Ashika Ranganath | ಮದ್ಯದ ಬಾಟಲ್‌ನೊಂದಿಗೆ, ಮಧ್ಯದ ಬೆರಳು ತೋರಿಸಿದ ನಟಿ ಆಶಿಕಾ: ವಿಡಿಯೊ ಇಲ್ಲಿದೆ! - Vistara News

ಸಿನಿಮಾ

Ashika Ranganath | ಮದ್ಯದ ಬಾಟಲ್‌ನೊಂದಿಗೆ, ಮಧ್ಯದ ಬೆರಳು ತೋರಿಸಿದ ನಟಿ ಆಶಿಕಾ: ವಿಡಿಯೊ ಇಲ್ಲಿದೆ!

ಆಶಿಕಾ ರಂಗನಾಥ್‌ (Ashika Ranganath) ಅವರ ವಿಡಿಯೊ ಒಂದು ವೈರಲ್‌ ಆಗಿದೆ. ಮದ್ಯದ ಬಾಟಲ್‌ ಹಿಡಿದು, ತಮ್ಮ ಮಧ್ಯದ ಬೆರಳು ತೋರಿಸುವಂತಹ ದೃಶ್ಯ ವಿಡಿಯೊದಲ್ಲಿ ಇದೆ.

VISTARANEWS.COM


on

Ashika Ranganath
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ಆಶಿಕಾ ರಂಗನಾಥ್‌ (Ashika Ranganath) ಅವರ ವಿಡಿಯೊ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಚಿತ್ರೀಕರಣದಲ್ಲಿ ಮದ್ಯದ ಬಾಟಲ್‌ ಹಿಡಿದು, ತಮ್ಮ ಮಧ್ಯದ ಬೆರಳು ತೋರಿಸುವಂತಹ ದೃಶ್ಯ ವಿಡಿಯೊದಲ್ಲಿ ಇದೆ. ಇದೀಗ ನೆಟ್ಟಿಗರು ವಿಡಿಯೊ ಸತ್ಯವಾ ಅಥವಾ ಸುಳ್ಳಾ? ಎಂದು ಕಮೆಂಟ್‌ ಮಾಡುತ್ತಿದ್ದಾರೆ. ಇನ್ನೂ ಕೆಲವರು ಇದು ಸಿನಿಮಾವೊಂದರ ದೃಶ್ಯ ಎಂದು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಆಶಿಕಾ ರಂಗನಾಥ್‌, ಈ ವಿಡಿಯೊ ಮೇಲ್ನೋಟಕ್ಕೆ ಪವನ್‌ ಒಡೆಯರ್‌ ನಿರ್ದೇಶನದ ರೇಮೊ ಸಿನಿಮಾದ್ದು ಎಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಆಗುತ್ತಿವೆ. ತಮಾಷೆಯಲ್ಲಿ ನಟಿ ಈ ರೀತಿ ನಡೆದುಕೊಂಡಿದ್ದಾರೆ ಎಂತಲೂ ಹಲವರು ಹೇಳುತ್ತಿದ್ದಾರೆ. ಶೂಟಿಂಗ್‌ ಸ್ಪಾಟ್‌ನಲ್ಲಿ ಗಲಾಟೆ ಮಾಡಿಕೊಂಡು ಈ ರೀತಿ ಅಸಭ್ಯವಾಗಿ ನಡೆದುಕೊಳ್ಳುವಂತಹ ಪ್ಲ್ಯಾನ್ ಸಿನಿಮಾ ಪ್ರಮೋಷನ್‌ಗಾಗಿ ಮಾಡಿದ್ದು ಎಂದೂ ಹೇಳಲಾಗುತ್ತಿದೆ. ಈ ವಿಡಿಯೋ ಕುರಿತು ಆಶಿಕಾ ರಂಗನಾಥ್ ಅವರೇ ಸ್ಪಷ್ಟನೆ ನೀಡಬೇಕಿದೆ.

