ತಂತ್ರಜ್ಞಾನ: ಕಾರು ಖರೀದಿಗೆ ಪರಿಗಣಿಸುವ 3 ಹೊಸ ಅಂಶಗಳು ನಿಮಗೆ ಗೊತ್ತೆ? - Vistara News

ತಂತ್ರಜ್ಞಾನ

ತಂತ್ರಜ್ಞಾನ: ಕಾರು ಖರೀದಿಗೆ ಪರಿಗಣಿಸುವ 3 ಹೊಸ ಅಂಶಗಳು ನಿಮಗೆ ಗೊತ್ತೆ?

ಕಾರು ಖರೀದಿಸುವಾಗ ದರ, ಮೈಲೇಜ್‌ಇಂತಲೂ ಹೆಚ್ಚಾಗಿ ಇನ್ಫೋಟೈನ್ಮೆಂಟ್‌, ಸುರಕ್ಷತೆ, ಆರಾಮದಾಯಕ ಪ್ರಯಾಣದತ್ತ ಗ್ರಾಹಕರು ಗಮನ ನೀಡುತ್ತಿದ್ದಾರೆ

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಾನೊಂದು ಕಾರು ಖರೀದಿಸಿದೆ ಎಂದು ಹೇಳಿದರೆ, “ಎಷ್ಟು ಮೈಲೇಜ್‌ ಕೊಡುತ್ತೆ?” ಎಂದು ಕೇಳುವ ಪರಿಪಾಠ ಭಾರತದಲ್ಲಿ ಕೆಲ ವರ್ಷಗಳ ಹಿಂದೆ ಇತ್ತು. ಹಳೆಯ ಅಭ್ಯಾಸದ ಮೇಲೆ ಈಗಲೂ ಕೆಲವರು ಈ ಪ್ರಶ್ನೆ ಕೇಳುತ್ತಾರಾದರೂ ತಂತ್ರಜ್ಞಾನದ ಬೆಳವಣಿಗೆ ಕಾರಣಕ್ಕೆ ಈ ಮನಃಸ್ಥಿತಿ ಸಂಪೂರ್ಣ ಬದಲಾಗಿದೆ. ಕಾರು ಎಂದರೆ ಕೇವಲ ಮೈಲೇಜ್‌ ಅಲ್ಲ, ಅದನ್ನೂ ಮೀರಿದ ಮತ್ತೂ ಅನೇಕ ವಿಚಾರಗಳು ಈಗ ಹೊರಹೊಮ್ಮಿವೆ.

ಎಷ್ಟು ಕೊಟ್ರಿ? ಎಂದು ಕೇಳುತ್ತಿದ್ದ ಕಾಲ

ಕಾರು ಖರೀದಿಸಲು ಭಾರತದಲ್ಲಿ ವಿಶೇಷವಾಗಿ ಪರಿಗಣನೆ ಆಗುತ್ತಿದ್ದದ್ದು ಎರಡು ಅಂಶ. ಮೊದಲನೆಯದು ಮೈಲೇಜ್‌ ಆದರೆ ಅದರ ಜತೆಗೇ ಏಳುತ್ತಿದ್ದ ಇನ್ನೊಂದು ಪ್ರಶ್ನೆ, ಕಾರಿನ ದರ. ಕಾರಿನ ದರ ಒಂದು ಬಾರಿ ಖರ್ಚಾಗುವಂಥದ್ದು. ಒಂದು ಬಾರಿಗೆ ನನ್ನ ಜೇಬಿನಲ್ಲಿ ಎಷ್ಟು ಹಣ ಇರಬೇಕು, ಎಷ್ಟು ಸಾಲ ಮಾಡಬೇಕು ಎಂದು ಆಲೋಚಿಸಲು ಇದು ಸಹಾಯವಾಗುತ್ತಿತ್ತು. ಕಾರು ಎಂದರೆ ಅತ್ಯಂತ ಶ್ರೀಮಂತರು ಮಾತ್ರವೇ ಖರೀದಿಸಬಹುದು ಎಂಬಂತಿತ್ತು. ಆದರೆ ಮಾರುತಿ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟ ಕೂಡಲೆ ಈದು ಸಂಪೂರ್ಣ ಬದಲಾಯಿತು. ಮಧ್ಯಮ ವರ್ಗದ ಜನರೂ ಕಾರನ್ನು ಖರೀದಿಸಬಹುದು ಎಂದಾಯಿತು. ಇದೇ ಕಾರಣಕ್ಕೆ ಭಾರತದಲ್ಲಿ ಕಾರು ಉತ್ಪಾದನೆ ಕಂಪನಿಗಳು ಉತ್ಪನ್ನದ ದರ ಕಡಿಮೆ ಮಾಡಲು ಅನೇಕ ಸರ್ಕಸ್‌ ಮಾಡುತ್ತಿದ್ದವು. ಅನೇಕ ಬಾರಿ ಗುಣಮಟ್ಟದಲ್ಲಿ, ಸುರಕ್ಷತಾ ಸೌಲಭ್ಯಗಳಲ್ಲಿಯೂ ರಾಜಿ ಮಾಡಿಕೊಳ್ಳುತ್ತಿದ್ದವು. ಭಾರತೀಯರಿಗೆ ಒಟ್ಟು ಕಾರು ಬಂದರೆ ಸಾಕಿತ್ತು, ಅದಕ್ಕೆ ತಕ್ಕಂತೆ ಕಂಪನಿಗಳು ಕಾಸಗೆ ತಕ್ಕ ಕಜ್ಜಾಯ ನೀಡುತ್ತಿದ್ದವು.

