Shraddha Murder Case | ಶ್ರದ್ಧಾ ಹತ್ಯೆ ಕೇಸ್​​ ತನಿಖೆಗೆ ಪೊಲೀಸರಿಗೆ ಸಿಕ್ಕಿತೊಂದು ಮಹತ್ವದ ಸುಳಿವು - Vistara News

ದಿಲ್ಲಿ ಮರ್ಡರ್

Shraddha Murder Case | ಶ್ರದ್ಧಾ ಹತ್ಯೆ ಕೇಸ್​​ ತನಿಖೆಗೆ ಪೊಲೀಸರಿಗೆ ಸಿಕ್ಕಿತೊಂದು ಮಹತ್ವದ ಸುಳಿವು

ಆರು ತಿಂಗಳ ಹಿಂದೆ ಅಫ್ತಾಬ್​ ಅತ್ಯಂತ ಕ್ರೂರವಾಗಿ ಶ್ರದ್ಧಾ ವಾಳ್ಕರ್​​ಳನ್ನು ಹತ್ಯೆಗೈದಿದ್ದ. ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ಫ್ರಿಜ್​ನಲ್ಲಿಟ್ಟುಕೊಂಡಿದ್ದ. ಪ್ರತಿದಿನ ಒಂದೊಂದೇ ತುಂಡುಗಳನ್ನು ತೆಗೆದುಕೊಂಡು ಹೋಗಿ ದೆಹಲಿಯ ವಿವಿಧ ಭಾಗಗಳಲ್ಲಿ ಎಸೆದು ಬರುತ್ತಿದ್ದ.

VISTARANEWS.COM


on

CCTV footage Related Shraddha murder case Found Near Forest
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ತನ್ನ ಲಿವ್​ ಇನ್ ಪಾರ್ಟ್ನರ್​ ಶ್ರದ್ಧಾಳನ್ನು ಅತ್ಯಂತ ವಿಕೃತವಾಗಿ ಹತ್ಯೆ ಮಾಡಿರುವ ಅಫ್ತಾಬ್​ ಅಮೀನ್​ ಪೂನಾವಾಲಾ ಸದ್ಯ ಪೊಲೀಸ್​ ಕಸ್ಟಡಿಯಲ್ಲಿದ್ದಾನೆ. ಆದರೆ ವಿಚಾರಣೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಕಾರಣಕ್ಕೆ ಅವನಿಗೆ ಮಂಪರು ಪರೀಕ್ಷೆ ನಡೆಸಲು ದೆಹಲಿ ಹೈಕೋರ್ಟ್ ಅನುಮತಿಯನ್ನೂ ನೀಡಿದೆ. ಕೊಲೆ ನಡೆದು ಆರು ತಿಂಗಳುಗಳೇ ಕಳೆದು ಹೋಗಿರುವುದರಿಂದ ಸಾಕ್ಷಿಗಳನ್ನು ಕಲೆಹಾಕುವುದೂ ತುಸು ವಿಳಂಬವೇ ಆಗುತ್ತಿದೆ. ಇವೆಲ್ಲವೂ ತನಿಖೆಗೆ ತಡೆಯೊಡ್ಡುತ್ತಿರುವ ಸಂದರ್ಭದಲ್ಲಿ, ಒಂದು ಮಹತ್ವದ ಪುರಾವೆ ಪೊಲೀಸರಿಗೆ ಸಿಕ್ಕಿದೆ. ಮೆಹ್ರೌಲಿ ಅರಣ್ಯ ಪ್ರದೇಶದ ಬಳಿ ಇದ್ದ ಒಂದು ಸಿಸಿಟಿವಿ ಫೂಟೇಜ್​ ಸಿಕ್ಕಿದ್ದು, ಅದು ಅಫ್ತಾಬ್​​ಗೆ ಸಂಬಂಧಪಟ್ಟಿದ್ದು ಎನ್ನಲಾಗಿದೆ. ಈ ಸಿಸಿಟಿವಿ ಫೂಟೇಜ್​ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೊಲೀಸರು ನೀಡಿಲ್ಲ.

ಆರು ತಿಂಗಳ ಹಿಂದೆ ಅಫ್ತಾಬ್​ ಅತ್ಯಂತ ಕ್ರೂರವಾಗಿ ಶ್ರದ್ಧಾ ವಾಳ್ಕರ್​​ಳನ್ನು ಹತ್ಯೆಗೈದಿದ್ದ. ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ಫ್ರಿಜ್​ನಲ್ಲಿಟ್ಟುಕೊಂಡಿದ್ದ. ಪ್ರತಿದಿನ ಒಂದೊಂದೇ ತುಂಡುಗಳನ್ನು ತೆಗೆದುಕೊಂಡು ಹೋಗಿ ದೆಹಲಿಯ ವಿವಿಧ ಭಾಗಗಳಲ್ಲಿ ಎಸೆದು ಬರುತ್ತಿದ್ದ. ಶ್ರದ್ಧಾ ಕಾಣೆಯಾಗಿದ್ದಾಳೆಂದು ಆಕೆಯ ಪಾಲಕರು ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸಿದಾಗ ಆಕೆ ಹತ್ಯೆಯಾಗಿದ್ದು ಗೊತ್ತಾಗಿದೆ. ಆರೋಪಿ ಅಫ್ತಾಬ್ ಬಂಧನವಾಗಿದೆ. ಆದರೆ ಇಡೀ ಘಟನೆಯ ಕೆಲ ಕೊಂಡಿಗಳು ತಪ್ಪಿ ಹೋಗಿದ್ದು, ಪೊಲೀಸರು ಪುರಾವೆ ಹುಡುಕುತ್ತಿದ್ದಾರೆ. ಇದುವರೆಗೂ ಶ್ರದ್ಧಾಳನ್ನು ಹತ್ಯೆ ಮಾಡಲು ಅಫ್ತಾಬ್ ಬಳಸಿದ್ದ ಆಯುಧ, ಆಕೆಯ ಕತ್ತರಿಸಿದ ತಲೆ, ಅವಳ ಮೊಬೈಲ್​ ಸಿಕ್ಕಿಲ್ಲ. ಇವು ಮೂರು ಅತ್ಯಂತ ಪ್ರಮುಖವಾದ ಸಾಕ್ಷಿಗಳಾಗಿವೆ.

