Chess Prodigy | ಎದುರಾಳಿಯೇ ಇಲ್ಲ ಎಂದು ಎದೆ ತಟ್ಟಿಕೊಂಡವನ ಹಣೆಯ ಮೇಲೆ ಸೋಲಿನ ಷರಾ ಬರೆದ ಬಾಲಕ! - Vistara News

ಕ್ರೀಡೆ

Chess Prodigy | ಎದುರಾಳಿಯೇ ಇಲ್ಲ ಎಂದು ಎದೆ ತಟ್ಟಿಕೊಂಡವನ ಹಣೆಯ ಮೇಲೆ ಸೋಲಿನ ಷರಾ ಬರೆದ ಬಾಲಕ!

ವಿಶ್ವ ಚೆಸ್‌ ಸಾಮ್ರಾಟನಾಗಿ ಮೆರೆಯುತ್ತಿದ್ದ ನಾರ್ವೆಯ ಮಗ್ನಸ್‌ ಕಾರ್ಲ್‌ಸನ್‌ನನ್ನು ಭಾರತದ 17 ವರ್ಷದ ಪ್ರಜ್ಞಾನಂದ ಸೋಲಿಸಿದಾಗ ಚೆಸ್‌ ಆಸಕ್ತರು ಅಚ್ಚರಿಪಟ್ಟಿದ್ದರು. ಈ ಬಾಲಕನಿಂದ ಭವಿಷ್ಯದಲ್ಲಿ ಇನ್ನಷ್ಟು ಸಾಧನೆ ನಿರೀಕ್ಷಿತ.

VISTARANEWS.COM


on

praggnanandhaa
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಾಲಕೃಷ್ಣ ಎಂ ನಾಯ್ಕ, ಚಿಕ್ಕೊಳ್ಳಿ

balakrishna

2013ರಿಂದ ವಿಶ್ವ ಚೆಸ್ ಚಾಂಪಿಯನ್ ಆಗಿ ಮೆರೆಯುತ್ತಿರುವ ನಾರ್ವೆ ದೇಶದ ಮಗ್ನಸ್ ಕಾರ್ಲ್‌ಸನ್ ಕಳೆದ ವರ್ಷ ದುಬೈನಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಇಯಾನ್ ನೇಪೊಮ್ನಸಿ ವಿರುದ್ಧ ಅನಾಯಾಸವಾಗಿ ಗೆದ್ದು “I don’t have a lot to gain, I don’t perticularly like it, and although I am sure a match would be interesting for historical reasons I don’t have any inclination to play, I will simply not play the match ಎಂದು ಬಿಟ್ಟ. ಇವನ ಮಾತು ಕೇಳಿ ಒಂದು ಕ್ಷಣ ಚೆಸ್ ಜಗತ್ತು ದಂಗಾಗಿತ್ತು. 2013ರಿಂದ ವಿಶ್ವ ಚಾಂಪಿಯನ್ ಆಗಿ ಮೆರೆದವನ ಬಾಯಿಯಿಂದ ಬಂದ ಈ ಮಾತನ್ನು ಹಲವರಿಗೆ ಅರಗಿಸಿಕೊಳ್ಳಲಾಗಲಿಲ್ಲ. ಸತತ ಗೆಲುವು ಅವನನ್ನು ಹೀಗೆ ಮಾತಾಡಿಸಿತ್ತೇನೊ. ತಾನು ವಿಶ್ವ ಚಾಂಪಿಯನ್, ನನ್ನನ್ನು ಸೋಲಿಸುವವರು ಯಾರೂ ಇಲ್ಲ ಎಂಬ ಅಹಂ ಅವನ ತಲೆಗೇರಿದಂತಿತ್ತು.

ಆದರೆ ನಂತರ ನಡೆದದ್ದೆ ಬೇರೆ. ನಮ್ಮ ದೇಶದ 17 ವರ್ಷದ ಚೆನ್ನೈನ ಪುಟ್ಟ ಪೋರ ರಮೇಶ ಬಾಬು ಪ್ರಜ್ಞಾನಂದ ಕಳೆದ 6 ತಿಂಗಳಲ್ಲಿ ಸತತ ಮೂರು ಬಾರಿ ಸೋಲಿನ ರುಚಿ ತೋರಿಸಿ ಸತತ ಗೆಲುವಿನ ಮತ್ತಿನಲ್ಲಿರುವ ಕಾರ್ಲ್‌ಸನ್‌ಗೆ ಮದ್ದರೆದಿದ್ದಾನೆ. ನನಗೆ ಸರಿಯಾದ, ಪ್ರಬಲ ಎದುರಾಳಿಯಿಲ್ಲ, ಇಲ್ಲಿ ಮತ್ತೆ ಸಾಧಿಸುವುದೇನೂ ಉಳಿದಿಲ್ಲ. ಆಡಲು ಹುಮ್ಮಸ್ಸು ಕೂಡಾ ಬರುತ್ತಿಲ್ಲ. ಮತ್ತೆ ಪಂದ್ಯ ಆಡಲಾರೆ ಎಂದವನ ವಿಶ್ವ ಚಾಂಪಿಯನ್ ಪಟ್ಟಕ್ಕೆ ಈಗ ಈ ಬಾಲಕ ಸಂಚಕಾರ ತಂದಿದ್ದಾನೆ.

magnus carlsen
ಮಗ್ನಸ್‌ ಕಾರ್ಲ್‌ಸನ್

ಕಳೆದ ಫೆಬ್ರವರಿಯಲ್ಲಿ ನಡೆದ Online Airthing Masters Rapid tournament ಮತ್ತು ಮೇ ತಿಂಗಳಲ್ಲಿ ನಡೆದ Chessable Masters Online Rapid tournamentನಲ್ಲಿ ಪ್ರಜ್ಞಾನಂದ ವಿರುದ್ಧ ಆತ ಸೋತಿದ್ದಾನೆ. ಪ್ರಗ್ ಎಂದೇ ಕರೆಯಲ್ಪಡುವ ಪುಟ್ಟ ಪೋರ ಕಾರ್ಲ್‌ಸನ್‌ಗೆ ಯಾವ ರೀತಿ ದಿಗಿಲು ಮೂಡಿಸಿದ್ದಾನೆ ಎಂದರೆ, ಎದುರಾಳಿ ಎದುರು ನಗುತ್ತಲೆ ಕಾಯಿ ಚಲಾಯಿಸುವವ, ಈ ಪೋರನೆದುರು ಆಡುವಾಗ ಸೋತು ಬಸವಳಿದು ಹೋಗಿದ್ದಾನೆ. ತಲೆಮೇಲೆ ಕೈ ಇಟ್ಟುಕೊಂಡು ಚಡಪಡಿಸುತಿದ್ದ. ಕೈ ಹಿಚುಕಿಕೊಳ್ಳುತ್ತಿದ್ದ. ತೀರಾ ಒತ್ತಡಕ್ಕೊಳಗಾಗುತ್ತಿದ್ದ. ಮೊನ್ನೆ FTX ಕ್ರಿಪ್ಟೋ ಕಪ್‌ನಲ್ಲಿ ಸೋತ ನಂತರ ತನ್ನ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ. ನಂತರ ಮಾತನಾಡುತ್ತಾ “I was feeling very terrible today, didn’t get enough sleep, it’s really kind of embarrassing to lose the last three games” ಎಂದು ಗದ್ಗದಿತನಾಗಿದ್ದ. ವಿಶ್ವ ಚಾಂಪಿಯನ್ ಆಗಿ ಮೆರೆದ 31 ವ‌ರ್ಷದ ಕಾರ್ಲ್‌ಸನ್ ಪುಟ್ಟ ಬಾಲಕನೆದುರು ತಲೆ ತಗ್ಗಿಸಿ ನಿಲ್ಲುವಂತಾಯ್ತು. ಕಾರ್ಲ್‌ಸನ್‌ರನ್ನು ಸೋಲಿಸಿದ ಪ್ರಗ್ ಮೂರನೇ ಭಾರತೀಯನಾಗಿದ್ದಾನೆ. (ಉಳಿದಿಬ್ಬರು ವಿಶ್ವನಾಥನ್ ಆನಂದ್‌ ಮತ್ತು ಪೆಂಟಾಲಾ ಹರಿಕೃಷ್ಣ). ಇದನ್ನು ಕಾರ್ಲ್‌ಸನ್ ಅಷ್ಟೇ ಅಲ್ಲ. ಯಾರಿಗೂ ಒಮ್ಮೆಲೆ ನಂಬಲು ಸಾಧ್ಯವಾಗಲಿಲ್ಲ. ಆದರೆ ನಂಬಲೇಬೇಕು. ಕಾರಣ ಪ್ರಜ್ಞಾನಂದ ಒಂದು ಅದ್ಭುತ ಪ್ರತಿಭೆ.

