Bulldozer Action: ಅಯೋಧ್ಯೆಯಲ್ಲಿ ಬುಲ್ಡೋಜರ್‌ ಸದ್ದು; ಅಪ್ರಾಪ್ತೆಯ ಅತ್ಯಾಚಾರ ಆರೋಪಿ ಮೊಯೀದ್‌ ಖಾನ್‌ಗೆ ಸೇರಿದ ಕಟ್ಟಡ ಪುಡಿಪುಡಿ - Vistara News

ದೇಶ

Bulldozer Action: ಅಯೋಧ್ಯೆಯಲ್ಲಿ ಬುಲ್ಡೋಜರ್‌ ಸದ್ದು; ಅಪ್ರಾಪ್ತೆಯ ಅತ್ಯಾಚಾರ ಆರೋಪಿ ಮೊಯೀದ್‌ ಖಾನ್‌ಗೆ ಸೇರಿದ ಕಟ್ಟಡ ಪುಡಿಪುಡಿ

Bulldozer Action: ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳ ಪೈಕಿ ಓರ್ವನಿಗೆ ಸೇರಿದ ಅಕ್ರಮ ಬಹುಮಹಡಿ ಕಟ್ಟಡವನ್ನು ಬುಲ್ಡೋಜರ್‌ ಮೂಲಕ ನೆಲಸಮಗೊಳಿಸಲಾಗಿದೆ. ಸಮಾಜಾದಿ ಪಾರ್ಟಿಯ ಮುಖಂಡ, ಅತ್ಯಾಚಾರ ಆರೋಪಿ ಮೊಯೀದ್‌ ಖಾನ್‌ಗೆ ಸೇರಿದ ಅಕ್ರಮ ಕಟ್ಟಡವನ್ನು ಅಯೋಧ್ಯೆ ಜಿಲ್ಲಾಡಳಿತ ಕೆಡವಿ ಹಾಕಿದೆ. ಅಯೋಧ್ಯೆ ಜಿಲ್ಲೆಯ ಭಾದಾರ್ಸ ಪ್ರದೇಶದಲ್ಲಿ ಕಳೆದ ವರ್ಷ ನಿರ್ಮಿಸಲಾದ, 3 ಕೋಟಿ ರೂ. ಬೆಲೆಬಾಳುವ, 4,000 ಸ್ಕ್ವೈರ್‌ ಫೀಟ್‌ನಲ್ಲಿ ಹರಡಿದ್ದ ಈ ಕಟ್ಟಡವನ್ನು 3 ಬುಲ್ಡೋಜರ್‌ ಮತ್ತು ಎಕ್ಸ್‌ಕವೇಟರ್‌ ಮೂಲಕ ಕೆಡವಲಾಗಿದೆ.

VISTARANEWS.COM


on

Bulldozer Action
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಖನೌ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಮತ್ತೊಮ್ಮೆ ಬುಲ್ಡೋಜರ್‌ ಸದ್ದು ಮಾಡಿದೆ. ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳ ಪೈಕಿ ಓರ್ವನಿಗೆ ಸೇರಿದ ಅಕ್ರಮ ಬಹುಮಹಡಿ ಕಟ್ಟಡವನ್ನು ಬುಲ್ಡೋಜರ್‌ ಮೂಲಕ ನೆಲಸಮಗೊಳಿಸಲಾಗಿದೆ. ಸಮಾಜಾದಿ ಪಾರ್ಟಿ (SP)ಯ ಮುಖಂಡ, ಅತ್ಯಾಚಾರ ಆರೋಪಿ ಮೊಯೀದ್‌ ಖಾನ್‌ (Moid Khan)ಗೆ ಸೇರಿದ, ಅಯೋಧ್ಯೆಯಲ್ಲಿರುವ ಕಟ್ಟಡವನ್ನು ಗುರುವಾರ (ಆಗಸ್ಟ್‌ 22) ಜಿಲ್ಲಾಡಳಿತ ಕೆಡವಿ ಹಾಕಿದೆ (Bulldozer Action).

ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಅದರ ಭಾಗವಾಗಿ ಈ ಅಕ್ರಮ ಕಟ್ಟಡವನ್ನು‍‍ ಧ್ವಂಸಗೊಳಿಸಲಾಗಿದೆ. ಘೋರ ಅಪರಾಧಗಳನ್ನು ಎಸಗಿದರೆ ಯಾವ ರೀತಿ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುವುದನ್ನು ತಿಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಯೋಧ್ಯೆ ಜಿಲ್ಲೆಯ ಭಾದಾರ್ಸ ಪ್ರದೇಶದಲ್ಲಿ ಕಳೆದ ವರ್ಷ ನಿರ್ಮಿಸಲಾದ, 3 ಕೋಟಿ ರೂ. ಬೆಲೆಬಾಳುವ, 4,000 ಸ್ಕ್ವೈರ್‌ ಫೀಟ್‌ನಲ್ಲಿ ಹರಡಿದ್ದ ಈ ಕಟ್ಟಡವನ್ನು 3 ಬುಲ್ಡೋಜರ್‌ ಮತ್ತು ಎಕ್ಸ್‌ಕವೇಟರ್‌ ಮೂಲಕ ಕೆಡವಲಾಗಿದೆ. ಕಳೆದ ತಿಂಗಳು ಅಯೋಧ್ಯೆಯಲ್ಲಿ 12 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ 65 ವರ್ಷದ ಮೊಯೀದ್‌ ಖಾನ್‌ ಮತ್ತು ಆತನ ಸಹಾಯಕ ರಾಜು ಎಂಬಾತನನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಸಂಚಲ ಸೃಷ್ಟಿಸಿತ್ತು ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾವಿಸಿದ್ದರು.

ಸದ್ಯ ಸಂತ್ರಸ್ತ ಬಾಲಕಿಗೆ ಅಬಾರ್ಷನ್‌ ಮಾಡಿಸಲಾಗಿದ್ದು, ಆಕೆಗೆ ಭದ್ರತೆ ಒದಗಿಸಲಾಗಿದೆ. ಆಕೆಯ ಮನೆಯ ಸುತ್ತ 25 ಪೊಲೀಸರನ್ನು ಕಾವಲು ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಯೋಧ್ಯೆಯನ್ನು ಒಳಗೊಂಡ ಫೈಜಾಬಾದ್‌ ಕ್ಷೇತ್ರದ ಸಂಸದ, ಸಮಾಜವಾದಿ ಪಾರ್ಟಿಯ ಮುಖಂಡ ಅವಧೇಶ್ ಪ್ರಸಾದ್‌ಗೆ ಈ ಮೊಯೀದ್‌ ಖಾನ್‌ ತುಂಬ ಆಪ್ತ ಎನ್ನಲಾಗಿದೆ.

