Mallya | ಬ್ಯಾಂಕ್‌ ರಜೆ ಇದ್ದಾಗ ಮಾತ್ರ ಮಲ್ಯ ಟ್ವೀಟ್‌ ಮಾಡ್ತಾರೆ: ನೆಟ್ಟಿಗರ ಟೀಕೆ - Vistara News

ವಾಣಿಜ್ಯ

Mallya | ಬ್ಯಾಂಕ್‌ ರಜೆ ಇದ್ದಾಗ ಮಾತ್ರ ಮಲ್ಯ ಟ್ವೀಟ್‌ ಮಾಡ್ತಾರೆ: ನೆಟ್ಟಿಗರ ಟೀಕೆ

ಕಳೆದ 5 ವರ್ಷಗಳಿಂದ ಬ್ರಿಟನ್‌ನಲ್ಲಿ ನೆಲೆಸಿರುವ ವಿಜಯ್‌ ಮಲ್ಯ (Mallya) ಅವರ ಗಡಿಪಾರಿಗೆ ಭಾರತ ಯತ್ನಿಸುತ್ತಿದೆ. ಈ ನಡುವೆ ಅವರ ಟ್ವೀಟ್‌ ಒಂದಕ್ಕೆ ನೆಟ್ಟಿಗರ ಟೀಕೆ ಗಮನಸೆಳೆದಿದೆ.

VISTARANEWS.COM


on

mallya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಬ್ರಿಟನ್‌ನಲ್ಲಿರುವ ಕಿಂಗ್‌ಫಿಶರ್‌ ಏರ್‌ಲೈನ್‌ನ ಮಾಜಿ ಬಾಸ್‌ ವಿಜಯ್‌ ಮಲ್ಯ (Mallya) ಅವರು ಗಣೇಶ ಚತುರ್ಥಿ ಪ್ರಯುಕ್ತ ಶುಭಾಶಯ ಕೋರಿ ಟ್ವೀಟ್‌ ಮಾಡಿದ್ದರು. ಆದರೆ ಅದಕ್ಕೆ ನೆಟ್ಟಿಗರು ಈ ಪರಿಯಲ್ಲಿ ತಮ್ಮನ್ನು ಟ್ರೋಲ್‌ ಮಾಡುತ್ತಾರೆ ಎಂದು ಬಹುಶಃ ನಿರೀಕ್ಷಿಸಿರಲಿಕ್ಕಿಲ್ಲ.

“ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳುʼ ಎಂದು ಮಲ್ಯ ಟ್ವೀಟ್‌ ಮಾಡಿದ್ದರು. ಅದಕ್ಕೆ ಹಲವಾರು ನೆಟ್ಟಿಗರು ” ಈ ವ್ಯಕ್ತಿ ಬ್ಯಾಂಕ್‌ ರಜೆ ಇದ್ದಾಗ ಮಾತ್ರ ಟ್ವೀಟ್‌ ಮಾಡುತ್ತಾರೆʼ ಎಂದು ಟೀಕಿಸಿದ್ದಾರೆ.

ಆರ್‌ಪಿಜಿ ಗ್ರೂಪ್‌ ಅಧ್ಯಕ್ಷ ಹರ್ಷ ಗೋಯೆಂಕಾ, “ನಿರ್ದಯʼ ಟ್ವೀಟ್‌ ಎಂದು ಈ ಟೀಕಾಸ್ತ್ರವನ್ನು ಕರೆದಿದ್ದಾರೆ. ಮತ್ತೊಬ್ಬರು ನೀವು ಹಬ್ಬ ಆಚರಿಸಲು ಭಾರತಕ್ಕೆ ಯಾವಾಗ ಬರುತ್ತೀರಿ? ಎಂದು ಕಾಲೆಳೆದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಚಿನ್ನದ ದರ

Gold Rate Today: ಚಿನ್ನದ ಬೆಲೆಯಲ್ಲಿ ತುಸು ಇಳಿಕೆ; ಇಂದಿನ ಬೆಲೆ ಚೆಕ್‌ ಮಾಡಿ

Gold Rate Today: ಸತತವಾಗಿ ಏರಿಕೆಯಾಗಿದ್ದ ಚಿನ್ನದ ದರ ಇಂದು (ಆಗಸ್ಟ್‌ 14) ಸ್ವಲ್ಪ ಇಳಿಕೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 10 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 11 ಕಡಿಮೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,555 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,151 ಇದೆ.

VISTARANEWS.COM


on

Gold Rate Today
Koo

ಬೆಂಗಳೂರು: ಸತತವಾಗಿ ಏರಿಕೆಯಾಗಿದ್ದ ಚಿನ್ನದ ದರ ಇಂದು (ಆಗಸ್ಟ್‌ 14) ಸ್ವಲ್ಪ ಇಳಿಕೆಯಾಗಿದೆ (Gold Rate Today). ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 10 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 11 ಕಡಿಮೆಯಾಗಿದೆ.

ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,555 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,151 ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ ₹ 52,440 ಇದೆ. ಇನ್ನು 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 65,550 ಮತ್ತು ₹ 6,55,500 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ ₹ 57,208 ಇದೆ. 10 ಗ್ರಾಂ ಮತ್ತು 100 ಗ್ರಾಂನ 24 ಕ್ಯಾರಟ್‌ ಚಿನ್ನದ ಬೆಲೆ ₹ 71,510 ಮತ್ತು ₹ 7,15,100 ತಲುಪಿದೆ.

ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
ದಿಲ್ಲಿ₹ 6,570 ₹ 7,166
ಮುಂಬೈ₹ 6,555 ₹ 7,151
ಬೆಂಗಳೂರು₹ 6,555 ₹ 7,151
ಚೆನ್ನೈ₹ 6,555 ₹ 7,151

ಬೆಳ್ಳಿ ಧಾರಣೆ

ಇತ್ತ ಬೆಳ್ಳಿಯ ಬೆಲೆಯಲ್ಲಿಯೂ ಭಾರಿ ಇಳಿಕೆಯಾಗಿದೆ. ಬೆಳ್ಳಿ 1 ಗ್ರಾಂಗೆ ₹ 80 ಹಾಗೂ 8 ಗ್ರಾಂಗೆ ₹ 640 ಇದೆ. 10 ಗ್ರಾಂ ₹ 800 ಹಾಗೂ 1 ಕಿಲೋಗ್ರಾಂ ₹ 80,00 ಬೆಲೆ ಬಾಳುತ್ತದೆ.

ಮೊದಲ ಬಾರಿಗೆ ಚಿನ್ನದ ಆಭರಣವನ್ನು ಖರೀದಿಸುವಾಗ ಏನು ತಿಳಿದಿರಬೇಕು?

ನೀವು ಚಿನ್ನಕ್ಕಾಗಿ ಹಣವನ್ನು ಖರ್ಚು ಮಾಡಲು ಮುಂದಾಗುವ ಮೊದಲು ಅದರ ಬಗ್ಗೆ ಜ್ಞಾನವನ್ನು ಹೊಂದಿರುವುದು ಉತ್ತಮ. ಚಿನ್ನದಂತಹ ಅಮೂಲ್ಯ ವಸ್ತು ಹಾಗೂ ಹೂಡಿಕೆಗೆ ಸಂಬಂಧಿಸಿದ ವಸ್ತುವನ್ನು ಖರೀದಿಸುವ ಮೊದಲು ನೀವು ಪರಿಶೀಲಿಸಬೇಕಾದ ವಿಷಯಗಳು ಇಲ್ಲಿವೆ.

ಮೊದಲನೆಯದು ಶುದ್ಧತೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮಾರಾಟವಾಗುವ ಆಭರಣಗಳು 22 ಕ್ಯಾರೆಟ್ ಚಿನ್ನದ ಆಭರಣ. ಬೆಂಗಳೂರಿನಲ್ಲಿ ಆ ದಿನದ ಚಿನ್ನದ ದರ ಎಷ್ಟಿದೆ ಎಂಬುದನ್ನು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು. ಬೆಂಗಳೂರಿನಲ್ಲಿ ಚಿನ್ನದ ದರಗಳು ಪ್ರತಿದಿನ ಬದಲಾಗುತ್ತಿರುತ್ತವೆ. ನಿಖರವಾದ ಮಾಹಿತಿ ನೀಡುವ ವೆಬ್‌ಸೈಟ್ ಅನ್ನು ಅವಲಂಬಿಸುವುದು ಉತ್ತಮ.

