Viral News | 90 ರೂ. ಬೆಲೆಯ ಬರ್ಗರ್​​ ಪಡೆಯಲು 10 ರೂ.ಕೊಟ್ಟ ಬಾಲಕಿ; ಅಂಗಡಿಯಾತ ಮಾಡಿದ್ದೇನು? - Vistara News

ವೈರಲ್ ನ್ಯೂಸ್

Viral News | 90 ರೂ. ಬೆಲೆಯ ಬರ್ಗರ್​​ ಪಡೆಯಲು 10 ರೂ.ಕೊಟ್ಟ ಬಾಲಕಿ; ಅಂಗಡಿಯಾತ ಮಾಡಿದ್ದೇನು?

ಬರಿಗಾಲಿನಲ್ಲಿಯೇ ನಡೆದು ಬರ್ಗರ್​ ಅಂಗಡಿಗೆ ಹೋದ ಬಾಲಕಿ ಕೈಯಲ್ಲಿ 10 ರೂಪಾಯಿ ಇತ್ತು. ಆದರೆ ಬರ್ಗರ್​ ಬೆಲೆ 90 ರೂಪಾಯಿ. ಹೀಗಿರುವಾಗ ಆಕೆಗೆ ಬರ್ಗರ್​ ಸಿಕ್ಕಿತಾ? ಅಂಗಡಿಯವನು ಏನು ಮಾಡಿದ?

VISTARANEWS.COM


on

Little girl orders Burger with Only 10 Rs
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನೊಯ್ಡಾದ ಬೊಟಾನಿಕಲ್​ ಗಾರ್ಡನ್​ ಮೆಟ್ರೋ ಸ್ಟೇಶನ್​ ಬಳಿ ಇರುವ ಒಂದು ‘ಬರ್ಗರ್​ ಕಿಂಗ್’ ಅಂಗಡಿಗೆ ಹೋದ ಪುಟ್ಟ ಹುಡುಗಿಯೊಬ್ಬಳು ಒಂದು ಬರ್ಗರ್ ಕೊಡುವಂತೆ ಅಂಗಡಿಯವರ ಬಳಿ ಕೇಳಿದರು. ಅಂಗಿ ಮತ್ತು ಪುಟ್ಟ ಚಡ್ಡಿ ಹಾಕಿದ್ದ ಆಕೆಯ ಕಾಲಿನಲ್ಲಿ ಚಪ್ಪಲಿ ಇರಲಿಲ್ಲ. ಎಡಗೈಯಲ್ಲಿ ಇರುವ 10 ರೂಪಾಯಿ ಬಿಟ್ಟರೆ, ಅವಳಲ್ಲಿ ಬೇರೆ ಹಣ ಇರಲಿಲ್ಲ. ಆ 10 ರೂಪಾಯಿಗೇ ಬರ್ಗರ್​ ಕೊಡುವಂತೆ ಕೇಳಿದ್ದಳು. ಆದರೆ ಆ ಅಂಗಡಿಯಲ್ಲಿ ಒಂದು ಬರ್ಗರ್​ ಬೆಲೆ 90 ರೂಪಾಯಿ. ಪುಟ್ಟ ಬಾಲಕಿಯ ಬಳಿ ಬರ್ಗರ್​ ಖರೀದಿಗೆ ಇನ್ನೂ 80 ರೂಪಾಯಿ ಕಡಿಮೆ ಬೀಳುತ್ತಿತ್ತು.

ಅಂಗಡಿಯವರು ಏನು ಮಾಡಿರಬಹುದು?..ಹೋಗಲಿ ಚಿಕ್ಕ ಮಗು ಎಂದು 10 ರೂ.ಗೇ ಬರ್ಗರ್​ ಕೊಟ್ಟಿರಬಹುದಾ ಅಥವಾ ಇಷ್ಟು ಹಣಕ್ಕೆ ಬರ್ಗರ್​ ಕೊಡಲು ಸಾಧ್ಯವಿಲ್ಲ ಹೋಗು ಎಂದು ಹುಡುಗಿಯನ್ನು ವಾಪಸ್​ ಕಳಿಸಿರಬಹುದಾ?
ಇಲ್ಲ ಎರಡೂ ಕೆಲಸವನ್ನೂ ಅಂಗಡಿಯಾತ ಮಾಡಲಿಲ್ಲ. ಅಲ್ಲಿದ್ದವನು ಹುಡುಗಿಯ ಕೈಯಿಂದ 10 ರೂಪಾಯಿ ತೆಗೆದುಕೊಂಡು, ಉಳಿದ 80 ರೂ.ಗಳನ್ನು ತನ್ನ ಜೇಬಿನಿಂದ ತೆಗೆದು ಸೇರಿಸಿ, ಒಟ್ಟು 90 ರೂ.ನ್ನು ಅಂಗಡಿಯ ಕ್ಯಾಶಿಯರ್​ ಬಳಿಯ ಡ್ರಾಯರ್​ಗೆ ಹಾಕಿ, ಹುಡುಗಿಗೆ ಒಂದು ರುಚಿಯಾದ ಬರ್ಗರ್​ ಕೊಟ್ಟು ಕಳಿಸಿದ್ದಾನೆ. ಈ ವಿಚಾರವನ್ನು ಆದಿತ್ಯ ಕುಮಾರ್​ ಎಂಬುವರು ತಮ್ಮ ಟ್ವಿಟರ್​ ಅಕೌಂಟ್​​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಬರಿಗಾಲಿನಲ್ಲಿ ನಿಂತು, 10 ರೂಪಾಯಿ ಕೊಟ್ಟು ಬರ್ಗರ್​ ಕೇಳಿದ ಹುಡುಗಿಯ ಫೋಟೋವನ್ನೂ ಅವರು ಹಂಚಿಕೊಂಡಿದ್ದಾರೆ.

