ಹೊಸ ಪುಸ್ತಕ: ಭಾರತದ ಆರ್ಯರು ಇರಾನಿನಿಂದ ಬಂದವರೇ? - Vistara News

ಕಲೆ/ಸಾಹಿತ್ಯ

ಹೊಸ ಪುಸ್ತಕ: ಭಾರತದ ಆರ್ಯರು ಇರಾನಿನಿಂದ ಬಂದವರೇ?

ಕ್ರಿಸ್ತಪೂರ್ವ ಭಾರತದಲ್ಲಿ ಇದ್ದ ನಾಗರಿಕತೆ ಎಂತಹುದು? ರೋಚಕ ಐತಿಹಾಸಿಕ ಅಂಶಗಳನ್ನು ಒಳಗೊಂಡ ಸದ್ಯೋಜಾತ ಭಟ್ಟರ ವಿದ್ವತ್ಪೂರ್ಣ ಹೊಸ ಪುಸ್ತಕ ʻಮಾಗಧೇಯʼದಿಂದ ಆಯ್ದ ಭಾಗವಿಲ್ಲಿದೆ.

VISTARANEWS.COM


on

new kannada book
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ʻಶಿಲೆಗಳಲ್ಲಡಗಿದ ಸತ್ಯʼ ʻಮಿಹಿರಕುಲಿʼ ಮುಂತಾದ ಕೃತಿಗಳ ಮೂಲಕ ಹೆಸರುವಾಸಿಯಾದ ಸದ್ಯೋಜಾತ ಭಟ್ಟ ಅವರ ಹೊಸ ಪುಸ್ತಕ ʻಮಾಗಧೇಯʼ. ಭಾರತದ ಇತಿಹಾಸವನ್ನು ಮಗಧ ಸಾಮ್ರಾಜ್ಯದ ಹಿನ್ನೆಲೆಯಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ಅವರು ಇಲ್ಲಿ ಮಾಡಿದ್ದಾರೆ. ವೇದ ಪುರಾಣಗಳ ಉಲ್ಲೇಖಗಳು, ಶಾಸನಗಳು, ಸಂಸ್ಕೃತ ಕಾವ್ಯಗಳ ಉಲ್ಲೇಖ, ವಿದೇಶಿ ಪ್ರವಾಸಿ ಬರಹಗಾರರ ಬರಹಗಳು ಇತ್ಯಾದಿಗಳನ್ನು ಉಲ್ಲೇಖಿಸಿ, ಪ್ರಾಚೀನ ಭಾರತದ ವೈಭವಪೂರ್ಣ ಇತಿಹಾಸವನ್ನು ಕಟ್ಟಿಕೊಡುತ್ತಾರೆ. ಮಹಾಭಾರತದ ಜರಾಸಂಧನಿಂದ ಅಲೆಕ್ಸಾಂಡರ್‌ವರೆಗೆ, ಆರ್ಯರಿಂದ ಸಾಮ್ರಾಟ್‌ ಸಮುದ್ರಗುಪ್ತನವರೆಗೆ ಈ ಪುಸ್ತಕದ ಹರಹು ಚಾಚಿದೆ. ಅದರಿಂದ ಆಯ್ದ ಒಂದು ಭಾಗ ಇಲ್ಲಿದೆ.

ಇರಾನಿಯನರು ಮತ್ತು ಭಾರತೀಯ ಧಾರ್ಮಿಕ ನಂಬಿಕೆಗಳಲ್ಲಿ ಬಹಳಷ್ಟು ಹೋಲಿಕೆಗಳಿವೆ. ಆದರೆ ಈ ಎರಡು ಧರ್ಮದ ಪ್ರಾಚೀನ ಗ್ರಂಥಗಳಲ್ಲಿನ ಪದ ಬಳಕೆ ಒಂದಕ್ಕೊಂದು ವಿರುದ್ಧವಾಗಿರುವುದು ಅಚ್ಚರಿ ಹುಟ್ಟಿಸುತ್ತದೆ. ಉದಾಹರಣೆಗೆ ದೇವ ಎಂಬ ಪದ ಸಂಸ್ಕೃತದಲ್ಲಿ ಹೊಳೆಯುವ, ಆರಾಧಿಸುವ ಎನ್ನುವಂಥ ಅರ್ಥ ಹೊಂದಿದ್ದರೂ ಇರಾನಿಯನರ ಅವೆಸ್ತಾದಲ್ಲಿ ರಾಕ್ಷಸಿ ಎಂಬ ಅರ್ಥದಲ್ಲಿ ಬಳಕೆಯಾಗುತ್ತದೆ. ಹಾಗೆ ಅಸುರ ಎಂಬುದು ಭಾರತೀಯ ಬದುಕಿನಲ್ಲಿ ಕೆಟ್ಟ ಶಕ್ತಿ ಎಂಬರ್ಥದಲ್ಲಿ ಬಳಸಲ್ಪಟ್ಟರೆ ಇರಾನಿಯನ್ ಗ್ರಂಥಗಳಲ್ಲಿ ದೈವೀ ಶಕ್ತಿ ಎಂಬಂತೆ ಬಳಕೆಯಾಗಿದೆ. ಪ್ರಾಚೀನ ಋಗ್ವದದಲ್ಲಿಯೂ ಅಸುರ ಎಂಬುದಕ್ಕೆ ಅತಿಮಾನುಷ ಶಕ್ತಿ ಎಂಬರ್ಥದಲ್ಲಿ ಬಳಕೆಯಾಗಿದ್ದು ಕಂಡು ಬರುತ್ತದೆ. ಹಾಗೆಯೇ ಋಗ್ವೇದದ ಹಲವಾರು ಕಡೆಗಳಲ್ಲಿನ ಬಳಕೆಯಲ್ಲಿ ಅಸುರ ಪದ ಇಂದ್ರ, ಅಗ್ನಿ, ವಾಯು ದೇವತೆಗಳಿಗೆ ಉತ್ಕೃಷ್ಟ ಶಕ್ತಿ, ಜೀವಕಾರಕ ಶಕ್ತಿ ಎಂಬಂತೆ ಬಳಸಿದ ನಿದರ್ಶನಗಳು ಕಂಡು ಬರುತ್ತವೆ. ಹಾಗಾಗಿ ಒಂದು ಕಾಲಘಟ್ಟದಲ್ಲಿ ಇರಾನಿಯನರು ಮತ್ತು ಭಾರತೀಯರು ಸಹಬಾಳ್ವೆ ನಡೆಸಿದರೆಂದೂ ಕಾಲ ಕ್ರಮೇಣ ಇಂತಹ ಕೆಲ ಪದಗಳು ವಿರುದ್ಧಾರ್ಥಕ ಅರ್ಥ ಪಡೆದುಕೊಂಡಿರಬೇಕೆಂಬ ಅಂಶಗಳು ಸ್ಪಷ್ಟವಾಗುತ್ತದೆ. ಇರಾನಿಯನ್ ಕೃತಿಗಳ ರಚನೆಯ ಸಮಯದಲ್ಲಿ ದೇವತೆಗಳು ಮತ್ತು ಅಸುರರ ನಡುವಿನ ವೈಮನಸ್ಸು ತಾರಕಕ್ಕೇರಿದ ಕಾಲವಾದ್ದರಿಂದ ಅವರ ಗ್ರಂಥಗಳಲ್ಲಿ ವಿರುದ್ಧ ಅರ್ಥದಲ್ಲಿ ಬಳಸಲ್ಪಟ್ಟಿರಬೇಕೆಂಬ ಭಾವನೆ ಮೂಡುತ್ತದೆ.

