Shraddha Murder Case | ವಿಕೃತ ಹಂತಕ ಅಫ್ತಾಬ್‌ ಮತ್ತೆ 5 ದಿನ ಪೊಲೀಸ್‌ ಕಸ್ಟಡಿಗೆ, ಗಲ್ಲಿಗೇರಿಸುವಂತೆ ವಕೀಲರ ಆಗ್ರಹ - Vistara News

ದಿಲ್ಲಿ ಮರ್ಡರ್

Shraddha Murder Case | ವಿಕೃತ ಹಂತಕ ಅಫ್ತಾಬ್‌ ಮತ್ತೆ 5 ದಿನ ಪೊಲೀಸ್‌ ಕಸ್ಟಡಿಗೆ, ಗಲ್ಲಿಗೇರಿಸುವಂತೆ ವಕೀಲರ ಆಗ್ರಹ

ಹೆಚ್ಚಿನ ತನಿಖೆ (Shraddha Murder Case) ದೃಷ್ಟಿಯಿಂದ ಪೊಲೀಸರು ಮಾಡಿದ ಮನವಿ ಪುರಸ್ಕರಿಸಿದ ದೆಹಲಿಯ ಸಾಕೇತ್‌ ನ್ಯಾಯಾಲಯವು ಅಫ್ತಾಬ್‌ ಅಮೀನ್‌ ಪೂನಾವಾಲಾನನ್ನು ಐದು ದಿನ ಪೊಲೀಸ್‌ ಕಸ್ಟಡಿಗೆ ನೀಡಿದೆ.

VISTARANEWS.COM


on

Aftab Amin Poonawalla Narco Test
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಪ್ರಿಯತಮೆ ಶ್ರದ್ಧಾ ವಾಳ್ಕರ್‌ ದೇಹವನ್ನು 35 ಭಾಗಗಳಾಗಿ ಕತ್ತರಿಸಿ, ದೆಹಲಿಯ ಹಲವೆಡೆ ಎಸೆದು ವಿಕೃತಿ ಮೆರೆದ (Shraddha Murder Case) ಹಂತಕ ಅಫ್ತಾಬ್‌ ಅಮೀನ್‌ ಪೂನಾವಾಲಾನನ್ನು ನ್ಯಾಯಾಲಯವು ಮತ್ತೆ ಐದು ದಿನ ಪೊಲೀಸ್‌ ಕಸ್ಟಡಿಗೆ ನೀಡಿದೆ. ಹಾಗೆಯೇ, ಅಫ್ತಾಬ್‌ನನ್ನು ನಾರ್ಕೊ ಟೆಸ್ಟ್‌ಗೆ (ಮಂಪರು ಪರೀಕ್ಷೆ) ಒಳಪಡಿಸಲು ಕೂಡ ಸಾಕೇತ್‌ ನ್ಯಾಯಾಲಯ ಸಮ್ಮತಿ ಸೂಚಿಸಿದೆ.

ವಿಡಿಯೊ ಕಾನ್ಫರೆನ್ಸ್‌ ಮೂಲಕ ಅಫ್ತಾಬ್‌ ಅಮೀನ್‌ನನ್ನು ಪೊಲೀಸರು ಸಾಕೇತ್‌ ಕೋರ್ಟ್‌ಗೆ ಹಾಜರುಪಡಿಸಿದರು. “ಶ್ರದ್ಧಾ ಹತ್ಯೆ ಕುರಿತ ತನಿಖೆಗೆ ಅಫ್ತಾಬ್‌ ಅಮೀನ್‌ ಸಹಕಾರ ನೀಡುತ್ತಿಲ್ಲ. ಹಾಗೆಯೇ, ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಲು ಹಿಮಾಚಲ ಪ್ರದೇಶಕ್ಕೆ ತೆರಳಬೇಕಿದೆ. ಹಾಗಾಗಿ, ಪೊಲೀಸ್‌ ಕಸ್ಟಡಿಯ ಅವಧಿಯನ್ನು ವಿಸ್ತರಿಸಬೇಕು” ಎಂದು ಪೊಲೀಸರು ಮನವಿ ಮಾಡಿದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯವು ಮತ್ತೆ ಐದು ದಿನ ಪೊಲೀಸ್‌ ಕಸ್ಟಡಿಗೆ ನೀಡಿದೆ.

ಶ್ರದ್ಧಾಳನ್ನು ಭೀಕರವಾಗಿ ಹತ್ಯೆ ಮಾಡಿದ ಕಾರಣ ದೆಹಲಿ ಮಾತ್ರವಲ್ಲ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಅಫ್ತಾಬ್‌ನನ್ನು ಗಲ್ಲಿಗೇರಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಇದು ಸೂಕ್ಷ್ಮ ಪ್ರಕರಣವಾದ ಕಾರಣ ನೇರವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಬದಲು ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರುಪಡಿಸಬೇಕು ಎಂದು ಕೋರ್ಟ್‌ಗೆ ಪೊಲೀಸರು ಮನವಿ ಮಾಡಿದ್ದರು. ಹಾಗಾಗಿ, ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಯಿತು. ಆದರೂ, ಅಫ್ತಾಬ್‌ನನ್ನು ಗಲ್ಲಿಗೇರಿಸಬೇಕು ಎಂದು ಸಾಕೇತ್‌ ಕೋರ್ಟ್‌ನಲ್ಲಿ ಹಲವಾರು ವಕೀಲರು ಆಗ್ರಹಿಸಿದರು.