ಬಿಗಿ ಭದ್ರತೆ

ಕಟ್ಟಡ ತೆರವುಗೊಳಿಸುವ ಕಾರ್ಯಾಚರಣೆಯ ವೇಳೆ ಸ್ಥಳದಲ್ಲಿ ಬಿಗಿ ಭದ್ರತೆ ಕೂಗೊಳ್ಳಲಾಗಿತ್ತು. ಪ್ರೊವಿನ್ಶಿಯಲ್‌ ಆರ್ಮ್‌ಡ್‌ ಕ್ಯಾಸ್ಟಬುಲರಿ (PAC)ಯ ತುಕುಡಿ ಮತ್ತು ವಿವಿಧ ಠಾಣೆಗಳ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಜಿಲ್ಲಾಡಳಿತದ ಪ್ರಕಾರ ಕಟ್ಟಡದ ಮುಕ್ಕಾಲು ಭಾಗವನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಈ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (PNB) ಅನ್ನು ಒಂದು ದಿನದ ಮೊದಲು ಸ್ಥಳಾಂತರಿಸಲಾಗಿತ್ತು. ವಿಶೇಷ ಎಂದರೆ ಮೂರು ವಾರಗಳ ಹಿಂದೆ ಮೊಯೀದ್‌ ಖಾನ್‌ಗೆ ಸೇರಿದ ಇನ್ನೊಂದು ಅಕ್ರಮ ಕಟ್ಟಡವನ್ನು ಜಿಲ್ಲಾಡಳಿತ ನೆಲಸಮಗೊಳಿಸಿತ್ತು.

ಮತ್ತೊಂದು ಬೆಳವಣಿಗೆಯೊಂದರಲ್ಲಿ ಅತ್ಯಾಚಾರ ಆರೋಪದ ಮೇಲೆ ಜೈಲಿನಲ್ಲಿರುವ ಸಮಾಜವಾದಿ ಪಕ್ಷದ ಮಾಜಿ ಬ್ಲಾಕ್ ಅಧ್ಯಕ್ಷ ನವಾಬ್ ಸಿಂಗ್‌ಗೆ ಸೇರಿದ ಅಕ್ರಮ ಆಸ್ತಿಗಳನ್ನು ಜಿಲ್ಲಾಡಳಿತ ಗುರುತಿಸಿದೆ. ಗುರುವಾರ ನವಾಬ್ ಸಿಂಗ್‌ ಕಿರಿಯ ಸಹೋದರ ನೀಲು ಯಾದವ್‌ನ ಸೋದರ ಮಾವನ ಕೋಲ್ಡ್ ಸ್ಟೋರೇಜ್ ಅನ್ನು ನಾಶಪಡಿಸಲಾಗಿದೆ.

ಇದನ್ನೂ ಓದಿ: Rajendra Nagar Tragedy: 3 IAS ಆಕಾಂಕ್ಷಿಗಳ ಸಾವು ಪ್ರಕರಣ; ಸ್ಥಳದಲ್ಲಿ ಬುಲ್ಡೋಜರ್‌ಗಳ ಗರ್ಜನೆ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Jindal Land Deal: ಅಂದು ಜಿಂದಾಲ್‌ಗೆ ಜಮೀನು ಕೊಡುವುದನ್ನು ವಿರೋಧಿಸಿದ್ದ ಕಾಂಗ್ರೆಸ್‌ ಈಗ 3677 ಎಕರೆ ಬರೆದು ಕೊಟ್ಟದ್ದೇಕೆ?

Jindal Land Deal: ಜಿಂದಾಲ್‌ಗೆ 3677 ಎಕರೆ ಜಮೀನು ಕರಾರು ಪತ್ರ ನೀಡಲು ಸಿದ್ದರಾಮಯ್ಯ ಸಂಪುಟ ಒಪ್ಪಿಗೆ ನೀಡಿದೆ. ವಿಪಕ್ಷದಲ್ಲಿ ಇದ್ದಾಗ ಅವರೇ ವಿರೋಧಿಸಿದ್ದರು. 2021ರಲ್ಲಿ ಜಮೀನಿನ ಕರಾರು ಪತ್ರ ಕೊಡಲು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಆಡಳಿತಕ್ಕೆ ಬಂದು ಒಂದು ವರ್ಷ ಕಳೆದ ಬೆನ್ನಲ್ಲೇ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ನೀಡಿದ್ದಾರೆ.

VISTARANEWS.COM


on

jindal land deal
Koo

ಬೆಂಗಳೂರು: ಈ ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ಜಿಂದಾಲ್‌ ಗ್ರೂಪ್‌ನೊಂದಿಗೆ (Jindal Group) ರಾಜ್ಯ ಬಿಜೆಪಿ ಸರ್ಕಾರ (BJP Govt) ಮಾಡಿಕೊಂಡಿದ್ದ 3677 ಎಕರೆ ಜಮೀನು ಪರಭಾರೆ ಒಪ್ಪಂದವನ್ನು (Jindal Land Deal) ಕಾಂಗ್ರೆಸ್‌ (Congress) ವಿರೋಧಿಸಿತ್ತು. ಇದೀಗ ಸಿಂ ಸಿದ್ದರಾಮಯ್ಯ (CM Siddaramaiah) ಸರಕಾರ ಅದಕ್ಕೆ ಒಪ್ಪಿಗೆ ನೀಡಿದೆ. ಈ ಒಪ್ಪಿಗೆ ನೀಡಿದ್ದರ ಕುರಿತು ಸಂಪುಟದ ಹಲವು ಸಚಿವರು ಸಮರ್ಥನೆ ನೀಡಿದ್ದಾರೆ.

ಜಿಂದಾಲ್‌ಗೆ 3677 ಎಕರೆ ಜಮೀನು ಕರಾರು ಪತ್ರ ನೀಡಲು ಸಿದ್ದರಾಮಯ್ಯ ಸಂಪುಟ ಒಪ್ಪಿಗೆ ನೀಡಿದೆ. ವಿಪಕ್ಷದಲ್ಲಿ ಇದ್ದಾಗ ಅವರೇ ವಿರೋಧಿಸಿದ್ದರು. 2021ರಲ್ಲಿ ಜಮೀನಿನ ಕರಾರು ಪತ್ರ ಕೊಡಲು ಆಕ್ಷೇಪ ವ್ಯಕ್ತಪಡಿಸಿದ್ದರು. ಆಗಿನ ಸಿಎಂ ಯಡಿಯೂರಪ್ಪ ನಿರ್ಧಾರಕ್ಕೆ ಶಾಸಕ ಬೆಲ್ಲದ್ ಸ್ವತಃ ಆಕ್ಷೇಪ ವ್ಯಕ್ತಪಡಿಸಿದ್ದರು. ಅಂದು ಸ್ವಪಕ್ಷ ವಿಪಕ್ಷ ಶಾಸಕರ ಒತ್ತಡಕ್ಕೆ ಮಣಿದು ಕ್ಯಾಬಿನೆಟ್ ನಿರ್ಧಾರವನ್ನು ಯಡಿಯೂರಪ್ಪ ವಾಪಸು ಪಡೆದಿದ್ದರು. ಇದೀಗ ಆಡಳಿತಕ್ಕೆ ಬಂದು ಒಂದು ವರ್ಷ ಕಳೆದ ಬೆನ್ನಲ್ಲೇ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅಂದು ಆಕ್ಷೇಪ ವ್ಯಕ್ತಪಡಿಸಿದ್ದ ಎಚ್. ಕೆ ಪಾಟೀಲ್ ಅವರಿಂದಲೇ ಇದರ ಪ್ರಸ್ತಾಪ ಬಂದಿದೆ. ಸರ್ಕಾರದ ನಿರ್ಧಾರದ ಹಿಂದೆ ಕಿಕ್‌ಬ್ಯಾಕ್‌ ವಾಸನೆ ಇದೆ ಎಂದು ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

ಸ್ಪಷ್ಟನೆ ದೊರೆತಿದೆ: ಪರಮೇಶ್ವರ್

ಜಿಂದಾಲ್‌ಗೆ ಜಾಗ ಕೊಡುವ ವಿಚಾರದಲ್ಲಿ ಹಿಂದೆ ನಾವು ವಿರೋ಼ಧ ಮಾಡಿದ್ದು ನಿಜ. ಕೆಲವು ಪ್ರಶ್ನೆಗಳನ್ನ ನಾವು ಕೇಳಿದ್ದೆವು. ಅದಕ್ಕೆ ಕ್ಲಾರಿಫಿಕೇಷನ್ ಕೂಡ ಸಿಕ್ಕಿದೆ. ಕೋರ್ಟ್ ಕೂಡ ಆದೇಶ ಮಾಡಿದೆ. ಬೆಲೆಯಲ್ಲೂ ಕೂಡ ಒಂದಿಷ್ಟು ಕ್ಲಾರಿಟಿ ಸಿಕ್ಕಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ.