ನೀವು ಖರೀದಿಸುವ ಆಭರಣಗಳ ಮೇಲಿರುವ ಬಿಐಎಸ್ ಹಾಲ್‌ಮಾರ್ಕ್‌ ಅನ್ನು ಪರಿಶೀಲಿಸುವುದು ಬಹಳ ಮುಖ್ಯ. ಚಿನ್ನಾಭರಣ ಖರೀದಿಸುವಾಗ BIS ಹಾಲ್‌ಮಾರ್ಕ್ ಅನ್ನು ಪಡೆಯಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಭಾರತ ಸರ್ಕಾರವು ಚಿನ್ನವು ಅದರ ಮೇಲೆ ನಮೂದಿಸಲಾದ ಕ್ಯಾರಟ್‌ಗಳಷ್ಟೇ ಶುದ್ಧವಾಗಿದೆ ಎಂದು ಆ ಮೂಲಕ ಪ್ರಮಾಣೀಕರಿಸುತ್ತದೆ.

ಚಿನ್ನಾಭರಣಕ್ಕೆ ಮೇಕಿಂಗ್ ಚಾರ್ಜ್ ಮತ್ತು ವೇಸ್ಟೇಜ್ ಚಾರ್ಜ್ ಎಂದು ಇರುತ್ತದೆ. ಇದನ್ನು ಪ್ರತಿ ಆಭರಣ ವ್ಯಾಪಾರಿಯೂ ವಿಧಿಸುತ್ತಾರೆ. ನೀವು ಆಭರಣ ವ್ಯಾಪಾರಿಯನ್ನು ಈ ಬಗ್ಗೆ ಕೇಳಿ ಪರಿಶೀಲಿಸುವುದು ಉತ್ತಮ. ಎಲ್ಲಾ ಆಭರಣಗಳಿಗೆ ಮೇಕಿಂಗ್ ಅಥವಾ ವೇಸ್ಟೇಜ್ ಶುಲ್ಕಗಳು ಒಂದೇ ಆಗಿರುತ್ತವೆ ಎಂಬುದನ್ನು ಗಮನಿಸಿ. ಎಷ್ಟು ಶುಲ್ಕ ವಿಧಿಸಲಾಗಿದೆ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.

ನೀವು ದುಬಾರಿ ವಹಿವಾಟು ಮಾಡುತ್ತಿರುವುದರಿಂದ ಚಿನ್ನಾಭರಣದ ಅಸಲಿತನ ಖಚಿತಪಡಿಸಿಕೊಳ್ಳುವುದು ಉತ್ತಮ. ಯಾಕೆಂದರೆ ನೀವು ಖರೀದಿಸುತ್ತಿರುವುದು ಬಹುಕಾಲ ಉಳಿಯುವ, ಹೂಡಿಕೆ ಎಂದು ಪರಿಗಣಿಸಬಹುದಾದ ವಸ್ತು. ಎಲ್ಲೇ ಆಗಲಿ ಚಿನ್ನ ಖರೀದಿಸುವ ಮುನ್ನ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ಕೆಲವು ದಶಕಗಳ ಹಿಂದೆ, ಚಿನ್ನವನ್ನು ಖರೀದಿಸುವಾಗ ಸುಲಭವಾಗಿ ಮೋಸ ಹೋಗಬಹುದಾಗಿತ್ತು. ಆದರೆ ಇಂದು ಹೆಚ್ಚಿನ ಚಿನ್ನವು ಹಾಲ್‌ಮಾರ್ಕ್‌ ಆಗಿದೆ. ಪ್ರತಿಷ್ಠಿತ ಅಂಗಡಿಗಳಲ್ಲಿ ಈ ಬಗ್ಗೆ ಹೆಚ್ಚಿನ ಎಚ್ಚರ ಇರುತ್ತದೆ.

ಇದನ್ನೂ ಓದಿ: Rent Agreement: ಬಾಡಿಗೆ ಒಪ್ಪಂದ 11 ತಿಂಗಳ ಅವಧಿಗೆ ಮಾತ್ರ ಯಾಕೆ ಅನ್ನೋದು ಗೊತ್ತಾ?

Continue Reading

ದೇಶ

Independence Day 2024: ಬ್ರಿಟಿಷ್‌ ಕಾಲದ ಚಿನ್ನದ ನಾಣ್ಯದಿಂದ ಹಿಡಿದು ಸ್ವತಂತ್ರ ಭಾರತದ ರೂಪಾಯಿವರೆಗಿನ ಇತಿಹಾಸ ಕುತೂಹಲಕರ!

Independence Day 2024: ಪ್ರಸ್ತುತ ನಾವು ಬಳಸುವ ರೂಪಾಯಿಗೂ (Indian Currency) ಕ್ರಿಸ್ತಪೂರ್ವ 6ನೇ ಶತಮಾನದ ನಾಣ್ಯಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಇದರ ಹಿನ್ನಲೆ ಸಾಕಷ್ಟು ಆಸಕ್ತಿದಾಯಕವಾಗಿದೆ. ಭಾರತೀಯ ಕರೆನ್ಸಿ ನೋಟುಗಳು ಬ್ರಿಟಿಷರ ಆಡಳಿತದ ಬಳಿಕ ಹೇಗೆ ವಿಕಸನಗೊಂಡಿವೆ ಎಂಬುದರ ಕುರಿತು ಆಸಕ್ತಿದಾಯಕ ಮಾಹಿತಿಗಳು ಇಲ್ಲಿವೆ.

VISTARANEWS.COM


on

By

Independence Day 2024
Koo

ಭಾರತದಲ್ಲಿ ನಾಣ್ಯ, ನೋಟುಗಳು (Indian Currency) ಚಲಾವಣೆಗೆ ಬಂದು ಹಲವು ಶತಮಾನಗಳೇ ಕಳೆದಿವೆ. ಇದರ ಬಹುದೊಡ್ಡ ಇತಿಹಾಸವೇ ಇದೆ. “ರೂಪಾಯಿ” (Rupee) ಪದದ ಮೂಲ ಸಂಸ್ಕೃತ ಪದ ‘ರೂಪ್ಯ’ದಿಂದ (Rupya) ಬಂದಿದೆ. ಇದರರ್ಥ ಆಕಾರ, ಮುದ್ರೆಯೊತ್ತಲ್ಪಟ್ಟ, ಪ್ರಭಾವಿತ ಅಥವಾ ನಾಣ್ಯ ಎಂಬುದಾಗಿದೆ. ಸಂಸ್ಕೃತ ಪದ “ರೌಪ್ಯ” ಅಂದರೆ ಬೆಳ್ಳಿಯಿಂದ ಮುದ್ರಿಸಲ್ಪಟ್ಟದ್ದು ಎಂಬ ಅರ್ಥವನ್ನು ಹೊಂದಿದೆ.

ನಾವು ಪ್ರಸ್ತುತ ಬಳಸುವ ರೂಪಾಯಿಗೂ ಕ್ರಿಸ್ತಪೂರ್ವ 6ನೇ ಶತಮಾನದ ನಾಣ್ಯಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಇದರ ಹಿನ್ನೆಲೆ ಸಾಕಷ್ಟು ಆಸಕ್ತಿದಾಯಕವಾಗಿದೆ. 19ನೇ ಶತಮಾನದಲ್ಲಿ ಬ್ರಿಟಿಷರು (British govt) ಮೊದಲ ಬಾರಿಗೆ ಕಾಗದದ ಕರೆನ್ಸಿಯನ್ನು ಪರಿಚಯಿಸಿದರು. 1861ರ ಕಾಗದದ ಕರೆನ್ಸಿ ಕಾಯಿದೆಯು ಬ್ರಿಟಿಷ್ ಭಾರತದ ವಿಶಾಲವಾದ ವಿಸ್ತಾರದ ಉದ್ದಕ್ಕೂ ನೀಡಲಾದ ನೋಟಿನ ಏಕಸ್ವಾಮ್ಯವನ್ನು ಸರ್ಕಾರಕ್ಕೆ ನೀಡಿತು.