ಇದನ್ನೂ ಓದಿ | Delhi Crime | ವಿಕೃತ ಹಂತಕ ಅಫ್ತಾಬ್‌ ನಾರ್ಕೊ ಟೆಸ್ಟ್‌ಗೆ ಕೋರ್ಟ್‌ ಅಸ್ತು, ಏನಿದು ಪರೀಕ್ಷೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದಿಲ್ಲಿ ಮರ್ಡರ್

Murder: ಕಪಾಟಿನಲ್ಲಿತ್ತು ಯುವತಿಯ ಶವ; ಲಿವ್ ಇನ್‌ ಸಂಬಂಧದಲ್ಲಿದ್ದ ಗೆಳೆಯ ನಾಪತ್ತೆ!

Murder: ಮಗಳ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಆತಂಕಗೊಂಡ ತಂದೆ ಆಕೆಯನ್ನು ಹುಡುಕಿಕೊಂಡು ಆಕೆ ವಾಸವಿದ್ದ ದೆಹಲಿಯ ದ್ವಾರಕಾ ಪ್ರದೇಶದಲ್ಲಿದ್ದ ಅಪಾರ್ಟ್ ಮೆಂಟ್ ಗೆ ಬಂದಾಗ ಮನೆಯ ಕಪಾಟಿನಲ್ಲಿ ಮಗಳ ಶವ ಪತ್ತೆಯಾಗಿದೆ. ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಆಕೆಯ ಸಂಗಾತಿ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.

VISTARANEWS.COM


on

By

Murder
Koo

ಹೊಸದಿಲ್ಲಿ: ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ (Leave in relationship) ಯುವತಿಯೊಬ್ಬಳು ಶವವಾಗಿ (Murder) ಮನೆಯ ಕಪಾಟಿನಲ್ಲಿ ಪತ್ತೆಯಾಗಿರುವ ಘಟನೆ ಹೊಸದಿಲ್ಲಿಯ (delhi) ದ್ವಾರಕಾದಲ್ಲಿ (dwaraka) ನಡೆದಿದೆ.

ದ್ವಾರಕಾದ ದಾಬ್ರಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಾಗಿದ್ದ ರುಖ್ಸರ್ ರಜಪೂತ್ (26) ಕೊಲೆಯಾದ ಯುವತಿ. ಗೆಳೆಯ ವಿಪಾಲ್ ಟೈಲರ್ ಆಕೆಯನ್ನು ಕೊಂದಿರಬಹುದು ಎಂದು ಶಂಕಿಸಲಾಗಿದೆ.

ಮೀರತ್‌ನಲ್ಲಿ ವಾಸವಾಗಿರುವ ರುಖ್ಸರ್ ರಜಪೂತ್ ಳ ತಂದೆ ಮಗಳನ್ನು ಹುಡುಕಿಕೊಂಡು ಬುಧವಾರ ರಾತ್ರಿ ಬಂದಾಗ ಆಕೆ ಕೊಲೆಯಾಗಿರುವ ವಿಷಯ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Assault Case : ಆಫೀಸ್‌ನಲ್ಲಿ ಟಾರ್ಚರ್‌ ಕೊಟ್ಟ ಮೇಲಾಧಿಕಾರಿಗೆ ಸುಪಾರಿ ಕೊಟ್ಟು ಹೊಡೆಸಿದ್ರು ಸಿಬ್ಬಂದಿ!

ಒಂದೂವರೆ ವರ್ಷಗಳ ಹಿಂದೆ ಭೇಟಿ

ರಜಪೂತ್ ಗುಜರಾತ್‌ನಲ್ಲಿ ಕರಕುಶಲ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಳು. ಒಂದೂವರೆ ವರ್ಷಗಳ ಹಿಂದೆ ಅಲ್ಲಿ ಆಕೆ ವಿಪಾಲ್‌ನನ್ನು ಭೇಟಿಯಾಗಿದ್ದಳು. ದೆಹಲಿಗೆ ಬಂದ ಬಳಿಕ ಅವರಿಬ್ಬರೂ ಒಟ್ಟಿಗೆ ವಾಸಿಸುತ್ತಿರುವ ವಿಷಯ ಆಕೆಯ ತಂದೆ ಮುಸ್ತಾಕಿನ್ ಮತ್ತು ಅವರ ಕುಟುಂಬಕ್ಕೆ ತಿಳಿದಿತ್ತು.

