ದಿನಸಿ ಪೇಟೆ: ಸಗಟು ಮಾರುಕಟ್ಟೆಯಲ್ಲಿ ವಿವಿಧ ಸಾಮಗ್ರಿಗಳ ದರ ಹೀಗಿದೆ - Vistara News

ವಾಣಿಜ್ಯ

ದಿನಸಿ ಪೇಟೆ: ಸಗಟು ಮಾರುಕಟ್ಟೆಯಲ್ಲಿ ವಿವಿಧ ಸಾಮಗ್ರಿಗಳ ದರ ಹೀಗಿದೆ

ದಿನಸಿ ಪೇಟೆ: ಸಗಟು ಮಾರುಕಟ್ಟೆಯಲ್ಲಿ ಕೆಲವು ಪದಾರ್ಥಗಳ ದರ ಇಳಿದಿದೆ, ಕೆಲವು ಪದಾರ್ಥಗಳ ದರ ಹೆಚ್ಚಳವಾಗಿದೆ. ಈ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.

VISTARANEWS.COM


on

market rate
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

12/08/2022

ಸರಕು ದರ (ರೂಪಾಯಿ)
ಸಕ್ಕರೆ (50 ಕೆ.ಜಿ.)
1. ಉತ್ತಮ ದಪ್ಪ
2. ಮಧ್ಯಮ ಸಣ್ಣ

1860-1870
1820-1830
ಬೆಲ್ಲ
1. ಸಣ್ಣ ಅಚ್ಚು
2. ದಪ್ಪ ಅಚ್ಚು
3. ಉಂಡೆ [ಸೇಲಂ]
4. ಕೊಲ್ಲಾಪುರ

4600-4700
4300-4400
4700-4800
5000-5500
ತೊಗರಿಬೇಳೆ ಹೊಸದು 50 ಕೆ.ಜಿ.
1. ದೇಶಿ ಶಿವಲಿಂಗ (ಜಿಎಸ್ಟಿ)
2. ವಿದೇಶಿ ಶಿವಲಿಂಗ
5. ವಿದೇಶಿ ಮಧ್ಯಮ
3. ಗುಲ್ಬರ್ಗ ಪಟ್ಕ ಸಾರ್ಟೆಕ್ಸ್
4. ರೆಗ್ಯುಲರ್

5400- 5420
4490- 4500
4400- 4500
4600- 4650
4450- 4550
ಕಡ್ಲೆ ಬೇಳೆ 50 ಕೆ.ಜಿ.
1. ಲಕನ್
2. ತ್ರಿಶುಲ್
3. ಮಹಾರಾಜಾ
4. ಅಕೋಲ

3350-3400
3300-3350
3200-3250
3050-3100
ಹುರಿಕಡ್ಲೆ 30 ಕೆ.ಜಿ.
1. ಫೈನ್
2. ಮೀಡಿಯಂ

2300 – 2500
2100 – 2150
ಉದ್ದಿನ ಬೇಳೆ 50 ಕೆ.ಜಿ.
1. ಡಬಲ್ ಹಾರ್ಸ್
2. ಹನುಮಾನ್
3. ವೈಟ್ ಗೋಲ್ಡ್
4. ಮಧ್ಯಮ ದರ್ಜೆ
5. ಗೋಲಾ

6700-6750
5450-54500
5290-5300
4600-4700
4700-5400
ಹೆಸರು ಬೇಳೆ 50 ಕೆ.ಜಿ.
1. ಸೋಂ ಪರಿ
2. ಮಧ್ಯಮ

4800-4850
4700-4750
ಹೆಸರು ಕಾಳು
1. ಉತ್ತಮ
2. ಮಧ್ಯಮ

4600-4700
3900-4200
ಅಲಸಂದೆ
1. ಉತ್ತಮ
2. ಮಧ್ಯಮ

3450-3550
3350-3400
ಅವರೆ ಕಾಳು
1. ಉತ್ತಮ
2. ಮಧ್ಯಮ

ಅವರೆ ಬೇಳೆ
1. ಉತ್ತಮ
2. ಮಧ್ಯಮ

ಹುರುಳಿ ಕಾಳು
1. ಉತ್ತಮ
2. ಮಧ್ಯಮ

4450- 4500
4300- 4350

5000-5250
4900- 4950
2900-3000

3000-3100
2900-2950
ರಾಗಿ 100 ಕೆ.ಜಿ.
1. ಕ್ಲೀನ್ಡ್‌ ಉತ್ತಮ
2. ಮಧ್ಯಮ

3200-3300
2800-2900
ಅಕ್ಕಿ ಸೋನಾ ಮಸೂರಿ (100 ಕೆ. ಜಿ.)
1. ರಾ ರೈಸ್ ನುಚ್ಚು 2 ವರ್ಷ ಹಳೇದು
2. 1 ವರ್ಷ ಹಳೇದು
3. ಸ್ಟೀಮ್ 2 ವರ್ಷ ಹಳೇದು
4. ಸ್ಟೀಮ್ 1 ವರ್ಷ ಹಳೇದು
4. ಆರ್ ಎನ್ ಆರ್ ಸ್ಟೀಮ್
4. ಕಾವೇರಿ 1 ವರ್ಷ ಹಳೇದು
5. ಐಆರ್ 8 (100 ಕೆ.ಜಿ)
6. ಇಡ್ಲಿಕಾರ್ (100 ಕೆ.ಜಿ)

5000- 5200
4400- 4500
4000- 4100
3600- 3800
3900-4000
3600-3700
3000-3200
3200-3300
ಬೆಳ್ಳುಳ್ಳಿ ಎಂಪಿ 100 ಕೆ.ಜಿ.
1. ಎಂಪಿ ಲಡ್ಡು
2. ಎಂಪಿ ಗೋಲಾ
3. ಮಧ್ಯಮ
4. 30 ಕೆ.ಜಿ. ಬಾಕ್ಸ್
5. ಗೋಲ್ಟಾ ಗೊಲ್ಟಿ

3500-4200
2000-2500
1000-1500
1800-1850
250-450
ಈರುಳ್ಳಿ
1. ಮಹಾರಾಷ್ಟ್ರ ದಪ್ಪ
2. ಮಧ್ಯಮ
3. ಕರ್ನಾಟಕ ದಪ್ಪ
4. ಮಧ್ಯಮ

800-900
600-700
650-700
500-550
ಆಲೂಗಡ್ಡೆ (50 ಕೆ.ಜಿ.)
1. ಲಾಕರ್ ದಪ್ಪ
2. ಲಾಕರ್ ಮಧ್ಯಮ
3. ಆಗ್ರಾ ದಪ್ಪ
4. ಆಗ್ರಾ ಮಧ್ಯಮ

1380-1400
1200-1250
1000-1100
900-1100
ಹಸಿ ಶುಂಠಿ (60 ಕೆ.ಜಿ.)
1. ಹೈಟೆಕ್
2. ಮಧ್ಯಮ

1800-2000
1000-1200
ಅಡುಗೆ ಎಣ್ಣೆ
ಸೂರ್ಯಕಾಂತಿ ಎಣ್ಣೆ
1. ಸನ್‌ಪ್ಯೂರ್ 10 ಲೀ.
2. ಸನ್‌ಪ್ಯೂರ್ 15 ಕೆ.ಜಿ
3. ಗೋಲ್ಡ್‌ವಿನ್ನರ್ 10 ಲೀ.
4. ಗೋಲ್ಡ್‌ವಿನ್ನರ್ 15 ಕೆ.ಜಿ
4. ಫಾರ್ಚುನ್ 10 ಲೀ.
5. ಫಾರ್ಚುನ್ 15 ಕೆ.ಜಿ
6. ಜೆಮಿನಿ 10 ಲೀ.
7. ಜೆಮಿನಿ 15 ಕೆ.ಜಿ


