Engineers day | ಅರಣ್ಯಗಳ ಸಿವಿಲ್​ ಎಂಜಿನಿಯರ್​​ಗಳು ಯಾರೆಂದು ಗೊತ್ತಾ? ಅವರಿಗೂ ಶುಭ ಕೋರಬಹುದಾ? - Vistara News

ವೈರಲ್ ನ್ಯೂಸ್

Engineers day | ಅರಣ್ಯಗಳ ಸಿವಿಲ್​ ಎಂಜಿನಿಯರ್​​ಗಳು ಯಾರೆಂದು ಗೊತ್ತಾ? ಅವರಿಗೂ ಶುಭ ಕೋರಬಹುದಾ?

ಬರೀ ನಾಡಲ್ಲಿ ಅಷ್ಟೇ ಅಲ್ಲ, ಕಾಡಿನಲ್ಲೂ ಇದ್ದಾರೆ ಸಿವಿಲ್ ಎಂಜಿನಿಯರ್​ಗಳು. ಪುರಾತನ ಕಾಲದಿಂದಲೂ ನಿಷ್ಠೆಯಿಂದ ತಮ್ಮ ಕೆಲಸ ಮಾಡಿಕೊಂಡಿದ್ದಾರೆ. ಅವರಿಗೂ ಇಂದು ಇಲ್ಲಿಂದಲೇ ಶುಭ ಹಾರೈಸೋಣ..!

VISTARANEWS.COM


on

Do you Know the Civil Engineers of Forest
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭಾರತದ ಮೊಟ್ಟಮೊದಲ ಎಂಜಿನಿಯರ್​ ಸರ್​. ಎಂ.ವಿಶ್ವೇಶ್ವರಯ್ಯನವರು ಹುಟ್ಟಿದ ದಿನ ಸೆಪ್ಟೆಂಬರ್ 15ನ್ನು ಪ್ರತಿವರ್ಷ ಭಾರತದಲ್ಲಿ ‘ರಾಷ್ಟ್ರೀಯ ಎಂಜಿನಿಯರ್​ಗಳ ದಿನ’ ಎಂದು ಆಚರಿಸಲಾಗುತ್ತದೆ. ಈ ದಿನ ಸರ್​. ಎಂ.ವಿಶ್ವೇಶ್ವರಯ್ಯನವರನ್ನು ಸ್ಮರಿಸುವ ಜತೆ ಎಲ್ಲ ಎಂಜಿನಿಯರ್​​ಗಳಿಗೂ ಶುಭಕೋರಿ ಗೌರವಿಸಲಾಗುತ್ತದೆ. ಈ ದಿನ ಸೋಷಿಯಲ್ ಮೀಡಿಯಾದಲ್ಲಿ ಎಂಜಿನಿಯರ್​ಗಳಿಗೆ ಗೌರವ ಸಲ್ಲಿಸುವ ಪೋಸ್ಟ್​ಗಳನ್ನು ಹಾಕುವ ಜತೆ, ಅವರ ಕಾಲೆಳೆಯುವ, ಅವರ ಬಗೆಗಿನ ತಮಾಷೆಯುಕ್ತ ಜೋಕ್​​ಗಳ ಪೋಸ್ಟ್​ನ್ನೂ ಹಾಕಲಾಗುತ್ತದೆ. ಹಾಗಂತ ಇದು ಟೀಕೆಯೆಂದೆಲ್ಲ..

ಇಷ್ಟೆಲ್ಲ ಮಾಡಿ ಎಂಜಿನಿಯರ್ಸ್ ಡೇ ಆಚರಿಸುವ ನಮಗೆ ಅರಣ್ಯದಲ್ಲಿರುವ ಸಿವಿಲ್​ ಎಂಜಿನಿಯರ್​​ಗಳು ಯಾರೆಂದು ಗೊತ್ತಾ? -ಏನು ಕಾಡಿನಲ್ಲಿ ಸಿವಿಲ್​ ಎಂಜಿನಿಯರ್​​ಗಳು ಇರುತ್ತಾರಾ? ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವ ಆಗಬಹುದು. ‘ಹೌದು..ಪುರಾತನ ಕಾಲದಿಂದಲೂ..ಈಗಿನವರೆಗೂ ಕಾಡಿನಲ್ಲೂ ಸಿವಿಲ್​ ಎಂಜಿನಿಯರ್​ಗಳು ಇದ್ದಾರೆ ಎನ್ನುತ್ತಾರೆ ಐಎಫ್​ಎಸ್​ (ಇಂಡಿಯನ್​ ಫಾರೆಸ್ಟ್ ಸರ್ವೀಸ್​​) ಅಧಿಕಾರಿ ಪರ್ವೀನ್​ ಕಾಸ್ವಾನ್​. ಅಂದಹಾಗೇ, ಪರ್ವೀನ್​ ಮಾತನಾಡುತ್ತಿರುವುದು ‘ಆನೆ’ಗಳ ಬಗ್ಗೆ. ಅವರು ಹೇಳುವ ಪ್ರಕಾರ ಆನೆಗಳೇ ಅರಣ್ಯದ ಸಿವಿಲ್​ ಎಂಜಿನಿಯರ್​ಗಳು.

ಇಂದು ಎಂಜಿನಿಯರ್ಸ್​ ಡೇ ನಿಮಿತ್ತ ಟ್ವೀಟ್ ಮಾಡಿರುವ ಐಎಫ್​ಎಸ್ ಅಧಿಕಾರಿ ಪರ್ವೀನ್​ ಕಾಸ್ವಾನ್​, ‘ಆನೆಗಳು ಅರಣ್ಯಗಳಲ್ಲಿ ಸಿವಿಲ್​ ಎಂಜಿನಿಯರ್​​ಗಳಂತೆ ಕೆಲಸ ಮಾಡುತ್ತವೆ ಎಂಬುದು ನಿಮಗೆಲ್ಲ ತಿಳಿದಿದೆಯೇ? ದಟ್ಟಾರಣ್ಯದಲ್ಲಿ ಅವು ಹೆಜ್ಜೆಯೂರಿ ನಡೆದ ಜಾಗ ದಾರಿಯಾಗಿ ಮಾರ್ಪಾಡಾಗುತ್ತದೆ. ಅದೆಷ್ಟೋ ಪ್ರದೇಶಗಳಲ್ಲಿ ನೀರು ಹುಡುಕಲು ತಮ್ಮ ಸೊಂಡಿಲುಗಳ ಮೂಲಕ ನೆಲವನ್ನು ಅಗೆದು, ಅಂತರ್ಜಲದ ನೀರು ಉಕ್ಕುವಂತೆ ಮಾಡಿ ಸರೋವರ, ಕೊಳವನ್ನು ನಿರ್ಮಿಸಿವೆ. ನದಿಗಳ ಮೂಲಕ ನಡೆದು ಹೋಗಿ ಅವುಗಳ ಹರಿವಿಗೆ ದಾರಿ ಮಾಡಿಕೊಟ್ಟಿವೆ. ಪ್ರಾಚೀನ ಭಾರತದ ದೇಗುಲಗಳ ನಿರ್ಮಾತೃಗಳು ಈ ಆನೆಗಳು, ಇಷ್ಟೆಲ್ಲ ಮಾಡುವ ಅವು ಎಂಜಿನಿಯರ್​ಗಳಲ್ಲದೆ ಇನ್ನೇನು?’ ಎಂದು ವಿವರಿಸಿದ್ದಾರೆ.

