ಅಂಜುಮಾನ್‌ ಸಂಸ್ಥೆಯ ಅರ್ಜಿ ವಜಾ, ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹೈಕೋರ್ಟ್‌ ಅಸ್ತು - Vistara News

Latest

ಅಂಜುಮಾನ್‌ ಸಂಸ್ಥೆಯ ಅರ್ಜಿ ವಜಾ, ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹೈಕೋರ್ಟ್‌ ಅಸ್ತು

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಸಲು ಅವಕಾಶ ನೀಡಬಾರದು ಎಂದು ಅಂಜುಮಾನ್‌ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ ಏಕಸದಸ್ಯ ಪೀಠ ವಜಾಗೊಳಿಸಿದ್ದು, ಆಚರಣೆ ನಿರಾತಂಕವಾಗಿ ನಡೆಯಲಿದೆ.

VISTARANEWS.COM


on

hubballi Edgah maidan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ವಿರೋಧಿಸಿ ಅಂಜುಮಾನ್ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿಯನ್ನು ಧಾರವಾಡದ ಸಂಚಾರಿ ಹೈಕೋರ್ಟ್‌ನ ಏಕಸದಸ್ಯ ಪೀಠ ವಜಾಗೊಳಿಸಿದೆ. ಹೀಗಾಗಿ ಅಲ್ಲಿನ ಮಹಾನಗರ ಪಾಲಿಕೆಯ ಆದೇಶದಂತೆ ಉತ್ಸವದ ಆಚರಣೆ ನಡೆಯಲಿದೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದಲ್ಲಿ ಈ ಬಾರಿ ಗಣೇಶೋತ್ಸವ ನಡೆಸದೇ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಹಾಗೂ ಹೈಕೋರ್ಟ್‌ನಲ್ಲೇ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಸುಪ್ರೀಮ್‌ ಕೋರ್ಟ್‌ನ ತ್ರಿಸದಸ್ಯ ಪೀಠ ಮಂಗಳವಾರ ಸಂಜೆ ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿ ಅಂಜುಮಾನ್‌ ಸಂಸ್ಥೆ ಮತ್ತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಹೀಗಾಗಿ ರಾತ್ರಿ ೧೦ ಗಂಟೆಗೆ ಆದ್ಯತೆ ಮೇರೆಗೆ ವಿಚಾರಣೆ ನಡೆಸಿದ ಕೋರ್ಟ್‌ ಹೊಸ ತೀರ್ಪು ಪ್ರಕಟಿಸಿದ್ದು, ಹೀಗಾಗಿ ಇದೇ ಮೊದಲ ಬಾರಿಗೆ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ನಡೆಯಲಿದೆ.

ಏನಿದು ಪ್ರಕರಣ?

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಬಹು ವರ್ಷದ ಬಳಿಕ ಇದೇ ಮೊದಲ ಬಾರಿಗೆ ಗಣೇಶೋತ್ಸವ ಆಚರಿಸಲು ಮಹಾನಗರ ಪಾಲಿಕೆ ಅವಕಾಶ ನೀಡಿತ್ತು. ಆದರೆ, ಇದನ್ನು ಪ್ರಶ್ನಿಸಿ ಮತ್ತು ಅವಕಾಶ ನೀಡಬಾರದು ಎಂದು ಕೋರಿ ಹೈಕೋರ್ಟ್‌ನ ಮೊರೆ ಹೋಗಲಾಗಿತ್ತು. ಮಂಗಳವಾರ ಈ ಅರ್ಜಿಯ ತುರ್ತು ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕ ಸದಸ್ಯ ಪೀಠ ತೀರ್ಪನ್ನು ಕಾದಿರಿಸಿತ್ತು. ನ್ಯಾಯಮೂರ್ತಿ ಅಶೋಕ್‌ ಕಿಣಗಿ ಅವರ ಪೀಠದ ಮುಂದೆ ವಿಚಾರಣೆ ನಡೆದಿತ್ತು. ಚಾಮರಾಜಪೇಟೆ ಮೈದಾನದ ವಿಚಾರ ಸುಪ್ರೀಂಕೋರ್ಟ್‌ನಲ್ಲಿದ್ದು, ಅದರ ತೀರ್ಪು ಮಂಗಳವಾರವೇ ಬರಲಿರುವ ಹಿನ್ನೆಲೆಯಲ್ಲಿ ಅದನ್ನು ನೋಡಿಕೊಂಡು ತೀರ್ಮಾನ ಮಾಡೋಣ ಎಂದು ಅವರು ತಿಳಿಸಿದ್ದರು. ಹೀಗಾಗಿ ಬೆಳಗ್ಗಿನ ವಿಚಾರಣೆಯನ್ನು ಮುಂದೂಡಲಾಗಿತ್ತು.

ಸರಕಾರ ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪರ ವಕೀಲರ ವಾದವೇನು?

  • ಈ ಮೈದಾನ ಅಂಜುಮನ್ ಸಂಸ್ಥೆಯ ವಶದಲ್ಲಿ ಇಲ್ಲವೇ ಇಲ್ಲ.
  • ಈಗಾಗಲೇ ಕೆಳ ಹಂತದ ನ್ಯಾಯಾಲಯ ಇದನ್ನು ಸಾರ್ವಜನಿಕವಾಗಿ ಬಳಸುವ ಮೈದಾನ ಎಂದು ಆದೇಶ ನೀಡಿದೆ.
  • ಈ ಮೈದಾನವನ್ನು ಬಳಸುವ ಹಕ್ಕು ಸಾರ್ವಜನಿಕರಿಗಿದೆ.
  • ಈ ಮೈದಾನ ಸಾರ್ವಜನಿಕರಿಗೆ ಮುಕ್ತವಾಗಿತ್ತು.
  • ಬಕ್ರೀದ್ ಮತ್ತು ರಂಜಾನ್ ಸಮಯದಲ್ಲಿ ಮಾತ್ರ ನಮಾಜ್ ಗೆ ಅವಕಾಶ ನೀಡಲಾಗಿತ್ತು.
  • ಅಂಜುಮಾನ್ ಅರ್ಜಿಯಲ್ಲಿ ಪರಿಗಣಿಸುವತಂಹ ವಿಚಾರಗಳು ಏನೂ ಇಲ್ಲ.
  • ಆ ಮೈದಾನ ಹಣ್ಣಿನ ಮಾರುಕಟ್ಟೆಯಾಗಿ ಚಾಲ್ತಿಯಲ್ಲಿದೆ.
  • ಈ ಎಲ್ಲ ಕಾರಣಗಳಿಂದಾಗಿ ಅಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡಿದರೆ ತಪ್ಪೇನೂ ಇಲ್ಲ.

ಅರ್ಜಿದಾರರ ವಾದ ಏನಿತ್ತು?
ಮಹಾನಗರ ಪಾಲಿಕೆ ವಿಶೇಷ ಅನುಮತಿಯ ಮೂಲಕ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಿದ್ದು ಸರಿಯಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

ʻʻಈದ್ಗಾ ಮೈದಾನದಲ್ಲಿ ವಿಶೇಷ ಅನುಮತಿಯ ಮೂಲಕ ಧಾರ್ಮಿಕ ಆಚರಣಗೆ ಅವಕಾಶ ನೀಡಿದ್ದು ಸರಿಯಲ್ಲ. 1947 ರ ಬಳಿಕ ಇದುವರೆಗೂ ಯಾವುದೇ ಧಾರ್ಮಿಕ ಆಚರಣೆಯೂ ನಡೆದಿಲ್ಲ. ಕೇವಲ ಎರಡು ಬಾರಿ ಮಾತ್ರ ಪ್ರಾರ್ಥನೆಗೆ ಅವಕಾಶ ನೀಡಲಾಗಿತ್ತು. 1937 ರ ಧಾರ್ಮಿಕ ಕಾಯಿದೆ ಪ್ರಕಾರ ಅಲ್ಲಿಯ ವರೆಗೂ ಇದ್ದ ಧಾರ್ಮಿಕ ಆಚರಣೆ ಬದಲಾವಣೆಗೆ ಅವಕಾಶ ಇಲ್ಲʼʼ ಎಂದು ಅರ್ಜಿದಾರರು ವಾದಿಸಿದ್ದರು.

ಇದಕ್ಕೆ ಸರಕಾರದ ಪರವಾಗಿ ಮಾಹಿತಿ ನೀಡಿದ ಸರ್ಕಾರದ ಪರ ಎಎಜಿ ಧ್ಯಾನ್ ಚಿನ್ನಪ್ಪ ಅವರು, ʻʻಚಾಮರಾಜಪೇಟೆ ಈದ್ಗಾ ಸಂಬಂಧ ದ್ವಿಸದಸ್ಯ ಪೀಠವು ಗಣೇಶೋತ್ಸವಕ್ಕೆ ಅವಕಾಶ ನೀಡುವುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಷಯ ಎಂದು ಹೇಳಿದೆʼʼ ಎಂದಿದ್ದರು.

ಆಗ ನ್ಯಾಯಮೂರ್ತಿಗಳು ವಿಭಾಗೀಯ ಪೀಠದ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಾಗಿದೆ. ಹೀಗಾಗಿ ಸುಪ್ರೀಂ ಕೋರ್ಟ್ ಆದೇಶ ನೋಡಿಕೊಂಡು ಆದೇಶ ಮಾಡುವುದಾಗಿ ಹೇಳಿದರು. ಹೀಗಾಗಿ ವಿಚಾರಣೆಯನ್ನು ಸಂಜೆ ೩.೩೦ಕ್ಕೆ ವಿಚಾರಣೆಯನ್ನು ಮುಂದೂಡಲಾಯಿತು.

೩.೩೦ಕ್ಕೆ ಹೈಕೋರ್ಟ್‌ನಲ್ಲಿ ಮತ್ತೆ ವಿಚಾರಣೆ ಆರಂಭಗೊಂಡಾಗಲೂ ಚಾಮರಾಜಪೇಟೆ ಮೈದಾನಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ನಲ್ಲಿ ತೀರ್ಪು ಬಂದಿರಲಿಲ್ಲ. ಅಲ್ಲಿನ ಪ್ರಕರಣವನ್ನು ದ್ವಿಸದಸ್ಯ ಪೀಠದಿಂದ ತ್ರಿಸದಸ್ಯ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.

ಪರಿಸ್ಥಿತಿಯನ್ನು ಅವಲೋಕಿಸಿದ ನ್ಯಾಯಮೂರ್ತಿ ಅಶೋಕ್‌ ಏಣಗಿ ಅವರು, ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದರು. ಮತ್ತು ಗಣೇಶೋತ್ಸವ ಆಚರಣೆಗೆ ಕೋರಿ ಬರುವ ಅರ್ಜಿಗಳನ್ನು ಗಮನಿಸಿ ನಿರ್ಧರಿಸುವ ಅಧಿಕಾರವನ್ನು ಪಾಲಿಕೆ ಕಮಿಷನರ್‌ ಅವರಿಗೆ ನೀಡಿದರು.

ಒಂದೊಮ್ಮೆ ಸುಪ್ರೀಂಕೋರ್ಟ್‌ ಆದೇಶದ ನಂತರ, ಅರ್ಜಿದಾರರಿಗೆ ಮತ್ತೆ ಕೋರ್ಟ್‌ಗೆ ಬರಬೇಕು ಅನಿಸಿದರೆ ಬರಬಹುದು ಎಂಬ ಅವಕಾಶವನ್ನೂ ನ್ಯಾಯಮೂರ್ತಿಗಳು ನೀಡಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Election Result 2024: ಇಂಡಿ ಒಕ್ಕೂಟ ಸಭೆ ಸೇರಿದ್ದ ಸ್ಥಳದಲ್ಲೇ ವಾಸ್ತುದೋಷ, ಅಂದು ಅಮವಾಸ್ಯೆ ಬೇರೆ; ಹಾಗಾಗಿ…

Election Result 2024: ಪಕ್ಷಗಳ ಕುಂಡಲಿಯಾನುಸಾರ ಇಂಡೀ ಒಕ್ಕೂಟದ ರಚನಾತ್ಮಕ ಕಾರ್ಯವು ಬೆಂಗಳೂರಿನ ವೆಸ್ಟ್-ಎಂಡ್ ಹೋಟೆಲ್‌ನಲ್ಲಿ 26 ಪಕ್ಷಗಳು ಒಟ್ಟುಗೂಡಿ ನಡೆಯಿತು. ಆ ದಿನ ಸೋಮವಾರ, ಪುನರ್ವಸು ನಕ್ಷತ್ರ ಕಟಕರಾಶಿಯಾಗಿ, ಅಮಾವಾಸ್ಯೆ ದಿನವಾಗಿತ್ತು. ವೆಸ್ಟ್-ಎಂಡ್ ಹೋಟೆಲ್ ವಾಸ್ತುಶಾಸ್ತ್ರ ದೋಷಗೊಂಡಿರುವ ಸ್ಥಳ. ಈ ಹೋಟೆಲ್‌ನಲ್ಲಿದ್ದ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಂಡಿದ್ದಾರೆ. ಹಾಗಾಗಿ ಈ ಸಂಗತಿ ಪ್ರತಿಪಕ್ಷಗಳಿಗೆ ನಕಾರಾತ್ಮಕವಾಗಿ ಪರಿಣಮಿಸಲಿದೆ ಎನ್ನುತ್ತಾರೆ ಈ ಜೋತಿಷಿ.

