ಮತ್ತೊಬ್ಬ ಉಗ್ರನ ಪರ ವಿಟೋ ಪವರ್​​ ಬಳಸಿದ ಚೀನಾ; ಬ್ಲ್ಯಾಕ್​ ಲಿಸ್ಟ್​​ನಿಂದ ಪಾರಾದ ಅಬ್ದುಲ್​ ರವೂಫ್ - Vistara News

ವಿದೇಶ

ಮತ್ತೊಬ್ಬ ಉಗ್ರನ ಪರ ವಿಟೋ ಪವರ್​​ ಬಳಸಿದ ಚೀನಾ; ಬ್ಲ್ಯಾಕ್​ ಲಿಸ್ಟ್​​ನಿಂದ ಪಾರಾದ ಅಬ್ದುಲ್​ ರವೂಫ್

ಮಸೂದ್​ ಅಜರ್​ ತಮ್ಮ ಅಬ್ದುಲ್​ ರವೂಫ್ ಅಜರ್​ನನ್ನು ಜಾಗತಿಕ ಉಗ್ರನೆಂದು ಪರಿಗಣಿಸುವಂತೆ ಭಾರತ ಮತ್ತು ಅಮೆರಿಕ ಜಂಟಿಯಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಎದುರು ಪ್ರಸ್ತಾಪ ಇಟ್ಟಿದ್ದವು.

VISTARANEWS.COM


on

China blocks JeM leader Abdul Rauf Azhar as global terrorist
ಅಬ್ದುಲ್​ ರವೂಫ್ ಅಜರ್​
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಜೈಷ್​​​ ಇ ಮೊಹಮ್ಮದ್​ (ಜೆಇಎಂ) ಸಂಘಟನೆಯ ಉಗ್ರ, ಪಾಕಿಸ್ತಾನ ಮೂಲದ ಅಬ್ದುಲ್​ ರವೂಫ್​​ ಅಜರ್​​ನನ್ನು ಜಾಗತಿಕ ಉಗ್ರನೆಂದು ಪರಿಗಣಿಸುವುದಕ್ಕೆ ಚೀನಾ ಅಡ್ಡಗಾಲು ಹಾಕಿದೆ. ಈತನನ್ನು ಜಾಗತಿಕ ಭಯೋತ್ಪಾದಕ ಎಂದು ಭಾರತ ಮತ್ತು ಅಮೆರಿಕ ಜಂಟಿಯಾಗಿ ಪ್ರಯತ್ನ ಮಾಡುತ್ತಿವೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯೆದುರು ಪ್ರಸ್ತಾಪವನ್ನೂ ಕೂಡ ಇಟ್ಟಿವೆ. ಆದರೆ ಯುಎನ್​ ಭದ್ರತಾ ಮಂಡಳಿ ಈತನನ್ನು ಜಾಗತಿಕ ಉಗ್ರನೆಂದು ಘೋಷಿಸಿ, ಕಪ್ಪು ಪಟ್ಟಿಗೆ ಹಾಕದಂತೆ ಚೀನಾ ವಿಟೊ ಪವರ್​ ಪ್ರಯೋಗ ಮಾಡಿದೆ. ನೆರೆ ರಾಷ್ಟ್ರ ಕಳೆದ ಎರಡು ತಿಂಗಳಲ್ಲಿ ಇದು ಎರಡನೇ ಬಾರಿಗೆ ಹೀಗೆ ಅಡ್ಡಗಾಲು ಹಾಕುತ್ತಿದೆ.

ಅಬ್ದುಲ್​ ರವೂಫ್​​ ಅಜರ್ ಜೈಷ್​ ಇ ಮೊಹಮ್ಮದ್​ ಸಂಘಟನೆಯ ಉಪನಾಯಕ. ಸಂಘಟನೆಯ ಸಂಸ್ಥಾಪಕನಾದ ಮಸೂದ್​ ಅಜರ್​​ನ ಸೋದರ. ಅಜರ್​ ಒಬ್ಬ ಭಯೋತ್ಪಾದಕ ಎಂದು ಅಮೆರಿಕ ಸಂಯುಕ್ತ ಸಂಸ್ಥಾನದ ಖಜಾನೆ ಇಲಾಖೆ (US treasury department) 2010ರಲ್ಲಿಯೇ ಘೋಷಿಸಿದೆ. 1999ರ ಡಿಸೆಂಬರ್​​ 24ರಂದು ಏರ್​ ಇಂಡಿಯಾ ವಿಮಾನ ಹೈಜಾಕ್​ ಆಗಿತ್ತು. ನೇಪಾಳದಿಂದ ದೆಹಲಿಗೆ ಸಂಚಾರ ಮಾಡುತ್ತಿದ್ದ ಈ ವಿಮಾನವನ್ನು ಐವರು ಮುಸುಕುಧಾರಿ ಉಗ್ರರು ಅಪಹರಿಸಿದ್ದರು. ಬಳಿಕ ವಿಮಾನ ಅಫ್ಘಾನಿಸ್ತಾನದ ಕಂದಹಾರ್​​ನಲ್ಲಿ ಪತ್ತೆಯಾಗಿತ್ತು. ಈ ವಿಮಾನ ಹೈಜಾಕ್​​​ ಯೋಜನೆ ರೂಪಿಸಿದ್ದವರಲ್ಲಿ ರವೂಫ್​ ಕೂಡ ಇದ್ದ. ಇನ್ನೂ ಹಲವು ಉಗ್ರ ಕೃತ್ಯ ನಡೆಸಿರುವ ಈತನನ್ನು ಜಾಗತಿಕ ಉಗ್ರನೆಂದು ಪರಿಗಣಿಸಬೇಕು ಎಂದು ಅಮೆರಿಕ ಮತ್ತು ಭಾರತ ಜಂಟಿಯಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಎದುರು ಪ್ರಸ್ತಾಪ ಇಟ್ಟಿದ್ದವು.