ಆನೆಗಳು ಪರಿಸರ ವ್ಯವಸ್ಥೆಯ ಎಂಜಿನಿಯರ್​​ಗಳು ಎಂಬುದನ್ನು ವರ್ಲ್ಡ್​ ವೈಲ್ಡ್​ಲೈಫ್​ ಫಂಡ್​ ಕೂಡ ಹೇಳಿದೆ. ದಟ್ಟಾರಣ್ಯಗಳಲ್ಲಿ ಆನೆಗಳು ಮೊದಲು ನಡೆದು ಉಳಿದ ಪ್ರಾಣಿಗಳಿಗೆ ಹಾದಿ ನಿರ್ಮಿಸಿಕೊಡುತ್ತವೆ. ದೊಡ್ಡದೊಡ್ಡ ಮರಗಳನ್ನು, ಪೊದೆಗಳನ್ನು ಉರುಳಿಸಿ ದಾರಿ ಮಾಡುವ ಶಕ್ತಿ ಆನೆಗಳಿಗೆ ಅಲ್ಲದೆ, ಇನ್ಯಾವ ಪ್ರಾಣಿಗಳಿಗೂ ಇಲ್ಲ ಎಂದು ಹೇಳಿದೆ. ಇಲ್ಲಿ ನಾಡಿನಲ್ಲಿ ಅಭಿಯಂತರರು ಮಾಡುವ ಕೆಲಸವನ್ನು ಅಲ್ಲಿ ಕಾಡಿನಲ್ಲಿ ಆನೆಗಳು ಮಾಡುತ್ತವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ಇದನ್ನೂ ಓದಿ: Engineers Day | ನೀವು ನೆನಪಿನಲ್ಲಿಟ್ಟುಕೊಳ್ಳಲೇಬೇಕಾದ ವಿಶ್ವೇಶ್ವರಯ್ಯರ ಹತ್ತು ಹೇಳಿಕೆಗಳು ಇವು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ಹೆಂಡತಿಯನ್ನ ಥಳಿಸಿ ಫ್ಲೈ ಓವರ್‌ನಿಂದ ತಳ್ಳೋಕೆ ಯತ್ನಿಸಿದ ಪಾಪಿ ಗಂಡ; ಆಮೇಲೆ ಆಗಿದ್ದೇನು?

Viral Video: ನಡು ರಸ್ತೆಯಲ್ಲಿ ನಿಂತು ಹೆಂಡತಿ ಜೊತೆ ಜಗಳ ಮಾಡ್ತಿದ್ದ ವ್ಯಕ್ತಿ, ಇದ್ದಕ್ಕಿದ್ದಂತೆ ಆಕೆಯನ್ನು ಚೆನ್ನಾಗಿ ಥಳಿಸಿ ಫ್ಲೈ ಓವರ್‌ ನಿಂದ ಕೆಳಗೆ ಎಸೆಯಲು ಯತ್ನಿಸಿದ ಆಘಾತಕಾರಿ ಘಟನೆ ಚೆನ್ನೈ ನಲ್ಲಿ ನಡೆದಿದೆ.

VISTARANEWS.COM


on

Koo

ತಮಿಳುನಾಡು:ಕೆಲವೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಆಗುವ ವಿಡಿಯೋಗಳು ಆತಂಕಕ್ಕೀಡು ಮಾಡುತ್ತವೆ. ಅಂತಹದ್ದೇ ಮತ್ತೊಂದು ವಿಡಿಯೋ (Viral Video) ಇದೀಗ ಬಹಳ ಸದ್ದ ಮಾಡ್ತಿದೆ. ನಡು ರಸ್ತೆಯಲ್ಲಿ ನಿಂತು ಹೆಂಡತಿ ಜೊತೆ ಜಗಳ ಮಾಡ್ತಿದ್ದ ವ್ಯಕ್ತಿ, ಇದ್ದಕ್ಕಿದ್ದಂತೆ ಆಕೆಯನ್ನು ಚೆನ್ನಾಗಿ ಥಳಿಸಿ ಫ್ಲೈ ಓವರ್‌ (Flyover) ನಿಂದ ಕೆಳಗೆ ಎಸೆಯಲು ಯತ್ನಿಸಿದ ಆಘಾತಕಾರಿ ಘಟನೆ ಚೆನ್ನೈ(Chennai)ನಲ್ಲಿ ನಡೆದಿದೆ. ಕೊಯಂಬೆಡು ಸೇತುವೆ ಬಳಿ ಈ ದುರ್ಘಟನೆ ಸಂಭವಿಸಿದ್ದು, ರೋಶನ್‌ ಎಂಬಾತ ಎಲ್ಲರೆದುರು ತನ್ನ ಹೆಂಡತಿಯನ್ನು ಚೆನ್ನಾಗಿ ಥಳಿಸಿ, ಆಕೆಯನ್ನು ಎತ್ತಿ ಸೇತುವೆಯಿಂದ ಕೆಳಗೆ ಹಾಕಲು ಯತ್ನಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇನ್ನು ರೋಶನ್‌ನ ಈ ಕೃತ್ಯವನ್ನು ಗಮನಿಸಿದ ವ್ಯಕ್ತಿಯೊಬ್ಬರು ಈ ವಿಡಿಯೋ ಮಾಡಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ರೋಶನ್‌ನನ್ನು ಹಿಡಿಯುವ ಪ್ರಯತ್ನ ಮಾಡಿದ್ದರು. ಪೊಲೀಸರು ಬರುತ್ತಿರುವುದನ್ನು ಕಂಡೊಡನೇ ರೋಶನ್‌, ಹೆಂಡತಿಯನ್ನು ಬಲವಂವಾಗಿ ಬೈಕ್‌ನಲ್ಲಿ ಕೂರಿಸಿಕೊಂಡು ಸ್ಥಳದಿಂದ ಎಸ್ಕೇಪ್‌ ಆಗಿದ್ದಾನೆ

