ರಾಜ ಮಾರ್ಗ ಅಂಕಣ | ಹಿಡಿ ಅಕ್ಕಿ ಸಂಗ್ರಹಿಸಿ ಕೆನರಾ ಬ್ಯಾಂಕ್‌ ಕಟ್ಟಿದ ಅಮ್ಮೆಂಬಳ ಸುಬ್ಬರಾವ್‌ ಪೈ - Vistara News

ಅಂಕಣ

ರಾಜ ಮಾರ್ಗ ಅಂಕಣ | ಹಿಡಿ ಅಕ್ಕಿ ಸಂಗ್ರಹಿಸಿ ಕೆನರಾ ಬ್ಯಾಂಕ್‌ ಕಟ್ಟಿದ ಅಮ್ಮೆಂಬಳ ಸುಬ್ಬರಾವ್‌ ಪೈ

ರಾಜ ಮಾರ್ಗ ಅಂಕಣ | ಅಮ್ಮೆಂಬಳ ಸುಬ್ಬರಾವ್‌ ಪೈ ಒಬ್ಬ ಮಹಾನ್‌ ವಿಷನರಿ. ಇದು ಅವರು ಶತಮಾನಗಳ ಹಿಂದೆ ಕಟ್ಟಿದ ಬ್ಯಾಂಕ್‌ ಮತ್ತು ಶಾಲೆಗಳಿಂದಲೇ ಪ್ರೂವ್‌ ಆಗಿದೆ.

VISTARANEWS.COM


on

ಅಮ್ಮೆಂಬಳ ಸುಬ್ಬ ರಾವ್‌ ಪೈ ಕೆನರಾ ಬ್ಯಾಂಕ್‌ ಫೌಂಡರ್ಸ್‌ ಬ್ರಾಂಚ್
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
RAJAMARGA

ದಿ. ಅಮ್ಮೆಂಬಳ ಸುಬ್ಬರಾವ್ ಪೈ ಅವರು ಭಾರತದ ಬ್ಯಾಂಕಿಂಗ್ ವ್ಯವಸ್ಥೆಗೆ ಭಾರಿ ಪ್ರೇರಣೆಯನ್ನು ನೀಡಿದ ಕೆನರಾ ಬ್ಯಾಂಕನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದವರು. ಅದೇ ರೀತಿ ಶಿಕ್ಷಣ ಕ್ಷೇತ್ರದಲ್ಲಿ ಇಂದು ಭಾರಿ ಹೆಸರನ್ನು ಪಡೆದಿರುವ ಮಂಗಳೂರಿನ ಕೆನರಾ ವಿದ್ಯಾಸಂಸ್ಥೆಗಳನ್ನು ಸಮಾಜಕ್ಕೆ ಸಮರ್ಪಣೆ ಮಾಡಿದವರು. ಅಮ್ಮೆಂಬಳ ಸುಬ್ಬರಾವ್ ಪೈ ಅವರು 1852ರ ಇಸವಿ ನವೆಂಬರ್ 19ರಂದು ಮಂಗಳೂರಿನ ಹತ್ತಿರ ಇರುವ ಮೂಲ್ಕಿಯಲ್ಲಿ ಜನ್ಮ ಪಡೆದವರು. ಅವರ ತಂದೆ ಉಪೇಂದ್ರ ಪೈ ಅವರು ಮುನ್ಸಿಫರ ಕೋರ್ಟ್‌ನಲ್ಲಿ ಜನಪ್ರಿಯ ವಕೀಲರಾಗಿದ್ದರು.

ಮಂಗಳೂರಿನ ಕನ್ನಡ ಶಾಲೆಯಲ್ಲಿ ಓದಿ ಎಫ್.ಎ ಪರೀಕ್ಷೆ ಮುಗಿಸಿದ ನಂತರ ಸುಬ್ಬರಾವ್ ಪೈ ಅವರು ಮದ್ರಾಸಿಗೆ ತೆರಳಿ ಪದವಿ ಮತ್ತು ಕಾನೂನು ಪದವಿಗಳನ್ನು ಪಡೆದರು. ಅಲ್ಲಿ ಅವರಿಗೆ ದೊರೆತ ಜಸ್ಟೀಸ್ ಹಾಲೋವೇ ಎಂಬವರ ಪ್ರೇರಣೆಯು ಜೀವನದ ಮೇಲೆ ಮಹತ್ವದ ಪರಿಣಾಮ ಬೀರಿತು.

1876ರಲ್ಲಿ ತಮ್ಮ ತಂದೆಯವರ ನಿಧನದ ಕಾರಣದಿಂದ ಮಂಗಳೂರಿಗೆ ಹಿಂದಿರುಗಿದ ಸುಬ್ಬರಾವ್ ಪೈಯವರು ಉತ್ತಮವಾಗಿ ವಕೀಲಿ ವೃತ್ತಿ ನಡೆಸುತ್ತಿದ್ದರು. ತಮಗೆ ದುಡ್ಡು ಬಾರದಿದ್ದರೂ ಚಿಂತೆಯಿಲ್ಲ ಎಂಬ ಧೋರಣೆ ಅವರದ್ದು. ಅದಕ್ಕಾಗಿ ಆದಷ್ಟೂ ಕೋರ್ಟಿನ ಹೊರಗೇ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಅವರ ಪ್ರಯತ್ನ ಜಾರಿಯಲ್ಲಿ ಇತ್ತು.

1891ರಲ್ಲಿ ಅವರ ಕೆಲವು ಶಿಕ್ಷಕ ಸ್ನೇಹಿತರು ಮಂಗಳೂರಿನಲ್ಲಿ ಶಾಲೆಗಳ ಕೊರತೆಯನ್ನು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಕೆನರಾ ವಿದ್ಯಾಸಂಸ್ಥೆಯನ್ನು ಅವರು ಪ್ರಾರಂಭಿಸಿದರು. ಅದಾದ ನಂತರದಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಆಗುವಂತೆ 1894ರಲ್ಲಿ ಮಂಗಳೂರಿನಲ್ಲಿ ಕೆನರಾ ಹೆಣ್ಣುಮಕ್ಕಳ ಹೈಸ್ಕೂಲನ್ನು ಕೂಡ ಅವರು ತೆರೆದರು. ಅಂದಿನ ದಿನಗಳಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಬಗೆಗೆ ಸಮಾಜದಲ್ಲಿ ಪ್ರೋತ್ಸಾಹದ ವಾತಾವರಣವು ಇರಲಿಲ್ಲ. ಆದ್ದರಿಂದ ಆ ಕಾಲಕ್ಕೆ ಕೆನರಾ ವಿದ್ಯಾಸಂಸ್ಥೆಯ ಸ್ಥಾಪನೆಯು ಕ್ರಾಂತಿಕಾರಕ ಹೆಜ್ಜೆಯೇ ಆಗಿತ್ತು.

ಮುಂದೆ ಕೆನರಾ ವಿದ್ಯಾಸಂಸ್ಥೆಗಳು ಭಾರೀ ದೊಡ್ಡ ಹೆಮ್ಮರವಾಗಿ ಬೆಳೆದು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡುತ್ತಾ ಮುಂದೆ ಸಾಗಿದವು. ಹೆಣ್ಣುಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಅಂದಿನ ದಿನಗಳಲ್ಲಿ ನಿರುತ್ಸಾಹದ ವಾತಾವರಣವನ್ನು ಕಂಡಾಗ ಅಮ್ಮೆಂಬಳ ಸುಬ್ಬರಾವ್ ಪೈ ಅವರಿಗೆ ಕಂಡ ಪರಿಹಾರವು ಉಳಿತಾಯ ಆಗಿತ್ತು. ಹೆಣ್ಣು ಮಕ್ಕಳಿಗೂ ಓದು ಬರಹ ಬೇಕು ಎಂದು ಆಸೆ ಪಡುವ ತಾಯಿಯರು ಪ್ರತಿ ದಿನ ‘ಹಿಡಿ ಅಕ್ಕಿ ಉಳಿಸಿ’ ಎಂಬ ಅಭಿಯಾನದ ಮೂಲಕ ಅಮ್ಮೆಂಬಳ ಪೈಯವರು ಜನರಲ್ಲಿ ಜಾಗೃತಿಯನ್ನು ಮೂಡಿಸಿದರು. ಮುಂದೆ ಇದೇ ಉಳಿತಾಯದ ಚಿಂತನೆಯು ಯಶಸ್ವೀ ಆಗಿ ಅವರಿಂದ ಜನ್ಮತಾಳಿದ್ದು ‘ಹಿಂದೂ ಪರ್ಮನೆಂಟ್ ಫಂಡ್ʼ! ಇದೇ ಮುಂದೆ ಕೆನರಾ ಬ್ಯಾಂಕ್ ಎನಿಸಿತು.

‘ಉತ್ತಮ ಬ್ಯಾಂಕ್ ಎಂಬುದು ಸಮಾಜದ ಆರ್ಥಿಕ ಶಕ್ತಿ ಕೇಂದ್ರ ಮಾತ್ರವಲ್ಲ, ಅದು ಸಾಮಾನ್ಯ ಜನರ ಆರ್ಥಿಕ ಸ್ಥಿತಿಗತಿಗಳನ್ನು ಉತ್ತಮಪಡಿಸುವ ಜವಾಬ್ಧಾರಿಯನ್ನು ತನ್ನ ಮೇಲಿರಿಸಿಕೊಂಡಿದೆ’ ಎಂಬುದು ಅಮ್ಮೆಂಬಳ ಸುಬ್ಬರಾವ್ ಪೈ ಅವರು ಬಲವಾಗಿ ನಂಬಿದ ಧ್ಯೇಯ ಆಗಿತ್ತು. ಲಾಭದ ಗಳಿಕೆಗಿಂತ ಜನ ಸಾಮಾನ್ಯರ ಆರ್ಥಿಕ ಸಬಲೀಕರಣ ಅವರ ಉದ್ದೇಶವಾಗಿತ್ತು.

ಕೆನರಾ ಬ್ಯಾಂಕ್ ಸ್ಥಾಪನೆಯು ಆಗಿನ ಕಾಲದಲ್ಲಿ ಭಾರೀ ಸಂಚಲನ ಮೂಡಿಸಿದ್ದು ಹೇಗೆ? ಅದು ಶತಮಾನದ ಆರಂಭದ ದಶಕ. ಭಾರತದಲ್ಲಿನ್ನೂ ಬ್ರಿಟನ್‌ ರಾಣಿಯ ಆಡಳಿತ. ಮಂಗಳೂರಿನಲ್ಲಿ ಆಗ ಇದ್ದದ್ದು ಬ್ರಿಟಿಷರಿಗೆ ಸೇರಿದ ಮದ್ರಾಸ್‌ ಬ್ಯಾಂಕಿನ ಶಾಖೆಯೊಂದೇ ಆಗಿತ್ತು. ಸಂಪೂರ್ಣ ಬ್ರಿಟಿಷ್‌ ಅಧಿಕಾರಿಗಳೇ ತುಂಬಿದ್ದ ಈ ಬ್ಯಾಂಕ್‌ನಲ್ಲಿ ಭಾರತೀಯರು ಕಾರಕೂನರ ಮತ್ತು ಜವಾನನ ಕೆಲಸಕ್ಕೆ ಮಾತ್ರ ನೇಮಕ ಆಗುತ್ತಿದ್ದರು. ಆ ಬ್ಯಾಂಕ್‌ ಕೇವಲ ಶ್ರೀಮಂತರತ್ತ ಮಾತ್ರ ಮುಖವನ್ನು ಮಾಡಿತ್ತು. ಅದು ವಿಧಿಸುತ್ತಿದ್ದ ಬಡ್ಡಿ ಮಾತ್ರ ವಿಪರೀತ ಪ್ರಮಾಣದ್ದಾಗಿತ್ತು. ಬಡವರು ಬ್ಯಾಂಕಿನ ಒಳಗೆ ಬರಲು ಸಾಧ್ಯವೇ ಇರಲಿಲ್ಲ!

ಜನ ಸಾಮಾನ್ಯರು ತಮ್ಮ ಕಠಿಣವಾದ ದುಡಿಮೆಯ ಹಣವನ್ನು ಸುರಕ್ಷಿತವಾಗಿಡಲು ಪಡುತ್ತಿದ್ದ ಕಷ್ಟಗಳು, ಸಂಕಷ್ಟದ ವೇಳೆ ಸಾಲಕ್ಕಾಗಿ ಅಲೆದಾಡುತ್ತಿದ್ದ ಕಷ್ಟವನ್ನು ನೋಡಿ ಸುಬ್ಬರಾವ್ ಪೈ ಅವರು ಭಾರೀ ಚಿಂತನೆಗೆ ತೊಡಗಿದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಣದಿಂದಲೇ ನಿಧಿ ಸ್ಥಾಪಿಸಿ, ಉಳಿತಾಯ ಮತ್ತು ಸಾಲವನ್ನು ನೀಡುವುದು ಅವರ ಉದೇಶ ಆಗಿತ್ತು. ವಿಶೇಷವಾಗಿ ಶಿಕ್ಷಣದ ಸಾಲ ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಕೆನರಾ ಬ್ಯಾಂಕಿನ ಆದ್ಯತೆ ಆಗುವಂತೆ ಅವರು ಮಾಡಿದರು.

ಅದರಲ್ಲಿಯೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ‘ಆದ್ಯತೆಯ ಸಾಲ’ ನೀಡಿದ ಮೊದಲ ಬ್ಯಾಂಕು ಎಂಬ ಕೀರ್ತಿಯು ಕೂಡ ಕೆನರಾ ಬ್ಯಾಂಕಿಗೆ ದೊರೆಯಿತು. ಇದೆಲ್ಲವೂ ಅಮ್ಮೆಂಬಳ ಸುಬ್ಬರಾವ್ ಪೈ ಅವರ ದೂರದೃಷ್ಟಿಯ ಸಂಕೇತವೇ ಆಗಿದೆ.

ಕೆನರಾ ಬ್ಯಾಂಕ್‌ನ ನಿಧಿ ಸಂಗ್ರಹಿಸಲು ಸುಬ್ಬರಾವ್ ಪೈ ಅವರು ಪಟ್ಟ ಕಷ್ಟವು ಅಷ್ಟಿಷ್ಟಲ್ಲ. ಅವರು ಎತ್ತಿನ ಗಾಡಿಯಲ್ಲಿ ಊರೂರು ಸುತ್ತಿ ತಲಾ 50 ರೂ. ಬೆಲೆಯ ಎರಡು ಸಾವಿರ ಷೇರು ಪತ್ರಗಳನ್ನು ಮಾರಿ ನಿಧಿಯನ್ನು ಸಂಗ್ರಹಿಸಿದರು! ಹೀಗೆ ಪೈಯವರ ಅಧ್ಯಕ್ಷತೆಯಲ್ಲಿ 1906ರಲ್ಲಿ ಆರಂಭ ಆದ ಈ ಬ್ಯಾಂಕು ಇಂದು ದೇಶ, ವಿದೇಶಗಳಲ್ಲಿ ಅವರು ಮಾಡಿರುವ ಶ್ರೇಷ್ಟವಾದ ಕಾಯಕವನ್ನು ಸಾರುತ್ತಿದೆ.

ಅಮ್ಮೆಂಬಳ ಸುಬ್ಬರಾವ್ ಪೈ ಅವರು 1909ರ ಜುಲೈ 25ರಂದು ಕೇವಲ ತಮ್ಮ 57ನೆಯ ವಯಸ್ಸಿನಲ್ಲಿ ನಿಧನರಾದರು. ಆದರೆ ಅವರು ಸ್ಥಾಪನೆ ಮಾಡಿದ ಸಂಸ್ಥೆಗಳು ಮತ್ತು ಬಹುಮುಖ್ಯವಾದ ಸಾಮಾಜಿಕ ಕೊಡುಗೆಗಳು, ಹಗಲಿರುಳು ಬಡ ಜನತೆಗಾಗಿ ಮಾಡಿದ ಕಾರ್ಯಗಳು ಅವರನ್ನು ಚಿರಂಜೀವಿ ಆಗಿ ಮಾಡಿವೆ.

