Assembly Elections 2023 | ತ್ರಿಪುರ, ನಾಗಾಲ್ಯಾಂಡ್, ಮೇಘಾಲಯದ ರಾಜಕೀಯ ಸ್ಥಿತಿ ಹೇಗಿದೆ? ಯಾವ ಪಕ್ಷದ ಬಲ ಹೆಚ್ಚಿದೆ? - Vistara News

ದೇಶ

Assembly Elections 2023 | ತ್ರಿಪುರ, ನಾಗಾಲ್ಯಾಂಡ್, ಮೇಘಾಲಯದ ರಾಜಕೀಯ ಸ್ಥಿತಿ ಹೇಗಿದೆ? ಯಾವ ಪಕ್ಷದ ಬಲ ಹೆಚ್ಚಿದೆ?

ತ್ರಿಪುರ, ಮೇಘಾಲಯ ಹಾಗೂ ನಾಗಾಲ್ಯಾಂಡ್‌ ವಿಧಾನಸಭೆ ಚುನಾವಣೆಗೆ (Assembly Elections 2023) ಆಯೋಗವು ದಿನಾಂಕ ನಿಗದಿಪಡಿಸಿದೆ. ಮೂರೂ ರಾಜ್ಯಗಳ ರಾಜಕೀಯ ಸ್ಥಿತಿಗತಿ, ಲೆಕ್ಕಾಚಾರದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

VISTARANEWS.COM


on

Tripura Election 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಕೇಂದ್ರ ಚುನಾವಣೆ ಆಯೋಗವು ತ್ರಿವಳಿ ರಾಜ್ಯಗಳ ವಿಧಾನಸಭೆ ಚುನಾವಣೆಗೆ (Assembly Elections 2023) ದಿನಾಂಕ ನಿಗದಿಪಡಿಸಿದೆ. ಈಶಾನ್ಯ ಭಾರತದ ತ್ರಿಪುರಾ ವಿಧಾನಸಭೆಗೆ ಫೆಬ್ರವರಿ 16, ನಾಗಾಲ್ಯಾಂಡ್ ಹಾಗೂ ಮೇಘಾಲಯ ವಿಧಾನಸಭೆಗೆ ಫೆಬ್ರವರಿ 27ರಂದು ಚುನಾವಣೆ ನಡೆಯಲಿದೆ. ಮಾರ್ಚ್ 2ರಂದು ಮೂರೂ ರಾಜ್ಯಗಳಲ್ಲಿ ಮತ ಎಣಿಕೆ ನಡೆಯಲಿದೆ.

ಹಾಗಾದರೆ, ಲೋಕಸಭೆ ಚುನಾವಣೆ ದೃಷ್ಟಿಯಿಂದ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿರುವ ಮೂರೂ ರಾಜ್ಯಗಳ ರಾಜಕೀಯ ಪರಿಸ್ಥಿತಿ ಹೇಗಿದೆ? ಯಾವ ಪಕ್ಷ ಆಡಳಿತದಲ್ಲಿದೆ? ಯಾವ ಪಕ್ಷಗಳ ಮಧ್ಯೆ ತೀವ್ರ ಸ್ಪರ್ಧೆ ಇದೆ? ಒಟ್ಟು ಸ್ಥಾನಗಳು ಎಷ್ಟು? ಮ್ಯಾಜಿಕ್‌ ನಂಬರ್‌ ಯಾವುದು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ತ್ರಿಪುರದಲ್ಲಿ ಬಿಜೆಪಿ ಪ್ರಾಬಲ್ಯ
ಪ್ರಮುಖ ಈಶಾನ್ಯ ರಾಜ್ಯವಾಗಿರುವ ತ್ರಿಪುರದಲ್ಲಿ ೨೦೨೩ರ ಮಾರ್ಚ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಯಿದೆ. ಸದ್ಯ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಮಾಣಿಕ್‌ ಸಾಹಾ ಮುಖ್ಯಮಂತ್ರಿಯಾಗಿದ್ದಾರೆ. ಒಟ್ಟು ೬೦ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಇಲ್ಲಿ ಆಡಳಿತಾರೂಢ ಬಿಜೆಪಿಗೆ ಸಿಪಿಎಂ ಒಳಗೊಂಡ ಎರಡರಂಗವು ಪ್ರಬಲ ಸ್ಪರ್ಧಿಯಾಗಿದೆ. ತ್ರಿಪುರದಲ್ಲಿ ಕಾಂಗ್ರೆಸ್‌ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬಂತಿದೆ.

2018ರ ಚುನಾವಣೆ ಫಲಿತಾಂಶ
ಬಿಜೆಪಿ 36
ಐಪಿಎಫ್‌ಟಿ 8
ಎಡರಂಗ 16
ಒಟ್ಟು ಸ್ಥಾನ 60
ಮ್ಯಾಜಿಕ್‌ ನಂಬರ್‌ 31

ನಾಗಾಲ್ಯಾಂಡ್‌ನಲ್ಲಿ ಎನ್‌ಡಿಎ ಮೈತ್ರಿಗೆ ಮತ್ತೆ ಗೆಲುವು?
ಈಶಾನ್ಯದ ಬಹುತೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಪಾರುಪತ್ಯ ಇದೆ. ಅದರಂತೆ, ನಾಗಾಲ್ಯಾಂಡ್‌ನಲ್ಲಿ ನ್ಯಾಷನಲಿಸ್ಟ್‌ ಡೆಮಾಕ್ರಟಿಕ್‌ ಪ್ರೊಗ್ರೆಸ್ಸಿವ್‌ ಪಕ್ಷ (NDPP)ದ ನೆಫಿಯು ರಿಯೋ ಮುಖ್ಯಮಂತ್ರಿಯಾಗಿದ್ದಾರೆ. ಎನ್‌ಡಿಪಿಪಿ ಜತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಯ ವೈ. ಪ್ಯಾಟ್ಟೊನ್‌ ಉಪ ಮುಖ್ಯಮಂತ್ರಿಯಾಗಿದ್ದಾರೆ. ಮುಂದಿನ ಚುನಾವಣೆಯಲ್ಲೂ ಎನ್‌ಡಿಪಿ ಹಾಗೂ ಬಿಜೆಪಿ ಜತೆಗೂಡಿ ಸ್ಪರ್ಧಿಸಲು ತೀರ್ಮಾನಿಸಿವೆ.

