ಅರ್ಪಿತಾ ಮುಖರ್ಜಿ ಬಗ್ಗೆ ಆಕೆಯ ಕಾರು ಚಾಲಕ ಹೇಳಿದ ಗುಟ್ಟು ಇದು; 4 ವಾಹನಗಳು ಏನಾದವು? - Vistara News

ದೇಶ

ಅರ್ಪಿತಾ ಮುಖರ್ಜಿ ಬಗ್ಗೆ ಆಕೆಯ ಕಾರು ಚಾಲಕ ಹೇಳಿದ ಗುಟ್ಟು ಇದು; 4 ವಾಹನಗಳು ಏನಾದವು?

ಅರ್ಪಿತಾ ಮುಖರ್ಜಿ ಹೆಸರಿನಲ್ಲಿರುವ ಹಲವು ಮನೆಗಳ ಮೇಲೆ ಇ ಡಿ ದಾಳಿಯಾಗಿದೆ. ಕೋಟ್ಯಂತರ ರೂಪಾಯಿ ಹಣ ಸಿಕ್ಕಿದೆ. ಅದರೊಂದಿಗೆ ಲೈಂಗಿಕ ಆಟಿಕೆಗಳೂ ಪತ್ತೆಯಾಗಿವೆ. 4 ಐಷಾರಾಮಿ ಕಾರುಗಳು ಕಾಣೆಯಾಗಿವೆ.

VISTARANEWS.COM


on

Arpita Mukherjee
ಅರ್ಪಿತಾ ಮುಖರ್ಜಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೋಲ್ಕತ್ತ: ಪಶ್ಚಿಮ ಬಂಗಾಳ ಶಾಲಾ ನೇಮಕಾತಿ ಹಗರಣದಲ್ಲಿ ಆರೋಪಿಯಾಗಿರುವ ಅರ್ಪಿತಾ ಮುಖರ್ಜಿ ಇ ಡಿ ಕಸ್ಟಡಿಯಲ್ಲಿದ್ದಾರೆ. ಮಾಜಿ ಸಚಿವ ಪಾರ್ಥ ಚಟರ್ಜಿ ಆಪ್ತೆಯಾಗಿರುವ ಆಕೆಯ ಮನೆಯಲ್ಲಿ 50 ಕೋಟಿ ರೂಪಾಯಿಗೂ ಅಧಿಕ ನಗದು ಪತ್ತೆಯಾಗಿದೆ. ಅದರೊಂದಿಗೆ ಅಪಾರ ಪ್ರಮಾಣದಲ್ಲಿ ಬೆಳ್ಳಿ ತಟ್ಟೆಗಳು, ಲೈಂಗಿಕ ಆಟಿಕೆಗಳು (ಸೆಕ್ಸ್‌ ಟಾಯ್ಸ್‌) ಕೂಡ ಸಿಕ್ಕಿವೆ. ಇದೆಲ್ಲದರ ಮಧ್ಯೆ ಅರ್ಪಿತಾಳ ನಾಲ್ಕು ಕಾರುಗಳು ನಾಪತ್ತೆಯಾಗಿವೆ ಎಂದು ವರದಿಯಾಗಿತ್ತು. ಆದರೆ ಆ ಬಗ್ಗೆ ಸ್ಪಷ್ಟ ಮಾಹಿತಿ ಇರಲಿಲ್ಲ. ಆದರೆ ಇದೀಗ ಅರ್ಪಿತಾ ಕಾರು ಚಾಲಕ ಪ್ರಣಬ್‌ ಭಟ್ಟಾಚಾರ್ಯ ಇದನ್ನು ಸ್ಪಷ್ಟಪಡಿಸಿದ್ದಾರೆ.

ಅರ್ಪಿತಾ ಹೆಸರಿನಲ್ಲಿರುವ ಮೂರ್ನಾಲ್ಕು ವಾಹನಗಳು ಕಳೆದ ಮೂರು ತಿಂಗಳಿಂದ ಕಾಣಿಸುತ್ತಿಲ್ಲ. ನಾನು ಅರ್ಪಿತಾ ಮುಖರ್ಜಿ ಚಾಲಕನಾಗಿದ್ದರೂ ಇಷ್ಟು ದಿನಗಳಲ್ಲಿ ಒಮ್ಮೆಯೂ ಆ ಕಾರುಗಳನ್ನು ಡ್ರೈವ್‌ ಮಾಡಿರಲಿಲ್ಲ. ಅವರ ಹೊಂಡಾ ಸಿಟಿ ಕಾರು ಚಾಲನೆಗೆ ಮಾತ್ರ ನನಗೆ ಅವಕಾಶ ಇತ್ತು ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ʼಪಾರ್ಥ ಚಟರ್ಜಿ ಹಲವು ಬಾರಿ ಅರ್ಪಿತಾ ಮನೆಗೆ ಬಂದಿದ್ದನ್ನು ನಾನು ನೋಡಿದ್ದೇನೆʼ ಎಂದೂ ಮಾಹಿತಿ ನೀಡಿದ್ದಾರೆ.