ಅಮ್ಮೆಂಬಳ ಸುಬ್ಬರಾವ್ ಪೈ ಅವರು ಆಗಿನ ಕಾಲಕ್ಕೆ ತುಂಬಾ ಅಡ್ವಾನ್ಸ್ ಆಗಿದ್ದರು. ತನ್ನದೇ ಸಮಾಜದ ಒಬ್ಬ ಮಹಿಳೆಯು ಅಂತರ್ಜಾತೀಯ ಮದುವೆಯ ಕಾರಣಕ್ಕೆ ಅಂದು ಸಾಮಾಜಿಕವಾದ ಬಹಿಷ್ಕಾರಕ್ಕೆ
ಒಳಗಾದಾಗ ತುಂಬಾ ನೊಂದರು. ಮುಂದೆ ಅದೇ ಮಹಿಳೆ ನಿಧನರಾದಾಗ ಅವರ ಕೊನೆಯ ಇಚ್ಛೆಯಂತೆ ಪೈಯವರೆ ಮುಂದೆ ನಿಂತು ತನ್ನ ಗೆಳೆಯರ ಸಹಕಾರ ಪಡೆದು ಹಿಂದೂ ಸಂಪ್ರದಾಯದ ಪ್ರಕಾರ ಅವರ ಅಂತಿಮ ವಿಧಿಗಳನ್ನು ಪೂರ್ತಿ ಮಾಡಿದರು. ಈ ಕಾರಣಕ್ಕೆ ಅವರು ಒಂದು ಪ್ರಬಲ ವರ್ಗದ ಜನರ ಪ್ರತಿರೋಧವನ್ನು ಎದುರಿಸಬೇಕಾಯಿತು. ಆದರೆ ಪೈಯವರು ಅವುಗಳಿಗೆ ಕ್ಯಾರೇ ಅನ್ನಲಿಲ್ಲ!

ಅವರು ಸ್ಥಾಪನೆ ಮಾಡಿದ ಕೆನರಾ ಬ್ಯಾಂಕ್ ಮತ್ತು ಕೆನರಾ ವಿದ್ಯಾಸಂಸ್ಥೆಗಳು ಇರುವ ತನಕ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಹೆಸರು ಶಾಶ್ವತ ಆಗಿರುವುದು ಖಂಡಿತ.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಎಂಥಾ ‌ ತ್ಯಾಗ? ಕೋಟ್ಯಧಿಪತಿ ಆಗಿದ್ದ ಕಾರ್ನಾಡ್‌ ಸದಾಶಿವ ರಾವ್ ಬಳಿ ಕೊನೆಗೆ ಒಂದು ಟೀ ಕುಡಿಯಲೂ ದುಡ್ಡಿರಲಿಲ್ಲ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

ರಾಜಮಾರ್ಗ ಅಂಕಣ : ನನ್ನ ಬದುಕೇ ಬೇರೆ, ನನ್ನ ಸಿನಿಮಾನೇ ಬೇರೆ ಅಂದರೆ ಹೀಗೇ ಆಗೋದು!

ಒಬ್ಬ ಸಿನೆಮಾ ನಟ ತಾನು ಸಿನೆಮಾದಲ್ಲಿ ಮಾಡುವ ಪಾತ್ರಗಳಿಗೂ, ನಿಜ ಜೀವನದಲ್ಲಿ ಆತನ ವ್ಯಕ್ತಿತ್ವಕ್ಕೂ ಅಜಗಜಾಂತರ ಇದೆ ಅಂತಾದರೆ ಸಹಿಸಿಕೊಳ್ಳುವುದು ಹೇಗೆ? ಒಬ್ಬ ಸ್ಟಾರ್ ನಟ ಆಪಾದಿತನಾಗಿ ಕಟಕಟೆಯಲ್ಲಿ ತಲೆ ತಗ್ಗಿಸಿ ನಿಂತಾಗಲೂ ಜೈಕಾರ ಹಾಕುವ ಹುಚ್ಚು ಅಭಿಮಾನಿಗಳಿಗೆ ಏನೆಂದು ಹೇಳಬೇಕು? ಒಬ್ಬ ಸ್ಟಾರ್ ನಟನ ಕೋಟಿ ಅಭಿಮಾನಿಗಳು ಆತನ ಖಾಸಗಿ ಜೀವನವನ್ನು ಅನುಕರಣೆ ಮಾಡಲು ಹೋದರೆ ಸಮಾಜ ಹೇಗಿರಬಹುದು?

VISTARANEWS.COM


on

Actor Darshan
Koo

ರಾಜೇಂದ್ರ ಭಟ್ ಕೆ

Rajendra-Bhat-Raja-Marga-Main-logo

ಮೊದಲೇ ಹೇಳಿಬಿಡುತ್ತೇನೆ, ನಾನು ಯಾವುದೇ ಸಿನಿಮಾ ನಟನ ಅಭಿಮಾನಿಯಲ್ಲ. ದರ್ಶನ್ (Actor Darshan) ಎಂಬ ಕನ್ನಡದ ಸ್ಟಾರ್ ನಟನ ಬದುಕಿನಲ್ಲಿ ಈ ಎರಡು ದಿನಗಳ ಅವಧಿಯಲ್ಲಿ ಏನೆಲ್ಲ ಆಗಿದೆ ಅದರ ಬಗ್ಗೆ ನಾನು ತೀರ್ಪು ಕೊಡಲು ಹೋಗುವುದಿಲ್ಲ. ಆದರೆ ಈ ಘಟನೆಯು ಸಮಾಜಕ್ಕೆ ಬಹು ದೊಡ್ಡ ಸಂದೇಶ ಉಳಿಸಿ ಹೋಗಿದೆ. ಆತನ ಸಿನೆಮಾಗಳಲ್ಲಿ ಅವನು ಮಾಡುವ ಪಾತ್ರಗಳು, ಕೊಡುವ ಪೋಸ್, ಹೊಡೆಯುವ ಡೈಲಾಗುಗಳು, ಪ್ರಕಟಿಸುವ ಮೌಲ್ಯಗಳು….
ಛೇ! ಹೀಗಾಗಬಾರದಿತ್ತು. ಅವನನ್ನು ಕೋರ್ಟಿಗೆ ವಿಚಾರಣೆಗೆ ಕರೆತಂದಾಗ ಅಲ್ಲಿದ್ದ ಕೆಲವು ಅಭಿಮಾನಿಗಳು ‘ ಡಿ ಬಾಸಿಗೆ ಜಯವಾಗಲಿ’ ಅಂತ ಘೋಷಣೆ ಕೂಗಿದರಂತೆ! ಇನ್ನು ಅವನು ಈ ಕೇಸನ್ನು ಗೆದ್ದು ಬಂದರೆ ಸಾವಿರಾರು ಅಭಿಮಾನಿಗಳು ಮಾಲೆ ಹಿಡಿದು ಜೈಕಾರ ಹಾಕಲು ಕಾಯುತ್ತಿರುತ್ತಾರೆ! ಅಂಧಾಭಿಮಾನ ಈ ಮಟ್ಟಕ್ಕೆ ಹೋಗಬಾರದು.

ನಮ್ಮ ಖಾಸಗಿ ಜೀವನ ಮತ್ತು ವೃತ್ತಿ ಜೀವನ

ಪ್ರತಿಯೊಬ್ಬ ವ್ಯಕ್ತಿಗೂ ಒಂದು ಖಾಸಗಿ ಜೀವನ ಮತ್ತು ಇನ್ನೊಂದು ವೃತ್ತಿ ಜೀವನ ಇರುತ್ತದೆ. ಅದರ ಮಧ್ಯೆ ಒಂದು ಸಣ್ಣ ಗ್ಯಾಪ್ ಇದ್ದೇ ಇರುತ್ತದೆ. ಅದು ಸಹಜ ಕೂಡ.

ಆದರೆ ಅದೇ ಗ್ಯಾಪ್ ದೊಡ್ಡದಾದರೆ? ಒಬ್ಬ ಸಿನೆಮಾ ನಟ ತಾನು ಸಿನೆಮಾದಲ್ಲಿ ಮಾಡುವ ಪಾತ್ರಗಳಿಗೂ, ನಿಜ ಜೀವನದಲ್ಲಿ ಆತನ ವ್ಯಕ್ತಿತ್ವಕ್ಕೂ ಅಜಗಜಾಂತರ ಇದೆ ಅಂತಾದರೆ ಸಹಿಸಿಕೊಳ್ಳುವುದು ಹೇಗೆ? ಒಬ್ಬ ಸ್ಟಾರ್ ನಟ ಆಪಾದಿತನಾಗಿ ಕಟಕಟೆಯಲ್ಲಿ ತಲೆ ತಗ್ಗಿಸಿ ನಿಂತಾಗಲೂ ಜೈಕಾರ ಹಾಕುವ ಹುಚ್ಚು ಅಭಿಮಾನಿಗಳಿಗೆ ಏನೆಂದು ಹೇಳಬೇಕು? ಒಬ್ಬ ಸ್ಟಾರ್ ನಟನ ಕೋಟಿ ಅಭಿಮಾನಿಗಳು ಆತನ ಖಾಸಗಿ ಜೀವನವನ್ನು ಅನುಕರಣೆ ಮಾಡಲು ಹೋದರೆ ಸಮಾಜ ಹೇಗಿರಬಹುದು? ಒಬ್ಬ ಬಡ ಕುಟುಂಬದ ಹುಡುಗ ತನ್ನ ಪ್ರಿಯತಮೆಗೆ ಮೆಸೇಜ್ ಮಾಡಿ ತೊಂದರೆ ಕೊಟ್ಟ ಎಂಬ ಕಾರಣಕ್ಕೆ ಸ್ಟಾರ್ ನಟ ಮತ್ತು ಅವನ ಗೆಳೆಯರು ಹೊಡೆದು ಕೊಲೆ ಮಾಡುವ ಮಟ್ಟಕ್ಕೆ ಹೋಗುತ್ತಾರೆ (ನನಗೆ ಗೊತ್ತಿಲ್ಲ) ಅಂದರೆ ಅದೆಂತಹ ಕ್ರೌರ್ಯ? ದರ್ಶನ್ ಸಿನೆಮಾದಲ್ಲಿ ಮಾಡುವ ಪಾತ್ರಗಳಿಗೂ ಇಂತಹ ಘಟನೆಗಳಿಗೂ ಎಷ್ಟೊಂದು ವ್ಯತ್ಯಾಸ ಅಲ್ವಾ?

ಹುಚ್ಚು ಅಭಿಮಾನಿಗಳ ಅತಿರೇಕಗಳು!:

ಬಹಳ ಹಿಂದೆ ಡಾಕ್ಟರ್ ರಾಜಕುಮಾರ್ ಅವರ ‘ಸಮಯದ ಗೊಂಬೆ ‘ ಸಿನೆಮಾ ಬಿಡುಗಡೆ ಆಗಿತ್ತು. ನಾನು ಅದನ್ನು ಬೆಂಗಳೂರಿನ ಒಂದು ಥಿಯೇಟರ್ ಒಳಗೆ ಕೂತು ನೋಡುತ್ತಾ ಇದ್ದೆ. ಅದರಲ್ಲಿ ರಾಜ್ ಅವರದ್ದು ಒಬ್ಬ ಸಾಮಾನ್ಯ ಕಾರ್ ಡ್ರೈವರ್ ಪಾತ್ರ ಆಗಿತ್ತು. ನಟ ಶ್ರೀನಾಥ್ ಅವರದ್ದು ಆ ಕಾರ್ ಯಜಮಾನನ ಪಾತ್ರ. ಒಂದು ಭಾವನಾತ್ಮಕ ಪಾತ್ರದಲ್ಲಿ ಸಿಟ್ಟು ಮಾಡಿಕೊಂಡ ಶ್ರೀನಾಥ್ ತನ್ನ ಡ್ರೈವರ್ ಆದ ರಾಜಕುಮಾರ್ ಅವರ ಕಪಾಳಕ್ಕೆ ಹೊಡೆಯುವ ಸನ್ನಿವೇಶ. ಸಿನೆಮಾದ ಕಥೆಯೇ ಹಾಗಿತ್ತು. ಆದರೆ ಅದನ್ನು ರಾಜ್ ಅಭಿಮಾನಿಗಳು ಸಹಿಸಿಕೊಳ್ಳಲಿಲ್ಲ.
‘ಏನೋ, ನಮ್ಮ ಅಣ್ಣಾವ್ರಿಗೆ ಹೊಡೀತಿಯೇನೋ?’ ಎಂದೆಲ್ಲ ಕೂಗಾಡಿದರು. ಥಿಯೇಟರ್ ಮೇಲೆ ಕಲ್ಲು ಬಿತ್ತು. ಶ್ರೀನಾಥ್ ಎಂಬ ನಟನಿಗೆ ಬೈಗುಳದ ಅಭಿಷೇಕವೇ ಆಯಿತು. ಕೊನೆಗೆ ಚಿತ್ರ ನಿರ್ಮಾಪಕರು ಕ್ಷಮೆ ಕೇಳಿ ಆ ದೃಶ್ಯವನ್ನು ಕತ್ತರಿಸುವ ಭರವಸೆ ಕೊಟ್ಟ ನಂತರ ಪ್ರೇಕ್ಷಕರ ಆಕ್ರೋಶವು ತಣಿಯಿತು.

ತಮಿಳುನಾಡಿನಲ್ಲಿ ಈ ಹುಚ್ಚು ಅಭಿಮಾನ ಇನ್ನೂ ಜಾಸ್ತಿ. ಎಂ ಜಿ ಆರ್, ಜಯಲಲಿತಾ, ಅಜಿತ್, ವಿಜಯ್, ರಜನೀಕಾಂತ್ ಅವರನ್ನು ದೇವರಾಗಿ ಕಂಡ ಜನ ಅವರು. ನಟಿ ಖುಷ್ಬೂಗೆ ಒಂದು ದೇವಸ್ಥಾನವನ್ನು ಕಟ್ಟಿದ ಜನ ಅವರು! ಒಬ್ಬ ನಟನ ಅಭಿಮಾನಿಗಳು ಇನ್ನೊಬ್ಬ ನಟನ ಅಭಿಮಾನಿಗಳ ಮೇಲೆ ಹಲ್ಲೆ ನಡೆಸುವ ಘಟನೆಗಳು ಅಲ್ಲಿ ನಿತ್ಯವೂ ನಡೆಯುತ್ತವೆ. ಅಂತಹ ಅಂಧಾಭಿಮಾನಿಗಳಿಗೆ ಕಪಾಳಕ್ಕೆ ಹೊಡೆದ ಹಾಗೆ ನಡೆದಿದೆ ಈ ಮರ್ಡರ್ ಕಥೆ. ಆದರೆ ಬಲಿಯಾದದ್ದು ಒಬ್ಬ ಬಡ ಅಪ್ಪ , ಅಮ್ಮನ ಒಬ್ಬನೇ ಮಗ, ಕುಟುಂಬದ ಒಬ್ಬನೇ ಆಧಾರ ಅನ್ನೋದು, ಒಬ್ಬ ಚೊಚ್ಚಲ ಬಾಣಂತಿಯ ಗಂಡ ಅನ್ನೋದು ಮಾತ್ರ ದುರಂತ!

