Shraddha Murder Case | ಶ್ರದ್ಧಾ ಹತ್ಯೆ ಕೇಸ್​​ ತನಿಖೆಗೆ ಪೊಲೀಸರಿಗೆ ಸಿಕ್ಕಿತೊಂದು ಮಹತ್ವದ ಸುಳಿವು - Vistara News

ದಿಲ್ಲಿ ಮರ್ಡರ್

Shraddha Murder Case | ಶ್ರದ್ಧಾ ಹತ್ಯೆ ಕೇಸ್​​ ತನಿಖೆಗೆ ಪೊಲೀಸರಿಗೆ ಸಿಕ್ಕಿತೊಂದು ಮಹತ್ವದ ಸುಳಿವು

ಆರು ತಿಂಗಳ ಹಿಂದೆ ಅಫ್ತಾಬ್​ ಅತ್ಯಂತ ಕ್ರೂರವಾಗಿ ಶ್ರದ್ಧಾ ವಾಳ್ಕರ್​​ಳನ್ನು ಹತ್ಯೆಗೈದಿದ್ದ. ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ಫ್ರಿಜ್​ನಲ್ಲಿಟ್ಟುಕೊಂಡಿದ್ದ. ಪ್ರತಿದಿನ ಒಂದೊಂದೇ ತುಂಡುಗಳನ್ನು ತೆಗೆದುಕೊಂಡು ಹೋಗಿ ದೆಹಲಿಯ ವಿವಿಧ ಭಾಗಗಳಲ್ಲಿ ಎಸೆದು ಬರುತ್ತಿದ್ದ.

VISTARANEWS.COM


on

CCTV footage Related Shraddha murder case Found Near Forest
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ತನ್ನ ಲಿವ್​ ಇನ್ ಪಾರ್ಟ್ನರ್​ ಶ್ರದ್ಧಾಳನ್ನು ಅತ್ಯಂತ ವಿಕೃತವಾಗಿ ಹತ್ಯೆ ಮಾಡಿರುವ ಅಫ್ತಾಬ್​ ಅಮೀನ್​ ಪೂನಾವಾಲಾ ಸದ್ಯ ಪೊಲೀಸ್​ ಕಸ್ಟಡಿಯಲ್ಲಿದ್ದಾನೆ. ಆದರೆ ವಿಚಾರಣೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಕಾರಣಕ್ಕೆ ಅವನಿಗೆ ಮಂಪರು ಪರೀಕ್ಷೆ ನಡೆಸಲು ದೆಹಲಿ ಹೈಕೋರ್ಟ್ ಅನುಮತಿಯನ್ನೂ ನೀಡಿದೆ. ಕೊಲೆ ನಡೆದು ಆರು ತಿಂಗಳುಗಳೇ ಕಳೆದು ಹೋಗಿರುವುದರಿಂದ ಸಾಕ್ಷಿಗಳನ್ನು ಕಲೆಹಾಕುವುದೂ ತುಸು ವಿಳಂಬವೇ ಆಗುತ್ತಿದೆ. ಇವೆಲ್ಲವೂ ತನಿಖೆಗೆ ತಡೆಯೊಡ್ಡುತ್ತಿರುವ ಸಂದರ್ಭದಲ್ಲಿ, ಒಂದು ಮಹತ್ವದ ಪುರಾವೆ ಪೊಲೀಸರಿಗೆ ಸಿಕ್ಕಿದೆ. ಮೆಹ್ರೌಲಿ ಅರಣ್ಯ ಪ್ರದೇಶದ ಬಳಿ ಇದ್ದ ಒಂದು ಸಿಸಿಟಿವಿ ಫೂಟೇಜ್​ ಸಿಕ್ಕಿದ್ದು, ಅದು ಅಫ್ತಾಬ್​​ಗೆ ಸಂಬಂಧಪಟ್ಟಿದ್ದು ಎನ್ನಲಾಗಿದೆ. ಈ ಸಿಸಿಟಿವಿ ಫೂಟೇಜ್​ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೊಲೀಸರು ನೀಡಿಲ್ಲ.

ಆರು ತಿಂಗಳ ಹಿಂದೆ ಅಫ್ತಾಬ್​ ಅತ್ಯಂತ ಕ್ರೂರವಾಗಿ ಶ್ರದ್ಧಾ ವಾಳ್ಕರ್​​ಳನ್ನು ಹತ್ಯೆಗೈದಿದ್ದ. ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ಫ್ರಿಜ್​ನಲ್ಲಿಟ್ಟುಕೊಂಡಿದ್ದ. ಪ್ರತಿದಿನ ಒಂದೊಂದೇ ತುಂಡುಗಳನ್ನು ತೆಗೆದುಕೊಂಡು ಹೋಗಿ ದೆಹಲಿಯ ವಿವಿಧ ಭಾಗಗಳಲ್ಲಿ ಎಸೆದು ಬರುತ್ತಿದ್ದ. ಶ್ರದ್ಧಾ ಕಾಣೆಯಾಗಿದ್ದಾಳೆಂದು ಆಕೆಯ ಪಾಲಕರು ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸಿದಾಗ ಆಕೆ ಹತ್ಯೆಯಾಗಿದ್ದು ಗೊತ್ತಾಗಿದೆ. ಆರೋಪಿ ಅಫ್ತಾಬ್ ಬಂಧನವಾಗಿದೆ. ಆದರೆ ಇಡೀ ಘಟನೆಯ ಕೆಲ ಕೊಂಡಿಗಳು ತಪ್ಪಿ ಹೋಗಿದ್ದು, ಪೊಲೀಸರು ಪುರಾವೆ ಹುಡುಕುತ್ತಿದ್ದಾರೆ. ಇದುವರೆಗೂ ಶ್ರದ್ಧಾಳನ್ನು ಹತ್ಯೆ ಮಾಡಲು ಅಫ್ತಾಬ್ ಬಳಸಿದ್ದ ಆಯುಧ, ಆಕೆಯ ಕತ್ತರಿಸಿದ ತಲೆ, ಅವಳ ಮೊಬೈಲ್​ ಸಿಕ್ಕಿಲ್ಲ. ಇವು ಮೂರು ಅತ್ಯಂತ ಪ್ರಮುಖವಾದ ಸಾಕ್ಷಿಗಳಾಗಿವೆ.