ಈ ಬಗ್ಗೆ ಎಕ್ಸ್‌ ನಲ್ಲಿ ಎಐಎಡಿಎಂಕೆ ಪಕ್ಷದ ಸದಸ್ಯ ಡಾ. ಕಾರ್ತಿಕ್‌ ಕುಪ್ಪನ್‌, ಯುವಕನೋರ್ವ ಚೆನ್ನೈನಲ್ಲಿ ಪತ್ನಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಅಲ್ಲದೇ ಫ್ಲೈ ಓವರ್‌ನಿಂದ ಆಕೆಯನ್ನು ತಳ್ಳಿ ಕೊಲೆಗೆ ಯತ್ನಿಸಿದ್ದಾನೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳತ್ತದೆಯೇ ಎಂದು ಪೋಸ್ಟ್‌ ಮಾಡಿ ವಿಡಿಯೋ ಶೇರ್‌ ಮಾಡಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಗ್ರೇಟರ್‌ ಚೆನ್ನೈ ಪೊಲೀಸರು ಆರೋಪಿಯನ್ನು ಅರೆಸ್ಟ್‌ ಮಾಡಿ ವಿರುದ್ಧ ಎಫ್‌ ಐಆರ್‌ ದಾಖಸಿದ್ದಾರೆ.

ಕೆಲವು ತಿಂಗಳ ಹಿಂದೆ ಉತ್ತರ ಪ್ರದೇಶದಲ್ಲೂ ಗಂಡ-ಹೆಂಡತಿ ಜಗಳವು ಮಾರುಕಟ್ಟೆವರೆಗೆ ತಲುಪಿತ್ತು. ಹೆಂಡತಿ ಮೇಲೆ ಕುಪಿತಗೊಂಡಿದ್ದ ಗಂಡನು ತುಂಬಿದ ಮಾರುಕಟ್ಟೆಯಲ್ಲಿ ಪತ್ನಿಗೆ ಸುಮಾರು 19 ಬಾರಿ ಕತ್ತರಿಯಿಂದ ಇರಿಯುವ ಮೂಲಕ ಕ್ರೌರ್ಯ ಮೆರೆದಿದ್ದ. ಈ ಭೀಕರ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭಾರಿ ವೈರಲ್‌ ಆಗಿದೆ. ಇನ್ನು ತುಂಬಿದ ಮಾರುಕಟ್ಟೆಯಲ್ಲಿ ಹೆಂಡತಿಗೆ ಇರಿದ ಪತಿ ಈಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.

ಇದನ್ನೂ ಓದಿ:Viral Video: ಐಲ್ಯಾಂಡ್‌ನಲ್ಲಿ ಬಾಲಿವುಡ್‌ನ ಮಸ್ತ್‌ ಗೆರುವಾ ಡ್ಯಾನ್ಸ್‌ ರಿಮೇಕ್‌ ಮಾಡಿದ ಬೆಡಗಿ! ಲೊಕೇಶನ್‌ ಸೂಪರ್‌

ಸುಮನ್‌ ನಿಶಾದ್‌ ಎಂಬ ಮಹಿಳೆಯು ಲಖನೌ ನಗರದ ಕುತುಬ್‌ಪುರ ಪ್ರದೇಶ ವ್ಯಾಪ್ತಿಯ ಲಂಬೆಕೇಶ್ವರ ಪಾರ್ಕ್‌ನಲ್ಲಿ ತರಕಾರಿ ಖರೀದಿಸಲು ತೆರಳಿದ್ದಳು. ಆಕೆ ತರಕಾರಿ ಖರೀದಿಸುತ್ತಿರುವಾಗಲೇ ಪತಿ ಬ್ರಿಜ್‌ಮೋಹನ್‌ ನಿಶಾದ್‌ ಎಂಬಾತನು ಬಂದಿದ್ದಾನೆ. ಪತ್ನಿಯನ್ನು ಕಾಣುತ್ತಲೇ ಬ್ರಿಜ್‌ಮೋಹನ್‌ ನಿಶಾದ್‌ ಕುಪಿತಗೊಂಡಿದ್ದಾನೆ. ಕೂಡಲೇ ಪತ್ನಿಗೆ ಚಾಕು ಇರಿದಿದ್ದಾನೆ. ಎರಡು ಚಾಕುಗಳನ್ನು ಹಿಡಿದುಕೊಂಡಿದ್ದ ದುರುಳನು ಸುಮಾರು 19 ಬಾರಿ ಚಾಕು ಇರಿದಿದ್ದಾನೆ. ಅಲ್ಲಿದ್ದ ಜನ ಇದನ್ನು ಕಂಡು ದಂಗಾಗಿದ್ದು, ಯಾರೂ ಮಹಿಳೆಯನ್ನು ರಕ್ಷಿಸಿಲ್ಲ ಎಂದು ತಿಳಿದುಬಂದಿದೆ. ಬ್ರಿಜ್‌ಮೋಹನ್‌ ನಿಶಾದ್‌, ಹೆಂಡತಿಯ ವಿಚಾರದಲ್ಲಿ ವಿಪರೀತ ಅನುಮಾನ ಪಡುತ್ತಿದ್ದ. ಪತ್ನಿಯ ಶೀಲ ಶಂಕಿಸಿ ಅವರ ಜತೆ ಜಗಳವಾಡುತ್ತಿದ್ದ. ಕೊನೆಗೆ ಇದೇ ಕಾರಣಕ್ಕೆ ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿತ್ತು.

