Custodial death | ಬೆಳಗಾವಿ ಪೊಲೀಸ್‌ ಠಾಣೆಯಲ್ಲಿ ವ್ಯಕ್ತಿಯ ಸಾವು - Vistara News

ಕ್ರೈಂ

Custodial death | ಬೆಳಗಾವಿ ಪೊಲೀಸ್‌ ಠಾಣೆಯಲ್ಲಿ ವ್ಯಕ್ತಿಯ ಸಾವು

ಬೆಳಗಾವಿಯ ಗ್ರಾಮೀಣ ಪೊಲೀಸ್‌ ಠಾಣೆಯ ಕಸ್ಟಡಿಯಲ್ಲಿದ್ದ ಆರೋಪಿಯೊಬ್ಬ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾನೆ.

VISTARANEWS.COM

on

belagavi rural
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಳಗಾವಿ: ಬೆಳಗಾವಿಯ ಗ್ರಾಮೀಣ ಪೊಲೀಸ್‌ ಠಾಣೆಯ ಕಸ್ಟಡಿಯಲ್ಲಿದ್ದ ಆರೋಪಿಯೊಬ್ಬ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾನೆ. ಪೊಲೀಸರ ನಿರ್ಲಕ್ಷ್ಯಕ್ಕೆ ಈತ ಬಲಿಯಾದನೇ ಎಂಬ ಅನುಮಾನ ಮೂಡಿದೆ.

ಬಸನಗೌಡ ಪಾಟೀಲ್(45) ಎಂಬ ಆರೋಪಿಯನ್ನು ಗಾಂಜಾ ಹಂಚುವಿಕೆ ಪ್ರಕರಣದಲ್ಲಿ ವಶಕ್ಕೆ ಪಡೆಯಲಾಗಿತ್ತು. ಈತ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ನಿವಾಸಿ. ಗಾಂಜಾ ಪ್ರಕರಣದಲ್ಲಿ ಬಸನಗೌಡನನ್ನು ವಶಕ್ಕೆ ಪಡೆದು ಬೆಳಗಾವಿ ಗ್ರಾಮೀಣ ಠಾಣೆಗೆ ಪೊಲೀಸರು ಕರೆತರಲಾಗಿತ್ತು. ಕರೆತರುತ್ತಿದ್ದಾಗ ಕಾಕತಿ ಬಳಿ ಬಸನಗೌಡ ಪಾಟೀಲ್ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಕಾಕತಿಯ ಖಾಸಗಿ ಕ್ಲಿನಿಕ್‌ನಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಬೆಳಗಾವಿ ಗ್ರಾಮೀಣ ಠಾಣೆಗೆ ಕರೆತರಲಾಗಿತ್ತು.

ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಬಸನಗೌಡ ಪಾಟೀಲ್ ಮತ್ತೆ ಅಸ್ವಸ್ಥನಾಗಿದ್ದ. ಬಳಿಕ ಬಿಮ್ಸ್ ಆಸ್ಪತ್ರೆಗೆ ಬಸನಗೌಡನನ್ನು ಕರೆದೊಯ್ಯಲಾಗಿತ್ತು. ಅಲ್ಲಿ ಇಸಿಜಿ ಮಾಡಿಸಿದಾಗ ಹೃದಯಾಘಾತವಾದದ್ದು ಗೊತ್ತಾಗಿದೆ. ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಆರೋಗ್ಯದಲ್ಲಿ ಏರುಪೇರಾದ ತಕ್ಷಣ ಚಿಕಿತ್ಸೆ ಕೊಡಿಸಿದ್ದರೆ ಬದುಕುತ್ತಿದ್ದ ಎನ್ನಲಾಗಿದೆ. ಇದೀಗ ಕಸ್ಟೋಡಿಯಲ್ ಡೆತ್ ಪ್ರಕರಣ ದಾಖಲಿಸಿಕೊಂಡು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ | Student death | ಮಂಗಳೂರಿನಲ್ಲಿ ವೈದ್ಯ ವಿದ್ಯಾರ್ಥಿ ಸಾವು: ತನಿಖೆಯನ್ನು ಸಿಬಿಐಗೆ ವಹಿಸಲು ಸುಪ್ರೀಂ ಆರ್ಡರ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ರಾಜಕೀಯ

MLA Muniratna: ಶಾಸಕ ಮುನಿರತ್ನ ಮೇಲಿನ ಪ್ರಕರಣದ ತನಿಖೆಗೆ ಎಸ್‌ಐಟಿಗೆ ವಹಿಸಿ ರಾಜ್ಯ ಸರ್ಕಾರ ಆದೇಶ

MLA Muniratna: ಶಾಸಕ ಮುನಿರತ್ನ ವಿರುದ್ಧ ಹಲವು ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನಿಖೆಯನ್ನು ಎಸ್‌ಐಟಿಗೆ ವಹಿಸಿ ಆದೇಶ ಹೊರಡಿಸಿದೆ.

VISTARANEWS.COM

on

By

State govt orders SIT to hand over MLA Munirathna's case
Koo

ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರನಿಗೆ ಜಾತಿ ನಿಂದನೆ, ಕೊಲೆ ಬೆದರಿಕೆ ಹಾಗೂ ಮಹಿಳೆ ಮೇಲೆ ಅತ್ಯಾಚಾರದೊಂದಿಗೆ ಹನಿಟ್ರ್ಯಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮುನಿರತ್ನ (MLA Muniratna) ವಿರುದ್ಧ ಸಾಲು ಸಾಲು ದೂರುಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಸಮಗ್ರ ತನಿಖೆಗಾಗಿ ಸಿಐಡಿಯ ವಿಶೇಷ ತನಿಖಾ ಸಂಸ್ಥೆ (SIT) ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ.