ಇದನ್ನೂ ಓದಿ | Ashika Ranganath | ನೀರು, ಕಡಲ ತೀರ ಅಂದರೆ ಆಶಿಕಾ ರಂಗನಾಥ್‌ಗೆ ಇಷ್ಟ

ಬೋಲ್ಡ್‌ ಪಾತ್ರ ನಿರ್ವಹಿಸುತ್ತಿದ್ದಾರಾ ಆಶಿಕಾ?
2016ರಲ್ಲಿ ಕ್ರೇಜಿ ಬಾಯ್‌ ಚಿತ್ರದ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ಆಶಿಕಾ ರಂಗನಾಥ್‌, ಶಿವರಾಜ್‌ ಕುಮಾರ್‌ ಅಭಿನಯದ ʻಮಾಸ್‌ ಲೀಡರ್‌ʼ ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ. ಹೆಚ್ಚಾಗಿ ಹೆಸರು ಕೊಟ್ಟಿದ್ದು ಗಣೇಶ್‌ ಅಭಿನಯದ ʻಮುಗುಳುನಗೆʼʼ ಚಿತ್ರ. ಇಲ್ಲಿಯವರೆಗೂ ಯಾವುದೇ ವಿವಾದಕ್ಕೆ ಗುರಿಯಾದವರಲ್ಲ ಆಶಿಕಾ. ಈ ವಿಡಿಯೊ ಸಿನಿಮಾದ ಒಂದು ದೃಶ್ಯವಿರಬೇಕು ಎಂದು ಹೇಳಲಾಗುತ್ತಿದೆ. ಒಂದು ವೇಳೆ ಸಿನಿಮಾದ ದೃಶ್ಯವೇ ಆಗಿದ್ದರೆ ಆಶಿಕಾ ರೇಮೊ ಸಿನಿಮಾದಲ್ಲಿ ಬೋಲ್ಡ್‌ ಪಾತ್ರ ನಿರ್ವಹಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಟಾಲಿವುಡ್‌ನಲ್ಲಿ ಮಿಂಚಲಿದ್ದಾರೆ ಆಶಿಕಾ!
ಈಗಾಗಲೇ ನಟಿ ಟಾಲಿವುಡ್‌ ನಟ ನಂದಮೂರಿ ಕಲ್ಯಾಣ್‌ರಾಮ್‌ ಅಭಿನಯದ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಗೊಂಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ತಮಿಳಿನ ನಟ ಸಿದ್ಧಾರ್ಥ್‌ ಅಭಿನಯದ ಮುಂದಿನ ಚಿತ್ರಕ್ಕಾಗಿ ನಾಯಕಿಯಾಗಿ ಆಶಿಕಾ ರಂಗನಾಥ್‌ ಆಯ್ಕೆಯಾಗಿದ್ದರು. ಈ ಸುದ್ದಿಯನ್ನು ಸ್ವತಃ ನಟಿ ಹೇಳಿಕೊಂಡಿದ್ದರು. ಈ ಚಿತ್ರದ ಚಿತ್ರೀಕರಣ ಮುಗಿಯುವ ಮುನ್ನವೇ ತೆಲುಗು ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದನ್ನು ಹೊರತುಪಡಿಸಿ ತಮಿಳು ನಟ ಅಥರ್ವ ಜತೆಗಿನ ಚಿತ್ರ, ಸಿಂಪಲ್‌ ಸುನಿ ನಿರ್ದೇಶನದ ಗತವೈಭವ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ | Ashika Ranganath | ತೆಲುಗು ನಟ ನಂದಮೂರಿ ಕಲ್ಯಾಣ್‌ರಾಮ್‌ ಚಿತ್ರಕ್ಕೆ ಆಶಿಕಾ ರಂಗನಾಥ್‌ ನಾಯಕಿ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Actor Darshan : ಶಂಖ ಊದುತ್ತ, ಜಾಗಟೆ ಬಾರಿಸುತ್ತ ದರ್ಶನ್‌ ಭೇಟಿಗೆ ಬಂದ ವಿಶೇಷ ಚೇತನ ಅಭಿಮಾನಿ!

Actor Darshan: ಭಾನುವಾರ ರಜೆ ಹಿನ್ನೆಲೆಯಲ್ಲಿ ಯಾರಿಗೂ ಭೇಟಿಯಾಗುವ ಅವಕಾಶ ಇರುವುದಿಲ್ಲ. ಹೀಗಿದ್ದರೂ ದಾಸಪ್ಪ ವೃತ್ತಿ ಮಾಡುವ ವಿಶೇಷ ಚೇತನ ಅಭಿಮಾನಿ, ಹಾಗೂ ಮಾರತ್ತಹಳ್ಳಿಯಿಂದ ಆಟೋ ಚಾಲಕ ಸುನೀಲ್ ದರ್ಶನ್‌ ನೋಡಲು ಬಂದಿದ್ದಾರೆ.

VISTARANEWS.COM


on

Actor Darshan in Parappana Agrahara Jail special fan who came to visit
Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ (Actor Darshan ) ತೂಗುದೀಪ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ದೂಡುತಿದ್ದಾರೆ. ಹಲವು ಅಭಿಮಾನಿಗಳು ದರ್ಶನ್​ರನ್ನು ಭೇಟಿಯಾಗಲು ಪ್ರತಿನಿತ್ಯ ಜೈಲಿನ ಬಳಿ ಬರುತ್ತಿದ್ದಾರೆ. ಆದರೆ ಪೊಲೀಸರು ಯಾರಿಗೂ ಅವಕಾಶ ನೀಡುತ್ತಿಲ್ಲ. ಕೇವಲ ಕುಟುಂಬ ಸದಸ್ಯರಿಗೆ ಹಾಗೂ ವಕೀಲರಿಗಷ್ಟೆ ಅವಕಾಶ ನೀಡಲಾಗಿದೆ. ಭಾನುವಾರ ರಜೆ ಹಿನ್ನೆಲೆಯಲ್ಲಿ ಯಾರಿಗೂ ಭೇಟಿಯಾಗುವ ಅವಕಾಶ ಇರುವುದಿಲ್ಲ. ಹೀಗಿದ್ದರೂ ದಾಸಪ್ಪ ವೃತ್ತಿ ಮಾಡುವ ವಿಶೇಷ ಚೇತನ ಅಭಿಮಾನಿ, ಹಾಗೂ ಮಾರತ್ತಹಳ್ಳಿಯಿಂದ ಆಟೋ ಚಾಲಕ ಸುನೀಲ್ ದರ್ಶನ್‌ ನೋಡಲು ಬಂದಿದ್ದಾರೆ.