ತಂದೆಗೆ ಕೊನೆಯ ಕರೆ

ರುಖ್ಸರ್ ರಜಪೂತ್ ಬುಧವಾರ ಮಧ್ಯಾಹ್ನ ತಂದೆ ಮೊಹಮ್ಮದ್ ಮುಸ್ತಾಕಿನ್ ಅವರಿಗೆ ಕರೆ ಮಾಡಿದ್ದರು. ಆಗ ಆಕೆ ತುಂಬಾ ಅಸಮಾಧಾನದಿಂದ ಇದ್ದಿದ್ದು ಕಂಡು ಬಂದಿತ್ತು. ಸಂಜೆ ವೇಳೆಗೆ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು. ಹೀಗಾಗಿ ಆತಂಕದಿಂದ ಮುಸ್ತಾಕಿನ್ ಅವರು ರಾತ್ರಿಯೇ ರುಖ್ಸಾರ್‌ನನ್ನು ಹುಡುಕಿಕೊಂಡು ತಮ್ಮ ಸಂಬಂಧಿಕರೊಂದಿಗೆ ದೆಹಲಿಗೆ ಬಂದಿದ್ದರು.

ಅವರು ರಜಪೂತ್ ವಾಸವಿದ್ದ ಅಪಾರ್ಟ್ ಮೆಂಟ್ ಗೆ ಬಂದಾಗ ಮನೆಗೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಅವರು ಬೀಗ ಎಲ್ಲಿ ಇಡುತ್ತಾರೆ ಎಂಬುದು ತಿಳಿದಿದ್ದ ಮುಸ್ತಾಕಿನ್ ಮನೆಯ ಬೀಗ ತೆರೆದು ಒಳಗೆ ಬಂದು ಹುಡುಕಿದಾಗ ಕಪಾಟಿನಲ್ಲಿ ರಜಪೂತ್ ಅವರ ಶವ ಪತ್ತೆಯಾಗಿದೆ. ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ದೇಹದ 15ಕ್ಕೂ ಹೆಚ್ಚು ಕಡೆ ಗಾಯ

ರುಖ್ಸರ್ ರಜಪೂತ್ ನ ಮುಖದ ಮೇಲೆ ಆಳವಾದ ಗಾಯಗಳು ಸೇರಿ ದೇಹದಾದ್ಯಂತ 15ಕ್ಕೂ ಹೆಚ್ಚು ಗಾಯಗಳಿದ್ದವು. ಮೇಲ್ನೋಟಕ್ಕೆ, ಮಹಿಳೆಯನ್ನು ಕತ್ತು ಹಿಸುಕಿ ಕೊಂದು ಹಾಕಲಾಗಿದೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೆಳೆಯ ನಾಪತ್ತೆ

ರುಖ್ಸರ್ ರಜಪೂತ್ ನ ಗೆಳೆಯ ವಿಪಾಲ್ ಟೈಲರ್ ನಾಪತ್ತೆಯಾಗಿರುವುದರಿಂದ ಆತನೇ ಪ್ರಮುಖ ಆರೋಪಿಯಾಗಿರಬಹುದು ಎಂದು ಶಂಕಿಸಲಾಗಿದೆ. ವಿಪಾಲ್ ಟೈಲರ್ ಎಂಬಾತನೊಂದಿಗೆ ಸುಮಾರು ಒಂದೂವರೆ ತಿಂಗಳಿನಿಂದ ಈ ಅಪಾರ್ಟ್ ಮೆಂಟ್ ನಲ್ಲಿ ರುಖ್ಸರ್ ರಜಪೂತ್ ವಾಸವಾಗಿದ್ದಳು. ರುಖ್ಸರ್ ರಜಪೂತ್ ಮದುವೆಯಾಗಿರುವುದಾಗಿ ಹೇಳಲಾಗಿದ್ದು, ಈ ಕುರಿತು ಯಾವುದೇ ದಾಖಲೆಗಳು ಪತ್ತೆಯಾಗಿಲ್ಲ ಎಂದು ಪೊಲೀಸ್ ಉಪ ಆಯುಕ್ತ (ದ್ವಾರಕಾ) ಅಂಕಿತ್ ಸಿಂಗ್ ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆಗೆ ಶಿಕ್ಷೆ) ಅಡಿಯಲ್ಲಿ ದಾಬ್ರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿದ್ದು, ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದ ಎಂದು ಸಿಂಗ್ ಹೇಳಿದರು.

