Prerane | ಕಾರ್ಪೊರೇಟ್ ಜಗತ್ತಿನಲ್ಲಿ ಅಪರಿಗ್ರಹ ಯೋಗ  - Vistara News

ಧಾರ್ಮಿಕ

Prerane | ಕಾರ್ಪೊರೇಟ್ ಜಗತ್ತಿನಲ್ಲಿ ಅಪರಿಗ್ರಹ ಯೋಗ 

“ಪ್ರೇರಣೆʼʼ (Prerane) ಇದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಬಿತ್ತುವ ಬೆಳಗಿನ ಹೊಳಹು. ಪ್ರತಿ ನಿತ್ಯ ಧಾರ್ಮಿಕ ಚಿಂತಕರು, ಪ್ರವಚನಕಾರರು, ಆಧ್ಯಾತ್ಮ ಚಿಂತಕರು ಇಲ್ಲಿ ಬರೆಯುತ್ತಿದ್ದಾರೆ. ಇಂದು ಕಾರ್ಪೊರೇಟ್ ಜಗತ್ತಿನಲ್ಲಿನ ಲೀನ್ ಪ್ರಿನ್ಸಿಪಲ್ ತತ್ವದ ಕುರಿತು ಚರ್ಚಿಸಲಾಗಿದೆ.

VISTARANEWS.COM


on

Prerane
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜಿ ನಾಗರಾಜ
ಅಪರಿಗ್ರಹ ಎನ್ನುವುದು ಪತಂಜಲಿ ಸೂತ್ರದ ಅಷ್ಟಾಂಗಯೋಗದ “ಯಮʼʼ ಎನ್ನುವ ಮೆಟ್ಟಿಲಿನ ಒಂದು ಭಾಗ. ಪರಿಗ್ರಹ ಎಂದರೆ ಸ್ವೀಕಾರ ಮಾಡುವುದು, ತೆಗೆದುಕೊಳ್ಳುವುದು ಎಂದರ್ಥ ಮತ್ತು ದಾನವನ್ನು ಸ್ವೀಕಾರ ಮಾಡದೇ ಇರುವಿಕೆಯೇ ಅಪರಿಗ್ರಹ. ಮೇಲುನೋಟದಲ್ಲಿ ಈ ಯಮವು ಇಂದಿನ ಆಧುನಿಕ ಜೀವನದ ಚಿಂತನಾಕ್ರಮ ಹಾಗೂ ಜೀವನಶೈಲಿಯ ಚೌಕಟ್ಟಿನಲ್ಲಿ ಅಪ್ರಸ್ತುತ ಎಂದು ಅನ್ನಿಸಬಹುದೇನೋ! ಆದರೆ ಈ ಯಮದ ಹಿಂದಿರುವ ತತ್ತ್ವದ ಅಳವಡಿಕೆ ಆಧುನಿಕ ಕಾರ್ಪೊರೇಟ್‌ ಜಗತ್ತಿನಲ್ಲಿ ಅಲೆಗಳನ್ನೇ ಎಬ್ಬಿಸಿ ಜಾಗತಿಕ ಮಟ್ಟದಲ್ಲಿ ಕ್ರಾಂತಿ ಉಂಟು ಮಾಡಿದೆ. ಆದುದರಿಂದ ಈ ವಿಷಯದ ಹಿಂದಿರುವ ತತ್ತ್ವವೇನು? ಹೇಗೆ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎನ್ನುವುದನ್ನು ಮೌಲಿಕವಾಗಿ ತಿಳಿಯಬೇಕಾಗಿದೆ.

ಮೌಲಿಕವಾಗಿ ಚಿಂತಿಸುವುದಾದರೆ, ಪತಂಜಲಿಗಳ ಪ್ರಕಾರ, ಯೋಗ ಎಂದರೆ ಚಿತ್ತವೃತ್ತಿಗಳ ನಿರೋಧವೇ ಆಗಿದೆ. ಮನಸ್ಸಿನ ಅಲೆಗಳು ಸಂಪೂರ್ಣವಾಗಿ ಶಾಂತವಾದಾಗ, ವ್ಯಕ್ತಿಯು ತನ್ನ ಮೂಲಸ್ವರೂಪವನ್ನು ದರ್ಶನ ಮಾಡ ಬಹುದು ಎನ್ನುವುದು ಈ ಸೂತ್ರದ ತಾತ್ಪರ್ಯ. ಯಾವ ಅಭ್ಯಾಸಗಳು ಚಿತ್ತವೃತ್ತಿಗಳನ್ನು ಕಡಿಮೆ ಮಾಡುತ್ತವೆಯೋ ಅವೆಲ್ಲವೂ ಯೋಗಕ್ಕೆ ಪೋಷಕ ಮತ್ತು ಯಾವ ಅಭ್ಯಾಸಗಳು ಚಿತ್ತವೃತ್ತಿಯನ್ನು ಹೆಚ್ಚಿಸುತ್ತವೆಯೋ ಅವು ಯೋಗಕ್ಕೆ ವಿರೋಧ ಎಂದು ಪರಿಗಣಿಸಬಹುದು.

ವಸ್ತುಗಳು ಅಥವಾ ಪದಾರ್ಥಗಳು ನಮ್ಮ ಮನಸ್ಸಿನ ಮೇಲೆ ಪರಿಣಾಮವನ್ನು ಬೀರಿ ಚಿತ್ತವೃತ್ತಿಗಳನ್ನು ಹೆಚ್ಚಿಸುತ್ತವೆ. ಪರಿಗ್ರಹ ಮಾಡುತ್ತಿದ್ದರೆ, ಅಂದರೆ ದಾನ ಕೊಟ್ಟ ವಸ್ತುಗಳನ್ನು ಸ್ವೀಕರಿಸುತ್ತಿದ್ದರೆ ನಮ್ಮಲ್ಲಿ ಪದಾರ್ಥಸಂಗ್ರಹವು ಜಾಸ್ತಿಯಾಗೆ ತನ್ಮೂಲಕ ಚಿತ್ತವೃತ್ತಿಗಳು ಜಾಸ್ತಿಯಾಗಿ ಯೋಗಕ್ಕೆ ಬಾಧಕವಾಗುತ್ತದೆ. ಆದುದರಿಂದ ದಾನವನ್ನು ಸ್ವೀಕರಿಸದೇ ಇರುವುದರಿಂದ, ಪದಾರ್ಥ ಸಂಗ್ರಹವು ಮಿತಿಯಲ್ಲಿದ್ದು ತನ್ಮೂಲಕ ಚಿತ್ತವೃತ್ತಿಗಳನ್ನು ಹತೋಟಿಯಲ್ಲಿರುವಂತೆ ಆಗುವುದರಿಂದ ಅಪರಿಗ್ರಹ ಎನ್ನುವ ಯಮವು ಒಂದು ಯೋಗಾಂಗವಾಗಿದೆ.

ಪದಾರ್ಥಗಳಿಗೂ ಮತ್ತು ಮನಸ್ಸಿಗೂ ಇರುವ ಸಂಬಂಧವೇನು? ಅವು ಹೇಗೆ ಚಿತ್ತವೃತ್ತಿಗಳನ್ನು ಹೆಚ್ಚಿಸುತ್ತವೆ ಎನ್ನುವುದನ್ನು ನಮ್ಮ ದೈನಂದಿನ ಜೀವನವನ್ನು ಗಮನಿಸುವ ಮೂಲಕವೇ ಅರ್ಥ ಮಾಡಿಕೊಳ್ಳಬಹುದು. ಒಂದು ಪದಾರ್ಥ ನಮ್ಮಲ್ಲಿ ಬಂದು ಸೇರಿದರೆ ಅದರ ಉಪಯೋಗ ಏನು? ಅದನ್ನು ಎಲ್ಲಿಟ್ಟಿರುವುದು? ಅದರ maintenance ಹೇಗೆ? ಮುಂತಾಗಿ ಆಲೋಚಿಸಬೇಕಾಗುತ್ತದೆ. ಕನಿಷ್ಠ ಪಕ್ಷ ಅದರ ಧೂಳು ಹೊಡೆಯುವುದಷ್ಟು ಕೆಲಸವನ್ನಂತೂ ಮಾಡಲೇಬೇಕಾಗುತ್ತದೆ. ಮನೆಯಲ್ಲಿ ವಸ್ತುಗಳು ಚೊಕ್ಕವಾಗಿದ್ದರೆ ಮನಸ್ಸು ಪ್ರಸನ್ನವಾಗಿರುತ್ತದೆ. ಶುಭ್ರವಾಗಿ, ಚೊಕ್ಕವಾಗಿ, ಅಂದವಾಗಿಟ್ಟುರುವ ಸನ್ನಿವೇಶವೇ ಮನಸ್ಸು ಅರಳುವಂತೆ ಮಾಡುತ್ತದೆ. ಆದರೆ ವಸ್ತುಗಳು ಅಸ್ತ್ಯವಸ್ತ್ಯವಾಗಿ ಹರಡಿದ್ದರೆ ಅಥವಾ ಬಿಸಾಡಲ್ಪಟ್ಟಿದ್ದರೆ ಮನಸ್ಸು ಕೆರಳಬಹುದು ಅಥವಾ ಒಂದು ಮಬ್ಬು ಕವಿಯಬಹುದು ಒಟ್ಟಿನಲ್ಲಿ ಪ್ರಸನ್ನತೆ ಹಾಳಾಗಬಹುದು.