ಭಾರತೀಯರು ಮತ್ತು ಇರಾನಿಯವರು ಇಬ್ಬರೂ ಯಜ್ಞ ಮತ್ತು ಅಗ್ನಿಯ ಆರಾಧಕರು. ಭಾರತೀಯರ ಹೋಮ, ಇರಾನಿಯನ್ ಗ್ರಂಥಗಳಲ್ಲಿ ಉಲ್ಲೇಖವಾಗಿರುವ ಸೋಮ ಅಗ್ನಿ ಆರಾಧನೆಯ ಜೊತೆ ಜೊತೆಗೆ ಅಗ್ನಿಯಲ್ಲಿ ಆಹುತಿ ಕೊಟ್ಟು ಯಜ್ಞವನ್ನು ಆಚರಿಸುವ ಪ್ರತಿಪಾದನೆ ಮಾಡುತ್ತವೆ. ಕಾಲ ಕ್ರಮೇಣ ಅವರವರ ನಂಬಿಕೆಗಳಲ್ಲಿ ವ್ಯತ್ಯಾಸಗಳು ಬಂದು, ಸಂಘರ್ಷಗಳು ಉಂಟಾಗಿ ಈ ಆಚರಣೆಗಳಲ್ಲಿ ಭಿನ್ನತೆ ಹುಟ್ಟಿರಬೇಕು. ಇಂದ್ರನ ಆರಾಧಕರಾದ ಭಾರತೀಯರು ಮೂಲ ಆರ್ಯ ಸಂಪ್ರದಾಯ ಉಳಿಸಿಕೊಂಡರೆ, ಇರಾನಿಯನರು ಮಾರ್ಪಾಡು ಮಾಡಿಕೊಂಡು ಪ್ರಾಣಿ ಬಲಿ, ಮಾಂಸದ ಆಹುತಿ ಇತ್ಯಾದಿ ಆಚರಣೆಗಳನ್ನು ನಿಲ್ಲಿಸಿರಬೇಕೆಂಬ ಅಭಿಪ್ರಾಯ ಕಂಡು ಬರುತ್ತದೆ. ಯೇಸು ಕ್ರಿಸ್ತನಿಂದ ಪ್ರಭಾವಿತರಾದ ಯಹೂದಿಗಳು ಇದೇ ರೀತಿ ಪ್ರಾಣಿಬಲಿ ನಿಲ್ಲಿಸಿದ್ದು ಕೂಡ ಎಂಬುದರತ್ತ ಇತಿಹಾಸದ ಹಲವು ದಾಖಲೆಗಳು ಬೆಳಕು ಬೀರುತ್ತದೆ.

ಭಾರತೀಯ ಇತಿಹಾಸ ಯಾವುದೇ ಐತಿಹಾಸಿಕ ಸಾಕ್ಷಿಯಿಲ್ಲದೆ, ತಾತ್ವಿಕ ನೆಲಗಟ್ಟಿಲ್ಲದ ವೈದಿಕ ಪರಂಪರೆಯ ಆಧಾರದಲ್ಲಿ ನಿಂತಿದೆ ಎಂಬ ಎಫ್.ಇ. ಪರ್ಗಿಟರ್ ಮಂಡಿಸಿದ ವಾದದ ಆಧಾರದಲ್ಲಿ ಅನೇಕ ಪಾಶ್ಚಾತ್ಯ ಇತಿಹಾಸಜ್ಞರು ಭಾರತೀಯ ಇತಿಹಾಸ ಅಧ್ಯಯನಕ್ಕೆ ತೊಡಗುತ್ತಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಭಾರತೀಯ ಸಂಸ್ಕೃತಿಯ ತಳಹದಿಯಾದ ಶ್ರುತಿ ಅನೇಕ ನಿಖರ ಐತಿಹಾಸಿಕ ನಿದರ್ಶನಗಳನ್ನು ತೆರೆದಿಡುತ್ತದೆ. ಮಹಾಭಾರತವೂ ಇತಿಹಾಸ ಪುರಾಣದ ಆಧಾರದಲ್ಲಿಯೇ ವೇದ ಪರಂಪರೆಯ ಹಿರಿಮೆಯನ್ನು ಎತ್ತಿ ಹಿಡಿಯುವುದಲ್ಲದೇ ಉತ್ಕೃಷ್ಟ ಜೀವನ ಮೌಲ್ಯಗಳನ್ನು ಜನ ಮಾನಸಕ್ಕೆ ತಲುಪಿಸುತ್ತದೆ.

harappa civilisation
ಹರಪ್ಪ ನಾಗರಿಕತೆಯ ಸಾಕ್ಷಿಗಳು

ಎಫ್. ಇ. ಪರ್ಗಿಟರ್‌ನ ಐಲಾ-ಆರ್ಯವಾದದ ಪ್ರಕಾರ ಇಂದಿನ ಅಲಹಾಬಾದ್ ಪ್ರದೇಶದಲ್ಲಿದ್ದ (ಗಂಗಾ, ಯಮುನಾ) ತಟದ ಜನರೇ ಪುರಾತನ ಭಾರತೀಯ ಐಲರು. ಇವರನ್ನೇ ಪ್ರಾಚೀನ ಭಾರತೀಯ ಇತಿಹಾಸ ಆರ್ಯರೆಂದು ಗುರುತಿಸುತ್ತದೆ. ಅಲಹಾಬಾದ್ ಪ್ರಾಂತ್ಯದಿಂದ ಕಾಲಕ್ರಮೇಣ ಈ ಜನರು ಇತರೆಡೆಗೆ ವಲಸೆ ಹೋದರು ಎನ್ನಲಾಗುತ್ತದೆ. ಆದರೆ ಪ್ರಾಚೀನ ಭಾರತೀಯ ಇತಿಹಾಸದಲ್ಲಿ ಅಫ್ಘಾನ್ ಅಥವಾ ಪೂರ್ವ ಪ್ರಾಂತ್ಯದಿಂದ ಭಾರತೀಯರ ಮೇಲೆ ಆರ್ಯರ ಆಕ್ರಮಣ ನಡೆದ ದಾಖಲೆಗಳು ಸಿಗುವುದಿಲ್ಲವಾದರೂ, ಐಲರು ಕಾಲಕ್ರಮೇಣ ವಾಯುವ್ಯ ಭಾಗದತ್ತ ವಲಸೆ ಹೋಗಿ ತಮ್ಮ ತಮ್ಮ ಸಾಮ್ರಾಜ್ಯ ಕಟ್ಟಿಕೊಂಡರು ಎಂಬ ಧೃಡೀಕರಣ ಪರ್ಗಿಟರ್ ವ್ಯಕ್ತಪಡಿಸುತ್ತಾನೆ. ಋಗ್ವೇದದಲ್ಲಿ ಮತ್ತು ಪರಿಯಾತ್ರ ಶಿಖರದ (ಅರಾವಳೀ ಬೆಟ್ಟ) ಉಲ್ಲೇಖವಿಲ್ಲವೆಂದು ಪರ್ಗಿಟರ್ ಹೇಳಿದರೂ, ಇತ್ತೀಚಿನ ವಾದಗಳ ಪ್ರಕಾರ ಆರ್ಯರು ಅರಾವಳೀ ಬೆಟ್ಟದ ಪ್ರದೇಶ ತಲುಪಿದ ದಾಖಲೆಗಳು ಕಂಡುಬರುತ್ತವೆ. ಋಗ್ವೇದದ ಬಹುಭಾಗ ಬ್ರಾಹ್ಮಣ್ಯದ ಪ್ರಭಾವದಲ್ಲಿ ರಚಿಸಲ್ಪಟ್ಟಿದ್ದು, ಆ ಸಮಯದಲ್ಲಿ ಭರತನೆಂಬ ದೊರೆಯ ಆಡಳಿತವಿತ್ತು. ಋಗ್ವೇದದ ಭಾಷೆ ಶುದ್ಧ ಆರ್ಯನ್ನರ ಭಾಷೆಯಾಗಿತ್ತು ಎಂಬ ಸರ್‌ ಜಾರ್ಜ್‌ ಗ್ರಿರೇಸನ್ ಅವರ ಅಭಿಪ್ರಾಯ ಆಧರಿಸಿ, ಆ ಭಾಷೆ ಗಂಗಾ ಯಮುನಾ ತಟದ ಅಂದಿನ ಭಾಷೆಗೆ ಹೋಲುತಿತ್ತು ಎಂಬ ತರ್ಕದತ್ತ ಆರ್ಯ-ಐಲಾ ವಾದ ಹೊರಳುತ್ತದೆ.

