Ananthkumar Foundation | ಕೃಷಿ ಕ್ಷೇತ್ರಕ್ಕೆ ಬೇಕು ಡಿಜಿಟಲ್ ತಂತ್ರಜ್ಞಾನ; ನಿಪುಣ್‌ ಮೆಹ್ರೋತ್ರ ಅಭಿಮತ - Vistara News

ಕೃಷಿ

Ananthkumar Foundation | ಕೃಷಿ ಕ್ಷೇತ್ರಕ್ಕೆ ಬೇಕು ಡಿಜಿಟಲ್ ತಂತ್ರಜ್ಞಾನ; ನಿಪುಣ್‌ ಮೆಹ್ರೋತ್ರ ಅಭಿಮತ

ಅನಂತಕುಮಾರ್ ಪ್ರತಿಷ್ಠಾನವು (Ananthkumar Foundation) ದೇಶ ಮೊದಲು ಸಂವಾದ ಕಾರ್ಯಕ್ರಮದ ಹತ್ತನೆಯ ಆವೃತ್ತಿಯನ್ನುಆಯೋಜಿಸಿತ್ತು.

VISTARANEWS.COM


on

ಅನಂತ ಕುಮಾರ್‌ ಪ್ರತಿಷ್ಠಾನ
ದಿ ಅಗ್ರಿ ಕೊಲ್ಯಾಬೊರೇಟರಿ ಸಂಸ್ಥೆ ಸ್ಥಾಪಕ ನಿಪುಣ್ ಮೆಹ್ರೋತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಅನಂತಕುಮಾರ್‌ ಪ್ರತಿಷ್ಠಾನದ (Ananthkumar Foundation) ‘ದೇಶ ಮೊದಲು’ ೧೦ನೇ ಸಂವಾದ ಕಾರ್ಯಕ್ರಮದ ಭಾಗವಾಗಿ ಕೊಲ್ಯಾಬೊರೇಟಿವ್‌ ಇನೋವೇಷನ್‌ (Collaborative Innovation: Win-Win for all not Zero sum game) ವಿಷಯದ ಕುರಿತ ವೆಬಿನಾರ್‌ ನಡೆಸಲಾಯಿತು. ವೆಬಿನಾರ್‌ನಲ್ಲಿ ದಿ ಅಗ್ರಿ ಕೊಲ್ಯಾಬೊರೇಟರಿ ಸಂಸ್ಥೆ ಸ್ಥಾಪಕ ನಿಪುಣ್ ಮೆಹ್ರೋತ್ರ, ಹಿರಿಯ ಪತ್ರಕರ್ತ, ಹಿಂದು ಬಿಜಿನೆಸ್‌ ಲೈನ್ ನಿವೃತ್ತ ಸಂಪಾದಕ ರಾಘವನ್‌ ಶ್ರೀನಿವಾಸನ್‌ ಹಾಗೂ‌ ಎಐಸಿಟಿಇ ಮುಖ್ಯ ಸಮನ್ವಯ ಅಧಿಕಾರಿ ಡಾ. ಬುದ್ಧ ಚಂದ್ರಶೇಖರ್ ಭಾಗಿಯಾಗಿದ್ದರು.

ಪ್ರಾರಂಭದಲ್ಲಿ ಮಾತನಾಡಿದ ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್, ಹತ್ತು ವರ್ಷಗಳಲ್ಲಿ ಭಾರತವು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಸೇರಲು ಪೂರಕವಾಗಿ ಹೊಸ ಹೊಸ ಆವಿಷ್ಠಾರಗಳು ನಡೆಯಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಕರೆಗೆ ಅನುಗುಣವಾಗಿ ಚಿಂತನಾ ನಾಯಕತ್ವ (Thought Leadership) ರೂಪಿಸಲು ಪ್ರತಿಷ್ಠಾನವು ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದೆ ಎಂದರು.

ಬಳಿಕ ಸಂವಾದಲ್ಲಿ ಮಾತನಾಡಿದ ದಿ ಅಗ್ರಿ ಕೊಲ್ಯಾಬೊರೇಟರಿ ಸಂಸ್ಥೆ ಸ್ಥಾಪಕ ನಿಪುಣ್ ಮೆಹ್ರೋತ್ರ, ದೇಶದ ಶೇ. 80ರಷ್ಟು ನೀರನ್ನು ಬಳಸಿಕೊಳ್ಳುವ, ಶೇ. 50ರಷ್ಟು ಶ್ರಮಿಕರನ್ನು ತೊಡಗಿಸಿಕೊಳ್ಳುವ ಕೃಷಿ ಕ್ಷೇತ್ರದಲ್ಲಿ ವಾರ್ಷಿಕವಾಗಿ ಸುಮಾರು 92,000 ಕೋಟಿ ರೂಪಾಯಿಗಳ ಆಹಾರ ಸಾಮಗ್ರಿ ವ್ಯರ್ಥವಾಗುತ್ತಿದೆ. ಈ ಕ್ಷೇತ್ರದಲ್ಲಿ ಹಣಕಾಸು ಮತ್ತು ಕೌಶಲ್ಯಗಳು ಮುಕ್ತವಾಗಿ ದೊರೆಯುತ್ತಿಲ್ಲ.

ಡಿಜಿಟಲ್ ತಂತ್ರಜ್ಞಾನ ಇನ್ನೂ ಈ ಕ್ಷೇತ್ರದಲ್ಲಿ ಸಾಕಷ್ಟು ತೊಡಗಿಕೊಂಡಿಲ್ಲ. ಕೃಷಿಯು ಲಾಭದ ಮೇಲೆ ಗಮನ ಹರಿಸುವುದಕ್ಕಿಂತ ಹೆಚ್ಚಾಗಿ ಸಹಯೋಗದ ಕಡೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಕೃಷಿ ಕ್ಷೇತ್ರವನ್ನು ಆರ್ಥಿಕವಾಗಿ ಲಾಭಹೀನ ಎಂದು ಪರಿಗಣಿಸುವಂತಿಲ್ಲ. ಡಿಜಿಟಲ್ ತಂತ್ರಜ್ಞಾನದ ಬಳಕೆಯಿಂದ 270 ರಿಂದ 300 ಬಿಲಿಯನ್ ಡಾಲರುಗಳ ಕ್ಷೇತ್ರದಲ್ಲಿ ವಾರ್ಷಿಕವಾಗಿ 50-60 ಬಿಲಿಯನ್‌ ಡಾಲರುಗಳ ಹೆಚ್ಚಳವನ್ನು ಸಾಧಿಸಬಹುದಾಗಿದೆ ಎಂದು ತಿಳಿಸಿದರು.