ಭಾರತೀಯ ಕರೆನ್ಸಿ ನೋಟುಗಳು ಬ್ರಿಟಿಷರ ಆಡಳಿತದ ಬಳಿಕ ಹೇಗೆ ವಿಕಸನಗೊಂಡಿವೆ ಎಂಬುದರ ಕುರಿತು ಆಸಕ್ತಿದಾಯಕ ಮಾಹಿತಿಗಳು ಇಲ್ಲಿವೆ:

ಭಾರತದಲ್ಲಿ ನಾಣ್ಯಗಳನ್ನು ಕ್ರಿಸ್ತಪೂರ್ವ 6ನೇ ಶತಮಾನದಲ್ಲಿ ಮುದ್ರಿಸಲಾಯಿತು. ಆಗ ಇದನ್ನು ಕರ್ಷಪಣಗಳು ಅಥವಾ ಪಣಗಳು ಎಂದು ಕರೆಯಲಾಗುತ್ತಿತ್ತು. ಈ ನಾಣ್ಯಗಳು ಅನಿಯಮಿತ ಆಕಾರ, ಪ್ರಮಾಣಿತ ತೂಕವನ್ನು ಹೊಂದಿತ್ತು.

ಬ್ರಿಟಿಷರ ಕಾಲದ ನಾಣ್ಯಗಳು

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತದ ಸಮಯದಲ್ಲಿ ಅಂದರೆ 1600ರಲ್ಲಿ ಮೊಘಲ್ ಕರೆನ್ಸಿಯು ಜನಪ್ರಿಯವಾಗಿತ್ತು. ಆದರೆ 1717ಎ.ಡಿನಲ್ಲಿ ಮೊಘಲ್ ಚಕ್ರವರ್ತಿ ಫರೂಖ್ ಸಿಯಾರ್ ಅವರು ಬ್ರಿಟಿಷರಿಗೆ ಬಾಂಬೆ ಟಂಕಸಾಲೆಯಲ್ಲಿ ಮೊಘಲ್ ಹಣವನ್ನು ನಾಣ್ಯ ಮಾಡಲು ಅನುಮತಿ ನೀಡಿದರು. ಅನಂತರ ಬ್ರಿಟಿಷರು ಚಿನ್ನದ ನಾಣ್ಯಗಳನ್ನು ಕ್ಯಾರೊಲಿನಾ ಎಂಬ ಹೆಸರಿನಲ್ಲಿ ತಂದರು. ಬೆಳ್ಳಿಯ ನಾಣ್ಯಗಳನ್ನು ಏಂಜಲೀನಾ ಎಂದು, ತಾಮ್ರದ ನಾಣ್ಯಗಳನ್ನು ಕಪ್ಪೆರೂನ್ ಮತ್ತು ತವರ ನಾಣ್ಯಗಳನ್ನು ಟಿನ್ನಿ ಎಂದು ಕರೆಯಲಾಯಿತು.


ಮೊದಲ ನೋಟು

18ನೇ ಶತಮಾನದಲ್ಲಿ ಬಂಗಾಳದಲ್ಲಿರುವ ಬ್ಯಾಂಕ್ ಆಫ್ ಹಿಂದೂಸ್ತಾನ್ ಜನರಲ್ ಬ್ಯಾಂಕ್ ಮತ್ತು ಬಂಗಾಳ ಬ್ಯಾಂಕ್ ಪೇಪರ್ ಕರೆನ್ಸಿಯನ್ನು ವಿತರಿಸಿದ ಭಾರತದ ಮೊದಲ ಬ್ಯಾಂಕುಗಳಾಗಿವೆ. 1812ರ ಸೆಪ್ಟೆಂಬರ್ 3ರಂದು ಬ್ಯಾಂಕ್ ಆಫ್ ಬೆಂಗಾಲ್ ಮೂಲಕ ಬ್ರಿಟಿಷರು ಇವುಗಳನ್ನು ಹೊರತಂದರು. ಇದು ಎರಡು ನೂರ ಐವತ್ತು ಸಿಕ್ಕಾ ರೂಪಾಯಿ ನೋಟಾಗಿತ್ತು.

ನಾಣ್ಯಗಳ ಕಾಯಿದೆ

1835ರ ನಾಣ್ಯಗಳ ಕಾಯಿದೆಯೊಂದಿಗೆ ದೇಶಾದ್ಯಂತ ಏಕರೂಪದ ನಾಣ್ಯವು ಚಲಾವಣೆಗೆ ಬಂದಿತ್ತು. 1858ರಲ್ಲಿ ಮೊಘಲ್ ಸಾಮ್ರಾಜ್ಯವು ಕೊನೆಗೊಂಡಿತು ಮತ್ತು ಬ್ರಿಟಿಷರು ನೂರು ರಾಜಪ್ರಭುತ್ವದ ರಾಜ್ಯಗಳ ಮೇಲೆ ಹಿಡಿತ ಸಾಧಿಸಿದರು. ಹೀಗಾಗಿ ಬಳಿಕ ನಾಣ್ಯಗಳ ಮೇಲೆ ಗ್ರೇಟ್ ಬ್ರಿಟನ್ ಪ್ರಭುತ್ವದ ರಾಜನ ಚಿತ್ರವನ್ನು ಮುದ್ರಿಸಲಾಯಿತು.

Indian Currency
Indian Currency


6ನೇ ಕಿಂಗ್ ಜಾರ್ಜ್ ಬ್ಯಾಂಕ್ ನೋಟುಗಳು ಮತ್ತು ನಾಣ್ಯಗಳ ಮೇಲಿನ ವಿನ್ಯಾಸಗಳನ್ನು ಬದಲಿಸಿದರು. ಆದರೆ 1857ರ ದಂಗೆಯ ನಂತರ, ಅವರು ವಸಾಹತುಶಾಹಿ ಭಾರತದ ಅಧಿಕೃತ ಕರೆನ್ಸಿಯಾಗಿ ರೂಪಾಯಿಯನ್ನು ಮಾಡಿದರು.
1862ರಲ್ಲಿ ರಾಣಿ ವಿಕ್ಟೋರಿಯಾ ಗೌರವಾರ್ಥವಾಗಿ, ವಿಕ್ಟೋರಿಯಾ ಭಾವಚಿತ್ರದೊಂದಿಗೆ ಬ್ಯಾಂಕ್ ನೋಟುಗಳು ಮತ್ತು ನಾಣ್ಯಗಳ ಸರಣಿಯನ್ನು ಬಿಡುಗಡೆ ಮಾಡಲಾಯಿತು.

ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆ

ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು 1935ರಲ್ಲಿ ಸ್ಥಾಪಿಸಲಾಯಿತು. ಭಾರತ ಸರ್ಕಾರದ ನೋಟುಗಳನ್ನು ವಿತರಿಸಲು ಅಧಿಕಾರ ನೀಡಲಾಯಿತು. ಇದು ಮೊದಲಿಗೆ 10,000 ರೂಪಾಯಿ ಮೌಲ್ಯದ ನೋಟುಗಳನ್ನು ಮುದ್ರಿಸಿತ್ತು. ಆದರೆ ಸ್ವಾತಂತ್ರ್ಯದ ಅನಂತರ ಇದನ್ನು ಅಮಾನ್ಯಗೊಳಿಸಲಾಯಿತು.


ಆರ್‌ಬಿಐ ಬಿಡುಗಡೆ ಮಾಡಿದ ಮೊದಲ ನೋಟು

ಆರ್‌ಬಿಐ ಬಿಡುಗಡೆ ಮಾಡಿದ ಮೊದಲ ಕಾಗದದ ಕರೆನ್ಸಿ 1938ರ ಜನವರಿಯಲ್ಲಿ 6ನೇ ಕಿಂಗ್ ಜಾರ್ಜ್ ಆವರ ಭಾವಚಿತ್ರವನ್ನು ಹೊಂದಿರುವ 5 ರೂಪಾಯಿ ನೋಟಾಗಿತ್ತು.