ಹಿರಿಯ ಐಪಿಎಸ್ ಅಧಿಕಾರಿ ಬಿ.ಕೆ ಸಿಂಗ್ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡಿದೆ. ಮುನಿರತ್ನ ಪ್ರಕರಣವನ್ನು SIT ತನಿಖೆ ನಡೆಸಬೇಕು ಎಂದು ಒಕ್ಕಲಿಗ ಕಾಂಗ್ರೆಸ್ ಮುಖಂಡರು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು‌. ಒಕ್ಕಲಿಗ ಕಾಂಗ್ರೆಸ್ ಜನಪ್ರತಿನಿಧಿಗಳ ಮನವಿ ಮೇರಿಗೆ SIT ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ.

ಅಕ್ಟೋಬರ್ 5ರ ವರೆಗೆ ಶಾಸಕ ಮುನಿರತ್ನಗೆ ನ್ಯಾಯಾಂಗ ಬಂಧನ

ಬೆಂಗಳೂರು: ಅತ್ಯಾಚಾರ ಹಾಗೂ ಹನಿಟ್ರ್ಯಾಪ್‌ ಪ್ರಕರಣದಲ್ಲಿ ಶಾಸಕ ಮುನಿರತ್ನ (MLA Muniratna) ಬಂಧನವಾಗಿದ್ದು, ಕಗ್ಗಲೀಪುರ ಪೊಲೀಸರು ಶನಿವಾರ 42ನೇ ಎಸಿಎಂಎಂ ವಿಶೇಷ ಜನಪ್ರತಿನಿಧಿಗಳ ಕೋರ್ಟ್‌ಗೆ ಹಾಜರು ಪಡಿಸಿದರು. ವಾದ ಆಲಿಸಿದ 42ನೇ ಎಸಿಎಂಎಂ ಕೋರ್ಟ್‌ನ ನ್ಯಾಯಾಧೀಶ ಶಿವಕುಮಾರ್ ಅವರು ಅಕ್ಟೋಬರ್ 5ರ ವರೆಗೆ ಶಾಸಕ ಮುನಿರತ್ನಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು.

ಇದಕ್ಕೂ ಮೊದಲು ಮುನಿರತ್ನ ಪರ ವಕೀಲರಿಂದ ಜಾಮೀನು ಅರ್ಜಿಗೆ ಸಲ್ಲಿಸಿದರು. ಈ ವೇಳೆ ಯಾವಾಗ, ಎಲ್ಲಿ ಬಂಧಿಸಿದರು ಎಂದು ಮುನಿರತ್ನರನ್ನು ನ್ಯಾಯಾಧೀಶರು ಪ್ರಶ್ನಿಸಿದರು. ಈ ವೇಳೆ ಜೈಲಿನಿಂದ ಬೇಲ್ ಮೇಲೆ ಹೊರ ಬಂದಾಗ ಪೊಲೀಸರು ಬಂಧಿಸಿದರು ಸ್ವಾಮಿ ಎಂದು ಉತ್ತರಿಸಿದರು. ಅರೆಸ್ಟ್ ಮೆಮೋ ಪ್ರಕ್ರಿಯೆಗಳನ್ನು ನಿಯಮಾನುಸಾರ ಪಾಲಿಸಿಲ್ಲ ಎಂದು ತನಿಖಾಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಬಳಿಕ ವಾದ ಶುರು ಮಾಡಿದ ಮುನಿರತ್ನ ಪರ ವಕೀಲ ಶಾಸಕ ಮುನಿರತ್ನ ಅವರನ್ನು ದುರುದ್ದೇಶದಿಂದ ಬಂಧಿಸಿದ್ದಾರೆ. ಜಾತಿ ನಿಂದನೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದ ಕೂಡಲೇ ಪೊಲೀಸರು ಬಂಧಿಸಿದ್ದಾರೆ. ಇಲ್ಲಿ ಸಂತ್ರಸ್ತೆ ನೇರವಾಗಿ ದೂರು ನೀಡಿಲ್ಲ. ಎಸ್‌ಪಿ ಕಚೇರಿಯಿಂದ ಬಂದ ಟಪಾಲ್ ಆಧಾರದ ಮೇಲೆ ಎಫ್ಐಆರ್ ದಾಖಲು ಮಾಡಿದ್ದಾರೆ.

ದೂರುದಾರರು ನೇರವಾಗಿ ಬಂದಿಲ್ಲ, ಹಾಗಾದರೆ ಎಫ್ಐಆರ್‌ನಲ್ಲಿ ಸಹಿ ಹೇಗೆ ಬಂತು? ಇನ್ನು ಕೇಸ್‌ಗಳು ದಾಖಲಾದರೂ ಆಶ್ಚರ್ಯ ಇಲ್ಲ. ನಿನ್ನೆ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಮಾಧ್ಯಮಗಳಲ್ಲಿ ಬೆಳಗ್ಗೆಯಿಂದಲೇ ಬಂಧನ ಎಂಬ ಸುದ್ದಿ ಪ್ರಸಾರ ಮಾಡಿದ್ದಾರೆ. ಪೊಲೀಸರು ತನಿಖೆಯ ಮಾಹಿತಿ ಸೋರಿಕೆ ಮಾಡುತ್ತಿದ್ದಾರೆ. ಮುನಿರತ್ನರನ್ನು ದುರುದ್ದೇಶದಿಂದ ಬಂಧಿಸಿದ್ದಾರೆ ಎಂದು ಮುನಿರತ್ನ ಪರ ವಕೀಲರು ವಾದ ಮಂಡಿಸಿದ್ದರು.