ಹಾಗಂತ ಕಾರ್ಲ್‌ಸನ್ ಕೂಡ ಅಂತಿಂಥ ಆಸಾಮಿಯಲ್ಲ. ಚೆಸ್ ಜಗತ್ತಿನಲ್ಲಿ ಆತನದ್ದು ದೊಡ್ಡ ಹೆಸರು. ವಿಶ್ವ ಚಾಂಪಿಯನ್ ಪಟ್ಟಕೇರಿದ್ದ ವಿಶ್ವನಾಥನ್ ಆನಂದ್‌ ಅವರನ್ನು 2013ರಲ್ಲಿ ಸೋಲಿಸಿ ಮೊದಲ ಬಾರಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದ. ನಂತರ ಮತ್ತೊಮ್ಮೆ ವಿಶ್ವನಾಥನ್ ಆನಂದ್‌, ಸೆರಗೆ ಕರಿಯಾಕೊ, ಪಾಬಿಯಾನೋ ಕರಾನಾ, ಇತ್ತೀಚೆಗೆ ಇಯಾನ್ ನೇಪೊಮ್ನಸಿಯನ್ನು ಸೋಲಿಸಿ ಸತತ 5 ಬಾರಿ ವಿಶ್ವ ಚಾಂಪಿಯನ್ ಆಗಿ ದಶಕಗಳ ಕಾಲ ಚೆಸ್ ಜಗತ್ತಿನಲ್ಲಿ ಏಕಚಕ್ರಾಧಿಪತಿಯಾಗಿ ಮೆರೆದಿದ್ದ. ಮೂರು ಬಾರಿ ವರ್ಲ್ಡ್ ರ್ಯಾಪಿಡ್ ಚೆಸ್ ಚಾಪಿಯನ್‌ಶಿಪ್, 5 ಬಾರಿ ವರ್ಲ್ಡ್‌ ಬ್ಲಿಟ್ಜ್ ಚೆಸ್ ಚಾಂಪಿಯನ್ ಶಿಪ್ ಗೆದ್ದು ಬೀಗಿದ್ದ. ಆದರೆ ಈಗ ಪ್ರಗ್ ಇವನನ್ನು ಸರಣಿ ಸೋಲಿನ ಪ್ರಪಾತಕ್ಕೆ ತಳ್ಳಿದ್ದಾನೆ.

ಸೋಲು ಎಂದರೆ ಆಗದ ಕಾರ್ಲ್‌ಸನ್‌ಗೆ ಇದರಿಂದ ಆಘಾತವಾಗಿದೆ. ಅದಕ್ಕಾಗಿಯೆ ಹೇಳುವುದು ಕ್ರೀಡೆ ಯಾವತ್ತೂ ನಿಂತ ನೀರಲ್ಲ, ಅದು ರೌದ್ರವಾಗಿ ಹರಿಯುವ ನದಿಯಿದ್ದಂತೆ. ಚಿಕ್ಕ ಹಳ್ಳ ತೊರೆಗಳನ್ನು ತನ್ನ ಮಡಿಲಿಗೆ ಸೇರಿಸಿಕೊಳ್ಳುತ್ತ ರಭಸವಾಗಿ ಹರಿಯುತ್ತಲೇ ಹೋಗುತ್ತದೆ. ಆಗಾಗ ತನ್ನ ಪಾತ್ರವನ್ನು ಬದಲಿಸುತ್ತದೆ. ಹಾಗೆಯೇ ತನಗೆ ಬಲಿಷ್ಠ ಎದುರಾಳಿಯಿಲ್ಲ ಎಂದ ಕಾರ್ಲ್‌ಸನ್‌ಗೆ ಎದುರಾಳಿ ಸಿಕ್ಕಿದ್ದಾನೆ. ಆಟದಲ್ಲಿ ಹೊಸ ಹುಮ್ಮಸ್ಸು ತಂದಿದ್ದಾನೆ. ಚೆಸ್‌ನಲ್ಲಿ ಇನ್ನೂ ನಾನು ಸಾಧಿಸಬೇಕಾದದ್ದು ಏನೂ ಇಲ್ಲ ಎಂದವನು ಈಗ ತನ್ನ ಸತತ ಮೂರು ಸೋಲಿಗೆ ಪ್ರತ್ಯುತ್ತರ ನೀಡಬೇಕಾಗಿದೆ.

ಪ್ರಗ್ ನಮಗೆ ದೊರಕಿದ ಅನರ್ಘ್ಯ ರತ್ನ. ತನ್ನ ಹನ್ನೆರಡನೆ ವಯಸ್ಸಿಗೆ ಗ್ರ್ಯಾಂಡ್‌ ಮಾಸ್ಟರ್ ಆಗಿದ್ದಾನೆ. 10ನೇ ವಯಸ್ಸಿಗೆ ಇಂಟರ್‌ನ್ಯಾಷನಲ್ ಗ್ರ್ಯಾಂಡ್‌ ಮಾಸ್ಟರ್ ಆದ ಅತಿ ಕಿರಿಯನೆಂಬ ಹೆಗ್ಗಳಿಕೆ ಈತನದ್ದು. ಚೆನ್ನೈನ ಮಧ್ಯಮ ವರ್ಗದ ಕುಟುಂಬದಲ್ಲಿ 2005ರಲ್ಲಿ ಜನಿಸಿದ ಪ್ರಗ್‌ನ ತಂದೆ ರಮೇಶ್‌ ಬಾಬು ಬ್ಯಾಂಕ್ ನೌಕರ. ತಾಯಿ ನಾಗಲಕ್ಷ್ಮಿ ಗೃಹಿಣಿ. ಚಿಕ್ಕಂದಿನಿಂದಲೆ ಪೋಲಿಯೋ ವಕ್ಕರಿಸಿದ ಕಾರಣ ತಂದೆ ರಮೇಶ್‌ ಬಾಬುಗೆ ನಡೆಯುವುದು ಕಷ್ಟ. ಮಗನ ಯಾವುದೇ ಚೆಸ್ ಪಂದ್ಯಾವಳಿ ನೇರವಾಗಿ ವೀಕ್ಷಿಸಲು ಆಗದ ಕಾರಣ ಮಗನ ಆಟವನ್ನು ಟಿವಿಯಲ್ಲಿಯೆ ನೋಡಿ ಖುಷಿಪಡುತ್ತಾರಂತೆ. ಅಕ್ಕ ವೈಶಾಲಿ ಕೂಡ ಚೆಸ್ ಆಟಗಾರ್ತಿಯಾಗಿದ್ದು, ಮಹಿಳಾ ಗ್ರ್ಯಾಂಡ್‌ ಮಾಸ್ಟರ್ ಆಗಿದ್ದಾಳೆ.

