ಗೋವಿಂದ ದೇವಾಲಯ ಲೋಕಾರ್ಪಣೆ ಮಾಡಿದ ರಾಷ್ಟ್ರಪತಿ ಕೋವಿಂದ - Vistara News

ಧಾರ್ಮಿಕ

ಗೋವಿಂದ ದೇವಾಲಯ ಲೋಕಾರ್ಪಣೆ ಮಾಡಿದ ರಾಷ್ಟ್ರಪತಿ ಕೋವಿಂದ

ರಾಜಧಾನಿ ಬೆಂಗಳೂರಿನ ಪ್ರತೀಕ ಇಸ್ಕಾನ್‌ ದೇವಸ್ಥಾನ. ಬೆಂಗಳೂರು ಉತ್ತರದ ಕೇಂದ್ರ ಬಿಂದುವಾಗಿರುವ ಇಸ್ಕಾನ್‌ ಇದೀಗ ಬೆಂಗಳೂರು ದಕ್ಷಿಣಕ್ಕೂ ಚಾಚಿದೆ. ತಿರುಮಲ ಮಾದರಿಯ ತದ್ರೂಪದಂತಿರುವ ದೇವಾಲಯ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಲೋಕಾರ್ಪಣೆ ಮಾಡಿದ್ದಾರೆ

VISTARANEWS.COM


on

ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌
ಇಸ್ಕಾನ್‌ ರಾಜಾಧಿರಾಜ ಗೋವಿಂದ ದೇವಸ್ಥಾನ ಲೋಕಾರ್ಪಣೆ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬೆಂಗಳೂರಿನ ಕನಕಪುರ ರಸ್ತೆ ವಸಂತಪುರದಲ್ಲಿ ಇಸ್ಕಾನ್ ಸಂಸ್ಥೆ ವತಿಯಿಂದ ನಿರ್ಮಾಣ ಮಾಡಲಾಗಿರುವ ತಿರುಮಲ ಮಾದರಿಯ ಶ್ರೀ ರಾಜಾಧಿರಾಜ ಗೋವಿಂದ ದೇವಸ್ಥಾನವನ್ನು ಲೋಕಾರ್ಪಣೆ ಮಾಡಲಾಯಿತು. ಆಗಸ್ಟ್ 1 ರಂದು ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದ್ದು, ಇದರ ಭಾಗವಾಗಿ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಲೋಕಾರ್ಪಣೆ ಮಾಡಿದರು. ಸಮಾರಂಭದಲ್ಲಿ ರಾಷ್ಟ್ರಪತಿಯವರ ಪತ್ನಿ ಸವಿತಾ ಕೋವಿಂದ್,  ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಎಂ ಕೃಷ್ಣಪ್ಪ, ಇಸ್ಕಾನ್ ಸಂಸ್ಥೆಯ ಅಧ್ಯಕ್ಷ ಮಧುಪಂಡಿತ ದಾಸ್ ಮತ್ತು ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ | ಬೆಂಗಳೂರಲ್ಲಿ ರಾಷ್ಟ್ರಪತಿ ಸಂಚಾರ, ಹಲವೆಡೆ ಟ್ರಾಫಿಕ್‌ ಜಾಮ್‌ ಅಲರ್ಟ್!‌ ಎಲ್ಲೆಲ್ಲಿ ಜಾಮ್‌ ಆಗ್ತಿದೆ?

ಲೋಕಾರ್ಪಣೆ ಬಳಿಕ ಮಾತಾನಾಡಿದ ರಾಷ್ಟ್ರಪತಿ ರಾಮನಾಥ ಕೋವಿಂದ್, ಈ ದೇವಾಲಯ ಭಕ್ತಿ ಭಾವದ ಪ್ರತೀಕವಾಗಿದ್ದು ಸುಂದರವಾಗಿದೆ. ದೇವಾಲಯಗಳು ಹಿಂದೂಧರ್ಮದ ಚಿಹ್ನೆಯಾಗಿದ್ದು ಅದ್ವೈತ್ವ, ವಿಶಿಷ್ಟಾದೈತ್ವ , ಜ್ಞಾನ, ಕರ್ಮ, ಭಕ್ತಿ ಮಾರ್ಗಗಳಿಂದ ಬಂದಿವೆ. ಭಗವದ್ಗೀತೆಯು ಅನೇಕ ಪಾಠಗಳನ್ನು ಅನೇಕ ಜನರಿಗೆ ನೀಡುತ್ತದೆ. ಭಗವದ್ಗೀತೆಯನ್ನು ಸ್ಮರಿಸುವಾಗ ಪ್ರಭುಪಾದರನ್ನು ನೆನೆಯುತ್ತೇವೆ. ಈ ವರ್ಷ ಶ್ರೀಪ್ರಭುಪಾದರು 125ನೇ ವರ್ಷ ಪೂರೈಸುತ್ತಿದ್ದಾರೆ ಎನ್ನುವುದೂ ಸಂತಸದ ವಿಚಾರ.