ನಾವು ಗ್ಲೋಬಲ್ ಇನ್ವೆಸ್ಟರ್ ಮೀಟ್‌ ಮಾಡ್ತೀವಿ. ಪ್ರಪಂಚದಾದ್ಯಂತ ಇದರಲ್ಲಿ ಭಾಗಿಯಾಗ್ತಾರೆ. ಒಂದಿಷ್ಟು ವಿನಾಯಿತಿಗಳನ್ನ ಅವರಿಗೆ ಕೊಡ್ತೀವಿ. ನೀರು, ಜಾಗ, ವಿದ್ಯುತ್ ಹೀಗೆ ಒಂದಿಷ್ಟು ವಿನಾಯಿತಿ ಇರುತ್ತದೆ. ಇರೋವ್ರನ್ನ ಉಳಿಸಿಕೊಂಡು ಹೊಸಬರನ್ನೂ ತರಬೇಕಾಗಿದೆ. ನಾವು ಒಂದಿಷ್ಟು ಬೆಂಬಲ ನೀಡಬೇಕು. ಇಲ್ಲದಿದ್ದರೆ ರಾಜ್ಯ ಬಿಟ್ಟು ಹೋಗ್ತಾರೆ. ತಮಿಳುನಾಡು ಆಂಧ್ರದಲ್ಲಿ ಉಚಿತ ಭೂಮಿ ಕೊಡ್ತಾರೆ. ನಾವು ಕೊಟ್ಟಿಲ್ಲ ಅಂದ್ರೆ ಅವ್ರು ಕರೀತಾರೆ. ಹಿಂದೆ ಒಂದಿಷ್ಟು ಘಟನೆ ನಡೆದಾಗ ಕಂಪನಿಗಳು ಬಿಟ್ಟು ಹೋಗ್ತೀವಿ ಅಂದ್ರು. ಹಾಗಾಗಿ ಎನ್ಕರೇಜ್ ಮಾಡ್ತಾ ಇದ್ದೀವಿ ಎಂದು ಪರಮೇಶ್ವರ ತಿಳಿಸಿದ್ದಾರೆ.

ಬಿಜೆಪಿಯವರಂತೆಯೇ ನೀಡಿದ್ದೇವೆ: ಡಿಕೆಶಿ

ರಾಜ್ಯದಲ್ಲಿ ಕೈಗಾರಿಕೆಗಳು ಬರಬೇಕು. ಕೈಗಾರಿಕೋದ್ಯಮಿಗಳಿಗೆ ಉತ್ತೇಜನ ಕೊಡಬೇಕು. ಪಾಲಿಸಿ ಪ್ರಕಾರ ನಾವು ಮಾಡಿದ್ದೇವೆ. ಹೊಸದಾಗಿ ನಾವು ಏನೂ ಕೊಟ್ಟಿಲ್ಲ. ಹಳೆಯ ಪದ್ಧತಿ ಪ್ರಕಾರವೇ ಬಿಜೆಪಿಯವರ ರೀತಿಯಲ್ಲಿಯೇ ನಾವು ಮಾಡಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಅತಿ ಹೆಚ್ಚು ಬಂಡವಾಳ: ಎಂಬಿ ಪಾಟೀಲ್

ರಾಜ್ಯದಲ್ಲಿ ಯಾವುದೇ ಇಂಡಸ್ಟ್ರಿಗೆ ಭೂಮಿ ಕೊಡಬೇಕಾದ್ರೆ ಸದ್ಯದ ಮಾರ್ಕೆಟ್ ವ್ಯಾಲ್ಯೂ ಫಿಕ್ಸ್ ಮಾಡುತ್ತೇವೆ. 1995ರಲ್ಲಿ ಧರ್ಮಸಿಂಗ್ ಸಿಎಂ ಆಗಿದ್ದಾಗ ಕ್ಯಾಬಿನೆಟ್‌ನಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ರಾಜ್ಯದಲ್ಲಿ ಅತಿಹೆಚ್ಚು ಜಿಂದಾಲ್ ಇನ್ವೆಸ್ಟ್ ಮಾಡಿದೆ. 50 ಸಾವಿರಕ್ಕೂ ಹೆಚ್ಚು ಉದ್ಯೋಗ ನೀಡಿದೆ. ನಮ್ಮ ಇಂಡಸ್ಟ್ರಿಯಲ್ ಪಾಲಿಸಿ ಪ್ರಕಾರ ಜಿಂದಾಲ್ ಅಷ್ಟೇ ಅಲ್ಲ, ಒಂದು ಲಕ್ಷ ಇಂಡಸ್ಟ್ರಿ ಇದ್ದಾವೆ. ಅವೆಲ್ಲಕ್ಕೂ ಭೂಮಿ ನೀಡಲು ನಿಯಮಾವಳಿ ಇದೆ. ಅದೇ ರೀತಿ ಅವತ್ತಿನ ಮಾರ್ಕೆಟ್ ದರದಲ್ಲಿ ಭೂಮಿ ನೀಡಲಾಗಿದೆ ಎಂದು ಎಂಬಿ ಪಾಟೀಲ್‌ ಹೇಳಿದ್ದಾರೆ.

ಭೂಮಿಗೆ ನೀಡಿರುವ ದರದಲ್ಲಿ ವ್ಯತ್ಯಾಸ ಆದರೆ ಅದನ್ನು ಅವರೇ ಭರಸಬೇಕಾಗುತ್ತದೆ. ಆ ಕಂಡಿಷನ್‌ನಂತೆ ಜಿಂದಾಲ್ ಹಣ ಕಟ್ಟಬೇಕಿತ್ತು. ಅದರ ಬಗ್ಗೆ ಹಲವು ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಚರ್ಚೆ ಆಗಿದೆ. ಎಲ್ಲರೊಂದಿಗೆ ಏನು ತೀರ್ಮಾನ ಮಾಡಬೇಕಿದೆಯೋ ಅದನ್ನು ಮಾಡಿದ್ದೇವೆ. ಹಳೆಯ ಮಾರ್ಕೆಟ್ ದರ ಕೊಡಲು ಆಗುವುದಿಲ್ಲ. ಅವರಿಗೆ ಯಾವುದೇ ರಿಯಾಯತಿ ಕೊಟ್ಟಿಲ್ಲ. ಹೈಕೋರ್ಟ್ ನಿರ್ದೇಶನ ನೀಡಿದೆ. ಕ್ಯಾಬಿನೆಟ್ ನಿರ್ಧಾರದಂತೆ ತಾರ್ಕಿಕ ಅಂತ್ಯಗೊಳಿಸಿದ್ದೇವೆ. ಇಂಡಸ್ಟ್ರೀಸ್ ಪಾಲಿಸಿ ಮೂಲಕ ನಾವು ಆದೇಶ ಮಾಡಿದ್ದೇವೆ ಎಂದಿದ್ದಾರೆ.