ಅಫ್ತಾಬ್​ ಪೊಲೀಸರ ಯಾವ ಪ್ರಶ್ನೆಗೂ ಸರಿಯಾದ ಉತ್ತರ ನೀಡುತ್ತಿಲ್ಲ. ಮಂಪರು ಪರೀಕ್ಷೆಗೆ ಒಪ್ಪುತ್ತಿಲ್ಲ. ಅಫ್ತಾಬ್​​ನ ಹಲವು ಫೋಟೋಗಳು ಪೊಲೀಸರಿಗೆ ಸಿಕ್ಕಿದ್ದು, ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಇನ್ನು ಆತ ಅರಣ್ಯ ಪ್ರದೇಶದಲ್ಲಿ ಶ್ರದ್ಧಾ ದೇಹದ ತುಂಡುಗಳನ್ನು ಎಸೆದಿದ್ದಾನೆ. ಆದರೆ ಆ ಅರಣ್ಯ ಪ್ರದೇಶಗಳ ಮಾರ್ಗಗಳನ್ನು ಮ್ಯಾಪ್​ ಮಾಡುವುದೂ ಪೊಲೀಸರಿಗೆ ಕಷ್ಟಕರವಾದ ಟಾಸ್ಕ್​ ಆಗಿದೆ. ಇನ್ನು ಅಫ್ತಾಬ್​ ಸಂಚರಿಸಿದ್ದಾನೆ ಎನ್ನಲಾದ ಮಾರ್ಗ, ಹೋಗಿದ್ದ ಪ್ರದೇಶಗಳ ಸಿಸಿಟಿವಿ ಕ್ಯಾಮರಾ ಫೂಟೇಜ್​ಗಳನ್ನು ಪರಿಶೀಲನೆ ಮಾಡೋಣವೆಂದರೆ ಎಷ್ಟೋ ಕ್ಯಾಮರಾಗಳಲ್ಲಿ ಆರುತಿಂಗಳಷ್ಟು ಹಳೇ ಫೂಟೇಜ್​ಗಳೇ ಇಲ್ಲ ಎಂದೂ ಹೇಳಲಾಗಿದೆ. ಇದೆಲ್ಲದರ ಮಧ್ಯೆ ಮೆಹ್ರೌಲಿ ಅರಣ್ಯ ಪ್ರದೇಶ ಬಳಿ ಒಂದು ಸಿಸಿಟಿವಿ ಕ್ಯಾಮರಾದಲ್ಲಿ ಅಫ್ತಾಬ್​ಗೆ ಸಂಬಂಧಪಟ್ಟ ಮಹತ್ವದ ಫೂಟೇಜ್​ಗಳು ಸಿಕ್ಕಿವೆ.

ಇದನ್ನೂ ಓದಿ:Delhi Crime | ವಿಕೃತ ಹಂತಕ ಅಫ್ತಾಬ್‌ ನಾರ್ಕೊ ಟೆಸ್ಟ್‌ಗೆ ಕೋರ್ಟ್‌ ಅಸ್ತು, ಏನಿದು ಪರೀಕ್ಷೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ದಿಲ್ಲಿ ಮರ್ಡರ್

Murder: ಕಪಾಟಿನಲ್ಲಿತ್ತು ಯುವತಿಯ ಶವ; ಲಿವ್ ಇನ್‌ ಸಂಬಂಧದಲ್ಲಿದ್ದ ಗೆಳೆಯ ನಾಪತ್ತೆ!

Murder: ಮಗಳ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಆತಂಕಗೊಂಡ ತಂದೆ ಆಕೆಯನ್ನು ಹುಡುಕಿಕೊಂಡು ಆಕೆ ವಾಸವಿದ್ದ ದೆಹಲಿಯ ದ್ವಾರಕಾ ಪ್ರದೇಶದಲ್ಲಿದ್ದ ಅಪಾರ್ಟ್ ಮೆಂಟ್ ಗೆ ಬಂದಾಗ ಮನೆಯ ಕಪಾಟಿನಲ್ಲಿ ಮಗಳ ಶವ ಪತ್ತೆಯಾಗಿದೆ. ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಆಕೆಯ ಸಂಗಾತಿ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.