ರಾಷ್ಟ್ರಪತಿಯವರಿಗೆ ಬೆಂಗಳೂರಿನಿಂದ ಬೀಳ್ಕೊಡುಗೆ

ಕನ್ನಡದಲ್ಲಿ ಭಾಷಣ ಆರಂಭಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಬೆಂಗಳೂರಿನ ರಾಜಾಜಿನಗರದ ಇಸ್ಕಾನ್ ದರ್ಶನಕ್ಕೆ ಸೌಭಾಗ್ಯ ಕಲ್ಪಿಸಲಾಗಿತ್ತು. ಅನೇಕ ಬಾರಿ ಇಸ್ಕಾನ್‌ಗೆ ಭೇಟಿ‌ ನೀಡಿ ಮೂಕವಿಸ್ಮಿತನಾಗಿದ್ದೆ. ದೇಶ ವಿದೇಶಗಳಿಂದ ಜನರು ಇಸ್ಕಾನ್ ದೇವಾಲಯಕ್ಕೆ ಭೇಟಿ‌ ನೀಡುತ್ತಾ ಬಂದಿದ್ದಾರೆ. ಯಾವುದೇ ಜಾತಿ ಭೇದ ಇಲ್ಲದೆ ಸರ್ವರಿಗೂ ದೇವಾಲಯಕ್ಕೆ ಪ್ರವೇಶವಿದೆ. ಶ್ರಿಲ ಪ್ರಭುಪಾದರು ಹಲವೆಡೆ ದೇವಾಲಯಗಳನ್ನು ಸ್ಥಾಪಿಸಿದ್ದು, ರಾಜಾಧಿರಾಜ ಗೋವಿಂದ ದೇವಾಲಯ ಭಕ್ತಿ ಭಾವ ನೀಡಿ ಸಕಾರಾತ್ಮಕ ಚಿಂತನೆಯನ್ನು ಜನರ ಮನಸ್ಸಿನಲ್ಲಿ ಬಿತ್ತಲಿಸಿರುವ ವಿಶ್ವಾಸವಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತಾನಾಡಿ, ಬೆಂಗಳೂರು ನಗರ ಮಾತ್ರವಲ್ಲದೆ ವಿಶ್ವಕ್ಕೇ ಭಕ್ತಿಯ ಚೈತನ್ಯ ನೀಡಿದ ದಿನವಿದು. ಪ್ರಭು ರಾಜಾಧಿರಾಜ ಗೋವಿಂದರ ಆಗಮನ ಇಲ್ಲಿ ಆಗಿದ್ದು, ಮಧುಪಂಡಿತ್ ದಾಸ್ ಎರಡು ದಶಕಗಳ ಕಾಲ ಸಮಗ್ರ ಅಭಿವೃದ್ಧಿ ಮಾಡಿದ್ದಾರೆ. ದೇವರ ಮೂರ್ತಿ ಪ್ರತಿಷ್ಠಾಪಿಸಿ ಲೋಕ ಕಲ್ಯಾಣ ಸಂಕಲ್ಪ ಮಾಡಿದ್ದು, ರಾಷ್ಟ್ರಪತಿಗಳು ಈ ದೇವಸ್ಥಾನ ಲೋಕಾರ್ಪಣೆ ಮಾಡಿದ್ದಾರೆ. ನಮ್ಮ ದೇಶ ಎಂತಹ ದೈವೀ ಸಂಸ್ಕೃತಿ ಹೊಂದಿದೆ ಎಂಬುದನ್ನ ತೋರಿಸಿದ್ದಾರೆ ಅಂದರು.

ನಾಗರಿಕತೆ ಹಾಗೂ ಸಂಸ್ಕೃತಿ ಬಗ್ಗೆ ಹಲವರಿಗೆ ವ್ಯತ್ಯಾಸ ಗೊತ್ತಿಲ್ಲ. ನಾಗರಿಕತೆ ಎಂದರೆ ನಾವು ಏನು ಎಂದು ಅರಿತುಕೊಳ್ಳುವುದು. ಹಾಗೆಯೇ ಸಂಸ್ಕೃತಿ ಎಂದರೆ ನಮ್ಮ ಬಳಿ ಏನಿದೆ ಎಂಬುದು. ಸಾಕಷ್ಟು ಜನರಿಗೆ ಸಂಸ್ಕೃತಿ ಹಾಗೂ ಅಧ್ಯಾತ್ಮದ ಜ್ಞಾನ ಕಡಿಮೆ ಇದೆ. ಭಾರತ ದೇಶದಲ್ಲೇ ಅತಿ ಹೆಚ್ಚು ಭಕ್ತಿ ಚಳವಳಿಗಳು ನಡೆದಿವೆ. ದೇಶದ ಅನೇಕ ಕಡೆ ದೇವಸ್ಥಾನಗಳನ್ನು ಇಸ್ಕಾನ್‌ ನಿರ್ಮಿಸಿದ್ದು, ಅಧ್ಯಾತ್ಮದ ಚಿಂತನೆಗಳನ್ನು ಸಾರುವಲ್ಲಿ ಇಸ್ಕಾನ್ ಪಾತ್ರ ದೊಡ್ಡದಿದೆ. ಅಕ್ಷಯ ಪಾತ್ರೆ ಯೋಜನೆ ರಾಜ್ಯದಲ್ಲಿ ನಡೆಯುತ್ತಿದ್ದು, ನಮ್ಮ ಸರ್ಕಾರದ ಪೂರ್ಣ ಸಹಕಾರವನ್ನು ಈ‌ ಯೋಜನೆಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ರಾಷ್ಟ್ರಪತಿ ನಿರ್ಗಮನ

ಎರಡು ದಿನಗಳ ಬೆಂಗಳೂರು ಪ್ರವಾಸದ ನಂತರ ರಾಷ್ಟ್ರಪತಿ ರಾಮನಾಥ ಕೋವಿಂದ್ ಹಾಗೂ ಭಾರತದ ಮಹಿಳಾ ಪ್ರಥಮ ಪ್ರಜೆ ಸವಿತಾ ಕೊವಿಂದ್ ಅವರು ಎಚ್‌ಎಎಲ್‌ ವಿಮಾನದಲ್ಲಿ ನಿಲ್ದಾಣದ ಮೂಲಕ ಬೀಳ್ಕೊಡಲಾಯಿತು. ಗೋವಾ ರಾಜ್ಯಕ್ಕೆ ತೆರಳಿದ ರಾಷ್ಟ್ರಪತಿಯವರನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ ಬೀಳ್ಕೊಟ್ಟರು.

ಇದನ್ನೂ ಓದಿ | ಬೆಂಗಳೂರಿಗೆ ರಾಷ್ಟ್ರಪತಿ ಕೋವಿಂದ್‌ ಆಗಮನ: ಇಂದು ಮಿಲಿಟರಿ ಶಾಲೆ ಅಮೃತ ಮಹೋತ್ಸವ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಶಿವಮೊಗ್ಗ

Shivamogga News: ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಿಯ ದರ್ಶನ ಪಡೆದ ಸಾವಿರಾರು ಭಕ್ತರು

Shivamogga News: ಸೊರಬ ತಾಲೂಕಿನ ಚಂದ್ರಗುತ್ತಿಯ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಆಗೀ ಹುಣ್ಣಿಮೆಯ ಪ್ರಯುಕ್ತ ಗುರುವಾರ ಸಾವಿರಾರು ಭಕ್ತರು ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿದರು.

