಸಿಕಾ ಪೆಗುಲಾ ಅವರನ್ನು ಹಿಮ್ಮೆಟ್ಟಿಸಿ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿದರು

VISTARANEWS.COM


on

Cincinnati Open
Koo

ಸಿನ್ಸಿನಾಟಿ: ಸಿನ್ಸಿನಾಟಿ ಓಪನ್‌ ಟೆನಿಸ್‌(ATP Cincinnati Open) ಪಂದ್ಯಾವಳಿಯ ಪುರುಷರ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ, ಇಟಲಿಯ ಜಾನಿಕ್‌ ಸಿನ್ನರ್‌(Jannik Sinner) ಅಮೆರಿಕದ ಫ್ರಾನ್ಸೆಸ್‌ ಥಿಯಾಫೊ(Frances Tiafoe) ವಿರುದ್ಧ 7-6 (7/4), 6-2ರ ನೇರ ಸೆಟ್‌ಗಳಿಂದ ಗೆದ್ದು ಚಾಂಪಿಯನ್​ ಪಟ್ಟ ಅಲಂಕರಿಸಿದ್ದಾರೆ. ಮಹಿಳಾ ಸಿಂಗಲ್ಸ್​ ಫೈನಲ್​ನಲ್ಲಿ ಬಲ್ಗೇರಿಯಾದ ಅರಿನಾ ಸಬಲೆಂಕಾ(Aryna Sabalenka) ಅಮೆರಿಕದ ಜೆಸ್ಸಿಕಾ ಪೆಗುಲಾ(Jessica Pegula) ಅವರನ್ನು ಹಿಮ್ಮೆಟ್ಟಿಸಿ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಅತ್ಯಂತ ಜಿದ್ದಾಜಿದ್ದಿನಿಂದ ನಡೆದ ಪುರುಷರ ಫೈನಲ್​ನ ಮೊದಲ ಸೆಟ್​ ಟ್ರೈ ಬ್ರೇಕರ್​ ತನಕ ಸಾಗಿ ಫಲಿತಾಂಸ ಕಂಡಿತು. ದ್ವಿತೀಯ ಸೆಟ್​ ಕೂಡ ಒಂದು ಹಂತದ ತನಕ ತೀವ್ರ ಪೈಪೋಟಿಯಿಂದ ಸಾಗಿದರೂ ಕೂಡ ಜಾನಿಕ್‌ ಸಿನ್ನರ್‌ ಅವರ ಬಲಿಷ್ಠ ಹೊಡೆತಗಳಿಗೆ ತಡೆಯೊಡ್ಡುವಲ್ಲಿ ವಿಫಲವಾದ ಅಮೆರಿಕದ 26 ವರ್ಷ ವಯಸ್ಸಿನ ಫ್ರಾನ್ಸೆಸ್‌ ಥಿಯಾಫೊ ಸೋಲು ಕಂಡರು. ಉಭಯ ಆಟಗಾರರಿಗೂ ಇದು ಟೂರ್ನಿಯ ಚೊಚ್ಚಲ ಫೈನಲ್​ ಪಂದ್ಯವಾಗಿತ್ತು. ಸೆಮಿಫೈನಲ್‌ನಲ್ಲಿ ಜಾನಿಕ್‌ ಸಿನ್ನರ್‌ 7-6 (9), 5-7, 7-6 (4) ಅಂತರದಿಂದ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೇವ್‌ ಅವರನ್ನು ಮಣಿಸಿದಾಗಲೇ ಈ ಬಾರಿ ಚಾಂಪಿಯನ್​ ಆಗುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ನಿರೀಕ್ಷೆಯಂತೆ ಅವರು ಟ್ರೋಫಿಯನ್ನು ಗೆದ್ದಿದ್ದಾರೆ.

ಪ್ರಶಸ್ತಿ ಗೆದ್ದ ಅತಿ ಕಿರಿಯ ಆಟಗಾರ


ಚಾಂಪಿಯನ್​ ಪಟ್ಟ ಅಲಂಕರಿಸುವ ಮೂಲಕ 2008ರ ಬಳಿಕ ಸಿನ್ಸಿನಾಟಿ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎಂಬ ಹೆಗ್ಗಳಿಕೆಗೆ ಸಿನ್ನರ್‌ ಪಾತ್ರವಾದರು. 16 ವರ್ಷಗಳ ಹಿಂದೆ 21 ವರ್ಷ ವಯಸ್ಸಿನಲ್ಲಿ ಇಂಗ್ಲೆಂಡ್‌ನ ಆ್ಯಂಡಿ ಮರ್ರೆ ಚಾಂಪಿಯನ್‌ ಆಗಿ ದಾಖಲೆ ಬರೆದಿದ್ದಾರೆ. ಸಿನ್ನರ್‌ ಪ್ರಸ್ತುತ ಟೆನಿಸ್​ ಋತುವಿನಲ್ಲಿ ಗೆದ್ದ ಐದನೇ ಟ್ರೋಫಿ ಇದಾಗಿದೆ. ಮೆಲ್ಬರ್ನ್‌ನಲ್ಲಿ ಆಸ್ಟ್ರೇಲಿಯಾ ಓಪನ್ ಕಿರೀಟದೊಂದಿಗೆ ಅವರು ತಮ್ಮ ಋತುವನ್ನು ಪ್ರಾರಂಭಿಸಿದ್ದರು. ಒಟ್ಟಾರೆಯಾಗಿ ಅವರ ಟೆನಿಸ್​ ವೃತ್ತಿಜೀವನದಲ್ಲಿ ಗೆದ್ದ 15ನೇ ಪ್ರಶಸ್ತಿಯಾಗಿದೆ.