ಇ ಡಿ ಅಧಿಕಾರಿಗಳು ನನ್ನನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಅರ್ಪಿತಾ ಮನೆಗೆ ಇ ಡಿ ಅಧಿಕಾರಿಗಳು ಬಂದಾಗ ಅಲ್ಲಿ ನಾನೂ ಇದ್ದೆ. ನನ್ನ ಫೋನ್‌ನ್ನು ಅವರು ತೆಗೆದುಕೊಂಡರು ಮತ್ತು ಕೋಣೆಯೊಂದರಲ್ಲಿ ಕುಳಿತುಕೊಳ್ಳುವಂತೆ ಹೇಳಿದರು. ಹಾಗೇ, ಅರ್ಪಿತಾಗೆ ಸಂಬಂಧಪಟ್ಟು ನನಗೆ ಗೊತ್ತಿರುವ ಎಲ್ಲ ವಿಚಾರಗಳನ್ನೂ ತಿಳಿಸುವಂತೆ ಹೇಳಿದರು ಎಂದೂ ಕಾರು ಚಾಲಕ ಹೇಳಿದ್ದಾಗಿ ಇಂಡಿಯಾ ಟುಡೆ ಮಾಧ್ಯಮ ವರದಿ ಮಾಡಿದೆ. ಅಂದಹಾಗೇ, ಇದೀಗ ಕಾಣೆಯಾದ ಕಾರುಗಳಲ್ಲೂ ಅಪಾರ ಹಣವಿದೆ ಎಂದೂ ಹೇಳಲಾಗಿದೆ.

ಇದನ್ನೂ ಓದಿ: ಹಣದ ಗೋದಾಮು ಆಗಿರುವ ಅರ್ಪಿತಾ ಮನೆಯಲ್ಲಿದ್ದ 4 ಐಷಾರಾಮಿ ಕಾರುಗಳು ನಾಪತ್ತೆ !

ಪಾರ್ಥ ಚಟರ್ಜಿ ಶಿಕ್ಷಣ ಸಚಿವರಾಗಿದ್ದಾಗ ನಡೆದ ಹಗರಣ ಇದಾಗಿದ್ದು, ಇದೀಗ ಇ ಡಿ ತನಿಖೆ ಚುರುಕುಗೊಂಡಿದೆ. ಪಾರ್ಥನನ್ನು ಇ ಡಿ ಅಧಿಕಾರಿಗಳು ಬಂಧಿಸಿದ್ದಾರೆ. ಆದರೆ ಅವರು ಇನ್ನೂ ವಿಚಾರಣೆಗೆ ಒಳಪಟ್ಟಿಲ್ಲ. ಆದರೆ ಜುಲೈ 29ರಂದು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಅವರು ʼನನ್ನ ವಿರುದ್ಧ ವ್ಯವಸ್ಥಿತವಾಗಿ ಸಂಚು ಹೆಣೆಯಲಾಗಿದೆ. ನಾನೀಗ ಏನೂ ಹೇಳುವುದಿಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಣವಿದ್ದ ಕೋಣೆಗಳಿಗೆ ನನಗೆ ಪ್ರವೇಶ ಇರಲಿಲ್ಲ; ಇ ಡಿ ಎದುರು ಬಾಯ್ಬಿಟ್ಟ ಅರ್ಪಿತಾ ಮುಖರ್ಜಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ಮೈದುನನ ಇಬ್ಬರು ಮಕ್ಕಳನ್ನು ವಿಷವಿಕ್ಕಿ ಕೊಂದಳು, ಮೂರನೇ ಮಗುವನ್ನು ಕೊಲ್ಲುವಾಗ ಸಿಕ್ಕಿ ಬಿದ್ದಳು!

Viral Video: ಮಲಗಿದ್ದ ಮಗುವಿಗೆ ಮಹಿಳೆಯೊಬ್ಬರು ವಿಷ ನೀಡುತ್ತಿರುವ ಆಘಾತಕಾರಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಎನ್‌ಸಿಎಂ ಇಂಡಿಯಾ ಕೌನ್ಸಿಲ್ ಫಾರ್ ಮೆನ್ ಅಫೇರ್ಸ್ ಹಂಚಿಕೊಂಡಿದೆ. ಇದು ಎಕ್ಸ್ ನಲ್ಲಿ ಭಾರಿ ವೈರಲ್ ಆಗಿದೆ. ಇದರ ಹಿಂದಿನ ಕತೆ ಏನು? ಇಲ್ಲಿದೆ ವಿವರ.

VISTARANEWS.COM


on

By

Viral Video
Koo

ಮೈದುನನ ಮಗನಿಗೆ ಮಹಿಳೆಯೊಬ್ಬಳು ವಿಷವಿಕ್ಕಿರುವ (poison) ಘಟನೆ ರಾಜಸ್ಥಾನದ (Rajasthan) ಬಾರ್ಮರ್ ಜಿಲ್ಲೆಯ ಭದ್ರೇಸ್ ಗ್ರಾಮದಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral Viral Video) ಆಗಿದೆ. ಇದಕ್ಕೆ ನೆಟ್ಟಿಗರಿಂದ ತೀವ್ರ ಆಕ್ರೋಶವೂ ವ್ಯಕ್ತವಾಗುತ್ತಿದೆ.

ಮಲಗಿದ್ದ ಮಗುವಿಗೆ ಮಹಿಳೆಯೊಬ್ಬರು ವಿಷ ನೀಡುತ್ತಿರುವ ಆಘಾತಕಾರಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಎನ್‌ಸಿಎಂ ಇಂಡಿಯಾ ಕೌನ್ಸಿಲ್ ಫಾರ್ ಮೆನ್ ಅಫೇರ್ಸ್ ಹಂಚಿಕೊಂಡಿದೆ. ಇದು ಎಕ್ಸ್ ನಲ್ಲಿ ಭಾರಿ ವೈರಲ್ ಆಗಿದೆ.