ಮುಸ್ತಾಕಿಮ್ ಹೇಳಿಕೆಯನ್ನು ಆಧರಿಸಿ ಕೊಲೆ ಪ್ರಕರಣವನ್ನು ದಾಖಲಿಸಿರುವ ಪೊಲೀಸರು ಆರೋಪಿಗಾಗಿ ಪತ್ತೆ ಹಚ್ಚಲು ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ತನಿಖೆಗಾಗಿ ಹಲವಾರು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

ದಿಲ್ಲಿ ಮರ್ಡರ್

ಶ್ರದ್ಧಾ ವಾಳ್ಕರ್​ ಹತ್ಯೆ ಪ್ರಕರಣದಲ್ಲಿ ಸಿದ್ಧವಾಯ್ತು 3000 ಪುಟಗಳ ಕರಡು ಆರೋಪ ಪಟ್ಟಿ; ಕಾನೂನು ತಜ್ಞರಿಂದ ಪರಿಶೀಲನೆ

ಅಫ್ತಾಬ್​ ಮೇ ತಿಂಗಳಲ್ಲಿಯೇ ಶ್ರದ್ಧಾಳನ್ನು ಕೊಂದಿದ್ದರೂ ಅದು ಗೊತ್ತಾಗದಂತೆ ಭಾರಿ ನಾಟಕವಾಡಿದ್ದ. ತಿಂಗಳುಗಳ ಕಾಲ ಆಕೆಯ ಸೋಷಿಯಲ್​ ಮೀಡಿಯಾವನ್ನು ಆತನೇ ಹ್ಯಾಂಡಲ್​ ಮಾಡುವ ಮೂಲಕ, ಆಕೆ ಬದುಕಿದ್ದಾಳೆ ಎಂದು ಬಿಂಬಿಸಿದ್ದ.

VISTARANEWS.COM


on

draft chargesheet of Shraddha Walkar murder case Ready By Delhi Police
ಅಫ್ತಾಬ್​ ಮತ್ತು ಶ್ರದ್ಧಾ ವಾಳ್ಕರ್​
Koo

ನವ ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆದ ಶ್ರದ್ಧಾ ವಾಳ್ಕರ್ (Shraddha Walkar)​ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಪೊಲೀಸರು ಸುಮಾರು 3000 ಪುಟಗಳ ಕರಡು ಚಾರ್ಜ್​ಶೀಟ್​ ಸಿದ್ಧಪಡಿಸಿ ಇಟ್ಟಿದ್ದಾರೆ. ವಿಧಿವಿಜ್ಞಾನ ವರದಿಗಳು ಮತ್ತು ಎಲೆಕ್ಟ್ರಾನಿಕ್ ಪುರಾವೆಗಳು ಅಂದರೆ ಇಮೇಲ್​, ಮೊಬೈಲ್ ಫೋಟೋಗ್ರಾಫ್​, ಹಣ ವರ್ಗಾವಣೆ ದಾಖಲೆಗಳನ್ನು ಒಳಗೊಂಡಂತೆ ಸುಮಾರು 100 ಸಾಕ್ಷಿಗಳನ್ನು ಈ ಚಾರ್ಜ್​​ಶೀಟ್​​ನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಈ ಕರಡು ದಾಖಲೆಯನ್ನು ಕಾನೂನು ತಜ್ಞರು ಪರಿಶೀಲನೆ ನಡೆಸುತ್ತಿದ್ದು, ಶೀಘ್ರದಲ್ಲೇ ಅಂತಿಮ ಆರೋಪ ಪಟ್ಟಿ ಸಿದ್ಧವಾಗಲಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ದೆಹಲಿಯಲ್ಲಿ 2022ರ ಮೇ ತಿಂಗಳಲ್ಲಿ ನಡೆದಿದ್ದ ಶ್ರದ್ಧಾ ವಾಳ್ಕರ್​ ಭೀಕರ ಹತ್ಯೆ ಪ್ರಕರಣ ಇತ್ತೀಚೆಗಷ್ಟೇ ಬೆಳಕಿಗೆ ಬಂದಿದೆ. ಕೊಲೆ ಮಾಡಿದ ಆರೋಪಿ ಅಫ್ತಾಬ್​ ಪೂನಾವಾಲಾ ಸದ್ಯ ನ್ಯಾಯಾಂಗ ಬಂಧನದಲ್ಲಿಯೇ ಇದ್ದಾನೆ. ಈತ ತನ್ನ ಲಿವ್​ ಇನ್​ ಸಂಗಾತಿ ಶ್ರದ್ಧಾಳನ್ನು ಉಸಿರುಗಟ್ಟಿಸಿ ಕೊಂದು, ಆಕೆಯ ಶವವನ್ನು 35ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿದ್ದ. ಬಳಿಕ 300 ಲೀಟರ್​ ಸಾಮರ್ಥ್ಯದ ಫ್ರಿಜ್​ ಖರೀದಿಸಿ ಆ ಶವದ ತುಂಡುಗಳನ್ನು ಅದರಲ್ಲಿ ಇಟ್ಟಿದ್ದ. ನಂತರ ತಮ್ಮ ಅಪಾರ್ಟ್​ಮೆಂಟ್​ ಸಮೀಪವೇ ಇದ್ದಿದ್ದ ಮೆಹ್ರೌಲಿ ಅರಣ್ಯದ ಹಲವು ಭಾಗಗಳಲ್ಲಿ ಅವುಗಳನ್ನು ಎಸೆದಿದ್ದ. ಮೆಹ್ರೌಲಿ ಅರಣ್ಯವನ್ನು ಜಾಲಾಡಿದಾಗ ಹಲವು ಮೂಳೆಗಳು ಪತ್ತೆಯಾಗಿದ್ದು, ಅವೆಲ್ಲ ಶ್ರದ್ಧಾಳದ್ದೇ ಎಂದೂ ಡಿಎನ್​ಎ ಪರೀಕ್ಷೆಯಲ್ಲಿ.