Continue Reading

ದೇಶ

School Teacher: ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಶಿಕ್ಷಕಿ ಪುಂಡಾಟ; ನೆರೆಮನೆಯವರ ಮೇಲೂ ಹಲ್ಲೆ

School teacher: ಸರ್ಕಾರಿ ಶಾಲೆ ಶಿಕ್ಷಕಿಯೊಬ್ಬಳು ನೆರೆಮನೆಯವರ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಕಿಟಕಿ ಗ್ಲಾಸ್‌ ಒಡೆದಿರುವ ಘಟನೆ ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಈ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

VISTARANEWS.COM


on

Koo

ಉತ್ತರಪ್ರದೇಶ: ಸರ್ಕಾರಿ ಶಾಲೆ ಶಿಕ್ಷಕಿಯೊಬ್ಬಳು(School teacher) ನೆರೆಮನೆಯವರ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಕಿಟಕಿ ಗ್ಲಾಸ್‌ ಒಡೆದಿರುವ ಘಟನೆ ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಈ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ. ಪಾರುಲ್‌ ಶರ್ಮಾ (Parul Sharma) ಎಂಬ ಶಿಕ್ಷಕಿ ಬೆಳಗ್ಗೆ 3 ಗಂಟೆ ಸುಮಾರಿಗೆ ಪ್ರಿಯಾ ಗೋಯಲ್‌ ಎಂಬಾಕೆಯ ಮನೆಯ ಕಾಂಪೌಂಡ್‌ ಒಳಗೆ ನುಗ್ಗಿ ತಾನು ತಂದಿದ್ದ ಬ್ಯಾಗ್‌ನಿಂದ ಇಟ್ಟಿಗೆ, ಕಲ್ಲುಗಳಿಂದ ಕಾರಿನ ವಿಂಡೋ ಗ್ಲಾಸ್‌ (Window glass) ಜಖಂಗೊಳಿಸಿದ್ದಾಳೆ. ಆಕ್ರೋಶದಿಂದ ಕಾರಿನ ಮೇಲೆ ಕಲ್ಲು ಎತ್ತಿ ಹಾಕುತ್ತಿರುವುದನ್ನು ವೈರಲ್‌ ಆಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ. ಆಕೆ ಪಾರ್ಕಿಂಗ್‌ನಲ್ಲಿ ನಿಲ್ಲಿಸಲಾಗಿದ್ದ ಎಲ್ಲಾ ವಾಹನಗಳ ವಿಂಡೋ ಗ್ಲಾಸ್‌ಗಳನ್ನು ಪುಡಿಗಟ್ಟಿದ್ದಾಳೆ.

ಆಕೆಯ ಕೃತ್ಯ ಎಸಗುತ್ತಿದ್ದ ವೇಳೆ ಸದ್ದು ಕೇಳಿ ಎಚ್ಚರಗೊಂಡ ಪ್ರಿಯಾ ಗೋಯಲ್‌ ಹಾಗೂ ಆಕೆಯ ಕುಟುಂಬಸ್ಥರು ಪಾರುಲ್‌ಳನ್ನು ತಡೆಯಲು ಮುಂದಾಗಿದ್ದಾರೆ. ಆದರೂ ಅದನ್ನೂ ಲೆಕ್ಕಿಸದ ಪಾರುಲ್‌ ಪದೇ ಪದೇ ಕಲ್ಲಿನಿಂದ ಕಾರಿನ ಗ್ಲಾಸ್‌ ಪುಡಿ ಪುಡಿ ಮಾಡುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಮತ್ತೊಂದು ವಿಡಿಯೋ ಕ್ಲಿಪಿಂಗ್‌ನಲ್ಲಿ ಆಕೆಗೆ ತಾಯಿಯೂ ಜೊತೆಗಿರುವುದನ್ನು ಕಾಣಬಹುದಾಗಿದೆ. ಅಷ್ಟೇ ಅಲ್ಲದೇ ಪಾರುಲ್‌ ಮನೆಯ ಬಾಗಿಲು ಒಡೆಯಲು ಕೂಡ ಯತ್ನಿಸಿದ್ದಾಳೆ.

ಇದನ್ನೂ ಓದಿ: Lok Sabha election 2024: ದಿಲ್ಲಿಯಲ್ಲಿ ಆಪ್‌-ಕಾಂಗ್ರೆಸ್‌ ಮೈತ್ರಿಯಲ್ಲಿ ಒಡಕು; ರಾಜ್ಯಾಧ್ಯಕ್ಷ ರಾಜೀನಾಮೆ

ಇದೀಗ ಪಾರುಲ್‌ ಕೃತ್ಯದ ವಿರುದ್ಧ ಪ್ರಿಯಾ ಗೋಯಲ್‌ ಪೊಲೀಸರಿಗೆ ದೂರು ನೀಡಿದ್ದು, ಕಾರಿನ ಗ್ಲಾಸ್‌ ಪುಡಿ ಮಾಡಿರುವ ಪಾರುಲ್‌ ಮನೆಯ ಗೇಟ್‌ ಲಾಕ್‌ ಒಡೆದು ತಮ್ಮ ಮೂರು ವರ್ಷದ ಮಗು ಸೇರಿದಂತೆ ಇತರೆ ಕುಟುಂಬಸ್ಥರ ಮೇಲೆ ದಾಳಿ ನಡೆಸಿದ್ದಾಳೆ. ಘಟನೆಯಲ್ಲಿ ಮಗು ಗಾಯಗೊಂಡಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಘಟನೆಗೆ ಸೂಕ್ತ ಕಾರಣ ಏನೆಂಬುದರ ಬಗ್ಗೆ ತನಿಖೆ ನಡೆಸುತ್ತಿದೆ. ಮೇಲ್ನೋಟಕ್ಕೆ ಎರಡೂ ಕುಟುಂಬಗಳು ಹಲವು ದಿನಗಳಿಂದ ವೈಷಮ್ಯ ಹೊಂದಿದ್ದು, ಅದರ ಪರಿಣಾಮವಾಗಿಯೇ ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಹಿರಿಯ ಪೊಲೀಸ್‌ ಅಧಿಕಾರಿ ಶಂಕರ್‌ ಪ್ರಸಾದ್‌ ಮಾಹಿತಿ ಪ್ರಕಾರ ಸದ್ಯ ಬುಲಂದ್‌ಶೆಹರ್‌ನಲ್ಲಿ ಈ ವಿಡಿಯೋ ಬಹಳ ವೈರಲ್‌ ಆಗುತ್ತಿದ್ದು, ಪಾರುಲ್‌ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಕೆ ವಿರುದ್ಧ ಅತಿಕ್ರಮಣ, ಆಸ್ತಿ-ಪಾಸ್ತಿ ನಾಶ ಮತ್ತು ಹಲ್ಲೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚೆಗೆ ಲಕ್ನೋದ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯೊಬ್ಬರು ಶಾಲೆಯಲ್ಲೇ ಫೇಶಿಯಲ್‌ ಮಾಡಿಕೊಳ್ಳುತ್ತಿದ್ದ ವಿಡಿಯೋ ಭಾರೀ ವೈರಲ್‌ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗ್ತಿದ್ದಂತೆ ವಿದ್ಯಾರ್ಥಿಗಳು ಪೋಷಕರು, ಜನಸಾಮಾನ್ಯರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ವಿದ್ಯಾರ್ಥಿಗಳಿಗೆ ಊಟ ತಯಾರಿಸುವ ಕೋಣೆಯಲ್ಲಿ ಫೇಶಿಯಲ್ ಮಾಡಿಕೊಳ್ಳುತ್ತಿರುವುದನ್ನು ಕಂಡು ಸಹಾಯಕ ಶಿಕ್ಷಕಿ ವಿಡಿಯೊ ಮಾಡಿದ್ದರು. ಇದರಿಂದ ಕೋಪಗೊಂಡ ಮುಖ್ಯ ಶಿಕ್ಷಕಿ ಅವರನ್ನು ಹಿಗ್ಗಾಮುಗ್ಗಾ  ಥಳಿಸಿ, ಆಕೆಯ ಕೈಯನ್ನು ಕಚ್ಚಿ ಗಾಯಗೊಳಿಸಿದ್ದರು.