ಇಂದು ಭಾನುವಾರ ಆದ ಕಾರಣ ದರ್ಶನ್‌ ಭೇಟಿಗೆ ಯಾರಿಗೂ ಅವಕಾಶ ಇಲ್ಲ. ಆದರೂ ನಟ ದರ್ಶನ್ ಭೇಟಿಗೆ ವಿಶೇಷ ಚೇತನ ಆಗಮಿಸಿದ್ದರು, ದಾಸಪ್ಪ ವೃತ್ತಿ ಮಾಡುವ ವಿಶೇಷ ಚೇತನ ಅಭಿಮಾನಿ, ಕಿವಿ ಕೇಳಿಸದಿದ್ದರು ಶಂಖ ಊದುತ್ತಾ, ಜಾಗಟೆ ಬಾರಿಸುತ್ತ ಜೈಲಿನ ಬಳಿ ಬಂದಿದ್ದರು. ತುರುವೆಕೆರೆಯ ಜಡಿಯೊ ಗ್ರಾಮದ ವಿಶೇಷ ಚೇತನ ಅಭಿಮಾನಿಯಾಗಿದ್ದಾರೆ. ʻʻನಟ ದರ್ಶನ್ ಒಳ್ಳೆಯ ವ್ಯಕ್ತಿ. ಅಂತಹವರನ್ನು ಜೈಲಿನಲ್ಲಿಟ್ಟರೆ ಸಿನಿ ಕಾರ್ಮಿಕರು, ನಿರ್ಮಾಪಕರಿಗೆ ತೊಂದರೆ. ಅವ್ರು ತಪ್ಪು ಮಾಡಿರಬಹುದು. ಆದರೆ ನಟ ದರ್ಶನ್ ಸಾಕಷ್ಟು ಸಮಾಜಸೇವೆ ಮಾಡಿದ್ದಾರೆ ಮಾನವೀಯತೆ ದೃಷ್ಟಿಯಿಂದ ಬಿಡುಗಡೆ ಮಾಡಬೇಕು. ದರ್ಶನ್ ಬಿಡುಗಡೆಗಾಗಿ ಗೃಹ ಮಂತ್ರಿ ಜಿ ಪರಮೇಶ್ವರ ಭೇಟಿಗೆ ಹೋಗಿದ್ದೆ. ಆದರೆ ಅವರು ಸಿಗಲಿಲ್ಲʼʼ ಎಂದು ವಿಶೇಷ ಚೇತನ ಅಭಿಮಾನಿ ಗೋವಿಂದ ರಾಜು ಹೇಳಿಕೆ ನೀಡಿದರು.

ಇದನ್ನೂ ಓದಿ: Actor Darshan: ಎಲ್ಲಾ ಹಣೆಬರಹ ಸ್ವಾಮಿ ಏನು ಮಾಡೋದು? ದರ್ಶನ್‌ ಕೇಸ್‌ ಬಗ್ಗೆ ಶಿವಣ್ಣ ಮಾತು!

ಇನ್ನು ಮಾರತ್ತಹಳ್ಳಿಯಿಂದ ಆಟೋ ಚಾಲಕ ಸುನೀಲ್ ದರ್ಶನ್ ನೋಡಲು ಆಗಮಿಸಿದ್ದರು. ತಿಂಗಳಿಗೆ ಒಮ್ಮೆ ದರ್ಶನ್ ಅಣ್ಣನ ಭೇಟಿ ಮಾಡುತ್ತಿದ್ದೆ ಆದರೆ ಈಗ ಜೈಲಿನಲ್ಲಿ ಇದ್ದಾರೆ. ಹಾಗಾಗಿ ನೋಡಲು ಬಂದೆ. ನಮ್ ಬಾಸ್ ಒಳ್ಳೆಯ ಕೆಲಸಗಳನ್ನು ಜನರಿಗೆ ಮಾಡುತ್ತಿದ್ದರು. ಈಗ ಅವರು ಜೈಲಿನಲ್ಲಿ ಕಷ್ಟ ಅನುಭವಿಸುತ್ತಿದ್ದಾರೆ. ತಂದೆ ತಾಯಿ‌ ಬಿಟ್ರೆ ದರ್ಶನ್ ನನಗೆ ದೇವರುʼʼಎಂದಿದ್ದಾರೆ.

ದರ್ಶನ್ ಭೇಟಿ ಮಾಡಬೇಕೆಂದು ಅಭಿಮಾನಿಯೊಬ್ಬ ರಂಪಾಟವಾಡಿರುವುದು ಕಂಡುಬಂದಿದೆ. ಜೈಲ್ ಚೆಕ್ ಪೋಸ್ಟ್ ಬಳಿ ರಸ್ತೆಯಲ್ಲಿ ಕುಳಿತ ಅಭಿಮಾನಿ, ದರ್ಶನ್ ನೋಡಬೇಕೆಂದು ಕಣ್ಣೀರು ಹಾಕಿದ್ದಾನೆ. ಮದ್ಯಪಾನ ಮಾಡಿ ಬಂದಿದ್ದ ವ್ಯಕ್ತಿ, ದರ್ಶನ್ ನೋಡಲೇ ಬೇಕು ಎಂದು ಪಟ್ಟು ಹಿಡಿದಿದ್ದರಿಂದ ಆತನನ್ನು ಮನವೊಲಿಸಲು ಪೊಲೀಸರು ಹೈರಾಣಾದರು.