ಐಲರು ಮಧ್ಯ ಹಿಮಾಲಯದ ಮೂಲಕ ಉತ್ತರದ ಇಳಾವೃತ್ತದಿಂದ ಭಾರತ ಪ್ರವೇಶಿಸಿರಬೇಕೆಂಬ ವಾದ ಮೂಡಿದರೂ, ಪುರೂರವ ಎಂಬ ಐಲರ ಹೆಸರು ಋಗ್ವೇದದಲ್ಲಿ ಪ್ರಸ್ತಾಪಗೊಳ್ಳುವುದು ಬಿಟ್ಟರೆ, ಆಗ್ನೆಯ ಭಾರತದ ಪ್ರದೇಶಗಳಲ್ಲಿ ಪ್ರಾಚೀನ ಪವಿತ್ರತೆಯ ಉಲ್ಲೇಖಗಳು ಎಲ್ಲಿಯೂ ಸ್ಪಷ್ಟವಾಗುವದಿಲ್ಲ. ಆದರೆ ವೇದದಲ್ಲಿ ಕಾಣಿಸಿಕೊಳ್ಳುವ ದಾಶರಾಜ್ಞ ಯುದ್ಧದಲ್ಲಿ ಭಾಗವಹಿಸಿ ಸುದಾಸನ ಎದುರು ಸೋತು ವಿಪಾಶಾ ಮತ್ತು ಶತಧ್ರು ನದಿಯ ತೀರಗಳಿಂದ ಪಲಾಯನ ಮಾಡಿದ ಶಾಪಗ್ರಸ್ತ ರಾಜರಾದ ಯಯಾತಿಯ ಮಕ್ಕಳು ಮಧ್ಯಪ್ರಾಚ್ಯದ ಕಡೆಗೆ ಹೋಗುತ್ತಾರೆ. ಹೀಗೆ ಇರಾನಿನತ್ತ ವಲಸೆ ಹೋದ ಐಲರು ದ್ರುಹ್ಯ-druids ಸಂತತಿಯವರು ಸೂರ್ಯಾರಾಧಕರಾಗಿದ್ದು ಭೋಜ, ಭೋಜಕರೆಂದು ಕರೆಯಲ್ಪಡುತ್ತಿದ್ದರು. ಆದುದರಿಂದ ಇರಾನಿಯನ್ನರು ಭಾರತೀಯ ಮೂಲದಿಂದಲೇ ಹುಟ್ಟಿಬಂದ ಜನರೆಂಬ ಅಭಿಪ್ರಾಯಕ್ಕೆ ಬರಲಾಗುತ್ತದೆ. ಇದು ವಾಸ್ತವಕ್ಕೆ ಅತ್ಯಂತ ಸಮೀಪ ಮತ್ತು ನಿಜವೂ ಹೌದು. ಯಾಕೆಂದರೆ ಇಂದಿಗೂ ಸಹ ಡೂಯಿಡ್‌ಗಳ ಸಂಸ್ಕಾರ ಭಾರತದ್ದೇ. ಮತ್ತು ಅವರನ್ನು ಅಲ್ಲಿನ ಜನರು ಗೌರವಿಸುವುದು ಸಹ ಉತ್ತಮ ಸಂಸ್ಕಾರದ ಪುರೋಹಿತರು ಅಂತ. ಇವೆಲ್ಲವನ್ನೂ ಗಮನಿಸಿದಾಗ ಇಲ್ಲಿನ ಜನರೇ ವಿದೇಶಕ್ಕೆ ತೆರಳಿದ್ದು ನಿಜವೆನ್ನಿಸುತ್ತದೆ.

ಇದನ್ನು ನಿರಾಕರಿಸುವ ಜನ ಹೇಳುವಂತೆ ಐಲಾ ಎಂಬ ಪದ ಯಾವುದೇ ರೀತಿಯಲ್ಲಿ ಆರ್ಯ ಪದಕ್ಕೆ ಹೋಲುವುದಿಲ್ಲ. ಸಂಸ್ಕೃತದ ಇಳಾ ಪದ (ಭೂಮಿ)ಯ ಅಪಭ್ರಂಶವಿದ್ದಿರಬೇಕು. ಪರ್ಶಿಯನ್ ಭಾಷೆಯಲ್ಲಿ ಇಲಾ ಎಂಬುದು ʻಭೂಮಿಯ ಮೇಲೆ ಹುಟ್ಟಿದ” ಎಂಬ ಅರ್ಥ ಕೊಡುವ ಆಡಮ್ ಅನ್ನು ಸೂಚಿಸುತ್ತದೆ. ಋಗ್ವೇದದ ರಚನೆ ಪ್ರಯಾಗ (ಮಧ್ಯಭಾಗದಲ್ಲಿ) ಆಗಿದ್ದಿರಬಹುದಾದರೂ, ಹಿಮಾಲಯದಂತಹ ಬಲಿಷ್ಠ ಪ್ರಾಕೃತಿಕ ಅಡೆ ತಡೆ ದಾಟಿಕೊಂಡು ಉತ್ತರದ ಹಿಮಪ್ರದೇಶದಿಂದ ಆರ್ಯರು
ವಲಸೆ ಬಂದಿದ್ದ ಸಾಧ್ಯತೆ ಕಡಿಮೆ ಅನಿಸುತ್ತದೆ. ಬಹುತೇಕ ಯುರೋಪಿನ ಇತಿಹಾಸಜ್ಞರ ಪ್ರಕಾರ ಆರ್ಯನರು ವಲಸಿಗರಲ್ಲ, ಬಯಲು ಪ್ರದೇಶದಲ್ಲಿ ನೆಲೆನಿಂತು ಕೃಷಿಯಲ್ಲಿ ತೊಡಗಿಕೊಂಡ ಸಮುದಾಯ ಎಂಬ ನಿರ್ಣಯಕ್ಕೆ ತಲುಪುತ್ತಾರೆ. ಕೃಷಿಯನ್ನು ಹೊಗಳುವ ಅನೇಕ ಋಕ್ಕುಗಳು ಮತ್ತು ಸೂಕ್ತಗಳು ಋಗ್ವೇದದಲ್ಲಿ ಕಂಡು ಬರುವುದು ಇದಕ್ಕೆ ಪುಷ್ಟಿ ನೀಡುತ್ತದೆ. ಈ ಆಧಾರದಲ್ಲಿ ಎ. ಸೋಮಯಾಜಲು ಎನ್ನುವವರು ಆರ್ಯರು ದಕ್ಷಿಣ ಭಾರತದ ಫಲವತ್ತಿನ ಬಯಲಿನಲ್ಲಿ ಕೃಷಿಯಲ್ಲಿ ತೊಡಗಿಕೊಂಡ ಸಮೂಹ ಎಂಬ ತೀರ್ಮಾನಕ್ಕೆ ಬರುತ್ತಾರೆ.

ಆರ್ಯರು ಹೊರಗಿನಿಂದ ಬಂದವರೆಂಬ ಯಾವುದೇ ಸ್ಪಷ್ಟ ಸಾಕ್ಷಿ, ಉಲ್ಲೇಖಗಳು ಭಾರತೀಯ ಸ್ಮೃತಿ, ವೇದ, ಪುರಾಣಗಳಲ್ಲಿ ಸಿಗುವುದಿಲ್ಲ. ಆದುದರಿಂದ ಭಾರತೀಯ ಸಂಸ್ಕೃತಿಯ ತಳಹದಿಯಾದ ಸನಾತನ ಸಂಸ್ಕೃತಿ, ವೇದ, ಪುರಾಣಗಳ ಆಧಾರದಲ್ಲಿ ಮನುಕುಲದ ಉಗಮದ ಅಧ್ಯಯನವೂ ಅವಶ್ಯವೆನಿಸುತ್ತದೆ.

ಇದನ್ನೂ ಓದಿ: ಹೊಸ ಪುಸ್ತಕ: ಇದು ಮತ್ತೊಂದು ಕರ್ಣಕುಂಡಲಗಳ ಕಥೆ

ನದಿಗಳ ಮಾಹಿತಿಯ ಆಧಾರದ ವಿಶ್ಲೇಷಣೆ

saraswathi river
ಸರಸ್ವತಿ ನದಿ

ಋಗ್ವೇದದಲ್ಲಿ ಉಲ್ಲೇಖಿಸಲಾಗುವ ಗಂಗಾ, ಯಮುನಾ, ಸರಸ್ವತಿ ನದಿಗಳನ್ನು ಕ್ರಮವಾಗಿ ಪೂರ್ವದಿಂದ ವಾಯುವ್ಯಕ್ಕೆ ಹೆಸರಿಸಲಾಗುತ್ತದೆ. ಆರ್ಯರು ಖೈಬರ್ ಪಾಸ್ ಮೂಲಕ ಭಾರತದತ್ತ ಬಂದಿದ್ದಾದರೆ ಈ ಉಲ್ಲೇಖ ವಾಯುವ್ಯದಿಂದ ಪೂರ್ವಕ್ಕೆ ಅನುಕ್ರಮವಾಗಿರಬೇಕಿತ್ತು. ವಲಸೆ ಯಾವಾಗಲೂ ಸೂರ್ಯನ ಚಲನೆಯ ಪಥದ ಅನುಕ್ರಮವಾಗಿ ನಡೆಯುತ್ತದೆ ಎನ್ನುವ ಇನ್ನೊಂದು ವಲಸೆ ಸಿದ್ಧಾಂತದ ಪ್ರಕಾರ ನೋಡಿದರೂ ಆರ್ಯರು ಪೂರ್ವದಿಂದ ಪಶ್ಚಿಮದತ್ತ ಕಾಲಕ್ರಮೇಣ ವಲಸೆ ಹೋದರು ಎಂಬ ಅಂಶಕ್ಕೆ ಸಮರ್ಥನೆ ದೊರೆಯುತ್ತದೆ. ಋಗ್ವೇದದಲ್ಲಿನ ನದಿಗಳ ಉಲ್ಲೇಖದಲ್ಲಿ ನನ್ನ ಗಂಗೆ, ನನ್ನ ಯಮುನೆ, ನನ್ನ ಸರಸ್ವತಿ ಎಂಬ ನಮ್ಮದೆಂಬ ಕಲ್ಪನೆ, ಈ ಜನರು ಹೊರಗಿನವರಲ್ಲ ಬದಲಾಗಿ ಸ್ಥಳೀಯರೇ ಇರಬೇಕೆಂಬ ಸ್ಪಷ್ಟತೆ ಮೂಡಿಸುತ್ತದೆ. ಜೀವ ಉಗಮದ ಸ್ಥಾನವನ್ನು ಋಗ್ವೇದದಲ್ಲಿ ಭಗವಂತ ಸೃಷ್ಟಿಸಿದ ʻವುಲ್ವ’ ಎನ್ನಲಾಗುತ್ತದೆ. ಋಗ್ವೇದ ಮತ್ತು ಮನುವಿನ ಉಲ್ಲೇಖದಲ್ಲಿ ಕಾಣಿಸುವ ಸರಸ್ವತಿ ಮತ್ತು ದೃಶದ್ವತಿ ಎಂಬ ದೈವೀ ಸ್ವರೂಪಿ ನದಿಗಳ ನಡುವಿನ ಭಗವಂತ ಸೃಷ್ಟಿಸಿದ ಭೂಭಾಗದ ಕಲ್ಪನೆ ಕೂಡ ಇದನ್ನೇ ಹೋಲುತ್ತದೆ. ದೈವ ಸೃಷ್ಟಿಯ ಸ್ವರ್ಗ ಬ್ರಹ್ಮಾವರ್ತ, ಅಲ್ಲಿನ ಜೀವ ಉಗಮದ ಉಲ್ಲೇಖಗಳು ಇದನ್ನು ಸಮರ್ಥಿಸುತ್ತವೆ.