1710
2820
1750
2850
1750
2850
1820
3070
ಚೆಕ್ಕಿ ಅಟ್ಟ (50 ಕೆ.ಜಿ.)
1. ಐಸ್
2. ಆರೆಂಜ್
3. ಕೇಸರಿ

1500- 1510
1550- 1560
1400- 1410
ತಂದೂರಿ ಅಟ್ಟ ( 50 ಕೆ. ಜಿ.)
1. ಕೇಸರಿ ಪಿಚ್
2. ರಾಕ್ಷಿ
3. ಲಕ್ಷ್ಮೀ
4. ಮೋಹಿನಿ
5. ಕೃಷ್ಣ ತಂದೂರಿ ಅಟ್ಟ
6. ಕೃಷ್ಣ ಚಕ್ಕೆ ಅಟ್ಟ

1460- 1470
1480- 1490
1300- 1310
1380- 1390
1510- 1520
1510- 1520
ಸಾದಾ ಸೂಜಿ (50 ಕೆ.ಜಿ.)
1. ಆರೆಂಜ್
2. ವೇಣುಗೋಪಾಲ್
3. ರಾಕ್ಷಿ
4. ಹೀರೊ
5. ಮೋಹಿನಿ
6. ಕೃಷ್ಣ ಸೂಪರ್ ವ್ಯಾಲ್ಯೂ
7. ಕೃಷ್ಣ ಪ್ರೀಮಿಯಂ

1730- 1740
1740
1710- 1720
1520- 1530
1530- 1540
1570- 1580
1720- 1730
ಚಿರೋಟಿ ಸೂಜಿ (50 ಕೆ.ಜಿ.)
1. ವೇಣುಗೋಪಾಲ್
2. ಕೇಸರಿ ಪಿಚ್
3. ಹೀರೊ
4. ಕೃಷ್ಣ ಪ್ರೀಮಿಯಂ

1740
1450-1460
1450-1460
1600-1610
ಮೈದಾ (50 ಕೆ.ಜಿ.)
1. ಡೂಮ್ ಲೈಟ್
2. ಸುನಿಲ್
3. ಗ್ರೇಟ್ ಇಂಡಿಯಾ
4. ಹೀರೊ
5. ಕೃಷ್ಣ ಬ್ಲೂ ಮೈದಾ
6. ಕೃಷ್ಣ ವ್ಯಾಲ್ಯೂ ಮೈದಾ

1710
1600- 1610
1410
1440- 1450
1540- 1550
1480- 1490
ಕಡ್ಲೆ ಹಿಟ್ಟು
1. ಶಂಕರ್ 30 ಕೆ.ಜಿ
2. ಶಂಕರ್ 10 ಕೆ.ಜಿ
3. ಶಂಕರ್ 21 ಕೆಜಿ ಪ್ಯಾಕೆಟ್

2120
745
1610
ಬೆಳೆ ಕಾಳು
1. ದೇಸಿ ಶಿವಲಿಂಗ
2. ಪಟ್ಕ ಸಾರ್ಟೆಕ್ಸ್
3. ರೆಗ್ಯುಲರ್
4. ವಿದೇಶಿ ಶಿವಲಿಂಗ
5. ವಿದೇಶಿ ಮಧ್ಯಮ

5480-5500
4900-5000
4700-4750
4600-4650
4500-4550
ಕಡ್ಲೆಕಾಳು (50 ಕೆಜಿ)
1. ಕ್ಲಿನ್ ಬೋಲ್ಡ್
2. ಮಧ್ಯಮ

3100-3150
2900-3000

ಮೀಡಿಯಂ ಕುಕಿಂಗ್ ಆಯಿಲ್ ೧ ಲೀಟರ್‌ನ ೧೦ ಪ್ಯಾಕೆಟ್

1. ಸನ್ ಪ್ರಿಯಾ
2. ಸನ್ ಪಾರ್ಕ್
3. ಸನ್ ಪವರ್
4. ಸೂರ್ಯ ಪವರ್
1360
1370
1350
1340
ದೀಪದೆಣ್ಣೆ 1 ಲೀ.ನ 10 ಪ್ಯಾಕೆಟ್
1. ಆನಂದಂ
2. ಅಂದo
3. ಅಕ್ಷಯ
4. ನಂದಿನಿ

1380
1370
1360
1370
ಕಡ್ಲೆಕಾಯಿ ಎಣ್ಣೆ
1. ಪ್ಯೂರ್ ನಟ್ 10 ಲೀ.
2. ಕೆ ಎನ್ ಜೆ 10 ಲೀ.
3. ನಟ್ ಗೋಲ್ಡ್ 10 ಲೀ.

1725
1690
1690
ಪಾಮ್ ಆಯಿಲ್ 1 ಲೀ.ನ 10 ಪ್ಯಾಕೆಟ್
1. ರುಚಿಗೋಲ್ಡ್ 10 ಲೀ.
2. ಲೀಡರ್ ಗೋಲ್ಡ್ 10 ಲೀ.
3. ರುಚಿಗೋಲ್ಡ್ 15 ಕೆ.ಜಿ

1200
1190
2290
ರಗ್ಯುಲರ್ ವನಸ್ಪತಿ
1. ರುಚಿ No1, 10 ಕೆ.ಜಿ
2. ರುಚಿ No1, 15 ಕೆ.ಜಿ
3. ಎಟೂಝೆಡ್ 15 ಕೆ.ಜಿ

1110
1900
2400
ಬೇಕರಿ ಸ್ಪೆಷಲ್ ವನಸ್ಪತಿ 15 ಕೆ.ಜಿ ಬಾಕ್ಸ್
1. ಗ್ರೀನ್ ಗೋಲ್ಡ್
2. ಗ್ರೇಟ್ ಚೆಫ್
3. ಬೆಸ್ ಪಫ್
4. ಬೆಸ್ ಕ್ರೀಮ್
5. ಬೆಸ್ ಬಿಸ್ಕೆಟ್
6. ಬೇಕರ್ ಕಿಂಗ್

2630
2650
2500
2450
2450
2500
ಮೆಣಸಿನಕಾಯಿ 100 ಕೆ.ಜಿ.: ಪಿ.ಸಿ.ಎನ್. ಟ್ರೇಡರ್ಸ್ [ಎಪಿಎಮ್‌ಸಿ]
1. ಬ್ಯಾಡಗಿ ಸ್ಟೆಮ್‌
2. ಬ್ಯಾಡಗಿ ಸ್ಟೆಮ್‌ ಲೆಸ್
3. ಗುಂಟೂರು ಸ್ಟೆಮ್‌
4. ಗುಂಟೂರು ಸ್ಟೆಮ್‌ಲೆಸ್
4. ಮಣ್‌ಕಟ್

34,000-50,000
20,000-40,000
15,000-25,000
30,000-32,000
20,000-23,000
ಹುಣಸೆ ಹುಳಿ (100 ಕೆ.ಜಿ.)
1. ರೌಂಡ್
2. ಪ್ಲವರ್
3. ಕರ್ಪುಳಿ