ಇದನ್ನೂ ಓದಿ: MLA Muniratna: ಬಿಜೆಪಿ ಪಕ್ಷದ ಒಬ್ಬೊಬ್ಬ ನಾಯಕನೂ ಮುನಿರತ್ನನಂತಹ ಮುತ್ತು ರತ್ನಗಳೇ! ಕಾಂಗ್ರೆಸ್‌ ಟೀಕೆ

ನನ್ನ ಜತೆಗೆ ಇದ್ದವರಿಂದಲೇ ದೂರು ದಾಖಲು

ಇದೇ ವೇಳೆ ಎರಡು ನಿಮಿಷ ಮಾತನಾಡಲು ಅವಕಾಶ ಮಾಡಿಕೊಡಬೇಕೆಂದು ಶಾಸಕ ಮುನಿರತ್ನ ನ್ಯಾಯಾಧೀಶರ ಬಳಿ ಕೇಳಿಕೊಂಡರು.‌ ನ್ಯಾಯಾಧೀಶರ ಸಮ್ಮತಿ ಪಡೆದು ಮಾತನಾಡಿದ ಶಾಸಕ ಮುನಿರತ್ನ, ಕಳೆದ ಐದು ವರ್ಷದಿಂದ ನನ್ನ ಜತೆ ಇದ್ದವರೇ ನನ್ನ ವಿರುದ್ಧ ದೂರುಗಳನ್ನು ನೀಡುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ನಡೆದ ಮನಸ್ತಾಪಗಳನ್ನು ಮುಂದಿಟ್ಟುಕೊಂಡು ದಿನೆದಿನೇ ಹೊಸ ಕೇಸ್‌ಗಳನ್ನು ದಾಖಲಿಸುತ್ತಿದ್ದಾರೆ.

ನಾನು ನಾಲ್ಕು ಬಾರಿ ಎಂಎಲ್‌ಎ ಆಗಿದ್ದೇನೆ. ಎಂಎಲ್‌ಎ ಸ್ಥಾನಕ್ಕಾಗಿಯೆ ಪ್ರತಿದಿನ ಕಿರುಕುಳ‌ ನೀಡುತ್ತಿದ್ದಾರೆ. ಈ ಕಿರುಕುಳಕ್ಕಿಂತ ಈಗಲೇ ನಾನು ನನ್ನ ಶಾಸಕ ಸ್ಥಾನಕ್ಕೆ ಬೇಕಾದರೆ ರಾಜೀನಾಮೆ ನೀಡುತ್ತೇನೆ ಸ್ವಾಮಿ. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿ ನಾನು, ವಿನಾ ಕಾರಣ ನನ್ನ ತೇಜೋವಧೆ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ. ಐದು ವರ್ಷದ ಹಿಂದೆ ಅತ್ಯಾಚಾರವೆಸಗಿದ್ದರೆ ಆಗಲೇ ಕೇಸ್ ದಾಖಲಿಸಬಹುದಿತ್ತು. ಎಲ್ಲ ಪೊಲೀಸ್ ಠಾಣೆಗಳು ತೆರೆದಿದ್ದವು ಎಂದು ಅಳಲು ತೋಡಿಕೊಂಡರು. ವಾದ ಆಲಿಸಿದ ನ್ಯಾಯಾಧೀಶರು ಶಾಸಕ ಮುನಿರತ್ನರಿಗೆ ಅ.5ರ ವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Murder Case : ಬೆಂಗಳೂರಿನಲ್ಲಿ ವಿವಾಹಿತೆಯನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟ ಹಂತಕ! ಕೊಲೆಗೆ ಕಾರಣ ನಿಗೂಢ

Murder Case : ಬೆಂಗಳೂರಿನಲ್ಲಿ ವಿವಾಹಿತ ಮಹಿಳೆಯನ್ನು ತುಂಡು ತುಂಡಾಗಿ ಕತ್ತರಿಸಿ ಬಳಿಕ ಮೃತದೇಹವನ್ನು ಫ್ರಿಡ್ಜ್‌ನಲ್ಲಿಟ್ಟ ಹಂತಕ ಕಾಲ್ಕಿತ್ತಿದ್ದಾನೆ. ಕೊಲೆಗೆ ಕಾರಣ ನಿಗೂಢ ವಾಗಿದ್ದು ಪೊಲೀಸರು ದೌಡಾಯಿಸಿದ್ದಾರೆ.

VISTARANEWS.COM

on

By

Killer cuts young woman into pieces and puts her in fridge
Koo

ಬೆಂಗಳೂರು: ವಿವಾಹಿತೆಯ ಭೀಕರ ಹತ್ಯೆಯು (Murder Case) ರಾಜಧಾನಿ ಬೆಂಗಳೂರನ್ನೇ ಬೆಚ್ಚಿಬೀಳುವಂತೆ ಮಾಡಿದೆ. ದೆಹಲಿಯ ಶ್ರದ್ಧಾ ವಾಕರ್‌ ಮರ್ಡರ್‌ ರೀತಿಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ವಿವಾಹಿತೆಯನ್ನು ಕೊಂದು ಬಳಿಕ ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿದ್ದಾನೆ. ನೆಲಮಂಗಲ ಮೂಲದ ಮಹಾಲಕ್ಷ್ಮಿ ಮೃತ ದುರ್ದೈವಿ. ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೇಶ್ವರ ಬ್ಲಾಕ್‌ನಲ್ಲಿ ಘಟನೆ ನಡೆದಿದೆ.

ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಡಿಸಿಪಿ ಶೇಖರ್ ತೆಕ್ಕಣ್ಣನವರ್, ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಪರಿಶೀಲನೆ ನಡೆಸುತ್ತಿದ್ದಾರೆ. ಮೃತಳ ತಾಯಿ ಹಾಗೂ ಸಹೋದರಿ ಮಹಾಲಕ್ಷ್ಮಿ ಮನೆ ಬಳಿ ಬಂದಿದ್ದಾರೆ. ಮನೆ ಬೀಗ ಒಡೆದು ಒಳ ಹೋದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಕಳೆದ ಎರಡು ದಿನಗಳಿಂದ ಮನೆಯಿಂದ ಕೆಟ್ಟ ವಾಸನೆ ಬರುತ್ತಿತ್ತು. ಹೀಗಾಗಿ ಅದೇ ಬಿಲ್ಡಿಂಗ್‌ನ ಅಕ್ಕಪಕ್ಕದವರು ಇಂದು ಮಹಾಲಕ್ಷ್ಮಿ ಸಂಬಂಧಿಕರಿಗೆ ಹೇಳಿದ್ದಾರೆ. ಮನೆ ಬೀಗ ತೆಗೆದ ಸಂದರ್ಭದಲ್ಲಿ ಶವದಿಂದ ಹುಳಗಳ ಹೊರಗೆ ಬರುತ್ತಿತ್ತು ಎನ್ನಲಾಗಿದೆ.

10 ರಿಂದ 15 ದಿನಗಳ ಹಿಂದೆ ಕೊಲೆ ನಡೆದಿದೆ ಎನ್ನಲಾಗಿದೆ. ಕಳೆದ ಮೂರು ತಿಂಗಳ ಹಿಂದಷ್ಟೆ ಮಹಾಲಕ್ಷ್ಮಿ ಬಾಡಿಗೆ ಮನೆಗೆ ಬಂದಿದ್ದಳು. ಯುವಕನೊರ್ವ ಆಕೆಯನ್ನು ಪಿಕ್ ಅಪ್ ಮತ್ತು ಡ್ರಾಪ್ ಮಾಡುತ್ತಿದ್ದ. ಆತನೇ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. 30ಕ್ಕೂ ಹೆಚ್ಚು ತುಂಡುಗಳನ್ನಾಗಿ ದೇಹವನ್ನು ಕತ್ತರಿಸಿ ಬಳಿಕ ಫ್ರಿಜ್ಜ್‌ನಲ್ಲಿ ಇಟ್ಟು ಕೊಲೆಗಾರ ಎಸ್ಕೇಪ್‌ ಆಗಿದ್ದಾನೆ. ಸದ್ಯ ಪೊಲೀಸರು ಸ್ಥಳೀಯರಿಂದ ಮಾಹಿತಿ ಕಲೆ ಹಾಕುತ್ತಿದ್ದು, ಅಕ್ಕ ಪಕ್ಕದ ಮನೆಗಳ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಸಲಾಗುತ್ತಿದೆ.

ಈಗಾಗಲೇ ಮದುವೆ ಆಗಿರುವ ಮಹಾಲಕ್ಷ್ಮಿ ನೆಲಮಂಗಲದಲ್ಲಿರುವ ಪತಿಯಿಂದ ದೂರಾಗಿ ಒಂಟಿಯಾಗಿ ವೈಯಾಲಿಕಾವಲ್‌ನಲ್ಲಿ ವಾಸವಿದ್ದಳು. ಈ ದಂಪತಿಗೆ ನಾಲ್ಕು ವರ್ಷದ ಮಗು ಕೂಡ ಇದೆ ಎನ್ನಲಾಗಿದೆ. ಹಲವು ದಿನದಿಂದ ಕರೆ ಮಾಡಿದ್ದರು ಪತ್ನಿ ಮಹಾಲಕ್ಷ್ಮಿ ಸ್ವೀಕರಿಸುತ್ತಿರಲಿಲ್ಲ. ಇಂದು ಪತಿ ಬಂದು ಬಾಗಿಲು ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಬಾಗಿಲಯ ತರೆದಾಗ ಫ್ರಿಡ್ಜ್‌ನಿಂದ ಹುಳಗಳು ಹೊರಬರುತ್ತಿತ್ತು. ಸುಮಾರು 10-15ದಿನದ ಹಿಂದೆಯೆ ಕೊಲೆ ನಡೆದಿರುವ ಶಂಕೆ‌ ಇದೆ. ಈ ಕೃತ್ಯದ ಕುರಿತು ಮಾಹಿತಿ ನೀಡಿದ ಸ್ಥಳೀಯರು, ಸ್ವಲ್ಪ ಸಮಯದ ಕಾಲ ಮಹಾಲಕ್ಷ್ಮಿ ಅಣ್ಣ ಜೊತೆಗಿದ್ದರು. ಮಹಿಳೆಯ ಬಗೆಗೆ ಯಾವುದೇ ರೀತಿಯ ಮಾಹಿತಿ ಗೊತ್ತಿಲ್ಲ. ನಮ್ಮ ಬಳಿ ಮಾತನಾಡುವಾಗ ಕನ್ನಡದಲ್ಲೇ ಮಾತನಾಡುತ್ತಿದ್ದರು. ಸ್ಥಳೀಯ ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.

ಪೊಲೀಸರು ಮಹಾಲಕ್ಷ್ಮಿ ಪತಿಯನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಕೃತ್ಯ ಎಸಗಿದವರು ಯಾರು? ಯಾಕಾಗಿ ಕೊಲೆ ಮಾಡಲಾಯಿತು ಎಂಬುದು ತನಿಖೆಯಿಂದ ಹೊರಬರಬೇಕಿದೆ.