ಒಟ್ಟಾರೆ ವಸ್ತುಗಳಿಗೂ ಮನಸ್ಥಿತಿಗೂ ಸಂಬಂಧವುಂಟು ಎನ್ನುವುದು ಸ್ಪಷ್ಟವಾಗುತ್ತದೆ. ಹೀಗೆ, ವಸ್ತುಗಳಿಗೂ ಚಿತ್ತವೃತ್ತಿಗಳಿಗೂ ಸಂಬಂಧವಿರುವುದರಿಂದ ವಸ್ತು ಸಂಗ್ರಹವನ್ನು ಕನಿಷ್ಠವಾಗಿಟ್ಟುಕೊಳ್ಳುವುದು ಚಿತ್ತವೃತ್ತಿಗಳು ಕಡಿಮೆಯಾಗುವುದಕ್ಕೆ ಕಾರಣವಾಗಿ ಯೋಗಕ್ಕೆ ಪೋಷಕವಾಗಿರುತ್ತದೆ. ಈ ಕನಿಷ್ಠ ಪದಾರ್ಥ ಸಂಗ್ರಹವೇ ಅಪರಿಗ್ರಹ ಎನ್ನುವ ಯಮದ ಹಿಂದಿರುವ ತತ್ತ್ವ. ಈ ತತ್ತ್ವವನ್ನೇ ಆಧುನಿಕ ಕಾರ್ಪೊರೇಟ್ ಜಗತ್ತು ವ್ಯಾಪಕವಾಗಿ, ಜಾಗತಿಕ ಮಟ್ಟದಲ್ಲಿ ಅಳವಡಿಸಿಕೊಂಡು ಬಹಳ ದೊಡ್ಡ ಮಟ್ಟದ ಪ್ರಯೋಜನವನ್ನು ಗಳಿಸಿರುವುದು.

ಇಂದಿನ ಕಾರ್ಪೊರೇಟ್ ಜಗತ್ತಿನಲ್ಲಿ ‘ಲೀನ್ ಪ್ರಿನ್ಸಿಪಲ್’ (Lean principles) ಬಹಳ ವ್ಯಾಪಕವಾಗಿ ರೂಢಿಯಲ್ಲಿದ್ದು ಅನೇಕ ಸಂಸ್ಥೆಗಳು ದೊಡ್ಡ ಗುಣಮಟ್ಟದ ಉತ್ಪನ್ನಗಳನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಿ ಜಾಗತಿಕ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನೇ ಉಂಟುಮಾಡಿವೆ. ಇಂತಹ ಸಂಸ್ಥೆಗಳಲ್ಲಿ ಅಗ್ರಗಣ್ಯವಾಗಿರುವುದು ಜಪಾನಿನಟೊಯೋಟ ಸಂಸ್ಥೆ. ಜಪಾನಿನಲ್ಲಿ ಶಿಂಟೋಯಿಸಮ್ ಹಾಗೂ ಜೆನ್ ಬುದ್ಧಿಸಂ ಗಳು ಪ್ರಚಲಿತವಿದ್ದು ಇವು ಭಾರತೀಯ ಸಂಸ್ಕೃತಿಯಿಂದ ಪ್ರಭಾವಿತವಾಗಿವೆ ಎನ್ನುವುದು ಬಹುತೇಕ ಮಾನ್ಯವಾಗಿರುವ ವಿಷಯವಾಗಿದೆ.

Prerane

ಈ ಮತಗಳ ಪ್ರಭಾವದಿಂದ ಜಪಾನ್ ಸಂಸ್ಕೃತಿಯಲ್ಲಿ ಕನಿಷ್ಠ ಪದಾರ್ಥ ಸಂಗ್ರಹ ಎನ್ನುವುದು ಬಹಳ ವ್ಯಾಪಕವಾಗಿ ರೂಢಿಯಲ್ಲಿದೆ. ಆ ಸಂಸ್ಕೃತಿಯಲ್ಲಿ ಯಾವುದೇ ವಸ್ತುವನ್ನು ಅವರು ಉಡಾಫೆಯಿಂದ ನೋಡುವುದಿಲ್ಲ. ಪ್ರತಿಯೊಂದು ಪದಾರ್ಥಕ್ಕೂ ಅದರದರ ಗೌರವವನ್ನು ಕೊಡುತ್ತಾರೆ. ಬೇರೆ ದೇಶದ ಜನರಜೊತೆ ವ್ಯವಹರಿಸಬೇಕಾದರೆ ಅವರ ಈ ವರ್ತನೆ ಹೆಚ್ಚು ಬೆಳಕಿಗೆ ಬರುತ್ತದೆ.

ಉದಾಹರಣೆಗೆ ಯಾವುದಾದರೂ use and throw pen ಅನ್ನು ಬೇರೆ ದೇಶದವನೊಬ್ಬ ಪೂರ್ಣವಾಗಿ ಬಳಸದೇ, ಅಸಡ್ಡೆಯಿಂದ ಅಥವಾ ಉಡಾಫೆಯಿಂದ ಎಸೆದರೆ, ಜಪಾನಿನವರು ಬಹಳ ಬೇಸರ ಪಟ್ಟುಕೊಂಡುಬಿಡುತ್ತಾರೆ. ಭಾರತೀಯ ಮಹರ್ಷಿ ಸಂಸ್ಕೃತಿಯ “ಪ್ರತಿಯೊಂದು ಪದಾರ್ಥವೂ ದೈವಪ್ರೀತಿಗಾಗಿ ನಿರ್ಮಿತವಾದದ್ದು” ಎನ್ನುವ ಭಾವನೆ ಶಿಂಟೋಯಿಸಮ್ ನಲ್ಲಿಯೂ ಇದೆ. ಆಧುನಿಕ ಭಾರತೀಯ ಸಮಾಜದಲ್ಲಿ ಬಹುತೇಕ ಮರೆಯಾಗಿರುವ ಈ ಭಾವನೆ ಜಪಾನಿನಲ್ಲಿ ಮಾತ್ರ ಬಹುತೇಕಸಜೀವವಾಗಿದೆ. ಆದುದರಿಂದ ಇಲ್ಲಿ ಪದಾರ್ಥಗಳನ್ನು ನೋಡುವ ನೋಟವೇ ಬೇರೆಯಾಗಿರುತ್ತದೆ. ಅವರುಗಳ ಮನೆಗೆ ಒಂದು ಹೊಸಪದಾರ್ಥ ತರಬೇಕಾದರೆ ಮನೆಯಲ್ಲಿರುವ ಯಾವವಸ್ತು ಹೊರಗೆ ಹೋಗಬೇಕು ಎಂದು ಆಲೋಚಿಸಿ ನಂತರವೇ ಒಂದು ಹೊಸಪದಾರ್ಥವನ್ನು ಖರೀದಿಸುತ್ತಾರೆ. ಹೀಗೆ ಅವರು ಕನಿಷ್ಠಪದಾರ್ಥ ಸಂಗ್ರಹವನ್ನು ಬಹಳ ಶಿಸ್ತಿನಿಂದ ಪಾಲಿಸುತ್ತಾರೆ.