ಕರಾವಳಿಯ ಜನ ಬುದ್ಧಿವಂತರು!:

ಇಲ್ಲಿಯ ಸಿನೆಮಾ ಪ್ರೇಕ್ಷಕರು ಕೇವಲ ಮನರಂಜನೆಗಾಗಿ ಸಿನೆಮಾ ನೋಡುತ್ತಾರೆ. ಕಥೆ ಚೆನ್ನಾಗಿದ್ದರೆ ಮಾತ್ರ ನೋಡುತ್ತಾರೆ. ಯಾವ ಸ್ಟಾರ್ ನಟ ಅಥವಾ ಸ್ಟಾರ್ ನಟಿಯ ಸಿನೆಮಾ ಬಂದರೂ ಆ ಸ್ಟಾರಗಿರಿಗೆ ಮೆಚ್ಚಿ ಸಿನೆಮಾ ನೋಡಲು ಬರುವುದೇ ಇಲ್ಲ. ‘ಹೀರೋ ವರ್ಶಿಪ್ ‘ ಕರಾವಳಿಯಲ್ಲಿ ತುಂಬಾ ಕಡಿಮೆ. ಈ ಪ್ರಬುದ್ಧತೆಯೇ ಇಂದು ನಿಜವಾಗಿ ಬೇಕಾಗಿರುವುದು. ಹಾಗೆಯೇ ನಾನು ಹಿಂದೊಮ್ಮೆ ಬರೆದ ವರನಟ ರಾಜಕುಮಾರ್ ಅವರ ಮಾತುಗಳನ್ನು ಇಲ್ಲಿ ಉಲ್ಲೇಖ ಮಾಡಬೇಕು.

ಇದನ್ನೂ ಓದಿ: Rajeev Taranath : ಮಹೋನ್ನತ ಪ್ರತಿಭೆಯ ರಾಜೀವ್ ತಾರಾನಾಥ್ ಸರೋದ್ ಲೋಕದ ಅದ್ಭುತ!

‘ನಮ್ಮಂತಹ ನಟರನ್ನು ಸಾವಿರಾರು ಅಭಿಮಾನಿಗಳು ಅನುಕರಣೆ ಮಾಡುತ್ತಾರೆ. ಆದ್ದರಿಂದ ನಮ್ಮ ಖಾಸಗಿ ಜೀವನವೂ ಅವರಿಗೆ ಅನುಕರಣೀಯ ಆಗಿರಬೇಕು.’ ಅವರು ತೆರೆಯ ಮೇಲೆ ಯಾವ ಪಾತ್ರಗಳನ್ನು ಮಾಡಿದ್ದರೋ ಅದೇ ರೀತಿ ಬದುಕಿದ್ದರು. ‘ನನ್ನ ಜೀವನವೇ ನನ್ನ ಸಂದೇಶ ‘ ಅಂದಿದ್ದರು ಗಾಂಧೀಜಿ. ಅವರ ಬದುಕಿನಲ್ಲಿಯೂ ಕೆಲವು ಕಪ್ಪು ಪುಟಗಳು ಇದ್ದವು. ಅದ್ಯಾವುದನ್ನೂ ಅವರು ಮುಚ್ಚಿಡಲಿಲ್ಲ. ಅವರ ಆತ್ಮಚರಿತ್ರೆಯ ಪುಸ್ತಕವಾದ
‘ಸತ್ಯಾನ್ವೇಷಣೆ ‘ಯಲ್ಲಿ ಅವರು ಆ ಕಪ್ಪು ಪುಟಗಳನ್ನು ಬರೆಯಲು ಹೇಸಿಗೆ ಮಾಡಲಿಲ್ಲ. ಅದಕ್ಕಾಗಿ ಅವರು ಲೆಜೆಂಡ್ ಆದರು. ನಮ್ಮ ಬದುಕು ಕೂಡ ಒಂದು ತೆರೆದ ಪುಸ್ತಕ ಆಗೋದು ಯಾವಾಗ?

Continue Reading

ಅಂಕಣ

ಧವಳ ಧಾರಿಣಿ ಅಂಕಣ: ಸಾಕೇತದ ಅಮಾತ್ಯ ಸುಮಂತ್ರ, ರಾಮಾಯಣದ ರಹಸ್ಯನಿಧಿ

ಧವಳ ಧಾರಿಣಿ ಅಂಕಣ: ರಾಮಾಯಣದಲ್ಲಿ ಮಂತ್ರಿ ಸುಮಂತ್ರನ ಪಾತ್ರ ಸಣ್ಣದಾದರೂ ಮಹತ್ವದ್ದು. ದಶರಥ ಮಹಾರಾಜನ ಬಾಲ್ಯದ ಒಡನಾಡಿ ಇವನಾಗಿದ್ದ. ಬಹುಶಃ ದಶರಥನದೇ ವಯಸ್ಸು ಈತನಿಗೆ. ಈ ಕಾರಣದಿಂದಲೇ ದಶರಥನಿಗೆ ಆತ ನಂಬಿಗಸ್ಥ ಮಂತ್ರಿಯಾಗಿದ್ದನು. ಆತನ ಅಂತರಂಗದ ಆಪ್ತನೂ ಆಗಿದ್ದನು.

VISTARANEWS.COM


on

ಧವಳ ಧಾರಿಣಿ ಅಂಕಣ dasharatha sumantra
Koo

ಸುಮಂತ್ರ ಭಾಗ 1; ರಾಜ್ಯದ ರಹಸ್ಯಗಳನ್ನು ನಿಗೂಢವಾಗಿರಿಸಿದ ಮುತ್ಸದ್ಧಿ

dhavala dharini by Narayana yaji

ಧವಳ ಧಾರಿಣಿ ಅಂಕಣ: ತಸ್ಯಾಮಾತ್ಯಾ ಗುಣೈರಾಸನ್ನಿಕ್ಷ್ವಾಕೋಸ್ತು ಮಹಾತ್ಮನಃ
ಮನ್ತ್ರಜ್ಞಾಶ್ಚೇಙ್ಗಿತಜ್ಞಾಶ್ಚ ನಿತ್ಯಂ ಪ್ರಿಯಹಿತೇ ರತಾ: ৷৷ಬಾ.7.1৷৷

ಇಕ್ಷ್ವಾಕು ವಂಶದಲ್ಲಿ ಹುಟ್ಟಿದ ಮಹಾತ್ಮನಾದ ದಶರಥನಿಗೆ (king Dasharatha) ಮಂತ್ರಾಲೋಚನೆಯಲ್ಲಿ ಸಮರ್ಥರಾದ, ಕಾರ್ಯವಿಚಾರತತ್ಪರರಾದ ಮತ್ತು ಪರರಮನಸಿನಲ್ಲಿರುವುದನ್ನು ಮುಖಭಾವದಿಂದಲೇ ತಿಳಿಯುಬಲ್ಲ, ಯಾವಾಗಲೂ ರಾಜನ ಹಿತರಕ್ಷಣೆಯಲ್ಲಿಯೇ ನಿರತರಾಗಿರುವ ಮಂತ್ರಿಗಳಿದ್ದರು.

ಮಂತ್ರಿಗಳ ವಿಚಾರಕ್ಕೆ ಬರುವಾಗ ರಾಮಾಯಣದ (Ramayana) ಪ್ರಾರಂಭದ ಬಾಲಕಾಂಡಗಳಿಂದ ಹಿಡಿದು ಕೊನೆಯ ಉತ್ತರಕಾಂಡದ ಸೀತಾವಿಯೋಗದ ವರೆಗಿನ ಭಾಗಗಳಲ್ಲಿ ಕಂಡುಬರುವ ಪ್ರಮುಖ ಹೆಸರು ಸುಮಂತ್ರ (Sumantra) ಎನ್ನುವ ಮಹಾ ಅಮಾತ್ಯನದ್ದು. ಅಯೋಧ್ಯೆಯ ಹಿತವನ್ನು ಕಾಪಾಡಲು ಅಷ್ಟ ಮಂತ್ರಿಗಳಾದ ಧೃಷ್ಟಿ, ಜಯಂತ, ವಿಜಯ, ಸಿದ್ಧಾರ್ಥ, ಅರ್ಥಸಾಧಕ, ಅಶೋಕ, ಮಂತ್ರಪಾಲ ಮತ್ತು ಸುಮಂತ್ರ ಎನ್ನುವ ಎಂಟು ಮಂತ್ರಿಗಳಿದ್ದರು. ಅವರಲ್ಲಿ ಸುಮಂತ್ರನೆನ್ನುವ ಕೇವಲ ಮಂತ್ರಿ ಎನ್ನುವುದಕ್ಕಿಂತ ರಾಜನ ಅಂತರಂಗದ ಆಪ್ತನೂ ಆಗಿದ್ದ. ಅರ್ಥಶಾಸ್ತ್ರದಲ್ಲಿ ಸುಬಧ್ರವಾದ ರಾಜ್ಯಕ್ಕೆ “ರಾಜ, ಅಮಾತ್ಯ, ಜನಪದ, ದುರ್ಗ, ಕೋಶ, ಸೈನ್ಯ ಅಥವಾ ದಂಡ ಮತ್ತು ಮಿತ್ರ” ಎನ್ನುವ ಸಪ್ತಾಂಗ ಬಹಳ ಮಹತ್ವದ್ದು. ಅಮಾತ್ಯರಲ್ಲಿ ಮಂತ್ರಿಗಳು ಮತ್ತು ಪುರೋಹಿತ ವರ್ಗ ಎನ್ನುವ ಎರಡು ವಿಧಗಳಿವೆ. ದಕ್ಷ ಆಡಳಿತಕ್ಕೆ ಯೋಗ್ಯರಾದ ಸಚಿವರು ಮತ್ತು ಧರ್ಮಮಾರ್ಗದಲ್ಲಿ ರಾಜ ಸದಾ ಇರುವಂತೆ ನೋಡಿಕೊಳ್ಳುವ ಪುರೋಹಿತರು ಬಹು ಮುಖ್ಯ. ರಾಜನಿಗೆ ಕೆಟ್ಟ ಹೆಸರಾಗಲಿ, ಒಳ್ಳೆಯ ಹೆಸರಾಗಲಿ ಬರುವುದರಲ್ಲಿ ಅಮಾತ್ಯ ಮತ್ತು ಪುರೋಹಿತರ ಪಾತ್ರ ದೊಡ್ಡದು.

ಸುಮಂತ್ರ ಎನ್ನುವ ಮಂತ್ರಿ ಅಯೋಧ್ಯೆಯ ಆಧಾರ ಸ್ತಂಭಗಳಲ್ಲಿ ಒಂದಾಗಿದ್ದ. ಆಯೋಧ್ಯೆಯಲ್ಲಿ ಸಚಿವ ಪದವಿಯೆನ್ನುವುದು ವಂಶಪರಂಪರೆಯ ಕಾರಣ ಮಾತ್ರದಿಂದಲೇ ಬರುತ್ತಿರಲಿಲ್ಲ. ಅವರಲ್ಲಿ ಯೋಗ್ಯತೆಯೂ ಇರಬೇಕಾಗಿತ್ತು. ಯಾರನ್ನಾದರೂ ಹುದ್ದೆಗೆ ನಿಯಕ್ತಿಗೊಳಿಸುವ ಮುನ್ನ ಅವರನ್ನು ಚನ್ನಾಗಿ ಪರೀಕ್ಷಿಸಲಾಗುತ್ತಿತ್ತು. ಅರ್ಥಶಾಸ್ತ್ರದಲ್ಲಿ ರಾಜನ ಆಸ್ಥಾನದಲ್ಲಿರುವವರನ್ನು ಪರೀಕ್ಷಿಸುವ ವಿಧಾನವನ್ನು ಹೇಳುವಾಗ ಧರ್ಮಾದಿ, ಉಪಧಾ, ಅರ್ಥೋಪಧಾ, ಕಾಮೋಪಧಾ, ಭಯೋಪಧಾಗಳ ಮೂಲಕ ಪರೀಕ್ಷಿಸಬೇಕು ಎಂದು ಹೇಳುತ್ತದೆ. ಅಂದರೆ ರಾಜನಲ್ಲಿ ಅಧರ್ಮವನ್ನು ಕಲ್ಪಿಸಿ ಅವನನ್ನು ಪಟ್ಟದಿಂದ ಇಳಿಸೋಣವೇ ಎನ್ನುವ ಆಮಿಷಕ್ಕೆ ಒಡ್ಡಿದಾಗಲೂ ಅದನ್ನು ಯಾವಾತ ತಿರಸ್ಕರಿಸುತ್ತಾನೋ, ಹಣದ ಆಮಿಷದ ಮೂಲಕ ರಾಜನಿಂದ ಬೇರ್ಪಡಿಸಲು ಸಾಧ್ಯವೋ ಎನ್ನುವುದನ್ನು ಪರೀಕ್ಷಿಸುವುದು, ರಾಣಿ ನಿನ್ನನ್ನು ಬಯಸಿದ್ದಾಳೆ, ಅವಳನ್ನು ಸೇರಿದರೆ ನಿನಗೆ ಕೈತುಂಬಾ ಹಣಸಿಗುವುದು ಎನ್ನುವ ಆಮಿಷವನ್ನು ಒಡ್ಡಿದಾಗಲೂ ಅದನ್ನು ತಿರಸ್ಕರಿಸುವಂಥವರು, ರಾಜನಿಂದ ಅವಮಾನಿತರಾದ (ಹಾಗೇ ನಟಿಸಿ) ಅಮಾತ್ಯನಾದವ ಇತರರನ್ನು ನಾವೆಯಲ್ಲಿ ಕರೆದುಕೊಂಡು ಹೋಗಿ ರಾಜನ ವಿರುದ್ಧ ಅವರನ್ನು ಎತ್ತಿಕಟ್ಟಿದಾಗ ಯಾರು ತಿರಸ್ಕರಿಸಿ ರಾಜನಿಗೆ ನಿಷ್ಠೆಯುಳ್ಳವರಾಗಿರುತ್ತಾರೆಯೋ ಅಂಥವರು ಮಾತ್ರ ಅಮಾತ್ಯರಾಗಲು ಯೋಗ್ಯರು ಎನ್ನುತ್ತದೆ.

ರಾಜನ ಆಪ್ತಸಲಹೆಗಾರ

ದಶರಥ ಮಹಾರಾಜನ ಬಾಲ್ಯದ ಒಡನಾಡಿ ಇವನಾಗಿದ್ದ. ಬಹುಶಃ ದಶರಥನದೇ ವಯಸ್ಸು ಈತನಿಗೆ. ಈ ಕಾರಣದಿಂದಲೇ ದಶರಥನಿಗೆ ಆತ ನಂಬಿಗಸ್ಥ ಮಂತ್ರಿಯಾಗಿದ್ದನು. ಆತನ ಅಂತರಂಗದ ಆಪ್ತನೂ ಆಗಿದ್ದನು. ದಶರಥ ಕೌಸಲ್ಯೆ ಮತ್ತು ಸುಮಿತ್ರೆ ಇಬ್ಬರನ್ನೂ ಮದುವೆಯಾಗಿ ಹಲವುಕಾಲ ಕಳೆದಿದ್ದರೂ ಅವರಿಬ್ಬರಲ್ಲಿ ಮಕ್ಕಳಾಗಿರಲಿಲ್ಲ. ಅಯೋಧ್ಯೆಯ ಸಿಂಹಾಸನಕ್ಕೆ ವಾರಸುದಾರರು ಇಲ್ಲದೆ ಇರುವ ಕಾರಣದಿಂದ ಮತ್ತೊಂದು ಮದುವೆಯಾಗಲು ಕನ್ಯಾನ್ವೇಷಣೆಗೆ ದೊರೆ ತೊಡಗಿದ. ಆಗ ಆತನಿಗೆ ಕೇಕೇಯದ ದೊರೆ ಅಶ್ವಪತಿಗೆ ಕೈಕೇಯಿ ಎನ್ನುವ ಸುಂದರಿಯಾದ ಮಗಳು ಇರುವ ವರ್ತಮಾನ ಬಂತು. ಆಕೆಯನ್ನು ಮದುವೆಯಾಗುವ ಉದ್ಧೇಶದಿಂದ ಅಶ್ವಪತಿರಾಜನಲ್ಲಿ ಕೇಳಿದಾಗ ಆ ದೊರೆ “ತನ್ನ ಮಗಳಲ್ಲಿ ಜನಿಸುವ ಪುತ್ರನಿಗೆ ರಾಜ್ಯದ ಉತ್ತರಾಧಿಕಾರ ಸಿಗಬೇಕೆಂದು” ನಿಯಮ ಹಾಕಿ ಅದಕ್ಕೆ ಒಪ್ಪುವುದಾದರೆ ಮಗಳನ್ನು ಕೊಡುವೆ ಎಂದ. ದಶರಥನಿಗೆ ಮದುವೆ ಆಗಬೇಕಾಗಿತ್ತು. ಅದಾಗಲೇ ಆತನಿಗೆ ಇಬ್ಬರು ಹೆಂಡತಿಯರ ಜೊತೆ ಇನ್ನು ಮುನ್ನೂರೈವತ್ತು ಉಪಪತ್ನಿಯರೂ ಇದ್ದರು. ಪಟ್ಟಮಹಿಷಿಯರಲ್ಲಿ ಜನಿಸಿದವರಿಗೆ ಮಾತ್ರ ರಾಜ್ಯದ ಅಧಿಕಾರಕ್ಕೆ ಏರುವ ಅರ್ಹತೆ ಇರುತ್ತಿತ್ತು. ಹೇಗಿದ್ದರೂ ಮೊದಲ ಇಬ್ಬರು ಪತ್ನಿಯರಿಗೆ ಮಕ್ಕಳಿಲ್ಲ, ಹಾಗಾಗಿ ಕೈಕೇಯಿಯಲ್ಲಿ ಜನಿಸಿದ ಮಕ್ಕಳಿಗೆ ಸಹಜವಾಗಿ ಅಧಿಕಾರ ಸಿಗುತ್ತದೆ ಎನ್ನುವ ಕಾರಣಕ್ಕೆ ದೊರೆ ಮರುಮಾತಿಲ್ಲದೇ ಒಪ್ಪಿಕೊಂಡ.