Continue Reading

ಸ್ಯಾಂಡಲ್ ವುಡ್

Actor Darshan: ಎಲ್ಲಾ ಹಣೆಬರಹ ಸ್ವಾಮಿ ಏನು ಮಾಡೋದು? ದರ್ಶನ್‌ ಕೇಸ್‌ ಬಗ್ಗೆ ಶಿವಣ್ಣ ಮಾತು!

Actor Darshan: ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡ (ಶಿವಾನಂದ ಸರ್ಕಲ್) ಉದ್ಘಾಟನಾ ಸಮಾರಂಭವನ್ನು (Actor Darshan) ನಡೆದಿದೆ. ಈ ವೇಳೆ ನಟ ಶಿವರಾಜ್‌ಕುಮಾರ್‌ ಕೂಡ ಭಾಗಿಯಾಗಿದ್ದರು. ಈ ವೇಳೆ ದರ್ಶನ್‌ (Actor Darshan) ಕುರಿತಾಗಿ ಮಾತನಾಡಿದರು.

VISTARANEWS.COM


on

Actor Darshan case Shivaraj Kumar reaction
Koo

ಬೆಂಗಳೂರು: ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡ (ಶಿವಾನಂದ ಸರ್ಕಲ್) ಉದ್ಘಾಟನಾ ಸಮಾರಂಭವನ್ನು (Actor Darshan) ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಹೊಸ ಕಟ್ಟಡವನ್ನು ಉದ್ಘಾಟಿಸಿದರು. ಈ ವೇಳೆ ನಟ ಶಿವರಾಜ್‌ಕುಮಾರ್‌ ಕೂಡ ಭಾಗಿಯಾಗಿದ್ದರು. ಈ ವೇಳೆ ದರ್ಶನ್‌ (Actor Darshan) ಕುರಿತಾಗಿ ಮಾತನಾಡಿದರು.

ಶಿವಣ್ಣ ಮಾತನಾಡಿ ʻʻಈ ವಿಚಾರದ ಬಗ್ಗೆ ಬೇಸರ ಆಗತ್ತೆ. ಅದೆಲ್ಲ ಹಣೆಬರಹ. ಹಣೆ ಬರಹ ಅನ್ನೋದು ಒಂದು ಇರುತ್ತೆ. ಏನೇ ಮಾತನಾಡಿದರೂ ಅದು ಸರಿನಾ ಎಂದು ಯೋಚನೆ ಮಾಡಬೇಕು. ನಾವು ಬಂದರೋದು ಎದುರಿಸಲೇ ಬೇಕು. ಈಗಾಗಲೇ ತನಿಖೆ ಆಗುತ್ತಿದೆ. ಯಾಕಪ್ಪ ಹೀಗೆ ಆಯ್ತು ಅಂತ ಬೇಜಾರ ಆಗುತ್ತೆ. ಎರಡೂ ಕುಟಂಬಗಳು ಬೇಜಾರಿನ ಲ್ಲಿದೆ. ನ್ಯಾಯ ಎಲ್ಲಿದೆ ಮುಂದೆ ಗೊತ್ತಾಗತ್ತೆʼʼಎಂದರು.

ಇದನ್ನೂ ಓದಿ: Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

ಕನ್ನಡ ಚಲನಚಿತ್ರಗಳ ಬೆಳವಣಿಗೆಗೆ ಸರ್ಕಾರದಿಂದ ಸಹಾಯ ಎಂದ ಸಿದ್ದರಾಮಯ್ಯ

ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡದ ಉದ್ಘಾಟಿಸಿ ನಂತರ ಮಾಧ್ಯಮದವರೊಂದಿಗೆ ಸಿದ್ದರಾಮಯ್ಯ ಮಾತನಾಡಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಿನ್ನೆ ರಾತ್ರಿ 8.00 ಗಂಟೆಗೆ ಸಮಾಯ ಕೊಟ್ಟಿದ್ದರು. ಈ ಕಾರ್ಯಕ್ರಮಕ್ಕಾಗಿ ನಿನ್ನೆಯೇ ದೆಹಲಿಯಿಂದ ಹೊರಟು ಉದ್ಘಾಟನೆ ತಪ್ಪಿಸಬಾರದೆಂದು ಆಗಮಿಸಿದ್ದೇನೆ ಎಂದರು.

ʻʻ1972 ರಿಂದ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದವರು ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸಿ ಬಹಳ ಕಷ್ಟದ ದಿನಗಳಿದ್ದರೂ ಕೂಡ ಚಲನಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ನಿರ್ಮಾಪಕರಿಗೆ ಅಭಿನಂದಿಸುತ್ತೇನೆʼʼ ಎಂದು ತಿಳಿಸಿದ ಮುಖ್ಯಮಂತ್ರಿಗಳು ಕಟ್ಟಡವನ್ನು ಅತ್ಯಂತ ಸಂತೋಷದಿಂದ ಉದ್ಘಾಟಿಸಿದ್ದೇನೆ ಎಂದರು.