ಅಫ್ತಾಬ್​ ಪೊಲೀಸರ ಯಾವ ಪ್ರಶ್ನೆಗೂ ಸರಿಯಾದ ಉತ್ತರ ನೀಡುತ್ತಿಲ್ಲ. ಮಂಪರು ಪರೀಕ್ಷೆಗೆ ಒಪ್ಪುತ್ತಿಲ್ಲ. ಅಫ್ತಾಬ್​​ನ ಹಲವು ಫೋಟೋಗಳು ಪೊಲೀಸರಿಗೆ ಸಿಕ್ಕಿದ್ದು, ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಇನ್ನು ಆತ ಅರಣ್ಯ ಪ್ರದೇಶದಲ್ಲಿ ಶ್ರದ್ಧಾ ದೇಹದ ತುಂಡುಗಳನ್ನು ಎಸೆದಿದ್ದಾನೆ. ಆದರೆ ಆ ಅರಣ್ಯ ಪ್ರದೇಶಗಳ ಮಾರ್ಗಗಳನ್ನು ಮ್ಯಾಪ್​ ಮಾಡುವುದೂ ಪೊಲೀಸರಿಗೆ ಕಷ್ಟಕರವಾದ ಟಾಸ್ಕ್​ ಆಗಿದೆ. ಇನ್ನು ಅಫ್ತಾಬ್​ ಸಂಚರಿಸಿದ್ದಾನೆ ಎನ್ನಲಾದ ಮಾರ್ಗ, ಹೋಗಿದ್ದ ಪ್ರದೇಶಗಳ ಸಿಸಿಟಿವಿ ಕ್ಯಾಮರಾ ಫೂಟೇಜ್​ಗಳನ್ನು ಪರಿಶೀಲನೆ ಮಾಡೋಣವೆಂದರೆ ಎಷ್ಟೋ ಕ್ಯಾಮರಾಗಳಲ್ಲಿ ಆರುತಿಂಗಳಷ್ಟು ಹಳೇ ಫೂಟೇಜ್​ಗಳೇ ಇಲ್ಲ ಎಂದೂ ಹೇಳಲಾಗಿದೆ. ಇದೆಲ್ಲದರ ಮಧ್ಯೆ ಮೆಹ್ರೌಲಿ ಅರಣ್ಯ ಪ್ರದೇಶ ಬಳಿ ಒಂದು ಸಿಸಿಟಿವಿ ಕ್ಯಾಮರಾದಲ್ಲಿ ಅಫ್ತಾಬ್​ಗೆ ಸಂಬಂಧಪಟ್ಟ ಮಹತ್ವದ ಫೂಟೇಜ್​ಗಳು ಸಿಕ್ಕಿವೆ.

ಇದನ್ನೂ ಓದಿ:Delhi Crime | ವಿಕೃತ ಹಂತಕ ಅಫ್ತಾಬ್‌ ನಾರ್ಕೊ ಟೆಸ್ಟ್‌ಗೆ ಕೋರ್ಟ್‌ ಅಸ್ತು, ಏನಿದು ಪರೀಕ್ಷೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದಿಲ್ಲಿ ಮರ್ಡರ್

ಶ್ರದ್ಧಾ ವಾಳ್ಕರ್​ ಹತ್ಯೆ ಪ್ರಕರಣದಲ್ಲಿ ಸಿದ್ಧವಾಯ್ತು 3000 ಪುಟಗಳ ಕರಡು ಆರೋಪ ಪಟ್ಟಿ; ಕಾನೂನು ತಜ್ಞರಿಂದ ಪರಿಶೀಲನೆ

ಅಫ್ತಾಬ್​ ಮೇ ತಿಂಗಳಲ್ಲಿಯೇ ಶ್ರದ್ಧಾಳನ್ನು ಕೊಂದಿದ್ದರೂ ಅದು ಗೊತ್ತಾಗದಂತೆ ಭಾರಿ ನಾಟಕವಾಡಿದ್ದ. ತಿಂಗಳುಗಳ ಕಾಲ ಆಕೆಯ ಸೋಷಿಯಲ್​ ಮೀಡಿಯಾವನ್ನು ಆತನೇ ಹ್ಯಾಂಡಲ್​ ಮಾಡುವ ಮೂಲಕ, ಆಕೆ ಬದುಕಿದ್ದಾಳೆ ಎಂದು ಬಿಂಬಿಸಿದ್ದ.