ತಂದೆಯಂತೆ ಹಣೆಯ ಮೇಲೆ ಎದ್ದು ಕಾಣುವಂತೆ ಬಿಳಿಯ ತಿಲಕವಿಟ್ಟುಕೊಳ್ಳುವ ಪ್ರಗ್ ವಯಸ್ಸಿನಲ್ಲಿ ಕಿರಿಯನಾದರೂ ತುಂಬಾ ಪ್ರಬುದ್ಧ ಸ್ಪೋಟ್ಸ್೯ಮನ್. ಬಹಳ ಸರಳವಾದ ಜೀವನ ಪದ್ಧತಿಯನ್ನು ಅಳವಡಿಸಿಕೊಂಡಿರುವ ಪ್ರಗ್ ದಿನಕ್ಕೆ ಕನಿಷ್ಠ ನಾಲ್ಕು ತಾಸು ಚೆಸ್‌ನಲ್ಲಿ ತೊಡಗಿರುತ್ತಾನಂತೆ. ಈತನಿಗೆ ಪಿಜಾ ಸೇರಲ್ಲ. ಅನ್ನ, ಸಾಂಬಾರ್‌ ಇದ್ದರೆ ಸಾಕು. ಸೋಷಿಯಲ್ ಮೀಡಿಯಾದಿಂದ ಬಲು ದೂರ. ತಾನು ಎರಡು ವಷ೯ದವನಿರುವಾಗಲೇ ಅಕ್ಕ ವೈಶಾಲಿ ಚೆಸ್ ಆಡುವುದನ್ನು ಕಣ್ಣರಳಿಸಿ ನೋಡುತ್ತಾ ಚದುರಂಗದ ಹುಚ್ಚಿಗೆ ಬಿದ್ದಿದ್ದ. ಜನಪ್ರಿಯ ಕೋಚ್ ಗ್ರ್ಯಾಂಡ್‌ ಮಾಸ್ಟರ್ ಆರ್ ಬಿ ರಮೇಶ್‌ ಗರಡಿಯಲ್ಲಿ ಪಳಗಿದವ.

ಈಗಾಗಲೆ ಮಗ್ನಸ್ ಕಾರ್ಲ್‌ಸನ್, 6ನೇ ಶ್ರೇಯಾಂಕದ ಲಿವೋನ್ ಅರೋನಿಯನ್, ದಿಗ್ಗಜ ಆಟಗಾರರಾದ ಅಲಿರೇಜಾ ಪೀರೋಜಜಾ, ಹನ್ಸ್ ನಿಮೋನ್, ಅನೀಸ್ ಗಿರಿ ಸೇರಿ ಹಲವರನ್ನು ಸೋಲಿಸಿದ ಪ್ರಗ್‌ಗೆ ಈಗಿನ್ನೂ 17 ವಷ೯ ಅಷ್ಟೇ. ಅಪಾರ ಪ್ರತಿಭೆ ಹೊಂದಿರುವ ಈತ ಚೆಸ್ ಜಗತ್ತಿನಲ್ಲಿ ವಿಜೃಂಭಿಸುವುದು ಇನ್ನೂ ಸಾಕಷ್ಟಿದೆ. ಈತನ ಈವರೆಗಿನ ಸಾಧನೆ ಜಸ್ಟ್ ಟ್ರೇಲರ್ ಅಷ್ಟೇ, ಪಿಕ್ಚರ್ ಅಭೀ ಬಾಕಿ ಹೈ! ಏನಂತೀರಿ?


ಪ್ರಿಯ ಓದುಗರೇ,
ನಿಮ್ಮ ಅನಿಸಿಕೆ, ಅಭಿಪ್ರಾಯ, ಸಲಹೆ-ಸೂಚನೆ, ನಾಗರಿಕ ಸಮಸ್ಯೆ ಇತ್ಯಾದಿ ಸಂಗತಿಗಳನ್ನು ಹೇಳಿಕೊಳ್ಳಲು ‘ವಿಸ್ತಾರʼದಲ್ಲಿ ನಿಮಗೆ ಮುಕ್ತ ಅವಕಾಶ ಇದೆ. ಸಾಂದರ್ಭಿಕ ಲೇಖನಗಳನ್ನೂ ನೀವು ಬರೆದು ಕಳುಹಿಸಬಹುದು. ಬರಹದ ಜತೆ ನಿಮ್ಮದೊಂದು ಫೋಟೊ ಕೂಡ ಇರಲಿ.
ನಮ್ಮ ಇಮೇಲ್‌ ವಿಳಾಸ: janasamparka@vistaranews.com

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

RCB vs RR: ಆರ್​ಸಿಬಿ-ರಾಜಸ್ಥಾನ್​ ಪಂದ್ಯಕ್ಕೆ ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಏನು?

RCB vs RR: ಒಂದೊಮ್ಮೆ ಪಂದ್ಯಕ್ಕೆ ಮಳೆಯಿಂದ ಅಡಚಣೆಯಾದರೆ 120 ನಿಮಿಷಗಳ (2 ಗಂಟೆ) ಅವಧಿಗೆ ಪಂದ್ಯವನ್ನು ವಿಸ್ತರಿಸಬಹುದಾಗಿದೆ. ಆಗ 9.40ಕ್ಕೆ ಪಂದ್ಯ ಆರಂಭವಾಗುವುದಿದ್ದರೂ ಓವರ್‌ಗಳಲ್ಲಿ ಯಾವುದೇ ಕಡಿತ ಇರುವುದಿಲ್ಲ. ಸ್ಪಷ್ಟ ಫ‌ಲಿತಾಂಶಕ್ಕೆ ತಲಾ 5 ಓವರ್‌ಗಳ ಆಟ ನಡೆಯಬೇಕಿದೆ.

VISTARANEWS.COM


on

RR vs RCB
Koo

ಅಹಮದಾಬಾದ್​: ನಾಳೆ(ಬುಧವಾರ) ನಡೆಯುವ 17ನೇ ಆವೃತ್ತಿಯ ಐಪಿಎಲ್​ನ(IPL 2024) ಎಲಿಮಿನೇಟರ್​ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್(RCB vs RR)​ ಮತ್ತು ಆರ್​ಸಿಬಿ ಮುಖಾಮುಖಿಯಾಗಲಿದೆ. ಈ ಪಂದ್ಯ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ(Narendra Modi Stadium) ನಡೆಯಲಿದೆ. ಇದೇ ಮೈದಾನದಲ್ಲಿ ನಡೆಯಬೇಕಿದ್ದ ಲೀಗ್​ ಪಂದ್ಯವೊಂದು ಮಳೆಯಿಂದ ರದ್ದಾಗಿತ್ತು. ಹೀಗಾಗಿ ಅಭಿಮಾನಿಗಳಿಗೆ ಈ ಪಂದ್ಯಕ್ಕೂ ಮಳೆ(Rain Forecast) ಇದೆಯಾ ಎಂಬ ಚಿಂತೆ ಕಾಡಿದೆ. ಆದರೆ ಹವಾಮಾನ(Ahmedabad Weather) ಇಲಾಖೆ ಸಿಹಿ ಸುದ್ದಿ ನೀಡಿದೆ.