ರಾಜಸ್ಥಾನದ ಭದ್ರೇಸ್ ಗ್ರಾಮದಲ್ಲಿ ಹಿರಿಯ ಸಹೋದರನ ಪತ್ನಿ ಗಂಡನ ಕಿರಿಯ ಸಹೋದರನ ಮಗುವಿಗೆ ವಿಷ ನೀಡಿರುವುದಾಗಿ ಹೇಳಲಾಗಿದೆ. ಕಿರಿಯ ಸಹೋದರನ ಇಬ್ಬರು ಮಕ್ಕಳು ಇದೇ ರೀತಿ ಸಾವನ್ನಪ್ಪಿದ್ದರು. ಈ ಬಗ್ಗೆ ಮಗುವಿನ ತಾಯಿಯು ಗಂಡನ ಸಹೋದರನ ಪತ್ನಿ ಜೇಥನಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದಳು.

ಹಿಂದೆ ಇಬ್ಬರು ಮಕ್ಕಳು ಇದೇ ರೀತಿ ಸಾವನ್ನಪ್ಪಿದ್ದರಿಂದ ಈ ಬಾರಿ ಎಚ್ಚರಿಕೆಯಿಂದ ಇದ್ದಳು. ಮಗುವಿನ ಹಾಸಿಗೆಯ ಬಳಿ ರೆಕಾರ್ಡ್ ಮಾಡಲು ಕೆಮರಾ ಇರಿಸಿದ್ದಳು. ಸುತ್ತಮುತ್ತ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿರುವುದನ್ನು ಪರೀಕ್ಷಿಸುತ್ತಿದ್ದಳು.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಜೇಥನಿ ಎಂಬಾಕೆ ಕೋಣೆಗೆ ಪ್ರವೇಶಿಸುತ್ತಾಳೆ. ಮಗು ಒಂಟಿಯಾಗಿ ಮಲಗಿರುವುದನ್ನು ನೋಡಿ ಮಗುವಿನ ಮೇಲೆ ಇರಿಸಿದ್ದ ಸೊಳ್ಳೆ ಪರದೆಯನ್ನು ಸದ್ದಿಲ್ಲದೆ ತೆಗೆದು ಕೆಲವು ಹನಿಗಳನ್ನು ಮಗುವಿನ ಬಾಯಿಗೆ ಹಾಕಿದಳು.


ಮಗುವನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಮೂರು ದಿನಗಳ ಕಾಲ ಐಸಿಯುನಲ್ಲಿ ಹೋರಾಡಿದ ಮಗು ಈಗ ಚೇತರಿಸಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿರುವ ಈ ವಿಡಿಯೋವನ್ನು ಈವರೆಗೆ 17.9 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಇದನ್ನು ನೋಡಿರುವ ಸಾಕಷ್ಟು ಮಂದಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Miracle case : ಮುರ್ತುಜಾ ಖಾದ್ರಿ ಪವಾಡ; ಅಂತ್ಯಕ್ರಿಯೆ ಮಾಡುವಾಗಲೇ ಕೆಮ್ಮಿದ ಮಗು!

ವೈರಲ್ ಆಗಿರುವ ಈ ವಿಡಿಯೋ ಕುರಿತು ಬಾರ್ಮರ್ ಪೊಲೀಸರು ಪ್ರತಿಕ್ರಿಯಿಸಿದ್ದು, ಇದು ಭದ್ರೇಸ್ ಗ್ರಾಮದ ಮುಖೇಶ್ ಪ್ರಜಾಪತ್ ಅವರ ಮಗನಿಗೆ ವಿಷವಿಕ್ಕಿರುವ ವಿಡಿಯೋ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಇನ್ನೊಂದು ಮಾಹಿತಿ ಪ್ರಕಾರ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕೆ ಆಕೆ ಈ ರೀತಿ ಮಾಡಿದ್ದಳೆಂದು ಹೇಳಿಲ್ಲ ಎನ್ನಲಾಗಿದೆ.

Continue Reading

ದೇಶ

Laila Khan Case: ನಟಿ ಲೈಲಾ ಖಾನ್‌ ಸೇರಿ 6 ಜನರ ಹತ್ಯೆ;‌ ನಟಿಯ ತಂದೆ ಪರ್ವೇಜ್‌ ತಕ್‌ಗೆ ಗಲ್ಲು ಶಿಕ್ಷೆ!

Laila Khan Case: ಸೆಲಿನಾ ಅವರಿಗೆ ಪರ್ವೇಜ್‌ ತಕ್‌ ಮೂರನೇ ಪತಿಯಾಗಿದ್ದ. ಸೆಲಿನಾ ತಕ್‌ ಅವರು ಶ್ರೀಮಂತರಾಗಿದ್ದ ಕಾರಣ, ಅವರಿಗೆ ಸಂಬಂಧಿಸಿದ ಎಲ್ಲ ಆಸ್ತಿಯನ್ನು ಹೊಡೆಯಲು ಪರ್ವೇಜ್‌ ತಕ್‌ ಕುತಂತ್ರ ಮಾಡುತ್ತಿದ್ದ. ಇದಕ್ಕಾಗಿ, ಅವರ ಜತೆ ಜಗಳವಾಡುತ್ತಿದ್ದ. ಎಲ್ಲ ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಾಯಿಸುತ್ತಿದ್ದ. ಆಸ್ತಿಗಾಗಿ ಜಗಳ ಕಾಯುತ್ತಿದ್ದ. ಕೊನೆಗೊಂದು ದಿನ ಲೈಲಾ ಖಾನ್‌ ಸೇರಿ ಆರು ಮಂದಿಯನ್ನು ಕೊಲೆ ಮಾಡಿದ್ದ. ಈಗ ಈತನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