6,000-12,000
4,000-11,000
10,000-16,000
ದನಿಯಾ (40 ಕೆ.ಜಿ.)
1. ಉತ್ತಮ ಹಸಿರು
2. ಮಧ್ಯಮ ಹಸಿರು
3. ಮಧ್ಯಮ
4. ಬ್ರೋಕನ್

6,800-8,500
5,800-6500
5,000-5,500
5,000-5,500
ಮಸಾಲ ದರ (1 ಕೆ.ಜಿ.)ಕನಿಷ್ಠಗರಿಷ್ಠ
ಅರಿಶಿಣ ಕೊಂಬು
1. ದಪ್ಪ
2. ಮಧ್ಯಮ
3. ಜೀರಿಗೆ ಉತ್ತಮ
4. ಜೀರಿಗೆ ಮಧ್ಯಮ

140
95
275
260

145
100
280
265
ಗಸಗಸೆ
1. ಫೈನ್
2. ಮೀಡಿಯಂ

1200
1100

1250
1150
ಮೆಂತ್ಯೆ6878
ಸಾಸಿವೆ
1. ಸಾಸಿವೆ ಸಣ್ಣ
2. ಸಾಸಿವೆ ದಪ್ಪ

82
80

85
82
ಏಲಕ್ಕಿ
1. 8 ಎಂ.ಎಂ.
2. 7.5 ಎಂ.ಎಂ.
3. 7. ಎಂ.ಎಂ.
4. ಪಾನ್ ಬಹಾರ್‌

1450
1300
1100
900

1500
1350
1200
1000
ಲವಂಗ
1. ಮಡಗಾಸ್ಕರ್
2. ಲಾಲ್ ಪರಿ
3. ಚಕ್ಕೆ
4. ಮರಾಠಿ ಮೊಗ್ಗು ಒರಿಜಿನಲ್
5. ಅನಾನಸ್ ಹೂ
6. ಒಣ ಕೊಬ್ಬರಿ
7. ಮಧ್ಯಮ

730
740
295
900
750
175
165

735
760
300
950
850
185
170
ಕಾಳು ಮೆಣಸು
1. ಆಟೋಮ್
2. ಗಾರ್ಬಲ್ಡ್‌

540
500

550
510
ಗೋಡಂಬಿ
1. ಜೆ ಎಚ್
3. ಡಬ್ಲ್ಯೂ 240
4. ಡಬ್ಲ್ಯೂ 240 ಪಾನ್ ರೊಟ್ಟಿ

680
850
700

750
900
720
ಬಾದಾಮಿ630650
ದ್ರಾಕ್ಷಿ190240
ಎಳ್ಳು
1. ಕಪ್ಪು
2. ಬಿಳಿ
3. ನೈಲಾನ್

130
155
170

135
160
180

[ ಮೊಟ್ಟೆ (ಎನ್.ಇ.ಸಿ.ಸಿ) 100ಕ್ಕೆ 420 ರೂಪಾಯಿ]

ಎಪಿಎಂಸಿ ತರಕಾರಿ ಸಗಟು ದರ (1 ಕೆ. ಜಿ.ಗೆ) 12 ಆಗಸ್ಟ್, 2022

ತರಕಾರಿಕನಿಷ್ಠಗರಿಷ್ಠ
ಟೊಮ್ಯಾಟೊ812
ಹುರುಳಿಕಾಯಿ ನಾಟಿ           4050
ಹ್ಯಾರಿಕೊಟ್‌ ಬೀನ್ಸ್    5060
ಬದನೆಕಾಯಿ ಬಿಳಿ     2530
ಬದನೆಕಾಯಿ ಗುಂಡು  3035
ಬೀಟ್‌ರೂಟ್‌             2530
ಹಾಗಲಕಾಯಿ            3540
ಸೀಮೆ ಬದನೆಕಾಯಿ      2530
ಸೌತೆಕಾಯಿ                  1520
ಗೊರಿಕಾಯಿ ಗೊಂಚಲು  3035
ಕ್ಯಾಪ್ಸಿಕಮ್‌ 4045
ಹಸಿ ಮೆಣಸಿನಕಾಯಿ     2535
ಸಣ್ಣ ಮೆಣಸಿನಕಾಯಿ   3545
ಬಜ್ಜಿ ಮೆಣಸಿನಕಾಯಿ4555
ಊಟಿ ಕ್ಯಾರೆಟ್           5060
ನಾಟಿ ಕ್ಯಾರೆಟ್              4550
ತೆಂಗಿನಕಾಯಿ               2025
ಎಲೆಕೋಸು                2025
ನವಿಲು ಕೋಸು2025
ಹೂ ಕೋಸು ಸಣ್ಣ     4042
ನುಗ್ಗೆಕಾಯಿ             3035
ಮೂಲಂಗಿ 1520
ಹಿರೇಕಾಯಿ3035
ಬೆಂಡೆಕಾಯಿ               2025
ಈರುಳ್ಳಿ                   1820
ಬೆಳ್ಳುಳ್ಳಿ                   4060
ಆಲೂಗಡ್ಡೆ               2428
ತೊಂಡೆಕಾಯಿ 2530
ಸೋರೆಕಾಯಿ 3035

ಅಡಕೆ ಧಾರಣೆ: 28 ಜುಲೈ, 2022

ಕುಮಟಾಕನಿಷ್ಠಗರಿಷ್ಠ
1. ಕೋಕಾ
2. ಚಿಪ್ಪು
3. ಫ್ಯಾಕ್ಟರಿ
4. ಹಳೆ ಚಾಲಿ
5. ಹೊಸ ಚಾಲಿ
1.18089
2. 26089
3.10109
4. 43899
5. 36809
1. 29999
2. 31199
3. 19549
4. 46429
5. 39519
ಶಿರಸಿಕನಿಷ್ಠಗರಿಷ್ಠ
1. ಚಾಲಿ
2. ಬೆಟ್ಟೆ
3. ಬಿಳಿಗೋಟು
4. ರಾಶಿ
1. 33699
2.35196
3.21199
4. 40799
1. 39699
2.46518
3. 32289
4. 49899
ಚಿತ್ರದುರ್ಗಕನಿಷ್ಠಗರಿಷ್ಠ
1. ಅಪಿ
2. ಕೆಂಪುಗೋಟು
3. ಬೆಟ್ಟೆ
4. ರಾಶಿ
1.48922
2.29000
3. 38419
4. 48429
1. 49332
2. 29400
3.38859
4. 48869
ಶಿವಮೊಗ್ಗಕನಿಷ್ಠಗರಿಷ್ಠ
ಗೊರಬಲು
ಬೆಟ್ಟೆ
ರಾಶಿ
ಸರಕು
1. 17500
2. 49090
3. 47009
4. 57669
1. 37299
2.53486
3. 49459
4. 79596
ಸಾಗರಕನಿಷ್ಠಗರಿಷ್ಠ
ಕೆಂಪುಗೋಟು
ಕೋಕ
ಚಾಲಿ
ಬಿಳಿಗೋಟು
ರಾಶಿ
ಸಿಪ್ಪೆಗೋಟು
1. 22339
2.15022
3. 30000
4.20560
5. 37699
6. 13999
1. 37199
2. 34089
3. 37069
4. 27869
5. 49609
6. 21198
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Exit Polls: ಚುನಾವಣೋತ್ತರ ಸಮೀಕ್ಷೆ ಪ್ರಕಟವಾದ ಬೆನ್ನಲ್ಲೇ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಜಿಗಿತ ಸಾಧ್ಯತೆ