ಸ್ವಾತಂತ್ರ್ಯ ಅನಂತರದ ನೋಟು

1947ರಲ್ಲಿ ಸ್ವಾತಂತ್ರ್ಯ ಪಡೆದ ಅನಂತರ ಮತ್ತು 1950ರ ದಶಕದಲ್ಲಿ ಭಾರತ ಗಣರಾಜ್ಯವಾದಾಗ ಭಾರತದ ಆಧುನಿಕ ರೂಪಾಯಿಯ ವಿನ್ಯಾಸ ಪಡೆಯಿತು. ಪೇಪರ್ ಕರೆನ್ಸಿಗೆ ಆಯ್ಕೆ ಮಾಡಲಾದ ಚಿಹ್ನೆಯು ಸಾರಾನಾಥದಲ್ಲಿರುವ ಸಿಂಹದ ಚಿಹ್ನೆಯನ್ನು ಒಳಗೊಂಡಿತ್ತು. ಇದು 6ನೇ ಜಾರ್ಜ್ ನ ಬ್ಯಾಂಕ್ ನೋಟುಗಳನ್ನು ಬದಲಾಯಿಸಿತು. ಆದ್ದರಿಂದ, ಸ್ವತಂತ್ರ ಭಾರತವು ಮುದ್ರಿಸಿದ ಮೊದಲ ನೋಟು 1 ರೂಪಾಯಿ ನೋಟು.

1 ರೂಪಾಯಿ ನೋಟಿನ ಇತಿಹಾಸ ಹೀಗಿದೆ

ಬ್ರಿಟಿಷ್ ಆಡಳಿತದ ಅವಧಿಯಲ್ಲಿ 1917ರ ನವೆಂಬರ್ 30ರಂದು ಒಂದು ರೂಪಾಯಿ ನೋಟನ್ನು ಬಿಡುಗಡೆ ಮಾಡಲಾಯಿತು. ಅದೂ ಮೊದಲನೇ ಮಹಾಯುದ್ಧದ ಸಮಯದಲ್ಲಿ.


ಆ ಕಾಲದಲ್ಲಿ ಒಂದು ರೂಪಾಯಿ ನಾಣ್ಯ ಬೆಳ್ಳಿಯದ್ದಾಗಿತ್ತು. ಆದರೆ ಯುದ್ಧದ ಕಾರಣ ಪರಿಸ್ಥಿತಿ ಹದಗೆಟ್ಟಿತು ಮತ್ತು ಒಂದು ರೂಪಾಯಿ ಬೆಳ್ಳಿಯ ನಾಣ್ಯವನ್ನು ಉತ್ಪಾದಿಸಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ ಮೊದಲ ಬಾರಿಗೆ ಜನರ ಮುಂದೆ ಒಂದು ರೂಪಾಯಿ ನೋಟು ಬಿಡುಗಡೆಯಾಯಿತು. ಇದರಲ್ಲಿ 5ನೇ ಜಾರ್ಜ್ ನ ಚಿತ್ರವನ್ನು ನೋಟಿನಲ್ಲಿ ಅಳವಡಿಸಲಾಗಿತ್ತು. ಇಂಗ್ಲೆಂಡಿನಲ್ಲಿ ಮುದ್ರಿತವಾಗಿರುವ ಈ ಒಂದು ರೂಪಾಯಿ ನೋಟಿನ ಮೌಲ್ಯ ಇತರ ನೋಟುಗಳಿಗೆ ಹೋಲಿಸಿದರೆ ತುಂಬಾ ಕಡಿಮೆ ಇತ್ತು.

ನೋಟುಗಳ ಮೈಲುಗಲ್ಲು

1917-1918ರಲ್ಲಿಯೂ ಹೈದರಾಬಾದ್ ನಿಜಾಮರು ತಮ್ಮ ಸ್ವಂತ ಕರೆನ್ಸಿಯನ್ನು ಮುದ್ರಿಸಿ ಬಿಡುಗಡೆ ಮಾಡುವ ಸೌಲಭ್ಯ ಹೊಂದಿದ್ದರು. ಮೊದಲನೆಯ ಮಹಾಯುದ್ಧದಲ್ಲಿ ಲೋಹದ ಕೊರತೆಯಿಂದಾಗಿ ಮೊರ್ವಿ ರಾಜಪ್ರಭುತ್ವದ ರಾಜ್ಯಗಳು ಹರ್ವಾಲಾ ಎಂದು ಕರೆಯಲ್ಪಡುವ ಸೀಮಿತ ಹೊಣೆಗಾರಿಕೆಯ ಕರೆನ್ಸಿ ನೋಟುಗಳನ್ನು ಬಿಡುಗಡೆ ಮಾಡಿದ್ದವು.


1959ರಲ್ಲಿ ಭಾರತೀಯ ಹಜ್ ಯಾತ್ರಿಕರಿಗೆ ಹತ್ತು ರೂಪಾಯಿ ಮತ್ತು ನೂರು ರೂಪಾಯಿಗಳ ನೋಟನ್ನು ಬಿಡುಗಡೆ ಮಾಡಲಾಯಿತು. ಇದನ್ನು ಅವರು ಸೌದಿ ಅರೇಬಿಯಾದಲ್ಲಿ ಸ್ಥಳೀಯ ಕರೆನ್ಸಿಯೊಂದಿಗೆ ವಿನಿಮಯ ಮಾಡಿಕೊಳ್ಳಬಹುದಾಗಿತ್ತು.

1969ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 5 ಮತ್ತು 10 ರೂ. ನೋಟುಗಳ ಮೇಲೆ ಮಹಾತ್ಮ ಗಾಂಧಿ ಜನ್ಮ ಶತಮಾನೋತ್ಸವದ ಸ್ಮರಣಾರ್ಥದ ವಿನ್ಯಾಸವನ್ನು ಮಾಡಿ ಬಿಡುಗಡೆ ಮಾಡಿತ್ತು.


ನಾಣ್ಯಗಳ ಬದಲಿಗೆ ಟೋಕನ್

ಎರಡನೇ ಮಹಾಯುದ್ಧದ ಸಮಯದಲ್ಲಿ ಲೋಹದ ಕೊರತೆಯಿಂದಾಗಿ 36 ರಾಜಪ್ರಭುತ್ವದ ರಾಜ್ಯಗಳು ಮುಖ್ಯವಾಗಿ ಗುಜರಾತ್, ರಾಜಸ್ಥಾನ, ಸಿಂಧ್, ಬಲೂಚಿಸ್ತಾನ್ ಮತ್ತು ಕೇಂದ್ರ ಪ್ರಾಂತ್ಯಗಳು ನಾಣ್ಯಗಳ ಬದಲಿಗೆ ಕಾಗದದ ಟೋಕನ್‌ಗಳನ್ನು ನೀಡಿದವು!


ನೋಟುಗಳಲ್ಲಿ ಮಹಾತ್ಮಾ ಗಾಂಧಿ ಚಿತ್ರ

ಅಂತಿಮವಾಗಿ 1996ರಲ್ಲಿ ಮಹಾತ್ಮಾ ಗಾಂಧಿ ಚಿತ್ರವನ್ನು ಹೊಂದಿರುವ ಕಾಗದದ ನೋಟುಗಳನ್ನು ಪರಿಚಯಿಸಲಾಯಿತು.

ಛಾಯಾಗ್ರಾಹಕನೊಬ್ಬ ತೆಗೆದ ಗಾಂಧಿಯ ಚಿತ್ರ

ಪ್ರಸ್ತುತ ನೋಟಿನಲ್ಲಿರುವ ಮಹಾತ್ಮ ಗಾಂಧಿಯವರ ನಗುಮುಖದ ಚಿತ್ರ ವ್ಯಂಗ್ಯಚಿತ್ರವೆಂದು ಕೆಲವರು ಹೇಳುತ್ತಾರೆ. ಆದರೆ ಇದು ನಿಜವಲ್ಲ. ಈ ಚಿತ್ರವನ್ನು 1946ರಲ್ಲಿ ಅಜ್ಞಾತ ಛಾಯಾಗ್ರಾಹಕರೊಬ್ಬರು ತೆಗೆದಿದ್ದು, ಅದನ್ನು ಕತ್ತರಿಸಿ ಮುದ್ರಿಸಲಾಗಿದೆ.


ರಾಜಕಾರಣಿ ಮತ್ತು ಗ್ರೇಟ್ ಬ್ರಿಟನ್‌ನಲ್ಲಿ ಮಹಿಳಾ ಮತದಾರರ ಚಳವಳಿಯ ನಾಯಕರಾಗಿದ್ದ ಲಾರ್ಡ್ ಫ್ರೆಡ್ರಿಕ್ ವಿಲಿಯಂ ಪೆಥಿಕ್-ಲಾರೆನ್ಸ್ ಅವರ ಪಕ್ಕದಲ್ಲಿ ನಿಂತಿದ್ದ ಮಹಾತ್ಮಾ ಗಾಂಧಿಯವರ ಚಿತ್ರವನ್ನು ಪ್ರಸ್ತುತ ರಾಷ್ಟ್ರಪತಿ ಭವನ ಎಂದು ಕರೆಯಲ್ಪಡುವ ಹಿಂದಿನ ವೈಸರಾಯ್ ಹೌಸ್‌ನಲ್ಲಿ ತೆಗೆಯಲಾಗಿತ್ತು. ಈ ಚಿತ್ರವನ್ನು 1996ರಲ್ಲಿ ಆರ್‌ಬಿಐ ಪರಿಚಯಿಸಿದ ಮಹಾತ್ಮ ಗಾಂಧಿ ಸರಣಿಯ ಬ್ಯಾಂಕ್ ನೋಟುಗಳಲ್ಲಿ ಬಳಸಲಾಗಿದೆ.