ಜಿಂದಾಲ್‌ಗೆ ನಾವು ವಿರೋಧ ಮಾಡಿದ್ದು ಬೇರೆ ವಿಷಯ. ಇದರಲ್ಲಿ ಮೈನಿಂಗ್ ಬರುವುದಿಲ್ಲ. ಪ್ರತಿಭಟನೆ ಮಾಡಿದ್ದು ಜನಾರ್ದನ ರೆಡ್ಡಿ ವಿರುದ್ಧ. ಇದರ ವಿರುದ್ಧ ಪ್ರತಿಭಟನೆ ಮಾಡಿಲ್ಲ. ಒಂಬತ್ತು ವರ್ಷದ ಸಮಸ್ಯೆ ಇತ್ತು, ಎಷ್ಟೋ ರಾಜ್ಯಗಳು ಫ್ರೀ ಲ್ಯಾಂಡ್ ಕೊಡುತ್ತಿವೆ. ಆ ರಾಜ್ಯಗಳ ಜೊತೆಗೆ ನಾವು ಪೈಪೋಟಿ ಮಾಡುತ್ತಿದ್ದೇವೆ. ಹೀಗಾಗಿ ಈ ತೀರ್ಮಾನ ಮಾಡಿದ್ದರಲ್ಲಿ ತಪ್ಪಿಲ್ಲ ಎಂದಿದ್ದಾರೆ.

ಇದನ್ನೂ ಓದಿ: DK Shivakumar: ಡಿಕೆ ಶಿವಕುಮಾರ್‌ಗೆ ಇಂದು ವಿಚಾರಣೆಗೆ ಹಾಜರಾಗಲು ಲೋಕಾಯುಕ್ತ ನೋಟೀಸ್

Continue Reading

ಕ್ರೈಂ

Kolkata Doctor Murder Case: ಮಮತಾ ಬ್ಯಾನರ್ಜಿ ಆಡಳಿತದ ಕರಾಳ ಅಧ್ಯಾಯ ತೆರೆದಿಟ್ಟಿದೆ ಕೋಲ್ಕತಾ ವೈದ್ಯೆ ಕೊಲೆ ಪ್ರಕರಣ

ಕೋಲ್ಕತಾ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯು (Kolkata Doctor Murder Case) ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮುಖ್ಯವಾಗಿ ಪಶ್ಚಿಮ ಬಂಗಾಳ ಸರ್ಕಾರದ ನಡೆಯ ಬಗ್ಗೆ ಸುಪ್ರೀಂ ಕೋರ್ಟ್ ಅನೇಕ ಪ್ರಶ್ನೆಗಳನ್ನು ಎತ್ತಿದೆ. ಇದು ರಾಜ್ಯದಲ್ಲಿ ನಡೆದ ಹಿಂಸಾಚಾರ, ಮಹಿಳೆಯರ ಸುರಕ್ಷತೆ ಮತ್ತು ಅಧಿಕಾರದಲ್ಲಿರುವವರ ಸಮಗ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸುವಂತೆ ಮಾಡಿದೆ.

VISTARANEWS.COM


on

By

Kolkata Doctor Murder Case
Koo

ಕೋಲ್ಕತಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ (Kolkata Doctor Murder Case) ಪಶ್ಚಿಮ ಬಂಗಾಳದ (West Bengal) ಆಡಳಿತದಲ್ಲಿ ಒಂದು ಕರಾಳ ಅಧ್ಯಾಯ. ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಸರ್ಕಾರ ಎಡವಿದೆ ಎಂದು ಸುಪ್ರೀಂ ಕೋರ್ಟ್‌ (Supreme Court) ಖಾರವಾಗಿ ಹೇಳಿರುವುದು ಅಲ್ಲಿಯ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ನೀಡಿರುವ ತಪರಾಕಿ ಎನ್ನಬಹುದಾಗಿದೆ. ಸರ್ಕಾರದ ಕ್ರಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನ್ಯಾಯಾಲಯವು, ಪಶ್ಚಿಮ ಬಂಗಾಳ ಸರ್ಕಾರವು (west bengal govt) ಪ್ರಕರಣವನ್ನು ನಿಭಾಯಿಸುವಲ್ಲಿ ಅಸಮರ್ಥವಾಗಿತ್ತು ಎಂದು ತಿಳಿಸಿದೆ.

ಜನಸಮೂಹವು ಆರ್‌ಜಿ ಕರ್ ಆಸ್ಪತ್ರೆಯನ್ನು ಧ್ವಂಸಗೊಳಿಸಲು ಪಶ್ಚಿಮ ಬಂಗಾಳ ಹೇಗೆ ಅವಕಾಶ ಮಾಡಿಕೊಟ್ಟಿತು ಎಂದು ಪ್ರಶ್ನಿಸಿರುವ ನ್ಯಾಯಾಲಯ, ‘ಅಪರಾಧ ನಡೆದ ಸ್ಥಳದಲ್ಲಿ 24 ಗಂಟೆಯೂ ಭದ್ರತೆ ನೀಡುವುದು ಪೊಲೀಸರ ಕರ್ತವ್ಯವಾಗಿತ್ತು. ಬೆಳಗ್ಗೆಯೇ ಅಪರಾಧ ಪತ್ತೆಯಾಗಿದ್ದು, ವೈದ್ಯಕೀಯ ಕಾಲೇಜು ಪ್ರಾಂಶುಪಾಲರು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆʼ ಎಂದು ಖಾರವಾಗಿ ಹೇಳಿದೆ. ಎಫ್‌ಐಆರ್ ದಾಖಲಿಸುವಲ್ಲಿ ವಿಳಂಬ, ದುಃಖಿತ ಪೋಷಕರಿಗೆ ಸಂತ್ರಸ್ತೆಯ ದೇಹವನ್ನು ನೋಡಲು ಬಿಡದಿರುವುದು ಹಲವು ಅನುಮಾನಕ್ಕೆ ಕಾರಣವಾಗಿತ್ತು ಎಂದು ತಿಳಿಸಿದೆ.

ಸುಪ್ರೀಂ ಕೋರ್ಟ್ ನ ಈ ಅವಲೋಕನ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಪೊಲೀಸರ ಕರ್ತವ್ಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತದಲ್ಲಿ ಆಸ್ಪತ್ರೆ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರದ ಕ್ರಮಗಳ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.