VISTARANEWS.COM


on

Agee hunnime Thousands of devotees have darshan of Shri Renukamba Devi of Chandragutti
Koo

ಸೊರಬ: ತಾಲೂಕಿನ ಚಂದ್ರಗುತ್ತಿಯ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ (Chandragutti Shri Renukamba Devi temple) ಆಗೀ ಹುಣ್ಣಿಮೆಯ ಪ್ರಯುಕ್ತ ಗುರುವಾರ ಸಾವಿರಾರು ಭಕ್ತರು ಆಗಮಿಸಿ, ವಿಶೇಷ ಪೂಜೆ (Shivamogga News) ಸಲ್ಲಿಸಿದರು.

ತಾಲೂಕು ಸೇರಿದಂತೆ ಹಿರೇಕೆರೂರು, ಬ್ಯಾಡಗಿ, ರಾಣೇಬೆನ್ನೂರು, ಹರಿಹರ, ಶಿಕಾರಿಪುರ, ಹಾನಗಲ್, ವಿಜಯಪುರ, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ ಸೇರಿದಂತೆ ಉತ್ತರ ಕರ್ನಾಟಕ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಶ್ರೀ ರೇಣುಕಾದೇವಿಯ ದರ್ಶನ ಪಡೆದು ಉಧೋ ಉಧೋ ಎಂದು ಜೈಕಾರ ಹಾಕಿ ಭಕ್ತಿ ಸಮರ್ಪಿಸಿದರು.

ಇದನ್ನೂ ಓದಿ: Golden Star Ganesh: ಮೈಸೂರಿನಲ್ಲಿ ಮೇ 25ರಂದು ʼಕೃಷ್ಣಂ ಪ್ರಣಯ ಸಖಿʼ ಚಿತ್ರದ ಫಸ್ಟ್‌ ಸಾಂಗ್‌ ರಿಲೀಸ್‌

ಹುಣ್ಣಿಮೆ ಹಿನ್ನೆಲೆ ದೇವಸ್ಥಾನದ ಆವರಣದಲ್ಲಿರುವ ಪರಿವಾರ ದೇವರುಗಳಾದ ಕಾಲಭೈರವ, ನಾಗದೇವತೆ, ಮಾತಂಗಿ, ಪರಶುರಾಮ, ತ್ರಿಶೂಲದ ಭೈರಪ್ಪ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ದೇವಿಯ ಹೆಸರಿನಲ್ಲಿ ಭಕ್ತರು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಿದರು. ಧಾರ್ಮಿಕ ಸೇವೆ, ಹರಕೆ ಸಲ್ಲಿಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಭಕ್ತರು ಕುಟುಂಬ ಸಮೇತರಾಗಿ ಸಹ ಭೋಜನ ಮಾಡುವ ದೃಶ್ಯವೂ ಕಂಡುಬಂದಿತು.

ಇದನ್ನೂ ಓದಿ: Yadgiri News: ಶ್ರೀಶೈಲಂನಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ

ಪ್ರತಿ ಹುಣ್ಣಿಮೆ ಮತ್ತು ವಿಶೇಷ ದಿನಗಳಲ್ಲಿ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಶೀ ರೇಣುಕಾಂಬ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಆದರೆ ರಸ್ತೆ ಕಿರಿದಾದ ಕಾರಣ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಸುಮಾರು 1 ಗಂಟೆ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಯಿತು. ಸ್ಥಳೀಯ ಜನಪ್ರತಿನಿಧಿಗಳು ಚಂದ್ರಗುತ್ತಿ ಮುಖ್ಯ ರಸ್ತೆಯನ್ನು ಅಗಲಿಕರಿಸಿ ವ್ಯವಸ್ಥಿತವಾದ ರಸ್ತೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Continue Reading

ಯಾದಗಿರಿ

Yadgiri News: ಶ್ರೀಶೈಲಂನಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ

Yadgiri News: ಯಾದಗಿರಿಗೆ ಸಮೀಪದ ಆಂಧ್ರಪ್ರದೇಶದ ಶ್ರೀಶೈಲಂನ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಸಹಸ್ರಾರು ಭಕ್ತರ ಮಧ್ಯೆ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಅವರ 602ನೇ ಜಯಂತಿಯನ್ನು ಶ್ರದ್ದಾ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

VISTARANEWS.COM


on

Shivasharane Hemaraddi Mallamma Jayanti celebration in Srisailam
Koo

ಯಾದಗಿರಿ: ಇಲ್ಲಿಗೆ ಸಮೀಪದ ಆಂಧ್ರಪ್ರದೇಶದ ಶ್ರೀಶೈಲಂನ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಸಹಸ್ರಾರು ಭಕ್ತರ ಮಧ್ಯೆ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಅವರ 602ನೇ ಜಯಂತಿಯನ್ನು ಶ್ರದ್ದಾ ಭಕ್ತಿ ಹಾಗೂ ಸಂಭ್ರಮದಿಂದ (Yadgiri News) ಆಚರಿಸಲಾಯಿತು.

ಸಮಾರಂಭದಲ್ಲಿ ಮಾತನಾಡಿದ ಶ್ರೀಶೈಲಂ ಮಲ್ಲಿಕಾರ್ಜುನ ದೇವಸ್ಥಾನ ಆಡಳಿತ ಮಂಡಳಿಯ ಟ್ರಸ್ಟ್‌ನ ಕಾರ್ಯನಿರ್ವಾಹಕ ಅಧಿಕಾರಿ ಪೆದ್ದುರಾಜು ಮಾತನಾಡಿ, 14ನೇ ಶತಮಾನದಲ್ಲಿ ಮಲ್ಲಮ್ಮ ತನ್ನ ಕೌಟುಂಬಿಕ ಜೀವನದ ಜತೆಗೆ ಆಧ್ಯಾತ್ಮಿಕ ಸಾಧನೆ ಮೂಲಕ ಪರಶಿವ ಮಲ್ಲಿಕಾರ್ಜುನನ ಕೃಪೆಗೆ ಪಾತ್ರಳಾಗಿ ಮನುಕುಲಕ್ಕೆ ಮಾನವೀಯ ಸಂದೇಶಗಳನ್ನು ನೀಡಿದ್ದಾಳೆ ಎಂದು ತಿಳಿಸಿದರು.

ಇದನ್ನೂ ಓದಿ: Aadhaar Card Fact Check: 10 ವರ್ಷಗಳ ಹಿಂದಿನ ಆಧಾರ್ ಕಾರ್ಡ್‌ ಜೂ. 14ರ ಬಳಿಕ ರದ್ದಾಗುತ್ತದೆಯೆ?

ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಕರ್ಮಭೂಮಿಯಾದ ಶ್ರೀಶೈಲಂನಲ್ಲಿ ಕರ್ನಾಟಕದ ವೀರಶೈವ ಲಿಂಗಾಯತ ರಡ್ಡಿ ಸಮಾಜದವರು ಭವ್ಯ ಮಲ್ಲಮ್ಮ ದೇವಸ್ಥಾನ ನಿರ್ಮಾಣ ಮಾಡಿದ್ದಲ್ಲದೇ ಕ್ಷೇತ್ರದ ಪ್ರಗತಿಗೆ ಮಹತ್ವದ ಕೊಡುಗೆ ನೀಡಿಕೊಂಡು ಬಂದಿದ್ದಾರೆ, ಅವರ ಶ್ರಮದಿಂದ ಆಂದ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕ ಭಕ್ತರ ಮದ್ಯೆ ಸಾಮರಸ್ಯ ವಾತಾವರಣ ಮೂಡಿದೆ ಎಂದು ಅಭಿಪ್ರಾಯಪಟ್ಟರು.

ದೇವಸ್ಥಾನಕ್ಕೆ ಆಗಮಿಸುವ ಸಕಲ ಭಕ್ತಾದಿಗಳಿಗೆ ಟ್ರಸ್ಟ್ ವತಿಯಿಂದ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಮುಖ್ಯ ಅರ್ಚಕ ಗುರುಪಾದಯ್ಯಸ್ವಾಮಿ ಮಾತನಾಡಿ, ಹಲವಾರು ವರ್ಷಗಳಿಂದ ಹೇಮರಡ್ಡಿ ಮಲ್ಲಮ್ಮ ಭಕ್ತರ ಸಹಕಾರದಿಂದ ಇಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಅವರ ಸಾಧನೆಯನ್ನು ಎಲ್ಲರಿಗೂ ತಿಳಿಸುವ ಕೆಲಸ ಮಾಡಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.

ಇದಕ್ಕೂ ಮೊದಲು ದೇವಸ್ಥಾನದಲ್ಲಿ ಮಲ್ಲಮ್ಮನ ಮೂರ್ತಿಗೆ ಪಂಚಾಮೃತ ಅಭಿಷೇಕ, ಮುತೈದೆಯರಿಗೆ ಉಡಿ ತುಂಬುವ, ತೊಟ್ಟಿಲ ಉತ್ಸವ ಕಾರ್ಯಕ್ರಮ, ಮಹಾ ಮಂಗಳಾರತಿ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.

ಇದನ್ನೂ ಓದಿ: Job Alert: ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿದೆ 54 ಹುದ್ದೆ; ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

ಸಮಾರಂಭದಲ್ಲಿ ಉಪ ಕಾರ್ಯನಿರ್ವಾಹಕ ಅಧಿಕಾರಿ ಹರಿದಾಸರು, ಶಂಕ್ರಯ್ಯಸ್ವಾಮಿ, ಅರ್ಚಕರಾದ ಓಂಕಾರಯ್ಯಸ್ವಾಮಿ, ಮಲ್ಲಮ್ಮ ತಾಳಿಕೋಟಿ, ವೆಂಕಟರಡ್ಡಿ ಮಾಲಿ ಪಾಟೀಲ್ ಹತ್ತಿಕುಣಿ, ಗದಗ ಜಿಲ್ಲೆಯ ನ್ಯಾಯವಾದಿ ವಿರೇಂದ್ರ ಶಿರೋಳ, ಶಿವಪ್ಪಗೌಡ, ಸಿದ್ದಣ್ಣ ಸೇರಿದಂತೆ ಕನ್ನಡಿಗ ಭಕ್ತರು ಹಾಗೂ ಇತರರು ಉಪಸ್ಥಿತರಿದ್ದರು.

Continue Reading

ಧಾರ್ಮಿಕ

Remedies For SadeSati: ಶನಿಯ ವಕ್ರದೃಷ್ಟಿ ಕಡಿಮೆ ಮಾಡಲು ಇಲ್ಲಿದೆ ಸುಲಭ ಪರಿಹಾರ

ಶನಿಯ ವಕ್ರದೃಷ್ಟಿಯ ಪರಿಣಾಮಗಳ ಬಗ್ಗೆ ಹೆಚ್ಚಿನವರು ಕೇಳಿರುತ್ತಾರೆ, ಇನ್ನು ಕೆಲವರು ಅನುಭವಿಸಿರುತ್ತಾರೆ. ಇದರಿಂದ ಪಾರಾಗಲು ಹಲವಾರು ಪರಿಹಾರ ಮಾರ್ಗಗಳನ್ನು ಹೇಳಲಾಗಿದೆ. ಜೂನ್ 6ರಂದು ಶನಿ ಜಯಂತಿ. ಈ ದಿನ ಕೆಲವು ಅನುಷ್ಠಾನಗಳನ್ನು ಮಾಡುವುದರಿಂದ ಶನಿಯ ವಕ್ರ ದೃಷ್ಟಿಯಿಂದ ಪಾರಾಗಲು (Remedies For SadeSati) ಸಾಧ್ಯವಿದೆ .

VISTARANEWS.COM


on

By

Remedies For SadeSati
Koo

ಜೀವನದಲ್ಲಿ ಏನಾದರೂ ಕೆಟ್ಟದಾದರೆ ಶನಿಯ (shani) ವಕ್ರ ದೃಷ್ಟಿ ಅಥವಾ ಸಾಡೇ ಸಾಥ್ ಪರಿಣಾಮ (Remedies For SadeSati) ಎನ್ನುವ ಅನುಮಾನ ಕೆಲವರನ್ನು ಕಾಡುತ್ತದೆ. ನಾವು ತಿಳಿದೋ ತಿಳಿಯದೆಯೋ ಮಾಡುವ ಕರ್ಮಕ್ಕೆ ತಕ್ಕ ಪ್ರತಿಫಲ ಕೊಡುವ ಶನಿ ದೇವನ ಬಗ್ಗೆ ಭಕ್ತಿಗಿಂತ ಭಯ ಪಡುವವರೇ ಅಧಿಕ. ಆದರೆ ಶನಿ ದೇವನೂ ಶ್ರದ್ಧಾ ಭಕ್ತಿಗೆ ಮೆಚ್ಚುತ್ತಾನೆ ಹಾಗೂ ಭಕ್ತರ ಅಭೀಷ್ಟೆಗಳನ್ನು ಈಡೇರಿಸುತ್ತಾನೆ.