VISTARANEWS.COM


on

draft chargesheet of Shraddha Walkar murder case Ready By Delhi Police
ಅಫ್ತಾಬ್​ ಮತ್ತು ಶ್ರದ್ಧಾ ವಾಳ್ಕರ್​
Koo

ನವ ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆದ ಶ್ರದ್ಧಾ ವಾಳ್ಕರ್ (Shraddha Walkar)​ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಪೊಲೀಸರು ಸುಮಾರು 3000 ಪುಟಗಳ ಕರಡು ಚಾರ್ಜ್​ಶೀಟ್​ ಸಿದ್ಧಪಡಿಸಿ ಇಟ್ಟಿದ್ದಾರೆ. ವಿಧಿವಿಜ್ಞಾನ ವರದಿಗಳು ಮತ್ತು ಎಲೆಕ್ಟ್ರಾನಿಕ್ ಪುರಾವೆಗಳು ಅಂದರೆ ಇಮೇಲ್​, ಮೊಬೈಲ್ ಫೋಟೋಗ್ರಾಫ್​, ಹಣ ವರ್ಗಾವಣೆ ದಾಖಲೆಗಳನ್ನು ಒಳಗೊಂಡಂತೆ ಸುಮಾರು 100 ಸಾಕ್ಷಿಗಳನ್ನು ಈ ಚಾರ್ಜ್​​ಶೀಟ್​​ನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಈ ಕರಡು ದಾಖಲೆಯನ್ನು ಕಾನೂನು ತಜ್ಞರು ಪರಿಶೀಲನೆ ನಡೆಸುತ್ತಿದ್ದು, ಶೀಘ್ರದಲ್ಲೇ ಅಂತಿಮ ಆರೋಪ ಪಟ್ಟಿ ಸಿದ್ಧವಾಗಲಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ದೆಹಲಿಯಲ್ಲಿ 2022ರ ಮೇ ತಿಂಗಳಲ್ಲಿ ನಡೆದಿದ್ದ ಶ್ರದ್ಧಾ ವಾಳ್ಕರ್​ ಭೀಕರ ಹತ್ಯೆ ಪ್ರಕರಣ ಇತ್ತೀಚೆಗಷ್ಟೇ ಬೆಳಕಿಗೆ ಬಂದಿದೆ. ಕೊಲೆ ಮಾಡಿದ ಆರೋಪಿ ಅಫ್ತಾಬ್​ ಪೂನಾವಾಲಾ ಸದ್ಯ ನ್ಯಾಯಾಂಗ ಬಂಧನದಲ್ಲಿಯೇ ಇದ್ದಾನೆ. ಈತ ತನ್ನ ಲಿವ್​ ಇನ್​ ಸಂಗಾತಿ ಶ್ರದ್ಧಾಳನ್ನು ಉಸಿರುಗಟ್ಟಿಸಿ ಕೊಂದು, ಆಕೆಯ ಶವವನ್ನು 35ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿದ್ದ. ಬಳಿಕ 300 ಲೀಟರ್​ ಸಾಮರ್ಥ್ಯದ ಫ್ರಿಜ್​ ಖರೀದಿಸಿ ಆ ಶವದ ತುಂಡುಗಳನ್ನು ಅದರಲ್ಲಿ ಇಟ್ಟಿದ್ದ. ನಂತರ ತಮ್ಮ ಅಪಾರ್ಟ್​ಮೆಂಟ್​ ಸಮೀಪವೇ ಇದ್ದಿದ್ದ ಮೆಹ್ರೌಲಿ ಅರಣ್ಯದ ಹಲವು ಭಾಗಗಳಲ್ಲಿ ಅವುಗಳನ್ನು ಎಸೆದಿದ್ದ. ಮೆಹ್ರೌಲಿ ಅರಣ್ಯವನ್ನು ಜಾಲಾಡಿದಾಗ ಹಲವು ಮೂಳೆಗಳು ಪತ್ತೆಯಾಗಿದ್ದು, ಅವೆಲ್ಲ ಶ್ರದ್ಧಾಳದ್ದೇ ಎಂದೂ ಡಿಎನ್​ಎ ಪರೀಕ್ಷೆಯಲ್ಲಿ.

ಇದನ್ನೂ ಓದಿ: Shraddha Murder Case | ಶ್ರದ್ಧಾ ವಾಳ್ಕರ್​ ಹತ್ಯೆ ಕೇಸ್​​ ಸಿಬಿಐಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದ ದೆಹಲಿ ಹೈಕೋರ್ಟ್​