ಜಪಾನ್ ಸಂಸ್ಥೆಗಳು ತಮ್ಮ ಸಂಸ್ಕೃತಿಯನ್ನು ಗೌರವದಿಂದ ಕಾಣುತ್ತಾರೆ ಮತ್ತು ಸಂಸ್ಕೃತಿಯ ಯಾವುದಾದರೂ ರೂಢಿಯು ಸಂಸ್ಥೆಗೆ ಪ್ರಯೋಜನಕಾರಿಯಾಗಿದ್ದರೆ ಅದನ್ನು ಹಿಂಜರಿಯದೇ, ಪಾಶ್ಯಾತ್ಯ ಜಗತ್ತಿನ ಅನುಮೋದನೆಗೆ ಕಾಯದೇ ಅಳವಡಿಸಿಕೊಳ್ಳುತ್ತಾರೆ. ಅಲ್ಲಿನ ಟೊಯೋಟ ಸಂಸ್ಥೆಯು ಈ ಕನಿಷ್ಠ ಪದಾರ್ಥಸಂಗ್ರಹ ಎನ್ನುವ ತತ್ತ್ವವನ್ನು ಲೀನ್ ಪ್ರಿನ್ಸಿಪಲ್ ಗಳಲ್ಲಿ ಒಂದಾದ ಶೂನ್ಯದಾಸ್ತಾನು (zero inventory) ಎನ್ನುವ ಹೆಸರಿನಲ್ಲಿ ಅಳವಡಿಸಿಕೊಂಡಿದೆ. ಉದಾಹರಣೆಗೆ ಕರ್ನಾಟಕದ ಬಿಡದಿಯಲ್ಲಿರುವ ಟೊಯೋಟ ಸಂಸ್ಥೆಯು ಕಾರು ತಯಾರಿಕೆಗೆ ಬೇಕಾದ ಬಿಡಿಭಾಗಗಳನ್ನು ತಂದಿಟ್ಟುಕೊಳ್ಳುವುದೇ ಇಲ್ಲ. ಬಿಡಿಭಾಗಗಳ ಪೂರೈಕೆದಾರರು ನಿಗಧಿತ ಸಮಯಕ್ಕೆ ಮುಂಚೆಯೇ ತಮ್ಮ ಸರಕುವಾಹನಗಳನ್ನು ತಯಾರಿಟ್ಟುಕೊಂಡು ನಿಗಧಿತ ಸಮಯಕ್ಕೆ ಸರಿಯಾಗಿ ಬಿಡಿಭಾಗಗಳನ್ನು ತಯಾರಿಕಾ ಘಟಕಕ್ಕೆ ಒದಗಿಸುತ್ತಾರೆ.

ಈ ರೂಢಿಯಿಂದ ಸಂಸ್ಥೆಯು ತಯಾರಿಕೆಯ ವೆಚ್ಚವನ್ನು ಕಡಿಮೆ ಮಾಡಿ, ಗ್ರಾಹಕರಿಗೆ ಕಡಿಮೆ ದರದಲ್ಲಿ ಕಾರುಗಳನ್ನು ಒದಗಿಸುವ ಮೂಲಕ ಮಾರುಕಟ್ಟೆಯ ದೊಡ್ಡ ಪಾಲನ್ನು ತಮ್ಮದಾಗಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಶೂನ್ಯದಾಸ್ತಾನಲ್ಲದೇ, ಇನ್ನಿತರ ಲೀನ್ ರೂಢಿಗಳಿಂದಾಗಿ ತಯಾರಿಕೆಯ ಗುಣಮಟ್ಟವನ್ನು ಹೆಚ್ಚಿಸಿ, ಟೊಯೋಟ ಸಂಸ್ಥೆಯು ತಾನು ಜಾಗತಿಕ ಮಾರುಕಟ್ಟೆಗಳಲ್ಲಿ ಅಗ್ರಗಣ್ಯ ಸ್ಥಾನವನ್ನು ಪಡೆಯುವುದಲ್ಲದೇ ಕೈಗಾರಿಕಾಡಳಿತ ಚಿಂತನೆಯಲ್ಲಿ ಒಂದು ಕ್ರಾಂತಿಯನ್ನೇ ಉಂಟುಮಾಡಿದ್ದಾರೆ. ವಿವಿಧ ಕೈಗಾರಿಕಾ ಕ್ಷೇತ್ರಗಳು, ಆಡಳಿತಗಳು, ಲೀನ್ ಪ್ರಿನ್ಸಿಪಲ್ ಗಳನ್ನು ಅಳವಡಿಸಿಕೊಳ್ಳುತ್ತವೆ. ಸಂಶೋಧನಾ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಸಂಶೋಧನೆ ಮತ್ತು ಅಧ್ಯಯನ ಮಾಡುತ್ತವೆ. ಒಟ್ಟಿನಲ್ಲಿ ಲೀನ್ ಎನ್ನುವ ಪದ ಇಂದು ಒಂದು ಮಾರುಕಟ್ಟೆ ಮಂತ್ರವಾಗಿದೆ.

ಹೀಗೆ, ಹೊರನೋಟದಲ್ಲಿ ಅಪ್ರಸ್ತುತ ಎನ್ನಿಸಬಹುದಾದ ಒಂದು ಯೋಗಾಂಗವು ಆಳವಾಗಿ ರೂಢಿಸಿಕೊಂಡಲ್ಲಿ ಎಂತಹಾ ಪರಿಣಾಮವನ್ನಾದರೂ ಉಂಟು ಮಾಡಬಹುದೆಂಬುದಕ್ಕೆ ಟೊಯೋಟಸಂಸ್ಥೆಯೇ ನಿದರ್ಶನವಾಗಿದೆ. ಈ ನಿದರ್ಶನದಿಂದ ನಾವೂ ಸಹ ಯೋಗಾಂಗಗಳನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಲಿಕ್ಕೆ ಸ್ಪೂರ್ತಿಯನ್ನು ಪಡೆಯೋಣ.

– ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು
ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನು ಓದಿ| Prerane | ಸಪ್ತ ಪ್ರಾಣಗಳೆಂಬ ಸಪ್ತ ವೃಷಭಗಳು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Ayodhya Temple: ಕಡಿಮೆಯಾದ ಭಕ್ತರ ದಟ್ಟಣೆ; ಅಯೋಧ್ಯೆಗೆ ಭೇಟಿ ನೀಡಲು ಇದು ಸಕಾಲ

Ayodhya Temple: ಕಳೆದ ಆರು ವಾರಗಳಲ್ಲಿ ಅಯೋಧ್ಯೆ ನಗರಕ್ಕೆ ಬರುವ ವಿಮಾನಗಳು, ರೈಲುಗಳು ಮತ್ತು ಬಸ್ ಸೇವೆ ಗಮನಾರ್ಹವಾಗಿ ಕಡಿಮೆಯಾದಂತೆ ಕಂಡುಬಂದಿದೆ. ಜನವರಿ 22ರಂದು ಪ್ರಾಣ ಪ್ರತಿಷ್ಠಾ ಸಮಾರಂಭ ನಡೆದ ನಂತರ ಅಯೋಧ್ಯೆಗೆ ಬರುವ ಭಕ್ತರ ಸಂಖ್ಯೆ ವಿಪರೀತ ಹೆಚ್ಚಾಗಿತ್ತು. ಜನವರಿಯಿಂದ ಮಾರ್ಚ್ 2024ರವರೆಗೆ ಪ್ರತಿದಿನ ಸುಮಾರು 1.5 ಲಕ್ಷ ಭಕ್ತರು ಭೇಟಿ ನೀಡುತ್ತಿದ್ದರು. ಆದರೆ ಏಪ್ರಿಲ್‌ನಿಂದ ಭಕ್ತರ ಸಂಖ್ಯೆ ಕಡಿಮೆಯಾಗುತ್ತ ಬಂತು. ಏಪ್ರಿಲ್- ಮೇನಲ್ಲಿ ಸುಮಾರು 1 ಲಕ್ಷ ಭಕ್ತರು ಭೇಟಿ ನೀಡಿದ್ದರು.

VISTARANEWS.COM


on

Ram Mandir
Koo

ಅಯೋಧ್ಯೆ ರಾಮಮಂದಿರ (Ayodhya Temple) ಹಿಂದೂಗಳ ಪವಿತ್ರ ಯಾತ್ರಾ ಸ್ಥಳವಾಗಿ ಹೊರಹೊಮ್ಮಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದು ಕೋಟ್ಯಂತರ ಹಿಂದೂಗಳ ಕನಸಾಗಿತ್ತು. ಹಾಗಾಗಿ ರಾಮಮಂದಿರ ಉದ್ಘಾಟನೆಯಾದ ಬೆನ್ನಿಗೇ ಲಕ್ಷಾಂತರ ಸಂಖ್ಯೆಯ ಭಕ್ತಾದಿಗಳು ರಾಮನ ದರ್ಶನಕ್ಕೆ ಬರುತ್ತಿದ್ದರು. ಆದರೆ ಮಂದಿರ ಉದ್ಘಾಟನೆಯಾಗಿ ಈಗಾಗಲೇ ಆರು ತಿಂಗಳು ಕಳೆದಿರುವುದರಿಂದ ಭಕ್ತರ ಸಂಖ್ಯೆ ಸಹಜವಾಗಿಯೇ ಕಡಿಮೆಯಾಗುತ್ತಿದೆ.