ರಾಘವನ್ ಶ್ರೀನಿವಾಸನ್ ಮಾತನಾಡುತ್ತ, ಕೃಷಿ ಕ್ಷೇತ್ರದ ಸಮಸ್ಯೆಗಳು ಕಳೆದ 25 ವರ್ಷಗಳಿಂದ ಹಾಗೆಯೇ ಉಳಿದುಕೊಂಡು ಬಂದಿವೆ. ಈ ಕ್ಷೇತ್ರದಲ್ಲಿ ಡಿಜಿಟಲ್ ಮೂಲಸೌಕರ್ಯಗಳ ಅಭಿವೃದ್ಧಿಯ ಪ್ರಮಾಣ ತುಂಬ ಕಡಿಮೆಯಿದೆ. ಡಿಜಿಟಲ್ ಕ್ಷೇತ್ರದಲ್ಲಿ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಪಾರ ಸಾಧನೆ ಮಾಡಲಾಗಿದೆ. ಯುಪಿಐ, ಆರೋಗ್ಯ ಸೇತು ಮುಂತಾದ ಆವಿಷ್ಠಾರಗಳು ಹಾಗೂ ಕೋವಿಡ್ ಸಮಯದಲ್ಲಿ ನಡೆದ ಆವಿಷ್ಕಾರಗಳು ಇದಕ್ಕೆ ಉತ್ತಮ ಉದಾಹರಣೆ . ಸ್ಪರ್ಧಾತ್ಮಕತೆಯಿಂದ ಸಹಯೋಗದ ಕಡೆ ಮುನ್ನಡೆದಿರುವುದರಿಂದ ಇದು ಸಾಧ್ಯವಾಗಿದೆ. ಒಂದು ಸಾಮಾನ್ಯ ಉದ್ದೇಶಕ್ಕಾಗಿ ಎಲ್ಲರೂ ಒಂದುಗೂಡುವುದು ಇಂದಿನ ಅಗತ್ಯ ಎಂದರು.

37 ಲಕ್ಷ ಕೋಟಿ ರೂಪಾಯಿಗಳ ದುಡಿಯುವ ಬಂಡವಾಳ ಹೊಂದಿರುವ ಕೃಷಿಕ್ಷೇತ್ರದಲ್ಲಿ ಸರ್ಕಾರದ ಪಾಲುದಾರಿಕೆ ನಗಣ್ಯವೆಂಬಷ್ಟು ಕಡಿಮೆಯಿದೆ. ಖಾಸಗಿ ಪಾಲುದಾರಿಕೆಯೇ ಅಧಿಕವಾಗಿರುವ ಪರಿಸರ ವ್ಯವಸ್ಥೆಗೆ ಭಾರತೀಯ ರೈತರು ಒಗ್ಗಿಕೊಂಡಿದ್ದಾರೆ. ಭಾರತದಲ್ಲಿ ಕೋಳಿ ಸಾಕಣೆ, ಮೀನು ಸಾಕಣಿ, ಶ್ವೇತ ಕ್ರಾಂತಿ, ಹಸಿರು ಕ್ರಾಂತಿ ಯಶಸ್ವಿಯಾಗಲು ನವೀನ ಆವಿಷ್ಠಾರಗಳೇ ಕಾರಣ, ಇದು ಸಾಧ್ಯವಾಗಲು ರಾಜಕೀಯದಿಂದ ಹೊರತಾದ ಹೊಸ ಆರ್ಥಿಕ ಮಾದರಿಗಳ ಆವಿಷ್ಠಾರದ ಅಗತ್ಯವಿದೆ ಎಂದು ಅವರು ಹೇಳಿದರು.

ನಂತರ ಮಾತನಾಡಿದ ಬುದ್ಧ ಚಂದ್ರಶೇಖರ್, ಭಾರತದ ಇತಿಹಾಸದಲ್ಲಿ ಸಾವಿರಾರು ವರ್ಷಗಳಿಂದಲೇ ನೂತನ ಅವಿಷ್ಕಾರಗಳು ನಡೆದಿರುವುದನ್ನು ಕಾಣಬಹುದು. ಸೊನ್ನೆ, ದಶಮಾನ ಪದ್ಧತಿ, ಪೈ ಸ್ಥಿರಾಂಕ, ಆಯುರ್ವೇದ, ಫ್ಲಶ್‌ ಶೌಚಾಲಯ, ಸತುವನ್ನು ಕರಗಿಸುವ ವಿಧಾನ ಮುಂತಾದ ಸಾವಿರಾರು ಆವಿಷ್ಕಾರಗಳನ್ನು ನಮ್ಮ ದೇಶದಲ್ಲಿ ಮಾಡಲಾಗಿದೆ. ಸಹಯೋಗದ ಮೂಲಕ ಆವಿಷ್ಕಾರದ ಗುಣ ಭಾರತೀಯ ಸಂಸ್ಕೃತಿಯಲ್ಲಿ ಅಂತರ್ಗತವಾಗಿದೆ ಎಂದು ಹೇಳಿದರು. ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ಆವಿಷ್ಠಾರಗಳಿಗೆ ಸೂಕ್ತ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಈ ನೀತಿಯು ಸೃಜನಶೀಲತೆಗೆ ಒತ್ತು ನೀಡುತ್ತದೆ. ಹಲವು ಶಿಕ್ಷಣ ಕೇಂದ್ರಗಳು ಜತೆಗೂಡಿ ಆವಿಷ್ಠಾರದ ನೆಲೆಗಳನ್ನು ರೂಪಿಸಿಕೊಳ್ಳಲು ನೂತನ ಶಿಕ್ಷಣ ನೀತಿ ಪೂರಕವಾಗಿದೆ ಎಂದೂ ಅವರು ಹೇಳಿದರು.