ʻʻಆರ್ಥಿಕ ಸಹಾಯವನ್ನು ಸಂಘ ಕೇಳಿಯೇ ಇಲ್ಲ. ಸರ್ಕಾರದಿಂದ ಆರ್ಥಿಕ ಸಹಾಯ ಮಾಡಿಯೇ ಮಾಡುತ್ತದೆ
ಮೈಸೂರಿನಲ್ಲಿ ಚಿತ್ರ ನಗರಿ ನಿರ್ಮಾಣವನ್ನು ಪಿ.ಪಿ.ಪಿ ಮಾದರಿಯಲ್ಲಿ ಕೈಗೊಳ್ಳಲಿದ್ದು, ನೂರು ಎಕರೆಗೂ ಹೆಚ್ಚು ಜಮೀನು ಒದಗಿಸಿದೆ . ಚಿತ್ರನಗರಿ ಡಾ: ರಾಜ್ ಕುಮಾರ್ ಅವರ ಕನಸಾಗಿತ್ತು ಅದನ್ನು ನನಸಾಗಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ .ಕನ್ನಡದಲ್ಲಿ ಸರ್ಕಾರದ ವತಿಯಿಂದ ಓಟಿಟಿ ವೇದಿಕೆ ಸೃಜಿಸಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿ ಸರ್ಕಾರ ಇದನ್ನು ಪರಿಶೀಲಿಸಿದ ಕ್ರಮ ಕೈಗೊಳ್ಳಲಿದೆ. ಕನ್ನಡ ಚಿತ್ರಗಳಿಗೆ ಸರ್ಕಾರ ಎಲ್ಲಾ ರೀತಿಯ ಸಹಾಯ ಮಾಡಲಿದೆʼʼ ಎಂದರು.

Continue Reading

ಕಾಲಿವುಡ್

Jayam Ravi: ರಜನಿಕಾಂತ್‌ ಮಗಳ ಜತೆ ಜಯಂ ರವಿ ಮದುವೆ?

Jayam Ravi: ಜಯಂ ರವಿ ಅವರು ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್ – 1 ಮತ್ತು 2 ರಲ್ಲಿ ಚೋಳ ಚಕ್ರವರ್ತಿ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ನಟನೆಗೆ ಮೊದಲು, ಜಯಂ ಅವರು ಕಮಲ್ ಹಾಸನ್ ನಟಿಸಿದ ಆಳವಂದನ್ (2001) ನಲ್ಲಿ ಸುರೇಶ್ ಕೃಷ್ಣ ಅವರಿಗೆ ಸಹಾಯಕ ನಿರ್ದೇಶಕರಾಗಿದ್ದರು.

VISTARANEWS.COM


on

Jayam Ravi married to superstar rajinikanth daughter
Koo

ತಮಿಳು ಸ್ಟಾರ್‌ ಜಯಂ ರವಿ ಮತ್ತು ಪತ್ನಿ ಆರತಿ ದಂಪತಿ ವಿಚ್ಛೇದನ ಪಡೆಯಲಿದ್ದಾರೆ ಎಂದು ವರದಿಯಾಗಿದೆ (Jayam Ravi’s wife Aarti Ravi). ಇತ್ತಿಚೆಗೆ ರವಿ ಹಾಗೂ ಆರತಿ ಅವರು ಫ್ಯಾಮಿಲಿ ಫೋಟೊಗಳನ್ನು ಇನ್‌ಸ್ಟಾದಲ್ಲಿ ಡಿಲೀಟ್‌ ಮಾಡಿದ್ದರು. ಹೀಗಾಗಿ ಜೋಡಿ ಬೇರ್ಪಟ್ಟಿದೆ ಎಂದು ವರದಿಯಾಗಿದೆ. ಆರತಿಯನ್ನು ಮದುವೆಯಾಗದೇ ಇದ್ದಿದ್ದರೆ ಜಯಂ ರವಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮಗಳನ್ನು ಮದುವೆಯಾಗುತ್ತಿದ್ದರು ಎಂದು ಖ್ಯಾತ ಪತ್ರಕರ್ತೆ ಸಬಿತಾ ಜೋಸೆಫ್ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.

ಆರತಿ ರವಿ ಅವರು ಜಯಂ ರವಿ ಅವರೊಂದಿಗಿನ ಎಲ್ಲಾ ಫೋಟೋಗಳನ್ನು ಡಿಲಿಟ್‌ ಮಾಡಿದ್ದಾರೆ. ಜಯಂ ರವಿ ಅವರು 2009ರಲ್ಲಿ ನಿರ್ಮಾಪಕಿ ಸುಜಾತಾ ವಿಜಯಕುಮಾರ್ ಅವರ ಮಗಳು ಆರತಿಯನ್ನು ವಿವಾಹವಾದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ . ಮಗ ಆರವ್‌ ಇತ್ತೇಚೆಗೆ ಟಿಕ್‌ ಟಿಕ್‌ ಸಿನಿಮಾದಲ್ಲಿ ನಟಿಸಿದ್ದ. ಇಬ್ಬರೂ ಮುದ್ದಾದ ಜೋಡಿ ಎಂದೇ ಗುರುತಿಸಿಕೊಂಡಿತ್ತು. ಇದೀಗ ಇಬ್ಬರೂ ಒಂದು ವರ್ಷಗಳಿಂದ ದೂರ ಇದ್ದಾರೆ ಎನ್ನಲಾಗಿದೆ.