VISTARANEWS.COM


on

Election Result 2024
Koo
– ಗಜೇಂದ್ರ ಬಾಬು, ಜ್ಯೋತಿಷ್ಯರು ಹಾಗೂ ವಾಸ್ತು ತಜ್ಞರು- ಆದಿತ್ಯ ಜ್ಯೋತಿರ್ ವಿಜ್ಞಾನ ಶಾಲೆ

ಪ್ರಪಂಚದಲ್ಲೆ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮ ಭಾರತ. ನಮ್ಮಂತಹ ಮಹಾನ್ ದೇಶದಲ್ಲಿ ಪ್ರಜಾಪ್ರಭುತ್ವದ ಹಬ್ಬವಾಗಿರುವ ಚುನಾವಣೆಯನ್ನು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಡೆಸುವುದೇ ಒಂದು ದೊಡ್ಡ ಸವಾಲು. ಚುನಾವಣೆ ನೀತಿ-ಸಂಹಿತೆಯನ್ನು ಹಾಗೂ ಈ ನೆಲದ ಕಾನೂನುಗಳನ್ನು ಪಾಲಿಸುವುದು ಕೇಂದ್ರ-ರಾಜ್ಯ ಸರ್ಕಾರ ಹಾಗೂ ಚುನಾವಣೆ ಆಯೋಗದ ಬಹು ದೊಡ್ಡ ಜವಾಬ್ದಾರಿ. ಇಂತಹ ಚುನಾವಣೆಗಳನ್ನು ನಡೆಸುವಾಗ ರಾಜಕಾರಣಿಗಳ-ಅಧಿಕಾರಿಗಳ ಹಾಗೂ ಮತದಾರರ ಜವಾಬ್ದಾರಿಯನ್ನು ಕಡೆಗಣಿಸುವಂತಿಲ್ಲಾ. ವೇದಾಂಗ ಜ್ಯೊತಿಷ್ಯ-ವಾಸ್ತು ಶಾಸ್ತ್ರ , ಪ್ರಾಪಂಚಿಕ ಜ್ಯೋತಿಷ ಇದನ್ನು ರಾಜಕಿಯ ಜ್ಯೋತಿಷ ಎಂದು ಕರೆಯುತ್ತಾರೆ. ಇದು ರಾಜಕೀಯ ಸರ್ಕಾರ ಮತ್ತು ನಿರ್ಧಿಷ್ಟ ರಾಷ್ಟ್ರ, ರಾಜ್ಯ ಅಥವಾ ನಗರವನ್ನು ನಿಯಂತ್ರಿಸುವ ಕಾನೂನುಗಳೊಂದಿಗೆ ವ್ಯವಹರಿಸುವ ಜ್ಯೋತಿಷದ ಶಾಖೆಯಾಗಿದೆ. ಈ ಹೆಸರು ಲ್ಯಾಟಿನ್ ಪದ ಮುಂಡಸ, ‘ವರ್ಲ್ಡ್’ ನಿಂದ (ಮಂಡೇನ್) ಹೆಸರನ್ನು ಪಡೆದುಕೊಂಡಿದೆ.

ಪ್ರಾಪಂಚಿಕ ಜ್ಯೋತಿಷವು ಜ್ಯೋತಿಷ ಶಾಸ್ತ್ರದ ಅತ್ಯಂತ ಪ್ರಾಚೀನ ಶಾಖೆ ಎಂದು ಜ್ಯೋತಿಷ ಇತಿಹಾಸಕಾರರಿಂದ ವ್ಯಾಪಕವಾಗಿ ನಂಬಲಾಗಿದೆ. ಆರಂಭಿಕ ಬ್ಯಾಬಿಲೋನಿಯನ್ ಜ್ಯೋತಿಷವು ಪ್ರಾಪಂಚಿಕ ಜ್ಯೋತಿಷದೊಂದಿಗೆ ಪ್ರತ್ಯೇಕ ಕಾಳಜಿ ಹೊಂದಿತ್ತು. ಇದು ಬೌಗೋಳಿಕ ಆಧಾರಿತವಾಗಿದೆ. ನಿರ್ಧಿಷ್ಟವಾಗಿ ದೇಶಗಳು ಮತ್ತು ರಾಷ್ಟ್ರಗಳಿಗೆ ಅನ್ವಯಿಸುತ್ತದೆ. ರಾಷ್ಟ್ರದ ಆಡಳಿತ ಮುಖ್ಯಸ್ಥರಿಗೆ ರಾಜ್ಯ ಮತ್ತು ರಾಜನ ಯೋಗಕ್ಷೇಮದ ಬಗ್ಗೆ ಸಂಪೂರ್ಣವಾಗಿ ಕಾಳಜಿವಹಿಸುತ್ತದೆ. ಜ್ಯೋತಿಷ ಶಾಸ್ತ್ರದ ಅಭ್ಯಾಸಗಳು ಮತ್ತು ಗ್ರಹಗಳ ವ್ಯಾಖ್ಯಾನವನ್ನು ರಾಜಕೀಯ ಪ್ರಶ್ನೆಗಳಿಗೆ ಉತ್ತರಿಸಲು ಸಹಸ್ರಮಾನಗಳಿಂದ ಬಳಸಲಾಗಿದೆ.

ಭಾರತ ದೇಶದಲ್ಲಿ ಚುನಾವಣೆ ಆಯೋಗದ ಅಂಕಿ ಅಂಶಗಳ ಪ್ರಕಾರ 98 ಕೋಟಿ ಮತದಾರರ ನೊಂದಣಿಯಾಗಿದೆ. ಪ್ರಪಂಚದಲ್ಲೆ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಪ್ರಜಾಪ್ರಭುತ್ವ ದೇಶ ನಮ್ಮ ಭಾರತ ದೇಶ.

ಒಂದು ದೇಶದ ಚುನಾವಣೆ ಫಲಿತಾಂಶ ಹೇಗೆ ಹೊರ ಹೊಮ್ಮುವ ಸಾಧ್ಯತೆಗಳ ಬಗ್ಗೆ ಜ್ಯೋತಿಷ ಹಾಗೂ ವಾಸ್ತು ಶಾಸ್ತ್ರ ರೀತಿಯ ಮತ್ತು ಇನ್ನಿತರ ಶಾಸ್ತ್ರಗಳ ಬಗ್ಗೆ ಅಧ್ಯಯನ ಮಾಡಬೇಕಾದರೆ, ಆ ದೇಶ ಸ್ವಾತಂತ್ರ ಪಡೆದ ದಿನಾಂಕ, ವೇಳೆ, ಚುನಾವಣೆ ಪೋಷಿಸಿದ ದಿನಾಂಕ, ವೇಳೆ, ಚುನಾವಣೆ ನಡೆಯುವ ದಿನಾಂಕಗಳು, ವೇಳೆ, ರಾಜಕೀಯ ಪಕ್ಷಗಳು ಉದಯವಾದ ಜನ್ಮ ಕುಂಡಲಿ ಹೀಗೆ ಅನೇಕ ನಿಯತಾಂಕಗಳನ್ನು ಅನುಸರಿಸಿ ಒಂದು ನಿರ್ದಿಷ್ಟ ಅಂಶಕ್ಕೆ ಫಲಿತಾಂಶಗಳು ಊಹಿಸಬಹುದು.

ಚುನಾವಣೆಯನ್ನು ಘೋಷಿಸಿದ ದಿನ ಹೇಗಿತ್ತು?

ಚುನಾವಣೆಯನ್ನು ಆಯೋಗವು ಪೋಷಿಸಿದ ದಿನಾಂಕ 16ನೇ ಮಾರ್ಚ್ 2024, ಮಧ್ಯಾಹ್ನ 3 ಗಂಟೆಗೆ, ಶ್ರೀ ಶೋಭಕೃತ್‌ನಾಮ ಸಂವತ್ಸರ, ಉತ್ತರಾಯಣ, ಪಾಲ್ಗುಣ ಮಾಸ, ಸಪ್ತಮಿ ತಿಥಿ, ಶನಿವಾರ, ರೋಹಿಣಿ ನಕ್ಷತ್ರ, ಅಮೃತಸಿದ್ದಿಯೋಗ, ಕಟಕಲಗ್ನದಲ್ಲಿ ಲಗ್ನಾಧಿಪತಿಯಾದ ಚಂದ್ರನು 11 ರಲ್ಲಿ ಅಂದರೆ ಲಾಭದಲ್ಲಿ ರೋಹಿಣಿ ನಕ್ಷತ್ರದಲ್ಲಿ ಸ್ಥಿತನಾಗಿದ್ದು, ಚುನಾವಣೆಗಳನ್ನು ಈ ಕೆಳಕಂಡಂತೆ 7 ಹಂತಗಳಲ್ಲಿ ನಡೆಸಲಾಗಿದೆ ಹಾಗೂ ಅದರ ವಿವರಗಳು ಈ ಕೆಳಕಂಡಂತಿವೆ.

ಚುನಾವಣೆ ಪೋಷಿಸಿದ ಸಂವತ್ಸರ ಶ್ರೀ ಶೋಭಕೃತ್ ನಾಮ ಸಂವತ್ಸರ, ಆ ವರ್ಷದ ರಾಜ ಬುಧ. ಆದರೆ ಚುನಾವಣೆಗಳು ನಡೆದದ್ದು ಶ್ರೀ ಕ್ರೋಧಿನಾಮ ಸಂವತ್ಸರ ಹಾಗೂ ಈ ಸಂವತ್ಸರದ ಅಧಿಪತಿ ಕುಜ. ನೂತನ ಸಂವತ್ಸರದ ಯುಗಾದಿಯು ದಿನಾಂಕ: 19.04.2025ನೇ ಮಂಗಳವಾರ, ರೇವತಿ ನಕ್ಷತ್ರದೊಂದಿಗೆ ಪ್ರಾರಂಭಗೊಂಡಿರುತ್ತದೆ. ಈ ದಿನದ ಕುಂಡಲಿಯೇ ಈ ಸಂವತ್ಸರದ ಪ್ರಧಾನ ಪಾತ್ರವಹಿಸುತ್ತದೆ.

ನೂತನ ಸಂವತ್ಸರದಲ್ಲಿ ಸಂಭವಿಸುವ ನಾಲ್ಕು ಗ್ರಹಣಗಳು ಅಂದರೆ 2 ಸೂರ್ಯ ಗ್ರಹಣಗಳು ಮತ್ತು 2 ಚಂದ್ರ ಗ್ರಹಣಗಳು ಭಾರತಕ್ಕೆ ಕಾಣುವುದಿಲ್ಲವಾದ್ದರಿಂದ ಭಾರತದಲ್ಲಿ ನಡೆದ ಚುನಾವಣೆಗಳಲ್ಲಿ ಹೆಚ್ಚಿನ ಕೆಟ್ಟ ಪರಿಣಾಮಗಳನ್ನು ಬೀರಲು ಸಾಧ್ಯವಾಗಿಲ್ಲ. ಶಾಂತಿಯುತ ಚುನಾವಣೆ ನಡೆದಿರುತ್ತದೆ.

ಚಂದ್ರನ ನಡೆಗೆಯಿಂದ ಮತದಾರರ ಮನಸ್ಸನ್ನು ಅಳಿಯುವ ಸಾಧ್ಯತೆಗಳು ಅಂದರೆ ದಿನಾಂಕ: 19.04.2024 ರಿಂದ ಪ್ರಾರಂಭಗೊಂಡ ಚುನಾವಣೆ ಪ್ರಕ್ರಿಯೆಗಳು ದಿನಾಂಕ: 01.06.2024ನೇ ಶನಿವಾರ ಕೊನೆಗೊಳ್ಳುವ ತನಕ ಚಂದ್ರನು ಸುಮಾರು 42 ದಿನಗಳ ಕಾಲ ಪ್ರಯಾಣಿಸಿ 2 ಪೂರ್ಣಿಮಾ ಹಾಗೂ 1 ಅಮಾವಾಸ್ಯೆಯನ್ನು ಸಂದಿಸಿ ಚುನಾವಣೆ ಫಲಿತಾಂಶವನ್ನು ಪೋಷಿಸುವ ದಿನಾಂಕ: 04.06.2024 ರಲ್ಲಿ ಪ್ರಯಾಣ ಬೆಳೆಸಿ ದಿನಾಂಕ: 06.06.2024 ರಂದು ಸಂಭವಿಸುವ ಅಮಾವಾಸ್ಯೆಯ ದಿನದಂದು ವೃಷಭ ರಾಶಿಯಲ್ಲಿ ಪಂಚ-ಗ್ರಹಗಳ ಕೂಟದಲ್ಲಿ ಮುಳುಗಿ ಮುಂದೆ ಸಾಗುತ್ತಾನೆ.