ವೇದ ಸಂಹಿತೆ ಕೂಡ ಆಧುನಿಕ ಜೀವ ವಿಕಾಸದ ಸಿದ್ಧಾಂತವನ್ನು ಬೆಂಬಲಿಸುತ್ತದೆ. ವೇದ ಸಂಹಿತೆ ಹೇಗೆ ಬ್ರಹ್ಮಾಂಡದ ರಚನೆಯಾಯಿತು ಎಂದು ಹೇಳುತ್ತದೆಯೋ ಬೈಬಲ್ ಕೂಡ ಈ ಸೃಷ್ಟಿ ಪ್ರಕ್ರಿಯೆಯಲ್ಲಿ ಮೊತ್ತ ಮೊದಲ ಉಗಮವಾಗಿದ್ದು ಮೂಲಿಕೆ ಮತ್ತು ಹುಲ್ಲು ಎಂದು ತಿಳಿಸುತ್ತದೆ. ಅನಂತರ ಇನ್ನಿತರ ಸಸ್ಯ ಸಂಕುಲಗಳು, ಪಶು ಪಕ್ಷಿಗಳ ಉಗಮವಾಗಿ ತದನಂತರ ಮನುಷ್ಯರ ಜೀವ ವಿಕಾಸವಾಗಿರಬೇಕೆಂಬ ಅಂಶ ಇಲ್ಲಿ ವ್ಯಕ್ತವಾಗಿದೆ. ವೇದ ಸಂಹಿತೆಯ ಜೀವ ವಿಕಾಸ ಉಲ್ಲೇಖದಲ್ಲಿ ಮೊತ್ತ ಮೊದಲ ಜೀವಿಗಳ ಉಗಮ ಸರಸ್ವತಿ ನದಿ ತಟದ ಎತ್ತರದ ಭೂಭಾಗದಲ್ಲಾಯಿತು ಎಂಬ ಅಂಶ ಕಾಣಿಸುತ್ತದೆ. ಕಳೆದ ಶತಮಾನದ ದೊಡ್ಡ ವಿದ್ವಾಂಸ ಸ್ವಾಮಿ ದಯಾನಂದರು ಈ ಎತ್ತರದ ಭೂಭಾಗ ಇಂದಿನ ಟಿಬೆಟ್ (ತ್ರಿವಿಷ್ಟಪಮ್) ಇರಬೇಕೆಂದು ಮತ್ತು ಇದೇ ಆರ್ಯರ ಮೂಲವಾಗಿರಬೇಕೆಂದು ಅಭಿಪ್ರಾಯ ಪಟ್ಟರೆ, ಇನ್ನು ಕೆಲ ಐರೋಪ್ಯ ವಿದ್ವಾಂಸರು ಎತ್ತರದ ಹಿಮಾಲಯ ಪರ್ವತಗಳೇ ಈ ಎತ್ತರದ ಭೂಭಾಗವಾಗಿರಬೇಕೆಂದು ಅಭಿಪ್ರಾಯ ಪಡುತ್ತಾರೆ. ಇದರಿಂದ ಸಸ್ಯ ಸಂಕುಲ ಮತ್ತು ಪಶು ಪಕ್ಷಿಗಳಾದಿಯಾಗಿ ಮೊತ್ತ ಮೊದಲ ಜೀವ ಉಗಮದ ಸರಸ್ವತಿ ನದಿ ತಟದ ಎತ್ತರದ ಟೆಬೆಟ್ ಮತ್ತು ಪಾಮಿರ್ ಪ್ರಾಂತ್ಯವಿರಬೇಕೆಂದು ಕಂಡು ಬರುತ್ತದೆ.

ಪುಸ್ತಕ: ಮಾಗಧೇಯ

ಲೇಖಕ: ಸದ್ಯೋಜಾತ ಭಟ್ಟ

ಪುಟ ೩೧೦, ಬೆಲೆ ೩೦೦ ರೂ.

ಪ್ರಕಾಶನ: ಸಮನ್ವಿತ, ಬೆಂಗಳೂರು

ಇದನ್ನೂ ಓದಿ: ಹೊಸ ಪುಸ್ತಕ: ಮನುಷ್ಯನನ್ನು ಓಡಿಸಿದ ಬಳಿಕ…

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Youngest Artist: ಅಂಬೆಗಾಲಿಡುವ ಬಾಲಕ ಈಗ ವಿಶ್ವದ ಅತಿ ಕಿರಿಯ ಚಿತ್ರ ಕಲಾವಿದ!

ಸುಮಾರು ಆರು ತಿಂಗಳ ಮಗುವಿದ್ದಾಗಲೇ ಚಿತ್ರ ರಚಿಸಲು ಪ್ರಾರಂಭಿಸಿದ ವಿಶ್ವದ ಕಿರಿಯ ಚಿತ್ರಕಲಾವಿದ (Youngest Artist) ಘಾನಾದ ಆಂಕ್ರಾ ಹಲವಾರು ವರ್ಣಚಿತ್ರಗಳನ್ನು ರಚಿಸಿರುವುದು ಮಾತ್ರವಲ್ಲ ಅವುಗಳಲ್ಲಿ ಒಂಬತ್ತು ಚಿತ್ರಗಳನ್ನು ಪ್ರದರ್ಶನದಲ್ಲಿ ಮಾರಾಟ ಮಾಡಿದ್ದಾನೆ! ಈ ಅತಿ ಕಿರಿಯ ಕಲಾವಿದನ ಕುರಿತು ವ್ಯಾಪಕ ಕುತೂಹಲ ಉಂಟಾಗಿದೆ.

VISTARANEWS.COM


on

By

Youngest Artist
Koo

ಅಂಬೆಗಾಲಿಡುವ (Toddler) ಮಗು ವರ್ಣಚಿತ್ರಗಳನ್ನು (Youngest Artist) ರಚಿಸಿ ಗಿನ್ನೆಸ್ ವಿಶ್ವ ದಾಖಲೆ (Guinness World Records) ಬರೆದಿದೆ. ವಿಶ್ವದ ಅತ್ಯಂತ ಕಿರಿಯ ಚಿತ್ರ ಕಲಾವಿದ ಎನ್ನುವ ಖ್ಯಾತಿಗೆ ಈ ಮಗು ಪಾತ್ರವಾಗಿದೆ. ಘಾನಾದ (Ghana) 1 ವರ್ಷ 152 ದಿನಗಳ ಏಸ್-ಲಿಯಾಮ್ ನಾನಾ ಸ್ಯಾಮ್ ಆಂಕ್ರಾ (Ace-Liam Nana Sam Ankrah) ತಾನೇ ರಚಿಸಿದ 9 ವರ್ಣಚಿತ್ರಗಳನ್ನು ಮಾರಾಟ ಮಾಡಿ ಈ ದಾಖಲೆ ನಿರ್ಮಿಸಿದೆ.

ಏಸ್- ಲಿಯಾಮ್ ನಾನಾ ಸ್ಯಾಮ್ ಆಂಕ್ರಾ ವಿಶ್ವದ ಅತ್ಯಂತ ಕಿರಿಯ ಪುರುಷ ಚಿತ್ರ ಕಲಾವಿದನಾಗಿ ಪ್ರತಿಷ್ಠಿತ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (GWR) ನಲ್ಲಿ ತನ್ನ ಹೆಸರನ್ನು ಬರೆದಿದ್ದಾನೆ.

