ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್​ ಪ್ರತಿಭಟನೆ ಇಂದು; ರಾಮಲೀಲಾ ಮೈದಾನದಲ್ಲಿ ರಾಹುಲ್ ಗಾಂಧಿ ಕಟೌಟ್​ - Vistara News

ದೇಶ

ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್​ ಪ್ರತಿಭಟನೆ ಇಂದು; ರಾಮಲೀಲಾ ಮೈದಾನದಲ್ಲಿ ರಾಹುಲ್ ಗಾಂಧಿ ಕಟೌಟ್​

ಇಂದು ಮೆಹಂಗಾಯ್​​ ಪರ್​ ಹಲ್ಲಾ ಬೋಲ್​ ಬೃಹತ್​ ಮಟ್ಟದ ಪ್ರತಿಭಟನೆ ಹಮ್ಮಿಕೊಂಡಿರುವ ಕಾಂಗ್ರೆಸ್, ಸೆಪ್ಟೆಂಬರ್​ 7ರಿಂದ ಭಾರತ್ ಜೋಡೋ ಯಾತ್ರೆ ನಡೆಸಲಿದೆ.

VISTARANEWS.COM


on

Congress Rally
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಕಾಂಗ್ರೆಸ್​​ನ Mehngai par halla bol (ಬೆಲೆ ಏರಿಕೆ ಬಗ್ಗೆ ಧ್ವನಿಯೇರಿಸಿ) ಱಲಿ ಇಂದು ದೆಹಲಿಯಲ್ಲಿ ಬೃಹತ್​ ಮಟ್ಟದಲ್ಲಿ ನ​​ಡೆಯಲಿದೆ. ಹಣ ದುಬ್ಬರ, ನಿರುದ್ಯೋಗ ಮತ್ತು ಜಿಎಸ್​ಟಿ ಏರಿಕೆ ವಿರೋಧಿಸಿ ಕಾಂಗ್ರೆಸ್​ ನಡೆಸುತ್ತಿರುವ ದೊಡ್ಡ ಮಟ್ಟದ ಪ್ರತಿಭಟನೆ ಇದ್ದಾಗಿದ್ದು, ದೆಹಲಿಯ ರಾಮಲೀಲಾ ಮೈದಾನದಲ್ಲಿ ಭರ್ಜರಿ ಸಿದ್ಧತೆ ನಡೆದಿದೆ. ರಾಹುಲ್​ ಗಾಂಧಿಯ ದೊಡ್ಡದೊಡ್ಡ ಕಟೌಟ್, ಬ್ಯಾನರ್​​ಗಳನ್ನು​ ಹಾಕಲಾಗಿದೆ. ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್​​ ಕಾರ್ಯಕರ್ತರು, ಪ್ರಮುಖರು ಇಲ್ಲಿಗೆ ಬಂದು ಸೇರುತ್ತಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸುವುದು ಒಂದೆಡೆಯಾದರೆ, ಬಲ ಪ್ರದರ್ಶನ ಮಾಡುವುದು ಕಾಂಗ್ರೆಸ್​​ನ ಇನ್ನೊಂದು ಉದ್ದೇಶ ಎಂದು ಹೇಳಲಾಗಿದೆ. ಇಂದು ಬೆಳಗ್ಗೆ ಕಾಂಗ್ರೆಸ್​ ನಾಯಕರೆಲ್ಲ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸೇರಿದ್ದು, 11 ಗಂಟೆ ಬಳಿಕ ಒಟ್ಟಾಗಿ ಬಸ್​​ನಲ್ಲಿ ರಾಮಲೀಲಾ ಮೈದಾನಕ್ಕೆ ತೆರಳಲಿದ್ದಾರೆ. ಮಧ್ಯಾಹ್ನ 1 ಗಂಟೆ ಹೊತ್ತಿಗೆ ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ.

ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ಒಂದಲ್ಲ ಒಂದು ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್​ ಇಂದು ರಾಮಲೀಲಾ ಮೈದಾನದಲ್ಲಿ ಮೆಹಂಗಾಯ್​​ ಪರ್​ ಹಲ್ಲಾ ಬೋಲ್​ ಱಲಿ ನಡೆಸುವ ಜತೆ, ಸೆಪ್ಟೆಂಬರ್​ 7ರಿಂದ ಭಾರತ್​ ಜೋಡೋ ಯಾತ್ರೆ ಹಮ್ಮಿಕೊಳ್ಳಲಿದೆ. ಇದು 3500 ಕಿಮೀ ದೂರದ ಯಾತ್ರೆಯಾಗಿದ್ದು, ರಾಹುಲ್ ಗಾಂಧಿ ದೇಶದ ವಿವಿಧೆಡೆ ಸಂಚಾರ ಮಾಡಲಿದ್ದಾರೆ. ಅವರೊಂದಿಗೆ ಹಲವು ನಾಯಕರೂ ಪಾಲ್ಗೊಳ್ಳಲಿದ್ದಾರೆ. ಬೆಲೆ ಏರಿಕೆ, ಕೋಮು ಗಲಭೆ ಹೆಚ್ಚುತ್ತಿರುವುದರ ಬಗ್ಗೆ ರಾಹುಲ್​ ಗಾಂಧಿ ದೇಶದ ಹಲವೆಡೆ ಮಾತನಾಡಲಿದ್ದಾರೆ.