ಅತ್ಯಂತ ಕುಗ್ರಾಮದಲ್ಲಿ ನೆಲೆಸಿರುವ ಜನರೂ ತಮ್ಮ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಮಾರಲು ಅನುವಾಗುವಂತೆ ಡಿಜಿಟಲ್ ಇಂಡಿಯಾದ ಆವಿಷ್ಕಾರಗಳು ನಡೆಯಬೇಕಿವೆ. ಭಾರತವು ಮಾಹಿತಿ ತಂತ್ರಜ್ಞಾನದ ಕೇಂದ್ರವಾಗಿರುವಂತೆ ಆವಿಷ್ಕಾರಗಳ ಕೇಂದ್ರವೂ ಆಗಬೇಕೆಂದು ಟೀಮ್ ಇಂಡಿಯಾದ ಉದ್ದೇಶ ಎಂದೂ ಬುದ್ಧ ಚಂದ್ರಶೇಖರ್ ತಿಳಿಸಿದರು.

ಇದನ್ನೂ ಓದಿ | Cold Storage | ಅಂಡಗಿ ಗ್ರಾಮದಲ್ಲಿ ಕೃಷಿ ಉತ್ಪನ್ನ ಶೈತ್ಯಾಗಾರ; 9.5 ಕೋಟಿ ಅನುದಾನ ಮಂಜೂರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿಜಯನಗರ

Vijayanagara News: ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ವಿತರಿಸಿ: ತಹಸೀಲ್ದಾರ್‌ ಅಮರೇಶ್

Vijayanagara News: ರೈತರು ಬಿತ್ತನೆ ಕಾರ್ಯವನ್ನು ಪ್ರಾರಂಭಿಸಿದ್ದು, ಉತ್ತಮ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರವನ್ನು ವ್ಯಾಪಾರಸ್ಥರು ಮಾರಾಟ ಮಾಡಬೇಕು. ಲಾಭದ ಆಸೆಗಾಗಿ ಕಳಪೆ ಗುಣಮಟ್ಟದ ಬೀಜ-ಗೊಬ್ಬರ ಮಾರಾಟ ಮಾಡಿದರೆ ಅಥವಾ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿಗೆ ಮಾರಾಟ ಮಾಡಿದರೆ ಅಂತಹವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್‌ ಅಮರೇಶ್ ಜಿ.ಕೆ. ತಿಳಿಸಿದ್ದಾರೆ.

VISTARANEWS.COM


on

Vijayanagara News Distribute good quality sowing seeds and fertilizers says Tehsildar Amaresh G K
Koo

ಕೊಟ್ಟೂರು: ಈ ಬಾರಿ ಪೂರ್ವ ಮುಂಗಾರು ಉತ್ತಮ ಮಳೆಯಾಗುತ್ತಿದ್ದು, ಕಳೆದ ಬಾರಿಯ ರೈತರ ನೋವನ್ನು ಮರೆಸಿ ಸ್ವಲ್ಪ ಸಂತಸವನ್ನು ತಂದಿದೆ. ರೈತರು ಬಿತ್ತನೆ ಕಾರ್ಯವನ್ನು ಪ್ರಾರಂಭಿಸಿದ್ದು, ಅವರಿಗೆ ಉತ್ತಮ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರವನ್ನು ವ್ಯಾಪಾರಸ್ಥರು ಮಾರಾಟ ಮಾಡಬೇಕು ಎಂದು ತಹಸೀಲ್ದಾರ್‌ ಅಮರೇಶ್ ಜಿ.ಕೆ. (Vijayanagara News) ಸೂಚಿಸಿದರು.

ಪಟ್ಟಣದ ತಾಲೂಕ ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಬುಧವಾರ ನಡೆದ ಬೀಜ/ಗೊಬ್ಬರ ಮಾರಾಟಗಾರರ ಮತ್ತು ರೈತರ ಸಭೆಯಲ್ಲಿ ಅವರು ಮಾತನಾಡಿದರು.

ರೈತರು ಬಿತ್ತನೆ ಕಾರ್ಯವನ್ನು ಪ್ರಾರಂಭಿಸಿದ್ದು, ಅವರಿಗೆ ಉತ್ತಮ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರವನ್ನು ವ್ಯಾಪಾರಸ್ಥರು ಮಾರಾಟ ಮಾಡಬೇಕು. ಲಾಭದ ಆಸೆಗಾಗಿ ಕಳಪೆ ಗುಣಮಟ್ಟದ ಬೀಜ-ಗೊಬ್ಬರ ಮಾರಾಟ ಮಾಡಿದರೆ ಅಥವಾ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿಗೆ ಮಾರಾಟ ಮಾಡಿದರೆ ಅಂತಹವರ ವಿರುದ್ಧ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: IAS Exam : ಯುಪಿಎಸ್ ಸಿ ಪರೀಕ್ಷಾ ಅಭ್ಯರ್ಥಿಗಳಿಗೆ ಉಚಿತ ತರಬೇತಿ

ವ್ಯಾಪಾರಸ್ಥರು ತಾವು ಸಂಗ್ರಹ ಮಾಡಿರುವ ಗೋದಾಮಿನ ಮುಂದೆ ತಮ್ಮ ಅಂಗಡಿಯ ಮಾಹಿತಿ ಫಲಕವನ್ನು ಹಾಕಬೇಕು. ಅಂಗಡಿಯಲ್ಲಿ ಪ್ರತಿದಿನ ಬೀಜ ಗೊಬ್ಬರದ ದಾಸ್ತಾನು ಹಾಗೂ ಧರಪಟ್ಟಿಯನ್ನು ಕಡ್ಡಾಯವಾಗಿ ಹಾಕಿರಬೇಕು. ಯಾರಾದರೂ ಗೊಬ್ಬರ ಬೀಜಗಳನ್ನು ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿ ಮಾಡಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಪ್ರಯತ್ನ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಲಾಗುವುದು. ನಿಗದಿತ ಬೆಲೆಯಲ್ಲಿ ಬೀಜ/ರಸಗೊಬ್ಬರಗಳನ್ನು ಪೂರೈಸಿ ತಾಲೂಕಿನಲ್ಲಿ ಯಾವುದೇ ರೀತಿಯ ದೂರುಗಳು ಬಾರದಂತೆ ವ್ಯಾಪಾರವನ್ನು ಮಾಡುವಂತೆ ಸಲಹೆ ನೀಡಿದರು.