ಸುಮಾರು ಆರು ತಿಂಗಳ ಮಗುವಿದ್ದಾಗಲೇ ಚಿತ್ರ ರಚಿಸಲು ಪ್ರಾರಂಭಿಸಿದ ಆಂಕ್ರಾ ಹಲವಾರು ವರ್ಣಚಿತ್ರಗಳನ್ನು ರಚಿಸಿರುವುದು ಮಾತ್ರವಲ್ಲ ಅವುಗಳಲ್ಲಿ ಒಂಬತ್ತು ವರ್ಣಚಿತ್ರಗಳನ್ನು ಪ್ರದರ್ಶನದಲ್ಲಿ ಮಾರಾಟ ಮಾಡಿದ. ಆಂಕ್ರಾನ ಈ ಸಾಧನೆ ಹಲವಾರು ಮಂದಿಯ ಗಮನ ಸೆಳೆದಿದ್ದ್ದು, ಜಾಗತಿಕ ಮೆಚ್ಚುಗೆಯನ್ನು ಗಳಿಸಿತ್ತು. ಇದೀಗ ವಿಶ್ವ ದಾಖಲೆ ಪಟ್ಟಿಯಲ್ಲಿ ಆಂಕ್ರಾ ಹೆಸರು ಸೇರ್ಪಡೆಗೆ ಸಾಕಷ್ಟು ಮಂದಿ ಅಚ್ಚರಿಯನ್ನೂ ವ್ಯಕ್ತಪಡಿಸಿದ್ದಾರೆ.


ಯಾವಾಗ ಚಿತ್ರಕಲೆ ಪ್ರಾರಂಭಿಸಿದ್ದು?

ಈಗಷ್ಟೇ ಅಂಬೆಗಾಲಿಡುತ್ತಿರುವ ಆಂಕ್ರಾ ಕೇವಲ ಆರು ತಿಂಗಳಲ್ಲೇ ಚಿತ್ರಕಲೆಯನ್ನು ಪ್ರಾರಂಭಿಸಿದನು ಎನ್ನುತ್ತಾರೆ ಆತನ ತಾಯಿ. ಚಿತ್ರಕಲೆಯ ಮೇಲಿನ ಆತನ ಉತ್ಸಾಹವು ಚಿಕ್ಕ ವಯಸ್ಸಿನಿಂದಲೂ ಸ್ಪಷ್ಟವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಆತ ಕಲಿಯಲು ಪ್ರಾರಂಭ ಮಾಡಿದಾಗಲೇ ಕ್ಯಾನ್ವಾಸ್‌ನ ತುಂಡನ್ನು ನೆಲದ ಮೇಲೆ ಹರಡಿ ಅದರ ಮೇಲೆ ಸ್ವಲ್ಪ ಬಣ್ಣವನ್ನು ಬೀಳಿಸಿದೆ. ಕ್ಯಾನ್ವಾಸ್‌ನಾದ್ಯಂತ ಆತ ಬಣ್ಣವನ್ನು ಹರಡಿ ಕೊನೆಗೊಳಿಸಿದ. ಇದು ಆತನ ಮೊದಲ ವರ್ಣಚಿತ್ರ ‘ದಿ ಕ್ರಾಲ್’ ಎಂದು ಅವರು ವಿವರಿಸಿದರು.


ಅಂಬೆಗಾಲಿಡುವ ಘಾನಾದ ಆಂಕ್ರಾ ಈಗ ಸೆಲೆಬ್ರಿಟಿಯಾಗಿದ್ದಾನೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಿಂದ ಮಾತ್ರವಲ್ಲದೆ ಘಾನಾ ಗಣರಾಜ್ಯದ ಪ್ರಥಮ ಮಹಿಳೆಯ ಗಮನವನ್ನೂ ಆತ ಸೆಳೆದಿದ್ದಾನೆ.

ಮೊದಲ ಪ್ರದರ್ಶನ

ಏಸ್- ಲಿಯಾಮ್ ಆಂಕ್ರಾ ಇತ್ತೀಚೆಗೆ ತನ್ನ ಚಿತ್ರಗಳನ್ನು ಮೊದಲ ಬಾರಿಗೆ ಸಾರ್ವಜನಿಕ ಪ್ರದರ್ಶನ ನಡೆಸಿದ. ಇದರಲ್ಲಿ ಆತನ ಹತ್ತು ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು. ಅವುಗಳಲ್ಲಿ ಒಂಬತ್ತು ಮಾರಾಟವಾಗಿವೆ. ಏಸ್- ಲಿಯಾಮ್‌ನ ಕಲೆಯು ನಿರ್ದಿಷ್ಟ ಸಂದೇಶಗಳನ್ನು ರವಾನಿಸುವುದಕ್ಕಿಂತ ಹೆಚ್ಚಾಗಿ ಅಭಿವ್ಯಕ್ತಿ ಮತ್ತು ಅನ್ವೇಷಣೆಯ ಬಗ್ಗೆ ಹೆಚ್ಚಾಗಿದೆ ಎಂದು ಆತನ ತಾಯಿ ಹೇಳಿದ್ದಾರೆ.

ಅವನ ಅಮೂರ್ತ ವರ್ಣಚಿತ್ರಗಳು ಸುತ್ತಲಿನ ಪ್ರಪಂಚದಿಂದ ಪ್ರೇರಿತವಾಗಿವೆ. ಬಣ್ಣ, ಆಕಾರ, ಟೆಕಶ್ಚರ್ ಮತ್ತು ಅವನ ಮನಸ್ಥಿತಿಯನ್ನು ಇದು ಅವಲಂಬಿಸಿದೆ. ಪ್ರತಿ ಚಿತ್ರಕಲೆಯು ಹೊಸ ವಿಷಯಗಳನ್ನು ಕಂಡುಹಿಡಿಯುವಲ್ಲಿ ಆತನ ಕುತೂಹಲ ಮತ್ತು ಸಂತೋಷದ ಅಭಿವ್ಯಕ್ತಿಯಾಗಿದೆ ಎಂದಿದ್ದಾರೆ ಅವರು.


ಭವಿಷ್ಯದ ಯೋಜನೆಗಳು

ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪ್ರಕಾರ, ವಿಶ್ವದ ಅತ್ಯಂತ ಕಿರಿಯ ಕಲಾವಿದ ಲಿಯಾಮ್ ಅವರ ದಾಖಲೆಯನ್ನು ಅನುಮೋದಿಸಿದ ಬಳಿಕ ಆತನ ಕುಟುಂಬವು ಆತನ ಕಲಾತ್ಮಕ ಪ್ರತಿಭೆಗೆ ಗುಣಮಟ್ಟದ ಶಿಕ್ಷಣದ ಮೂಲಕ ಪೋಷಿಸಲು ಅವಕಾಶಗಳನ್ನು ಹುಡುಕುತ್ತಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿ ವೇತನದ ಅವಕಾಶಗಳು ಅವರಿಗೆ ದೊರೆಯುತ್ತದೆ ಮತ್ತು ಆತನ ಕಲಾಕೃತಿಗಳನ್ನು ಮಾರಾಟ ಮಾಡಲು ಬಯಸುತ್ತಿದೆ ಎಂದು ಹೇಳಿದೆ.

ಇದನ್ನೂ ಓದಿ: Guinness World Records: ಬರೋಬ್ಬರಿ 168 ಅಕ್ಷರಗಳನ್ನೊಳಗೊಂಡ ಈ ನಗರದ ಹೆಸರಿನಲ್ಲಿದೆ ವಿಶ್ವ ದಾಖಲೆ

ಏಸ್-ಲಿಯಾಮ್ ತಾಯಿಯ ಸಲಹೆ ಏನು?