Kolkata Doctor Murder Case
Kolkata Doctor Murder Case


ಯುವ ಮಹಿಳಾ ವೈದ್ಯೆಯ ಸಾವು ಆರಂಭದಲ್ಲಿ ದುರಂತ ಆತ್ಮಹತ್ಯೆಯಂತೆ ಕಂಡು ಬಂದಿತು. ಆದರೆ ವಿವರಗಳು ಹೊರಬರುತ್ತಿದ್ದಂತೆ ಆಕೆಯನ್ನು ಕ್ರೂರವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂಬುದು ಸ್ಪಷ್ಟವಾಯಿತು. ಕಾಲೇಜು ಪ್ರಾಂಶುಪಾಲರಾದ ಸಂದೀಪ್ ಘೋಷ್ ಅವರು ಘಟನೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದರು. ಇದು ಅನಂತರ ಭಾರೀ ಟೀಕೆಗೆ ಗುರಿಯಾಯಿತು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರಾಗಿ ಮಮತಾ ಬ್ಯಾನರ್ಜಿ ಅವರು ಘಟನೆಯ ಮಹತ್ವದ ಜವಾಬ್ದಾರಿಯನ್ನು ಹೊಂದಿದ್ದಾರೆ. ಮಮತಾ ಗಂಭೀರ ಸಮಸ್ಯೆಯನ್ನು ಪರಿಹರಿಸುವ ಬದಲು, ತಮ್ಮದೇ ಆಡಳಿತದ ವೈಫಲ್ಯಗಳ ವಿರುದ್ಧ ಪ್ರತಿಭಟನೆಗಳನ್ನು ಆಯೋಜಿಸಿದ್ದು ಹಾಸ್ಯಾಸ್ಪದವಾಗಿದೆ.

ರಾಜ್ಯದ ನಾಯಕಿಯಾಗಿ 14 ವರ್ಷಗಳ ಅಧಿಕಾರಾವಧಿ ಮತ್ತು ಕೇಂದ್ರ ಸಚಿವರಾಗಿ ಅನುಭವ ಇರುವ ಅವರು, ಈ ವಿಷಯದ ಬಗ್ಗೆ ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಗೆ ಅವರು ನೀಡಿರುವ ಕರೆಗಳು ವಿರೋಧಾಭಾಸವೆಂದು ತೋರುತ್ತದೆ. ಅವಾಸ್ತವಿಕ ಡೆಡ್‌ಲೈನ್‌ನೊಂದಿಗೆ ತ್ವರಿತಗತಿಯ ಸಿಬಿಐ ತನಿಖೆಗಾಗಿ ಅವರ ಬೇಡಿಕೆಯು ನ್ಯಾಯವನ್ನು ಪಡೆಯುವ ನಿಜವಾದ ಪ್ರಯತ್ನಕ್ಕಿಂತ ಹೆಚ್ಚಾಗಿ ರಾಜಕೀಯ ಸಾಹಸವಾಗಿದೆ ಎಂದು ಅನೇಕ ವಿಮರ್ಶಕರು ವಾದಿಸಿದ್ದಾರೆ.

ಮಮತಾ ಅವರು ಮುಚ್ಚಿಟ್ಟ ಆರೋಪಗಳು, ತಡರಾತ್ರಿ ಆಸ್ಪತ್ರೆ ಆವರಣದಲ್ಲಿ ಭುಗಿಲೆದ್ದ ಗಲಭೆಯಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಆಡಳಿತ ಪಕ್ಷ ಟಿಎಂಸಿಗೆ ಸಂಬಂಧವಿದೆ ಎಂದು ನಂಬಲಾದ ಗೂಂಡಾಗಳು, ತಮ್ಮ ಸಹೋದ್ಯೋಗಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ವೈದ್ಯರು ನಡೆಸಿದ ಶಾಂತಿಯುತ ಪ್ರದರ್ಶನಗಳನ್ನು ಅಡ್ಡಿಪಡಿಸಿದ್ದರು. ಈ ಗಲಭೆಯು ಪ್ರಕರಣಕ್ಕೆ ಸಂಬಂಧಿಸಿದ ನಿರ್ಣಾಯಕ ಸಾಕ್ಷ್ಯಗಳನ್ನು ನಾಶಪಡಿಸಲು ಕಾರಣವಾಯಿತು. ಇದು ತನಿಖೆಗೆ ಅಡ್ಡಿಪಡಿಸುವ ಉದ್ದೇಶಪೂರ್ವಕ ಪ್ರಯತ್ನ ಎಂದು ಹಲವರು ಊಹಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳು ಹಿಂಸಾತ್ಮಕ ಏಕಾಏಕಿ ಟಿಎಂಸಿ ಸದಸ್ಯರಿಗೆ ಹತ್ತಿರವಿರುವ ವ್ಯಕ್ತಿಗಳ ಒಳಗೊಳ್ಳುವಿಕೆಯನ್ನು ತೋರಿಸುತ್ತವೆ. ಇದು ಮುಚ್ಚಿಡುವಿಕೆಯ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿದೆ.


ಹಲವು ಪ್ರಶ್ನೆಗಳು

ಸಂತ್ರಸ್ತೆಯ ದೇಹವನ್ನು ಪೋಷಕರಿಗೆ ಏಕೆ ತೋರಿಸಲಿಲ್ಲ ಮತ್ತು ಇದಕ್ಕೆ ಆದೇಶಿಸಿದವರು ಯಾರು, ಅಪರಾಧದ ಸ್ಥಳದಲ್ಲಿ ಏನು ನಡೆಯಿತು, ಅಪರಾಧ ನಡೆದಿದೆ ಎನ್ನಲಾದ ಇಲಾಖೆಯಲ್ಲಿಯೇ ಹಠಾತ್ ನಿರ್ವಹಣೆ ಕಾರ್ಯವನ್ನು ಏಕೆ ಪ್ರಾರಂಭಿಸಲಾಯಿತು, ಔಷಧ ಮಾಫಿಯಾ ಆರೋಪಗಳು ಎಷ್ಟು ಸರಿ ಈ ಎಲ್ಲ ಪ್ರಶ್ನೆಗಳು ವೈದ್ಯೆಯ ಸಾವಿನ ಬಳಿಕ ಎಲ್ಲರಲ್ಲೂ ಉದ್ಭವಿಸಿದೆ.

ಇದನ್ನೂ ಓದಿ: Kolkata Doctor Murder Case: ಟ್ರೈನಿ ವೈದ್ಯೆ ಕೊಲೆ ಪ್ರಕರಣ- ಪ್ರಧಾನಿ ಮೋದಿಗೆ ದಿಢೀರ್‌ ಪತ್ರ ಬರೆದ ಮಮತಾ ಬ್ಯಾನರ್ಜಿ

ಈ ಘಟನೆಯಲ್ಲಿ ರಾಜ್ಯದೊಳಗಿನ ಪ್ರಬಲ ಶಕ್ತಿಗಳೇ ಸಂಚು ರೂಪಿಸಿರುವ ಸಾಧ್ಯತೆ ಇದೆ. ಭ್ರಷ್ಟಾಚಾರ ಮತ್ತು ಪ್ರಕರಣದ ದುರುಪಯೋಗ ಎರಡರ ಆರೋಪ ಹೊತ್ತಿರುವ ಕಾಲೇಜು ಪ್ರಾಂಶುಪಾಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೇಟು ಹಾಕುತ್ತಿರುವುದು ಅನೇಕ ಊಹಾಪೋಹಗಳಿಗೆ ಇನ್ನಷ್ಟು ಪುಷ್ಟಿ ನೀಡಿದೆ. ಈ ಪ್ರಕರಣವು ಪಶ್ಚಿಮ ಬಂಗಾಳದ ಕಾನೂನು ಜಾರಿ ಮತ್ತು ಆಡಳಿತದಲ್ಲಿನ ಗಂಭೀರ ನ್ಯೂನತೆಗಳನ್ನು ಬಹಿರಂಗಪಡಿಸಿದೆ. ಹೀಗಾಗಿ ಇದು ಮಮತಾ ಬ್ಯಾನರ್ಜಿಗೆ ಇದು ಅಗ್ನಿಪರೀಕ್ಷೆ ಎನ್ನಬಹುದಾಗಿದೆ.