ಈ ಎಲ್ಲಾ ಮೇಲಿನ ಅಂಶಗಳನ್ನೊಳಗೊಂಡು ಭಾರತ ದೇಶದಲ್ಲಿ ನಡೆದ ಚುನಾವಣೆಗಳನ್ನು ಗ್ರಹಗತಿಗಳ ಆಧಾರದ ಮೇಲೆ ರಾಷ್ಟಿçಯ ಪಕ್ಷಗಳ ಕುಂಡಲಿಗಳನ್ನು ಪರಿಶೀಲಿಸಿ ಚುನಾವಣೆಯಲ್ಲಿ ಪಕ್ಷಗಳು ಗಳಿಸುವ ಅಂಕಿ-ಅಂಶಗಳು ಸೂಚಕಗಳನ್ನು ನೀಡಲಾಗಿದೆ.

ಸ್ವತಂತ್ರ ಭಾರತದ ಕುಂಡಲಿಯನ್ನು ಪರಿಶೀಲಿಸುವಾಗ, ಪುಷ್ಯ ನಕ್ಷತ್ರದ ಕಟಕ ರಾಶಿಯಲ್ಲಿ ಸ್ವಾತಂತ್ರ ಪಡೆದಿರುತ್ತೇವೆ (15.08.1947) ಪ್ರಸ್ತುತ ದೇಶಕ್ಕೆ ಅಷ್ಠಮ ಶನಿಯು ನಡೆಯುತ್ತಿದ್ದು ಚಂದ್ರದಶಾ 14.08.2015-13.08.2025, ಚಂದ್ರದಶಾ-ಶನಿ-ಭುಕ್ತಿಯು 13.06.2023 ರಿಂದ 12.02.2025.

ಸಭೆ ಸೇರಿದ್ದ ಸ್ಥಳದಲ್ಲೇ ವಾಸ್ತುದೋಷ:

ಪಕ್ಷಗಳ ಕುಂಡಲಿಯಾನುಸಾರ ಇಂಡೀ ಒಕ್ಕೂಟದ ರಚನಾತ್ಮಕ ಕಾರ್ಯವು ದಿನಾಂಕ: 17.07.2023 ರಂದು ಬೆಂಗಳೂರಿನ ವೆಸ್ಟ್-ಎಂಡ್ ಹೋಟೆಲ್‌ನಲ್ಲಿ 26 ಪಕ್ಷಗಳು ಒಟ್ಟುಗೂಡಿ ಕೇಂದ್ರದಲ್ಲಿರುವ ಬಿ.ಜೆ.ಪಿ ಸರ್ಕಾರವನ್ನು ಮಣಿಸಲು ಬೆಂಗಳೂರಿನ ವೆಸ್ಟ್-ಎಂಡ್ ಹೋಟೆಲ್‌ನಲ್ಲಿ ಉದಯವಾಯಿತು. ಆ ದಿನ ಸೋಮವಾರ, ಪುನರ್ವಸು ನಕ್ಷತ್ರ ಕಟಕರಾಶಿಯಾಗಿ, ಅಮಾವಾಸ್ಯೆ ದಿನವಾಗಿತ್ತು. ವೆಸ್ಟ್-ಎಂಡ್ ಹೋಟೆಲ್ ವಾಸ್ತುಶಾಸ್ತ್ರ ದೋಷಗೊಂಡಿರುವ ಸ್ಥಳ, ಈ ಹೋಟೆಲ್‌ನಲ್ಲಿ ಹಿಂದಿನ ಮುಖ್ಯ ಮಂತ್ರಿಗಳು ಆಡಳಿತ ನಡೆಸಿ ಅಧಿಕಾರ ಕಳೆದುಕೊಂಡು ಇಂದಿಗೂ ಈ ಹೋಟೆಲ್‌ನ ಹೆಸರು ರಾಜಕೀಯದಲ್ಲಿ ಆಗಿಂದಾಗ್ಗೆ ಪ್ರಸ್ತಾಪದಲ್ಲಿರುತ್ತದೆ.

ಇಂಡೀ ಒಕ್ಕೂಟವು ಆಶಾಢ ಅಮಾವಾಸ್ಯೆ ದಿನದಂದು ಸ್ಥಾಪನೆಗೊಂಡು ಈವರೆಗೆ ಅನೇಕ ಏಳು-ಬೀಳುಗಳನ್ನು ಕಂಡಿರುತ್ತದೆ. ಒಗ್ಗಟ್ಟಿನ ಬಲ ಪ್ರದರ್ಶನದಲ್ಲಿ ಪಕ್ಷಗಳು ವಿಫಲವಾಗಿದೆ. ಪಕ್ಷಗಳ ನಾಯಕರುಗಳಲ್ಲಿ ಭಿನ್ನಾಭಿಪ್ರಾಯದ ಬಿರುಕು ಕಂಡು ಮತದಾರರ ಮನದಾಳದಲ್ಲಿ ನಕಾರಾತ್ಮಕ ತರಂಗಗಳು ಪ್ರಸರಿಸುವಂತಾಗಿ ಮತದಾನದಲ್ಲಿ ಇದು ಪ್ರಮುಖ ಪಾತ್ರ ವಹಿಸಿತು. ಮತ್ತೊಂದು ಮಹತ್ವವಾದ ವಿಷಯ ಇಂಡೀ ಒಕ್ಕೂಟವನ್ನು ನಾಯಕನಾರು? ಎಂಬ ಪ್ರಶ್ನೆಯು ಸಹಾ ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿತು. ಇದಕ್ಕೆ ಕಾರಣ ಮನೋಕಾರಕನಾದ ಚಂದ್ರನು ಅಮಾವಾಸ್ಯೆಯಲ್ಲಿ ವಾಸವಾಗಿದ್ದು (ಒಕ್ಕೂಟದ ಪ್ರಾರಂಭದ ದಿನ).

ಪರಿಸ್ಥಿತಿ ಬಿಜೆಪಿಗೆ ಅನುಕೂಕರವೇ?:

ಭಾರತೀಯ ಜನತಾ ಪಕ್ಷವು ದಿನಾಂಕ: 06.04.1950 ಬೆಳಿಗ್ಗೆ 11-40ಕ್ಕೆ ಚೈತ್ರ ಮಾಸದ ಕೃಷ್ಣ ಪಕ್ಷದ ಚತುರ್ತಿ ತಿಥಿಯ ಅನುರಾಧ ನಕ್ಷತ್ರದಂದು ಗುರುವಾರ ಪ್ರಾರಂಭವಾಯಿತು. (ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ ಜನ್ಮ ನಕ್ಷತ್ರವೂ ಕೂಡಾ ಅನುರಾಧ ನಕ್ಷತ್ರ ವೃಶ್ಚಿಕ ರಾಶಿ)

ಪ್ರಸ್ತುತ ಗೋಚಾರದಲ್ಲಿ ಈ ಪಕ್ಷಕ್ಕೆ ಗುರುಬಲವಿದ್ದು ವೃಶ್ಚಿಕ ರಾಶಿಗೆ ಗುರು-ಬುಧ-ಶುಕ್ರ-ರವಿ ದೃಷ್ಟಿಯಿಂದ ಅತಿವೇಗದ ಚಲನೆಯಿದ್ದರೂ, ಶನಿ ದೃಷ್ಠಿಯಿಂದ ಈ ಅತೀ ವೇಗವನ್ನು ತಡೆದು ಮಧ್ಯಮ ವೇಗ ಅಂದರೆ, ಮಂದ ವೇಗವಾಗಿ ಮುನ್ನಡೆಯಲಿದೆ. ಪ್ರಸ್ತುತ ಕುಜದಶಾ ಶುಕ್ರ ಭುಕ್ತಿ ನಡೆಯುತ್ತಿದ್ದು, ಕುಜನು ಈ ಸಂವತ್ಸರದ ರಾಜನಾದುದರಿಂದ ಅನೇಕ ಅಡೆ-ತಡೆಗಳಿಂದ ಪಕ್ಷವು ಮುನ್ನುಗ್ಗುವ ಸಾಧ್ಯತೆಯು ಕಂಡು ಬರುತ್ತದೆ.

ಶ್ರೀ ನರೇಂದ್ರ ಮೋದಿಯವರ ಜನ್ಮ ಜಾತಕ ಹೇಗಿದೆ?

ಶ್ರೀ ನರೇಂದ್ರ ಮೋದಿಯವರು 17-09-1950 ಬೆಳಿಗ್ಗೆ 9-53 ಗುಜರಾತಿನ ವದಾನಗರದಲ್ಲಿ ಜನಿಸಿರುತ್ತಾರೆ. ಅಂದು ಭಾದ್ರಪದ ಮಾಸ ಶುಕ್ಲಪಕ್ಷ ಷಷ್ಠಿ ತಿಥಿ ಇದ್ದು, ಭಾನುವಾರ ಅನುರಾಧಾ ನಕ್ಷತ್ರದ ವೃಶ್ಚಿಕ ರಾಶಿಯಲ್ಲಿ ಜನನ. ಪ್ರಸ್ತುತ ಗೋಚಾರದಲ್ಲಿ ವೃಶ್ಚಿಕ ರಾಶಿಯವರಿಗೆ ಗುರುಬಲವಿದ್ದು, ನಾಲ್ಕು ಗ್ರಹಗಳು ವೃಶಭ ರಾಶಿಯಲ್ಲಿ ಸಂಯೋಗವಿದ್ದು ವೃಶ್ಚಿಕ ರಾಶಿಯಲ್ಲಿದ್ದ ದೃಷ್ಟಿ ಹಾಗೂ ಕುಂಭ ರಾಶಿಯಿಂದ ಶನಿಭಗವಾನರ ದೃಷ್ಟಿ ಸಹಾ ವೃಶ್ಚಿಕ ರಾಶಿಯಲ್ಲಿ ಇದ್ದು, ಇವರಿಗೆ ಪ್ರಸ್ತುತ ಕುಜ ದಶಾ ಗುರು ಭುಕ್ತಿ ಸಹಾ ಲಭ್ಯವಿರುತ್ತದೆ. ಜನ್ಮ ಕುಂಡಲಿಯಲ್ಲಿ ಶಶಿ ಮಂಗಳ ಯೋಗ ಹಾಗೂ ಬುಧ ಆದಿತ್ಯ ಯೋಗವಿದ್ದು, ರಾಜಯೋಗ ನಡೆಯುತ್ತಿದ್ದು, ಈ ರಾಜಯೋಗ ನೀಡುವ ಗ್ರಹಗಳು ಪ್ರಸ್ತುತ ಗೋಚಾರದಲ್ಲಿ ಶ್ರೀ ಮೋದಿಯವರ ರಾಶಿಯಾದ ವೃಶ್ಚಿಕವನ್ನು ವೀಕ್ಷಿಸುತ್ತಿರುವುದರಿಂದ ಈ ರಾಶಿಯವರಿಗೆ ರಾಜಬಲವಿರುತ್ತದೆ.