VISTARANEWS.COM


on

Laila Khan Case
Koo

ಮುಂಬೈ: ಬಾಲಿವುಡ್‌ ನಟಿ, ವಫಾ, ಫರಾರ್‌ ಸಿನಿಮಾಗಳ ಖ್ಯಾತಿಯ ಲೈಲಾ ಖಾನ್‌ (Laila Khan Case) ಹಾಗೂ ಅವರ ಐವರು ಸಂಬಂಧಿಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ನ್ಯಾಯಾಲಯವು (Mumbai Court) ನಟಿಯ ಮಲ ತಂದೆ ಪರ್ವೇಜ್‌ ತಕ್‌ಗೆ (Parvez Tak) ಗಲ್ಲು ಶಿಕ್ಷೆ ವಿಧಿಸಿದೆ. ಆ ಮೂಲಕ 13 ವರ್ಷಗಳ ಪ್ರಕರಣಕ್ಕೆ ಮುಂಬೈ ನ್ಯಾಯಾಲಯವು ಅಂತ್ಯ ಹಾಡಿದೆ. ಆರೂ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಸಚಿನ್‌ ಪವಾರ್‌ ಅವರು ಆದೇಶ ಹೊರಡಿಸಿದ್ದಾರೆ. ಇವರು ಮೇ 9ರಂದು ವಿಚಾರಣೆ ಅಂತ್ಯಗೊಳಿಸಿ, ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದ್ದರು.

ಏನಿದು ಪ್ರಕರಣ?

2011ರ ಫೆಬ್ರವರಿಯಲ್ಲಿ ಮಹಾರಾಷ್ಟ್ರದ ನಾಶಿಕ್‌ ಜಿಲ್ಲೆಯ ಇಗಟ್‌ಪುರಿಯಲ್ಲಿರುವ ನಿವಾಸದಲ್ಲಿ ನಟಿ ಲೈಲಾ ಖಾನ್‌, ಲೈಲಾ ಖಾನ್‌ ತಾಯಿ ಸೆಲಿನಾ ಸೇರಿ ಆರು ಜನರನ್ನು ಪರ್ವೇಜ್‌ ತಕ್‌ ಸೇರಿ ಹಲವರು ಕೊಲೆ ಮಾಡಿದ್ದರು. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸೆಲಿನಾ ಸೇರಿ ಆರು ಮಂದಿಯನ್ನು ಹತ್ಯೆಗೈದು, ಫಾರ್ಮ್‌ಹೌಸ್‌ನಲ್ಲಿಯೇ ಸಮಾಧಿ ಮಾಡಲಾಗಿತ್ತು. ಜಮ್ಮು-ಕಾಶ್ಮೀರ ಪೊಲೀಸರು ಪರ್ವೇಜ್‌ ತಕ್‌ನನ್ನು ಬಂಧಿಸಿದ ಬಳಿಕವೇ ಫಾರ್ಮ್‌ಹೌಸ್‌ನಲ್ಲಿ ಲೈಲಾ ಖಾನ್‌ ಸೇರಿ ಎಲ್ಲರ ಶವಗಳು ಪತ್ತೆಯಾಗಿದ್ದವು.

Court Order

ಕೊಲೆ ಮಾಡಲು ಏನು ಕಾರಣ?

ಸೆಲಿನಾ ಅವರಿಗೆ ಪರ್ವೇಜ್‌ ತಕ್‌ ಮೂರನೇ ಪತಿಯಾಗಿದ್ದ. ಸೆಲಿನಾ ತಕ್‌ ಅವರು ಶ್ರೀಮಂತರಾಗಿದ್ದ ಕಾರಣ, ಅವರಿಗೆ ಸಂಬಂಧಿಸಿದ ಎಲ್ಲ ಆಸ್ತಿಯನ್ನು ಹೊಡೆಯಲು ಪರ್ವೇಜ್‌ ತಕ್‌ ಕುತಂತ್ರ ಮಾಡುತ್ತಿದ್ದ. ಇದಕ್ಕಾಗಿ, ಅವರ ಜತೆ ಜಗಳವಾಡುತ್ತಿದ್ದ. ಎಲ್ಲ ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಾಯಿಸುತ್ತಿದ್ದ. ಆಸ್ತಿಗಾಗಿ ಜಗಳ ಕಾಯುತ್ತಿದ್ದ ಕಾರಣ ಪರ್ವೇಜ್‌ ತಕ್‌ನನ್ನು ಸೆಲಿನಾ ಅವರು ಮನೆಗೆಲಸದವನ ರೀತಿ ನೋಡುತ್ತಿದ್ದರು. ಮನೆಯಿಂದ ಈತನನ್ನು ದೂರವೇ ಇಟ್ಟಿದ್ದರು ಎಂದು ತಿಳಿದುಬಂದಿತ್ತು.

2011ರ ಫೆಬ್ರವರಿಯಲ್ಲಿ ಸೆಲಿನಾ ಸೇರಿ ಎಲ್ಲರನ್ನೂ ಕೊಲೆ ಮಾಡಲು ಪ್ಲಾನ್‌ ರೂಪಿಸಿದ್ದ. ಇದಕ್ಕಾಗಿ ಆತ ಹಲವರಿಗೆ ಹಣವನ್ನೂ ಕೊಟ್ಟು ಕರೆದುಕೊಂಡು ಹೋಗಿದ್ದ. ಮನೆಗೆ ಹೋದವನೇ, ಸೆಲಿನಾ ಅವರ ಜತೆ ಜಗಳವಾಡಿದ್ದಾನೆ. ಮೊದಲು ಸೆಲಿನಾ ಅವರನ್ನು ಕೊಂದ ಪರ್ವೇಜ್‌ ತಕ್‌, ಬಳಿಕ ಲೈಲಾ ಖಾನ್‌ ಸೇರಿ ಆರು ಮಂದಿಯನ್ನು ಕೊಂದು, ಅದೇ ಫಾರ್ಮ್‌ಹೌಸ್‌ನಲ್ಲಿ ಹೂತು ಹಾಕಿದ್ದ. ಕೆಲ ತಿಂಗಳ ಬಳಿಕ ಈತನನ್ನು ಕಾಶ್ಮೀರ ಪೊಲೀಸರು ಬಂಧಿಸಿದ್ದರು. ಫಾರ್ಮ್‌ಹೌಸ್‌ನಲ್ಲಿ ಪರಿಶೀಲನೆ ನಡೆಸಿದ್ದಾಗ ಆರೂ ಮಂದಿಯ ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.