ಶನಿಯ ವಕ್ರ ದೃಷ್ಟಿ ನಮ್ಮ ಮೇಲೆ ಬಿದ್ದರೆ ಅದರಿಂದ ಪಾರಾಗಲು ಕೆಲವೊಂದು ಪರಿಹಾರ ಕ್ರಮಗಳನ್ನು ಪುರಾಣಗಳಲ್ಲಿ ಹೇಳಲಾಗಿದೆ. ಜೂನ್ 6ರಂದು ಶನಿ ಜಯಂತಿ (Shani Jayanti). ಈ ದಿನ ಇವುಗಳನ್ನು ಅನುಷ್ಠಾನಗೊಳಿಸಿದರೆ ಕಷ್ಟಗಳಿಂದ ಪಾರಾಗಬಹುದು.

1. ಬೆನ್ನು ನೋವು ಅಥವಾ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಶನಿ ಜಯಂತಿಯ ದಿನದಂದು ಕಪ್ಪು ಉಂಡೆಯನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ದೇವಸ್ಥಾನದ ಮೂಲೆಯಲ್ಲಿ ಇರಿಸಿ. ಶನಿದೇವನ ಮಂತ್ರವಾದ “ಓಂ ಶ್ರೀಂ ಹ್ರೀಂ ಶಾಂ ಶನೈಶ್ಚರಾಯ ನಮಃ” ಎಂಬುದಾಗಿ 21 ಬಾರಿ ಜಪಿಸಿ.

2. ಮಕ್ಕಲಾಗದೇ ಇದ್ದರೆ ದಂಪತಿ ಶನಿ ಜಯಂತಿಯ ದಿನದಂದು ಮನೆಯ ಚಾವಣಿ, ಬಾಲ್ಕನಿ ಅಥವಾ ಮನೆಯ ಹೊರಗೆ ಪಕ್ಷಿಗಳಿಗೆ ಆಹಾರ ಮತ್ತು ನೀರನ್ನು ಇರಿಸಿ. ಇಲ್ಲಿ ನೆನಪಿಡಬೇಕಾದ ಅಂಶವೆಂದರೆ ಆಹಾರ ಮತ್ತು ನೀರು ಪಕ್ಷಿಗಳಿಗೆ ಇಡಬೇಕೇ ಹೊರತು ಪಾರಿವಾಳಗಳಿಗೆ ಅಲ್ಲ. ಇದರೊಂದಿಗೆ 51 ಬಾರಿ ಓಂ ಶ್ರೀಂ ಹ್ರೀಂ ಶಾಂ ಶನೈಶ್ಚರಾಯ ನಮಃ ಎಂದು ಜಪಿಸಿ.

3. ಮನೆಯ ಸಂತೋಷ ಮತ್ತು ಅದೃಷ್ಟವನ್ನು ಹೆಚ್ಚಿಸಲು ಬಯಸಿದರೆ ಶನಿ ಜಯಂತಿಯ ದಿನದಂದು ದೇವಸ್ಥಾನದಲ್ಲಿ ಕಪ್ಪು ಬಟ್ಟೆಯನ್ನು ಅರ್ಪಿಸಿ. 11 ಬಾರಿ ಶಂ ಹ್ರೀಂ ಶಾಂ ಶನೈಶ್ಚರಾಯ ನಮಃ.ಮಂತ್ರವನ್ನು ಜಪಿಸಿ.

4. ಕುಟುಂಬದ ಸದಸ್ಯರೊಂದಿಗೆ ಸಮಸ್ಯೆಗಳಿದ್ದರೆ ಶನಿ ಜಯಂತಿಯ ದಿನದಂದು ಶನಿ ದೇವರನ್ನು ಧ್ಯಾನಿಸುವಾಗ ದೇವಸ್ಥಾನದಲ್ಲಿ ಒಂದು ಹಿಡಿ ಇಡೀ ಉಂಡೆಯನ್ನು ಅರ್ಪಿಸಿ ಮತ್ತು 21 ಬಾರಿ ಜಪಿಸಿ. ಓಂ ಶ್ರೀ ಶಾಂ ಶ್ರೀ ಶನೈಶ್ಚರಾಯ ನಮಃ ಮಂತ್ರವನ್ನು ಜಪಿಸಿ.

5. ಜೀವನದಲ್ಲಿ ಸತತವಾಗಿ ಅಸಂಖ್ಯಾತ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಶನಿ ಜಯಂತಿಯ ದಿನದಂದು ಕೈಯ ಉದ್ದದ 19 ಪಟ್ಟು ಕಪ್ಪು ದಾರವನ್ನು ತೆಗೆದುಕೊಂಡು ಅದನ್ನು ಮಾಲೆಯ ರೂಪದಲ್ಲಿ ಮಾಡಿ ಕುತ್ತಿಗೆಗೆ ಧರಿಸಿ. 108 ಬಾರಿ ಓಂ ಶ್ರೀಂ ಶ್ರೀಂ ಶ್ರೀಂ ಶನೈಶ್ಚರಾಯ ನಮಃ ಮಂತ್ರವನ್ನು ಜಪಿಸಿ.

6. ಯಾವುದೇ ಕೆಲಸ ಮಾಡಲು ಮನಸ್ಸಿಲ್ಲದಿದ್ದರೆ ಅಥವಾ ಕೆಲಸದ ಸಮಯದಲ್ಲಿ ಸೋಮಾರಿತನವನ್ನು ಅನುಭವಿಸಿದರೆ ಶನಿ ಜಯಂತಿಯ ದಿನ ಶನಿದೇವನ ಈ ಹತ್ತು ನಾಮಗಳಾದ ಕೋನಸ್ತ ಪಿಂಗಲೋ ಬಭ್ರುಃ ಕೃಷ್ಣ ರೌದ್ರೋಂತಕೋ ಯಮ: ಸೌರಿಃ ಶನೈಶ್ಚರೋ ಮಂದಃ ಪಿಪ್ಪಲಾದೇನ್ ಎಂಬುದಾಗಿ 108 ಬಾರಿ ಜಪಿಸಬೇಕು.