ಆರತಿಯನ್ನು ಮದುವೆಯಾಗದೇ ಇದ್ದಿದ್ದರೆ ಜಯಂ ರವಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮಗಳನ್ನು ಮದುವೆಯಾಗುತ್ತಿದ್ದರು ಎಂದು ಖ್ಯಾತ ಪತ್ರಕರ್ತೆ ಸಬಿತಾ ಜೋಸೆಫ್ ಹೇಳಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಜಯಂ ರವಿ ಹಾಗೂ ಆರತಿ ಪ್ರೀತಿಗೆ ನಟಿ ಖುಷ್ಪು ಕಾರಣ. ಆ ಸಮಯದಲ್ಲಿ ರಜನಿಕಾಂತ್ ಅವರ ಮಗಳು ಜಯಂ ರವಿ ಅವರನ್ನು ಮದುವೆಯಾಗಲು ಪ್ರಯತ್ನಿಸಿದ್ದರು ಎಂದು ಹೇಳಿದ್ದಾರೆ. ಜಯಂ ರವಿ ಆರತಿಯನ್ನು ಪ್ರೀತಿಸುತ್ತಿದ್ದ ಕಾರಣ, ಆರತಿಯ ತಾಯಿ ಇಬ್ಬರಿಗೂ ಮದುವೆ ಮಾಡುವ ಆತುರದಲ್ಲಿದ್ದರು. ತಕ್ಷಣ ಮದುವೆ ಮಾಡಿಸಿಬಿಟ್ಟರು ಎಂದು ವರದಿಯಾಗಿದೆ.

ಇದನ್ನೂ ಓದಿ: Jayam Ravi: ಜಯಂ ರವಿ ದಾಂಪತ್ಯದಲ್ಲಿ ಬಿರುಕು? ಡಿವೋರ್ಸ್‌ ಹಾದಿಯಲ್ಲಿ ಮತ್ತೊಂದು ಸ್ಟಾರ್‌ ಜೋಡಿ!

ಜಯಂ ರವಿ ಅವರು ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್ – 1 ಮತ್ತು 2 ರಲ್ಲಿ ಚೋಳ ಚಕ್ರವರ್ತಿ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ನಟನೆಗೆ ಮೊದಲು, ಜಯಂ ಅವರು ಕಮಲ್ ಹಾಸನ್ ನಟಿಸಿದ ಆಳವಂದನ್ (2001) ನಲ್ಲಿ ಸುರೇಶ್ ಕೃಷ್ಣ ಅವರಿಗೆ ಸಹಾಯಕ ನಿರ್ದೇಶಕರಾಗಿದ್ದರು.

ಇದಕ್ಕೂ ಮೊದಲು ಜಯಂ ರವಿ ಅವರು ʼಜೀನಿʼ (Genie) ಚಿತ್ರದಲ್ಲಿ ಮಿಂಚಿದ್ದರು. ಅರ್ಜುನನ್ ಜೂನಿಯರ್ ( ʼಜೀನಿʼ ಫ್ಯಾಂಟಸಿ ಸಿನಿಮಾ. ಇದೇ ಮೊದಲ ಬಾರಿಗೆ ಜಯಂ ರವಿ ಫ್ಯಾಂಟಸಿ ಕಥೆಯಲ್ಲಿ ಬಣ್ಣ ಹಚ್ಚಿದ್ದರು. ಹೀಗಾಗಿ ಫಸ್ಟ್ ಲುಕ್ ಕೂಡ ವಿಭಿನ್ನವಾಗಿತ್ತು. ಸರಪಣಿಯಲ್ಲಿ ಬಂಧಿಯಾಗಿರುವ ಜಯಂ ರವಿ, ಜುಟ್ಟು ಕಟ್ಟಿ ಸ್ಟೈಲೀಶ್ ಲುಕ್‌ನಲ್ಲಿ ಮಿಂಚಿದ್ದರು.

ಇದೀಗ ಸೌತ್‌ನಲ್ಲಿ ಸಮಂತಾ ನಾಗಚೈತನ್ಯ ಜೋಡಿ ಬೇರೆಯಾಗಿಯೇ ಅಭಿಮಾನಿಗಳು ಬೇಸರದಲ್ಲಿದ್ದರು. ಇದಾದ ಬಳಿಕ ಧನುಷ್‌ ಹಾಗೂ ಐಶ್ವರ್ಯಾ, ಸಂಗೀತ ನಿರ್ದೇಶಕ ಜೀವಿ ಪ್ರಕಾಶ್‌ ಕೂಡ ಬೇರೆಯಾದರು. ಸ್ಯಾಂಡಲ್‌ವುಡ್‌ನಲ್ಲಿ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಬೇರ್ಪಟ್ಟರು.

Continue Reading

ಕ್ರೀಡೆ

Rohit Sharma: ವಿಶ್ವಕಪ್​ ಗೆದ್ದ ನಾಯಕ ರೋಹಿತ್​ಗೆ ಆಶೀರ್ವಾದ ಮಾಡಿದ ಕಾಂತಾರದ ‘ಪಂಜುರ್ಲಿ’ ದೈವ!