ಕಳೆದ ಆರು ವಾರಗಳಲ್ಲಿ ಅಯೋಧ್ಯೆ ನಗರಕ್ಕೆ ಬರುವ ವಿಮಾನಗಳು, ರೈಲುಗಳು ಮತ್ತು ಬಸ್ ಸೇವೆ ಗಮನಾರ್ಹವಾಗಿ ಕಡಿಮೆಯಾಗುತ್ತ ಬಂದಿದೆ. ಕೆಲವು ವಿಶೇಷ ರೈಲುಗಳ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಇತರ ರಾಜ್ಯಗಳಿಂದ ಅಯೋಧ್ಯೆಗೆ ಬರುವ ವಿಶೇಷ ಬಸ್ಸುಗಳ ಸಂಖ್ಯೆಯಲ್ಲೂ ಕಡಿತವಾಗಿದೆ. ಇದು ಪ್ರಯಾಣಿಕರು ಅಯೋಧ್ಯೆಗೆ ಬರುವ ಪ್ರಮಾಣ ಕಡಿಮೆಯಾಗಿದೆ ಎಂಬುದನ್ನು ಸೂಚಿಸುತ್ತದೆ.

ಈಗಾಗಲೇ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ ಕಡಿಮೆ ಬೇಡಿಕೆಯಿಂದಾಗಿ ಹೈದರಾಬಾದ್, ಬೆಂಗಳೂರು ಮತ್ತು ಪಾಟ್ನಾದಿಂದ ಅಯೋಧ್ಯೆಗೆ ನೇರ ವಿಮಾನಯಾನವನ್ನು ನಿಲ್ಲಿಸಿದೆ. ಸೇವೆ ಪ್ರಾರಂಭವಾದ ಕೇವಲ ಎರಡು ತಿಂಗಳ ನಂತರ ಸಂಸ್ಥೆ ಈ ನಿರ್ಧಾರ ತೆಗೆದುಕೊಂಡಿದೆ. ಏಪ್ರಿಲ್ 2024ರಲ್ಲಿ ಸ್ಪೈಸ್ ಜೆಟ್ ಹೈದರಾಬಾದ್‌ನಿಂದ ಅಯೋಧ್ಯೆಗೆ ವಿಮಾನವನ್ನು ಪ್ರಾರಂಭಿಸಿದ್ದು, ವಾರಕ್ಕೆ ಮೂರು ಬಾರಿ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾದ ಕಾರಣ ವಿಮಾನಯಾನವನ್ನು ನಿಲ್ಲಿಸಲಾಗಿದೆ. ಆದರೆ ಮಳೆಗಾಲ ಮುಗಿದ ನಂತರ ಮತ್ತೆ ಪ್ರಯಾಣಿಕರು ಹೆಚ್ಚಾಗುವ ನಿರೀಕ್ಷೆ ಇದೆ ಎಂಬ ನಿರೀಕ್ಷೆ ಇದೆ. ಅಯೋಧ್ಯೆಗೆ ದಕ್ಷಿಣ ಭಾರತದವರು ಹೆಚ್ಚಾಗಿ ಬರುತ್ತಿದ್ದರು. ಅವರೀಗ ಕೃಷಿ ಕಾರ್ಯಗಳಲ್ಲಿ ಮುಳುಗಿದ್ದಾರೆ. ಹಾಗಾಗಿ ಕೃಷಿ ಚಟುವಟಿಕೆ ಮುಗಿದ ಬಳಿಕ ಭಕ್ತರ ಸಂಖ್ಯೆ ಮತ್ತೆ ಏರುವ ನಿರೀಕ್ಷೆ ಇದೆ.

Ayodhya Temple

ಭಾರತೀಯ ರೈಲ್ವೆ ಕೂಡ ಅಯೋಧ್ಯೆಗೆ ವಿಶೇಷ ರೈಲುಗಳ ವ್ಯವಸ್ಥೆಯನ್ನು ಕಡಿಮೆ ಮಾಡಿದೆ. ಇದರ ಹೊರತಾಗಿ ಪ್ರತಿದಿನ 32ರಿಂದ 35 ರೈಲುಗಳು ಅಯೋಧ್ಯಾ ಧಾಮ್ ಮತ್ತು ಅಯೋಧ್ಯಾ ಕ್ಯಾಂಟ್ ನಿಲ್ದಾಣಗಳಿಗೆ ಆಗಮಿಸುತ್ತಲೇ ಇರುತ್ತವೆ. ರೈಲುಗಳು ನಿತ್ಯ ಸುಮಾರು 28,000 ಪ್ರಯಾಣಿಕರನ್ನು ಹೊತ್ತು ಬರುತ್ತವೆ ಎನ್ನಲಾಗಿದೆ. ಮೇ 15ರವರೆಗೆ ಅಯೋಧ್ಯೆಗೆ ಹೋಗಲು ರೈಲುಗಳಿಗೆ ಹೆಚ್ಚಿನ ಬೇಡಿಕೆಯಿದ್ದರೂ ನಂತರ ಕಡಿಮೆಯಾಗಿದೆ. ಆದರೂ ಅಯೋಧ್ಯೆಗೆ ತೆರಳುವ ಎಲ್ಲಾ ರೈಲುಗಳು ತುಂಬಿರುತ್ತವೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅದೇರೀತಿ ಇತರ ರಾಜ್ಯಗಳಿಂದ ಅಯೋಧ್ಯೆಗೆ ಬಸ್‌ಗಳ ಸಂಖ್ಯೆಯಲ್ಲೂ ಕಡಿಮೆಯಾಗಿದೆ. ಪ್ರಸ್ತುತ 396 ರಸ್ತೆ ಮಾರ್ಗದಲ್ಲಿ ಬಸ್‌ಗಳು ಅಯೋಧ್ಯೆಗೆ ಆಗಮಿಸುತ್ತಿವೆ. ಸದ್ಯಕ್ಕೆ ಮಧ್ಯಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ದೆಹಲಿಯಿಂದ ತಲಾ ಒಂದು ಬಸ್ ಮಾತ್ರ ಕಾರ್ಯ ನಿರ್ವಹಿಸುತ್ತಿದೆ ಎಂಬುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: ಮತ್ತೊಂದು ರೀಲ್‌ ಕ್ರೇಜ್‌; ಚಲಿಸುವ ರೈಲಿನಲ್ಲಿ ಯುವತಿಯ ಡೇಂಜರಸ್‌ ಡ್ಯಾನ್ಸ್‌!

ಜನವರಿ 22ರಂದು ಪ್ರಾಣ ಪ್ರತಿಷ್ಠಾ ಸಮಾರಂಭ ನಡೆದ ನಂತರ ಅಯೋಧ್ಯೆಗೆ ಬರುವ ಭಕ್ತರ ಸಂಖ್ಯೆ ವಿಪರೀತ ಹೆಚ್ಚಾಗಿತ್ತು. ಜನವರಿಯಿಂದ ಮಾರ್ಚ್ 2024ರವರೆಗೆ ಪ್ರತಿದಿನ ಸುಮಾರು 1.5 ಲಕ್ಷ ಭಕ್ತರು ಭೇಟಿ ನೀಡುತ್ತಿದ್ದರು. ಆದರೆ ಏಪ್ರಿಲ್‌ನಿಂದ ಭಕ್ತರ ಸಂಖ್ಯೆ ಕಡಿಮೆಯಾಗುತ್ತ ಬಂತು. ಏಪ್ರಿಲ್- ಮೇನಲ್ಲಿ ಸುಮಾರು 1 ಲಕ್ಷ ಭಕ್ತರು ಭೇಟಿ ನೀಡಿದ್ದರು. ಸಾಕಷ್ಟು ಭಕ್ತರು ಜನದಟ್ಟಣೆ ಕಡಿಮೆ ಆಗಲಿ ಎನ್ನುವುದನ್ನೇ ಕಾಯುತ್ತಿದ್ದಾರೆ. ಹಾಗಾಗಿ ಇನ್ನು ಮುಂದೆ ಅಯೋಧ್ಯೆಗೆ ಭಕ್ತರ ಸಂಖ್ಯೆ ಏರಲಿದೆ ಎಂಬ ನಿರೀಕ್ಷೆಯನ್ನು ಸ್ಥಳೀಯ ವ್ಯಾಪಾರಸ್ಥರು ಹೊಂದಿದ್ದಾರೆ.

