Actress Haripriya | ನಟ ವಸಿಷ್ಠ ಸಿಂಹ ಜತೆ ಸಪ್ತಪದಿ ತುಳಿಯಲಿದ್ದಾರಂತೆ ನಟಿ ಹರಿಪ್ರಿಯಾ: ಮೂಗು ಚುಚ್ಚಿಸಿದ್ಯಾಕೆ? - Vistara News

ಪ್ರಮುಖ ಸುದ್ದಿ

Actress Haripriya | ನಟ ವಸಿಷ್ಠ ಸಿಂಹ ಜತೆ ಸಪ್ತಪದಿ ತುಳಿಯಲಿದ್ದಾರಂತೆ ನಟಿ ಹರಿಪ್ರಿಯಾ: ಮೂಗು ಚುಚ್ಚಿಸಿದ್ಯಾಕೆ?

ನಟ ವಸಿಷ್ಠ ಸಿಂಹ ಜತೆ ಹರಿಪ್ರಿಯಾ (Actress Haripriya ) ಸಪ್ತಪದಿ ತುಳಿಯಲಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿಯಾಗಿದೆ.

VISTARANEWS.COM


on

Actress Haripriya -vasistha simha
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಈ ಹಿಂದೆಯಷ್ಟೆ ಸ್ಯಾಂಡಲ್‌ವುಡ್‌ ನಟಿ ಹರಿಪ್ರಿಯಾ (Actress Haripriya ) ಅವರು ಮೂಗು ಚುಚ್ಚಿಸಿಕೊಂಡಿದ್ದರು. ಇದ್ದಕ್ಕಿದ್ದ ಹಾಗೇ ನಟಿ ಮೂಗು ಚುಚ್ಚಿಸಿಕೊಂಡಿದ್ದು ಚರ್ಚೆಗೆ ಕಾರಣವಾಗಿತ್ತು. ಇದೀಗ ಹರಿಪ್ರಿಯಾ ಅವರು ಮದುವೆಗೆ ತಯಾರಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ನಟ ವಸಿಷ್ಠ ಸಿಂಹ ಜತೆ ನಟಿ ಸಪ್ತಪದಿ ತುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಆಗಾಗ ಇಬ್ಬರೂ ಡ್ಯಾನ್ಸ್‌ ವಿಡಿಯೊಗಳನ್ನು ಶೇರ್‌ ಮಾಡಿಕೊಳ್ಳುತ್ತಿದ್ದರು. ಮೂಗು ಚುಚ್ಚಿಸುವ ವೇಳೆ ಹರಿಪ್ರಿಯಾ ಜತೆ ವಸಿಷ್ಠ ಸಿಂಹ ಕೂಡ ಇದ್ದರು ಎಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದೆ. ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅವರು ಸದ್ಯದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಈ ವಿಷಯ ವೈರಲ್‌ ಆಗುತ್ತಿದ್ದಂತೆ ಇಬ್ಬರೂ ಅಭಿಮಾನಿಗಳು ಸೂಪರ್‌ ಜೋಡಿ ಎಂದು ಶುಭ ಹಾರೈಸುತ್ತಿದ್ದಾರೆ. ಆದರೆ ಈ ಬಗ್ಗೆ ನಟಿ ಹರಿಪ್ರಿಯಾ ಆಗಲಿ, ವಸಿಷ್ಠ ಅವರಾಗಲಿ ಎಲ್ಲಿಯೂ ಹೇಳಿಕೊಂಡಿಲ್ಲ.

ಇದನ್ನೂ ಓದಿ | Golden Star Ganesh | ಇಂದು ರಾಜ್ಯಾದ್ಯಂತ ಬಿಡುಗಡೆಗೊಂಡ ʻತ್ರಿಬಲ್‌ ರೈಡಿಂಗ್‌ʼ ಸಿನಿಮಾ

ನಟಿ ಹರಿಪ್ರಿಯಾ ಅವರು 2007ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅಂದಿನಿಂದ ತಾವು ನಟಿಸಿದ ಸಿನಿಮಾಗಳಿಂದ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಹರಿಪ್ರಿಯಾ ನಟನೆಯ ʻಪೆಟ್ರೋಮ್ಯಾಕ್ಸ್ʼ ಸಿನಿಮಾ ಈ ವರ್ಷ ಬಿಡುಗಡೆ ಆಯಿತು. ಈ ಚಿತ್ರಕ್ಕೆ ವಿಜಯ್ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. 

ಇದನ್ನೂ ಓದಿ | ಮಂಚದಲ್ಲೇ ಸತ್ತ ಪ್ರಿಯಕರ, ಶವ ಎಸೆಯಲು ಸಹಕರಿಸಿದ ಗಂಡ | ಸಮಂತಾ ನಟನೆಯ ಸಿನಿಮಾ ಹೋಲುವ ಘಟನೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪರಿಸರ

World Environment Day: ಇಂದು ವಿಶ್ವ ಪರಿಸರ ದಿನ; ಭೂಮಿಯನ್ನು ಉಳಿಸಲು ಈ 5 ಸೂತ್ರ ಪಾಲಿಸೋಣ

ವಿಶ್ವ ಪರಿಸರ ದಿನ 2024 (World Environment Day) ನಮ್ಮ ಭೂಮಿಯನ್ನು ರಕ್ಷಿಸುವ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸಲು ಮತ್ತು ಹೆಚ್ಚು ಸಮರ್ಥನೀಯ ಭವಿಷ್ಯದತ್ತ ಕ್ರಮಬದ್ಧವಾದ ಕ್ರಮಗಳನ್ನು ತೆಗೆದುಕೊಳ್ಳಲು ಒಂದು ಅವಕಾಶವಾಗಿದೆ. ತ್ಯಾಜ್ಯವನ್ನು ಕಡಿಮೆ ಮಾಡುವ ಮೂಲಕ, ನೀರನ್ನು ಸಂರಕ್ಷಿಸುವ ಮೂಲಕ, ಮರಗಳನ್ನು (tree) ನೆಡುವ ಮೂಲಕ, ಸುಸ್ಥಿರ ಸಾರಿಗೆಯನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ನವೀಕರಿಸಬಹುದಾದ ಶಕ್ತಿಯನ್ನು ಬೆಂಬಲಿಸುವ ಮೂಲಕ ನಾವೆಲ್ಲರೂ ಆರೋಗ್ಯಕರ ಪರಿಸರಕ್ಕೆ ಕೊಡುಗೆ ನೀಡಬಹುದು.