ಇದನ್ನೂ ಓದಿ: Shraddha Murder Case | ಶ್ರದ್ಧಾ ವಾಳ್ಕರ್​ ಹತ್ಯೆ ಕೇಸ್​​ ಸಿಬಿಐಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದ ದೆಹಲಿ ಹೈಕೋರ್ಟ್​

ಅಫ್ತಾಬ್​ ಮೇ ತಿಂಗಳಲ್ಲಿಯೇ ಶ್ರದ್ಧಾಳನ್ನು ಕೊಂದಿದ್ದರೂ ಅದು ಗೊತ್ತಾಗದಂತೆ ಭಾರಿ ನಾಟಕವಾಡಿದ್ದ. ತಿಂಗಳುಗಳ ಕಾಲ ಆಕೆಯ ಸೋಷಿಯಲ್​ ಮೀಡಿಯಾವನ್ನು ಆತನೇ ಹ್ಯಾಂಡಲ್​ ಮಾಡುವ ಮೂಲಕ, ಆಕೆ ಬದುಕಿದ್ದಾಳೆ ಎಂಬುದನ್ನು ಬಿಂಬಿಸಲು ಹೋಗಿದ್ದ. ಶ್ರದ್ಧಾ ತಂದೆ-ತಾಯಿಯಿಂದ ದೂರವಾಗಿದ್ದರೂ, ಕೆಲವು ಸಂಬಂಧಿಕರೊಂದಿಗೆ ಸಂಪರ್ಕದಲ್ಲಿದ್ದಳು. ಆದರೆ ಬರುಬರುತ್ತ ಆಕೆ ಸಂಪರ್ಕಕ್ಕೆ ಸಿಗದಂತಾದಾಗ ಶ್ರದ್ಧಾಳ ತಂದೆಯ ಸ್ನೇಹಿತರೊಬ್ಬರು ಅನುಮಾನ ವ್ಯಕ್ತಪಡಿಸಿದ್ದರು. ಆಕೆಯ ತಂದೆಗೆ ಈ ವಿಚಾರವನ್ನು ಹೇಳಿದ್ದರು. ಅದರ ಬೆನ್ನಲ್ಲೇ ಶ್ರದ್ಧಾಳ ಅಪ್ಪ ದೂರು ದಾಖಲು ಮಾಡಿದ್ದರು. ತನಿಖೆ ನಡೆಸಿದಾಗ ಆಕೆ ಕೊಲೆಯಾಗಿದ್ದು ಗೊತ್ತಾಗಿದೆ. ನವೆಂಬರ್​ 12ರಂದು ಅಫ್ತಾಬ್​ ಅರೆಸ್ಟ್​ ಆಗಿದ್ದಾನೆ ಮತ್ತು ಕೊಲೆಯನ್ನು ತಾನೇ ಮಾಡಿದ್ದಾಗಿಯೂ ಒಪ್ಪಿಕೊಂಡಿದ್ದಾನೆ.

Continue Reading

ಕ್ರೈಂ

Shraddha Murder Case | ಶ್ರದ್ಧಾಳ ದೇಹ ಕತ್ತರಿಸಲು ಅಫ್ತಾಬ್​ ಬಳಸಿದ್ದು ಯಾವ ಆಯುಧ?-ಕೊನೆಗೂ ಬಯಲಾಯ್ತು ಸತ್ಯ!

ಪೊಲೀಸರು ಈಗಾಗಲೇ ಅರಣ್ಯ ಪ್ರದೇಶಗಳಲ್ಲಿ ಹುಡುಕಾಟ ನಡೆಸಿ, ಕೆಲವು ಎಲುಬುಗಳನ್ನು ವಶಪಡಿಸಿಕೊಂಡಿದ್ದರು. ಅದು ಶ್ರದ್ಧಾದೇ ಎಂಬುದು ಡಿಎನ್​​ಎ ಟೆಸ್ಟ್​​ನಲ್ಲಿ ಸಾಬೀತಾಗಿತ್ತು.