ತಮಿಳುನಾಡಿನಲ್ಲಿ ಬರ್ಬರವಾಗಿ ಕೊಲೆಯಾದ ಬೆಂಗಳೂರು ಯುವಕ

ಬೆಂಗಳೂರಿನ ಯುವಕ ತಮಿಳುನಾಡಿನಲ್ಲಿ ಬರ್ಬರವಾಗಿ ಹತ್ಯೆ ಆಗಿದ್ದಾನೆ. ವರ್ತೂರು ಸಮೀಪದ ರೇವಂತ್ ಕೊಲೆಯಾದವನು. ಗಣಪತಿ ಇಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಕೊಲೆಯಾಗಿರುವ ಶಂಕೆ ಇದೆ. ಎರಡು ದಿನದ ಹಿಂದೆಯೇ ರೇವಂತ್ ಕೊಲೆಯಾಗಿದ್ದು, ಕೈಯಲ್ಲಿದ್ದ ಹಚ್ಚೆಯ ಆಧಾರದ ಮೇಲೆ ರೇವಂತ್ ಗುರುತು ಪತ್ತೆ ಮಾಡಲಾಗಿದೆ. ಮೃತನ ಗುರುತು ಪತ್ತೆ ಹಚ್ಚಿದ ತಮಿಳುನಾಡು ಪೊಲೀಸರು, ವರ್ತೂರು ಠಾಣಾ ವ್ಯಾಪ್ತಿಯ ಸೂಲಕೊಂಡೆ ಮೂಲದವನು ಎಂದು ಗೊತ್ತಾಗಿದೆ. ರೇವಂತ್ ಪರಿಚಯಸ್ಥರೊಬ್ಬರು ಕಾರಿನಲ್ಲಿ ತಮಿಳುನಾಡಿಗೆ ಕರೆದೊಯ್ದಿರುವ ಮಾಹಿತಿ ಇದೆ. ತಮಿಳುನಾಡಿನ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Murder Case : ಬ್ಲ್ಯಾಕ್‌ ಮ್ಯಾಜಿಕ್‌ ಮಾಡಿ ತನ್ನ ಹುಡುಗಿ ಮೇಲೆ ಕಣ್ಣು ಹಾಕಿ ಪಟಾಯಿಸಿಕೊಂಡವನ ರಕ್ತಹರಿಸಿದ ಯುವಕ

Murder Case : ಬ್ಲ್ಯಾಕ್‌ ಮ್ಯಾಜಿಕ್‌ ಮಾಡಿ ತನ್ನ ಹುಡುಗಿ ಮೇಲೆ ಕಣ್ಣು ಹಾಕಿ ಪಟಾಯಿಸಿಕೊಂಡವನನ್ನು ಯುವಕನೊಬ್ಬ ಕೊಂದು ಹಾಕಿದ್ದಾನೆ

VISTARANEWS.COM

on

By

A friend impresses the girl by doing black magic
ಕೊಲೆಯಾದ ವರುಣ್‌ ಹಾಗೂ ಕೊಲೆ ಆರೋಪಿ ದಿವೇಶ್‌
Koo

ಬೆಂಗಳೂರು: ಬೆಂಗಳೂರಿನಲ್ಲಿ ಪ್ರೀತಿ ವಿಚಾರಕ್ಕೆ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕೊಲೆ (Murder case) ಹಿಂದಿನ ವಿಚಾರವನ್ನು ಬಾಯ್ಬಿಟ್ಟಿದ್ದಾನೆ. ತಾನು ಪ್ರೀತಿಸುತ್ತಿದ್ದ ಯುವತಿಗೆ ಬ್ಲ್ಯಾಕ್‌ ಮ್ಯಾಜಿಕ್ ಮಾಡಿ ವರುಣ್‌ ತನ್ನ ಕಡೆಗೆ ಸೆಳೆದುಕೊಂಡಿದ್ದ. ಅಲ್ಲದೇ ಆಕೆಯನ್ನು ಪಾರ್ಕ್, ಸಿನಿಮಾ ಅಂತ ಸುತ್ತಾಡಿಸುತ್ತಿದ್ದ. ಈ ವಿಚಾರ ನನಗೆ ಗೊತ್ತಾಗಿ ಕೇಳಿದಾಗ ವರುಣ್ ಗಲಾಟೆ ಮಾಡಿದ್ದ.

ಬ್ಲ್ಯಾಕ್‌ ಮ್ಯಾಜಿಕ್ ಮಾಡಿ ನನ್ನ ಹುಡುಗಿಯನ್ನೇ ಸೆಳೆದುಕೊಳ್ಳುತ್ತಿಯಾ ಎಂದು ಕೇಳಿದ್ದೆ. ಇದೇ ವಿಚಾರಕ್ಕೆ ಗಲಾಟೆ ಆಯಿತು. ಎಷ್ಟೇ ಹೇಳಿದರೂ ನನ್ನ ಮಾತನ್ನು ವರುಣ್ ಕೇಳಲಿಲ್ಲ. ಇದರಿಂದ ಆಗಾಗ ಗಲಾಟೆ ಆಗುತ್ತಿತ್ತು. ಇವತ್ತು ಬೆಳಗ್ಗೆಯೂ ಗಲಾಟೆಯಾಗಿತ್ತು. ಈ ವೇಳೆ ವರುಣ್ ಮೇಲೆ ಹಾಲೋ ಬ್ರಿಕ್ಸ್ ಎತ್ತಿ ಹಾಕಿ ಕೊಲೆ ಮಾಡಿದ್ದೇನೆ ಎಂದು ಆರೋಪಿ ದಿವೇಶ್ ಒಪ್ಪಿಕೊಂಡಿದ್ದಾನೆ.