2018ರ ಚುನಾವಣೆ ಫಲಿತಾಂಶ
ಬಿಜೆಪಿ 12
ಎನ್‌ಡಿಪಿಪಿ 18
ಎನ್‌ಪಿಎಫ್‌ 26
ಇತರೆ 4
ಒಟ್ಟು ಸ್ಥಾನ 60
ಮ್ಯಾಜಿಕ್‌ ನಂಬರ್‌ 31

ಮೇಘಾಲಯದಲ್ಲಿ ಕಾಂಗ್ರೆಸ್‌ ಗೆಲ್ಲುವುದೇ?
ಈಶಾನ್ಯ ರಾಜ್ಯವಾದ ಮೇಘಾಲಯದಲ್ಲಿ ಬಿಜೆಪಿಯು ಆಡಳಿತಾರೂಢ ಮೈತ್ರಿ (ಮೇಘಾಲಯ ಡೆಮಾಕ್ರಟಿಕ್‌ ಅಲಯನ್ಸ್)‌ ಪಕ್ಷದ ಸದಸ್ಯವಾದರೂ ಇಲ್ಲಿ ಪ್ರಾಬಲ್ಯವಿಲ್ಲ. ನ್ಯಾಷನಲ್‌ ಪೀಪಲ್ಸ್‌ ಪಕ್ಷದ ಕಾನ್ರಾಡ್‌ ಸಂಗ್ಮಾ ಅವರು ಮುಖ್ಯಮಂತ್ರಿಯಾಗಿದ್ದು, ೨೦೨೩ರಲ್ಲೂ ಗೆಲುವು ಸಾಧಿಸುವ ವಿಶ್ವಾಸವಿದೆ. ಕಾಂಗ್ರೆಸ್‌ನ 12 ಶಾಸಕರು ಟಿಎಂಸಿ ಸೇರ್ಪಡೆಯಾಗಿರುವುದು ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದೆ.

2018ರ ಚುನಾವಣೆ ಫಲಿತಾಂಶ
ಬಿಜೆಪಿ 2
ಎನ್‌ಪಿಪಿ 19
ಕಾಂಗ್ರೆಸ್‌ 21
ಇತರೆ 18
ಒಟ್ಟು ಸ್ಥಾನ 60
ಮ್ಯಾಜಿಕ್‌ ನಂಬರ್‌ 31

ಇದನ್ನೂ ಓದಿ | Election Commission | ಫೆಬ್ರವರಿ 16 ತ್ರಿಪುರಾ, ಫೆ.27ಕ್ಕೆ ನಾಗಾಲ್ಯಾಂಡ್, ಮೇಘಾಲಯ ಎಲೆಕ್ಷನ್, ಮಾರ್ಚ್ 2ರಂದು ರಿಸಲ್ಟ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Road Accident: ಪಿಕ್‌ಅಪ್‌ ವಾಹನ ಕಂದಕಕ್ಕೆ ಬಿದ್ದು 15 ಕಾರ್ಮಿಕರ ದುರ್ಮರಣ; ಕೆಲಸಕ್ಕೆ ಹೊರಟವರು ಮಸಣಕ್ಕೆ!

Road Accident: ಅಪಘಾತ ಸಂಭವಿಸಿ 15 ಜನ ಮೃತಪಟ್ಟ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ವಿಜಯ್‌ ಶರ್ಮಾ ಸಂತಾಪ ಸೂಚಿಸಿದ್ದಾರೆ. ಕವಾರ್ಧ ಜಿಲ್ಲೆಯಲ್ಲಿ ಪಿಕ್‌ಅಪ್‌ ವಾಹನ ಕಂದಕಕ್ಕೆ ಉರುಳಿ 15 ಜನ ಮೃತಪಟ್ಟಿರುವ ಸುದ್ದಿ ತಿಳಿದು ಅತೀವ ನೋವಾಯಿತು. ಕುಟುಂಬಸ್ಥರ ನೋವಿನಲ್ಲಿ ನಾನು ಕೂಡ ಭಾಗಿಯಾಗಿದ್ದೇನೆ ಎಂದು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಅವರು ಪೋಸ್ಟ್‌ ಮಾಡಿದ್ದಾರೆ.