ಹವಾಮಾನ ವರದಿ


ಹವಾಮಾನ ಇಲಾಖೆಯ ವರದಿಯ ಪ್ರಕಾರ, ಅಹಮದಾಬಾದ್‌ನಲ್ಲಿ ಮೇ 22 ರಂದು ತಾಪಮಾನವು 45 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಬಹುದು ಮತ್ತು ಮಳೆಯಾಗುವ ಸಾಧ್ಯತೆ 0% ರಷ್ಟು ಇರುತ್ತದೆ ಎಂದು ತಿಳಿಸಿದೆ. ಹೀಗಾಗಿ ಪಂದ್ಯವನ್ನು ಅಭಿಮಾನಿಗಳು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು. ರಾತ್ರಿ 8 ಗಂಟೆಗೆ ತಾಪಮಾನವು 42 ಡಿಗ್ರಿ ಸೆಲ್ಸಿಯಸ್‌ಗೆ ಮತ್ತು ರಾತ್ರಿ 10 ಗಂಟೆಗೆ 39 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ನಿರೀಕ್ಷೆಯಿದೆ. ಪಂದ್ಯದ ಸಮಯದಲ್ಲಿ ಗಾಳಿಯ ಪ್ರಮಾಣ ಸುಮಾರು 16-21% ಇದರು ಸಾಧತೆ ಇದೆ.

ಒಂದೊಮ್ಮೆ ಪಂದ್ಯಕ್ಕೆ ಮಳೆಯಿಂದ ಅಡಚಣೆಯಾದರೆ 120 ನಿಮಿಷಗಳ (2 ಗಂಟೆ) ಅವಧಿಗೆ ಪಂದ್ಯವನ್ನು ವಿಸ್ತರಿಸಬಹುದಾಗಿದೆ. ಆಗ 9.40ಕ್ಕೆ ಪಂದ್ಯ ಆರಂಭವಾಗುವುದಿದ್ದರೂ ಓವರ್‌ಗಳಲ್ಲಿ ಯಾವುದೇ ಕಡಿತ ಇರುವುದಿಲ್ಲ. ಸ್ಪಷ್ಟ ಫ‌ಲಿತಾಂಶಕ್ಕೆ ತಲಾ 5 ಓವರ್‌ಗಳ ಆಟ ನಡೆಯಬೇಕಿದೆ. ಹೆಚ್ಚುವರಿ ಅವಧಿಯಲ್ಲೂ ಇದು ಸಾಧ್ಯವಾಗದೇ ಹೋದರೆ ಲೀಗ್‌ ಹಂತದ ಅಂಕಪಟ್ಟಿಯಲ್ಲಿ ಮೇಲಿದ್ದ ತಂಡವನ್ನು ಜಯಶಾಲಿ ಎಂದು ಘೋಷಿಸಲಾಗುತ್ತದೆ.

ಮುಖಾಮುಖಿ


ಆರ್​ಸಿಬಿ ಮತ್ತು ರಾಜಸ್ಥಾನ್​ ತಂಡಗಳು ಇದುವರೆಗಿನ ಐಪಿಎಲ್​ ಆವೃತ್ತಿಯಲ್ಲಿ ಒಟ್ಟು 31 ಬಾರಿ(RR vs RCB Head To Head Record) ಮುಖಾಮುಖಿಯಾಗಿವೆ. ಈ ಪೈಕಿ ಆರ್​ಸಿಬಿ 15, ರಾಜಸ್ಥಾನ್​ 13 ಗೆಲುವು ಸಾಧಿಸಿದೆ. 3 ಪಂದ್ಯಗಳು ಫಲಿತಾಂಶ ಇಲ್ಲದೆ ಕೊನೆಗೊಂಡಿದೆ. ಈ ಲೆಕ್ಕಾಚಾರದಲ್ಲಿ ಆರ್​ಸಿಬಿ ಬಲಿಷ್ಠ ಎನ್ನಲಡ್ಡಿಯಿಲ್ಲ. ಈ ಬಾರಿಯ ಮುಖಾಮುಖಿಯಲ್ಲಿ ರಾಜಸ್ಥಾನ್​ ಗೆಲುವು ಸಾಧಿಸಿತ್ತು.

ಇದನ್ನೂ ಓದಿ RCB vs RR: ಆರ್​ಸಿಬಿ-ರಾಜಸ್ಥಾನ್ ತಂಡಗಳ​ ಐಪಿಎಲ್​ ​ಪ್ಲೇ ಆಫ್/ನಾಕೌಟ್ ದಾಖಲೆ ಹೇಗಿದೆ?

ರಾಜಸ್ಥಾನ್​ ರಾಯಲ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ 2022ರಲ್ಲಿ ನಡೆದಿದ್ದ ಐಪಿಎಲ್​ ಟೂರ್ನಿಯ ಕ್ವಾಲಿಫೈಯರ್​-2 ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. ಈ ಪಂದ್ಯ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದಿತ್ತು. ಪಂದ್ಯದಲ್ಲಿ ರಾಜಸ್ಥಾನ್​ 7 ವಿಕೆಟ್​ ಅಂತರದ ಭರ್ಜರಿ ಗೆಲುವು ಸಾಧಿಸಿ ಫೈನಲ್​ ಪ್ರವೇಶಿಸಿತ್ತು. ಇದೀಗ ಅಂದಿನ ಈ ಸೋಲಿಗೆ ಆರ್​ಸಿಬಿ ಈ ಬಾರಿಯ ಎಲಿಮಿನೇಟರ್​ ಪಂದ್ಯದಲ್ಲಿ ಸೇಡು ತೀರಿಸಿಕೊಂಡೀತೇ? ಎಂದು ಕಾದು ನೋಡಬೇಕಿದೆ.

ಸಂಭಾವ್ಯ ತಂಡಗಳು


ಆರ್​ಸಿಬಿ:
 ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್, ಕ್ಯಾಮರೂನ್​ ಗ್ರೀನ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿಕೆ), ಕರ್ಣ್ ಶರ್ಮಾ, ಯಶ್ ದಯಾಳ್, ಲಾಕಿ ಫರ್ಗುಸನ್, ಮೊಹಮ್ಮದ್ ಸಿರಾಜ್.

ರಾಜಸ್ಥಾನ್​ ರಾಯಲ್ಸ್​: ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್-ಕಾಡ್ಮೋರ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ರೋವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಅವೇಶ್ ಖಾನ್, ನಾಂದ್ರೆ ಬರ್ಗರ್.

Continue Reading

ಕ್ರೀಡೆ

RCB vs RR: ಆರ್​ಸಿಬಿ-ರಾಜಸ್ಥಾನ್ ತಂಡಗಳ​ ಐಪಿಎಲ್​ ​ಪ್ಲೇ ಆಫ್/ನಾಕೌಟ್ ದಾಖಲೆ ಹೇಗಿದೆ?

RCB vs RR: ಆರ್​ಸಿಬಿ ಮತ್ತು ರಾಜಸ್ಥಾನ್​ ತಂಡಗಳು ಇದುವರೆಗಿನ ಐಪಿಎಲ್​ ಆವೃತ್ತಿಯಲ್ಲಿ ಒಟ್ಟು 31 ಬಾರಿ(RR vs RCB Head To Head Record) ಮುಖಾಮುಖಿಯಾಗಿವೆ. ಈ ಪೈಕಿ ಆರ್​ಸಿಬಿ 15, ರಾಜಸ್ಥಾನ್​ 13 ಗೆಲುವು ಸಾಧಿಸಿದೆ. 3 ಪಂದ್ಯಗಳು ಫಲಿತಾಂಶ ಕಂಡಿಲ್ಲ.

VISTARANEWS.COM


on

RCB vs RR
Koo

ಅಹಮದಾಬಾದ್​: ಐಪಿಎಲ್​ ಆವೃತ್ತಿಯ ಚೊಚ್ಚಲ ಚಾಂಪಿಯನ್​ ರಾಜಸ್ಥಾನ್​ ರಾಯಲ್ಸ್​(RCB vs RR) ಮತ್ತು ಮೂರು ಬಾರಿ ಫೈನಲ್​ ಪ್ರವೇಶಿಸಿದರೂ ಕಪ್​ ಗೆಲ್ಲದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(Royal Challengers Bengaluru) ತಂಡಗಳು ನಾಳೆ(ಬುಧವಾರ) ನಡೆಯುವ ಎಲಿಮಿನೇಟರ್​ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಇತ್ತಂಡಗಳ ಇದುವರೆಗಿನ ಐಪಿಎಲ್​ನ ಸಾಧನೆಗಳ ಹಿನ್ನೋಟ ಇಂತಿದೆ.