ಒಂದು ವರ್ಷದ ಹಿಂದೆ ಯುವತಿ ಸೇರಿದಂತೆ ಒಂದೇ ರೂಮ್‌ನಲ್ಲಿ ಸ್ನೇಹಿತರಿಬ್ಬರು ಬಾಡಿಗೆ ಮನೆ ಮಾಡಿಕೊಂಡಿದ್ದರು. ವರುಣ್ ಕೋಟ್ಯಾನ್, ದಿವೇಶ್ ಹಾಗೂ ಸನಾ ಮೂವರು ಒಂದೆ ಮನೆಯಲ್ಲಿ ವಾಸವಿದ್ದರು. ವರುಣ್ ಸೇಫ್ಟಿ ಮ್ಯಾನೇಜರ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಆರೋಪಿ ದಿವೇಶ್ ಜೊಮೋಟೋ ಕಂಪನಿಯಲ್ಲಿ ಕೆಲಸಕ್ಕೆ ಇದ್ದ. ಸನಾ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಳು.

ಇದನ್ನೂ ಓದಿ: Murder case : ಹುಡುಗಿ ವಿಷ್ಯಕ್ಕೆ ಬಿತ್ತು ಹೆಣ; ಕಲ್ಲು ಎತ್ತಿ ಹಾಕಿ ಸ್ನೇಹಿತನನ್ನೇ ಕೊಂದ

ನಿನ್ನೆ ರಾತ್ರಿ ಈ ಮೂವರು ಸೇರಿ ಪಾರ್ಟಿ ಮಾಡಿದ್ದರು. ಮದ್ಯ ಸೇವಿಸುತ್ತಿದ್ದಂತೆ ಸನಾ ವಿಚಾರಕ್ಕೆ ಹುಡುಗರಿಬ್ಬರು ಗಲಾಟೆ ಶುರು ಮಾಡಿದ್ದರು. ಕುಡಿದ ಅಮಲಿನಲ್ಲಿ ಮಾತಾಡುತ್ತಿದ್ದಾನೆ ಎಂದು ವರುಣ್ ರಾತ್ರಿ ಸುಮ್ಮನಾಗಿದ್ದಾನೆ. ಬೆಳಗ್ಗೆ ಎದ್ದ ತಕ್ಷಣ ಮತ್ತೆ ದಿವೇಶ್ ಗಲಾಟೆ ತೆಗೆದಿದ್ದಾನೆ. ನನ್ನ ಹುಡುಗಿ ಮೇಲೆ ನೀನು ಕಣ್ ಹಾಕ್ತೀಯಾ ಅಂತ ವರುಣ್ ಜತೆ ಜಗಳ ಮಾಡಿದ್ದಾನೆ. ಬಳಿಕ ಗಲಾಟೆ ಮಾಡಿಕೊಂಡು ಬಿಲ್ಡಿಂಗ್ ಕೆಳಗೆ ಬಂದಿದ್ದಾರೆ. ವರುಣ್‌ನನ್ನು ತಳ್ಳಿ ಕೆಳಗೆ ಬೀಳಿಸಿದ ದಿವೇಶ್‌ ನಂತರ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಇನ್ನೊಬ್ಬ ಯುವಕ ಕೂಡ ದಿವೇಶ್ ಜತೆ ಇದ್ದ ಎಂಬ ಮಾಹಿತಿ ಇದೆ. ಸದ್ಯ ಎಲ್ಲಾ ವಿಚಾರಕ್ಕೆ ಸಂಬಂಧಪಟ್ಟಂತೆ ಸಂಜಯ್ ನಗರ ಪೊಲೀಸರಿಂದ ತನಿಖೆ ಮುಂದುವರಿದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

MLA Muniratna: ಎಂಎಲ್‌ಎ ಸ್ಥಾನಕ್ಕಾಗಿ ಕಿರುಕುಳ, ಈಗಲೇ ರಾಜಿನಾಮೆ ಕೊಡುವೆ! ನ್ಯಾಯಾಧೀಶರ ಮುಂದೆ ಮುನಿರತ್ನ ಅಳಲು

MLA Muniratna : ಜಾತಿ ನಿಂದನೆ ಕೇಸ್‌ನಲ್ಲಿ ಹೊರಬಂದಿದ್ದ ಶಾಸಕ ಮುನಿರತ್ನ ಇದೀಗ ಮತ್ತೆ ಸೆರೆವಾಸ ಅನುಭವಿಸುವಂತಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿರುವ ಮುನಿರತ್ನರನ್ನು ಶನಿವಾರ ಕೋರ್ಟ್‌ಗೆ ಹಾಜರು ಪಡಿಸಲಾಗಿತ್ತು. ವಾದ ಆಲಿಸಿದ ಕೋರ್ಟ್‌ ಅ.5ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

VISTARANEWS.COM

on

By

Rape case MLA Munirathna sent to judicial custody till Oct 5
Koo

ಬೆಂಗಳೂರು: ಅತ್ಯಾಚಾರ ಹಾಗೂ ಹನಿಟ್ರ್ಯಾಪ್‌ ಪ್ರಕರಣದಲ್ಲಿ ಶಾಸಕ ಮುನಿರತ್ನ (MLA Muniratna) ಬಂಧನವಾಗಿದ್ದು, ಕಗ್ಗಲೀಪುರ ಪೊಲೀಸರು ಶನಿವಾರ 42ನೇ ಎಸಿಎಂಎಂ ವಿಶೇಷ ಜನಪ್ರತಿನಿಧಿಗಳ ಕೋರ್ಟ್‌ಗೆ ಹಾಜರು ಪಡಿಸಿದರು. ವಾದ ಆಲಿಸಿದ 42ನೇ ಎಸಿಎಂಎಂ ಕೋರ್ಟ್‌ನ ನ್ಯಾಯಾಧೀಶ ಶಿವಕುಮಾರ್ ಅವರು ಅಕ್ಟೋಬರ್ 5ರ ವರೆಗೆ ಶಾಸಕ ಮುನಿರತ್ನಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು.