ಈ ವಿಷಯಕ್ಕೆ ಸಾಕ್ಷಿಯಾಗಿ ಸುಮಂತ್ರ ಮಾತ್ರವೇ ಇದ್ದ. ಆದರೆ ಬುದ್ಧಿವಂತನಾದ ದಶರಥ ಮತ್ತು ಸುಮಂತ್ರ ಇಬ್ಬರೂ ಈ ವಿಷಯವನ್ನು ಗೌಪ್ಯವಾಗಿಟ್ಟಿದ್ದರು. ಅಶ್ವಪತಿ ತನ್ನ ಮಗಳಾದ ಕೈಕೇಯಿಗೂ ಈ ಮಾತನ್ನು ಹೇಳಿರಲಿಲ್ಲ. ನಂತರ ಅದು ಹೇಗೋ ರಾಮನಿಗೆ ತಿಳಿದಿತ್ತು. ರಾಜನಾಗುವಿಕೆ ಎಂದರೆ ಅದಕ್ಕೆ ಇನ್ನಿತರ ಯೋಗ್ಯತೆಯೂ ಬೇಕಿತ್ತು. ಭರತ ವನವಾಸಕ್ಕೆ ಬಂದಾಗ ಆತನಲ್ಲಿ ರಾಮ, ದಶರಥ ಕನ್ಯಾಶುಲ್ಕವಾಗಿ ಕೋಸಲ ರಾಜ್ಯವನ್ನು ಕೊಟ್ಟಿರುವ ವಿಷಯ ಹೇಳುತ್ತಾನೆ. ಮದುವೆಯಾಗುವಾಗ ಸುಳ್ಳು ಹೇಳಬಹುದು ಎನ್ನುವ ಕಾರಣಕ್ಕೆ ರಾಜ್ಯದ ಹಿತರಕ್ಷಣೆಯಿಂದ ಸುಮಂತ್ರ ಈ ವಿಷಯನ್ನು ಮುಚ್ಚಿಟ್ಟಿದ್ದ. ಮಹಾಭಾರತದಲ್ಲಿ “ಮನ್ತ್ರಗೂಢಾ ಹಿ ರಾಜಸ್ಯ ಮನ್ತ್ರಿಣೋ ಯೇ ಮನೀಷಿಣಃ – ಬುದ್ಧಿವಂತರಾದ ಮಂತ್ರಿಗಳೇ ರಾಜ್ಯದ ರಾಜ ರಹಸ್ಯಗಳನ್ನು ನಿಗೂಢವಾಗಿರಿಸುತ್ತಾರೆ” ಎನ್ನುವ ವಾಕ್ಯವಿದೆ. ಅದಕ್ಕೆ ತಕ್ಕಂತೆ ಇದ್ದವ ಸುಮಂತ್ರ.

ರಾಜ ಮತ್ತು ಅಮಾತ್ಯ ಈ ಇಬ್ಬರ ನಡುವೆ ಇರುವ ಸಂಬಂಧ ಪತಿ ಮತ್ತು ಧಾರಾ ಭಾವದಲ್ಲಿರಬೇಕು. ರಾಜನ ನಿರ್ಣಯದಲ್ಲಿ ದೋಷಕಂಡು ಅದರಲ್ಲಿ ಬದಲಾವಣೆ ಆಗಬೇಕಾದಾಗ ಬಹಿರಂಗವಾಗಿ ಆ ಕುರಿತು ಚರ್ಚಿಸಕೂಡದು. ಸಭಾಸದರ ಎದುರು ಸತ್ಯವೇ ಆದರೂ ಅದನ್ನು ಪ್ರಕಟಿಸಿದರೆ ರಾಜನ ಮಹತ್ವ ಕಡಿಮೆಯಾಗಿಬಿಡುತ್ತದೆ. ಸಚಿವನಾದವ ಹೆಂಡತಿ ತನ್ನ ಗಂಡನಿಗೆ ಏಕಾಂತದಲ್ಲಿ ಹೇಗೆ ಎಲ್ಲವನ್ನು ತಿಳಿಸಿ ಹೇಳುತ್ತಾಳೆಯೋ ಅದೇ ರೀತಿ ರಾಜ ಏಕಾಂತದಲ್ಲಿರುವಾಗ ಆತ ತೆಗೆದುಕೊಂಡ ನಿರ್ಣಯಗಳ ಕುರಿತು ವಿಮರ್ಶಿಸಿ ಮಾಡಬೇಕಾದ ಬದಲಾವಣೆಗಳನ್ನು ತಿಳಿಸಿ ಕಾರ್ಯರೂಪಕ್ಕೆ ತರುವಂತೆ ನೋಡಿಕೊಳ್ಳಬೇಕು. ದಶರಥನಿಗೆ ಬಹುಕಾಲದವರೆಗೂ ಮಕ್ಕಾಳಾಗಿಲ್ಲದ ಕಾರಣದಿಂದ ಆತ ತನ್ನ ಮಂತ್ರಿಗಳನ್ನು ಪುರೋಹಿತರಾದ ವಶಿಷ್ಠ, ವಾಮದೇವರನ್ನೂ ಕರೆಯಿಸಿ ಅವರಲ್ಲಿ ಪರಿಹಾರ ಕೇಳಿದಾಗ, ಅವರು ರಾಜನಿಗೆ ಅಶ್ವಮೇಧ ಯಾಗವನ್ನು ಮಾಡಲು ಸಲಹೆನೀಡುತ್ತಾರೆ. ಅದಕ್ಕೆ ದೊರೆ ಒಪ್ಪಿಗೆ ಸೂಚಿಸಿಯೂ ಆಗುತ್ತದೆ. ಆದರೆ ಅಲ್ಲೇ ಇದ್ದ ಸುಮಂತ್ರನಿಗೆ ಈ ಸಲಹೆ ಪೂರ್ತಿ ಮನಸ್ಸಿಗೆ ಬರಲಿಲ್ಲ. ಆತ ರಾಜನ ಅಂತಃಪುರಕ್ಕೆ ಸಾಯಂಕಾಲ ಬಂದು ರಾಜನಿಗೆ ಮಹತ್ವದ ವಿಷಗಳ ಕುರಿತು ಹೇಳುತ್ತಾನೆ.

ಸುಮಂತ್ರನ ಪಾತ್ರ ಮಹಾಭಾರತದ ವಿದುರನ ಪಾತ್ರವನ್ನು ಹೋಲುತ್ತದೆ. ಆತನಿಗೂ ವಿದುರನಂತೆ ಮಹಾನ್ ಋಷಿಗಳ ಸಂಪರ್ಕವಿತ್ತು. ಅವರಲ್ಲಿ ತನ್ನ ವಯಕ್ತಿಕವಾದ ವಿಷಯಗಳನ್ನು ಕೇಳುವುದಕ್ಕಿಂತ ಆತ ರಾಜ್ಯದ ಕಲ್ಯಾಣದ ವಿಷಯಗಳನ್ನು ಕೇಳುತ್ತಿದ್ದ. ಅಯೋಧ್ಯೆಯ ಅರಸನಿಗೆ ಮಕ್ಕಳಾಗಿಲ್ಲದ ವಿಷಯಗಳ ಕುರಿತು ಸುಮಂತ್ರನಿಗೂ ಚಿಂತೆ ಆಗಿತ್ತು. ಆ ಕುರಿತು ಆತ ಪರಿಹಾರಕ್ಕಾಗಿ ಅನೇಕ ಋಷಿಗಳನ್ನು ಬೇಡಿಕೊಳ್ಳುತ್ತಿದ್ದ. ಒಂದುಸಲ ಸುಮಂತ್ರ ಮಹಾತ್ಮರಾದ ಸನತ್ಕುಮಾರ ಋಷಿಗಳನ್ನು ಇನ್ನಿತರ ಮುನಿಗಳ ಸಮ್ಮುಖದಲ್ಲಿ ಭೇಟಿಯಾಗಿ ರಾಜನಿಗೆ ಮಕ್ಕಳಾಗುವಂತೆ ಬೇಡಿಕೊಂಡ. ಅದಕ್ಕೆ ಅವರು ವಿಭಾಂಡಕ ಮುನಿಯ ಮಗನಾದ ಋಷ್ಯಶೃಂಗನ ವಿಚಾರವನ್ನು ಹೇಳಿ, ಆತನ ಚರಿತ್ರೆಯನ್ನು ಅಮಾತ್ಯನಿಗೆ ವಿವರಿಸುತ್ತಾರೆ. ಋಷ್ಯಶೃಂಗನನ್ನು ಹೆಣ್ಣುಗಳ ಮೋಹದಲ್ಲಿ ಕೆಡಹಿ ತನ್ನ ರಾಜ್ಯಕ್ಕೆ ಕರೆಯಿಸಿಕೊಂಡ ರೋಮಪಾದ ರಾಜ ತನ್ನ ಮಗಳಾದ ಶಾಂತಾದೇವಿಯನ್ನು ಕೊಟ್ಟು ಮದುವೆಮಾಡಿದ್ದಾನೆ. ಸುಮಂತ್ರನ ನಿಸ್ಪ್ರಹ ಪ್ರಾರ್ಥನೆಗೆ ಮೆಚ್ಚಿದ ಸನತ್ಕುಮಾರರು ಧಶರಥನಿಗೆ ಮಕ್ಕಳಾಗಬೇಕೆಂದಿದ್ದರೆ ಆತ ಅಂಗರಾಜ್ಯಕ್ಕೆ ಹೋಗಿ ರೋಮಪಾದನನ್ನು ಒಲಿಸಿ ಋಷ್ಯಶೃಂಗನನ್ನು ಅಯೋಧ್ಯೆಗೆ ಕರೆಯಿಸಿ ಆತನಿಂದ ಪುತ್ರಕಾಮೇಷ್ಥಿ ಯಾಗವನ್ನು ಮಾಡಿಸಿದರೆ ನಾಲ್ವರು ಮಕ್ಕಳಾಗುವರು ಎಂದು ಉಪಾಯವನ್ನೂ ಸಹ ಹೇಳಿದ್ದ. ಈ ವಿಷಯವನ್ನು ಸೂಕ್ತ ಸಮಯದಲ್ಲಿ ದಶರಥನಿಗೆ ಹೇಳಬೇಕೆಂದುಕೊಂಡು ಅದು ತನಕ ಹೇಳಿರಲಿಲ್ಲ.

ದೇವಗುಟ್ಟು, ಋಷಿ ಗುಟ್ಟುಗಳನ್ನು ಏಕಾಏಕೀ ಬಹಿರಂಗಪಡಿಸಬಾರದೆಂದು ಶಾಸ್ತ್ರ ಹೇಳುತ್ತದೆ. ಕಾಲವಲ್ಲದ ಕಾಲದಲ್ಲಿ ಅದನ್ನು ಹೇಳಿದರೆ ಅದು ಫಲ ನೀಡದೇ ಹೋಗಬಹುದು. ಅದೂ ಅಲ್ಲದೇ ಮನುಷ್ಯ ಪ್ರಯತ್ನ ಮೀರಿದಾಗ ಮಾತ್ರವೇ, ದೇವತೆಗಳಲ್ಲಿ ಅನುಗ್ರಹಕ್ಕಾಗಿ ಕೋರಬೇಕು. ಮಕ್ಕಳಾಗಲು ಅಶ್ವಮೇಧ ಯಾಗವನ್ನು ಮಾಡುವಂತೆ ವಶಿಷ್ಠರು ಸಲಹೆ ನೀಡಿದಾಗ ಸಭೆಯ ಮರ್ಯಾದೆಯ ದೃಷ್ಟಿಯಿಂದ ಅಲ್ಲಿ ಸುಮಂತ್ರ ಏನೂ ಹೇಳಲಿಲ್ಲ. ಮಂತ್ರಾಲೋಚನೆಯ ನೆಪದಲ್ಲಿ ಅಂತಃಪುರಕ್ಕೆ ಬಂದು ಅರಸನಿಗೆ ತಾನು ರಾಜನ ಸಲುವಾಗಿ ಸನತ್ಕುಮಾರರಲ್ಲಿ ಮಕ್ಕಳಾಗುವಂತೆ ವರಬೇಡಿದುದರ ವಿಷಯವನ್ನು ಬಹಿರಂಗಪಡಿಸುತ್ತಾನೆ. ಸನತ್ಕುಮಾರರೇ ಸಲಹೆ ನೀಡಿದಂತೆ ಪುತ್ರಕಾಮೇಷ್ಟಿಯಾಗವನ್ನು ಮಾಡಲು ಪ್ರೇರೇಪಿಸುತ್ತಾನೆ. ಪುತ್ರಕಾಮೇಷ್ಟಿಯಾಗ ಅಥರ್ವ ಮಂತ್ರಕ್ಕೆ ಸಂಬಂಧಿಸಿದುದರಿಂದ ಸಭೆಯಲ್ಲಿ ನೇರವಾಗಿ ಹೇಳಕೂಡದು ಎನ್ನುವ ಪ್ರಜ್ಞೆ ಸುಮಂತ್ರನಲ್ಲಿತ್ತು. ಪುರೋಹಿತರಾದ ವಶಿಷ್ಠರು ಆಸ್ಥಾನದಲ್ಲಿ ಇರುವಾಗ ಇನ್ನೊಬ್ಬ ಪುರೋಹಿತರನ್ನು ಕರೆಯಿಸಿ ಯಾಗ ಮಾಡುವ ಸಲಹೆ ನೀಡಿದರೆ ಅದರಿಂದ ವಶಿಷ್ಠರಿಗೆ ಅವಮಾನ ಆಗಿ ಕೋಪಿಸಿಕೊಳ್ಳಬಹುದೆನ್ನುವ ಆತಂಕವೂ ಮನೆಮಾಡಿತ್ತು.