Continue Reading

ವೈರಲ್ ನ್ಯೂಸ್

Viral Video: ವಧುವಿಗೆ ಹೂಮಾಲೆ ಹಾಕಲು ವರ ಮಾಡಿರುವ ಕಿತಾಪತಿ ಏನು ನೋಡಿ!

Viral Video: ಮದುವೆ ಸಮಾರಂಭಗಳಲ್ಲಿ ಒಂದಲ್ಲ ಒಂದು ಎಡವಟ್ಟು ನಡೆದೇ ನಡೆಯುತ್ತೆ. ಇದರಲ್ಲಿ ಕೆಲವು ಗಂಭೀರ ರೂಪ ತಾಳಿದರೆ, ಇನ್ನು ಕೆಲವು ಎಲ್ಲರ ನಗೆಪಾಟಲಿಗೆ ಗುರಿಯಾಗುತ್ತದೆ. ಇಲ್ಲಿ ಸಿಕ್ಕಿರುವ ವಿಡಿಯೋವೊಂದು ಎಲ್ಲರೂ ನಗುವಂತೆ ಮಾಡಿದೆ.

VISTARANEWS.COM


on

By

Viral Video
Koo

ಮದುವೆ (wedding) ಮಂಟಪ ಸುಂದರವಾಗಿ ಅಲಂಕಾರಗೊಂಡಿತ್ತು. ವಧು ವರರು ಇಬ್ಬರೂ ವೇದಿಕೆಯಲ್ಲಿ ನಿಂತು ಒಂದೊಂದೇ ಶಾಸ್ತ್ರಗಳನ್ನು ಮಾಡುತ್ತಿದ್ದರು. ಇನ್ನೇನು ಹೂವಿನ ಮಾಲೆ (flower garland) ವಿನಿಮಯ ಮಾಡಿಕೊಳ್ಳಬೇಕಿತ್ತು. ವರನು (groom) ವಧುವಿಗೆ (bride) ಹೂವಿನ ಮಾಲೆ ಹಾಕಲು ಅವರಿಗೆ ಕುಳಿತು ಕೊಳ್ಳಲು ಇಟ್ಟಿದ್ದ ಸಿಂಹಾಸನದಿಂದ ಜಿಗಿದಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, ಎಲ್ಲರೂ ನಗುವಂತೆ ಮಾಡಿದೆ.

ಹಿಂದೂ ಸಂಪ್ರದಾಯದ ಮದುವೆಯಲ್ಲಿ ಹೂವಿನ ಮಾಲೆಯನ್ನು ಬದಲಾಯಿಸಿಕೊಳ್ಳುವ ಶಾಸ್ತ್ರವಿದೆ. ಈ ಸಂದರ್ಭದಲ್ಲಿ ವಧು ವರರು ಇಬ್ಬರಿಗೂ ಸಾಕಷ್ಟು ಸವಾಲುಗಳನ್ನು ಹತ್ತಿರದ ಸಂಬಂಧಿ, ಸ್ನೇಹಿತರು ತಂದೊಡ್ಡುತ್ತಾರೆ. ಅಂತೆಯೇ ಇಲ್ಲಿ ವಧು ಮತ್ತು ವರರು ಹೂವಿನ ಹಾರಗಳನ್ನು ವಿನಿಮಯ ಮಾಡಿಕೊಳ್ಳುವಾಗ ವಧುವಿನ ಕುಟುಂಬದವರು ವಧುವನ್ನು ಎತ್ತಿ ಹಿಡಿದು ವರನ ಮುಂದೆ ಸವಾಲು ಹಾಕಿದರು.

ಹಲವು ಬಾರಿ ವರ ಮಾಲೆ ಹಾಕಲು ಪ್ರಯತ್ನಿಸುತ್ತಾನೆ. ಆದರೆ ವಿಫಲನಾಗುತ್ತಾನೆ. ಕೊನೆಗೂ ವರನು ತನ್ನ ವಧುವನ್ನು ಗೆಲ್ಲುವ ಮಾರ್ಗವನ್ನು ಕಂಡುಕೊಂಡಿದ್ದಾನೆ. ಇದರ ವಿಡಿಯೋ ಎಕ್ಸ್ ನಲ್ಲಿ ಭಾರೀ ವೈರಲ್ ಆಗಿದ್ದು, ಇದಕ್ಕೆ ಸಾಕಷ್ಟು ಮಂದಿ ನೆಟ್ಟಿಗರು ಕಾಮೆಂಟ್ ಕೂಡ ಮಾಡಿದ್ದಾರೆ.

ಇದನ್ನೂ ಓದಿ: Viral News: ಸೈಕಲ್‌ ಸವಾರನಿಗೆ ಡಿಕ್ಕಿ ಹೊಡೆದು 2 ಕಿ.ಮೀ. ಎಳೆದೊಯ್ದ ಪಿಕ್‌ಅಪ್‌; ಶಾಕಿಂಗ್‌ ವಿಡಿಯೊ ಇಲ್ಲಿದೆ

ಏನಿದೆ ವಿಡಿಯೋದಲ್ಲಿ?