Continue Reading

Latest

Tirupathi Laddu: ತಿರುಪತಿ ಲಡ್ಡು, ವಿಶೇಷ ದರ್ಶನ ದರದ ಬಗ್ಗೆ ಟಿಟಿಡಿ ಸ್ಪಷ್ಟನೆ

Tirupathi Laddu: ತಿರುಪತಿ ಎಂದಾಕ್ಷಣ ಮೊದಲು ನೆನಪಿಗೆ ಬರುವುದು ಅಲ್ಲಿಯ ರುಚಿಕರವಾದ ಲಡ್ಡು. ವೆಂಕಟೇಶ್ವರ ದೇವರಿಗೆ ಶ್ರೀವಾರಿ ಲಡ್ಡು ಎಂದು ಕರೆಯಲ್ಪಡುವ ಲಡ್ಡನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಲಾಗುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಈ ಲಡ್ಡು ಮತ್ತು ವಿಶೇಷ ದರ್ಶನದ ಬೆಲೆಯನ್ನು ಕಡಿತಗೊಳಿಸಿದೆ ಎಂಬ ವದಂತಿಯನ್ನು ಹಬ್ಬಿಸಿ ಜನರಲ್ಲಿ ಗೊದಲವನ್ನುಂಟುಮಾಡಲಾಗಿತ್ತು. ಲಡ್ಡು ಬೆಲೆಯನ್ನು 50 ರೂ. ಯಿಂದ 25 ರೂ.ಗೆ ಮತ್ತು ವಿಶೇಷ ದರ್ಶನದ ಬೆಲೆಯನ್ನು 300 ರೂ.ನಿಂದ 200ರೂ.ಗೆ ಕಡಿತಗೊಳಿಸಲಾಗಿದೆ ಎಂದು ತಿಳಿಸಲಾಗಿತ್ತು. ಆದರೆ ಈಗ ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

VISTARANEWS.COM


on

Tirupathi Laddu
Koo

ತಿರುಪತಿ : ಸಾಮಾಜಿಕ ಮಾಧ್ಯಮಗಳು (social media) ಜನರಿಗೆ ಪ್ರಸ್ತುತ ವಿಚಾರಗಳ ಬಗ್ಗೆ ಹಲವು ಮಾಹಿತಿಗಳನ್ನು ನೀಡುತ್ತದೆ. ಹೆಚ್ಚಿನ ವಿಚಾರಗಳು ಜನರಿಗೆ ಸಾಮಾಜಿಕ ಮಾಧ್ಯಮದಿಂದಲೇ ತಿಳಿಯುತ್ತಿದೆ. ಅಂದಮಾತ್ರಕ್ಕೆ ಇದರಲ್ಲಿ ಬರುವ ಎಲ್ಲಾ ಮಾಹಿತಿಯೂ ಸತ್ಯವಾಗಿರುವುದಿಲ್ಲ. ಕೆಲವೊಂದು ಊಹಾಪೋಹಗಳು ಇರುತ್ತದೆ. ಹಾಗಾಗಿ ಸಾಮಾಜಿಕ ಮಾಧ್ಯಮದ ಎಲ್ಲಾ ಮಾಹಿತಿಗಳನ್ನು ನಿಜವೆಂದು ನಂಬಬೇಡಿ. ಇದಕ್ಕೆ ತಿರುಪತಿ ಲಡ್ಡು (Tirupathi Laddu) ಹಾಗೂ ವಿಶೇಷ ದರ್ಶನಕ್ಕೆ ಸಂಬಂಧಪಟ್ಟ ಸುದ್ದಿಯೊಂದು ನಿದರ್ಶನವಾಗಿದೆ.

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳು ತಿರುಪತಿಯ ಶ್ರೀವೆಂಕಟೇಶ್ವರ ದೇವಸ್ಥಾನದ ಅಧಿಕೃತ ಉಸ್ತುವಾರಿಗಳಾದ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ತಿರುಮಲ ಲಡ್ಡು ಮತ್ತು ವಿಶೇಷ ದರ್ಶನದ ಬೆಲೆಯನ್ನು ಕಡಿತಗೊಳಿಸಿದೆ ಎಂಬ ವದಂತಿಯನ್ನು ಹಬ್ಬಿಸಿ ಜನರಲ್ಲಿ ಗೊದಲವನ್ನುಂಟು ಮಾಡಿದ್ದವು.

ಸಾಮಾಜಿಕ ಮಾಧ್ಯಮದಲ್ಲಿ ಮಾಡಲಾದ ಪೋಸ್ಟ್ ನಲ್ಲಿ ಲಡ್ಡು ಬೆಲೆಯನ್ನು 50ರೂ. ಯಿಂದ 25 ರೂ.ಗೆ ಮತ್ತು ವಿಶೇಷ ದರ್ಶನದ ಬೆಲೆಯನ್ನು 300 ರೂ.ನಿಂದ 200 ರೂ.ಗೆ ಕಡಿತಗೊಳಿಸಲಾಗಿದೆ ಎಂದು ತಿಳಿಸಲಾಗಿತ್ತು. ಈ ಸುದ್ದಿಯನ್ನು ನಿಜವೆಂದು ನಂಬಿದ ಭಕ್ತಾಧಿಗಳು ಸಂತೋಷದಿಂದ ಟಿಟಿಡಿಗೆ ಕೃತಜ್ಞತೆ ಸಲ್ಲಿದ್ದರು.

ಆದರೆ ಈ ಬಗ್ಗೆ ಟಿಟಿಡಿ ತನ್ನ ವೆಬ್ ಸೈಟ್ ಅಥವಾ ಅಧಿಕೃತ ಪುಟಗಳಲ್ಲಿ ಅಂತಹ ಯಾವುದೇ ಬೆಲೆ ಕಡಿತದ ಬಗ್ಗೆ ಘೋಷಣೆ ಮಾಡಿಲ್ಲ ಮತ್ತು ಸರ್ಕಾರ ಕೂಡ ಯಾವುದೇ ಹೇಳಿಕೆ ನೀಡಿಲ್ಲ. ಹಾಗಾಗಿ ಸಂಶಯಗೊಂಡ ಕೆಲವು ಭಕ್ತರು ಈ ಸುದ್ದಿಯನ್ನು ಪರಿಶೀಲಿಸಲು ಟಿಟಿಡಿ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಆಗ ಈ ಸುದ್ದಿ ಸುಳ್ಳು ಎಂಬುದಾಗಿ ತಿಳಿದುಬಂದಿದೆ. ಈ ದಾರಿತಪ್ಪಿಸುವಂತಹ ಪೋಸ್ಟ್ ಗಳನ್ನು ನಂಬಬೇಡಿ. ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಟಿಟಿಡಿ ಅಧಿಕೃತವಾಗಿ ಹೇಳಿಕೆ ನೀಡಿದೆ. ಆ ಮೂಲಕ ಸಾಮಾಜಿಕ ಮಾಧ್ಯಮದ ಈ ಸುದ್ದಿ ಸುಳ್ಳು ಎಂಬುದು ಭಕ್ತರಿಗೆ ಮನದಟ್ಟಾಗಿದೆ.

ಈ ದೇವಸ್ಥಾನದಲ್ಲಿ ವೆಂಕಟೇಶ್ವರ ದೇವರಿಗೆ ಶ್ರೀವಾರಿ ಲಡ್ಡು ಎಂದು ಕರೆಯಲ್ಪಡುವ ಲಡ್ಡನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಲಾಗುತ್ತದೆ. ದೇವಸ್ಥಾನದಲ್ಲಿ ಭಕ್ತರಿಗೆ ದೇವರ ದರ್ಶನ ಪಡೆದ ನಂತರ ಈ ಲಡ್ಡನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಇದು ತುಂಬಾ ಸಿಹಿ, ರುಚಿ ಮತ್ತು ಪರಿಮಳಯುಕ್ತವಾಗಿದೆ. ಹಾಗಾಗಿ ಈ ಲಡ್ಡುಗಳಿಗೆ ಹೆಚ್ಚಿನ ಬೇಡಿಕೆ ಇರುವ ಕಾರಣ ಅದರ ಬೆಲೆ ಇಳಿಕೆಯ ಸುದ್ದಿ ವೈರಲ್ ಆಗಿದೆ ಎನ್ನಲಾಗಿದೆ.

ಇದನ್ನೂ ಓದಿ: Viral Video: ಮತ್ತೊಂದು ರೀಲ್‌ ಕ್ರೇಜ್‌; ಚಲಿಸುವ ರೈಲಿನಲ್ಲಿ ಯುವತಿಯ ಡೇಂಜರಸ್‌ ಡ್ಯಾನ್ಸ್‌!