ಇದನ್ನೂ ಓದಿ Garbine Muguruza: ಟೆನಿಸ್​ಗೆ ವಿದಾಯ ಹೇಳಿದ ಮಾಜಿ ವಿಶ್ವ ನಂ.1 ಆಟಗಾರ್ತಿ ಮುಗುರುಜಾ

ಚೊಚ್ಚಲ ಪ್ರಶಸ್ತಿ ಗೆದ್ದ ಸಬಲೆಂಕಾ


ಮಹಿಳಾ ಸಿಂಗಲ್ಸ್​ ಫೈನಲ್​ನಲ್ಲಿ ಸಬಲೆಂಕಾ 6-3, 7-5 ನೇರ ಸೆಟ್​ಗಳ ಅಂತರದಿಂದ ಅಮೆರಿಕದ ಜೆಸ್ಸಿಕಾ ಪೆಗುಲಾ ಅವರನ್ನು ಹಿಮ್ಮೆಟ್ಟಿಸಿ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿದರು. 26 ವರ್ಷದ ಸಬಲೆಂಕಾ ಸಿನ್ಸಿನಾಟಿ ಓಪನ್‌ನಲ್ಲಿ ಇದೇ ಮೊದಲ ಬಾರಿ ಫೈನಲ್‌ ತಲುಪಿದ್ದರು. ಈ ಹಿಂದೆ ಆಡಿದ್ದ ಮೂರು ಬಾರಿ ಸೆಮಿಫೈನಲ್‌ ಪ್ರವೇಶಿಸುವ ಹಾದಿಯಲ್ಲಿ ಸೋಲು ಕಂಡಿದ್ದರು. ಈ ಬಾರಿ ಟೂರ್ನಿಯಲ್ಲಿ ಒಂದೇ ಒಂದು ಸೆಟ್‌ ಕಳೆದುಕೊಳ್ಳದೆ ಪ್ರಶಸ್ತಿಯನ್ನು ಗೆದ್ದುಕೊಂಡ ಹಿರಿಮೆಗೆ ಪಾತ್ರರಾದರು.

ಸಬಲೆಂಕಾ ಸೆಮಿಫೈನಲ್​ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್‌ ಅವರನ್ನು 6-3, 6-3 ನೇರ ಸೆಟ್‌ಗಳಿಂದ ಪರಾಭವಗೊಳಿಸಿ ಫೈನಲ್​ ಪ್ರವೇಶಿಸಿದ್ದರು. ಫೈನಲ್​ನಲ್ಲಿಯೂ ಇದೇ ಜೋಶ್​ನಲ್ಲಿ ಆಡಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಭುಜದ ಗಾಯದ ಕಾರಣಕ್ಕಾಗಿ ಸಬಲೆಂಕಾ ವಿಂಬಲ್ಡನ್‌ನಿಂದ ಹೊರಗುಳಿದಿದ್ದರು. ಇದೀಗ ಸಿನ್ಸಿನಾಟಿ ಟೂರ್ನಿಯಲ್ಲಿ ಚಾಂಪಿಯನ್​ ಆಗುವ ಮೂಲಕ ಗ್ರೇಟ್​ ಕಮ್​ಬ್ಯಾಕ್​ ಮಾಡಿದ್ದಾರೆ.

Continue Reading

EXPLAINER

Vistara Explainer: ಪುಟ್ಟ ಹೆಣ್ಣುಮಕ್ಕಳ ಮೇಲೆ ಕಾಮುಕ ಅಟೆಂಡರ್‌ನಿಂದ ಅತ್ಯಾಚಾರದ ಬಳಿಕ ಬದ್ಲಾಪುರ ಉದ್ವಿಗ್ನ; ಏನಾಗ್ತಿದೆ ಅಲ್ಲಿ?

Vistara Explainer: ಬದ್ಲಾಪುರದ ಶಾಲೆಯೊಂದರಲ್ಲಿ ಶಿಶುವಿಹಾರದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಪುರುಷ ಅಟೆಂಡರ್‌ನಿಂದ ಲೈಂಗಿಕ ದೌರ್ಜನ್ಯ ನಡೆದಿತ್ತು. ಆರೋಪಿಯನ್ನು ಕಳೆದ ವಾರ ಬಂಧಿಸಲಾಗಿತ್ತು. ಮಂಗಳವಾರ, ಕ್ರೋಧತಪ್ತರಾದ ಪೋಷಕರು ಮತ್ತು ನಾಗರಿಕರು ಶಾಲೆಗೆ ನುಗ್ಗಿ ಶಾಲೆಯನ್ನು ಧ್ವಂಸಗೊಳಿಸಿದ್ದರು.

VISTARANEWS.COM


on

badlapur tension vistara explainer
Koo

ಥಾಣೆ: ಮಹಾರಾಷ್ಟ್ರದ ಥಾಣೆಯ ಬದ್ಲಾಪುರ ಎಂಬಲ್ಲಿನ ಕಿಂಡರ್‌ ಗಾರ್ಟನ್‌ ಶಾಲೆಯೊಂದರಲ್ಲಿ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ (Physical Abuse) ಕೃತ್ಯ ನಡೆದ ನಂತರ ಪ್ರದೇಶದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಶಾಲೆಯ ಶೌಚಾಲಯದಲ್ಲಿ ಕಾಮುಕ ಅಟೆಂಡರನೊಬ್ಬ ಈ ಮಕ್ಕಳ ಮೇಲೆ ಅಮಾನುಷ ಕೃತ್ಯ ಎಸಗಿದ್ದಾನೆ. ಇದರ ಬಳಿಕ ಉದ್ವಿಗ್ನ ಪರಿಸ್ಥಿತಿ (Badlapur tension) ಉಂಟಾಗಿದ್ದು, ಹಲವೆಡೆ ಗಲಭೆ ತಲೆದೋರಿದೆ. ಈ ಕುರಿತ ವಿವರ (Vistara Explainer) ಇಲ್ಲಿದೆ.

ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಎಸಗಿದ ಆರೋಪದ ಮೇಲೆ ಬಂಧಿತ ಆರೋಪಿಯ ವಿರುದ್ಧ ಅತ್ಯಾಚಾರ ಆರೋಪ ದಾಖಲಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮಂಗಳವಾರ ಪೊಲೀಸರಿಗೆ ಆದೇಶಿಸಿದ್ದಾರೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡಿ ಪ್ರಕರಣವನ್ನು ಫಾಸ್ಟ್‌ ಟ್ರ್ಯಾಕ್‌ನಲ್ಲಿ ನಡೆಸಲಾಗುವುದು ಎಂದು ಸಿಎಂ ಹೇಳಿದ್ದಾರೆ. “ನಾನು ಥಾಣೆ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿದ್ದೇನೆ. ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣವನ್ನು ತ್ವರಿತವಾಗಿ ತನಿಖೆ ಮಾಡಿ ಆರೋಪಿ ಮೇಲೆ ಅತ್ಯಾಚಾರ ಯತ್ನ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಆರೋಪ ದಾಖಲಿಸುವಂತೆ ಸೂಚಿಸಿದ್ದೇನೆ” ಎಂದು ಅವರು ಹೇಳಿದರು.

ಬದ್ಲಾಪುರದಲ್ಲಿ ಏನಾಯ್ತು?

ಬದ್ಲಾಪುರದ ಶಾಲೆಯೊಂದರಲ್ಲಿ ಶಿಶುವಿಹಾರದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಪುರುಷ ಅಟೆಂಡರ್‌ನಿಂದ ಲೈಂಗಿಕ ದೌರ್ಜನ್ಯ ನಡೆದಿತ್ತು. ಆರೋಪಿಯನ್ನು ಕಳೆದ ವಾರ ಬಂಧಿಸಲಾಗಿತ್ತು. ಮಂಗಳವಾರ, ಕ್ರೋಧತಪ್ತರಾದ ಪೋಷಕರು ಮತ್ತು ನಾಗರಿಕರು ಶಾಲೆಗೆ ನುಗ್ಗಿ ಶಾಲೆಯನ್ನು ಧ್ವಂಸಗೊಳಿಸಿದ್ದರು. ಬೆಳಗ್ಗೆ 8.30ರಿಂದ ಬದ್ಲಾಪುರ ರೈಲು ನಿಲ್ದಾಣದಲ್ಲಿ ರೈಲ್‌ ರೋಕೋ ನಡೆಸಿ ರೈಲುಗಳನ್ನು ತಡೆದರು. ಪ್ರತಿಭಟನೆಯ ವೇಳೆ ಕೆಲ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು.

ಕಾಮುಕನ ಕೈಗೆ ಸಿಕ್ಕಿದ ಸಂತ್ರಸ್ತರು ಮೂರು ಮತ್ತು ನಾಲ್ಕು ವರ್ಷ ವಯಸ್ಸಿನವರು. ಈತ ಶಾಲೆಯ ಶೌಚಾಲಯದಲ್ಲಿ ದೌರ್ಜನ್ಯ ಎಸಗಿದ್ದಾನೆ. ಕೃತ್ಯಕ್ಕೆ ಸಂಬಂಧಿಸಿ ಪ್ರಾಂಶುಪಾಲರು, ತರಗತಿ ಶಿಕ್ಷಕಿ ಹಾಗೂ ಮಹಿಳಾ ಅಟೆಂಡರ್‌ನನ್ನು ಶಾಲೆಯ ಆಡಳಿತ ಮಂಡಳಿ ಅಮಾನತುಗೊಳಿಸಿದೆ.

ಆರೋಪಿ 23 ವರ್ಷದ ಪುರುಷ ಸ್ವಚ್ಛತಾ ಸಿಬ್ಬಂದಿ. ಬಾಲಕಿಯರು ಶೌಚಾಲಯ ಬಳಸಲು ಹೋದಾಗ ಹಲ್ಲೆ ನಡೆದಿದೆ. ಬಾಲಕಿಯರ ಶೌಚಾಲಯಕ್ಕೆ ಶಾಲೆಯಿಂದ ಮಹಿಳಾ ಸಿಬ್ಬಂದಿಯನ್ನು ನೇಮಿಸಿಲ್ಲ. ಆರೋಪಿ ಅಕ್ಷಯ್ ಶಿಂಧೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿತ್ತು. ಹಲ್ಲೆಗೊಳಗಾದ ಬಾಲಕಿ ತನ್ನ ಖಾಸಗಿ ಅಂಗದಲ್ಲಿ ನೋವಿನ ಕುರಿತು ದೂರು ನೀಡಿದಾಗ ಈ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಶೌಚಾಲಯಕ್ಕೆ ತೆರಳಿದ್ದ ವೇಳೆ ಆರೋಪಿ ತನ್ನ ಖಾಸಗಿ ಅಂಗಗಳನ್ನು ಮುಟ್ಟಿದ್ದಾನೆ ಎಂದು ಪೋಷಕರಿಗೆ ಆಕೆ ತಿಳಿಸಿದ್ದಾಳೆ. ಪೋಷಕರು ಹುಡುಗಿಯ ಸ್ನೇಹಿತೆಯ ಪೋಷಕರನ್ನು ಸಂಪರ್ಕಿಸಿದ್ದು, ಅವರೂ ತಮ್ಮ ಮಗಳಿಗೆ ಶಾಲೆಗೆ ಹೋಗಲು ಭಯವಾಗುತ್ತಿದೆ ಎಂದು ಹೇಳಿದ್ದಾರೆ. ನಂತರ ಪೋಷಕರು ಬಾಲಕಿಯರನ್ನು ಸ್ಥಳೀಯ ವೈದ್ಯರ ಬಳಿ ಪರೀಕ್ಷಿಸಿದಾಗ, ಇಬ್ಬರೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದು ಬೆಳಕಿಗೆ ಬಂದಿದೆ.