ತಮ್ಮ ಆಸಕ್ತಿಗಳನ್ನು ಕಂಡುಕೊಳ್ಳಲು ಮಕ್ಕಳನ್ನು ಪ್ರೋತ್ಸಾಹಿಸಲು ಪೋಷಕರಿಗೆ ಸಲಹೆ ನೀಡಿದ ಅವರು, ಪ್ರತಿ ಮಗು ಅನನ್ಯವಾಗಿದೆ ಮತ್ತು ಅವರ ಭಾವೋದ್ರೇಕಗಳನ್ನು ಪೋಷಿಸುವುದು ಅದ್ಭುತ ಆವಿಷ್ಕಾರಗಳು ಮತ್ತು ಸಾಧನೆಗಳಿಗೆ ಕಾರಣವಾಗಬಹುದು. ಅದನ್ನು ಪ್ರಯತ್ನಿಸುವ ಮೊದಲು ಅದನ್ನು ಮತ್ತೆ ಮತ್ತೆ ಓದಿ ಮತ್ತು ನೆನಪಿಡಿ. ಪ್ರಯಾಣ ಮತ್ತು ಅದು ತರುವ ಸಂತೋಷವು ತುಂಬಾ ತೃಪ್ತಿಕರವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Continue Reading

ಕರ್ನಾಟಕ

Bengaluru News: ಬೆಂಗಳೂರಿನಲ್ಲಿ ಮೇ 26ರಂದು ʼಭಾರತದ ಧೀರ ಚೇತನಗಳುʼ ಕೃತಿ ಲೋಕಾರ್ಪಣೆ

Bengaluru News: ಡಾ. ವಿಕ್ರಮ್‌ ಸಂಪತ್‌ ಅವರ ʼಭಾರತದ ಧೀರ ಚೇತನಗಳುʼ (ಭಾರತೀಯ ಇತಿಹಾಸದ ವೀರರರ ಬಗೆಗೆ ನುಡಿಚಿತ್ರಗಳು) ಎಂಬ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ಇದೇ ಮೇ 26 ರಂದು ಭಾನುವಾರ ಬೆಳಿಗ್ಗೆ 10.30 ಕ್ಕೆ ಬೆಂಗಳೂರಿನ ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ ನಲ್ಲಿ ನಡೆಯಲಿದೆ. ಸಾಹಿತಿ ಎಸ್‌.ಎಲ್‌.ಭೈರಪ್ಪ ಕೃತಿ ಬಿಡುಗಡೆ ಮಾಡಲಿದ್ದಾರೆ.

VISTARANEWS.COM


on

Bharathada dheera chethanagalu kruthi lokarpane in Bengaluru on May 26
Koo

ಬೆಂಗಳೂರು: ಡಾ. ವಿಕ್ರಮ್‌ ಸಂಪತ್‌ ಅವರ ʼಭಾರತದ ಧೀರ ಚೇತನಗಳುʼ (ಭಾರತೀಯ ಇತಿಹಾಸದ ವೀರರರ ಬಗೆಗೆ ನುಡಿಚಿತ್ರಗಳು) ಎಂಬ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ಇದೇ ಮೇ 26ರಂದು ಭಾನುವಾರ ಬೆಳಗ್ಗೆ 10.30ಕ್ಕೆ ನಗರದ (Bengaluru News) ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ನಲ್ಲಿ ಜರುಗಲಿದೆ.

ಇದನ್ನೂ ಓದಿ: COMEDK UGET Result 2024: ಕಾಮೆಡ್‌ ಕೆ ಫಲಿತಾಂಶ ಪ್ರಕಟ; ಬೆಂಗಳೂರಿನ ಬಾಲಸತ್ಯ ಸರವಣನ್ ಫಸ್ಟ್‌ ರ‍್ಯಾಂಕ್‌

ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎಸ್‌.ಎಲ್‌. ಭೈರಪ್ಪ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇದೇ ವೇಳೆ ಎಸ್‌.ಎಲ್‌. ಭೈರಪ್ಪನವರ ಇಂಗ್ಲೀಷ್‌ ಅನುವಾದಿತ 3 ಕಾದಂಬರಿಗಳನ್ನು ಡಾ. ವಿಕ್ರಮ್‌ ಸಂಪತ್‌ ಅವರು ಲೋಕಾರ್ಪಣೆ ಮಾಡಲಿದ್ದಾರೆ.

ಇದನ್ನೂ ಓದಿ: Rotary June Run: ರೋಟರಿಯಿಂದ ಬೆಂಗಳೂರಿನಲ್ಲಿ ಜೂನ್​ 9ರಂದು ಮ್ಯಾರಥಾನ್​; ವಿಸ್ತಾರ ನ್ಯೂಸ್‌ ಸಹಯೋಗ

ಕಾರ್ಯಕ್ರಮದಲ್ಲಿ ಡಾ. ವಿಕ್ರಮ್‌ ಸಂಪತ್‌ ಅವರೊಂದಿಗೆ ಅರ್ಧಗಂಟೆಯ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅನುವಾದಕರಾದ ಎಲ್‌.ವಿ. ಶಾಂತಕುಮಾರಿ, ಪ್ರೊ. ಜಿ.ಎಲ್‌. ಶೇಖರ್‌ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಎಂ.ಎ. ಸುಬ್ರಮಣ್ಯ ಮತ್ತು ಎಂ.ಎಸ್‌. ಋತ್ವಿಕ್‌ ತಿಳಿಸಿದ್ದಾರೆ.

Continue Reading

ಕರ್ನಾಟಕ

ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಇವು ಗುರು ಸಕಲಮಾ ಬದುಕಿನ ಅಧ್ಯಾಯಗಳು!

ಉತ್ತರದ ಹಿಮಾಲಯ ಭಾರತೀ ಗುರು ಪರಂಪರೆ ಹಾಗೂ ದಕ್ಷಿಣದ ವಿದ್ಯಾರಣ್ಯ ಗುರು ಪರಂಪರೆಗಳೆರಡರಲ್ಲೂ ಪಾರಮ್ಯ ಸಾಧಿಸಿ ಇದೀಗ ಸಕಲಮಾ ಆಗಿ, ಸಾವಿರಾರು ಮಂದಿಗೆ ಶ್ರೀವಿದ್ಯಾ ಸಾಧನೆಯ ಅರಿವು ಹೆಚ್ಚಿಸುತ್ತಿರುವ ಗುರು ಸಕಲಮಾ ಅವರ ಆತ್ಮಕಥನ ಸದ್ಯದಲ್ಲೇ ಹೊರಬರಲಿದೆ.

VISTARANEWS.COM


on

ಗುರು ಸಕಲಮಾ guru sakalamaa
Koo

ಹಿಮಾಲಯದ ಮಹಾನ್‌ ಯೋಗಿ ಸ್ವಾಮಿ ರಾಮ (Himalayan Yogi Swami Rama) ಹಾಗೂ ಬಹುಶ್ರುತ ವಿದ್ವಾಂಸ, ಶ್ರೀವಿದ್ಯಾ ಗುರು, ಪದ್ಮಶ್ರೀ ಪುರಸ್ಕೃತ ಡಾ. ರಾ. ಸತ್ಯನಾರಾಯಣ (R Satyanarayana) ಅವರುಗಳ ನೇರ ಶಿಷ್ಯೆ, ಶ್ರೀವಿದ್ಯಾ (Shrividya) ಸಾಧಕಿ ಸಕಲಮಾ ಅವರ ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಆತ್ಮಕಥನ ಪುಸ್ತಕ ರೂಪದಲ್ಲಿ ಕನ್ನಡ ಹಾಗೂ ಇಂಗ್ಲೀಷ್‌ ಭಾಷೆಯಲ್ಲಿ (Messages from Himalayan Sages- Timely and Timeless) ಸದ್ಯದಲ್ಲೇ ಹೊರಬರಲಿದೆ. ಈ ಹಿನ್ನೆಲೆಯಲ್ಲಿ, ಕೃತಿಯ ಮುಖಪುಟ ಅನಾವರಣ (cover page launch) ಇದೇ ಮೇ 26ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ನಡೆಯಲಿದೆ. ಸಂಸದ ತೇಜಸ್ವಿ ಸೂರ್ಯ (Tejaswi Surya), ಸಾಹಿತಿ, ಪತ್ರಕರ್ತ ಜೋಗಿ (Jogi), ಕಾಂತಾರ (Kantara) ಸಿನಿಮಾ ಖ್ಯಾತಿಯ ನಟಿ ಸಪ್ತಮಿ ಗೌಡ (Saptami Gowda) ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಗುರು ಸಕಲಮಾ ತಮ್ಮ ಪೂರ್ವಾಶ್ರಮದಲ್ಲಿ ಜ್ಯೋತಿ ಪಟ್ಟಾಭಿರಾಂ ಹೆಸರಿನಿಂದಲೇ ನೃತ್ಯವಲಯದಲ್ಲಿ, ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಹೆಸರು ಮಾಡಿದವರು. ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಪ್ರೊಫೆಸರ್‌ ಆಗಿ ಸಾವಿರಾರು ಮಕ್ಕಳಿಗೆ ಇಂಗ್ಲೀಷ್‌ ಬೋಧನೆ ಮಾಡಿದವರು. ಇದರ ಜೊತೆಜೊತೆಗೇ, ತಾನು ಬಾಲ್ಯದಿಂದ ಕಲಿತ ಭರತನಾಟ್ಯವನ್ನೂ ಪೋಷಿಸಿ, ತನ್ನದೇ ಆದ ನೃತ್ಯ ಸಂಸ್ಥೆಯನ್ನು ಕಟ್ಟಿ ನೀರೆರೆದು, ಹಲವಾರು ನೃತ್ಯಪ್ರತಿಭೆಗಳನ್ನು ಬೆಳೆಸಿದವರು. ನೃತ್ಯಕ್ಷೇತ್ರದ ಇವರ ಸಾಧನೆಗೆ ಕರ್ನಾಟಕ ಸರ್ಕಾರ ಕೊಡುವ ಉನ್ನತ ನಾಗರಿಕ ಪ್ರಶಸ್ತಿಯಾದ ರಾಜ್ಯೋತ್ಸವ ಪ್ರಶಸ್ತಿ ಇವರನ್ನು ಹುಡುಕಿಕೊಂಡು ಬಂದಿರುವುದು ಇವರ ಸಾಧನೆಯ ಹಾದಿಯ ಮೈಲುಗಲ್ಲುಗಳಲ್ಲಿ ಒಂದು. ಇವಿಷ್ಟೇ ಅಲ್ಲದೆ, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ, ಯೋಗ- ನಾಟ್ಯ ಸರಸ್ವತಿ, ಆಸ್ಟ್ರೇಲಿಯಾ ಕನ್ನಡ ಸಂಘ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರ ಸನ್ಮಾನಗಳು ಇವರಿಗೆ ಸಂದಿವೆ. ನೂರಾರು ಪ್ರದರ್ಶನಗಳನ್ನೂ ನೀಡಿ ಅಪಾರ ನೃತ್ಯಾಭಿಮಾನಿಗಳನ್ನೂ ಹೊಂದಿದ್ದಾರೆ.