VISTARANEWS.COM


on

By

World Environment Day
Koo

ಹೆಚ್ಚುತ್ತಿರುವ ತಾಪಮಾನ (Rising temperature), ಹವಾಮಾನ ವೈಪರೀತ್ಯ (extreme weather) ಇಂದು ಪರಿಸರ ಸಂರಕ್ಷಣೆಯ (Environmental protection) ಆದ್ಯತೆಯನ್ನು ಒತ್ತಿ ಹೇಳುತ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಪರಿಸರ ದಿನ (World Environment Day) ಈ ಬಾರಿ ಹೆಚ್ಚು ಮಹತ್ವವನ್ನು ಪಡೆದಿದೆ. ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಪರಿಸರದಲ್ಲಾಗುವ ಬದಲಾವಣೆಗಳ ಕುರಿತು ಜಾಗೃತಿ ಮೂಡಿಸಲು ವಿಶ್ವದಾದ್ಯಂತ ನಡೆಯುವ ಅತಿದೊಡ್ಡ ಆಚರಣೆಯಾಗಿದೆ. ಈ ದಿನವು ಭೂಮಿಯನ್ನು ರಕ್ಷಿಸುವ ತುರ್ತು ಅಗತ್ಯವನ್ನು ನೆನಪಿಸುತ್ತದೆ. ಅರ್ಥಪೂರ್ಣ ಕ್ರಮಗಳನ್ನು ಕೈಗೊಳ್ಳಲು ಸಮುದಾಯಗಳನ್ನು ಪ್ರೋತ್ಸಾಹಿಸುತ್ತದೆ.

world environmental day

ಪರಿಸರ ರಕ್ಷಣೆಗೆ ಐದು ಮಂತ್ರ

ಪರಿಸರ ಸಂರಕ್ಷಣೆಯ ಶ್ರೇಷ್ಠ ಮಂತ್ರ ತ್ಯಾಜ್ಯವನ್ನು ಕಡಿಮೆ ಮಾಡಿ, ಮರುಬಳಕೆ ಮಾಡಿ. ತ್ಯಾಜ್ಯವನ್ನು ಕಡಿಮೆ ಮಾಡುವ ಮೂಲಕ, ಉತ್ಪನ್ನ ಮತ್ತು ವಸ್ತುಗಳನ್ನು ಮರುಬಳಕೆ ಮಾಡುವ ಮೂಲಕ ನಾವು ಭೂಮಿಯ ಮೇಲಿನ ಕಸದ ಪ್ರಮಾಣವನ್ನು ಗಣನೀಯವಾಗಿ ಕಡಿತಗೊಳಿಸಬಹುದು.


1. ತ್ಯಾಜ್ಯವನ್ನು ಕಡಿಮೆ ಮಾಡಿ

ಏಕ-ಬಳಕೆಯ ಪ್ಲಾಸ್ಟಿಕ್‌ಗಳನ್ನು ತಪ್ಪಿಸಿ. ಕನಿಷ್ಠ ಪ್ಯಾಕೇಜಿಂಗ್ ಹೊಂದಿರುವ ಉತ್ಪನ್ನಗಳನ್ನು ಆರಿಸಿಕೊಳ್ಳಿ ಮತ್ತು ಬಳಕೆಯಲ್ಲಿಲ್ಲದಿದ್ದಾಗ ದೀಪ ಮತ್ತು ಉಪಕರಣಗಳನ್ನು ಆಫ್ ಮಾಡುವ ಮೂಲಕ ಶಕ್ತಿಯನ್ನು ಉಳಿಸಿ. ಮರುಬಳಕೆ ಮಾಡಬಹುದಾದ ಚೀಲ, ಪಾತ್ರೆ ಮತ್ತು ನೀರಿನ ಬಾಟಲಿಗಳನ್ನು ಆರಿಸಿ. ವಸ್ತುಗಳನ್ನು ತಿರಸ್ಕರಿಸುವ ಬದಲು ಮತ್ತೆ ಬಳಸಿ. ಕಾಗದ, ಗಾಜು ಮತ್ತು ಕೆಲವು ಪ್ಲಾಸ್ಟಿಕ್‌ಗಳಂತಹ ಸಂಸ್ಕರಿಸಿ ಬಳಸಬಹುದಾದ ವಸ್ತುಗಳನ್ನು ಸರಿಯಾಗಿ ಸಂಸ್ಕರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತ್ಯಾಜ್ಯವನ್ನು ಸರಿಯಾಗಿ ವಿಂಗಡಿಸಿ.


2. ನೀರನ್ನು ಸಂರಕ್ಷಿಸಿ

ನೀರು ಅತ್ಯಮೂಲ್ಯ ಸಂಪನ್ಮೂಲವಾಗಿದೆ ಮತ್ತು ಅದನ್ನು ಸಂರಕ್ಷಿಸುವುದು ಪರಿಸರವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ನೀರನ್ನು ಉಳಿಸಲು ಕೆಲವು ಸರಳ ಮತ್ತು ಪರಿಣಾಮಕಾರಿ ಮಾರ್ಗಗಳು ಇಲ್ಲಿವೆ. ನೀರು ವ್ಯರ್ಥವಾಗುವುದನ್ನು ತಡೆಯಲು ತೊಟ್ಟಿಕ್ಕುವ ನಲ್ಲಿಗಳು ಮತ್ತು ಪೈಪ್‌ಗಳನ್ನು ಸರಿಪಡಿಸಿ. ನೀರಿನ ಬಳಕೆಯ ಮೇಲೆ ಗಮನವಿರಲಿ. ಇದಕ್ಕಾಗಿ ಕಡಿಮೆ ಮಾಡಲು ಕಡಿಮೆ ಹರಿವಿನ ಶವರ್‌ಹೆಡ್‌ಗಳು ಮತ್ತು ಶೌಚಾಲಯಗಳನ್ನು ಸ್ಥಾಪಿಸಿ. ಹಲ್ಲುಗಳನ್ನು ಉಜ್ಜುವಾಗ ಟ್ಯಾಪ್ ಅನ್ನು ಆಫ್ ಮಾಡಿ.


3. ಮರಗಳನ್ನು ನೆಡುವುದು

ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುವ ಮತ್ತು ಆಮ್ಲಜನಕವನ್ನು ಬಿಡುಗಡೆ ಮಾಡುವ ಮೂಲಕ ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಮರಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಮರಗಳನ್ನು ನೆಡುವುದು ಮತ್ತು ಮರು ಅರಣ್ಯೀಕರಣ ಯೋಜನೆಗಳನ್ನು ಬೆಂಬಲಿಸುವುದು ಗಮನಾರ್ಹ ಪರಿಣಾಮ ಬೀರಬಹುದು. ಸ್ಥಳೀಯ ಮರ ನೆಡುವ ಉಪಕ್ರಮಗಳಲ್ಲಿ ಭಾಗವಹಿಸಿ ಅಥವಾ ನಿಮ್ಮ ತೋಟದಲ್ಲಿ ಮರಗಳನ್ನು ನೆಡಿ. ಮರು ಅರಣ್ಯೀಕರಣ ಯೋಜನೆಗಳನ್ನು ಬೆಂಬಲಿಸಿ. ಇದಕ್ಕಾಗಿ ಅರಣ್ಯಗಳನ್ನು ಸಂರಕ್ಷಿಸುವ ಸಂಸ್ಥೆಗಳಿಗೆ ದೇಣಿಗೆ ನೀಡಿ.