‘ರವೂಫ್​​ನಲ್ಲಿ ಜಾಗತಿಕ ಭಯೋತ್ಪಾದಕ ಎಂದು ಕಪ್ಪು ಪಟ್ಟಿಗೆ ಸೇರಿಸಲು ನಾವು ತಡೆಯೊಡ್ಡಿದ್ದೇವೆ. ಯಾಕೆಂದರೆ ನಮಗೆ ಆತನ ಪ್ರಕರಣಗಳನ್ನು ಇನ್ನಷ್ಟು ಆಳವಾಗಿ ಅಧ್ಯಯನ ಮಾಡಬೇಕಾಗಿದೆ’ ಎಂದು ಚೀನಾ ತಿಳಿಸಿದೆ. ಆದರೆ ಚೀನಾದ ಈ ನಡೆಗೆ ವಿರೋಧ ವ್ಯಕ್ತವಾಗಿದೆ. ವಿಶ್ವ ಸಂಸ್ಥೆಯ ಭಾರತದ ಕಾಯಂ ಪ್ರತಿನಿಧಿಯಾಗಿರುವ ರುಚಿರಾ ಕಾಂಬೋಜ್​ ಕೂಡ ಇದನ್ನು ಖಂಡಿಸಿದ್ದಾರೆ. ‘ಜಗತ್ತಿನ ಅತ್ಯಂತ ಅಪಾಯಕಾರಿ ಭಯೋತ್ಪಾದಕರನ್ನು ಬ್ಲ್ಯಾಕ್​ ಲಿಸ್ಟ್​ಗೆ ಸೇರಿಸಲು ಅಗತ್ಯವಿರುವ ಎಲ್ಲ ದಾಖಲೆಗಳು, ಪುರಾವೆಗಳು ಇದ್ದರೂ ಕೂಡ ಪ್ರಕ್ರಿಯೆ ನಡೆಯುತ್ತಿಲ್ಲ. ಈ ಬಗ್ಗೆ ವಿಷಾದ ಎನ್ನಿಸುತ್ತದೆ ಎಂದಿದ್ದಾರೆ.

ಜೂನ್​ನಲ್ಲಿ ಹೀಗೇ ಆಗಿತ್ತು
ಪಾಕಿಸ್ತಾನ ಮೂಲದ ಉಗ್ರ ಅಬ್ದುಲ್‌ ರೆಹಮಾನ್‌ ಮಖ್ಖಿಯನ್ನು ಜಾಗತಿಕ ಉಗ್ರನೆಂದು ಘೋಷಿಸುವ ಭಾರತ ಮತ್ತು ಅಮೆರಿಕದ ಜಂಟಿ ಪ್ರಯತ್ನಕ್ಕೆ ಜೂನ್​ ತಿಂಗಳಲ್ಲಿ ಚೀನಾ ತಡೆಯೊಡ್ಡಿತ್ತು. 26/11ರ ಮುಂಬೈ ದಾಳಿಯ ರೂವಾರಿಯಾಗಿದ್ದ ಹಫೀಜ್​ ಸಯೀದ್​ನ ಸಂಬಂಧಿಯಾದ ಈತನ ಹೆಸರನ್ನು ಬ್ಲ್ಯಾಕ್​ ಲಿಸ್ಟ್​ಗೆ ಹಾಕಲು ಚೀನಾ ಬಿಟ್ಟಿರಲಿಲ್ಲ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಒಟ್ಟು 15ರಾಷ್ಟ್ರಗಳಿಗೆ ವಿಟೊ ಪವರ್​ ಚಲಾಯಿಸುವ ಅಧಿಕಾರ ಇದ್ದು, ಅದರಲ್ಲಿ ಚೀನಾ ಕೂಡ ಒಂದು. ಉಗ್ರರನ್ನು ಬಚಾವ್​ ಮಾಡಲು, ಇದೇ ಪವರ್​​ನ್ನು ಚೀನಾ ಬಳಸಿಕೊಳ್ಳುತ್ತಿದೆ.

ಇದನ್ನೂ ಓದಿ: Langya virus | ಕೋವಿಡ್‌ ಬೆನ್ನಿಗೇ ಚೀನಾದಲ್ಲಿ ಹೊಸ ಸೋಂಕು, ಏನಿದರ ಲಕ್ಷಣ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Anti Islam Rally: ಇಸ್ಲಾಂ ಹಿಂಸಾಚಾರ ವಿರೋಧಿ ರ‍್ಯಾಲಿಯಲ್ಲಿ ಸಿಕ್ಕಸಿಕ್ಕವರಿಗೆ ಇರಿದ ಮತಾಂಧ; ಗುಂಡಿಕ್ಕಿದ ಪೊಲೀಸರು

Anti Islam Rally: ಇಸ್ಲಾಂ ವಿರೋಧಿ ಹೋರಾಟಗಾರ ಮೈಕೆಲ್‌ ಸ್ಟುಯೆರ್‌ಜೆನ್‌ಬರ್ಗರ್‌ ಕರೆ ನೀಡಿದ ಕಾರಣ ನಗರದಲ್ಲಿ ಸಾವಿರಾರು ಜನ ರ‍್ಯಾಲಿಯಲ್ಲಿ ಪಾಲ್ಗೊಂಡರು. ಇಸ್ಲಾಂಅನ್ನು ಟೀಕಿಸುವ ಪತ್ರಕರ್ತ ಎಂದೇ ಕರೆದುಕೊಳ್ಳುವ ಮೈಕೆಲ್‌ ಸ್ಟುಯೆರ್‌ಜೆನ್‌ಬರ್ಗರ್‌ ಅವರು ಬಲಪಂಥೀಯ ಸಂಘಟನೆಗಳ ಜತೆ ಗುರುತಿಸಿಕೊಂಡಿದ್ದಾರೆ. ಇನ್ನು, ರ‍್ಯಾಲಿ ನಡೆಯುವಾಗಲೇ ದುಷ್ಕರ್ಮಿಯೊಬ್ಬ ಚಾಕುವಿನಿಂದ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿದ್ದಾನೆ.