ಇದನ್ನೂ ಓದಿ: ಸಂಸತ್‌ ಅಧಿವೇಶನದಲ್ಲಿ ಕಾಂಗ್ರೆಸ್ ಪ್ರತಿಭಟನೆ; ಉಭಯ ಸದನಗಳ ಕಲಾಪ ಮುಂದೂಡಿಕೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Petrol Price : ಮುಂಬೈನಲ್ಲಿ ಪೆಟ್ರೋಲ್​ ಬೆಲೆ ಇಳಿಸಿದ ಮಹಾರಾಷ್ಟ್ರ ಸರ್ಕಾರ

Petrol Price:ಮುಂಬೈ ಪ್ರದೇಶದಲ್ಲಿ ಡೀಸೆಲ್ ಮೇಲಿನ ತೆರಿಗೆಯನ್ನು ಶೇಕಡಾ 24 ರಿಂದ 21 ಕ್ಕೆ ಇಳಿಸುವುದಾಗಿ ಮಹಾರಾಷ್ಟ್ರ ಸರ್ಕಾರ ಶುಕ್ರವಾರ ಪ್ರಕಟಿಸಿದೆ. ಪೆಟ್ರೋಲ್ ಮೇಲಿನ ತೆರಿಗೆಯನ್ನು ಶೇಕಡಾ 26 ರಿಂದ 25 ಕ್ಕೆ ಇಳಿಸಲಾಗುವುದು ಎಂದಿದೆ. ಇದು ಮುಂಬೈ, ನವೀ ಮುಂಬೈ ಮತ್ತು ಥಾಣೆ ಸೇರಿದಂತೆ ಮುಂಬೈ ಪ್ರದೇಶದಲ್ಲಿ ಪೆಟ್ರೋಲ್ ಬೆಲೆ 65 ಪೈಸೆ ಇಳಿಕೆಯಾಗಿದೆ ಹಾಗೂ ಡೀಸೆಲ್​ ಬೆಲೆ 2 ರೂಪಾಯಿ ಕಡಿಮೆಯಾಗಿದೆ.

VISTARANEWS.COM


on

petrol Price
Koo

ಬೆಂಗಳೂರು: ಕರ್ನಾಟಕದಲ್ಲಿ ಪೆಟ್ರೋಲ್​ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿರುವ ಕಾರಣ ಜನಾಕ್ರೋಶ ಉಂಟಾಗಿದೆ. ಪೆಟ್ರೋಲ್​ಗೆ 3 ರೂಪಾಯಿ ಹಾಗೂ ಡಿಸೆಲ್​ಗೆ 3.50 ರೂಪಾಯಿ ಏರಿಕೆಯಾಗಿರುವ ಕಾರಣ ಬೇರೆಲ್ಲ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ವಿರೋಧ ಪಕ್ಷ ಬಿಜೆಪಿ ಇದರ ವಿರುದ್ದ ಆಂದೋಲನ ಶುರು ಮಾಡಿದೆ. ಈ ಎಲ್ಲ ಬೆಳವಣಿಗೆ ನಡುವೆ ನೆರೆಯ ಮಹಾರಾಷ್ಟ್ರ ಸರ್ಕಾರ ಮುಂಬಯಿ ನಗರದ ಪ್ರದೇಶಧಲ್ಲಿ ಪೆಟ್ರೋಲ್​ ಬೆಲೆಯನ್ನು (Petrol Price) ಇಳಿಕೆ ಮಾಡಿದೆ. ಆದಾಗ್ಯೂ ಆ ರಾಜ್ಯದಲ್ಲಿ ಇಂಧನ ಬೆಲೆ ಕರ್ನಾಟಕಕ್ಕಿಂತ ಹೆಚ್ಚಾಗಿದೆ.

ಮುಂಬೈ ಪ್ರದೇಶದಲ್ಲಿ ಡೀಸೆಲ್ ಮೇಲಿನ ತೆರಿಗೆಯನ್ನು ಶೇಕಡಾ 24 ರಿಂದ 21 ಕ್ಕೆ ಇಳಿಸುವುದಾಗಿ ಮಹಾರಾಷ್ಟ್ರ ಸರ್ಕಾರ ಶುಕ್ರವಾರ ಪ್ರಕಟಿಸಿದೆ. ಪೆಟ್ರೋಲ್ ಮೇಲಿನ ತೆರಿಗೆಯನ್ನು ಶೇಕಡಾ 26 ರಿಂದ 25 ಕ್ಕೆ ಇಳಿಸಲಾಗುವುದು ಎಂದಿದೆ. ಇದು ಮುಂಬೈ, ನವೀ ಮುಂಬೈ ಮತ್ತು ಥಾಣೆ ಸೇರಿದಂತೆ ಮುಂಬೈ ಪ್ರದೇಶದಲ್ಲಿ ಪೆಟ್ರೋಲ್ ಬೆಲೆ 65 ಪೈಸೆ ಇಳಿಕೆಯಾಗಿದೆ ಹಾಗೂ ಡೀಸೆಲ್​ ಬೆಲೆ 2 ರೂಪಾಯಿ ಕಡಿಮೆಯಾಗಿದೆ.