ತಾಲೂಕು ಕೃಷಿ ಸಹಾಯಕ ನಿರ್ದೇಶಕ ಸುನಿಲ್ ಕುಮಾರ್ ಎಂ.ಟಿ. ಮಾತನಾಡಿ, ಡಿಎಪಿ ಮತ್ತು ಯೂರಿಯಾ ಸಹಿತ ಎಲ್ಲ ರಸಗೊಬ್ಬರಗಳು ಸಾಕಷ್ಟು ಪೂರೈಕೆ ಇದ್ದು, ಯಾವುದೇ ಒಂದು ಕಂಪನಿ/ವಿಧದ ಬೀಜ/ರಸಗೊಬ್ಬರಗಳ ಮೇಲೆ ಅವಲಂಬನೆಯಾಗದೇ ಪರ್ಯಾಯ ಬೀಜ/ರಸಗೊಬ್ಬರಗಳನ್ನು ಬಳಸುವಂತೆ ಸಲಹೆ ನೀಡಿದರು.

ಸಿಪಿಐ ವೆಂಕಟಸ್ವಾಮಿ ಮಾತನಾಡಿದರು.

ಇದನ್ನೂ ಒದಿ: IPL 2024 : ಜಿಯೋಸಿನಿಮಾದಲ್ಲಿ ದಾಖಲೆಯ 62 ಕೋಟಿಗೂ ಅಧಿಕ ವೀಕ್ಷಣೆ ಕಂಡ ಐಪಿಎಲ್​

ಸಭೆಯಲ್ಲಿ ತೋಟಗಾರಿಕೆ ಇಲಾಖೆಯ ಎಎಚ್ಒ ಅಶ್ವಿನಿ ಡಿ., ಕೃಷಿ ಅಧಿಕಾರಿ (ತಾಂತ್ರಿಕ) ನೀಲಾನಾಯ್ಕ, ಕುಮಾರಸ್ವಾಮಿ ಕೆ., ಬೀಜ ಗೊಬ್ಬರ ವ್ಯಾಪಾರಿಗಳ ಸಂಘದ ತಾಲೂಕು ಅಧ್ಯಕ್ಷ ಶ್ರೀಧರಶೆಟ್ಟಿ, ರೈತ ಮುಖಂಡರಾದ ರಾಮಪ್ಪ, ಶ್ರೀಧರ, ಜಯಪ್ರಕಾಶನಾಯ್ಕ, ಸುರೇಶನಾಯ್ಕ ಹಾಗೂ ಇತರರು ಉಪಸ್ಥಿತರಿದ್ದರು. ಸಿ.ಮ. ಗುರುಬಸವರಾಜ ನಿರ್ವಹಿಸಿದರು.

Continue Reading

ಪ್ರಮುಖ ಸುದ್ದಿ

Raitha Siri Yojana: ಸಿರಿ ಧಾನ್ಯ ಬೆಳೆಯುವವರಿಗೆ ಸಿಹಿ ಸುದ್ದಿ; ನಿಮ್ಮ ಖಾತೆಗೇ ಬರುತ್ತೆ 10 ಸಾವಿರ ರೂ.

ರೈತ ಸಿರಿ ಯೋಜನೆ (Raitha Siri Yojana) ಹಣ ನೇರವಾಗಿ ರೈತರ ಖಾತೆಗೆ ಜಮಾ ಆಗುತ್ತದೆ. ಸಿರಿಧಾನ್ಯ ಬೆಳೆ ಕುರಿತು ರೈತರಲ್ಲಿ ಅರಿವು ಮೂಡಿಸಲು ಹಂತ ಹಂತವಾಗಿ ಟ್ರೈನಿಂಗ್‌ ಕೂಡ ನೀಡಲು ಉದ್ದೇಶಿಲಾಗಿದೆ. ಈ ಯೋಜನೆಯ ಫಲಾನುಭವ ಪಡೆಯಲು ಬೇಕಾದ ಅರ್ಹತೆಗಳು ಹೀಗಿವೆ.

VISTARANEWS.COM


on

Raitha Siri Yojana
Koo

ಬೆಂಗಳೂರು: ಸಿರಿಧಾನ್ಯ (millet, Siridhanya) ಬೆಳೆಯುವ ಹಾಗೂ ಸಣ್ಣ ಪ್ರಮಾಣದ ಜಮೀನು (small land) ಹೊಂದಿರುವ ರೈತರಿಗೆ (farmers) ಸಿಹಿ ಸುದ್ದಿಯನ್ನು ಸರ್ಕಾರ ನೀಡಿದೆ. ಸಿರಿಧಾನ್ಯ ಬೆಳೆಯನ್ನು ಪ್ರೋತ್ಸಾಹಿಸುವ ಸಲುವಾಗಿ ರೈತ ಸಿರಿ ಯೋಜನೆ (Raitha Siri Yojana) ಜಾರಿಗೆ ತಂದಿದ್ದು, ಇದರಡಿಯಲ್ಲಿ ಧಾನ್ಯ ಬೆಳೆಯುವುದಕ್ಕೆ ಬೇಕಾಗಿರುವ ಬೀಜಗಳು (seeds) ಮತ್ತು ರಸಗೊಬ್ಬರ (manure) ಪೂರೈಕೆಗಾಗಿ ಸರ್ಕಾರ 10,000 ರೂ. ನೀಡಲಿದೆ.

ಈ ಹಣ ನೇರವಾಗಿ ರೈತರ ಖಾತೆಗೆ ಜಮಾ ಆಗುತ್ತದೆ. ಸಿರಿಧಾನ್ಯ ಬೆಳೆ ಕುರಿತು ರೈತರಲ್ಲಿ ಅರಿವು ಮೂಡಿಸಲು ಹಂತ ಹಂತವಾಗಿ ಟ್ರೈನಿಂಗ್‌ ಕೂಡ ನೀಡಲು ಉದ್ದೇಶಿಲಾಗಿದೆ. ಈ ಯೋಜನೆಯ ಫಲಾನುಭವ ಪಡೆಯಲು ಬೇಕಾದ ಅರ್ಹತೆಗಳು ಹೀಗಿವೆ:

  • ಅರ್ಜಿದಾರರು ಕರ್ನಾಟಕದ ಕಾಯಂ ನಾಗರಿಕರಾಗಿರಬೇಕು
  • ಅರ್ಜಿದಾರರು ವೃತ್ತಿಯಲ್ಲಿ ರೈತರಾಗಿರಬೇಕು
  • ರೈತ ಪ್ರಾಥಮಿಕವಾಗಿ ರಾಗಿ ಉತ್ಪಾದಕನಾಗಿರಬೇಕು
  • ಈ ಯೋಜನೆಗೆ ಅರ್ಹತೆ ಪಡೆಯಲು ಕನಿಷ್ಠ ಒಂದು ಹೆಕ್ಟೇರ್ ಕೃಷಿ ಆಸ್ತಿ ಅಗತ್ಯವಿದೆ