VISTARANEWS.COM


on

Anti Islam Rally
Koo

ಬರ್ಲಿನ್:‌ ಜರ್ಮನಿಯ ಮ್ಯಾನ್‌ಹೆಮ್‌ನಲ್ಲಿ ನಡೆದ ಇಸ್ಲಾಂ ಹಿಂಸಾಚಾರ ವಿರೋಧಿ ರ‍್ಯಾಲಿಯಲ್ಲಿ (Anti Islam Rally) ದುಷ್ಕರ್ಮಿಯೊಬ್ಬ ಸಿಕ್ಕ ಸಿಕ್ಕವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ರ‍್ಯಾಲಿಯ ಮಧ್ಯೆ ಏಕಾಏಕಿ ನುಗ್ಗಿ, ಚಾಕು ಇರಿದ ಕಾರಣ ಒಬ್ಬ ಪೊಲೀಸ್‌ ಅಧಿಕಾರಿ ಸೇರಿ ಮೂವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ನಗರದ ಮಾರ್ಕ್ಟ್‌ಪ್ಲಾಟ್ಜ್‌ ಪ್ರದೇಶದ ಬಳಿ ಇಸ್ಲಾಂ ಹಿಂಸಾಚಾರ ವಿರೋಧಿಸಿ ರ‍್ಯಾಲಿ ನಡೆಯುತ್ತಿರುವಾಗ ದುಷ್ಕರ್ಮಿಯು ದಾಳಿ ನಡೆಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಹಿರಿಯ ವ್ಯಕ್ತಿಯೊಬ್ಬರು ಸಮಾವೇಶವನ್ನು ಉದ್ದೇಶಿಸಿ ಮಾತನಾಡುವವರಿದ್ದರು. ಇಸ್ಲಾಮಿಕ್‌ ಹಿಂಸಾಚಾರ ಖಂಡಿಸಿ ಅವರು ಭಾಷಣ ಮಾಡುವವರಿದ್ದರು. ಆದರೆ, ಇದೇ ವೇಳೆ ವ್ಯಕ್ತಿಯು ದಾಳಿ ಮಾಡಿದ್ದಾನೆ. ಆತನನ್ನು ಹಿಡಿಯಲು ಹೋದ ಪೊಲೀಸ್‌ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ. ಇನ್ನು, ಮತ್ತೊಬ್ಬ ಪೊಲೀಸ್‌ ಅಧಿಕಾರಿಯು ದುಷ್ಕರ್ಮಿಯ ಮೇಲೆ ಗುಂಡು ಹಾರಿಸುವ ಮೂಲಕ ಆತನನ್ನು ಹಿಡಿದಿದ್ದಾರೆ. ಪೊಲೀಸ್‌ ಗುಂಡಿನ ದಾಳಿಗೆ ಗಾಯಗೊಂಡಿರುವ ದುಷ್ಕರ್ಮಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

“ಇಸ್ಲಾಂ ವಿರೋಧಿ ರ‍್ಯಾಲಿಯ ವೇಳೆ ವ್ಯಕ್ತಿಯೊಬ್ಬ ಪೊಲೀಸ್‌ ಅಧಿಕಾರಿ ಸೇರಿ ಹಲವರ ಮೇಲೆ ಚಾಕುವಿನಿಂದ ದಾಳಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ. ಹಾಗೊಂದು ವೇಳೆ, ದಾಳಿಯ ಹಿಂದೆ ಇಸ್ಲಾಮಿಕ್‌ ಕೈವಾಡ ಇದೆ ಎಂಬುದು ಗೊತ್ತಾದರೆ ದೇಶದಲ್ಲಿ ಮತ್ತೊಂದು ಇಸ್ಲಾಮಿಕ್‌ ಹಿಂಸಾಚಾರ ನಡೆಯಲಿದೆ. ಇಂತಹ ಹಿಂಸಾಚಾರದ ಬಗ್ಗೆ ನಾವು ಮೊದಲಿನಿಂದಲೂ ಎಚ್ಚರಿಕೆ ನೀಡುತ್ತಲೇ ಬಂದಿದ್ದೇವೆ” ಎಂಬುದಾಗಿ ಜರ್ಮನಿ ಗೃಹ ಸಚಿವ ನ್ಯಾನ್ಸಿ ಫೇಸರ್‌ ಪ್ರಕಟಣೆ ಹೊರಡಿಸಿದ್ದಾರೆ.

ಇಸ್ಲಾಂ ವಿರೋಧಿ ಹೋರಾಟಗಾರ ಮೈಕೆಲ್‌ ಸ್ಟುಯೆರ್‌ಜೆನ್‌ಬರ್ಗರ್‌ ಕರೆ ನೀಡಿದ ಕಾರಣ ನಗರದಲ್ಲಿ ಸಾವಿರಾರು ಜನ ರ‍್ಯಾಲಿಯಲ್ಲಿ ಪಾಲ್ಗೊಂಡರು. ಇಸ್ಲಾಂಅನ್ನು ಟೀಕಿಸುವ ಪತ್ರಕರ್ತ ಎಂದೇ ಕರೆದುಕೊಳ್ಳುವ ಮೈಕೆಲ್‌ ಸ್ಟುಯೆರ್‌ಜೆನ್‌ಬರ್ಗರ್‌ ಅವರು ಬಲಪಂಥೀಯ ಸಂಘಟನೆಗಳ ಜತೆ ಗುರುತಿಸಿಕೊಂಡಿದ್ದಾರೆ. ಪೂರ್ವ ಜರ್ಮನಿಯಲ್ಲಿ ಇಸ್ಲಾಂ ಧರ್ಮೀಯರ ಉಪಟಳ ಖಂಡಿಸಿ ಪೆಜಿಡಾ (PEGIDA) ಎಂಬ ಸಂಘಟನೆಯು ನಿಯಮಿತವಾಗಿ ಇಸ್ಲಾಂ ವಿರುದ್ಧ ರ‍್ಯಾಲಿಗಳನ್ನು ನಡೆಸುತ್ತಲೇ ಇರುತ್ತದೆ. ಮೈಕೆಲ್‌ ಸ್ಟುಯೆರ್‌ಜೆನ್‌ಬರ್ಗರ್‌ ಈ ಸಂಘಟನೆಯ ಸದಸ್ಯರೂ ಆಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Gauri Khan: ಇಸ್ಲಾಂಗೆ ಮತಾಂತರ ಆಗದೇ ಇರಲು ಕಾರಣ ತಿಳಿಸಿದ ಶಾರುಖ್ ಖಾನ್ ಪತ್ನಿ ಗೌರಿ!