ಶ್ರೀ ನರೇಂದ್ರ ಮೋದಿಯವರು ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ದಿನಾಂಕ 14ನೇ ಮೇ 2024 ಮಂಗಳವಾರ ಪುಷ್ಯಾ ನಕ್ಷತ್ರ ಕಟಕ ರಾಶಿ ಅಭಿಜಿತ್ ಲಗ್ನದಲ್ಲಿ ಅಂದರೆ ನಮ್ಮ ಭಾರತ ದೇಶಕ್ಕೆ ಸ್ವತಂತ್ರ ಬಂದ ನಕ್ಷತ್ರದಲ್ಲಿ ನಾಮಪತ್ರ ಸಲ್ಲಿಕೆ. ನಾಡೀ ಗ್ರಂಥಗಳ ಅನುಸಾರ ಯಾವ ರಾಜನು ಪುಷ್ಯಾ ನಕ್ಷತ್ರದ ದಿನ ಶಿವನ ಆರಾಧನೆಯನ್ನು ಮಾಡಿ ತನ್ನ ರಾಜ್ಯಕ್ಕಾಗಿ ಹಾಗೂ ದೇಶದ ಜನತೆಗಾಗಿ ಅಭಿವೃದ್ಧಿಯನ್ನು ಬಯಸಿ ಸಂಕಲ್ಪ ಮಾಡುತ್ತಾನೋ ಆ ರಾಜನು ತನ್ನ ರಾಜ್ಯವನ್ನು ಸುಭಿಕ್ಷೆಯಾಗಿ ಆಳುತ್ತಾನೆ ಎಂಬ ಉಲ್ಲೇಖ ದೊರೆಯುತ್ತದೆ. ಮೋದಿಯವರು ಈ ಮುಹೂರ್ತದಲ್ಲಿ ತಮ್ಮ ನಾಮಪತ್ರ ಸಲ್ಲಿಸಿರುವುದರಿಂದ ಅವರ ಸಂಕಲ್ಪ ಈಡೇರುವ ಸಾಧ್ಯತೆಗಳಿವೆ. ಈ ಎಲ್ಲಾ ಮೇಲಿನ ವಿಶ್ಲೇಷಗಳನುಸಾರ ಎನ್.ಡಿ.ಎ ಒಕ್ಕೂಟವು ಸುಮಾರು 330 ಲೋಕಸಭಾ ಸ್ಥಾನಗಳನ್ನು ಪಡೆದು ಮುಂದಿನ ಸರ್ಕಾರವನ್ನು ರಚನೆ ಮಾಡುವ ಸಾಧ್ಯತೆಗಳಿವೆ.

Continue Reading

ಗ್ಯಾಜೆಟ್ಸ್

Battery Life Tips: ಈ 5 ಸಲಹೆ ಪಾಲಿಸಿ; ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಸಾಮರ್ಥ್ಯ ಹೆಚ್ಚಿಸಿ!

ಸ್ಮಾರ್ಟ್‌ಫೋನ್‌ನ ಬ್ಯಾಟರಿ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಮತ್ತು ಕೆಲವೇ ಗಂಟೆಗಳ ಬ್ಯಾಕಪ್ ನೀಡುತ್ತಿದ್ದರೆ ಚಿಂತೆ ಪಡಬೇಕಿಲ್ಲ. ಯಾಕೆಂದರೆ ಬ್ಯಾಟರಿ ಸಾಮರ್ಥ್ಯ (Battery Life Tips) ಹೆಚ್ಚಿಸುವ ಕೆಲವು ಸಲಹೆಗಳು ಇಲ್ಲಿವೆ. ಸ್ಮಾರ್ಟ್ ಫೋನ್ ನ ಬ್ಯಾಟರಿ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದರೆ ಇದರ ಬ್ಯಾಟರಿ ಬ್ಯಾಕಪ್ ಅವಧಿಯನ್ನು ಹೆಚ್ಚಿಸುವ ಈ ಐದು ಸಲಹೆಗಳನ್ನು ಪಾಲಿಸಿದರೆ ಸಾಕು.

VISTARANEWS.COM


on

By

Battery Life Tips
Koo

ಸ್ಮಾರ್ಟ್ ಫೋನ್ ಗಳಲ್ಲಿ (smart phone) ಹೆಚ್ಚಾಗಿ ಕಂಡು ಬರುವ ಸಮಸ್ಯೆ ಬ್ಯಾಟರಿ ಬ್ಯಾಕಪ್ (Battery Life Tips). ಹೆಚ್ಚಿನ ಬ್ಯಾಟರಿ ಲೈಫ್ ಡೇಟಾದಲ್ಲೇ (data) ಖಾಲಿಯಾಗುತ್ತದೆ. ಆದರೆ ಡೇಟಾ ಬಳಕೆ ಕಡಿಮೆ ಆಗಿದ್ದರೂ ಕೆಲವೊಮ್ಮೆ ಬ್ಯಾಟರಿ ಹೆಚ್ಚು ಹೊತ್ತು ಬಾಳಿಕೆ ಬರುವುದಿಲ್ಲ ಎನ್ನುವ ದೂರು ಹೆಚ್ಚಿನವರದ್ದಾಗಿರುತ್ತದೆ. ಸ್ಮಾರ್ಟ್‌ಫೋನ್‌ನ ಬ್ಯಾಟರಿ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಮತ್ತು ಕೆಲವೇ ಗಂಟೆಗಳ ಬ್ಯಾಕಪ್ ನೀಡುತ್ತಿದ್ದರೆ ಚಿಂತೆ ಪಡೆಬೇಕಿಲ್ಲ. ಯಾಕೆಂದರೆ ಬ್ಯಾಟರಿ ಸಾಮರ್ಥ್ಯ ಹೆಚ್ಚಿಸುವ ಕೆಲವು ಸಲಹೆಗಳು ಇಲ್ಲಿವೆ.

ಸ್ಮಾರ್ಟ್ ಫೋನ್ ನ ಬ್ಯಾಟರಿ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದರೆ ಇದರ ಬ್ಯಾಟರಿ ಬ್ಯಾಕಪ್ ಅವಧಿಯನ್ನು ಹೆಚ್ಚಿಸುವ ಈ ಐದು ಸಲಹೆಗಳನ್ನು ಪಾಲಿಸಿದರೆ ಸಾಕು.

1. ಪರದೆಯ ಹೊಳಪನ್ನು ಕಡಿಮೆ ಮಾಡಿ

ಸ್ಮಾರ್ಟ್ ಫೋನ್ ಪರದೆಯ ಹೊಳಪು ಹೆಚ್ಚಿನ ಬ್ಯಾಟರಿಯನ್ನು ಸೇವಿಸುತ್ತದೆ. ಹೀಗಾಗಿ ಕಣ್ಣಿಗೆ ಆರಾಮದಾಯಕ ಎನಿಸುವ ಕನಿಷ್ಠ ಮಟ್ಟಕ್ಕೆ ಅದನ್ನು ಹೊಂದಿಸಿ. ಸೆಟ್ಟಿಂಗ್ ನಲ್ಲಿ ಸಾಧ್ಯವಾದರೆ ಸ್ವಯಂ-ಪ್ರಕಾಶಮಾನವನ್ನು ಬಳಸಿ. ಆಗ ತನ್ನಿಂತಾನೇ ಬ್ಯಾಟರಿ ಬಾಳಿಕೆ ಸಾಮರ್ಥ್ಯ ಹೆಚ್ಚಾಗುತ್ತದೆ.

2. ಹಿನ್ನೆಲೆಯಲ್ಲಿರುವ ಅಪ್ಲಿಕೇಶನ್‌ಗಳನ್ನು ಮುಚ್ಚಿ

ಕೆಲವೊಂದು ಅಪ್ಲಿಕೇಶನ್ ಗಳನ್ನು ಬಳಸದೇ ಇದ್ದರೂ ಅದು ನಿಮ್ಮ ಸ್ಮಾರ್ಟ್ ಫೋನ್ ನ ಹಿನ್ನೆಲೆಯಲ್ಲಿ ರನ್ ಆಗುತ್ತಲೇ ಇರುತ್ತವೆ. ಇಂತವುಗಳನು ಮುಚ್ಚಿದರೆ ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸಬಹುದು. ಇದಕ್ಕಾಗಿ ಸೆಟ್ಟಿಂಗ್‌ ನಲ್ಲಿ ಬ್ಯಾಟರಿಗೆ ಹೋಗಿ ಮತ್ತು ಹಿನ್ನೆಲೆ ಅಪ್ಲಿಕೇಶನ್ ರಿಫ್ರೆಶ್ ಅನ್ನು ಆಫ್ ಮಾಡುವ ಮೂಲಕ ಈ ಅಪ್ಲಿಕೇಶನ್‌ಗಳನ್ನು ಮುಚ್ಚಿ.


3. ಸ್ಥಳ ತೋರಿಸುವ ವ್ಯವಸ್ಥೆ ಆಫ್ ಮಾಡಿ

ಜಿಪಿಎಸ್ ಆನ್ ಆಗಿರುವಾಗ ಅದು ಬ್ಯಾಟರಿಯನ್ನು ತ್ವರಿತವಾಗಿ ಖಾಲಿ ಮಾಡುತ್ತದೆ. ಅಗತ್ಯವಿಲ್ಲದಿದ್ದಾಗ ಸ್ಥಳ ಸೇವೆಗಳನ್ನು ಆಫ್ ಮಾಡಿ.

4. ವೈ-ಫೈ ಮತ್ತು ಬ್ಲೂಟೂತ್ ಆಫ್ ಮಾಡಿ

ವೈ-ಫೈ ಮತ್ತು ಬ್ಲೂಟೂತ್ ಅನ್ನು ಬಳಸದೇ ಇರುವಾಗ ಅವುಗಳನ್ನು ಆಫ್ ಮಾಡಿ. ಅವುಗಳು ನಿರಂತರವಾಗಿ ಸಿಗ್ನಲ್ ಗಳಿಗಾಗಿ ಸ್ಕ್ಯಾನ್ ಮಾಡುತ್ತದೆ. ಇದು ಬ್ಯಾಟರಿ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.

5. ವಿದ್ಯುತ್ ಉಳಿತಾಯ ಮೋಡ್ ಬಳಸಿ

ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ವಿದ್ಯುತ್ ಉಳಿಸುವ ಮೋಡ್ ಅನ್ನು ಹೊಂದಿದ್ದು, ಬ್ಯಾಟರಿಯನ್ನು ಉಳಿಸಲು ಕೆಲವು ವೈಶಿಷ್ಟ್ಯಗಳನ್ನು ಮಿತಿಗೊಳಿಸುತ್ತದೆ. ಬ್ಯಾಟರಿ ಕಡಿಮೆಯಾದಾಗ ಅದನ್ನು ಆನ್ ಮಾಡಿ.

ಇದನ್ನೂ ಓದಿ: Credit Card Safety Tips: ಕ್ರೆಡಿಟ್‌ ಕಾರ್ಡ್ ವಂಚನೆಯಿಂದ ಪಾರಾಗಲು ಇಲ್ಲಿದೆ 9 ಸಲಹೆ

ಇವಿಷ್ಟೇ ಅಲ್ಲ. ಬ್ಯಾಟರಿ ಸಾಮರ್ಥ್ಯ ಹೆಚ್ಚಿಸಲು ಹಳೆಯ ಮತ್ತು ಅನಗತ್ಯ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ, ಡೇಟಾ ಉಳಿತಾಯ ಮೋಡ್ ಬಳಸಿ, ಲೈವ್ ವಾಲ್‌ಪೇಪರ್‌ಗಳು ಮತ್ತು ಅನಿಮೇಷನ್‌ಗಳನ್ನು ಆಫ್ ಮಾಡಿ, ಅಧಿಕ ಬಿಸಿಯಾಗುವುದನ್ನು ತಪ್ಪಿಸಿ, ಉತ್ತಮ ಗುಣಮಟ್ಟದ ಚಾರ್ಜರ್‌ಗಳು ಮತ್ತು ಕೇಬಲ್‌ಗಳನ್ನು ಬಳಸಿ ಮತ್ತು ಬ್ಯಾಟರಿ ಆರೋಗ್ಯವನ್ನು ನಿಯಮಿತವಾಗಿ ಪರಿಶೀಲಿಸಿ.

ಈ ಸರಳ ಸಲಹೆಗಳನ್ನು ಅನುಸರಿಸುವ ಮೂಲಕ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಬಾಳಿಕೆ ಅವಧಿಯನ್ನು ಹೆಚ್ಚಿಸಬಹುದು. ಹೆಚ್ಚು ಚಾರ್ಜ್ ಮಾಡದೆಯೇ ಅದನ್ನು ಪೂರ್ಣ ದಿನದವರೆಗೆ ಬಳಸಬಹುದು.

Continue Reading

ಪ್ರಮುಖ ಸುದ್ದಿ

Tumkur Lok Sabha Constituency: ತುಮಕೂರಿನ ಅದೃಷ್ಟ ಪರೀಕ್ಷೆಯಲ್ಲಿ ಗೆಲ್ಲುವರೇ ವಿ. ಸೋಮಣ್ಣ?

Tumkur Lok Sabha Constituency: ಈ ಬಾರಿ ಬೆಂಗಳೂರಿನ ಗೋವಿಂದರಾಜನಗರದ ಮಾಜಿ ಶಾಸಕ ವಿ.ಸೋಮಣ್ಣ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. 2014ರ ಚುನಾವಣೆಯಲ್ಲಿ ಬಿಜೆಪಿಯಿಂದ ವಿ.ಸೋಮಣ್ಣ ವಿರುದ್ಧ ಸ್ಪರ್ಧಿಸಿದ್ದ ಎಸ್.ಪಿ.ಮುದ್ದಹನುಮೇಗೌಡ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.