ಕರ್ನಾಟಕ ರೈತ ಸಿರಿ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಅಗತ್ಯ:

  • ಆಧಾರ್ ಕಾರ್ಡ್ ಅಥವಾ ಗುರುತಿನ ಪುರಾವೆ
  • ಅರ್ಜಿದಾರರ ಭೂಮಿಗೆ ಸಂಬಂಧಿಸಿದ ದಾಖಲೆಗಳು
  • ಶಾಶ್ವತ ನಿವಾಸಿ ಪ್ರಮಾಣಪತ್ರ
  • ವಿಳಾಸ ಪುರಾವೆ
  • ಪಡಿತರ ಚೀಟಿ
  • ಬ್ಯಾಂಕ್ ಖಾತೆ ವಿವರಗಳು
  • ಮೊಬೈಲ್ ನಂಬರ್
  • ಭೂ ದಾಖಲೆ ವಿವರಗಳು
  • ಪಾಸ್‌ಪೋರ್ಟ್ ಗಾತ್ರದ ಫೋಟೋಗಳು

ರೈತ ಸಿರಿ ಯೋಜನೆಯ ಉದ್ದೇಶ:

  • ರಾಜ್ಯದಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸುವುದು
  • ಕೃಷಿ ಕ್ಷೇತ್ರವನ್ನು ಉತ್ತೇಜಿಸುವುದು
  • ರಾಜ್ಯದ ರೈತರಿಗೆ ಆರ್ಥಿಕ ನೆರವು ನೀಡುವುದು
  • ರಾಗಿ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ 10,000 ರೂ ನೆರವು
  • ರಾಜ್ಯದ ಒಣಭೂಮಿಯಲ್ಲಿ ನೀರನ್ನು ಪುನಃಸ್ಥಾಪಿಸಲು ಕೃಷಿ ಹೊಂಡಗಳನ್ನು ನಿರ್ಮಿಸುವುದು

ಹೆಚ್ಚಿನ ಮಾಹಿತಿಗಾಗಿ https://raitamitra.karnataka.gov.in/info-2/Raita+Siri/en ಭೇಟಿ ನೀಡಿ

ಇದನ್ನೂ ಓದಿ: Headless Chicken: ತಲೆ ಕತ್ತರಿಸಿದರೂ ಈ ಕೋಳಿ 18 ತಿಂಗಳು ಬದುಕಿತ್ತು! ಸಾಯುವ ಮೊದಲು ಮಾಲೀಕನನ್ನು ಶ್ರೀಮಂತಗೊಳಿಸಿತು!

Continue Reading

ಕೃಷಿ

PM Kisan Samman: ಪಿಎಂ ಕಿಸಾನ್ ಸಮ್ಮಾನ್ 17ನೇ ಕಂತಿನ ಹಣ ಬಿಡುಗಡೆ ಯಾವಾಗ? ಪರಿಶೀಲಿಸುವುದು ಹೇಗೆ?

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ (PM Kisan Samman) ನಿಧಿ ಯೋಜನೆಯ ೧೭ನೇ ಕಂತಿನ ಹಣ ಜೂನ್ 4 ರಂದು ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ಅನಂತರ ಬಿಡುಗಡೆಯಾಗುವ ಸಾಧ್ಯತೆಯಿದೆ. ಕಿಸಾನ್ ಸಮ್ಮಾನ್ ಗಾಗಿ ಅರ್ಜಿ ಸಲ್ಲಿಸಿದ್ದರೆ ಸ್ಥಿತಿಗತಿಯನ್ನು ಒಮ್ಮೆ ಪರಿಶೀಲಿಸಿ. ಜನಸಾಮಾನ್ಯರಿಗೆ ಈ ಕುರಿತ ಸರಳ ಮಾಹಿತಿ ಇಲ್ಲಿದೆ.

VISTARANEWS.COM


on

By

PM Kisan Samman
Koo

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Samman) ಯೋಜನೆಯ 17ನೇ ಕಂತಿಗಾಗಿ (17th installment) ಫಲಾನುಭವಿ ರೈತರು (beneficiary farmers) ಕಾಯುತ್ತಿದ್ದು ಶೀಘ್ರದಲ್ಲೇ ಇದು ಬಿಡುಗಡೆಯಾಗಲಿದೆ. ಜೂನ್ 4ರಂದು (june) ನಡೆಯುವ ಲೋಕಸಭೆ ಚುನಾವಣೆಯ (loksabha election) ಫಲಿತಾಂಶ ಪ್ರಕಟವಾದ ಅನಂತರ ಇದು ಬಿಡುಗಡೆಯಾಗುವ ನಿರೀಕ್ಷೆ ಇದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 16ನೇ ಕಂತನ್ನು 2024ರ ಫೆಬ್ರವರಿ 28ರಂದು ಮಹಾರಾಷ್ಟ್ರದ ಯವತ್ಮಾಲ್‌ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು 9 ಕೋಟಿಗೂ ಹೆಚ್ಚು ರೈತರಿಗೆ 21,000 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದರು. 15 ನೇ ಕಂತಿನ ಹಣ ಕಳೆದ ನವೆಂಬರ್ ನಲ್ಲಿ ಬಿಡುಗಡೆಯಾಗಿತ್ತು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಅರ್ಹ ರೈತರು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ. ಗಳನ್ನು ಪಡೆಯುತ್ತಾರೆ, ಇದು ವಾರ್ಷಿಕವಾಗಿ 6,000 ರೂ. ಹಣವನ್ನು ಪ್ರತಿ ವರ್ಷ ಮೂರು ಕಂತುಗಳಲ್ಲಿ ಏಪ್ರಿಲ್- ಜುಲೈ, ಆಗಸ್ಟ್- ನವೆಂಬರ್ ಮತ್ತು ಡಿಸೆಂಬರ್- ಮಾರ್ಚ್ ನಲ್ಲಿ ನೀಡಲಾಗುತ್ತದೆ. ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.