ವಿಶ್ವದಾದ್ಯಂತ ಪ್ರಸಿದ್ಧಿಯಾಗಿರುವ 1933ರಲ್ಲಿ ಸ್ಥಾಪನೆಯಾದ ತಿರುಮಲ ವೆಂಕಟೇಶ್ವರ ದೇವಸ್ಥಾನವು ಮೊದಲ ಬಾರಿಗೆ ತನ್ನ ನಿವ್ವಳ ಮೌಲ್ಯವನ್ನು ಘೋಷಿಸಿದೆ. ಇದರ ಪ್ರಕಾರ ಬ್ಯಾಂಕ್‌ಗಳಲ್ಲಿ 10.25 ಟನ್ ಚಿನ್ನದ ಠೇವಣಿ, 2.5 ಟನ್ ಚಿನ್ನಾಭರಣ, ಸುಮಾರು 16,000 ಕೋಟಿ ರೂ. ಬ್ಯಾಂಕ್ ಠೇವಣಿ ಮತ್ತು ಭಾರತದಾದ್ಯಂತ 960 ಆಸ್ತಿಗಳನ್ನು ಒಳಗೊಂಡಂತೆ ಒಟ್ಟು 2.5 ಲಕ್ಷ ಕೋಟಿ ರೂ. ನಿವ್ವಳ ಮೌಲ್ಯವನ್ನು ಹೊಂದಿದೆ ಎನ್ನಲಾಗಿದೆ. ಐಟಿ ಸೇವಾ ಸಂಸ್ಥೆಯಾದ ವಿಪ್ರೋ, ಆಹಾರ ಮತ್ತು ಪಾನೀಯ ಕಂಪನಿ ನೆಸ್ಲೆ ಮತ್ತು ಸರ್ಕಾರಿ ಸ್ವಾಮ್ಯದ ತೈಲ ಒಎನ್ ಜಿಸಿ ಮತ್ತು ಐಒಸಿಗಳ ಮಾರುಕಟ್ಟೆ ಬಂಡವಾಳ ಕೂಡ ಇಷ್ಟು ಪ್ರಮಾಣದಲ್ಲಿಲ್ಲ!

Continue Reading

Latest

Last Rites: ಅಂತ್ಯಕ್ರಿಯೆ ಮುಗಿಸಿ ಬರುವಾಗ ಸ್ಮಶಾನದತ್ತ ಹಿಂತಿರುಗಿ ನೋಡಬಾರದು ಅನ್ನೋದು ಏಕೆ ಗೊತ್ತಾ?

ಅಂತಿಮ ವಿಧಿವಿಧಾನಗಳಲ್ಲಿ (Last Rites) ಅಜ್ಞಾನ ಅಥವಾ ಮಾಹಿತಿಯ ಕೊರತೆಯಿಂದಾಗಿ ಕೆಲವರು ಇಂತಹ ಆಚರಣೆಗಳನ್ನು ಮಾಡುವುದಿಲ್ಲ. ಇನ್ನು ಕೆಲವು ಮಾಡಬಾರದ ಆಚರಣೆಗಳನ್ನು ಮಾಡುತ್ತಾರೆ. ಶವಸಂಸ್ಕಾರ ಮಾಡಿದ ಅನಂತರ ಸ್ಮಶಾನದತ್ತ ಹಿಂತಿರುಗಿ ನೋಡುವುದನ್ನು ತಪ್ಪಿಸುವುದು ಇವುಗಳಲ್ಲಿ ಒಂದು. ಹಿಂತಿರುಗಿ ನೋಡಬಾರದು ಎಂದು ಹಿರಿಯರು ಹೇಳುವುದೇಕೆ? ಇಲ್ಲಿದೆ ಮಾಹಿತಿ.

VISTARANEWS.COM


on

By

Last Rites
Koo

ಪ್ರತಿಯೊಂದು ಧರ್ಮದಲ್ಲೂ ವಿವಿಧ ಆಚರಣೆಗಳಿವೆ (rituals). ಅದರಲ್ಲೂ ಮುಖ್ಯವಾಗಿ ಸನಾತನ ಧರ್ಮದಲ್ಲಿ (sanatana dharma) ಸಾಕಷ್ಟು ವಿಶೇಷ ಮತ್ತು ಅರ್ಥಪೂರ್ಣವಾದ ಆಚರಣೆಗಳಿವೆ. ಕೆಲವೊಂದು ಆಚರಣೆಗಳ ಬಗ್ಗೆ ನಮಗೆ ಗೊತ್ತಿದ್ದರೂ ಮರಣಾನಂತರದ (post-death ceremony) ಕೆಲವು ಆಚರಣೆಗಳ ನಾವು ತಿಳಿದಿರುವುದಿಲ್ಲ. ಈ ಆಚರಣೆಗಳನ್ನು (Last Rites) ಪಾಲಿಸುವುದು ಬಹುಮುಖ್ಯ.

ಮರಣಾನಂತರದ ಆಚರಣೆಗಳಲ್ಲಿ 16 ಪ್ರಮುಖ ಆಚರಣೆಗಳಿವೆ. ಇದರಲ್ಲಿ ಅನೇಕ ನಿಯಮಗಳಿವೆ. ಅದನ್ನು ಪ್ರತಿಯೊಬ್ಬರೂ ಪಾಲಿಸುವುದು ಮುಖ್ಯವಾಗಿದೆ.

ಅಂತಿಮ ವಿಧಿವಿಧಾನಗಳಲ್ಲಿ ಅಜ್ಞಾನ ಅಥವಾ ಮಾಹಿತಿಯ ಕೊರತೆಯಿಂದಾಗಿ ಕೆಲವರು ಇಂತಹ ಆಚರಣೆಗಳನ್ನು ಮಾಡುವುದಿಲ್ಲ. ಇನ್ನು ಕೆಲವು ಮಾಡಬಾರದ ಆಚರಣೆಗಳನ್ನು ಮಾಡುತ್ತಾರೆ. ಶವಸಂಸ್ಕಾರ ಮಾಡಿದ ಅನಂತರ ಸ್ಮಶಾನದತ್ತ ಹಿಂತಿರುಗಿ ನೋಡುವುದನ್ನು ತಪ್ಪಿಸುವುದು ಇವುಗಳಲ್ಲಿ ಒಂದು.

ಗರುಡ ಪುರಾಣದ ಪ್ರಕಾರ ಒಬ್ಬ ವ್ಯಕ್ತಿಯು ಸತ್ತಾಗ ಆತನ ಆತ್ಮವು ದೇಹವನ್ನು ತೊರೆಯುತ್ತದೆ. ಅಂತಿಮ ವಿಧಿಗಳನ್ನು ನಡೆಸಿದ ಬಳಿಕ ದೇಹವು ಬೂದಿಯಾಗುತ್ತದೆ. ಆದರೆ ಆತ್ಮವು ಅಲ್ಲೇ ಇರುತ್ತದೆ. ಆತ್ಮವನ್ನು ಶಾಶ್ವತ ಮತ್ತು ಅವಿನಾಶಿ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ. ಯಾವುದೇ ಕತ್ತಿ, ಬೆಂಕಿ ಅಥವಾ ನೀರು ಆತ್ಮವನ್ನು ನಾಶಮಾಡುವುದಿಲ್ಲ.

ಸ್ಮಶಾನ ಕಾರ್ಯದ ಬಳಿಕ ವ್ಯಕ್ತಿಯ ಆತ್ಮವು ಬೇರೆ ಲೋಕಕ್ಕೆ ಪ್ರಯಾಣ ಬೆಳೆಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಸತ್ತವರ ಕುಟುಂಬದ ಸದಸ್ಯರು ಅಂತ್ಯಕ್ರಿಯೆಯ ಅನಂತರ ಅಂತ್ಯಕ್ರಿಯೆ ನಡೆದ ಸ್ಥಳಕ್ಕೆ ಹಿಂತಿರುಗಿ ನೋಡಿದಾಗ ಕುಟುಂಬಕ್ಕೆ ಆತ್ಮದ ಬಾಂಧವ್ಯವು ಅದನ್ನು ಇನ್ನೊಂದು ಲೋಕಕ್ಕೆ ಹಾದುಹೋಗದಂತೆ ತಡೆಯುತ್ತದೆ.