ಇವೆಲ್ಲ ಸಾಧನೆಯ ಜೊತೆಜೊತೆಗೇ, ಜ್ಯೋತಿ ಪಟ್ಟಾಭಿರಾಂ ಅವರು ಇನ್ನೊಂದು ಕ್ಷೇತ್ರದಲ್ಲೂ ಸಮನಾಗಿ ಹೆಜ್ಜೆಯೂರಿ ಬೆಳೆದಿದ್ದೇ ಒಂದು ವಿಸ್ಮಯದ ಗಾಥೆ. ಅದು ಅಧ್ಯಾತ್ಮ. 1992ರವರೆಗೆ ಜ್ಯೋತಿ ಪಟ್ಟಾಭಿರಾಂ ಅವರು ತಮ್ಮ ಬದುಕಿನ ಹಾದಿ ಈ ದಿಕ್ಕಿನಲ್ಲಿ ಹೊರಳೀತು ಎಂಬ ಕಲ್ಪನೆಯನ್ನೂ ಹೊಂದಿರಲಿಲ್ಲ. ಯೋಗಾಚಾರ್ಯ ಪಟ್ಟಾಭಿರಾಂ ಅವರ ಜೀವನ ಸಂಗಾತಿಯಾಗಿ, ತನ್ನ ಕಾಲೇಜು, ನೃತ್ಯ ತರಗತಿಗಳು, ನೃತ್ಯ ಪ್ರದರ್ಶನಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಅವರಿಗೆ ಹಿಮಾಲಯನ್‌ ಯೋಗಿ ಸ್ವಾಮಿ ರಾಮ ಅವರ ಭೇಟಿಯಾದದ್ದೇ ಒಂದು ಆಸಕ್ತಿದಾಯಕ ಕತೆ. ಅಲ್ಲಿಂದ ನಂತರ ಬದುಕು ಬೇರೆಯದೇ ದಿಕ್ಕಿನತ್ತ ಮುಖ ಮಾಡಿದರೂ, ಅಧ್ಯಾತ್ಮವನ್ನೂ, ನೃತ್ಯವನ್ನೂ, ತನ್ನ ಉದ್ಯೋಗವನ್ನೂ ಸಮದೂಗಿಸಿಕೊಂಡು ಕೆಲಸ ಮಾಡಿದರು. ತಮ್ಮ ಗುರು ಸ್ವಾಮಿ ರಾಮ ಅವರಿಂದ ಶ್ರೀವಿದ್ಯೆಯಲ್ಲಿ ಅತ್ಯಂತ ಶ್ರೇಷ್ಠವಾದ ಶಾಂಭವ ದೀಕ್ಷೆಯನ್ನು ಪಡೆದ ಇವರು, ಗುರುವಿನ ದೇಹತ್ಯಾಗದ ನಂತರವೂ ಅವರಿಂದ ಮಾರ್ಗದರ್ಶನಗಳನ್ನು ಪಡೆಯುತ್ತಾ ಬಂದವರು. ಅವರ ಈ ಅಧ್ಯಾತ್ಮದ ಹಾದಿಗೆ ಇನ್ನಷ್ಟು ಬಲ ಬಂದಿದ್ದು ಸ್ವಾಮಿ ರಾಮ ಅವರ ಮಾರ್ಗದರ್ಶನದ ಮೇರೆಗೆ ಮೈಸೂರಿನ ಖ್ಯಾತ ವಿದ್ವಾಂಸ, ಪದ್ಮಶ್ರೀ ಪುರಸ್ಕೃತ ರಾ ಸತ್ಯನಾರಾಯಣ ಅವರ ಬಳಿ ದಕ್ಷಿಣದ ವಿದ್ಯಾರಣ್ಯ ಪರಂಪರೆಯಲ್ಲಿ ಶ್ರೀವಿದ್ಯೆಯ ಹೆಚ್ಚಿನ ಕಲಿಕೆಗೆ ತೆರಳಿದ ಮೇಲೆ.

ಹೀಗಾಗಿ ಉತ್ತರದ ಹಿಮಾಲಯನ್‌ ಭಾರತೀ ಪರಂಪರೆ ಹಾಗೂ ದಕ್ಷಿಣದ ವಿದ್ಯಾರಣ್ಯ ಪರಂಪರೆಗಳೆರಡರಲ್ಲೂ ಪಾರಮ್ಯ ಸಾಧಿಸಿ ಇದೀಗ ಸಕಲಮಾ ಆಗಿ, ಈಗ ಸಾವಿರಾರು ಮಂದಿಗೆ ಶ್ರೀವಿದ್ಯಾ ಸಾಧನೆಯ ಅರಿವು ಹೆಚ್ಚಿಸುವಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದಾರೆ. ಅವರ ಈ ಬದುಕಿನ ಪುಟಗಳಲ್ಲಿ ನೂರಾರು ರೋಮಾಂಚನಗೊಳಿಸುವ ಅಧ್ಯಾತ್ಮದ ಅನುಭವಗಳಿವೆ. ಸುಮಾರು 30 ವರ್ಷಗಳ ಸುದೀರ್ಘ ಅಧ್ಯಾತ್ಮ ಸಾಧನೆಯ ವಿವಿಧ ಮಜಲುಗಳೆಲ್ಲವೂ, ಮೈನವಿರೇಳಿಸುವಂತ ಹಲವಾರು ಅನುಭವಗಳ ಜೊತೆಗೆ ಪುಸ್ತಕದ ಮೂಲಕ ಅಧ್ಯಾತ್ಮ ಆಸಕ್ತರನ್ನೂ ಸಾಧಕರನ್ನೂ, ಜನಸಾಮಾನ್ಯರನ್ನೂ ತಲುಪಲಿದ್ದು, ಋಷಿ ಪರಂಪರೆಯ ಬಗೆಗಿನ ಸಾಮಾನ್ಯರ ಅರಿವಿನ ವಿಸ್ತಾರಕ್ಕೆ ಹೊಸ ಭಾಷ್ಯ ಬರೆಯಲಿದ್ದಾರೆ.

ಕೃತಿ ಮುಖಪುಟ ಅನಾವರಣ, ಸ್ಥಳ: ಸುಚಿತ್ರಾ ಫಿಲಂ ಸೊಸೈಟಿ
ದಿನಾಂಕ: ಮೇ 26, ಭಾನುವಾರ
ಸಮಯ: ಬೆಳಗ್ಗೆ 10.30
ಸಾನಿಧ್ಯ: ಗುರು ಸಕಲಮಾ
ಅತಿಥಿಗಳು: ಸಾಹಿತಿ ಜೋಗಿ, ಸಂಸದ ತೇಜಸ್ವಿ ಸೂರ್ಯ, ನಟಿ ಸಪ್ತಮಿ ಗೌಡ

ಇದನ್ನೂ ಓದಿ: Daredevil Mustafa: ಪುಸ್ತಕ ರೂಪ ಪಡೆದ ʻಡೇರ್ ಡೆವಿಲ್‌ ಮುಸ್ತಾಫಾʼ ಸಿನಿಮಾ!

Continue Reading

ಬೆಂಗಳೂರು

Bengaluru News: ಬೆಂಗಳೂರಿನಲ್ಲಿ ಮೇ 19ರಂದು ವೀರಲೋಕ ಪ್ರಕಾಶನದ 7 ಕೃತಿಗಳ ಲೋಕಾರ್ಪಣೆ

Bengaluru News: ವೀರಲೋಕ ಪ್ರಕಾಶನದ 7 ಕೃತಿಗಳ ಲೋಕಾರ್ಪಣೆ ಸಮಾರಂಭವು ಇದೇ ಮೇ 19 ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತು ಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪನ್ಯಾಸಕ, ಕೃಷಿ ವಿಜ್ಞಾನಿ ಡಾ.ಕೆ.ಎನ್‌. ಗಣೇಶಯ್ಯ, ಕಥೆಗಾರ, ಕಾದಂಬರಿಕಾರ ಜೋಗಿ, ಉಪನ್ಯಾಸಕಿ, ಲೇಖಕಿ ಸಂಧ್ಯಾರಾಣಿ, ಉಪನ್ಯಾಸಕ, ಕಥೆಗಾರ ಶಿವಕುಮಾರ ಮಾವಲಿ ಅವರು ಪಾಲ್ಗೊಳ್ಳಲಿದ್ದಾರೆ.