  1. ಇನ್ಫೋಟೈನ್ಮೆಂಟ್‌: ಕಾರು ಎಂದರೆ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಸಂಚರಿಸಲು ಖರೀದಿಸುವ ಒಂದು ಯಾತ್ರಿಕ ಉಪಕರಣ ಎನ್ನುವಂತಿತ್ತು. ಕ್ಯಾಸೆಟ್‌ ಹಾಡು ಕೇಳಲು ಒಂದು ಪ್ಲೇಯರ್‌ ಇರುತ್ತಿತ್ತು. ನಂತರ ಈ ಸ್ಥಾನಕ್ಕೆ ಸಿಡಿ, ಡಿವಿಡಿ, ಪೆನ್‌ ಡ್ರೈವ್‌, ಎಫ್‌ಎಂಗಳೂ ಸೇರಿಕೊಂಡವು. ಆದರೆ ಇತ್ತೀಚಿನ ದಿನಗಗಳಲ್ಲಿ ಗ್ರಾಹಕರು ಗುಣಮಟ್ಟದ ಕುರಿತು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಡಾಲ್ಬಿ, ಹರ್ಮನ್‌ನಂತಹ ಬ್ರ್ಯಾಂಡೆಡ್‌ ಕಂಪನಿಗಳ ಉಪಕರಣ, ಸೌಲಭ್ಯಗಳ ಮೂಲಕವೇ ಸಂಗೀತವನ್ನು ಕೇಳಬೇಕು ಎಂಬ ಮನಃಸ್ಥಿತಿ ಹೆಚ್ಚುತ್ತಿದೆ. ಜತೆಗೆ ವಿಡಿಯೋ ನೋಡುವಿಕೆಯಲ್ಲೂ ಎಚ್‌ಡಿ ಸೌಲಭ್ಯವನ್ನು ಕೇಳುತ್ತಿದ್ದಾರೆ. ಅದರ ಜತೆಗೆ, ಬಟನ್‌ಗಳ ಬದಲಿಗೆಟಚ್‌ಸ್ಕ್ರೀನ್‌ ಬೇಡಿಕೆ ಹೆಚ್ಚಾಗುತ್ತಿದೆ.
  2. ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌: ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ, ಯುದ್ಧೋಪಕರಣಗಳ ಕ್ಷೇತ್ರಗಳಲ್ಲಿ ಕೇಳಿಬರುತ್ತಿದ್ದ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌(ಕೃತಕ ಬುದ್ಧಿಮತ್ತೆ) ಆಟೊಮೊಬೈಲ್‌ ಕ್ಷೇತ್ರಕ್ಕೂ ಕಾಲಿಟ್ಟಿದೆ. ಕೃತಕ ಬುದ್ಧಿಮತ್ತೆಯನ್ನು ಬಳಸಿ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲಾಗುತ್ತಿದೆ. ಕಾರಿನ ಹಿಂಬದಿ ಕ್ಯಾಮೆರಾದಲ್ಲಿ ವಿಡಿಯೋ ಮಾತ್ರ ಕಾಣಿಸುತ್ತಿತ್ತು. ಈಗ ಆ ಕ್ಯಾಮೆರಾವನ್ನು ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಜತೆಗೆ ಸೇರಿಸಲಾಗಿದ್ದು, ಹಿಂಬದಿಯಲ್ಲಿರುವ ವಸ್ತು ಅಥವಾ ವ್ಯಕ್ತಿ ಎಷ್ಟು ದೂರದಲ್ಲಿದ್ದಾರೆ ಎನ್ನುವುದನ್ನು ತೋರಿಸುತ್ತದೆ. ಎಸಿ ಆನ್‌ ಮಾಡುವುದು, ಹಾಡನ್ನು ಬದಲಾಯಿಸುವುದು, ದೂರವಾಣಿ ಕರೆ ಸ್ವೀಕರಿಸುವಂತಹ ಕೆಲಸಕ್ಕೆ ವಾಯ್ಸ್‌ ಕಮಾಂಡಿಂಗ್‌ ಸೌಲಭ್ಯ ಇದೀಗ ಜನಪ್ರಿಯವಾಗುತ್ತಿದೆ.
  3. ಅಡಾಸ್‌ ಜನಪ್ರಿಯತೆ: ಕಾರನ್ನು ಚಲಾಯಿಸುವಾಗ ಪ್ರಯಾಣಿಕರ ಹಾಗೂ ಚಾಲಕರ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಅನೇಕ ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತಿದೆ. ಅದರಲ್ಲಿ ಆಧುನಿಕ ಚಾಲಕ ಸಹಾಯಕ ವ್ಯವಸ್ಥೆಯೂ(ಎಡಿಎಎಸ್‌-ಅಡಾಸ್‌) ಸಹ ಒಂದು. ಕಾರು ಚಲಾಯಿಸುವಾಗ ಅಪಘಾತಗಳನ್ನು ತಪ್ಪಿಸಲು ಅನೇಕ ವ್ಯವಸ್ಥೆಗಳನ್ನು ಸೇರಿಸಲಾಗುತ್ತಿದೆ. ಅಕ್ಕಪಕ್ಕದಲ್ಲಿ ಚಲಿಸುತ್ತಿರುವ ಕಾರುಗಳಿಂದ ಸುರಕ್ಷಿತ ದೂರ ಕಾಪಾಡಿಕೊಳ್ಳುವುದರಿಂದ ಮೊದಲುಗೊಂಡು, ಚಾಲಕರಿಗೆ ಅನುಕೂಲವಾಗುವ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಚಾಲಕರು ಸುಲಭವಾಗಿ ಕುಳಿತು ಡ್ರೈವ್‌ ಮಾಡಲು ಅಗತ್ಯ ಸ್ಥಳಾವಕಾಶ, ಉತ್ತಮ ಆಸನಗಳು, ಸ್ಟೀರಿಂಗ್‌ ನಿಯಂತ್ರಣದಲ್ಲಿ ಗುಣಮಟ್ಟ ಹೆಚ್ಚಳ ಮಾಡಲಾಗುತ್ತಿದೆ.

ಇಂತಹ ಅನೇಕ ತಂತ್ರಜ್ಞಾನಾಧಾರಿತ ವ್ಯವಸ್ಥೆಗಳು ಆಟೋಮೊಬೈಲ್‌ ಕ್ಷೇತ್ರವನ್ನು ಸಂಪೂರ್ಣ ಬದಲಾಯಿಸಿವೆ. ನಿಮ್ಮ ಕಾರಿಗೆ ಬೆಲೆ ಎಷ್ಟು? ಎಷ್ಟು ಮೈಲೇಜ್‌ ಕೊಡುತ್ತದೆ? ಎನ್ನುವುದಕ್ಕಿಂತಲೂ ಮುಖ್ಯವಾಗಿ ನಿಮ್ಮ ಕಾರಿನಲ್ಲಿ ಹರ್ಮನ್‌ ಕಂಪನಿಯ ಮ್ಯೂಸಿಕ್‌ ಸಿಸ್ಟಂ ಇದೆಯ? ಏರ್‌ಬ್ಯಾಗ್ಸ್‌ ಇದೆಯ? ಟ್ಯೂಬ್‌ಲೆಸ್‌ ಟೈರ್‌ ಇದೆಯ? ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಬಳಕೆ ಮಾಡಿದ್ದಾರ ಎಂದು ಕೇಳುವ ಪ್ರವೃತ್ತಿ ಹೆಚ್ಚಾಗುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Artificial Intelligence: 98 ವಿವಿಧ ಭಾಷೆಗಳಲ್ಲಿ ಹನುಮಾನ್‌ AI ತಂತ್ರಜ್ಞಾನ; ಏನಿದರ ವಿಶೇಷ?

Artificial Intelligence:ಹನುಮಾನ್ AI ಇನ್ನೂ ಡೆವಲಪಿಂಗ್‌ ಹಂತದಲ್ಲಿದ್ದು, ಇದರ ಹೊಸ ಆವೃತಿ ಶೀಘ್ರದಲ್ಲೇ ಬರಲಿದೆ. ಪ್ಲಾಟ್‌ಫಾರ್ಮ್ ತನ್ನ ಮೊದಲ ವರ್ಷದಲ್ಲಿ 200 ಮಿಲಿಯನ್ ಬಳಕೆದಾರರನ್ನು ತಲುಪುವ ಗುರಿಯನ್ನು ಹೊಂದಿದೆ. SML ಇಂಡಿಯಾ ಇದಕ್ಕಾಗಿ HP, NASSCOM ಮತ್ತು Yotta ನೊಂದಿಗೆ ಪಾಲುದಾರಿಕೆ ಹೊಂದಿದೆ.

VISTARANEWS.COM


on

Artificial Intelligence
Koo

ನವದೆಹಲಿ: ಭಾರತದಲ್ಲಿ ಇದೇ ಮೊದಲ ಬಾರಿಗೆ ಸುಮಾರು 98 ವಿವಿಧ ಭಾಷೆಗಳಲ್ಲಿ ಬಹುಭಾಷೆಯ ಎಐ ತಂತ್ರಜ್ಞಾನ(Artificial Intelligence) ಹನುಮಾನ್‌(Hanuman) ಅನ್ನು ಅನಾವರಣಗೊಳಿಸಿದೆ. 3AI ಹೋಲ್ಡಿಂಗ್‌ ಲಿಮಿಟೆಡ್‌(3AI Holding limited) ಮತ್ತು ಎಸ್‌ಎಂಎಲ್‌ ಭಾರತ ಜೊತೆಗೂಡಿಗೊಂಡು ಅನಾವರಣ ಮಾಡಿರುವ ಈ ಹನುಮಾನ್‌ AI ತಂತ್ರಜ್ಞಾನ 12 ಭಾರತೀಯ ಭಾಷೆಗಳಲ್ಲೂ ಲಭ್ಯವಿದೆ. ಈ ಹೊಸ ತಂತ್ರಜ್ಞಾನ ಎಲ್ಲಾ ಬಳಕೆದಾರರಿಗೆ ಲಭ್ಯವಿದ್ದು, ಮೊಬೈಲ್‌ ಫೋನ್‌ ಮೂಲಕ ನೀವು ನೋಂದಣಿ ಪಡೆಯಬಹುದಾಗಿದೆ. ಟೆಕ್ಸ್ಟ್‌ ಪ್ರತಿಕ್ರಿಯೆಗಳನ್ನು ಸೃಷ್ಟಿಸುವಷ್ಟಕ್ಕೆ ಮಾತ್ರ ಈ ತಂತ್ರಜ್ಞಾನ ಸದ್ಯಕ್ಕೆ ಸೀಮಿತವಾಗಿದೆ.