ಮಹಾರಾಷ್ಟ್ರ ಬಜೆಟ್ ಮಂಡಿಸಿದ ಉಪಮುಖ್ಯಮಂತ್ರಿ ಅಜಿತ್ ಪವಾರ್, “ಮುಂಬೈ ಪ್ರದೇಶದಲ್ಲಿ ಡೀಸೆಲ್ ಮೇಲಿನ ತೆರಿಗೆಯನ್ನು ಶೇಕಡಾ 24 ರಿಂದ 21 ಕ್ಕೆ ಇಳಿಸಲಾಗಿದೆ. ಮುಂಬೈ ವಲಯದಲ್ಲಿ ಪೆಟ್ರೋಲ್ ಮೇಲಿನ ತೆರಿಗೆಯನ್ನು ಶೇ.26ರಿಂದ ಶೇ.25ಕ್ಕೆ ಇಳಿಸಲಾಗಿದ್ದು, ಇದರಿಂದ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 65 ಪೈಸೆ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.

ಜೂನ್ 28 ರಂದು ಮುಂಬೈನಲ್ಲಿ ಪೆಟ್ರೋಲ್ 104.21 ರೂ.ಗೆ ತಲುಪಿದ್ದರೆ, ಡೀಸೆಲ್ ಬೆಲೆ ಲೀಟರ್​ಗೆ 92.15 ರೂಪಾಯಿ ಇದೆ. ಕರ್ನಾಟಕದಲ್ಲಿ 102. 86 ರೂಪಾಯಿ ಆದರೆ ಬೆಂಗಳೂರು 88. 94 ರೂಪಾಯಿ ನಡೆದಿದೆ.

ಮಹಾರಾಷ್ಟ್ರ ಬಜೆಟ್

2024-25ರ ರಾಜ್ಯ ಬಜೆಟ್​ನಲ್ಲಿ 21 ರಿಂದ 60 ವರ್ಷ ವಯಸ್ಸಿನ ಅರ್ಹ ಮಹಿಳೆಯರಿಗೆ ಮಾಸಿಕ 1,500 ರೂ.ಗಳ ಭತ್ಯೆ ಒಳಗೊಂಡ ಆರ್ಥಿಕ ನೆರವು ಯೋಜನೆಯನ್ನು ಹಣಕಾಸು ಖಾತೆಯನ್ನು ಹೊಂದಿರುವ ಪವಾರ್ ಬಜೆಟ್​ನಲ್ಲಿ ಮಂಡಿಸಿದ್ದಾರೆ. ವಿಧಾನಸಭೆಯಲ್ಲಿ ತಮ್ಮ ಬಜೆಟ್ ಭಾಷಣದಲ್ಲಿ ಪವಾರ್ ಅವರು ‘ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್ ಯೋಜನೆ’ ಎಂಬ ಯೋಜನೆಯನ್ನು ಜುಲೈನಿಂದ ಜಾರಿಗೆ ತರಲಾಗುವುದು ಎಂದು ಹೇಳಿದರು.

ಈ ಯೋಜನೆಗಾಗಿ ವಾರ್ಷಿಕ ಬಜೆಟ್ ನಲ್ಲಿ 46,000 ಕೋಟಿ ರೂ.ಗಳನ್ನು ಮೀಸಲಿಡಲಾಗುವುದು ಎಂದು ಅವರು ಹೇಳಿದರು. ಮತ್ತೊಂದು ಕಲ್ಯಾಣ ಯೋಜನೆಯನ್ನು ಘೋಷಿಸಿದ ಹಣಕಾಸು ಸಚಿವರು, ಐದು ಸದಸ್ಯರ ಅರ್ಹ ಕುಟುಂಬಕ್ಕೆ ‘ಮುಖ್ಯಮಂತ್ರಿ ಅನ್ನಪೂರ್ಣ ಯೋಜನೆ’ ಅಡಿ ಪ್ರತಿ ವರ್ಷ ಮೂರು ಅಡುಗೆ ಅನಿಲ ಸಿಲಿಂಡರ್​ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಹೇಳಿದರು.

Continue Reading

ದೇಶ

Rahul Gandhi: ಸಂಸತ್ತಲ್ಲಿ ನೀಟ್‌ ಕುರಿತು ರಾಹುಲ್‌ ಗಾಂಧಿ ಮಾತಾಡುವಾಗ ಮೈಕ್‌ ಆಫ್;‌ ಸ್ಪೀಕರ್‌ ಮಾಡಿದ್ರಾ?