ಸಿಎಂಒ ಕ್ರಮದ ಭರವಸೆ

ಶಾಲೆಯ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರಿದರೆ ಕಾನೂನು ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದ್ದಾರೆ. ಪ್ರಕರಣವನ್ನು ಅತ್ಯಂತ ತುರ್ತು ಮತ್ತು ದಕ್ಷತೆಯಿಂದ ನಿಭಾಯಿಸುವಂತೆ ಖಚಿತಪಡಿಸಿಕೊಳ್ಳಲು ಅವರು ಥಾಣೆ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ವಿದ್ಯಾರ್ಥಿಗಳನ್ನು ಬೆಂಬಲಿಸಲು ಮತ್ತು ರಕ್ಷಿಸಲು ವಿನ್ಯಾಸಗೊಳಿಸಲಾದ ಸಖಿ ಸಾವಿತ್ರಿ ಸಮಿತಿಗಳನ್ನು ಶಾಲೆಗಳಲ್ಲಿ ಸ್ಥಾಪಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಮುಖ್ಯಮಂತ್ರಿಗಳು ಪರಿಶೀಲನೆಗೆ ಕರೆ ನೀಡಿದ್ದಾರೆ.

ಶಾಲಾ ಸುರಕ್ಷತೆಯನ್ನು ಸುಧಾರಿಸುವ ಮತ್ತು ಭವಿಷ್ಯದ ದುರುಪಯೋಗವನ್ನು ತಡೆಗಟ್ಟುವ ಉದ್ದೇಶದಿಂದ, ಪ್ರತಿ ಶಾಲೆಯಲ್ಲೂ ದೂರು ಪೆಟ್ಟಿಗೆಗಳನ್ನು ಅಳವಡಿಸುವುದು, ವಿದ್ಯಾರ್ಥಿಗಳೊಂದಿಗೆ ಆಗಾಗ ಸಂವಹನ ನಡೆಸುವ, ಶಾಲಾ ಸಿಬ್ಬಂದಿಗಳ ಪರಿಶೀಲನೆ ಹೆಚ್ಚಿಸುವ ಮತ್ತಿತರ ಕ್ರಮಗಳನ್ನು ಸಿಎಂ ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ: Stabbing Case: ಮುಸ್ಲಿಂ ಸಹಪಾಠಿಯಿಂದ ಇರಿತಕ್ಕೊಳಗಾದ ವಿದ್ಯಾರ್ಥಿ, ಸಹೋದರಿಯಿಂದ ರಾಖಿ ಕಟ್ಟಿಸಿಕೊಂಡು ಅಸುನೀಗಿದ

Continue Reading

ದೇಶ

Viral News: ದರೋಡೆ, ಪಿಕ್‌ಪಾಕೆಟಿಂಗ್‌, ಕಳ್ಳತನವೇ ಸಬ್ಜೆಕ್ಟ್‌.. ಕ್ರಿಮಿನಲ್‌ಗಳಿಗಾಗಿಯೇ ಇಲ್ಲಿವೆ ಶಾಲೆಗಳು; ಫೀಸ್‌ ಕೇಳಿದ್ರೆ ಶಾಕ್‌ ಆಗೋದು ಗ್ಯಾರಂಟಿ

Viral News: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಿಂದ ಸುಮಾರು 117 ಕಿ.ಮೀ ದೂರದಲ್ಲಿರುವ ಕಾದಿಯಾ, ಗುಲ್ಖೇದಿ ಮತ್ತು ಹುಲ್ಖೇದಿ ಎಂಬ ಗ್ರಾಮಗಳಲ್ಲಿ ಕಳ್ಳತನ, ರಾಬರಿ ಮತ್ತು ಡಕಾಯಿತಿ ತರಬೇತಿ ನೀಡಲಾಗುತ್ತಿದೆ. ಪೊಲೀಸರಿಗೆ ಈ ಬಗ್ಗೆ ಸಂಪೂರ್ಣವಾಗಿ ಅರಿವಿದ್ದರೂ, ನಿರ್ಭೀತಿಯಿಂದ ಈ ಶಾಲೆಗಳು ಖುಲ್ಲಾಂ ಖುಲ್ಲಾ ನಡೆಯುತ್ತಿದೆ. ಪೋಷಕರು ದೂರದೂರುಗಳಿಂದ ಮಕ್ಕಳನ್ನು ಇಲ್ಲಿಗೆ ಕಳುಹಿಸುತ್ತಿದ್ದಾರೆ.

VISTARANEWS.COM


on

Viral News
Koo

ಭೋಪಾಲ್‌: ಮಕ್ಕಳ ಭವಿಷ್ಯ ಉತ್ತಮವಾಗಿರಲಿ ಎಂದು ತಂದೆ ತಾಯಿಗಳು ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ಇರೋದ್ರಲ್ಲೇ ಅತ್ಯುತ್ತಮ ಶಾಲೆ ಹುಡುಕಿ ಅಲ್ಲಿಗೆ ಸೇರಿಸ್ತಾರೆ(Viral News). ಮಕ್ಕಳು ಎಲ್ಲಿ ಅಡ್ಡ ದಾರಿ ಹಿಡಿತಾರೋ ಎಂಬ ಆತಂಕದಲ್ಲೇ ಅದೆಷ್ಟೇ ಖರ್ಚಾದ್ರೂ ನಮ್ಮ ಮಕ್ಕಳು ಅತ್ಯುತ್ತಮ ಶಾಲಾ ಕಾಲೇಜು(School)ಗಳಲ್ಲೇ ಓದಬೇಕೆನ್ನುವುದು ಎಲ್ಲಾ ಪೋಷಕರ ಕನಸು. ಆದರೆ ಇಲ್ಲೊಂದು ಕಡೆ ಮಕ್ಕಳಿಗೆ ಕಳ್ಳತನ, ಸುಲಿಗೆ, ರಾಬರಿ ಹೀಗೆ ಅಪರಾಧಗಳನ್ನೇ ಕಲಿಸಲೆಂದು ಶಾಲೆಗಳಿವೆ(Schools for Robbery). ಹೌದು ಇದನ್ನು ಕೇಳಿದ್ರೆ ನೀವು ಶಾಕ್‌ ಆಗೋದು ಗ್ಯಾರಂಟಿ. ಸುಲಭಕ್ಕೆ ನಂಬಲು ಸಾಧ್ಯವಾಗದಿದ್ದರೂ ಇಂತಹ ಶಾಲೆಗಳು ಇರುವುದು ನಿಜ. ಈ ಶಾಲೆಗಳು ಇರುವುದು ಮಧ್ಯಪ್ರದೇಶದ ಮೂರು ಕುಗ್ರಾಮಗಳಲ್ಲಿ. ಇಲ್ಲಿ ಕ್ರಿಮಿನಲ್‌ಗಳೇ ಕ್ರಿಮಿನಲ್‌ಗಳಿಗಾಗಿ ನಡೆಸುತ್ತಿರುವ ಶಾಲೆಗಳಿವೆ. ಇನ್ನು ಈ ಶಾಲೆಯ ಫೀಸ್‌ ಕೇಳಿದ್ರೆ ನೀವು ಹೌಹಾರೋದು ಗ್ಯಾರಂಟಿ.