ಇದನ್ನೂ ಓದಿ: Murder Case: ನಟಿ, ಕಾಂಗ್ರೆಸ್ ನಾಯಕಿ ವಿದ್ಯಾ ಹತ್ಯೆ ಆರೋಪಿ ಪತಿಯ ಬಂಧನ

Continue Reading

ಕರ್ನಾಟಕ

Prajwal Revanna Case: ಪಾಸ್‌ಪೋರ್ಟ್‌ ವಿಚಾರವಾಗಿ ಪ್ರಜ್ವಲ್‌ಗೆ ವಿದೇಶಾಂಗ ಸಚಿವಾಲಯ ನೋಟಿಸ್;‌ ಶೀಘ್ರ ಬಂಧನ?

Prajwal Revanna Case: ಪ್ರಜ್ವಲ್‌ ರೇವಣ್ಣ ಅವರ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್‌ ರದ್ದುಗೊಳಿಸಬೇಕು ಎಂದು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆದ ಬೆನ್ನಲ್ಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಸ್‌ಪೋರ್ಟ್‌ ರದ್ದತಿಯ ಪ್ರಕ್ರಿಯೆ ಆರಂಭಿಸಿದೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು ಪ್ರಜ್ವಲ್‌ ರೇವಣ್ಣನಿಗೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದೆ.

VISTARANEWS.COM


on

Prajwal Revanna Case
Koo

ನವದೆಹಲಿ/ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಸಿಲುಕಿ, ವಿದೇಶಕ್ಕೆ ಪರಾರಿಯಾಗಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣನ (Prajwal Revanna Case) ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್‌ (Diplomatic Passport) ರದ್ದುಗೊಳಿಸಬೇಕು ಎಂದು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆದ ಬೆನ್ನಲ್ಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಸ್‌ಪೋರ್ಟ್‌ ರದ್ದತಿಯ ಪ್ರಕ್ರಿಯೆ ಆರಂಭಿಸಿದೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು (Central Government) ಪ್ರಜ್ವಲ್‌ ರೇವಣ್ಣನಿಗೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದೆ.

ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್‌ ರೇವಣ್ಣ ಅವರ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್‌ಅನ್ನು ರದ್ದುಗೊಳಿಸಬೇಕು ಎಂದು ಸಿದ್ದರಾಮಯ್ಯ ಅವರು ಎರಡು ಬಾರಿ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್‌ ರದ್ದುಗೊಳಿಸುವ ಪ್ರಕ್ರಿಯೆ ಆರಂಭಿಸಿದೆ. ಇನ್ನು, ಇದರ ಭಾಗವಾಗಿಯೇ ಕೇಂದ್ರ ಸರ್ಕಾರವು ಪ್ರತಿಕ್ರಿಯೆ ಕೋರಿ ಪ್ರಜ್ವಲ್‌ ರೇವಣ್ಣಗೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದೆ. ಶೋಕಾಸ್‌ ನೋಟಿಸ್‌ಗೂ ಉತ್ತರ ನೀಡದಿದ್ದರೆ, ಕೇಂದ್ರ ಸರ್ಕಾರವು ಪಾಸ್‌ಪೋರ್ಟ್‌ ರದ್ದುಗೊಳಿಸಲಿದೆ. ಪಾಸ್‌ಪೋರ್ಟ್‌ ರದ್ದಾದರೆ, ಜರ್ಮನಿಯಲ್ಲಿಯೇ (ಅಲ್ಲೇ ಇದ್ದಾರೆ ಎಂಬ ವರದಿ ಇದೆ) ಅವರನ್ನು ಬಂಧಿಸಿ, ಭಾರತಕ್ಕೆ ಹಸ್ತಾಂತರ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ‌

ಹೇಗೆ ರದ್ದಾಗುತ್ತದೆ ಪ್ರಜ್ವಲ್ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌?

ಭಾರತೀಯ ವಿದೇಶಾಂಗ ಇಲಾಖೆಗೆ ಎಸ್‌ಐಟಿ ಅಧಿಕಾರಿಗಳು ರಾಜ್ಯ ಗೃಹ ಇಲಾಖೆ ಮುಖಾಂತರ ಪತ್ರ ರವಾನಿಸಿದ್ದಾರೆ. ಈ ಹಿಂದೆ ಸಿಎಂ ಪತ್ರ ಬರೆದಿದ್ದ ವೇಳೆ ನ್ಯಾಯಾಲಯದ ಆದೇಶ ಬೇಕು ಎಂದು ಕೇಂದ್ರ ಗೃಹ ಇಲಾಖೆ ಹೇಳಿತ್ತು. ಹಾಗಾಗಿ ನ್ಯಾಯಾಲಯದಿಂದ ಅರೆಸ್ಟ್ ವಾರಂಟ್ ಪಡೆದು ಎಸ್‌ಐಟಿಯವರು ಪುನಃ ಪತ್ರ ಬರೆದಿದ್ದಾರೆ. ಹೀಗಾಗಿ ಭಾರತೀಯ ವಿದೇಶಾಂಗ ಇಲಾಖೆಯು ಪಾಸ್‌ಪೋರ್ಟ್ ರದ್ದು ಪ್ರಕ್ರಿಯೆಯನ್ನು ಆರಂಭ ಮಾಡಿದೆ.