VISTARANEWS.COM


on

By

Murder
Koo

ಹೊಸದಿಲ್ಲಿ: ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ (Leave in relationship) ಯುವತಿಯೊಬ್ಬಳು ಶವವಾಗಿ (Murder) ಮನೆಯ ಕಪಾಟಿನಲ್ಲಿ ಪತ್ತೆಯಾಗಿರುವ ಘಟನೆ ಹೊಸದಿಲ್ಲಿಯ (delhi) ದ್ವಾರಕಾದಲ್ಲಿ (dwaraka) ನಡೆದಿದೆ.

ದ್ವಾರಕಾದ ದಾಬ್ರಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಾಗಿದ್ದ ರುಖ್ಸರ್ ರಜಪೂತ್ (26) ಕೊಲೆಯಾದ ಯುವತಿ. ಗೆಳೆಯ ವಿಪಾಲ್ ಟೈಲರ್ ಆಕೆಯನ್ನು ಕೊಂದಿರಬಹುದು ಎಂದು ಶಂಕಿಸಲಾಗಿದೆ.

ಮೀರತ್‌ನಲ್ಲಿ ವಾಸವಾಗಿರುವ ರುಖ್ಸರ್ ರಜಪೂತ್ ಳ ತಂದೆ ಮಗಳನ್ನು ಹುಡುಕಿಕೊಂಡು ಬುಧವಾರ ರಾತ್ರಿ ಬಂದಾಗ ಆಕೆ ಕೊಲೆಯಾಗಿರುವ ವಿಷಯ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Assault Case : ಆಫೀಸ್‌ನಲ್ಲಿ ಟಾರ್ಚರ್‌ ಕೊಟ್ಟ ಮೇಲಾಧಿಕಾರಿಗೆ ಸುಪಾರಿ ಕೊಟ್ಟು ಹೊಡೆಸಿದ್ರು ಸಿಬ್ಬಂದಿ!

ಒಂದೂವರೆ ವರ್ಷಗಳ ಹಿಂದೆ ಭೇಟಿ

ರಜಪೂತ್ ಗುಜರಾತ್‌ನಲ್ಲಿ ಕರಕುಶಲ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಳು. ಒಂದೂವರೆ ವರ್ಷಗಳ ಹಿಂದೆ ಅಲ್ಲಿ ಆಕೆ ವಿಪಾಲ್‌ನನ್ನು ಭೇಟಿಯಾಗಿದ್ದಳು. ದೆಹಲಿಗೆ ಬಂದ ಬಳಿಕ ಅವರಿಬ್ಬರೂ ಒಟ್ಟಿಗೆ ವಾಸಿಸುತ್ತಿರುವ ವಿಷಯ ಆಕೆಯ ತಂದೆ ಮುಸ್ತಾಕಿನ್ ಮತ್ತು ಅವರ ಕುಟುಂಬಕ್ಕೆ ತಿಳಿದಿತ್ತು.

ತಂದೆಗೆ ಕೊನೆಯ ಕರೆ

ರುಖ್ಸರ್ ರಜಪೂತ್ ಬುಧವಾರ ಮಧ್ಯಾಹ್ನ ತಂದೆ ಮೊಹಮ್ಮದ್ ಮುಸ್ತಾಕಿನ್ ಅವರಿಗೆ ಕರೆ ಮಾಡಿದ್ದರು. ಆಗ ಆಕೆ ತುಂಬಾ ಅಸಮಾಧಾನದಿಂದ ಇದ್ದಿದ್ದು ಕಂಡು ಬಂದಿತ್ತು. ಸಂಜೆ ವೇಳೆಗೆ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು. ಹೀಗಾಗಿ ಆತಂಕದಿಂದ ಮುಸ್ತಾಕಿನ್ ಅವರು ರಾತ್ರಿಯೇ ರುಖ್ಸಾರ್‌ನನ್ನು ಹುಡುಕಿಕೊಂಡು ತಮ್ಮ ಸಂಬಂಧಿಕರೊಂದಿಗೆ ದೆಹಲಿಗೆ ಬಂದಿದ್ದರು.

ಅವರು ರಜಪೂತ್ ವಾಸವಿದ್ದ ಅಪಾರ್ಟ್ ಮೆಂಟ್ ಗೆ ಬಂದಾಗ ಮನೆಗೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಅವರು ಬೀಗ ಎಲ್ಲಿ ಇಡುತ್ತಾರೆ ಎಂಬುದು ತಿಳಿದಿದ್ದ ಮುಸ್ತಾಕಿನ್ ಮನೆಯ ಬೀಗ ತೆರೆದು ಒಳಗೆ ಬಂದು ಹುಡುಕಿದಾಗ ಕಪಾಟಿನಲ್ಲಿ ರಜಪೂತ್ ಅವರ ಶವ ಪತ್ತೆಯಾಗಿದೆ. ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ದೇಹದ 15ಕ್ಕೂ ಹೆಚ್ಚು ಕಡೆ ಗಾಯ

ರುಖ್ಸರ್ ರಜಪೂತ್ ನ ಮುಖದ ಮೇಲೆ ಆಳವಾದ ಗಾಯಗಳು ಸೇರಿ ದೇಹದಾದ್ಯಂತ 15ಕ್ಕೂ ಹೆಚ್ಚು ಗಾಯಗಳಿದ್ದವು. ಮೇಲ್ನೋಟಕ್ಕೆ, ಮಹಿಳೆಯನ್ನು ಕತ್ತು ಹಿಸುಕಿ ಕೊಂದು ಹಾಕಲಾಗಿದೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೆಳೆಯ ನಾಪತ್ತೆ