ಹನುಮಾನ್ AI ಇನ್ನೂ ಡೆವಲಪಿಂಗ್‌ ಹಂತದಲ್ಲಿದ್ದು, ಇದರ ಹೊಸ ಆವೃತಿ ಶೀಘ್ರದಲ್ಲೇ ಬರಲಿದೆ. ಪ್ಲಾಟ್‌ಫಾರ್ಮ್ ತನ್ನ ಮೊದಲ ವರ್ಷದಲ್ಲಿ 200 ಮಿಲಿಯನ್ ಬಳಕೆದಾರರನ್ನು ತಲುಪುವ ಗುರಿಯನ್ನು ಹೊಂದಿದೆ. SML ಇಂಡಿಯಾ ಇದಕ್ಕಾಗಿ HP, NASSCOM ಮತ್ತು Yotta ನೊಂದಿಗೆ ಪಾಲುದಾರಿಕೆ ಹೊಂದಿದೆ. ಯೊಟ್ಟಾ ಸಂಸ್ಥೆ GPU ಕ್ಲೌಡ್ ಮೂಲಸೌಕರ್ಯವನ್ನು ಒದಗಿಸುತ್ತದೆ, NASSCOM ಜೊತೆಗಿನ ಪಾಲುದಾರಿಕೆಯು AI ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸುವ ಮತ್ತು 3000 ಕಾಲೇಜುಗಳೊಂದಿಗೆ ತೊಡಗಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಇಂಗ್ಲಿಷ್ ಮತ್ತು ತೆಲುಗು ನಡುವೆ ತಡೆರಹಿತ ಅನುವಾದಕ್ಕಾಗಿ ಕಂಪನಿಯು ತೆಲಂಗಾಣ ಸರ್ಕಾರ ಮತ್ತು ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ (DARPG) ಯೊಂದಿಗೆ ಸಹ ಸಹಯೋಗ ಮಾಡಿಕೊಂಡಿದೆ.

ಇದನ್ನೂ ಓದಿ:K.S. Rajanna: ಛಲಬಿಡದ ಸಾಧಕನಿಗೆ ಪದ್ಮಶ್ರೀ ಗರಿ; ಅಂಗವೈಕಲ್ಯ ಮೆಟ್ಟಿನಿಂತ ಕನ್ನಡಿಗನಿಗೆ ದೇಶದ ನಮನ- ವೀಡಿಯೋ ವೈರಲ್‌

ಈ ತಂತ್ರಜ್ಞಾನ ಪ್ರಸ್ತುತ 12 ಭಾರತೀಯ ಭಾಷೆಗಳಲ್ಲಿ ಮತ್ತು ಹಲವಾರು ಜಾಗತಿಕ ಭಾಷೆಗಳಲ್ಲಿ ಲಭ್ಯವಿದೆ. 3AI ಹೋಲ್ಡಿಂಗ್‌ನ ತಂತ್ರಜ್ಞಾನದಿಂದ ನಡೆಸಲ್ಪಡುವ ಪ್ಲಾಟ್‌ಫಾರ್ಮ್ ಸ್ಪಷ್ಟ, ಹೊಂದಾಣಿಕೆಯ ಒಳನೋಟಗಳನ್ನು ನೀಡುತ್ತದೆ ಮತ್ತು ಸಂಕೀರ್ಣ ಡೇಟಾವನ್ನು ಕೃತಕ ಬುದ್ದಿಮತ್ತೆ(AI) ಆಗಿ ಪರಿವರ್ತಿಸುತ್ತದೆ. ಆರೋಗ್ಯ, ಆಡಳಿತ, ಹಣಕಾಸು ಸೇವೆಗಳು ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಹನುಮಾನ್ AI ಪೂರೈಸುವ ಗುರಿಯನ್ನು ಹೊಂದಿದೆ. 3AI ಹೋಲ್ಡಿಂಗ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಅರ್ಜುನ್ ಪ್ರಸಾದ್ ಪ್ರತಿಕ್ರಿಯಿಸಿದ್ದು, AI ಅನ್ನು ಪ್ರತಿಯೊಬ್ಬ ಭಾರತೀಯನಿಗೂ ಪರಿಚಯಿಸುವುದೇ ನಮ್ಮ ಗುರಿ ಎಂದು ಹೇಳಿದ್ದಾರೆ.

ಕೃತಕ ಬುದ್ಧಿಮತ್ತೆ ಎಂದರೇನು?

ಸಾಮಾನ್ಯವಾಗಿ ಬುದ್ಧಿಮತ್ತೆಯನ್ನು ಮಾನವನ ಮಿದುಳಿನ ಸಾಮರ್ಥ್ಯ ಮತ್ತು ಅದರ ಕಾರ್ಯಾಚರಣೆಗಳಿಗೆ ಸಂಬಂಧಿಸಿ ವ್ಯಾಖ್ಯಾನಿಸಲಾಗಿದೆ. ಮೂಲಭೂತವಾಗಿ ಬುದ್ಧಿಮತ್ತೆಯನ್ನು ವ್ಯಕ್ತಿಯ ಅಥೆìçಸಿಕೊಳ್ಳುವ ಸಾಮರ್ಥಯವೆಂದೂ ಪರಿಗಣಿಸಲಾಗಿದೆ. ಬುದ್ಧಿಮತ್ತೆಯಲ್ಲಿ ಹಲವು ವಿಧಗಳಿವೆ. ವ್ಯಕ್ತಿಯಿಂದ ವ್ಯಕ್ತಿಗೆ ಅದು ಭಿನ್ನವಾಗಿದೆ. ಮಾನವ ಮಿದುಳಿನ ಬುದ್ಧಿಮತ್ತೆಯನ್ನು “ಸಾಮಾನ್ಯ ಬುದ್ಧಿಮತ್ತೆ’ (General intelligence) ಎನ್ನಲಾಗಿದೆ. ಇದು ದೇವರು ಮಾನವನಿಗೆ ನೀಡಿದ ವರವೂ ಹೌದು. ಕೃತಕ ಬುದ್ಧಿಮತ್ತೆಯ ಗುಣಲಕ್ಷಣ, ಸ್ವಭಾವ ಮತ್ತು ಕಾರ್ಯಚರಣೆಗಳು ಸಂಪೂರ್ಣವಾಗಿ ಭಿನ್ನವಾಗಿರುವುದು ಮಾತ್ರವಲ್ಲದೆ ಅದನ್ನು ಅರಗಿಸಿಕೊಳ್ಳಲು ಹರಸಾಹಸ ಪಡಬೇಕು. ತೀರಾ ಸರಳವಾಗಿ ಕೃತಕ ಬುದ್ಧಿಮತ್ತೆಯನ್ನು ಯಂತ್ರ ಕಲಿಕೆಗೆ (Machine Learning) ತತ್ಸಮಾನಗೊಳಿಸಲಾಗಿದೆ. ಕೃತಕ ಮಿದುಳಿನಿಂದ ನಿರ್ಮಿಸಿದ ಮಾನವ ಯಂತ್ರಗಳು ಮಾನವನ ಹಾಗೆ ಚಿಂತಿಸಿ, ಮಾನವ ರೀತಿಯ ಕಾರ್ಯ ಚಟುವಟಿಕೆಗಳನ್ನು ನಡೆಸುವುದನ್ನು ನೋಡಿದಾಗ ನಿಬ್ಬೆರಗಾಗುತ್ತೇವೆ.