Rahul Gandhi: ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಸಂಸತ್ತಿನಲ್ಲಿ ದೇಶದ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಮಾತನಾಡುವಾಗ ಸ್ಪೀಕರ್‌ ಓಂ ಬಿರ್ಲಾ ಅವರು ಏಕೆ ಮೈಕ್‌ಅನ್ನು ಆಫ್‌ ಮಾಡಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ವಿಡಿಯೊವನ್ನು ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Rahul Gandhi
Koo

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಬಳಿಕ ಎನ್‌ಡಿಎ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಸಂಸತ್ತಿನ ಮೊದಲ ವಿಶೇಷ ಅಧಿವೇಶನ ನಡೆಯುತ್ತಿದೆ. ಆಡಳಿತ ಪಕ್ಷಕ್ಕೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಸವಾಲೊಡ್ಡುತ್ತಿದ್ದಾರೆ. ಇದರ ಬೆನ್ನಲ್ಲೇ, ಲೋಕಸಭೆಯಲ್ಲಿ ರಾಹುಲ್‌ ಗಾಂಧಿ ಅವರು ನೀಟ್‌ ಅಕ್ರಮದ ಕುರಿತು ಮಾತನಾಡುವಾಗ ಅವರ ಮೈಕ್‌ ಆಫ್‌ ಆಗಿದ್ದು, ಸ್ಪೀಕರ್‌ ಓಂ ಬಿರ್ಲಾ (Om Birla) ಅವರೇ ಮೈಕ್‌ ಆಫ್‌ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ರಾಹುಲ್‌ ಗಾಂಧಿ ಅವರು ಲೋಕಸಭೆಯಲ್ಲಿ ಮಾತನಾಡುವಾಗ ಸ್ಪೀಕರ್‌ ಸರ್‌, ನನಗೆ ಮೈಕ್‌ ಕೊಡಿ ಎಂದಿದ್ದಾರೆ. ಆಗ ಸ್ಪೀಕರ್‌, “ನನ್ನ ಬಳಿ ಯಾವುದೇ ಬಟನ್‌ ಇಲ್ಲ” ಎಂದಿದ್ದಾರೆ. ಇದಕ್ಕೂ ಮೊದಲು ರಾಹುಲ್‌ ಗಾಂಧಿ ಅವರು ಮಾತನಾಡಿದರು. “ದೇಶದ ವಿದ್ಯಾರ್ಥಿಗಳಿಗೆ ಸರ್ಕಾರ ಹಾಗೂ ಪ್ರತಿಪಕ್ಷಗಳ ಕಡೆಯಿಂದ ಜಂಟಿ ಸಂದೇಶ ನೀಡಲು ಬಯಸುತ್ತೇವೆ. ಹಾಗೆಯೇ, ವಿದ್ಯಾರ್ಥಿಗಳಿಗೆ ಗೌರವ ನೀಡುವ ದಿಸೆಯಲ್ಲಿ ಸಂಸತ್ತಿನಲ್ಲಿ ನಾವು ನೀಟ್‌ ಕುರಿತು ಗಂಭೀರವಾಗಿ ಚರ್ಚಿಸೋಣ” ಎಂದರು. ಇದೇ ವೇಳೆ ರಾಹುಲ್‌ ಗಾಂಧಿ ಅವರ ಮೈಕ್‌ ಆಫ್‌ ಆಗಿದ್ದು, ಪ್ರತಿಪಕ್ಷಗಳು ಗಲಾಟೆ ಮಾಡಿವೆ. ಆಗ ಸ್ಪೀಕರ್‌ ಅವರು ನನ್ನ ಬಳಿ ಬಟನ್‌ ಇಲ್ಲ ಎಂದಿದ್ದಾರೆ.

ಕಾಂಗ್ರೆಸ್‌ ಆಕ್ರೋಶ

“ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಸಂಸತ್ತಿನಲ್ಲಿ ದೇಶದ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಮಾತನಾಡುವಾಗ ಸ್ಪೀಕರ್‌ ಓಂ ಬಿರ್ಲಾ ಅವರು ಏಕೆ ಮೈಕ್‌ಅನ್ನು ಆಫ್‌ ಮಾಡಿದ್ದಾರೆ” ಎಂದು ಕೇರಳ ಕಾಂಗ್ರೆಸ್‌ ಘಟಕದ ಎಕ್ಸ್‌ ಖಾತೆಯಿಂದ ಪೋಸ್ಟ್‌ ಮಾಡಲಾಗಿದೆ. ಅಲ್ಲದೆ, ರಾಹುಲ್‌ ಗಾಂಧಿ ಅವರು ಮಾತನಾಡುವಾಗಲೇ ಮೈಕ್‌ ಆಫ್‌ ಆಗುವ ವಿಡಿಯೊವನ್ನು ಕೂಡ ಹಲವು ಕಾಂಗ್ರೆಸ್‌ ನಾಯಕರು ಹಂಚಿಕೊಂಡಿದ್ದಾರೆ. ಹಾಗೆಯೇ, ಸ್ಪೀಕರ್‌ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ನಾಯಕ ದೀಪೆಂದರ್‌ ಸಿಂಗ್‌ ಹೂಡಾ ಅವರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಾವು ಕ್ಷಿಪ್ರವಾಗಿ ನೀಟ್‌ ವಿಷಯದ ಕುರಿತು ಚರ್ಚೆ ಮಾಡೋಣ ಎಂದು ಬೇಡಿಕೆ ಇಟ್ಟೆವು. ಇದೇ ವೇಳೆ ರಾಹುಲ್‌ ಗಾಂಧಿ ಅವರು ಮಾತನಾಡುತ್ತಿದ್ದರು. ಆಗ ಮೈಕ್‌ ಆಫ್‌ ಆಗಿದೆ. ಇದು ನಮ್ಮ ಆಕ್ರೋಶವನ್ನು ಕೆರಳಿಸಿತು” ಎಂದಿದ್ದಾರೆ. ಜುಲೈ 24 ರಂದು ಸಂಸತ್‌ ವಿಶೇಷ ಅಧಿವೇಶನ ಆರಂಭವಾಗಿದ್ದು, ಜುಲೈ 3ರವರೆಗೆ ನಡೆಯಲಿದೆ.