ರುಖ್ಸರ್ ರಜಪೂತ್ ನ ಗೆಳೆಯ ವಿಪಾಲ್ ಟೈಲರ್ ನಾಪತ್ತೆಯಾಗಿರುವುದರಿಂದ ಆತನೇ ಪ್ರಮುಖ ಆರೋಪಿಯಾಗಿರಬಹುದು ಎಂದು ಶಂಕಿಸಲಾಗಿದೆ. ವಿಪಾಲ್ ಟೈಲರ್ ಎಂಬಾತನೊಂದಿಗೆ ಸುಮಾರು ಒಂದೂವರೆ ತಿಂಗಳಿನಿಂದ ಈ ಅಪಾರ್ಟ್ ಮೆಂಟ್ ನಲ್ಲಿ ರುಖ್ಸರ್ ರಜಪೂತ್ ವಾಸವಾಗಿದ್ದಳು. ರುಖ್ಸರ್ ರಜಪೂತ್ ಮದುವೆಯಾಗಿರುವುದಾಗಿ ಹೇಳಲಾಗಿದ್ದು, ಈ ಕುರಿತು ಯಾವುದೇ ದಾಖಲೆಗಳು ಪತ್ತೆಯಾಗಿಲ್ಲ ಎಂದು ಪೊಲೀಸ್ ಉಪ ಆಯುಕ್ತ (ದ್ವಾರಕಾ) ಅಂಕಿತ್ ಸಿಂಗ್ ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆಗೆ ಶಿಕ್ಷೆ) ಅಡಿಯಲ್ಲಿ ದಾಬ್ರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿದ್ದು, ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದ ಎಂದು ಸಿಂಗ್ ಹೇಳಿದರು.

ಮುಸ್ತಾಕಿಮ್ ಹೇಳಿಕೆಯನ್ನು ಆಧರಿಸಿ ಕೊಲೆ ಪ್ರಕರಣವನ್ನು ದಾಖಲಿಸಿರುವ ಪೊಲೀಸರು ಆರೋಪಿಗಾಗಿ ಪತ್ತೆ ಹಚ್ಚಲು ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ತನಿಖೆಗಾಗಿ ಹಲವಾರು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

ದಿಲ್ಲಿ ಮರ್ಡರ್

ಶ್ರದ್ಧಾ ವಾಳ್ಕರ್​ ಹತ್ಯೆ ಪ್ರಕರಣದಲ್ಲಿ ಸಿದ್ಧವಾಯ್ತು 3000 ಪುಟಗಳ ಕರಡು ಆರೋಪ ಪಟ್ಟಿ; ಕಾನೂನು ತಜ್ಞರಿಂದ ಪರಿಶೀಲನೆ

ಅಫ್ತಾಬ್​ ಮೇ ತಿಂಗಳಲ್ಲಿಯೇ ಶ್ರದ್ಧಾಳನ್ನು ಕೊಂದಿದ್ದರೂ ಅದು ಗೊತ್ತಾಗದಂತೆ ಭಾರಿ ನಾಟಕವಾಡಿದ್ದ. ತಿಂಗಳುಗಳ ಕಾಲ ಆಕೆಯ ಸೋಷಿಯಲ್​ ಮೀಡಿಯಾವನ್ನು ಆತನೇ ಹ್ಯಾಂಡಲ್​ ಮಾಡುವ ಮೂಲಕ, ಆಕೆ ಬದುಕಿದ್ದಾಳೆ ಎಂದು ಬಿಂಬಿಸಿದ್ದ.

VISTARANEWS.COM


on

draft chargesheet of Shraddha Walkar murder case Ready By Delhi Police
ಅಫ್ತಾಬ್​ ಮತ್ತು ಶ್ರದ್ಧಾ ವಾಳ್ಕರ್​
Koo