4. ಸುಸ್ಥಿರ ಸಾರಿಗೆಯನ್ನು ಅಳವಡಿಸಿಕೊಳ್ಳಿ

ಸಾರಿಗೆಯು ಹಸಿರುಮನೆ ಅನಿಲ ಹೊರಸೂಸುವಿಕೆಯ ಪ್ರಮುಖ ಮೂಲವಾಗಿದೆ. ಸುಸ್ಥಿರ ಸಾರಿಗೆ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಪರಿಸರದಲ್ಲಿ ಇಂಗಾಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಸ್ತೆಯಲ್ಲಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಲು ಬಸ್ಸು, ರೈಲು ಅಥವಾ ಕಾರ್‌ಪೂಲ್ ಬಳಸಿ. ಬೈಕಿಂಗ್ ಅಥವಾ ಕಡಿಮೆ ದೂರದ ವಾಕಿಂಗ್ ಅನ್ನು ಆರಿಸಿಕೊಳ್ಳಿ, ಇದು ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ದೈಹಿಕ ಆರೋಗ್ಯವನ್ನು ಉತ್ತೇಜಿಸುತ್ತದೆ. ಸಾಂಪ್ರದಾಯಿಕ ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳಿಗೆ ಹೋಲಿಸಿದರೆ ಕಡಿಮೆ ಹೊರಸೂಸುವಿಕೆಯನ್ನು ಉತ್ಪಾದಿಸುವ ಎಲೆಕ್ಟ್ರಿಕ್ ಅಥವಾ ಹೈಬ್ರಿಡ್ ವಾಹನಗಳಿಗೆ ಬದಲಾಯಿಸುವುದನ್ನು ಪರಿಗಣಿಸಿ.

ಇದನ್ನೂ ಓದಿ: Forest Man Of India: ಇವರೇ ನೋಡಿ ಭಾರತದ ಫಾರೆಸ್ಟ್‌ ಮ್ಯಾನ್‌; ಏಕಾಂಗಿಯಾಗಿ 1,360 ಎಕ್ರೆಯಲ್ಲಿ ಕಾಡು ಬೆಳೆಸಿದ ಸಾಹಸಿ


5. ನವೀಕರಿಸಬಹುದಾದ ಇಂಧನವನ್ನು ಬೆಂಬಲಿಸಿ

ಸೌರ, ಗಾಳಿ ಮತ್ತು ಜಲವಿದ್ಯುತ್‌ನಂತಹ ನವೀಕರಿಸಬಹುದಾದ ಇಂಧನ ಮೂಲಗಳಿಗೆ ಬದಲಾಯಿಸುವುದರಿಂದ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು.

Continue Reading

Lok Sabha Election 2024

Election Results 2024: ವಾರಣಾಸಿಯಲ್ಲಿ ಮೋದಿ ಮತ ಗಳಿಕೆ ಪ್ರಮಾಣ ಕುಸಿಯುವಂತೆ ಮಾಡಿದ ಎಸ್‌ಪಿ-ಕಾಂಗ್ರೆಸ್ ಮೈತ್ರಿಕೂಟ

Election Results 2024: ಉತ್ತರ ಪ್ರದೇಶದ ವಾರಣಾಸಿಯಿಂದ ಸ್ಪರ್ಧಿಸಿ ಪ್ರಧಾನಿ ನರೇಂದ್ರ ಮೋದಿ ಸತತ ಮೂರನೇ ಬಾರಿ ಜಯ ಸಾಧಿಸಿದ್ದಾರೆ. ಆದರೆ ಈ ಬಾರಿ ಮತ ಗಳಿಕೆ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕಳೆ ಬಾರಿಗಿಂತ ಸುಮಾರು 9% ವೋಟು ಕಡಿಮೆ ಬಂದಿರುವುದು ಬಿಜೆಪಿಗರಲ್ಲಿ ಆತಂಕ ಮೂಡಿಸಿದೆ. ಇತ್ತ ಮೋದಿ ವಿರುದ್ಧ ಸತತ ಮೂರನೇ ಬಾರಿಗೆ ಕಣಕ್ಕಿಳಿದ ಕಾಂಗ್ರೆಸ್‌ನ ಅಜಯ್‌ ರಾಯ್‌ ತಮ್ಮ ಮತ ಗಳಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ.

VISTARANEWS.COM


on

Election Results 2024
Koo

ಲಕ್ನೋ: ಸುಮಾರು ಎರಡು ತಿಂಗಳ ಕಾಲ ನಡೆದ ಚುನಾವಣೆ ಹಬ್ಬ ಮಂಗಳವಾರ (ಜೂನ್‌ 4) ಮತ ಎಣಿಕೆಯೊಂದಿಗೆ ಮುಕ್ತಾಯವಾಗಿದೆ (Election Results 2024). ಸುದೀರ್ಘ ದಿನಗಳ ಕುತೂಹಲ ಕೊನೆಗೂ ತಣಿದಿದೆ. ಎಕ್ಸಿಟ್‌ ಪೋಲ್‌ಗಿಂತ ಭಿನ್ನವಾಗಿ ಫಲಿತಾಂಶ ಹೊರ ಬಂದಿದ್ದು, ಬಿಜೆಪಿ (BJP) ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡುವಲ್ಲಿ ಎಡವಿದೆ. ಅದಾಗ್ಯೂ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟ ಅಧಿಕಾರಕ್ಕೇರುವುದು ನಿಶ್ಚಿತ. ಈ ಮಧ್ಯೆ ಉತ್ತರ ಪ್ರದೇಶದ ವಾರಣಾಸಿಯಿಂದ ಸ್ಪರ್ಧಿಸಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಕಾಂಗ್ರೆಸ್‌ನ ಅಜಯ್‌ ರಾಯ್‌ (Ajay Rai) ವಿರುದ್ಧ ಗೆಲುವು ಕಂಡಿದ್ದಾರೆ. ಸತತ ಮೂರನೇ ಬಾರಿಗೆ ಇಲ್ಲಿಂದ ಮೋದಿ ಆಯ್ಕೆಯಾಗಿದ್ದಾರೆ. ಆದರೆ ಮತ ಗಳಿಕೆ ಪ್ರಮಾಣ ಕುಸಿದಿದೆ. ಅದು ಯಾಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಮೋದಿ ಅವರು 6,12,970 ಮತ ಪಡೆದುಕೊಂಡಿದ್ದಾರೆ. ಅಂದರೆ ಶೇ. 54.23. ಇನ್ನು ಅಜಯ್‌ ರಾಯ್‌ ಅವರಿಗೆ 4,60,457 ವೋಟು ಲಭಿಸಿದೆ (ಶೇ. 40.74). ಮೋದಿ ಕಾಂಗ್ರೆಸ್‌ ವಿರುದ್ಧ 1,52,513 ಅಂತರಿಂದ ಗೆಲುವು ಸಾಧಿಸಿದ್ದರೂ ಕಳೆದ ಸಲಕ್ಕೆ ಹೋಲಿಸಿದರೆ ಮತ ಗಳಿಕೆ ಪ್ರಮಾಣದಲ್ಲಿ ಸುಮಾರು ಶೇ. 9ರಷ್ಟು ಕುಸಿತವಾಗಿದೆ.