Exit Polls: ಲೋಕಸಭಾ ಚುನಾವಣೆಯ ಎಲ್ಲ ಹಂತಗಳ ಮತದಾನ ಮುಗಿದಿದ್ದು, ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದೆ. ಇದರಲ್ಲಿ ಎನ್‌ಡಿಎಗೆ ಬಹುಮತ ದೊರೆಯುವ ಸಾಧ್ಯತೆ ಇದೆ ಎನ್ನುವ ಅಂಶ ಕಂಡು ಬಂದಿದ್ದು, ಭಾರತೀಯ ಷೇರುಗಳು, ಬಾಂಡ್‌ಗಳು ಮತ್ತು ರೂಪಾಯಿ ಮೌಲ್ಯ ಸೋಮವಾರ ಏರಿಕೆಯಾಗಲಿದೆ ಎಂದು ಆರ್ಥಿಕ ತಜ್ಞರು ಊಹಿಸಿದ್ದಾರೆ.

VISTARANEWS.COM


on

Exit Polls
Koo

ಮುಂಬೈ: ಬಹು ನಿರೀಕ್ಷಿತ ಲೋಕಸಭಾ ಚುನಾವಣೆ (Lok Sabha Election 2024)ಯ 7 ಹಂತಗಳ ಮತದಾನ ಪೂರ್ಣಗೊಂಡಿದೆ. ಶನಿವಾರ (ಜೂನ್‌ 1) ಚುನಾವಣೋತ್ತರ ಸಮೀಕ್ಷೆ (Exit Polls) ಪ್ರಕಟವಾಗಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿ ಹುದ್ದೆಗೆ ಏರುವುದು ಬಹುತೇಕ ಖಚಿತವಾಗಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ಷೇರುಗಳು, ಬಾಂಡ್‌ಗಳು ಮತ್ತು ರೂಪಾಯಿ ಮೌಲ್ಯ ಸೋಮವಾರ ಏರಿಕೆಯಾಗಲಿದೆ ಎಂದು ಆರ್ಥಿಕ ತಜ್ಞರು ಊಹಿಸಿದ್ದಾರೆ.

ಸಂಸತ್ತಿನಲ್ಲಿ ಬಹುಮತಕ್ಕೆ ಅಗತ್ಯವಾದ 272 ಸೀಟನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಸುಲಭವಾಗಿ ಪಡೆದುಕೊಳ್ಳಲಿದೆ ಎಂದು ಬಹುತೇಕ ಎಲ್ಲ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಫಲಿತಾಂಶ ಮಂಗಳವಾರ (ಜೂನ್‌ 4) ಪ್ರಕಟವಾಗಲಿದೆ. ಕಡಿಮೆ ಮತದಾನದ ಪ್ರಮಾಣ ಮತ್ತು ಹಲವಾರು ರಾಜ್ಯಗಳಲ್ಲಿ ಬಿಗಿಯಾದ ಸ್ಪರ್ಧೆಗಳಿಂದಾಗಿ ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ 400 ಸ್ಥಾನಗಳ ಗುರಿಯನ್ನು ತಲುಪಲು ಬಿಜೆಪಿ ವಿಫಲವಾಗಬಹುದು ಎಂಬ ಆತಂಕದಿಂದ ಇತ್ತೀಚಿನ ಷೇರು ಮಾರುಕಟ್ಟೆ ಚಂಚಲತೆಯಿಂದ ಕೂಡಿತ್ತು. ಇದುವ ಹೂಡಿಕೆದಾರರನ್ನು ಆತಂಕಕ್ಕೆ ತಳ್ಳಿತ್ತು. ಸದ್ಯ ಚುನಾವಣೋತ್ತರ ಸಮೀಕ್ಷೆಯಿಂದ ಷೇರು ಮಾರುಕಟ್ಟೆಯಲ್ಲಿ ಜಿಗಿತ ಕಂಡು ಬರುವ ಸಾಧ್ಯತೆ ಇದೆ.

“ಫಲಿತಾಂಶದ ಬಗ್ಗೆ ಕೆಲವು ಸಂದೇಹಗಳು ಇದ್ದವು. ಈ ಬಗ್ಗೆ ಕೆಲವರು ಆತಂಕಕ್ಕೊಳಗಾಗಿದ್ದರಿಂದ ಷೇರು ಮಾರುಕಟ್ಟೆಯಲ್ಲಿ ಚಂಚಲತೆ ಹೆಚ್ಚಾಗಿತ್ತು. ಚುನಾವಣೋತ್ತರ ಸಮೀಕ್ಷೆಯಿಂದ ಆತಂಕ ನಿವಾರಣೆಯಾಗಿದೆ. ಹೀಗಾಗಿ ಮಾರುಕಟ್ಟೆಗಳು ಸೋಮವಾರ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಬಹುದುʼʼ ಎಂದು ಮುಂಬೈಯ ಡಿಎಸ್‌ಪಿ ಮ್ಯೂಚುವಲ್ ಫಂಡ್‌ನ ಈಕ್ವಿಟಿಗಳ ಮುಖ್ಯಸ್ಥ ವಿನೀತ್ ಸಾಂಬ್ರೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಂತಿಮ ಫಲಿತಾಂಶಗಳು ಚುನಾವಣೋತ್ತರ ಸಮೀಕ್ಷೆಗಳಿಗಿಂತ ಭಿನ್ನವಾಗಿದ್ದರೂ, ಎನ್‌ಡಿಎ ಒಕ್ಕೂಟಕ್ಕೆ ಗೆಲುವು ನಿಶ್ಚಿತ ಎನ್ನಲಾಗಿದೆ. ಭಾರತೀಯ ಷೇರುಗಳು ಮೇ ತಿಂಗಳಲ್ಲಿ ದಾಖಲೆಯ ಮಟ್ಟವನ್ನು ತಲುಪಿದರೆ, ಬಾಂಡ್ ಸುಮಾರು ಒಂದು ವರ್ಷದಲ್ಲಿ ಗರಿಷ್ಠ ಮಟ್ಟದ ಹತ್ತಿರದಲ್ಲಿದೆ. ಜೂನ್ 4ರ ಫಲಿತಾಂಶ ಚುನಾವಣೋತ್ತರ ಸಮೀಕ್ಷೆಯೊಂದಿಗೆ ಹೊಂದಿಕೆಯಾದರೆ ಎನ್ಎಸ್ಇ ನಿಫ್ಟಿ 50 ಸೂಚ್ಯಂಕವು ಹೊಸ ದಾಖಲೆಯನ್ನು ತಲುಪಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಚುನಾವಣಾ ಫಲಿತಾಂಶಕ್ಕೆ ಮುಂಚಿತವಾಗಿ ವಿದೇಶಿ ಹೂಡಿಕೆದಾರರು ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿದ್ದರಿಂದ ಮುಖ್ಯ ಗೇಜ್ ಕಳೆದ ವಾರ ಸುಮಾರು ಶೇ. 2ರಷ್ಟು ಕುಸಿದು 22,531ಕ್ಕೆ ತಲುಪಿದೆ.