ನವ ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆದ ಶ್ರದ್ಧಾ ವಾಳ್ಕರ್ (Shraddha Walkar)​ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಪೊಲೀಸರು ಸುಮಾರು 3000 ಪುಟಗಳ ಕರಡು ಚಾರ್ಜ್​ಶೀಟ್​ ಸಿದ್ಧಪಡಿಸಿ ಇಟ್ಟಿದ್ದಾರೆ. ವಿಧಿವಿಜ್ಞಾನ ವರದಿಗಳು ಮತ್ತು ಎಲೆಕ್ಟ್ರಾನಿಕ್ ಪುರಾವೆಗಳು ಅಂದರೆ ಇಮೇಲ್​, ಮೊಬೈಲ್ ಫೋಟೋಗ್ರಾಫ್​, ಹಣ ವರ್ಗಾವಣೆ ದಾಖಲೆಗಳನ್ನು ಒಳಗೊಂಡಂತೆ ಸುಮಾರು 100 ಸಾಕ್ಷಿಗಳನ್ನು ಈ ಚಾರ್ಜ್​​ಶೀಟ್​​ನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಈ ಕರಡು ದಾಖಲೆಯನ್ನು ಕಾನೂನು ತಜ್ಞರು ಪರಿಶೀಲನೆ ನಡೆಸುತ್ತಿದ್ದು, ಶೀಘ್ರದಲ್ಲೇ ಅಂತಿಮ ಆರೋಪ ಪಟ್ಟಿ ಸಿದ್ಧವಾಗಲಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ದೆಹಲಿಯಲ್ಲಿ 2022ರ ಮೇ ತಿಂಗಳಲ್ಲಿ ನಡೆದಿದ್ದ ಶ್ರದ್ಧಾ ವಾಳ್ಕರ್​ ಭೀಕರ ಹತ್ಯೆ ಪ್ರಕರಣ ಇತ್ತೀಚೆಗಷ್ಟೇ ಬೆಳಕಿಗೆ ಬಂದಿದೆ. ಕೊಲೆ ಮಾಡಿದ ಆರೋಪಿ ಅಫ್ತಾಬ್​ ಪೂನಾವಾಲಾ ಸದ್ಯ ನ್ಯಾಯಾಂಗ ಬಂಧನದಲ್ಲಿಯೇ ಇದ್ದಾನೆ. ಈತ ತನ್ನ ಲಿವ್​ ಇನ್​ ಸಂಗಾತಿ ಶ್ರದ್ಧಾಳನ್ನು ಉಸಿರುಗಟ್ಟಿಸಿ ಕೊಂದು, ಆಕೆಯ ಶವವನ್ನು 35ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿದ್ದ. ಬಳಿಕ 300 ಲೀಟರ್​ ಸಾಮರ್ಥ್ಯದ ಫ್ರಿಜ್​ ಖರೀದಿಸಿ ಆ ಶವದ ತುಂಡುಗಳನ್ನು ಅದರಲ್ಲಿ ಇಟ್ಟಿದ್ದ. ನಂತರ ತಮ್ಮ ಅಪಾರ್ಟ್​ಮೆಂಟ್​ ಸಮೀಪವೇ ಇದ್ದಿದ್ದ ಮೆಹ್ರೌಲಿ ಅರಣ್ಯದ ಹಲವು ಭಾಗಗಳಲ್ಲಿ ಅವುಗಳನ್ನು ಎಸೆದಿದ್ದ. ಮೆಹ್ರೌಲಿ ಅರಣ್ಯವನ್ನು ಜಾಲಾಡಿದಾಗ ಹಲವು ಮೂಳೆಗಳು ಪತ್ತೆಯಾಗಿದ್ದು, ಅವೆಲ್ಲ ಶ್ರದ್ಧಾಳದ್ದೇ ಎಂದೂ ಡಿಎನ್​ಎ ಪರೀಕ್ಷೆಯಲ್ಲಿ.

ಇದನ್ನೂ ಓದಿ: Shraddha Murder Case | ಶ್ರದ್ಧಾ ವಾಳ್ಕರ್​ ಹತ್ಯೆ ಕೇಸ್​​ ಸಿಬಿಐಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದ ದೆಹಲಿ ಹೈಕೋರ್ಟ್​

ಅಫ್ತಾಬ್​ ಮೇ ತಿಂಗಳಲ್ಲಿಯೇ ಶ್ರದ್ಧಾಳನ್ನು ಕೊಂದಿದ್ದರೂ ಅದು ಗೊತ್ತಾಗದಂತೆ ಭಾರಿ ನಾಟಕವಾಡಿದ್ದ. ತಿಂಗಳುಗಳ ಕಾಲ ಆಕೆಯ ಸೋಷಿಯಲ್​ ಮೀಡಿಯಾವನ್ನು ಆತನೇ ಹ್ಯಾಂಡಲ್​ ಮಾಡುವ ಮೂಲಕ, ಆಕೆ ಬದುಕಿದ್ದಾಳೆ ಎಂಬುದನ್ನು ಬಿಂಬಿಸಲು ಹೋಗಿದ್ದ. ಶ್ರದ್ಧಾ ತಂದೆ-ತಾಯಿಯಿಂದ ದೂರವಾಗಿದ್ದರೂ, ಕೆಲವು ಸಂಬಂಧಿಕರೊಂದಿಗೆ ಸಂಪರ್ಕದಲ್ಲಿದ್ದಳು. ಆದರೆ ಬರುಬರುತ್ತ ಆಕೆ ಸಂಪರ್ಕಕ್ಕೆ ಸಿಗದಂತಾದಾಗ ಶ್ರದ್ಧಾಳ ತಂದೆಯ ಸ್ನೇಹಿತರೊಬ್ಬರು ಅನುಮಾನ ವ್ಯಕ್ತಪಡಿಸಿದ್ದರು. ಆಕೆಯ ತಂದೆಗೆ ಈ ವಿಚಾರವನ್ನು ಹೇಳಿದ್ದರು. ಅದರ ಬೆನ್ನಲ್ಲೇ ಶ್ರದ್ಧಾಳ ಅಪ್ಪ ದೂರು ದಾಖಲು ಮಾಡಿದ್ದರು. ತನಿಖೆ ನಡೆಸಿದಾಗ ಆಕೆ ಕೊಲೆಯಾಗಿದ್ದು ಗೊತ್ತಾಗಿದೆ. ನವೆಂಬರ್​ 12ರಂದು ಅಫ್ತಾಬ್​ ಅರೆಸ್ಟ್​ ಆಗಿದ್ದಾನೆ ಮತ್ತು ಕೊಲೆಯನ್ನು ತಾನೇ ಮಾಡಿದ್ದಾಗಿಯೂ ಒಪ್ಪಿಕೊಂಡಿದ್ದಾನೆ.