VISTARANEWS.COM


on

Road Accident
Koo

ರಾಯ್‌ಪುರ: ಛತ್ತೀಸ್‌ಗಢದ ಕವಾರ್ಧ ಜಿಲ್ಲೆಯಲ್ಲಿ ಭೀಕರ ಅಪಘಾತ (Road Accident) ಸಂಭವಿಸಿದ್ದು, 15 ಕಾರ್ಮಿಕರು ಮೃತಪಟ್ಟಿದ್ದಾರೆ. ಛತ್ತೀಸ್‌ಗಢದ (Chhattisgarh) ಕವಾರ್ಧ (Kawardha) ಪ್ರದೇಶದಲ್ಲಿ ಸುಮಾರು 25-30 ಕಾರ್ಮಿಕರಿದ್ದ ಪಿಕ್‌ಅಪ್‌ ವಾಹನವು ತೆರಳುತ್ತಿತ್ತು. ಇದೇ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಾಹ್‌ಪನಿ ಪ್ರದೇಶದ ಕಂದಕಕ್ಕೆ ಉರುಳಿದೆ. 8 ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಸೋಮವಾರ (ಮೇ 20) ಬೆಳಗಿನ ಜಾವವೇ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಬೈಗಾ ಬುಡಕಟ್ಟು ಸಮುದಾಯದವರು ಕೆಲಸಕ್ಕೆಂದು ಪಿಕ್‌ಅಪ್‌ ವಾಹನದಲ್ಲಿ ತೆರಳುತ್ತಿದ್ದರು. ಸುಮಾರು 20 ಅಡಿ ಆಳದ ಕಂದಕಕ್ಕೆ ಬಸ್‌ ಉರುಳಿದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತ ಸಂಭವಿಸುತ್ತಲೇ ಆಂಬುಲೆನ್ಸ್‌ ವ್ಯವಸ್ಥೆ ಮಾಡಲಾಯಿತಾದರೂ ವಾಹನ ಬಿದ್ದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕರು ಮೃತಪಟ್ಟಿದ್ದಾರೆ. ಮೃತರಲ್ಲಿ ಮಹಿಳೆಯರು ಕೂಡ ಇದ್ದಾರೆ ಎಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ. ಇವರು ಕುಯಿ ಗ್ರಾಮದವರು ಎಂಬ ಮಾಹಿತಿಯೂ ಲಭ್ಯವಾಗಿದೆ.

ಸಂತಾಪ ಸೂಚಿಸಿದ ಡಿಸಿಎಂ

ಅಪಘಾತ ಸಂಭವಿಸಿ 15 ಜನ ಮೃತಪಟ್ಟ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ವಿಜಯ್‌ ಶರ್ಮಾ ಸಂತಾಪ ಸೂಚಿಸಿದ್ದಾರೆ. “ಕವಾರ್ಧ ಜಿಲ್ಲೆಯಲ್ಲಿ ಪಿಕ್‌ಅಪ್‌ ವಾಹನ ಕಂದಕಕ್ಕೆ ಉರುಳಿ 15 ಜನ ಮೃತಪಟ್ಟಿರುವ ಸುದ್ದಿ ತಿಳಿದು ಅತೀವ ನೋವಾಯಿತು. ಕುಟುಂಬಸ್ಥರ ನೋವಿನಲ್ಲಿ ನಾನು ಕೂಡ ಭಾಗಿಯಾಗಿದ್ದೇನೆ. ಗಾಯಾಳುಗಳು ಶೀಘ್ರದಲ್ಲೇ ಗುಣಮುಖರಾಗಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ. ಸಂತ್ರಸ್ತರು ಹಾಗೂ ಅವರ ಕುಟುಂಬಸ್ಥರಿಗೆ ಅಗತ್ಯ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ಡಿಸಿಎಂ ತಿಳಿಸಿದ್ದಾರೆ.

ಒಂದು ತಿಂಗಳ ಹಿಂದಷ್ಟೇ ಛತ್ತೀಸ್‌ಗಢದ ದುರ್ಗ್ ಜಿಲ್ಲೆಯ ಕುಮ್ಹಾರಿ ಪ್ರದೇಶದಲ್ಲಿ ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಖಾಸಗಿ ಸಂಸ್ಥೆಯೊಂದರ 12 ಕಾರ್ಮಿಕರು ಮೃತಪಟ್ಟು, 14 ಮಂದಿ ಗಾಯಗೊಂಡಿದ್ದರು. ದುರ್ಗದ ಗಣಿಯಲ್ಲಿ ಕಾರ್ಮಿಕರಿಂದ ತುಂಬಿದ್ದ ಬಸ್ ಪಲ್ಟಿಯಾಗಿತ್ತು. ಗಾಯಗೊಂಡವರಲ್ಲಿ ಹನ್ನೆರಡು ಜನರನ್ನು ಎಐಐಎಂಎಸ್ (ರಾಯಪುರ) ಗೆ ಸ್ಥಳಾಂತರಿಸಲಾಗಿತ್ತು, ಉಳಿದ ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಘಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದರು.

ಇದನ್ನೂ ಓದಿ: Road Accident: ಬೆಂಗಳೂರು, ಗದಗದಲ್ಲಿ ಸರಣಿ ಅಪಘಾತ; ಗ್ಯಾಸ್ ಟ್ಯಾಂಕರ್ ಸ್ಫೋಟಕ್ಕೆ ಮನೆಗಳೇ ಭಸ್ಮ

Continue Reading

ದೇಶ

Physical Abuse & Murder: ಬಾಲಕಿ ಮೇಲೆ ಅತ್ಯಾಚಾರ, ಸಜೀವ ದಹನ ಕೇಸ್‌; ಹಂತಕರಿಗೆ ಮರಣದಂಡನೆ

Physical Abuse & Murder:ಬಾಲಕಿಯನ್ನು ಅತ್ಯಾಚಾರಗೈದು ಬಳಿಕ ಸಜೀವ ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲೇಬಿಯಾ ಬುಡಗಟ್ಟು ಜನಾಂಗದ ಇಬ್ಬರು ಸಹೋದರರಾದ ಕಲು ಮತ್ತು ಕಹ್ನಾ ವಿರುದ್ಧ ಪೋಕ್ಸೋ ಕಾಯ್ದೆಯಲ್ಲಿ ಕೇಸು ದಾಖಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಮೂರು ಮಹಿಳೆಯರು ಸೇರಿದಂತೆ ಇತರೆ ಏಳು ಜನರ ವಿರುದ್ಧವೂ ಕೇಸ್‌ ದಾಖಲಿಸಲಾಗಿತ್ತು. ಅವರು ಆರೋಪಿಗಳಿಗೆ ಸಾಕ್ಷ್ಯಾಧಾರ ನಾಶಕ್ಕೆ ಸಹಕರಿಸಿದ ಆರೋಪ ಎದುರಿಸುತ್ತಿದ್ದರು. ಇದೀಗ ಕಲು ಮತ್ತು ಕಹ್ನಾಗೆ ಮರಣದಂಡನೆ ವಿಧಿಸಿರುವ ಕೋರ್ಟ್‌ ಉಳಿದ ಏಳು ಜನರನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಿದೆ.