ವಿಭಿನ್ನ ಚಿತ್ರ ಬಳಕೆ

1981ರಲ್ಲಿ 10 ರೂ. ನೋಟು ಸಿಂಹದ ಲಾಂಛನ ಮತ್ತು ರಾಷ್ಟ್ರೀಯ ಪಕ್ಷಿಯಾದ ನವಿಲಿನ ಚಿತ್ರವನ್ನು ಹೊಂದಿತ್ತು.

1983- 84ರಲ್ಲಿ ಮುದ್ರಿಸಿರುವ 20 ರೂಪಾಯಿಯ ಬ್ಯಾಂಕ್ ನೋಟಿನ ಹಿಂಭಾಗದಲ್ಲಿ ಬೌದ್ಧರ ಚಕ್ರವನ್ನು ಒಳಗೊಂಡಿತ್ತು.

1996 ಜೂನ್‌ನಲ್ಲಿ ಮುದ್ರಿಸಲಾದ 100 ರೂ.ನ ನೋಟಿನಲ್ಲಿ ಮಹಾತ್ಮಾ ಗಾಂಧಿಯವರ ಮುಂಭಾಗದ ಚಿತ್ರದೊಂದಿಗೆ ಹಿಂಭಾಗದಲ್ಲಿ ಹಿಮಾಲಯ ಪರ್ವತಗಳನ್ನು ಚಿತ್ರಿಸಲಾಗಿದೆ.


1996ರ ಜೂನ್‌ನಲ್ಲಿ 10 ರೂ. ನೋಟಿನ ಮುಂಭಾಗದಲ್ಲಿ ಗಾಂಧಿ ಮತ್ತು ಹಿಂಭಾಗದಲ್ಲಿ ಜೀವವೈವಿಧ್ಯವನ್ನು ಸಂಕೇತಿಸುವ ಭಾರತದ ಪ್ರಾಣಿಗಳನ್ನು ಪ್ರತಿನಿಧಿಸುವ ಚಿತ್ರವನ್ನು ಚಿತ್ರಿಸಲಾಯಿತು.

1997ರ ಮಾರ್ಚ್‌ನಲ್ಲಿ ಮುದ್ರಿಸಲಾದ 50 ರೂ.ಗಳ ನೋಟಿನ ಹಿಂಭಾಗ ಮತ್ತು ಮುಂಭಾಗದಲ್ಲಿ ಭಾರತೀಯ ಸಂಸತ್ತು ಮತ್ತು ಮಹಾತ್ಮ ಗಾಂಧಿಯವರ ಚಿತ್ರವನ್ನು ನೀಡಲಾಗಿದೆ.


1997ರ ಅಕ್ಟೋಬರ್‌ನಲ್ಲಿ ಮಹಾತ್ಮಾ ಗಾಂಧಿಯವರ ಮುಂಭಾಗದ ಚಿತ್ರವಿರುವ 500 ರೂ.ಗಳನ್ನು ನೀಡಲಾಯಿತು ಮತ್ತು ಅದರ ಹಿಂಭಾಗದಲ್ಲಿ ದಂಡಿ ಮೆರವಣಿಗೆಯನ್ನು ಪ್ರತಿನಿಧಿಸುವ ಚಿತ್ರವನ್ನು ಹೊಂದಿತ್ತು.


ಇದು 1930ರ ಮಾರ್ಚ್ 12ರಂದು ಪ್ರಾರಂಭಿಸಿದ ಉಪ್ಪಿನ ಸತ್ಯಾಗ್ರಹವನ್ನು ಪ್ರತಿಬಿಂಬಿಸುತ್ತದೆ. ಗಾಂಧೀಜಿ ಅವರು ಆರಂಭಿಸಿದ ವ್ಯಾಪಕ ನಾಗರಿಕ ಅಸಹಕಾರ ಚಳವಳಿ ಇದು ಎಂದು ಪರಿಗಣಿಸಲಾಗಿದೆ. ಭಾರತದಲ್ಲಿ ಉಪ್ಪಿನ ಮೇಲೆ ಬ್ರಿಟಿಷ್‌ ಪ್ರಾಬಲ್ಯದ ವಿರುದ್ಧ ಗಾಂಧೀಜಿ ತಮ್ಮ ಅನುಯಾಯಿಗಳೊಂದಿಗೆ ಅಹಮದಾಬಾದ್ ಬಳಿಯ ಅವರ ಸಬರಮತಿ ಆಶ್ರಮದಿಂದ ನವಸಾರಿ ಜಿಲ್ಲೆ ಗುಜರಾತ್‌ನ ಕರಾವಳಿ ಗ್ರಾಮವಾದ ದಂಡಿಗೆ ಮೆರವಣಿಗೆ ನಡೆಸಿದರು. ಬ್ರಿಟಿಷ್ ಸರ್ಕಾರಕ್ಕೆ ತೆರಿಗೆ ಪಾವತಿಸದೆ ಉಪ್ಪನ್ನು ತಯಾರಿಸಿದರು. ಈ ರೀತಿಯಲ್ಲಿ 1930ರ ಏಪ್ರಿಲ್ 5ರಂದು ಗಾಂಧಿಯವರು ಉಪ್ಪಿನ ಕಾನೂನನ್ನು ಮುರಿದರು.


2000ರ ನವೆಂಬರ್‌ನಲ್ಲಿ ಗಾಂಧಿಯವರ ಮುಂಭಾಗದ ಚಿತ್ರದೊಂದಿಗೆ 1000 ರೂ.ಯನ್ನು ನೀಡಲಾಯಿತು. ಅದರ ಹಿಂಭಾಗದಲ್ಲಿ ಧಾನ್ಯ ಕೊಯ್ಲು ಅಂದರೆ ಕೃಷಿ ವಲಯ, ತೈಲ ಸಂಸ್ಕರಣೆ ಇತ್ಯಾದಿ ಹೊಂದಿರುವ ಭಾರತದ ಆರ್ಥಿಕತೆಯನ್ನು ಪ್ರತಿನಿಧಿಸುವ ಚಿತ್ರವನ್ನು ಹೊಂದಿದೆ.

2001ರ ಆಗಸ್ಟ್‌ನಲ್ಲಿ ಗಾಂಧಿಯವರ ಚಿತ್ರದೊಂದಿಗೆ 20 ರೂ. ನೀಡಲಾಯಿತು. ಇದರಲ್ಲಿ ತಾಳೆ ಮರಗಳ ಚಿತ್ರವನ್ನು ಹಿಂಭಾಗದಲ್ಲಿ ಮುದ್ರಿಸಲಾಯಿತು.

ಇದನ್ನೂ ಓದಿ: Independence Day 2024: ವಾಟ್ಸ್‌ಆಪ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಸ್ಟಿಕ್ಕರ್‌, ಮೆಸೆಜ್‌, ಇಮೇಜ್‌ ಪಡೆಯುವುದು ಹೇಗೆ?

2001ರ ನವೆಂಬರ್ ನಲ್ಲಿ 5 ರೂ. ಮುಖಬೆಲೆಯ ನೋಟಿನ ಮುಂಭಾಗದಲ್ಲಿ ಮಹಾತ್ಮ ಗಾಂಧಿ ಮತ್ತು ಹಿಂಭಾಗದಲ್ಲಿ ಕೃಷಿ ಯಾಂತ್ರೀಕರಣದ ಚಿತ್ರವನ್ನು ಚಿತ್ರಿಸಲಾಯಿತು.