Continue Reading

ಕ್ರೈಂ

Shraddha Murder Case | ಶ್ರದ್ಧಾಳ ದೇಹ ಕತ್ತರಿಸಲು ಅಫ್ತಾಬ್​ ಬಳಸಿದ್ದು ಯಾವ ಆಯುಧ?-ಕೊನೆಗೂ ಬಯಲಾಯ್ತು ಸತ್ಯ!

ಪೊಲೀಸರು ಈಗಾಗಲೇ ಅರಣ್ಯ ಪ್ರದೇಶಗಳಲ್ಲಿ ಹುಡುಕಾಟ ನಡೆಸಿ, ಕೆಲವು ಎಲುಬುಗಳನ್ನು ವಶಪಡಿಸಿಕೊಂಡಿದ್ದರು. ಅದು ಶ್ರದ್ಧಾದೇ ಎಂಬುದು ಡಿಎನ್​​ಎ ಟೆಸ್ಟ್​​ನಲ್ಲಿ ಸಾಬೀತಾಗಿತ್ತು.

VISTARANEWS.COM


on

Shraddha Murder Case
Koo

ನವ ದೆಹಲಿ: ಲಿವ್​ ಇನ್​ ಸಂಗಾತಿಯಿಂದ ಬರ್ಬರವಾಗಿ ಹತ್ಯೆಗೀಡಾದ ಶ್ರದ್ಧಾ ವಾಳ್ಕರ್​​ ಕೇಸ್​ ತನಿಖೆ ಮುಂದುವರಿದೆ. ಆರೋಪಿ ಅಫ್ತಾಬ್​ ಪೂನಾವಾಲಾ ಸದ್ಯ ದೆಹಲಿಯ ತಿಹಾರ್​ ಜೈಲಿನಲ್ಲಿದ್ದು, ಮತ್ತೊಂದೆಡೆ ಅವನ ವಿಚಾರಣೆಯೂ ನಡೆಯುತ್ತಿದೆ. ಅಫ್ತಾಬ್ ಮತ್ತು ಶ್ರದ್ಧಾ ಬೇರೆ ಧರ್ಮದವರು. ಮನೆಯವರ ವಿರೋಧದ ನಡುವೆಯೂ ಶ್ರದ್ಧಾ ಅಫ್ತಾಬ್​ ಜತೆ ಬದುಕುತ್ತಿದ್ದಳು. ಕಳೆದ ಮೇ ತಿಂಗಳಲ್ಲಿ ಅಫ್ತಾಬ್​ ಆಕೆಯನ್ನು ಕೊಂದು, 35 ತುಂಡುಗಳಾಗಿ ಕತ್ತರಿಸಿ, ಅವುಗಳನ್ನೆಲ್ಲ ಫ್ರಿಜ್​​ನಲ್ಲಿಟ್ಟುಕೊಂಡಿದ್ದ. ಬಳಿಕ ತಮ್ಮ ಅಪಾರ್ಟ್​​ಮೆಂಟ್​​ಗೆ ಸಮೀಪದಲ್ಲೇ ಇರುವ ಮೆಹ್ರೌಲಿ ಅರಣ್ಯದಲ್ಲಿ ಎಸೆದಿದ್ದ. ಗುರುಗ್ರಾಮದ ಬಳಿಯ ಅರಣ್ಯದಲ್ಲೂ ಕೆಲವು ತುಂಡುಗಳನ್ನು ಎಸೆದಿದ್ದ.

ಪೊಲೀಸರು ಈಗಾಗಲೇ ಅರಣ್ಯ ಪ್ರದೇಶಗಳಲ್ಲಿ ಹುಡುಕಾಟ ನಡೆಸಿ, ಕೆಲವು ಎಲುಬುಗಳನ್ನು ವಶಪಡಿಸಿಕೊಂಡಿದ್ದರು. ಅದು ಶ್ರದ್ಧಾದೇ ಎಂಬುದು ಡಿಎನ್​​ಎ ಟೆಸ್ಟ್​​ನಲ್ಲಿ ಸಾಬೀತಾಗಿತ್ತು. ಅಫ್ತಾಬ್​ ಶ್ರದ್ಧಾಳ ದೇಹವನ್ನು ಯಾವ ಆಯುಧದಿಂದ ಕತ್ತರಿಸಿದ್ದಾನೆ ಎಂಬುದನ್ನು ಪತ್ತೆ ಹಚ್ಚುವ ಸಲುವಾಗಿ ಆ ಮೂಳೆಗಳನ್ನು ಇನ್ನಷ್ಟು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರ ವರದಿ ಈಗ ಹೊರಬಿದ್ದಿದೆ. ಅಫ್ತಾಬ್​ ಪೂನಾವಾಲಾ ತನ್ನ ಲಿವ್​ ಇನ್​ ಸಂಗಾತಿ ಶ್ರದ್ಧಾಳನ್ನು ಕೊಂದು, ಬಳಿಕ ಗರಗಸದಲ್ಲಿ ಆಕೆಯ ದೇಹವನ್ನು ತುಂಡರಿಸಿದ್ದಾನೆ ಎಂಬುದು ಗೊತ್ತಾಗಿದೆ.