Continue Reading

ತಂತ್ರಜ್ಞಾನ

Reliance Jio: ಜಿಯೋಫೈಬರ್, ಏರ್ ಫೈಬರ್ ಗ್ರಾಹಕರಿಗೆ ಆಫರ್‌; 15 ಒಟಿಟಿ ಅಪ್ಲಿಕೇಷನ್‌ ಜತೆಗೆ 888 ರೂ. ಪೋಸ್ಟ್ ಪೇಯ್ಡ್ ಪ್ಲಾನ್

Reliance Jio: ರಿಲಯನ್ಸ್ ಜಿಯೋದಿಂದ ಜಿಯೋಫೈಬರ್ ಹಾಗೂ ಜಿಯೋ ಏರ್ ಫೈಬರ್ ಗ್ರಾಹರಿಗಾಗಿ ಹೊಸ ಪೋಸ್ಟ್ ಪೇಯ್ಡ್ ಯೋಜನೆಯನ್ನು ಪರಿಚಯಿಸಲಾಗಿದ್ದು, ಒಟಿಟಿ ಪ್ಲಾಟ್ ಫಾರ್ಮ್‌ಗಳನ್ನು ಅತಿ ಹೆಚ್ಚು ಬಳಕೆ ಮಾಡುವವರಿಗೆ, ಇಷ್ಟ ಪಡುವವರಿಗೆ ಇದು ಹೇಳಿ ಮಾಡಿಸಿದ ಯೋಜನೆಯಾಗಿದೆ. ಈ ಪ್ಲಾನ್‌ಗೆ ತಿಂಗಳಿಗೆ 888 ರೂ. ಆಗಲಿದ್ದು, ಜಿಯೋಫೈಬರ್ ಹಾಗೂ ಜಿಯೋ ಏರ್ ಫೈಬರ್ ಗ್ರಾಹರಿಗಾಗಿ ಲಭ್ಯವಿದೆ. ಪೋಸ್ಟ್ ಪೇಯ್ಡ್ ಒಟಿಟಿ ಜತೆಗೂಡಿ ಬರುತ್ತದೆ. ಇದರ ಅಡಿಯಲ್ಲಿ ಗ್ರಾಹಕರು 15 ಪ್ರೀಮಿಯಂ ಒಟಿಟಿ ಅಪ್ಲಿಕೇಷನ್‌ಗಳನ್ನು ಪಡೆಯಲಿದ್ದು, ಅನಿಯಮಿತ ಡೇಟಾ ಸಹ ದೊರೆಯುತ್ತಿದೆ.

VISTARANEWS.COM


on

888 rupees postpaid plan with 15 OTT applications for JioFiber AirFiber customers
Koo

ನವದೆಹಲಿ: ಜಿಯೋಫೈಬರ್ (Jio Fiber) ಹಾಗೂ ಜಿಯೋ ಏರ್ ಫೈಬರ್ (Jio Air Fiber) ಗ್ರಾಹಕರಿಗಾಗಿ ರಿಲಯನ್ಸ್ ಜಿಯೋದಿಂದ (Reliance Jio) ಹೊಸ ಪೋಸ್ಟ್ ಪೇಯ್ಡ್ ಯೋಜನೆಯನ್ನು ಪರಿಚಯಿಸಲಾಗಿದ್ದು, ಒಟಿಟಿ ಪ್ಲಾಟ್ ಫಾರ್ಮ್‌ಗಳನ್ನು ಅತಿ ಹೆಚ್ಚು ಬಳಕೆ ಮಾಡುವವರಿಗೆ, ಇಷ್ಟ ಪಡುವವರಿಗೆ ಇದು ಹೇಳಿ ಮಾಡಿಸಿದ ಯೋಜನೆಯಾಗಿದೆ. ಈ ಪ್ಲಾನ್‌ಗೆ ತಿಂಗಳಿಗೆ 888 ರೂಪಾಯಿ ಆಗಲಿದೆ.

ಪೋಸ್ಟ್ ಪೇಯ್ಡ್ ಒಟಿಟಿ ಜತೆಗೂಡಿ ಬರುತ್ತದೆ. ಇದರ ಅಡಿಯಲ್ಲಿ ಗ್ರಾಹಕರು 15 ಪ್ರೀಮಿಯಂ ಒಟಿಟಿ ಅಪ್ಲಿಕೇಷನ್‌ಗಳನ್ನು ಪಡೆಯಲಿದ್ದು, ಅನಿಯಮಿತ (Unlimited) ಡೇಟಾ ಸಹ ದೊರೆಯುತ್ತಿದೆ. ಇದರಿಂದಾಗಿ ಗ್ರಾಹಕರು ತಮ್ಮ ಅಚ್ಚುಮೆಚ್ಚಿನ ಅಪ್ಲಿಕೇಷನ್‌ಗಳಲ್ಲಿ ಯಾವಾಗ ಮತ್ತು ಎಲ್ಲಿ ಬೇಕಾದರೂ ಕಾರ್ಯಕ್ರಮಗಳ ವೀಕ್ಷಣೆ ಮಾಡಬಹುದಾಗಿದೆ.

ಇದನ್ನೂ ಓದಿ: Dr C N Manjunath: ಮತ್ತೆ ವೈದ್ಯ ವೃತ್ತಿಗೆ ಮರಳಿದ್ದಾರೆ ಹೃದ್ರೋಗ ತಜ್ಞ ಡಾ.ಸಿ.ಎನ್‌. ಮಂಜುನಾಥ್‌

ಈ ಹೊಸ ಯೋಜನೆಯ ಅಡಿಯಲ್ಲಿ ಗ್ರಾಹಕರು 30 ಎಂಬಿಪಿಎಸ್ (Mbps) ವೇಗವನ್ನು ಪಡೆಯಲಿದ್ದು, ಇದರ ಜತೆಗೆ ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್, ಜಿಯೋಸಿನಿಮಾ ಪ್ರೀಮಿಯಂ ರೀತಿಯ ಹದಿನೈದಕ್ಕೂ ಹೆಚ್ಚು ಪ್ರಮುಖ ಒಟಿಟಿ ಅಪ್ಲಿಕೇಷನ್‌ಗಳು ದೊರೆಯುತ್ತವೆ. ಈ ಅಪ್ಲಿಕೇಷನ್‌ನ ಸಬ್‌ಸ್ಕ್ರಿಪ್ಷನ್ ದೊರೆಯುವುದು ಯೋಜನೆಯ ಜತೆಗೆ ಮಾತ್ರ. ಈ ಯೋಜನೆಯನ್ನು ಹೊಸ ಚಂದಾದಾರಷ್ಟೇ ಅಲ್ಲ, 10 ಅಥವಾ 30 ಎಂಬಿಪಿಎಸ್ ಯೋಜನೆಯನ್ನು ಈಗಾಗಲೇ ಬಳಸುತ್ತಿರುವ ಜಿಯೋದ ಈಗಿನ ಬಳಕೆದಾರರು ಸಹ ಪಡೆಯಬಹುದಾಗಿದೆ.