ಈ ಯೋಜನೆಯನ್ನು 2019 ರ ಮಧ್ಯಂತರ ಬಜೆಟ್‌ನಲ್ಲಿ ಆಗಿನ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು ಘೋಷಿಸಿದರು. ಕಂತುಗಳನ್ನು ಸ್ವೀಕರಿಸಲು ರೈತರು ತಮ್ಮ ಇ-ಕೆವೈಸಿಯನ್ನು ಪೂರ್ಣಗೊಳಿಸಬೇಕು. ಯೋಜನೆಯ ಅಧಿಕೃತ ವೆಬ್‌ಸೈಟ್ ಪ್ರಕಾರ,ಪಿಎಂ ಕಿಸಾನ್ ನೋಂದಾಯಿತ ರೈತರಿಗೆ ಇ-ಕೆವೈಸಿ ಕಡ್ಡಾಯವಾಗಿದೆ. ಒಟಿಪಿ -ಆಧಾರಿತಇ-ಕೆವೈಸಿ ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಲಭ್ಯವಿದೆ ಅಥವಾ ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ ಗಾಗಿ ಹತ್ತಿರದ ಸಿಎಸ್ಸಿ ಕೇಂದ್ರಗಳನ್ನು ಸಂಪರ್ಕಿಸಬಹುದು.


ಪರಿಶೀಲನೆ ಹೇಗೆ?

ನೋಂದಾಯಿಸಿರುವ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಲು ಅಧಿಕೃತ ವೆಬ್‌ಸೈಟ್‌ pmkisan.gov.in ಗೆ ಭೇಟಿ ನೀಡಿ. ಪುಟದ ಬಲಭಾಗದಲ್ಲಿರುವ ‘ನಿಮ್ಮ ಸ್ಥಿತಿಯನ್ನು ತಿಳಿಯಿರಿ’ ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ. ನೋಂದಣಿ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ ಮತ್ತು ‘ಡೇಟಾ ಪಡೆಯಿರಿ’ ಎಂಬ ಆಯ್ಕೆಯನ್ನು ಆರಿಸಿ. ಬಳಿಕ ಫಲಾನುಭವಿಯ ಸ್ಥಿತಿಯು ಪರದೆಯ ಮೇಲೆ ಬರುತ್ತದೆ.

ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಪರಿಶೀಲನೆ

ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್ www.pmkisan.gov.in ಗೆ ಭೇಟಿ ನೀಡಿ ‘ಫಲಾನುಭವಿಗಳ ಪಟ್ಟಿ’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಬಳಿಕ ಡ್ರಾಪ್-ಡೌನ್‌ನಿಂದ ಆಯ್ದ ರಾಜ್ಯ, ಜಿಲ್ಲೆ, ಉಪ-ಜಿಲ್ಲೆ, ಬ್ಲಾಕ್ ಮತ್ತು ಹಳ್ಳಿಯಂತಹ ವಿವರಗಳನ್ನು ಆಯ್ಕೆ ಮಾಡಿ.ದ ಮೇಲೆ ‘ಗೆಟ್ ರಿಪೋರ್ಟ್’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಇದರ ಅನಂತರ, ಫಲಾನುಭವಿಗಳ ಪಟ್ಟಿಯ ವಿವರವನ್ನು ಪ್ರದರ್ಶಿಸಲಾಗುತ್ತದೆ.

ಈ ಮಾಹಿತಿಗಳನ್ನು ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿಯೂ ತಿಳಿದುಕೊಳ್ಳಬಹುದು. ಸಹಾಯವಾಣಿ ಸಂಖ್ಯೆ- 155261 ಮತ್ತು 011-24300606.

ಇದನ್ನೂ ಓದಿ: PSI Exam: ಪಿಎಸ್‌ಐ ಸೇರಿ 4 ಸಾವಿರ ಹುದ್ದೆಗಳ ನೇಮಕಾತಿಗೆ ಪರೀಕ್ಷಾ ದಿನಾಂಕ ಅನೌನ್ಸ್‌; ಯಾವ ದಿನಕ್ಕೆ ಯಾವ ಪರೀಕ್ಷೆ?

ಅರ್ಜಿ ಸಲ್ಲಿಸುವುದು ಹೇಗೆ?

pmkisan.gov.in ವೆಬ್ ಸೈಟ್ ಗೆ ಭೇಟಿ ನೀಡಿ, ‘ಹೊಸ ರೈತ ನೋಂದಣಿ’ ಮೇಲೆ ಕ್ಲಿಕ್ ಮಾಡಿ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ಯಾಪ್ಚಾವನ್ನು ಭರ್ತಿ ಮಾಡಿ. ಅಗತ್ಯವಿರುವ ವಿವರಗಳನ್ನು ನಮೂದಿಸಿ ಮತ್ತು ‘ಹೌದು’ ಎಂದು ಕ್ಲಿಕ್ ಮಾಡಿ. ಪಿಎಂ ಕಿಸಾನ್ ಅರ್ಜಿ ನಮೂನೆ 2024 ರಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಿ. ಅದನ್ನು ಉಳಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

Continue Reading

ಹಾಸನ

Hassan News: ಮರ ಆಧಾರಿತ ಕೃಷಿ ಮಾದರಿ ಅಳವಡಿಸಿಕೊಳ್ಳಲು ರೈತರಿಗೆ ಸಲಹೆ

Hassan News: ಈಶ ಸಂಸ್ಥೆಯ “ಕಾವೇರಿ ಕೂಗು” ಅಭಿಯಾನದಿಂದ “ಸಮೃದ್ಧ ಭವಿಷ್ಯಕ್ಕಾಗಿ ಮರ ಆಧಾರಿತ ಕೃಷಿ” ಎಂಬ ತರಬೇತಿ ಕಾರ್ಯಕ್ರಮವು ಹಾಸನದಲ್ಲಿ ಜರುಗಿತು. ತರಬೇತಿಯಲ್ಲಿ ಕೃಷಿ-ಅರಣ್ಯ ಮಾದರಿಯ ಯಶಸ್ಸಿನ ಕುರಿತು ರೈತರಿಗೆ ಜಾಗೃತಿ ಮೂಡಿಸಲಾಯಿತು.