Continue Reading

ವಿದೇಶ

Spelling Bee: ಅಮೆರಿಕದ ಪ್ರತಿಷ್ಠಿತ ಸ್ಪೆಲ್ಲಿಂಗ್‌ ಬೀ ಸ್ಪರ್ಧೆ; ಭಾರತ ಮೂಲಕ ಬೃಹತ್‌ಗೆ ಚಾಂಪಿಯನ್‌ ಪಟ್ಟ

Spelling Bee:ಫೈಜಾನ್‌ ಜಾಕಿಯನ್ನು ಸೋಲಿಸುವ ಮೂಲಕ ಪ್ರಶಸ್ತಿ ತನ್ನದಾಗಿಸಿಕೊಂಡಿರುವ ಬೃಹತ್‌, 50,000 ಡಾಲರ್‌ ನಗದು ಬಹುಮಾನವನ್ನೂ ಪಡೆದಿದ್ದಾನೆ. ಇನ್ನು ಈ ಸ್ಪೆಲ್ಲಿಂಗ್ ಬೀ ಇಂಗ್ಲೀಷ್‌ ಭಾಷೆಯ ಅತ್ಯಂತ ಪ್ರತಿಷ್ಠೆಯ ಸ್ಪರ್ಧೆ ಇದಾಗಿದ್ದು, ಈ ಬಾರಿ ವಾಷಿಂಗ್ಟನ್‌ನಲ್ಲಿ ಆಯೋಜನೆಗೊಂಡಿತ್ತು. ಇನ್ನು ಏಳನೇ ತರಗತಿಯಲ್ಲಿ ಓದುತ್ತಿರುವ ಬೃಹತ್‌, ಇದಕ್ಕೂ ಮುನ್ನ ನಡೆದ ಮೂರು ಸ್ಪೆಲ್ಲಿಂಗ್‌ ಬೀ ಸ್ಪರ್ಧೆಗಳನ್ನು ಗೆದ್ದ ಬಳಿಕ ಅಂತಿಮ ಘಟ್ಟಕ್ಕೆ ತಲುಪಿದ್ದ.

VISTARANEWS.COM


on

Spelling Bee
Koo

ಅಮೆರಿಕ: ಭಾರತ ಮೂಲದ 12 ವರ್ಷದ ಬಾಲಕ ಸ್ಕ್ರಿಪ್ಸ್‌ ನ್ಯಾಷನಲ್‌ ಸ್ಪೆಲ್ಲಿಂಗ್‌ ಬೀ(Spelling Bee) ಚಾಂಪಿಯನ್‌ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಭಾರತೀಯ ಮೂಲದ ಅಮೆರಿಕನ್‌ ಬಾಲಕ ಬೃಹತ್‌ ಸೋಮ(Bruhat Soma) 29 ಪದಗಳ ಸ್ಪೆಲ್ಲಿಂಗ್‌ ಅನ್ನು ಸರಿಯಾಗಿ ಹೇಳುವ ಮೂಲಕ ಚಾಂಪಿಯನ್‌ ಆಗಿ ಹೊರ ಹೊಮ್ಮುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾನೆ.

ಇನ್ನು ಫೈಜಾನ್‌ ಜಾಕಿಯನ್ನು ಸೋಲಿಸುವ ಮೂಲಕ ಪ್ರಶಸ್ತಿ ತನ್ನದಾಗಿಸಿಕೊಂಡಿರುವ ಬೃಹತ್‌, 50,000 ಡಾಲರ್‌ ನಗದು ಬಹುಮಾನವನ್ನೂ ಪಡೆದಿದ್ದಾನೆ. ಇನ್ನು ಈ ಸ್ಪೆಲ್ಲಿಂಗ್ ಬೀ ಇಂಗ್ಲೀಷ್‌ ಭಾಷೆಯ ಅತ್ಯಂತ ಪ್ರತಿಷ್ಠೆಯ ಸ್ಪರ್ಧೆ ಇದಾಗಿದ್ದು, ಈ ಬಾರಿ ವಾಷಿಂಗ್ಟನ್‌ನಲ್ಲಿ ಆಯೋಜನೆಗೊಂಡಿತ್ತು. ಇನ್ನು ಏಳನೇ ತರಗತಿಯಲ್ಲಿ ಓದುತ್ತಿರುವ ಬೃಹತ್‌, ಇದಕ್ಕೂ ಮುನ್ನ ನಡೆದ ಮೂರು ಸ್ಪೆಲ್ಲಿಂಗ್‌ ಬೀ ಸ್ಪರ್ಧೆಗಳನ್ನು ಗೆದ್ದ ಬಳಿಕ ಅಂತಿಮ ಘಟ್ಟಕ್ಕೆ ತಲುಪಿದ್ದ.

ಇನ್ನು ತನ್ನ‌ ಗೆಲುವಿನ ಬಗ್ಗೆ ಮಾತನಾಡಿದ ಬೃಹತ್‌, ಕಳೆದ ಮೂರು ಸ್ಪೆಲ್ಲಿಂಗ್‌ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿರುವುದ ದೊಡ್ಡ ವಿಚಾರವೇನಲ್ಲ. ನನ್ನ ಅಂತಿಮ ಗುರಿ ಇದಾಗಿತ್ತು. ಈ ಸ್ಪರ್ಧೆಯನ್ನು ನಾನು ಗೆದ್ದಿದ್ದೇನೆ. ಆ ಬಗ್ಗೆ ನನಗೆ ಬಹಳಷ್ಟು ಸಂತೋಷವಿದೆ ಎಂದು ಹೇಳಿದ್ದಾರೆ. ಇನ್ನು ಕಳೆದ 35 ವರ್ಷಗಳಲ್ಲಿ 29 ನೇ ಬಾರಿ ಭಾರತೀಯ ಮೂಲದ ಅಮೆರಿಕನ್‌ ಬಾಲಕ ಈ ಸ್ಪರ್ಧೆಯಲ್ಲಿ ಗೆಲುವು ಸಾಧಿಸುತ್ತಿರುವುದು.