VISTARANEWS.COM


on

Physical Abuse & Murder
Koo

ನವದೆಹಲಿ: ಕಳೆದ ವರ್ಷ ಅಪ್ರಾಪ್ತೆ ಮೇಲೆ ನಡೆದಿದ್ದ ಅತ್ಯಾಚಾರ ಮತ್ತು ಬರ್ಬರ ಕೊಲೆ(Physical Abuse & Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಹಂತಕರಿಗೆ ರಾಜಸ್ಥಾನ(Rajasthan)ದ ಬಿಲ್ವಾರ ವಿಶೇಷ ಕೋರ್ಟ್‌ ಮರಣದಂಡನೆ(Death Penalty) ವಿಧಿಸಲಾಗಿದೆ. ನ್ಯಾಯಮೂರ್ತಿ ಅನಿಲ್‌ ಗುಪ್ತಾ ಇದ್ದ ನ್ಯಾಯಪೀಠ, ಪ್ರಕರಣದ ದೋಷಿಗಳಾದ ಕಲು ಮತ್ತು ಕಹ್ನಾ ಎಂಬ ಸಹೋದರರಿಗೆ ಮರಣದಂಡನೆ ವಿಧಿಸಿ ಆದೇಶ ಹೊರಡಿಸಿದ್ದು, ಇದು ಅಪರೂಪಗಳಲ್ಲಿ ಅಪರೂಪದ ಪ್ರಕರಣ ಎಂದು ಹೇಳಿದೆ.

ಬಾಲಕಿಯನ್ನು ಅತ್ಯಾಚಾರಗೈದು ಬಳಿಕ ಸಜೀವ ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲೇಬಿಯಾ ಬುಡಗಟ್ಟು ಜನಾಂಗದ ಇಬ್ಬರು ಸಹೋದರರಾದ ಕಲು ಮತ್ತು ಕಹ್ನಾ ವಿರುದ್ಧ ಪೋಕ್ಸೋ ಕಾಯ್ದೆಯಲ್ಲಿ ಕೇಸು ದಾಖಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಮೂರು ಮಹಿಳೆಯರು ಸೇರಿದಂತೆ ಇತರೆ ಏಳು ಜನರ ವಿರುದ್ಧವೂ ಕೇಸ್‌ ದಾಖಲಿಸಲಾಗಿತ್ತು. ಅವರು ಆರೋಪಿಗಳಿಗೆ ಸಾಕ್ಷ್ಯಾಧಾರ ನಾಶಕ್ಕೆ ಸಹಕರಿಸಿದ ಆರೋಪ ಎದುರಿಸುತ್ತಿದ್ದರು. ಇದೀಗ ಕಲು ಮತ್ತು ಕಹ್ನಾಗೆ ಮರಣದಂಡನೆ ವಿಧಿಸಿರುವ ಕೋರ್ಟ್‌ ಉಳಿದ ಏಳು ಜನರನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಿದೆ. ಇದೀಗ ಇವರ ಬಿಡುಗಡೆ ಪ್ರಶ್ನಿಸಿ ರಾಜಸ್ಥಾನ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆಯಾಗುವ ನಿರೀಕ್ಷೆ ಇದೆ. ಇನ್ನು ಮೂವರು ಮಹಿಳೆಯರಲ್ಲಿ ಇಬ್ಬರು ಕಲು ಮತ್ತು ಕಹ್ನಾನ ಪತ್ನಿಯರು ಎಂದು ಹೇಳಲಾಗಿದೆ.

ಇನ್ನು ಈ ಬಗ್ಗೆ ಸರ್ಕಾರಿ ವಕೀಲ ಮಹಾವೀರ್‌ ಸಿಂಗ್‌ ಕಿಶ್ವಂತ್‌ ಪ್ರತಿಕ್ರಿಯಿಸಿದ್ದು, ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲು ಮತ್ತು ಕಹ್ನಾಗೆ ಮರಣದಂಡನೆ ವಿಧಿಸಲಾಗಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷ ನಡೆದಿತ್ತು ಪೈಶಾಚಿಕ ಕೃತ್ಯ

ಬಿಲ್ವರಾ ಜಿಲ್ಲೆಯ ಕೊಟ್ರಿ ತಾಲೂಕಿನ ಶಹಾಪುರದಲ್ಲಿ ನಡೆದಿದ್ದು, ದನ ಮೇಯಿಸಲು ಹೋಗಿದ್ದ 14ವರ್ಷದ ಬಾಲಕಿ ನಿಗೂಢವಾಗಿ ಕಣ್ಮರೆ ಆಗಿದ್ದಳು. ದನಗಳು ಹಟ್ಟಿಗೆ ವಾಪಾಸಾದರೂ ಮಗಳು ಬಾರದೇ ಇರುವುದನ್ನು ಕಂಡ ಪೋಷಕರು ಗಾಬರಿಗೊಂಡಿದ್ದರು. ಆಕೆಗಾಗಿ ಮನೆಯವರೆಲ್ಲಾ ಹುಡುಕಾಟ ಶುರು ಮಾಡಿದ್ದರು. ಸುಮಾರು ಹೊತ್ತಿನ ಹುಡುಕಾಟದ ಬಳಿಕ ರಾತ್ರಿ 10ಗಂಟೆ ವೇಳೆಗೆ ಇದ್ದಿಲಿನ ಕುಲುಮೆಯಿಂದ ಹೊಗೆ ಹೋಗುತ್ತಿರುವುದನ್ನು ಗಮನಿಸಿದ್ದರು. ಅದನ್ನು ಕೆದಕಿ ನೋಡಿದಾಗ ಬಾಲಕಿ ಧರಿಸಿದ್ದ ಬಟ್ಟೆ ತುಂಡುಗಳು, ಚಪ್ಪಲಿ ಪತ್ತೆಯಾಗಿತ್ತು.