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಿಂದ ಸುಮಾರು 117 ಕಿ.ಮೀ ದೂರದಲ್ಲಿರುವ ಕಾದಿಯಾ, ಗುಲ್ಖೇದಿ ಮತ್ತು ಹುಲ್ಖೇದಿ ಎಂಬ ಗ್ರಾಮಗಳಲ್ಲಿ ಕಳ್ಳತನ, ರಾಬರಿ ಮತ್ತು ಡಕಾಯಿತಿ ತರಬೇತಿ ನೀಡಲಾಗುತ್ತಿದೆ. ಪೊಲೀಸರಿಗೆ ಈ ಬಗ್ಗೆ ಸಂಪೂರ್ಣವಾಗಿ ಅರಿವಿದ್ದರೂ, ನಿರ್ಭೀತಿಯಿಂದ ಈ ಶಾಲೆಗಳು ಖುಲ್ಲಾಂ ಖುಲ್ಲಾ ನಡೆಯುತ್ತಿದೆ. ಪೋಷಕರು ದೂರದೂರುಗಳಿಂದ ಮಕ್ಕಳನ್ನು ಇಲ್ಲಿಗೆ ಕಳುಹಿಸುತ್ತಿದ್ದಾರೆ.

ಯಾವ ರೀತಿಯ ತರಬೇತಿ?

12 ಅಥವಾ 13 ವರ್ಷ ವಯಸ್ಸಿನ ಮಕ್ಕಳನ್ನು ಅಪರಾಧ ಚಟುವಟಿಕೆಗಳಲ್ಲಿ ತರಬೇತಿ ನೀಡಲು ಅವರ ಪೋಷಕರು ಈ ಗ್ರಾಮಗಳಿಗೆ ಕಳುಹಿಸುತ್ತಾರೆ. ಪೋಷಕರು, ಗ್ಯಾಂಗ್ ನಾಯಕರನ್ನು ಭೇಟಿಯಾದ ನಂತರ, ತಮ್ಮ ಮಗುವಿಗೆ ಯಾರು ಅತ್ಯುತ್ತಮ “ಶಿಕ್ಷಣ” ನೀಡಬಹುದು ಎಂದು ನಿರ್ಧರಿಸುತ್ತಾರೆ. ಈ ಕಠೋರ ಪಠ್ಯಕ್ರಮದಲ್ಲಿ ದಾಖಲಾಗಲು, ಕುಟುಂಬಗಳು ₹ 2 ಲಕ್ಷದಿಂದ ₹ 3 ಲಕ್ಷದವರೆಗಿನ ಶುಲ್ಕವನ್ನು ಪಾವತಿಸುತ್ತವೆ. ಇಲ್ಲಿ ಮಕ್ಕಳಿಗೆ ಜೇಬುಗಳ್ಳತನ, ಜನಸಂದಣಿ ಇರುವ ಸ್ಥಳಗಳಲ್ಲಿ ಬ್ಯಾಗ್ ಕಸಿದುಕೊಳ್ಳುವುದು, ವೇಗವಾಗಿ ಓಡುವುದು, ಪೊಲೀಸರಿಂದ ತಪ್ಪಿಸಿಕೊಳ್ಳುವುದು, ಸಿಕ್ಕಿಬಿದ್ದರೆ ಹೊಡೆತಗಳನ್ನು ಸಹಿಸಿಕೊಳ್ಳುವುದು ಮುಂತಾದ ವಿವಿಧ ಅಪರಾಧ ಕೌಶಲ್ಯಗಳನ್ನು ಕಲಿಸಲಾಗುತ್ತದೆ. ಗ್ಯಾಂಗ್‌ನಲ್ಲಿ ಒಂದು ವರ್ಷ ಪೂರ್ಣಗೊಂಡ ನಂತರ, ಮಗುವಿನ ಪೋಷಕರು ಗ್ಯಾಂಗ್ ಲೀಡರ್‌ನಿಂದ ವಾರ್ಷಿಕ ₹ 3ಲಕ್ಷ ದಿಂದ ₹ 5 ಲಕ್ಷ ಹಣವನ್ನು ಪಡೆಯುತ್ತಾರೆ.