VISTARANEWS.COM


on

Tumkur Lok Sabha Constituency
Koo

ತುಮಕೂರು ಲೋಕಸಭಾ ಕ್ಷೇತ್ರವು ಬೆಂಗಳೂರಿನಿಂದ 70 ಕಿ.ಮೀ ದೂರದಲ್ಲಿದೆ. ತುಮಕೂರು ನಗರವು ರೇಷ್ಮೆ ಮತ್ತು ಹತ್ತಿ, ಜೊತೆಗೆ ಹಾಲು ಮತ್ತು ಡೈರಿ ಉತ್ಪನ್ನಗಳ ಉತ್ಪಾದನೆಗೆ ಹೆಸರುವಾಸಿ. ತುಮಕೂರು ಲೋಕಸಭಾ ಕ್ಷೇತ್ರವು ಆರಂಭದಲ್ಲಿ ಮೈಸೂರು ರಾಜ್ಯದ ಭಾಗವಾಗಿತ್ತು, ಆದರೆ 1977ರ ನಂತರ ಇದನ್ನು ಕರ್ನಾಟಕಕ್ಕೆ ಸೇರಿಸಲಾಯಿತು. ಒಟ್ಟು 16 ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ 10 ಬಾರಿ ಗೆಲುವು ಸಾಧಿಸಿದ್ದರೆ, ತುಮಕೂರು ಕ್ಷೇತ್ರವನ್ನು ಬಿಜೆಪಿ 4 ಬಾರಿ ವಶಪಡಿಸಿಕೊಂಡಿದೆ. ಈ ಬಾರಿ ಬೆಂಗಳೂರಿನ ಗೋವಿಂದರಾಜನಗರದ ಮಾಜಿ ಶಾಸಕ ವಿ. ಸೋಮಣ್ಣ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. 2014ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಸ್.ಪಿ.ಮುದ್ದಹನುಮೇಗೌಡ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.

ತುಮಕೂರು ಲೋಕಸಭಾ ಕ್ಷೇತ್ರವನ್ನು ವಿಶೇಷವಾಗಿ ಕಾಂಗ್ರೆಸ್ ನ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಆದರೆ ಕಳೆದ ಮೂರು ದಶಕಗಳಲ್ಲಿ ಬಿಜೆಪಿ ಈ ಸ್ಥಾನವನ್ನು ನಾಲ್ಕು ಬಾರಿ ಗೆದ್ದಿದೆ. ಅಲ್ಲದೆ, 2019ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಹಾಗೂ ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡ ಅವರೇ ಸೋತಿದ್ದರು. ಬಿಜೆಪಿಯ ಜಿ. ಎಸ್ ಬಸವರಾಜು ಅವರು ಗೆಲುವು ಕಂಡಿದ್ದರು.

ಹಿಂದಿನ ಫಲಿತಾಂಶಗಳು

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಜಿ.ಎಸ್.ಬಸವರಾಜು ಅವರು ಜೆಡಿಎಸ್​ನ ಅಭ್ಯರ್ಥಿ ಎಚ್.ಡಿ.ದೇವೇಗೌಡ ಅವರನ್ನು 13,339 ಮತಗಳ ಅಂತರದಿಂದ ಸೋಲಿಸಿದ್ದರು. 2019ರ ಚುನಾವಣೆಯಲ್ಲಿ ಬಿಜೆಪಿ ಶೇ.47.86ರಷ್ಟು ಮತಗಳನ್ನು ಪಡೆದಿತ್ತು.

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಮುದ್ದಹನುಮೇಗೌಡ ಎಸ್.ಪಿ ಅವರು ಬಿಜೆಪಿಯ ಜಿ.ಎಸ್.ಬಸವರಾಜು ಅವರನ್ನು 74,041 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಕಾಂಗ್ರೆಸ್ 39.03% ಮತಗಳನ್ನು ಗಳಿಸಿದೆ.

2009ರ ಸಾರ್ವತ್ರಿಕ ಚುನಾವಣೆಯಲ್ಲಿ ಜಿ.ಎಸ್.ಬಸವರಾಜು ಅವರು ಜೆಡಿಎಸ್​ನ ಮುದ್ದಹನುಮೇಗೌಡ ಅವರನ್ನು 21,445 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಶೇ.36.78ರಷ್ಟು ಮತಗಳನ್ನು ಪಡೆದಿತ್ತು.

ವಿಧಾನ ಸಭಾ ಕ್ಷೇತ್ರಗಳು ಎಷ್ಟಿವೆ?

ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಅವುಗಳೆಂದರೆ ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಗುಬ್ಬಿ ಮತ್ತು ಮಧುಗಿರಿ. ಕಾಂಗ್ರೆಸ್ 4, ಬಿಜೆಪಿ 2, ಜೆಡಿಎಸ್ 2 ಸ್ಥಾನಗಳನ್ನು ಹೊಂದಿವೆ.

ಇದನ್ನೂ ಓದಿ: Chitradurga Lok Sabha Constituency : ಚಿತ್ರದುರ್ಗ ಕ್ಷೇತ್ರವನ್ನು ಮರು ವಶಪಡಿಸಿಕೊಳ್ಳುವುದೇ ಕಾಂಗ್ರೆಸ್​?

2011 ರ ಜನಗಣತಿಯ ಪ್ರಕಾರ ತುಮಕೂರು 2678980 ಜನಸಂಖ್ಯೆಯನ್ನು ಹೊಂದಿತ್ತು. ಸರಾಸರಿ ಸಾಕ್ಷರತಾ ಪ್ರಮಾಣವು 75.14% – ಮಹಿಳೆಯರಲ್ಲಿ 67.38% ಮತ್ತು ಪುರುಷರಲ್ಲಿ 82.81% ಆಗಿತ್ತು. ಸುಮಾರು 1207608 ಗ್ರಾಮೀಣ ಮತದಾರರು ಮತದಾರರಲ್ಲಿ ಸುಮಾರು 75% ರಷ್ಟಿದ್ದಾರೆ. ಎಸ್ಸಿ ಮತ್ತು ಎಸ್ಟಿ ಮತದಾರರು ಕ್ರಮವಾಗಿ 18% ಮತ್ತು 7.4% ರಷ್ಟಿದ್ದಾರೆ.

Continue Reading

ರಾಜಕೀಯ

PM Narendra Modi: ವಿಕಸಿತ ಭಾರತಕ್ಕೆ ಭದ್ರ ಅಡಿಪಾಯ; ದೇಶದ ಜನತೆಗೆ ಮೋದಿ ಭಾವುಕ ಪತ್ರ

ಕನ್ಯಾಕುಮಾರಿಯಲ್ಲಿ ಧ್ಯಾನ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಪ್ರತಿಯೊಬ್ಬ (Narendra Modi Letter) ಭಾರತೀಯ ನಾಗರಿಕನಿಗೆ ಬರೆದಿರುವ ಮೊದಲ ಪತ್ರವಿದು. ಇದರಲ್ಲಿ ಅವರು ಸಾರ್ವತ್ರಿಕ ಚುನಾವಣೆಗಳ ಚುನಾವಣಾ ಪ್ರಚಾರದಿಂದ ಹಿಡಿದು ಡಿಜಿಟಲ್ ಇಂಡಿಯಾದಂತಹ ಉಪಕ್ರಮಗಳು ಮತ್ತು ‘ವಿಕಸಿತ ಭಾರತ’ಕ್ಕೆ ಅಡಿಪಾಯ ಹಾಕುವವರೆಗೆ ಅನೇಕ ವಿಷಯಗಳ ಕುರಿತು ಹೇಳಿದ್ದಾರೆ.

VISTARANEWS.COM


on

By

PM Narendra Modi
Koo

ಲೋಕಸಭೆ ಚುನಾವಣೆ 2024ರ (Loksabha election-2024) ಕೊನೆಯ ಹಂತದ (Narendra Modi Letter) ಮತದಾನದ ಬಳಿಕ ತಮಿಳುನಾಡಿನಲ್ಲಿರುವ (tamilnadu) ಕನ್ಯಾಕುಮಾರಿಯ (kanyakumari) ವಿವೇಕಾನಂದ ಸ್ಮಾರಕದಲ್ಲಿ (Vivekananda Rock Memorial ) 45 ಗಂಟೆಗಳ ತಮ್ಮ ಧ್ಯಾನ ಪೂರ್ಣಗೊಳಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ದೇಶದ ಜನತೆಗೆ ಸುದೀರ್ಘ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಅವರು ಸಾರ್ವತ್ರಿಕ ಚುನಾವಣೆಗಳ ಚುನಾವಣಾ ಪ್ರಚಾರದಿಂದ ಹಿಡಿದು ಡಿಜಿಟಲ್ ಇಂಡಿಯಾದಂತಹ ಉಪಕ್ರಮಗಳು ಮತ್ತು ‘ವಿಕಸಿತ ಭಾರತ’ಕ್ಕೆ ಅಡಿಪಾಯ ಹಾಕುವವರೆಗೆ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅದರ ಪತ್ರದ ಸಂಪೂರ್ಣ ಸಾರ ಇಲ್ಲಿದೆ.


ನನ್ನ ಸಹ ಭಾರತೀಯರೇ,

ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬವಾದ 2024ರ ಲೋಕಸಭಾ ಚುನಾವಣೆ ಮುಕ್ತಾಯಗೊಂಡಿದೆ. ಈ ಕ್ಷಣದಲ್ಲಿ ನನ್ನ ಮನಸ್ಸು ಹಲವಾರು ಅನುಭವ ಮತ್ತು ಭಾವನೆಗಳಿಂದ ತುಂಬಿದೆ. ನನ್ನೊಳಗೆ ಮಿತಿಯಿಲ್ಲದ ಶಕ್ತಿಯ ಹರಿವನ್ನು ನಾನು ಅನುಭವಿಸುತ್ತಿದ್ದೇನೆ. ಇದರಲ್ಲಿ ಅಮೃತ ಕಾಲದ 2024ರ ಲೋಕಸಭಾ ಚುನಾವಣೆ ಮೊದಲನೆಯದ್ದು.

1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಾಡಾದ ಮೀರತ್‌ನಿಂದ ಕೆಲವು ತಿಂಗಳ ಹಿಂದೆಯಷ್ಟೇ ನಾನು ನನ್ನ ಚುನಾವಣಾ ಅಭಿಯಾನವನ್ನು ಪ್ರಾರಂಭಿಸಿದೆ. ಅಂದಿನಿಂದ ನಮ್ಮ ಮಹಾನ್ ರಾಷ್ಟ್ರದ ಉದ್ದ ಮತ್ತು ಅಗಲವನ್ನು ಕ್ರಮಿಸಿದ್ದೇನೆ. ಈ ಚುನಾವಣೆಗಳ ಅಂತಿಮ ರ‍್ಯಾಲಿಯು ನನ್ನನ್ನು ಪಂಜಾಬ್‌ನ ಹೋಶಿಯಾರ್‌ಪುರಕ್ಕೆ ಕರೆದೊಯ್ದಿತು. ಇದು ಮಹಾನ್ ಗುರು, ಸಂತ ರವಿದಾಸ್ ಜಿ ಅವರ ಭೂಮಿ.

ಬಳಿಕ ಭಾರತ ಮಾತೆಯ ಚರಣವಾದ ಕನ್ಯಾಕುಮಾರಿಗೆ ಬಂದೆ. ಚುನಾವಣೆಯ ಕಾವು ನನ್ನ ಹೃದಯ ಮತ್ತು ಮನಸ್ಸಿನಲ್ಲಿ ಪ್ರತಿಧ್ವನಿಸುತ್ತಿರುವುದು ಸಹಜ. ರ‍್ಯಾಲಿ ಮತ್ತು ರೋಡ್ ಶೋಗಳಲ್ಲಿ ಕಾಣುವ ಬಹುಸಂಖ್ಯೆಯ ಮುಖಗಳು ನನ್ನ ಕಣ್ಣ ಮುಂದೆ ಬಂದವು. ನಮ್ಮ ನಾರಿ ಶಕ್ತಿಯ ಆಶೀರ್ವಾದಗಳು, ನಂಬಿಕೆ, ವಾತ್ಸಲ್ಯ ಇವೆಲ್ಲವೂ ಬಹಳ ವಿನಮ್ರ ಅನುಭವ. ನನ್ನ ಕಣ್ಣುಗಳು ತೇವವಾಗುತ್ತಿದ್ದವು… ನಾನು ಧ್ಯಾನದ ಸ್ಥಿತಿಗೆ ಪ್ರವೇಶಿಸಿದೆ.