ಇನ್ನು ಈ 888 ರೂಪಾಯಿಯ ಪೋಸ್ಟ್‌ಪೇಯ್ಡ್ ಯೋಜನೆಯು ಪ್ರತಿಯೊಬ್ಬರಿಗೂ ದೊರೆಯಲಿದ್ದು, ಸದ್ಯಕ್ಕೆ ಪ್ರಿಪೇಯ್ಡ್ ಯೋಜನೆ ಹೊಂದಿರುವ ಗ್ರಾಹಕರು ಈ ಹೊಸ ಪೋಸ್ಟ್ ಪೇಯ್ಡ್ ಯೋಜನೆಗೆ ಅಪ್‌ಗ್ರೇಡ್ ಮಾಡಬಹುದು.

ಇದನ್ನೂ ಓದಿ: T20 World Cup : ವಿಶ್ವ ಕಪ್​ಗೆ ಭಾರತ ತಂಡ ಪ್ರಯಾಣಿಸುವ ದಿನಾಂಕ ಪ್ರಕಟಿಸಿದ ಜಯ್​ ಶಾ

ಇನ್ನೊಂದು ವಿಶೇಷತೆಯೆಂದರೆ ಇತ್ತೀಚೆಗೆ ಘೋಷಣೆಯಾದ ಜಿಯೋ ಐಪಿಎಲ್ ಧನ್ ಧನಾ ಧನ್ ಆಫರ್ ಕೂಡ ಈ ಯೋಜನೆಗೆ ಅನ್ವಯಿಸುತ್ತದೆ. ಜಿಯೋಫೈಬರ್ ಅಥವಾ ಏರ್ ಫೈಬರ್‌ನ ಅರ್ಹ ಗ್ರಾಹಕರು ತಮ್ಮ ಜಿಯೋ ಹೋಮ್ ಬ್ರಾಡ್ ಬ್ಯಾಂಡ್ ಸಂಪರ್ಕದಲ್ಲಿ 50 ದಿನ ರಿಯಾಯಿತಿ ಕ್ರೆಡಿಟ್ ವೋಚರ್ ಸಹ ಪಡೆಯಬಹುದು. ಈ ಪ್ಲಾನ್ ಮೇ 31, 2024ರ ವರೆಗೆ ಲಭ್ಯವಿರುತ್ತದೆ, ಜಿಯೋ ಡಿಡಿಡಿ (Jio Dhan Dhana Dhan) ಕೊಡುಗೆಯನ್ನು ವಿಶೇಷವಾಗಿ ಟಿ20 ಋತುವಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Continue Reading

ಆಟೋಮೊಬೈಲ್

Maruti Suzuki: ಶೀಘ್ರ ರಸ್ತೆಗಿಳಿಯಲಿದೆ ಬರೋಬ್ಬರಿ 26 ಕಿ.ಮೀ ಮೈಲೇಜ್ ಕೊಡುವ ಮಾರುತಿ ಸ್ವಿಫ್ಟ್​; ಶುರುವಾಗಿದೆ ಬುಕಿಂಗ್​

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಮಾರುತಿ ಸುಜುಕಿಯ (Maruti Suzuki) 4ನೇ-ಜನ್ ಸ್ವಿಫ್ಟ್‌ ಗಾಗಿ 1,450 ಕೋಟಿ ರೂ. ಹೂಡಿಕೆ ಮಾಡಿದ್ದು,2030 ರ ವೇಳೆಗೆ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಉತ್ಪಾದನೆಯು 10 ಲಕ್ಷ ವರೆಗೆ ಬೆಳೆಯುವ ನಿರೀಕ್ಷೆ ಇದೆ. ಹೊಸ ಸ್ವಿಫ್ಟ್ ಹೊಸ ಎಂಜಿನ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬರಲಿದೆ.

VISTARANEWS.COM


on

By

Maruti Suzuki
Koo

ನವದೆಹಲಿ: ಮಾರುತಿ ಸುಜುಕಿ (Maruti Suzuki) ಇಂಡಿಯಾ ಲಿಮಿಟೆಡ್ (MSIL) ತನ್ನ ಜನಪ್ರಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ (hatchback) ಸ್ವಿಫ್ಟ್‌ನ ಹೊಸ-ಪೀಳಿಗೆ ಮಾದರಿಯನ್ನು (4th-gen Swift) ಶೀಘ್ರ ಮಾರುಕಟ್ಟೆಗೆ ಇಳಿಸಲಿದೆ. ಕಾರನ್ನು ಈಗಾಗಲೇ ಕಂಪನಿ ಪರಿಚಯಿಸಿದ್ದು ಬುಕಿಂಗ್ ಕೂಡ ಆರಂಭಗೊಂಡಿದೆ. ಈ ಕಾರಿನ ಮಾಡೆಲ್​ಗಾಗಿ ಕಂಪನಿಯು ಸುಮಾರು 1,450 ಕೋಟಿ ರೂ. ಹೂಡಿಕೆ ಮಾಡಿದ್ದು, ಇದು ಹೊಸ Z-ಸರಣಿ 1.2L ಎಂಜಿನ್‌ ಜತೆಗೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸ್ವಿಫ್ಟ್ ನ 4 ನೇ ಪೀಳಿಗೆಯ ಬೆಲೆಗಳು 6.49 ಲಕ್ಷ ರೂ. ನಿಂದ ಪ್ರಾರಂಭವಾಗಿ 9.64 ಲಕ್ಷ ರೂ. ವರೆಗೆ ಇರುತ್ತದೆ. ಇದು ಎಕ್ಸ್​ ಶೋರೂಮ್​ ಬೆಲೆಯಾಗಿದೆ.

ಆರು ಏರ್‌ಬ್ಯಾಗ್‌ಗಳು, ಎಲ್ಲಾ ಆಸನಗಳಿಗೆ 3 ಪಾಯಿಂಟ್ ಸೀಟ್‌ಬೆಲ್ಟ್‌ಗಳೊಂದಿಗೆ ರಿಮೈಂಡರ್‌ಗಳು, ಎಬಿಎಸ್ ಸೇರಿದಂತೆ ಹಲವು ಸುರಕ್ಷತಾ ಫೀಚರ್​ಗಳು ಹೊಚ್ಚ ಹೊಸ ಜೆನ್​ 4 ಸ್ವಿಫ್ಟ್​ನಲ್ಲಿ ಇರಲಿವೆ. ಪ್ರತಿ ಲೀಟರ್‌ಗೆ 25.75 ಕಿ.ಮೀ. ವರೆಗೆ ಮೈಲೇಜ್​ ನೀಡುವ ಮೂಲಕ ಸ್ವಿಫ್ಟ್​ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗುವುದು ಖಾತರಿ. ಹೊಸ ಮಾದರಿಯ ಸ್ವಿಫ್ಟ್​​ನ ಬುಕಿಂಗ್ ಮೇ 1ರಿಂದ ಆರಂಭಗೊಂಡಿದ್ದು, 11,000 ರೂಪಾಯಿ ಟೋಕನ್ ಮೊತ್ತ ನೀಡಿ ಕಾಯ್ದಿರಿಸಬಹುದು.