ಹಿಂದಿನ ಲೆಕ್ಕಾಚಾರ

2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರಿಗೆ 6,74,664 ಮತ (63.62%) ಲಭಿಸಿತ್ತು. ಅದಕ್ಕೂ ಹಿಂದಿನ ಚುನಾವಣೆಯಲ್ಲಿ ಅಂದರೆ 2014ರಲ್ಲಿ ಮೋದಿಗೆ ಲಭಿಸಿದ್ದು 5,81,022 ವೋಟು (56.37%). ಹಿಂದಿನ ಎರಡು ಚುನಾವಣೆಗಳಿಗೆ ಹೋಲಿಸಿದರೆ ಮತ ಗಳಿಕೆ ಗಣನೀಯವಾಗಿ ಕುಸಿದಿದೆ.

ಇತ್ತ ಮೋದಿ ವಿರುದ್ಧ ಮೂರನೇ ಬಾರಿ ಕಣಕ್ಕಿಳಿರುವ ಅಜಯ್‌ ರಾಯ್‌ 2019ಕ್ಕಿಂತ ಈ ಬಾರಿ ಅಧಿಕ ಮತ ಗಳಿಸಿದ್ದಾರೆ. ಕಾಂಗ್ರೆಸ್‌ ಮತ್ತು ಸಮಾಜವಾದಿ ಪಾರ್ಟಿ (ಎಸ್‌ಪಿ) ನಡುವಿನ ಮೈತ್ರಿಯೇ ಮೋದಿ ಅವರ ಮತ ಗಳಿಕೆ ಕುಸಿಯಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಇಲ್ಲಿ ಎರಡು ಪಕ್ಷಗಳ ನಡುವೆ ಒಪ್ಪಂದ ನಡೆದ ಕಾರಣ ಎಸ್‌ಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರಲಿಲ್ಲ. ಇದರಿಂದ ಮತ ಹಂಚಿ ಹೋಗದೆ ಕಾಂಗ್ರೆಸ್‌ನ ತಂತ್ರ ಕೈ ಹಿಡಿದಿದೆ. ಮತ ಎಣಿಕೆಯಾಗಿ ಕೆಲವು ಹೊತ್ತಿನಲ್ಲಿ ಮೋದಿ ಅವರಿಗೆ ಸುಮಾರು 6 ಸಾವಿರದಷ್ಟು ಮತಗಳಿಂದ ಹಿನ್ನಡೆಯಾಗಿ ಕೆಲ ಹೊತ್ತು ಬಿಜೆಪಿ ಕಾರ್ಯಕರ್ತರ ಮನದಲ್ಲಿ ಆತಂಕದ ಮೂಡಿತ್ತು.

ಇದನ್ನೂ ಓದಿ: Narendra Modi : ವಾರಾಣಸಿಯಲ್ಲೂ ಮೋದಿ ಜನಪ್ರಿಯತೆ ಮಸುಕು; ಗೆಲುವಿನ ಅಂತರ ಕೇವಲ 1.5 ಲಕ್ಷ ಮತಗಳು

ಅಜಯ್ ರಾಯ್​ ಹಿನ್ನೆಲೆ

ಅಜಯ್​ ರಾಯ್​ ಎಬಿವಿಪಿ ಹಾಗೂ ಆರ್​ಎಸ್​ಎಸ್​ ಮೂಲದವರು. ಹಿಂದೆ ಅವರು ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು. ಅಲ್ಲದೆ ಉತ್ತರ ಪ್ರದೇಶ ವಿಧಾನಸಭೆಗೆ ನಾಲ್ಕು ಬಾರಿ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಆದರೆ 2008ರಲ್ಲಿ ಅವರಿಗೆ ಬಿಜೆಪಿ ಮತ್ತೆ ಟಿಕೆಟ್​ ನಿರಾಕರಿಸಿತ್ತು. ಈ ವೇಳೆ ಮೂಲ ಪಕ್ಷವನ್ನು ತೊರೆದು ಕೈ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

ಅಜಯ್​ ರಾಯ್​ 2014ರಲ್ಲಿ ಮತ್ತು 2019ರಲ್ಲಿ ವಾರಾಣಸಿಯಿಂದಲೇ ಸ್ಪರ್ಧಿಸಿದ್ದರು. ಆದರೆ ಎರಡೂ ಬಾರಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇದೀಗ ಮೂರನೇ ಬಾರಿಗೂ ಸೋತಿದ್ದಾರೆ. ಆದರೆ ಈ ಬಾರಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. 

Continue Reading

ಪ್ರಮುಖ ಸುದ್ದಿ

Election Results 2024: ರಾಮ ಮಂದಿರ ಭದ್ರ, ಯುಪಿ ಅಭದ್ರ: ಉತ್ತರ ಪ್ರದೇಶದಲ್ಲಿ ಬಿಜೆಪಿ 64ರಿಂದ 36ಕ್ಕೆ ಕುಸಿಯಲು ಕಾರಣ ಇಲ್ಲಿದೆ

Election Results 2024: ಸ್ಥಳೀಯ ಸಮಸ್ಯೆಗಳು, ಹಾಲಿ ಸಂಸದರ ಮೇಲಿನ ಕೋಪ, ರೈತರ ಕೋಪ, ಮೀಸಲು ರದ್ದು ಅಪಪ್ರಚಾರ, ಇಂಡಿಯಾ ಬ್ಲಾಕ್‌ ಒಗ್ಗಟ್ಟು ಸೇರಿದಂತೆ ಹಲವಾರು ಕಾರಣಗಳು ಉತ್ತರ ಪ್ರದೇಶದಲ್ಲಿ ಬಿಜೆಪಿಯ ಮಂಕಾದ ಪ್ರದರ್ಶನಕ್ಕೆ ಕಾರಣವಾಗಿವೆ.