2016ರ ನವೆಂಬರ್‌ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣದ ವಿರುದ್ಧ ಸಮರ ಸಾರುವ ಸಲುವಾಗಿ ಹಿಂದಿನ 500 ಮತ್ತು 1000 ರೂ. ನೋಟುಗಳನ್ನು ಇದ್ದಕ್ಕಿದ್ದಂತೆ ರದ್ದು ಮಾಡಿ ದೇಶಾದ್ಯಂತ ಸಂಚಲನ ಮೂಡಿಸಿದರು. 2000 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದರು. ಮುಂದೆ 500 ರೂ.ಯ ಹೊಸ ಮಾದರಿ ನೋಟುಗಳೂ ಬಂದವು. ಬಳಿಕ ಇದೀಗ 2000 ರೂ. ಮೌಲ್ಯದ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿದ್ದು, ಚಲಾವಣೆಯಲ್ಲಿರುವ ಅದನ್ನು ಆರ್‌ಬಿಐ ಹಿಂಪಡೆದಿದೆ. 2024ರ ಅಕ್ಟೋಬರ್ ಬಳಿಕ ಈ 2000 ರೂ. ನೋಟುಗಳು ಅಧಿಕೃತವಾಗಿ ಇತಿಹಾಸದ ಪುಟವನ್ನು ಸೇರಲಿದೆ!

Continue Reading

ಮನಿ-ಗೈಡ್

PM Kisan Samman Nidhi: ಈ ದಿನಾಂಕದಂದು ಜಮೆ ಆಗಲಿದೆ ಕಿಸಾನ್‌ ಸಮ್ಮಾನ್‌ ನಿಧಿಯ 18ನೇ ಕಂತು; ಹೊಸದಾಗಿ ಅಪ್ಲೈ ಮಾಡುವ ವಿಧಾನ ಇಲ್ಲಿದೆ

PM Kisan Samman Nidhi: ದೇಶದ ಕೃಷಿಕರಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ 2೦19ರಲ್ಲಿ ಜಾರಿಗೆ ತಂದ ಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ 18ನೇ ಕಂತಿನ ಹಣ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. 17ನೇ ಕಂತು ಜೂನ್‌ನಲ್ಲಿ ರಿಲೀಸ್‌ ಆಗಿತ್ತು. ಅಂದು ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ 9.26 ಕೋಟಿ ಫಲಾನುಭವಿಗಳ ಖಾತೆಗೆ 21,000 ಕೋಟಿ ರೂ. ಜಮೆ ಮಾಡಿದ್ದರು. ಪಿಎಂ-ಕಿಸಾನ್ ಸಮ್ಮಾನ್‌ ಯೋಜನೆಯ ಹಣವನ್ನು ನಾಲ್ಕು ತಿಂಗಳಿಗೊಮ್ಮೆ 2,000 ರೂ.ಗಳಂತೆ ವರ್ಷಕ್ಕೆ 3 ಬಾರಿ ಪಾವತಿಸಲಾಗುತ್ತದೆ. ಹೊಸದಾಗಿ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

PM Kisan Samman Nidhi
Koo

ನವದೆಹಲಿ: ದೇಶದ ಕೃಷಿಕರಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ (PM Kisan Samman Nidhi) ಯೋಜನೆಯ 18ನೇ ಕಂತಿನ ಹಣ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ನವೆಂಬರ್‌ನಲ್ಲಿ ಫಲಾನುಭವಿಗಳ ಖಾತೆಗೆ 2 ಸಾವಿರ ರೂ. ಜಮೆ ಆಗಲಿದೆ. 17ನೇ ಕಂತು ಜೂನ್‌ನಲ್ಲಿ ರಿಲೀಸ್‌ ಆಗಿತ್ತು. 16ನೇ ಕಂತು ಫೆಬ್ರವರಿಯಲ್ಲಿ ಬಿಡುಗಡೆಯಾಗಿತ್ತು. ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯನ್ನು 2೦19ರಲ್ಲಿ ಜಾರಿಗೆ ತಂದಿದೆ (Money Guide).

3 ಕಂತುಗಳಲ್ಲಿ ಪಾವತಿ

ಪಿಎಂ-ಕಿಸಾನ್ ಸಮ್ಮಾನ್‌ ಯೋಜನೆಯ ಹಣವನ್ನು ನಾಲ್ಕು ತಿಂಗಳಿಗೊಮ್ಮೆ 2,000 ರೂ.ಗಳಂತೆ ವರ್ಷಕ್ಕೆ 3 ಬಾರಿ ಪಾವತಿಸಲಾಗುತ್ತದೆ. ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್ ಎಂಬ ಮೂರು ಕಂತುಗಳಲ್ಲಿ ಹಣವನ್ನು ಒದಗಿಸಲಾಗುತ್ತದೆ. ಈ 6 ಸಾವಿರ ರೂ. ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ದೇಶದ ಸಣ್ಣ ಮತ್ತು ಅತಿ ಸಣ್ಣ ಕೃಷಿಕರಿಗೆ ನೆರವಾಗುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಇ-ಕೆವೈಸಿ ಕಡ್ಡಾಯ

ಕಿಸಾನ್‌ ಸಮ್ಮಾನ್‌ ನಿಧಿಯ ಕಂತನ್ನು ಪಡೆಯಲು ಫಲಾನುಭವಿ ರೈತರು ಇ-ಕೆವೈಸಿ ಪೂರ್ಣಗೊಳಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಇ-ಕೆವೈಸಿ ಮಾಡದ ರೈತರಿಗೆ ಖಾತೆಗೆ ಹಣ ಬಿಡುಗಡೆಯಾಗುವುದಿಲ್ಲ. ಒಟಿಪಿ ಆಧಾರಿತ ಇ-ಕೆವೈಸಿಯನ್ನು ಆನ್‌ಲೈನ್‌ ಮತ್ತು ಆಫ್‌ಲೈನ್‌ ಮೂಲಕ ಮಾಡಬಹುದು.

ಹೆಸರು ನೋಂದಾಯಿಸುವ ವಿಧಾನ

  • ಅಧಿಕೃತ ವೆಬ್‌ಸೈಟ್‌ pmkisan.gov.in ಭೇಟಿ ನೀಡಿ
  •  ‘New Farmer Registration’ ಆಯ್ಕೆ ಮೇಲೆ ಕಲಿಕ್‌ ಮಾಡಿ ಮತ್ತು ಆಧಾರ್‌ ಕಾರ್ಡ್‌ ನಂಬರ್‌ ನಮೂದಿಸಿ ಕ್ಯಾಪ್ಚ ಕೋಡ್‌ ಭರ್ತಿ ಮಾಡಿ
  • ಅಗತ್ಯ ಮಾಹಿತಿ ತುಂಬಿ ‘Yes’ ಬಟನ್‌ ಕ್ಲಿಕ್‌ ಮಾಡಿ
  • ಅರ್ಜಿ ಫಾರಂ ತುಂಬಿ, ಸೇವ್‌ ಮಾಡಿ ಭವಿಷ್ಯದ ಅಗತ್ಯಗಳಿಗಾಗಿ ಪ್ರಿಂಟ್‌ ಔಟ್‌ ತೆಗೆದಿಡಿ.

ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವ ವಿಧಾನ

  • ಅಧಿಕೃತ ವೆಬ್‌ಸೈಟ್‌ www.pmkisan.gov.inಗೆ ಭೇಟಿ ನೀಡಿ
  • ಆಗ ತೆರೆದುಕೊಳ್ಳುವ ಪುಟದಲ್ಲಿನ ‘Beneficiary list’ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ
  • ನಿಮ್ಮ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್‌ ಮತ್ತು ಗ್ರಾಮವನ್ನು ಆಯ್ಕೆ ಮಾಡಿ
  • ‘Get report’ ಆಯ್ಕೆಯನ್ನು ಸೆಲೆಕ್ಟ್‌ ಮಾಡಿ.

ಹೀಗೆ ಚೆಕ್‌ ಮಾಡಿ

ನೀವು ಈ ಯೋಜನೆಯ ಫಲಾನುಭವಿಯಾಗಿದ್ದರೆ, ಹಣ ನಿಮ್ಮ ಖಾತೆಗೆ ಜಮೆ ಆಗಿದೆಯೇ ಎನ್ನುವುದನ್ನು ಆನ್‌ಲೈನ್‌ ಮೂಲಕ ನಿಮಗೇ ಪರಿಶೀಲಿಸಲು ಸಾಧ್ಯವಿದೆ. ಅದಕ್ಕಾಗಿ ಮಾಡಬೇಕಾದುದು ಇಷ್ಟೆ.