ಇತ್ತೀಚೆಗಷ್ಟೇ ಈ ಗ್ಯಾಂಗ್‌ ಅತಿದೊಡ್ಡ ಮೊತ್ತದ ಕಳ್ಳತನದ ಮೂಲದ ಭಾರೀ ಸುದ್ದಿಯಾಗಿತ್ತು. ಆಗಸ್ಟ್ 8 ರಂದು ಜೈಪುರದ ಹಯಾತ್ ಹೋಟೆಲ್‌ನಲ್ಲಿ ನಡೆದ ಅದ್ದೂರಿ ಡೆಸ್ಟಿನೇಶನ್ ವೆಡ್ಡಿಂಗ್ ವೇಳೆ ಅಪ್ರಾಪ್ತ ಕಳ್ಳನೊಬ್ಬ ₹ 1.5 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ₹ 1 ಲಕ್ಷ ನಗದು ಹೊಂದಿರುವ ಬ್ಯಾಗ್‌ನೊಂದಿಗೆ ಪರಾರಿಯಾಗಿದ್ದ.

ಕಳ್ಳತನ ಮಾಡಿದ ನಂತರ ಆತನ ಗ್ಯಾಂಗ್ ರಾಜ್‌ಗಢ್ ಜಿಲ್ಲೆಯ ಕಡಿಯಾ ಗ್ರಾಮಕ್ಕೆ ಪರಾರಿಯಾಗಿದೆ. ಅನುಮಾನವನ್ನು ಬಾರದಂತೆ ಕದ್ದ ಆಭರಣಗಳನ್ನು ತಕ್ಷಣ ಮಾರಾಟ ಮಾಡಿದ್ದಾರೆ. ನಂತರ ಧಾರ್ಮಿಕ ಯಾತ್ರೆಯಾದ ಕನ್ವರ್ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.

ತರಬೇತಿ ಬಳಿಕ ಮಕ್ಕಳ ಹರಾಜು

ಬೋಡಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಮ್‌ಕುಮಾರ್ ಭಗತ್ ಈ ಬಗ್ಗೆ ಮಾಹಿತಿ ನೀಡಿದ್ದು, “ಈ ಅಪರಾಧಿಗಳು ಬ್ಯಾಗ್ ಎಗರಿಸುವುದು, ಬ್ಯಾಂಕ್ ಕಳ್ಳತನದಲ್ಲಿ ಹೆಚ್ಚು ತರಬೇತಿ ಪಡೆದಿದ್ದಾರೆ.ಸಾಮಾನ್ಯವಾಗಿ 17 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತರನ್ನು ತಮ್ಮ ಚಟುವಟಿಕೆಗಳನ್ನು ಕೈಗೊಳ್ಳಲು ಬಳಸಿಕೊಳ್ಳುತ್ತವೆ. ಈ ಗ್ರಾಮಗಳಲ್ಲಿ ಮಕ್ಕಳಿಗೆ ಕಳ್ಳತನ ತರಬೇತಿ ನೀಡಿ ಬಳಿಕ ಅವರನ್ನು ಪ್ರೊಫೆಶನಲ್‌ ಕಳ್ಳರನ್ನಾಗಿ ತಯಾರು ಮಾಡಲಾಗುತ್ತಿದೆ ಎಂದರು.

ಈ ಗ್ರಾಮಗಳ 300 ಕ್ಕೂ ಹೆಚ್ಚು ಮಕ್ಕಳು ವಿವಿಧ ರಾಜ್ಯಗಳಲ್ಲಿ ಮದುವೆ ಸಮಾರಂಭಗಳಲ್ಲಿ ಕಳ್ಳತನದಲ್ಲಿ ಭಾಗಿಯಾಗಿದ್ದಾರೆ. ಈ ಗ್ಯಾಂಗ್‌ಗಳು ಹೆಚ್ಚು ಸಂಘಟಿತವಾಗಿವೆ, ತಮ್ಮ ಅಪರಾಧ ಕೃತ್ಯಕ್ಕಾಗಿ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಿವೆ. ಹಳ್ಳಿಯೊಳಗಿನ ಶ್ರೀಮಂತ ವ್ಯಕ್ತಿಗಳು ಹರಾಜು ಪ್ರಕ್ರಿಯೆಗಳ ಮೂಲಕ 1-2 ವರ್ಷಗಳವರೆಗೆ ಬಡ ಮಕ್ಕಳನ್ನು ಬಾಡಿಗೆಗೆ ಪಡೆಯುತ್ತಾರೆ, ಈ ಹರಾಜು ₹ 20 ಲಕ್ಷದವರೆಗೆ ತಲುಪುತ್ತದೆ. ಒಮ್ಮೆ ತರಬೇತಿ ಪಡೆದ ನಂತರ, ಈ ಮಕ್ಕಳು ಹೂಡಿಕೆಗಿಂತ ಐದರಿಂದ ಆರು ಪಟ್ಟು ಗಳಿಸುತ್ತಾರೆ, ನಂತರ ಅವರನ್ನು ಗ್ಯಾಂಗ್‌ಗಳಿಂದ ಬಿಡುಗಡೆ ಮಾಡಲಾಗುತ್ತದೆ.

ಇದನ್ನೂ ಓದಿ: Sharia Law: “ಅಮೆರಿಕನ್ನರ ಮೇಲೂ ಷರಿಯಾ ಕಾನೂನು ಹೇರಲಾಗುತ್ತದೆ…”; ಸಂಚಲನ ಮೂಡಿಸಿದ ವೈರಲ್‌ ವಿಡಿಯೋ

Continue Reading

ಪ್ರಮುಖ ಸುದ್ದಿ

Supreme Court: ʼಯುವತಿಯರು ಕಾಮಾಸಕ್ತಿ ನಿಯಂತ್ರಿಸಿಕೊಳ್ಳಿʼ ಎಂದ ನ್ಯಾಯಾಧೀಶರ ಸಲಹೆಗೆ ಕನಲಿದ ಸುಪ್ರೀಂ ಕೋರ್ಟ್!‌

Supreme Court: ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 20 ವರ್ಷಗಳ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು. ಹೈಕೋರ್ಟ್ ವ್ಯಕ್ತಿಯನ್ನು ಖುಲಾಸೆಗೊಳಿಸಿತ್ತು. ಈ ವಿಷಯದ ವಿಚಾರಣೆಯ ಸಂದರ್ಭದಲ್ಲಿ, ಹೈಕೋರ್ಟ್ ತೀರ್ಪಿನಲ್ಲಿನ ಕೆಲವು ಪ್ಯಾರಾಗಳು “ಸಮಸ್ಯಾತ್ಮಕ” ಮತ್ತು ಅಂತಹ ತೀರ್ಪುಗಳನ್ನು ಬರೆಯುವುದು “ಸಂಪೂರ್ಣವಾಗಿ ತಪ್ಪು” ಎಂದು ಹೇಳಿತ್ತು.