ಇದನ್ನೂ ಓದಿ: Equity Market: ದೇಶದ ಷೇರುಪೇಟೆಯಲ್ಲಿ ಗೂಳಿ ನೆಗೆತ; 6 ತಿಂಗಳಲ್ಲಿ 1 ಲಕ್ಷ ಕೋಟಿ ಡಾಲರ್‌ ಗಳಿಕೆ!

ಕೆಲವು ದಿನಗಳ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ʼʼಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುವ ಜೂನ್‌ 4ರ ಬಳಿಕ ಭಾರತದ ಷೇರು ಮಾರುಕಟ್ಟೆಯನ್ನು ಹಿಡಿಯಲು ಆಗುವುದಿಲ್ಲʼʼ ಎಂದು ಹೇಳಿದ್ದರು. ʼʼಜೂನ್‌ 4ರ ಬಳಿಕ ಹೂಡಿಕೆದಾರರಿಗೆ ಭಾರಿ ಲಾಭವಾಗಲಿದೆʼʼ ಎಂದು ಗೃಹ ಸಚಿವ ಅಮಿತ್‌ ಶಾ ಕೂಡ ವಿಶ್ವಾಸ ವ್ಯಕ್ತಪಡಿಸಿದ್ದರು. ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಭಾರತದ ಷೇರುಪೇಟೆಯು ಮಹತ್ವದ ಸ್ಥಾನ ಪಡೆದಿದೆ. ಹಾಂಕಾಂಗ್‌, ಜಪಾನ್‌, ಚೀನಾ ಹಾಗೂ ಅಮೆರಿಕದ ನಂತರ ಭಾರತದ ಷೇರುಪೇಟೆಯು ಬೃಹತ್‌ ಷೇರು ಮಾರುಕಟ್ಟೆ ಎನಿಸಿದೆ. ಹೀಗಾಗಿ ಚುನಾವಣಾ ಫಲಿತಾಂಶದತ್ತ ಎಲ್ಲರ ಕಣ್ಣು ನೆಟ್ಟಿದೆ. 

Continue Reading

ವಾಣಿಜ್ಯ

GST Collection: ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ನಂ. 2; ಇಲ್ಲಿ ಸಂಗ್ರಹವಾಗಿದ್ದು ಎಷ್ಟು?

GST Collection: ಕಳೆದ ತಿಂಗಳ ಜಿಎಸ್‌ಟಿ ಸಂಗ್ರಹದ ಅಂಕಿ-ಅಂಶ ಬಿಡುಗಡೆಯಾಗಿದೆ. ಮೇಯಲ್ಲಿ ಬರೋಬ್ಬರಿ 1.73 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರವಾಗಿದ್ದು, ಕರ್ನಾಟಕ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ. ರೀಫಂಡ್ ಕಳೆದ ಬಳಿಕ ನಿವ್ವಳ ಜಿಎಸ್​ಟಿ ಸಂಗ್ರಹ ಮೇಯಲ್ಲಿ 1.44 ಲಕ್ಷ ಕೋಟಿ ರೂ. ಆಗಿದೆ ಎಂದು ವರದಿ ತಿಳಿಸಿದೆ. ಮಹಾರಾಷ್ಟ್ರವು 26,854 ಕೋಟಿ ರೂ. ಸಂಗ್ರಹಿಸುವ ಮೂಲಕ ಎಂದಿನಂತೆ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಕರ್ನಾಟಕ ಇದೆ. ಇಲ್ಲಿ 11,889 ಕೋಟಿ ರೂ. ಸಂಗ್ರಹವಾಗಿದೆ.

VISTARANEWS.COM


on

GST Collection
Koo

ನವದೆಹಲಿ: ಕಳೆದ ತಿಂಗಳ ಜಿಎಸ್‌ಟಿ ಸಂಗ್ರಹದ ಅಂಕಿ-ಅಂಶ ಬಿಡುಗಡೆಯಾಗಿದೆ (GST Collection). ಮೇಯಲ್ಲಿ ಬರೋಬ್ಬರಿ 1.73 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರವಾಗಿದ್ದು, ಕರ್ನಾಟಕ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ. ಕಳೆದ ವರ್ಷದಕ್ಕೆ ಹೋಲಿಸಿದರೆ ಒಟ್ಟು ಜಿಎಸ್​ಟಿ ಸಂಗ್ರಹದಲ್ಲಿ ಶೇ. 10ರಷ್ಟು ಹೆಚ್ಚಳವಾಗಿದೆ. ರೀಫಂಡ್ ಕಳೆದ ಬಳಿಕ ನಿವ್ವಳ ಜಿಎಸ್​ಟಿ ಸಂಗ್ರಹ ಮೇಯಲ್ಲಿ 1.44 ಲಕ್ಷ ಕೋಟಿ ರೂ. ಆಗಿದೆ ಎಂದು ವರದಿ ತಿಳಿಸಿದೆ.

ಹಣಕಾಸು ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿ, ʼʼಮೇಯಲ್ಲಿ ಜಿಎಸ್‌ಟಿ ಆದಾಯ 1.73 ಲಕ್ಷ ಕೋಟಿ ರೂ. ಆಗಿದ್ದು, ಕಳೆದ ವರ್ಷದಕ್ಕೆ ಹೋಲಿಸಿದರೆ ಒಟ್ಟು ಜಿಎಸ್​ಟಿ ಸಂಗ್ರಹದಲ್ಲಿ ಶೇ. 10ರಷ್ಟು ಹೆಚ್ಚಳ ದಾಖಲಿಸಿದೆ. ಜತೆಗೆ ದೇಶೀಯ ವಹಿವಾಟುಗಳಲ್ಲಿ ಬಲವಾದ ಹೆಚ್ಚಳ (ಶೇಕಡಾ 15.3ರಷ್ಟು ಏರಿಕೆ) ಮತ್ತು ಆಮದುಗಳಲ್ಲಿ ಇಳಿಕೆ (ಶೇಕಡಾ 4.3ರಷ್ಟು ಕಡಿಮೆ) ಕಂಡು ಬಂದಿದೆʼʼ ಎಂದು ತಿಳಿಸಿದೆ.

ರಾಜ್ಯವಾರು ಸಂಗ್ರಹ

ಮಹಾರಾಷ್ಟ್ರವು 26,854 ಕೋಟಿ ರೂ. ಸಂಗ್ರಹಿಸುವ ಮೂಲಕ ಎಂದಿನಂತೆ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಕರ್ನಾಟಕ ಇದೆ. ಇಲ್ಲಿ 11,889 ಕೋಟಿ ರೂ. ಸಂಗ್ರಹವಾಗಿದೆ. ಗುಜರಾತ್‌ನಲ್ಲಿ 11,325 ಕೋಟಿ ರೂ. ಸಂಗ್ರಹವಾಗಿದ್ದು ಮೂರನೇ ಸ್ಥಾನದಲ್ಲಿದೆ.