VISTARANEWS.COM


on

Shraddha Murder Case
Koo

ನವ ದೆಹಲಿ: ಲಿವ್​ ಇನ್​ ಸಂಗಾತಿಯಿಂದ ಬರ್ಬರವಾಗಿ ಹತ್ಯೆಗೀಡಾದ ಶ್ರದ್ಧಾ ವಾಳ್ಕರ್​​ ಕೇಸ್​ ತನಿಖೆ ಮುಂದುವರಿದೆ. ಆರೋಪಿ ಅಫ್ತಾಬ್​ ಪೂನಾವಾಲಾ ಸದ್ಯ ದೆಹಲಿಯ ತಿಹಾರ್​ ಜೈಲಿನಲ್ಲಿದ್ದು, ಮತ್ತೊಂದೆಡೆ ಅವನ ವಿಚಾರಣೆಯೂ ನಡೆಯುತ್ತಿದೆ. ಅಫ್ತಾಬ್ ಮತ್ತು ಶ್ರದ್ಧಾ ಬೇರೆ ಧರ್ಮದವರು. ಮನೆಯವರ ವಿರೋಧದ ನಡುವೆಯೂ ಶ್ರದ್ಧಾ ಅಫ್ತಾಬ್​ ಜತೆ ಬದುಕುತ್ತಿದ್ದಳು. ಕಳೆದ ಮೇ ತಿಂಗಳಲ್ಲಿ ಅಫ್ತಾಬ್​ ಆಕೆಯನ್ನು ಕೊಂದು, 35 ತುಂಡುಗಳಾಗಿ ಕತ್ತರಿಸಿ, ಅವುಗಳನ್ನೆಲ್ಲ ಫ್ರಿಜ್​​ನಲ್ಲಿಟ್ಟುಕೊಂಡಿದ್ದ. ಬಳಿಕ ತಮ್ಮ ಅಪಾರ್ಟ್​​ಮೆಂಟ್​​ಗೆ ಸಮೀಪದಲ್ಲೇ ಇರುವ ಮೆಹ್ರೌಲಿ ಅರಣ್ಯದಲ್ಲಿ ಎಸೆದಿದ್ದ. ಗುರುಗ್ರಾಮದ ಬಳಿಯ ಅರಣ್ಯದಲ್ಲೂ ಕೆಲವು ತುಂಡುಗಳನ್ನು ಎಸೆದಿದ್ದ.

ಪೊಲೀಸರು ಈಗಾಗಲೇ ಅರಣ್ಯ ಪ್ರದೇಶಗಳಲ್ಲಿ ಹುಡುಕಾಟ ನಡೆಸಿ, ಕೆಲವು ಎಲುಬುಗಳನ್ನು ವಶಪಡಿಸಿಕೊಂಡಿದ್ದರು. ಅದು ಶ್ರದ್ಧಾದೇ ಎಂಬುದು ಡಿಎನ್​​ಎ ಟೆಸ್ಟ್​​ನಲ್ಲಿ ಸಾಬೀತಾಗಿತ್ತು. ಅಫ್ತಾಬ್​ ಶ್ರದ್ಧಾಳ ದೇಹವನ್ನು ಯಾವ ಆಯುಧದಿಂದ ಕತ್ತರಿಸಿದ್ದಾನೆ ಎಂಬುದನ್ನು ಪತ್ತೆ ಹಚ್ಚುವ ಸಲುವಾಗಿ ಆ ಮೂಳೆಗಳನ್ನು ಇನ್ನಷ್ಟು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರ ವರದಿ ಈಗ ಹೊರಬಿದ್ದಿದೆ. ಅಫ್ತಾಬ್​ ಪೂನಾವಾಲಾ ತನ್ನ ಲಿವ್​ ಇನ್​ ಸಂಗಾತಿ ಶ್ರದ್ಧಾಳನ್ನು ಕೊಂದು, ಬಳಿಕ ಗರಗಸದಲ್ಲಿ ಆಕೆಯ ದೇಹವನ್ನು ತುಂಡರಿಸಿದ್ದಾನೆ ಎಂಬುದು ಗೊತ್ತಾಗಿದೆ.

ಅಫ್ತಾಬ್​ ಪೂನಾವಾಲಾ ಅಪಾರ್ಟ್​ಮೆಂಟ್​​ನಿಂದ ಪೊಲೀಸರು ಹಲವು ಬಗೆಯ ಮಾರಕಾಸ್ತ್ರಗಳನ್ನು ಈಗಾಗಲೇ ವಶಪಡಿಸಿಕೊಂಡಿದ್ದಾರೆ. ಆದರೆ ಅದರಲ್ಲಿ ಶ್ರದ್ಧಾಳನ್ನು ತುಂಡರಿಸಲು ಆತ ಯಾವ ಆಯುಧ ಬಳಸಿದ್ದ ಗೊತ್ತಾಗಿರಲಿಲ್ಲ. ಅಫ್ತಾಬ್​ ಮಂಪರು ಪರೀಕ್ಷೆ ವೇಳೆ, ತಾನು ಚೀನಿ ಕ್ಲೀವರ್ (ಮಾಂಸವನ್ನು ಕತ್ತರಿಸಲು ಬಳಸುವ ದೊಡ್ಡ ಚಾಕು) ಬಳಸಿದ್ದಾಗಿ ಹೇಳಿಕೊಂಡಿದ್ದಾನೆ ಎಂಬ ವರದಿ ಬಂದಿದ್ದರೂ, ಅದು ಸ್ಪಷ್ಟವಾಗಿರಲಿಲ್ಲ.