ವೈಯಕ್ತಿಕವಾಗಿ ಹಣ ಹಾಕಿ ಬಾಲಕಿಯ ಆಸೆ ನೆರವೇರಿಸಿದ ಬರ್ಗರ್ ಕಿಂಗ್​ ಔಟ್​ಲೆಟ್​​ನ ಯುವಕನ ಹೆಸರು ಧೀರಜ್​ ಕುಮಾರ್. ಆತ ಮಾಡಿದ ಕೆಲಸ ತಿಳಿದ ನಂತರ ಅವರನ್ನು ಬರ್ಗರ್​ ಕಿಂಗ್​ ಇಂಡಿಯಾದಿಂದ ಸನ್ಮಾನಿಸಲಾಗಿದೆ. ಟ್ವೀಟ್ ಮಾಡಿರುವ ಬರ್ಗರ್​ ಕಿಂಗ್​ ಇಂಡಿಯಾ ‘ಅಕ್ಟೋಬರ್​ 16ರಂದು ವಿಶ್ವ ಆಹಾರ ದಿನ ಇತ್ತು. ಅದೇ ಸಮಯದಲ್ಲಿಯೇ ನಮ್ಮ ಸಿಬ್ಬಂದಿ ಧೀರಜ್​ ಕುಮಾರ್ ತೋರಿದ ವರ್ತನೆ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಆ ಹುಡುಗಿ ನಮ್ಮ ಅಂಗಡಿಗೆ ಬಂದ ಒಬ್ಬಳು ವಿಶೇಷ ಅತಿಥಿ. ಆಕೆಯ ಬಳಿ ಇದ್ದಿದ್ದು ಕೇವಲ 10 ರೂಪಾಯಿ. ಆದರೆ ಧೀರಜ್​ ತಮ್ಮ ಹಣದಿಂದಲೇ ಆಕೆಗೆ ಬರ್ಗರ್​ ಸಿಗುವಂತೆ ಮಾಡಿ, ನಿರಾಸೆ ಆಗುವುದನ್ನು ತಪ್ಪಿಸಿದರು. ಅವರ ಈ ಕಾರ್ಯ ಬರ್ಗರ್ ಕಿಂಗ್​​ನ ಉತ್ತರ ವಿಭಾಗದ ಮುಖ್ಯಸ್ಥ ದೀಪಕ್​ ಯಾದವ್​ ಅವರಿಗೂ ಖುಷಿ ಕೊಟ್ಟಿದೆ. ಅವರೇ ಖುದ್ದಾಗಿ ಬಂದು ಧೀರಜ್​​ರನ್ನು ಸನ್ಮಾನಿಸಿದ್ದಾರೆ’ ಎಂದು ಬರ್ಗರ್​ ಕಿಂಗ್ ಟ್ವೀಟ್ ಮಾಡಿದೆ.

ಇದನ್ನೂ ಓದಿ: Viral video | ಅಮ್ಮ ಚಾಕೋಲೇಟ್‌ ಕದ್ದಿದ್ದಾಳೆ ಎಂದು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಮೂರು ವರ್ಷದ ಪುಟಾಣಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

RCB vs CSK: ನಾಳಿನ ಪಂದ್ಯಕ್ಕೆ ಮಳೆ ಬಾರದಂತೆ ಕೃಷ್ಣ ನಾಮ ಜಪಿಸಿದ ಆರ್​ಸಿಬಿ ಆಟಗಾರರು; ವಿಡಿಯೊ ವೈರಲ್​

RCB vs CSK: ಹವಾಮಾನ ಇಲಾಖೆ ಪಂದ್ಯ ನಡೆಯುವ ಶನಿವಾರದಂದು ಶೇ.70ರಷ್ಟು ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಆರ್​ಸಿಬಿ(RCB vs CSK) ಆಟಗಾರರು ಪಂದ್ಯದ ವೇಳೆ ಮಳೆ ಬಾರದಂತೆ ಕೃಷ್ಣ ನಾಮ ಜಪಿಸಿದ ವಿಡಿಯೊವೊಂದು ಭಾರೀ ವೈರಲ್​(viral video) ಆಗಿದೆ.

VISTARANEWS.COM


on

RCB vs CSK
Koo

ಬೆಂಗಳೂರು: ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​(Chennai Super Kings) ವಿರುದ್ಧ ನಾಳೆ ನಡೆಯುವ ಮಹತ್ವದ ಪಂದ್ಯದಲ್ಲಿ ಆರ್​ಸಿಬಿ(Royal Challengers Bengaluru) ಕಣಕ್ಕಿಳಿಯಲು ಸಜ್ಜಾಗಿ ನಿಂತಿದ್ದರೂ ಕೂಡ ಪಂದ್ಯಕ್ಕೆ ಮಳೆ ಅನುವು ಮಾಡಿಕೊಡುವುದು ಬಹುತೇಖ ಅನುಮಾನ ಎನ್ನುವಂತಿದೆ. ಶುಕ್ರವಾರವೇ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದೆ. ಇದೀಗ ಆರ್​ಸಿಬಿ(RCB vs CSK) ಆಟಗಾರರು ಪಂದ್ಯದ ವೇಳೆ ಮಳೆ ಬಾರದಂತೆ ಕೃಷ್ಣ ನಾಮ ಜಪಿಸಿದ ವಿಡಿಯೊವೊಂದು ಭಾರೀ ವೈರಲ್​(viral video) ಆಗಿದೆ.

ಹವಾಮಾನ ಇಲಾಖೆ ಪಂದ್ಯ ನಡೆಯುವ ಶನಿವಾರದಂದು ಶೇ.70ರಷ್ಟು ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಪ್ಲೇ ಆಫ್​ ಪ್ರವೇಶ ಪಡೆಯಬೇಕಿದ್ದರೆ ಆರ್​ಸಿಬಿಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ ಪಂದ್ಯ ರದ್ದಾದರೆ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ. ಹೇಗಾದರೂ ಪಂದ್ಯದ ದಿನ ಮಳೆ ಬಾರದಿರಲಿ ಎಂದು ಆರ್​ಸಿಬಿ ಆಟಗಾರರು ಡ್ರೆಸಿಂಗ್​ ರೋಮ್​ನಲ್ಲಿ ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ, ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ ಎಂದು ಕೃಷ್ಣ ನಾಮ ಜಪಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಅಸಲಿಗೆ ಆರ್​ಸಿಬಿ ಆಟಗಾರರು ಮಳೆ ಬಾರದಂತೆ ಕೃಷ್ಣ ನಾಮ ಜಪಿಸಿಲ್ಲ. ಬದಲಾಗಿ ನೆಟ್ಟಿಗರು ಈ ವಿಡಿಯೊವನ್ನು ಎಡಿಟ್​ ಮಾಡಿ ವೈರಲ್​ ಮಾಡಿದ್ದಾರೆ. ಪ್ರತಿ ಪಂದ್ಯ ಗೆದ್ದಾಗ ಆರ್​ಸಿಬಿ ಡ್ರೆಸ್ಸಿಂಗ್​ ರೂಮ್​ನಲ್ಲಿ ಸಂಭ್ರಮಿಸುತ್ತಾರೆ. ಈ ವಿಡಿಯೊಗೆ ಕೃಷ್ಣ ನಾಮ ಜಪವನ್ನು ಮತ್ತು ಹವಾಮಾನ ಇಲಾಖೆಯ ವರದಿಯ ಫೋಟೊವನ್ನು ಎಡಿಟ್​​ ಮಾಡಲಾಗಿದೆ.