ಈ ಹಿಂದೆ ವಶಿಷ್ಠ ಪರಂಪರೆಯ ಹಿರಿಯರು ಹರಿಶ್ಚಂದ್ರನ ತಂದೆ ಸತ್ಯವ್ರತ(ತ್ರಿಶಂಕು)ನಿಗೆ ಇನ್ನೊಬ್ಬ ಪುರೋಹಿತರನ್ನು ಕರೆದು ಯಾಗ ಮಾಡಿಸುವೆ ಎಂದಾಗ ಶಾಪ ಕೊಟ್ಟಿದ್ದ. ಈ ಕಾರಣದಿಂದ ಮಹಾರಾಜನೇ ಋಷ್ಯಶೃಂಗನನ್ನು ಕರೆತರುವ ವಿಚಾರದಲ್ಲಿ ವಶಿಷ್ಠರನ್ನು ಒಲಿಸಲಿ ಎನ್ನುವ ವಿವೇಕದ ನಡತೆ ಅವನಲ್ಲಿತ್ತು. ವಿದ್ವಾಂಸನೂ ಎಲ್ಲಾ ಕಾರ್ಯಗಳಲ್ಲಿ ಶುದ್ಧನಾಗಿರುವವನು, ದೇಶಿಯನು (ಜಾನಪದಃ), ತೀಕ್ಷ್ಣವಾದ ಬುದ್ಧಿಯುಳ್ಳವ (ಕೃತಪ್ರಜ್ಞಶ್ಚ) ಆದ ಮಂತ್ರಿಯನ್ನು ಅರಸ ಹೊಂದಿರಬೇಕೆನ್ನುವ ಶೃತಿವಾಕ್ಯಕ್ಕೆ ನಿದರ್ಶನನಾಗಿ ಸುಮಂತ್ರ ಇದ್ದ. ಸುಮಂತ್ರನ ಸಲಹೆಯನ್ನು ಸ್ವೀಕರಿಸಿದ ರಾಜ ವಶಿಷ್ಠರ ನೇತ್ರತ್ವದಲ್ಲಿ ಅಶ್ವಮೇಧ ಯಾಗವನ್ನೂ ಆ ನಂತರ ಋಷ್ಯಶೃಂಗರ ಅದ್ವರ್ಯದಲ್ಲಿ ಪುತ್ರಕಾಮೇಷ್ಟಿ ಯಾಗವನ್ನೂ ನಡೆಸಲು ವಶಿಷ್ಥರಿಂದ ಅನುಮತಿ ಪಡೆಯುತ್ತಾನೆ. ನಂತರ ದಶರಥನ ಪರಿವಾರದೊಡನೆ ಅಂಗದೇಶಕ್ಕೆ ಹೋಗಿ ರೋಮಪಾದನೊಡನೆ ಋಷ್ಯಶೃಂಗನನ್ನು ಯಾಗಕ್ಕಾಗಿ ಕರೆತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವ ಸುಮಂತ್ರನೇ.

ಮಂತ್ರಾಲೋಚನಾ ಪ್ರವೀಣ

ಸುಮಂತ್ರನಲ್ಲಿ ಮದ ಮತ್ಸರ ಕ್ರೋಧಗಳು ಮನೆಮಾಡಿರಲಿಲ್ಲ. ಅಯೋಧ್ಯೆಯಲ್ಲಿ ಮಂತ್ರಿಗಳಾಗುವವರನ್ನು ಕಾಯಕ, ವಾಚಕ, ಮಾನಸಿಕ, ಕರ್ಮಕೃತ ಮತ್ತು ಸಂಕೇತಜನಿತ ಎನ್ನುವ ಐದು ಅಂಗಗಳಿಂದ ಪರೀಕ್ಷಿಸಿ ತೇರ್ಗಡೆಯಾದವರನ್ನು ಮಂತ್ರಿಗಳಾಗಿ ತೆಗೆದುಕೊಳ್ಳಲಾಗುತ್ತಿತ್ತು. ಸುಮಂತ್ರ ಈ ಎಲ್ಲಾ ವಿಷಯಗಳಲ್ಲಿ ರಾಜನ ಮೊದಲ ಆಯ್ಕೆಯಾಗಿದ್ದ. ಸುಮಂತ್ರನೆನ್ನುವುದು ಈತನಿಗೆ ಅನ್ವರ್ಥನಾಮವಾಗಿದ್ದಿರಬೇಕು. ಮಂತ್ರಕ್ಕೆ ಸಚಿವ ಎನ್ನುವ ಅರ್ಥವಿದೆ. “ಸುಮಂತ್ರ” ಎಂದರೆ ಒಳ್ಳೆಯ ಸಲಹೆಯನ್ನು ಕೊಡುವವ ಎಂದು ಆಗುತ್ತದೆ. ಸುಮಂತ್ರ ಮಂತ್ರಾಲೋಚನೆಯಲ್ಲಿ ನಿಪುಣನಾಗಿದ್ದ. ಕುಮಾರವ್ಯಾಸನ ಭಾರತದಲ್ಲಿ ರಾಜನಿಗೆ ನೆರವಾಗಲು ಮಂತ್ರಾಲೋಚನೆಯಲ್ಲಿ ಸಮರ್ಥರಾದ ಸಚಿವರಿರಬೇಕು ಎನ್ನುತ್ತಾನೆ.

ಮಂತ್ರವುಳ್ಳವನವನೆ ಹಿರಿಯನು
ಮಂತ್ರವುಳ್ಳವನವನೆ ರಾಯನು
ಮಂತ್ರವುಳ್ಳವನವನೆ ಸಚಿವ ನಿಯೋಗಿಯೆನಿಸುವನು |
ಮಂತ್ರವಿಲ್ಲದ ಬರಿಯ ಬಲು ತಳ
ತಂತ್ರದಲಿ ಫಲವಿಲ್ಲವೈ ಸ್ವಾ
ತಂತ್ರವೆನಿಸಲ್ಕರಿವುದೇ ಭೂಪಾಲ ಕೇಳೆಂದ || ಸ. ಸಂ.1-49 ||

ರಾಜನಾದವ ಇಂಥ ಗುಣಲಕ್ಷಣಗಳನ್ನು ಹೊಂದಿರಬೇಕು, ಅಥವಾ ಅಂತವರನ್ನು ತನ್ನ ಆಪ್ತರನ್ನಾಗಿ ಆಯಾ ಹುದ್ಧೆಗಳಲ್ಲಿ ನಿಯುಕ್ತರನ್ನಾಗಿಸಿಕೊಳ್ಳಬೇಕು ಎನ್ನುವ ತಾತ್ಪರ್ಯ ಇದರಲ್ಲಿದೆ. ಸುಮಂತ್ರ ಈ ಎಲ್ಲಾ ಗುಣಗಳ ಸಾಕಾರ ಮೂರ್ತಿಯಾಗಿದ್ದ. ಅಯೋಧ್ಯೆಯಲ್ಲಿ ರಾಮನಿಗೆ ಪಟ್ಟಾಭಿಷೇಕವನ್ನು ನಡೆಸಲು ದಶರಥ ಹೂಡಿದ್ದ ಮಂತ್ರಾಲೋಚನೆ ಬಲು ಪ್ರಸಿದ್ಧ. ಅಲ್ಲಿ ಆತ ವಶಿಷ್ಠ, ವಾಮದೇವ ಮತ್ತು ಸುಮಂತ್ರನನ್ನು ಸೇರಿಸಿ ರಾಮನಿಗೆ ಯುವರಾಜ ಪಟ್ಟಾಭಿಷೇಕವನ್ನುಮಾಡುವ ತನ್ನ ಮನಸ್ಸಿನ ಆಶಯವನ್ನು ವ್ಯಕ್ತಪಡಿಸುತ್ತಾನೆ. ರಾಜನಿಗೆ ಅಶ್ವಪತಿಗೆ ಕೊಟ್ಟ ಮಾತು ತಪ್ಪಿಸಬೇಕಾಗಿದೆ. ಅದಕ್ಕೆ ಮಂತ್ರಿಗಳ ಒಪ್ಪಿಗೆ ಪಡೆದು ನಿಧಾನಕ್ಕೆ ಸಾಮಂತರ ಮತ್ತು ಪ್ರಜೆಗಳ ಒಪ್ಪಿಗೆಯನ್ನು ಪಡೆಯುವ ಹಂತದಲ್ಲಿ ಕರೆದ ಮಂತ್ರಾಲೋಚನೆ ಅದು. ಮಂತ್ರಾಲೋಚನೆಯ ವಿಷಯದಲ್ಲಿ ರಾಜ ಕೊಡಬೇಕಾದ ಮಹತ್ವವನ್ನು ಮಹಾಭಾರತದ ಶಾಂತಿಪರ್ವಲ್ಲಿ ವಿವರವಾಗಿ ಬಂದಿದೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಆತುರಗೆಟ್ಟು ಸ್ತಿಮಿತ ಕಳೆದುಕೊಂಡವನ ವಿಲಾಪ

“ಮನ್ತ್ರಸಂಹನನೋ ರಾಜಾ ಮನ್ತ್ರಾಙ್ಗಾನೀತರೇ ಜನಾಃ – ಮಂತ್ರಾಲೋಚನೆಯೇ ರಾಜನ ದೇಹವಾಗಿರುತ್ತದೆ. ಮಂತ್ರಿಗಳು ರಾಜರಹಸ್ಯಕ್ಕೆ ಅಂಗಭೂತರಾಗಿರುತ್ತಾರೆ” ಮಂತ್ರಾಲೋಚನೆಯ ನಡೆಯುತ್ತಿರುವಾಗ ಆ ಸ್ಥಳದ ಸುತ್ತಮುತ್ತಲೂ ವಾಮನರೂ, ಕುಬ್ಜರೂ, ಸ್ತ್ರೀಯರೂ, ನಪುಂಸಕರೂ ಸುಳಿಯದಂತೆ ಎಚ್ಚರಿಕೆ ವಶಿಸಬೇಕೆಂದಿದೆ. ರಾಜ ಅಶ್ವಪತಿಗೆ ನೀಡಿದ ವರದ ಗುಟ್ಟು ತಿಳಿದಿರುವುದು ಅಲ್ಲಿ ಸೇರಿದ್ದ ಸುಮಂತ್ರನಿಗೆ ಮಾತ್ರ. ಹಾಗಾಗಿ ಅದನ್ನು ಮರೆಮಾಚಿ ರಾಮನಿಗೆ ಪಟ್ಟಕಟ್ಟುವ ವಿಷಯವನ್ನು ರಾಜನೇ ಪ್ರಸ್ತಾಪ ಮಾಡುವಾಗ ಅದನ್ನು ಮೌನವಾಗಿ ಅನುಮೋದಿಸುವವನು ಸುಮಂತ್ರ. ಇದರ ವಿವರವನ್ನು ದಶರಥನ ಭಾಗದಲ್ಲಿ ನೀಡಲಾಗಿದೆ. ಆನಂತರದಲ್ಲಿ ರಾಮನಿಗೆ ಅಯೋಧ್ಯೆಯ ಅಧಿಪತಿಯಾಗಿ ಪಟ್ಟಗಟ್ಟುವ ನಿರ್ಣಯವನ್ನು ತಿಳಿಸಲು ಕರೆತರಲು ಹೋಗುವುದೂ ಸಹ ಸುಮಂತ್ರನೇ. ರಾಜ ಸಭೆಯ ನಂತರ ಕೂಡಲೇ ದಶರಥ ಸುಮಂತ್ರನನ್ನು ಕರೆದು ಮಂತ್ರಾಲೋಚನೆ ಮಾಡುತ್ತಾನೆ. ರಾಜನಿಗೆ ಎಲ್ಲಿ ವಿಘ್ನಗಳು ಬಂದುಬಿಡುವವೋ ಎನ್ನುವ ಹೆದರಿಕೆ ಇದ್ದಿರಬೇಕು. ಆ ಕಾರಣಕ್ಕಾಗಿ ಇಬ್ಬರೂ ಸಮಾಲೋಚಿಸಿ ಮತ್ತೊಮ್ಮೆ ರಾಮನನ್ನು ದಶರಥನ ಅಂತಃಪುರಕ್ಕೆ ಕರೆತರಲು ಸುಮಂತ್ರನೇ ಹೋಗುತ್ತಾನೆ. ದಶರಥ ರಾಮನಲ್ಲಿ “ಭವನ್ತಿ ಬಹುವಿಘ್ನಾನಿ ಕಾರ್ಯಾಣ್ಯೇವಂವಿಧಾನಿ ಹಿ” ಎನ್ನುವ ಮೂಲಕ ಆತನ ಪಟ್ಟಾಭಿಷೇಕದ ವಿಷಯದಲ್ಲಿ ತನಗಿರುವ ಆತಂಕವನ್ನು ತೋಡಿಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ರಾಜನ ಸನಿಹದಲ್ಲಿದ್ದವ ಸುಮಂತ್ರ ಮಾತ್ರ. ರಾಮಾಯಣ ಮಹಾಕಾವ್ಯದಲ್ಲಿ ಸುಮಂತ್ರ ಮಾತನಾಡುವುದು ಬಲು ಕಡಿಮೆ. ಆದರೆ ಆತನ ಕಾರ್ಯದಕ್ಷತೆ ಪ್ರತಿಯೊಂದು ಸಂದರ್ಭಗಳಲ್ಲಿಯೂ ಎದ್ದು ಕಾಣುತ್ತದೆ.

ಸುಮಂತ್ರನ ರಾಜನಿಷ್ಠೆ ಮತ್ತು ಭಾವಪರವಶತೆಯ ಕುರಿತು ಮುಂದಿನ ಭಾಗದಲ್ಲಿ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಗೌತಮ ಬುದ್ಧ; ಭಾರತೀಯ ತತ್ತ್ವಶಾಸ್ತ್ರದ ಮುನ್ನುಡಿ

Continue Reading

ಅಂಕಣ

ಸೈಬರ್‌ ಸೇಫ್ಟಿ ಅಂಕಣ: ಭಾರತದ ಭವಿಷ್ಯಕ್ಕೆ ಬ್ಲಾಕ್‌ಚೈನ್‌ನ ಬೆನ್ನೆಲುಬು

ತಂತ್ರಜ್ಞಾನದಲ್ಲಿ ಆಗಲಿರುವ ಭವಿಷ್ಯದ ಬದಲಾವನೆಗಳು ಬ್ಲಾಕ್‌ಚೈನ್‌ ತಂತ್ರಜ್ಞಾನವನ್ನು ಅಧರಿಸಿರುತ್ತವೆ. ಬ್ಲಾಕ್‌ಚೈನ್‌ಗಳು ಕ್ರಿಪ್ಟೋಗ್ರಫಿ ಮೂಲಕ ಒಂದಕ್ಕೊಂದು ಲಿಂಕ್ ಮಾಡಲಾದ ಬ್ಲಾಕ್‌ಗಳಲ್ಲಿ ಡೇಟಾವನ್ನು ಸಂಗ್ರಹಿಸುತ್ತವೆ. ಇದರ ಇನ್ನಷ್ಟು ವಿವರ ಇಲ್ಲಿದೆ.

VISTARANEWS.COM


on

ಸೈಬರ್‌ ಸೇಫ್ಟಿ ಅಂಕಣ cyber safety column 2
Koo
cyber safety logo

ಸೈಬರ್‌ ಸೇಫ್ಟಿ ಅಂಕಣ: ವಿಶ್ವದಾದ್ಯಂತ ತಂತ್ರಜ್ಞಾನದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗುತ್ತಿವೆ. ಅವುಗಳನ್ನು A, B, C… ಎಂದು ಪಟ್ಟಿ ಮಾಡುವುದಾದರೆ artificial intelligence, (ಕೃತಕ ಬುದ್ಧಿವಂತಿಕೆ) blockchain (ಬ್ಲಾಕ್ ಚೈನ್‌) ಮತ್ತು cloud computing (ಕ್ಲೌಡ್‌ ಕಂಪ್ಯೂಟಿಂಗ್) ಎಂದು ಪ್ರಮುಖವಾಗಿ ವಿಂಗಡಿಸಬಹುದು. ಬ್ಲಾಕ್‌ಚೈನ್‌ ಒಂದು ಹಂಚಿಕೆಯ (distributed) ಡೇಟಾಬೇಸ್ ಆಗಿದ್ದು ನಾವು ಬಳಸುತ್ತಿರುವ ಕೇಂದ್ರೀಕೃತ (centralised) ಕ್ಲೈಂಟ್ – ಸರ್ವರ್ ಡೇಟಾಬೇಸ್‌ಗಿಂತ ಮಾಹಿತಿಯನ್ನು ಸಂಗ್ರಹಿಸುವ ರೀತಿಯಲ್ಲಿ ಭಿನ್ನವಾಗಿರುತ್ತದೆ.