ತಕ್ಷಣ ಪೊಲೀಸರಿಗೆ ಕರೆ ಮಾಡಿದ ಕುಟುಂಬಸ್ಥರು ಘಟನೆ ಬಗ್ಗೆ ವಿವರಿಸಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದಾಗ ಅರೆಬೆಂದ ಮೃತದೇಹ ಸಿಕ್ಕಿತ್ತು. ಇದರಿಂದ ಆಕೆಯನ್ನು ಹಂತಕರು ಜೀವಂತವಾಗಿ ಸುಟ್ಟಿರುವ ಶಂಕೆ ವ್ಯಕ್ತವಾಗಿತ್ತು. ಇದಾದ ಬಳಿಕ ವಿಧಿ ವಿಜ್ಞಾನ ವಿಭಾಗಕ್ಕೆ ಮೃತದೇಹ ಕಳಿಸಿದಾಗ, ಬಾಲಕಿ ಪ್ರಜ್ಞಾ ಹೀನ ಸ್ಥಿತಿಯಲ್ಲಿರುವಾಗಲೇ ಆಕೆಯನ್ನು ಇದ್ದಿಲಿನ ಕುಲುಮೆಯಲ್ಲಿ ಸುಟ್ಟಿದ್ದಾರೆ. ಆಕೆಯನ್ನು ಇಬ್ಬರು ಅತ್ಯಾಚಾರ ಎಸಗಿದ್ದಾರೆ ಎಂಬುದು ತನಿಖೆಯಲ್ಲಿ ಬಯಲಾಗಿತ್ತು.

ಇನ್ನು ಈ ಕೃತ್ಯ ಇಡೀ ರಾಜ್ಯದಲ್ಲೇ ಸಂಚಲನ ಮೂಡಿಸಿತ್ತು. ಅಲ್ಲದೇ ರಾಜಕೀಯ ಟೀಕಾಪ್ರಹಾರಕ್ಕೂ ಕಾರಣವಾಗಿತ್ತು. ಪೊಲೀಸರು ಪ್ರಕರಣದಕ್ಕೆ ಸಂಬಂಧಿಸಿದಂತೆ ಕೇವಲ 30ದಿನಗಳಲ್ಲಿ 400ಕ್ಕೂ ಅಧಿಕ ಪುಟುಗಳ ಚಾರ್ಜ್‌ಶೀಟ್‌ ದಾಖಲಿಸಿದ್ದರು.

ಇದನ್ನೂ ಓದಿ:Baby Death : ಮಲತಾಯಿಯ ಕ್ರೌರ್ಯಕ್ಕೆ ಬಲಿಯಾಯ್ತಾ 3 ವರ್ಷದ ಕಂದಮ್ಮ?

Continue Reading

ದೇಶ

ಕುಡಿದು ಕಾರು ಓಡಿಸಿ ಇಬ್ಬರ ಜೀವ ತೆಗೆದ ಶ್ರೀಮಂತನ ಮಗನಿಗೆ 15 ಗಂಟೆಯೊಳಗೆ ಜಾಮೀನು! ಪ್ರಬಂಧ ಬರೆಯುವ ಶಿಕ್ಷೆ!

Crime News: ಸ್ಪೋರ್ಟ್ಸ್‌ ಕಾರು ಓಡಿಸಿ ಇಬ್ಬರ ಸಾವಿನ ಕಾರಣನಾದ ಅಪ್ರಾಪ್ತ ವಯಸ್ಕನಿಗೆ ಜಾಮೀನು ಸಿಕ್ಕಿದೆ. ಅದೂ ಬಂಧನವಾದ 15 ಗಂಟೆಯೊಳಗೆ ಎನ್ನುವುದು ವಿಶೇಷ. ಯೆರವಾಡಾದ ಸಂಚಾರ ಪೊಲೀಸರೊಂದಿಗೆ 15 ದಿನಗಳ ಕಾಲ ಕೆಲಸ ಮಾಡಬೇಕು, ಅಪಘಾತಗಳ ಬಗ್ಗೆ 300 ಪದಗಳ ಪ್ರಬಂಧ ಬರೆಯಬೇಕು, ಕುಡಿತದ ಅಭ್ಯಾಸಕ್ಕೆ ಚಿಕಿತ್ಸೆ ಪಡೆಯಬೇಕು ಮತ್ತು ಮನೋವೈದ್ಯಕೀಯ ಮೌಲ್ಯಮಾಪನ ಹಾಗೂ ಚಿಕಿತ್ಸೆಗೆ ಒಳಗಾಗಬೇಕು ಎಂಬ ಷರತ್ತುಗಳ ಮೇಲೆ ನ್ಯಾಯಾಲಯವು ನೀಡಿದೆ ಮೂಲಗಳು ತಿಳಿಸಿವೆ. ಸದ್ಯ ಈ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

VISTARANEWS.COM


on

Crime News
Koo

ಮುಂಬೈ: ಸ್ಪೋರ್ಟ್ಸ್‌ ಕಾರು ಓಡಿಸಿ ಇಬ್ಬರ ಸಾವಿನ ಕಾರಣನಾದ ಅಪ್ರಾಪ್ತ ವಯಸ್ಕನಿಗೆ ಜಾಮೀನು ಸಿಕ್ಕಿದೆ. ಅದೂ ಬಂಧನವಾದ 15 ಗಂಟೆಯೊಳಗೆ ಎನ್ನುವುದು ವಿಶೇಷ. 17 ವರ್ಷದ ಈತ ಶನಿವಾರ ಪುಣೆಯಲ್ಲಿ ಚಲಾಯಿಸುತ್ತಿದ್ದ ಪೋರ್ಷೆ ಕಾರು ಕೋರೆಗಾಂವ್ ಪಾರ್ಕ್‌ ಸಮೀಪ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಪುರುಷ ಮತ್ತು ಮಹಿಳೆ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿತ್ತು (Crime News).

