Shivamogga Airport: ತಮ್ಮ ಹೆಸರು ಬೇಡ ಎಂದು ಬಿ.ಎಸ್.‌ ಯಡಿಯೂರಪ್ಪ ಪುನರುಚ್ಛಾರ: ರಾಷ್ಟ್ರಕವಿ ಕುವೆಂಪು ಹೆಸರನ್ನು ಸೂಚಿಸಿದ ಮಾಜಿ ಸಿಎಂ - Vistara News

ಪ್ರಮುಖ ಸುದ್ದಿ

Shivamogga Airport: ತಮ್ಮ ಹೆಸರು ಬೇಡ ಎಂದು ಬಿ.ಎಸ್.‌ ಯಡಿಯೂರಪ್ಪ ಪುನರುಚ್ಛಾರ: ರಾಷ್ಟ್ರಕವಿ ಕುವೆಂಪು ಹೆಸರನ್ನು ಸೂಚಿಸಿದ ಮಾಜಿ ಸಿಎಂ

ವಿಮಾನ ನಿಲ್ದಾಣಕ್ಕೆ(Shivamogga Airport) ತಮ್ಮ ಹೆಸರು ಬೇಡ ಎಂದು ಯಡಿಯೂರಪ್ಪ ಹೇಳಿದ ನಂತರದಲ್ಲಿ ಶಿವಪ್ಪ ನಾಯಕ, ಬಂಗಾರಪ್ಪ, ಕುವೆಂಪು ಸೇರಿ ಅನೇಕ ಹೆಸರುಗಳ ಕುರಿತು ಚರ್ಚೆಗಳು ನಡೆಯುತ್ತಿದ್ದವು.

VISTARANEWS.COM


on

BS Yediyurappa proposes to name shivamogga-airport after kuvempu
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಿವಮೊಗ್ಗ: ಇದೇ ತಿಂಗಳು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿರುವ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ(Shivamogga Airport) ತಮ್ಮ ಹೆಸರನ್ನು ನಾಮಕರಣ ಮಾಡುವುದು ಬೇಡ ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಪುನರುಚ್ಛರಿಸಿದ್ದು, ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ.

ಅನೇಕ ದಿನಗಳಿಂದ ಈ ಕುರಿತು ಕೇಳಿಬರುತ್ತಿರುವ ಊಹಾಪೋಹಗಳಿಗೆ ತೆರೆ ಎಳೆಯುವ ಕುರಿತು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು. ರಾಜ್ಯ ಸರ್ಕಾರವು ಬಿ.ಎಸ್‌. ಯಡಿಯೂರಪ್ಪ ಹೆಸರನ್ನು ಇಡಲು ನಿರ್ಧಾರ ಮಾಡಿ ಅದನ್ನು ಸಚಿವ ಸಂಪುಟ ಸಭೆಯಲ್ಲೂ ಒಪ್ಪಿಗೆ ಪಡೆದುಕೊಂಡಿತ್ತು. ಆದರೆ ತಮ್ಮ ಹೆಸರಿಡದಂತೆ ಯಡಿಯೂರಪ್ಪ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಪತ್ರ ಬರೆದಿದ್ದರು.

ಇದನ್ನೂ ಓದಿ : Shivamogga Airport : ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಬೇಡ: ಬಿಎಸ್‌ವೈ ಪುನರುಚ್ಚಾರ

ಫೆಬ್ರವರಿ 27 ರಂದು ಪ್ರಧಾನಿ ಮೋದಿ ಏರ್ಪೋರ್ಟ್ ಉದ್ಘಾಟನೆ ಮಾಡಲಿದ್ದು, ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ರಾಷ್ಟ್ರಕವಿ ಕುವೆಂಪು ಹೆಸರು ಪ್ರಸ್ತಾಪಿಸುತ್ತಿದ್ದೇನೆ. ಸೋಮವಾರ ನಡೆಯುವ ಅಧಿವೇಶನದಲ್ಲೂ ಈ ಕುರಿತು ನಿರ್ಧಾರ ಕೈಗೊಂಡು ಕೇಂದ್ರ ಸರ್ಕಾರಕ್ಕೆ ನೀಡಲಾಗುತ್ತದೆ. ಮೋದಿಯವರಿಂದಲೇ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಲಾಗುವುದು ಎಂದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024 : ದೊಡ್ಡ ಮೊತ್ತದ ಪಂದ್ಯದಲ್ಲಿ ಮುಂಬೈ ವಿರುದ್ಧ ಡೆಲ್ಲಿಗೆ 10 ರನ್ ಜಯ