  • ಅಧಿಕೃತ ವೆಬ್‌ಸೈಟ್‌ pmkisan.gov.in ಭೇಟಿ ನೀಡಿ
  • ಆಗ ಓಪನ್‌ ಆಗುವ ಪೇಜ್‌ನ ಬಲ ಬದಿಯಲ್ಲಿರುವ ‘Know Your Status’ ಆಯ್ಕೆ ಮೇಲೆ ಕ್ಲಿಕ್‌ ಮಾಡಿ
  • ರಿಜಿಸ್ಟ್ರೇಷನ್‌ ನಂಬರ್‌ ನಮೂದಿಸಿ, ಕ್ಯಾಪ್ಚ ಕೋಡ್‌ ಭರ್ತಿ ಮಾಡಿ ‘Get Data’ ಆಯ್ಕೆಯನ್ನು ಸೆಲೆಕ್ಟ್‌ ಮಾಡಿ
  • ಈಗ ಫಲಾನುಭವಿಯ ವಿವರ, ಹಣ ಜಮೆಯಾದ ಮಾಹಿತಿ ಸ್ಕ್ರೀನ್‌ ಮೇಲೆ ಮೂಡುತ್ತದೆ.

ಹೆಚ್ಚಿನ ಮಾಹಿತಿಗೆ ಹೆಲ್ಪ್‌ಲೈನ್‌ ನಂಬರ್‌ 155261 ಮತ್ತು 011-24300606 ಅನ್ನು ಸಂಪರ್ಕಿಸಿ.

ಇದನ್ನೂ ಓದಿ: LIC New Plan For Youths: ಎಲ್‌ಐಸಿಯಿಂದ ಯುವ ಜನರಿಗಾಗಿ ಹೊಸ ವಿಮಾ ಯೋಜನೆ; ಏನಿದರ ವಿಶೇಷತೆ?

Continue Reading

ಚಿನ್ನದ ದರ

Gold Rate Today: ಮತ್ತೆ ಕೈ ಸುಡುತ್ತಿದೆ ಚಿನ್ನ; ಬಂಗಾರ ದರದಲ್ಲಿ ಇಂದು ಭಾರಿ ಏರಿಕೆ

Gold Rate Today: ಚಿನ್ನದ ದರ ಸತತವಾಗಿ ಏರಿಕೆಯಾಗುತ್ತಲೇ ಇದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ದರ ಇಂದು (ಆಗಸ್ಟ್‌ 13) ಮತ್ತೆ ಹೆಚ್ಚಾಗಿದೆ. ಇಂದು 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 95 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 104 ಏರಿಕೆಯಾಗಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,565 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,162 ಇದೆ.

VISTARANEWS.COM


on

Gold Rate Today
Koo

ಬೆಂಗಳೂರು: ಚಿನ್ನದ ದರ ಸತತವಾಗಿ ಏರಿಕೆಯಾಗುತ್ತಲೇ ಇದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ದರ ಇಂದು (ಆಗಸ್ಟ್‌ 13) ಮತ್ತೆ ಹೆಚ್ಚಾಗಿದೆ (Gold Rate Today). ಇಂದು 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 95 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 104 ಏರಿಕೆಯಾಗಿದೆ.

ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,565 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,162 ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ ₹ 52,520 ಇದೆ. ಇನ್ನು 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 65,650 ಮತ್ತು ₹ 6,56,500 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ ₹ 57,296 ಇದೆ. 10 ಗ್ರಾಂ ಮತ್ತು 100 ಗ್ರಾಂನ 24 ಕ್ಯಾರಟ್‌ ಚಿನ್ನದ ಬೆಲೆ ₹ 71,620 ಮತ್ತು ₹ 7,16,200 ತಲುಪಿದೆ.

ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
ದಿಲ್ಲಿ₹ 6,580 ₹ 7,177
ಮುಂಬೈ₹ 6,565 ₹ 7,162
ಬೆಂಗಳೂರು₹ 6,565 ₹ 7,162
ಚೆನ್ನೈ₹ 6,565 ₹ 7,162

ಬೆಳ್ಳಿ ಧಾರಣೆ

ಇತ್ತ ಬೆಳ್ಳಿಯ ಬೆಲೆಯಲ್ಲಿಯೂ ಭಾರಿ ಏರಿಕೆಯಾಗಿದೆ. ಬೆಳ್ಳಿ 1 ಗ್ರಾಂಗೆ ₹ 83.50 ಹಾಗೂ 8 ಗ್ರಾಂಗೆ ₹ 668 ಇದೆ. 10 ಗ್ರಾಂ ₹ 8,350 ಹಾಗೂ 1 ಕಿಲೋಗ್ರಾಂ ₹ 83,500 ಬೆಲೆ ಬಾಳುತ್ತದೆ.

ಚಿನ್ನ ಯಾಕೆ ದುಬಾರಿಯಾಗುತ್ತಿದೆ?

ಚಿನ್ನದಲ್ಲಿ ಹೂಡಿಕೆ ಸುರಕ್ಷಿತವಾಗಿರುವುದರಿಂದಲೇ ಚಿನ್ನ ಹೆಚ್ಚು ದುಬಾರಿಯಾಗುತ್ತಿದೆ. ಆರ್ಥಿಕ ಅನಿಶ್ಚಿತತೆ, ಭೌಗೋಳಿಕ, ರಾಜಕೀಯ ಪ್ರಕ್ಷುಬ್ಧತೆಯ ಅವಧಿಯಲ್ಲಿ ಸ್ಥಿರತೆಯನ್ನು ಬಯಸುವ ಹೂಡಿಕೆದಾರರಿಗೆ ಚಿನ್ನದ ಮೇಲಿನ ಹೂಡಿಕೆಯು ಹೆಚ್ಚು ಸುರಕ್ಷಿತವಾಗಿ ಕಾಣುತ್ತಿದೆ. ಹೀಗಾಗಿಯೇ ಚಿನ್ನದ ದರ ಗಗನಕ್ಕೇರುತ್ತಿದೆ.

ಹಣದುಬ್ಬರ: ಚಿನ್ನವನ್ನು ಸಾಮಾನ್ಯವಾಗಿ ಹಣದುಬ್ಬರದ ವಿರುದ್ಧ ಹೂಡಿಕೆ ಎಂದು ಪರಿಗಣಿಸಲಾಗಿದೆ. ದೇಶದಲ್ಲಿ ಹೊಸ ನೋಟು, ನಾಣ್ಯಗಳನ್ನು ಹೊರತರಬೇಕಾದರೆ ಅಷ್ಟೇ ಪ್ರಮಾಣದ ಚಿನ್ನವನ್ನು ಆರ್‌ಬಿಐ ತೆಗೆದಿರುಸುತ್ತದೆ. ದೇಶದಲ್ಲಿ ಹಣದುಬ್ಬರದ ಒತ್ತಡದಿಂದಾಗಿ ಕರೆನ್ಸಿಗಳ ಮೌಲ್ಯ ಕಡಿಮೆಯಾಗುತ್ತದೆ. ಆಗ ಚಿನ್ನದ ಬೆಲೆ ತನ್ನಿಂತಾನೇ ಏರಿಕೆಯಾಗುತ್ತದೆ. ಈ ಮೂಲಕ ದೇಶದಲ್ಲಿ ಕರೆನ್ಸಿಗಳ ಮೌಲ್ಯ ಕಾಪಾಡಿಕೊಳ್ಳಬಹುದು.