ಸೇಡು ತೀರಿಸಿಕೊಂಡೀತೇ ಆರ್​ಸಿಬಿ?


ರಾಜಸ್ಥಾನ್​ ರಾಯಲ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ 2022ರಲ್ಲಿ ನಡೆದಿದ್ದ ಐಪಿಎಲ್​ ಟೂರ್ನಿಯ ಕ್ವಾಲಿಫೈಯರ್​-2 ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. ಈ ಪಂದ್ಯ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದಿತ್ತು. ಪಂದ್ಯದಲ್ಲಿ ರಾಜಸ್ಥಾನ್​ 7 ವಿಕೆಟ್​ ಅಂತರದ ಭರ್ಜರಿ ಗೆಲುವು ಸಾಧಿಸಿ ಫೈನಲ್​ ಪ್ರವೇಶಿಸಿತ್ತು. ಇದೀಗ ಅಂದಿನ ಈ ಸೋಲಿಗೆ ಆರ್​ಸಿಬಿ ಈ ಬಾರಿಯ ಎಲಿಮಿನೇಟರ್​ ಪಂದ್ಯದಲ್ಲಿ ಸೇಡು ತೀರಿಸಿಕೊಂಡೀತೇ? ಎಂದು ಕಾದು ನೋಡಬೇಕಿದೆ.

ಆರ್​ಸಿಬಿ ನಾಕೌಟ್​/ ಪ್ಲೇ ಆಫ್​ ಸಾಧನೆ


2009ರಲ್ಲಿ ಲೀಗ್​ನಲ್ಲಿ ಮೊದಲ ಸ್ಥಾನ. ಫೈನಲ್​ನಲ್ಲಿ ಸೋಲು (ರನ್ನರ್​ ಅಪ್​)

201ರಲ್ಲಿ ಲೀಗ್​ನಲ್ಲಿ ಮೂರನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2011ರಲ್ಲಿ ಲೀಗ್​ನಲ್ಲಿ ಮೊದಲ ಸ್ಥಾನ. ಫೈನಲ್​ನಲ್ಲಿ ಸೋಲು (ರನ್ನರ್​ ಅಪ್​)

2015ರಲ್ಲಿ ಲೀಗ್​ನಲ್ಲಿ ಮೂರನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2016ರಲ್ಲಿ ಲೀಗ್​ನಲ್ಲಿ ಮೊದಲ ಸ್ಥಾನ. ಫೈನಲ್​ನಲ್ಲಿ ಸೋಲು (ರನ್ನರ್​ ಅಪ್​)

2020ರಲ್ಲಿ ಲೀಗ್​ನಲ್ಲಿ 4ನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2021ರಲ್ಲಿ ಲೀಗ್​ನಲ್ಲಿ 3ನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2022ರಲ್ಲಿ ಲೀಗ್​ನಲ್ಲಿ 4ನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

ರಾಜಸ್ಥಾನ್​ ನಾಕೌಟ್​/ ಪ್ಲೇ ಆಫ್​ ಸಾಧನೆ


2008ರಲ್ಲಿ ಲೀಗ್​ನಲ್ಲಿ ಮೊದಲ ಸ್ಥಾನ. ಚಾಂಪಿಯನ್​

2013ರಲ್ಲಿ ಲೀಗ್​ನಲ್ಲಿ ಮೂರನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2015ರಲ್ಲಿ ಲೀಗ್​ನಲ್ಲಿ 4ನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2018ರಲ್ಲಿ ಲೀಗ್​ನಲ್ಲಿ 4ನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2022ರಲ್ಲಿ ಲೀಗ್​ನಲ್ಲಿ 2ನೇ ಸ್ಥಾನ. ಫೈನಲ್​ನಲ್ಲಿ ಸೋಲು (ರನ್ನರ್​ ಅಪ್​)

ಇದನ್ನೂ ಓದಿ RCB IPL Records: ಕಳೆದ 16 ಆವೃತ್ತಿಯ ಐಪಿಎಲ್​ನಲ್ಲಿ ಆರ್​ಸಿಬಿ ಎಷ್ಟು ಬಾರಿ ಪ್ಲೇ ಆಫ್​ಪ್ರವೇಶಿಸಿದೆ?: ತಂಡದ ದಾಖಲೆ ಹೇಗಿದೆ?

ಮುಖಾಮುಖಿ


ಆರ್​ಸಿಬಿ ಮತ್ತು ರಾಜಸ್ಥಾನ್​ ತಂಡಗಳು ಇದುವರೆಗಿನ ಐಪಿಎಲ್​ ಆವೃತ್ತಿಯಲ್ಲಿ ಒಟ್ಟು 31 ಬಾರಿ(RR vs RCB Head To Head Record) ಮುಖಾಮುಖಿಯಾಗಿವೆ. ಈ ಪೈಕಿ ಆರ್​ಸಿಬಿ 15, ರಾಜಸ್ಥಾನ್​ 13 ಗೆಲುವು ಸಾಧಿಸಿದೆ. 3 ಪಂದ್ಯಗಳು ಫಲಿತಾಂಶ ಇಲ್ಲದೆ ಕೊನೆಗೊಂಡಿದೆ. ಈ ಲೆಕ್ಕಾಚಾರದಲ್ಲಿ ಆರ್​ಸಿಬಿ ಬಲಿಷ್ಠ ಎನ್ನಲಡ್ಡಿಯಿಲ್ಲ. ಈ ಬಾರಿಯ ಮುಖಾಮುಖಿಯಲ್ಲಿ ರಾಜಸ್ಥಾನ್​ ಗೆಲುವು ಸಾಧಿಸಿತ್ತು.

ಸಂಭಾವ್ಯ ತಂಡಗಳು


ಆರ್​ಸಿಬಿ:
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್, ಕ್ಯಾಮರೂನ್​ ಗ್ರೀನ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿಕೆ), ಕರ್ಣ್ ಶರ್ಮಾ, ಯಶ್ ದಯಾಳ್, ಲಾಕಿ ಫರ್ಗುಸನ್, ಮೊಹಮ್ಮದ್ ಸಿರಾಜ್.

ರಾಜಸ್ಥಾನ್​ ರಾಯಲ್ಸ್​: ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್-ಕಾಡ್ಮೋರ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ರೋವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಅವೇಶ್ ಖಾನ್, ನಾಂದ್ರೆ ಬರ್ಗರ್.

Continue Reading

ಕ್ರಿಕೆಟ್

Shane Watson Apologize: ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಆರ್​ಸಿಬಿ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಶೇನ್​ ವಾಟ್ಸನ್

Shane Watson Apologize: ಬೆಂಗಳೂರಿನ ಬಗ್ಗೆಯೂ ಅನುಭವ ಹಂಚಿಕೊಂಡ ವಾಟ್ಸನ್​, ಆರ್​ಸಿಬಿ ತಂಡಕ್ಕೆ ಇಲ್ಲಿ ಸಿಕ್ಕಪಟ್ಟೇ ಕ್ರೇಜಿ ಫ್ಯಾನ್ಸ್​ ಇದ್ದಾರೆ. ನಾನು ಕೂಡ ಈ ತಂಡದ ಪರ ಆಡಿರುವ ಕಾರಣ ಬೆಂಗಳೂರು ಮತ್ತು ಇಲ್ಲಿನ ಜನರ ನಂಟು ಈಗಲೂ ಇದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿದ ಕ್ಷಣಗಳು ಅವಿಸ್ಮರಣೀಯ ಎಂದರು.