Rohit Sharma: ಕಾಂತಾರ ಸಿನಿಮಾದಲ್ಲಿ ಪಂಜುರ್ಲಿ ದೈವಾವೇಷದ ದೈವನರ್ತನ ಪಾತ್ರವು ಭಾರಿ ಗಮನ ಸೆಳೆದಿತ್ತು. ಇದೇ ದೈವ ನರ್ತಕನು, 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆಲ್ಲಿಸಿಕೊಟ್ಟ ಸಂಭ್ರಮದಲ್ಲಿ ಮೈದಾನದಲ್ಲೇ ಮಲಗಿದ ನಾಯಕ ರೋಹಿತ್​ ಶರ್ಮ ಅವರಿಗೆ ಆಶೀರ್ವಾದ ಮಾಡುವ, ಸ್ಫೂರ್ತಿ ತುಂಬಿ ಬಡಿದೆಬ್ಬಿಸುವ ರೀತಿಯ ಫೋಟೊಗಳನ್ನು ನೆಟ್ಟಿಗರು ಹಂಚಿಕೊಂಡಿದ್ದಾರೆ

VISTARANEWS.COM


on

Koo

ಬಾರ್ಬಡೋಸ್​: ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಕಳೆದ 13 ವರ್ಷಗಳಿಂದ ಶಬರಿ ರಾಮನಿಗೆ ಕಾದಂತೆ ಕಾಯುತ್ತಿದ್ದ ಐಸಿಸಿ ಟ್ರೋಫಿ ಕನಸು ಕೊನೆಗೂ ನನಸಾಗಿದೆ. ಶನಿವಾರ ಬ್ರಿಜ್‌ಟೌನ್‌ನ ಕೆನ್ಸಿಂಗ್ಟನ್‌ ಓವಲ್​ನಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಫೈನಲ್(T20 World Cup 2024)​ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು(South Africa vs India) ಮಣಿಸಿ 17 ವರ್ಷಗಳ ಬಳಿಕ ಮತ್ತೊಂದು ಟಿ20 ವಿಶ್ವಕಪ್​ ಗೆದ್ದ ಸಾಧನೆ ಮಾಡಿತು. ಈ ಸಾಧನೆಗೆ ತಂಡದ ನಾಯಕ ರೋಹಿತ್​ ಶರ್ಮಗೆ(Rohit Sharma) ಕನ್ನಡದ ಕಾಂತಾರ(kantara) ಸಿನಿಮಾದ ಪಂಜುರ್ಲಿ ದೈವ(kantara panjurli) ಆಶೀರ್ವಾದ ಮಾಡಿದೆ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ.

ಹೌದು, ಕಾಂತಾರ ಸಿನಿಮಾದಲ್ಲಿ ಪಂಜುರ್ಲಿ ದೈವಾವೇಷದ ದೈವನರ್ತನ ಪಾತ್ರವು ಭಾರಿ ಗಮನ ಸೆಳೆದಿತ್ತು. ಇದೇ ದೈವ ನರ್ತಕನು, 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆಲ್ಲಿಸಿಕೊಟ್ಟ ಸಂಭ್ರಮದಲ್ಲಿ ಮೈದಾನದಲ್ಲೇ ಮಲಗಿದ ನಾಯಕ ರೋಹಿತ್​ ಶರ್ಮ ಅವರಿಗೆ ಆಶೀರ್ವಾದ ಮಾಡುವ, ಸ್ಫೂರ್ತಿ ತುಂಬಿ ಬಡಿದೆಬ್ಬಿಸುವ ರೀತಿಯ ಫೋಟೊಗಳನ್ನು ನೆಟ್ಟಿಗರು ಹಂಚಿಕೊಂಡಿದ್ದಾರೆ. “ಕಾಂತಾರದ ಪಂಜುರ್ಲಿ ದೈವವು ಭಾರತ ತಂಡದ ಗೆಲುವಿಗೆ ಮತ್ತು ರೋಹಿತ್​ ಅವರ ಕನಸಿನ ವಿಶ್ವಕಪ್​ ಗೆಲ್ಲುವಲ್ಲಿ ನೆರವಾಯಿತು” ಎಂದೆಲ್ಲ ನೆಟ್ಟಿಗರು ಬರೆದುಕೊಂಡಿದ್ದಾರೆ. ಈ ಫೋಟೊಗಳು ಹಾಗೂ ಪೋಸ್ಟ್‌ಗಳು ಭಾರಿ ವೈರಲ್‌ ಆಗಿವೆ.

ವಿದಾಯ ಹೇಳಿದ ರೋಹಿತ್​


ನಾಯಕನಾಗಿ ಮತ್ತು ಆಟಗಾರನಾಗಿ 2 ಟಿ20 ವಿಶ್ವಕಪ್​ ಗೆದ್ದ ರೋಹಿತ್​ ಗೆಲುವಿನ ಬಳಿಕ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ಈ ಮೂಲಕ ಸ್ಮರಣೀಯ ವಿದಾಯ ಪಡೆದರು. ಪಂದ್ಯದ ಬಳಿಕ ಮಾತನಾಡಿದ ರೋಹಿತ್​, “ಇದು ನನ್ನ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯ. ಚುಟುಕು ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಲು ಇದಕ್ಕಿಂತ ಸಕಾಲ ಇನ್ನೊಂದಿಲ್ಲ. ನಾನು ಮೊದಲು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದೇ ಟಿ20 ಆಡುವ ಮೂಲಕ. ನಾಕಯನಾಗಿ ನಾನು ಕಪ್ ಗೆಲ್ಲಬೇಕೆಂದು ಬಯಸಿದ್ದೆ. ಇದು ಸಾಕಾರಗೊಂಡಿದೆ” ಎಂದು ಹೇಳುವ ಮೂಲಕ ವಿದಾಯ ಹೇಳಿದರು. ಟಿ20ಯಲ್ಲಿ 159 ಪಂದ್ಯಗಳನ್ನು ಆಡಿರುವ ರೋಹಿತ್‌, 4231 ರನ್‌ ಗಳಿಸಿದ್ದು, 5 ಶತಕ ಹಾಗೂ 37 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಈ ಗೆಲುವಿನ ಸವಿ ನೆನಪಿಗಾಗಿ ರೋಹಿತ್​ ಕೆನ್ಸಿಂಗ್ಟನ್‌ ಓವಲ್​ ಪಿಚ್​ನಿಂದ ಒಂದು ಚಿಟಿಕೆ ಮಣ್ಣು ಬಾಯಿಗೆ ಹಾಕಿದ್ದಾರೆ. ಗೆಲುವಿಗೆ ನೆರವಾದ ಈ ಮೈದಾನದ ಋಣವನ್ನು ತೀರಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ 8 ವಿಕೆಟ್​ಗೆ 169 ರನ್​ ಗಳಿಸಲಷ್ಟೇ ಶಕ್ತವಾಯಿತು.