Continue Reading

ದೇಶ

Triple Talaq: ಯೋಗಿ ಆದಿತ್ಯನಾಥ್‌, ಮೋದಿಯನ್ನು ಹೊಗಳಿದ ಮಹಿಳೆಗೆ ಘೋರ ಶಿಕ್ಷೆ; ಬೆಂಕಿ ಹಚ್ಚಿ, ತ್ರಿವಳಿ ತಲಾಖ್‌ ನೀಡಿದ ಪಾಪಿ ಪತಿ

Triple Talaq: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ್ದಕ್ಕಾಗಿ ಮುಸ್ಲಿಂ ಮಹಿಳೆಗೆ ಪತಿ ಬೆಂಕಿ ಹಚ್ಚಿ ನಂತರ ತ್ರಿವಳಿ ತಲಾಖ್ ನೀಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸಂತ್ರಸ್ತೆ ಇದೀಗ ತನ್ನ ಪತಿ ಅರ್ಷದ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಯೋಧ್ಯೆ ಮತ್ತು ಬಹ್ರೈಚ್ ಜಿಲ್ಲೆಗಳ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

VISTARANEWS.COM


on

Triple Talaq
Koo

ಲಖನೌ: ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರನ್ನು ಹೊಗಳಿದ್ದಕ್ಕಾಗಿ ಮುಸ್ಲಿಂ ಮಹಿಳೆಗೆ ಪತಿ ಬೆಂಕಿ ಹಚ್ಚಿ ನಂತರ ತ್ರಿವಳಿ ತಲಾಖ್ (Triple Talaq) ನೀಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮೂಲತಃ ಉತ್ತರ ಪ್ರದೇಶದ ಬಹ್ರೈಚ್ ಮೂಲದ ಮಹಿಳೆ ಅಯೋಧ್ಯೆಯ ಅರ್ಷದ್ ಎಂಬಾತನನ್ನು ಮದುವೆಯಾಗಿದ್ದರು. ಮದುವೆಯ ನಂತರ ಅಯೋಧ್ಯೆಗೆ ಬಂದ ಮಹಿಳೆ ಮೋದಿ ಮತ್ತು ಯೋಗಿ ಆದಿತ್ಯನಾಥ್‌ ಅವರ ಉತ್ತಮ ಕೆಲಸಗಳಿಂದ ಪ್ರಭಾವಿತರಾಗಿ ಈ ಇಬ್ಬರು ನಾಯಕರ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ಇದರಿಂದ ಕೆರಳಿದ ಅರ್ಷದ್ ಬೆಂಕಿ ಹಚ್ಚಿ ತ್ರಿವಳಿ ತಲಾಖ್‌ ನೀಡಿದ್ದಾನೆ ಎಂದು ಮೂಲಗಳು ತಿಳಿಸಿದ್ದಾರೆ. ಕೊಟ್ವಾಲಿ ನಗರದ ದೆಹಲಿ ದರ್ವಾಜಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆ ಇದೀಗ ಅರ್ಷದ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಯೋಧ್ಯೆ ಮತ್ತು ಬಹ್ರೈಚ್ ಜಿಲ್ಲೆಗಳ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಅಲ್ಲದೆ ಅರ್ಷದ್ ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾನೆ ಎಂಬ ಆರೋಪವೂ ಇದೆ.

ಸಂತ್ರಸ್ತೆ ಹೇಳಿದ್ದೇನು?

ಹಳ್ಳಿ ಪ್ರದೇಶದಲ್ಲಿ ಬೆಳೆದ ಸಂತ್ರಸ್ತೆ ತಾನು ಮದುವೆಯಾದ ಬಳಿಕ ಅಯೋಧ್ಯೆಗೆ ಆಗಮಿಸಿ ಇಲ್ಲಿನ ವ್ಯವಸ್ಥೆ ಕಂಡು ಪ್ರಭಾವಕ್ಕೆ ಒಳಗಾಗಿದ್ದಾಗಿ ತಿಳಿಸಿದ್ದಾರೆ. ʼʼಹೀಗಾಗಿ ಪತಿಯ ಬಳಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್‌ ಅವರನ್ನು ಹೊಗಳಿದ್ದೆ. ಇದರಿಂದ ಕೆರಳಿದ ಆತ ಅವಹೇಳನಕಾರಿಯಾಗಿ ನಿಂದಿಸಿದ. ಬಳಿಕ ಮನೆಯೊಂದ ಹೊರ ಹಾಕಿದ. ಮಾತುಕತೆಯ ನಂತರ ಅತ್ತೆ ಮನೆಗೆ ಹಿಂದಿರುಗಿದೆ. ಆಗ ಅರ್ಷದ್‌ ತ್ರಿವಳಿ ತಲಾಖ್ ನೀಡಿದ ಮತ್ತು ದೈಹಿಕವಾಗಿ ಹಲ್ಲೆ ನಡೆಸಿದ. ಜೀವ ಉಳಿಸಿಕೊಳ್ಳಲು ಅತ್ತೆ ಮನೆಯಿಂದ ಹೊರಬಂದೆʼʼ ಎಂದು ಮಹಿಳೆ ತಿಳಿಸಿದ್ದಾರೆ.

ಬಿಜೆಪಿಗೆ ಮತ ಹಾಕಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ!

ಕೆಲವು ದಿನಗಳ ಹಿಂದೆ ಈ ಮಾದರಿಯ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿತ್ತು. ಮಹಿಳೆಯೊಬ್ಬರು ಬಿಜೆಪಿಯನ್ನು ಬೆಂಬಲಿಸಿ ವೋಟ್ ಹಾಕಿದ್ದಕ್ಕೆ ಕೋಪಗೊಂಡ ಆಕೆಯ ಪತಿ ತ್ರಿವಳಿ ತಲಾಖ್ ನೀಡಿದ್ದ. ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬಳಿಕ ಈ ಬಗ್ಗೆ ಮಹಿಳೆ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.