VISTARANEWS.COM


on

Shane Watson Apologize
Koo

ಬೆಂಗಳೂರು: ಆಸ್ಟ್ರೇಲಿಯಾ ಹಾಗೂ ಆರ್​ಸಿಬಿ ತಂಡದ ಮಾಚಿ ಆಟಗಾರ ಶೇನ್​ ವಾಟ್ಸನ್(Shane Watson)​ ಅವರು ಇಂದು(ಮಂಗಳವಾರ) ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ(Presidency University in Bengaluru) ‘ವ್ಯಾಟ್ಸನ್​ ದಿ ವಿನ್ನರ್ಸ್ ಮೈಂಡ್ ಸೆಟ್’ ಎನ್ನುವ ಪುಸ್ತಕವನ್ನು ಬಿಡುಗಡೆ ಮಾಡಿದರು. ಇದೇ ವೇಳೆ 2016ರ ಫೈನಲ್​ನಲ್ಲಿ ಕಳಪೆ ಪ್ರದರ್ಶನ ತೋರಿದ್ದಕ್ಕೆ ಆರ್​ಸಿಬಿ ಅಭಿಮಾನಿಗಳಲ್ಲಿ ಕ್ಷಮೆ(Shane Watson Apologize) ಕೇಳಿದ್ದಾರೆ. ಇದರ ವಿಡಿಯೊ ವೈರಲ್​ ಆಗಿದೆ.


ಪುಸ್ತಕ ಬಿಡಿಗಡೆಗೊಳಿಸಿದ ಬಳಿಕ ಮಾತನಾಡಿದ ವಾಟ್ಸನ್​, ಕಾಲೇಜಿಗೆ ಭೇಟಿ ನೀಡಿರುವುದು ನಿಜಕ್ಕೂ ಅದ್ಭುತ. ವಿದ್ಯಾರ್ಥಿಗಳು ಕ್ರಿಕೆಟ್​ ಆಡುವ ಮತ್ತು ವೀಕ್ಷಿಸುವ ಜತೆಗೆ ಶಿಕ್ಷಣದಲ್ಲಿಯೂ ಗಮನಹರಿಸಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ವಾಟ್ಸನ್​ ತಮ್ಮ ವಿದ್ಯಾರ್ಥಿ ಜೀವನದ ದಿನಗಳನ್ನು ಮೆಲುಕು ಹಾಕಿದರು.

ಬೆಂಗಳೂರಿನ ಬಗ್ಗೆಯೂ ಅನುಭವ ಹಂಚಿಕೊಂಡ ಅವರು, ಆರ್​ಸಿಬಿ ತಂಡಕ್ಕೆ ಇಲ್ಲಿ ಸಿಕ್ಕಪಟ್ಟೇ ಕ್ರೇಜಿ ಫ್ಯಾನ್ಸ್​ ಇದ್ದಾರೆ. ನಾನು ಕೂಡ ಈ ತಂಡದ ಪರ ಆಡಿರುವ ಕಾರಣ ಬೆಂಗಳೂರು ಮತ್ತು ಇಲ್ಲಿನ ಜನರ ನಂಟು ಈಗಲೂ ಇದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿದ ಕ್ಷಣಗಳು ಅವಿಸ್ಮರಣೀಯ. ಆದರೆ ನನ್ನ ಮನಸ್ಸಲ್ಲಿ ಈಗಲೂ ಇರುವ ನೋವೆಂದರೆ 2016ರ ಐಪಿಎಲ್​ ಫೈನಲ್​ನಲ್ಲಿ ನಾನು ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾದದ್ದು. ನಾನು ಆಡುತ್ತಿದ್ದರೆ ಆರ್​ಸಿಬಿ ಕಪ್​ ಗೆಲ್ಲುತ್ತಿತ್ತು. ಇದೇ ವಿಚಾರವಾಗಿ ನಾನು ನಿಮ್ಮಲ್ಲಿ ಕ್ಷಮೆ ಕೋರುತ್ತೇನೆ ಎಂದು ಹೇಳಿದರು. ಆ ಫೈನಲ್​ ಪಂದ್ಯದಲ್ಲಿ ವಾಟ್ಸನ್​ 11 ರನ್​ ಗಳಿಸಿ ಔಟಾಗಿದ್ದರು.

ಇದನ್ನೂ ಓದಿ RCB IPL Records: ಕಳೆದ 16 ಆವೃತ್ತಿಯ ಐಪಿಎಲ್​ನಲ್ಲಿ ಆರ್​ಸಿಬಿ ಎಷ್ಟು ಬಾರಿ ಪ್ಲೇ ಆಫ್​ಪ್ರವೇಶಿಸಿದೆ?: ತಂಡದ ದಾಖಲೆ ಹೇಗಿದೆ?


ಈ ಬಾರಿ ಆರ್​ಸಿಬಿ ತಂಡ ಉತ್ತಮವಾಗಿ ಆಡಿದೆ. ಆರಂಭಿಕ ಹಂತದಲ್ಲಿ 7 ಸೋಲು ಕಂಡರೂ ಕೂಡ ಆ ಬಳಿಕ ಸತತವಾಗಿ 6 ಮತ್ತು ಒಟ್ಟಾರೆ 7 ಗೆಲುವಿನೊಂದಿಗೆ ಪ್ಲೇ ಆಫ್​ ಪ್ರವೇಶಿಸಿದೆ. ನಾಳೆ ರಾಜಸ್ಥಾನ್​ ವಿರುದ್ಧ ಆಡಲಿದೆ. ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು. ಇದೇ ವೇಳೆ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ಕುಲಪತಿ ಡಾ. ನಿಸ್ಸಾರ್ ಅಹಮದ್ ಜತೆ ವಾಟ್ಸನ್​ ಕ್ರಿಕೆಟ್ ಆಡಿ ಸಂಭ್ರಮಿಸಿದರು.


ಸದ್ಯ ನಿವೃತ್ತಿ ಜೀವನ ನಡೆಸುತ್ತಿರುವ ವಾಟ್ಸನ್​ ಕ್ರಿಕೆಟ್​ ಕಾಮೆಂಟ್ರಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಐಪಿಎಲ್​ ಮಾತ್ರವಲ್ಲದೆ ಇತರ ಕ್ರಿಕೆಟ್​ ಲೀಗ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯಗಳ ಕಾಮೆಂಟ್ರಿ ಮಾಡುತ್ತಿದ್ದಾರೆ. ‘ವ್ಯಾಟ್ಸನ್​ ದಿ ವಿನ್ನರ್ಸ್ ಮೈಂಡ್ ಸೆಟ್’ ಈ ಪುಸ್ತಕದಲ್ಲಿ ಆರ್​ಸಿಬಿ ಮತ್ತು ಐಪಿಎಲ್​ ಕುರಿತ ವಿಚಾರವು ಅಡಕವಾಗಿದೆ.

Continue Reading

ಕ್ರೀಡೆ

RCB IPL Records: ಕಳೆದ 16 ಆವೃತ್ತಿಯ ಐಪಿಎಲ್​ನಲ್ಲಿ ಆರ್​ಸಿಬಿ ಎಷ್ಟು ಬಾರಿ ಪ್ಲೇ ಆಫ್​ಪ್ರವೇಶಿಸಿದೆ?: ತಂಡದ ದಾಖಲೆ ಹೇಗಿದೆ?