ಜಿಎಸ್‌ಟಿ ಸಂಗ್ರಹದಲ್ಲಿ ಟಾಪ್‌ 10 ರಾಜ್ಯಗಳು

ರಾಜ್ಯ ಜಿಎಸ್‌ಟಿ ಸಂಗ್ರಹ (ಕೋಟಿ ರೂ.ಗಳಲ್ಲಿ)
ಮಹಾರಾಷ್ಟ್ರ26,854
ಕರ್ನಾಟಕ11,889
ಗುಜರಾತ್11,325
ತಮಿಳುನಾಡು9,768
ಹರಿಯಾಣ9,289
ಉತ್ತರಪ್ರದೇಶ9,091
ದೆಹಲಿ7,512
ಪಶ್ಚಿಮ ಬಂಗಾಳ5,377
ಒಡಿಶಾ5,027
ತೆಲಂಗಾಣ4,986

ವಿವಿಧ ತೆರಿಗೆಗಳ ಅಂಕಿ ಅಂಶ

  • ಕೇಂದ್ರ ಸರಕು ಮತ್ತು ಸೇವಾ ತೆರಿಗೆ (CGST): 32,409 ಕೋಟಿ ರೂ.
  • ರಾಜ್ಯ ಸರಕು ಮತ್ತು ಸೇವಾ ತೆರಿಗೆ (SGST): 40,265 ಕೋಟಿ ರೂ.
  • ಸಮಗ್ರ ಸರಕು ಮತ್ತು ಸೇವಾ ತೆರಿಗೆ (IGST): ಆಮದು ಸರಕುಗಳ ಮೇಲೆ ಸಂಗ್ರಹಿಸಿದ 39,879 ಕೋಟಿ ರೂ. ಸೇರಿದಂತೆ ಒಟ್ಟು 87,781 ಕೋಟಿ ರೂ.
  • ಸೆಸ್: ಆಮದು ಮಾಡಿದ ಸರಕುಗಳ ಮೇಲೆ ಸಂಗ್ರಹಿಸಿದ 1,076 ಕೋಟಿ ರೂ. ಸೇರಿದಂತೆ ಒಟ್ಟು 12,284 ಕೋಟಿ ರೂ.

ಏಪ್ರಿಲ್‌ನಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದ ಜಿಎಸ್‌ಟಿ ಸಂಗ್ರಹ

ಏಪ್ರಿಲ್‌ನ ಜಿಎಸ್‌ಟಿ ಸಂಗ್ರಹ ಸಾರ್ವಕಾಲಿಕ ದಾಖಲೆ ನಿರ್ಮಿಸಿತ್ತು. 2024ರ ಏಪ್ರಿಲ್‌ನ ಒಟ್ಟು ಜಿಎಸ್‌ಟಿ ಸಂಗ್ರಹವು 2.10 ಲಕ್ಷ ಕೋಟಿ ರೂ.ಗೆ ತಲುಪಿತ್ತು. ಒಟ್ಟಾರೆಯಾಗಿ ಪರೋಕ್ಷ ತೆರಿಗೆ ಆದಾಯವು ಶೇ. 12.4ರಷ್ಟು ಬೆಳವಣಿಗೆಯನ್ನು ದಾಖಲಿಸಿತ್ತು. ದೇಶೀಯ ವಹಿವಾಟು ಮತ್ತು ಆಮದುಗಳಲ್ಲಿನ ಹೆಚ್ಚಳ ಇದಕ್ಕೆ ಕಾರಣ.

ಟ್ಯಾಕ್ಸ್ ಕನೆಕ್ಟ್ ಅಡ್ವೈಸರಿ ಸರ್ವೀಸಸ್ ಎಲ್‌ಎಲ್‌ಪಿಯ ಪಾಲುದಾರ ವಿವೇಕ್ ಜಲನ್ ಈ ಬಗ್ಗೆ ಮಾತನಾಡಿ,  ʼʼ2017ರ ಜುಲೈಯಲ್ಲಿ ಈ ನಿಯಮ ಜಾರಿಗೆ ಬಂದಾಗಿನಿಂದ 2024ರ ಏಪ್ರಿಲ್‌ವರೆಗೆ ಜಿಎಸ್‌ಟಿ ಸಂಗ್ರಹವು ಸರಾಸರಿ ಮಾಸಿಕ ಆದಾಯವನ್ನು ಸುಮಾರು 0.9 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದೆʼʼ ಎಂದು ತಿಳಿಸಿದ್ದರು.

ಇದನ್ನೂ ಓದಿ: GST Collection: ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಜಿಎಸ್‌ಟಿ ಸಂಗ್ರಹ; ಏಪ್ರಿಲ್‌ನ ಕಲೆಕ್ಷನ್‌ ಎಷ್ಟು?

Continue Reading

ಕರ್ನಾಟಕ

Gold Rate Today: ಬಂಗಾರ ಪ್ರಿಯರಿಗೆ ಶುಭ ಸುದ್ದಿ; ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ಬೆಲೆ

Gold Rate Today:ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹ 6,650 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ₹ 7,255 ಇದೆ. 22 ಕ್ಯಾರೆಟ್‌ನ ಎಂಟು ಗ್ರಾಂ ಚಿನ್ನದ ಬೆಲೆ ₹ 53,200 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹66,500 ಮತ್ತು ₹6,65,000 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹7,255 ಆಗಿದ್ದು, ಎಂಟು ಗ್ರಾಂ ಬೆಲೆ ₹58,040ಕ್ಕೆ ಇಳಿದಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹72,550 ಮತ್ತು ₹7,25,500 ವೆಚ್ಚವಾಗಲಿದೆ.

VISTARANEWS.COM


on

gold rate today
Koo

ಬೆಂಗಳೂರು: ಚಿನ್ನಾಭರಣ ಕೊಳ್ಳುವವರಿಗೆ ಗುಡ್‌ನ್ಯೂಸ್‌. ರಾಜ್ಯದ ಚಿನ್ನದ ಮಾರುಕಟ್ಟೆಯಲ್ಲಿ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆ (Gold Rate Today)ಯಲ್ಲಿ ಇಂದು ಯಥಾಸ್ಥಿತಿ ಕಾಪಾಡಿಕೊಂಡಿದೆ. ಶನಿವಾರ ಗ್ರಾಂಗೆ ಕ್ರಮವಾಗಿ 20 ಮತ್ತು 21 ರೂ. ಇಳಿಕೆಯಾಗಿತ್ತು. ಬೆಂಗಳೂರು ಸುವರ್ಣ ಮಾರುಕಟ್ಟೆಯ ದರಗಳು ಹೀಗಿದೆ.

ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹ 6,650 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ₹ 7,255 ಇದೆ. 22 ಕ್ಯಾರೆಟ್‌ನ ಎಂಟು ಗ್ರಾಂ ಚಿನ್ನದ ಬೆಲೆ ₹ 53,200 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹66,500 ಮತ್ತು ₹6,65,000 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹7,255 ಆಗಿದ್ದು, ಎಂಟು ಗ್ರಾಂ ಬೆಲೆ ₹58,040ಕ್ಕೆ ಇಳಿದಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹72,550 ಮತ್ತು ₹7,25,500 ವೆಚ್ಚವಾಗಲಿದೆ.