IPL 2024: ಇಲ್ಲಿನ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬಯಿ ಇಂಡಿಯನ್ಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ಬಳಗ ನಿಗದಿತ 20 ಓವರ್​​ಗಳಲ್ಲಿ 4 ವಿಕೆಟ್​ಗೆ 257 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಮುಂಬಯಿ ತನ್ನೆಲ್ಲ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್​ ನಷ್ಟಕ್ಕೆ 247 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

VISTARANEWS.COM


on

IPL 2024
Koo

ನವ ದೆಹಲಿ: ಮತ್ತೊಂದು ದೊಡ್ಡ ಮೊತ್ತದ ಐಪಿಎಲ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮುಂಬಯಿ ಇಂಡಿಯನ್ಸ್ ವಿರುದ್ಧ. 10 ರನ್​ಗಳ ವಿಜಯ ದೊರಕಿದೆ. ಎರಡೂ ತಂಡಗಳು ಗೆಲುವಿಗಾಗಿ ಕೊನೇ ಕ್ಷಣದ ತನಕ ಹೋರಾಡಿದ್ದು ಹಲವು ಸೋಲಿನ ಬಳಿಕ ಪುಟಿದೆದ್ದಿರುವ ಡೆಲ್ಲಿ ತಂಡ ಪಾಂಡ್ಯ ಬಳಗಕ್ಕೆ ಗೆಲುವು ನಿಕರಾಕರಿಸಿದೆ. ಈ ಮೂಲಕ ಮುಂಬೈ ತಂಡದ ಸೋಲಿನ ಬವಣೆ ಮುಂದುವರಿದಿದ್ದು ಹಾಲಿ ಆವೃತ್ತಿಯಲ್ಲಿ 9ನೇ ಪರಾಜಯಕ್ಕೆ ಒಳಗಾಗಿದೆ. ಅತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐದನೇ ಗೆಲುವನ್ನು ತನ್ನದಾಗಿಸಿಕೊಂಡು ಒಟ್ಟು 10 ಅಂಕಗಳನ್ನು ಪಡೆದುಕೊಂಡಿದ್ದು ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ. ಇದೇ ವೇಳೆ ಮುಂಬಯಿ ಇಂಡಿಯನ್ಸ್​ ಬಳಗ ಕೇವಲ 6 ಅಂಕಗಳೊಂದಿಗೆ 9ನೇ ಸ್ಥಾನವನ್ನು ಪಡೆದುಕೊಂಡಿತು.

ಇಲ್ಲಿನ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬಯಿ ಇಂಡಿಯನ್ಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ಬಳಗ ನಿಗದಿತ 20 ಓವರ್​​ಗಳಲ್ಲಿ 4 ವಿಕೆಟ್​ಗೆ 257 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಮುಂಬಯಿ ತನ್ನೆಲ್ಲ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್​ ನಷ್ಟಕ್ಕೆ 247 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ಮುಂಬಯಿ ಭರ್ಜರಿ ಹೋರಾಟ

ದೊಡ್ಡ ಮೊತ್ತವನ್ನು ಬೆನ್ನಟ್ಟಲು ಹೊರಟ ಮುಂಬೈ ತಂಡಕ್ಕೆ ಅದಕ್ಕೆ ಪೂರಕವಾಗಿರುವ ಆರಂಭ ದೊರಕಲಿಲ್ಲ. ರೋಹಿತ್ ಶರ್ಮಾ 8 ರನ್​ಗೆ ಔಟಾದರೆ ಇಶಾನ್ ಕಿಶನ್​ 20 ರನ್​ಗಳಿಗೆ ವಿಕೆಟ್​ ಒಪ್ಪಿಸಿದರು. 45 ರನ್​ಗೆ 2 ವಿಕೆಟ್​ ನಷ್ಟ ಮಾಡಿಕೊಂಡ ಮುಂಬೈಗೆ ಆತಂಕ ಎದುರಾಯಿತು. ಈ ವೇಳೆ ಆಡಲು ಬಂದ ಸೂರ್ಯಕುಮಾರ್ ಯಾದವ್​ 13 ಎಸೆತಕ್ಕೆ 26 ರನ್ ಬಾರಿಸಿ ಮಿಂಚುವ ಸೂಚನೆ ಕೊಟ್ಟರು. ಆದರೆ ಸೂರ್ಯನ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಆದರೆ, ಮತ್ತೊಂದು ಬದಿಯಲ್ಲಿ ತಿಲಕ್ ವರ್ಮಾ ಗಟ್ಟಿಯಾಗಿ ನಿಂತು ಡೆಲ್ಲಿ ಬೌಲರ್​ಗಳನ್ನು ದಂಡಿಸಿದರು. ಅದೇ ರೀತಿ ಹಾಲಿ ಆವೃತ್ತಿಯಲ್ಲಿ ಮೊದಲ ಬ್ಯಾರಿಗೆ ಬ್ಯಾಟಿಂಗ್​ನಲ್ಲಿ ಮಿಂಚಿದ ಹಾರ್ದಿಕ್ ಪಾಂಡ್ಯ 24 ಎಸೆತಕ್ಕೆ 46 ರನ್ ಬಾರಿಸಿದರು.