RCB IPL Records: ಪ್ರತಿ ಆವೃತ್ತಿಯಲ್ಲಿಯೂ ಈ ಸಲ ಕಪ್​ ನಮ್ದೇ ಎಂದು ಅಭಿಯಾನ ಆರಂಭಿಸುವ ಆರ್​ಸಿಬಿ ನಿರಾಸೆ ಕಂಡಿದ್ದೇ ಹೆಚ್ಚು. ಒಟ್ಟು ಮೂರು ಬಾರಿ ಫೈನಲ್​, 5 ಬಾರಿ ಪ್ಲೇ ಆಫ್​ಗೆ ಪ್ರವೇಶ ಪಡೆದಿತ್ತು. ಆದರೆ ಒಮ್ಮೆಯೂ ಕಪ್​ ಮಾತ್ರ ಗೆಲ್ಲಲು ಸಾಧ್ಯವಾಗಿಲ್ಲ.

VISTARANEWS.COM


on

RCB IPL Records
Koo

ಅಮಹದಾಬಾದ್​: ಕೋಟೆಯ ಎಲ್ಲ ಬಾಗಿಲುಗಳನ್ನು ಮುಚ್ಚಿದರೂ, ಬೆಳಕು ತೂರುವುದಕ್ಕೊಂದು ಸಣ್ಣ ಕಿಂಡಿ ಇದ್ದರು ಸಾಕು ಜೀವನ ಹೋರಾಟ ಮುಂದುವರೆಸುವುದಕ್ಕೆ ಎನ್ನುವ ಮಾತನ್ನು ಆರ್​ಸಿಬಿ(RCB IPL Records) ನಿಜ ಮಾಡಿದೆ. ಆರಂಭಿಕ ಹಂತದಲ್ಲಿ 7 ಸೋಲು ಕೊಂಡು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಿಯಾಗಿ ಇನ್ನೇನು ಟೂರ್ನಿಯಿಂದ ಹೊರಬೀಳುತ್ತದೆ ಎನ್ನುವ ಸ್ಥಿತಿ ಎದುರಿಸಿತ್ತು. ಆದರೆ ಹೋರಾಡುವ ಛಲ ಮತ್ತು ನಂಬಿಕೆಯೊಂದನ್ನು ಗಟ್ಟಿಯಾಗಿರಿಸಿದ್ದ ಆಗಾರರು ತಂಡವನ್ನು ಪ್ಲೇ ಆಫ್​ ಪ್ರವೇಶಿಸುವಂತೆ ಮಾಡಿದರು. ಇದೀಗ ನಾಳೆ ನಡೆಯುವ ಎಲಿಮಿನೇಟರ್​ ಪಂದ್ಯದಲ್ಲಿ ಆರ್​ಸಿಬಿ ಆಟಗಾರರು ರಾಜಸ್ಥಾನ್​ ವಿರುದ್ಧದ ಕಣಕ್ಕಿಳಿಯಲು ಸಜ್ಜಾಗಿಗೆ ನಿಂತಿದ್ದಾರೆ. ಆರ್​ಸಿಬಿಯ ಇದುವರೆಗಿನ 16 ಐಪಿಎಲ್​ನ ಸಾಧನೆಯ ಇಣುಕು ನೋಡ ಇಂತಿದೆ.

ಮೂರು ಭಾರಿ ಫೈನಲ್​


ಪ್ರತಿ ಆವೃತ್ತಿಯಲ್ಲಿಯೂ ಈ ಸಲ ಕಪ್​ ನಮ್ದೇ ಎಂದು ಅಭಿಯಾನ ಆರಂಭಿಸುವ ಆರ್​ಸಿಬಿ ನಿರಾಸೆ ಕಂಡಿದ್ದೇ ಹೆಚ್ಚು. ಒಟ್ಟು ಮೂರು ಬಾರಿ ಫೈನಲ್​ ಪ್ರವೇಶಿಸಿದರೂ ಕಪ್​ ಮಾತ್ರ ಗೆಲ್ಲಲು ಸಾಧ್ಯವಾಗಿಲ್ಲ. ಮೂರೂ ಫೈನಲ್​ ಪ್ರವೇಶದ ವೇಳೆಯೂ ತಂಡದಲ್ಲಿ ವಿಶ್ವದ ಬಲಿಷ್ಠ ಆಟಗಾರರು ಈ ತಂಡದಲ್ಲಿದ್ದರು. ಆದರೂ ಕೂಡ ಲಕ್​ ಎನ್ನುವುದು ಮಾತ್ರ ತಂಡಕ್ಕೆ ಕೈ ಹಿಡಿಯುತ್ತಿರಲಿಲ್ಲ. ಲೀಗ್​ ಹಂತದಲ್ಲಿ ಎಷ್ಟೇ ಸೊಗಸಾದ ಆಟವಾಡಿದ್ದರೂ ಕೂಡ ಫೈನಲ್​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿ ಕಪ್​ ಗೆಲ್ಲಲು ವಿಫಲವಾಗಿತ್ತು. ಒಟ್ಟು 5 ಬಾರಿ ಪ್ಲೇ ಆಫ್​ಗೆ ಪ್ರವೇಶ ಪಡೆದಿತ್ತು.

ಇದನ್ನೂ ಓದಿ IPL 2024: ಮೋದಿ ಸ್ಟೇಡಿಯಂನಲ್ಲಿ ಫುಟ್ಬಾಲ್​ ಆಡಿದ ಆರ್​ಸಿಬಿ ಆಟಗಾರರು

ಆರ್​ಸಿಬಿ ಮೊದಲ ಬಾರಿಗೆ ಫೈನಲ್​ ಪ್ರವೇಶಿಸಿದ್ದು, 2009ರಲ್ಲಿ. ಎದುರಾಳಿ ಆ್ಯಡಂ ಗಿಲ್‌ಕ್ರಿಸ್ಟ್ ನೇತೃತ್ವದ ಡೆಕ್ಕನ್ ಚಾರ್ಜರ್ಸ್(Deccan Chargers). ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಡೆಕ್ಕನ್​ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 143 ರನ್​ ಬಾರಿಸಿತು. ಅಲ್ಪ ಮೊತ್ತವನ್ನು ಬೆನ್ನಟ್ಟಿದ ಆರ್​ಸಿಬಿ 9 ವಿಕೆಟ್​ಗೆ ಕೇವಲ 137 ರನ್​ ಮಾತ್ರ ಗಳಿಸಲಷ್ಟೇ ಶಕ್ತವಾಗಿ 6 ರನ್​ ಅಂತರದಿಂದ ಸೋಲು ಕಂಡಿತ್ತು.

ಎರಡನೇ ಬಾರಿ ಆರ್​ಸಿಬಿ ಫೈನಲ್​ ಪ್ರವೇಶಿಸಿದ್ದು 2011ರಲ್ಲಿ. ಮೊದಲ ಬಾರಿಗೆ ಕಪ್​ ಗೆಲ್ಲಲು ವಿಫಲವಾಗಿದ್ದ ಆರ್​ಸಿಬಿ ತನ್ನ 2ನೇ ಪ್ರಯತ್ನದಲ್ಲಿ ಕಪ್​ ಗೆಲ್ಲಲಿದೆ ಎಂದು ಅಭಿಮಾನಿಗಳು ಬಲವಾಗಿ ನಂಬಿದ್ದರು. ಆದರೆ ಇಲ್ಲಿಯೂ ಆರ್​ಸಿಬಿ ವಿಫಲವಾಗಿತ್ತು. ಹಾಲಿ ಚಾಂಪಿಯನ್​ ಆಗಿದ್ದ ಚೆನ್ನೈ ಸೂಪರ್​ ಕಿಂಗ್ಸ್​ ಫೈನಲ್​ನಲ್ಲಿ ಗೆದ್ದು ಸತತವಾಗಿ 2ನೇ ಟ್ರೋಫಿ ಗೆದ್ದ ಸಾಧನೆ ಮಾಡಿತ್ತು. ಈ ಪಂದ್ಯದಲ್ಲಿ ಆರ್​ಸಿಬಿಗೆ 58 ರನ್​ ಸೋಲು ಎದುರಾಗಿತ್ತು.