ಗರುಡ ಪುರಾಣದಲ್ಲಿ ಉಲ್ಲೇಖಿಸಿದಂತೆ ಮರಣದ ಅನಂತರ ಸತ್ತ ವ್ಯಕ್ತಿಯ ಆತ್ಮವು ಸ್ಮಶಾನದಲ್ಲಿ ನಡೆಯುವ ಅವನ ಕೊನೆಯ ಚಟುವಟಿಕೆಗಳನ್ನು ವೀಕ್ಷಿಸುತ್ತದೆ. ಮೃತನ ಕುಟುಂಬದ ಸದಸ್ಯರು ಸ್ಮಶಾನದಲ್ಲಿ ಇರುವುದರಿಂದ ಸತ್ತ ವ್ಯಕ್ತಿಯ ಅಂತ್ಯಕ್ರಿಯೆಯ ಕಡೆಗೆ ಹಿಂತಿರುಗಿ ನೋಡಿದರೆ ಮೃತನ ಆತ್ಮವು ಆ ವ್ಯಕ್ತಿಯೊಂದಿಗೆ ಬರುತ್ತದೆ ಮತ್ತು ಆ ಬಂಧವನ್ನು ಮುರಿಯಲಾಗುವುದಿಲ್ಲ.

ಹೀಗಾಗಿ ಅಂತಿಮ ವಿಧಿಗಳನ್ನು ನಡೆಸಿದ ಅನಂತರ ತಿರುಗಬಾರದು ಎಂದು ಹೇಳಲಾಗುತ್ತದೆ. ಯಾಕೆಂದರೆ ಅಂತಹ ಸಂದರ್ಭದಲ್ಲಿ ಆತ್ಮವು ಮರಣಾನಂತರದ ಜೀವನಕ್ಕೆ ಪರಿವರ್ತನೆ ಕಷ್ಟವಾಗುತ್ತದೆ.

ಇದನ್ನೂ ಓದಿ: Vastu Tips: ಗಂಗಾ ಜಲ ಮನೆಯಲ್ಲಿಟ್ಟರೆ ಸಾಲದು; ಅದನ್ನು ಎಲ್ಲಿ ಇಡಬೇಕು, ಹೇಗೆ ಇಡಬೇಕು?

ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು 13 ದಿನಗಳ ಕಾಲ ಹಲವು ವಿಧಿವಿಧಾನಗಳನ್ನು ನಡೆಸಲಾಗುತ್ತದೆ. ಇದರ ಹೊರತಾಗಿ ಅಂತ್ಯಕ್ರಿಯೆಯಿಂದ ಹಿಂದಿರುಗಿದ ಅನಂತರ ಅನುಸರಿಸಬೇಕಾದ ಕೆಲವು ನಿಯಮಗಳಿವೆ.

ತಕ್ಷಣ ಸ್ನಾನ ಮಾಡಿ ಮತ್ತು ವ್ಯಕ್ತಿಯ ಬಟ್ಟೆಗಳನ್ನು ತೊಳೆಯಬೇಕು. ನಕಾರಾತ್ಮಕ ಶಕ್ತಿಗಳನ್ನು ತೊಡೆದುಹಾಕಲು ಗಂಗಾಜಲವನ್ನು ಇಡೀ ಮನೆಯಲ್ಲಿ ಸಿಂಪಡಿಸಬೇಕು. ವ್ಯಕ್ತಿ ಸತ್ತ ಮನೆಯಲ್ಲಿ ಮೃತರ ಆತ್ಮಕ್ಕೆ ಶಾಂತಿಗಾಗಿ 12 ದಿನಗಳ ಕಾಲ ದೀಪವನ್ನು ಬೆಳಗಿಸಬೇಕು. ಪಿತೃ ಪಕ್ಷದಲ್ಲಿ ಪಿಂಡದಾನ ಮಾಡಬೇಕು‌ ಎಂಬೆಲ್ಲ ಉಲ್ಲೇಖ ಗರುಡ ಪುರಾಣದಲ್ಲಿದೆ.

Continue Reading

ಧಾರ್ಮಿಕ

Vastu Tips: ತಿಳಿದಿರಲಿ, ಕನ್ನಡಿಯೂ ನುಡಿಯುತ್ತದೆ ನಮ್ಮ ಭವಿಷ್ಯ!

ಕನ್ನಡಿಯನ್ನು ಪ್ರತಿಯೊಂದು ಮನೆಯಲ್ಲೂ ವಿವಿಧ ಉದ್ದೇಶದಿಂದ ಇಡಲಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅದು ಬಳಕೆಯಾಗುವುದು ಪ್ರತಿಬಿಂಬ ನೋಡಲು. ಹೀಗೆ ಮನೆಯಲ್ಲಿ ಇಡುವ ಕನ್ನಡಿಗಳನ್ನು ವಾಸ್ತು ಪ್ರಕಾರ (Vastu Tips) ಇರಿಸುವುದರಿಂದ ನಾವು ನಮ್ಮ ಅದೃಷ್ಟವನ್ನು ಬದಲಾಯಿಕೊಳ್ಳಬಹುದು.

VISTARANEWS.COM


on

By

Vastu Tips
Koo

ಮನೆಯಲ್ಲಿ (home) ಇಡುವ ಪ್ರತಿಯೊಂದು ವಸ್ತುವಿಗೂ ವಾಸ್ತು (Vastu Tips) ಅನ್ವಯವಾಗುತ್ತದೆ. ಅದರಲ್ಲೂ ನಾವು ಅಲಂಕಾರದ ವಿಚಾರದಲ್ಲಿ ಇಡುವ ಕನ್ನಡಿ (mirror) ನಮ್ಮ ಸೌಂದರ್ಯವನ್ನು ಬದಲಾಯಿಸುವ ಸಾಮರ್ಥ್ಯವನ್ನು ಮಾತ್ರ ಹೊಂದಿಲ್ಲ ಬದಲಾಗಿ ನಮ್ಮ ಅದೃಷ್ಟವನ್ನೂ ಬದಲಾಯಿಸುತ್ತದೆ.

ಕನ್ನಡಿಯನ್ನು ಪ್ರತಿಯೊಂದು ಮನೆಯಲ್ಲೂ ವಿವಿಧ ಉದ್ದೇಶದಿಂದ ಇಡಲಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅದು ಬಳಕೆಯಾಗುವುದು ಪ್ರತಿಬಿಂಬ ನೋಡಲು. ಹೀಗೆ ಮನೆಯಲ್ಲಿ ಇಡುವ ಕನ್ನಡಿಗಳನ್ನು ವಾಸ್ತು ಪ್ರಕಾರ ಇರಿಸುವುದರಿಂದ ನಾವು ನಮ್ಮ ಅದೃಷ್ಟವನ್ನು ಬದಲಾಯಿಕೊಳ್ಳಬಹುದು.

ವಾಸ್ತು ಶಾಸ್ತ್ರವು ಅನೇಕ ನಂಬಿಕೆಗಳನ್ನು ಹೊಂದಿದ್ದು, ಅದರಲ್ಲಿ ಮುಖ್ಯವಾದದ್ದು ಕನ್ನಡಿಯನ್ನು ಸರಿಯಾಗಿ ಇರಿಸಿದಾಗ ಅದು ಮನೆಗೆ ಸಮೃದ್ಧಿ ಮತ್ತು ಸಂತೋಷ, ಮನೆಮಂದಿಗೆ ಅರೋಗ್ಯ ವನ್ನು ತರುತ್ತದೆ ಮತ್ತು ಅದು ಸದಾಕಾಲ ಇರುವಂತೆ ಮಾಡುತ್ತದೆ. ಹಾಗಾದರೆ ವಾಸ್ತುವಿನ ಪ್ರಕಾರ ಮನೆಯಲ್ಲಿ ಕನ್ನಡಿ ಎಲ್ಲಿ, ಹೇಗೆ ಇಡಬೇಕು ಎನ್ನುವ ಮಾಹಿತಿ ಇಲ್ಲಿದೆ.

Vastu Tips


ದಿಕ್ಕು ಮುಖ್ಯ

ಕನ್ನಡಿಯನ್ನು ಇಡಲು ದಿಕ್ಕು ಮುಖ್ಯವಾಗಿದೆ. ಸಕಾರಾತ್ಮಕ ಶಕ್ತಿಯು ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಹರಿಯುತ್ತದೆ. ಈ ಕಾರಣದಿಂದಾಗಿ ಕನ್ನಡಿಯನ್ನು ಯಾವಾಗಲೂ ವೀಕ್ಷಕರ ಮುಖವು ಪೂರ್ವ ಅಥವಾ ಉತ್ತರದ ಗೋಡೆಗೆ ಎದುರಿಸುವಂತೆ ಇರಿಸಬೇಕು. ಕನ್ನಡಿಯನ್ನು ಎಚ್ಚರಿಕೆಯಿಂದ ಇರಿಸುವುದನ್ನು ಖಚಿತಪಡಿಸಿಕೊಳ್ಳಿ. ಎರಡು ಕನ್ನಡಿಗಳು ಎಂದಿಗೂ ಪರಸ್ಪರ ನೇರವಾಗಿ ಇಡಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.