ಅಫ್ತಾಬ್​ ಮೇ ತಿಂಗಳಲ್ಲಿಯೇ ಶ್ರದ್ಧಾಳನ್ನು ಕೊಂದಿದ್ದರೂ ಅದು ಗೊತ್ತಾಗದಂತೆ ಭಾರಿ ನಾಟಕವಾಡಿದ್ದ. ತಿಂಗಳುಗಳ ಕಾಲ ಆಕೆಯ ಸೋಷಿಯಲ್​ ಮೀಡಿಯಾವನ್ನು ಆತನೇ ಹ್ಯಾಂಡಲ್​ ಮಾಡುವ ಮೂಲಕ, ಆಕೆ ಬದುಕಿದ್ದಾಳೆ ಎಂಬುದನ್ನು ಬಿಂಬಿಸಲು ಹೋಗಿದ್ದ. ಶ್ರದ್ಧಾ ತಂದೆ-ತಾಯಿಯಿಂದ ದೂರವಾಗಿದ್ದರೂ, ಕೆಲವು ಸಂಬಂಧಿಕರೊಂದಿಗೆ ಸಂಪರ್ಕದಲ್ಲಿದ್ದಳು. ಆದರೆ ಬರುಬರುತ್ತ ಆಕೆ ಸಂಪರ್ಕಕ್ಕೆ ಸಿಗದಂತಾದಾಗ ಶ್ರದ್ಧಾಳ ತಂದೆಯ ಸ್ನೇಹಿತರೊಬ್ಬರು ಅನುಮಾನ ವ್ಯಕ್ತಪಡಿಸಿದ್ದರು. ಆಕೆಯ ತಂದೆಗೆ ಈ ವಿಚಾರವನ್ನು ಹೇಳಿದ್ದರು. ಅದರ ಬೆನ್ನಲ್ಲೇ ಶ್ರದ್ಧಾಳ ಅಪ್ಪ ದೂರು ದಾಖಲು ಮಾಡಿದ್ದರು. ತನಿಖೆ ನಡೆಸಿದಾಗ ಆಕೆ ಕೊಲೆಯಾಗಿದ್ದು ಗೊತ್ತಾಗಿದೆ. ನವೆಂಬರ್​ 12ರಂದು ಅಫ್ತಾಬ್​ ಅರೆಸ್ಟ್​ ಆಗಿದ್ದಾನೆ ಮತ್ತು ಕೊಲೆಯನ್ನು ತಾನೇ ಮಾಡಿದ್ದಾಗಿಯೂ ಒಪ್ಪಿಕೊಂಡಿದ್ದಾನೆ.

Continue Reading

ಕ್ರೈಂ

Shraddha Murder Case | ಶ್ರದ್ಧಾಳ ದೇಹ ಕತ್ತರಿಸಲು ಅಫ್ತಾಬ್​ ಬಳಸಿದ್ದು ಯಾವ ಆಯುಧ?-ಕೊನೆಗೂ ಬಯಲಾಯ್ತು ಸತ್ಯ!

ಪೊಲೀಸರು ಈಗಾಗಲೇ ಅರಣ್ಯ ಪ್ರದೇಶಗಳಲ್ಲಿ ಹುಡುಕಾಟ ನಡೆಸಿ, ಕೆಲವು ಎಲುಬುಗಳನ್ನು ವಶಪಡಿಸಿಕೊಂಡಿದ್ದರು. ಅದು ಶ್ರದ್ಧಾದೇ ಎಂಬುದು ಡಿಎನ್​​ಎ ಟೆಸ್ಟ್​​ನಲ್ಲಿ ಸಾಬೀತಾಗಿತ್ತು.

VISTARANEWS.COM


on

Shraddha Murder Case
Koo

ನವ ದೆಹಲಿ: ಲಿವ್​ ಇನ್​ ಸಂಗಾತಿಯಿಂದ ಬರ್ಬರವಾಗಿ ಹತ್ಯೆಗೀಡಾದ ಶ್ರದ್ಧಾ ವಾಳ್ಕರ್​​ ಕೇಸ್​ ತನಿಖೆ ಮುಂದುವರಿದೆ. ಆರೋಪಿ ಅಫ್ತಾಬ್​ ಪೂನಾವಾಲಾ ಸದ್ಯ ದೆಹಲಿಯ ತಿಹಾರ್​ ಜೈಲಿನಲ್ಲಿದ್ದು, ಮತ್ತೊಂದೆಡೆ ಅವನ ವಿಚಾರಣೆಯೂ ನಡೆಯುತ್ತಿದೆ. ಅಫ್ತಾಬ್ ಮತ್ತು ಶ್ರದ್ಧಾ ಬೇರೆ ಧರ್ಮದವರು. ಮನೆಯವರ ವಿರೋಧದ ನಡುವೆಯೂ ಶ್ರದ್ಧಾ ಅಫ್ತಾಬ್​ ಜತೆ ಬದುಕುತ್ತಿದ್ದಳು. ಕಳೆದ ಮೇ ತಿಂಗಳಲ್ಲಿ ಅಫ್ತಾಬ್​ ಆಕೆಯನ್ನು ಕೊಂದು, 35 ತುಂಡುಗಳಾಗಿ ಕತ್ತರಿಸಿ, ಅವುಗಳನ್ನೆಲ್ಲ ಫ್ರಿಜ್​​ನಲ್ಲಿಟ್ಟುಕೊಂಡಿದ್ದ. ಬಳಿಕ ತಮ್ಮ ಅಪಾರ್ಟ್​​ಮೆಂಟ್​​ಗೆ ಸಮೀಪದಲ್ಲೇ ಇರುವ ಮೆಹ್ರೌಲಿ ಅರಣ್ಯದಲ್ಲಿ ಎಸೆದಿದ್ದ. ಗುರುಗ್ರಾಮದ ಬಳಿಯ ಅರಣ್ಯದಲ್ಲೂ ಕೆಲವು ತುಂಡುಗಳನ್ನು ಎಸೆದಿದ್ದ.