ನಂತರ ಬಂದ ನೇಹಲ್ ವದೇರಾ 4 ರನ್​ಗೆ ಔಟಾದಾಗ ಮತ್ತೆ ಮುಂಬೈಗೆ ಭಯ ಶುರುವಾಯಿತು. ಆದೆರ, ಟಿಮ್ ಡೇವಿಡ್ 17 ಎಸೆತಕ್ಕೆ 37 ರನ್ ಬಾರಿಸ ಗೆಲುವಿನ ಸನಿಹಕ್ಕೆ ಬರಲು ನೆರವಾದರು. ಡೆಲ್ಲಿ ಪರ ರಸಿಕ್​ ಸಲಾಂ ಹಾಗೂ ಮುಖೇಶ್ ಕುಮಾರ್​ ತಲಾ 3 ವಿಕೆಟ್​ ಉರುಳಿಸಿ ತಂಡ ಗೆಲುವಿಗೆ ನೆರವಾದರು.

ಇದನ್ನೂ ಓದಿ: IPL 2024 : ಅಹಮದಾಬಾದ್​ನಲ್ಲಿ ಕೊಹ್ಲಿಗೆ ಭರ್ಜರಿ ಸ್ವಾಗತ; ವಿಡಿಯೊ ಇದೆ

ಮೆಗ್​ಕುರ್ಕ್​ ಭರ್ಜರಿ ಬ್ಯಾಟಿಂಗ್​

ಗೆಲುವಿನೊಂದಿಗೆ ಚೈತನ್ಯ ಪಡೆದುಕೊಂಡಿದ್ದ ಡೆಲ್ಲಿ ತಂಡ ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿತು. ಜೇಕ್​ ಫೇಸರ್​ ಮೆಕ್​ಗುರ್ಕ್​ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ 27 ಎಸೆತಕ್ಕೆ 84 ರನ್ ಬಾರಿಸಿ ಮಿಂಚಿದರು. ಅವರು ಅಭಿಷೇಕ್ ಪೊರೆಲ್​ (36 ರನ್​) ಜತೆಗೂಡಿ 114 ರನ್ ಬಾರಿಸಿ ಮಿಂಚಿದರು. ಶಾಯ್​ ಹೋಪ್​ 17 ಎಸೆತಕ್ಕೆ 41 ರನ್ ಬಾರಿಸಿ ಮಿಂಚಿದ್ದಾರೆ. ರಿಷಭ್ ಪಂತ್​ 29 ರನ್ ಬಾರಿಸಿ ಮಿಂಚಿದರೆ ಟ್ರಿಸ್ಟಾನ್ 25 ಎಸೆತಕ್ಕೆ 48 ರನ್ ಬಾರಿಸಿದರು.

Continue Reading

ಕರ್ನಾಟಕ

Srinivasa Prasad: ಸಂಸದ ಶ್ರೀನಿವಾಸ ಪ್ರಸಾದ್‌ ಆರೋಗ್ಯ ಸ್ಥಿತಿ ಗಂಭೀರ; ಆಸ್ಪತ್ರೆಗೆ ತೆರಳಿದ ಸಿಎಂ

Srinivasa Prasad: ಚಾಮರಾಜನಗರ ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್‌ ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

VISTARANEWS.COM


on

Srinivasa Prasad
Koo

ಬೆಂಗಳೂರು: ಚಾಮರಾಜನಗರ ಸಂಸದ, ರಾಜ್ಯದ ಹಿರಿಯ ರಾಜಕಾರಣಿ ವಿ. ಶ್ರೀನಿವಾಸ ಪ್ರಸಾದ್‌ (76) (V Srinivasa Prasad) ಅವರ ಆರೋಗ್ಯ ಸ್ಥಿತಿಯು ಗಂಭೀರವಾಗಿದ್ದು, ಬೆಂಗಳೂರಿನಲ್ಲಿರುವ ಮಣಿಪಾಲ ಆಸ್ಪತ್ರೆಯಲ್ಲಿ (Manipal Hospital) ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾ ಘಟಕದಲ್ಲಿ (ICU) ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯವನ್ನು ವಿಚಾರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಣಿಪಾಲ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.