ಬಳಿಕ ಬಿಸಿಯಾದ ರಾಜಕೀಯ ಚರ್ಚೆ, ದಾಳಿ ಮತ್ತು ಪ್ರತಿದಾಳಿಗಳು, ಚುನಾವಣೆಯ ವಿಶಿಷ್ಟವಾದ ಆರೋಪಗಳ ಧ್ವನಿ ಮತ್ತು ಮಾತುಗಳೆಲ್ಲವೂ ಶೂನ್ಯವಾಗಿ ಕಣ್ಮರೆಯಾಯಿತು. ನನ್ನೊಳಗೆ ನಿರ್ಲಿಪ್ತತೆಯ ಭಾವ ಬೆಳೆಯತೊಡಗಿತು. ನನ್ನ ಮನಸ್ಸು ಬಾಹ್ಯ ಪ್ರಪಂಚದಿಂದ ಸಂಪೂರ್ಣ ಬೇರ್ಪಟ್ಟಿತು. ಅಂತಹ ದೊಡ್ಡ ಜವಾಬ್ದಾರಿಗಳ ನಡುವೆ ಧ್ಯಾನವು ಸವಾಲಿನದಾಗುತ್ತದೆ. ಆದರೆ ಕನ್ಯಾಕುಮಾರಿಯ ಭೂಮಿ ಮತ್ತು ಸ್ವಾಮಿ ವಿವೇಕಾನಂದರ ಸ್ಫೂರ್ತಿ ಅದನ್ನು ಮಾಡುವಂತೆ ಮಾಡಿತು. ನಾನು ಅಭ್ಯರ್ಥಿಯಾಗಿ ಪ್ರೀತಿಯ ಕಾಶಿಯ ಜನರ ಕೈಗೆ ನನ್ನ ಪ್ರಚಾರವನ್ನು ಬಿಟ್ಟು ಇಲ್ಲಿಗೆ ಬಂದಿದ್ದೇನೆ.

ಹುಟ್ಟಿನಿಂದಲೇ ನಾನು ಪಾಲಿಸಿಕೊಂಡು ಬದುಕಲು ಪ್ರಯತ್ನಿಸಿದ ಈ ಮೌಲ್ಯಗಳನ್ನು ನನಗೆ ತುಂಬಿದ ದೇವರಿಗೆ ನಾನು ಕೃತಜ್ಞನಾಗಿದ್ದೇನೆ. ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಯ ಈ ಸ್ಥಳದಲ್ಲಿ ಧ್ಯಾನ ಮಾಡುವಾಗ ಏನನ್ನು ಅನುಭವಿಸಿರಬಹುದು ಎಂದು ನಾನು ಯೋಚಿಸುತ್ತಿದ್ದೆ! ನನ್ನ ಧ್ಯಾನದ ಒಂದು ಭಾಗವು ಇದೇ ರೀತಿಯ ಆಲೋಚನೆಗಳ ಹೊಳೆಯಲ್ಲಿ ಕಳೆದಿದೆ.

ಈ ನಿರ್ಲಿಪ್ತತೆ, ಶಾಂತಿ ಮತ್ತು ಮೌನದ ನಡುವೆ ನನ್ನ ಮನಸ್ಸು ಭಾರತದ ಉಜ್ವಲ ಭವಿಷ್ಯದ ಬಗ್ಗೆ, ಭಾರತದ ಗುರಿಗಳ ಬಗ್ಗೆ ನಿರಂತರವಾಗಿ ಯೋಚಿಸುತ್ತಿತ್ತು. ಕನ್ಯಾಕುಮಾರಿಯಲ್ಲಿ ಉದಯಿಸಿದ ಸೂರ್ಯ ನನ್ನ ಆಲೋಚನೆಗಳಿಗೆ ಹೊಸ ಎತ್ತರವನ್ನು ನೀಡಿತು. ಸಾಗರದ ವೈಶಾಲ್ಯವು ನನ್ನ ಆಲೋಚನೆಗಳನ್ನು ವಿಸ್ತರಿಸಿತು ಮತ್ತು ದಿಗಂತದ ವಿಸ್ತಾರವು ಬ್ರಹ್ಮಾಂಡದ ಆಳದಲ್ಲಿ ಹುದುಗಿರುವ ಏಕತೆಯನ್ನು ನಿರಂತರವಾಗಿ ಅರಿತುಕೊಂಡಿತು. ದಶಕಗಳ ಹಿಂದೆ ಹಿಮಾಲಯದ ಮಡಿಲಲ್ಲಿ ಕೈಗೊಂಡ ಅವಲೋಕನ ಮತ್ತು ಅನುಭವಗಳು ಪುನರುಜ್ಜೀವನಗೊಳ್ಳುತ್ತಿರುವಂತೆ ತೋರುತ್ತಿದೆ.


ಸ್ನೇಹಿತರೇ,

ಕನ್ಯಾಕುಮಾರಿಯು ಯಾವಾಗಲೂ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದ್ದಾಳೆ. ಇಲ್ಲಿರುವ ವಿವೇಕಾನಂದ ಕಲ್ಲಿನ ಸ್ಮಾರಕವನ್ನು ಶ್ರೀ ಏಕನಾಥ್ ರಾನಡೆ ಅವರ ನೇತೃತ್ವದಲ್ಲಿ ನಿರ್ಮಿಸಲಾಯಿತು. ಏಕನಾಥ್ ಜೀ ಅವರೊಂದಿಗೆ ವ್ಯಾಪಕವಾಗಿ ಪ್ರಯಾಣಿಸುವ ಅವಕಾಶ ನನಗೆ ಸಿಕ್ಕಿತು. ಈ ಸ್ಮಾರಕದ ನಿರ್ಮಾಣದ ಸಮಯದಲ್ಲಿ ಇಲ್ಲಿ ಸ್ವಲ್ಪ ಸಮಯ ಕಳೆಯುವ ಅವಕಾಶ ಸಿಕ್ಕಿತು.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ… ಇದು ದೇಶದ ಪ್ರತಿಯೊಬ್ಬ ಪ್ರಜೆಯ ಹೃದಯದಲ್ಲಿ ಆಳವಾಗಿ ಬೇರೂರಿರುವ ಸಾಮಾನ್ಯ ಗುರುತು. ಇದು ಶಕ್ತಿ ಪೀಠ. ಇಲ್ಲಿ ಶಕ್ತಿ ಮಾತೆಯು ಕನ್ಯಾಕುಮಾರಿಯಾಗಿ ಅವತರಿಸಿದಳು. ಈ ದಕ್ಷಿಣದ ತುದಿಯಲ್ಲಿ ಶಕ್ತಿ ಮಾತೆಯು ತಪಸ್ಸು ಮಾಡಿ ಭಾರತದ ಉತ್ತರದ ಭಾಗದ ಹಿಮಾಲಯದಲ್ಲಿ ನೆಲೆಸಿರುವ ಭಗವಾನ್ ಶಿವನಿಗಾಗಿ ಕಾಯುತ್ತಿದ್ದಳು.

ಕನ್ಯಾಕುಮಾರಿ ಸಂಗಮಗಳ ನಾಡು. ನಮ್ಮ ದೇಶದ ಪವಿತ್ರ ನದಿಗಳು ವಿವಿಧ ಭಾಗದಲ್ಲಿ ಸಮುದ್ರಗಳನ್ನು ಸೇರುತ್ತದೆ. ಇಲ್ಲಿ ಆ ಸಮುದ್ರಗಳು ಸಂಗಮಿಸುತ್ತವೆ ಮತ್ತು ಇಲ್ಲಿ ನಾವು ಇನ್ನೊಂದು ಮಹಾ ಸಂಗಮಕ್ಕೆ ಸಾಕ್ಷಿಯಾಗಿದ್ದೇವೆ. ಅದು ಭಾರತದ ಸೈದ್ಧಾಂತಿಕ ಸಂಗಮ. ವಿವೇಕಾನಂದ ಕಲ್ಲಿನ ಸ್ಮಾರಕ, ಸಂತ ತಿರುವಳ್ಳುವರ್ ಅವರ ಭವ್ಯವಾದ ಪ್ರತಿಮೆ, ಗಾಂಧಿ ಮಂಟಪ ಮತ್ತು ಕಾಮರಾಜರ್ ಮಣಿ ಮಂಟಪವನ್ನು ಇಲ್ಲಿ ಕಾಣುತ್ತೇವೆ. ಈ ದಿಗ್ಗಜರ ಚಿಂತನಾ ಧಾರೆಗಳು ಇಲ್ಲಿ ಒಮ್ಮುಖವಾಗಿ ರಾಷ್ಟ್ರೀಯ ಚಿಂತನೆಯ ಸಂಗಮವನ್ನು ರೂಪಿಸುತ್ತವೆ. ಇದು ರಾಷ್ಟ್ರ ನಿರ್ಮಾಣಕ್ಕೆ ಮಹತ್ತರವಾದ ಸ್ಫೂರ್ತಿಯನ್ನು ನೀಡುತ್ತದೆ.

ಭಾರತದ ರಾಷ್ಟ್ರೀಯತೆ ಮತ್ತು ಏಕತೆಯ ಪ್ರಜ್ಞೆಯನ್ನು ಅನುಮಾನಿಸುವ ಯಾವುದೇ ವ್ಯಕ್ತಿಗೆ ಕನ್ಯಾಕುಮಾರಿಯ ಈ ಭೂಮಿ ಏಕತೆಯನ್ನು ಅಳಿಸಲಾಗದ ಸಂದೇಶವನ್ನು ನೀಡುತ್ತದೆ. ಕನ್ಯಾಕುಮಾರಿಯಲ್ಲಿರುವ ಸಂತ ತಿರುವಳ್ಳುವರ್ ಅವರ ಭವ್ಯವಾದ ಪ್ರತಿಮೆಯು ಸಮುದ್ರದಿಂದ ಭಾರತ ಮಾತೆಯ ವಿಸ್ತಾರವನ್ನು ನೋಡುತ್ತಿದೆ. ಅವರ ಕೃತಿ ತಿರುಕ್ಕುರಳ್ ಸುಂದರ ತಮಿಳು ಭಾಷೆಯ ಮುಕುಟಮಣಿಗಳಲ್ಲಿ ಒಂದಾಗಿದೆ. ಇದು ಜೀವನದ ಪ್ರತಿಯೊಂದು ಅಂಶವನ್ನು ಒಳಗೊಂಡಿದೆ. ನಮಗಾಗಿ ಮತ್ತು ರಾಷ್ಟ್ರಕ್ಕಾಗಿ ನಮ್ಮ ಅತ್ಯುತ್ತಮವಾದದ್ದನ್ನು ನೀಡಲು ಪ್ರೇರೇಪಿಸುತ್ತದೆ. ಅಂತಹ ಮಹಾನ್ ವ್ಯಕ್ತಿಗೆ ನಮನ ಸಲ್ಲಿಸುವುದು ನನ್ನ ಅದೃಷ್ಟ.

ಸ್ನೇಹಿತರೇ,

ಸ್ವಾಮಿ ವಿವೇಕಾನಂದರು ಒಮ್ಮೆ ಹೇಳಿದ್ದರು, ಪ್ರತಿಯೊಂದು ರಾಷ್ಟ್ರಕ್ಕೂ ತಲುಪಿಸಲು ಸಂದೇಶವಿದೆ, ಪೂರೈಸಲು ಒಂದು ಧ್ಯೇಯವಿದೆ, ತಲುಪಲು ಗಮ್ಯವಿದೆ. ಸಾವಿರಾರು ವರ್ಷಗಳಿಂದ ಭಾರತವು ಈ ಅರ್ಥಪೂರ್ಣ ಉದ್ದೇಶದ ಪ್ರಜ್ಞೆಯೊಂದಿಗೆ ಮುನ್ನಡೆಯುತ್ತಿದೆ. ಭಾರತವು ಸಾವಿರಾರು ವರ್ಷಗಳಿಂದ ಕಲ್ಪನೆಗಳ ತೊಟ್ಟಿಲು. ನಾವು ಸ್ವಾಧೀನಪಡಿಸಿಕೊಂಡದ್ದನ್ನು ನಮ್ಮ ವೈಯಕ್ತಿಕ ಸಂಪತ್ತು ಎಂದು ಪರಿಗಣಿಸಿಲ್ಲ ಅಥವಾ ಅದನ್ನು ಆರ್ಥಿಕ ಅಥವಾ ವಸ್ತು ನಿಯತಾಂಕಗಳಿಂದ ಸಂಪೂರ್ಣವಾಗಿ ಅಳೆಯುವುದಿಲ್ಲ. ಆದ್ದರಿಂದ, ‘ಇದಂ-ನಾ-ಮಮ’ ಅಂದರೆ ಇದು ನನ್ನದಲ್ಲ. ಭರತ್ ಪಾತ್ರದ ಅಂತರ್ಗತ ಮತ್ತು ನೈಸರ್ಗಿಕ ಭಾಗವಾಗಿದೆ.