ಈ ವಿಡಿಯೋದಲ್ಲಿ ಸೆರೆಯಾಗಿರುವಂತೆ ವಧು ಈಗಾಗಲೇ ತನ್ನ ಗಂಡನ ಕುತ್ತಿಗೆಗೆ ಹೂವಿನ ಹಾರವನ್ನು ಹಾಕಿದ್ದಳು. ಈಗ ವರನ ಸರದಿ. ವಧುವಿನ ಸಂಬಂಧಿಗಳು ಅವಳನ್ನು ಎತ್ತಿ ಹಿಡಿದು ವರನಿಗೆ ಹೂಮಾಲೆ ಹಾಕುವ ಸವಾಲು ಹಾಕುತ್ತಾರೆ.


ವರನು ಮದುವೆಯ ಸಿಂಹಾಸನದ ಮೇಲೇರಿ ಜಿಗಿದ ಯಶಸ್ವಿಯಾಗಿ ವಧುವಿನ ಕುತ್ತಿಗೆಗೆ ಹಾರವನ್ನು ಹಾಕಿದನು. ವಧುವಿನ ಜೊತೆಗೆ ಸಂಬಂಧಿಕರು ತಮ್ಮ ಸಮತೋಲನವನ್ನು ಕಳೆದುಕೊಳ್ಳುತ್ತಾರೆ. ಪರಿಣಾಮವಾಗಿ ಎಲ್ಲರೂ ವೇದಿಕೆಯ ಮೇಲೆ ಬಿದ್ದರು. ಕೊನೆಯಲ್ಲಿ, ವರನು ಹೆಮ್ಮೆಯಿಂದ ನಿಂತಿರುವಾಗ ವಧು ನಕ್ಕಳು.

ಸರಿತಾ ಸರವಾಗ್ ಎಂಬವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ನೆಟ್ಟಿಗರು ಕಾಮೆಂಟ್ ಕೂಡ ಮಾಡಿದ್ದು, ಸಾಕಷ್ಟು ಮಂದಿ ತಾವು ನೋಡಿರುವ, ಅನುಭವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಕಳೆದ ವರ್ಷ ಇದೇ ರೀತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಹೂವಿನ ಮಾಲೆ ಹಾಕುವಾಗ ವರನ ತಂಡದ ವ್ಯಕ್ತಿಯೊಬ್ಬರು ಅವನನ್ನು ಮೇಲೆತ್ತುತ್ತಾನೆ. ಆಗ ಆತ ವಧುವಿನ ಮೇಲೆ ಬೀಳುವುದರಲ್ಲಿದ್ದ. ಆದರೆ ವಧುವಿನ ಸಮಯಪ್ರಜ್ಞೆಯಿಂದ ಘಟನೆಯು ದುರಂತ ತಿರುವು ಪಡೆಯುವುದು ತಪ್ಪಿತ್ತು.

Continue Reading

ಪ್ರಮುಖ ಸುದ್ದಿ

Girl Saved Mother: ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಯ ಜೀವ ಕಾಪಾಡಿತು ಪುತ್ರಿ ಶಾಲೆಯಲ್ಲಿ ಕಲಿತ ಪಾಠ!

ಅಲ್ಲಿನ ಅಭಯಂ 181 ಸಹಾಯವಾಣಿ ಅಧಿಕಾರಿಗಳ ಪ್ರಕಾರ, ಮಣಿಕಟ್ಟು ಸೀಳಿ ಬಿದ್ದಿರುವ ನಂತರ ತಾಯಿಗೆ ತೀವ್ರ ರಕ್ತಸ್ರಾವವಾಗುತ್ತಿದೆ ಎಂದು ಬಾಲಕಿಯೊಬ್ಬಳು ಕರೆ ಮಾಡಿದ್ದಾಳೆ. ತಕ್ಷಣ ಅವರ ಅಲ್ಲಿಗೆ ಹೋಗಿದ್ದಾಗ ಮಹಿಳೆ ಚಿಂತಾಜನಕ ಸ್ಥಿತಿಯಲ್ಲಿ ಬಿದ್ದಿದ್ದರು. ಬಳಿಕ ಅವರು ಮಹಿಳೆಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸಿದ್ದಾರೆ.

VISTARANEWS.COM


on

girl Saved Mother
Koo

ಅಹಮದಾಬಾದ್​​: ಅಪ್ಪನ ದೌರ್ಜನ್ಯಕ್ಕೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ತನ್ನ ತಾಯಿಯನ್ನು ಏಳು ವರ್ಷದ ಬಾಲಕಿಯೊಬ್ಬಳು ಸಮಯ ಪ್ರಜ್ಞೆ ಹಾಗೂ ಚಾತುರ್ಯದ (Girl Saved Mother ) ಮೂಲಕ ಬದುಕುಳಿಸಿದ ಘಟನೆ ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದಿದೆ. ಅಂದ ಹಾಗೆ ಬಾಲಕಿಗೆ ನೆರವಾಗಿದ್ದು ಆಕೆ ತರಗತಿಯಲ್ಲಿ ಕಲಿತ ಪಾಠ. ಅಂದರೆ ತುರ್ತು ಪರಿಸ್ಥಿತಿಯಲ್ಲಿ ಸಹಾಯವಾಣಿಗೆ ಕರೆ ಮಾಡಬೇಕು ಎಂಬ ಶಿಕ್ಷಕರ ಹಿತನುಡಿ. ಹಾಗೆಯೇ ಕೈಯ ರಕ್ತನಾಳ ಕತ್ತರಿಸಿಕೊಂಡು ಅಸ್ವಸ್ಥಗೊಂಡು ಬಿದ್ದಿದ್ದ ತಾಯಿಯನ್ನು ನೋಡಿಯೂ ಗಾಬರಿಯಾಗದ ಆಕೆ ಸಹಾಯವಾಣಿಗೆ ಕರೆ ಮಾಡಿ ಆಂಬ್ಯುಲೆನ್ಸ್ ಕರೆಸಿ ಪ್ರಾಣ ಉಳಿಸಿದ್ದಾಳೆ.