ಪಾಸ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಭಾರತೀಯ ವಿದೇಶಾಂಗ ಇಲಾಖೆ ಅಡಿಯಲ್ಲಿ ಬರುತ್ತದೆ. ಎಸ್‌ಐಟಿಯಿಂದ ಬಂದಿರುವ ಪತ್ರವನ್ನು ದೃಢೀಕರಣಕ್ಕಾಗಿ ಕೇಂದ್ರ ಗೃಹ ಇಲಾಖೆಗೆ ರವಾನೆ ಮಾಡುತ್ತದೆ. ಕೇಂದ್ರ ಗೃಹ ಇಲಾಖೆ ಪರಿಶೀಲನೆ ನಡೆಸಿ ಸಮ್ಮತಿ ಸೂಚಿಸಿದರೆ ಭಾರತೀಯ ವಿದೇಶಾಂಗ ಇಲಾಖೆಯು ಪಾಸ್‌ಪೋರ್ಟ್ ಅನ್ನು ರದ್ದು ಮಾಡುತ್ತದೆ.

ಪಾಸ್‌ಪೋರ್ಟ್‌ ರದ್ದಾದರೆ ಮುಂದೇನು?

ಒಮ್ಮೆ ಪಾಸ್‌ಪೋರ್ಟ್ ರದ್ದಾದರೆ ಈ ಬಗ್ಗೆ ಎಲ್ಲ ದೇಶಗಳ ಇಮಿಗ್ರೇಷನ್‌ಗೂ ಮಾಹಿತಿಯನ್ನು ರವಾನೆ ಮಾಡಲಾಗುತ್ತದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಭಾರತಕ್ಕೆ ಬರಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಇಲ್ಲವೇ ಐಡೆಂಟಿಟಿ ಬದಲಾಯಿಸಿ ತಲೆಮರೆಸಿಕೊಂಡು ಓಡಾಡಬೇಕು. ಹೀಗಾಗಿ ಪ್ರಜ್ವಲ್ ರೇವಣ್ಣ ಭಾರತಕ್ಕೆ ಶೀಘ್ರದಲ್ಲೇ ಬರುವ ಸಾಧ್ಯತೆ ಇದೆ.

ಇದನ್ನೂ ಓದಿ: Prajwal Revanna Case: ತಾಳ್ಮೆ ಪರೀಕ್ಷಿಸಬೇಡ, ಈಗಲೇ ಬಂದು ಶರಣಾಗು; ಪ್ರಜ್ವಲ್‌ಗೆ ದೇವೇಗೌಡರ ವಾರ್ನಿಂಗ್‌

Continue Reading

ಪ್ರಮುಖ ಸುದ್ದಿ

Rameshwaram Cafe: ನಮ್ಮ ರೆಸ್ಟೋರೆಂಟ್‌ನಲ್ಲಿ ಜಿರಳೆ ಇರಲಿಲ್ಲ, ಕಳಪೆ ಆಹಾರ ಬಳಸಿಲ್ಲ; ರಾಮೇಶ್ವರಂ ಕೆಫೆ ಸ್ಪಷ್ಟನೆ

Rameshwaram Cafe: ವಾಸ್ತವವಾಗಿ, ಜಿರಳೆಗಳು ರಾಮೇಶ್ವರಂ ಕೆಫೆಯಲ್ಲಿ ಅಲ್ಲ, ಬೇರೆ ರೆಸ್ಟೋರೆಂಟ್​ನಲ್ಲಿ ಕಂಡುಬಂದಿವೆ. ನಮ್ಮ ಕೆಫೆಯಲ್ಲಿ, ನಮ್ಮ ಮಾನದಂಡಗಳನ್ನು ಕಾಪಾಡಿಕೊಳ್ಳಲು ನಾವು ಪ್ರತಿದಿನ ಸ್ವಚ್ಛತೆ ಮಾಡುತ್ತೇವೆ. ಪ್ರತಿ ತಿಂಗಳು ಕೀಟ ನಿಯಂತ್ರಣ ಕಾರ್ಯ ನಡೆಸುತ್ತೇವೆ ಎಂದು ಹೇಳಿದರು.

VISTARANEWS.COM


on

Rameshwaram Cafe
Koo

ಬೆಂಗಳೂರು: ಹೈದರಾಬಾದ್​ನ ರಾಮೇಶ್ವರಂ ಕೆಫೆಯ (Rameshwaram Cafe) ಮೇಲೆ ತೆಲಂಗಾಣದ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ಮಾಡಿ ಅವಧಿ ಮೀರಿದ ವಸ್ತುಗಳು ಪತ್ತೆಯಾಗಿವೆ ಎಂದು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಹೋಟೆಲ್​ನ ಮಾಲೀಕರಾದ ದಿವ್ಯಾ ರಾಘವೇಂದ್ರ ರಾವ್ ಹಾಗೂ ರಾಘವೇಂದ್ರ ರಾವ್ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಹೈದರಾಬಾದ್ ಮಳಿಗೆಗಾಗಿ ಅಧಿಕಾರಿಗಳು ಮಾಡಿದ ಪರಿಶೀಲನೆಯನ್ನು ನಾವು ಗಮನಿಸಿದ್ದೇವೆ. ಸೇವೆ ಮತ್ತು ನೈರ್ಮಲ್ಯದ ಅತ್ಯುನ್ನತ ಮಾನದಂಡಗಳನ್ನು ಕಾಪಾಡಿಕೊಳ್ಳಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ ಮತ್ತು ಗ್ರಾಹಕರ ಸುರಕ್ಷತೆ ಮತ್ತು ಕಲ್ಯಾಣವು ನಮ್ಮ ಉನ್ನತ ಆದ್ಯತೆಯಾಗಿದೆ ಎಂದು ನಾವು ಭರವಸೆ ನೀಡಲು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.