ಅಫ್ತಾಬ್​ ಪೂನಾವಾಲಾ ಅಪಾರ್ಟ್​ಮೆಂಟ್​​ನಿಂದ ಪೊಲೀಸರು ಹಲವು ಬಗೆಯ ಮಾರಕಾಸ್ತ್ರಗಳನ್ನು ಈಗಾಗಲೇ ವಶಪಡಿಸಿಕೊಂಡಿದ್ದಾರೆ. ಆದರೆ ಅದರಲ್ಲಿ ಶ್ರದ್ಧಾಳನ್ನು ತುಂಡರಿಸಲು ಆತ ಯಾವ ಆಯುಧ ಬಳಸಿದ್ದ ಗೊತ್ತಾಗಿರಲಿಲ್ಲ. ಅಫ್ತಾಬ್​ ಮಂಪರು ಪರೀಕ್ಷೆ ವೇಳೆ, ತಾನು ಚೀನಿ ಕ್ಲೀವರ್ (ಮಾಂಸವನ್ನು ಕತ್ತರಿಸಲು ಬಳಸುವ ದೊಡ್ಡ ಚಾಕು) ಬಳಸಿದ್ದಾಗಿ ಹೇಳಿಕೊಂಡಿದ್ದಾನೆ ಎಂಬ ವರದಿ ಬಂದಿದ್ದರೂ, ಅದು ಸ್ಪಷ್ಟವಾಗಿರಲಿಲ್ಲ.

ಇದನ್ನೂ ಓದಿ: Shraddha Murder Case| ಹೌದು ನಾನೇ ಶ್ರದ್ಧಾಳ ಕೊಲೆ ಮಾಡಿದೆ; ಮಂಪರು ಪರೀಕ್ಷೆಯಲ್ಲೂ ಅದೇ ಉತ್ತರ ಕೊಟ್ಟ ಅಫ್ತಾಬ್​

Continue Reading

ದಿಲ್ಲಿ ಮರ್ಡರ್

Shraddha Walkar | ತನ್ನ ಕುಟುಂಬದ ಸದಸ್ಯರ ಭೇಟಿಗೆ ನಿರಾಕರಿಸುತ್ತಿರುವ ಶ್ರದ್ಧಾ ಕೊಲೆ ಆರೋಪಿ ಅಫ್ತಾಬ್

ಶ್ರದ್ಧಾ ವಾಳ್ಕರ್ (Shraddha Walkar) ಕೊಲೆ ಆರೋಪಿ, 28 ವರ್ಷದ ಅಫ್ತಾಬ್ ಪೂನಾವಾಲ ನವೆಂಬರ್ 26ರಿಂದ ದಿಲ್ಲಿಯ ತಿಹಾರ್ ಜೈಲಿನಲ್ಲಿದ್ದಾನೆ.

VISTARANEWS.COM


on

Aaftab used Chinese knife To Cut Shraddha Body
Koo

ನವದೆಹಲಿ: ತನ್ನ ಲಿವ್-ಇನ್ ಸಂಗಾತಿ ಶ್ರದ್ಧಾ ವಾಳ್ಕರಳನ್ನು (Shraddha Walkar) ತುಂಡು ತುಂಡಾಗಿ ಕತ್ತರಿಸಿ ಭಯಾನಕವಾಗಿ ಕೊಲೆ ಮಾಡಿದ್ದ ಆರೋಪಿ ಅಫ್ತಾಬ್ ಪೂನಾವಾಲ (Aftab Poonawala) ಈಗ ದಿಲ್ಲಿಯ ತಿಹಾರ್ ಜೈಲಿನಲ್ಲಿದ್ದಾನೆ. ಆತನನ್ನು ಭೇಟಿಯಾಗಲು ಬಂದ ತನ್ನ ಕುಟುಂಬದ ಸದಸ್ಯರನ್ನು ಭೇಟಿಯಾಗಲು ನಿರಾಕರಿಸುತ್ತಿದ್ದಾನೆಂದು ತಿಳಿದು ಬಂದಿದೆ.

28 ವರ್ಷದ ಅಫ್ತಾಬ್‌ ನವೆಂಬರ್ 26ರಿಂದ ತಿಹಾರ್ ಜೈಲಿನಲ್ಲಿದ್ದಾನೆ. ಆತ ತನ್ನನ್ನು ಯಾರು ಭೇಟಿ ಮಾಡಬೇಕೆಂಬ ಕುರಿತು ಮಾಹಿತಿಯನ್ನು ಜೈಲು ಅಧಿಕಾರಿಗಳಿಗೆ ಇನ್ನಷ್ಟೇ ನೀಡಬೇಕಿದೆ. ನಿಯಮಗಳ ಪ್ರಕಾರ, ಜೈಲಿನಲ್ಲಿರುವ ವ್ಯಕ್ತಿ ವಾರಕ್ಕೆ ಎರಡು ಸಾರಿ, ತನ್ನ ಕುಟುಂಬದವರನ್ನು ಭೇಟಿ ಮಾಡಲು ಅವಕಾಶವಿದೆ.