ಎಷ್ಟು ಎತ್ತರ?

ಕನ್ನಡಿಯು ನೆಲದಿಂದ ನಾಲ್ಕರಿಂದ ಐದು ಅಡಿ ಎತ್ತರದಲ್ಲಿ ಇರಿಸಬೇಕು. ಹಾಸಿಗೆಯ ಪಕ್ಕದಲ್ಲಿ ದೊಡ್ಡ ಡ್ರೆಸ್ಸಿಂಗ್ ಟೇಬಲ್ ಅಥವಾ ಸೈಡ್ ಟೇಬಲ್ ಅನ್ನು ಹೊಂದುವುದು ಅದೃಷ್ಟ. ಯಾವುದೇ ಕೋಣೆಯಲ್ಲಿ ಕನ್ನಡಿಯನ್ನು ಅಳವಡಿಸುವಾಗ ನೀವು ಮಲಗಿದಾಗ ನಿಮ್ಮ ದೇಹದ ಯಾವುದೇ ಭಾಗವು ಕನ್ನಡಿಯಲ್ಲಿ ಗೋಚರಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಪೂರ್ವ ಮತ್ತು ಉತ್ತರದಿಂದ ಧನಾತ್ಮಕ ಶಕ್ತಿಗಳು ಪಶ್ಚಿಮ ಅಥವಾ ದಕ್ಷಿಣಕ್ಕೆ ಎದುರಾಗಿರುವ ಗೋಡೆಗಳ ಮೇಲೆ ಇರುವ ಕನ್ನಡಿಗಳಿಂದ ಪ್ರತಿಫಲಿಸುತ್ತದೆ.

ಸೂಕ್ತ ಗಾತ್ರ?

ಕನ್ನಡಿಯ ಗಾತ್ರವು ಬಹಳ ಮುಖ್ಯವಾಗಿರುತ್ತದೆ. ಚದರ ಅಥವಾ ಆಯತದಂತಹ ನಾಲ್ಕು ಮೂಲೆಗಳ ಫಾರ್ಮ್ ಅನ್ನು ಆಯ್ಕೆ ಮಾಡಬಹುದು. ಚೌಕ ಮತ್ತು ಆಯತಾಕಾರದ ರೂಪಗಳು ಅದೃಷ್ಟ ಎಂದು ವಾಸ್ತು ಹೇಳುತ್ತದೆ. ಸುಂದರವಾದ ಮಾದರಿಗಳನ್ನು ರಚಿಸಲು ಚೌಕ ಮತ್ತು ಆಯತಾಕಾರದ ಕನ್ನಡಿಗಳು ತುಂಬಾ ಉಪಯುಕ್ತವಾಗಿವೆ.

ಇದನ್ನೂ ಓದಿ: Vastu Tips: ಮನೆ ಆವರಣದ ತಪ್ಪಾದ ದಿಕ್ಕಿನಲ್ಲಿ ಗಿಡ ಬೆಳೆಸಿದರೆ ಕೆಟ್ಟ ಪರಿಣಾಮ!

ತಿಳಿದಿರಲಿ

ಕನ್ನಡಿಗಳಲ್ಲಿ ಯಾವಾಗಲೂ ಸ್ಪಷ್ಟವಾದ ಚಿತ್ರವು ಗೋಚರಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಅವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ.

ಮನೆಯ ಈಶಾನ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಕನ್ನಡಿ ಅಥವಾ ಯಾವುದೇ ಗಾಜಿನ ವಸ್ತುವನ್ನು ಇರಿಸಿ.

ಮನೆಯಲ್ಲಿ ಯಾವುದೇ ಕನ್ನಡಿ ನಾಲ್ಕು ಅಥವಾ ಐದು ಅಡಿಗಳಿಗಿಂತ ಹೆಚ್ಚಿಲ್ಲ ಎಂದು ಖಚಿತಪಡಿಸಿಕೊಳ್ಳಿ.

ಅಪಾರದರ್ಶಕ ಬಾಗಿಲುಗಳು ಮತ್ತು ಕಿಟಕಿ ಫಲಕಗಳಿಂದ ದೂರವಿರಿ. ಅರೆಪಾರದರ್ಶಕವಾದವುಗಳನ್ನು ಆರಿಸುವುದು ಸಾಮಾನ್ಯವಾಗಿ ಯೋಗ್ಯವಾಗಿದೆ.

ಕನ್ನಡಿಗಳು ಯುವಕರು ವಿಚಲಿತರಾಗಲು ಮತ್ತು ಗಮನಹರಿಸುವಲ್ಲಿ ತೊಂದರೆಗೆ ಕಾರಣವಾಗಬಹುದು. ಆದ್ದರಿಂದ ಅವುಗಳನ್ನು ಸ್ಟಡಿ ಟೇಬಲ್‌ನಿಂದ ದೂರವಿರಿಸಿ.

Continue Reading
Advertisement
Udhayanidhi Stalin
ಕರ್ನಾಟಕ16 mins ago

Udhayanidhi Stalin: ಸನಾತನ ಧರ್ಮದ ವಿರುದ್ಧ ಹೇಳಿಕೆ; ಇಂದು ಬೆಂಗಳೂರು ಕೋರ್ಟ್‌ನಲ್ಲಿ ಉದಯನಿಧಿ ಸ್ಟಾಲಿನ್‌ ವಿಚಾರಣೆ

AFG vs BAN
ಕ್ರೀಡೆ20 mins ago

AFG vs BAN: ರೋಚಕ ಗೆಲುವು ಸಾಧಿಸಿ ಸೆಮಿಫೈನಲ್​ಗೆ ಲಗ್ಗೆಯಿಟ್ಟ ಆಫ್ಘನ್​; ಟೂರ್ನಿಯಿಂದ ಹೊರಬಿದ್ದ ಆಸೀಸ್​

Mamata Banerjee
ದೇಶ46 mins ago

Mamata Banerjee: ಬಾಂಗ್ಲಾದೇಶದೊಂದಿಗೆ ಜಲ ಹಂಚಿಕೆಯ ಮಾತುಕತೆ: ಮಮತಾ ಬ್ಯಾನರ್ಜಿ ವಿರೋಧ; ಪ್ರಧಾನಿಗೆ ಪತ್ರ

physical abuse mandya
ಕ್ರೈಂ52 mins ago

Physical Abuse: ಅಪ್ರಾಪ್ತ ಮಗಳನ್ನು ಗರ್ಭಿಣಿ ಮಾಡಿದ ಕಾಮಪಿಶಾಚಿ ಅಪ್ಪನಿಗೆ ಗೂಸಾ

Paris Olympics 2024
ಕ್ರೀಡೆ1 hour ago

Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಕರ್ನಾಟಕದ ಅದಿತಿ ಅಶೋಕ್

Hunger Strike
ದೇಶ1 hour ago

Hunger Strike: ಉಪವಾಸ ಸತ್ಯಾಗ್ರಹ ಮಾಡ್ತಿದ್ದ ದಿಲ್ಲಿ ಸಚಿವೆ ಆಸ್ಪತ್ರೆಗೆ ದಾಖಲು

Suraj Revanna Case
ಪ್ರಮುಖ ಸುದ್ದಿ2 hours ago

Suraj Revanna Case: ತಮ್ಮನಿಗೆ ಮೂರು ಸಲ; ಈಗ ಅಣ್ಣನಿಗೂ ಪುರುಷತ್ವ ಪರೀಕ್ಷೆ! ಇದೇ ಬೇರೆ ಥರ!

Job Alert
ಉದ್ಯೋಗ2 hours ago

Job Alert: ಈಶಾನ್ಯ ರೈಲ್ವೆ ವಿಭಾಗದಿಂದ 1,104 ಅಪ್ರೆಂಟಿಸ್‌ಗಳ ನೇಮಕ; ಐಟಿಐ ಪಾಸಾದವರು ಅಪ್ಲೈ ಮಾಡಿ

Rohit Sharma
ಕ್ರೀಡೆ2 hours ago

Rohit Sharma: ಬಾಬರ್​ ಅಜಂ ದಾಖಲೆ ಸರಿಗಟ್ಟಿದ ರೋಹಿತ್​ ಶರ್ಮ

Dating Tips
Latest2 hours ago

Dating Trend: ʼ3 ತಿಂಗಳ ಡೇಟಿಂಗ್‌ʼ! ಯುವ ಜನತೆಯ ಹೊಸ ಟ್ರೆಂಡ್‌!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ16 hours ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ4 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ4 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ5 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