ನಾವು ಈಗಾಗಲೇ ಈ ವಿಷಯವನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಸತ್ಯಗಳನ್ನು ಪರಿಶೀಲಿಸಲು ಮತ್ತು ಪ್ರತಿ ಮಳಿಗೆಯ ಸ್ಟಾಕ್ ಕುರಿತು ಆಂತರಿಕ ತನಿಖೆಗೆ ಆದೇಶಿಸಿದ್ದೇವೆ. ವಿಷಯದ ಆಳಕ್ಕೆ ಹೋಗಲು ನಾವು ಅಧಿಕಾರಿಗಳಿಗೆ ಎಲ್ಲಾ ಸಹಕಾರವನ್ನು ನೀಡುವುದನ್ನು ಮುಂದುವರಿಸುತ್ತೇವೆ. ನಮ್ಮ ಹೈದರಾಬಾದ್ ಮಳಿಗೆಯಲ್ಲಿನ ಬಳಕೆಯ ಉದ್ದೇಶಕ್ಕೆ ನಮಗೆ ವಾರಕ್ಕೆ 500 ಕೆ.ಜಿ ಉದ್ದಿನ ಬೇಳೆ, ಪ್ರತಿದಿನ 300 ಲೀಟರ್ ಹಾಲು ಮತ್ತು ಪ್ರತಿದಿನ 80 ರಿಂದ 100 ಲೀಟರ್ ಮೊಸರು ಬೇಕಾಗುತ್ತದೆ. ಪತ್ತೆಯಾದ ದಾಸ್ತಾನುಗಳನ್ನು ಸೀಲ್ ಮಾಡಲಾಗಿತ್ತು. ಅದನ್ನು ಹೊರಗೆ ಕೊಂಡೊಯ್ಯವ ಉದ್ದೇಶವಿತ್ತು. ಅದು ಬಳಕೆಗಾಗಿ ಅಲ್ಲ. ಅತ್ಯುತ್ತಮ ಮಾರಾಟಗಾರರಿಂದ ಅತ್ಯುನ್ನತ ಗುಣಮಟ್ಟದ ಉತ್ಪನ್ನಗಳನ್ನು ನಾವು ಬಳಸುತ್ತೇವೆ ಎಂದು ಅವರು ಹೇಳಿದ್ದಾರೆ.

ಲೇಬಲ್ ಮಾಡದ ಉತ್ಪನ್ನಗಳ ಬಳಕೆಯನ್ನು ಕಾನೂನು ನಿಷೇಧಿಸುವುದಿಲ್ಲ. ನಾವು ಅತ್ಯುನ್ನತ ನೈರ್ಮಲ್ಯ ಮಾನದಂಡಗಳನ್ನು ಕಾಪಾಡುತ್ತೇವೆ. ಕೆಲವು ವರದಿಗಳು ನಮ್ಮ ಅಡುಗೆಮನೆಯಲ್ಲಿ ಜಿರಳೆಗಳು ಕಂಡುಬಂದಿವೆ ಎಂದು ಸುಳ್ಳು ಹೇಳಿಕೊಂಡಿವೆ. ಅಧಿಕೃತ ವರದಿಯಲ್ಲಿ ಇದನ್ನು ಉಲ್ಲೇಖಿಸಲಾಗಿಲ್ಲ; ವಾಸ್ತವವಾಗಿ, ಜಿರಳೆಗಳು ರಾಮೇಶ್ವರಂ ಕೆಫೆಯಲ್ಲಿ ಅಲ್ಲ, ಬೇರೆ ರೆಸ್ಟೋರೆಂಟ್​ನಲ್ಲಿ ಕಂಡುಬಂದಿವೆ. ನಮ್ಮ ಕೆಫೆಯಲ್ಲಿ, ನಮ್ಮ ಮಾನದಂಡಗಳನ್ನು ಕಾಪಾಡಿಕೊಳ್ಳಲು ನಾವು ಪ್ರತಿದಿನ ಸ್ವಚ್ಛತೆ ಮಾಡುತ್ತೇವೆ. ಪ್ರತಿ ತಿಂಗಳು ಕೀಟ ನಿಯಂತ್ರಣ ಕಾರ್ಯ ನಡೆಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: Rameshwaram Cafe : ಅವಧಿ ಮುಗಿದ ವಸ್ತುಗಳಲ್ಲಿ ತಿಂಡಿ ತಯಾರಿ, ರಾಮೇಶ್ವರಂ ಕೆಫೆ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ

ಶೋಕಾಸ್ ನೋಟಿಸ್ ಪಡೆದಿಲ್ಲ

ನಾವು ಅಧಿಕಾರಿಗಳಿಂದ ಯಾವುದೇ ಶೋಕಾಸ್ ನೋಟಿಸ್ ಸ್ವೀಕರಿಸಿಲ್ಲ. ಅವರೊಂದಿಗೆ ಸಂಪೂರ್ಣವಾಗಿ ಸಹಕರಿಸುವುದನ್ನು ಮುಂದುವರಿಸುತ್ತೇವೆ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ನಾವು ರಾಜ್ಯಗಳಾದ್ಯಂತ ನಮ್ಮ ಎಲ್ಲಾ ಮಳಿಗೆಗಳಿಗೆ ನೈರ್ಮಲ್ಯ ಮತ್ತು ಪ್ರಮಾಣಿತ ತಪಾಸಣೆಗೆ ಆದೇಶಿಸಿದ್ದೇವೆ ಮತ್ತು ಗ್ರಾಹಕರಿಗೆ ವಿಭಾಗದಲ್ಲಿ ಅತ್ಯುತ್ತಮವಾದದನ್ನು ಒದಗಿಸುವ ನಮ್ಮ ಬಲವಾದ ಬದ್ಧತೆಯನ್ನು ತಿಳಿಸಲು ಬಯಸುತ್ತೇವೆ. ನಮ್ಮ ಗ್ರಾಹಕರ ಹೃದಯ ಮತ್ತು ಆತ್ಮಗಳನ್ನು ಗೆಲ್ಲಲು ಕೆಲವು ಗುಣಮಟ್ಟದ ಆಹಾರ ಮತ್ತು ಸೇವೆಗಳನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದು ನಾವು ಯಾವಾಗಲೂ ನಂಬಿದ್ದೇವೆ ಎಂದು ಹೇಳಿದ್ದಾರೆ.

Continue Reading
Advertisement
Physical Abuse
ಕ್ರೈಂ12 mins ago

Physical Abuse: ರಾಬರಿ ಎಂದು ದೂರು ಕೊಟ್ಟವನೇ ಕಾಮುಕ; ತಾನು ತೋಡಿದ ಹಳ್ಳಕ್ಕೆ ತಾನೇ ಬಿದ್ದ ಆಟೋ ಚಾಲಕ!

Jeans Fashion
ಫ್ಯಾಷನ್12 mins ago

Jeans Fashion: ಜೀನ್ಸ್ ಪ್ಯಾಂಟ್‌ನಲ್ಲಿ ಇಂಡೋ-ವೆಸ್ಟರ್ನ್ ಲುಕ್‌ಗೆ 3 ಸಿಂಪಲ್‌ ಐಡಿಯಾ

T20 World Cup 2024
ಕ್ರೀಡೆ27 mins ago

T20 World Cup 2024: ಟಿ20 ವಿಶ್ವಕಪ್​ ಟೂರ್ನಿಗೆ ಕಾಮೆಂಟರಿ ಬಳಗ ಘೋಷಿಸಿದ ಐಸಿಸಿ; ದಿನೇಶ್​ ಕಾರ್ತಿಕ್​ಗೂ ಸ್ಥಾನ

Viral Video
ವೈರಲ್ ನ್ಯೂಸ್30 mins ago

Viral Video: ಮೈದುನನ ಇಬ್ಬರು ಮಕ್ಕಳನ್ನು ವಿಷವಿಕ್ಕಿ ಕೊಂದಳು, ಮೂರನೇ ಮಗುವನ್ನು ಕೊಲ್ಲುವಾಗ ಸಿಕ್ಕಿ ಬಿದ್ದಳು!

Laila Khan Case
ದೇಶ31 mins ago

Laila Khan Case: ನಟಿ ಲೈಲಾ ಖಾನ್‌ ಸೇರಿ 6 ಜನರ ಹತ್ಯೆ;‌ ನಟಿಯ ತಂದೆ ಪರ್ವೇಜ್‌ ತಕ್‌ಗೆ ಗಲ್ಲು ಶಿಕ್ಷೆ!

Youngest Artist
ವಿದೇಶ32 mins ago

Youngest Artist: ಅಂಬೆಗಾಲಿಡುವ ಬಾಲಕ ಈಗ ವಿಶ್ವದ ಅತಿ ಕಿರಿಯ ಚಿತ್ರ ಕಲಾವಿದ!

Toothpaste Hacks
ಲೈಫ್‌ಸ್ಟೈಲ್42 mins ago

Toothpaste Hacks: ಟೂತ್‌ಪೇಸ್ಟ್‌ನಿಂದ ಯಾವೆಲ್ಲ ವಸ್ತುಗಳನ್ನು ಹೊಳೆಯುವಂತೆ ಮಾಡಬಹುದು ನೋಡಿ!

Bharathada dheera chethanagalu kruthi lokarpane in Bengaluru on May 26
ಕರ್ನಾಟಕ49 mins ago

Bengaluru News: ಬೆಂಗಳೂರಿನಲ್ಲಿ ಮೇ 26ರಂದು ʼಭಾರತದ ಧೀರ ಚೇತನಗಳುʼ ಕೃತಿ ಲೋಕಾರ್ಪಣೆ

Kannada New Movie The movie is becoming a pendrive
ಸಿನಿಮಾ52 mins ago

Kannada New Movie: ಸಿನಿಮಾ ಆಗುತ್ತಿದೆ ʼಪೆನ್‌ಡ್ರೈವ್ʼ! ಕುತೂಹಲಭರಿತ ಪೋಸ್ಟರ್

KPTCL Recruitment
ಕರ್ನಾಟಕ54 mins ago

KPTCL Recruitment: 902 ಹುದ್ದೆಗಳ ನೇಮಕಾತಿಗೆ ಕೆಪಿಟಿಸಿಎಲ್‌ ಆದೇಶ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ2 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ3 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು3 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು3 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ4 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ5 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ7 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