VISTARANEWS.COM


on

election results 2024 Modi and Yogi
Koo

ಹೊಸದಿಲ್ಲಿ: ರಾಜಕೀಯವಾಗಿ ನಿರ್ಣಾಯಕವಾಗಿರುವ ಉತ್ತರ ಪ್ರದೇಶದ (Uttar Pradesh) ಚುನಾವಣಾ ಫಲಿತಾಂಶ (Election Results 2024) ಬಿಜೆಪಿಗೆ (BJP) ಅಚ್ಚರಿ ಆಘಾತಗಳೆರಡನ್ನೂ ಏಕಕಾಲದಲ್ಲಿ ಮೂಡಿಸಿದೆ. ಇಲ್ಲಿ ಪಕ್ಷವು ಕೇವಲ 36 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 2019ರ ಚುನಾವಣೆಯಲ್ಲಿ ಪಕ್ಷ ಗೆದ್ದಿದ್ದ 64 ಸ್ಥಾನಗಳಿಗೆ ಹೋಲಿಸಿದರೆ ಇದು ಅರ್ಧಕ್ಕೆ ಇಳಿದಿದೆ. ಸಮಾಜವಾದಿ ಪಕ್ಷ (Samajvadi party) ಮತ್ತು ಕಾಂಗ್ರೆಸ್‌ನ (Congress) ಇಂಡಿಯಾ ಮೈತ್ರಿಯು (INDIA bloc) ಬಲಿಷ್ಠವಾಗಿ ಹೊರಹೊಮ್ಮಿದೆ. ಎರಡೂ ಪಕ್ಷಗಳು 43 ಸ್ಥಾನಗಳಲ್ಲಿ ಮುಂದಿವೆ. ಯೋಗಿ ಆದಿತ್ಯನಾಥ್‌ (Yogi Adityanath) ಅವರಂಥ ಬಲಿಷ್ಠ ಮುಖ್ಯಮಂತ್ರಿಯಿದ್ದೂ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಹತ್ತಾರು ರ್ಯಾಲಿ ಮಾಡಿದರೂ ಯಾಕೆ ಹೀಗಾಯಿತು?

ಕೇಂದ್ರ ಸಚಿವೆ ಸ್ಮೃತಿ ಇರುವ ಅಮೇಥಿಯಲ್ಲೂ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ. ಈ ಹಿಂದೆ ಕಾಂಗ್ರೆಸ್‌ ಕುಟುಂಬದ ಭದ್ರಕೋಟೆಯಾಗಿದ್ದ ಅಮೇಥಿಯಲ್ಲಿ ರಾಹುಲ್ ಗಾಂಧಿಯನ್ನು ಸೋಲಿಸಿ ಕಳಿಸಿದ್ದ ಇರಾನಿ ಈ ಸಲ ಕಾಂಗ್ರೆಸ್ ಪ್ರತಿಸ್ಪರ್ಧಿ ಎದುರೇ 77,000 ಮತಗಳಿಂದ ಸೋತಿದ್ದಾರೆ. ರಾಯ್‌ಬರೇಲಿಯಲ್ಲಿ ರಾಹುಲ್‌ ಗೆದ್ದಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿಯ ದೊಡ್ಡ ಹಿನ್ನಡೆಯ ಹಿಂದಿನ ಪ್ರಮುಖ ಅಂಶಗಳ ನೋಟ ಇಲ್ಲಿದೆ:

ಬಿಜೆಪಿಗೆ ಮತ ಪಡೆಯುವಲ್ಲಿ ರಾಮಮಂದಿರ ವೈಫಲ್ಯ

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ (Ayodhya Ram Mandir) ನಿರ್ಮಾಣ, 1980ರ ದಶಕದಿಂದಲೂ ಬಿಜೆಪಿ ಚುನಾವಣಾ ಭರವಸೆಗಳಲ್ಲಿ ಒಂದಾಗಿತ್ತು. ಬಿಜೆಪಿಯು ಪ್ರಚಾರ ಮಾಡಿದ ಪ್ರಮುಖ ಸಾಧನೆಗಳಲ್ಲಿ ಇದು ಒಂದಾಗಿತ್ತು. ಆದರೆ ಅಯೋಧ್ಯೆಯಲ್ಲಿಯೂ ಕೇಸರಿ ಪಕ್ಷಕ್ಕೆ ಈ ಸಾಧನೆ ಮತಗಳನ್ನಾಗಿ ಪರಿವರ್ತಿಸಲು ವಿಫಲವಾಗಿದೆ. ಅಯೋಧ್ಯೆ ಭಾಗವಾಗಿರುವ ಫೈಜಾಬಾದ್‌ನಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಅವಧೇಶ್ ಪ್ರಸಾದ್ ಪ್ರಸ್ತುತ ಬಿಜೆಪಿಯ ಲಲ್ಲು ಸಿಂಗ್ ವಿರುದ್ಧ 6000 ಮತಗಳ ಮುನ್ನಡೆ ಗಳಿಸಿ ಗೆದ್ದಿದ್ದಾರೆ. ರಾಮ ಮಂದಿರ ಸಾಂಪ್ರದಾಯಿಕ ಬಿಜೆಪಿ ಮತಗಳನ್ನು ಉಳಿಸಿಕೊಂಡಿತೇ ಹೊರತು, ಹೊಸ ಮತಗಳನ್ನು ತಂದುಕೊಡಲಿಲ್ಲ.

ಅಖಿಲೇಶ್ ಯಾದವ್ ಮತ್ತು ರಾಹುಲ್ ಗಾಂಧಿ ಮೈತ್ರಿ

2017ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಮತ್ತು ರಾಹುಲ್ ಗಾಂಧಿ ಬೇರೆ ಬೇರೆಯಾಗಿ ಸ್ಪರ್ಧಿಸಿದ್ದರು. ಇದು ಬಿಜೆಪಿ ವಿರೋಧಿ ಮತಗಳು ಒಡೆದುಹೋಗುವಂತೆ ಮಾಡಿ, ಬಿಜೆಪಿ ಮತಪ್ರಮಾಣ ಹೆಚ್ಚಿಸಿ ಗೆಲ್ಲಲು ಸಹಾಯ ಮಾಡಿತು. ಏಳು ವರ್ಷಗಳ ನಂತರ, ಇಬ್ಬರೂ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕೈ ಜೋಡಿಸಿದರು. ಲೋಕಸಭೆಯಲ್ಲಿ ಬಿಜೆಪಿಯನ್ನು ಸೋಲಿಸಲು ಮಾಡಿಕೊಂಡ ಇಂಡಿಯಾ ಒಕ್ಕೂಟ ಯುಪಿಯಲ್ಲಿಯೂ ಕೆಲಸ ಮಾಡಿದೆ.