ಇದಕ್ಕೂ ಮೊದಲು ಮುನಿರತ್ನ ಪರ ವಕೀಲರಿಂದ ಜಾಮೀನು ಅರ್ಜಿಗೆ ಸಲ್ಲಿಸಿದರು. ಈ ವೇಳೆ ಯಾವಾಗ, ಎಲ್ಲಿ ಬಂಧಿಸಿದರು ಎಂದು ಮುನಿರತ್ನರನ್ನು ನ್ಯಾಯಾಧೀಶರು ಪ್ರಶ್ನಿಸಿದರು. ಈ ವೇಳೆ ಜೈಲಿನಿಂದ ಬೇಲ್ ಮೇಲೆ ಹೊರ ಬಂದಾಗ ಪೊಲೀಸರು ಬಂಧಿಸಿದರು ಸ್ವಾಮಿ ಎಂದು ಉತ್ತರಿಸಿದರು. ಅರೆಸ್ಟ್ ಮೆಮೋ ಪ್ರಕ್ರಿಯೆಗಳನ್ನು ನಿಯಮಾನುಸಾರ ಪಾಲಿಸಿಲ್ಲ ಎಂದು ತನಿಖಾಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಬಳಿಕ ವಾದ ಶುರು ಮಾಡಿದ ಮುನಿರತ್ನ ಪರ ವಕೀಲ ಶಾಸಕ ಮುನಿರತ್ನ ಅವರನ್ನು ದುರುದ್ದೇಶದಿಂದ ಬಂಧಿಸಿದ್ದಾರೆ. ಜಾತಿ ನಿಂದನೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದ ಕೂಡಲೇ ಪೊಲೀಸರು ಬಂಧಿಸಿದ್ದಾರೆ. ಇಲ್ಲಿ ಸಂತ್ರಸ್ತೆ ನೇರವಾಗಿ ದೂರು ನೀಡಿಲ್ಲ. ಎಸ್‌ಪಿ ಕಚೇರಿಯಿಂದ ಬಂದ ಟಪಾಲ್ ಆಧಾರದ ಮೇಲೆ ಎಫ್ಐಆರ್ ದಾಖಲು ಮಾಡಿದ್ದಾರೆ.

ದೂರುದಾರರು ನೇರವಾಗಿ ಬಂದಿಲ್ಲ, ಹಾಗಾದರೆ ಎಫ್ಐಆರ್‌ನಲ್ಲಿ ಸಹಿ ಹೇಗೆ ಬಂತು? ಇನ್ನು ಕೇಸ್‌ಗಳು ದಾಖಲಾದರೂ ಆಶ್ಚರ್ಯ ಇಲ್ಲ. ನಿನ್ನೆ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಮಾಧ್ಯಮಗಳಲ್ಲಿ ಬೆಳಗ್ಗೆಯಿಂದಲೇ ಬಂಧನ ಎಂಬ ಸುದ್ದಿ ಪ್ರಸಾರ ಮಾಡಿದ್ದಾರೆ. ಪೊಲೀಸರು ತನಿಖೆಯ ಮಾಹಿತಿ ಸೋರಿಕೆ ಮಾಡುತ್ತಿದ್ದಾರೆ. ಮುನಿರತ್ನರನ್ನು ದುರುದ್ದೇಶದಿಂದ ಬಂಧಿಸಿದ್ದಾರೆ ಎಂದು ಮುನಿರತ್ನ ಪರ ವಕೀಲರು ವಾದ ಮಂಡಿಸಿದ್ದರು.

ಇದನ್ನೂ ಓದಿ: MLA Muniratna: ಬಿಜೆಪಿ ಪಕ್ಷದ ಒಬ್ಬೊಬ್ಬ ನಾಯಕನೂ ಮುನಿರತ್ನನಂತಹ ಮುತ್ತು ರತ್ನಗಳೇ! ಕಾಂಗ್ರೆಸ್‌ ಟೀಕೆ

ನನ್ನ ಜತೆಗೆ ಇದ್ದವರಿಂದಲೇ ದೂರು ದಾಖಲು

ಇದೇ ವೇಳೆ ಎರಡು ನಿಮಿಷ ಮಾತನಾಡಲು ಅವಕಾಶ ಮಾಡಿಕೊಡಬೇಕೆಂದು ಶಾಸಕ ಮುನಿರತ್ನ ನ್ಯಾಯಾಧೀಶರ ಬಳಿ ಕೇಳಿಕೊಂಡರು.‌ ನ್ಯಾಯಾಧೀಶರ ಸಮ್ಮತಿ ಪಡೆದು ಮಾತನಾಡಿದ ಶಾಸಕ ಮುನಿರತ್ನ, ಕಳೆದ ಐದು ವರ್ಷದಿಂದ ನನ್ನ ಜತೆ ಇದ್ದವರೇ ನನ್ನ ವಿರುದ್ಧ ದೂರುಗಳನ್ನು ನೀಡುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ನಡೆದ ಮನಸ್ತಾಪಗಳನ್ನು ಮುಂದಿಟ್ಟುಕೊಂಡು ದಿನೆದಿನೇ ಹೊಸ ಕೇಸ್‌ಗಳನ್ನು ದಾಖಲಿಸುತ್ತಿದ್ದಾರೆ.