ನಗರ22 ಕ್ಯಾರಟ್ (10 ಗ್ರಾಂ)24 ಕ್ಯಾರಟ್ (10 ಗ್ರಾಂ)
ದಿಲ್ಲಿ₹ 66,650₹ 72,700
ಮುಂಬೈ₹ 66,500₹ 72,700
ಬೆಂಗಳೂರು₹ 66,500₹ 72,550
ಚೆನ್ನೈ₹ 67,100₹ 73,200

ಚಿನ್ನದ ದರದ ಮೇಲೆ ಪರಿಣಾಮ ಬೀರುವ ಅಂಶಗಳು

ಬೇಡಿಕೆ ಮತ್ತು ಪೂರೈಕೆ: ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಮತ್ತು ಪೂರೈಕೆಯಿಂದ ಚಿನ್ನದ ದರವನ್ನು ಹೆಚ್ಚಾಗಿ ನಿರ್ಧರಿಸಲಾಗುತ್ತದೆ. ಚಿನ್ನಕ್ಕೆ ಬೇಡಿಕೆ ಹೆಚ್ಚಾದರೆ ದರವೂ ಹೆಚ್ಚಾಗಲಿದೆ. ವ್ಯತಿರಿಕ್ತವಾಗಿ, ಚಿನ್ನದ ಪೂರೈಕೆ ಹೆಚ್ಚಾದರೆ, ದರ ಕಡಿಮೆಯಾಗುತ್ತದೆ.

ಜಾಗತಿಕ ಆರ್ಥಿಕ ಪರಿಸ್ಥಿತಿಗಳು: ಚಿನ್ನದ ದರದ ಮೇಲೆ ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಕೂಡ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಜಾಗತಿಕ ಆರ್ಥಿಕತೆಯು ಕಳಪೆಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಕಾಣಬಹುದು. ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ರಾಜಕೀಯ ಅಸ್ಥಿರತೆ: ರಾಜಕೀಯ ಅಸ್ಥಿರತೆ ಚಿನ್ನದ ದರದ ಮೇಲೂ ಪರಿಣಾಮ ಬೀರಬಹುದು. ಉದಾಹರಣೆಗೆ, ಒಂದು ದೊಡ್ಡ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದರೆ, ಹೂಡಿಕೆದಾರರು ಅನಿಶ್ಚಿತತೆಯ ವಿರುದ್ಧ ಸುರಕ್ಷಿತರಾಗಲು ಚಿನ್ನವನ್ನು ಖರೀದಿಸಬಹುದು, ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ಕಾರ್ಮಿಕ ಮತ್ತು ಸಾಮಗ್ರಿಗಳ ವೆಚ್ಚ: ಇದಲ್ಲದೆ, ಭಾರತದಲ್ಲಿನ ಚಿಲ್ಲರೆ ಚಿನ್ನದ ಬೆಲೆಯು ಭಾರತದಲ್ಲಿ ಗ್ರಾಹಕರಿಗೆ ಚಿನ್ನವನ್ನು ಮಾರಾಟ ಮಾಡುವ ಬೆಲೆಯಾಗಿದೆ. ಜಾಗತಿಕ ಚಿನ್ನದ ಬೆಲೆ, ಭಾರತೀಯ ರೂಪಾಯಿ, ಮತ್ತು ಚಿನ್ನದ ಆಭರಣಗಳ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕ ಮತ್ತು ಸಾಮಗ್ರಿಗಳ ವೆಚ್ಚ ಸೇರಿದಂತೆ ಹಲವಾರು ಅಂಶಗಳಿಂದ ಇದನ್ನು ನಿರ್ಧರಿಸಲಾಗುತ್ತದೆ. ಭಾರತದಲ್ಲಿ ಚಿಲ್ಲರೆ ಚಿನ್ನದ ಬೆಲೆಯು ಸಾಮಾನ್ಯವಾಗಿ ಜಾಗತಿಕ ಚಿನ್ನದ ಬೆಲೆಗಿಂತ ಹೆಚ್ಚಾಗಿರುತ್ತದೆ, ಏಕೆಂದರೆ ಇದು ಆಭರಣ ಮತ್ತು ಇತರ ವೆಚ್ಚ ಒಳಗೊಂಡಿರುತ್ತದೆ.

ಇದನ್ನೂ ಓದಿ:Assembly Election Results 2024: ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ, ಸಿಕ್ಕಿಂನಲ್ಲಿ ಕ್ಲೀನ್‌ ಸ್ವೀಪ್‌ನತ್ತ SKM

Continue Reading

ಚಿನ್ನದ ದರ

Gold Rate Today: ಚಿನ್ನ ಕೊಳ್ಳಲು ಇಂದೇ ಸಕಾಲ, ಬಂಗಾರದ ಬೆಲೆಯಲ್ಲಿ ಇಳಿಕೆ

Gold Rate Today: ರಾಜ್ಯದ ಚಿನ್ನದ ಮಾರುಕಟ್ಟೆಯಲ್ಲಿ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆಯಲ್ಲಿ ಇಂದು (ಶನಿವಾರ) ತುಸು ಇಳಿಕೆ ಕಂಡು ಬಂದಿದೆ. ಗ್ರಾಂಗೆ ಕ್ರಮವಾಗಿ 20 ಮತ್ತು 21 ರೂ. ಇಳಿಕೆಯಾಗಿದೆ. ಬೆಂಗಳೂರು ಸುವರ್ಣ ಮಾರುಕಟ್ಟೆಯ ದರಗಳು ಹೀಗಿವೆ.

VISTARANEWS.COM


on

Gold Rate Today
Koo

ಬೆಂಗಳೂರು: ಚಿನ್ನಾಭರಣ ಕೊಳ್ಳುವವರಿಗೆ ಗುಡ್‌ನ್ಯೂಸ್‌. ರಾಜ್ಯದ ಚಿನ್ನದ ಮಾರುಕಟ್ಟೆಯಲ್ಲಿ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆ (Gold Rate Today)ಯಲ್ಲಿ ಇಂದು (ಶನಿವಾರ) ತುಸು ಇಳಿಕೆ ಕಂಡು ಬಂದಿದೆ. ಗ್ರಾಂಗೆ ಕ್ರಮವಾಗಿ 20 ಮತ್ತು 21 ರೂ. ಇಳಿಕೆಯಾಗಿದೆ. ಬೆಂಗಳೂರು ಸುವರ್ಣ ಮಾರುಕಟ್ಟೆಯ ದರಗಳು ಹೀಗಿವೆ.

ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹ 6,650 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ₹ 7,255 ಇದೆ. 22 ಕ್ಯಾರೆಟ್‌ನ ಎಂಟು ಗ್ರಾಂ ಚಿನ್ನದ ಬೆಲೆ ₹ 53,200 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹66,500 ಮತ್ತು ₹6,65,000 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹7,255 ಆಗಿದ್ದು, ಎಂಟು ಗ್ರಾಂ ಬೆಲೆ ₹58,040ಕ್ಕೆ ಇಳಿದಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹72,550 ಮತ್ತು ₹7,25,500 ವೆಚ್ಚವಾಗಲಿದೆ.

ನಗರ22 ಕ್ಯಾರಟ್ (10 ಗ್ರಾಂ)24 ಕ್ಯಾರಟ್ (10 ಗ್ರಾಂ)
ದಿಲ್ಲಿ₹ 66,650₹ 72,700
ಮುಂಬೈ₹ 66,500₹ 72,700
ಬೆಂಗಳೂರು₹ 66,500₹ 72,550
ಚೆನ್ನೈ₹ 67,100₹ 73,200

ಚಿನ್ನದ ದರದ ಮೇಲೆ ಪರಿಣಾಮ ಬೀರುವ ಅಂಶಗಳು

ಬೇಡಿಕೆ ಮತ್ತು ಪೂರೈಕೆ: ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಮತ್ತು ಪೂರೈಕೆಯಿಂದ ಚಿನ್ನದ ದರವನ್ನು ಹೆಚ್ಚಾಗಿ ನಿರ್ಧರಿಸಲಾಗುತ್ತದೆ. ಚಿನ್ನಕ್ಕೆ ಬೇಡಿಕೆ ಹೆಚ್ಚಾದರೆ ದರವೂ ಹೆಚ್ಚಾಗಲಿದೆ. ವ್ಯತಿರಿಕ್ತವಾಗಿ, ಚಿನ್ನದ ಪೂರೈಕೆ ಹೆಚ್ಚಾದರೆ, ದರ ಕಡಿಮೆಯಾಗುತ್ತದೆ.