ಕಳೆದ ಗುರುವಾರ ರಾತ್ರಿ ಘಟನೆ ನಡೆದಿದೆ ಎಂದು ಗುಜರಾತ್​ನ ಅಭಯಂ 181 ಸಹಾಯವಾಣಿ ಅಧಿಕಾರಿಗಳು ಹೇಳಿದ್ದಾರೆ. ಮಣಿಕಟ್ಟು ಸೀಳಿ ಬಿದ್ದಿರುವ ತಾಯಿಗೆ ತೀವ್ರ ರಕ್ತಸ್ರಾವವಾಗುತ್ತಿದೆ ಎಂದು ಬಾಲಕಿಯೊಬ್ಬಳು ಕರೆ ಅವರಿಗೆ ಕರೆ ಮಾಡಿದ್ದರು ತಕ್ಷಣ ಅವರ ಅಲ್ಲಿಗೆ ಹೋಗಿದ್ದಾಗ ಮಹಿಳೆ ಚಿಂತಾಜನಕ ಸ್ಥಿತಿಯಲ್ಲಿ ಬಿದ್ದಿದ್ದರು. ಬಳಿಕ ಅವರು ಮಹಿಳೆಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸಿದ್ದಾರೆ.

ಆತ್ಮಹತ್ಯೆ ಮಾಡಲು ಮುಂದಾಗಿರುವ ಮಹಿಳೆಯ ಗಂಡ ಅಪರಾಧವೊಂದರಲ್ಲಿ ಜೈಲು ಸೇರಿದ್ದ. ಅಲ್ಲಿಂದ ಬಿಡುಗಡೆಯಾಗಿ ಬಂದ ಬಳಿಕವೂ ಸಣ್ಣ ವಿಷಯಗಳಿಗೆ ಜಗಳವಾಡಲು ಪ್ರಾರಂಭಿಸಿದ್ದ. ಆಗಾಗ್ಗೆ ನಡೆಯುವ ಜಗಳಗಳಿಂದ ಬೇಸತ್ತ ಮಹಿಳೆ ತನ್ನ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದಳು. ಪುತ್ರಿಯ ಸಮಯೋಚಿತ ಕರೆಯಿಂದ ಅವರೀಗ ಬದುಕಿದ್ದರೆ. ಶಾಲೆಯಲ್ಲಿ ಪಡೆದ ತರಬೇತಿಯನ್ನು ನೆನಪು ಮಾಡಿಕೊಂಡ ಬಾಲಕಿ ನಮ್ಮ ಸಹಾಯವಾಣಿ ಮತ್ತು 108 ಆಂಬ್ಯುಲೆನ್ಸ್ ಸೇವೆಗಳ ತುರ್ತು ಸಂಖ್ಯೆಗಳನ್ನು ನೆನಪಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಲಿಬಿಲಿಗೊಳ್ಳದ ಬಾಲಕಿ

ಸಾಮಾನ್ಯವಾಗಿ ಸಣ್ಣ ಮಕ್ಕಳು ಕಠಿಣ ಪರಿಸ್ಥಿತಿಯಲ್ಲಿ ಹೆಚ್ಚು ಗಲಿಬಿಲಿಗೆ ಒಳಗಾಗುತ್ತಾರೆ. ಅವರಿಗೆ ಮುಂದೇನು ಮಾಡಬೇಕು ಎಂಬ ಯೋಚನೆಯೇ ಇರುವುದಿಲ್ಲ. ಅಲ್ಲದೆ ಪರಿಸ್ಥಿತಿಯನ್ನು ನಿಯಂತ್ರಣ ಮಾಡಲು ಸಾಧ್ಯವಾಗದೇ ಜೋರಾಗಿ ಅಳುವುದಕ್ಕೆ ಆರಂಭಿಸುತ್ತಾರೆ. ಆದರೆ ಈ ಏಳು ವರ್ಷದ ಬಾಲಕಿ ಆ ರೀತಿ ಮಾಡಿಲ್ಲ. ತಾಯಿ ರಕ್ತ ಸಿಕ್ತ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿಯೂ ತಕ್ಷಣವೇ ಸಹಾಯವಾಣಿಗೆ ಕರೆ ಮಾಡಿದ್ದಾಳೆ. ಆಕೆಯ ಕರೆಯಿಂದಾಗಿ ಜೀವವೊಂದು ಉಳಿದಿದೆ.

ಬದುಕಿನ ಪಾಠ ಅಗತ್ಯ

ಆಧುನಿಕ ಜಗತ್ತಿನಲ್ಲಿ ಜನರಿಗೆ ತುರ್ತು ಪರಿಸ್ಥಿತಿಗಳು ಹೆಚ್ಚಾಗಿ ಎದುರಾಗುತ್ತವೆ. ಆದರೆ, ಬಹುತೇಕ ಸಂದರ್ಭದಲ್ಲಿ ಅವುಗಳನ್ನು ನಿರ್ವಹಿಸಲು ಸಾಧ್ಯವಾಗದೇ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತವೆ. ಹೀಗಾಗಿ ತುರ್ತು ಸಂದರ್ಭದಲ್ಲಿ ಪ್ರಾಣ ಉಳಿಸಲು ಅಥವಾ ಆ ಕ್ಷಣದಿಂದ ಬಚಾವಾಗಲು ಏನು ಮಾಡಬೇಕು ಎಂಬ ತರಬೇತಿ ಅಗತ್ಯವಾಗಿದೆ. ಅದರಲ್ಲೂ ಶಾಲಾ ಮಕ್ಕಳಿಗೆ ಈ ನಿಟ್ಟಿನಲ್ಲಿ ತರಬೇತಿ ಕಡ್ಡಾಯ.

ಇದನ್ನೂ ಓದಿ: Usman Ghani: ಪ್ರಧಾನಿ ಮೋದಿಯನ್ನು ಟೀಕಿಸಿದ್ದ ಬಿಜೆಪಿ ಉಚ್ಛಾಟಿತ ನಾಯಕ ಅರೆಸ್ಟ್‌

ಜನಜಂಗುಳಿ ತುಂಬಿರುವ ಪೇಟೆ ಮತ್ತು ಏಕಾಂಗಿಯಾಗಿರುವ ವೇಳೆ ನಾನಾ ಆತಂಕಗಳನ್ನು ಇಂದಿನ ಮಕ್ಕಳು ಎದುರಿಸುತ್ತಾರೆ. ಆದರೆ, ಅದನ್ನು ನಿಭಾಯಿಸಲು ಸಾಧ್ಯವಾಗದೇ ಮಕ್ಕಳು ದುರ್ಘಟನೆಗಳ ಬಲಿಪಶು ಆಗುತ್ತಾರೆ. ಹೀಗಾಗಿ ಶಾಲಾ ಹಂತದಲ್ಲಿಯೇ ಇಂಥ ಸಂದರ್ಭಗಳನ್ನು ನಿಭಾಯಿಸುವ ತಂತ್ರಗಳನ್ನು ಹೇಳಿಕೊಡಬೇಕಾಗುತ್ತದೆ.