ಬ್ಲಾಕ್‌ಚೈನ್‌ಗಳು ಕ್ರಿಪ್ಟೋಗ್ರಫಿ ಮೂಲಕ ಒಂದಕ್ಕೊಂದು ಲಿಂಕ್ ಮಾಡಲಾದ ಬ್ಲಾಕ್‌ಗಳಲ್ಲಿ ಡೇಟಾವನ್ನು ಸಂಗ್ರಹಿಸುತ್ತವೆ. ಇದು ಪಿಯರ್-ಟು-ಪಿಯರ್ ನೆಟ್ವರ್ಕಿನಲ್ಲಿ ಕಾರ್ಯ ನಿರ್ವಹಿಸುತ್ತದೆ. ವಿವಿಧ ರೀತಿಯ ಮಾಹಿತಿಯನ್ನು ಬ್ಲಾಕ್‌ಚೈನ್‌ನಲ್ಲಿ ಸಂಗ್ರಹಿಸಬಹುದು. ಆದರೆ ವಹಿವಾಟುಗಳನ್ನು ದಾಖಲಿಸುವ ಸಾಮಾನ್ಯ ಲೆಡ್ಜರ್‌ನಂತೆ ಹೆಚ್ಚು ಬಳಕೆಯಾಗುತ್ತಿದೆ. ಎಲ್ಲಾ ಬ್ಲಾಕ್‌ಚೈನ್‌ಗಳು DLTಗಳೆ. ಆದರೆ ಎಲ್ಲಾ DLT ಗಳು ಬ್ಲಾಕ್‌ಚೈನ್‌ ಅಲ್ಲ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿನ ಸರ್ಕಾರಿ ಸಂಸ್ಥೆಯಾದ ಭಾರತದ ರಾಷ್ಟ್ರೀಯ ಮಾಹಿತಿ ಕೇಂದ್ರ (ನ್ಯಾಷನಲ್‌ ಇನ್‌ಫರ್‌ಮೆಟಿಕ್ಸ್‌ಸೆಂಟರ್‌ – NIC) 8 ಮಿಲಿಯನ್ ಪರಿಶೀಲಿಸಬಹುದಾದ ಸರ್ಕಾರ ನೀಡಿದ ದಾಖಲೆಗಳನ್ನು ಹೋಸ್ಟ್ ಮಾಡುತ್ತಿದೆ ಎಂದು ಇತ್ತೀಚೆಗೆ ವರದಿ ಮಾಡಿದೆ.

NIC ತನ್ನ ಬ್ಲಾಕ್‌ಚೈನ್ ಉಪಕ್ರಮಗಳನ್ನು ಹೈಲೈಟ್ ಮಾಡಲು ಹೊಸ ವೆಬ್‌ಸೈಟ್ ಅನ್ನು ಪ್ರಾರಂಭಿಸಿದೆ. ಶಿಕ್ಷಣ, ಆಸ್ತಿ, ನ್ಯಾಯಾಂಗ ಮತ್ತು ಔಷಧ ಲಾಜಿಸ್ಟಿಕ್ಸ್‌ನಂತಹ ಕ್ಷೇತ್ರಗಳನ್ನು ಒಳಗೊಂಡಿರುವ ಸುಮಾರು 7.93 ಮಿಲಿಯನ್ ದಾಖಲೆಗಳು ಈಗಾಗಲೇ ಬ್ಲಾಕ್‌ಚೈನ್‌ ನೆಟ್ವರ್ಕಿಗೆ ಸ್ಥಳಾಂತರಗೊಂಡಿದೆ.

ಭಾರತದಲ್ಲಿ, ಉತ್ಪನ್ನಗಳ ಅಭಿವೃದ್ಧಿಯು ಪ್ರಾಥಮಿಕವಾಗಿ ಮೂರು ಬ್ಲಾಕ್‌ಚೈನ್ ಪ್ಲಾಟ್‌ಫಾರ್ಮ್‌ಗಳನ್ನು ಅವಲಂಬಿಸಿದೆ: ಹೈಪರ್ಲೆಡ್ಜರ್ ಫ್ಯಾಬ್ರಿಕ್, ಹೈಪರ್ಲೆಡ್ಜರ್ ಸಾವ್ಟೂತ್ ಮತ್ತು ಎಥೆರಿಯಮ್. ದೇಶವು ಪ್ರಸ್ತುತ ಐದು ಬ್ಲಾಕ್‌ಚೈನ್ ಉತ್ಪನ್ನಗಳನ್ನು ಬಳಸಿಕೊಳ್ಳುತ್ತದೆ: ಪ್ರಮಾಣಪತ್ರ ಸರಪಳಿ, ಡಾಕ್ಯುಮೆಂಟ್ ಚೈನ್, ಡ್ರಗ್ ಲಾಜಿಸ್ಟಿಕ್ಸ್ ಚೈನ್, ನ್ಯಾಯಾಂಗ ಸರಪಳಿ ಮತ್ತು ಆಸ್ತಿ ಸರಪಳಿ.

ಆರು ವಿಭಿನ್ನ ರಾಜ್ಯಗಳ ದಾಖಲೆಗಳು ಮತ್ತು ಸರ್ಕಾರಿ ಇಲಾಖೆಗಳಾದ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್, ಗ್ರಾಹಕ ವ್ಯವಹಾರಗಳ ಸಚಿವಾಲಯ ಮತ್ತು ನ್ಯಾಯ ಸಚಿವಾಲಯದ ಬಹುತೇಕ ದಾಖಲೆಗಳು ಈಗಾಗಲೇ ಬ್ಲಾಕ್‌ಚೈನ್‌ ನೆಟ್ವರ್ಕಿನಲ್ಲಿ ಅಳವಡಿಸಲ್ಪಟ್ಟಿದೆ.

ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಇಲಾಖೆಗಳು ಆಸ್ತಿ ಮಾಲೀಕತ್ವ, ಜನನ ಮತ್ತು ಮರಣ ಪ್ರಮಾಣಪತ್ರಗಳಿಗಾಗಿ ಪರಿಶೀಲನಾ ಸೇವೆಗಳನ್ನು ಜಾರಿಗೆ ತಂದಿವೆ, ಜೊತೆಗೆ ಔಷಧಿಗಳು ಮತ್ತು ಶೈಕ್ಷಣಿಕ ಪ್ರಮಾಣಪತ್ರಗಳಿಗೆ ಪೂರೈಕೆ ಸರಪಳಿ ನಿರ್ವಹಣಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ.

ಹೆಚ್ಚುವರಿಯಾಗಿ, ಭಾರತವು ಭೂ ದಾಖಲೆಗಳು, ರಕ್ತ ಬ್ಯಾಂಕುಗಳು, ಟ್ರ್ಯಾಕಿಂಗ್ ಸರಕು ಮತ್ತು ಸೇವಾ ತೆರಿಗೆ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಮೀಸಲಾಗಿರುವ ಪ್ರೂಫ್-ಆಫ್-ಕಾನ್ಸೆಪ್ಟ್ ಬ್ಲಾಕ್‌ಚೈನ್‌ಗಳನ್ನು ಸಕ್ರಿಯವಾಗಿ ಅಭಿವೃದ್ಧಿಪಡಿಸುತ್ತಿದೆ.

ಬ್ಲಾಕ್‌ಚೈನ್‌ನಲ್ಲಿ ಭಾರತದ ಆಸಕ್ತಿ ಹೊಸದೇನಲ್ಲ. 2023 ರಲ್ಲಿ, ಭಾರತದ ಅತಿದೊಡ್ಡ ತೈಲ ಮತ್ತು ಅನಿಲ ಕಂಪನಿಗಳಲ್ಲಿ ಒಂದಾದ ಹಿಂದೂಸ್ತಾನ್ ಪೆಟ್ರೋಲಿಯಂ, ಬ್ಲಾಕ್‌ಚೈನ್ ಆಧಾರಿತ ಡಿಜಿಟಲ್ ರುಜುವಾತು ತಂತ್ರಜ್ಞಾನವನ್ನು ಅದರ ಖರೀದಿ ಆದೇಶ ವ್ಯವಸ್ಥೆಯಲ್ಲಿ ಸಂಯೋಜಿಸಲು ಬ್ಲಾಕ್‌ಚೈನ್ ಸಾಫ್ಟ್‌ವೇರ್ ಸಂಸ್ಥೆ ಜುಪಲ್ ಲ್ಯಾಬ್ಸ್‌ನೊಂದಿಗೆ ಸಹಕರಿಸಿತು.

ಬ್ಲಾಕ್‌ಚೈನ್ ಅನ್ನು ಅಳವಡಿಸಿಕೊಳ್ಳುವ ಹಿಂದಿನ ಉದ್ದೇಶ ಡಾಕ್ಯುಮೆಂಟ್ ಫೋರ್ಜರಿ ಸಮಸ್ಯೆಯನ್ನು ಪರಿಹರಿಸುವುದಾಗಿದೆ. ಬ್ಲಾಕ್‌ಚೈನ್ ಅನ್ನು ನಿಯಂತ್ರಿಸುವ ಮೂಲಕ, ಭಾರತ ಸರ್ಕಾರವು ಡಿಜಿಟಲ್ ಆಗಿ ಪರಿಶೀಲಿಸಬಹುದಾದ ಮತ್ತು ಬದಲಾಯಿಸಲಾಗದ ಪ್ರಮಾಣಪತ್ರಗಳನ್ನು ನೀಡುತ್ತದೆ, ದುರುದ್ದೇಶಪೂರಿತ ಜನರಿಂದ ಬದಲಾವಣೆ ಅಥವಾ ದುರುಪಯೋಗವನ್ನು ತಡೆಯುತ್ತದೆ. ನಕಲಿ ದಾಖಲೆಗಳ ಹಾವಳಿಗೆ ಪೂರ್ಣ ವಿರಾಮ ಹಾಕುವ ನಿಟ್ಟಿನಲ್ಲಿ ಇದು ಒಂದು ಉತ್ತಮ ಪ್ರಯತ್ನ.

ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ವಿವಿಧ ಕ್ಷೇತ್ರಗಳಲ್ಲಿ ಬಳಸಲು ಸ್ಥಾಪಿತವಾದ ಉತ್ಕೃಷ್ಟತೆಯ ಕೇಂದ್ರವು (CoE) ರಾಷ್ಟ್ರದಾದ್ಯಂತ ಒಂದು ಸಂಘಟಿತ, ಇಂಟರ್‌ಆಪರೇಬಲ್ ಬ್ಲಾಕ್‌ಚೈನ್ ಪರಿಸರ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಎಲ್ಲಾ ಪಾಲುದಾರರಿಗೆ ಹಂಚಿಕೆಯ ಕಲಿಕೆ, ಅನುಭವಗಳು ಮತ್ತು ಸಂಪನ್ಮೂಲಗಳಿಂದ ಪ್ರಯೋಜನ ಪಡೆಯಲು ಅನುವು ಮಾಡಿಕೊಡುತ್ತದೆ. ಉದ್ಯಮದ ತಿಳುವಳಿಕೆ ಮತ್ತು ಬ್ಲಾಕ್‌ಚೈನ್ ತಂತ್ರಜ್ಞಾನಗಳ ಅನುಷ್ಠಾನವನ್ನು ಅಭಿವೃದ್ಧಿಪಡಿಸಲು ಬ್ಲಾಕ್‌ಚೈನ್ ತಂತ್ರಜ್ಞಾನಗಳು, ಪ್ಲಾಟ್‌ಫಾರ್ಮ್‌ಗಳು, ಸ್ವತ್ತುಗಳು ಮತ್ತು ವ್ಯವಸ್ಥೆಗಳನ್ನು ಮುನ್ನಡೆಸುವುದರ ಮೇಲೆ CoE ಕೇಂದ್ರವು ಗಮನಹರಿಸುತ್ತದೆ.

ಈ CoE-BCT ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಎನ್‌ಐಸಿ ಕೈಗೊಂಡ ಯೋಜನೆಗಳಿಗೆ ಪರಿಹಾರಗಳನ್ನು ಪರೀಕ್ಷಿಸಲು ಮತ್ತು ಅಭಿವೃದ್ಧಿಪಡಿಸಲು ನವೀನ ಹೊಸ ಪರಿಹಾರಗಳಿಗೆ ಒಂದು ವೇದಿಕೆಯಾಗಿದೆ. ಪರಿಕಲ್ಪನೆಯ ಪುರಾವೆಯಿಂದ ಉತ್ಪಾದನೆಯವರೆಗೆ ನವೀನ ಬ್ಲಾಕ್‌ಚೈನ್ ಪರಿಹಾರಗಳ ಅಭಿವೃದ್ಧಿ ಮತ್ತು ಅನುಷ್ಠಾನವನ್ನು ಮುನ್ನಡೆಸಲು NIC CoE ತಂಡವು ಜಾಗತಿಕ ತಜ್ಞರೊಂದಿಗೆ ಸಹಕರಿಸುತ್ತದೆ. ಕೇಂದ್ರವು ಸಂಶೋಧನಾ-ನೇತೃತ್ವದ ಚಿಂತನೆಯ ನಾಯಕತ್ವವನ್ನು ಒದಗಿಸುತ್ತದೆ ಮತ್ತು ಸರ್ಕಾರಿ ಸೇವೆಗಳ ವಿತರಣೆಯನ್ನು ಸುಧಾರಿಸುವ ಕಡೆಗೆ ಆಡಳಿತದಲ್ಲಿನ ಸಂಕೀರ್ಣ ವ್ಯವಹಾರ ಸಮಸ್ಯೆಗಳನ್ನು ಪರಿಹರಿಸಲು ಕಾರ್ಯತಂತ್ರದ ಬ್ಲಾಕ್‌ಚೈನ್ ಬೆಳವಣಿಗೆಗಳನ್ನು ಚಾಲನೆ ಮಾಡುತ್ತದೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಸ್ಮಾರ್ಟ್‌ ಫೋನಿನ ಸ್ಮಾರ್ಟ್ ಬಳಕೆಗೆ 12 ಸೂತ್ರಗಳು

ಬ್ಲಾಕ್‌ಚೈನ್ ತಂತ್ರಜ್ಞಾನಗಳ ಬಳಕೆಯನ್ನು ಉತ್ತೇಜನ, ಬ್ಲಾಕ್‌ಚೈನ್ ಆಧಾರಿತ ಪರಿಹಾರಗಳ ಕ್ಷಿಪ್ರ ಅಳವಡಿಕೆ ಮತ್ತು ಆನ್-ಬೋರ್ಡಿಂಗ್ ಅನ್ನು ಸುಗಮಗೊಳಿಸುವುದು, ಸರ್ಕಾರ, ಸಾರ್ವಜನಿಕ ಮತ್ತು ಖಾಸಗಿ ವಲಯಗಳ ನಡುವೆ ಬಲವಾದ ಸಹಯೋಗವನ್ನು ಬೆಳೆಸುವುದು ಮತ್ತು ಇತ್ತೀಚಿನ ತಾಂತ್ರಿಕ ಮಾನದಂಡಗಳನ್ನು ಸುರಕ್ಷಿತವಾಗಿ ಮತ್ತು ವಿಶ್ವಾಸಾರ್ಹ ರೀತಿಯಲ್ಲಿ ಲಭ್ಯವಾಗುವಂತೆ ಮಾಡಲು NIC ಸಹಕರಿಸುತ್ತದೆ.