ಮಾಯಾವತಿ ಫ್ಯಾಕ್ಟರ್ ಇಲ್ಲ

ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ ಕಳೆದರೂ ರಾಜ್ಯದಲ್ಲಿ ಈ ಬಾರಿ ಖಾತೆ ತೆರೆದಿಲ್ಲ.‌ ಮಾಯಾವತಿ ಕೂಡ ಈ ಬಾರಿ ಕಣದಲ್ಲಿ ಆಕ್ರಮಣಕಾರಿಯಾಗಿ ಕಾಣಿಸಿಕೊಳ್ಳಲಿಲ್ಲ. ಸಹಜವಾಗಿಯೇ ಆಕೆಯ ಪಕ್ಷಕ್ಕೆ ಹೋಗಬೇಕಾದ ಮತಗಳು ಎಸ್‌ಪಿಗೆ ಹೋದವು. 2019ರ ಚುನಾವಣೆಯಲ್ಲಿ ಮಾಯಾವತಿ 10 ಸ್ಥಾನಗಳನ್ನು ಗೆದ್ದಿದ್ದರು. ದಲಿತ ನಾಯಕ ಚಂದ್ರಶೇಖರ ಆಜಾದ್ ಈ ಬಾರಿ ರಾಜ್ಯದಲ್ಲಿ ಹೆಚ್ಚು ಶೈನಿಂಗ್‌ ಆಗಿದ್ದಾರೆ. ಹೊಸ ದಲಿತ ನಾಯಕನಾಗಿ ಹೊಮ್ಮಿದ್ದಾರೆ. ಎಸ್‌ಸಿ- ಮೀಸಲಾತಿಯ ನಗೀನಾ ಕ್ಷೇತ್ರದಲ್ಲಿ ಈ ಹಿಂದೆ ಬಿಎಸ್‌ಪಿ ಅಗ್ರಸ್ಥಾನದಲ್ಲಿದ್ದರೆ, ಇಂದು ನಾಲ್ಕನೇ ಸ್ಥಾನದಲ್ಲಿದೆ.

ರೈತರ ಕೋಪ, ಸ್ಥಳೀಯ ಸಮಸ್ಯೆಗಳು

ಉತ್ತರ ಪ್ರದೇಶದ ರೈತರು ಮೋದಿ ಸರ್ಕಾರ ಜಾರಿಗೆ ತಂದ, ನಂತರ ರದ್ದುಪಡಿಸಿದ ಕೃಷಿ ಕಾನೂನುಗಳ ಬಗ್ಗೆ ಬಿಜೆಪಿ ವಿರುದ್ಧ ಅಸಮಾಧಾನ ಹೊಂದಿದ್ದಾರೆ ಎಂದು ವರದಿಯಾಗಿದೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ತಮ್ಮ ಚುನಾವಣಾ ರ್ಯಾಲಿಗಳಲ್ಲಿ, ಬಿಜೆಪಿ ರದ್ದುಪಡಿಸಿದ ಕಾನೂನುಗಳಿಗೆ ಪರ್ಯಾಯವಾದ ಕಾನೂನುಗಳನ್ನು ಪರಿಚಯಿಸಿ ರೈತರ ಭೂಮಿಯನ್ನು ಕಿತ್ತುಕೊಳ್ಳಲಿದೆ ಎಂದು ಹೇಳುತ್ತಿದ್ದರು. ರೈತರ ಸಂಕಷ್ಟ, ಆರ್ಥಿಕತೆಯ ಆತಂಕ, ನಿರುದ್ಯೋಗ ಮತ್ತು ಅಗ್ನಿವೀರ್ ಯೋಜನೆಯ ವಿರುದ್ಧ ಪ್ರತಿಪಕ್ಷಗಳ ನಿರೂಪಣೆಯು ಬಿಜೆಪಿ ವಿರುದ್ಧ ಯುವ ಮತದಾರರಲ್ಲಿ ಕೋಪವನ್ನು ಹೆಚ್ಚಿಸಿತು.

ʼಮೀಸಲು ರದ್ದುʼ ಆರೋಪ ಎದುರಿಸಲು ವಿಫಲ

ಎನ್‌ಡಿಎ ಗೆದ್ದರೆ ಸಂವಿಧಾನಕ್ಕೆ ಬೆದರಿಕೆಯಿದೆ ಎಂದು ವಿರೋಧ ಪಕ್ಷಗಳು ಹೆಣೆದ ಆರೋಪವನ್ನು ಎದುರಿಸಲು ಆಡಳಿತ ಮೈತ್ರಿಕೂಟ ವಿಫಲವಾಯಿತು. ಎನ್‌ಡಿಎ 400ರ ಗಡಿಯನ್ನು ಮುಟ್ಟಿದರೆ ಒಬಿಸಿ ಮತ್ತು ಎಸ್‌ಸಿ/ಎಸ್‌ಟಿಗಳಿಗೆ ಮೀಸಲಾತಿ ಸೌಲಭ್ಯಗಳನ್ನು ರದ್ದುಪಡಿಸುತ್ತದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ‘ಕಾಂಗ್ರೆಸ್‌ನಿಂದ ಸಂಪತ್ತಿನ ಹಂಚಿಕೆ ಯೋಜನೆ, ಅಲ್ಪಸಂಖ್ಯಾತರಿಗೆ ಮೀಸಲಾತಿ’ ಎಂದು ಬಿಜೆಪಿ ನಾಯಕತ್ವವು ಅದನ್ನು ಎದುರಿಸಲು ಪ್ರಯತ್ನಿಸಿದರೂ ವಿಫಲವಾಯಿತು.