ಪೊಲೀಸರು ಈಗಾಗಲೇ ಅರಣ್ಯ ಪ್ರದೇಶಗಳಲ್ಲಿ ಹುಡುಕಾಟ ನಡೆಸಿ, ಕೆಲವು ಎಲುಬುಗಳನ್ನು ವಶಪಡಿಸಿಕೊಂಡಿದ್ದರು. ಅದು ಶ್ರದ್ಧಾದೇ ಎಂಬುದು ಡಿಎನ್​​ಎ ಟೆಸ್ಟ್​​ನಲ್ಲಿ ಸಾಬೀತಾಗಿತ್ತು. ಅಫ್ತಾಬ್​ ಶ್ರದ್ಧಾಳ ದೇಹವನ್ನು ಯಾವ ಆಯುಧದಿಂದ ಕತ್ತರಿಸಿದ್ದಾನೆ ಎಂಬುದನ್ನು ಪತ್ತೆ ಹಚ್ಚುವ ಸಲುವಾಗಿ ಆ ಮೂಳೆಗಳನ್ನು ಇನ್ನಷ್ಟು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರ ವರದಿ ಈಗ ಹೊರಬಿದ್ದಿದೆ. ಅಫ್ತಾಬ್​ ಪೂನಾವಾಲಾ ತನ್ನ ಲಿವ್​ ಇನ್​ ಸಂಗಾತಿ ಶ್ರದ್ಧಾಳನ್ನು ಕೊಂದು, ಬಳಿಕ ಗರಗಸದಲ್ಲಿ ಆಕೆಯ ದೇಹವನ್ನು ತುಂಡರಿಸಿದ್ದಾನೆ ಎಂಬುದು ಗೊತ್ತಾಗಿದೆ.

ಅಫ್ತಾಬ್​ ಪೂನಾವಾಲಾ ಅಪಾರ್ಟ್​ಮೆಂಟ್​​ನಿಂದ ಪೊಲೀಸರು ಹಲವು ಬಗೆಯ ಮಾರಕಾಸ್ತ್ರಗಳನ್ನು ಈಗಾಗಲೇ ವಶಪಡಿಸಿಕೊಂಡಿದ್ದಾರೆ. ಆದರೆ ಅದರಲ್ಲಿ ಶ್ರದ್ಧಾಳನ್ನು ತುಂಡರಿಸಲು ಆತ ಯಾವ ಆಯುಧ ಬಳಸಿದ್ದ ಗೊತ್ತಾಗಿರಲಿಲ್ಲ. ಅಫ್ತಾಬ್​ ಮಂಪರು ಪರೀಕ್ಷೆ ವೇಳೆ, ತಾನು ಚೀನಿ ಕ್ಲೀವರ್ (ಮಾಂಸವನ್ನು ಕತ್ತರಿಸಲು ಬಳಸುವ ದೊಡ್ಡ ಚಾಕು) ಬಳಸಿದ್ದಾಗಿ ಹೇಳಿಕೊಂಡಿದ್ದಾನೆ ಎಂಬ ವರದಿ ಬಂದಿದ್ದರೂ, ಅದು ಸ್ಪಷ್ಟವಾಗಿರಲಿಲ್ಲ.

ಇದನ್ನೂ ಓದಿ: Shraddha Murder Case| ಹೌದು ನಾನೇ ಶ್ರದ್ಧಾಳ ಕೊಲೆ ಮಾಡಿದೆ; ಮಂಪರು ಪರೀಕ್ಷೆಯಲ್ಲೂ ಅದೇ ಉತ್ತರ ಕೊಟ್ಟ ಅಫ್ತಾಬ್​

Continue Reading

ದಿಲ್ಲಿ ಮರ್ಡರ್

Shraddha Walkar | ತನ್ನ ಕುಟುಂಬದ ಸದಸ್ಯರ ಭೇಟಿಗೆ ನಿರಾಕರಿಸುತ್ತಿರುವ ಶ್ರದ್ಧಾ ಕೊಲೆ ಆರೋಪಿ ಅಫ್ತಾಬ್

ಶ್ರದ್ಧಾ ವಾಳ್ಕರ್ (Shraddha Walkar) ಕೊಲೆ ಆರೋಪಿ, 28 ವರ್ಷದ ಅಫ್ತಾಬ್ ಪೂನಾವಾಲ ನವೆಂಬರ್ 26ರಿಂದ ದಿಲ್ಲಿಯ ತಿಹಾರ್ ಜೈಲಿನಲ್ಲಿದ್ದಾನೆ.

VISTARANEWS.COM


on

Aaftab used Chinese knife To Cut Shraddha Body
Koo

ನವದೆಹಲಿ: ತನ್ನ ಲಿವ್-ಇನ್ ಸಂಗಾತಿ ಶ್ರದ್ಧಾ ವಾಳ್ಕರಳನ್ನು (Shraddha Walkar) ತುಂಡು ತುಂಡಾಗಿ ಕತ್ತರಿಸಿ ಭಯಾನಕವಾಗಿ ಕೊಲೆ ಮಾಡಿದ್ದ ಆರೋಪಿ ಅಫ್ತಾಬ್ ಪೂನಾವಾಲ (Aftab Poonawala) ಈಗ ದಿಲ್ಲಿಯ ತಿಹಾರ್ ಜೈಲಿನಲ್ಲಿದ್ದಾನೆ. ಆತನನ್ನು ಭೇಟಿಯಾಗಲು ಬಂದ ತನ್ನ ಕುಟುಂಬದ ಸದಸ್ಯರನ್ನು ಭೇಟಿಯಾಗಲು ನಿರಾಕರಿಸುತ್ತಿದ್ದಾನೆಂದು ತಿಳಿದು ಬಂದಿದೆ.