ಇದನ್ನೂ ಓದಿ: ಕಾಂಗ್ರೆಸ್‌ನಂತೆ 15 ತಿಂಗಳಲ್ಲಿ ಪ್ರತಿಪಕ್ಷಗಳೂ ರಾಹುಲ್‌ ಗಾಂಧಿಯಿಂದ ನಿರ್ನಾಮ; ಆಚಾರ್ಯ ಪ್ರಮೋದ್‌ ಸ್ಫೋಟಕ ಹೇಳಿಕೆ!

Continue Reading

ದೇಶ

Hemant Soren: ಜಾಮೀನು ಮಂಜೂರು; ಹೇಮಂತ್‌ ಸೊರೆನ್‌ಗೆ ಬಿಗ್‌ ರಿಲೀಫ್‌

Hemant Soren: ಸೊರೆನ್‌ ಪರ ವಾದ ಮಂಡಿಸಿದ್ದ ಅರುಣಾಭ್‌ ಚೌಧರಿ ಪ್ರತಿಕ್ರಿಯಿಸಿದ್ದು, ಸೊರೇನ್‌ಗೆ ಜಾಮೀನು ಮಂಜೂರಾಗಿದೆ. ಮೇಲ್ನೋಟಕ್ಕೆ ಅವರು ಅಪರಾಧದಲ್ಲಿ ತಪ್ಪಿತಸ್ಥರಲ್ಲ ಮತ್ತು ಜಾಮೀನಿನ ಮೇಲೆ ಅರ್ಜಿದಾರರು ಅಪರಾಧ ಮಾಡುವ ಸಾಧ್ಯತೆಯಿಲ್ಲ ಎಂದು ನ್ಯಾಯಾಲಯ ಹೇಳಿದೆ ಅಂತಾ ಹೇಳಿದ್ದಾರೆ. ತಮ್ಮ ಬಂಧನವನ್ನು ಪ್ರಶ್ನಿಸಿ ಜೂ.13ರಂದು ಸೊರೆನ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ತೀರ್ಪನ್ನು ಕಾಯ್ದಿರಿಸಿತ್ತು.

VISTARANEWS.COM


on

Hemant Soren
Koo

ಜಾರ್ಖಂಡ್‌: ಅಕ್ರಮ ಹಣ ವರ್ಗಾವಣೆ(Money laundering Case) ಭೂ ವ್ಯವಹಾರ ಸೇರಿ ಹಲವು ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳಿಂದ ಬಂಧಿತರಾಗಿರುವ ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ, ಜಾರ್ಖಂಡ್‌ ಮುಕ್ತಿ ಮೋರ್ಚಾ ಪಕ್ಷದ ಮುಖ್ಯಸ್ಥ ಹೇಮಂತ್‌ ಸೊರೆನ್‌ (Hemant Soren) ಜಾರ್ಖಂಡ್‌ ಹೈಕೋರ್ಟ್‌(Jharkhand High Court) ಜಾಮೀನು ನೀಡಿದೆ. ಜ.31ರಂದು ಸೊರೆನ್‌ ಅವರನ್ನು ಇಡಿ ಅರೆಸ್ಟ್‌ ಮಾಡಿದ್ದು, ಪ್ರಸ್ತುತ ಅವರು ಬಿರ್ಸಾ ಮುಂಡಾ ಸೆಂಟ್ರಲ್‌ ಜೈಲಿನಲ್ಲಿದ್ದಾರೆ.

ಈ ಕುರಿತು ಅವರ ಪರ ವಾದ ಮಂಡಿಸಿದ್ದ ಅರುಣಾಭ್‌ ಚೌಧರಿ ಪ್ರತಿಕ್ರಿಯಿಸಿದ್ದು, ಸೊರೇನ್‌ಗೆ ಜಾಮೀನು ಮಂಜೂರಾಗಿದೆ. ಮೇಲ್ನೋಟಕ್ಕೆ ಅವರು ಅಪರಾಧದಲ್ಲಿ ತಪ್ಪಿತಸ್ಥರಲ್ಲ ಮತ್ತು ಜಾಮೀನಿನ ಮೇಲೆ ಅರ್ಜಿದಾರರು ಅಪರಾಧ ಮಾಡುವ ಸಾಧ್ಯತೆಯಿಲ್ಲ ಎಂದು ನ್ಯಾಯಾಲಯ ಹೇಳಿದೆ ಅಂತಾ ಹೇಳಿದ್ದಾರೆ. ತಮ್ಮ ಬಂಧನವನ್ನು ಪ್ರಶ್ನಿಸಿ ಜೂ.13ರಂದು ಸೊರೆನ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ತೀರ್ಪನ್ನು ಕಾಯ್ದಿರಿಸಿತ್ತು.