VISTARANEWS.COM


on

7 books release programme on May 19 in Bengaluru
Koo

ಬೆಂಗಳೂರು: ವೀರಲೋಕ ಪ್ರಕಾಶನದ 7 ಕೃತಿಗಳ ಲೋಕಾರ್ಪಣೆ ಸಮಾರಂಭವು ಇದೇ ಮೇ 19ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ (Bengaluru News) ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತು ಮಂದಿರದಲ್ಲಿ ನಡೆಯಲಿದೆ.

ಇದನ್ನೂ ಓದಿ: SubAir facility: ಸಬ್‌ ಏರ್‌ ಸಿಸ್ಟಮ್‌ ಹೇಗೆ ಕಾರ್ಯನಿರ್ವಹಿಸುತ್ತದೆ?; ಮಳೆ ನಿಂತು ಎಷ್ಟು ಗಂಟೆಯಲ್ಲಿ ಪಂದ್ಯ ಆರಂಭ?

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪನ್ಯಾಸಕ, ಕೃಷಿ ವಿಜ್ಞಾನಿ ಡಾ. ಕೆ.ಎನ್‌. ಗಣೇಶಯ್ಯ, ಕಥೆಗಾರ, ಕಾದಂಬರಿಕಾರ ಜೋಗಿ, ಉಪನ್ಯಾಸಕಿ, ಲೇಖಕಿ ಸಂಧ್ಯಾರಾಣಿ, ಉಪನ್ಯಾಸಕ, ಕಥೆಗಾರ ಶಿವಕುಮಾರ ಮಾವಲಿ ಅವರು ಪಾಲ್ಗೊಳ್ಳಲಿದ್ದಾರೆ.

ವೀರಕಪುತ್ರ ಆಶಯನುಡಿಗಳನ್ನಾಡಲಿದ್ದಾರೆ. ಶೋಭಾ ರಾವ್‌ ಮತ್ತು ಅನಂತ ಕುಣಿಗಲ್‌ ಪುಸ್ತಕ ಪರಿಚಯ ಮಾಡಿಕೊಡಲಿದ್ದಾರೆ.

ಇದನ್ನೂ ಓದಿ: Karnataka Weather : ತುಮಕೂರಲ್ಲಿ ಸಿಡಿಲಿಗೆ ಜಾನುವಾರು ಬಲಿ; ಚಿಕ್ಕಮಗಳೂರಲ್ಲಿ ಮಳೆ ಅವಾಂತರಕ್ಕೆ ಜನ ತತ್ತರ

ಲೋಕಾರ್ಪಣೆಗೊಳ್ಳಲಿರುವ ಕೃತಿಗಳು ಹಾಗೂ ಕೃತಿಕಾರರ ವಿವರ

ಡಾ. ಲಕ್ಷ್ಮಣಕೌಂಟೆ ಅವರ ಮಹಾವಿನಾಶ (ಕಾದಂಬರಿ), ಕೌಂಡಿನ್ಯ ಅವರ ಬೆಳವಡಿ ಮಲ್ಲಮ್ಮ (ಕಾದಂಬರಿ), ರಾಘವೇಂದ್ರ ಪ್ರಭು ಎಂ. ಅವರ ಬಹುತ್ವ ಭಾರತ ಕಟ್ಟಿದವರು (ಬದುಕು ಬರಹಗಳು), ವಿ. ಗೋಪಕುಮಾರ್‌ ಅವರ ಕಗ್ಗಕ್ಕೊಂದು ನ್ಯಾನೋ ಕಥೆ (ನ್ಯಾನೋ ಕತೆಗಳು), ಗೀತಾ ದೊಡ್ಮನೆ ಅವರ ನೀಲಿ ಶಾಯಿಯ ಕಡಲು (ಕವಿತೆಗಳು), ಮೇದಿನಿ ಕೆಸವಿನಮನೆ ಅವರ ಮಿಸ್ಸಿನ ಡೈರಿ (ಅನುಭವ ಕಥನ), ಪಾರ್ವತಿ ಪಿಟಗಿ ಅವರ ಪುನರುತ್ಥಾನ (ಕಾದಂಬರಿ) ಲೋಕಾರ್ಪಣೆಗೊಳ್ಳಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Continue Reading
Advertisement
Actor  Ravichandran Talks About Kannada Movie Industry Problems yash darshan
ಸ್ಯಾಂಡಲ್ ವುಡ್2 mins ago

Actor  Ravichandran: ಯಶ್, ದರ್ಶನ್ ವರ್ಷಕ್ಕೆ 3 ಸಿನಿಮಾ ಮಾಡಿಬಿಟ್ರೆ ಕಥೆ ಅಷ್ಟೇ ಎಂದ ರವಿಚಂದ್ರನ್‌!

KKR vs SRH IPL Final
ಕ್ರೀಡೆ6 mins ago

KKR vs SRH IPL Final: ಫೈನಲ್​ ಪಂದ್ಯಕ್ಕೆ ಕ್ಷಣಗಣನೆ; ಇತ್ತಂಡಗಳ ದಾಖಲೆ ಹೇಗಿದೆ?

Fire accident
ದೇಶ31 mins ago

Fire Accident: ಬೆಚ್ಚಿ ಬೀಳಿಸಿದ ಮತ್ತೊಂದು ಅಗ್ನಿ ಅವಘಡ; ಆಸ್ಪತ್ರೆಯಲ್ಲಿ ಭಾರೀ ದುರಂತ- 7 ನವಜಾತ ಶಿಶುಗಳು ಸಜೀವ ದಹನ

KKR vs SRH IPL Final
ಕ್ರೀಡೆ35 mins ago

KKR vs SRH IPL Final: ರೀಮಲ್‌ ಚಂಡಮಾರುತ; ಫೈನಲ್​ ಪಂದ್ಯಕ್ಕೆ ಮಳೆ ಭೀತಿ ಇದೆಯೇ?

Hassan Accident Terrible accident Five died on the spot
ಹಾಸನ40 mins ago

Hassan Accident: ಹಾಸನದಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ಐವರ ದುರ್ಮರಣ

Mother Sentiment
ಅಂಕಣ1 hour ago

Mother Sentiment: ವ್ಯಾಸಂಗಕ್ಕಾಗಿ ಊರು ತೊರೆದು ಪಟ್ಟಣದ ಹಾಸ್ಟೆಲ್‌ ಸೇರುತ್ತಿರುವ ಮಗಳಿಗೆ ತಾಯಿ ಕರುಳಿನ ಭಾವುಕ ಪತ್ರ ಇದು…

subramanian swamy
ದೇಶ1 hour ago

Subramanian Swamy: ಮೋದಿ ವಿರೋಧಿ ಸುಬ್ರಮಣಿಯನ್‌ ಸ್ವಾಮಿ ವೋಟ್‌ ಹಾಕಿದ್ದು ಯಾರಿಗೆ‌ ನೋಡಿ!

Mint Leaf Water
ಆರೋಗ್ಯ2 hours ago

Mint Leaf Water: ಪುದಿನ ಎಲೆಗಳ ನೀರನ್ನು ನಿತ್ಯವೂ ಕುಡಿಯಿರಿ, ಈ ಲಾಭಗಳನ್ನು ಪಡೆಯಿರಿ!

Karnataka weather Forecast
ಮಳೆ3 hours ago

Karnataka Weather : ದಕ್ಷಿಣ ಒಳನಾಡಲ್ಲಿ ಮಳೆ ಸೈಲೆಂಟ್‌; ಕರಾವಳಿ, ಉತ್ತರ ಒಳನಾಡಿನಲ್ಲಿ ಸಿಕ್ಕಾಪಟ್ಟೆ ವೈಲೆಂಟ್

Protein Powder
ಆರೋಗ್ಯ3 hours ago

Protein Powder: ಫಿಟ್‌ನೆಸ್‌ಗಾಗಿ ಪ್ರೊಟೀನ್‌ ಪುಡಿಗಳ ಸೇವನೆ ಮಾಡುತ್ತೀರಾ? ಹಾಗಿದ್ದರೆ ಎಚ್ಚರ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ17 hours ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ3 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ4 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು5 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು5 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ6 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ7 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ7 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ7 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

ಟ್ರೆಂಡಿಂಗ್‌