ಆಡಳಿತ ವಿರೋಧಿ ಅಲೆ

ಅನೇಕ ಹಾಲಿ ಸಂಸದರ ವಿರುದ್ಧ ಪ್ರಬಲ ಆಡಳಿತ ವಿರೋಧಿ ಭಾವನೆ ಇತ್ತು. ಬಿಜೆಪಿ ತಂತ್ರಜ್ಞರು ಅದೇ ಅಭ್ಯರ್ಥಿಗಳನ್ನು ಪುನರಾವರ್ತಿಸಿದರು. ಪಕ್ಷದ ಸಮೀಕ್ಷೆಗಳು ಅವರ ವಿರುದ್ಧ ಸಾರ್ವಜನಿಕ ಕೋಪವಿದೆ ಎಂದು ಸೂಚಿಸಿದ್ದರೂ ಅದನ್ನು ಪ್ರತಿಕ್ರಿಯೆಯನ್ನು ನಿರ್ಲಕ್ಷಿಸಲಾಯಿತು. ಹಿಂದಿನ ಚುನಾವಣೆಯಲ್ಲಿ 181ಕ್ಕೂ ಕಡಿಮೆ ಮತಗಳ ಅಂತರದಿಂದ ಗೆದ್ದಿದ್ದ ಅಭ್ಯರ್ಥಿಗಳು ಈ ಬಾರಿ ಹೀನಾಯ ಸೋಲು ಕಂಡರು. ಆಡಳಿತ ವಿರೋಧಿ ಅಲೆ ಕಾರಣ ನೀಡಿ ಕನಿಷ್ಠ 30-35 ಪ್ರತಿಶತ ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲು ಬಿಜೆಪಿ ಆರಂಭದಲ್ಲಿ ನಿರ್ಧರಿಸಿತ್ತು ಆದರೆ ಅವರಲ್ಲಿ 14 ಮಂದಿಯನ್ನು ಮಾತ್ರ ಬದಲಾಯಿಸಿತು.

ಇದನ್ನೂ ಓದಿ: Election Results 2024: 543ರಲ್ಲಿ 542 ಕ್ಷೇತ್ರಗಳ ಫಲಿತಾಂಶ ಘೋಷಣೆ; ಪಕ್ಷಗಳ ಅಂತಿಮ ಬಲಾಬಲ ಹೀಗಿದೆ

Continue Reading

ಪ್ರಮುಖ ಸುದ್ದಿ

Car Stunt : ಬೈಕ್​ ವೀಲಿಂಗ್ ಆಯ್ತು; ಇದೀಗ ಬೆಂಗಳೂರು ಮಹಾನಗರದಲ್ಲಿ ಕಾರಿನಲ್ಲಿ ಸ್ಟಂಟ್​

car stunt: ಜೂನ್ 1 ರಂದು ರಾತ್ರಿ 1.52 ಕ್ಕೆ ಜಯನಗರದ 4ನೇ ಹಂತದಲ್ಲಿ ಈ ಘಟನೆ ನಡೆದಿದೆ. ಒಂದು ಸರ್ಕಲ್​ಗೆ ಹಲವಾರು ಬಾರಿ ಕಾರನ್ನು ಸುತ್ತು ಹಾಕಿಸಿ ಸ್ಟಂಟ್ ಮಾಡಿರುವ ಘಟನೆ ನಡೆದಿದೆ. ಹೆಡ್​ಲೈಟ್ ಹಾಕಿಕೊಂಡು ಹಲವಾರು ಬಾರಿ ಕಾರಿನಲ್ಲಿ ಗಿರಕಿ ಹೊಡೆಯುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

VISTARANEWS.COM


on

Car Stunt
Koo

ಬೆಂಗಳೂರು: ಬೆಂಗಳೂರು ನಗರದಲ್ಲಿ ಕಿಡಿಗೇಡಿಗಳು ಬೈಕ್​ ಹತ್ತಿ ವೀಲಿಂಗ್ ಮತ್ತು ಸ್ಟಂಟ್ ಮಾಡುವುದು ಮಾಮೂಲಿ. ಪೊಲೀಸರು ಕ್ರಮ ಕೈಗೊಂಡ ಹೊರತಾಗಿಯೂ ಪುಂಡರು ತಮ್ಮ ವರ್ತನೆಯನ್ನು ಮುಂದುರಿಸುತ್ತಲೇ ಇರುತ್ತಾರೆ. ಆದರೆ ಜನರಿಗೆ ಇದೀಗ ಹೊಸ ಗೀಳು ಶುರುವಾಗಿದೆ. ಅತಿ ವೇಗದಲ್ಲಿ ಕಾರು ಓಡಿಸುತ್ತಾ ಸ್ಟಂಟ್ (Car Stunt) ಮಾಡುವುದು. ಈ ಪ್ರವೃತ್ತಿ ಹೆಚ್ಚಾಗುತ್ತಿರುವ ಕಾರಣ ಸಾರ್ವಜನಿಕರಲ್ಲಿ ಭೀತಿ ಉಂಟಾಗಿದೆ. ಬೈಕ್ ಸ್ಟಂಟ್​ಗಿಂತಲೂ ಹೆಚ್ಚು ಅಪಾಯಕಾರಿಯಾಗಿರುವ ಕಾರು ಸ್ಟಂಟ್​​ ಜನರ ಜೀವಕ್ಕೆ ಕುತ್ತು ತರುವುದಲ್ಲಿ ಯಾವುದೇ ಅನುಮಾನ ಇಲ್ಲ.

ಜೂನ್ 1 ರಂದು ರಾತ್ರಿ 1.52 ಕ್ಕೆ ಜಯನಗರದ 4ನೇ ಹಂತದಲ್ಲಿ ಈ ಘಟನೆ ನಡೆದಿದೆ. ಒಂದು ಸರ್ಕಲ್​ಗೆ ಹಲವಾರು ಬಾರಿ ಕಾರನ್ನು ಸುತ್ತು ಹಾಕಿಸಿ ಸ್ಟಂಟ್ ಮಾಡಿರುವ ಘಟನೆ ನಡೆದಿದೆ. ಹೆಡ್​ಲೈಟ್ ಹಾಕಿಕೊಂಡು ಹಲವಾರು ಬಾರಿ ಕಾರಿನಲ್ಲಿ ಗಿರಕಿ ಹೊಡೆಯುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಯನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅದರ ವಿಡಿಯೊಗಳು ಎಲ್ಲೆಡೆ ವೈರಲ್ ಆಗಿದೆ. ಘಟನೆ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡ ಬಗ್ಗೆ ಮಾಹಿತಿ ಇಲ್ಲ.