ಇದನ್ನೂ ಓದಿ RCB vs CSK: ಅದೇ ದಿನ, ಅದೇ ವಾರ, ಮಳೆ ಭೀತಿ; ಇದೆಂಥಾ ಕಾಕತಾಳೀಯ! ಆರ್​ಸಿಬಿಗೆ ಇದು ಅದೃಷ್ಟವಾ?

1. ಪಂದ್ಯದ ಸಮಯದಲ್ಲಿ ಬೆಂಗಳೂರಿನಲ್ಲಿ ಭಾರೀ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಒಂದೊಮ್ಮೆ ಪಂದ್ಯ ಮಳೆಯಿಂದ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕ ನೀಡಲಾಗುತ್ತದೆ.

2. ಆರ್​ಸಿಬಿ-ಸಿಎಸ್​ಕೆ​ ನಡುವಣ ಪಂದ್ಯದ ಅಂತಿಮ 5 ಓವರ್​ಗಳ ಪಂದ್ಯದ ಆಯೋಜನೆಗೆ ಕಟ್ ಆಫ್ ಟೈಮ್ 10:56 PM. ಈ ವೇಳೆಗೆ ಪಂದ್ಯ ಆಯೋಜಿಸುವಂತಹ ಪರಿಸ್ಥಿತಿ ಇರದಿದ್ದರೆ ಪಂದ್ಯವನ್ನು ರದ್ದು ಎಂದು ನಿರ್ಧರಿಸಲಾಗುತ್ತದೆ.

3. ಒಂದು ವೇಳೆ ಮಳೆ ಬಂದು, ಉದಾಹರಣೆಗೆ ನಿಗದಿತ 10 ಓವರ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ತಂಡ 10 ಓವರ್ ಆಡಿ, 2ನೇ ಇನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿದ ತಂಡ 5 ಓವರ್​ಗಳನ್ನು ಪೂರ್ತಿಗೊಳಿಸಿದರೆ ಮಾತ್ರ ಆಗ ಡಕ್​ವರ್ತ್ ಲೂಯಿಸ್ ನಿಯಮ ಅನ್ವಯವಾಗುತ್ತದೆ.

4. ಪಂದ್ಯ ಆರಂಭಗೊಂಡ ಬಳಿಕ ಮಳೆ ಬಂದರೆ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ ಓವರ್ ಕಡಿತದೊಂದಿಗೆ ಟಾರ್ಗೆಟ್ ನೀಡಲಾಗುತ್ತದೆ. ಈ ಮೂಲಕ ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ.

5. ಒಂದೊಮ್ಮೆ ಮಳೆಯಿಂದಾಗಿ ಪಂದ್ಯ ರದ್ದಾದರೆ ಚೆನ್ನೈ ತಂಡ ಅಧಿಕೃತವಾಗಿ ಪ್ಲೇಆಫ್​ಗೆ ಎಂಟ್ರಿ ಕೊಡಲಿದೆ. ಏಕೆಂದರೆ ಈಗಾಗಲೇ ಚೆನ್ನೈ 14 ಅಂಕಗಳನ್ನು ಹೊಂದಿದ್ದು ಪಂದ್ಯ ರದ್ದಾದ ಕಾರಣ ಸಿಗುವ ಒಂದು ಅಂಕದಿಂದ ಒಟ್ಟು ಅಂಕ 15ಕ್ಕೇ ಏರಿಕೆಯಾಗುತ್ತದೆ. ಇನ್ನುಳಿದ ಯಾವುದೇ ತಂಡಕ್ಕೂ ಈ ಮೊತ್ತವನ್ನು ಮೀರಲು ಸಾಧ್ಯವಾಗುವುದಿಲ್ಲ. ಹೀಗಾಗಿ ಚೆನ್ನೈಗೆ ಮಳೆ ವರದಾನವಾಗಲಿದೆ. ಆರ್​ಸಿಬಿ ತಂಡವು 13 ಅಂಕಗಳೊಂದಿಗೆ ಐಪಿಎಲ್​ನಿಂದ ಹೊರಬೀಳಲಿದೆ.

Continue Reading

ವೈರಲ್ ನ್ಯೂಸ್

Viral Video: ಅಳುತ್ತಾ ವಿದಾಯ ಹೇಳಿದ್ದೇಕೆ ಪಾಕಿಸ್ತಾನದ ಅತ್ಯಂತ ಕಿರಿಯ ಯೂಟ್ಯೂಬರ್?

ಪಾಕಿಸ್ತಾನದ ಕಿರಿಯ ಯೂಟ್ಯೂಬರ್ ಮೊಹಮ್ಮದ್ ಶಿರಾಜ್ ಇನ್ನು ತಾವು ಯಾವುದೇ ವಿಡಿಯೋವನ್ನು (Viral Video) ಸಾಮಾಜಿಕ ಜಾಲತಾಣದಲ್ಲಿ ಹಾಕುವುದಿಲ್ಲ ಎಂಬುದಾಗಿ ತಮ್ಮ ಕೊನೆಯ ವ್ಲಾಗ್ ನಲ್ಲಿ ಹೇಳಿಕೊಂಡಿದ್ದಾರೆ. ಅವರು ಈ ರೀತಿ ಹೇಳಿರುವುದು ಯಾಕೆ ಗೊತ್ತೇ? ಈ ವರದಿ ಓದಿ.

VISTARANEWS.COM


on

By

Viral Video
Koo

ಪಾಕಿಸ್ತಾನದ ಅತ್ಯಂತ ಕಿರಿಯ ಯೂಟ್ಯೂಬರ್ (Pakistan’s youngest YouTuber) ಮೊಹಮ್ಮದ್ ಶಿರಾಜ್ (Mohammad Shiraz) ತನ್ನ ಕೊನೆಯ ವ್ಲಾಗ್ (last vlog) ಅನ್ನು ಮೇ 15ರಂದು ಸಾಮಾಜಿಕ ಜಾಲತಾಣದಲ್ಲಿ (Viral Video) ಹಂಚಿಕೊಂಡಿದ್ದು, ತಮ್ಮ ಅಭಿಮಾನಿಗಳು, ಅನುಯಾಯಿಗಳಿಗೆ ಭಾವನಾತ್ಮಕವಾಗಿ ವಿದಾಯ ( goodbye) ಹೇಳಿದ್ದಾಳೆ. ಸುಮಾರು 11 ನಿಮಿಷಗಳ ವಿಡಿಯೋದಲ್ಲಿ ಆಕೆ ಅಳುತ್ತಾ ತಮ್ಮ ಅಭಿಮಾನಿಗಳಿಗೆ ಸಂದೇಶವನ್ನು ನೀಡಿದ್ದಾಳೆ.

ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿರುವ 11 ನಿಮಿಷಗಳ ವಿಡಿಯೋದಲ್ಲಿ ಶಿರಾಜ್ ವ್ಲಾಗ್ ಮಾಡುವ ಬದಲು ಈ ಸಮಯದಲ್ಲಿ ತನ್ನ ಅಧ್ಯಯನದ ಮೇಲೆ ಗಮನ ಹರಿಸಬೇಕೆಂದು ತಂದೆ ಬಯಸುತ್ತಾರೆ ಎಂದು ಹೇಳಿದ್ದಾಳೆ.

ತನ್ನ ಚಿಕ್ಕ ಸಹೋದರಿ ಮುಸ್ಕಾನ್ ಜೊತೆಗೆ ವೀಕ್ಷಕರನ್ನು ಸ್ವಾಗತಿಸಿದ ಶಿರಾಜ್, “ಮೇಂ ಆಜ್ ಸೆ ವ್ಲೋಗ್ ನಹೀ ಬನೌಂಗಾ. ಮೇರೆ ಅಬ್ಬು ನೆ ಬೋಲಾ ಹೈ ಆಪ್ ಕುಚ್ ದಿನ್ ಪಧೈ ಕರೋ ಔರ್ ವಿಡಿಯೋ ನಹೀ ಬನಾವೋ. ಲೇಕಿನ್, ಮುಝೆ ವ್ಲೋಗ್ ಬನಾನೇ ಕಾ ಬೋಹತ್ ಶೌಖ್ ಹೈ. ಇಸ್ಲಿಯೇ, ಆಜ್ ಮೇರಾ ಆಕ್ರಿ ವ್ಲಾಗ್ ಹೈ ಎಂದು ಹೇಳಿದಳು. ಅಂದರೆ ನಾನು ಇನ್ನು ಮುಂದೆ ವ್ಲಾಗ್‌ಗಳನ್ನು ಮಾಡುವುದಿಲ್ಲ. ನನ್ನ ತಂದೆ ನನ್ನನ್ನು ಅಧ್ಯಯನಕ್ಕೆ ಹೆಚ್ಚಿನ ಗಮನ ಕೊಡಲು ಹೇಳಿದ್ದಾರೆ. ಸದ್ಯಕ್ಕೆ ವಿಡಿಯೋಗಳನ್ನು ಮಾಡಬೇಡಿ ಎಂದಿದ್ದಾಳೆ.


ನಾನು ವ್ಲಾಗ್‌ಗಳನ್ನು ಮಾಡಲು ಇಷ್ಟಪಡುತ್ತೇನೆ. ಆದರೆ ಇದು ನನ್ನ ಕೊನೆಯ ವ್ಲಾಗ್. ನಾನು ಏನು ಮಾಡಲಿ? ಎಂದು ಅಳುತ್ತಾ, ಕಣ್ಣೀರು ಒರೆಸುತ್ತಾ ಶಿರಾಜ್ ತಮ್ಮ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ.

ಸ್ವಲ್ಪ ಸಮಯದ ಅನಂತರ ಅವರು ಮುಸ್ಕಾನ್‌ಳೊಂದಿಗೆ ತಮ್ಮ ಹಳ್ಳಿಯಲ್ಲಿ ಅಡ್ಡಾಡಿದ್ದಾಳೆ ಮತ್ತು ವೀಕ್ಷಕರಿಗೆ ಅವರ ನೆಚ್ಚಿನ ತಾಣಗಳಲ್ಲಿ ಒಂದಾದ ಸ್ವಲ್ಪ ಸ್ಟ್ರೀಮ್ ಅನ್ನು ತೋರಿಸಿದ್ದಾಳೆ.


ಬುಟ್ಟಿಗಳನ್ನು ಮಾಡುತ್ತಿದ್ದ ಒಬ್ಬ ವ್ಯಕ್ತಿಯನ್ನು ಭೇಟಿಯಾದ ಶಿರಾಜ್ ಈಗ ಸ್ವಲ್ಪ ಸಮಯದವರೆಗೆ ವಿಡಿಯೋಗಳನ್ನು ಪೋಸ್ಟ್ ಮಾಡುವುದಿಲ್ಲ ಎಂದು ಮತ್ತೊಮ್ಮೆ ಹೇಳಿದ್ದಾಳೆ. ಏಕೆ ಎಂದು ಕೇಳಿದಾಗ ಶಿರಾಜ್ ಕಾರಣವನ್ನು ವಿವರಿಸಿದ್ದಾಳೆ. ಆದರೆ ಆ ವ್ಯಕ್ತಿ ವ್ಲಾಗ್‌ಗಳನ್ನು ರಚಿಸಲು ಸ್ವಲ್ಪ ಸಮಯವನ್ನು ಮೀಸಲಿಡುವಂತೆ ಸಲಹೆ ನೀಡಿದ್ದಾನೆ.

ಸ್ವಲ್ಪ ಅಸಮಾಧಾನಗೊಂಡ ಶಿರಾಜ್, ಅನಂತರ ಅವರ ಎಲ್ಲಾ ಪ್ರೀತಿಗಾಗಿ ತನ್ನ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದಳು. ವ್ಲಾಗ್ ಮಾಡಲು ಅವಕಾಶ ನೀಡುವಂತೆ ಅವರ ತಂದೆಗೆ ವಿನಂತಿಸುವಂತೆ ಕೇಳಿಕೊಂಡಳು.
ಮೈ ಲಾಸ್ಟ್ ವ್ಲಾಗ್. ಎಮೋಷನಲ್ ಗುಡ್ ಬೈ ಎಂಬ ಶೀರ್ಷಿಕೆಯಡಿ ಯುಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾದ ಶಿರಾಜ್ ಅವರ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

ಇದನ್ನೂ ಓದಿ: Virat Kohli: ಮಗಳು ವಮಿಕಾ ಕೂಡ ಕ್ರಿಕೆಟ್​ ಪ್ರಿಯೆ; ಬ್ಯಾಟಿಂಗ್​ ಅಚ್ಚುಮೆಚ್ಚು ಎಂದ ಕೊಹ್ಲಿ​