ʼʼಬಾಲಕನಿಗೆ ಜಾಮೀನು ಸಿಕ್ಕಿದೆ. ಜಾಮೀನು ನಿರಾಕರಿಸುವಷ್ಟು ಅಪರಾಧವು ಗಂಭೀರವಾಗಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯವು ಕೆಲವೊಂದು ಷರತ್ತನ್ನೂ ವಿಧಿಸಿದೆ. ಯೆರವಾಡಾದ ಸಂಚಾರ ಪೊಲೀಸರೊಂದಿಗೆ 15 ದಿನಗಳ ಕಾಲ ಕೆಲಸ ಮಾಡಬೇಕು, ಅಪಘಾತಗಳ ಬಗ್ಗೆ 300 ಪದಗಳ ಪ್ರಬಂಧ ಬರೆಯಬೇಕು, ಕುಡಿತದ ಅಭ್ಯಾಸಕ್ಕೆ ಚಿಕಿತ್ಸೆ ಪಡೆಯಬೇಕು ಮತ್ತು ಮನೋವೈದ್ಯಕೀಯ ಮೌಲ್ಯಮಾಪನ ಹಾಗೂ ಚಿಕಿತ್ಸೆಗೆ ಒಳಗಾಗಬೇಕು ಎಂಬ ಷರತ್ತುಗಳ ಮೇಲೆ ನ್ಯಾಯಾಲಯವು ನೀಡಿದೆʼʼ ಎಂದು ಆತನ ವಕೀಲ ಪ್ರಶಾಂತ್ ಪಾಟೀಲ್ ಹೇಳಿದ್ದಾರೆ. ಆರೋಪಿ ಪುಣೆಯ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮಿಯ ಮಗ.

ಘಟನೆಯ ವಿವರ

ಪುಣೆಯಲ್ಲಿ ಉದ್ಯೋಗ ನಿರ್ವಹಿಸುತ್ತಿರುವ, ಮಧ್ಯಪ್ರದೇಶದ ಎಂಜಿನಿಯರ್‌ಗಳಾದ 24 ವರ್ಷದ ಅನೀಶ್ ಅವಧಿ ಮತ್ತು ಅಶ್ವಿನಿ ಕೊಶ್ತಾ ಅವರು ಬೈಕ್‌ನಲ್ಲಿ ಹಿಂದಿರುಗುತ್ತಿದ್ದಾಗ ಈ ಅಪ್ರಾಪ್ತ ಚಾಲಾಯಿಸುತ್ತಿದ್ದ, ಗಂಟೆಗೆ 200 ಕಿ.ಮೀ. ವೇಗದಲ್ಲಿ ಬಂದ ಕಾರು ಡಿಕ್ಕಿ ಹೊಡೆದಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಡಿಕ್ಕಿಯ ರಭಸಕ್ಕೆ ಅಶ್ವಿನಿ ಸುಮಾರು 20 ಅಡಿ ಎತ್ತರಕ್ಕೆ ಚಿಮ್ಮಿದ್ದರು. ಕಾರಿನ ಮೇಲೆ ಎಸೆಯಲ್ಪಟ್ಟ ಅನೀಶ್‌ ಗಂಭೀರ ಗಾಯಗೊಂಡಿದ್ದರು. ಬಳಿಕ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು.

ʼʼಮುಂಜಾನೆ 2.15ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಕಾರು ವೇಗದಲ್ಲಿತ್ತು. ಕಾರು ಬೈಕಿಗೆ ಡಿಕ್ಕಿ ಹೊಡೆದ ನಂತರ ಚಾಲಕ ಪರಾರಿಯಾಗಲು ಯತ್ನಿಸಿದ್ದ. ಸ್ಥಳೀಯರು ಆತನನ್ನು ಹಿಡಿದು ನಿಲ್ಲಿಸಿದ್ದರು. ಚಾಲಕನಲ್ಲದೆ ಕಾರಿನಲ್ಲಿ ಇನ್ನೂ ಇಬ್ಬರಿದ್ದರು. ಆ ಪೈಕಿ ಓರ್ವ ತಪ್ಪಿಸಿಕೊಂಡಿದ್ದ. ಸಿಕ್ಕ ಬಿದ್ದ ಚಾಲಕ ಸೇರಿದಂತೆ ಇಬ್ಬರನ್ನು ಜನಸಮೂಹವು ಥಳಿಸಿದೆʼʼ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. ಘಟನೆ ನಡೆದು 15 ನಿಮಿಷಗಳಲ್ಲಿ ಪೊಲೀಸರು ಅಪಘಾತ ನಡೆದ ಸ್ಥಳಕ್ಕೆ ಧಾವಿಸಿದ್ದರು. ಈ ವೇಳೆಗಾಗಲೇ ದಂಪತಿ ಅಸುನೀಗಿದ್ದರು.