ಬ್ಲಾಕ್‌ಚೈನ್ ತಂತ್ರಜ್ಞಾನದ ಹೊರಹೊಮ್ಮುವಿಕೆಯು ಕೆಲವು ಡೇಟಾ ಚಟುವಟಿಕೆಗಳ ಬಗ್ಗೆ ನಂಬಿಕೆ ಮತ್ತು ಹೆಚ್ಚಿನ ಪಾರದರ್ಶಕತೆಯನ್ನು ಬೆಳೆಸಲು ಮತ್ತು ನಾಗರಿಕರೊಂದಿಗೆ ಘರ್ಷಣೆಯಿಲ್ಲದ ವಹಿವಾಟುಗಳನ್ನು ಒದಗಿಸಲು ಸರ್ಕಾರಕ್ಕೆ ಭರವಸೆ ನೀಡುತ್ತದೆ.

ತಂತ್ರಜ್ಞಾನದ ಜೊತೆಗೆ ತಂತ್ರಜ್ಞಾನದ ಸರಿಯಾದ ಅನ್ವಯಗಳನ್ನು ನಿರ್ಧರಿಸುವುದು ಅದರ ಅಳವಡಿಕೆಯನ್ನು ವೇಗಗೊಳಿಸಲು ನಿರ್ಣಾಯಕ ಅಂಶವಾಗಿದೆ. ಪ್ರಬುದ್ಧ ವ್ಯವಸ್ಥೆಗಳಂತೆ, ಸರ್ಕಾರಿ ಬ್ಲಾಕ್‌ಚೈನ್ ಕಾರ್ಯಕ್ರಮಗಳ ಬೆಂಬಲಿಗರು ಅಂತಹ ಹೂಡಿಕೆಗಳು ಹಣವನ್ನು ಉಳಿಸುತ್ತದೆ ಮತ್ತು ಈಗಾಗಲೇ ಉತ್ತಮ ಸ್ಥಿತಿಯಲ್ಲಿರುವ ಸೇವೆಗಳನ್ನು ಸುಧಾರಿಸುತ್ತದೆ ಎಂದು ಬಲವಾದ ಪುರಾವೆಗಳನ್ನು ವಿವಿಧ ಕ್ಷೇತ್ರಗಳಲ್ಲಿ ಅದರ ಉಪಯೋಗದ ಬಗ್ಗೆ use-cases ತಯಾರಿಸಿದ್ದಾರೆ.

ಈ ರೀತಿ ಬ್ಲಾಕ್‌ಚೈನ್‌ ತಂತ್ರಜ್ಞಾನ ಆಧರಿತ ಅಂತರ್ಜಾಲ ವ್ಯವಸ್ಥೆ ಹೆಚ್ಚಿನ ಸುರಕ್ಷತೆಯನ್ನು ಕೊಡುವುದರ ಮೂಲಕ ಸೈಬರ್‌ ದಾಳಿಗಳನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: 2024ರ ಸೈಬರ್‌ ಸೆಕ್ಯುರಿಟಿ ಟ್ರೆಂಡ್‌ಗಳು

Continue Reading

ಅಂಕಣ

ರಾಜಮಾರ್ಗ ಅಂಕಣ: ಮನರಂಜನೆಯ ಮಹಾ ದೊರೆ, ಕನಸುಗಾರನ ನಿರ್ಗಮನ

ರಾಜಮಾರ್ಗ ಅಂಕಣ: ಹಳ್ಳಿಯ ಬಡ ಕುಟುಂಬವೊಂದರಿಂದ ಬಂದು, ಯಾವುದೇ ಗಾಡ್ ಫಾದರ್ ಇಲ್ಲದೆ ಕೋಟಿಗಟ್ಟಲೆ ಮೌಲ್ಯದ ಮನರಂನಾ ಸಾಮ್ರಾಜ್ಯವನ್ನು ಸೃಷ್ಟಿಸಿದ ಧೀಮಂತ ರಾಮೋಜಿ ರಾವ್.‌ ಹೈದರಾಬಾದ್‌ನ ಫಿಲಂ ಸಿಟಿ ಅವರ ಕರ್ತೃತ್ವ ಶಕ್ತಿಯ ದ್ಯೋತಕ.

VISTARANEWS.COM


on

ರಾಜಮಾರ್ಗ ಅಂಕಣ ramoji rao
Koo

ಒಬ್ಬ ವ್ಯಕ್ತಿ – ನೂರಾರು ಸಂಸ್ಥೆಗಳು, ಅವರು ರಾಮೋಜಿ ರಾವ್

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಜಗತ್ತಿನ ಅತೀ ದೊಡ್ಡ ಫಿಲಂ ಸಿಟಿ (Film City) ಕಟ್ಟಿದವರು ಅವರು. ಹೆಸರು ರಾಮೋಜಿ ರಾವ್ (Ramoji Rao).

ನಿನ್ನೆ ಹೈದರಾಬಾದ್ (Hyderabad) ನಗರದಿಂದ ಬಂದ ಒಂದು ಶಾಕಿಂಗ್ ನ್ಯೂಸ್ ಭಾರತದ ಕೋಟಿ ಕೋಟಿ ಸಿನೆಮಾ ಅಭಿಮಾನಿಗಳನ್ನು ತಲ್ಲಣ ಮಾಡಿ ಹೋಯಿತು. ಅದು ರಾಮೋಜಿ ರಾವ್ ಅವರ ನಿರ್ಗಮನ.

ನನ್ನ ತರಬೇತಿ ಮತ್ತು ಭಾಷಣಗಳಲ್ಲಿ ಅತೀ ಹೆಚ್ಚು ಉಲ್ಲೇಖ ಪಡೆದ ಒಬ್ಬ ಲೆಜೆಂಡ್ ಇದ್ದರೆ ಅದು ರಾಮೋಜಿ ರಾವ್. ಅವರನ್ನು ಅವರದ್ದೇ ಸ್ಟುಡಿಯೋದಲ್ಲಿ ಭೇಟಿ ಮಾಡಿದ ಕ್ಷಣಗಳು ನನಗೆ ಪ್ರೇರಣಾದಾಯಕ. ಅವರು ತನ್ನ 87 ವರ್ಷಗಳ ಬದುಕಿನಲ್ಲಿ ಹುಟ್ಟು ಹಾಕಿದ್ದು ನೂರಾರು ಸಂಸ್ಥೆಗಳನ್ನು. ಅವರು ಬಿಟ್ಟು ಹೋದ ಸ್ಥಾನವನ್ನು ಬೇರೆ ಯಾರೂ ತುಂಬಲು ಸಾಧ್ಯವೇ ಇಲ್ಲ.

ಶೂನ್ಯದಿಂದ ಆರಂಭ

ಆಂಧ್ರಪ್ರದೇಶದ ಒಂದು ಸಣ್ಣ ಹಳ್ಳಿಯಿಂದ ಒಂದು ಕೃಷಿಕ ಕುಟುಂಬದಿಂದ ಬಂದವರು ರಾಮೋಜಿ ರಾವ್. ಓದಿದ್ದು ವಿಜ್ಞಾನ ಪದವಿ. ಬಾಲ್ಯದಲ್ಲಿ ಹೈದರಾಬಾದನ ಗಲ್ಲಿಗಳಲ್ಲಿ ಬೈಸಿಕಲ್ ಹಿಂದೆ ಉಪ್ಪಿನಕಾಯಿ ಭರಣಿಗಳನ್ನು ಕಟ್ಟಿಕೊಂಡು ಮನೆಮನೆಗೆ ಮಾರಿ ಒಂದಿಷ್ಟು ದುಡ್ಡು ಸಂಪಾದನೆ ಮಾಡಿದ ಅನುಭವ ಅವರದ್ದು. ಮುಂದೆ ಅದೇ ವ್ಯವಹಾರವು ‘ಪ್ರಿಯಾ ಉಪ್ಪಿನಕಾಯಿ ‘ ಎಂಬ ಉದ್ಯಮದ ರೂಪವನ್ನು ತಾಳಿತು. ಅವರು ಕೈ ಹಾಕಿದ ಪ್ರತೀ ಒಂದು ಕ್ಷೇತ್ರವನ್ನೂ ಉದ್ಯಮವಾಗಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ರಿಸ್ಕ್ ತೆಗೆದುಕೊಳ್ಳುವ ಶಕ್ತಿ, ಪಕ್ಕಾ ವ್ಯವಹಾರ ಪ್ರಜ್ಞೆ, ಮಾರ್ಕೆಟಿಂಗ್ ಕೌಶಲಗಳು, ಶಿಸ್ತಿನ ಜೀವನ ಕ್ರಮ ಮುಂದೆ ಅವರನ್ನು ಬಹಳ ಎತ್ತರಕ್ಕೆ ಬೆಳೆಸಿದವು. ಮುಂದೆ ರಮಾದೇವಿ ಎಂಬವರನ್ನು ಮದುವೆ ಆದ ನಂತರ ಅವರು ಹಿಂದೆ ತಿರುಗಿ ನೋಡಿದ್ದೇ ಇಲ್ಲ.

ಮಾರ್ಗದರ್ಶಿ ಚಿಟ್ ಫಂಡ್ ಸ್ಥಾಪನೆ

ಆಂಧ್ರಪ್ರದೇಶದ ಬ್ಯಾಂಕಿಂಗ್ ಸೆಕ್ಟರಗೆ ಸವಾಲಾಗಿ 1962ರಲ್ಲಿ ಮಾರ್ಗದರ್ಶಿ ಚಿಟ್ ಫಂಡ್ ಎಂಬ ಹಣಕಾಸು ಸಂಸ್ಥೆಯನ್ನು ಅವರು ಆರಂಭ ಮಾಡಿದರು. ಒಂದೊಂದು ರೂಪಾಯಿಯನ್ನೂ ಜಾಗ್ರತೆಯಿಂದ ಬಳಸುವ ಅವರ ಜಾಣ್ಮೆಯು ಆ ಸಂಸ್ಥೆಯನ್ನು ದಕ್ಷಿಣ ಭಾರತದ ಮಹೋನ್ನತ ಹಣಕಾಸು ಸಂಸ್ಥೆಯಾಗಿ ಮಾಡಿತು. ಇಂದು ಅದು ನೂರಾರು ಶಾಖೆಗಳ ಮೂಲಕ 10,000 ಕೋಟಿ ರೂ.
ಬಂಡವಾಳದ ಸಂಸ್ಥೆಯಾಗಿ ಬೆಳೆದು ನಿಂತಿದೆ.

ಮಾಧ್ಯಮದ ದೈತ್ಯ – ಈ ನಾಡು ಪತ್ರಿಕೆ

ಒಂದು ಉದ್ಯಮದಲ್ಲಿ ಬಂದ ಲಾಭವನ್ನು ಇನ್ನೊಂದು ಉದ್ಯಮದಲ್ಲಿ ತೊಡಗಿಸುವುದು ರಾಮೋಜಿ ರಾವ್ ಅವರ ಪಾಲಿಸಿ. ಸಾಲ ಮಾಡಿ ಬಿಸಿನೆಸ್ ಮಾಡಬಾರದು ಎಂದವರು ಹೇಳುತ್ತಿದ್ದರು. 1974ರಲ್ಲಿ ಅವರು ಆಂಧ್ರಪ್ರದೇಶದಲ್ಲಿ ʼಈ ನಾಡು’ (Eenadu news paper) ಎಂಬ ದಿನಪತ್ರಿಕೆಯನ್ನು ಆರಂಭ ಮಾಡಿದರು. ಅವರು ಪತ್ರಿಕೋದ್ಯಮದ ಯಾವ ಪಾಠವನ್ನೂ ಕಲಿತಿರಲಿಲ್ಲ. ಆದರೆ ಜನರಿಗೆ ಏನು ಬೇಕು ಎಂದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಕೆಲವೇ ವರ್ಷಗಳಲ್ಲಿ ಅದು ತೆಲುಗಿನ ನಂಬರ್ ಒನ್ ಪತ್ರಿಕೆ ಆಗಿ ಬೆಳೆಯಿತು. ಅದೀಗ 23 ಪುರವಣಿಗಳನ್ನು ಹೊಂದಿದ್ದು ಲಕ್ಷಾಂತರ ಓದುಗರನ್ನು ತಲುಪುತ್ತಿದೆ. ಎಲ್ಲಾ ಕಡೆಗಳಲ್ಲಿ ಮಿಂಚಿದ್ದು ರಾಮೋಜಿ ರಾವ್ ಅವರ ವ್ಯವಹಾರ ಕುಶಲತೆ ಮತ್ತು ದಣಿವರಿಯದ ದುಡಿಮೆ.

ರಾಜಮಾರ್ಗ ಅಂಕಣ ramoji rao 2

ನೂರಾರು ಸಂಸ್ಥೆಗಳು ಮತ್ತು ಉದ್ಯಮಗಳು

ಅವರು ಮಹಾ ಶಿಸ್ತಿನ ಮನುಷ್ಯ. ದಿನವೂ 18 ಘಂಟೆಗಳ ದುಡಿತ. ಒಂದು ನಿಮಿಷ ವ್ಯರ್ಥ ಮಾಡುವುದು ಅವರಿಗೆ ಇಷ್ಟ ಆಗುವುದಿಲ್ಲ. ಹರಟೆ, ಗಾಸಿಪ್ಸ್ ಇಲ್ಲವೇ ಇಲ್ಲ. ನೆಗೆಟಿವ್ ವ್ಯಕ್ತಿಗಳನ್ನು ಹತ್ತಿರ ಸೇರಿಸಿಕೊಳ್ಳುವುದೇ ಇಲ್ಲ. ಪರಿಣಾಮವಾಗಿ ಅವರು ಒಬ್ಬ ಯಶಸ್ವೀ ಉದ್ಯಮಿಯಾಗಿ ಎಮರ್ಜ್ ಆದರು. ಅವರ ಪತ್ನಿ ರಮಾದೇವಿ ಗಂಡನ ಬಲಗೈ ಆಗಿ ನಿಂತು ವ್ಯವಹಾರವನ್ನು ಬೆಳೆಸಿದರು. ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್ಸ್, ರಮಾದೇವಿ ಶಿಕ್ಷಣ ಸಂಸ್ಥೆಗಳು, ಕಲಾಂಜಲಿ ಶಾಪಿಂಗ್ ಮಾಲ್ಸ್, ಪ್ರಿಯಾ ಉಪ್ಪಿನಕಾಯಿ …..ಹೀಗೆ ಅವರು ನೂರಾರು ಉದ್ಯಮಗಳನ್ನು ಸ್ಥಾಪನೆ ಮಾಡಿದರು. ಎಲ್ಲವನ್ನೂ ಗೆಲ್ಲಿಸಿದರು.

ರಾಮೋಜಿ ಫಿಲ್ಮ್ ಸಿಟಿ – ಇದು ಮ್ಯಾಗ್ನಮೋಪಸ್!