ಬಹು ಅಂಗಾಂಗ ವೈಫಲ್ಯ, ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ ಶ್ರೀನಿವಾಸ ಪ್ರಸಾದ್‌ ಅವರು ಹಲವು ದಿನಗಳಿಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಧಿಕ ರಕ್ತದೊತ್ತಡ, ಶುಗರ್‌ ಪ್ರಮಾಣದಲ್ಲಿ ಶನಿವಾರ ಭಾರಿ ಏರುಪೇರಾದ ಕಾರಣ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇದೇ ಕಾರಣಕ್ಕಾಗಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸುದ್ದಿ ತಿಳಿದ ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಜಕೀಯ ನಿವೃತ್ತಿ

2019ರಲ್ಲಿ ಚಾಮರಾಜನಗರ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿ. ಶ್ರೀನಿವಾಸ ಪ್ರಸಾದ್‌, ಕಾಂಗ್ರೆಸ್‌ ಅಭ್ಯರ್ಥಿ ಧ್ರುವನಾರಾಯಣ ಅವರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು. ಆದರೆ, ಕಳೆದ ಮಾರ್ಚ್‌ನಲ್ಲಿಯೇ ರಾಜಕೀಯ ನಿವೃತ್ತಿ ಘೋಷಿಸಿದ ಅವರು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಅಲ್ಲದೆ, ಚಾಮರಾಜನಗರ ಬಿಜೆಪಿ ಅಭ್ಯರ್ಥಿ ಎಸ್.‌ ಬಾಲರಾಜ್‌ ಅವರ ಪರವಾಗಿಯೂ ಪ್ರಚಾರದಲ್ಲಿ ಭಾಗವಹಿಸಿರಲಿಲ್ಲ. ಇನ್ನು, ಅವರ ಬೆಂಬಲ ಪಡೆಯಲು ಕಾಂಗ್ರೆಸ್‌ ತಂತ್ರ ಕೂಡ ಹೆಣೆದಿತ್ತು.

ಕೆಲ ದಿನಗಳ ಹಿಂದಷ್ಟೇ ಮೈಸೂರಿನಲ್ಲಿ ವಿ. ಶ್ರೀನಿವಾಸ ಪ್ರಸಾದ್‌ ಅವರ ಮನೆಗೆ ಸಿದ್ದರಾಮಯ್ಯ ಭೇಟಿ ನೀಡಿ, ಕಾಂಗ್ರೆಸ್‌ಗೆ ಬಿಜೆಪಿಯ ಪ್ರಭಾವಿ ದಲಿತ ನಾಯಕನ ಬೆಂಬಲವನ್ನು ಸೆಳೆಯುವ ಪ್ರಯತ್ನ ಮಾಡಿದ್ದರು. ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಶ್ರೀನಿವಾಸ ಪ್ರಸಾದ್‌ ಅವರ ಮನೆಗೆ ತೆರಳಿದ ಸಿದ್ದರಾಮಯ್ಯ ಅವರು ಕೆಲ ಹೊತ್ತು ಚರ್ಚಿಸಿದ್ದರು.

ಕಳೆದ ಕೆಲವು ವರ್ಷಗಳಿಂದ ಸಿದ್ದರಾಮಯ್ಯ ಅವರಿಂದ ಶ್ರೀನಿವಾಸ ಪ್ರಸಾದ್‌ ಅವರು ದೂರವೇ ಉಳಿದಿದ್ದರು. ಆದರೆ, ಏಕಾಏಕಿ ಸಿದ್ದರಾಮಯ್ಯ ಅವರೇ ಶ್ರೀನಿವಾಸ ಪ್ರಸಾದ್‌ ಅವರನ್ನು ಭೇಟಿ ಮಾಡಿದ್ದರು. ಭೇಟಿಯ ಬೆನ್ನಲ್ಲೇ, “ನನಗೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಹಾಗಾಗಿ, ನಾನು ಮೋದಿ ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ಚಾಮರಾಜನಗರದಲ್ಲಿ ಈ ಬಾರಿ ಕಾಂಗ್ರೆಸ್‌ ಪರವಾದ ಅಲೆ ಇದೆ” ಎಂದು ಹೇಳಿದ್ದರು.