ಮದ್ಯ ಸೇವಿಸಿದ್ದ

ಪಬ್‌ನಲ್ಲಿ ಪಾರ್ಟಿ ಮಾಡಿದ್ದ ಅಪ್ರಾಪ್ತರು ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ನಿರ್ಲಕ್ಷ್ಯ ಮತ್ತು ಅತಿವೇಗದ ಚಾಲನೆಯ ಕಾರಣ ನೀಡಿ ಎಫ್ಐಆರ್ ದಾಖಲಿಸಲಾಗಿದೆ. ಕಾರು ಚಲಾಯಿಸಿದ ಹದಿಹರೆಯದವನ ತಂದೆ ಮತ್ತು ಆತನಿಗೆ ಮದ್ಯ ಪೂರೈಸಿದ ಪಬ್ ವಿರುದ್ಧವೂ ದೂರು ದಾಖಲಿಸುವ ಸಾಧ್ಯತೆ ಇದೆ. ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಅವರು, ಇದು ʼಘೋರ ಅಪರಾಧʼ ಆಗಿರುವುದರಿಂದ ಆರೋಪಿಯನ್ನು ವಯಸ್ಕನಂತೆ ಪರಿಗಣಿಸಿ ಆತನನ್ನು ಕಸ್ಟಡಿಗೆ ನೀಡಬೇಕೆಂದು ಕೋರಿದ್ದರು. ಜಾಮೀನು ಆದೇಶದ ವಿರುದ್ಧ ಅವರು ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Yelahanka flyover : ಯುವತಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಯುವಕನ ಡೆಡ್ಲಿ ಬೈಕ್‌ ರೈಡಿಂಗ್‌!

Continue Reading

ದೇಶ

ISIS Terrorists: ಐಪಿಎಲ್‌ ಪಂದ್ಯಕ್ಕೂ ಮೊದಲೇ ಗುಜರಾತ್‌ನಲ್ಲಿ ನಾಲ್ವರು ಐಸಿಸ್‌ ಉಗ್ರರ ಬಂಧನ; ಇವರ ಸಂಚೇನು?

ISIS Terrorists: ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್‌ನ ಎಲಿಮಿನೇಟರ್‌ ಹಾಗೂ ಕ್ವಾಲಿಫೈಯರ್‌ ಪಂದ್ಯಗಳು ನಡೆಯುವ ಕೆಲವೇ ಗಂಟೆಗಳ ಮೊದಲೇ ಉಗ್ರರನ್ನು ಬಂಧಿಸಿರುವುದು ಪ್ರಾಮುಖ್ಯತೆ ಪಡೆದಿದೆ.

VISTARANEWS.COM


on

ISIS Terrorists
Koo

ಅಹಮದಾಬಾದ್: ಗುಜರಾತ್‌ ಭಯೋತ್ಪಾದನಾ ನಿಗ್ರಹ ದಳವು (ATS) ಅಹಮದಾಬಾದ್‌ ಏರ್‌ಪೋರ್ಟ್‌ನಲ್ಲಿ ನಾಲ್ವರು ಐಸಿಸ್‌ ಉಗ್ರರನ್ನು (ISIS Terrorists) ಬಂಧಿಸಿದ್ದಾರೆ. ಸರ್ದಾರ್‌ ವಲ್ಲಭಭಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Ahmedabad Airport) ಎಟಿಸ್‌ ಸಿಬ್ಬಂದಿಯು ಶ್ರೀಲಂಕಾದ ನಾಲ್ವರು ಉಗ್ರರನ್ನು ಬಂಧಿಸಿದ್ದಾರೆ. ನಾಲ್ವರೂ ಉಗ್ರರು ವಿಮಾನ ನಿಲ್ದಾಣದಲ್ಲಿ ತಮ್ಮ ಹ್ಯಾಂಡ್ಲರ್‌ಗಾಗಿ ಕಾಯುತ್ತಿರುವಾಗಲೇ ಅವರನ್ನು ಬಲೆಗೆ ಹಾಕಿದ್ದಾರೆ. ನಾಲ್ವರನ್ನೂ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ನಾಲ್ವರನ್ನೂ ಬಂಧಿಸುತ್ತಲೇ ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಎಟಿಎಸ್‌ ಸಿಬ್ಬಂದಿಯು ವಿಚಾರಣೆ ನಡೆಸುತ್ತಿದ್ದಾರೆ. ನಾಲ್ವರೂ ಉಗ್ರರು ವಿಮಾನ ನಿಲ್ದಾಣದಲ್ಲಿ ಏನು ಮಾಡುತ್ತಿದ್ದರು? ಅವರು ರೂಪಿಸಿದ ಸಂಚೇನು? ಎಲ್ಲಿಗೆ ಹೋಗುವವರಿದ್ದರು ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್‌ನ ಎಲಿಮಿನೇಟರ್‌ ಹಾಗೂ ಕ್ವಾಲಿಫೈಯರ್‌ ಪಂದ್ಯಗಳು ನಡೆಯುವ ಕೆಲವೇ ಗಂಟೆಗಳ ಮೊದಲೇ ಉಗ್ರರನ್ನು ಬಂಧಿಸಿರುವುದು ಪ್ರಾಮುಖ್ಯತೆ ಪಡೆದಿದೆ.

ಮೊದಲ ಕ್ವಾಲಿಫೈಯರ್​ ಪಂದ್ಯ ಮಂಗಳವಾರ (ಮೇ 21) ಅಹಮದಾಬಾದ್​ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಕೆಕೆಆರ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ಮುಖಾಮುಖಿಯಾಗಲಿವೆ. ಬುಧವಾರ (ಮೇ 22) ನಡೆಯುವ ಎಲಿಮಿನೇಟರ್​ ಪಂದ್ಯದಲ್ಲಿ ಆರ್​ಸಿಬಿ ತಂಡ ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಆಡಲಿದೆ. ಈ ಪಂದ್ಯವೂ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಇದರಿಂದಾಗಿ ಅಹಮದಾಬಾದ್‌ನಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಇದರ ಮಧ್ಯೆಯೇ, ಏರ್‌ಪೋರ್ಟ್‌ನಲ್ಲಿ ನಾಲ್ವರು ಉಗ್ರರ ಬಂಧನವಾಗಿದೆ.