ಶಾಸಕ ಪ್ರದೀಪ್ ಈಶ್ವರ್​ ನಿವಾಸದ ಮೇಲೆ ಕಲ್ಲು ತೂರಾಟ, ಗಾಜು ಪುಡಿಪುಡಿ

ಚಿಕ್ಕಬಳ್ಳಾಪುರ: ಇಲ್ಲಿನ ಶಾಸಕ ಪ್ರದೀಪ್ ಈಶ್ವರ್ ನಿವಾಸದ ಮೇಲೆ ಮಂಗಳವಾರ ರಾತ್ರಿ (ಜೂ4ರಂದು) ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಮನೆಗೆ ಹಾಕಲಾಗಿದ್ದ ಗಾಜುಗಳು ಪುಡಿಪುಡಿಯಾಗಿವೆ. ರಾಜಕೀಯ ದ್ವೇಷ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ಈ ಕೃತ್ಯ ನಡೆಸಿರಬಹುದು ಎಂದು ಅಂದಾಜಿಸಲಾಗಿದೆ. ರಾಜಕೀಯ ವಿರೋಧಿಗಳ ವಿರುದ್ಧ ಭಯಂಕರ ಭಾಷಣ ಮಾಡುವ ಪ್ರದೀಪ್​ ಈಶ್ವರ್ ವಿರುದ್ಧ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಕಲ್ಲು ಎಸೆದಿರಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ: Microplastics: ನಮಗೆ ಗೊತ್ತೇ ಆಗದಂತೆ ನಮ್ಮ ದೇಹ ಸೇರುತ್ತಿದೆ ಅಪಾಯಕಾರಿ ಪ್ಲಾಸ್ಟಿಕ್‌!

ಮಂಗಳವಾರ ಪ್ರಕಟವಾದ ಲೋಕ ಸಭಾ ಚುನಾವಣೆಯ ಫಲಿತಾಂಶದಲ್ಲಿ ಪ್ರದೀಪ್ ಈಶ್ವರ್ ಅವರ ರಾಜಕೀಯ ಪ್ರತಿಸ್ಪರ್ಧಿ ಡಾ. ಸುಧಾಕರ್ ಗೆಲುವ ಸಾಧಿಸಿದ್ದಾರೆ. ಆ ಬಳಿಕ ಸುಧಾಕರ್ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದರು. ಅಲ್ಲದೆ ಸುಧಾಕರ್​ ಒಂದೇ ಒಂದು ಓಟ್​ ರಕ್ಷಾ ರಾಮಯ್ಯ ಅವರಿಗಿಂತ ಹೆಚ್ಚು ಪಡೆದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿಕೆ ನೀಡಿದ್ದನ್ನು ಖಂಡಿಸಿದ್ದರು.

ರಾತ್ರಿ 10ರಿಂದ 11 ಗಂಟೆಯ ನಡುವೆ ಸುಧಾಕರ್​ ಅವರ ಗೃಹಕಚೇರಿಯ ನಿವಾಸದ ಮೇಲೆ‌ ಕಲ್ಲು ತೂರಾಟ ನಡೆದಿದೆ. ಚಿಕ್ಕಬಳ್ಳಾಪುರ ನಗರದ ಕಂದವಾರದಲ್ಲಿ ಅವರ ಗೃಹಕಚೇರಿ ಇದ್ದು ಅಲ್ಲಿಗೆ ಕಲ್ಲು ತೂರಲಾಗಿದೆ. ತಡರಾತ್ರಿ ಮನೆಯ ಹಿಂಭಾಗದ ಮೂಲಕ ಕಲ್ಲು ತೂರಾಟ

Continue Reading
Advertisement
Election Results 2024
ದೇಶ14 mins ago

Election Results 2024: ಸುದೀರ್ಘ ಅವಧಿಗೆ ಪ್ರಧಾನಿ ಆಗ್ತಾರಾ ಮೋದಿ?; ನೆಹರೂ, ಇಂದಿರಾ ಸಾಲಿಗೆ ಸೇರೋದು ಪಕ್ಕಾನಾ?

World Environment Day
ಪರಿಸರ33 mins ago

World Environment Day: ಇಂದು ವಿಶ್ವ ಪರಿಸರ ದಿನ; ಭೂಮಿಯನ್ನು ಉಳಿಸಲು ಈ 5 ಸೂತ್ರ ಪಾಲಿಸೋಣ

Election Results 2024
Lok Sabha Election 202440 mins ago

Election Results 2024: ವಾರಣಾಸಿಯಲ್ಲಿ ಮೋದಿ ಮತ ಗಳಿಕೆ ಪ್ರಮಾಣ ಕುಸಿಯುವಂತೆ ಮಾಡಿದ ಎಸ್‌ಪಿ-ಕಾಂಗ್ರೆಸ್ ಮೈತ್ರಿಕೂಟ

Election Results 2024
ದೇಶ47 mins ago

Election Results 2024: ಹ್ಯಾಟ್ರಿಕ್‌ ಸರದಾರ ಮೋದಿಗೆ ವಿಶ್ವನಾಯಕರಿಂದ ಅಭಿನಂದನೆ

election results 2024 Modi and Yogi
ಪ್ರಮುಖ ಸುದ್ದಿ1 hour ago

Election Results 2024: ರಾಮ ಮಂದಿರ ಭದ್ರ, ಯುಪಿ ಅಭದ್ರ: ಉತ್ತರ ಪ್ರದೇಶದಲ್ಲಿ ಬಿಜೆಪಿ 64ರಿಂದ 36ಕ್ಕೆ ಕುಸಿಯಲು ಕಾರಣ ಇಲ್ಲಿದೆ

Election Results 2024
ದೇಶ2 hours ago

Election Results 2024: 543ರಲ್ಲಿ 542 ಕ್ಷೇತ್ರಗಳ ಫಲಿತಾಂಶ ಘೋಷಣೆ; ಪಕ್ಷಗಳ ಅಂತಿಮ ಬಲಾಬಲ ಹೀಗಿದೆ

Car Stunt
ಪ್ರಮುಖ ಸುದ್ದಿ2 hours ago

Car Stunt : ಬೈಕ್​ ವೀಲಿಂಗ್ ಆಯ್ತು; ಇದೀಗ ಬೆಂಗಳೂರು ಮಹಾನಗರದಲ್ಲಿ ಕಾರಿನಲ್ಲಿ ಸ್ಟಂಟ್​

Praveen Nettaru
ಕ್ರೈಂ2 hours ago

Praveen Nettaru Murder: ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ವಿದೇಶಕ್ಕೆ ಪರಾರಿಯಾಗುತ್ತಿದ್ದಾಗಲೇ ಬಂಧನ

Chikkaballapur News
ಪ್ರಮುಖ ಸುದ್ದಿ2 hours ago

Chikkaballapur News : ಶಾಸಕ ಪ್ರದೀಪ್ ಈಶ್ವರ್​ ನಿವಾಸದ ಮೇಲೆ ಕಲ್ಲು ತೂರಾಟ, ಗಾಜು ಪುಡಿಪುಡಿ

Election Results 2024
ದೇಶ2 hours ago

Election Results 2024: ಫಲಿತಾಂಶದ ಬೆನ್ನಲ್ಲೇ ಎನ್‌ಡಿಎ, ಇಂಡಿಯಾ ಬಣಗಳ ಹೈವೋಲ್ಟೇಜ್‌ ಮೀಟಿಂಗ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ1 day ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ2 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ2 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು4 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ6 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