ನಾನು ನಾಲ್ಕು ಬಾರಿ ಎಂಎಲ್‌ಎ ಆಗಿದ್ದೇನೆ. ಎಂಎಲ್‌ಎ ಸ್ಥಾನಕ್ಕಾಗಿಯೆ ಪ್ರತಿದಿನ ಕಿರುಕುಳ‌ ನೀಡುತ್ತಿದ್ದಾರೆ. ಈ ಕಿರುಕುಳಕ್ಕಿಂತ ಈಗಲೇ ನಾನು ನನ್ನ ಶಾಸಕ ಸ್ಥಾನಕ್ಕೆ ಬೇಕಾದರೆ ರಾಜೀನಾಮೆ ನೀಡುತ್ತೇನೆ ಸ್ವಾಮಿ. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿ ನಾನು, ವಿನಾ ಕಾರಣ ನನ್ನ ತೇಜೋವಧೆ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ. ಐದು ವರ್ಷದ ಹಿಂದೆ ಅತ್ಯಾಚಾರವೆಸಗಿದ್ದರೆ ಆಗಲೇ ಕೇಸ್ ದಾಖಲಿಸಬಹುದಿತ್ತು. ಎಲ್ಲ ಪೊಲೀಸ್ ಠಾಣೆಗಳು ತೆರೆದಿದ್ದವು ಎಂದು ಅಳಲು ತೋಡಿಕೊಂಡರು. ವಾದ ಆಲಿಸಿದ ನ್ಯಾಯಾಧೀಶರು ಶಾಸಕ ಮುನಿರತ್ನರಿಗೆ ಅ.5ರ ವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
State govt orders SIT to hand over MLA Munirathna's case
ರಾಜಕೀಯ17 ನಿಮಿಷಗಳು ago

MLA Muniratna: ಶಾಸಕ ಮುನಿರತ್ನ ಮೇಲಿನ ಪ್ರಕರಣದ ತನಿಖೆಗೆ ಎಸ್‌ಐಟಿಗೆ ವಹಿಸಿ ರಾಜ್ಯ ಸರ್ಕಾರ ಆದೇಶ

Killer cuts young woman into pieces and puts her in fridge
ಬೆಂಗಳೂರು1 ಗಂಟೆ ago

Murder Case : ಬೆಂಗಳೂರಿನಲ್ಲಿ ವಿವಾಹಿತೆಯನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟ ಹಂತಕ! ಕೊಲೆಗೆ ಕಾರಣ ನಿಗೂಢ

A friend impresses the girl by doing black magic
ಬೆಂಗಳೂರು3 ಗಂಟೆಗಳು ago

Murder Case : ಬ್ಲ್ಯಾಕ್‌ ಮ್ಯಾಜಿಕ್‌ ಮಾಡಿ ತನ್ನ ಹುಡುಗಿ ಮೇಲೆ ಕಣ್ಣು ಹಾಕಿ ಪಟಾಯಿಸಿಕೊಂಡವನ ರಕ್ತಹರಿಸಿದ ಯುವಕ

Rape case MLA Munirathna sent to judicial custody till Oct 5
ಬೆಂಗಳೂರು5 ಗಂಟೆಗಳು ago

MLA Muniratna: ಎಂಎಲ್‌ಎ ಸ್ಥಾನಕ್ಕಾಗಿ ಕಿರುಕುಳ, ಈಗಲೇ ರಾಜಿನಾಮೆ ಕೊಡುವೆ! ನ್ಯಾಯಾಧೀಶರ ಮುಂದೆ ಮುನಿರತ್ನ ಅಳಲು

Man murdered by friend in Bengaluru
ಬೆಂಗಳೂರು6 ಗಂಟೆಗಳು ago

Murder case : ಹುಡುಗಿ ವಿಷ್ಯಕ್ಕೆ ಬಿತ್ತು ಹೆಣ; ಕಲ್ಲು ಎತ್ತಿ ಹಾಕಿ ಸ್ನೇಹಿತನನ್ನೇ ಕೊಂದ

mysuru silk sarees 200 mysore silk sarees sold in just 7 minutes
ಬೆಂಗಳೂರು6 ಗಂಟೆಗಳು ago

Mysuru silk sarees : ಜಸ್ಟ್‌ 7 ನಿಮಿಷದಲ್ಲಿ 200 ಮೈಸೂರು ಸಿಲ್ಕ್‌ ಸೀರೆ ಸೇಲ್; ಕಿ.ಮೀ ಗಟ್ಟಲೇ ಕ್ಯೂ ನಿಂತರೂ ಸಿಗ್ತಿಲ್ಲ

Cauvery water supply to half of Bengaluru suspended
ಬೆಂಗಳೂರು6 ಗಂಟೆಗಳು ago

Water supply : ಇಂದು ಮಧ್ಯಾಹ್ನದಿಂದಲೇ ಬೆಂಗಳೂರಿನ ಅರ್ಧಭಾಗಕ್ಕೆ ಕಾವೇರಿ ನೀರಿಲ್ಲ; ಎಲ್ಲೆಲ್ಲಿ ಪೂರೈಕೆ ಸ್ಥಗಿತ

Karnataka Weather Forecast
ಮಳೆ13 ಗಂಟೆಗಳು ago

Karnataka Weather : ವಾರಾಂತ್ಯದಲ್ಲಿ ರಾಜ್ಯಾದ್ಯಂತ ಸಾಧಾರಣ ಮಳೆ ಮುನ್ಸೂಚನೆ

Dina Bhavishya
ಭವಿಷ್ಯ13 ಗಂಟೆಗಳು ago

Dina Bhavishya : ದಿನದ ಮಟ್ಟಿಗೆ ಖರ್ಚು ಹೆಚ್ಚು; ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Use nandini ghee compulsorily in temple prasadam Order of the Department of Religious Endowments
ಕರ್ನಾಟಕ1 ದಿನ ago

Nandini ghee: ದೇವಸ್ಥಾನಗಳ ಪ್ರಸಾದದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪವನ್ನೇ ಬಳಸಿ; ಧಾರ್ಮಿಕ ದತ್ತಿ ಇಲಾಖೆ ಆದೇಶ

Kannada Serials
ಕಿರುತೆರೆ11 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ11 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್3 ವಾರಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್3 ವಾರಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ4 ವಾರಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ1 ತಿಂಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 ತಿಂಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 ತಿಂಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 ತಿಂಗಳುಗಳು ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