ಮೇ 12ರಂದು ಬಾಂಬ್‌ ಬೆದರಿಕೆ

ಮೇ 12ರಂದು ಅಹಮದಾಬಾದ್‌ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಒಡ್ಡಲಾಗಿತ್ತು. ಇ-ಮೇಲ್‌ ಮೂಲಕ ಹುಸಿ ಬಾಂಬ್‌ ಬೆದರಿಕೆ ಒಡ್ಡಲಾಗಿತ್ತು. ಬೆದರಿಕೆಯ ಮೇಲ್‌ ಬರುತ್ತಲೇ ಭದ್ರತಾ ಸಿಬ್ಬಂದಿಯು ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿತ್ತು. ಇಡೀ ವಿಮಾನ ನಿಲ್ದಾನದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು, ವಸ್ತುಗಳಿಗಾಗಿ ಇನ್ನಿಲ್ಲದಂತೆ ಪರಿಶೀಲನೆ ನಡೆಸಲಾಗಿತ್ತು. ಹಾಗಾಗಿ, ಉಗ್ರರ ಬಂಧನವು ಮತ್ತಷ್ಟು ಪ್ರಾಮುಖ್ಯತೆ ಪಡೆದಿದೆ.

ಇದನ್ನೂ ಓದಿ: ISIS link: ಐಸಿಸ್‌ ಲಿಂಕ್ ಕೇಸ್‌ನಲ್ಲಿ ಮಾಜಿ ಶಾಸಕ ಇದಿನಬ್ಬ ಮೊಮ್ಮಗನಿಗೆ ದಿಲ್ಲಿ ಹೈಕೋರ್ಟ್‌ ಜಾಮೀನು; ಕೋರ್ಟ್‌ ಕೊಟ್ಟ ಕಾರಣ ನೋಡಿ!

Continue Reading
Advertisement
KKR vs SRH Qualifier 1
ಕ್ರೀಡೆ1 min ago

KKR vs SRH Qualifier 1: ಕೆಕೆಆರ್​-ಹೈದರಾಬಾದ್​ ಮುಖಾಮುಖಿ ದಾಖಲೆ, ಪಿಚ್​ ರಿಪೋರ್ಟ್​ ಹೀಗಿದೆ?

Road Accident
ಪ್ರಮುಖ ಸುದ್ದಿ5 mins ago

Road Accident: ಪಿಕ್‌ಅಪ್‌ ವಾಹನ ಕಂದಕಕ್ಕೆ ಬಿದ್ದು 15 ಕಾರ್ಮಿಕರ ದುರ್ಮರಣ; ಕೆಲಸಕ್ಕೆ ಹೊರಟವರು ಮಸಣಕ್ಕೆ!

theft case
ತುಮಕೂರು26 mins ago

Theft Case : ಕಳ್ಳತನವೂ ಈಗ ಪ್ರೊಫೆಷನಲ್‌; ಕದಿಯೋಕೆ ತಿಂಗಳ ಸ್ಯಾಲರಿ ಕೊಡುತ್ತಿದ್ದ ಪ್ರಳಯಾಂತಕ!

Physical Abuse & Murder
ದೇಶ28 mins ago

Physical Abuse & Murder: ಬಾಲಕಿ ಮೇಲೆ ಅತ್ಯಾಚಾರ, ಸಜೀವ ದಹನ ಕೇಸ್‌; ಹಂತಕರಿಗೆ ಮರಣದಂಡನೆ

Crime News
ದೇಶ30 mins ago

ಕುಡಿದು ಕಾರು ಓಡಿಸಿ ಇಬ್ಬರ ಜೀವ ತೆಗೆದ ಶ್ರೀಮಂತನ ಮಗನಿಗೆ 15 ಗಂಟೆಯೊಳಗೆ ಜಾಮೀನು! ಪ್ರಬಂಧ ಬರೆಯುವ ಶಿಕ್ಷೆ!

ISIS Terrorists
ದೇಶ31 mins ago

ISIS Terrorists: ಐಪಿಎಲ್‌ ಪಂದ್ಯಕ್ಕೂ ಮೊದಲೇ ಗುಜರಾತ್‌ನಲ್ಲಿ ನಾಲ್ವರು ಐಸಿಸ್‌ ಉಗ್ರರ ಬಂಧನ; ಇವರ ಸಂಚೇನು?

Deepika Padukone Enjoy Lunch Date After Casting Their Vote
ಬಾಲಿವುಡ್33 mins ago

Deepika Padukone: ವೋಟ್‌ ಮಾಡಿದ ದೀಪಿಕಾ ಪಡುಕೋಣೆ; ಅವರ ಹೊಟ್ಟೆ ನೋಡಿ ಗಂಡು ಮಗು ಎಂದ ನೆಟ್ಟಿಗರು!

Prajwal Revanna Case One more SPP appointed for SIT cases Govt gears up for arguments in High Court
ಕ್ರೈಂ50 mins ago

Prajwal Revanna Case: ಎಸ್‌ಐಟಿ ಕೇಸ್‌ಗಳಿಗಾಗಿ ಇನ್ನೊಬ್ಬ ಎಸ್‌ಪಿಪಿ ನೇಮಕ; ಹೈಕೋರ್ಟ್‌ನಲ್ಲಿ ವಾದಕ್ಕೆ ಸಜ್ಜಾದ ಸರ್ಕಾರ

MS Dhoni Retirement
ಕ್ರಿಕೆಟ್54 mins ago

MS Dhoni Retirement: ಧೋನಿ ನಿವೃತ್ತಿ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಚೆನ್ನೈ ಫ್ರಾಂಚೈಸಿ

Kannada New Movie sanju weds geetha another movie came
ಸ್ಯಾಂಡಲ್ ವುಡ್57 mins ago

Kannada New Movie: `ಸಂಜು ವೆಡ್ಸ್ ಗೀತಾ’ ಚಿತ್ರದ ನಿರ್ಮಾಪಕರಿಂದ ಬರ್ತಿದೆ ಮತ್ತೊಂದು ಅದ್ಧೂರಿ ಚಿತ್ರ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ3 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 day ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ1 day ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ1 day ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ4 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು4 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