7. ಜೀವನದಿಂದ ಶತ್ರುಗಳನ್ನು ದೂರ ಮಾಡಲು ಶನಿ ಜಯಂತಿಯ ದಿನದಂದು ಸ್ನಾನದ ಅನಂತರ ಶನಿದೇವನ ಮಂತ್ರವಾದ ಓಂ ಐಂ ಶ್ರೀಂ ಹ್ರೀಂ ಶನೈಶ್ಚರಾಯ ನಮಃ ಎಂಬುದಾಗಿ 11 ಬಾರಿ ಜಪಿಸಬೇಕು.

8. ಮನದಲ್ಲಿ ಸದಾ ಸಕಾರಾತ್ಮಕತೆ ಇರಬೇಕು ಮತ್ತು ಮನಸ್ಸಿನಲ್ಲಿ ಹೊಸ ಆಲೋಚನೆಗಳು ಬರುತ್ತಿರಬೇಕೆಂದು ಬಯಸಿದರೆ ಶನಿ ಜಯಂತಿಯ ದಿನದಂದು ಮನೆಯ ಮುಖ್ಯದ್ವಾರದಲ್ಲಿ ಸಾಸಿವೆ ಎಣ್ಣೆಯನ್ನು ಹಚ್ಚಿ. 21 ಬಾರಿ ಓಂ ಶಂ ಶನ್ಯೈ ನಮಃ ಮಂತ್ರವನ್ನು ಜಪಿಸಿ.

9. ಶನಿ ಜಯಂತಿಯ ದಿನ ಸಂಜೆ ಶನಿದೇವನ ಮಂತ್ರವಾದ ಶಂ ಓಂ ಶಂ ನಮಃ ಅನ್ನು ಜಪಿಸಬೇಕು. ಇದರಿಂದ ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶವನ್ನು ಪಡೆಯುತ್ತೀರಿ ಮತ್ತು ಜೀವನದಲ್ಲಿ ಖಂಡಿತವಾಗಿಯೂ ಯಶಸ್ವಿಯಾಗುತ್ತೀರಿ.

10. ಕಬ್ಬಿಣದಿಂದ ಮಾಡಿದ ವಸ್ತುವನ್ನು ಯಾವಾಗಲೂ ನಿಮ್ಮ ಬಳಿ ಇಟ್ಟುಕೊಳ್ಳಿ. ಜೊತೆಗೆ 11 ಬಾರಿ ಓಂ ಐಂ ಹ್ರೀಂ ಶ್ರೀಂ ಶನೈಶ್ಚರಾಯ ನಮಃ ಎಂದು ಜಪಿಸಿದರೆ ಖಿನ್ನತೆಯಿಂದ ಶೀಘ್ರದಲ್ಲೇ ಪರಿಹಾರವನ್ನು ಪಡೆಯುತ್ತೀರಿ ಮತ್ತು ಯಾವುದೇ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ರೂಪಿಸುವಲ್ಲಿ ಯಶಸ್ವಿಯಾಗುತ್ತೀರಿ.

ಇದನ್ನೂ ಓದಿ: Tumkur News: ವಿಜೃಂಭಣೆಯಿಂದ ನಡೆದ ಶ್ರೀ ಬೇವಿನಳಮ್ಮ ದೇವಿ ಜಲಧಿ ಮಹೋತ್ಸವ

21. ಸಣ್ಣಪುಟ್ಟ ವಿಚಾರಗಳಿಗೆ ಸಂಗಾತಿಯೊಂದಿಗೆ ಸದಾ ಜಗಳ ನಡೆಯುತ್ತಿದ್ದರೆ ಶನಿ ಜಯಂತಿಯ ದಿನ ಶುಚಿಯಾಗಿ ಶುಭ್ರವಾದ ಬಟ್ಟೆಗಳನ್ನು ಧರಿಸಿ ಶನಿದೇವನನ್ನು ಸ್ಮರಿಸಿ ನಮಸ್ಕರಿಸಿ. ಅಲ್ಲದೆ ಸಾಸಿವೆ ಎಣ್ಣೆ, ಎಳ್ಳುವನ್ನು ಶನಿ ದೇವರಿಗೆ ಅರ್ಪಿಸಿ ಮತ್ತು ಶನಿದೇವನ ಶಂ ಶನೈಶ್ಚರಾಯ ನಮಃ ಮಂತ್ರವನ್ನು 21 ಬಾರಿ ಜಪಿಸಿ.

22. ಶನಿ ಜಯಂತಿಯ ದಿನದಂದು ಮನೆಯಲ್ಲಿ ಶಿವನ ಚಿತ್ರದ ಮುಂದೆ ಆಸನವನ್ನು ಇಟ್ಟು ಶಿವನ ಓಂ ನಮಃ ಶಿವಾಯ ಮಂತ್ರವನ್ನು 108 ಬಾರಿ ಜಪಿಸಿ. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಅಖಂಡವಾಗಿ ಉಳಿಯುತ್ತದೆ.

Continue Reading

ಪ್ರವಾಸ

Jagannath Puri Temple: ಪುರಿ ಜಗನ್ನಾಥ ದೇವಸ್ಥಾನದ 7 ಅಚ್ಚರಿಯ ಸಂಗತಿಗಳಿವು!

ಒಡಿಶಾದ ಪುರಿಯಲ್ಲಿರುವ ಜಗನ್ನಾಥ ಮಂದಿರವೂ ವಿಶ್ವ ಪ್ರಸಿದ್ಧ ಹಿಂದೂ ದೇವಾಲಯಗಳಲ್ಲಿ (Jagannath Puri Temple) ಒಂದಾಗಿದೆ. ಇಲ್ಲಿನ ಏಳು ವಿಚಾರಗಳು ಇವತ್ತಿಗೂ ವಿಜ್ಞಾನಕ್ಕೆ ಸವಾಲಾಗಿ ಪರಿಣಮಿಸಿದೆ. ಆ ಏಳು ಅಚ್ಚರಿಗಳೇನು ಎಂಬ ವಿವರಣೆ ಇಲ್ಲಿದೆ.