ಇದನ್ನೂ ಓದಿ:Theft Case : ದೇವರ ಹರಕೆ ಕುರಿಯನ್ನೇ ಕದ್ಯೊಯ್ದ ಕಳ್ಳರು; ಸೂಪರ್‌ ಮಾರ್ಕೆಟ್‌ಗಳಲ್ಲಿ ಖದೀಮರ ಕೈಚಳಕ

ಕಳೆದ ವರ್ಷ ಇದೇ ಸ್ಪರ್ಧೆಯಲ್ಲಿ ಭಾರತೀಯ ಮೂಲದ ದೇವ್‌ ಶಾ ಎಂಬ 14 ವರ್ಷದ ಬಾಲಕ ಪ್ರತಿಷ್ಠಿತ ‘ಸ್ಕ್ರಿಫ್ಸ್‌ ನ್ಯಾಷನಲ್‌ ಸ್ಪೆಲ್ಲಿಂಗ್‌ ಬೀ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವಿಜೇತನಾಗಿದ್ದಾನೆ. ಅಮೆರಿಕದ ಮಾರ್ಯಾಲ್ಯಾಂಡ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಕೊನೆಯ ಸುತ್ತಿನಲ್ಲಿPsammophilus (ಪ್ಸಾಮ್ಮೊಫೈಲ್‌) ಎಂಬ ಇಂಗ್ಲಿಷ್‌ನ 11 ಸ್ಪೆಲ್ಲಿಂಗ್‌ ಅನ್ನು ದೇವ್‌ ಸರಿಯಾಗಿ ಉಚ್ಚರಿಸಿ ವಿಜೇತನಾಗಿದ್ದು, 41 ಲಕ್ಷ ರು. ನಗದು ಬಹುಮಾನ ಸ್ವೀಕರಿಸಿದ್ದ.

Continue Reading

ವಿದೇಶ

ʼಹಷ್‌ ಮನಿʼ ಪ್ರಕರಣದಲ್ಲಿ ಟ್ರಂಪ್‌ ದೋಷಿ; ತೀರ್ಪು ಪ್ರಕಟಗೊಂಡ ಬೆನ್ನಲ್ಲೇ ಅಮೆರಿಕದ ಮಾಜಿ ಅಧ್ಯಕ್ಷರಿಗೆ ಶತಕೋಟಿ ರೂ. ನಷ್ಟ

Donald Trump: ನೀಲಿಚಿತ್ರಗಳ ತಾರೆ ಸ್ಟಾರ್ಮಿ ಡೇನಿಯಲ್ಸ್‌ ಜತೆ ಲೈಂಗಿಕ ಸಂಪರ್ಕ ಬೆಳೆಸಿ, ಆಕೆಯ ಬಾಯಿ ಮುಚ್ಚಿಸಲು ಹಣ ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಿದ 77 ವರ್ಷದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 34 ಆರೋಪಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಸದ್ಯ ಈ ತೀರ್ಪು ಟ್ರಂಪ್‌ಗೆ ಭಾರೀ ಹಿನ್ನಡೆ ನೀಡಿದ್ದು, ಅವರ ಸಂಪತ್ತಿನ ಮೇಲೂ ಪರಿಣಾಮ ಬೀರಿದೆ. ತೀರ್ಪು ಪ್ರಕಟವಾದ ಸುಮಾರು ಗಂಟೆಯಲ್ಲಿ ಟ್ರಂಪ್ ಮೀಡಿಯಾದ ಷೇರುಗಳು ಶೇ. 9ರಷ್ಟು ಕುಸಿದು ಸುಮಾರು 500 ಮಿಲಿಯನ್ ಡಾಲರ್ (41,62,12,50,000 ರೂ.) ನಷ್ಟವಾಗಿದೆ.

VISTARANEWS.COM


on

Donald Trump
Koo

ವಾಷಿಂಗ್ಟನ್‌: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ʼಹಷ್‌ ಮನಿʼ (Hush Money) ಪ್ರಕರಣದಲ್ಲಿ ದೋಷಿ ಎಂದು ನ್ಯಾಯಾರ್ಕ್‌ನ ನ್ಯಾಯಾಲಯ ತೀರ್ಪು ನೀಡಿದೆ. ಈ ಮೂಲಕ ನೀಲಿಚಿತ್ರಗಳ ತಾರೆ ಸ್ಟಾರ್ಮಿ ಡೇನಿಯಲ್ಸ್‌ (Stormy Daniels) ಜತೆ ಲೈಂಗಿಕ ಸಂಪರ್ಕ ಬೆಳೆಸಿ, ಆಕೆಯ ಬಾಯಿ ಮುಚ್ಚಿಸಲು ಹಣ ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಿದ 77 ವರ್ಷದ ಟ್ರಂಪ್‌ 34 ಆರೋಪಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಸದ್ಯ ಈ ತೀರ್ಪು ಟ್ರಂಪ್‌ಗೆ ಭಾರೀ ಹಿನ್ನಡೆ ನೀಡಿದ್ದು, ಅವರ ಸಂಪತ್ತಿನ ಮೇಲೂ ಪರಿಣಾಮ ಬೀರಿದೆ. ತೀರ್ಪು ಪ್ರಕಟವಾದ ಸುಮಾರು ಗಂಟೆಯಲ್ಲಿ ಟ್ರಂಪ್ ಮೀಡಿಯಾ (Trump Media)ದ ಷೇರುಗಳು ಶೇ. 9ರಷ್ಟು ಕುಸಿದು ಸುಮಾರು 500 ಮಿಲಿಯನ್ ಡಾಲರ್ (41,62,12,50,000 ರೂ.) ನಷ್ಟವಾಗಿದೆ. ಈ ಕಂಪನಿಯು ಟ್ರೂತ್ ಸೋಷಿಯಲ್ ಪ್ಲಾಟ್ ಫಾರ್ಮ್‌ (Truth Social platform)ನ ಮಾತೃ ಸಂಸ್ಥೆಯಾಗಿದೆ.