ಹ್ಯಾಚ್​ ಬ್ಯಾಕ್​ ಸೆಗ್ಮೆಂಟ್​ನಲ್ಲಿ ಸ್ವಿಫ್ಟ್​ ಪ್ರಾಬಲ್ಯ

19 ವರ್ಷಗಳಿಂದ ಭಾರತದ ರಸ್ತೆಗಳಲ್ಲಿ ಓಡುತ್ತಿರುವ ಸಿಫ್ಟ್ ಕಾರಿನ ಮೊದಲ ಮಾಡೆಲ್​ ಅನ್ನು 2005 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ 29 ಲಕ್ಷ ಸ್ವಿಫ್ಟ್ ಮಾರಾಟ ಮಾಡಿರುವುದಾಗಿ ಕಂಪನಿ ಹೇಳಿಕೊಂಡಿದೆ. 2011 ರಲ್ಲಿ 2 ನೇ ಪೀಳಿಗೆಯ ಸ್ವಿಫ್ಟ್​ ಪರಿಚಯಿಸಲಾಯಿತು. ನಂತರ 2018 ರಲ್ಲಿ 3ನೇ ಪೀಳಿಗೆಯನ್ನು ರಸ್ತೆಗೆ ಇಳಿಯಿತು. ಸ್ವಿಫ್ಟ್ ತನ್ನ ಮೊದಲ 10 ಲಕ್ಷ ಯೂನಿಟ್​ಗಳ ಮಾರಾಟವನ್ನು 2013 ರಲ್ಲಿ ಪೂರ್ಣಗೊಳಿಸಿತ್ತು ಮತ್ತು 2018 ರ ವೇಳೆಗೆ 20 ಲಕ್ಷದ ಗಡಿ ದಾಟಿ ಈ ಸೆಗ್ಮೆಂಟ್​ನಲ್ಲಿ ಪ್ರಾಬಲ್ಯ ಸಾಧಿಸಿತು.

2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಆದ್ದರಿಂದ ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಆರ್ಥಿಕ ಚಟುವಟಿಕೆ ಹೆಚ್ಚಾಗಲಿದ್ದು ಆಟೋಮೊಬೈಲ್ ಕ್ಷೇತ್ರಕ್ಕೆ ಹೆಚ್ಚಿನ ಬೇಡಿಕೆ ಉಂಟಾಗುವ ಸಾಧ್ಯತೆ ಇದೆ. ಭಾರತದಲ್ಲಿ ಬೆಳೆಯಲು ಸಾಕಷ್ಟು ಅವಕಾಶಗಳಿವೆ. ಕಾರಿನ ಮಾಲೀಕತ್ವ ಹೆಚ್ಚಾದಂತೆ ಹ್ಯಾಚ್‌ಬ್ಯಾಕ್ ವಿಭಾಗವು ಗ್ರಾಹಕರಿಗೆ ಹೆಚ್ಚು ಪ್ರಿಯವಾಗಲಿದೆ. ಹೀಗಾಗಿ ಹ್ಯಾಚ್‌ಬ್ಯಾಕ್ ಕಾರುಗಳ ಅಭಿವೃದ್ಧಿಯನ್ನು ವಿಸ್ತರಿಸುತ್ತಿದ್ದೇವೆ ಎಂದು ಮಾರುತಿ ಸುಜುಕಿಯ ಎಂಡಿ ಮತ್ತು ಸಿಇಒ ಹಿಸಾಶಿ ಟೇಕುಚಿ ಹೇಳಿದರು.


ಸುಜುಕಿಗೆ ಪ್ರಮುಖ ಮಾರುಕಟ್ಟೆ

ಭಾರತವು ಸುಜುಕಿಗೆ ಪ್ರಮುಖ ಮಾರುಕಟ್ಟೆಯಾಗಿದೆ. ವೈವಿಧ್ಯಮಯ ಗ್ರಾಹಕರ ಬೇಡಿಕೆಗಳನ್ನು ಪೂರೈಸುವುದು ಮುಖ್ಯವಾಗಿರುವುದರಿಂದ ಹ್ಯಾಚ್​ಬ್ಯಅಕ್​ ವಿಭಾಗದ ಮೇಲೆ ನಮ್ಮ ಹೆಚ್ಚಿನ ಗಮನವಿದೆ. ಹೊಸ ಸ್ವಿಫ್ಟ್ ಈ ವಿಭಾಗದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆಯಲಿದೆ ಎಂದು ಅವರು ತಿಳಿಸಿದರು.

ಸ್ಪರ್ಧೆಯಲ್ಲಿ ಹಲವು ಕಾರುಗಳು

ಹ್ಯಾಚ್‌ಬ್ಯಾಕ್ ಸ್ವಿಫ್ಟ್‌ ಗೆ ಪ್ರತಿ ಸ್ಪರ್ಧಿಯಾಗಿ ಹ್ಯುಂಡೈ ಗ್ರಾಂಡ್ ಐ10 ನಿಯೋಸ್, ಟಾಟಾ ಆಲ್ಟ್ರೋಜ್ . ಹ್ಯುಂಡೈ ಎಕ್ಸ್‌ಟರ್ ಮತ್ತು ಟಾಟಾ ಪಂಚ್ ಸೇರಿದಂತೆ ಮೈಕ್ರೋ ಎಸ್‌ಯುವಿಗಳು ಮಾರುಕಟ್ಟೆಯಲ್ಲಿವೆ. ಇವುಗಳು ಇದೇ ಶ್ರೇಣಿಯಲ್ಲಿನ ಬೆಲೆಯನ್ನು ಹೊಂದಿವೆ.

ಕಳೆದ 3- 4 ವರ್ಷಗಳಲ್ಲಿ ಒಟ್ಟು ಪ್ರಯಾಣಿಕ ವಾಹನ ಮಾರಾಟ ಶೇಕಡಾ 47 ರಷ್ಟಿದ್ದು, ಇದರಲ್ಲಿ ಸಣ್ಣ ಕಾರು ಮಾರುಕಟ್ಟೆಯ ಪಾಲು 2024ನೇ ಹಣಕಾಸು ವರ್ಷದಲ್ಲಿ ಸುಮಾರು ಶೇ. 28ರಷ್ಟಾಗಿದೆ. ಮಾರುತಿ ಸುಜುಕಿ ಹ್ಯಾಚ್‌ಬ್ಯಾಕ್ ವಿಭಾಗದ ಬೇಡಿಕೆ 2026 ಅಂತ್ಯ ಅಥವಾ 2027 ರ ವೇಳೆಗೆ ಪುನರುಜ್ಜೀವನಗೊಳ್ಳುವ ನಿರೀಕ್ಷೆಯಿದೆ ಎಂದು ಹಿಸಾಶಿ ಟೇಕುಚಿ ಹೇಳಿದರು.

ಇದನ್ನೂ ಓದಿ: Tata Motors: Tata Ace EV 1000 ಬಿಡುಗಡೆ ಮಾಡಿದ ಟಾಟಾ ಮೋಟರ್ಸ್‌; ಏನಿದರ ವಿಶೇಷತೆ? ದರ ಎಷ್ಟು?

ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಬೆಳವಣಿಗೆ ಭಾರತದಲ್ಲಿನ ಒಟ್ಟು ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಶೇ. 28ರಷ್ಟು ಪಾಲನ್ನು ಪಡೆದುಕೊಳ್ಳುತ್ತವೆ. ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥೋ ಬ್ಯಾನರ್ಜಿ ಪ್ರಕಾರ, ಪ್ರಸ್ತುತ ಒಟ್ಟು 7 ಲಕ್ಷ ವಾರ್ಷಿಕ ಉತ್ಪಾದನೆ ಹೊಂದಿರುವ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗವು 2030 ರ ವೇಳೆಗೆ 10 ಲಕ್ಷಕ್ಕೆ ಬೆಳೆಯಬಹುದು. ಮಾರುತಿ ಪ್ರಸ್ತುತ ಸ್ವಿಫ್ಟ್ ಮತ್ತು ಬಲೆನೊದಂತಹ ಮಾದರಿಗಳೊಂದಿಗೆ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಶೇ. 62ರಷ್ಟು ಪಾಲನ್ನು ಹೊಂದಿದೆ.