ಇದನ್ನೂ ಓದಿ: Gut Health: ನಿಮ್ಮ ಕರುಳಿನ ಆರೋಗ್ಯಕ್ಕಾಗಿ ಬೇಸಿಗೆಯಲ್ಲಿ ಈ ಡ್ರಿಂಕ್ಸ್ ಸೇವಿಸಿ

Continue Reading

ಪ್ರಮುಖ ಸುದ್ದಿ

IPL 2024 : ಅಹಮದಾಬಾದ್​ನಲ್ಲಿ ಕೊಹ್ಲಿಗೆ ಭರ್ಜರಿ ಸ್ವಾಗತ; ವಿಡಿಯೊ ಇದೆ

IPL 2024: ವಿರಾಟ್ ಕೊಹ್ಲಿ ಏಪ್ರಿಲ್ 28 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆತಿಥೇಯ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದೊಂದಿಗೆ ಆರ್​ಸಿಬಿ ಫ್ರಾಂಚೈಸಿಗಾಗಿ ತಮ್ಮ ಪಾತ್ರವನ್ನು ಪುನರಾವರ್ತಿಸಲಿದ್ದಾರೆ. ಸ್ಪರ್ಧೆಗೆ ಒಂದು ದಿನ ಮುಂಚಿತವಾಗಿ ಅವರು ಮತ್ತು ಅವರ ಉಳಿದ ಆಟಗಾರರ ಜತೆ ಹೋಟೆಲ್​ಗೆ ಆಗಮಿಸಿದರು. ಈ ಮೂಲಕ ಅವರು ಅಹಮದಾಬಾದ್​ನಲ್ಲಿ ತಮ್ಮ ಇರುವಿಕೆಯನ್ನು ಗುರುತಿಸಿಕೊಂಡರು.

VISTARANEWS.COM


on

Virat Kohli
Koo

ಬೆಂಗಳೂರು: ಮುಂಬರುವ ಐಪಿಎಲ್ 2024 ರಲ್ಲಿ (IPL 2024) ಆತಿಥೇಯ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಇತರ ಆಟಗಾರರು ಅಹಮದಾಬಾದ್​ಗೆ ಆಗಮಿಸಿದ್ದಾರೆ. ಬಹುನಿರೀಕ್ಷಿತ ಮುಖಾಮುಖಿಗೆ ಒಂದು ದಿನ ಮೊದಲು ಬಂದ ಆರ್​ಸಿಬಿ ಪಡೆಗಳಿಗೆ ತಂಡದ ಹೋಟೆಟ್​ನಲ್ಲಿ ಭವ್ಯ ಸ್ವಾಗತ ದೊರೆಯಿತು.

ಹೋಟೆಲ್​ನಲ್ಲಿ ಸಿಕ್ಕಿರುತ ಆತ್ಮೀಯ ಸ್ವಾಗತವನ್ನು ಸ್ವೀಕರಿಸಿದವರಲ್ಲಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕೂಡ ಸೇರಿದ್ದಾರೆ. ಅದರ ತುಣುಕುಗಳು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ವಿರಾಟ್ ಕೊಹ್ಲಿ ಏಪ್ರಿಲ್ 28 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆತಿಥೇಯ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದೊಂದಿಗೆ ಆರ್​ಸಿಬಿ ಫ್ರಾಂಚೈಸಿಗಾಗಿ ತಮ್ಮ ಪಾತ್ರವನ್ನು ಪುನರಾವರ್ತಿಸಲಿದ್ದಾರೆ. ಸ್ಪರ್ಧೆಗೆ ಒಂದು ದಿನ ಮುಂಚಿತವಾಗಿ ಅವರು ಮತ್ತು ಅವರ ಉಳಿದ ಆಟಗಾರರ ಜತೆ ಹೋಟೆಲ್​ಗೆ ಆಗಮಿಸಿದರು. ಈ ಮೂಲಕ ಅವರು ಅಹಮದಾಬಾದ್​ನಲ್ಲಿ ತಮ್ಮ ಇರುವಿಕೆಯನ್ನು ಗುರುತಿಸಿಕೊಂಡರು.

ಐಪಿಎಲ್ 2024 ರ ಸ್ಟಾರ್ ಆಕರ್ಷಣೆಗಳಲ್ಲಿ ಒಬ್ಬರಾದ ಕೊಹ್ಲಿ ಏಪ್ರಿಲ್ 27 ರಂದು ತಂಡದ ಹೋಟೆಲ್​ಗೆ ಹೋಗುವ ವೇಳೆ ಭವ್ಯ ಸ್ವಾಗತ ಪಡೆದರು.