ಅಕ್ರಮವಾಗಿ ಹಣ ವರ್ಗಾವಣೆ, ಭೂ ಅವ್ಯವಹಾರ ಪ್ರಕರಣ ಕೇಳಿಬಂದ ಹಿನ್ನೆಲೆಯಲ್ಲಿ ಇ.ಡಿ ಅಧಿಕಾರಿಗಳು ಹೇಮಂತ್‌ ಸೊರೆನ್‌ ಅವರಿಗೆ 9 ಬಾರಿ ಸಮನ್ಸ್‌ ಜಾರಿಗೊಳಿಸಿದ್ದರು. ಆದರೆ ಹೇಮಂತ್‌ ಸೊರೆನ್‌ ಅವರು ಪ್ರತಿ ಬಾರಿ ಸಮನ್ಸ್‌ ನೀಡಿದಾಗಲೂ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು. ಇ.ಡಿ ಅಧಿಕಾರಿಗಳು ಮನೆಗೆ ಲಗ್ಗೆ ಇಡುತ್ತಾರೆ ಎಂಬುದನ್ನು ಅರಿತಿದ್ದ ಅವರು ದೆಹಲಿಗೆ ತೆರಳಿ, ಗೌಪ್ಯ ಸ್ಥಳದಲ್ಲಿದ್ದರು. ಆದರೆ ಇ.ಡಿ ಅಧಿಕಾರಿಗಳು ಕೊನೆಗೂ ಹೇಮಂತ್‌ ಸೊರೆನ್‌ ಅವರನ್ನು ಈ ವರ್ಷದ ಜನವರಿ 31ರಂದು ಬಂಧಿಸಿದ್ದರು. ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಹೇಮಂತ್‌ ಸೊರೆನ್‌ ಅವರು ರಾಜೀನಾಮೆ ನೀಡಿದ್ದರು.

ಬಂಧನವನ್ನು ಪ್ರಶ್ನಿಸಿ ಹಾಗೂ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿತ್ತು. ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸುವ ಉದ್ದೇಶದಿಂದ ಹೇಮಂತ್‌ ಸೊರೆನ್‌ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠವು ಹೇಮಂತ್ ಸೊರೆನ್ ಅವರು ವಿಚಾರಣಾ ನ್ಯಾಯಾಲಯದ ಮುಂದೆ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದಾರೆ ಎಂಬ ಅಂಶವನ್ನು ಮರೆಮಾಚಿದ್ದಕ್ಕಾಗಿ ತರಾಟೆಗೆ ತೆಗೆದುಕೊಂಡಿತು. ನ್ಯಾಯಾಲಯ ಎಚ್ಚರಿಕೆ ನೀಡಿದ ನಂತರ ಸೊರೆನ್ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಜಾಮೀನು ಅರ್ಜಿಯನ್ನು ಹಿಂತೆಗೆದುಕೊಂಡರು. ಇದರಿಂದ ಸೊರೆನ್‌ ಅವರಿಗೆ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿತ್ತು.

ಇದನ್ನೂ ಓದಿ: Abhyas Trial: ದೇಶದ ಕ್ಷಿಪಣಿ ವ್ಯವಸ್ಥೆಗೆ ಬಲ ತುಂಬುವ ‘ಅಭ್ಯಾಸ್’‌ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿ

Continue Reading

ಪ್ರಮುಖ ಸುದ್ದಿ

Airtel Price Hike: ಜಿಯೋ ನಂತರ ಏರ್‌ಟೆಲ್‌ ಡೇಟಾ ಬಳಕೆದಾರರ ಜೇಬಿಗೂ ಕತ್ತರಿ; 21% ದರ ಏರಿಕೆ

Airtel Price Hike: ರಿಲಯನ್ಸ್ ಜಿಯೋ ತನ್ನ ಮೊಬೈಲ್‌ ಡೇಟಾ ಯೋಜನೆಗಳಲ್ಲಿ 12%ರಿಂದ 25%ವರೆಗೆ ಹೆಚ್ಚಳವನ್ನು ಘೋಷಿಸಿದ ಒಂದು ದಿನದ ನಂತರ ಭಾರ್ತಿ ಏರ್‌ಟೆಲ್‌ ಇಂದು ತನ್ನ ಟೆಲಿಕಾಂ ಸುಂಕ ದರಗಳನ್ನು 10-21%ರಷ್ಟು ಹೆಚ್ಚಿಸಿತು. ಹೊಸ ದರವು ಜುಲೈ 3ರಿಂದ ಜಾರಿಗೆ ಬರಲಿದೆ.