ದೂರಿನಲ್ಲಿ ಮಹಿಳೆ, ತಾನು ಸುಮಾರು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದು, ಸ್ವಲ್ಪ ಸಮಯದ ನಂತರ ಅತ್ತೆ, ಪತಿ ಹಾಗೂ ನಾದಿನಿಯರು ಹಿಂಸೆ ನೀಡಿ ಆಕೆಯನ್ನು ಮನೆಯಿಂದ ಹೊರಹಾಕಿದ್ದಾರೆ. ಒಂದೂವರೆ ವರ್ಷದಿಂದ ಪತಿಯ ಜತೆ ಆಕೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆ. ಆದರೆ ಬಿಜೆಪಿಯನ್ನು ಬೆಂಬಲಿಸಿ ಅದರ ಪರವಾಗಿ ಮತ ಹಾಕಿದ್ದಕ್ಕೆ ಕೋಪಗೊಂಡ ಪತಿ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ತಿಳಿಸಿದ್ದರು. ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಆಕೆಯ ಪತಿ, ಅತ್ತೆ ಹಾಗೂ ನಾದಿನಿಯರ ವಿರುದ್ಧ ವರದಕ್ಷಿಣ ನಿಷೇಧ ಕಾಯಿದೆ, ಮುಸ್ಲಿಂ ಮಹಿಳೆಯರ ಕಾಯ್ದೆ ಮತ್ತು ಭಾರತೀಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ: Triple Talaq : ತ್ರಿವಳಿ ತಲಾಖ್​​ಗೆ ಶಿಕ್ಷೆ ಆಗಲೇಬೇಕು; ಸುಪ್ರೀಂ ಕೋರ್ಟ್​ಗೆ ಹೊಸ ಅಫಿಡವಿಟ್​ ಸಲ್ಲಿಸಿ ಕಾನೂನನ್ನು ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ

Continue Reading

ಕ್ರೀಡೆ

Hasin Jahan: ‘ಹೆಣ್ಣು ಎಂದರೆ ನಿಮಗೆ ಮಜಾ​ ಮಾಡೋ ವಸ್ತು’; ಗಂಗೂಲಿ ವಿರುದ್ಧ ಹರಿಹಾಯ್ದ ಶಮಿ ಮಾಜಿ ಪತ್ನಿ

Hasin Jahan: ಗಂಗೂಲಿ ನೀಡಿದ ಈ ಹೇಳಿಕೆಯ ವಿಡಿಯೋ ತುಣಕನ್ನು ತಮ್ಮ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಶೇರ್​ ಮಾಡಿರುವ ಹಸೀನಾ ಜಹಾನ್​, “ಸೌರವ್ ಗಂಗೂಲಿಯಂತಹವರಿಗೆ ಮಹಿಳೆಯರು ಬಹುಶಃ ಮನರಂಜನೆ ಮತ್ತು ಮೋಜಿನ ವಸ್ತುವಾಗಿದೆ ಎಂದು ಕಿಡಿಕಾರಿದ್ದಾರೆ.

VISTARANEWS.COM


on

Hasin Jahan
Koo

ಕೋಲ್ಕತಾ: ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಮೊಹಮ್ಮದ್​ ಶಮಿ(Mohammed Shami) ಅವರ ವಿರುದ್ಧ ಸದಾ ಒಂದಿಲ್ಲೊಂದು ಕಾರಣಗಳಿಂದ ಟೀಕಿಸುತ್ತಿರುವ ಅವರ ವಿಚ್ಛೇದಿತ ಪತ್ನಿ ಹಸೀನ್ ಜಹಾನ್(Hasin Jahan) ಈ ಬಾರಿ ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಹಾಗೂ ಆಟಗಾರ ಸೌರವ್​ ಗಂಗೂಲಿ(sourav ganguly) ವಿರುದ್ಧ ಹರಿಹಾಯ್ದಿದ್ದಾರೆ.

ಆರ್​ಜಿ ಕರ್​ ಮೆಡಿಕಲ್​ ಕಾಲೇಜು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಗುರಿಯಾಗಿದೆ. ಸಾಕಷ್ಟು ಸೆಲೆಬ್ರಿಟಿಗಳು ಈ ಘಟನೆಯನ್ನು ಖಂಡಿಸುತ್ತಿದ್ದಾರೆ. ಸುಪ್ರೀಂಕೋರ್ಟ್ ಕೂಡ​ ವಿಷಾದ ವ್ಯಕ್ತಪಡಿಸಿದೆ. ಇದೇ ಪ್ರಕರಣದ ಬಗ್ಗೆ ಸೌರವ್​ ಗಂಗೂಲಿ ಕೂಡ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಆದರೆ, ಗಂಗೂಲಿ ನೀಡಿದ್ದ ಒಂದು ಹೇಳಿಕೆ ಬಗ್ಗೆ ಹಸೀನಾ ಜಹಾನ್​ ಕಿಡಿಕಾರಿದ್ದಾರೆ.

ಮಾಧ್ಯಮದ ಜತೆ ಮಾತನಾಡು ವೇಳೆ ಗಂಗೂಲಿ, “ಏನು ನಡೆದೆಯೋ ಅದು ತಪ್ಪು. ಆದರೆ, ಇಂತಹ ಘಟನೆಗಳು ಪ್ರಪಂಚದಾದ್ಯಂತ ನಡೆಯುತ್ತದೆ. ಇದನ್ನೇ ಗುರಿಯಾಗಿಸಿಕೊಂಡು ಕೇವಲ ಪಶ್ಚಿಮ ಬಂಗಾಳದ ಸುರಕ್ಷತೆಯನ್ನು ಪ್ರಶ್ನೆ ಮಾಡುವುದು ಸರಿಯಲ್ಲ. ಭಾರತ ಒಂದು ಅದ್ಭುತ ದೇಶ. ಪಶ್ಚಿಮ ಬಂಗಾಳ ಕೂಡ ಒಂದು ಶ್ರೇಷ್ಠ ರಾಜ್ಯ. ಇದೊಂದು ಪ್ರಕರಣದಿಂದ ಇಡೀ ರಾಜ್ಯವನ್ನು ಬೊಟ್ಟು ಮಾಡಿ ದೂಷಿಸುವುದು ಸರಿಯಲ್ಲ. ಈ ಪ್ರಕರಣದಲ್ಲಿ ಆರೋಪಿ ಯಾರೇ ಇರಲಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಗಂಗೂಲಿ ಹೇಳಿದ್ದರು.

ಗಂಗೂಲಿ ನೀಡಿದ ಈ ಹೇಳಿಕೆಯ ವಿಡಿಯೋ ತುಣಕನ್ನು ತಮ್ಮ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಶೇರ್​ ಮಾಡಿರುವ ಹಸೀನಾ ಜಹಾನ್​, “ಸೌರವ್ ಗಂಗೂಲಿಯಂತಹವರಿಗೆ ಮಹಿಳೆಯರು ಬಹುಶಃ ಮನರಂಜನೆ ಮತ್ತು ಮೋಜಿನ ವಸ್ತುವಾಗಿದೆ. ಆದ್ದರಿಂದಲೇ ವಿಶ್ವದೆಲ್ಲೆಡೆ ಇಂತಹ ಅತ್ಯಾಚಾರದಂತಹ ಘಟನೆಗಳು ನಡೆಯುತ್ತಿದೆ. ಪಶ್ಚಿಮ ಬಂಗಾಳ ಮತ್ತು ಭಾರತ ಮಹಿಳೆಯರಿಗೆ ಸುರಕ್ಷಿತವಾಗಿದೆ. ನಿಜವಾಗಿ ಸೌರವ್, ನಿಮ್ಮ ಸ್ವಂತ ಮಗಳು ಸುರಕ್ಷಿತವಾಗಿದ್ದಾರೆ ಮತ್ತು ಅದಕ್ಕಾಗಿಯೇ ನೀವು ಇತರರ ಸುರಕ್ಷತೆಯ ಬಗ್ಗೆ ಚಿಂತಿಸುವುದಿಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ Hasin Jahan: ‘ನಾಯಿಗಳ ದಂಡು’… ಎಂದು ಶಮಿಯನ್ನು ಅನಗತ್ಯವಾಗಿ ಕೆಣಕಿದರೇ ವಿಚ್ಛೇದಿತ ಪತ್ನಿ?; ವಿಡಿಯೊ ವೈರಲ್​