ಆರೆಂಜ್ ಕ್ಯಾಪ್ ವೀರ ಕೊಹ್ಲಿ

ವಿರಾಟ್ ಕೊಹ್ಲಿ ಪ್ರಸ್ತುತ ಐಪಿಎಲ್ 2024 ರ ಋತುವಿನಲ್ಲಿ ‘ಆರೆಂಜ್ ಕ್ಯಾಪ್’ ಹೊಂದಿದ್ದಾರೆ. ಕ್ರಿಕೆಟಿಗ ಈಗಾಗಲೇ ಕೇವಲ ಒಂಬತ್ತು ಇನಿಂಂಗ್ಸ್​​​ಗಳಲ್ಲಿ 61 ಕ್ಕೂ ಹೆಚ್ಚು ಸರಾಸರಿಯಲ್ಲಿ 430 ರನ್ ಗಳಿಸಿದ್ದಾರೆ/ ಎರಡನೇ ಸ್ಥಾನದಲ್ಲಿರುವ ಸುನಿಲ್ ನರೈನ್ ಅವರನ್ನು 73 ರನ್​ಗಳಿಂದ ಮುನ್ನಡೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: IPL 2024 : ಪಂದ್ಯದ ನಡುವೆ ಮೈದಾನದಲ್ಲೇ ಗಾಳಿಪಟ ಹಾರಿಸಿದ ಪಂತ್​, ರೋಹಿತ್! ಇಲ್ಲಿದೆ ವಿಡಿಯೊ

ಕೊಹ್ಲಿ ಇತ್ತೀಚೆಗೆ ಹೈದರಾಬಾದ್​ನಲ್ಲಿ ನಡೆದ ಎಸ್ಆರ್​​ಎಚ್​ ತಂಡದ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು. ಈ ಗೆಲುವು ಒಂದು ತಿಂಗಳಲ್ಲಿ ಆರ್​ಸಿಬಿಯ ಮೊದಲ ಗೆಲುವು ಮತ್ತು ಋತುವಿನ ಒಟ್ಟಾರೆ ಎರಡನೇ ಗೆಲುವು.

ಒಂಬತ್ತು ಲೀಗ್ ಪಂದ್ಯಗಳಲ್ಲಿ ಕೇವಲ ಎರಡು ಗೆಲುವುಗಳನ್ನು ಗಳಿಸಿರುವ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್ಸಿಬಿ ಗುಂಪು ಐಪಿಎಲ್ 2024 ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನದಲ್ಲಿದೆ. ಏಣಿಯನ್ನು ಏರುವ ಪ್ರಯತ್ನದಲ್ಲಿ ಅವರು ಪಂದ್ಯಾವಳಿಯ ಈ ಹಂತದಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಸೋಲಿಸಬೇಕಾಗಿದೆ.

Continue Reading

ಕರ್ನಾಟಕ

Narendra Modi: ಇಂದು ರಾತ್ರಿಯೇ ರಾಜ್ಯಕ್ಕೆ ಮೋದಿ ಆಗಮನ; ನಾಳೆಯಿಂದ ಅಬ್ಬರದ ಪ್ರಚಾರ, ವಿವರ ಇಲ್ಲಿದೆ

Narendra Modi: ಕರ್ನಾಟಕದಲ್ಲಿ ಎರಡನೇ ಹಂತದ ಮತದಾನದತ್ತ ಎಲ್ಲ ರಾಜಕೀಯ ಪಕ್ಷಗಳೂ ಗಮನ ಹರಿಸುತ್ತಿವೆ. ಇದರ ಭಾಗವಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾತ್ರಿ ಕರ್ನಾಟಕಕ್ಕೆ ಆಗಮಿಸಲಿದ್ದು, ಭಾನುವಾರ ಹಾಗೂ ಸೋಮವಾರ ಅಬ್ಬರದ ಪ್ರಚಾರ ಕೈಗೊಳ್ಳಲಿದ್ದಾರೆ. ಮೋದಿ ಭೇಟಿಯ ಕಾರ್ಯಕರ್ಮಗಳ ವಿವರ ಇಂತಿದೆ.

VISTARANEWS.COM


on

Narendra Modi
Koo

ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ (Lok Sabha Election 2024) ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಎರಡನೇ ಹಂತದ ಮತದಾನವು ಮೇ 7ರಂದು ನಡೆಯಲಿದ್ದು, ಬಿಜೆಪಿ, ಕಾಂಗ್ರೆಸ್‌ ಸೇರಿ ಎಲ್ಲ ಪಕ್ಷಗಳು ಉತ್ತರ ಕರ್ನಾಟಕ ಭಾಗದ ಕಡೆ ಹೆಚ್ಚು ಒತ್ತು ಕೊಡುತ್ತಿವೆ. ಪಕ್ಷಗಳ ಬಹುತೇಕ ನಾಯಕರು ಉತ್ತರ ಕರ್ನಾಟಕದಲ್ಲಿಯೇ ಬೀಡುಬಿಟ್ಟಿದ್ದಾರೆ. ಎರಡನೇ ಹಂತದ 14 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ರಣತಂತ್ರ ರೂಪಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಭಾನುವಾರ (ಏಪ್ರಿಲ್‌ 28) ಹಾಗೂ ಸೋಮವಾರ (ಏಪ್ರಿಲ್‌ 29) ರಾಜ್ಯದಲ್ಲಿ ನರೇಂದ್ರ ಮೋದಿ (Narendra Modi) ಅವರು ಅಬ್ಬರದ ಪ್ರಚಾರ ಕೈಗೊಳ್ಳಲಿದ್ದಾರೆ.