ಟ್ರಂಪ್‌ ಈ ಕಂಪನಿಯಲ್ಲಿ ಶೇ. 65ರಷ್ಟು ಪಾಲು ಹೊಂದಿದ್ದಾರೆ. ಸುಮಾರು ಶೇ. 10ರಷ್ಟು ಕುಸಿತವು ಮಾಜಿ ಅಧ್ಯಕ್ಷರ ಷೇರುಗಳ ಮೌಲ್ಯದಲ್ಲಿ 532 ಮಿಲಿಯನ್ ಡಾಲರ್ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಫೋರ್ಬ್ಸ್ ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ. ಫೇಸ್‌ಬುಕ್‌ (Facebook) ಮತ್ತು ಎಕ್ಸ್‌ (ಹಿಂದಿನ ಟ್ವಿಟ್ಟರ್‌)ಗೆ ಸವಾಲು ಸ್ಪರ್ಧೆ ಒಡ್ಡಲು ಡೊನಾಲ್ಡ್ ಟ್ರಂಪ್ ತಮ್ಮದೇ ಹೊಸ ಸೋಷಿಯಲ್ ಮೀಡಿಯಾ ಆದ ಟ್ರೂತ್ ಸೋಷಿಯಲ್ (Truth Social) ಆರಂಭಿಸಿದ್ದರು.

2021ರಲ್ಲಿ ಅಮೆರಿಕ ಸಂಸತ್‌ ಭವನದಲ್ಲಿ ಟ್ರಂಪ್‌ ಬೆಂಬಲಿಗರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಅವರಿಗೆ ಎಲ್ಲ ಸಾಮಾಜಿಕ ಜಾಲತಾಣಗಳು ನಿಷೇಧ ಹೇರಿದ್ದವು. ಹೀಗಾಗಿ ಅವರು 2021ರ ಅಕ್ಟೋಬರ್‌ನಲ್ಲಿ ಸ್ವಂತ ಸಾಮಾಜಿಕ ಜಾಲತಾಣ ಆರಂಭಿಸುವುದಾಗಿ ಘೋಷಿಸಿದ್ದರು. ಅದಂತೆ 2022ರಲ್ಲಿ ಟ್ರೂತ್ ಸೋಷಿಯಲ್ ಅಪ್ಲಿಕೇಷನ್‌ ಆರಂಭಿಸಿದ್ದರು. ಟ್ರಂಪ್‌ ಮೀಡಿಯಾ ಆ್ಯಂಡ್‌ ಟೆಕ್ನಾಲಜಿ ಗ್ರೂಪ್‌ನ ಮಾಲಿಕತ್ವದಲ್ಲಿ ಈ ಅಪ್ಲಿಕೇಷನ್‌ ಅನ್ನು ಆರಂಭಿಸಲಾಗಿತ್ತು.

ಇದನ್ನೂ ಓದಿ: Worst President: ಅಮೆರಿಕ ಇತಿಹಾಸದಲ್ಲೇ ಡೊನಾಲ್ಡ್‌ ಟ್ರಂಪ್‌ ಕೆಟ್ಟ ಅಧ್ಯಕ್ಷ; ಬೆಸ್ಟ್‌ ಯಾರು?

ಏನಿದು ಪ್ರಕರಣ?

ಟ್ರಂಪ್‌ ಅವರು ನಟಿ ಸ್ಟ್ರಾಮಿ ಡೇನಿಯಲ್ಸ್‌ಗೆ ಹಣ ಪಾವತಿಸಿದ ಆರೋಪ ಎದುರಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಹಷ ಮನಿ ಪ್ರಕರಣ ದಾಖಲಾಗಿದೆ. ಗೋಪ್ಯತೆ ರಕ್ಷಿಸಲು ನೀಡುವ ಹಣಕ್ಕೆ ಹಷ್‌ ಮನಿ ಎಂದು ಕರೆಯಲಾಗುತ್ತದೆ. ಸ್ಟಾರ್ಮಿ ಡೇನಿಯಲ್ಸ್‌ ಜತೆಗೆ ಟ್ರಂಪ್‌ 2006ರಲ್ಲಿ ಲೈಂಗಿಕ ಸಂಬಂಧ ಹೊಂದಿದ್ದರು. 2011ರಲ್ಲಿ ಸ್ಟಾರ್ಮಿ ಈ ವಿಷಯವನ್ನು ಬಹಿರಂಗಪಡಿಸಿದ್ದರು.

2016ರಲ್ಲಿ ಟ್ರಂಪ್‌ ಚುನಾವಣಾ ಕಣಕ್ಕೆ ಇಳಿದ ವೇಳೆ ಲೈಂಗಿಕ ಸಂಪರ್ಕದ ವಿಷಯ ಬಹಿರಂಗ ಮಾಡದಂತೆ ತಮ್ಮ ವಕೀಲರ ಮೂಲಕ ಸ್ಟಾರ್ಮಿಗೆ 1 ಕೋಟಿ ರೂ. ಹಣ ನೀಡಿದ್ದರು. ಬಳಿಕ ಟ್ರಂಪ್‌ ಹಣ ನೀಡಿದ ವಿಷಯ ಬೆಳಕಿಗೆ ಬಂದು ಪ್ರಕರಣ ದಾಖಲಾಗಿತ್ತು. ಮೊದಲು ಹಣ ನೀಡಿದ ಆರೋಪವನ್ನು ನಿರಾಕರಿಸಿದ್ದ ಟ್ರಂಪ್‌ ಬಳಿಕ ಒಪ್ಪಿಕೊಂಡಿದ್ದರು. ನವೆಂಬರ್‌ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಟ್ರಂಪ್‌ ಸ್ಪರ್ಧಿಸಲಿದ್ದಾರೆ.