Continue Reading

ಗ್ಯಾಜೆಟ್ಸ್

Xiaomi Smart Phone: ವರ್ಷಾಂತ್ಯಕ್ಕೆ ಬರಲಿದೆ ಶಿಯೊಮಿಯ ಫೋಲ್ಡಿಂಗ್​ ಫೋನ್​ಗಳು; ಇಲ್ಲಿದೆ ಸಂಪೂರ್ಣ ವಿವರ

ಕ್ಸಿಯೋಮಿಯ ಎರಡು ಫೋಲ್ಡೆಬಲ್ ಸ್ಮಾರ್ಟ್ ಫೋನ್ ಗಳು ಈ ವರ್ಷಾಂತ್ಯಕ್ಕೆ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಹಲವಾರು ವೈಶಿಷ್ಟ್ಯಗಳೊಂದಿಗೆ ಮಿಕ್ಸ್ ಫೋಲ್ಡ್ 4, ಮಿಕ್ಸ್ ಫ್ಲಿಪ್ ಸ್ಮಾರ್ಟ್ ಫೋನ್ ಗಳನ್ನು ಕ್ಸಿಯೋಮಿ (Xiaomi Smart Phone) ಪರಿಚಯಿಸಲಿದೆ.

VISTARANEWS.COM


on

By

Xiaomi Smart Phone
Koo

ಚೀನಾದ ಟೆಕ್ ದೈತ್ಯ ಕಂಪೆನಿ ಕ್ಸಿಯೋಮಿ (Xiaomi Smart Phone) ಈ ವರ್ಷದ ಕೊನೆಯಲ್ಲಿ ಮಿಕ್ಸ್ ಫೋಲ್ಡ್ 4 (Mix Fold 4) ಮತ್ತು ಮಿಕ್ಸ್ ಫ್ಲಿಪ್ (Mix Flip) ಮಾದರಿಗಳನ್ನು ಪರಿಚಯಿಸಲಿದೆ. ಇದು ಮಡಚಬಹುದಾದ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಈ ಕಂಪನಿಯ ಮೊದಲ ಫೋನ್ ಆಗಿರಲಿದೆ. ಅತ್ಯಾಧುನಿಕ ಕ್ಯಾಮೆರಾ ತಂತ್ರಜ್ಞಾನ, ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡು ಹಲವಾರು ವೈಶಿಷ್ಯಗಳೊಂದಿಗೆ ಈ ಸ್ಮಾರ್ಟ್ ಫೋನ್ ಗಳು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿದೆ. ಆದರೆ ಭಾರತಕ್ಕೆ ಇದರ ಪ್ರವೇಶ ಸ್ವಲ್ಪ ವಿಳಂಬವಾಗುವ ನಿರೀಕ್ಷೆಯಿದೆ.

ಕ್ಸಿಯೋಮಿ ಮಿಕ್ಸ್ ಫೋಲ್ಡ್ 4 ಮತ್ತು ಮಿಕ್ಸ್ ಫ್ಲಿಪ್ ಈ ಎರಡೂ ಸ್ಮಾರ್ಟ್‌ಫೋನ್‌ಗಳು ಸ್ನಾಪ್‌ಡ್ರಾಗನ್ 8 Gen 3SoCನಲ್ಲಿ ಚಿಪ್​ಸೆಟ್​ ಹೊಂದಿರಲಿದೆ. ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಹಿಂಬದಿಯ ಕೆಮರಾದ ಫೀಚರ್​ನೊಂದಿಗೆ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆಯಲಿದೆ.

ಕೆಮರಾ ವೈಶಿಷ್ಟ್ಯಗಳು

ಕ್ಸಿಯೋಮಿ ಮಿಕ್ಸ್ ಫೋಲ್ಡ್ 4 ಮತ್ತು ಮಿಕ್ಸ್ ಫ್ಲಿಪ್ ಎರಡೂ ಒಂದೇ ರೀತಿಯ ಕ್ಯಾಮೆರಾ ಸೆಟಪ್‌ಗಳನ್ನು ಹೊಂದಿರುತ್ತದೆ. ಎರಡೂ ಸಾಧನಗಳು 1/ 1.55-ಇಂಚಿನ ರೆಸ್ಪಾನ್ಸ್​ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವನ್ನು ಒಳಗೊಂಡಿರುವ ನಿರೀಕ್ಷೆಯಿದೆ. 1/2.8-ಇಂಚಿನ ಸಂವೇದಕ ಗಾತ್ರದೊಂದಿಗೆ OMnivision OV60A 2x ಟೆಲಿಫೋಟೋ ಸಂವೇದಕವನ್ನು ಒಳಗೊಂಡಿರುತ್ತದೆ.

ಮಿಕ್ಸ್ ಫೋಲ್ಡ್ 4 ಹೆಚ್ಚುವರಿ ಕ್ಯಾಮೆರಾ ಫೀಚರ್ ಸಮೇತ ಬರಲಿದೆ ಎಂದು ಹೇಳಲಾಗುತ್ತದೆ. ಇದರಲ್ಲಿ 12 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸಂವೇದಕ ಮತ್ತು 5ಎಕ್ಸ್ ಜೂಮ್ ಸಾಮರ್ಥ್ಯದೊಂದಿಗೆ 10 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಕೆಮರಾ ಸೇರಿವೆ.

ಕಾರ್ಯಕ್ಷಮತೆ ಮತ್ತು ಪ್ರೊಸೆಸರ್‌ಗಳು

ಮಿಕ್ಸ್ ಫೋಲ್ಡ್ 4 ಮತ್ತು ಮಿಕ್ಸ್ ಫ್ಲಿಪ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜನ್ 3 SoC ನಿಂದ ಚಾಲಿತವಾಗುವ ಸಾಧ್ಯತೆಯಿದೆ. ವರ್ಧಿತ ಕಾರ್ಯಕ್ಷಮತೆ ಮತ್ತು ದಕ್ಷತೆಯನ್ನು ನೀಡುವ ಭರವಸೆ ಕೊಡುತ್ತದೆ.

ಡಿಸ್ ಪ್ಲೇ ಮತ್ತು ಬ್ಯಾಟರಿ

ನಿರ್ದಿಷ್ಟ ವಿವರಗಳು ಸಿಗದೇ ಇದ್ದರೂ ಮಿಕ್ಸ್ ಫೋಲ್ಡ್ 4 ದೊಡ್ಡ ಮಡಚಬಹುದಾದ ಪರದೆಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಏತನ್ಮಧ್ಯೆ ಮಿಕ್ಸ್ ಫ್ಲಿಪ್ 1.5K ರೆಸಲ್ಯೂಶನ್ ಹೊಂದಿರುವ ಮುಖ್ಯ ಪ್ರದರ್ಶನವನ್ನು ಹೊಂದಿರುವ ಸಾಧ್ಯತೆಯಿದೆ. ಈ ರೆಸಲ್ಯೂಶನ್ ಬಳಕೆದಾರರಿಗೆ ಉತ್ತಮ ಗುಣಮಟ್ಟದ ದೃಶ್ಯಗಳನ್ನು ನೀಡುತ್ತದೆ. ಮಾಧ್ಯಮ ಬಳಕೆ ಮತ್ತು ಗೇಮಿಂಗ್‌ಗೆ ಈ ಸ್ಮಾರ್ಟ್‌ಫೋನ್ ಸೂಕ್ತವಾಗಿದೆ.

ಬಾಳಿಕೆಗೆ ಸಂಬಂಧಿಸಿದಂತೆ ಕ್ಸಿಯೋಮಿ ಮಿಕ್ಸ್ ಫೋಲ್ಡ್ 4ಐಪಿ ರೇಟಿಂಗ್ ಅನ್ನು ಒಳಗೊಂಡಿರುತ್ತದೆ. ಅದರ ವೈಶಿಷ್ಟ್ಯಗಳ ಪಟ್ಟಿಗೆ ಸಂಭಾವ್ಯವಾಗಿ ನೀರು ಮತ್ತು ಧೂಳಿನ ಪ್ರತಿರೋಧವನ್ನು ಹೊಂದಿರುತ್ತದೆ.