ಭಾರತದ ಕಲ್ಯಾಣವು ನಮ್ಮ ಗ್ರಹದ ಪ್ರಗತಿಯ ಪ್ರಯಾಣಕ್ಕೂ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಸ್ವಾತಂತ್ರ್ಯ ಚಳವಳಿಯನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ. 1947ರ ಆಗಸ್ಟ್ 15ರಂದು ಭಾರತವು ಸ್ವಾತಂತ್ರ್ಯವನ್ನು ಗಳಿಸಿತು. ಆ ಸಮಯದಲ್ಲಿ, ಪ್ರಪಂಚದಾದ್ಯಂತದ ಅನೇಕ ದೇಶಗಳು ವಸಾಹತುಶಾಹಿ ಆಳ್ವಿಕೆಯಲ್ಲಿತ್ತು. ಭಾರತದ ಸ್ವಾತಂತ್ರ್ಯ ಯಾತ್ರೆಯು ಆ ದೇಶಗಳಲ್ಲಿ ಅನೇಕರಿಗೆ ತಮ್ಮದೇ ಆದ ಸ್ವಾತಂತ್ರ್ಯವನ್ನು ಸಾಧಿಸಲು ಸ್ಫೂರ್ತಿ ಮತ್ತು ಅಧಿಕಾರ ನೀಡಿತು. ಅದೇ ಚೈತನ್ಯವು ದಶಕಗಳ ಅನಂತರ ಒಂದು ಶತಮಾನದ ಕೋವಿಡ್-19 ಸಾಂಕ್ರಾಮಿಕದೊಂದಿಗೆ ಜಗತ್ತು ಮುಖಾಮುಖಿಯಾದಾಗ ಕಂಡುಬಂದಿತು. ಬಡವರು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಬಗ್ಗೆ ಕಳವಳ ವ್ಯಕ್ತಪಡಿಸಿದಾಗ ಭಾರತದ ಯಶಸ್ವಿ ಪ್ರಯತ್ನಗಳು ಅನೇಕ ರಾಷ್ಟ್ರಗಳಿಗೆ ಧೈರ್ಯ ಮತ್ತು ಸಹಾಯವನ್ನು ನೀಡಿತು.

ಭಾರತದ ಆಡಳಿತ ಮಾದರಿಯು ಪ್ರಪಂಚದಾದ್ಯಂತ ಅನೇಕ ದೇಶಗಳಿಗೆ ಉದಾಹರಣೆಯಾಗಿದೆ. ಕೇವಲ 10 ವರ್ಷಗಳಲ್ಲಿ 25 ಕೋಟಿ ಜನರನ್ನು ಬಡತನದಿಂದ ಮೇಲಕ್ಕೆತ್ತಿರುವುದು ಅಭೂತಪೂರ್ವ. ಜನಪರ ಉತ್ತಮ ಆಡಳಿತ, ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ಬ್ಲಾಕ್‌ಗಳಂತಹ ನವೀನ ಅಭ್ಯಾಸಗಳು ಇಂದು ಜಾಗತಿಕವಾಗಿ ಚರ್ಚಿಸಲ್ಪಡುತ್ತವೆ. ನಮ್ಮ ಪ್ರಯತ್ನಗಳು, ಬಡವರಿಗೆ ಅಧಿಕಾರ ನೀಡುವುದರಿಂದ ಹಿಡಿದು ಕೊನೆಯ ಮೈಲು ತಲುಪಿಸುವವರೆಗೆ ಸಮಾಜದ ಕೊನೆಯ ಹಂತದಲ್ಲಿ ನಿಂತಿರುವ ವ್ಯಕ್ತಿಗಳಿಗೆ ಆದ್ಯತೆ ನೀಡುವ ಮೂಲಕ ಜಗತ್ತನ್ನು ಪ್ರೇರೇಪಿಸಿದೆ.

ಭಾರತದ ಡಿಜಿಟಲ್ ಇಂಡಿಯಾ ಅಭಿಯಾನವು ಈಗ ಇಡೀ ಜಗತ್ತಿಗೆ ಒಂದು ಉದಾಹರಣೆಯಾಗಿದೆ. ಬಡವರನ್ನು ಸಬಲೀಕರಣಗೊಳಿಸಲು, ಪಾರದರ್ಶಕತೆಯನ್ನು ತರಲು ಮತ್ತು ಅವರ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ನಾವು ತಂತ್ರಜ್ಞಾನವನ್ನು ಹೇಗೆ ಬಳಸಬಹುದು ಎಂಬುದನ್ನು ತೋರಿಸುತ್ತದೆ. ಭಾರತದಲ್ಲಿರುವ ಅಗ್ಗದ ದತ್ತಾಂಶವು ಬಡವರಿಗೆ ಮಾಹಿತಿ ಮತ್ತು ಸೇವೆಗಳ ತಲುಪುವಿಕೆಯನ್ನು ಖಾತ್ರಿಪಡಿಸುವ ಮೂಲಕ ಸಾಮಾಜಿಕ ಸಮಾನತೆಯ ಸಾಧನವಾಗುತ್ತಿದೆ. ಇಡೀ ಜಗತ್ತು ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣವನ್ನು ನೋಡುತ್ತಿದೆ ಮತ್ತು ಅಧ್ಯಯನ ಮಾಡುತ್ತಿದೆ. ಪ್ರಮುಖ ಜಾಗತಿಕ ಸಂಸ್ಥೆಗಳು ನಮ್ಮ ಮಾದರಿಯ ಅಂಶಗಳನ್ನು ಅಳವಡಿಸಿಕೊಳ್ಳಲು ಅನೇಕ ದೇಶಗಳಿಗೆ ಸಲಹೆ ನೀಡುತ್ತಿವೆ.

ಭಾರತದ ಪ್ರಗತಿ ಮತ್ತು ಏರಿಕೆಯು ಇಂದು ಭಾರತಕ್ಕೆ ಮಾತ್ರ ಮಹತ್ವದ ಅವಕಾಶವಲ್ಲ. ಪ್ರಪಂಚದಾದ್ಯಂತದ ನಮ್ಮ ಎಲ್ಲಾ ಪಾಲುದಾರ ದೇಶಗಳಿಗೆ ಐತಿಹಾಸಿಕ ಅವಕಾಶವಾಗಿದೆ. ಜಿ-20 ಯಶಸ್ಸಿನ ಅನಂತರ ಪ್ರಪಂಚವು ಭಾರತಕ್ಕೆ ಹೆಚ್ಚಿನ ಪಾತ್ರವನ್ನು ಕಲ್ಪಿಸುತ್ತಿದೆ. ಇಂದು ಭಾರತವು ಜಾಗತಿಕ ದಕ್ಷಿಣದ ಪ್ರಬಲ ಮತ್ತು ಪ್ರಮುಖ ಧ್ವನಿಯಾಗಿ ಅಂಗೀಕರಿಸಲ್ಪಟ್ಟಿದೆ. ಭಾರತ್‌ನ ಉಪಕ್ರಮದಲ್ಲಿ ಆಫ್ರಿಕನ್ ಯೂನಿಯನ್ ಜಿ-20 ಗುಂಪಿನ ಭಾಗವಾಗಿದೆ. ಇದು ಆಫ್ರಿಕನ್ ದೇಶಗಳ ಭವಿಷ್ಯಕ್ಕೆ ನಿರ್ಣಾಯಕ ತಿರುವು ನೀಡಲಿದೆ.

ಸ್ನೇಹಿತರೇ,

ಭಾರತದ ಅಭಿವೃದ್ಧಿ ಪಥವು ನಮಗೆ ಹೆಮ್ಮೆ ಮತ್ತು ವೈಭವವನ್ನು ತುಂಬುತ್ತದೆ. ಆದರೆ ಅದೇ ಸಮಯದಲ್ಲಿ ಇದು 140 ಕೋಟಿ ನಾಗರಿಕರಿಗೆ ಅವರ ಜವಾಬ್ದಾರಿಗಳನ್ನು ನೆನಪಿಸುತ್ತದೆ. ಈಗ ಒಂದು ಕ್ಷಣವನ್ನು ವ್ಯರ್ಥ ಮಾಡದೆ ನಾವು ಹೆಚ್ಚಿನ ಕರ್ತವ್ಯ ಮತ್ತು ದೊಡ್ಡ ಗುರಿಗಳ ಕಡೆಗೆ ಹೆಜ್ಜೆ ಹಾಕಬೇಕು. ಹೊಸ ಕನಸುಗಳನ್ನು ಕಾಣಬೇಕು. ಅವುಗಳನ್ನು ವಾಸ್ತವಕ್ಕೆ ಪರಿವರ್ತಿಸಬೇಕು ಮತ್ತು ಆ ಕನಸುಗಳನ್ನು ಬದುಕಲು ಪ್ರಾರಂಭಿಸಬೇಕು.

ನಾವು ಭಾರತದ ಅಭಿವೃದ್ಧಿಯನ್ನು ಜಾಗತಿಕವಾಗಿ ಕಾಣಬೇಕು. ಇದಕ್ಕಾಗಿ ಭಾರತದ ಆಂತರಿಕ ಸಾಮರ್ಥ್ಯಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಭಾರತದ ಶಕ್ತಿಗಳನ್ನು ಅಂಗೀಕರಿಸಬೇಕು, ಅವುಗಳನ್ನು ಪೋಷಿಸಬೇಕು ಮತ್ತು ಪ್ರಪಂಚದ ಪ್ರಯೋಜನಕ್ಕಾಗಿ ಬಳಸಿಕೊಳ್ಳಬೇಕು. ಇಂದಿನ ಜಾಗತಿಕ ಸನ್ನಿವೇಶದಲ್ಲಿ ಯುವ ರಾಷ್ಟ್ರವಾಗಿ ಭಾರತದ ಶಕ್ತಿಯು ಒಂದು ಅವಕಾಶವಾಗಿದೆ. ಇದರಿಂದ ನಾವು ಹಿಂತಿರುಗಿ ನೋಡಬಾರದು.

21ನೇ ಶತಮಾನದ ಜಗತ್ತು ಹಲವು ಭರವಸೆಗಳೊಂದಿಗೆ ಭಾರತದತ್ತ ನೋಡುತ್ತಿದೆ. ಜಾಗತಿಕ ಸನ್ನಿವೇಶದಲ್ಲಿ ಮುಂದುವರಿಯಲು ನಾವು ಹಲವಾರು ಬದಲಾವಣೆಗಳನ್ನು ಮಾಡಬೇಕಾಗಿದೆ. ಸುಧಾರಣೆಗೆ ಸಂಬಂಧಿಸಿದಂತೆ ನಮ್ಮ ಸಾಂಪ್ರದಾಯಿಕ ಚಿಂತನೆಯನ್ನೂ ನಾವು ಬದಲಾಯಿಸಬೇಕಾಗಿದೆ. ಭಾರತವು ಸುಧಾರಣೆಯನ್ನು ಕೇವಲ ಆರ್ಥಿಕ ಸುಧಾರಣೆಗಳಿಗೆ ಸೀಮಿತಗೊಳಿಸುವುದಿಲ್ಲ. ಸುಧಾರಣೆಯ ದಿಕ್ಕಿನತ್ತ ನಾವು ಜೀವನದ ಪ್ರತಿಯೊಂದು ಅಂಶದಲ್ಲೂ ಮುನ್ನಡೆಯಬೇಕು. ನಮ್ಮ ಸುಧಾರಣೆಗಳು 2047ರ ವೇಳೆಗೆ ‘ವಿಕಸಿತ ಭಾರತ’ ಅಂದರೆ ಅಭಿವೃದ್ಧಿ ಹೊಂದಿದ ಭಾರತದ ಆಶಯಗಳೊಂದಿಗೆ ಸಹ ಹೊಂದಿಕೆಯಾಗಬೇಕು.

ಸುಧಾರಣೆಯು ಯಾವುದೇ ದೇಶಕ್ಕೆ ಒಂದೇ ಆಯಾಮದ ಪ್ರಕ್ರಿಯೆಯಾಗುವುದಿಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ, ನಾನು ದೇಶಕ್ಕಾಗಿ ಸುಧಾರಣೆ, ಸಾಧನೆ ಮತ್ತು ಪರಿವರ್ತನೆಯ ದೃಷ್ಟಿಕೋನವನ್ನು ಹಾಕಿದ್ದೇನೆ. ಸುಧಾರಣೆಯ ಜವಾಬ್ದಾರಿ ನಾಯಕತ್ವದ ಮೇಲಿದೆ. ಅದರ ಆಧಾರದ ಮೇಲೆ ನಮ್ಮ ಅಧಿಕಾರಶಾಹಿಯು ಕಾರ್ಯನಿರ್ವಹಿಸುತ್ತದೆ ಮತ್ತು ಉತ್ಸಾಹದೊಂದಿಗೆ ಜನರು ಸೇರಿಕೊಂಡಾಗ ನಾವು ಪರಿವರ್ತನೆಗೆ ಸಾಕ್ಷಿಯಾಗುತ್ತೇವೆ.