‘ಶಿರಾಜಿ ವಿಲೇಜ್ ವ್ಲಾಗ್ಸ್’ ಎಂಬುದು ಅವರ ಯೂಟ್ಯೂಬ್ ಚಾನೆಲ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಯ ಹೆಸರು. ಇದರಲ್ಲಿ ಅವರು ತಮ್ಮ ಕುಟುಂಬ ಜೀವನ ಮತ್ತು ದೈನಂದಿನ ಅನುಭವಗಳ ಸಾರವನ್ನು ಸೆರೆ ಹಿಡಿಯುವ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾಳೆ. ಶಿರಾಜ್ 1.56 ಮಿಲಿಯನ್ ಚಂದಾದಾರರನ್ನು ಹೊಂದಿದೆ ಯೂಟ್ಯೂಬ್ ಮತ್ತು ಇನ್ ಸ್ಟಾ ಗ್ರಾಮ್ ನಲ್ಲಿ 2 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾಳೆ.

ಆರು ವರ್ಷದ ಮೊಹಮ್ಮದ್ ಶಿರಾಜ್ ಗಿಲ್ಗಿಟ್-ಬಾಲ್ಟಿಸ್ತಾನ್‌ನ ಖಪ್ಲು ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಕಳೆದ ಮಾರ್ಚ್ ನಲ್ಲಿ ಅವರು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಭೇಟಿಯಾಗಿದ್ದಳು.

Continue Reading

ಕ್ರೀಡೆ

Virat Kohli: ಮಗಳು ವಮಿಕಾ ಕೂಡ ಕ್ರಿಕೆಟ್​ ಪ್ರಿಯೆ; ಬ್ಯಾಟಿಂಗ್​ ಅಚ್ಚುಮೆಚ್ಚು ಎಂದ ಕೊಹ್ಲಿ​

Virat Kohli: ದಾನೀಶ್ ಸೇಠ್ ಅವರು ಸಂದರ್ಶನದ ವೇಳೆ ಕೊಹ್ಲಿ ಜತೆ ಹಲವು ತರ್ಲೆ ಪ್ರಶ್ನೆಗಳನ್ನು ಕೇಳಿದ್ದಾರೆ. ಇದೇ ವೇಳೆ ನ್ಯಾಗ್ಸ್ ಒಂದು ಐಪಿಎಲ್​ಗೆ ಇನ್ನೊಂದು ಡಬ್ಲ್ಯುಪಿಎಲ್​ಗೆ ಎಂದು ಹೇಳುವ ಮೂಲಕ ಕೊಹ್ಲಿಯ ಕಾಲೆಳೆದಿದ್ದಾರೆ.

VISTARANEWS.COM


on

Virat Kohli
Koo

ಬೆಂಗಳೂರು: ಆರ್​ಸಿಬಿ(RCB) ತಂಡ ನಾಳೆ ನಡೆಯುವ 17ನೇ ಆವೃತ್ತಿಯ ಐಪಿಎಲ್​ನಲ್ಲಿ(IPL 2024) ತನ್ನ ಕೊನೆಯಲೀಗ್​ ಪಂದ್ಯವನ್ನು ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಆಡಲಿದೆ. ಈ ಪಂದ್ಯಕ್ಕೂ ಮುನ್ನ ಆರ್​ಸಿಬಿಯ ಇನ್‌ಸೈಡರ್ ​ಮಿಸ್ಟರ್, ನ್ಯಾಗ್ಸ್(mr nags) ಖಾತಿಯ ದಾನೀಶ್ ಸೇಠ್(danish sait) ಅವರು ವಿರಾಟ್​ ಕೊಹ್ಲಿ(Virat Kohli) ಜತೆಗೆ ಸಂದರ್ಶನವೊಂದನ್ನು ಮಾಡಿದ್ದಾರೆ. ಈ ಸಂದರ್ಶನದಲ್ಲಿ ಕೊಹ್ಲಿ ತಮ್ಮ ಮಗಳು ವಮಿಕಾ(vamika) ಕೂಡ ಕ್ರಿಕೆಟ್​ ಪ್ರಿಯೆ ಎಂಬ ವಿಚಾರವನ್ನು ತಿಳಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.

ದಾನೀಶ್ ಸೇಠ್ ಅವರು ಸಂದರ್ಶನದ ವೇಳೆ ಕೊಹ್ಲಿ ಜತೆ ಹಲವು ತರ್ಲೆ ಪ್ರಶ್ನೆಗಳನ್ನು ಕೇಳಿದ್ದಾರೆ. ಇದೇ ವೇಳೆ ಪಾಪು ಹೇಗಿದೆ ಎಂದು ಕೇಳಿದಾಗ ಪಾಪು ಅದು ಯಾರು ಎಂದು ಕೊಹ್ಲಿ ಮರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ನ್ಯಾಗ್ಸ್ ಅಕಾಯ್​ ಎಂದು ಹೇಳಿದ್ದಾರೆ. ಹೋ.. ಮಗನಾ ಆರೋಗ್ಯವಾಗಿದ್ದಾನೆ ಎಂದು ಹೇಳುತ್ತಾರೆ. ಇದೇ ವೇಳೆ ನ್ಯಾಗ್ಸ್ ಒಂದು ಐಪಿಎಲ್​ಗೆ ಇನ್ನೊಂದು ಡಬ್ಲ್ಯುಪಿಎಲ್​ಗೆ ಎಂದು ಕೊಹ್ಲಿಯ ಕಾಲೆಳೆದಿದ್ದಾರೆ. ಈ ಮಾತು ಕೇಳಿದ ಕೊಹ್ಲಿ ಅರೇ ಏನು ಹೇಳುತ್ತಿದ್ದಿಯಾ ಮಾರಾಯ ಎಂದು ಹಿಂದಿಯಲ್ಲಿ ಹೇಳುವ ಮೂಲಕ ನಗಾಡಿದ್ದಾರೆ.