ಬ್ಯಾಟರಿ ಬಾಳಿಕೆ ಮತ್ತು ಚಾರ್ಜಿಂಗ್ ಪವರ್

ಬ್ಯಾಟರಿ ಕಾರ್ಯಕ್ಷಮತೆಗೆ ಸಂಬಂಧಿಸಿ ಮಿಕ್ಸ್ ಫೋಲ್ಡ್ 4 ದೊಡ್ಡ 5,000mAh ಬ್ಯಾಟರಿಯೊಂದಿಗೆ 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎನ್ನಲಾಗುತ್ತದೆ. ಆದರೆ ಮಿಕ್ಸ್ ಫ್ಲಿಪ್‌ನ ಬ್ಯಾಟರಿ ಸಾಮರ್ಥ್ಯ ಮತ್ತು ಚಾರ್ಜಿಂಗ್ ಸಾಮರ್ಥ್ಯಗಳ ವಿವರಗಳು ಇನ್ನೂ ಲಭ್ಯವಾಗಿಲ್ಲ.

ಭಾರತದಲ್ಲಿ ಯಾವಾಗ ಲಭ್ಯ ?

ಕ್ಸಿಯೋಮಿ ಮಿಕ್ಸ್ ಫೋಲ್ಡ್ 4 ಚೀನೀ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಮಿಕ್ಸ್ ಫ್ಲಿಪ್ ಅನ್ನು ಪ್ರಾರಂಭದಲ್ಲಿ ಚೀನಾದ ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ಲಭ್ಯವಾಗುವಂತೆ ನಿರೀಕ್ಷಿಸಲಾಗಿದೆ. ಆದರೆ ಭಾರತದ ಮಾರುಕಟ್ಟೆ ಪ್ರವೇಶ ಕೊಂಚ ವಿಳಂಬವಾಗುವ ಸಾಧ್ಯತೆ ಇದೆ.

2023ರ ಆಗಸ್ಟ್ ನಲ್ಲಿ ಕ್ಸಿಯೋಮಿಯ ಹಿಂದಿನ ಮಡಿಸಬಹುದಾದ ಮಾದರಿ ಬಿಡುಗಡೆ ಮಾಡಲಾಗಿತ್ತು. ಇದು ಮಿಕ್ಸ್ ಫೋಲ್ಡ್ 3, 1916 x 2160 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್‌ನೊಂದಿಗೆ 8.03-ಇಂಚಿನ ಮಡಿಸಬಹುದಾದ LTPO OLED+ ಡಿಸ್‌ಪ್ಲೇಯನ್ನು ಒಳಗೊಂಡಿತ್ತು. ಇದರ ಎರಡನೇ ಡಿಸ್ ಪ್ಲೇ 2520×1080 ಪಿಕ್ಸೆಲ್ ಗಳ ರೆಸಲ್ಯೂಶನ್ ಹೊಂದಿರುವ 6.56 ಇಂಚಿನ ಟಚ್ ಸ್ಕ್ರೀನ್ ಅನ್ನು ಒಳಗೊಂಡಿದೆ.

ಇದನ್ನೂ ಓದಿ: High-tech Gadget: ಸೆಕೆಗೆ ಎಸಿ, ಫ್ಯಾನ್‌, ಕೂಲರ್‌ ಸಾಕಾಗ್ತಿಲ್ವಾ..? ಹಾಗಿದ್ರೆ ಇಲ್ಲಿದೆ ನೋಡಿ ಹೈಟೆಕ್‌ ಗ್ಯಾಜೆಟ್‌

ಮಿಕ್ಸ್ ಫೋಲ್ಡ್ 3 ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 2 ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, 12 ಜಿಬಿ RAM ಅನ್ನು ಹೊಂದಿದೆ. ಇದರ ಕೆಮರಾ ಸೆಟಪ್ 50 ಮೆಗಾಪಿಕ್ಸೆಲ್ ಮುಖ್ಯ ಕೆಮರಾ, 10 ಮೆಗಾಪಿಕ್ಸೆಲ್ ಟೆಲಿಫೋಟೋ ಕೆಮರಾ ಮತ್ತು 20 ಮೆಗಾಪಿಕ್ಸೆಲ್ ವೈಡ್-ಆಂಗಲ್ ಸೆಲ್ಫಿ ಕೆಮರಾವನ್ನು ಒಳಗೊಂಡಿದೆ. 67W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 4,800mAh Li-Po ಬ್ಯಾಟರಿಯಿಂದ ಸ್ಮಾರ್ಟ್‌ಫೋನ್ ಬೆಂಬಲಿತವಾಗಿದೆ.

Continue Reading
Advertisement
Protein Supplements
ಆರೋಗ್ಯ7 mins ago

Protein Supplements: ಪ್ರೊಟಿನ್‌ ಸಪ್ಲಿಮೆಂಟ್‌ನ ಸೈಡ್‌ ಎಫೆಕ್ಟ್‌ ಏನೇನು? ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆಯ ಸೂಚನೆ ಇಲ್ಲಿದೆ

Shankara Jayanti 2024
ಧಾರ್ಮಿಕ22 mins ago

Shankara Jayanti 2024: ಇಂದು ಶಂಕರ ಜಯಂತಿ; ಶಂಕರಾಚಾರ್ಯರ ಕುರಿತ 9 ಕುತೂಹಲಕರ ಸಂಗತಿಗಳು

International Nurses’s Day
ಆರೋಗ್ಯ37 mins ago

International Nurses’s Day: ಇಂದು ನರ್ಸ್‌ಗಳ ದಿನ; ಈ ದಿನಾಚರಣೆ ಹಿನ್ನೆಲೆ ಏನು?

Dina Bhavishya
ಭವಿಷ್ಯ37 mins ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

IPL 2024
ಪ್ರಮುಖ ಸುದ್ದಿ5 hours ago

IPL 2024 : ಮುಂಬೈ ವಿರುದ್ಧ 18 ರನ್ ಜಯ, ಪ್ಲೇಆಫ್​ ಪ್ರವೇಶಿಸಿದ ಕೆಕೆಆರ್​ ತಂಡ

car catches fire
ಕ್ರೈಂ6 hours ago

Car Catches Fire: ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಸಜೀವ ದಹನ

jay Shah
ಪ್ರಮುಖ ಸುದ್ದಿ7 hours ago

Jay Shah : ದೇಶಿಯ ಕ್ರಿಕೆಟ್​ನಲ್ಲಿ ಭಾರೀ ಬದಲಾವಣೆಗಳ ಸೂಚನೆ ನೀಡಿದ ಜಯ್​ ಶಾ

ಬೆಂಗಳೂರು7 hours ago

Child Actor Master OM: ಓದಿಗೂ ಸೈ, ಮಾಡೆಲಿಂಗ್‌ಗೂ ಸೈ ಈ ಸೂಪರ್‌ ಟೀನ್‌ ಮಾಡೆಲ್‌ ಮಾಸ್ಟರ್‌ ಓಂ!

ಬೆಂಗಳೂರು7 hours ago

LuLu Fashion Week 2024: ಲುಲು ಫ್ಯಾಷನ್ ವೀಕ್ 2024; ಕಲರ್ ಫುಲ್ ಬಟ್ಟೆ ತೊಟ್ಟು ಕಂಗೊಳಿಸಿದ ನಾರಿಮಣಿಗಳು

IPL 2024
ಕ್ರಿಕೆಟ್7 hours ago

IPL 2024 : ಗುಜರಾತ್​ ತಂಡ ಸೇರಿದ ಗುರ್ನೂರ್ ಬ್ರಾರ್; ಎಲ್ಲಿಯ ಆಟಗಾರ ಇವರು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ37 mins ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು14 hours ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ2 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ2 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ2 days ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ2 days ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ2 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ2 days ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ2 days ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

ಟ್ರೆಂಡಿಂಗ್‌