28 ವರ್ಷದ ಅಫ್ತಾಬ್‌ ನವೆಂಬರ್ 26ರಿಂದ ತಿಹಾರ್ ಜೈಲಿನಲ್ಲಿದ್ದಾನೆ. ಆತ ತನ್ನನ್ನು ಯಾರು ಭೇಟಿ ಮಾಡಬೇಕೆಂಬ ಕುರಿತು ಮಾಹಿತಿಯನ್ನು ಜೈಲು ಅಧಿಕಾರಿಗಳಿಗೆ ಇನ್ನಷ್ಟೇ ನೀಡಬೇಕಿದೆ. ನಿಯಮಗಳ ಪ್ರಕಾರ, ಜೈಲಿನಲ್ಲಿರುವ ವ್ಯಕ್ತಿ ವಾರಕ್ಕೆ ಎರಡು ಸಾರಿ, ತನ್ನ ಕುಟುಂಬದವರನ್ನು ಭೇಟಿ ಮಾಡಲು ಅವಕಾಶವಿದೆ.

ಸದ್ಯ ಜೈಲಿನಲ್ಲಿ ತನ್ನ ಪಾಡಿಗೆ ತಾನು ಇರುತ್ತಿರುವ ಆರೋಪಿ ಪೂನಾವಾಲ ಈ ವಾರದ ಬಳಿಕ, ಯಾರನ್ನೋ ಭೇಟಿಯಾಗುವ ಬಗ್ಗೆ ಸಹ ಕೈದಿಗಳ ಜತೆಗೆ ಮಾತನಾಡಿಕೊಂಡಿದ್ದಾನೆಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಆತ ಇದವರೆಗೂ ಯಾರನ್ನು ಭೇಟಿ ಮಾಡಬೇಕೆಂಬ ಮಾಹಿತಿಯನ್ನು ಹಂಚಿಕೊಂಡಿಲ್ಲ. ಜತೆಗೆ, ತನ್ನ ಕುಟುಂಬದ ಸದಸ್ಯರನ್ನು ಭೇಟಿಯಾಗಲೂ ಮುಂದಾಗುತ್ತಿಲ್ಲ.

ಇದನ್ನೂ ಓದಿ | Shraddha Murder Case | ಶ್ರದ್ಧಾ ವಾಳ್ಕರ್​ ಹತ್ಯೆ ಕೇಸ್​​ ಸಿಬಿಐಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದ ದೆಹಲಿ ಹೈಕೋರ್ಟ್​

Continue Reading

ದಿಲ್ಲಿ ಮರ್ಡರ್

Shraddha Murder Case | ಶ್ರದ್ಧಾ ಹತ್ಯೆ ಕೇಸ್​​ನಲ್ಲಿ ಮಹತ್ವದ ತಿರುವು; ಅರಣ್ಯದಲ್ಲಿ ಸಿಕ್ಕ ಎಲುಬುಗಳು ಯಾರದ್ದು ಎಂಬ ಪ್ರಶ್ನೆಗೆ ಸಿಕ್ತು ಉತ್ತರ

ಮೆಹ್ರೌಲಿ ಅರಣ್ಯ ಪ್ರದೇಶಗಳಲ್ಲಿ ಸಿಕ್ಕ ಎಲುಬುಗಳು ಶ್ರದ್ಧಾಳದ್ದೇ ಎಂಬ ಅನುಮಾನ ಇತ್ತು. ಆದರೆ ಅದು ದೃಢಪಟ್ಟಿರಲಿಲ್ಲ. ಈಗ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಹೊರಬಿದ್ದಿದೆ.

VISTARANEWS.COM


on

Shraddha Murder Case Shraddha Father DNA Match with Bones
Koo

ನವ ದೆಹಲಿ: ಶ್ರದ್ಧಾ ಹತ್ಯೆ ಪ್ರಕರಣದ ತನಿಖಾಧಿಕಾರಿಗಳಿಗೆ ಮಹತ್ವದ ಎಳೆಯೊಂದು ಸಿಕ್ಕಿದೆ. ದಕ್ಷಿಣ ದೆಹಲಿಯ ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ ಸಿಕ್ಕಿದ್ದ ಎಲುಬುಗಳು ಶ್ರದ್ಧಾಳದ್ದೇ ಎಂದು ದೃಢಪಟ್ಟಿದೆ. ದೆಹಲಿಯಲ್ಲಿ ಅಫ್ತಾಬ್​ ಎಂಬಾತ ತನ್ನ ಲಿವ್​ ಇನ್​ ಪಾರ್ಟ್ನರ್​​ ಶ್ರದ್ಧಾಳನ್ನು ಉಸಿರುಗಟ್ಟಿಸಿ ಕೊಂದಿದ್ದಲ್ಲದೆ, 35 ತುಂಡುಗಳಾಗಿ ಮಾಡಿ ಫ್ರಿಜ್​​ನಲ್ಲಿಟ್ಟುಕೊಂಡು, ಅದನ್ನು ಮೆಹ್ರೌಲಿ ಅರಣ್ಯದ ವಿವಿಧೆಡೆ ಎಸೆದಿದ್ದ. ಇದು 2022ರ ಮೇ ತಿಂಗಳಲ್ಲಿ ನಡೆದ ಕೊಲೆಯಾಗಿದ್ದು, ಈಗ ಬೆಳಕಿಗೆ ಬಂದಿದೆ. ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೆಹ್ರೌಲಿ ಅರಣ್ಯವನ್ನೆಲ್ಲ ಹುಡುಕಿದಾಗ ಅವರಿಗೆ ಎಲುಬುಗಳು ಸಿಕ್ಕಿವೆ. ತಲೆ ಬುರುಡೆಯೂ ಪತ್ತೆಯಾಗಿತ್ತು. ಇವನ್ನೆಲ್ಲ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಇದೀಗ ಪರೀಕ್ಷಾ ವರದಿ ಬಂದಿದೆ. ‘ಶ್ರದ್ಧಾಳ ತಂದೆ ವಿಕಾಸ್​ ವಾಳ್ಕರ್​ ಮತ್ತು ಆಕೆಯ ಸೋದರನ​ ಡಿಎನ್​ಎ ಮಾದರಿ ಈ ಎಲುಬುಗಳೊಂದಿಗೆ ಹೊಂದಾಣಿಕೆಯಾಗುತ್ತಿದೆ’ ಎಂದು ವರದಿಯಲ್ಲಿ ದೃಢಪಟ್ಟಿದೆ.