ಜಾಗತಿಕ ಆರ್ಥಿಕ ಪರಿಸ್ಥಿತಿಗಳು: ಚಿನ್ನದ ದರದ ಮೇಲೆ ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಕೂಡ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಜಾಗತಿಕ ಆರ್ಥಿಕತೆಯು ಕಳಪೆಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಕಾಣಬಹುದು. ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ರಾಜಕೀಯ ಅಸ್ಥಿರತೆ: ರಾಜಕೀಯ ಅಸ್ಥಿರತೆ ಚಿನ್ನದ ದರದ ಮೇಲೂ ಪರಿಣಾಮ ಬೀರಬಹುದು. ಉದಾಹರಣೆಗೆ, ಒಂದು ದೊಡ್ಡ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದರೆ, ಹೂಡಿಕೆದಾರರು ಅನಿಶ್ಚಿತತೆಯ ವಿರುದ್ಧ ಸುರಕ್ಷಿತರಾಗಲು ಚಿನ್ನವನ್ನು ಖರೀದಿಸಬಹುದು, ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ಕಾರ್ಮಿಕ ಮತ್ತು ಸಾಮಗ್ರಿಗಳ ವೆಚ್ಚ: ಇದಲ್ಲದೆ, ಭಾರತದಲ್ಲಿನ ಚಿಲ್ಲರೆ ಚಿನ್ನದ ಬೆಲೆಯು ಭಾರತದಲ್ಲಿ ಗ್ರಾಹಕರಿಗೆ ಚಿನ್ನವನ್ನು ಮಾರಾಟ ಮಾಡುವ ಬೆಲೆಯಾಗಿದೆ. ಜಾಗತಿಕ ಚಿನ್ನದ ಬೆಲೆ, ಭಾರತೀಯ ರೂಪಾಯಿ, ಮತ್ತು ಚಿನ್ನದ ಆಭರಣಗಳ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕ ಮತ್ತು ಸಾಮಗ್ರಿಗಳ ವೆಚ್ಚ ಸೇರಿದಂತೆ ಹಲವಾರು ಅಂಶಗಳಿಂದ ಇದನ್ನು ನಿರ್ಧರಿಸಲಾಗುತ್ತದೆ. ಭಾರತದಲ್ಲಿ ಚಿಲ್ಲರೆ ಚಿನ್ನದ ಬೆಲೆಯು ಸಾಮಾನ್ಯವಾಗಿ ಜಾಗತಿಕ ಚಿನ್ನದ ಬೆಲೆಗಿಂತ ಹೆಚ್ಚಾಗಿರುತ್ತದೆ, ಏಕೆಂದರೆ ಇದು ಆಭರಣ ಮತ್ತು ಇತರ ವೆಚ್ಚ ಒಳಗೊಂಡಿರುತ್ತದೆ.

ಇದನ್ನೂ ಓದಿ: RBI: 33 ವರ್ಷಗಳ ನಂತರ ಬ್ರಿಟನ್‌ನಿಂದ 100 ಟನ್‌ಗಿಂತಲೂ ಹೆಚ್ಚು ಪ್ರಮಾಣದ ಚಿನ್ನ ಭಾರತಕ್ಕೆ!

Continue Reading
Advertisement
Karnataka Weather Forecast
ಮಳೆ11 mins ago

Karnataka Weather : ಕೋಲಾರದಲ್ಲಿ ಅಬ್ಬರಿಸಿದ ವರುಣ; ಒಳನಾಡಿನಲ್ಲಿ ತಾಪಮಾನ ಇಳಿಕೆ

Exit Polls
ವಾಣಿಜ್ಯ13 mins ago

Exit Polls: ಚುನಾವಣೋತ್ತರ ಸಮೀಕ್ಷೆ ಪ್ರಕಟವಾದ ಬೆನ್ನಲ್ಲೇ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಜಿಗಿತ ಸಾಧ್ಯತೆ

Raichur Lok Sabha Constituency
ರಾಯಚೂರು28 mins ago

Raichur Lok Sabha Constituency: ರಾಯಚೂರಿನಲ್ಲಿ ನಾಯಕರ ನಡುವಿನ ಕಾಳಗದಲ್ಲಿ ಯಾರು ರಾಜ?

Accident Case
ಕ್ರೈಂ37 mins ago

Accident Case : ಕರೆಂಟ್‌ ಶಾಕ್‌ಗೆ ಕಂಬದಲ್ಲೇ ಕಾರ್ಮಿಕನ ನರಳಾಟ; ಭೀಕರ ಅಪಘಾತಕ್ಕೆ ಇಬ್ಬರು ಬಲಿ

Lok Sabha Election 2024
ಕರ್ನಾಟಕ52 mins ago

Lok Sabha Election 2024: ಮೈಸೂರು ಕ್ಷೇತ್ರದಲ್ಲಿ ಗೆಲುವು ಯಾರಿಗೆ? ಶ್ವಾನದಿಂದ ಅಚ್ಚರಿಯ ಭವಿಷ್ಯ!

Aam Panna Recipe
ಆಹಾರ/ಅಡುಗೆ57 mins ago

Aam Panna Recipe: ಆಮ್‌ ಪನ್ನಾ! ಮಾವಿನಕಾಯಿಯ ಅದ್ಭುತ ಪೇಯ ಇದು; ನೀವೂ ಮಾಡಿ ನೋಡಿ

Arvind Kejriwal
ದೇಶ1 hour ago

Arvind Kejriwal: ತಿಹಾರ್‌ ಜೈಲಿಗೆ ಮರಳಿದ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌; ಜೂ. 5ರಂದು ಮತ್ತೆ ಜಾಮೀನು ಅರ್ಜಿ ವಿಚಾರಣೆ

GST Collection
ವಾಣಿಜ್ಯ1 hour ago

GST Collection: ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ನಂ. 2; ಇಲ್ಲಿ ಸಂಗ್ರಹವಾಗಿದ್ದು ಎಷ್ಟು?

Kamal Haasan gives a fiery speech at Indian 2 event
ಕಾಲಿವುಡ್1 hour ago

Kamal Haasan: ತಮಿಳಿಗನೊಬ್ಬ ದೇಶ ಆಳುವ ದಿನ ಏಕೆ ಬರಬಾರದು? ಕಮಲ್‌ ಹಾಸನ್‌ ಪ್ರಶ್ನೆ!

CET Ranking
ಬೆಂಗಳೂರು1 hour ago

CET Ranking : ಸಿಇಟಿ ರ‍್ಯಾಂಕಿಂಗ್‌ನಲ್ಲಿ ಎಂಜಿನಿಯರಿಂಗ್‌ನ 10 ಟಾಪರ್ಸ್‌ಗಳು ಬೆಂಗಳೂರಿನ ವಿದ್ಯಾರ್ಥಿಗಳು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ7 hours ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 day ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ3 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ2 weeks ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