Continue Reading
Advertisement
Road Accident
ಬೆಳಗಾವಿ2 mins ago

Road Accident : ಬೈಕ್‌ಗೆ ಟಾಟಾ ಏಸ್‌ ಡಿಕ್ಕಿ; ಮಗನ ಕಣ್ಣೆದುರೇ ತಾಯಿ ಸಾವು

Pradeep Eshwar
ಕರ್ನಾಟಕ10 mins ago

Pradeep Eshwar: ವಿಪಕ್ಷ ನಾಯಕರು ಸಿದ್ದರಾಮಯ್ಯ ಬಳಿ ಕೋಚಿಂಗ್‌ ಪಡೆಯಲಿ: ಅಶೋಕ್‌ಗೆ ಪ್ರದೀಪ್‌ ಈಶ್ವರ್‌ ಸಲಹೆ

Actor Darshan in Parappana Agrahara Jail special fan who came to visit
ಸ್ಯಾಂಡಲ್ ವುಡ್25 mins ago

Actor Darshan : ಶಂಖ ಊದುತ್ತ, ಜಾಗಟೆ ಬಾರಿಸುತ್ತ ದರ್ಶನ್‌ ಭೇಟಿಗೆ ಬಂದ ವಿಶೇಷ ಚೇತನ ಅಭಿಮಾನಿ!

Hardik Pandya
ಪ್ರಮುಖ ಸುದ್ದಿ27 mins ago

Hardik Pandya : ಭಾರತಕ್ಕೆ ಆಡುವುದೇ ಕನಸು; ಹಾರ್ದಿಕ್ ಪಾಂಡ್ಯನ ಹಳೆ ವಿಡಿಯೊ ವೈರಲ್​

Physical Assault
ಕ್ರೈಂ33 mins ago

Physical Assualt: 2 ವರ್ಷದ ಮಗುವನ್ನೇ ಲೈಂಗಿಕ ಕ್ರಿಯೆಗಾಗಿ ಮಾರಲು ಯತ್ನಿಸಿದ್ದ ದುಷ್ಟ ದಂಪತಿ ಬಂಧನ

bike wheeling
ಬೆಂಗಳೂರು ಗ್ರಾಮಾಂತರ43 mins ago

Bike Wheeling: ಹೈವೇಯಲ್ಲಿ ಭಯಾನಕ ವ್ಹೀಲಿಂಗ್‌ ಜತೆಗೆ ಯುವತಿಗೆ ಕೀಟಲೆ ಮಾಡಿದ ಪುಂಡರು!

Ex CIA Officer
ವಿದೇಶ45 mins ago

Ex CIA Officer: ಪಾಕಿಸ್ತಾನದಲ್ಲಿ ಉಗ್ರರನ್ನು ತಾಲಿಬಾನ್ ಮೂಲಕ ಕೊಲ್ಲುತ್ತಿರುವ ಭಾರತ; ಅಮೆರಿಕ ಗುಪ್ತಚರ ಇಲಾಖೆ ಮಾಜಿ ಅಧಿಕಾರಿ ಹೇಳಿಕೆ

Suryakumar Yadav
ಕ್ರೀಡೆ50 mins ago

Suryakumar Yadav Catch: ಬೌಂಡರಿ ಲೈನ್ ಟಚ್ ಮಾಡಿದ್ರಾ ಸೂರ್ಯಕುಮಾರ್?; ಹೊಸ ವಿಡಿಯೊ ವೈರಲ್​

Actor Darshan case Shivaraj Kumar reaction
ಸ್ಯಾಂಡಲ್ ವುಡ್57 mins ago

Actor Darshan: ಎಲ್ಲಾ ಹಣೆಬರಹ ಸ್ವಾಮಿ ಏನು ಮಾಡೋದು? ದರ್ಶನ್‌ ಕೇಸ್‌ ಬಗ್ಗೆ ಶಿವಣ್ಣ ಮಾತು!

Rohit Sharma
ಕ್ರೀಡೆ2 hours ago

Rohit Sharma: ಲಿಯೋನೆಲ್ ಮೆಸ್ಸಿ ಶೈಲಿಯಲ್ಲಿ ವಿಶ್ವಕಪ್​ ಎತ್ತಿ ಹಿಡಿದ ರೋಹಿತ್​; ವಿಡಿಯೊ ವೈರಲ್​

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಬೆಂಗಳೂರು3 hours ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ23 hours ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ1 day ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ2 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು3 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ3 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ6 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

ಟ್ರೆಂಡಿಂಗ್‌