ನರೇಂದ್ರ ಮೋದಿ ಅವರು ಶನಿವಾರ (ಏಪ್ರಿಲ್‌ 27) ರಾತ್ರಿಯೇ ಬೆಳಗಾವಿಗೆ ಆಗಮಿಸಲಿದ್ದು, ಕುಂದಾ ನಗರಿಯಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಶನಿವಾರ ರಾತ್ರಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಲೋಕಸಭೆ ಕ್ಷೇತ್ರದ ವ್ಯಾಪ್ತಿಯ 15 ಮಂದಿಗೆ ಸ್ವಾಗತ ಕೋರಲು ಅವಕಾಶ ನೀಡಲಾಗಿದೆ. ಬಾಳೇಶ್ ಚವ್ವನ್ನವರ್, ರಾಜೇಶ್ವರಿ ಒಡೆಯರ್, ಸುಭಾಷ್ ಸಣ್ಣ ವೀರಪ್ಪನವರ್ ಸೇರಿ ಬೆಳಗಾವಿಯ 15 ಹಲವು ಸಮುದಾಯಗಳ ಮುಖಂಡರಿಗೆ ಮೋದಿ ಅವರನ್ನು ಸ್ವಾಗತಿಸಲು ಅವಕಾಶ ಮಾಡಿಕೊಡಲಾಗಿದೆ. ಅವಕಾಶ ಪಡೆದ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ.

Karnataka Election: PM Modi Roadshow Ends In Bengaluru, Here are some photos

ಏಪ್ರಿಲ್‌ 28ರಂದು ಎಲ್ಲೆಲ್ಲಿ ರ‍್ಯಾಲಿ?

ಏಪ್ರಿಲ್‌ 28ರಂದು ಬೆಳಗಾವಿಯಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯುವ ಸಮಾವೇಶದಲ್ಲಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಇಲ್ಲಿ ಜಗದೀಶ್‌ ಶೆಟ್ಟರ್‌ ಪರ ಮತಯಾಚಿಸಲಿರುವ ಅವರು ಬಳಿಕ 12 ಗಂಟೆಗೆ ಉತ್ತರ ಕನ್ನಡದ ಶಿರಸಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಮತಯಾಚನೆ ಮಾಡಲಿದ್ದಾರೆ. ಇನ್ನು ಮಧ್ಯಾಹ್ನ 2 ಗಂಟೆಗೆ ದಾವಣಗೆರೆಯ ಹೈಸ್ಕೂಲ್‌ ಗ್ರೌಂಡ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇನ್ನು ಸಂಜೆ 4 ಗಂಟೆಗೆ ಬಳ್ಳಾರಿಯ ಸಮಾವೇಶದ ಮೂಲಕ ಇಡೀ ದಿನದ ಪ್ರಚಾರಕ್ಕೆ ತೆರೆ ಎಳೆಯಲಿದ್ದಾರೆ.

ಏಪ್ರಿಲ್‌ 29ರಂದು ಒಂದೇ ಸಮಾವೇಶ

ಬಳ್ಳಾರಿಯಲ್ಲಿ ಪ್ರಚಾರ ಮುಗಿಸುವ ನರೇಂದ್ರ ಮೋದಿ ಅವರು ಏಪ್ರಿಲ್‌ 29ರಂದು ಬಾಗಲಕೋಟೆಯಲ್ಲಿ ನಡೆಯುವ ಒಂದೇ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಂದ ಅವರು ಮಹಾರಾಷ್ಟ್ರಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಕರ್ನಾಟಕದಲ್ಲಿ 2ನೇ ಹಂತದ ಚುನಾವಣೆ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸುವ ಮೂಲಕ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ಬಿಜೆಪಿ ಇಷ್ಟೆಲ್ಲ ಪ್ಲಾನ್‌ ಮಾಡಿದೆ. ಉತ್ತರ ಕರ್ನಾಟಕ ಸೇರಿದಂತೆ ಹಲವು ಕಡೆ ಮೋದಿ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಲ್ಲದೆ, ಯುವ ಸಮುದಾಯಕ್ಕೆ ಮೋದಿ ಅಚ್ಚುಮೆಚ್ಚು. ಇಂತಹ ಯುವ ವರ್ಗದ ಮತಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಸೆಳೆಯಲು ಪ್ಲ್ಯಾನ್‌ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: ಇವಿಎಂ ಧ್ವಂಸ; ಚಾಮರಾಜನಗರದ ಇಂಡಿಗನತ್ತ ಗ್ರಾಮದಲ್ಲಿ ಏಪ್ರಿಲ್‌ 29ರಂದು ಮರು ಮತದಾನ!