ಆರೋಪಿ ಅಫ್ತಾಬ್​​ನನ್ನು ವಶಕ್ಕೆ ಪಡೆದಿರುವ ಪೊಲೀಸರು ಆತನನ್ನು ಹಲವು ಮಾದರಿಯ ವಿಚಾರಣೆಗೆ ಒಳಪಡಿಸಿದ್ದಾರೆ. ಈಗಾಗಲೇ ಅವನಿಗೆ ಪಾಲಿಗ್ರಾಫ್​ ಟೆಸ್ಟ್​ ಮತ್ತು ಮಂಪರು ಪರೀಕ್ಷೆ ಮಾಡಲಾಗಿದೆ. ಅದರಲ್ಲಿ ಆತ ತಾನೇ ಶ್ರದ್ಧಾಳ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಹಾಗೇ, ತಾನು ಶ್ರದ್ಧಾಳನ್ನು ಹತ್ಯೆ ಮಾಡಲು ಬಳಸಿದ ಶಸ್ತ್ರ ಯಾವುದು? ಅವುಗಳನ್ನು ಎಲ್ಲಿಟ್ಟಿದ್ದೇನೆ? ಶ್ರದ್ಧಾಳ ದೇಹದ ತುಂಡುಗಳನ್ನು ಎಲ್ಲಿ ಎಸೆದೆ-ಎಂಬಿತ್ಯಾದಿ ಮಾಹಿತಿಗಳನ್ನು ಹೇಳಿಕೊಂಡಿದ್ದ. ಇದೀಗ ಡಿಎನ್​ಎ ಪರೀಕ್ಷೆಯಲ್ಲಿ ಆ ಎಲುಬುಗಳೆಲ್ಲ ಶ್ರದ್ಧಾಳದ್ದೇ ಎಂಬುದು ದೃಢಪಟ್ಟಿದ್ದು, ತನಿಖೆಯನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿದೆ.

ಇದನ್ನೂ ಓದಿ: Shraddha Murder Case | ಪೊಲೀಸರು ಸಹಕಾರ ನೀಡಿದ್ದರೆ ಮಗಳು ಬದುಕುತ್ತಿದ್ದಳು, ಶ್ರದ್ಧಾ ತಂದೆ ಗಂಭೀರ ಆರೋಪ

Continue Reading
Advertisement
Gavyamrita Book
ಉತ್ತರ ಕನ್ನಡ8 mins ago

ಗವ್ಯಾಮೃತ ಪುಸ್ತಕ ಲೋಕಾರ್ಪಣೆ; ಗೋವಿನ ಕುರಿತ ಸುವಿಚಾರಗಳನ್ನು ಸಮಾಜಕ್ಕೆ ತಲುಪಿಸಲು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಕರೆ

Indus App Store launched by Walmart-owned PhonePe
ದೇಶ25 mins ago

PhonePay: ಫೋನ್‌ಪೇ ಸ್ವದೇಶಿ ಆ್ಯಪ್‌ಸ್ಟೋರ್ ‘ಇಂಡಸ್’ ಲಾಂಚ್; ಗೂಗಲ್‌ ಪ್ಲೇ ಸ್ಟೋರ್‌ಗೆ ಪಂಚ್!

shishya sweekara Mahotsav in shri swarnavalli maha samsthana matha dharmasabhe
ಉತ್ತರ ಕನ್ನಡ36 mins ago

Sirsi News: ಅಪಕಾರ ಮಾಡಿದವರಿಗೂ ಉಪಕಾರ ಬಯಸುವ ಸದ್ಗುಣವನ್ನು ಎಲ್ಲರೂ ಬೆಳೆಸಿಕೊಳ್ಳಿ: ಶ್ರೀವಿದ್ಯಾವಿಶ್ವೇಶ್ವರ ಭಾರತೀ ಸ್ವಾಮೀಜಿ

Gurpatwant Singh Pannun
ಕ್ರೀಡೆ42 mins ago

IND vs ENG: ರಾಂಚಿ ಟೆಸ್ಟ್​ ಪಂದ್ಯಕ್ಕೆ ಖಲಿಸ್ತಾನಿ ಉಗ್ರನಿಂದ ಬೆದರಿಕೆ; ಸ್ಟೇಡಿಯಂಗೆ ಬಿಗಿ ಭದ್ರತೆ!