VISTARANEWS.COM


on

Koo

ಹಾಸನ: ಈಶ ಸಂಸ್ಥೆಯ “ಕಾವೇರಿ ಕೂಗು” ಅಭಿಯಾನದಿಂದ “ಸಮೃದ್ಧ ಭವಿಷ್ಯಕ್ಕಾಗಿ ಮರ ಆಧಾರಿತ ಕೃಷಿ” ಎಂಬ ತರಬೇತಿ ಕಾರ್ಯಕ್ರಮವನ್ನು (Hassan News) ಹಾಸನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾವೇರಿ ಕೂಗು ಅಭಿಯಾನದ ಕ್ಷೇತ್ರ ಸಂಯೋಜಕ ತಮಿಳ್ ಮಾರನ್ ಮಾತನಾಡಿ, ರೈತರಿಗೆ ಮರ ಮತ್ತು ಮಣ್ಣಿನ ಸೂಕ್ತತೆ ಮತ್ತು ತೋಟದ ವಿನ್ಯಾಸದ ವಿವರಗಳ ಮೂಲ ಪರಿಕಲ್ಪನೆಗಳನ್ನು ಪರಿಚಯಿಸಿದರು. ಬಳಿಕ ಮಾತನಾಡಿದ ಅವರು, “ಕಾವೇರಿ ಕೂಗು” ಅಭಿಯಾನವು ಕೃಷಿ ಭೂಮಿಯಲ್ಲಿ ಸ್ಥಳೀಯ ಮತ್ತು ನಿಧಾನವಾಗಿ ಬೆಳೆಯುವ ಟಿಂಬರ್ ಮರಗಳನ್ನು ನೆಡಲು ರೈತರನ್ನು ಉತ್ತೇಜಿಸುತ್ತದೆ, ಆ ಮೂಲಕ ರೈತರ ಆರ್ಥಿಕ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ ಮತ್ತು ಮಣ್ಣಿನ ಜೈವಿಕ ಅಂಶವನ್ನು ಸಹ ಹೆಚ್ಚಿಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ: T20 World Cup 2024: 2ನೇ ಬ್ಯಾಚ್​ನಲ್ಲಿ ನ್ಯೂಯಾರ್ಕ್​ಗೆ ತೆರಳಿದ ಭಾರತದ ಮೂವರು ಆಟಗಾರರು

ರೈತರು ಮರ ಆಧಾರಿತ ಕೃಷಿ ಮಾದರಿಯನ್ನು ಅಳವಡಿಸಿಕೊಳ್ಳುವ ಮೂಲಕ ಮಣ್ಣಿನ ಅವನತಿ ಮತ್ತು ಹವಾಮಾನ ಬದಲಾವಣೆಯಂತಹ ಪ್ರಸ್ತುತ ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸುವ ದೇವರ ಹಾಗೆ ಎಂದು ಅಭಿಪ್ರಾಯಪಟ್ಟರು.

ತುಮಕೂರಿನ ಯಶಸ್ವಿ ರೈತ ಶಿವನಂಜಯ್ಯ ಬಾಳೇಕಾಯಿ ಮಾತನಾಡಿ, ಉತ್ತಮ ಆದಾಯ ಗಳಿಸಲು ಮರ ಆಧಾರಿತ ಕೃಷಿಯೇ ಉತ್ತಮ. ಒಂದು ವರ್ಷದಲ್ಲಿ ನಾನು ಕೇವಲ 60 ರಿಂದ 70 ಸಾವಿರ ಖರ್ಚು ಮಾಡುತ್ತೇನೆ ಮತ್ತು ಮರ ಆಧಾರಿತ ಕೃಷಿಯಿಂದ 15 ಲಕ್ಷ ಗಳಿಸುತ್ತೇನೆ ಎಂದು ಹೇಳಿದ ಅವರು, ಇದೇ ವೇಳೆ ತೋಟದ ಗಡಿಯಲ್ಲಿರುವ ಟಿಂಬರ್ ಮರಗಳೊಂದಿಗೆ ವಿವಿಧ ಬೆಳೆಗಳನ್ನು ಬೆಳೆಯಲು ಸೂರ್ಯನ ಬೆಳಕನ್ನು ಬಳಸುವ ಬಗ್ಗೆಯೂ ವಿವರವಾಗಿ ಮಾತನಾಡಿದರು.

ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಸಿಲ್ವಿಕಲ್ಚರ್ ವಿಭಾಗದ ಮುಖ್ಯಸ್ಥ ಡಾ. ರಾಮಕೃಷ್ಣ ಹೆಗಡೆ ತಾಂತ್ರಿಕ ತರಬೇತಿಯ ನೇತೃತ್ವ ವಹಿಸಿ ಮಾತನಾಡಿ, ಮರದ ಸಸಿಗಳನ್ನು ನೆಡುವ ಪೂರ್ವ ಮತ್ತು ನಂತರದ ವೈಜ್ಞಾನಿಕ ವಿಧಾನಗಳ ಕುರಿತು ಚರ್ಚಿಸಿದರು.

ಇದನ್ನೂ ಓದಿ: Drain Pipe collapse: 700 ಮೀಟರ್‌ ಉದ್ದದ ಕಬ್ಬಿಣದ ಪೈಪ್ ಕುಸಿತ; ವಾಹನಗಳು ಸಂಪೂರ್ಣ ಜಖಂ; ವಿಡಿಯೋ ವೈರಲ್‌

ಈ ವೇಳೆ ಮಾತನಾಡಿದ ಡಾ. ರಾಮಕೃಷ್ಣ ಹೆಗಡೆ, ಭಾರತೀಯ ಮಾರುಕಟ್ಟೆಯಲ್ಲಿ ಟಿಂಬರ್ ಮರಗಳ ಬೇಡಿಕೆ ತುಂಬಾ ಹೆಚ್ಚಾಗಿದೆ; ಈ ಬೇಡಿಕೆಯನ್ನು ಪೂರೈಸುವಲ್ಲಿ ನಾವು ಕೊರತೆಯನ್ನು ಎದುರಿಸುತ್ತಿದ್ದೇವೆ. ರೈತರು ಮಾತ್ರ ಈ ಬೇಡಿಕೆಯನ್ನು ಪೂರೈಸಬಹುದು ಎಂದು ತಿಳಿಸಿದ ಅವರು, ಮರ ಆಧಾರಿತ ಕೃಷಿಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಅನುಸರಿಸುವುದರಿಂದ ಲಾಭದಾಯಕ ಆದಾಯವನ್ನು ಗಳಿಸಬಹುದು ಎಂದು ಹೇಳಿದರು.

ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಕೀಟಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕೆಂಚ ರೆಡ್ಡಿ ಅವರು ಕಾಡು ಮರಗಳು ಮತ್ತು ಇತರ ಬೆಳೆಗಳ ಜತೆಗೆ ಜೇನು ಕೃಷಿಯನ್ನು ಮಾಡುವ ಕುರಿತು ವಿವರಿಸಿದರು.