ಶಾಲಾ ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಈಗ ಲೈಂಗಿಕ ದೌರ್ಜನ್ಯದ ವಿರುದ್ಧ ಹೇಗೆ ಹೋರಾಡಬೇಕು ಎಂಬ ಪಾಠವನ್ನು ಹೇಳಿಕೊಡಲಾಗುತ್ತದೆ. ಅದು ಬಹುತೇಕ ಸಾಫಲ್ಯ ಕಾಣುತ್ತಿದೆ. ಆದರೆ, ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಕೆಲವು ತಂತ್ರಗಳನ್ನು ಕೆಲವೊಂದು ಶಾಲೆಗಳಲ್ಲಿ ಮಾತ್ರ ಕಲಿಸಲಾಗುತ್ತದೆ. ಇಲ್ಲಿ ಗಂಡು ಹಾಗೂ ಹೆಣ್ಣು ಎಂಬ ಭೇದವಿಲ್ಲದೇ ಎಲ್ಲ ಮಕ್ಕಳಿಗೂ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಪಾಠ ಹೇಳಿಕೊಡಬೇಕಾದ ಅಗತ್ಯವಿದೆ.

ಮೇಲಿನ ಪ್ರಕರಣದಲ್ಲಿ ಬಾಲಕಿಗೆ ಸಹಾಯವಾಣಿಗೆ ಕರೆ ಮಾಡಬೇಕು ಎಂದು ಶಾಲೆಯಲ್ಲಿ ಹೇಳಿಕೊಟ್ಟಿದ್ದ ಕಾರಣ ಆಕೆಯ ತಾಯಿಯ ಪ್ರಾಣ ಉಳಿದಿದೆ. ಒಂದು ವೇಳೆ ಆಕೆ ಅಂಥದ್ದೊಂದು ಪರಿಸ್ಥಿತಿಯನ್ನು ಎದುರಿಸಲು ಸಿದ್ಧಗೊಳ್ಳದೇ ಹೋಗಿದ್ದರೆ ತಬ್ಬಲಿಯಾಗಬೇಕಾಗಿತ್ತು.

Continue Reading
Advertisement
Mohan Bhagwat
ದೇಶ2 mins ago

Mohan Bhagwat: ಆರ್‌ಎಸ್‌ಎಸ್‌ ಮೀಸಲಾತಿ ಪರ; ಮೋಹನ್‌ ಭಾಗವತ್‌ ದಿಢೀರನೆ ಹೀಗೆ ಹೇಳಿದ್ದೇಕೆ?

Congress instigates bombers We are crushing traitors through NIA PM Narendra Modi
Lok Sabha Election 20246 mins ago

PM Narendra Modi: ಬಾಂಬರ್‌ಗಳಿಗೆ ಕಾಂಗ್ರೆಸ್ ಕುಮ್ಮಕ್ಕು; ನಾವು NIA ಮೂಲಕ ದೇಶದ್ರೋಹಿಗಳನ್ನು ಬಗ್ಗುಬಡಿಯುತ್ತಿದ್ದೇವೆ ಎಂದ ಮೋದಿ

Election Commission
ದೇಶ6 mins ago

Election Commission: ಎಎಪಿಯ ಪ್ರಚಾರ ಗೀತೆಗೆ ಬದಲಾವಣೆ ಸೂಚಿಸಿದ ಚುನಾವಣಾ ಆಯೋಗ; ಕಾರಣವೇನು?

T20 World Cup 2024
ಕ್ರೀಡೆ9 mins ago

T20 World Cup 2024: ಸಭೆ ನಡೆಸಿದ ರೋಹಿತ್​, ಅಗರ್ಕರ್​; ಈ ಆಟಗಾರನಿಗೆ ಅವಕಾಶವಿಲ್ಲ!

Foods rich in vitamin D
ದೇಶ15 mins ago

Vitamin D: ಎಚ್ಚರ..ಎಚ್ಚರ! ಕ್ಯಾನ್ಸರ್‌ಗೂ ಕಾರಣವಾಗುತ್ತೆ ವಿಟಮಿನ್‌ ಡಿ ಕೊರತೆ

TCS World 10K
ಕ್ರೀಡೆ23 mins ago

TCS World 10K : ಲಿಲಿಯನ್ ಕಸಾಯಿತ್, ಪೀಟರ್ ಮ್ವಾನಿಕಿ ಚಾಂಪಿಯನ್​

IPL 2024 Points Table
ಕ್ರೀಡೆ40 mins ago

IPL 2024 Points Table: ಲಕ್ನೋ, ಮುಂಬೈ ಸೋಲಿನ ಬಳಿಕ ಅಂಕಪಟ್ಟಿ ಹೇಗಿದೆ?

PM Narendra Modi proposing arecanut millets and fisheries
Lok Sabha Election 202449 mins ago

PM Narendra Modi: ಅಡಿಕೆ, ಸಿರಿಧಾನ್ಯ, ಮೀನುಗಾರಿಕೆ ಪ್ರಸ್ತಾಪಿಸಿ ಕೃಷಿಕರ ಮನ ಗೆದ್ದ ಮೋದಿ

PM Narendra Modi in Sirsi
Lok Sabha Election 20241 hour ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

ವೈರಲ್ ನ್ಯೂಸ್2 hours ago

Viral Video: ಹೆಂಡತಿಯನ್ನ ಥಳಿಸಿ ಫ್ಲೈ ಓವರ್‌ನಿಂದ ತಳ್ಳೋಕೆ ಯತ್ನಿಸಿದ ಪಾಪಿ ಗಂಡ; ಆಮೇಲೆ ಆಗಿದ್ದೇನು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

PM Narendra Modi in Sirsi
Lok Sabha Election 20241 hour ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20243 hours ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20243 hours ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ6 hours ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ11 hours ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 202423 hours ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ1 day ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ2 days ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20242 days ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

ಟ್ರೆಂಡಿಂಗ್‌