ಇದೇ ವೇಳೆ ತನ್ನ ಮಗಳಿಗೂ ಕ್ರಿಕೆಟ್​ ಎಂದರೆ ಅಚ್ಚು ಮೆಚ್ಚು ಅವಳು ಈಗಲೇ ಬ್ಯಾಟಿಂಗ್​ ಮಾಡುತ್ತಾ ಆಡುತ್ತಿದ್ದಾಳೆ. ಆದರೆ ಮುಂದಿನ ದಿನಗಳಲ್ಲಿ ಏನಾಗುತ್ತದೆಯೋ ತಿಳಿದಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ. ಅವರ ಈ ಮಾತನ್ನು ಗಮನಿಸುವಾಗ ಮಗಳಿಗೆ ಯಾವ ಕ್ಷೇತ್ರದಲ್ಲಿಯೂ ಮುಂದುವರಿಯುವ ಸಂಪೂರ್ಣ ಸ್ವಾತಂತ್ರ್ಯ ಕೊಹ್ಲಿ ನೀಡಲಿದ್ದಾರೆ ಎನ್ನುವುದು ಅರ್ಥವಾಗುತ್ತದೆ. ಅಪ್ಪನಂತೆ ಮಗಳು ಕೂಡ ಭಾರತ ಮಹಿಳಾ ಕ್ರಿಕೆಟ್​ನಲ್ಲಿ ಸಾಧನೆ ಮಾಡಲಿ ಎಂದು ಕೊಹ್ಲಿಯ ಅಭಿಮಾನಿಗಳು ಹಾರೈಸಲಾರಂಭಿಸಿದ್ದಾರೆ.

ಇದನ್ನೂ ಓದಿ IPL Ticket Scam: ಆನ್​ಲೈನ್​ ಟಿಕೆಟ್​ ಖರೀದಿಸಲು ಹೋಗಿ 3 ಲಕ್ಷ ರೂ ಕಳೆದುಕೊಂಡ ಆರ್​ಸಿಬಿ ಅಭಿಮಾನಿ

ಕೊಹ್ಲಿ ತಮ್ಮ ನಿವೃತ್ತಿ(Virat Kohli restaurant) ವಿಚಾರದ ಬಗ್ಗೆ ಮಾತನಾಡಿದ್ದು, ಒಬ್ಬ ಕ್ರೀಡಾಪಟುವಾದ ಮೇಲೆ ಇಂದಲ್ಲ ನಾಳೆ, ತಮ್ಮ ವೃತ್ತಿಜೀವನದ ಅಂತಿಮ ದಿನಾಂಕವನ್ನು ನೋಡಲೇಬೇಕಿದೆ ಎಂದು ಹೇಳಿದ್ದಾರೆ. ಇದು  ಅವರ ಅಭಿಮಾನಿಗಳಿಗೆ ಭಾರೀ ಆತಂಕ ಉಂಟುಮಾಡುವಂತೆ ಮಾಡಿದೆ. 

ಸಂದರ್ಶನವೊಂದರಲ್ಲಿ ಕೊಹ್ಲಿಗೆ ಸಕ್ಸಸ್​​ ಹಿಂದೆ ಯಾಕಿಷ್ಟು ಹಸಿವಿನಿಂದ ಓಡುತ್ತಿದ್ದೀರಿ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ಒಬ್ಬ ಕ್ರೀಡಾಪಟು ಇಂದಲ್ಲ ನಾಳೆ ತಮ್ಮ ವೃತ್ತಿಜೀವನದ ಅಂತಿಮ ದಿನಾಂಕವನ್ನು ನೋಡಲೇಬೇಕಿದೆ. ಆದ್ದರಿಂದಲೇ ನಾನು ಈ ರೀತಿ ಹೆಚ್ಚು ಶ್ರಮವಹಿಸಿ, ಮಿತಿಮೀರಿ ಕೆಲಸ ಮಾಡುತ್ತಿದ್ದೇನೆ. ನೀವೃತ್ತಿಯ ಬಳಿಕ ನಾನು ಸಾಧನೆ ಮಾಡದರ ಕುರಿತು ಚಿಂತಿಸ ಬಾರದು. ಅಂತಹ ಪರಿಸ್ಥಿತಿ ನನಗೆ ಬರಬಾರದು ಎಂದರೆ, ಇಂದು ಅದ್ಭುತ ಆಟ ಆಡಲೇಬೇಕಿದೆ’ ಎಂದು ಹೇಳಿದರು.

‘ನನ್ನ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಬಳಿಕ ನನಗೆ ಯಾವುದೇ ವಿಷಾದ ಇರಬಾರದು. ಖಂಡಿತವಾಗಿ ಆ ರೀತಿ ನಾನು ಮಾಡಿಕೊಳ್ಳುವುದಿಲ್ಲ ಎಂದು ನನಗೆ ಖಾತ್ರಿಯಿದೆ. ಒಮ್ಮೆ ನಾನು ಕ್ರಿಕೆಟ್​ನಿಂದ ದೂರ ಸರಿದರೆ ಖಂಡಿತ ಮತ್ತೆ ನೀವು ನನ್ನನ್ನು ನೋಡೋದಿಲ್ಲ. ನಾನು ಆಡುವ ಕೊನೆವರೆಗೂ ನನ್ನಲ್ಲಿರುವ ಬೆಸ್ಟ್​ ಅನ್ನು ನೀಡಲು ಬಯಸುತ್ತೇನೆ. ಅದೊಂದೇ ನನ್ನನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯ’ ಎಂದು ಹೇಳುವ ಮೂಲಕ ತಮ್ಮ ನಿವೃತ್ತಿಯ ಬಗೆಗಿನ ಸ್ಪಷ್ಟತೆಯನ್ನು ತಿಳಿಸಿದರು. ಕೊಹ್ಲಿಯ ಈ ಹೇಳಿಕೆ ಕಂಡು ಅವರ ಅಭಿಮಾನಿಗಳು ಆತಂಕಕ್ಕೆ ಒಳಪಟ್ಟಿದ್ದು, ಶೀಘ್ರದಲ್ಲೇ ಕೊಹ್ಲಿ ನಿವೃತ್ತಿ ಹೇಳಲಿದ್ದಾರಾ? ಎಂದು ಚಿಂತೆ ಪಡುವಂತೆ ಮಾಡಿದೆ.

Continue Reading

ವೈರಲ್ ನ್ಯೂಸ್

Viral News: ತ್ರಿವಳಿ ತಲಾಖ್‌ನಿಂದ ಬೇಸತ್ತಿದ್ದ ಮಹಿಳೆ ಹಿಂದೂ ಧರ್ಮಕ್ಕೆ ಮತಾಂತರ; ದೇವಸ್ಥಾನದಲ್ಲಿ ಮರು ಮದುವೆ

Viral News: Instagramನಲ್ಲಿ ರುಬಿನಾ ಮತ್ತು ಪ್ರಮೋದ್‌ ಕಶ್ಯಪ್‌ಗೆ ಪರಿಚಯವಾಗಿತ್ತು. ಕೆಲವು ಸಂಭಾಷಣೆಗಳ ನಂತರ ಇವರಿಬ್ಬರೂ ಸ್ನೇಹಿತರಾಗಿದ್ದರು. ನಿಧಾನವಾಗಿ ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾಗಲು ನಿರ್ಧರಿಸಿದ್ದರು. ಇನ್ನು ಪ್ರಮೋದ್‌ ಕಶ್ಯಪ್‌ ರುಬಿನಾಳಗಿಂತ 8 ವರ್ಷ ಚಿಕ್ಕವನು. ಆತನನ್ನು ವರಿಸಲು ಮೊದಲು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು, ಹೆಸರನ್ನು ಪ್ರೀತಿ ಎಂದು ಬದಲಿಸಿಕೊಂಡಳು.