VISTARANEWS.COM


on

By

Jagannath Puri Temple
Koo

ವಿಶ್ವ ಪ್ರಸಿದ್ಧ ದೇವಾಲಯಗಳಲ್ಲಿ ಭಾರತದ (india) ಒಡಿಶಾದ (Odisha) ಪುರಿಯಲ್ಲಿರುವ ಜಗನ್ನಾಥ ಮಂದಿರವೂ (Jagannath Pur Temple) ಒಂದಾಗಿದೆ. ಭಗವಾನ್ ವಿಷ್ಣುವಿನ ರೂಪವಾದ ಜಗನ್ನಾಥನಿಗೆ ಸಮರ್ಪಿತವಾಗಿರುವ ಈ ಜಗನ್ನಾಥ ದೇವಾಲಯವು ಲಕ್ಷಾಂತರ ಹಿಂದೂಗಳಿಗೆ ಪ್ರಮುಖ ಯಾತ್ರಾ (tourist place) ಸ್ಥಳವಾಗಿದೆ. ಪ್ರತಿ ವರ್ಷ ಇಲ್ಲಿ ನಡೆಯುವ ರಥಯಾತ್ರೆಯ ಉತ್ಸವವನ್ನು ಕಣ್ತುಂಬಿಕೊಳ್ಳಲು ದೇಶವಿದೇಶಗಳಿಂದ ಲಕ್ಷಾಂತರ ಭಕ್ತರು ಪುರಿಗೆ ಆಗಮಿಸುತ್ತಾರೆ.

ಅದ್ಭುತವಾದ ವಾಸ್ತು ಶಿಲ್ಪವನ್ನು ಹೊಂದಿರುವ ಈ ದೇವಾಲಯವು ಅನೇಕ ರಹಸ್ಯಗಳನ್ನು ಹೊಂದಿದೆ. ಜಗನ್ನಾಥ ಪುರಿ ದೇವಸ್ಥಾನದ ಬಗ್ಗೆ ಹೆಚ್ಚಿನವರು ತಿಳಿಯದೇ ಇರುವಂತ ಏಳು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.


1. ನೆರಳು ಬೀಳುವುದಿಲ್ಲ!

ಜಗನ್ನಾಥ ಪುರಿ ದೇವಾಲಯದ ಮೇಲೆ ಯಾವುದೇ ನೆರಳು ಬೀಳುವುದಿಲ್ಲ. ಇದು ನಿಖರವಾದ ವಾಸ್ತುಶಿಲ್ಪದ ಯೋಜನೆಯ ಪರಿಣಾಮವೇ ಅಥವಾ ಜಗನ್ನಾಥನ ಪವಾಡವೇ ಎಂಬುದನ್ನು ಈವರೆಗೆ ಪತ್ತೆ ಹಚ್ಚಲು ಯಾರಿಗೂ ಸಾಧ್ಯವಾಗಿಲ್ಲ. ಈ ದೇವಾಲಯವು ‘ನೆರಳು ರಹಿತ’ ಎಂದು ಹೇಳಲಾಗುತ್ತದೆ.


2. ಗಾಳಿಗೆ ವಿರುದ್ಧವಾಗಿ ಧ್ವಜ ಹಾರುತ್ತದೆ!

ದೇವಾಲಯದ ಮೇಲ್ಭಾಗದಲ್ಲಿರುವ ಧ್ವಜವು ಗಾಳಿಗೆ ವಿರುದ್ಧವಾಗಿ ಯಾಕೆ ಹಾರುತ್ತದೆ ಎಂಬುದರ ಹಿಂದೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ದೇವಾಲಯದಲ್ಲಿ ಧಾರ್ಮಿಕ ಶಕ್ತಿಯ ಭವ್ಯವಾದ ಅದ್ಭುತವನ್ನು ಪ್ರದರ್ಶಿಸುವ ಮೂಲಕ ಪ್ರವಾಸಿಗರು ಅಚ್ಚರಿ ಪಡುವಂತೆ ಮಾಡುತ್ತದೆ.


3. ಮೇಲ್ಭಾಗದಲ್ಲಿ ಸುದರ್ಶನ ಚಕ್ರ!

ಮೇಲ್ಭಾಗದಲ್ಲಿ ಇರಿಸಲಾಗಿರುವ ಸುದರ್ಶನ ಚಕ್ರವು ಎರಡು ರಹಸ್ಯಗಳನ್ನು ಹೊಂದಿದೆ. ಮೊದಲನೆಯದಾಗಿ ನಿರ್ಮಾಣದ ಸಮಯದ ತಂತ್ರಜ್ಞಾನದ ಸ್ಥಿತಿಯನ್ನು ಗಮನಿಸಿದರೆ ವಾಸ್ತುಶಿಲ್ಪಿಗಳು ಮತ್ತು ನಿರ್ಮಾಣ ಕಾರ್ಮಿಕರು ಅಂತಹ ತೂಕದ ಚಕ್ರವನ್ನು ಹೇಗೆ ಮೇಲಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂಬುದು. ಇನ್ನೊಂದು ಇದು ಎಲ್ಲಾ ಕೋನಗಳಿಂದಲೂ ಒಂದೇ ರೀತಿ ಹೇಗೆ ಕಾಣುತ್ತದೆ ಎಂಬುದು. ಈ ಸುದರ್ಶನ ಚಕ್ರದ ಪರಿಪೂರ್ಣ ಗಣಿತ ಲೆಕ್ಕಾಚಾರ ಅನೇಕ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.


4. ಅಡುಗೆಮನೆ ಕುತೂಹಲ

ದೇವಾಲಯದೊಳಗಿರುವ ಆಹಾರವನ್ನು ಒಂದರ ಮೇಲೊಂದರಂತೆ ಜೋಡಿಸಲಾದ ಮಡಕೆಗಳಲ್ಲಿ ಬೇಯಿಸಲಾಗುತ್ತದೆ. ಕುತೂಹಲದ ವಿಷಯವೆಂದರೆ ಮೇಲ್ಭಾಗದಲ್ಲಿರುವ ಮಡಕೆಗಳ ಆಹಾರ ಮೊದಲು ಬೇಯುತ್ತದೆ! ಇದು ಪ್ರವಾಸಿಗರು ಮತ್ತು ಸಂಶೋಧಕರಿಗೆ ಇನ್ನೂ ಸವಾಲಾಗಿದೆ.