ಆರ್​ಸಿಬಿ ಅಭಿಮಾನಿಗಳಿಗೆ ಮೂರನೇ ಬಾರಿಗೆ ನಿರಾಸೆಯಾದ ಐಪಿಎಲ್​ ಆವೃತ್ತಿ ಎಂದರೆ 2016ನೇ ಆವೃತ್ತಿ. ಬಲಿಷ್ಠ ಆಟಗಾರ ಕ್ರಿಸ್​ ಗೇಲ್​, ಎಬಿಡಿ ವಿಲಿಯರ್ಸ್​, ಶೇನ್ ವಾಟ್ಸನ್​ ಮತ್ತು ವಿರಾಟ್​ ಕೊಹ್ಲಿಯಂತಹ ಸ್ಟಾರ್​ ಆಟಗಾರರು ತಂಡದಲ್ಲಿದ್ದರೂ ಕೂಡ ಕಪ್​ ಗೆಲ್ಲುವಲ್ಲಿ ಆರ್​ಸಿಬಿ ವಿಫಲವಾಗಿತ್ತು. ಮೊದಲು ಬ್ಯಾಟಿಂಗ್​ ನಡೆಸಿದ ಸನ್​ರೈಸರ್ಸ್​ ಹೈದರಾಬಾದ್(Sunrisers Hyderabad)​ 7 ವಿಕೆಟ್​ಗೆ 208 ರನ್​ ಬಾರಿಸಿತು. ದಿಟ್ಟವಾಗಿ ಗುರಿ ಬೆನ್ನಟ್ಟಿಕೊಂಡು ಹೋದ ಆರ್​ಸಿಬಿ ಮೊದಲ ವಿಕೆಟ್​ಗೆ 114 ರನ್​ ಒಟ್ಟುಗೂಡಿಸಿತು. ಈ ವೇಳೆ ಆರ್​ಸಿಬಿ ಅಭಿಮಾನಿಗಳೆಲ್ಲ ಈ ಸಲ ಕಪ್​ ನಮ್ದೇ ಎಂದು ನಂಬಿದ್ದರು. ಆದರೆ, ನಂಬುಗೆಯ ಬ್ಯಾಟರ್​ಗಳೆಲ್ಲ ಸತತವಾಗಿ ವಿಕೆಟ್​ ಒಪ್ಪಿಸಿ ತಂಡದ ಸೋಲಿಗೆ ಕಾರಣವಾದರು. ಭರ್ತಿ 200 ರನ್​ ಗಳಿಸಿ 8 ರನ್​ ಅಂತರದ ಸೋಲು ಕಂಡಿತ್ತು.

ಈ ಬಾರಿ ಹೊಸ ಅಧ್ಯಾಯ ಎಂದು ಹೇಳಿ ಅಭಿಯಾನ ಆರಂಭಿಸಿದ ಆರ್​ಸಿಬಿ ಎಲಿಮಿನೇಟರ್​ ಪಂದ್ಯದಲ್ಲಿಯೂ ಗೆದ್ದು ಆ ಬಳಿಕ ಕ್ವಾಲಿಫೈಯರ್​ನಲ್ಲಿಯೂ ಜಯಶಾಲಿಯಾಗಿ ಫೈನಲ್​ ಪ್ರವೇಶಿಸಿ ಚೊಚ್ಚಲ ಪ್ರಶಸ್ತಿ ಗೆಲ್ಲುವಂತಾಗಲಿ ಎನ್ನುವುದು ಕೋಟಿ ಆರ್​ಸಿಬಿ ಅಭಿಮಾನಿಗಳ ಹಾರೈಕೆಯಾಗಿದೆ.

Continue Reading
Advertisement
Narendra Modi
ಪ್ರಮುಖ ಸುದ್ದಿ8 mins ago

Narendra Modi: ಅಂಬೇಡ್ಕರ್‌ ಇರದಿದ್ದರೆ ಮೀಸಲಾತಿ ಜಾರಿಗೆ ನೆಹರು ಬಿಡುತ್ತಿರಲಿಲ್ಲ ಎಂದ ಮೋದಿ!

Self Harming
ಕರ್ನಾಟಕ32 mins ago

Self Harming: ಹುಬ್ಬಳ್ಳಿಯಲ್ಲಿ ನೇಣಿಗೆ ಶರಣಾದ ಜೋಡಿ; ಅನೈತಿಕ ಸಂಬಂಧ ಶಂಕೆ

HD Kumaraswamy attack on DK Shivakumar and he gives reason for Devaraje Gowda fears for his life in jail
ರಾಜಕೀಯ55 mins ago

HD Kumaraswamy: ದೇವರಾಜೇಗೌಡರಿಗೆ ಜೈಲಲ್ಲಿ ಜೀವ ಭಯ ಇದೆ; ಕಾರಣ ಬಿಚ್ಚಿಟ್ಟ ಎಚ್‌ಡಿ ಕುಮಾರಸ್ವಾಮಿ

Wedding Fashion
ಫ್ಯಾಷನ್1 hour ago

Wedding Fashion: ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ ಈ ಮಿರಮಿರ ಮಿನುಗುವ ಲೆಹೆಂಗಾಗಳು!

Sambit Patra
ದೇಶ1 hour ago

‘ಪುರಿ ಜಗನ್ನಾಥನೇ ಮೋದಿಯ ಭಕ್ತ’ ಹೇಳಿಕೆ; ಪ್ರಾಯಶ್ಚಿತ್ತವಾಗಿ ಸಂಬಿತ್‌ ಪಾತ್ರಾ 3 ದಿನ ಉಪವಾಸ!

2024 Bajaj Pulsar F250
ಪ್ರಮುಖ ಸುದ್ದಿ1 hour ago

2024 Bajaj Pulsar F250 : ಬೆಲೆ ಏರಿಕೆ ಮಾಡದೇ ಹೊಸ ಪಲ್ಸರ್​ 250 ರಸ್ತೆಗಿಳಿಸಲಿದೆ ಬಜಾಜ್​​

Karnataka Rain
ಮಳೆ1 hour ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Cauvery Dispute
ಕರ್ನಾಟಕ2 hours ago

Cauvery Dispute: ತಮಿಳುನಾಡಿಗೆ 2.5 ಟಿಎಂಸಿ ಕಾವೇರಿ ನೀರು ಹರಿಸಲು CWMA ಸೂಚನೆ

Brand Bangalore and BJP Slams DK Shivakumar and Congress Government
ರಾಜಕೀಯ2 hours ago

Brand Bangalore: ಬಯಲಾಯ್ತು ಮುಖವಾಡ, ಬೀದಿಗೆ ಬಂತು ಬಂಡವಾಳ; ಬ್ರ್ಯಾಂಡ್‌ ಬೆಂಗಳೂರು ಬಗ್ಗೆ ಕುಟುಕಿದ ಬಿಜೆಪಿ

Eye Care Tips
ಆರೋಗ್ಯ2 hours ago

Eye Care Tips: ಕಣ್ಣಿನ ಸುಸ್ತಿಗೆ ನೀವು ಇಷ್ಟಾದರೂ ಮಾಡಿ, ಕಣ್ಣಿಗೆ ಅಗತ್ಯ ವಿಶ್ರಾಂತಿ ನೀಡಿ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 hour ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು6 hours ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು8 hours ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 day ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

ಟ್ರೆಂಡಿಂಗ್‌