VISTARANEWS.COM


on

airtel price hike
Koo

ಹೊಸದಿಲ್ಲಿ: ದೇಶದ ಎರಡನೇ ಅತಿ ದೊಡ್ಡ ಇಂಟರ್‌ನೆಟ್‌ ಸೇವಾದಾತ (internet provider) ಕಂಪನಿ ಭಾರ್ತಿ ಏರ್‌ಟೆಲ್‌ (Bharti Airtel) , ತನ್ನ ಡೇಟಾ ದರಗಳನ್ನು (Airtel price hike) ಶೇ.21ರಷ್ಟು ಹೆಚ್ಚಿಸಿದೆ. ನಿನ್ನೆ ಇದರ ಪ್ರತಿಸ್ಪರ್ಧಿ ರಿಲಯನ್ಸ್‌ ಜಿಯೊ (Reliance Jio) ಡೇಟಾ ದರಗಳನ್ನು (Data Price) ಏರಿಸಿದ ಬಿನ್ನಲ್ಲೇ ಇದು ಬಂದಿದೆ.

ರಿಲಯನ್ಸ್ ಜಿಯೋ ತನ್ನ ಮೊಬೈಲ್‌ ಡೇಟಾ ಯೋಜನೆಗಳಲ್ಲಿ 12%ರಿಂದ 25%ವರೆಗೆ ಹೆಚ್ಚಳವನ್ನು ಘೋಷಿಸಿದ ಒಂದು ದಿನದ ನಂತರ ಭಾರ್ತಿ ಏರ್‌ಟೆಲ್‌ ಇಂದು ತನ್ನ ಟೆಲಿಕಾಂ ಸುಂಕ ದರಗಳನ್ನು 10-21%ರಷ್ಟು ಹೆಚ್ಚಿಸಿತು. ಹೊಸ ದರವು ಜುಲೈ 3ರಿಂದ ಜಾರಿಗೆ ಬರಲಿದೆ.

ಕೆಲವು ಪರಿಷ್ಕೃತ ದರಗಳು ಹೀಗಿವೆ:

ಡೇಟಾ
ಅವಧಿ ಹಿಂದಿನ ದರ ಹೊಸ ದರ
ವಾಯಿಸ್‌ ಕಾಲ್‌ ಪ್ಲಾನ್‌
2 GB
28179199
8 GB 84455509
ಡೈಲಿ ಡೇಟಾ ಪ್ಲಾನ್‌
1.5 ಜಿಬಿ28299349
2.5 ಜಿಬಿ, 28, 359, 409
3 ಜಿಬಿ, 28, 399, 449
Add- On ಪ್ಲಾನ್‌
111922
212933

ಗ್ರಾಹಕರ ಮೇಲಿನ ಹೆಚ್ಚಿನ ಹೊರೆಗಳನ್ನು ನಿವಾರಿಸುವ ಸಲುವಾಗಿ, ಎಂಟ್ರಿ ಲೆವೆಲ್‌ ಪ್ಲಾನ್‌ಗಳಲ್ಲಿ ಅತ್ಯಂತ ಸಾಧಾರಣ ಬೆಲೆ ಏರಿಕೆ (ದಿನಕ್ಕೆ 70 ಪೈಸೆಗಿಂತ ಕಡಿಮೆ) ಮಾಡಲಾಗಿದೆ ಎಂದು ಭಾರ್ತಿ ಏರ್ಟೆಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಭಾರತದಲ್ಲಿ ಟೆಲಿಕಾಂ ಕಂಪನಿಗಳು ಆರ್ಥಿಕವಾಗಿ ಆರೋಗ್ಯಕರ ವ್ಯವಹಾರ ಮಾಡಬೇಕು ಎಂದಿದ್ದರೆ ಮೊಬೈಲ್ ಸರಾಸರಿ ಆದಾಯ (ಎಆರ್‌ಪಿಯು) 300 ರೂ.ಗಿಂತ ಹೆಚ್ಚಾಗಿರಬೇಕು ಎಂದು ಭಾರ್ತಿ ಏರ್ಟೆಲ್ ಹೇಳಿದೆ. “ಈ ಮಟ್ಟದ ಎಆರ್‌ಪಿಯು ನೆಟ್‌ವರ್ಕ್ ತಂತ್ರಜ್ಞಾನ ಮತ್ತು ಸ್ಪೆಕ್ಟ್ರಮ್‌ನಲ್ಲಿ ಅಗತ್ಯವಿರುವ ಗಣನೀಯ ಹೂಡಿಕೆಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಬಂಡವಾಳದ ಮೇಲೆ ಸಾಧಾರಣ ಆದಾಯವನ್ನು ನೀಡುತ್ತದೆ” ಎಂದು ಅದು ಹೇಳಿದೆ.