VISTARANEWS.COM


on

Supreme Court
Koo

ನವದೆಹಲಿ: ಲೈಂಗಿಕ ದೌರ್ಜನ್ಯ (Physical Abuse) ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಖುಲಾಸೆಗೊಳಿಸಿದ ಕಲ್ಕತ್ತಾ ಹೈಕೋರ್ಟ್‌ನ (Kolkata high court) ಆದೇಶವನ್ನು ಸುಪ್ರೀಂ ಕೋರ್ಟ್ (Supreme Court) ಇಂದು ರದ್ದುಗೊಳಿಸಿದೆ. ಇದೇ ಪ್ರಕರಣದಲ್ಲಿ. “ಹದಿಹರೆಯದ ಹುಡುಗಿಯರು ಲೈಂಗಿಕ ಪ್ರಚೋದನೆಗಳನ್ನು ನಿಯಂತ್ರಿಸಿಕೊಳ್ಳಬೇಕು” ಎಂದು ನ್ಯಾಯಾಧೀಶರು ನೀಡಿದ ʼಸಲಹೆʼಯ ಬಗ್ಗೆ ಕಟುವಾಗಿ ಆಕ್ಷೇಪ ವ್ಯಕ್ತಪಡಿಸಿದೆ.

ನ್ಯಾಯಾಧೀಶರಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರು ಇದ್ದ ನ್ಯಾಯಪೀಠ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣಗಳನ್ನು ವ್ಯವಹರಿಸುವ ಕುರಿತು ನ್ಯಾಯಾಂಗ ಅಧಿಕಾರಿಗಳಿಗೆ ಹಲವಾರು ನಿರ್ದೇಶನಗಳನ್ನು ನೀಡಿದೆ ಎಂದು ಹೇಳಿದರು. ಪೀಠದ ಪರವಾಗಿ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಓಕಾ, ನ್ಯಾಯಾಲಯಗಳು ತೀರ್ಪುಗಳನ್ನು ಹೇಗೆ ಬರೆಯಬೇಕು ಎಂಬುದರ ಬಗ್ಗೆಯೂ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಹೇಳಿದರು.

ಕಳೆದ ವರ್ಷ ಡಿಸೆಂಬರ್ 8ರಂದು ಸುಪ್ರೀಂ ಕೋರ್ಟ್ ಈ ತೀರ್ಪನ್ನು ಟೀಕಿಸಿತ್ತು. ಕೋಲ್ಕತ್ತಾ ಉಚ್ಚ ನ್ಯಾಯಾಲಯದ ಕೆಲವು ಅವಲೋಕನಗಳನ್ನು “ಅತ್ಯಂತ ಆಕ್ಷೇಪಾರ್ಹ ಮತ್ತು ಸಂಪೂರ್ಣವಾಗಿ ಅನಗತ್ಯ” ಎಂದು ಬಣ್ಣಿಸಿತ್ತು. ಹೈಕೋರ್ಟ್‌ನ ವಿಭಾಗೀಯ ಪೀಠವು ಮಾಡಿದ ಕೆಲವು ಅವಲೋಕನಗಳನ್ನು ಗಮನಕ್ಕೆ ತೆಗೆದುಕೊಂಡ ಪೀಠ, ತೀರ್ಪುಗಳನ್ನು ಬರೆಯುವಾಗ ನ್ಯಾಯಾಧೀಶರು “ಬೋಧನೆ” ಮಾಡಬಾರದು ಎಂದು ಹೇಳಿತು.

ಪಶ್ಚಿಮ ಬಂಗಾಳ ಸರ್ಕಾರ ಅಕ್ಟೋಬರ್ 18, 2023ರಂದು ಈ “ಆಕ್ಷೇಪಾರ್ಹ ಅವಲೋಕನಗಳನ್ನು” ಮಾಡಲಾದ ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿತ್ತು. ತನ್ನ ತೀರ್ಪಿನಲ್ಲಿ, “ಹದಿಹರೆಯದ ಹೆಣ್ಣುಮಕ್ಕಳು ಲೈಂಗಿಕ ಪ್ರಚೋದನೆಗಳನ್ನು ನಿಯಂತ್ರಿಸಬೇಕು” ಎಂದಿದ್ದ ಪೀಠ, “ಅವರು ಎರಡು ನಿಮಿಷಗಳ ಲೈಂಗಿಕ ಆನಂದವನ್ನು ಅನುಭವಿಸಬಹುದು, ಆದರೆ ಸಮಾಜದ ದೃಷ್ಟಿಯಲ್ಲಿ ಹೆಚ್ಚಿನದನ್ನು ಕಳೆದುಕೊಳ್ಳುವವಳು” ಎಂದು ಹೇಳಿತ್ತು.

ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 20 ವರ್ಷಗಳ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು. ಹೈಕೋರ್ಟ್ ವ್ಯಕ್ತಿಯನ್ನು ಖುಲಾಸೆಗೊಳಿಸಿತ್ತು. ಜನವರಿ 4ರಂದು ಈ ವಿಷಯದ ವಿಚಾರಣೆಯ ಸಂದರ್ಭದಲ್ಲಿ, ಹೈಕೋರ್ಟ್ ತೀರ್ಪಿನಲ್ಲಿನ ಕೆಲವು ಪ್ಯಾರಾಗಳು “ಸಮಸ್ಯಾತ್ಮಕ” ಮತ್ತು ಅಂತಹ ತೀರ್ಪುಗಳನ್ನು ಬರೆಯುವುದು “ಸಂಪೂರ್ಣವಾಗಿ ತಪ್ಪು” ಎಂದು ಹೇಳಿತ್ತು.