Continue Reading
Advertisement
IPL 2024
ಕ್ರೀಡೆ5 mins ago

IPL 2024 : ದೊಡ್ಡ ಮೊತ್ತದ ಪಂದ್ಯದಲ್ಲಿ ಮುಂಬೈ ವಿರುದ್ಧ ಡೆಲ್ಲಿಗೆ 10 ರನ್ ಜಯ

Viral News
ವೈರಲ್ ನ್ಯೂಸ್15 mins ago

Viral News: ಅಪ್ರಾಪ್ತ ಹಿಂದು ಹುಡುಗಿಗೆ ಅಶ್ಲೀಲ ಮೆಸೇಜ್‌ ಕಳುಹಿಸುತ್ತಿದ್ದ ಮುಸ್ಲಿಂ ಯುವಕನಿಗೆ ಬಿತ್ತು ಗೂಸಾ

Assault Case
ಕರ್ನಾಟಕ17 mins ago

Assault Case: ಬೆಂಗಳೂರಲ್ಲಿ ಟೀ ಶಾಪ್ ಯುವಕನ ಮೇಲೆ ಹಲ್ಲೆ ಮಾಡಿದ ಮುಸ್ಲಿಂ ಯುವಕರು

Srinivasa Prasad
ಕರ್ನಾಟಕ22 mins ago

Srinivasa Prasad: ಸಂಸದ ಶ್ರೀನಿವಾಸ ಪ್ರಸಾದ್‌ ಆರೋಗ್ಯ ಸ್ಥಿತಿ ಗಂಭೀರ; ಆಸ್ಪತ್ರೆಗೆ ತೆರಳಿದ ಸಿಎಂ

Gold Seized
ಕ್ರೈಂ31 mins ago

Gold Seized: ದುಬೈನಿಂದ ಬಂದ ಪ್ರಯಾಣಿಕನ ಗುದದ್ವಾರದಲ್ಲಿತ್ತು 70 ಲಕ್ಷ ಮೌಲ್ಯದ ಚಿನ್ನ!

Virat Kohli
ಪ್ರಮುಖ ಸುದ್ದಿ43 mins ago

IPL 2024 : ಅಹಮದಾಬಾದ್​ನಲ್ಲಿ ಕೊಹ್ಲಿಗೆ ಭರ್ಜರಿ ಸ್ವಾಗತ; ವಿಡಿಯೊ ಇದೆ

Illegal Cattle Trafficking 9 Accused Arrested in gangavathi
ಕರ್ನಾಟಕ44 mins ago

Koppala News: ಅಕ್ರಮ ಜಾನುವಾರು ಸಾಗಾಟ: 9 ಜನ ಆರೋಪಿಗಳ ಬಂಧನ

Congress leader B K Hariprasad latest statement In Gangavathi
ಕೊಪ್ಪಳ45 mins ago

Lok Sabha Election 2024: ಬಿಜೆಪಿಯವರು 10 ವರ್ಷದಲ್ಲಿ ಏನು ಮಾಡಿದ್ದೀರಿ ಹೇಳಿ ಎಂದ ಬಿ.ಕೆ. ಹರಿಪ್ರಸಾದ್

Kalaburagi Lok Sabha Constituency Congress candidate Radhakrishna Doddamani election campaign
ಯಾದಗಿರಿ49 mins ago

Lok Sabha Election 2024: ಚುನಾವಣೆಯಲ್ಲಿ ಹೆಚ್ಚಿನ ಮತಗಳಿಂದ ಗೆಲ್ಲಿಸಿ, ನಿಮ್ಮೆಲ್ಲರ ಧ್ವನಿಯಾಗಿ ಕೆಲಸ ಮಾಡುವೆ: ರಾಧಾಕೃಷ್ಣ ದೊಡ್ಡಮನಿ

Narendra Modi
ಕರ್ನಾಟಕ1 hour ago

Narendra Modi: ಇಂದು ರಾತ್ರಿಯೇ ರಾಜ್ಯಕ್ಕೆ ಮೋದಿ ಆಗಮನ; ನಾಳೆಯಿಂದ ಅಬ್ಬರದ ಪ್ರಚಾರ, ವಿವರ ಇಲ್ಲಿದೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok sabha election 2024
Lok Sabha Election 20244 hours ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ8 hours ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ15 hours ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ1 day ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20241 day ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20241 day ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ2 days ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ2 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ2 days ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ2 days ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

ಟ್ರೆಂಡಿಂಗ್‌