Continue Reading

ವಿದೇಶ

Donald Trump: ನೀಲಿಚಿತ್ರಗಳ ತಾರೆಗೆ ಹಣ ನೀಡಿದ ಪ್ರಕರಣ; ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್‌ ತಪ್ಪಿತಸ್ಥ ಎಂದ ಕೋರ್ಟ್‌

Donald Trump: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಭಾರೀ ಸಂಕಷ್ಟ ಎದುರಾಗಿದೆ. ನ್ಯಾಯಾರ್ಕ್‌ನ ನ್ಯಾಯಾಲಯ ಡೊನಾಲ್ಡ್ ಟ್ರಂಪ್ ಅವರು ʼಹಷ್‌ ಮನಿʼ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದೆ. ಇದರೊಂದಿಗೆ ನೀಲಿಚಿತ್ರಗಳ ತಾರೆ ಸ್ಟಾರ್ಮಿ ಡೇನಿಯಲ್ಸ್‌ ಜತೆ ಲೈಂಗಿಕ ಸಂಪರ್ಕ ಬೆಳೆಸಿ, ಆಕೆಯ ಬಾಯಿ ಮುಚ್ಚಿಸಲು ಹಣ ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಿದ 77 ವರ್ಷದ ಟ್ರಂಪ್‌ 34 ಆರೋಪಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ.

VISTARANEWS.COM


on

Donald Trump
Koo

ವಾಷಿಂಗ್ಟನ್‌: ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರಿಗೆ ಭಾರೀ ಸಂಕಷ್ಟ ಎದುರಾಗಿದೆ. ನ್ಯಾಯಾರ್ಕ್‌ನ ನ್ಯಾಯಾಲಯ ಡೊನಾಲ್ಡ್ ಟ್ರಂಪ್ ಅವರು ʼಹಷ್‌ ಮನಿʼ (Hush Money) ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದೆ. ಇದರೊಂದಿಗೆ ನೀಲಿಚಿತ್ರಗಳ ತಾರೆ ಸ್ಟಾರ್ಮಿ ಡೇನಿಯಲ್ಸ್‌ (Stormy Daniels) ಜತೆ ಲೈಂಗಿಕ ಸಂಪರ್ಕ ಬೆಳೆಸಿ, ಆಕೆಯ ಬಾಯಿ ಮುಚ್ಚಿಸಲು ಹಣ ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಿದ 77 ವರ್ಷದ ಟ್ರಂಪ್‌ 34 ಆರೋಪಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಮತ್ತೊಮ್ಮೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಟ್ರಂಪ್‌ಗೆ ಇದು ಬಹು ದೊಡ್ಡ ಹಿನ್ನಡೆ ಎಂದೇ ವಿಶ್ಲೇಷಿಲಾಗುತ್ತಿದೆ. ನವೆಂಬರ್‌ನಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್‌, ತೀರ್ಪನ್ನು ʼಅವಮಾನʼ ಮತ್ತು ʼಮೋಸ” ಎಂದು ಕರೆದಿದ್ದಾರೆ. ನವೆಂಬರ್ 5ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾರರಿಂದ ʼನಿಜವಾದ ತೀರ್ಪುʼ ಹೊರ ಬರಲಿದೆ ಎಂದು ಹೇಳಿದ್ದಾರೆ. ಅದಾಗ್ಯೂ ಈ ಪ್ರಕರಣದಲ್ಲಿ ಟ್ರಂಪ್‌ ಜೈಲು ಸೇರುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ. ವ್ಯವಹಾರ ದಾಖಲೆಗಳನ್ನು ತಿರುಚಿದ್ದಕ್ಕಾಗಿ ಟ್ರಂಪ್‌ ಅವರಿಗೆ ಜುಲೈ 11ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗುವುದು ಎಂದು ವಿಚಾರಣೆಯ ಅಧ್ಯಕ್ಷತೆ ವಹಿಸಿದ್ದ ನ್ಯಾಯಾಧೀಶರು ತಿಳಿಸಿದ್ದಾರೆ. 12 ಸದಸ್ಯರ ತೀರ್ಪುಗಾರರು ಎರಡು ದಿನಗಳಲ್ಲಿ 11 ಗಂಟೆಗಳಿಗೂ ಹೆಚ್ಚು ಕಾಲ ಚರ್ಚಿಸಿ ಗುರುವಾರ ಟ್ರಂಪ್‌ ದೋಷಿ ಎಂದು ಘೋಷಿಸಿದ್ದರು.

ʼʼನಾನು ಮುಗ್ಧ ವ್ಯಕ್ತಿ, ಮತ್ತು ಯಾವುದೇ ತಪ್ಪು ಮಾಡಿಲ್ಲ. ನಾನು ನಮ್ಮ ದೇಶಕ್ಕಾಗಿ ಮತ್ತು ನಮ್ಮ ಸಂವಿಧಾನಕ್ಕಾಗಿ ಹೋರಾಡುತ್ತಿದ್ದೇನೆ. ಯಾವುದು ಸತ್ಯ, ಯಾವುದು ಸುಳ್ಳು ಎನ್ನುವುದು ಜನರಿಗೆ ಗೊತ್ತಿದೆ. ಹೀಗಾಗಿ ಅವರು ನನ್ನ ಕೈ ಬಿಡುವುದಿಲ್ಲʼʼ ಎಂದು ಟ್ರಂಪ್‌ ಹೇಳಿದ್ದಾರೆ.

ಏನಿದು ಪ್ರಕರಣ?

ಟ್ರಂಪ್‌ ಅವರು ನಟಿ ಸ್ಟ್ರಾಮಿ ಡೇನಿಯಲ್ಸ್‌ಗೆ ಹಣ ಪಾವತಿಸಿದ ಆರೋಪ ಎದುರಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಹಷ ಮನಿ ಪ್ರಕರಣ ದಾಖಲಾಗಿದೆ. ಗೋಪ್ಯತೆ ರಕ್ಷಿಸಲು ನೀಡುವ ಹಣಕ್ಕೆ ಹಷ್‌ ಮನಿ ಎಂದು ಕರೆಯಲಾಗುತ್ತದೆ. ಸ್ಟಾರ್ಮಿ ಡೇನಿಯಲ್ಸ್‌ ಜತೆಗೆ ಟ್ರಂಪ್‌ 2006ರಲ್ಲಿ ಲೈಂಗಿಕ ಸಂಬಂಧ ಹೊಂದಿದ್ದರು. 2011ರಲ್ಲಿ ಸ್ಟಾರ್ಮಿ ಈ ವಿಷಯವನ್ನು ಬಹಿರಂಗಪಡಿಸಿದ್ದರು.