ಕಳೆದ ವರ್ಷ ಡಿಸೆಂಬರ್ 8ರಂದು ನೀಡಲಾದ ತನ್ನ ಆದೇಶದಲ್ಲಿ, ಉಚ್ಚ ನ್ಯಾಯಾಲಯವು ಮಾಡಿದ ಕೆಲವು ಅವಲೋಕನಗಳನ್ನು ಉಲ್ಲೇಖಿಸಿದ ಉನ್ನತ ನ್ಯಾಯಾಲಯವು, “ಮುಖ್ಯವಾಗಿ, ಈ ಅವಲೋಕನಗಳು ಭಾರತೀಯ ಸಂವಿಧಾನದ ಆರ್ಟಿಕಲ್ 21ರ ಜೀವನದ ಹಕ್ಕು, ವೈಯಕ್ತಿಕ ಸ್ವಾತಂತ್ರ್ಯದ ಅಡಿಯಲ್ಲಿ ಖಾತರಿಪಡಿಸಲಾದ ಹದಿಹರೆಯದವರ ಹಕ್ಕುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತವೆ ಎಂದಿತ್ತು.

ಇದನ್ನೂ ಓದಿ:PM Narendra Modi : ಆಗಸ್ಟ್​ 23ರಂದು ಉಕ್ರೇನ್​ ಪ್ರವಾಸಕ್ಕೆ ತೆರಳಲಿದ್ದಾರೆ ಪ್ರಧಾನಿ ಮೋದಿ

Continue Reading
Advertisement
Brahmashri Narayanguru Jayanti
ಕರ್ನಾಟಕ2 hours ago

Brahmashri Narayanaguru Jayanti: ಸಮ ಸಮಾಜದ ನಿರ್ಮಾಣ ನಮ್ಮ ಗುರಿ: ಸಿಎಂ ಸಿದ್ದರಾಮಯ್ಯ

puttur stabbing case
ಕ್ರೈಂ2 hours ago

Stabbing Case: ಪುತ್ತೂರು ನಗರ ಉದ್ವಿಗ್ನತೆಗೆ ಕಾರಣವಾದ ವಿದ್ಯಾರ್ಥಿನಿಗೆ ಬ್ಲೇಡ್‌ ಇರಿತ ಪ್ರಕರಣ; ನಿಜಕ್ಕೂ ನಡೆದದ್ದೇನು?

Cincinnati Open
ಕ್ರೀಡೆ3 hours ago

ATP Cincinnati Open: ಚೊಚ್ಚಲ ಪ್ರಶಸ್ತಿ ಗೆದ್ದ ಜಾನಿಕ್‌ ಸಿನ್ನರ್‌, ಅರಿನಾ ಸಬಲೆಂಕಾ

students death
ಕ್ರೈಂ3 hours ago

Students Death: ಇಬ್ಬರು ಮಕ್ಕಳ ಜೀವ ಕಸಿದ ಮೊಬೈಲ್;‌ ತಂದೆ- ತಾಯಿ ಫೋನ್ ಕೊಡದಿದ್ದುದಕ್ಕೆ ಆತ್ಮಹತ್ಯೆ

Agritech India 2024
ಬೆಂಗಳೂರು3 hours ago

Agritech India 2024: ಬೆಂಗಳೂರಿನಲ್ಲಿ ʼಅಗ್ರಿಟೆಕ್ ಇಂಡಿಯಾ 2024ʼಕ್ಕೆ ಆ. 22ರಂದು ಚಾಲನೆ

ajmer pocso case
ಕ್ರೈಂ3 hours ago

Ajmer Pocso Case: 32 ವರ್ಷ ಹಿಂದಿನ ಅಜ್ಮೀರ್‌ ಪೋಕ್ಸೋ ಕೇಸ್‌ನಲ್ಲಿ 6 ಮಂದಿಗೆ ಜೀವಾವಧಿ ಶಿಕ್ಷೆ

Imran Khan
ವಿದೇಶ3 hours ago

Imran Khan: ಆಕ್ಸ್‌ಫರ್ಡ್ ವಿವಿ ಕುಲಪತಿಯಾಗಲು ಅರ್ಜಿ ಸಲ್ಲಿಸಿದ ಪಾಕ್‌ ಮಾಜಿ ಪ್ರಧಾನಿ!

Reliance Jio
ಕರ್ನಾಟಕ4 hours ago

Reliance Jio: ಜಿಯೋ ಟಿವಿ ಪ್ಲಸ್ 2 ಇನ್ 1 ಆಫರ್; ಒಂದೇ ಸಂಪರ್ಕದಲ್ಲಿ ನೋಡಿ ಎರಡು ಟಿವಿ!

Kannada New Movie
ಕರ್ನಾಟಕ4 hours ago

Kannada New Movie: ಟೀಸರ್‌ನಲ್ಲೇ ಕುತೂಹಲ ಮೂಡಿಸಿದೆ ರಿಷಿ ಅಭಿನಯದ ‘ರುದ್ರ ಗರುಡ ಪುರಾಣ’ ಚಿತ್ರ

EV charging
ಕರ್ನಾಟಕ4 hours ago

EV Charging: ಕರ್ನಾಟಕವೇ ಕಿಂಗ್;‌ ಅತಿ ಹೆಚ್ಚು ಇವಿ ಚಾರ್ಜಿಂಗ್ ಸ್ಟೇಷನ್ ಹೊಂದಿರುವ ರಾಜ್ಯ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