Hello-minister-N-chaluvarayaswamy-in-vistara-news-2
ಕರ್ನಾಟಕ56 mins ago

Krishi Bhagya Scheme: 24 ಜಿಲ್ಲೆಗಳ 106 ತಾಲೂಕುಗಳಲ್ಲಿ ಕೃಷಿ ಭಾಗ್ಯ ಮರು ಜಾರಿ: ಎನ್. ಚಲುವರಾಯಸ್ವಾಮಿ

bike accident
ಪ್ರಮುಖ ಸುದ್ದಿ2 hours ago

Road Accident: ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತ; ಬಸ್-ಬೈಕ್ ಡಿಕ್ಕಿಯಾಗಿ ನಾಲ್ವರ ದುರ್ಮರಣ

vistara top ten
ಟಾಪ್ 10 ನ್ಯೂಸ್2 hours ago

VISTARA TOP 10 NEWS: ನಾಡಗೀತೆಯಲ್ಲೂ ಸರಕಾರ ಎಡವಟ್ಟು ಪಬ್ಲಿಕ್‌ ಪ್ಲೇಸಲ್ಲಿ ಸೇದಬಾರದು ಸಿಗರೇಟು.. ಮತ್ತು ಇತರ ಸುದ್ದಿಗಳು

Vamshi Krishna hits six sixes
ಕ್ರೀಡೆ2 hours ago

C K Nayudu Trophy: ಒಂದೇ ಓವರ್​ನಲ್ಲಿ 6 ಸಿಕ್ಸರ್ ಬಾರಿಸಿದ ವಂಶಿ ಕೃಷ್ಣ; ವಿಡಿಯೊ ವೈರಲ್​

IT department has withdrawn 65 crore rupees from the Congress party accounts
ದೇಶ2 hours ago

Congress Party: ಕಾಂಗ್ರೆಸ್‌ ಖಾತೆಗಳಿಂದ 65 ಕೋಟಿ ರೂ. ವಿತ್‌ಡ್ರಾ ಮಾಡಿದ ಐಟಿ ಇಲಾಖೆ!

Minister Madhu Bangarappa inauguration by Beneficiaries convention of guarantee schemes in Soraba
ಶಿವಮೊಗ್ಗ2 hours ago

Shivamogga News: ಸೊರಬದಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ಚಾಲನೆ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for february 21 2024
ಭವಿಷ್ಯ19 hours ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ2 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

read your daily horoscope predictions for february 19 2024
ಭವಿಷ್ಯ3 days ago

Dina Bhavishya : ನಿಮ್ಮನ್ನು ದ್ವೇಷಿಸುವವರೇ ಸ್ನೇಹಿತರಾಗಿ ಬದಲಾಗುತ್ತಾರೆ

read your daily horoscope predictions for february 18 2024
ಭವಿಷ್ಯ4 days ago

Dina Bhavishya : ಈ ರಾಶಿಯವರು ಇಂದು ನೀರಿನಂತೆ ಹಣವನ್ನು ಖರ್ಚು ಮಾಡ್ತಾರೆ

Challenging Darsha
ಪ್ರಮುಖ ಸುದ್ದಿ4 days ago

Actor Darshan : ಚಾಲೆಂಜಿಂಗ್ ಸ್ಟಾರ್​ ದರ್ಶನ್​ ‘ಬೆಳ್ಳಿ ಪರ್ವ’ ಕಾರ್ಯಕ್ರಮದ ಲೈವ್​ ಇಲ್ಲಿ ವೀಕ್ಷಿಸಿ

Children lock up their mother for property
ಕರ್ನಾಟಕ4 days ago

Inhuman Behaviour : ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟರು ಮಕ್ಕಳು!

read your daily horoscope predictions for february 17 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಸೀಕ್ರೆಟ್‌ ವಿಷ್ಯವನ್ನು ರಿವೀಲ್‌ ಮಾಡಿದ್ರೆ ಅಪಾಯ ಗ್ಯಾರಂಟಿ!

Karnataka Budget Session 2024 siddaramaiah use cinema Lines
ಸಿನಿಮಾ5 days ago

Karnataka Budget Session 2024: ಡಾಲಿ ಧನಂಜಯ್‌ ಬರೆದ ಸಾಲುಗಳು ಬಜೆಟ್‌ನಲ್ಲಿ ಹೈಲೈಟ್‌!

read your daily horoscope predictions for february 16 2024
ಭವಿಷ್ಯ6 days ago

Dina Bhavishya : ಈ ಹಿಂದೆ ಹಣ ಹೂಡಿಕೆ ಮಾಡಿದ್ದರೆ ಇಂದು ಈ ರಾಶಿಯವರಿಗೆ ಡಬಲ್‌ ಲಾಭ

Siddaramaiah
ರಾಜಕೀಯ6 days ago

Karnataka Budget Session 2024: ಬಿಜೆಪಿಯವರು ಗೂಂಡಾಗಳು ಎಂದ ಸಿಎಂ; ತೊಡೆ ತಟ್ಟಿದ್ದು ನಾವಾ – ನೀವಾ ಎಂದ ವಿಪಕ್ಷ!

ಟ್ರೆಂಡಿಂಗ್‌