ಸದ್ಯ ಜೈಲಿನಲ್ಲಿ ತನ್ನ ಪಾಡಿಗೆ ತಾನು ಇರುತ್ತಿರುವ ಆರೋಪಿ ಪೂನಾವಾಲ ಈ ವಾರದ ಬಳಿಕ, ಯಾರನ್ನೋ ಭೇಟಿಯಾಗುವ ಬಗ್ಗೆ ಸಹ ಕೈದಿಗಳ ಜತೆಗೆ ಮಾತನಾಡಿಕೊಂಡಿದ್ದಾನೆಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಆತ ಇದವರೆಗೂ ಯಾರನ್ನು ಭೇಟಿ ಮಾಡಬೇಕೆಂಬ ಮಾಹಿತಿಯನ್ನು ಹಂಚಿಕೊಂಡಿಲ್ಲ. ಜತೆಗೆ, ತನ್ನ ಕುಟುಂಬದ ಸದಸ್ಯರನ್ನು ಭೇಟಿಯಾಗಲೂ ಮುಂದಾಗುತ್ತಿಲ್ಲ.

ಇದನ್ನೂ ಓದಿ | Shraddha Murder Case | ಶ್ರದ್ಧಾ ವಾಳ್ಕರ್​ ಹತ್ಯೆ ಕೇಸ್​​ ಸಿಬಿಐಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದ ದೆಹಲಿ ಹೈಕೋರ್ಟ್​

Continue Reading
Advertisement
karnataka Weather Forecast
ಮಳೆ2 ಗಂಟೆಗಳು ago

Karnataka Weather : ಇಂದು ಅಬ್ಬರಿಸಲಿದೆ ಗುಡುಗು ಸಹಿತ ಭಾರಿ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Dina Bhavishya
ಭವಿಷ್ಯ3 ಗಂಟೆಗಳು ago

Dina Bhavishya : ಈ ರಾಶಿಯವರಿಗೆ ದೀರ್ಘಕಾಲದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ

Action Prince Dhruva Sarja much awaited film Martin to hit the screens on October 11
ಸಿನಿಮಾ12 ಗಂಟೆಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Actor Darshan
ಬೆಂಗಳೂರು13 ಗಂಟೆಗಳು ago

Parappana Agrahara : ಜೈಲಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ಕೇಸ್; ಕ್ಲೈ ಮ್ಯಾಕ್ಸ್ ಹಂತದಲ್ಲಿ ರಿವೈಲ್ ಆಯ್ತು ಜೈಲಿನೊಳಗಿನ ಅಂದರ್ ಕಿ ದರ್ಬಾರ್!

Bengaluru News
ಬೆಂಗಳೂರು16 ಗಂಟೆಗಳು ago

Bengaluru News : ಮತ್ತೆ ಮೂವರು ಪಾಕ್ ಪ್ರಜೆಗಳ ಬಂಧನ; ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಕುಟುಂಬ

HD kumaraswamy And Vijayetata
ಬೆಂಗಳೂರು16 ಗಂಟೆಗಳು ago

HD Kumaraswamy : ಎಲೆಕ್ಷನ್‌ಗೆ 50 ಕೋಟಿ ರೂ.ಗೆ ಡಿಮ್ಯಾಂಡ್‌ ಮಾಡಿ ಉದ್ಯಮಿಗೆ ಬೆದರಿಕೆ; ಎಚ್‌ಡಿ ಕುಮಾರಸ್ವಾಮಿ ವಿರುದ್ಧ ದೂರು ದಾಖಲು

Karnataka weather Forecast
ಪ್ರಮುಖ ಸುದ್ದಿ17 ಗಂಟೆಗಳು ago

Karnataka Rain : ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ; ಹೈರಾಣಾದ ವಾಹನ ಸವಾರರು

MLA Muniratna
ಬೆಂಗಳೂರು17 ಗಂಟೆಗಳು ago

MLA Muniratna: ಶಾಸಕ ಮುನಿರತ್ನ ಕೇಸ್‌; ರಾಜಕಾರಣಿಗಳ ಹನಿಟ್ರ್ಯಾಪ್‌ ಮಾಡುತ್ತಿದ್ದ ರೂಮಿನ ಸ್ಥಳ ಮಹಜರು ಮಾಡಿದ ಎಸ್‌ಐಟಿ ಅಧಿಕಾರಿಗಳು

Power cut off due to a technical problem in the transformer Bengaluru faces water crisis today
ಬೆಂಗಳೂರು19 ಗಂಟೆಗಳು ago

Water supply: ಟ್ರಾನ್ಸಫಾರ್ಮರ್‌ನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ವಿದ್ಯುತ್‌ ಸಂಪರ್ಕ ಕಡಿತ; ಬೆಂಗಳೂರಿಗೆ ಇಂದು ನೀರಿನ ಸಮಸ್ಯೆ

Gandhi Jayanti 2024
ಬೆಂಗಳೂರು19 ಗಂಟೆಗಳು ago

Gandhi Jayanti 2024: ಗಾಂಧಿ ಜಯಂತಿ ಹಿನ್ನೆಲೆ ಸರ್ಕಾರಿ ಯೋಜನೆಗಳ ಅರಿವು ಮೂಡಿಸಿದ ಎನ್‌ಸಿಸಿ ಕೆಡೆಟ್‌ಗಳು

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ12 ಗಂಟೆಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