ಜಾಗತಿಕ ಉದ್ವಿಗ್ನತೆಗಳು: ಇತ್ತೀಚಿನ ದಿನಗಳಲ್ಲಿ ಭೌಗೋಳಿಕ, ರಾಜಕೀಯ ಘರ್ಷಣೆಗಳು ಮಾರುಕಟ್ಟೆಯ ಅಸ್ಥಿರತೆಯನ್ನು ಉಂಟು ಮಾಡುತ್ತಿದೆ. ಇದು ಹೂಡಿಕೆದಾರರಿಗೆ ಚಿನ್ನದಂತಹ ಸುರಕ್ಷಿತ ಸ್ವತ್ತುಗಳನ್ನು ಖರೀದಿಸಲು ಪ್ರೇರೇಪಿಸುತ್ತದೆ. ಭೌಗೋಳಿಕ ರಾಜಕೀಯ ಅನಿಶ್ಚಿತತೆಯ ಸಮಯದಲ್ಲಿ ಅದು ಮೌಲ್ಯವನ್ನು ಉಳಿಸಿಕೊಳ್ಳುತ್ತದೆ. ಉಕ್ರೇನ್‌ ಯುದ್ಧ ಮುಂದುವರಿಯುತ್ತಿರುವಾಗಲೇ ಈಗ ಇರಾನ್‌-ಇಸ್ರೇಲ್‌ ಯುದ್ಧದ ಛಾಯೆ ಆವರಿಸಿದೆ. ಇಂಥ ಸನ್ನಿವೇಶದಲ್ಲಿ ಸಹಜವಾಗಿಯೇ ಚಿನ್ನದ ಮೇಲಿನ ಹೂಡಿಕೆ ಹೆಚ್ಚುತ್ತದೆ. ಆಗ ದರ ಏರಿಕೆಯಾಗುತ್ತದೆ.

ಚೀನಾದ ಪ್ರಭಾವ: ಇತ್ತೀಚೆಗೆ ಚೀನಾದಲ್ಲಿ ಚಿನ್ನದ ಬೇಡಿಕೆ ಹೆಚ್ಚುತ್ತಿದೆ. ಚೀನಾದ ಸೆಂಟ್ರಲ್ ಬ್ಯಾಂಕ್ ತನ್ನ ಸಂಗ್ರಹಕ್ಕೆ ಗಣನೀಯ ಪ್ರಮಾಣದ ಚಿನ್ನವನ್ನು ಸೇರಿಸುತ್ತಿದೆ. ಇದು ಅಮೆರಿಕ ಮತ್ತು ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.

ಕಡಿಮೆ ಬಡ್ಡಿ ದರಗಳು: ಬ್ಯಾಂಕ್‌ಗಳಲ್ಲಿ ಬಡ್ಡಿ ದರಗಳು ಕಡಿಮೆಯಾದಾಗ ಜನರಲ್ಲಿ ಹಣದ ಹರಿವಿನ ಪ್ರಮಾಣ ಹೆಚ್ಚಳವಾಗುತ್ತದೆ. ಇದರಿಂದ ಚಿನ್ನ ಖರೀದಿ ಪ್ರಮಾಣ ಹೆಚ್ಚಾಗುತ್ತದೆ. ಇದು ಚಿನ್ನದ ಹೆಚ್ಚಿನ ಬೇಡಿಕೆ ಮತ್ತು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತದೆ.

ಹೂಡಿಕೆ ಮಾಡಬಹುದೆ?: ಚಿನ್ನದ ಬೆಲೆಗಳು ಹೆಚ್ಚಾದಾಗ ಸಾಮಾನ್ಯವಾಗಿ ಇದು ಗ್ರಾಹಕರ ಖರೀದಿ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಮೊದಲೇ ಚಿನ್ನದ ಮೇಲೆ ಹೂಡಿಕೆ ಮಾಡಬೇಕು. ಇದರಿಂದ ಮಾರುಕಟ್ಟೆಯಲ್ಲಿ ಏರಿಳಿತದ ಅಪಾಯ ಕೊಂಚ ಕಡಿಮೆಯಾಗುತ್ತದೆ. ಹೂಡಿಕೆಯ ಉದ್ದೇಶವನ್ನು ಮೊದಲೇ ನಿರ್ಣಯಿಸುವುದು ಮತ್ತು ಪರ್ಯಾಯ ಮಾರ್ಗಗಳನ್ನು ಅನ್ವೇಷಿಸುವುದು ಕೂಡ ಬಹಳ ಮುಖ್ಯ. ಉದಾಹರಣೆಗೆ ಮದುವೆ ಅಥವಾ ಹಬ್ಬಗಳಂತಹ ವಿಶೇಷ ಸಂದರ್ಭಗಳಲ್ಲಿ ಚಿನ್ನವನ್ನು ಖರೀದಿಸುವ ಉದ್ದೇಶ ಮೊದಲೇ ಇರುತ್ತದೆ. ಇದಕ್ಕೆ ಮುಂಚಿತವಾಗಿ ಹೂಡಿಕೆ ಮಾಡಬಹುದು. ಇದರಿಂದ ಬೆಲೆಗಳು ಸ್ಥಿರವಾಗಿದ್ದಾಗ ತಕ್ಷಣ ಖರೀದಿ ಮಾಡಬಹುದು.

ಇದನ್ನೂ ಓದಿ: Richest Indian Family: ಭಾರತದ ಜಿಡಿಪಿಯ ಶೇ. 10ರಷ್ಟು ಸಂಪತ್ತು ಹೊಂದಿರುವ ಅಂಬಾನಿ ಕುಟುಂಬ! ಇತರ ಶ್ರೀಮಂತ ಕುಟುಂಬಗಳು ಯಾವವು?

Continue Reading
Advertisement
Multivitamins
ಆರೋಗ್ಯ5 mins ago

Multivitamins: ನಮಗೆ ವಿಟಮಿನ್‌ ಪೂರಕಗಳು ಅಗತ್ಯವೆಂದು ತಿಳಿಯುವುದು ಹೇಗೆ?

Varamahalakshmi Festival 2024
ಧಾರ್ಮಿಕ7 mins ago

Varamahalakshmi Festival 2024: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಏನು? ಹೆಚ್ಚಿನ ಫಲ ಪಡೆಯಲು ಪೂಜೆ ಹೇಗೆ ಮಾಡಬೇಕು?

Droupadi Murmu
ದೇಶ33 mins ago

Droupadi Murmu: ಹೊಸ ಕ್ರಿಮಿನಲ್‌ ಕಾನೂನು ಸ್ವಾತಂತ್ರ್ಯ ಹೋರಾಟಗಾರರಿಗೆ ಸಂದ ಗೌರವ; ರಾಷ್ಟ್ರಪತಿ ಮುರ್ಮು

Tea vs Coffee
ಆರೋಗ್ಯ50 mins ago

Health Tips: ಬಿಸಿ ಕಾಫಿಗೆ ಬಾಯಿ ಸುಟ್ಟಿತೇ? ಇಲ್ಲಿದೆ ಉಪಶಮನ!

Cooker Blast
ಕರ್ನಾಟಕ50 mins ago

Cooker Blast: ಅಡುಗೆ ಮಾಡುವಾಗ ಕುಕ್ಕರ್ ಸ್ಫೋಟವಾಗಿ ಯುವಕ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ

Rahul Navin
ದೇಶ1 hour ago

Director of ED: ಜಾರಿ ನಿರ್ದೇಶನಾಲಯ ಪೂರ್ಣಾವಧಿ ನಿರ್ದೇಶಕರಾಗಿ ರಾಹುಲ್ ನವೀನ್ ನೇಮಕ

Varamahalakshmi Festival 2024
ಫ್ಯಾಷನ್2 hours ago

Varamahalakshmi Festival 2024: ಹಬ್ಬಕ್ಕೆ ಸೀರೆಯನ್ನು ದಾವಣಿಯಂತೆ ಉಡುವುದು ಹೇಗೆ? ಇಲ್ಲಿದೆ ಸಿಂಪಲ್‌ ಐಡಿಯಾ

Terror Attack
ದೇಶ2 hours ago

Terror Attack: ಕ್ಯಾಪ್ಟನ್‌ ಹುತಾತ್ಮರಾಗಿರುವ ಬೆನ್ನಲ್ಲೇ ಉಗ್ರನನ್ನು ಹೊಡೆದುರುಳಿಸಿದ ಸೇನೆ; ಮುಂದುವರಿದ ಕಾರ್ಯಾಚರಣೆ

Viral Video
Latest2 hours ago

Viral Video: ಶಾಲೆಯಲ್ಲಿ ಶಿಕ್ಷಕಿ, ಶಿಕ್ಷಕನ ನಡುವೆ ಭೀಕರ ಮಾರಾಮಾರಿ! ವಿಡಿಯೊ ನೋಡಿದವರಿಗೆ ಗಾಬರಿ!

Sexual Abuse
Latest3 hours ago

Sexual Abuse: ದಲಿತ ಬಾಲಕಿಯನ್ನು ಅಪಹರಿಸಿ ಇಸ್ಲಾಂಗೆ ಮತಾಂತರ; ಮುಸ್ಲಿಂ ಧರ್ಮಗುರು ಬಂಧನ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ6 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ6 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ6 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