ರಾಜಮಾರ್ಗ ಅಂಕಣ ramoji rao

ರಾಮೋಜಿ ರಾವ್ ಅವರನ್ನು ಇಂದು ನಾವು ಅಗತ್ಯವಾಗಿ ನೆನಪಿಸಿಕೊಳ್ಳಬೇಕಾದದ್ದು ಈ ಫಿಲ್ಮ್ ಸ್ಟುಡಿಯೋ ಮೂಲಕ. ಹೈದರಾಬಾದ್ ನಗರದ ಹೃದಯ ಭಾಗದಲ್ಲಿ 1666 ಎಕರೆ ಜಾಗವನ್ನು ಅವರು ಖರೀದಿಸಿ ಅದರಲ್ಲಿ ತನ್ನ ಎಲ್ಲ ಕನಸುಗಳನ್ನು ಧಾರೆ ಎರೆದರು. ಎತ್ತರವಾದ ಪರ್ವತಗಳು, ಧುಮ್ಮಿಕ್ಕುವ ಜಲಪಾತಗಳು, ವಿಸ್ತಾರವಾದ ಬೀದಿಗಳು, ಹಸಿರು ಹೊದ್ದು ಮಲಗಿದ ಮೈದಾನಗಳು, ದಟ್ಟವಾದ ಅರಣ್ಯಗಳು, ಅರಮನೆಗಳು, ದೇಗುಲಗಳು ಕೋಟೆಗಳು…..ಹೀಗೆ ಎಲ್ಲವನ್ನೂ ಕೃತಕವಾಗಿ ನಿರ್ಮಿಸಿದರು. ಒಂದು ಚಿತ್ರ ನಿರ್ಮಾಣಕ್ಕೆ ಏನೆಲ್ಲ ಬೇಕೋ (ಹೊರಾಂಗಣ, ಒಳಾಂಗಣ, ಬೆಳಕು, ಸ್ಟುಡಿಯೋ, ಚಿತ್ರೀಕರಣ ಘಟಕ, ಟೆಕ್ನಿಕಲ್ ಸ್ಟಾಫ್) ಎಲ್ಲವನ್ನೂ ಒದಗಿಸಿದರು. ಒಬ್ಬ ನಿರ್ಮಾಪಕ ಮತ್ತು ನಿರ್ದೇಶಕ ದುಡ್ಡು ಮತ್ತು ಸ್ಟೋರಿ ತೆಗೆದುಕೊಂಡು ಅಲ್ಲಿಗೆ ಬಂದರೆ ಇಡೀ ಸಿನಿಮಾ ಶೂಟ್ ಮಾಡಿ, ಎಡಿಟಿಂಗ್ ಮಾಡಿ, ಮ್ಯೂಸಿಕ್, ಕಲರಿಂಗ್, VFX ಮುಗಿಸಿ ಸಿನಿಮಾ ತೆಗೆದುಕೊಂಡು ಹೋಗುವ ವ್ಯವಸ್ಥೆ ಅಲ್ಲಿ ಅವರು ಮಾಡಿದರು!

ಅದರ ಪರಿಣಾಮವಾಗಿ ಭಾರತದ ಸಾವಿರಾರು ಸಿನೆಮಾಗಳು ಅಲ್ಲಿ ನಿರ್ಮಾಣವಾದವು. ಬಾಹುಬಲಿ ( ಭಾಗ 1 ಮತ್ತು 2), ಕೆಜಿಎಫ್ ( ಭಾಗ 1 ಮತ್ತು 2), ಕ್ರಿಶ್, ರಾಜಕುಮಾರ ಮೊದಲಾದ ಮಹೋನ್ನತ ಸಿನೆಮಾಗಳು ಶೂಟಿಂಗ್ ಆದದ್ದು ಇದೇ ಸ್ಟುಡಿಯೋ ಒಳಗೆ! ನೂರಾರು ತೆಲುಗು, ಕನ್ನಡ, ಹಿಂದೀ ಧಾರಾವಾಹಿಗಳು ಅಲ್ಲಿ ಹುಟ್ಟು ಪಡೆದವು.

ರಾಮೋಜಿ ರಾವ್ ಅವರೇ ʼಉಷಾಕಿರಣ ಮೂವೀಸ್’ ಎಂಬ ಚಿತ್ರ ನಿರ್ಮಾಣ ಸಂಸ್ಥೆ ಸ್ಥಾಪನೆ ಮಾಡಿ ನೂರಾರು ತೆಲುಗು, ತಮಿಳು, ಹಿಂದಿ, ಕನ್ನಡ ಸಿನಿಮಾಗಳನ್ನು ನಿರ್ಮಿಸಿದರು. ಸಿನೆಮಾ ಹಂಚಿಕೆ ಮಾಡಿದರು. ಆ ಸ್ಟುಡಿಯೋವನ್ನು ಒಂದು ಪ್ರವಾಸೀ ತಾಣವಾಗಿ ಕೂಡ ಅಭಿವೃದ್ಧಿ ಪಡಿಸಿದರು. ಈಗ ವರ್ಷಕ್ಕೆ ಕನಿಷ್ಟ ಒಂದು ಕೋಟಿ ಪ್ರವಾಸಿಗರು ಅಲ್ಲಿ ಭೇಟಿ ಕೊಡುತ್ತಿದ್ದಾರೆ.

ವರ್ಷದ 365 ದಿನವೂ ಸಿನೆಮಾ ಚಟುವಟಿಕೆ ಹೊಂದಿರುವ ಸ್ಟುಡಿಯೋ ಅದು. ಜೊತೆಗೆ ಅದು ಹಾಲಿವುಡ್ ಮೀರಿದ ವೈಭವವನ್ನು ಹೊಂದಿದೆ. ರಾಮೋಜಿ ಫಿಲ್ಮ್ ಸ್ಟುಡಿಯೋ ಇಂದು ಜಗತ್ತಿನ ಅತೀ ದೊಡ್ಡ ಫಿಲ್ಮ್ ಸ್ಟುಡಿಯೋ ಎಂದು ಗಿನ್ನೆಸ್ ದಾಖಲೆ ಮಾಡಿದೆ!

ಮನರಂಜನೆಯ ಮಹಾ ದೊರೆ!

ಎಂಬತ್ತರ ದಶಕದಲ್ಲಿ ಭಾರತದಲ್ಲಿ ದೂರದರ್ಶನ ಎಂಬ ಒಂದೇ ಟಿವಿ ಚಾನೆಲ್ ಇತ್ತು. ಮನರಂಜನೆಗಾಗಿ ಮೀಸಲಾದ ಯಾವುದೇ ಟಿವಿ ಚಾನೆಲ್ ಇರಲಿಲ್ಲ. ಈ ಕೊರತೆಯನ್ನು ಮನಗಂಡ ರಾಮೋಜಿ ರಾವ್ ʼಈ ಟಿವಿ’ ಎಂಬ ಮಹಾ ಟಿವಿ ಚಾನೆಲ್ ಆರಂಭ ಮಾಡಿದರು. ಅದರಲ್ಲಿ ಸಮೃದ್ಧವಾದ ಮನರಂಜನೆ, ಧಾರಾವಾಹಿ, ಸಂಗೀತ, ನೃತ್ಯ, ರಿಯಾಲಿಟಿ ಶೋಗಳನ್ನು ಹೆಣೆದರು. ಅದು ಅತ್ಯಂತ ಜನಪ್ರಿಯವಾಯಿತು. ಇಂದು ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳು ಮತ್ತು ಹಿಂದಿಯಲ್ಲಿ ಈ ಟಿವಿ ವಾಹಿನಿ ಇದೆ. ರಾಮೋಜಿ ರಾವ್ ಈ ಟಿವಿಯನ್ನು ಬಾನೆತ್ತರಕ್ಕೆ ಬೆಳೆಸಿದರು.

ರಾಜಕೀಯ ಪ್ರವೇಶ – ತೆಲುಗು ದೇಶಂ ಪಕ್ಷದ ಮಾರ್ಗದರ್ಶಕ

ಇಂದು ಅವರ ಉದ್ಯಮಗಳ ಮುಖಬೆಲೆಯು 37,583 ಕೋಟಿ ರೂಪಾಯಿ ಎಂದು ಅಂದಾಜು! ಶೂನ್ಯದಿಂದ ಆರಂಭ ಮಾಡಿ ಇಷ್ಟು ಎತ್ತರಕ್ಕೆ ಏರಿದ ಇನ್ನೊಬ್ಬ ಉದ್ಯಮಿ ನಮಗೆ ಭಾರತದಲ್ಲಿ ದೊರೆಯುವುದಿಲ್ಲ. ಅದೂ ಯಾವುದೇ ಗಾಡ್ ಫಾದರ್ ಇಲ್ಲದೆ! ಅವರು ಕಟ್ಟಿದ ಒಂದು ಉದ್ಯಮವೂ ನಷ್ಟ ಕಂಡಿಲ್ಲ ಅನ್ನೋದು ಅವರ ದುಡಿಮೆಗೆ ಒಂದು ತುರಾಯಿ.

ಇಷ್ಟೆಲ್ಲ ಸಾಧನೆ ಮಾಡಿದ ನಂತರ ರಾಜಕೀಯಕ್ಕೆ ಬಾರದಿದ್ದರೆ ಹೇಗೆ? ಎಂಬತ್ತರ ದಶಕದಲ್ಲಿ ತೆಲುಗು ಲೆಜೆಂಡ್ ನಟ NTR ತೆಲುಗು ದೇಶಂ (Telugu Desam party) ಪಕ್ಷವನ್ನು ಸ್ಥಾಪನೆ ಮಾಡಿದಾಗ ಆ ಪಕ್ಷದ ಮೆಂಟರ್ ಆಗಿ ನಿಂತವರು ರಾಮೋಜಿ ರಾವ್. ಹಲವು ಬಾರಿ ಅವರ ಪಕ್ಷ ಅಧಿಕಾರಕ್ಕೆ ಬಂದರೂ ಅವರು ಅಧಿಕಾರದ ಆಸೆ ಮಾಡದೇ ತೆರೆಯ ಮರೆಯಲ್ಲಿ ನಿಂತರು. ಕಿಂಗ್ ಮೇಕರ್ ಆದರು. ಸಾಯುವ ತನಕವೂ ತೆಲುಗು ದೇಶಂ ಪಕ್ಷದ ನಾಯಕರಲ್ಲಿ ಒಬ್ಬರಾಗಿ ಅದನ್ನು ಸ್ವಾಭಿಮಾನಿ ಪಕ್ಷವಾಗಿ ಬೆಳೆಸಿದರು.

ಪದ್ಮವಿಭೂಷಣ ಸೇರಿದಂತೆ ನೂರಾರು ಪ್ರಶಸ್ತಿಗಳು

ಭಾರತದ ಎರಡನೇ ಅತೀ ದೊಡ್ಡ ನಾಗರೀಕ ಪ್ರಶಸ್ತಿಯಾದ ಪದ್ಮ ವಿಭೂಷಣ ಸೇರಿದಂತೆ, ಸಿನೆಮಾ ನಿರ್ಮಾಣಕ್ಕೆ ರಾಷ್ಟ್ರ ಪ್ರಶಸ್ತಿ, ತೆಲುಗಿನ ಗೌರವದ ನಂದಿ ಪ್ರಶಸ್ತಿ, ಹತ್ತಾರು ಫಿಲಂ ಫೇರ್ ಪ್ರಶಸ್ತಿಗಳು ಅವರಿಗೆ ದೊರೆತಿವೆ. ಅವರೊಬ್ಬ ಶಿಸ್ತಿನ ಮನುಷ್ಯ. ಪ್ರಚಾರದಿಂದ ದೂರ ಉಳಿದ ಕಾಯಕ ಯೋಗಿ. ಯಾವಾಗಲೂ ಬಿಳಿ ಬಟ್ಟೆಯಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ನಗುಮುಖದ ವ್ಯಕ್ತಿತ್ವ.

ನಿನ್ನೆ (ಜೂನ್ 8) ಅವರ ನಿರ್ಗಮನದಿಂದ ಭಾರತದ ಅತೀ ಶ್ರೇಷ್ಟವಾದ ಉದ್ಯಮಿ, ಸಿನೆಮಾ ನಿರ್ಮಾಪಕ, ಜಗತ್ತಿನ ಅತೀ ದೊಡ್ಡ ಸ್ಟುಡಿಯೋ ಸ್ಥಾಪಕ, ಈ ಟಿವಿ, ಈ ನಾಡು ಸಂಸ್ಥಾಪಕ, ಮಹೋನ್ನತ ಮನೋರಂಜನಾ ದೊರೆ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಜಾರ್ಜ್ ಫರ್ನಾಂಡಿಸ್ ಮತ್ತು ಕೊಂಕಣ್ ರೈಲ್ವೆ ಎಂಬ ಮಹಾ ಕನಸು!

Continue Reading
Advertisement
Jammu Kashmir
ದೇಶ4 hours ago

Jammu Kashmir: ಕಾಶ್ಮೀರದಲ್ಲಿ ಮತ್ತೊಂದು ದುರಂತ; ಸೇನಾ ವಾಹನ ಕಣಿವೆಗೆ ಬಿದ್ದು ಯೋಧ ಸಾವು, ನಾಲ್ವರಿಗೆ ಗಾಯ

Forest department agrees to give 500 acres for yEttina hole project work says DCM DK Shivakumar
ಕರ್ನಾಟಕ4 hours ago

DK Shivakumar: ಎತ್ತಿನಹೊಳೆ ಕಾಮಗಾರಿಗೆ 500 ಎಕರೆ ನೀಡಲು ಅರಣ್ಯ ಇಲಾಖೆ ಒಪ್ಪಿಗೆ

Maharaj
ಸಿನಿಮಾ5 hours ago

Maharaj: ಹಿಂದುಗಳಿಗೆ ಅವಮಾನ; ಆಮೀರ್‌ ಖಾನ್‌ ಪುತ್ರನ ‘ಮಹಾರಾಜ್’‌ ಸಿನಿಮಾ ಬಿಡುಗಡೆಗೆ ಕೋರ್ಟ್‌ ತಡೆ

ISIS Terrorists
ಕರ್ನಾಟಕ6 hours ago

ದೇಶದ ಪ್ರತಿ ಜಿಲ್ಲೆಗೂ ಉಗ್ರರ ನೇಮಿಸಲು ಬಳ್ಳಾರಿಯಲ್ಲಿ ಸಂಚು; ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ!

Actress Ramya
ಕರ್ನಾಟಕ7 hours ago

Actress Ramya: ಕಾನೂನಿಗಿಂತ ಯಾರೂ ದೊಡ್ಡೋರಲ್ಲ; ದರ್ಶನ್‌ಗೆ ಮತ್ತೆ ನಟಿ ರಮ್ಯಾ ಕ್ಲಾಸ್!

Namma Clinic
ಕರ್ನಾಟಕ7 hours ago

Namma Clinic: ಬಸ್‌ ನಿಲ್ದಾಣ ಸೇರಿದಂತೆ 254 ಕಡೆ ʼನಮ್ಮ ಕ್ಲಿನಿಕ್‌ʼ ಸ್ಥಾಪನೆ

Maruti Suzuki
ಆಟೋಮೊಬೈಲ್7 hours ago

Maruti Suzuki: ಮಾರುತಿ ಸುಜುಕಿ ಸಿಎನ್‌ಜಿ ವಾಹನದ ಟೀಸರ್ ಔಟ್‌; ಹಲವು ವೈಶಿಷ್ಟ್ಯಗಳ ನಿರೀಕ್ಷೆ

Reliance Retail Tira unveils skin care brand Akind
ದೇಶ8 hours ago

Reliance Retail: ಚರ್ಮ ರಕ್ಷಣೆಯ ʼಅಕೈಂಡ್ʼ ಬ್ರಾಂಡ್‌ನ ಕ್ರೀಮ್‌ ಬಿಡುಗಡೆ

Union Budget 2024
ದೇಶ8 hours ago

Union Budget 2024: ಮೋದಿ 3.0 ಸರ್ಕಾರದ ಮೊದಲ ಬಜೆಟ್‌ ಯಾವಾಗ? ಇಲ್ಲಿದೆ ಬಿಗ್‌ ಅಪ್‌ಡೇಟ್‌

AIDSO protest demanding investigation into corruption in NEET entrance exam
ರಾಯಚೂರು8 hours ago

Raichur News: ನೀಟ್ ಭ್ರಷ್ಟಾಚಾರದ ತನಿಖೆಗೆ ಆಗ್ರಹಿಸಿ ಮಾನ್ವಿಯಲ್ಲಿ ಎಐಡಿಎಸ್ಒ ಪ್ರತಿಭಟನೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ3 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ3 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ3 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ3 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ6 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ6 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