5. ಮರದ ದೇವತೆಗಳ ಆಚರಣೆ

ನಬಕಾಲೇಬಾರ ಎಂಬ ಆಚರಣೆಯು ಪುರಿಯ ಜಗನ್ನಾಥ ದೇವಾಲಯದಲ್ಲಿ ನಾಲ್ಕು ಹಿಂದೂ ದೇವತೆಗಳ ಮರದ ಪ್ರತಿಮೆಗಳ ಪುನರ್ ನಿರ್ಮಾಣವನ್ನು ಸಾರುವ ಅತ್ಯಂತ ಮಂಗಳಕರವಾದ ಆಚರಣೆಯಾಗಿದೆ. ಇದು ಆಕರ್ಷಣೆಯ ವಿಷಯವಾಗಿದ್ದು, ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಸೆಳೆಯುತ್ತದೆ.


6. ಶಾಂತವಾಗುವ ನೀರು!

ಸಂಜೆ ಸಮಯದಲ್ಲಿ ಸಾಗರದ ನೀರು ದೇವಾಲಯ ತಲುಪಿದಾಗ ಶಾಂತವಾಗುತ್ತದೆ. ಇದು ಯಾಕೆ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ದೇವಾಲಯದೊಳಗಿನ ಶಬ್ದವು ಮಾಂತ್ರಿಕವಾಗಿ ನೀರನ್ನು ಹಿಂದಿರುಗುವಂತೆ ಮಾಡುತ್ತದೆ! ದೇವತೆಗಳು ದೇವಾಲಯದೊಳಗೆ ಶಾಂತಿಯನ್ನು ಬಯಸುತ್ತಾರೆ ಮತ್ತು ಆದ್ದರಿಂದ ಪ್ರಕೃತಿ ಶಾಂತವಾಗುತ್ತದೆ ಎಂದು ಸ್ಥಳೀಯ ಪುರಾಣಗಳು ಹೇಳುತ್ತವೆ.


7. ಹಿಮ್ಮುಖ ಗಾಳಿ

ದೇವಾಲಯದ ಗಾಳಿಯು ಹಗಲಿನಲ್ಲಿ ಭೂಮಿಯಿಂದ ಸಮುದ್ರದತ್ತ ಹೋಗುತ್ತದೆ ಮತ್ತು ರಾತ್ರಿಯಲ್ಲಿ ಹರಿವನ್ನು ಹಿಮ್ಮುಖಗೊಳಿಸುತ್ತದೆ. ಇದು ಇನ್ನೂ ಉತ್ತರಕ್ಕೆ ಸಿಗದ ಪ್ರಶ್ನೆಯಾಗಿದೆ. ಇಲ್ಲಿನ ಪ್ರಕೃತಿ ವಿಸ್ಮಯ ಅನೇಕರನ್ನು ಆಶ್ಚರ್ಯ ಚಕಿತರನ್ನಾಗಿ ಮಾಡುತ್ತದೆ.

Continue Reading
Advertisement
Narendra Modi
ದೇಶ3 hours ago

Narendra Modi: ನನ್ನನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ; ಮಮತಾ ಬ್ಯಾನರ್ಜಿಗೆ ಮೋದಿ ಚಾಟಿ

ಕರ್ನಾಟಕ3 hours ago

Driving Bus With Umbrella: ಛತ್ರಿ ಹಿಡಿದು ಬಸ್ ಚಾಲನೆ; ಮೋಜಿಗಾಗಿ ವಿಡಿಯೊ ಮಾಡಿದ ಡ್ರೈವರ್‌, ಕಂಡಕ್ಟರ್‌ ಸಸ್ಪೆಂಡ್‌!

Vistara editorial
ಬೆಂಗಳೂರು3 hours ago

ವಿಸ್ತಾರ ಸಂಪಾದಕೀಯ: ಕಸ ವಿಲೇವಾರಿಗೆ ಹೊಸ ಸಂಸ್ಥೆ, ಜಾರಿಕೊಳ್ಳುವ ನೆಪ ಆಗದಿರಲಿ

SRH vs RR
ಕ್ರೀಡೆ3 hours ago

SRH vs RR: ಹೈದರಾಬಾದ್​ಗೆ ಗೆಲುವಿನ ‘ಸನ್​ರೈಸ್’; ಫೈನಲ್​ನಲ್ಲಿ ಕೆಕೆಆರ್ ವಿರುದ್ಧ ಕಣಕ್ಕೆ​

Electric Shock
ಕ್ರೈಂ4 hours ago

Electric Shock: ಲಿಂಗಸುಗೂರಿನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು

Prajwal Revanna Case
ಕರ್ನಾಟಕ4 hours ago

Prajwal Revanna Case: ರಾಜ್ಯಕ್ಕೆ ಬಂದು ಕಾನೂನು ಗೌರವಿಸಿ; ಪ್ರಜ್ವಲ್‌ಗೆ ವಿಸ್ತಾರ ನ್ಯೂಸ್‌ ಬಹಿರಂಗ ಪತ್ರ

Kangana Ranaut
ದೇಶ5 hours ago

Kangana Ranaut: ಈ ಗುಲಾಬಿಯು ನಿಮಗಾಗಿ; ಮೋದಿಗೆ ಕೆಂಪು ಗುಲಾಬಿ ಕೊಟ್ಟು ಸ್ವಾಗತಿಸಿದ ಕಂಗನಾ! Photo ಇದೆ

T20 World Cup 2024
ಕ್ರೀಡೆ5 hours ago

T20 World Cup 2024: ಕೊನೆಗೂ ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಭಾರತದ ಬದ್ಧ ಎದುರಾಳಿ ಪಾಕಿಸ್ತಾನ

Prajwal Revanna Case
ಕರ್ನಾಟಕ5 hours ago

Prajwal Revanna Case: ವಕೀಲ ದೇವರಾಜೇಗೌಡಗೆ ಇನ್ನೂ 14 ದಿನ ಜೈಲೇ ಗತಿ; ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ

Yuzvendra Chahal
ಕ್ರಿಕೆಟ್5 hours ago

Yuzvendra Chahal: ಸಿಕ್ಸರ್​ ಹೊಡೆಸಿಕೊಂಡು ಐಪಿಎಲ್​ನಲ್ಲಿ ಕೆಟ್ಟ ದಾಖಲೆ ಬರೆದ ಚಹಲ್​

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ2 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ3 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು4 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು4 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ5 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ5 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ6 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ1 week ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