ಮರ ಆಧಾರಿತ ಕೃಷಿಯ ಕುರಿತು ಮಾತನಾಡಿದ ದಯಾನಂದ, ನಾನು 40 ವರ್ಷಗಳ ಹಿಂದೆ 100 ತೇಗದ ಮರಗಳನ್ನು ನೆಟ್ಟಿದ್ದೆ, ಕೆಲವು ತಿಂಗಳ ಹಿಂದೆ 10 ಲಕ್ಷ ಮೌಲ್ಯದ 6-8 ಮರಗಳನ್ನು ಕಟಾವು ಮಾಡಿದ್ದೇನೆ. ನಾನು ಈ ಮರಗಳನ್ನು ನನ್ನ ಮಗಳಿಗೆ ಅವಳ ಹೊಸ ಮನೆಯನ್ನು ನಿರ್ಮಿಸಲು ಉಡುಗೊರೆಯಾಗಿ ನೀಡಿದೆ. ಉಳಿದ ಮರಗಳಿಂದ ನಾನು ಇನ್ನೂ 1 ಕೋಟಿ ರೂ. ಗಳಿಸಬಹುದು ಎಂದು ತಿಳಿಸಿದರು.

ಇದನ್ನೂ ಓದಿ: Traffic Violation : ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ವಾಹನ ನಿಂತುಬಿಟ್ಟರೆ ಚಾಲಕನ ಮೇಲೆ ಕೇಸ್!

ತರಬೇತಿಯಲ್ಲಿ ಕೃಷಿ-ಅರಣ್ಯ ಮಾದರಿಯ ಯಶಸ್ಸಿನ ಕುರಿತು ರೈತರಿಗೆ ಜಾಗೃತಿ ಮೂಡಿಸಲಾಯಿತು.

Continue Reading
Advertisement
Kichcha Sudeep joined hands with Sandesh
ಸ್ಯಾಂಡಲ್ ವುಡ್6 mins ago

Kiccha Sudeep: ಸಂದೇಶ್‌ ಪ್ರೊಡಕ್ಷನ್ಸ್‌ ಜತೆ ಕೈ ಜೋಡಿಸಿದ ಕಿಚ್ಚ ಸುದೀಪ್

Prajwal Revanna Case
ಕರ್ನಾಟಕ21 mins ago

Prajwal Revanna Case: ವಿಚಾರಣೆಯಲ್ಲಿ ಬಾಯಿಬಿಡದ ಪ್ರಜ್ವಲ್‌; ಸ್ಥಳ ಮಹಜರಿಗಾಗಿ ಹೊಳೆನರಸೀಪುರಕ್ಕೆ ಕರೆದೊಯ್ಯಲು ಸಿದ್ಧತೆ

Cow Smuggling
ಕ್ರೈಂ50 mins ago

Cow Smuggling : ಕಂಟೇನರ್‌, ಮಿಲ್ಕ್‌ ವ್ಯಾನ್‌ನಲ್ಲಿತ್ತು 70ಕ್ಕೂ ಹೆಚ್ಚು ಜಾನುವಾರು; ಹಿಂಸೆ ಕೊಟ್ಟವರು ಅರೆಸ್ಟ್‌

Gautam Gambhir
ಕ್ರೀಡೆ1 hour ago

Gautam Gambhir: ಗೌತಮ್​ ಗಂಭೀರ್​ ಭಾರತದ ಮುಂದಿನ ಕೋಚ್​; ಅಧಿಕೃತ ಘೋಷಣೆಯೊಂದೇ ಬಾಕಿ

Rameshwaram Cafe food on Anant Ambani, Radhika Merchant
ಸಿನಿಮಾ1 hour ago

Rameshwaram Cafe: ಅನಂತ್ ಅಂಬಾನಿ ಎರಡನೇ ಪ್ರಿ ವೆಡ್ಡಿಂಗ್‌ನಲ್ಲಿ ಮೇನ್‌ ಮೆನು ರಾಮೇಶ್ವರಂ ಕೆಫೆಯ ಪುಡಿ ಇಡ್ಲಿ ಮತ್ತು ಪುಡಿ ದೋಸೆ!

Family Fighting in Belgavi
ಬೆಳಗಾವಿ1 hour ago

Family Fighting : ಜಮೀನಿನ ವಿಚಾರದಲ್ಲಿ ಕುಟುಂಬಗಳ ಫೈಟ್; ಕುಡುಗೋಲು, ದೊಣ್ಣೆ ಹಿಡಿದು ಮಾರಾಮಾರಿ

Valmiki Corporation Scam
ಕರ್ನಾಟಕ1 hour ago

Valmiki Corporation Scam: ಮೃತ ಅಧೀಕ್ಷಕ ಚಂದ್ರಶೇಖರನ್‌ ಪತ್ನಿ ಅಸ್ವಸ್ಥ; ಆಸ್ಪತ್ರೆಗೆ ದಾಖಲು

prashant kishor
ಪ್ರಮುಖ ಸುದ್ದಿ1 hour ago

Lok Sabha Election 2024: ಈಗಲೂ ಹೇಳ್ತೇನೆ ಕೇಳಿ, ಬಿಜೆಪಿಯೇ ಗೆಲ್ಲೋದು! ಎಕ್ಸಿಟ್ ಪೋಲ್‌ಗೆ ಮೊದಲು ಪ್ರಶಾಂತ್ ಕಿಶೋರ್ ಫೈನಲ್ ಲೆಕ್ಕಾಚಾರ ಹೀಗಿದೆ!

IndiGo Flight
ದೇಶ1 hour ago

IndiGo Flight: ಮತ್ತೊಂದು ಹುಸಿ ಬಾಂಬ್‌ ಕರೆ; ಮುಂಬೈಯಲ್ಲಿ ಇಂಡಿಗೋ ವಿಮಾನದ ತುರ್ತು ಲ್ಯಾಂಡಿಂಗ್‌

bhavani revanna SIT team
ಪ್ರಮುಖ ಸುದ್ದಿ2 hours ago

Bhavani Revanna: ಮಗ ಬಂದ, ಅಮ್ಮ ನಾಪತ್ತೆ! ಮನೆಯಿಂದ ಮಾಯವಾದ ಭವಾನಿ ರೇವಣ್ಣ; ಕಾದು ಕುಳಿತ ಎಸ್‌ಐಟಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ4 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 weeks ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