ಇಂದು ಭಾರ್ತಿ ಏರ್ಟೆಲ್ ಷೇರುಗಳು ಬಿಎಸ್ಇಯಲ್ಲಿ ಸುಮಾರು 2% ಏರಿಕೆಯಾಗಿ 1496.80 ರೂ.ಗೆ ತಲುಪಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಭಾರ್ತಿ ಏರ್ಟೆಲ್ ಎರಡೂ ಜೂನ್ 28ರ ಆರಂಭಿಕ ವಹಿವಾಟಿನಲ್ಲಿ ಹೆಚ್ಚಿನ ಲಾಭ ಗಳಿಸಿದವು.

ಇದನ್ನೂ ಓದಿ: Jio Tariffs: ಜಿಯೋ ಬಳಕೆದಾರರಿಗೆ ಬ್ಯಾಡ್‌ ನ್ಯೂಸ್;‌ ಶೇ.20ರಷ್ಟು ಶುಲ್ಕ ಹೆಚ್ಚಳ, ನೂತನ ದರಪಟ್ಟಿ ಇಲ್ಲಿದೆ

Continue Reading
Advertisement
Kalki 2898 AD 2
ಸಿನಿಮಾ43 seconds ago

Kalki 2898 AD 2: ಶೀಘ್ರದಲ್ಲೇ ಬರಲಿದೆ ಕಲ್ಕಿ 2898ಎಡಿ ಭಾಗ- 2!

Bigg Boss OTT 3 Armaan Malik both Kritika Malik and Payal Malik in bigg bos house
ಬಾಲಿವುಡ್4 mins ago

Bigg Boss OTT 3: ಬಿಗ್‌ ಬಾಸ್‌ ಒಟಿಟಿಯಲ್ಲಿ ಇಬ್ಬರ ಹೆಂಡಿರ ಮುದ್ದಿನ ಗಂಡ; ಗೋಳೋ ಎಂದು ಅತ್ತ ಮೊದಲ ಪತ್ನಿ!

CM Siddaramaiah
ಕರ್ನಾಟಕ11 mins ago

CM Siddaramaiah: ಭಾರತ ಹಿಂದು ರಾಷ್ಟ್ರವಲ್ಲ; ಅಮರ್ತ್ಯ ಸೇನ್ ಹೇಳಿಕೆ ಸಮರ್ಥಿಸಿದ ಸಿದ್ದರಾಮಯ್ಯ

petrol Price
ಪ್ರಮುಖ ಸುದ್ದಿ20 mins ago

Petrol Price : ಮುಂಬೈನಲ್ಲಿ ಪೆಟ್ರೋಲ್​ ಬೆಲೆ ಇಳಿಸಿದ ಮಹಾರಾಷ್ಟ್ರ ಸರ್ಕಾರ

Rahul Gandhi
ದೇಶ27 mins ago

Rahul Gandhi: ಸಂಸತ್ತಲ್ಲಿ ನೀಟ್‌ ಕುರಿತು ರಾಹುಲ್‌ ಗಾಂಧಿ ಮಾತಾಡುವಾಗ ಮೈಕ್‌ ಆಫ್;‌ ಸ್ಪೀಕರ್‌ ಮಾಡಿದ್ರಾ?

POCSO Case
ಕರ್ನಾಟಕ46 mins ago

POCSO Case: ಪೋಕ್ಸೊ ಪ್ರಕರಣ; ಯಡಿಯೂರಪ್ಪ ಸೇರಿ ನಾಲ್ವರ ವಿರುದ್ಧ ಚಾರ್ಜ್‌ಶೀಟ್‌; ಮುಂದೇನು?

SHAFALI VERMA
ಕ್ರಿಕೆಟ್55 mins ago

SHAFALI VERMA: 40 ವರ್ಷದ ಟೆಸ್ಟ್​ ದಾಖಲೆ ಮುರಿದ ಭಾರತದ ಶಫಾಲಿ ವರ್ಮ

Rich Wedding
ಪ್ರಮುಖ ಸುದ್ದಿ1 hour ago

ಮದುವೆಗೆ ಹೋದವರಿಗೆ 66 ಸಾವಿರ ರೂ. ನಗದು, ಭರ್ಜರಿ ಗಿಫ್ಟ್‌ ಕೊಟ್ಟ ದಂಪತಿ; ಎಲ್ಲಿ ಅಂತೀರಾ…?‌

Actor Darshan A young woman came to Parappa Agrahara to see Darshan
ಕ್ರೈಂ1 hour ago

Actor Darshan: ಪರಪ್ಪನ ಅಗ್ರಹಾರಕ್ಕೆ ದರ್ಶನ್‌ ನೋಡಲು ಆಗಮಿಸಿದ ಯುವತಿ; ಯಾರಾಕೆ?

Valmiki Corporation Scam Zameer Ahmed appointed as Ballari district in-charge minister
ಬಳ್ಳಾರಿ1 hour ago

Valmiki Corporation Scam: ಬಿ ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಮೀರ್‌ ಅಹ್ಮದ್ ನೇಮಕ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ5 hours ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ21 hours ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ23 hours ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು1 day ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ1 day ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ4 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ7 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು2 weeks ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

ಟ್ರೆಂಡಿಂಗ್‌