2016ರಲ್ಲಿ ಟ್ರಂಪ್‌ ಚುನಾವಣಾ ಕಣಕ್ಕೆ ಇಳಿದ ವೇಳೆ ಲೈಂಗಿಕ ಸಂಪರ್ಕದ ವಿಷಯ ಬಹಿರಂಗ ಮಾಡದಂತೆ ತಮ್ಮ ವಕೀಲರ ಮೂಲಕ ಸ್ಟಾರ್ಮಿಗೆ 1 ಕೋಟಿ ರೂ. ಹಣ ನೀಡಿದ್ದರು. ಬಳಿಕ ಟ್ರಂಪ್‌ ಹಣ ನೀಡಿದ ವಿಷಯ ಬೆಳಕಿಗೆ ಬಂದು ಪ್ರಕರಣ ದಾಖಲಾಗಿತ್ತು. ಮೊದಲು ಹಣ ನೀಡಿದ ಆರೋಪವನ್ನು ನಿರಾಕರಿಸಿದ್ದ ಟ್ರಂಪ್‌ ಬಳಿಕ ಒಪ್ಪಿಕೊಂಡಿದ್ದರು. ಇದನ್ನು ಖಾಸಗಿ ವಹಿವಾಟು ಎಂದು ಕರೆದಿದ್ದರು. ಸದ್ಯ ಅವರ ಮುಂದಿನ ನಡೆ ಕುತೂಹಲ ಕೆರಳಿಸಿದೆ. ಚುನಾವಣಾ ಪ್ರಚಾರದ ವೇಳೆ ಎದುರಾಳಿಗಳು ಟ್ರಂಪ್‌ ವಿರುದ್ಧದ ವಿಚಾರದಲ್ಲಿ ವಾಗ್ದಾಳಿ ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ: Nikki Haley: ಅಮೆರಿಕ ಚುನಾವಣೆ ರೇಸ್‌ನಿಂದ ನಿಕ್ಕಿ ಹ್ಯಾಲೆ ಔಟ್;‌ ಟ್ರಂಪ್‌ ಹಾದಿ ಸುಗಮ

Continue Reading
Advertisement
OpenAI
Lok Sabha Election 202427 mins ago

OpenAI: ಇಸ್ರೇಲ್‌ನ ಸಂಸ್ಥೆಯಿಂದ ಬಿಜೆಪಿ ವಿರುದ್ಧ ಪ್ರಚಾರ; ಶಾಕಿಂಗ್‌ ಮಾಹಿತಿ ಹಂಚಿಕೊಂಡ ಓಪನ್ಎಐ

Murder Case in Mysuru
ಕ್ರೈಂ28 mins ago

Murder case : ಜಸ್ಟ್‌ ಗುರಾಯಿಸಿದ್ದಕ್ಕೆ ಯುವಕನ ಬರ್ಬರ ಹತ್ಯೆ; ಸಾವಿನ ಕೊನೆ ಕ್ಷಣ ಸೆರೆ

Ambati Rayudu
ಕ್ರೀಡೆ29 mins ago

Ambati Rayudu: ಸ್ಟಾಂಡರ್ಡ್​ ಕಮ್ಮಿ ಮಾಡಿದರೆ ಉತ್ತಮ ಎಂದು ಕೊಹ್ಲಿಯ ಕಾಲೆಳೆದ ರಾಯುಡು

cm Siddaramaiah And DK Shivakumar
ಪ್ರಮುಖ ಸುದ್ದಿ33 mins ago

CM Siddaramaiah: ಸಿಎಂ, ಡಿಸಿಎಂ ಕೂಡ ಇಂದು ಕೋರ್ಟ್‌ ಕಟಕಟೆಯಲ್ಲಿ! ಏನಿದು ಕೇಸ್?‌

Cannes Film Festival Ukrainian model Sawa Pontyjska assault by security guard
ಸಿನಿಮಾ35 mins ago

Cannes Film Festival:  ಮಾಡೆಲ್‌ನನ್ನು ಒರಟಾಗಿ ಹೊರ ದಬ್ಬಿದ ಕಾನ್‌ ಚಲನಚಿತ್ರೋತ್ಸವ ಸಂಘಟಕರು; ವಿಡಿಯೊ ವೈರಲ್‌!

shatru bhairavi yaga
ಪ್ರಮುಖ ಸುದ್ದಿ1 hour ago

Shatru Bhairavi Yaga: ಶತ್ರು ಭೈರವಿ ಯಾಗ ನಡೆದಿಲ್ಲ, ಪ್ರಾಣಿಬಲಿಯೂ ಇಲ್ಲ: ಕೇರಳ ಸರಕಾರದಿಂದಲೇ ತನಿಖೆ, ಸ್ಪಷ್ಟನೆ

Bigg Boss OTT 3 Anil Kapoor Replaces Salman Khan As Host
ಒಟಿಟಿ1 hour ago

Bigg Boss OTT 3: ಶುರುವಾಗಲಿದೆ ಬಿಗ್​ ಬಾಸ್​ ಒಟಿಟಿ 3: ನಿರೂಪಣೆಗೆ ಸಲ್ಮಾನ್​ ಖಾನ್​ ಬದಲು ಅನಿಲ್​ ಕಪೂರ್!

Lok Sabha Election
Lok Sabha Election 20241 hour ago

Lok Sabha Election: ವಾರಾಣಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿದಿರುವ 6 ಅಭ್ಯರ್ಥಿಗಳ ಸಾಮರ್ಥ್ಯ ಎಷ್ಟಿದೆ?

IND vs PAK
ಕ್ರೀಡೆ1 hour ago

IND vs PAK T20 World Cup: ಪಾಕಿಸ್ತಾನ​ ವಿರುದ್ಧ ಭಾರತಕ್ಕೆ ಗೆಲುವು ಖಚಿತ ಎಂದ ಪಾಕ್​ ಆಟಗಾರ

Lok Sabha Election 2024 Mithun Chakraborty casting his vote
ಬಾಲಿವುಡ್2 hours ago

Lok Sabha Election 2024: ಕೊನೇ ಹಂತದ ಮತದಾನ; ವೋಟ್‌ ಮಾಡಿದ ನಟ ಮಿಥುನ್ ಚಕ್ರವರ್ತಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ4 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 weeks ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