VISTARANEWS.COM


on

Viral News
Koo

ಮಥುರಾ: ತ್ರಿವಳಿ ತಲಾಖ್‌(Triple Talaq) ಪಡೆದು ಗಂಡನಿಂದ ದೂರವಾಗಿ ನೊಂದಿದ್ದ ಮುಸ್ಲಿಂ ಮಹಿಳೆಯೊಬ್ಬಳು ಹಿಂದೂ ಧರ್ಮಕ್ಕೆ ಮತಾಂತರಗೊಂಡು ಹಿಂದೂ ಯುವಕನನ್ನು ಮದುವೆ ಆಗಿರುವ ಅಪರೂಪದ ಘಟನೆ(Viral News) ಉತ್ತರಪ್ರದೇಶ(Uttar Pradesh)ದಲ್ಲಿ ನಡೆದಿದೆ. ರುಬಿನಾ ಎಂಬ ಮಹಿಳೆ ತನ್ನ ಮೊಲದ ಪತಿಯಿಂದ ಬಹಳ ಬೇಸತ್ತಿದ್ದಳು. ಸಾಲದೆಂಬುದಕ್ಕೆ ಆತ ತ್ರಿವಳಿ ತಲಾಖ್‌ ಅನ್ನೂ ನೀಡಿದ್ದ. ಇದರಿಂದ ನೊಂದಿದ್ದ ರುಬಿನಾ ತನ್ನ ಧರ್ಮ ಬದಲಿಸಿಕೊಂಡು ಹಿಂದೂ ಯುವಕನನ್ನೇ ಕೈ ಕೈ ಹಿಡಿದಿದ್ದಾಳೆ.

ಮಥುರಾದಲ್ಲಿ ಈ ಘಟನೆ ನಡೆದಿದ್ದು, ರುಬಿನಾ ಏಳು ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಆಗಿದ್ದಳು. ಆದರೆ ಪತಿಯ ಚಿತ್ರಹಿಂಸೆಯಿಂದ ಆಕೆ ಬೇಸತ್ತಿದ್ದಳು. ಕೊನೆಗೆ ಆತ ರುಬಿನಾಗೆ ತಲಾಖ್‌ ನೀಡಿದ್ದ. ಬಹಳ ನೊಂದಿದ್ದ ರುಬಿನಾ ತನ್ನ ಎರಡು ಮಕ್ಕಳನ್ನು ಗಂಡನ ಬಳಿಯೇ ಬಿಟ್ಟು ಮನೆ ಬಿಟ್ಟು ಹೊರಬಂದಿದ್ದಳು. ಇದಾದ ಬಳಿಕ ಆಕೆಗೆ ಪ್ರಮೋದ್‌ ಎಂಬಾತನ ಜೊತೆ ಪ್ರೇಮಾಂಕುರವಾಗಿದ್ದು, ಇದೀಗ ಆತನನ್ನೇ ವರಿಸಿದ್ದಾಳೆ. ಇದಕ್ಕೂ ಮುನ್ನ ಪ್ರೀತಿಗಾಗಿ ತನ್ನ ಧರ್ಮವನ್ನೇ ಬದಲಿಸಿಕೊಂಡಿದ್ದಾಳೆ.

ಇನ್‌ಸ್ಟಾಗ್ರಾಂನಲ್ಲಿ ಪ್ರೀತಿಯಾಗಿತ್ತು

Instagramನಲ್ಲಿ ರುಬಿನಾ ಮತ್ತು ಪ್ರಮೋದ್‌ ಕಶ್ಯಪ್‌ಗೆ ಪರಿಚಯವಾಗಿತ್ತು. ಕೆಲವು ಸಂಭಾಷಣೆಗಳ ನಂತರ ಇವರಿಬ್ಬರೂ ಸ್ನೇಹಿತರಾಗಿದ್ದರು. ನಿಧಾನವಾಗಿ ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾಗಲು ನಿರ್ಧರಿಸಿದ್ದರು. ಇನ್ನು ಪ್ರಮೋದ್‌ ಕಶ್ಯಪ್‌ ರುಬಿನಾಳಗಿಂತ 8 ವರ್ಷ ಚಿಕ್ಕವನು. ಆತನನ್ನು ವರಿಸಲು ಮೊದಲು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು, ಹೆಸರನ್ನು ಪ್ರೀತಿ ಎಂದು ಬದಲಿಸಿಕೊಂಡಳು. ಇನ್ನು ಕೆ.ಕೆ. ಶಂಕಧರ್‌ ಎಂಬ ಅರ್ಚಕರ ನೇತೃತ್ವದಲ್ಲಿ ವಿವಾಹ ನಡೆದಿದ್ದು, ವಿವಾಹಕ್ಕೂ ಮುನ್ನ ರುಬಿನಾಳನ್ನು ಗೋ ಮೂತ್ರ ಮತ್ತು ಗಂಗಾಜಲದಿಂದ ಪವಿತ್ರಗೊಳಿಸಲಾಗಿದೆ. ನಂತರ ದಂಪತಿಗಳು Instagramನಲ್ಲಿ ಸಂಪರ್ಕಗೊಂಡರು. ಕೆಲವು ಸಂಭಾಷಣೆಗಳ ನಂತರ ಸ್ನೇಹಿತರಾದರು. ಹಿಂದೂ ಧರ್ಮಕ್ಕೆ ಮತಾಂತರಗೊಂಡ ನಂತರ, ಆ ಬಗ್ಗೆ ಪ್ರತಿಕ್ರಿಯಿಸಿರುವ ರುಬಿನಾ ನನಗೆ ಹಿಂದೂ ಧರ್ಮದ ಬಗ್ಗೆ ಬಹಳ ನಂಬಿಕೆ ಇದೆ. ಇಸ್ಲಾಂನಲ್ಲಿ ಮಹಿಳೆಯರಿಗೆ ಗೌರವ ಇಲ್ಲ. ಅಲ್ಲಿ ಮಹಿಳೆಯರು ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:Ujjaini Marulasiddeshwara Jatre: ಸಾಮಾಜಿಕ ಸೌಹಾರ್ದತೆ ಸಾರುವ ಶ್ರೀ ಉಜ್ಜಯಿನಿ ಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವ

ರುಬೀನಾ ಮತ್ತು ಪ್ರಮೋದ್‌ ಬರೇಲಿಗೆ ಹೋಗಿ ಹಿಂದೂ ಸಂಪ್ರದಾಯಗಳ ಮೂಲಕ ಮದುವೆಯಾಗಿದ್ದಾರೆ. ವೃಂದಾವನದ ಬಂಗಾರ್ ಕಾಶಿರಾಮ್ ಕಾಲೋನಿಯಲ್ಲಿ ವಾಸಿಸುತ್ತಿದ್ದ ರುಬಿನಾ ತನ್ನ ಪೂರ್ವಜರು ಮೊಘಲರ ಭಯದಿಂದ ಇಸ್ಲಾಂ ಧರ್ಮದ ಅನುಯಾಯಿಗಳಾದರು,. ಆದರೆ ನಾನು ಹಿಂದೂ ದೇವರುಗಳನ್ನು ನಂಬುತ್ತೇನೆ ಮತ್ತು ನಿತ್ಯ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು. ರುಬಿನಾ ಇಸ್ಲಾಂ ಧರ್ಮದ ಮಹಿಳೆಯರನ್ನು ನಡೆಸಿಕೊಳ್ಳುವ ರೀತಿಯನ್ನು ಧಿಕ್ಕರಿಸಿದ್ದು ಮಾತ್ರವಲ್ಲದೆ, ‘ಹಲಾಲ್’ ಮತ್ತು ತಲಾಖ್‌ ಇವೆಲ್ಲ ಧರ್ಮದಲ್ಲಿನ ಅನಿಷ್ಠ ಪದ್ಧತಿ ಎಂದೂ ಕರೆದಿದ್ದಾರೆ. ಹಿಂದೂ ಧರ್ಮವನ್ನು ಸ್ವೀಕರಿಸುವಂತೆ ಯಾರೂ ಬಲವಂತ ಮಾಡಿಲ್ಲ. ಅದು ನನ್ನ ಆಯ್ಕೆ ಎಂದು ಸ್ಪಷ್ಟಪಡಿಸಿದ್ದಾರೆ.

Continue Reading
Advertisement
RCB vs CSK
ಕ್ರೀಡೆ5 mins ago

RCB vs CSK: ವಾಹನ ಸವಾರರೇ ಗಮನಿಸಿ, ನಾಳೆ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ

Amith Shah lok sabha election 2024
ಪ್ರಮುಖ ಸುದ್ದಿ23 mins ago

Lok Sabha Election 2024: 272 ಸೀಟು ಗೆಲ್ಲದೇ ಹೋದರೆ ಬಿಜೆಪಿಯ ಪ್ಲ್ಯಾನ್ ಬಿ ಏನು? ಅಮಿತ್ ಶಾ ಉತ್ತರ ಹೀಗಿದೆ

PM Narendra Modi
ದೇಶ29 mins ago

PM Narendra Modi: ಬುಲ್ಡೋಜರ್‌ ಹೇಗೆ ಬಳಸಬೇಕೆಂಬುದನ್ನು ಯೋಗಿಯಿಂದ ಕಲಿಯಬೇಕು: ಪ್ರಧಾನಿ ಮೋದಿ

Raveena tandon Saree fashion magic in Jayanthi Ballal designer
ಫ್ಯಾಷನ್29 mins ago

Raveena tandon Saree fashion: ಜಯಂತಿ ಬಲ್ಲಾಳ್‌ ಡಿಸೈನರ್‌ ಸೀರೆಯಲ್ಲಿ ನಟಿ ರವೀನಾ ಟಂಡನ್‌ ಜಾದೂ!

Prajwal Revanna Case Lawyer Devarajegowda sent to judicial custody End of police custody
ಕ್ರೈಂ1 hour ago

Prajwal Revanna Case: ವಕೀಲ ದೇವರಾಜೇಗೌಡರಿಗೆ ನ್ಯಾಯಾಂಗ ಬಂಧನ; ಪೊಲೀಸ್‌ ಕಸ್ಟಡಿ ಅಂತ್ಯ

RCB vs CSK
ಕ್ರೀಡೆ1 hour ago

RCB vs CSK: ನಾಳಿನ ಪಂದ್ಯಕ್ಕೆ ಮಳೆ ಬಾರದಂತೆ ಕೃಷ್ಣ ನಾಮ ಜಪಿಸಿದ ಆರ್​ಸಿಬಿ ಆಟಗಾರರು; ವಿಡಿಯೊ ವೈರಲ್​

Kannada New Movie The judgement Trailer Out Kannada
ಸ್ಯಾಂಡಲ್ ವುಡ್1 hour ago

Kannada New Movie: ಕುತೂಹಲ ಮೂಡಿಸಿದೆ ರವಿಚಂದ್ರನ್ ಅಭಿನಯದ ‘ದ ಜಡ್ಜ್ ಮೆಂಟ್’ ಟ್ರೈಲರ್‌!

Crime News
ದೇಶ2 hours ago

ಶಾಲೆ ಸಮೀಪದ ಚರಂಡಿಯಲ್ಲಿ 4 ವರ್ಷದ ಮಗುವಿನ ಮೃತದೇಹ ಪತ್ತೆ; ಭುಗಿಲೆದ್ದ ಹಿಂಸಾಚಾರ

Bal Jeevan Bima
ಮನಿ ಗೈಡ್2 hours ago

Bal Jeevan Bima: ಮಕ್ಕಳ ಹೆಸರಲ್ಲಿ ನಿತ್ಯ 6 ರೂ.ನಂತೆ ಕಟ್ಟಿದರೆ 1 ಲಕ್ಷ ರೂ. ವಿಮೆಯ ರಕ್ಷಣೆ

road Accident in Bengaluru mysore
ಬೆಂಗಳೂರು2 hours ago

Road Accident : ಮೈಸೂರು- ಬೆಂಗಳೂರಲ್ಲಿ ಮೂವರ ಪ್ರಾಣ ಕಸಿದ ಮೂರು ಪ್ರತ್ಯೇಕ ಅಪಘಾತ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ9 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ10 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ23 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ1 day ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು1 day ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