ನಮ್ಮ ದೇಶವನ್ನು ‘ವಿಕಸಿತ ಭಾರತ’ ಮಾಡಲು ನಾವು ಶ್ರೇಷ್ಠತೆಯನ್ನು ಮೂಲಭೂತ ತತ್ತ್ವವನ್ನಾಗಿ ಮಾಡಬೇಕು. ನಾವು ಎಲ್ಲಾ ನಾಲ್ಕು ದಿಕ್ಕುಗಳಲ್ಲಿ ತ್ವರಿತವಾಗಿ ಕೆಲಸ ಮಾಡಬೇಕಾಗಿದೆ.. ಅದು ವೇಗ, ಸ್ಕೇಲ್, ಸ್ಕೋಪ್ ಮತ್ತು ಮಾನದಂಡಗಳು. ಉತ್ಪಾದನೆಯ ಜೊತೆಗೆ ನಾವು ಗುಣಮಟ್ಟದ ಮೇಲೆ ಕೇಂದ್ರೀಕರಿಸಬೇಕು ಮತ್ತು ‘ಶೂನ್ಯ ದೋಷ- ಶೂನ್ಯ ಪರಿಣಾಮ’ ಮಂತ್ರಕ್ಕೆ ಬದ್ಧರಾಗಿರಬೇಕು.


ಸ್ನೇಹಿತರೇ,

ಭಗವಂತ ನಮಗೆ ಭರತ ನಾಡಿನಲ್ಲಿ ಜನ್ಮ ನೀಡಿದ್ದಾನೆ ಎಂದು ಪ್ರತಿ ಕ್ಷಣದಲ್ಲಿ ಹೆಮ್ಮೆ ಪಡಬೇಕು. ಭಾರತಕ್ಕೆ ಸೇವೆ ಸಲ್ಲಿಸಲು ಮತ್ತು ನಮ್ಮ ದೇಶದ ಉತ್ಕೃಷ್ಟತೆಯತ್ತ ಪಯಣದಲ್ಲಿ ನಮ್ಮ ಪಾತ್ರವನ್ನು ಪೂರೈಸಲು ದೇವರು ನಮ್ಮನ್ನು ಆರಿಸಿಕೊಂಡಿದ್ದಾನೆ. ಆಧುನಿಕ ಸಂದರ್ಭದಲ್ಲಿ ಪ್ರಾಚೀನ ಮೌಲ್ಯಗಳನ್ನು ಅಳವಡಿಸಿಕೊಂಡು ನಮ್ಮ ಪರಂಪರೆಯನ್ನು ಆಧುನಿಕ ರೀತಿಯಲ್ಲಿ ಪುನರ್ ವ್ಯಾಖ್ಯಾನಿಸಬೇಕು.

ಒಂದು ರಾಷ್ಟ್ರವಾಗಿ ನಾವು ಹಳೆಯ ಆಲೋಚನೆಗಳು ಮತ್ತು ನಂಬಿಕೆಗಳನ್ನು ಮರುಮೌಲ್ಯಮಾಪನ ಮಾಡಬೇಕಾಗಿದೆ. ವೃತ್ತಿಪರ ನಿರಾಶಾವಾದಿಗಳ ಒತ್ತಡದಿಂದ ನಮ್ಮ ಸಮಾಜವನ್ನು ಮುಕ್ತಗೊಳಿಸಬೇಕಾಗಿದೆ. ನಕಾರಾತ್ಮಕತೆಯಿಂದ ಸ್ವಾತಂತ್ರ್ಯವು ಯಶಸ್ಸನ್ನು ಸಾಧಿಸುವ ಮೊದಲ ಹೆಜ್ಜೆ ಎಂದು ನಾವು ನೆನಪಿನಲ್ಲಿಡಬೇಕು.

ಸಕಾರಾತ್ಮಕತೆಯ ಮಡಿಲಲ್ಲಿ ಯಶಸ್ಸು ಅರಳುತ್ತದೆ. ಭಾರತದ ಅನಂತ ಮತ್ತು ಶಾಶ್ವತ ಶಕ್ತಿಯಲ್ಲಿ ನನ್ನ ನಂಬಿಕೆ, ಭಕ್ತಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಕಳೆದ 10 ವರ್ಷಗಳಲ್ಲಿ ಭಾರತದ ಈ ಸಾಮರ್ಥ್ಯವು ಇನ್ನಷ್ಟು ಬೆಳೆಯುತ್ತಿರುವುದನ್ನು ನಾನು ನೋಡಿದ್ದೇನೆ ಮತ್ತು ಅದನ್ನು ನೇರವಾಗಿ ಅನುಭವಿಸಿದ್ದೇನೆ.

ಇದನ್ನೂ ಓದಿ: Odisha Assembly Election: ಒಡಿಶಾ ವಿಧಾನಸಭಾ ಚುನಾವಣೆ; ಬಿಜೆಡಿ-ಬಿಜೆಪಿ ನಡುವೆ ತೀವ್ರ ಹಣಾಹಣಿ: ಹಳೆ ದೋಸ್ತಿಗೆ ಠಕ್ಕರ್‌ ಕೊಡುತ್ತಾ ಕಮಲ ಪಡೆ?

20ನೇ ಶತಮಾನದ ನಾಲ್ಕು ಮತ್ತು ಐದನೇ ದಶಕಗಳನ್ನು ಸ್ವಾತಂತ್ರ್ಯ ಚಳವಳಿಗೆ ಹೊಸ ವೇಗವನ್ನು ನೀಡಲು ಬಳಸಿಕೊಂಡಂತೆ 21ನೇ ಶತಮಾನದ ಈ 25 ವರ್ಷಗಳಲ್ಲಿ ನಾವು ‘ವಿಕಸಿತ ಭಾರತ’ಕ್ಕೆ ಅಡಿಪಾಯ ಹಾಕಬೇಕು. ಸ್ವಾತಂತ್ರ್ಯ ಹೋರಾಟವು ಮಹಾನ್ ತ್ಯಾಗಕ್ಕೆ ಕರೆ ನೀಡಿದ ಸಮಯವಾಗಿದೆ. ಪ್ರಸ್ತುತ ಸಮಯವು ಪ್ರತಿಯೊಬ್ಬರಿಂದ ಉತ್ತಮ ಮತ್ತು ನಿರಂತರ ಕೊಡುಗೆಗಳನ್ನು ಕೇಳುತ್ತದೆ.

1897ರಲ್ಲಿ ಸ್ವಾಮಿ ವಿವೇಕಾನಂದರು ಮುಂದಿನ 50 ವರ್ಷಗಳನ್ನು ದೇಶಕ್ಕಾಗಿ ಮೀಸಲಿಡಬೇಕು ಎಂದು ಹೇಳಿದ್ದರು. ಈ ಕರೆಗೆ ಸರಿಯಾಗಿ 50 ವರ್ಷಗಳ ಅನಂತರ ಭಾರತವು 1947ರಲ್ಲಿ ಸ್ವಾತಂತ್ರ್ಯವನ್ನು ಗಳಿಸಿತು.

ಇಂದು ನಮಗೆ ಅದೇ ಸುವರ್ಣಾವಕಾಶವಿದೆ. ಮುಂದಿನ 25 ವರ್ಷಗಳನ್ನು ದೇಶಕ್ಕಾಗಿ ಮುಡಿಪಾಗಿಡೋಣ. ನಮ್ಮ ಪ್ರಯತ್ನಗಳು ಮುಂಬರುವ ಪೀಳಿಗೆಗೆ ಮತ್ತು ಮುಂಬರುವ ಶತಮಾನಗಳಿಗೆ ಬಲವಾದ ಅಡಿಪಾಯವನ್ನು ಸೃಷ್ಟಿಸುತ್ತದೆ. ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ದೇಶದ ಶಕ್ತಿ ಮತ್ತು ಉತ್ಸಾಹವನ್ನು ನೋಡಿದರೆ ಗುರಿ ಈಗ ದೂರವಿಲ್ಲ ಎಂದು ಹೇಳಬಹುದು. ಶೀಘ್ರ ಹೆಜ್ಜೆಗಳನ್ನು ಇಡೋಣ…ಒಟ್ಟಾಗಿ ವಿಕಸಿತ ಭಾರತವನ್ನು ರಚಿಸೋಣ.

Continue Reading
Advertisement
Saree Fashion
ಫ್ಯಾಷನ್35 seconds ago

Saree Fashion: ರಫಲ್‌ ಡಿಸೈನ್‌ನಲ್ಲಿ ಬಂದಿದೆ ಜಾರ್ಜೆಟ್ ಲೆಹೆಂಗಾ ಸೀರೆ!

Hornbill bird sighting in Gangavathi
ಕರ್ನಾಟಕ3 mins ago

Hornbill Bird: ಗಂಗಾವತಿಯಲ್ಲಿ ‘ಹಾರ್ನ್‌ಬಿಲ್’ ಪಕ್ಷಿ ಪ್ರತ್ಯಕ್ಷ

Samsung Big TV Days Sale Exciting offer on big TVs
ದೇಶ6 mins ago

Samsung: ಸ್ಯಾಮ್‌ಸಂಗ್‌ನ ʼಬಿಗ್‌ ಟಿವಿ ಡೇಸ್‌ʼ ಸೇಲ್‌; ದೊಡ್ಡ ಟಿವಿಗಳ ಮೇಲೆ ಅತ್ಯಾಕರ್ಷಕ ಆಫರ್‌!

Davangere Lok Sabha Constituency
ದಾವಣಗೆರೆ8 mins ago

Davangere Lok Sabha Constituency: ದಾವಣಗೆರೆಯಲ್ಲಿ ನಾರಿಶಕ್ತಿ ಕದನ, ಯಾರು ಗೆದ್ದರೂ ಇತಿಹಾಸ

Rahul Dravid
ಕ್ರಿಕೆಟ್9 mins ago

Rahul Dravid: ರೋಹಿತ್​, ಕೊಹ್ಲಿ, ಪಂತ್​ ಸೇರಿ ಎಲ್ಲ ಆಟಗಾರರಿಗೆ ಖಡಕ್​ ಎಚ್ಚರಿಕೆ ನೀಡಿದ ಕೋಚ್​ ದ್ರಾವಿಡ್​

Kannada New Movie Mandela nari shrinivas
ಸ್ಯಾಂಡಲ್ ವುಡ್9 mins ago

Kannada New Movie: `ಮಂಡೇಲಾ’ ಚಿತ್ರಕ್ಕೆ ನಾರಿ ಶ್ರೀನಿವಾಸ್ ನಾಯಕ!

Election Result 2024
ಪ್ರಮುಖ ಸುದ್ದಿ15 mins ago

Election Result 2024: ಇಂಡಿ ಒಕ್ಕೂಟ ಸಭೆ ಸೇರಿದ್ದ ಸ್ಥಳದಲ್ಲೇ ವಾಸ್ತುದೋಷ, ಅಂದು ಅಮವಾಸ್ಯೆ ಬೇರೆ; ಹಾಗಾಗಿ…

Fact Check
Fact Check27 mins ago

Fact Check: ಸೋಲುವ ಭೀತಿಯಲ್ಲಿ ಬ್ಯಾಂಕಾಕ್‌ಗೆ ಹಾರಲು ಸಿದ್ಧರಾದ್ರಾ ರಾಹುಲ್‌ ಗಾಂಧಿ? ವೈರಲ್‌ ಆಗಿರುವ ಬೋರ್ಡಿಂಗ್‌ ಪಾಸ್‌ನ ಅಸಲಿಯತ್ತೇನು?

Benefits Of Walk After Meal
ಆರೋಗ್ಯ31 mins ago

Benefits Of Walk After Meal: ಊಟದ ಬಳಿಕ ಲಘುವಾದ ವಾಕಿಂಗ್‌ ಮಾಡಿ, ಆರೋಗ್ಯದಲ್ಲಿನ ಬದಲಾವಣೆ ನೋಡಿ!

Dead Body Found Bodies found floating in Cauvery river
ಕ್ರೈಂ36 mins ago

Dead Body Found : ಕಾವೇರಿ ನದಿಯಲ್ಲಿ ತೇಲಿ ಬಂದ ಶವಗಳು; ನೋಡಲು ಮುಗಿಬಿದ್ದ ಜನರು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 hour ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ2 hours ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ6 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ7 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

ಟ್ರೆಂಡಿಂಗ್‌