ಇದನ್ನೂ ಓದಿ: Shraddha Murder Case| ಹೌದು ನಾನೇ ಶ್ರದ್ಧಾಳ ಕೊಲೆ ಮಾಡಿದೆ; ಮಂಪರು ಪರೀಕ್ಷೆಯಲ್ಲೂ ಅದೇ ಉತ್ತರ ಕೊಟ್ಟ ಅಫ್ತಾಬ್​

Continue Reading

ದಿಲ್ಲಿ ಮರ್ಡರ್

Shraddha Walkar | ತನ್ನ ಕುಟುಂಬದ ಸದಸ್ಯರ ಭೇಟಿಗೆ ನಿರಾಕರಿಸುತ್ತಿರುವ ಶ್ರದ್ಧಾ ಕೊಲೆ ಆರೋಪಿ ಅಫ್ತಾಬ್

ಶ್ರದ್ಧಾ ವಾಳ್ಕರ್ (Shraddha Walkar) ಕೊಲೆ ಆರೋಪಿ, 28 ವರ್ಷದ ಅಫ್ತಾಬ್ ಪೂನಾವಾಲ ನವೆಂಬರ್ 26ರಿಂದ ದಿಲ್ಲಿಯ ತಿಹಾರ್ ಜೈಲಿನಲ್ಲಿದ್ದಾನೆ.

VISTARANEWS.COM


on

Aaftab used Chinese knife To Cut Shraddha Body
Koo

ನವದೆಹಲಿ: ತನ್ನ ಲಿವ್-ಇನ್ ಸಂಗಾತಿ ಶ್ರದ್ಧಾ ವಾಳ್ಕರಳನ್ನು (Shraddha Walkar) ತುಂಡು ತುಂಡಾಗಿ ಕತ್ತರಿಸಿ ಭಯಾನಕವಾಗಿ ಕೊಲೆ ಮಾಡಿದ್ದ ಆರೋಪಿ ಅಫ್ತಾಬ್ ಪೂನಾವಾಲ (Aftab Poonawala) ಈಗ ದಿಲ್ಲಿಯ ತಿಹಾರ್ ಜೈಲಿನಲ್ಲಿದ್ದಾನೆ. ಆತನನ್ನು ಭೇಟಿಯಾಗಲು ಬಂದ ತನ್ನ ಕುಟುಂಬದ ಸದಸ್ಯರನ್ನು ಭೇಟಿಯಾಗಲು ನಿರಾಕರಿಸುತ್ತಿದ್ದಾನೆಂದು ತಿಳಿದು ಬಂದಿದೆ.

28 ವರ್ಷದ ಅಫ್ತಾಬ್‌ ನವೆಂಬರ್ 26ರಿಂದ ತಿಹಾರ್ ಜೈಲಿನಲ್ಲಿದ್ದಾನೆ. ಆತ ತನ್ನನ್ನು ಯಾರು ಭೇಟಿ ಮಾಡಬೇಕೆಂಬ ಕುರಿತು ಮಾಹಿತಿಯನ್ನು ಜೈಲು ಅಧಿಕಾರಿಗಳಿಗೆ ಇನ್ನಷ್ಟೇ ನೀಡಬೇಕಿದೆ. ನಿಯಮಗಳ ಪ್ರಕಾರ, ಜೈಲಿನಲ್ಲಿರುವ ವ್ಯಕ್ತಿ ವಾರಕ್ಕೆ ಎರಡು ಸಾರಿ, ತನ್ನ ಕುಟುಂಬದವರನ್ನು ಭೇಟಿ ಮಾಡಲು ಅವಕಾಶವಿದೆ.

ಸದ್ಯ ಜೈಲಿನಲ್ಲಿ ತನ್ನ ಪಾಡಿಗೆ ತಾನು ಇರುತ್ತಿರುವ ಆರೋಪಿ ಪೂನಾವಾಲ ಈ ವಾರದ ಬಳಿಕ, ಯಾರನ್ನೋ ಭೇಟಿಯಾಗುವ ಬಗ್ಗೆ ಸಹ ಕೈದಿಗಳ ಜತೆಗೆ ಮಾತನಾಡಿಕೊಂಡಿದ್ದಾನೆಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಆತ ಇದವರೆಗೂ ಯಾರನ್ನು ಭೇಟಿ ಮಾಡಬೇಕೆಂಬ ಮಾಹಿತಿಯನ್ನು ಹಂಚಿಕೊಂಡಿಲ್ಲ. ಜತೆಗೆ, ತನ್ನ ಕುಟುಂಬದ ಸದಸ್ಯರನ್ನು ಭೇಟಿಯಾಗಲೂ ಮುಂದಾಗುತ್ತಿಲ್ಲ.