16 ಆಗಸ್ಟ್ 2018 ರಂದು, ಹಸಿನ್ ಜಹಾನ್(Hasin Jahan) ಮೊಹಮ್ಮದ್ ಶಮಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ ಹಲ್ಲೆ, ಅತ್ಯಾಚಾರ, ಕೊಲೆ ಯತ್ನ ಮತ್ತು ಕೌಟುಂಬಿಕ ಹಿಂಸಾಚಾರದ ಆರೋಪದಡಿಯಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗನ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಇದೇ ವೇಳೆ ಮಗಳ ಖರ್ಚಿಗೆ ಹಾಗೂ ತನಗೆ ಯಾವುದೇ ರೀತಿಯ ಹಣಕಾಸಿನ ನೆರವು ನೀಡುತ್ತಿಲ್ಲ ಎಂದು ಹಸಿನ್ ಜಹಾನ್ ದೂರಿನಲ್ಲಿ ಅಪಾದಿಸಿದ್ದರು.

2018 ರಲ್ಲಿ ಹಸಿನ್ ಜಹಾನ್ ಅವರು ಮಾಸಿಕ 10 ಲಕ್ಷ ರೂ ಜೀವನಾಂಶವನ್ನು ಕೋರಿ ಶಮ್ಮಿ ವಿರುದ್ಧ ಕಾನೂನು ಮೊಕದ್ದಮೆ ಹೂಡಿದ್ದರು. ವೈಯಕ್ತಿಕ ವೆಚ್ಚಕ್ಕಾಗಿ 7 ಲಕ್ಷ ರೂ., ತಮ್ಮ ಮಗಳ ನಿರ್ವಹಣೆಗಾಗಿ 3 ಲಕ್ಷ ರೂ. ಕೇಳಿದ್ದರು. ಇದರ ವಿಚಾರಣೆ ನಡೆಸಿದ ಕೋಲ್ಕೊತಾ ನ್ಯಾಯಾಲಯ ಇದೇ ವರ್ಷದ ಜನವರಿಯಲ್ಲಿ ತೀರ್ಪು ಪ್ರಕಟಿಸಿ, ಶಮಿ ಅವರು ಪತ್ಯೇಕವಾಗಿ ವಾಸಿಸುತ್ತಿರುವ ಪತ್ನಿ ಜಹಾನ್​ಗೆ ತಿಂಗಳಿಗೆ 50 ಸಾವಿರ ರೂ. ನೀಡುವಂತೆ ಸೂಚಿಸಿತ್ತು. ಕೋರ್ಟ್​ ಸೂಚನೆಯಂತೆ ಶಮಿ ಅವರು ಈ ಮೊತ್ತವನ್ನು ನೀಡಿತ್ತಲೇ ಬರುತ್ತಿದ್ದಾರೆ.

Continue Reading
Advertisement
PM Modi Ukraine Visit
ವಿದೇಶ4 mins ago

PM Modi Ukraine Visit: ಉಕ್ರೇನ್‌ಗೆ ಬಂದಿಳಿದ ಪ್ರಧಾನಿ ಮೋದಿ- ಝೆಲೆನ್ಸ್ಕಿಗೆ ಆತ್ಮೀಯ ಅಪ್ಪುಗೆ

Consolidated Fund Misuse
ಪ್ರಮುಖ ಸುದ್ದಿ6 mins ago

Consolidated Fund Misuse: 1,494 ಕೋಟಿ ಸಂಚಿತ ನಿಧಿ ದುರ್ಬಳಕೆ; ಸಿಎಂ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು!

Physical abuse
ಕ್ರೈಂ17 mins ago

Physical Abuse : 10 ವರ್ಷದ ಅಪ್ರಾಪ್ತೆ ಮೇಲೆ ಎರಗಿದ ಕಾಮುಕ; ಅತ್ಯಾಚಾರದ ವೇಳೆ ಕಿರುಚಾಡಿದ್ದಕ್ಕೆ ಕೊಲೆಗೈದ ಹಂತಕ

governor thawar chand gehlot dinesh kallahalli mb patil
ಪ್ರಮುಖ ಸುದ್ದಿ22 mins ago

MB Patil: ಸಿಎಂ ಆಯ್ತು, ಈಗ ಸಚಿವ ಎಂಬಿ ಪಾಟೀಲ್‌ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ದೂರು

Anil Ambani
ವಾಣಿಜ್ಯ26 mins ago

Anil Ambani: ಅನಿಲ್‌ ಅಂಬಾನಿಗೆ ಸೆಬಿ ಶಾಕ್‌; 5 ವರ್ಷ ಸೆಕ್ಯೂರಿಟೀಸ್‌ ಮಾರುಕಟ್ಟೆಯಿಂದ ನಿಷೇಧ, 25 ಕೋಟಿ ರೂ. ದಂಡ

Dinesh Karthik Apologises
ಕ್ರೀಡೆ56 mins ago

Dinesh Karthik Apologises: ಧೋನಿ ಅಭಿಮಾನಿಗಳಿಗೆ ಕೈ ಮುಗಿದು ಕ್ಷಮೆಯಾಚಿಸಿದ ದಿನೇಶ್​ ಕಾರ್ತಿಕ್​; ಕಾರಣವೇನು?

jindal land deal
ಪ್ರಮುಖ ಸುದ್ದಿ1 hour ago

Jindal Land Deal: ಅಂದು ಜಿಂದಾಲ್‌ಗೆ ಜಮೀನು ಕೊಡುವುದನ್ನು ವಿರೋಧಿಸಿದ್ದ ಕಾಂಗ್ರೆಸ್‌ ಈಗ 3677 ಎಕರೆ ಬರೆದು ಕೊಟ್ಟದ್ದೇಕೆ?

PM Modi Ukraine Visit
ವಿದೇಶ1 hour ago

PM Modi Ukraine Visit: ಜಗತ್ತಿಗೆ ಶಾಂತಿ ಸಂದೇಶ ಸಾರಲು ಭಾರತ ಬದ್ಧ; ಉಕ್ರೇನ್‌ ಭೇಟಿ ಮೂಲಕ ನಿಲುವು ಸ್ಪಷ್ಟಪಡಿಸಿದ ಮೋದಿ

Ganesh Chaturthi 2024
ಪ್ರಮುಖ ಸುದ್ದಿ1 hour ago

Ganesh Chaturthi 2024: ಪಿಒಪಿ ಗಣೇಶ ಮೂರ್ತಿಗೆ ನಿಷೇಧ; ಹಬ್ಬ ಆಚರಣೆಗೆ ಏನೆಲ್ಲಾ ನಿಯಮಗಳು? ಇಲ್ಲಿದೆ ವಿವರ

Murder case
ಕೋಲಾರ2 hours ago

Murder Case : ಟಿಡಿಪಿ ಶಾಸಕ ಬೆಂಬಲಿಗನ ಕೊಲೆಗೆ ಸ್ಕೆಚ್; ಆಂಧ್ರ ಪೊಲೀಸರಿಂದ ಕರ್ನಾಟಕ ಪೊಲೀಸ್‌ ಅರೆಸ್ಟ್‌!

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