ಇದನ್ನೂ ಓದಿ | Shraddha Murder Case | ಶ್ರದ್ಧಾ ವಾಳ್ಕರ್​ ಹತ್ಯೆ ಕೇಸ್​​ ಸಿಬಿಐಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದ ದೆಹಲಿ ಹೈಕೋರ್ಟ್​

Continue Reading
Advertisement
Stray dogs attack in Shira 4 children one woman injured
ಪ್ರಮುಖ ಸುದ್ದಿ2 hours ago

Stray Dogs Attack: ಶಿರಾದಲ್ಲಿ ಬೀದಿ ನಾಯಿಗಳ ದಾಳಿ: 4 ಮಕ್ಕಳು, ಒಬ್ಬ ಮಹಿಳೆಗೆ ಗಂಭೀರ ಗಾಯ

Somnath Bharti
ದೇಶ2 hours ago

Somnath Bharti: ಮೋದಿ 3ನೇ ಸಲ ಪ್ರಧಾನಿಯಾದರೆ ತಲೆ ಬೋಳಿಸಿಕೊಳ್ಳುವೆ ಎಂದ ಆಪ್‌ ನಾಯಕ!

T 20 world cup
ಕ್ರೀಡೆ2 hours ago

T20 World Cup : ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 60 ರನ್​ ಭರ್ಜರಿ ವಿಜಯ ಸಾಧಿಸಿದ ಭಾರತ

Exit Poll
ಪ್ರಮುಖ ಸುದ್ದಿ3 hours ago

Exit Poll 2024 : ಆ್ಯಕ್ಸಿಸ್​ ಮೈ ಇಂಡಿಯಾ ಪ್ರಕಾರ ಎನ್​ಡಿಎಗೆ 401 ಸೀಟು

Poll Of Polls
ದೇಶ3 hours ago

Poll Of Polls: ಎನ್‌ಡಿಎಗೆ 350+ ಸೀಟು, ದಕ್ಷಿಣದಲ್ಲೂ ಬಿಜೆಪಿಗೆ ಸ್ವೀಟು, ಇಂಡಿಯಾ ‌ಕೂಟಕ್ಕೆ ಹಿನ್ನಡೆಯ ಏಟು!

Exit Poll 2024
ಪ್ರಮುಖ ಸುದ್ದಿ4 hours ago

Exit Poll 2024 : ಟಿಎಂಸಿಯ ಭದ್ರಕೋಟೆಗೆ ಕಮಲ ಪಕ್ಷದ ಲಗ್ಗೆ; ಮಮತಾ ಬ್ಯಾನರ್ಜಿಗೆ ಮುಖಭಂಗ?

Bangalore rain
ಪ್ರಮುಖ ಸುದ್ದಿ5 hours ago

Bangalore Rain: ರಾಜಧಾನಿಯಲ್ಲಿ ಮಳೆ ಆರ್ಭಟ; ಬೆಂಗಳೂರು-ಹೊಸೂರು ಹೆದ್ದಾರಿ ಜಲಾವೃತ, ಮನೆಗಳಿಗೆ ನುಗ್ಗಿದ ನೀರು

Dinesh Karthik
ಪ್ರಮುಖ ಸುದ್ದಿ5 hours ago

Dinesh Karthik: ಜನ್ಮದಿನದಂದೇ ಕ್ರಿಕೆಟ್‌ ಬದುಕಿಗೆ ದಿನೇಶ್‌ ಕಾರ್ತಿಕ್‌ ಭಾವುಕ ವಿದಾಯ; ಕೊಡುಗೆ ನೆನೆದ ಆರ್‌ಸಿಬಿ ಫ್ಯಾನ್ಸ್

Exit Poll
ಪ್ರಮುಖ ಸುದ್ದಿ5 hours ago

Exit Poll 2024 : ಭರ್ಜರಿ ಗೆಲುವಿನ ಮುನ್ಸೂಚನೆ ಸಿಕ್ಕಿದ ತಕ್ಷಣ ಮತದಾರರಿಗೆ ಧನ್ಯವಾದ ತಿಳಿಸಿದ ಮೋದಿ

Exit Poll 2024
ದೇಶ5 hours ago

Exit Poll 2024 : ಮತಗಟ್ಟೆ ಸಮೀಕ್ಷೆಗಳನ್ನು ನಾವು ನಂಬಲ್ಲ; ಡಿಕೆಶಿ, ಎಂಬಿ ಪಾಟೀಲ್ ಸ್ಪಷ್ಟ ನುಡಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Liquor ban
ಬೆಂಗಳೂರು9 hours ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ3 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ4 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 weeks ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

ಟ್ರೆಂಡಿಂಗ್‌